ಶುಕ್ರವಾರವೇ ಸಿನಿಮಾ ರಿಲೀಸ್‌ ಆಗೋದು ಯಾಕೆ? - Vistara News

ಪ್ರಮುಖ ಸುದ್ದಿ

ಶುಕ್ರವಾರವೇ ಸಿನಿಮಾ ರಿಲೀಸ್‌ ಆಗೋದು ಯಾಕೆ?

ಭಾರತೀಯ ಚಿತ್ರರಂಗದಲ್ಲಿ ಬಹುತೇಕ ಸಿನಿಮಾ ಶುಕ್ರವಾರ ಬಿಡುಗಡೆಗೊಳ್ಳುತ್ತವೆ. ಆದರೆ ಎಲ್ಲಾ ಸಿನಿಮಾಗಳು ಶುಕ್ರವಾರ ಬಿಡುಗಡೆಗೊಳ್ಳಲು ಕಾರಣವೇನಿರಬಹುದು?

VISTARANEWS.COM


on

ಸಿನಿಮಾ
1950ರಲ್ಲಿ ತೆರೆಕಂಡ ಮುಘಲ್-ಎ-ಆಝಮ್ ಚಲನಚಿತ್ರದಲ್ಲಿ ಮಧುಬಾಲಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿನಿಮಾ: ಶುಕ್ರವಾರ ಬಂತೆಂದರೆ ಸಾಕು ʼಈ ವಾರ ಯಾವ ಸಿನಿಮಾ ಬಿಡುಗಡೆ ಆಗುತ್ತಿದೆʼ ಎಂದು ಬುಕ್‌ ಮೈ ಶೋ ಆಪ್‌, ಗೂಗಲ್‌ನಲ್ಲಿ ನೋಡುವದು ಅನೇಕರಿಗೆ ರೂಢಿಯಾಗಿಬಿಟ್ಟಿದೆ. ಇದಕ್ಕೆ ಕಾರಣ ಪ್ರತಿ ಶುಕ್ರವಾರ ಒಂದು ಹೊಸ ಸಿನಿಮಾ ಬಿಡುಗಡೆಯಾಗುವುದು.

ಎಲ್ಲಾ ಸಿನಿಮಾಗಳು ಯಾಕೆ ಶುಕ್ರವಾರವೇ ರಿಲೀಸ್‌ ಅಗುತ್ತದೆ ಎಂದು ಯೋಚಿಸಿದ್ದೀರಾ? ಈ ಬಗ್ಗೆ ಯೋಚಿಸಿದಾಗ ಇನ್ನಷ್ಟು ಪ್ರಶ್ನೆಗಳು ಮೂಡಬಹುದು. ಶುಕ್ರವಾರವನ್ನು ಕೇವಲ ಒಂದು ವಾರಾಂತ್ಯದ ದಿನ ಎಂದು ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿದೆಯೇ? ಅಥವಾ ಅದಕ್ಕೂ ಮಿಗಿಲಾದದ್ದು ಏನಾದರು ಇದೆಯೇ? ಶುಕ್ರವಾರದ ವಿಶೇಷತೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಇಲಿದೆ ಉತ್ತರ.

ಶುಕ್ರವಾರದ ಇತಿಹಾಸ

ಸಿನಿಮಾ

ಶುಕ್ರವಾರ ಕೇವಲ ವಾರಂತ್ಯ ಎಂಬ ಕಾರಣಕ್ಕೆ ಮಾತ್ರ ಚಿತ್ರಗಳನ್ನು ಬಿಡುಗಡೆ ಮಾಡುತ್ತಿಲ್ಲ. ಸಿನಿಮಾಗಳನ್ನು ಶುಕ್ರವಾರ ಬಿಡುಗಡೆ ಮಾಡಲು ಅನೇಕ ಕಾರಣಗಳಿವೆ. ಶುಕ್ರವಾರ ಸಿನಿಮಾಗಳನ್ನು ಬಿಡುಗಡೆ ಮಾಡುವ ರೂಢಿ ಅಮೆರಿಕಾ ಹಾಗೂ ಬ್ರಿಟಿಷರ ಅಭ್ಯಾಸದಿಂದ ಭಾರತಕ್ಕೆ ಬಂದಿದ್ದು. 1939ರಲ್ಲಿ ಬಿಡುಗಡೆಯಾದ ಹಾಲಿವುಡ್‌ನ ʼಗಾನ್‌ ವಿತ್‌ ದಿ ವಿಂಡ್‌ʼ ಸಿನಿಮಾದಿಂದ ಭಾರತದಲ್ಲಿ ಸಿನಿಮಾಗಳನ್ನು ಶುಕ್ರವಾರ ರಿಲೀಸ್‌ ಮಾಡುವ ರೂಢಿ ಜಾರಿಗೆಬಂದಿದ್ದು.

ಈ ಮೊದಲು ಭಾರತದಲ್ಲಿ ಸಿನಿಮಾಗಳು ಬೇರೆ ಬೇರೆ ಬಿಡುಗಡೆಗೊಳ್ಳುತ್ತಿದ್ದ ಉದಾಹರಣೆಗಳಿವೆ. ಬಾಲಿವುಡ್‌ನ ನೀಲ್‌ ಕಮಲ್‌ ಸಿನಿಮಾ ಮಾರ್ಚ್‌ 24, 1947ರಂದು ಬಿಡುಗಡೆಯಾಗಿತ್ತು. ಅದು ಸೋಮವಾರ.

1950ರ ಅವಧಿಯಲ್ಲಿ ಸಿನಿಮಾಗಳು ಶುಕ್ರವಾರ ರಿಲೀಸ್‌ ಆಗಲು ಶುರುವಾಗಿದ್ದು. ಭಾರತದಲ್ಲಿ ಶುಕ್ರವಾರ ಬಿಡಿಗಡೆಯಾದ ಮೊತ್ತಮೊದಲ ಸಿನಿಮಾ ಎಂದರೆ ಅದು ಮುಘಲ್-ಎ-ಆಝಮ್. 5 ಅಗಸ್ಟ್‌ 1950, ಶುಕ್ರವಾರದಂದು ಬಿಡುಗಡೆಯಾಗಿತ್ತು. ಅಲ್ಲಿಂದ ಈಚೆಗೆ ಬಹುತೇಕ ಸಿನಿಮಾಗಳು ಶುಕ್ರವಾರದಂದು ಬಿಡುಗಡೆಗೊಳಿಸುವ ಅಭ್ಯಾಸಕ್ಕೆ ಒಳಗಾಗಿದ್ದು.

ಶುಕ್ರವಾರ ಬಿಡುಗಡೆಯಾಗಲು ಕಾರಣಗಳೇನು?

  1. ವಿದೇಶದಲ್ಲಿ ಚಿತ್ರಗಳನ್ನು ಶುಕ್ರವಾರ ಬಿಡುಗಡೆಗೊಳಿಸುತ್ತಿದ್ದರು. ಅಲ್ಲಿ ಶನಿವಾರ ಹಾಗೂ ಭಾನುವಾರ ವಾರಾಂತ್ಯದ ಕಾರಣ ಜನರು ಚಿತ್ರಮಂದಿರಗಳಿಗೆ ಭೇಟಿ ನೀಡುವ ಸಾಧ್ಯತೆಗಳು ಹೆಚ್ಚಿತ್ತು. ಅಮೆರಿಕದಲ್ಲಿ ಜನರು ಯಾವುದೇ ಹೊಸ ಸಿನಿಮಾ ರಿಲೀಸ್‌ ಆದರೂ ಅದನ್ನು ಶನಿವಾರ ಅಥವಾ ಭಾನುವಾರ ಹೋಗಿ ನೋಡುತ್ತಿದ್ದರು. ಅಮೆರಿಕದಲ್ಲಿ ಯಶಸ್ವಿಯಾದ ಈ ತಂತ್ರವನ್ನು ಭಾರತದ ಚಿತ್ರರಂಗವೂ ಅಳವಡಿಸಿಕೊಂಡಿತು.
  2. ಭಾರತದಲ್ಲಿ ಈ ಹಿಂದೆ ಕಲರ್‌ ಟಿ.ವಿ ಇರಲಿಲ್ಲ. ಅಲ್ಲದೆ, ಆಗ ಮುಂಬೈನಲ್ಲಿ ಸಣ್ಣ ಮಟ್ಟದ ಕೈಗಾರಿಕಾ ಸಂಸ್ಥೆಗಳಲ್ಲಿ ಶುಕ್ರವಾರ ಅರ್ಧದಿನ ಕೆಲಸ ಮಾಡುವ ಅಭ್ಯಾಸವಿತ್ತು. ಶುಕ್ರವಾರ ಅರ್ಧದಿನ ಕೆಲಸ ಮಾಡಿ ಮನೆಗೆ ಹೋಗುವ ನೌಕರರನ್ನು ಎಂಗೇಜ್‌ ಮಾಡುವ ನಿಟ್ಟಿನಲ್ಲಿ ಸಿನಿಮಾಗಳನ್ನು ಶುಕ್ರವಾರ ರಿಲೀಸ್‌ ಮಾಡಲಾಗುತ್ತಿತ್ತು.
  3. ಭಾರತದಲ್ಲಿ ಶುಕ್ರವಾರವನ್ನು ಲಕ್ಷ್ಮೀದೇವಿಯ ವಾರ ಎಂದು ನಂಬಲಾಗಿದೆ. ಹಾಗಾಗಿ ಈ ದಿನ ಚಿತ್ರವನ್ನು ಬಿಡುಗಡೆಮಾಡಿದರೆ ಚಿತ್ರದ ನಿರ್ಮಾಪಕರಿಗೆ ಲಕ್ಷ್ಮೀ ಹಣದ ರೂಪದಲ್ಲಿ ಒಲಿಯುತ್ತಾಳೆ ಎಂಬ ನಂಬಿಕೆ.
  4. ಚಿತ್ರವನ್ನು ಶುಕ್ರವಾರ ಬಿಡುಗಡೆಗೊಳಿಸುವ ಹಿಂದೆ ಒಂದು ಆರ್ಥಿಕ ಕಾರಣವೂ ಇದೆ. ಒಂದು ಚಿತ್ರವನ್ನು ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶಿಸಬೇಕಾದರೆ, ನಿರ್ಮಾಪಕರು ಚಿತ್ರಮಂದಿರದವರಿಗೆ ಶುಲ್ಕವನ್ನು ನೀಡಬೇಕು. ಉಳಿದ ದಿನಗಳಲ್ಲಿ ಹೆಚ್ಚಿನ ಶುಲ್ಕವನ್ನು ನಿರ್ಮಾಪಕರು ನೀಡಬೇಕಾಗುತ್ತದೆ. ಶುಕ್ರವಾರದಂದು ಈ ಶುಲ್ಕ ಕಡಿಮೆಯಿರುತ್ತದೆ. ಶುಕ್ರವಾರ ಬಹುಶಃ ಚಿತ್ರಮಂದಿರಕ್ಕೆ ಬರುವ ಜನರ ಸಂಖ್ಯೆ ಜಾಸ್ತಿಯಿರುತ್ತದೆ ಎಂಬ ಕಾರಣಕ್ಕಿರಬಹುದು, ಶುಲ್ಕದ ಮೊತ್ತವನ್ನು ಕಡಿಮೆ ಇರಿಸಲಾಗಿದೆ.

ಈ ಎಲ್ಲಾ ಕಾರಣಗಳು ಒಂದು ಸಿನಿಮಾವನ್ನು ಶುಕ್ರವಾರ ಬಿಡುಗಡೆಗೊಳಿಸಲು ಪ್ರೇರೇಪಿಸಿದೆ. ʼಫ್ರೈಡೇʼ ಈಗ ʼಮೂವಿಡೇʼ ಎಂದೇ ಪ್ರಸದ್ಧಿಯಾಗಿ ಜನರನ್ನು ಚಿತ್ರಮಂದಿರದತ್ತ ಸೆಳೆಯುತ್ತದೆ. ಈ ಶುಕ್ರವಾರ ಸಿನಿಮಾ ನೋಡಲು ಹೋಗುವಾಗ ಯಾಕೆ ಶುಕ್ರವಾರವೇ ರಿಲೀಸ್‌ ಆಗಿದ್ದು ಎಂಬ ಯೋಚನೆಯಿಂದ ಹೊರಬಂದು ಸಿನಿಮಾ ನೋಡಬಹುದು.

ಇದನ್ನೂ ಓದಿ: Prithviraj | 50,000 ಕಾಸ್ಟ್ಯೂಮ್‌, 500 ಟರ್ಬನ್‌ ಶೂಟಿಂಗ್‌ನಲ್ಲಿ ಬಳಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Kannada- Marathi Row: ಮಹಾರಾಷ್ಟ್ರ ಸದನದಲ್ಲಿ ಕನ್ನಡ ಪರ ದನಿ, ಗಡಿಯಲ್ಲಿ ಮರಾಠಿ ದಬ್ಬಾಳಿಕೆಗೆ ಪ್ರತಿಭಟನೆ

Kannada- Marathi Row: ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಮಹಾರಾಷ್ಟ್ರದ ಜತ್ ತಾಲೂಕಿನ ಸಂಖ್ ಉಪತಹಶೀಲ್ದಾರ್ ಕಚೇರಿ ಮುಂದೆ ಗಡಿ ಕನ್ನಡಿಗರು ಪ್ರತಿಭಟನೆ ನಡೆಸಿದರು. ಜತ್ ತಾಲೂಕಿನ ಗಡಿ ನಾಡು ಕನ್ನಡ ಸಂಘದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಮಹಾರಾಷ್ಟ್ರದ ಸದನದಲ್ಲಿಯೂ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕದ ವಿಚಾರವನ್ನು ಜತ್ ತಾಲೂಕಿನ ಶಾಸಕ ವಿಕ್ರಮ್ ಸಾವಂತ ಪ್ರಸ್ತಾಪಿಸಿದರು.

VISTARANEWS.COM


on

kannada marathi row
Koo

ಬೆಳಗಾವಿ: ಮಹಾರಾಷ್ಟ್ರದಲ್ಲಿ (Maharashtra) ಬೆಳಗಾವಿ ಗಡಿ (Belagavi news) ಕನ್ನಡಿಗರ ಹೋರಾಟ (Kannada- Marathi Row) ಜೋರಾಗಿದ್ದು, ಮಹಾರಾಷ್ಟ್ರ ಸರ್ಕಾರದ ದಬ್ಬಾಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರಿ ಕನ್ನಡ ಶಾಲೆಗಳಿಗೆ (Govt kannada schools) ಮರಾಠಿ ಶಿಕ್ಷಕರ (Teachers) ನೇಮಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಮಹಾರಾಷ್ಟ್ರದ ಜತ್ ತಾಲೂಕಿನ ಸಂಖ್ ಉಪತಹಶೀಲ್ದಾರ್ ಕಚೇರಿ ಮುಂದೆ ಗಡಿ ಕನ್ನಡಿಗರು ಪ್ರತಿಭಟನೆ ನಡೆಸಿದರು. ಜತ್ ತಾಲೂಕಿನ ಗಡಿ ನಾಡು ಕನ್ನಡ ಸಂಘದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಟಿಇಟಿ ಪರೀಕ್ಷೆಯನ್ನು ಸಹ ಮರಾಠಿ ಮಾಧ್ಯಮದಲ್ಲೆ ಮಹಾರಾಷ್ಟ್ರ ಶಿಕ್ಷಣ ಇಲಾಖೆ ನಡೆಸುತ್ತಿದ್ದು, 500 ಪ್ರಶಿಕ್ಷಣಾರ್ಥಿಗಳ ಪೈಕಿ ಕೇವಲ ಒಬ್ಬಿಬ್ಬರು ಮಾತ್ರ ಪಾಸ್ ಆಗುತ್ತಿದ್ದಾರೆ. ಟಿಇಟಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮಕ್ಕೂ ಅವಕಾಶ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಜತ್ತ, ಅಕ್ಕಲಕೋಟ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕನ್ನಡಿಗರು ಇದ್ದಾರೆ. ಹೀಗಾಗಿ ಗಡಿ ಕನ್ನಡಿಗರ ಹಿತ ಕಾಪಾಡಿ ಎಂದು ಒತ್ತಾಯಿಸಲಾಯಿತು.

ಸದನದಲ್ಲಿ ವಿಕ್ರಮ್‌ ಸಾವಂತ ಪ್ರಸ್ತಾಪ

ಈ ನಡುವೆ, ಮಹಾರಾಷ್ಟ್ರದ ಸದನದಲ್ಲಿಯೂ ಗಡಿ ಕನ್ನಡಿಗರ ಸಮಸ್ಯೆ ಪ್ರಸ್ತಾಪವಾಗಿದೆ. ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕದ ವಿಚಾರವನ್ನು ಜತ್ ತಾಲೂಕಿನ ಶಾಸಕ ವಿಕ್ರಮ್ ಸಾವಂತ ಸದನದಲ್ಲಿ ಪ್ರಸ್ತಾಪಿಸಿದರು.

ಕರ್ನಾಟಕದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಇರುವ ಹಾಗೇ ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡ ಭಾಷಿಕರು ಇದ್ದಾರೆ. ಜತ್, ಅಕ್ಕಲಕೋಟ ತಾಲ್ಲೂಕಿನಲ್ಲಿ ಹೆಚ್ಚು ಕನ್ನಡ ಭಾಷಿಕರು ಇದ್ದಾರೆ. ಇಲ್ಲಿನ‌ ಸರ್ಕಾರಿ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಇದು ಗಡಿ ಭಾಗದ ಕನ್ನಡಿಗರಲ್ಲಿ ಮಹಾರಾಷ್ಟ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬ ಭಾವನೆ ಮೂಡಿಸಿದೆ. ಸರ್ಕಾರ ತಕ್ಷಣವೇ ಗಡಿ ಭಾಗದ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸರ್ಕಾರಿ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಶಾಸಕ ವಿಕ್ರಮ ಸಾವಂತ ಸದನದಲ್ಲಿ ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯನವರಿಗೂ ಗಮನ ಹರಿಸಲು ಆಗ್ರಹ

ಬೆಳಗಾವಿ: ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿಯ ಕನ್ನಡ ಶಾಲೆಗಳಿಗೆ (Kannada Schools) ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡಿಗರ ಸಂಸ್ಕೃತಿ ಮತ್ತು ಪರಂಪರೆಯ ಹಾಳು ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರದ (Maharashtra Government) ಕನ್ನಡ ವಿರೋಧಿ ನೀತಿಯನ್ನು ಪ್ರತಿಭಟಿಸುವ ಕುರಿತು ಈಗ ಕನ್ನಡಿಗರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ (Belagavi News) ಬರೆದಿದ್ದಾರೆ.

ಈ ಬಗ್ಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಇತರರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ಕುರಿತು ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕ ಸರ್ಕಾರವು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಎಲ್ಲ ಮರಾಠಿ ಶಾಲೆಗಳಿಗೆ ಸರ್ವ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ. ರಾಜ್ಯದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತವನ್ನು ಗಮನದಲ್ಲಿಟ್ಟುಕೊಂಡು ಮರಾಠಿ ಭಾಷಿಕರ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನೇ ನೇಮಿಸುತ್ತ ಬಂದಿದೆ. ಇದಕ್ಕೆ ತದ್ವಿರುದ್ಧವಾಗಿ ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಅಲ್ಲಿಯ ಕನ್ನಡಿಗರ ಹಿತಕ್ಕೆ ಧಕ್ಕೆ ತರುವಂಥ ಕನ್ನಡಿಗರ ಹಾಗೂ ಕನ್ನಡ ವಿರೋಧಿ ನಿಲುವನ್ನು ಮಹಾರಾಷ್ಟ್ರ ಸರ್ಕಾರ ತಳೆಯುತ್ತಿದೆ ಎಂದು ಹೇಳಿದ್ದಾರೆ.

ಸಾಂಗ್ಲಿ ಜಿಲ್ಲಾ ಪಂಚಾಯಿತಿಯು ಇತ್ತೀಚೆಗೆ ಕನ್ನಡ ಶಾಲೆಗಳಿಗಾಗಿ ನೇಮಕ ಮಾಡಿದ 24 ಶಿಕ್ಷಕರ ಪೈಕಿ ಕೇವಲ ನಾಲ್ವರು ಮಾತ್ರ ಕನ್ನಡಿಗರಾಗಿದ್ದಾರೆ. ಕನ್ನಡ ಡಿ.ಎಡ್. ಪದವಿ ಪಡೆದ ನೂರಾರು ಶಿಕ್ಷಕರು ಕನ್ನಡ ಪ್ರದೇಶಗಳಲಿದ್ದು ಅವರನ್ನು ಕನ್ನಡ ಶಾಲೆಗಳಿಗೆ ನೇಮಕ ಮಾಡದೇ ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಅಲ್ಲಿಯ ಸರ್ಕಾರದ ಕ್ರಮವು ದುರದ್ದೇಶಪೂರಿತವಾಗಿದೆ. ಈ ಕ್ರಮದ ವಿರುದ್ಧ ಅಲ್ಲಿಯ ಕನ್ನಡಿಗರು, ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ, ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಅವರ ಬೆನ್ನಿಗೆ ಕರ್ನಾಟಕ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Job Recruitment: ಬ್ಯಾಂಕ್ ಆಫ್ ಬರೋಡಾದಲ್ಲಿ 627 ಹುದ್ದೆಗಳಿಗೆ ಅರ್ಜಿ ಆಹ್ವಾನ; 55 ಲಕ್ಷದವರೆಗೆ ಸಂಬಳ!

Continue Reading

Latest

Grand Marriage: ಭಾರತದ ಶ್ರೀಮಂತ ಕುಟುಂಬಗಳ ಅತ್ಯಂತ ಅದ್ಧೂರಿ ಮದುವೆ ಯಾರದು? ಪಟ್ಟಿ ಇಲ್ಲಿದೆ

Grand Marriage: ಕೆಲವರು ಹಣಕಾಸಿನ ಸಮಸ್ಯೆಯಿಂದ ಮಗ/ಮಗಳ ಮದುವೆ ಮಾಡುವುದಕ್ಕೆ ಆಗದೇ ಒದ್ದಾಡುತ್ತಾರೆ. ಇನ್ನು ಕೆಲವರು ಮದುವೆಯನ್ನು ಹೇಗಲ್ಲಾ ಅದ್ಧೂರಿಯಾಗಿ ಮಾಡಬಹುದು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಭಾರತದಲ್ಲಿ ಸಾಕಷ್ಟು ಶ್ರೀಮಂತ ಕುಟುಂಬಗಳಿವೆ. ಇವರು ಮದುವೆಗಾಗಿ ಯಥೇಚ್ಛವಾಗಿ ದುಡ್ಡು ಸುರಿದಿದ್ದಾರೆ. ಅದ್ಧೂರಿಯಾಗಿ ನಡೆದ ಮದುವೆಗಳು ಯಾರದ್ದು?ಎಷ್ಟೆಲ್ಲಾ ಖರ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Grand Marriage
Koo

ಮುಂಬೈ : ಮಕ್ಕಳ ಮದುವೆಯೆಂದರೆ ಎಲ್ಲಾ ತಂದೆ-ತಾಯಿಗೂ ಸಂಭ್ರಮವಿರುತ್ತದೆ. ಇನ್ನು ಶ್ರೀಮಂತ ಮನೆತನದ ಮಕ್ಕಳ ಮದುವೆಯೆಂದರೆ ಕೇಳಬೇಕಾ…? ತಮ್ಮ ಶ್ರೀಮಂತಿಕೆಯನ್ನು ತೋರ್ಪಡಿಸುವುದಕ್ಕಾದರೂ ಅದ್ಧೂರಿಯಿಂದ ಮದುವೆ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಹಲವಾರು ಶ್ರೀಮಂತ ಮನೆತನದವರ ಮದುವೆಗಳು ಬಹಳ ಅದ್ಧೂರಿ (Grand Marriage)ಯಾಗಿ ನಡೆದಿದ್ದು, ಅದರ ಬಗ್ಗೆ ಇಲ್ಲಿದೆ ಮಾಹಿತಿ.

Grand Marriage

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದೆ ಹೆಸರಾದ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ಜುಲೈ 12, 2024ರಂದು ಮುಂಬೈನಲ್ಲಿ ರಾಧಿಕಾ ಮರ್ಚೆಂಟ್ ಅವರ ಜೊತೆ ನಿಶ್ಚಯವಾಗಿದ್ದು, ಇದು  ಅತ್ಯಂತ ದುಬಾರಿ ರಿ ಮದುವೆ ಎಂದು ಊಹಿಸಲಾಗಿದೆ.

Grand Marriage

1. ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್: 700 ಕೋಟಿ ರೂ. ಖರ್ಚು

ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರು ಆನಂದ್ ಪಿರಮಾಲ್ ಅವರನ್ನು ವಿವಾಹವಾಗಿದ್ದು, ಸುಮಾರು ಒಂದು ವಾರಗಳ ಕಾಲ ನಡೆದ ಈ ಮದುವೆಗೆ  ಅಂದಾಜು 700 ಕೋಟಿ ರೂ. ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಉದಯಪುರ, ಇಟಲಿಯ ಲೇಕ್ ಕೊಮೊ ಮತ್ತು ಮುಂಬೈನಲ್ಲಿ ನಡೆದ ಈ ಉತ್ಸವದಲ್ಲಿ ಜಗತ್ತಿನ ಅನೇಕ ಸೂಪರ್ ಸ್ಟಾರ್‌ಗಳು  ಭಾಗವಹಿಸಿದ್ದರು.  ಮತ್ತು ವಿವಾಹ ಸಮಾರಂಭವು ಲೇಕ್ ಪಿಚೋಲಾದ ಖಾಸಗಿ ದ್ವೀಪದಲ್ಲಿ ನಡೆಯಿತು.

Grand Marriage

2. ಸುಶಾಂತ್ ರಾಯ್ ಮತ್ತು ಸೀಮಂತೋ ರಾಯ್: 554 ಕೋಟಿ ರೂ. ಖರ್ಚು

2004ರಲ್ಲಿ ಸಹಾರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಉದ್ಯಮಿ ಸುಬ್ರತಾ ರಾಯ್ ಅವರ ಪುತ್ರರಾದ ಸುಶಾಂತ್ ರಾಯ್ ಮತ್ತು ಸೀಮಾಂತೋ ರಾಯ್ ಅವರ ವಿವಾಹಕ್ಕೆ ಅಂದಾಜು 554 ಕೋಟಿ ರೂ. ಖರ್ಚುಮಾಡಲಾಗಿದೆ ಎನ್ನಲಾಗಿದೆ. ಲಕ್ನೋದ ಸಹಾರಾ ಕ್ರೀಡಾಂಗಣದಲ್ಲಿ ನಡೆದ ಈ  ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು ಮತ್ತು ಕ್ರೀಡಾಕೂಟದವರು  ಸೇರಿದಂತೆ 11,000ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು.

Grand Marriage

3. ಬ್ರಹ್ಮಣಿ ರೆಡ್ಡಿ ಮತ್ತು ರಾಜೀವ್ ರೆಡ್ಡಿ: 500 ಕೋಟಿ ರೂ. ಖರ್ಚು

ಮಾಜಿ ರಾಜಕಾರಣಿ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಣಿ ರೆಡ್ಡಿ ಮತ್ತು ರಾಜೀವ್ ರೆಡ್ಡಿ ಅವರ ವಿವಾಹಕ್ಕೆ ಸುಮಾರು 500 ಕೋಟಿ ರೂಪಾಯಿ (74 ಮಿಲಿಯನ್ ಡಾಲರ್) ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಅರಮನೆಯಲ್ಲಿ ನಡೆದ ಐದು ದಿನಗಳ ಆಚರಣೆಯಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ಸುಮಾರು 50,000 ಮಂದಿ ಭಾಗವಹಿಸಿದ್ದರು.

Grand Marriage

4. ಸೃಷ್ಟಿ ಮಿತ್ತಲ್ ಮತ್ತು ಗುಲ್ರಾಜ್ ಬೆಹ್ಲ್: 500 ಕೋಟಿ

ಸ್ಟೀಲ್  ಉದ್ಯಮಿ ಪ್ರಮೋದ್ ಮಿತ್ತಲ್ ಅವರ ಪುತ್ರಿ ಸೃಷ್ಟಿ ಮಿತ್ತಲ್ ಅವರು ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಗುಲ್ರಾಜ್ ಬೆಹ್ಲ್ ಅವರನ್ನು 2013 ರಲ್ಲಿ ಸ್ಪೇನ್‌ನ ಬಾರ್ಸಿಲೋನಾದಲ್ಲಿ ಮದುವೆಯಾದರು. ಇದು  ಮೂರು ದಿನಗಳ ಅದ್ದೂರಿ ಮದುವೆಯಾಗಿದ್ದು, ಈ ಕಾರ್ಯಕ್ರಮಕ್ಕೆ ಸುಮಾರು 500 ಕೋಟಿ ರೂ. ಖರ್ಚುಮಾಡಲಾಗಿದೆ ಎನ್ನಲಾಗಿದೆ. ಮದುವೆಯಲ್ಲಿ 500 ಅತಿಥಿಗಳು ಭಾಗವಹಿಸಿದ್ದರು ಮತ್ತು ಪ್ರಸಿದ್ಧ ಸ್ಪ್ಯಾನಿಷ್ ಪ್ರಸಿದ್ಧ ಬಾಣಸಿಗ ಸೆರ್ಗಿ ಅರೋಲಾ ಸಿದ್ಧಪಡಿಸಿದ ಮೆನು ಮತ್ತು 60 ಕೆಜಿ, ಬೃಹತ್ ವಿವಾಹ ಕೇಕ್ ಅನ್ನು ಕತ್ತರಿಸಲಾಗಿತ್ತು. ಈ ವಿವಾಹ ಸಮಾರಂಭವು ಬೆಟ್ಟದ ಮೇಲಿರುವ ನ್ಯಾಷನಲ್ ಮ್ಯೂಸಿಯಂ ಆಫ್ ಕ್ಯಾಟಲಾನ್ ಆರ್ಟ್‌ನಲ್ಲಿ ನಡೆಯಿತು.

Grand Marriage

5. ವಾಣಿಶಾ ಮಿತ್ತಲ್ ಮತ್ತು ಅಮಿತ್ ಭಾಟಿಯಾ: 240 ಕೋಟಿ ರೂ.

2004ರಲ್ಲಿ ಸ್ಟೀಲ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಪುತ್ರಿ ವಾಣಿಶಾ ಮಿತ್ತಲ್ ಮತ್ತು ಲಂಡನ್ ಬ್ಯಾಂಕರ್ ಅಮಿತ್ ಭಾಟಿಯಾ ಅವರ ವಿವಾಹವು ಆರು ದಿನಗಳ ಕಾಲ ಪ್ಯಾರಿಸ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಗಿತ್ತು. ಈ ಉತ್ಸವದಲ್ಲಿ ಬಾಲಿವುಡ್ ತಾರೆಯರಾದ ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರು ಆಗಮಿಸಿದ್ದರು. ಪ್ರಸಿದ್ಧ ಕವಿ ಜಾವೇದ್ ಅಖ್ತರ್ ವಿವಾಹಪೂರ್ವ ಸಮಾರಂಭಗಳಿಗಾಗಿ ನಾಟಕವನ್ನು ಸಹ ಬರೆದಿದ್ದಾರೆ. ಮುಖ್ಯ ವಿವಾಹವು 17 ನೇ ಶತಮಾನದ ಚಾಟೌ ಡಿ ವಾಕ್ಸ್-ಲೆ-ವಿಕಾಮ್ಟೆಯಲ್ಲಿ ನಡೆಯಿತು, ಈ ಮದುವೆಗಾಗಿ  ಎಸ್ಟೇಟ್‌ನ  ಉದ್ಯಾನಗಳಲ್ಲಿನ ಕೊಳದ ಮೇಲೆ ಭವ್ಯವಾದ ಮಂಟಪವನ್ನು ನಿರ್ಮಿಸಲಾಗಿತ್ತು.

Grand Marriage

6. ಸೋನಮ್ ವಾಸ್ವಾನಿ ಮತ್ತು ನವೀನ್ ಫ್ಯಾಬಿಯಾನಿ: 210 ಕೋಟಿ ರೂ. ಖರ್ಚು

2017 ರಲ್ಲಿ, ಸ್ಟಾಲಿಯನ್ ಗ್ರೂಪ್ ಸಂಸ್ಥಾಪಕ ಸುನಿಲ್ ವಾಸ್ವಾನಿ ಅವರ ಪುತ್ರಿ ಸೋನಮ್ ವಾಸ್ವಾನಿ  ಮತ್ತು ಮುಂಬೈ ಮೂಲದ ಉದ್ಯಮಿ ನವೀನ್ ಫ್ಯಾಬಿಯಾನಿ ಅವರ ವಿವಾಹವು ಆಸ್ಟ್ರಿಯಾದ ವಿಯೆನ್ನಾದಲ್ಲಿ ಸುಮಾರು 210 ಕೋಟಿ ರೂ.ಗಳ (30 ಮಿಲಿಯನ್ ಡಾಲರ್) ವೆಚ್ಚದಲ್ಲಿ ಅದ್ಧೂರಿಯಾಗಿ ನೇರವೇರಿತ್ತು. ಉತ್ಸವಗಳು ಪಲೈಸ್ ಫೆರ್ಸ್ಟೆಲ್, ಪಲೈಸ್ ಲಿಚೆನ್ಸ್ಟೇನ್ ಪಾರ್ಕ್ ಮತ್ತು ಬೆಲ್ವೆಡೆರೆ ಅರಮನೆಯಲ್ಲಿ ನಡೆದವು.

Grand Marriage

7. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ: 100 ಕೋಟಿ ರೂ. ಖರ್ಚು

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ 2017ರ ಡಿಸೆಂಬರ್ ನಲ್ಲಿ ಇಟಲಿಯ ಟಸ್ಕನಿಯಲ್ಲಿರುವ ಲೇಕ್ ಕೊಮೊದಲ್ಲಿ ವಿವಾಹವಾದರು. ಕೆಲವು ದಿನಗಳ ನಂತರ ಮುಂಬೈನಲ್ಲಿ ನಡೆದ ಅವರ ವಿವಾಹ ಆರತಕ್ಷತೆ ಕೂಡ ಹೆಚ್ಚು ಅದ್ದೂರಿಯಾಗಿ ನಡೆಯಿತು, ಇದರಲ್ಲಿ ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಭಾಗವಹಿಸಿದ್ದರು ಮತ್ತು ಪಿಎಂ ಮೋದಿ ಕೂಡ ಇವರ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು.

Grand Marriage

8. ಅಡೆಲ್ ಸಾಜನ್ ಮತ್ತು ಸನಾ ಖಾನ್: 100 ಕೋಟಿ ರೂ. ಖರ್ಚು

ದುಬೈ ಉದ್ಯಮಿ ಅಡೆಲ್ ಸಾಜನ್ ಅವರು ನಟಿ ಸನಾ ಖಾನ್ ಅವರನ್ನು ಕ್ರೂಸ್‌ನಲ್ಲಿ  ಅದ್ದೂರಿಯಾಗಿ ವಿವಾಹವಾದರು. ಇವರ ವಿವಾಹಕ್ಕೆ 100 ಕೋಟಿ ರೂ.ಗಳ ಖರ್ಚಾಗಿದೆ ಎಂದು ಊಹಿಸಲಾಗಿದೆ. ಬಾರ್ಸಿಲೋನಾದಿಂದ ಫ್ರಾನ್ಸ್ ಮೂಲಕ ಇಟಲಿಗೆ ಪ್ರಯಾಣಿಸುತ್ತಿದ್ದ ಕೋಸ್ಟಾ ಫಾಸಿನೋಸಾ ಕ್ರೂಸ್ ಹಡಗಿನಲ್ಲಿ ದಂಪತಿಗಳು ವಿವಾಹ ವಿಧಿಯನ್ನು ಆಚರಿಸಿದ್ದಾರೆ.

Grand Marriage

9. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ: 77 ಕೋಟಿ ರೂ. ಖರ್ಚು

ಆರು ವರ್ಷಗಳ ಡೇಟಿಂಗ್ ನಂತರ, ಬಾಲಿವುಡ್ ದಂಪತಿಗಳಾದ ರಣವೀರ್‌ಸಿಂಗ್ ಮತ್ತು ದೀಪಿಕಾ ಪಡುಕೋಣೆ 2018 ರ ನವೆಂಬರ್ ನಲ್ಲಿ ಇಟಲಿಯ ಲೇಕ್ ಕ್ಯಾಮೊದಲ್ಲಿ ವಿವಾಹವಾದರು, ಅವರ ವಿವಾಹ ಸಮಾರಂಭಗಳು ಸಿಂಧಿ ಮತ್ತು ಕೊಂಕಣಿ ಸಂಪ್ರದಾಯಗಳಲ್ಲಿ ನಡೆದವು. ಇವರ ಮದುವೆಯ ಖರ್ಚು 77 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

Grand Marriage

10. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ

ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ಅವರು ವಜ್ರದ ಉದ್ಯಮಿಯ ಪುತ್ರಿ ಶ್ಲೋಕಾ ಮೆಹ್ತಾ ಅವರನ್ನು 2019 ರಲ್ಲಿ ಮುಂಬೈನಲ್ಲಿ ಅದ್ದೂರಿಯಾಗಿ ವಿವಾಹವಾದರು. ಈ ಮದುವೆಯಲ್ಲಿ ಬಹಳ ವರ್ಣರಂಜಿತ ಅಲಂಕಾರಗಳನ್ನು ಮಾಡಲಾಗಿತ್ತು. ಆದರೆ ಮದುವೆಯ ಖರ್ಚಿನ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

ಇದನ್ನೂ ಓದಿ: ದಳಪತಿ ವಿಜಯ್‌ಗೆ ಭುಜದ ಮೇಲಿನ ಕೈ ತೆಗೆಯಲು ಹೇಳಿದ ಹುಡುಗಿ; ವಿಡಿಯೊ ವೈರಲ್

Continue Reading

ಅಂಕಣ

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

ರಾಜಮಾರ್ಗ ಅಂಕಣ: ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ. ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

VISTARANEWS.COM


on

ರಾಜಮಾರ್ಗ ಅಂಕಣ virat kohli rohit sharma
Koo

ಚಾಂಪಿಯನ್ ಆಟಗಾರರು ಮತ್ತು ಟೀಮ್ ಇಂಡಿಯಾ ಗೆಲುವು

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಭಾವುಕ ಕ್ಷಣಗಳನ್ನು ಭಾರತದ ಕೋಟಿ ಕೋಟಿ ಕ್ರಿಕೆಟ್ (Cricket) ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ.

ಸೂರ್ಯಕುಮಾರ್ (Suryakumar yadav) ಹಿಡಿದ ಅದ್ಭುತವಾದ ಕ್ಯಾಚ್, ವಿರಾಟ್ ಕೊಹ್ಲಿಯ ಹೀರೋಯಿಕ್ ಇನ್ನಿಂಗ್ಸ್, ಬುಮ್ರಾ, ಹಾರ್ದಿಕ್, ಆರ್ಷದೀಪ್ ಬೌಲಿಂಗ್‌ನಲ್ಲಿ ತೋರಿದ ಮ್ಯಾಜಿಕ್, ರೋಹಿತ್ ಶರ್ಮಾ (Rohit Sharma) ತೋರಿಸಿದ ತಾಳ್ಮೆ, ಅಕ್ಷರ್ ಪಟೇಲ್ ಆಲ್ರೌಂಡ್ ಆಟ……ಇದ್ಯಾವುದೂ ನಮಗೆ ಮರೆತು ಹೋಗೋದಿಲ್ಲ.

ಭರವಸೆ ನಮ್ಮನ್ನು ಗೆಲ್ಲಿಸಿತು

ಚಾಂಪಿಯನ್ ಆಟಗಾರರ ಮೇಲೆ ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಇಟ್ಟ ಭರವಸೆ ನಿಜ ಆಗಿದೆ. ವಿಶ್ವಕಪ್ಪಿನ ಹಿಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸತತವಾಗಿ ವೈಫಲ್ಯ ಕಂಡಾಗ ಆತನಿಗೆ ವಿಶ್ರಾಂತಿ ಕೊಡಿ, ಆತನಿಗೆ ಓಪನಿಂಗ್ ಸ್ಲಾಟ್ ಬೇಡವೇ ಬೇಡ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸಿ ಎಂದೆಲ್ಲ ಟ್ರೋಲ್ ಮಾಡಿದವರಿಗೆ ಈ ಬಾರಿ ಸರಿಯಾದ ಉತ್ತರ ದೊರೆತಿದೆ. ಚಾಂಪಿಯನ್ ಆಟಗಾರ ಯಾವತ್ತೂ ದೊಡ್ಡ ಮ್ಯಾಚಲ್ಲಿ ಮಿಂಚು ಹರಿಸುತ್ತಾನೆ.

ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು!

ಆತ ಸತತವಾಗಿ ಸೋತು ಅಳುತ್ತಾ ಕೂತಾಗ ರಾಹುಲ್ ದ್ರಾವಿಡ್ ಹೇಳಿದ ಮಾತನೊಮ್ಮೆ ಸೂಕ್ಷ್ಮವಾಗಿ ಗಮನಿಸಿ.
‘ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು. ನಮಗೆ ನಂಬಿಕೆ ಇದೆ’ ಎಂದು. ಆತನ ಬ್ಯಾಟಿಂಗ್ ಕ್ರಮಾಂಕವನ್ನು ಕೂಡ ಬದಲಾವಣೆ ಮಾಡದೆ ಆತನ ನೆರವಿಗೆ ನಿಂತವರು ಟೀಮ್ ಮ್ಯಾನೇಜ್ಮೆಂಟ್ ಮತ್ತು ಟೀಮ್ ಕೋಚ್ ರಾಹುಲ್ ದ್ರಾವಿಡ್. ಚಾಂಪಿಯನ್ ವಿರಾಟ್ ಕೊಹ್ಲಿ ಇಂದು ಆವರ
ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ಹಾರ್ದಿಕ ಪಾಂಡ್ಯನನ್ನು ಟ್ರೋಲ್ ಮಾಡಿದವರಿಗೆ ಈ ಗೆಲುವು ಅರ್ಪಣೆ!

ಅದೇ ರೀತಿ ನಮ್ಮ ಹಾರ್ದಿಕ್ ಪಾಂಡ್ಯನ ಬಗ್ಗೆ ಗಮನಿಸಿ. ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಆತನು ಸತತವಾಗಿ ಬೈಗುಳ ತಿಂದ ಆಟಗಾರ. ಆತ ವಿಶ್ವಕಪ್ ತಂಡಕ್ಕೆ ಆಯ್ಕೆ ಆದಾಗ ಎಷ್ಟೊಂದು ಜನರು ರೊಚ್ಚಿಗೆದ್ದು ಬೈದವರಿದ್ದರು! ಆತನ ಖಾಸಗಿ ಜೀವನದ ಮೇಲೆ ಕೆಸರು ಎರಚುವ ಕೆಲಸ ಕೂಡ ಆಗಿತ್ತು. ಅಂತವನ ಕೈಗೆ ಪಂದ್ಯದ 20ನೇ ಓವರು ಕೊಡುವುದೆಂದರೆ? ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಆತನ ಮೇಲಿಟ್ಟ ನಂಬಿಕೆಗೆ ಆತನು ಎಷ್ಟೊಂದು ಅದ್ಭುತವಾಗಿ ಉತ್ತರ ಕೊಟ್ಟು ಬಿಟ್ಟ ನೋಡಿ. ಚಾಂಪಿಯನ್ ಎಂದಿಗೂ ಚಾಂಪಿಯನ್ ಆಗಿರುತ್ತಾನೆ.

ರೋಹಿತ್ ಶರ್ಮಾ ನಾಯಕತ್ವವನ್ನು ಪ್ರಶ್ನೆ ಮಾಡಿದವರಿಗೆ, ಆತ ಸ್ವಾರ್ಥಿ ಎಂದು ಟೀಕೆ ಮಾಡಿವರಿಗೆ ಇಲ್ಲಿ ಸರಿಯಾದ ಉತ್ತರ ದೊರೆತಿದೆ. ಟೀಮ್ ಆಡಳಿತ ಯುವ ಆಟಗಾರರ ಮೇಲೆ ತೋರಿದ ಕಾಳಜಿಯಿಂದ ಶಿವಂ ದುಬೆ, ಆಕ್ಷರ್ ಪಟೇಲ್ ಮೊದಲಾದ ಯಂಗಸ್ಟರ್ಸ್ ಒಳ್ಳೆ ಆಟಗಾರರಾಗಿ ಮಿಂಚಲು ಸಾಧ್ಯವಾಯಿತು. ಅವರಿಗೆ ಖಚಿತವಾಗಿ ಒಳ್ಳೆಯ ಭವಿಷ್ಯವಿದೆ.

ಒಂದು ಪಂದ್ಯ – ಹಲವು ಪಾಠ!

ಭಾರತ ಟಿ 20 ವಿಶ್ವಕಪ್ಪನ್ನು ಅರ್ಹವಾಗಿ ಗೆದ್ದು ಬೀಗಿತು, ವಿರಾಟ್ ಕೊಹ್ಲಿ (Virat Kohli) ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಗೆಲುವಿನ ವಿದಾಯ ನೀಡಿತು, ರೋಹಿತ್ ಶರ್ಮಾ ತನ್ನ ಮೊದಲ ಐಸಿಸಿ ಟ್ರೋಫಿ ಲಿಫ್ಟ್ ಮಾಡಿದರು ಅನ್ನುವುದು ಮುಂದಿನ ಇತಿಹಾಸದ ಭಾಗ. ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ.

ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

ಐಪಿಎಲ್ ಪಂದ್ಯಗಳ ಉದ್ದಕ್ಕೂ ಬಾಸುಂಡೆ ಬರುವ ಹಾಗೆ ಹೊಡೆಸಿಕೊಂಡಿದ್ದ ಭಾರತದ ಬೌಲರಗಳಿಗೆ ಈ ವಿಶ್ವಕಪ್ ಸ್ಟಾರ್ ವ್ಯಾಲ್ಯೂ ಕೊಟ್ಟಿತು ಅನ್ನುವುದು ಭರತವಾಕ್ಯ.

ಕಂಗ್ರಾಚ್ಯುಲೇಶನ್ ರೋಹಿತ್ ಆಂಡ್ ಹುಡುಗರು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

Continue Reading

ಭವಿಷ್ಯ

Dina Bhavishya : ಈ ರಾಶಿಯವರಿಗೆ ದಿಢೀರ್ ಧನಾಗಮನದಿಂದ ಸಂತೋಷ ಇಮ್ಮಡಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ಏಕಾದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

dina Bhavishya
Koo

ಚಂದ್ರನು ವೃಷಭ ರಾಶಿಯಿಂದ ಮಂಗಳವಾರ ಬೆಳಗ್ಗೆ 11:50ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಕಟಕ, ಸಿಂಹ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ವೃಷಭ ರಾಶಿಯವರು ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳುಗೆಡವಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡದಿರಿ, ಆಗ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಸಿಂಹ ರಾಶಿಯವರು ನಿಮ್ಮ ಸಭ್ಯ ನಡವಳಿಕೆ ಇತರರಿಂದ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (2-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ.
ತಿಥಿ: ಏಕಾದಶಿ 08:41 ವಾರ: ಮಂಗಳವಾರ
ನಕ್ಷತ್ರ: ಕೃತಿಕಾ 28:38 ಯೋಗ: ಧೃತಿ 11:15
ಕರಣ: ಬಾಲವ 08:41 ಅಮೃತಕಾಲ: ಮಧ್ಯರಾತ್ರಿ 02:20 ರಿಂದ 03:53ರವರೆಗೆ
ದಿನದ ವಿಶೇಷ: ಸರ‍್ವಮೇಕಾದಶಿ

ಸೂರ್ಯೋದಯ : 05:58   ಸೂರ್ಯಾಸ್ತ : 06:50

ರಾಹುಕಾಲ: ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30

ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಕೆಲವು ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಆಪ್ತರಿಂದ ಸಹಾಯವನ್ನು ಕೋರುವಿರಿ. ಒತ್ತಡದ ಕೆಲಸದಿಂದಾಗಿ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಸದೃಢ ಇರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳುಗೆಡವಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡದಿರಿ, ಆಗ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಆರೋಗ್ಯ ಕೊಂಚಮಟ್ಟಿಗೆ ಹದಗೆಡುತ್ತದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಬೇರೆಯವರ ಮಾತನ್ನು ಕೇಳಿಕೊಂಡು ನಿಮ್ಮನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳನ್ನು ದ್ವೇಷಿಸುವುದು ಬೇಡ. ಇತರರ ಸಮಸ್ಯೆಗಳನ್ನು ಪರಿಹರಿಸಲು ನೀವು ಮಧ್ಯ ಪ್ರವೇಶ ಮಾಡುವ ಸಾಧ್ಯತೆ ಇದೆ. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಾವಶ್ಯಕ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಅನಿವಾರ್ಯ ಪ್ರಸಂಗಗಳು ನಿಮಗೆ ಕೋಪವನ್ನು ತರಿಸುವ ಸಾಧ್ಯತೆ ಇದೆ. ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಉತ್ತಮ. ಕಠಿಣ ಪರಿಶ್ರಮ ನಿಮಗೆ ಫಲ ನೀಡಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಸಿಂಹ: ನಿಮ್ಮ ಸಭ್ಯ ನಡವಳಿಕೆ ಇತರರಿಂದ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಬಹುದು.ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡಬಹುದು. ಇತರರಿಗೆ ಪ್ರತಿಫಲಗಳು ತರುವ ನಿಮ್ಮ ಸಾಮರ್ಥ್ಯ ಪ್ರತಿಫಲ ತರುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆ ಅವಕಾಶ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಒತ್ತಡದಿಂದ ವಿಮುಕ್ತಿ ಹೊಂದಿ, ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ದೀರ್ಘಕಾಲದ ದೃಷ್ಟಿಕೋನದಿಂದ ಮಾಡಿದ ಹೂಡಿಕೆಯಿಂದ ಲಾಭ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಸಂಪೂರ್ಣ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ದಿಢೀರ್ ಧನಾಗಮನದಿಂದ ಸಂತೋಷ ಇಮ್ಮಡಿಯಾಗಲಿದೆ. ಅನೇಕ ಸಮಸ್ಯೆಗಳು ಇಂದು ಪರಿಹಾರವಾಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಬಹಳ ದಿನಗಳಿಂದ ಕಂಡ ಕನಸು ನನಸಾಗಲಿದೆ. ಉದ್ಯೋಗಿಗಳಿಗೆ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ : ಇಂದು ಪ್ರಮುಖ ನಿರ್ಧಾರಗಳಿಂದಾಗಿ ಮಾನಸಿಕವಾಗಿ ನೀವು ಬಳಲುವ ಸಾಧ್ಯತೆ ಇದೆ. ಅನಾವಶ್ಯಕ ಖರ್ಚು ಮಾಡಿ ಕೊರಗುವ ಸಾಧ್ಯತೆ ಇದೆ. ಆದಷ್ಟು ನಿಯಂತ್ರಣದಲ್ಲಿರಿ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭಫಲ, ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

Horoscope Today

ಧನಸ್ಸು: ಆರೋಗ್ಯದ ಆರೈಕೆ ಇಂದು ಅಗತ್ಯವಿದೆ. ಆಪ್ತರೊಂದಿಗೆ ಸೇರಿಕೊಂಡು ಮಾಡುವ ವ್ಯಾಪಾರ ನಷ್ಟ ತಂದಿತು, ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ, ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 8

Horoscope Today

ಮಕರ: ಆಹಾರ ಕ್ರಮದ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ. ಆದಷ್ಟು ಆಹಾರ ನಿಯಂತ್ರಣ ಮಾಡಿ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ದಿಢೀರ್ ಪ್ರಯಾಣ ಬೆಳೆಸಬೇಕಾಗಬಹುದು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ನಿಮ್ಮ ಸಾಧನೆಗೆ ಇಂದು ಪ್ರೋತ್ಸಾಹ ಸಿಗಲಿದೆ. ಅನೇಕ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ವ್ಯಾಪಾರದ ಉದ್ದೇಶಕ್ಕಾಗಿ ಕೈಕೊಂಡ ಪ್ರಯಾಣ ಲಾಭವನ್ನು ತಂದುಕೊಡಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ, ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಮೀನ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ ಇರಲಿದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಟೀಕಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
Anant Ambani
ಫ್ಯಾಷನ್2 mins ago

Anant Ambani: ಅನಂತ್ ಅಂಬಾನಿ ಬಳಿ ಇವೆ 300 ಕೋಟಿಯ ವಾಚ್‌ಗಳು! ಎಂಥೆಂಥ ಗಡಿಯಾರಗಳಿವೆ ನೋಡಿ!

Team India Coach
ಕ್ರೀಡೆ8 mins ago

Team India Coach: ಟೀಮ್​ ಇಂಡಿಯಾ ಕೋಚ್​ ಆಯ್ಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಜಯ್‌ ಶಾ

kannada marathi row
ಪ್ರಮುಖ ಸುದ್ದಿ24 mins ago

Kannada- Marathi Row: ಮಹಾರಾಷ್ಟ್ರ ಸದನದಲ್ಲಿ ಕನ್ನಡ ಪರ ದನಿ, ಗಡಿಯಲ್ಲಿ ಮರಾಠಿ ದಬ್ಬಾಳಿಕೆಗೆ ಪ್ರತಿಭಟನೆ

Food for Concentration
ಆರೋಗ್ಯ38 mins ago

Food for Concentration: ಈ ಆಹಾರಗಳ ಸೇವನೆಯಿಂದ ನಿಮ್ಮ ಏಕಾಗ್ರತೆ ಶಕ್ತಿಯೇ ಕುಂಠಿತವಾಗಬಹುದು!

Grand Marriage
Latest38 mins ago

Grand Marriage: ಭಾರತದ ಶ್ರೀಮಂತ ಕುಟುಂಬಗಳ ಅತ್ಯಂತ ಅದ್ಧೂರಿ ಮದುವೆ ಯಾರದು? ಪಟ್ಟಿ ಇಲ್ಲಿದೆ

ರಾಜಮಾರ್ಗ ಅಂಕಣ virat kohli rohit sharma
ಅಂಕಣ57 mins ago

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

niranjana ನನ್ನ ದೇಶ ನನ್ನ ದನಿ ಅಂಕಣ
ಅಂಕಣ1 hour ago

ನನ್ನ ದೇಶ ನನ್ನ ದನಿ: ಜಗತ್ತಿನ ಇತಿಹಾಸ ಕನ್ನಡದಲ್ಲಿ ತರಲು ಆಸೆಪಟ್ಟಿದ್ದ ನಿರಂಜನ

dengue fever hassan girl death
ಕ್ರೈಂ1 hour ago

Dengue fever: ಮಾರಕ ಡೆಂಗ್ಯು ಜ್ವರಕ್ಕೆ ಬಾಲಕಿ ಬಲಿ

ITR Filing
ಮನಿ-ಗೈಡ್2 hours ago

ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!

karnataka weather Forecast
ಮಳೆ2 hours ago

Karnataka Weather : ರಾಜ್ಯದ ಇಲ್ಲೆಲ್ಲ ವಿಪರೀತ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ15 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌