ರಾಜ ಮಾರ್ಗ ಅಂಕಣ: ಆಧುನಿಕ ಅಂಗನವಾಡಿಗಳ ನಿರ್ಮಾಪಕ ಆದಿತ್ಯರಂಜನ್ IAS Vistara News
Connect with us

ಅಂಕಣ

ರಾಜ ಮಾರ್ಗ ಅಂಕಣ: ಆಧುನಿಕ ಅಂಗನವಾಡಿಗಳ ನಿರ್ಮಾಪಕ ಆದಿತ್ಯರಂಜನ್ IAS

Raja Marga column: ಭರತ ವಾಕ್ಯ- ಒಬ್ಬ ಸೇವಾಕಾಂಕ್ಷಿ IAS ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲ ಪರಿವರ್ತನೆಗಳನ್ನು ಮಾಡಲು ಸಾಧ್ಯ ಎನ್ನುವುದಕ್ಕೆ ಆದಿತ್ಯ ರಂಜನ್ ಒಂದು ಮೇರು ಉದಾಹರಣೆ ಆಗಿದ್ದಾರೆ.

VISTARANEWS.COM


on

aditya ranjan ias
Koo
RAJAMARGA

ಕೇವಲ ಸಂಕಲ್ಪ ಶಕ್ತಿ ಮತ್ತು ಸಮಾಜ ಸೇವೆಯ ಕಾಳಜಿಯಿಂದ IAS ಪರೀಕ್ಷೆ ಬರೆದು ಜಿಲ್ಲಾಧಿಕಾರಿ ಆದ ಒಬ್ಬ ಉತ್ಸಾಹಿ ಯುವಕ ಇಂದು ಜಾರ್ಖಂಡ್ ರಾಜ್ಯದ ಒಂದು ಜಿಲ್ಲೆಯ ಚಿತ್ರಣವನ್ನೇ ಬದಲಾವಣೆ ಮಾಡಿರುವುದು ಬಹಳ ದೊಡ್ಡ ಸುದ್ದಿ! ಅದೂ ಕೂಡ ಶೈಕ್ಷಣಿಕ ಕ್ರಾಂತಿಯ ಮೂಲಕ ಅನ್ನುವಾಗ ಇನ್ನೂ ಹೆಚ್ಚು ರೋಮಾಂಚನ ಆಗುತ್ತದೆ. ಅದಕ್ಕೆ ಕಾರಣರಾದವರು ಆದಿತ್ಯ ರಂಜನ್.

ಸರಕಾರಿ ಶಾಲೆಗಳಲ್ಲಿ ಓದಿ ಐಎಎಸ್ ಬರೆದರು

ಅವರು ಮೂಲತಃ ಕೈಗಾರಿಕಾ ನಗರವಾದ ಬೋಕಾರೋದ ಒಂದು ಮಧ್ಯಮವರ್ಗದ ಕುಟುಂಬದಿಂದ ಬಂದವರು. ಸರಕಾರಿ ಶಾಲೆಗಳಲ್ಲಿ ಓದಿದರು. ಮುಂದೆ ಬಿ. ಟೆಕ್ ಪದವಿಯನ್ನು ಪಡೆದು ಶ್ರೀಮಂತವಾದ ಬಹುರಾಷ್ಟ್ರೀಯ ಕಂಪೆನಿಯಾದ ORACLE ಇದರ ಬೆಂಗಳೂರು ಕಚೇರಿಯಲ್ಲಿ ಉದ್ಯೋಗವನ್ನು ಮಾಡಿದರು. ಲಕ್ಷ ಲಕ್ಷ ಸಂಬಳ ಬರುವ ಉದ್ಯೋಗ, ಅದನ್ನು ಹಿಂಬಾಲಿಸಿಕೊಂಡು ಬರುವ ಆಧುನಿಕ ಲೈಫ್ ಸ್ಟೈಲ್ ಎಲ್ಲಾ ಇದ್ದರೂ ಒಂದೂವರೆ ವರ್ಷದಲ್ಲಿ ಅವರು ರಾಜೀನಾಮೆ ಕೊಟ್ಟು ಹೊರಬಂದರು. ಕಾರಣ ಬಾಲ್ಯದಿಂದ ಅವರಿಗಿದ್ದ ಸಮಾಜಸೇವೆಯ ತೀವ್ರವಾದ ತುಡಿತ.

ಮುಂದೆ UPSC ಪರೀಕ್ಷೆಯನ್ನು ಬರೆದು(2015) ಅವರು ಐಎಎಸ್ ಶ್ರೇಣಿಯಲ್ಲಿ ತೇರ್ಗಡೆಯಾದರು. ರಾಷ್ಟ್ರಮಟ್ಟದ 99ನೆಯ ರಾಂಕ್ ಅವರಿಗೆ ದೊರಕಿತು. ಪ್ರೊಬೇಷನರಿ ಅವಧಿ ಮುಗಿದ ನಂತರ ಅವರು ಸೇವೆಗೆ ಸೇರಿದ್ದು ಜಾರ್ಖಂಡ್ ರಾಜ್ಯದ ಸಿಂಗಭುಂ ಜಿಲ್ಲೆಯಲ್ಲಿ.

ಸರಕಾರಿ ಶಾಲೆಗಳಲ್ಲಿ ಅಡ್ಮಿಷನ್ ಹೆಚ್ಚಿಸಲು ಅವರು ಮಾಡಿದ ಯೋಜನೆ

ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದ ಜಿಲ್ಲೆ ಅದು. ಸಾಕ್ಷರತೆಯ ಪ್ರಮಾಣವು ಕೇವಲ 67% ಇತ್ತು. ಅಷ್ಟೊಂದು ಬಡತನ ಇದ್ದರೂ ಜನ ಸಾವಿರ ಸಾವಿರ ಡೊನೇಶನ್ ಸುರಿದು ಖಾಸಗಿ ಶಾಲೆಗಳ ಹಿಂದೆ ಓಡುತ್ತಿದ್ದರು. ಸರಕಾರಿ ಶಾಲೆಯಲ್ಲಿ ಮಕ್ಕಳ ತೀವ್ರವಾದ ಕೊರತೆ ಇತ್ತು. ಸಮಸ್ಯೆಯನ್ನು ಆಳವಾಗಿ ಜಿಲ್ಲಾಧಿಕಾರಿಯವರು ಅಧ್ಯಯನ ಮಾಡಿದರು.

ಆಗ ಅವರ ಗಮನಕ್ಕೆ ಬಂದ ವಾಸ್ತವ ಏನೆಂದರೆ ಸರಕಾರಿ ಅಂಗನವಾಡಿಗಳ ಸ್ಥಿತಿಯು ತುಂಬಾ ಕೆಟ್ಟು ಹೋಗಿತ್ತು. ಖಾಸಗಿ ಶಾಲೆಗಳು LKG/UKG ಎಂದು ವೈಭವೀಕರಣ ಮಾಡಿ ಪೋಷಕರನ್ನು ಆಕರ್ಷಣೆ ಮಾಡುತ್ತಿದ್ದರು. ಸರಕಾರಿ ಅಂಗನವಾಡಿಗೆ ಬಂದ ಮಕ್ಕಳು ಬೆಳಿಗ್ಗೆ ಇಲಾಖೆ ನೀಡಿದ ಕಿಚಡಿ ತಿಂದು ಮನೆಗೆ ಓಡಿ ಹೋಗುತ್ತಿದ್ದರು! ಅಂಗನವಾಡಿ ಸಹಾಯಕಿಯರು ಪಾಠವನ್ನೇ ಮಾಡುತ್ತಿರಲಿಲ್ಲ!

ಅಂಗನವಾಡಿಗಳ ಉನ್ನತೀಕರಣಕ್ಕೆ ಗಟ್ಟಿ ಸಂಕಲ್ಪ!

ಆಗ ಜಿಲ್ಲಾಧಿಕಾರಿ ಆದಿತ್ಯ ರಂಜನ್ ಅವರು ಒಬ್ಬ ಅಂಗನವಾಡಿಯ ಶಿಕ್ಷಕಿಯನ್ನು ಭೇಟಿ ಮಾಡಿದರು.ಆಕೆ ವಿಧವೆ. ಆದರೂ ತಿಂಗಳಿಗೆ 4,500 ರೂಪಾಯಿ ತನ್ನ ಕಿಸೆಯಿಂದ ಖರ್ಚು ಮಾಡಿ ಒಂದು ಮಾದರಿ ಅಂಗನವಾಡಿಯನ್ನು ನಡೆಸುತ್ತಿದ್ದರು. ಅದನ್ನು ನೋಡಿದ ಜಿಲ್ಲಾಧಿಕಾರಿಯವರ ಕಣ್ಣು ತೆರೆಯಿತು. ಅದನ್ನು ಅವರು ಒಂದು ಸವಾಲಾಗಿ ಸ್ವೀಕರಿಸಿದರು.

ಅವರ ಜಿಲ್ಲೆಯಲ್ಲಿ 2330ರಷ್ಟು ಅಂಗನವಾಡಿಗಳು ಇದ್ದವು. ಅದರಲ್ಲಿ 1000 ಅಂಗನವಾಡಿ ಆಯ್ದುಕೊಂಡು ನೀಲನಕ್ಷೆಯನ್ನು ಸಿದ್ಧಪಡಿಸಿದರು. BALA ( Buiding As Learning Aid) ಎಂಬ ಹೆಸರಿನ ಯೋಜನೆಯು ಜಾರಿಯಾಯಿತು. ಅವರು ಮಾಡಿದ ಸಣ್ಣ ಸಣ್ಣ ಕೆಲಸಗಳು ಆ ಜಿಲ್ಲೆಯ ಎಲ್ಲಾ ಅಂಗನವಾಡಿಗಳನ್ನು ಶ್ರೀಮಂತಗೊಳಿಸಿದವು.


ಐಎಎಸ್ ಆದಿತ್ಯ ರಂಜನ್ ಚಿತ್ರಣವನ್ನು ಬದಲಾಯಿಸಿದರು!

1) ಅಂಗನವಾಡಿಗಳ ಗೋಡೆಯನ್ನು ಬಣ್ಣ ಬಣ್ಣದ ಚಿತ್ರಗಳಿಂದ ಸಿಂಗಾರ ಮಾಡಿದರು. ಆಕರ್ಷಕವಾಗಿ ಅಕ್ಷರ ಮತ್ತು ಸಂಖ್ಯೆಗಳಿಂದ ತುಂಬಿಸಿದರು. ಪ್ರಾಣಿ ಪಕ್ಷಿಗಳ ಚಿತ್ರಗಳೂ ಮೂಡಿದವು.

2) ಅಂಗನವಾಡಿಗಳ ಕಲಿಕೆಗೆ ಸಿಲೆಬಸ್ ರಚಿಸಿದರು. ಆಕರ್ಷಕ ಪಠ್ಯಪುಸ್ತಕವು ಬಂದಿತು. ದೃಶ್ಯ ಮಾಧ್ಯಮಗಳ ಬಳಕೆ ಆಯಿತು. ಮಕ್ಕಳಿಗೆ ಇಷ್ಟ ಆಗುವ ಆಟಗಳ ಮೂಲಕ ಪಾಠ ಕಲಿಸುವ ವಿಧಾನವು ಜಾರಿಗೆ ಬಂದಿತು.

3) ಅಂಗನವಾಡಿಗಳ ಶಿಕ್ಷಕರಿಗೆ ಸನಿವಾಸ ತರಬೇತಿಯ ಸರಣಿಗಳು ನಡೆದವು. ಸ್ವತಃ DC ಬಂದು ಪಾಠ ಮಾಡಿದರು. ಮಕ್ಕಳನ್ನು ಪ್ರೀತಿಸುವ, ಶಿಕ್ಷೆ ಇಲ್ಲದೇ ಪ್ರೀತಿಯಿಂದ ಮಕ್ಕಳಿಗೆ ಕಲಿಸುವ ವಾತಾವರಣವನ್ನು ಕಲ್ಪಿಸಲಾಯಿತು. ಇಂಗ್ಲಿಷ್ ಪ್ರಾಸ ಪದ್ಯಗಳು ( Rhymes) ಬಳಕೆಗೆ ಬಂದವು.

4) E-Sameeksha ಎಂಬ ಆಪ್ ಮೂಲಕ ಪ್ರತೀ ಅಂಗನವಾಡಿಯ ಪ್ರತಿದಿನದ ಪ್ರಗತಿಯನ್ನು ದಾಖಲಿಸುವ ಮತ್ತು ಡಿಸಿ ಮಾನಿಟರ್ ಮಾಡುವ ವ್ಯವಸ್ಥೆಯು ಜಾರಿಯಾಯಿತು.

5) ವಿವಿಧ ಸೇವಾಸಂಸ್ಥೆಗಳ ಸಹಯೋಗದೊಂದಿಗೆ ಅಂಗನವಾಡಿಯ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ಮತ್ತು ಆಟದ ಸಾಮಗ್ರಿ ದೊರೆಯಿತು. ಸಂಗೀತ – ನಾಟಕ ಇತ್ಯಾದಿ ಚಟುವಟಿಕೆಗಳು ಗರಿಗೆದರಿದವು.

ಇದನ್ನೂ ಓದಿ ರಾಜ ಮಾರ್ಗ ಅಂಕಣ: ಆತಂಕವಿಲ್ಲ, ಲಜ್ಜೆ ಇಲ್ಲ, ಭಾವನೆಗಳೇ ಇಲ್ಲ! ಗರ್ಭವನ್ನು ಕಿತ್ತು ಕಿತ್ತು ಎಸೆಯುತ್ತಿದ್ದಾರೆ ನವ ಯುವ ಜನತೆ!

ಜಿಲ್ಲೆಯ ಅಂಗನವಾಡಿಗಳು ಸಿಂಗಾರವಾದವು

ಇವೆಲ್ಲದರ ಪರಿಣಾಮವಾಗಿ ಕೇವಲ ಎರಡೇ ವರ್ಷಗಳಲ್ಲಿ ಸರಕಾರಿ ಅಂಗನವಾಡಿಗಳು ಪ್ಲೇ ಸ್ಕೂಲಿಗಿಂತ ಅದ್ಭುತ ಆದವು. ಖಾಲಿಯಾಗಿದ್ದ ಸರಕಾರಿ ಪ್ರಾಥಮಿಕ ಶಾಲೆಗಳು ತುಂಬಿದವು. ಅಂಗನವಾಡಿಗಳನ್ನು ಅವರು ಉನ್ನತೀಕರಣ ಮಾಡಿದ್ದರಿಂದ ಇಡೀ ಜಿಲ್ಲೆಯ ಶೈಕ್ಷಣಿಕ ಚಿತ್ರಣವೇ ಬದಲಾಯಿತು. ಇದಕ್ಕೆ ಕಾರಣರಾದ ವ್ಯಕ್ತಿ ನಮ್ಮ ಜಿಲ್ಲಾಧಿಕಾರಿ ಆದಿತ್ಯ ರಂಜನ್.

ಇನ್ನೆರಡು ಅಪೂರ್ವವಾದ ಯೋಜನೆಗಳು

ಇಂತಹ ನೂರಾರು ಪರಿಕ್ರಮಗಳನ್ನು ಅವರು ಮಾಡಿದ್ದಾರೆ. ಅವರ ಇನ್ನೆರಡು ಯೋಜನೆಗಳು ರಾಷ್ಟ್ರದ ಗಮನವನ್ನು ಸೆಳೆದಿವೆ. ಅವುಗಳ ಬಗ್ಗೆ ನಾನು ಹೇಳಲೇಬೇಕು.

೧) Wonder on Wheels (Wow) ಎಂಬ ಯೋಜನೆಯ ಅಡಿಯಲ್ಲಿ ಒಂದು ಸಂಚಾರಿ ವಾಹನವು ನಗರದಾದ್ಯಂತ ಸಂಚರಿಸಿ ದೃಶ್ಯ ಮಾಧ್ಯಮಗಳ ಮೂಲಕ ಸಣ್ಣ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ತುಂಬಾ ಪರಿಣಾಮವಾಗಿ ಮೂಡಿಸುತ್ತಿದೆ. ಆ ಹೆಸರೇ ( WOW) ಅದ್ಭುತವಾಗಿದೆ.

೨) ಅವರ ಜಿಲ್ಲೆಯು ಕೂಡ ಕೊರೋನಾ ಪೀಡಿತವಾದಾಗ ಜಿಲ್ಲಾಧಿಕಾರಿ ಸ್ವತಃ ಕೆಲಸ ಮಾಡಿ CO- BOT ಎಂಬ ಹೆಸರಿನ ರೋಬೋಟನ್ನು ತಯಾರಿ ಮಾಡಿದರು. ಅದು ರಿಮೋಟ ಮೂಲಕ ಕೆಲಸ ಮಾಡುತ್ತ ಆಸ್ಪತ್ರೆ ಇಡೀ ಓಡಾಡಿ ರೋಗಿಗಳಿಗೆ ಔಷಧಿ, ಆಹಾರ, ಸೇನಿಟೈಸರಗಳನ್ನು ಸರಿಯಾದ ಸಮಯಕ್ಕೆ ನೀಡುತ್ತಿತ್ತು. ಮಾತ್ರವಲ್ಲದೆ ಅವರನ್ನು ನಗಿಸಿ ಖುಷಿ ಪಡಿಸುವ ಕೆಲಸವನ್ನೂ ಮಾಡುತ್ತಿತ್ತು. ಇದು ಭಾರತದಲ್ಲೇ ಪ್ರಥಮವಾದ ಪ್ರಯೋಗವಾಗಿದೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Raja Marga Column : ನಮ್ಮದು ಯುವ ಭಾರತ; ಇಷ್ಟೊಂದು ಯುವ ಶಕ್ತಿ ಯಾವ ದೇಶದಲ್ಲೂ ಇಲ್ಲ!

Raja Marga Column: ನನ್ನ ‘ ಯುವ ಭಾರತ’ ಇಂದು ಪ್ರಕಾಶಿಸುತ್ತಿದೆ.
‘ವಿಶ್ವ ಗುರು’ ಆಗುವ ಹೊಸ್ತಿಲಲ್ಲಿ ನಿಂತಿದೆ. ಇದಕ್ಕೆ ಕಾರಣ ನಮ್ಮ ಯುವಜನತೆ. ಅತೀ ಹೆಚ್ಚು ಯುವಜನತೆಯನ್ನು ಹೊಂದಿರುವ ರಾಷ್ಟ್ರ ಇಂದು ಭಾರತ ಮತ್ತು ಭಾರತ ಮಾತ್ರ.

VISTARANEWS.COM


on

Edited by

Yuva Bharat : power of Young INDIA
Koo
RAJAMARGA Rajendra Bhat

ಇಡೀ ಜಗತ್ತು ಇವತ್ತು ಭಾರತದ ಕಡೆಗೆ ಮಾತ್ಸರ್ಯದಿಂದ ನೋಡಲು ತೊಡಗಿದೆ! ಅದಕ್ಕೆ ಕಾರಣ ನನ್ನ ಭಾರತ ಈಗ ‘ಯುವ ಭಾರತ’ (Young India) ಆಗಿ ಹೊಮ್ಮುತ್ತಿರುವುದೇ ಆಗಿದೆ. ಹೌದು, ನನ್ನ ಭಾರತ ಇಂದು ದೊಡ್ಡ ಮಟ್ಟದಲ್ಲಿ ಬದಲಾಗುತ್ತಿದೆ. ಈಗಿನ ಭಾರತದ ಜನಸಂಖ್ಯೆಯಲ್ಲಿ (Population of India) 35 ವರ್ಷದ ಒಳಗಿನ ಯುವಜನರ ಪ್ರಮಾಣ 66%! ಅದರಲ್ಲಿಯೂ 25 ವರ್ಷದ ಒಳಗಿನ ಯುವಜನರ ಸಂಖ್ಯೆ 50%! (Raja Marga Column)

ಈ ಅನುಪಾತವು ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಇಲ್ಲ. ಆದ್ದರಿಂದ ನನ್ನ ಭಾರತ ‘ಯುವ ಭಾರತ’ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಶೈಕ್ಷಣಿಕ ಮಟ್ಟ (Education level) ಕೂಡ ಏರಿಕೆ ಆಗಿದೆ. ಶಾಲಾ, ಪ್ರೌಢಶಾಲಾ ಹಂತಗಳಲ್ಲಿ ಮಕ್ಕಳ ಡ್ರಾಪ್ ಔಟ್ ಪ್ರಮಾಣವು (School Dropout) ತುಂಬಾ ಕಡಿಮೆ ಆಗಿದೆ. ಭಾರತದಲ್ಲಿ ಇಂದು 15 ಲಕ್ಷ ಶಾಲೆಗಳು, 95 ಲಕ್ಷ ಶಿಕ್ಷಕರು, 26.5 ಕೋಟಿ ವಿದ್ಯಾರ್ಥಿಗಳು ಇದ್ದಾರೆ! ಇದು ಕೂಡ ಜಾಗತಿಕ ದಾಖಲೆ.

ಅದರ ಪರಿಣಾಮವಾಗಿ ಭಾರತದ ‘ಮಾನವ ಸಂಪನ್ಮೂಲ ರೇಟಿಂಗ್’ (Human resource rating) ಏರಿಕೆ ಆಗಿದೆ ಎಂದು ಸಮೀಕ್ಷೆಗಳು ತೋರಿಸಿವೆ. ಆದ್ದರಿಂದ ನನ್ನ ಭಾರತ ಬದಲಾಗುತ್ತಿದೆ.

ನನ್ನ ಭಾರತ- ಕೌಶಲ ಭಾರತ (Skill India)

yuva Bharat

ನಮ್ಮ ಯುವಜನತೆಯು ‘ಸ್ಕಿಲ್ ಇಂಡಿಯಾ’ ವಿಭಾಗದಲ್ಲಿ ದಾಪುಗಾಲನ್ನು ಹಾಕಿ ಮುನ್ನಡೆಯುತ್ತಿದೆ. ಭಾರತದಲ್ಲಿ ಬೇಸಿಕ್ ಸೈನ್ಸ್ ಕಲಿಯುವ ವಿದ್ಯಾರ್ಥಿಗಳು ಇಂದು ಜಾಸ್ತಿ ಆಗುತ್ತಿದ್ದಾರೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಇಂದು ಭಾರತದ್ದೇ ಸಿಂಹಪಾಲು. ಒಂದು ಕಾಲದಲ್ಲಿ ತನ್ನ ಉಪಗ್ರಹಗಳನ್ನು ಹಾರಿಸಲು ರಷ್ಯಾ ಅಥವಾ ಅಮೆರಿಕಾದ ಮುಂದೆ ಕೈಕಟ್ಟಿಕೊಂಡು ನಿಲ್ಲುತ್ತಿದ್ದ ಭಾರತ ಇಂದು ನೂರಾರು ವಿದೇಶದ ಉಪಗ್ರಹಗಳನ್ನು ಹಾರಿಸುವ ಮಟ್ಟಕ್ಕೆ ಏರಿದ್ದು ಸಣ್ಣ ಸಾಧನೆ ಅಲ್ಲ. ಮಂಗಳ ಯಾನ, ಚಂದ್ರ ಯಾನ, ಸೌರ ಯಾನ, ಕ್ಷಿಪಣಿ ತಂತ್ರಜ್ಞಾನ…..ಈ ಯಾವ ವಿಭಾಗ ಆರಿಸಿದರೂ ಭಾರತ ಇಂದು ಕ್ರಾಂತಿಕಾರಕ ಸಾಧನೆ ಮಾಡುತ್ತಿದೆ. ಇಂದು ಭಾರತದ ಗುರಿಯು
‘Developing India’ ಅಲ್ಲವೇ ಅಲ್ಲ. ಅದು ‘Developed India ‘ ಅನ್ನೋದು ಜಗತ್ತಿಗೆ ಅರ್ಥ ಆಗಿದೆ!

ನನ್ನ ಭಾರತ ಇಂದು ‘ಉದ್ಯೋಗ ಭಾರತ’

Yuva Bharat : power of Young INDIA

ಒಂದು ಕಾಲದಲ್ಲಿ ಅಮೆರಿಕಾದ ಮಗು ಅಳುತ್ತಿದ್ದಾಗ ಅಲ್ಲಿಯ ಅಮ್ಮ ಹೇಳುತ್ತಿದ್ದರು – ಅಳಬೇಡ, ಭಾರತದ ಹಸಿದ ಮಗು ಬರ್ತಾ ಇದೆ, ನಿನ್ನ ತುತ್ತು ಕಸಿದು ಕೊಳ್ಳುತ್ತಿದೆ ಎಂದು! ಇಂದು ಅದೇ ಅಮ್ಮ ಹೇಳುತ್ತಿದ್ದಾರೆ – ಚೆನ್ನಾಗಿ ಓದು ಮಗನೇ, ಭಾರತದ ಕಲಿತ ಮಗು ಬರ್ತಾ ಇದೆ. ನಿನ್ನ ಉದ್ಯೋಗವನ್ನು ಕಿತ್ತುಕೊಳ್ಳುತ್ತಿದೆ ಎಂದು!

ಅಷ್ಟರಮಟ್ಟಿಗೆ ನನ್ನ ಭಾರತವು ಬದಲಾಗುತ್ತಿದೆ. ಭಾರತದಲ್ಲಿ ಈಗಾಗಲೇ ಡಿಜಿಟಲ್ ಕ್ರಾಂತಿ, ಸ್ಟಾರ್ಟಪ್ ಕ್ರಾಂತಿ ಮತ್ತು ನಾವೀನ್ಯತೆ ಕ್ರಾಂತಿಗಳು ಆಗ್ತಾ ಇವೆ. ಮುದ್ರಾ ಯೋಜನೆಯ ಮೂಲಕ ಯುವಜನತೆಗೆ 23,00,000 ಕೋಟಿ ನೆರವು ಈಗಾಗಲೇ ನೀಡಲಾಗಿದೆ. ಸ್ಟಾರ್ಟಪ್‌ಗಳ ಮೂಲಕ ಹತ್ತು ಲಕ್ಷ ಯುವ ಉದ್ಯಮಿಗಳು ಹೊಸದಾಗಿ ಹೊರಹೊಮ್ಮಿದ್ದಾರೆ. ಎಂಟರಿಂದ ಒಂಬತ್ತು ಕೋಟಿ ಯುವಕರು ಸ್ವಂತ ಉದ್ಯೋಗ ಈಗಾಗಲೇ ಪಡೆದುಕೊಂಡಿದ್ದಾರೆ. ಉದ್ಯೋಗ ಪರ್ವ ಮುಂದುವರೆಯುತ್ತಿದೆ. ನನ್ನ ಭಾರತ ಬಲಿಷ್ಠ ಆಗುತ್ತಿದೆ.

Young India Skill india Yuva Bharat

ಭಾರತಕ್ಕೆ ಎರಡು ಶಕ್ತಿಗಳು ಇವೆ

ಒಂದು ಜನಸಂಖ್ಯೆ. ಇನ್ನೊಂದು ಪ್ರಜಾಪ್ರಭುತ್ವ. ನಮ್ಮ ಯುವಜನತೆ ಸ್ವತಂತ್ರವಾಗಿ ಯೋಚನೆ ಮಾಡಲು ಕಲಿತಿದ್ದಾರೆ. ನವೀನತೆಯ ಕೋರ್ಸುಗಳ ಕಡೆಗೆ ಯುವಜನತೆ ಹೊರಳುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ಮೊದಲಾದ ಹೊಸ ತಂತ್ರಜ್ಞಾನ ಭಾರತಕ್ಕೆ ಬಂದು ಇಂದು ತುಂಬಾ ವರ್ಷಗಳು ಆಗಿವೆ. ಭಾರತದ ಯುವಜನತೆಯು ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತಾಡುತ್ತಿರುವುದು ಭಾರತಕ್ಕೆ ದೊಡ್ಡ ವರವೇ ಆಗಿದೆ. ಜನಸಂಖ್ಯೆಯ ಸ್ಫೋಟದ ಬಗ್ಗೆ ಇಂದು ಭಾರತದಲ್ಲಿ ಯಾರೂ ತಲೆ ಕೆಡಿಸಿಕಳ್ಳುವುದಿಲ್ಲ. ಅದರ ಬದಲಾಗಿ ಮಾನವ ಸಂಪನ್ಮೂಲದ ಅಭಿವೃದ್ಧಿಯ ಬಗ್ಗೆ ಭಾರತ ಇಂದು ಅಧಿಕಾರಯುತ ಆಗಿ ಮಾತಾಡುತ್ತಿದೆ. ಯುವಜನತೆ ಇಂದು ರಾಜಕೀಯದಲ್ಲಿ ಹೆಚ್ಚು ಸಹಭಾಗಿತ್ವ ಮಾಡಲು ತೊಡಗಿದ ನಂತರ ಕೇಂದ್ರ ಮತ್ತು ರಾಜ್ಯಗಳಲ್ಲಿ ಹೆಚ್ಚು ಸ್ಥಿರ ಸರಕಾರಗಳು ರಚನೆ ಆಗುತ್ತಿವೆ.

ಸಾಂಸ್ಕೃತಿಕ ಭಾರತ – ನಮ್ಮ ಹೆಮ್ಮೆ

yuva Bharat Rich in culture

ಇತ್ತೀಚೆಗೆ ಸ್ವಲ್ಪ ಕಣ್ಣು ತೆರೆದು ನಾವು ಯೋಚನೆ ಮಾಡಿದಾಗ ನಮ್ಮ ಗಮನಕ್ಕೆ ಬರುವುದು ಏನೆಂದರೆ ನಮ್ಮ ಯುವಜನತೆಯು ಇಂದು ನಿಧಾನವಾಗಿ ಭಾರತೀಯ ಸಂಸ್ಕೃತಿ, ಕಲೆ, ಸಂಗೀತ, ನೃತ್ಯ ಮತ್ತು ಸಂಪ್ರದಾಯಗಳ ಕಡೆಗೆ ಹೊರಳುತ್ತಿದೆ ಅನ್ನುವುದು. ಎಷ್ಟೋ ಜನ ಯುವಕ, ಯುವತಿಯರು ಐಟಿ ಕ್ಷೇತ್ರದ ಉದ್ಯೋಗವನ್ನು ತೊರೆದು ಕೃಷಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ನೃತ್ಯ, ಸಂಗೀತ ವಿಭಾಗಗಳಲ್ಲಿ ಮೊದಲಿಗಿಂತ ಈಗ ಹೆಚ್ಚು ಯುವಕ, ಯುವತಿಯರು ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಶಾಸ್ತ್ರೀಯ ವಿಭಾಗದ ವೇದಿಕೆಯ ಪ್ರದರ್ಶನಗಳಿಗೆ ಇಂದು ಯುವ ಪ್ರೇಕ್ಷಕರೂ ಹೆಚ್ಚುತ್ತಿದ್ದಾರೆ. ಎಲ್ಲ ಸಾಧನಾ ಕ್ಷೇತ್ರಗಳಲ್ಲಿ ಇಂದು ಯುವ ಸಾಧಕರ ಸಂಖ್ಯೆಯು ಹೆಚ್ಚುತ್ತಿದೆ. ಭಾರತೀಯ ಸೇನೆಗೆ ಹೆಚ್ಚು ಯುವ ಜನತೆ ಸ್ವಂತ ಇಚ್ಛೆಯಿಂದ ನೇಮಕ ಆಗುತ್ತಿದ್ದಾರೆ.

ನನ್ನ ಭಾರತ – ಯುವ ಸಾಧಕರ ಭಾರತ

yuva bharat

ಎಲ್ಲ ಸಾಧನಾ ಕ್ಷೇತ್ರಗಳಲ್ಲೂ ಇಂದು ಭಾರತದಲ್ಲಿ ಯುವ ಸಾಧಕರ ಸಂಖ್ಯೆಯು ಹೆಚ್ಚುತ್ತಿದೆ. ಯುವ ಬರಹಗಾರರು, ಕಥೆಗಾರರು, ಸಾಹಿತಿಗಳು, ಸಂಗೀತ ಕಲಾವಿದರು, ಕ್ರೀಡಾಪಟುಗಳು, ಬ್ಲಾಗರ್ ಗಳು, ಸಾಹಸಿಗರು, ನೃತ್ಯ ಪಟುಗಳು, ವಿಜ್ಞಾನಿಗಳು, ಯುವ ತಂತ್ರಜ್ಞರು, ಯುವ ಪತ್ರಕರ್ತರು…..ಇಂದು ಹೆಚ್ಚುತ್ತಿದ್ದಾರೆ. ನಮ್ಮ ಯುವಕರು ಇಂದು ಅವಕಾಶಗಳಿಗೆ ಕಾಯುವುದನ್ನು ಬಿಟ್ಟಿದ್ದಾರೆ ಮತ್ತು ಅವಕಾಶಗಳನ್ನು ಸೃಷ್ಟಿಸಲು ಕಲಿತಿದ್ದಾರೆ. ಮಂಗಳ ಯಾನ ಮತ್ತು ಚಂದ್ರಯಾನ ಟೀಂಗಳಲ್ಲಿ 75% ವಿಜ್ಞಾನಿಗಳು ಯುವಕ, ಯುವತಿಯರೇ ಇದ್ದರು ಎನ್ನುವಲ್ಲಿಗೆ ನನ್ನ ಯುವ ಭಾರತವು ‘ಸಾಧಕ ಭಾರತ’ ಆಗುತ್ತಿದೆ.

ಯುವ ಜನತೆಗೆ ಒಂದಿಷ್ಟು ಕಿವಿ ಮಾತುಗಳು

yuva Bharat

1. ವಿಭಿನ್ನವಾಗಿ ಯೋಚಿಸಿ.
2. ಧೈರ್ಯ ಮಾಡಿ ಮುನ್ನುಗ್ಗಿ.
3. ರಿಸ್ಕ್ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಬೇಡಿ.
4. ಆವಿಷ್ಕಾರಗಳನ್ನು ಮಾಡಿ.
5. ಹೊಸ ಐಡಿಯಾಗಳು ಕೋಟಿ ಕೋಟಿ ಬೆಲೆ ಬಾಳುತ್ತವೆ. ಅವುಗಳನ್ನು ಬರೆದಿಡಿ ಮತ್ತು ಅನುಷ್ಠಾನಕ್ಕೆ ತನ್ನಿ.
6. ನಿಮ್ಮ ಹಿಂದಿನ ಸಾಧನೆಗಳ ಜೊತೆ ಕಾಂಪೀಟ್ ಮಾಡಿ. ಬೇರೆ ಯಾರ ಜೊತೆಗೂ ನೀವು ಸ್ಪರ್ಧೆ ಮಾಡುವ ಅಗತ್ಯ ಇಲ್ಲ.
7. ಹೊಸ ಹಾದಿಯಲ್ಲಿ ಮುನ್ನಡೆಯಿರಿ.
8. ಅಸಾಧ್ಯವಾದ ಸಂಗತಿಗಳನ್ನು ಹುಡುಕಿ.
9. ಸಮಸ್ಯೆಗಳನ್ನು ಪರಿಹಾರ ಮಾಡಿ. ಸಮಸ್ಯೆಗಳನ್ನು ದೊಡ್ಡದು ಮಾಡಬೇಡಿ.
10. ನೀವು ಪಡೆದ ಯಶಸ್ಸನ್ನು ಸಂಭ್ರಮಿಸಿ ಮತ್ತು ಇನ್ನೊಬ್ಬರ ಜೊತೆ ಹಂಚಿಕೊಳ್ಳಿ.

ನಿಮಗೆ ಶುಭವಾಗಲಿ.

ಇದನ್ನೂ ಓದಿ: Raja Marga Column : ಗಾಂಧಿ ಕ್ಲಾಸ್‌ ಹೆಸರು ಬಂದಿದ್ದು ಹೇಗೆ?; ನೀವೆಂದೂ ಕೇಳಿರದ 25 ಸಂಗತಿಗಳು

Continue Reading

ಅಂಕಣ

Lal Bahadur Shastri Jayanti: ಲಾಲ್‌ ಬಹದ್ದೂರ್‌ ಶಾಸ್ತ್ರಿ ನೆನಪು; ಕಿರು ಮೂರ್ತಿಯ ಅಳಿಯದ ಕೀರ್ತಿ

ಮಾತು, ಮನಸ್ಸು ಹಾಗೂ ಕೆಲಸ ಮೂರನ್ನು ಶುದ್ಧವಾಗಿಟ್ಟುಕೊಂಡ ನಾಯಕನ ಕೇವಲ 17 ತಿಂಗಳು ಪ್ರಧಾನ ಮಂತ್ರಿ ಪಟ್ಟದಲ್ಲಿದ್ದರೂ ಯಾರಿಂದಲೂ ಮಾಡಲಾಗದ ಸಾಧನೆಗಳನ್ನು ಮಾಡಿ ಇತಿಹಾಸದ ಪುಟದಲ್ಲಿ ಅಚ್ಚಳಿಯದ ನೆನಪಾಗಿ ಕಾಡುವವರು ನಮ್ಮ ನೆಚ್ಚಿನ ಆದರ್ಶ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ lal bahadur shastri,

VISTARANEWS.COM


on

Edited by

lal bahaddur shastri
Koo
DC Ramachandra

:: ಡಾ. ಡಿ.ಸಿ. ರಾಮಚಂದ್ರ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥರಾದವರು ಹಲವರು. ಶಿವಾಜಿಯದು ಎತ್ತರದ ನಿಲುವಲ್ಲ, ಆದರೆ ತನ್ನ ಧೈರ್ಯ, ಸಾಹಸಗಳಿಂದ ಸಾಮ್ರಾಜ್ಯವನ್ನು ಕಟ್ಟಿ ಜನರ ಮನಸಿನಾಳದಲ್ಲಿ ನೆಲೆಯಾದವನು. ನೆಪೋಲಿಯನ್ ಕುಳ್ಳ ಜಗತ್ತನ್ನೇ ನಡುಗಿಸಿದವನು. ಲಾಲ್ ಬಹದ್ದೂರ್ ಶಾಸ್ತ್ರಿ (lal bahadur shastri) ಅವರು ಇವರೆಲ್ಲರಿಗಿಂತ ಎತ್ತರದವರೂ ಅಲ್ಲ. ಆದರೆ ಸಾಹಸ, ಸಹನೆ, ಚಾತುರ್ಯ, ಬುದ್ಧಿವಂತಿಕೆ ಹಾಗೂ ಕೌಶಲ್ಯಗಳಿಗೆ ಇವರಾರಿಗೂ ಕಮ್ಮಿಯಿಲ್ಲ. ಈ ಎಲ್ಲಾ ಗುಣಗಳು ಒಂದೆರಡು ದಿನಗಳಲ್ಲಿ ಬೆಳೆಸಿಕೊಂಡಂತಹ ಗುಣಗಳಲ್ಲ. ಅವರು ಬೆಳೆದು ಬಂದ ಪರಿಸರ ಹಾಗೂ ಪರಿಸ್ಥಿತಿಯ ಪರಿಣಾಮವಾಗಿ ಮೈಗೂಡಿಸಿಕೊಂಡ ಗುಣಗಳೇ ಕಾರಣ. ಅವರ ಜಯಂತಿಯ (lal bahadur shastri jayanti) ಹಿನ್ನೆಲೆಯಲ್ಲಿ ಒಂದು ನೆನಪು.

ಲಾಲ್ ಬಹದ್ದೂರ್‌ರವರಿಗಿನ್ನೂ ಒಂದು ವರ್ಷವಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಮುಂದೆ ಇವರ ಅಜ್ಜ ಜವಾಬ್ದಾರಿ ತೆಗೆದುಕೊಂಡರು. ಅಜ್ಜ ಇವರಿಗೆ 6ನೇ ತರಗತಿಯವರೆಗೆ ಅವರ ಊರಿನಲ್ಲಿ ವಿದ್ಯಾಭ್ಯಾಸ ಕೊಡಿಸಿದರು. ಆಮೇಲೆ ಕಾಶಿಯಲ್ಲಿ ಓದಲು ವ್ಯವಸ್ಥೆ ಮಾಡಿದರು. ಅವರಲ್ಲಿದ್ದ ಧೈರ್ಯ, ಆತ್ಮಾಭಿಮಾನ ಬಾಲ್ಯದಿಂದಲೇ ಬಂದ ಗುಣಗಳು. ಬಾಲ್ಯದ ಘಟನೆಗಳು ಮಕ್ಕಳ ಮನಸ್ಸಿನ ಮೇಲೆ ಯಾವಾಗಲೂ ಅಳಿಸಲಾಗದ ಪರಿಣಾಮವನ್ನುಂಟು ಮಾಡುತ್ತವೆ.

ಮಾವಿನಮರ ಕಲಿಸಿದ ಪಾಠ

ಲಾಲ್ ಬಹದ್ದೂರ್ ಜೀವನದ ಮೇಲೆ ಪ್ರಭಾವ ಬೀರಿದ ಒಂದು ಘಟನೆ ಹೀಗಿದೆ ನೋಡಿ. ಒಂದಷ್ಟು ಹುಡುಗರು ಹಣ್ಣಿನ ತೋಟಕ್ಕೆ ನುಗ್ಗಿದರು. ಅವರಲ್ಲಿ ಸಣ್ಣ ಹುಡುಗ ಲಾಲ್ ಬಹಾದ್ದೂರ್. ಉಳಿದವರೆಲ್ಲಾ ಮರ ಹತ್ತಿ ಹಣ್ಣುಗಳನ್ನು ಕೊಯ್ದು ಗಲಾಟೆ ಮಾಡುತ್ತಿದ್ದರೆ ಈ ಪುಟ್ಟ ಬಾಲಕ ಪಕ್ಕದಲ್ಲಿದ್ದ ಹೂವನ್ನು ಕೊಯ್ದು ಕೈಯಲ್ಲಿ ಹಿಡಿದುಕೊಂಡು ನೋಡುತ್ತಿದ್ದ. ಅದೇ ಹೊತ್ತಿಗೆ ತೋಟದ ಮಾಲಿ ಕೋಲು ಹಿಡಿದುಕೊಂಡು ಬಂದ. ಅವನನ್ನು ನೋಡಿ ದೊಡ್ಡ ಮಕ್ಕಳು ಓಡಿ ಹೋಗಿ ಪೆಟ್ಟಿನಿಂದ ತಪ್ಪಿಸಿಕೊಂಡರು. ಕೈಗೆ ಸಿಕ್ಕ ಹುಡುಗನಿಗೆ ಚೆನ್ನಾಗಿ ಬಾರಿಸಿದನು ಮಾಲಿ. ಹುಡುಗ ಅಳುತ್ತಾ ನಾನು ತಂದೆ ಇಲ್ಲದ ಹುಡುಗ ಹೊಡೆಯಬೇಡಿ ಎಂದು ಅಳಲಾಂಭಿಸಿದ, ಕರುಣೆಯಿಂದ ನೋಡುತ್ತಾ ಮಾಲಿ “ತಂದೆಯಿಲ್ಲದ ಹುಡುಗನಾದ್ದರಿಂದ ಒಳ್ಳೆಯ ಗುಣ, ನಡತೆ ಕಲಿಯಬೇಕಪ್ಪಾ” ಎಂದ ಮಾಲಿಯ ಮಾತು ಗಾಢವಾದ ಪರಿಣಾಮವನ್ನು ಬೀರಿತು. ಇನ್ನು ಮುಂದೆ ಯಾವತ್ತೂ ಕೆಟ್ಟ ಕೆಲಸ ಮಾಡಲಾರೆ, ತಪ್ಪು ಹೆಜ್ಜೆಯನ್ನು ಇಡಲಾರೆ ಎಂಬ ಧೃಡ ನಿರ್ಧಾರವನ್ನು ಆ ಸಂದರ್ಭದಲ್ಲಿಯೇ ತೆಗೆದುಕೊಂಡರು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: Gandhi Jayanthi: ಅಹಿಂಸೆಗೊಂದು ಅಸ್ಮಿತೆಯನ್ನು ಕೊಟ್ಟ ಸನಾತನಿ

ಈಜಿ ದಡ ದಾಟಿದ ನಾವಿಕ

ಮತ್ತೊಂದು ದಿನ ಶಾಲೆಯನ್ನು ಬಿಟ್ಟು ಸಂಜೆ ಮನೆಗೆ ಬರುವಾಗ ದೋಣಿಯಲ್ಲಿ ಹೋಗಲು ದುಡ್ಡಿಲ್ಲದೆ ಹೋದಾಗ, ಸಹಪಾಠಿಗಳು ಭಿಕ್ಷೆ ಬೇಡಿ ದುಡ್ಡು ಸಂಗ್ರಹಿಸಿ ದೋಣಿಯಲ್ಲಿ ದಡ ಮುಟ್ಟುತ್ತಾರೆ. ವಾಮನ ಮೂರ್ತಿ ಲಾಲ್‌ ಬಹದ್ದೂರ್ ಬೇರೆಯವರ ಬಳಿ ಹಣಕ್ಕಾಗಿ ಕೈ ಚಾಚದೆ, ಪುಸ್ತಕ ಚೀಲವನ್ನು ತಲೆಯ ಮೇಲಿಟ್ಟುಕೊಂಡು ನದಿಯನ್ನೇ ಈಜಿ ದಡಸೇರಿದ ಅವರ ಬಾಲ್ಯದ ನಿಷ್ಠೆ ಇಂದಿನ ಭ್ರಷ್ಠರಿಗೆ ಪಾಠವೇ ಸರಿ. ದೇಶದ ಏಳಿಗೆಗಾಗಿ ಒಬ್ಬ ವ್ಯಕ್ತಿ ಎಷ್ಟೆಲ್ಲಾ ತ್ಯಾಗ ಮಾಡಬಹುದೋ ಅದೆಲ್ಲವನ್ನೂ ಮಾಡಿದವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ಸ್ವಂತಕ್ಕಾಗಿ ಮನೆಯನ್ನೂ ಬಯಸದ ವ್ಯಕ್ತಿ. “ಗೃಹವಿಲ್ಲದ ಗೃಹಮಂತ್ರಿ” ಎಂದೇ ಖ್ಯಾತರಾದವರು. ತೀವ್ರ ಸ್ವರೂಪದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುತ್ತಿದ್ದ ಬಹದ್ದೂರ್ ಒಟ್ಟು ಏಳು ಬಾರಿ ಜೈಲು ಶಿಕ್ಷೆ ಅನುಭವಿಸಿದರು. ಮಗಳ ಅಸೌಖ್ಯ ಮಗನ ಕಾಯಿಲೆ ಯಾವುದಕ್ಕೂ ಜೈಲು ಶಿಕ್ಷೆಯಲ್ಲಿ ರಿಯಾಯಿತಿ ಇರಲಿಲ್ಲ. ಮಗಳಿಗೆ ಹುಷಾರಿಲ್ಲವೆಂದು ರಜೆ ಕೇಳಿ, ಅದು ಸಿಕ್ಕಿ ಮನೆಗೆ ಬಂದಾಗ ಮಗಳು ಇಹಲೋಕ ತ್ಯಜಿಸಿಯಾಗಿತ್ತು. ಇನ್ನು ಮಗನ ಆರೋಗ್ಯ ಸುಧಾರಣೆಯಾಗುವುದರೊಳಗೆ ಜೈಲಿಗೆ ಮತ್ತೆ ಹೋಗಬೇಕಾಯಿತು. ವೈಯಕ್ತಿಕ ವಿಷಯಗಳನ್ನೆಲ್ಲಾ ಬದಿಗಿಟ್ಟು ದೇಶವೇ ಮುಖ್ಯವಾಗಿತ್ತು ಲಾಲ್ ಬಹದ್ದೂರ್ ಅವರಿಗೆ. ದೇಶದ ನಾಯಕನಿಗೆ ಇರಲೇ ಬೇಕಾದ ಗುಣಗಳು ನಿಷ್ಠೆ ಮತ್ತು ದಕ್ಷತೆ. ಎಂತಹ ಕಠಿಣ ಸಮಯದಲ್ಲೂ ಕೂಡ ತಮ್ಮ ಗುರಿಯನ್ನು ಬಿಟ್ಟು ಕೊಡದ ನಿಶ್ಚಲತೆ ಲಾಲ್ ಬಹಾದ್ದೂರ್ ಅವರದ್ದು.

ರಾಜಕೀಯ ಜೀವನದಲ್ಲಿ ಮುಂದೆ ಮಂತ್ರಿಯಾದಾಗ, ಆಮೇಲೆ ಭಾರತದ ಪ್ರಧಾನ ಮಂತ್ರಿಯಾದಾಗಲೂ ವೈಭವದ ಜೀವನಕ್ಕೆ ಮನಸೋಲಲಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದಾಗ ವಾರದ ಒಂದು ಹೊತ್ತು ಉಪವಾಸ ಮಾಡುವ ನಿರ್ಧಾರ ಕೈಗೊಂಡರು, ಅಲ್ಲದೇ ದೇಶವಾಸಿಗಳಲ್ಲೂ ಮನವಿ ಮಾಡಿದರು. ಅದಕ್ಕೆ ದೇಶದ ಜನತೆ ಸ್ಪಂದಿಸಿದರು. ಪ್ರತಿ ಸೋಮವಾರದಂದು ಉಪವಾಸ ಮಾಡಲು ಇಡೀ ದೇಶವೇ ಕೈ ಜೋಡಿಸಿತು.

ಭಾರತ-ಪಾಕ್, ಭಾರತ- ಚೀನಾ ಯುದ್ಧಗಳ ನಿರ್ಣಾಯಕ ಸಂದರ್ಭದಲ್ಲಿ ಯಾವುದೇ ಅಂಜಿಕೆ ಅಳುಕಿಲ್ಲದೆ ಧೃಡ ನಿರ್ಧಾರ ತೆಗೆದುಕೊಂಡು ಸಫಲನಾದ ನಾಯಕ. ಯುದ್ಧದ ಸಂಧರ್ಭದಲ್ಲಿ ವಿಶ್ವಸಂಸ್ಥೆಯ ಕದತಟ್ಟದೆ, ಅಂತಾರಾಷ್ಟ್ರೀಯ ಬೆದರಿಕೆಗಳಿಗೆ ಬಗ್ಗದೆ ತಕ್ಷಣ ಸೈನ್ಯಗಳಿಗೆ ಮಾರ್ಗದರ್ಶನ ಮಾಡಿದವರು. “ಜೈ ಜವಾನ್ ಜೈ ಕಿಸಾನ್” ಎಂಬ ಧ್ಯೇಯ ವಾಕ್ಯದಂತೆ ನಡೆದವರು. ಮಾತು, ಮನಸ್ಸು ಹಾಗೂ ಕೆಲಸ ಮೂರನ್ನು ಶುದ್ಧವಾಗಿಟ್ಟುಕೊಂಡ ನಾಯಕನ ಕೇವಲ 17 ತಿಂಗಳು ಪ್ರಧಾನ ಮಂತ್ರಿ ಪಟ್ಟದಲ್ಲಿದ್ದರೂ ಯಾರಿಂದಲೂ ಮಾಡಲಾಗದ ಸಾಧನೆಗಳನ್ನು ಮಾಡಿ ಇತಿಹಾಸದ ಪುಟದಲ್ಲಿ ಅಚ್ಚಳಿಯದ ನೆನಪಾಗಿ ಕಾಡುವವರು ನಮ್ಮ ನೆಚ್ಚಿನ ಆದರ್ಶ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ, ಅವರಿಗೆ ಅವರ ಬಾಲ್ಯದ ಮಹತ್ವ ಘಟನೆಗಳೇ ಅವರನ್ನು ಇಂತಹದೊಂದು ಮಹಾನ್ ಕಾರ್ಯಮಾಡಲು ದಾರಿ ತೊರಿಸಿತೆಂದರೆ ತಪ್ಪಾಗದು.

ಇದನ್ನೂ ಓದಿ: ಸ್ಮರಣೆ: ಕಾರ್ಗಿಲ್‌ ಕದನ ಕಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಉಪ್ಪಿನ ಸತ್ಯಾಗ್ರಹದ ವೈಭವೀಕರಣವೇನೋ ಸರಿ, ಉಪ್ಪಿನ ಮೇಲಿನ ತೆರಿಗೆ ಕಡಿಮೆಯಾಯಿತೇ?

ಉಪ್ಪಿನ ಸತ್ಯಾಗ್ರಹದ ಪ್ರಮುಖ ಗುರಿ ಈಡೇರಿತೇ, ಎಂಬುದನ್ನು ನಾವು ತಿಳಿದುಕೊಳ್ಳಲು ಪ್ರಯತ್ನಪಡಲೇ ಇಲ್ಲ. ಇಷ್ಟೇ ಅಲ್ಲ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇಂತಹ ನೂರಾರು ಸತ್ಯಸಂಗತಿಗಳ ಬಗೆಗೆ ನಮ್ಮನ್ನು ಇನ್ನೂ ಅಂಧಕಾರವೇ ಕವಿದಿದೆ.

VISTARANEWS.COM


on

Edited by

dandi march
Koo

ಈ ಅಂಕಣವನ್ನು ಇಲ್ಲಿ ಕೇಳಿ:

ajjampura manjunath

ಅನೇಕ ದಶಕಗಳಿಂದ ಜನವರಿ 26ಕ್ಕೆ (Republic Day), ಆಗಸ್ಟ್ 15ಕ್ಕೆ (Independence Day), ಅಕ್ಟೋಬರ್ 2ಕ್ಕೆ (Gandhi Jayanthi), ಅಷ್ಟೇಕೆ, ಇನ್ನೂ ಹಲವಾರು ಪ್ರಮುಖ ರಾಷ್ಟ್ರೀಯ ದಿನಗಳಲ್ಲಿ ದೂರದರ್ಶನದ ವಾಹಿನಿಗಳಲ್ಲಿ ಒಂದನ್ನಂತೂ ನಾವು ತಪ್ಪದೇ ನೋಡುತ್ತೇವೆ. ಅದೆಂದರೆ, ಮಹಾತ್ಮಾ ಗಾಂಧೀ (Mahatma gandhi) ಹಾಗೂ ಸರೋಜಿನಿ ನಾಯಿಡು ಅವರು ಉಪ್ಪಿನ ಸತ್ಯಾಗ್ರಹಕ್ಕೆ (Salt satyagraha) ಜೊತೆಯಾಗಿ ಹೆಜ್ಜೆ ಹಾಕುತ್ತಿರುವ (Dandi March) ವೀಡಿಯೋ ತುಣುಕು. ಚಿತ್ರಮಂದಿರಗಳಲ್ಲಿ, ಕಿರುತೆರೆಯಲ್ಲಿ ನಾನೇ ಕಳೆದ ಅರ್ಧ ಶತಮಾನದಲ್ಲಿ ಕನಿಷ್ಠ ಒಂದು ಸಾವಿರ ಬಾರಿಯಾದರೂ ಇದನ್ನು ನೋಡಿರಬಹುದು. ಕೈಮುಗಿದು ಗಾಂಧೀಜಿಯವರನ್ನು ನೋಡುತ್ತಿದ್ದ ನಮಗೆಲ್ಲಾ (ನಿಮಗೂ ಸಹ) ಇದು ಚಿರಪರಿಚಿತ ದೃಶ್ಯಾವಳಿ.

In fact, ದೆಹಲಿಯ “ಗಾಂಧೀ ಮ್ಯೂಸಿಯಮ್”ನಲ್ಲಿರುವ ಅಪೂರ್ವ ಪೇಪರ್ ಕಟ್ಟಿಂಗ್ಸ್ ಮತ್ತು ಛಾಯಾಚಿತ್ರಗಳನ್ನು ಹಲವು ಹತ್ತು ಬಾರಿ ನೋಡಿದ್ದೇನೆ. 1980ರಲ್ಲಿ ನಾನು ದೆಹಲಿಯಲ್ಲಿದ್ದಾಗ ಈ ಮ್ಯೂಸಿಯಮ್ ಅಧ್ಯಯನ ಮಾಡುವುದರಲ್ಲಿ, ಪ್ರಮುಖ ಸಂಗತಿಗಳನ್ನು ಟಿಪ್ಪಣಿ ಮಾಡಿಕೊಳ್ಳುವುದರಲ್ಲಿ ಒಂದು ಇಡೀ ದಿನ ಮಗ್ನನಾಗಿದ್ದೆ. ಆದರೆ, ಅನಂತರದ ಸ್ವಾತಂತ್ರ್ಯ ಹೋರಾಟ ಕುರಿತ ವಿಮರ್ಶಾತ್ಮಕ ವಿಶ್ಲೇಷಣೆ ಮತ್ತು ಪರಾಮರ್ಶೆಗಳು ನೋವು ದುಃಖಗಳನ್ನೇ ತಂದವು. ಏಕೆಂದರೆ, ಈ ಮ್ಯೂಸಿಯಮ್ ನಲ್ಲಿರುವ ಬಹುಪಾಲು ಪೇಪರ್ ಕಟ್ಟಿಂಗ್ಸ್ “ಬಾಂಬೆ ಕ್ರಾನಿಕಲ್” ಎಂಬ ಪತ್ರಿಕೆಯಲ್ಲಿ ಪ್ರಕಟವಾದಂತಹವು. ಈ ಪತ್ರಿಕೆಯನ್ನು ಪ್ರಾರಂಭಿಸಿದವರು ಸರ್ ಫಿರೋಜ್ ಶಾ ಮೆಹ್ತಾ. ಮೆಹ್ತಾ ಅವರು ಬ್ರಿಟಿಷರ ಪರಮಾಪ್ತರು. ಬ್ರಿಟಿಷರೇ ಪ್ರಾರಂಭಿಸಿದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಸ್ಥಾಪಕ ಸದಸ್ಯರು ಮತ್ತು 1890ರಲ್ಲಿ ಕಾಂಗ್ರೆಸ್ ಅಧ್ಯಕ್ಷರೂ (ಕೋಲ್ಕತಾ ಅಧಿವೇಶನ) ಆಗಿದ್ದರು. ಅಂದಿನ ಕಾಲವೇ ಹಾಗಿತ್ತು. ಪತ್ರಿಕೆಗಳನ್ನು ಹುಟ್ಟು ಹಾಕುವುದಿರಲಿ, ಮೂವೀ ಕ್ಯಾಮೆರಾಗಳನ್ನು ಕೊಳ್ಳುವುದಿರಲಿ, ಸಾಧಾರಣವಾದ ಸ್ಟಿಲ್ ಕ್ಯಾಮೆರಾವನ್ನೂ ಸಾಮಾನ್ಯ ಜನರು ಯಾರೂ ಕೊಳ್ಳಲು ಸಾಧ್ಯವಿರಲಿಲ್ಲ. ಬ್ರಿಟಿಷ್ ಆಳ್ವಿಕೆಯ ಭಾರತವೆಂದರೆ ದೀನ ದರಿದ್ರರ, ತಿನ್ನಲು ಏನೂ ಇರದ ನತದೃಷ್ಟರ ದೇಶ. “ಬಾಂಬೆ ಕ್ರಾನಿಕಲ್” ಮತ್ತು ಇತರ ಅನೇಕ ಪತ್ರಿಕೆಗಳು ಬ್ರಿಟಿಷರ ಆಶ್ರಯದಲ್ಲಿದ್ದವು. ಪ್ರತ್ಯಕ್ಷವಾಗಿ ಮಾತ್ರವಲ್ಲ ಪರೋಕ್ಷವಾಗಿಯೂ ಅಲ್ಲಿ ಬ್ರಿಟಿಷರ ಪಾತ್ರವಿರುತ್ತಿತ್ತು, ಕಾರ್ಯತಂತ್ರವಿರುತ್ತಿತ್ತು, ಷಡ್ಯಂತ್ರವಿರುತ್ತಿತ್ತು, ಅಭಿಪ್ರಾಯಗಳಿರುತ್ತಿದ್ದವು.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 1915ರಲ್ಲಿ ಹಿಂದಿರುಗಿದರು. ಸುಮಾರು 32 ವರ್ಷಗಳ ಕಾಲ ಭಾರತದ ರಾಜಕಾರಣವನ್ನು, ಕಾಂಗ್ರೆಸ್ಸನ್ನು ನಿಯಂತ್ರಿಸಿದರು. ರಾಮಕೃಷ್ಣ ಪರಮಹಂಸರಂತೆ, ರಮಣ ಮಹರ್ಷಿಗಳಂತೆ, ಭಾರತೀಯ ಸಂತರಂತೆ ಅವರು ಸರಳ ಶ್ವೇತವಸ್ತ್ರಧಾರಿಯಾದರು. ಭಾರತೀಯರ ಕಣ್ಮಣಿಯಾದರು. ಅವರ ಮಾತಿಗೆ, ಅವರ ಒಂದು ಕರೆಗೆ ಓಗೊಟ್ಟು ಲಕ್ಷ ಲಕ್ಷ ಜನ ಸತ್ಯಾಗ್ರಹ ಮಾಡುತ್ತಿದ್ದರು, ಹೋರಾಟ ಮಾಡುತ್ತಿದ್ದರು, ಸೆರೆವಾಸಕ್ಕೆ ಅಣಿಯಾಗುತ್ತಿದ್ದರು. ಆ ಕಾಲಘಟ್ಟದಲ್ಲಿ ಬ್ರಿಟಿಷ್ ಪ್ರಣೀತ ಪತ್ರಿಕೆ ಮತ್ತು ರೇಡಿಯೋಗಳು ಜನರ ಮೇಲೆ ದಟ್ಟವಾದ ಪ್ರಭಾವ ಬೀರುತ್ತಿದ್ದವು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಭಾರತೀಯರ ಅಭಿಮತ, ಅಭಿಪ್ರಾಯ ಮತ್ತು ಮನೋಧರ್ಮಗಳನ್ನು ರೂಪಿಸುತ್ತಿದ್ದವು.

Mahatma gandhi satyagrah

1882ರ ಬ್ರಿಟಿಷರ ಕರಾಳ ಕಾಯಿದೆಯ ಅನುಸಾರವಾಗಿ, ಭಾರತೀಯರು ಉಪ್ಪನ್ನು ತಯಾರಿಸುವಂತೆಯೇ ಇರಲಿಲ್ಲ. ತೆರಿಗೆಯೂ ಅತ್ಯಧಿಕ. ಮಹಾತ್ಮಾ ಗಾಂಧೀ ಹಾಗೂ ಸರೋಜಿನಿ ನಾಯಿಡು ಅವರು ದಾಂಡೀ ಯಾತ್ರೆಯಲ್ಲಿ ಜೊತೆಯಾಗಿ ಪಾಲ್ಗೊಂಡು ಮಾಡಿದ ಉಪ್ಪಿನ ಸತ್ಯಾಗ್ರಹದ ವೀಡಿಯೋ ತುಣುಕುಗಳು ಸಹಜವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಇವರೆಲ್ಲರ ಪಾತ್ರ ಬಹಳ ದೊಡ್ಡದು ಎನ್ನುವ ತೀರ್ಮಾನಕ್ಕೆ ಭಾರತೀಯರು ಇಂದಿಗೂ ಬರುವಂತೆ ಮಾಡುತ್ತವೆ. ನಮಗೆಲ್ಲಾ 1965ರಲ್ಲಿ ಪ್ರೌಢಶಾಲೆಯಲ್ಲಿ ಸರೋಜಿನಿ ನಾಯಿಡು ಅವರ ಬಗೆಗಿನ “ಸರೋಜಿನಿ ದೇವಿ” ಎಂಬ ಪುಸ್ತಕವು ಉಪಪಠ್ಯವಾಗಿತ್ತು (Non-detailed Text). ನಾನು ಚೆನ್ನೈ ಮೂಲದ “ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ”ದ ಪರೀಕ್ಷೆಯೊಂದನ್ನೂ ಕಟ್ಟಿದ್ದೆ. ಅಲ್ಲಿಯೂ ಅದೇ ಹೆಸರಿನ ಹಿಂದೀ ಭಾಷೆಯ ಪಠ್ಯಪುಸ್ತಕವಿತ್ತು. ಇದರಿಂದ ನಾವೆಲ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಸರೋಜಿನಿ ನಾಯಿಡು ಅವರದ್ದು ಬಹಳ ಪ್ರಮುಖವಾದ ಪಾತ್ರ ಎಂದೇ ಪರಿಭಾವಿಸಿಬಿಟ್ಟಿದ್ದೆವು. ಆದರೆ, ಅನಂತರದ ವರ್ಷಗಳಲ್ಲಿ ಅವರದ್ದು ತೀರಾ ಅಲ್ಪಮಾತ್ರದ ಕೊಡುಗೆ ಎಂಬುದು ತಿಳಿದು ವಿಷಾದವೆನಿಸಿತು. ಹೈದರಾಬಾದ್ ನಿಜಾಮ ಮತ್ತು ಅವನ ರಜಾಕಾರರ ಪಡೆಯು, ನಮ್ಮ ಕಲ್ಯಾಣ ಕರ್ನಾಟಕದ ಅನೇಕ ಭಾಗಗಳೂ ಸೇರಿದಂತೆ ಅನೇಕ ಕಡೆ, ಹಿಂದೂಗಳ ನರಮೇಧ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಸುಲಿಗೆ, ಲೂಟಿಗಳಿಗೆ ಕಾರಣವಾಯಿತು. ಸರದಾರ್ ಪಟೇಲರ ಸೈನಿಕಕ್ರಮದಿಂದ ನಿಜಾಮನು ಶರಣಾಗುವವರೆಗೆ ಈ ಹತ್ಯಾಕಾಂಡ ನಡೆಯಿತು. ಈ ಕುರಿತ ವಿವರಗಳು ಬರೆಯಲಾಗದಷ್ಟು ಭಯಾನಕ. ಆದರೆ, ಸರೋಜಿನಿ ನಾಯಿಡು ಅವರು ನಿಜಾಮನ ಪರವಾಗಿದ್ದರು ಮತ್ತು ಅವನ ಸ್ತುತಿಯಲ್ಲಿ ತಮ್ಮ ಕವಿತಾ ರಚನಾ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು. ಇಂತಹ ವಿವರಗಳು ಮತ್ತು ಸಾಕ್ಷ್ಯಾಧಾರಗಳು ನಮ್ಮಂತಹವರ ನೋವಿಗೆ ಕಾರಣವಾಗುತ್ತವೆ.

ಉಪ್ಪಿನ ಸತ್ಯಾಗ್ರಹದ ಬಗೆಗೆ ನಮ್ಮ ಕಾಂಗ್ರೆಸ್ ಪ್ರಣೀತ ಇತಿಹಾಸದ ಪಠ್ಯಪುಸ್ತಕಗಳಲ್ಲಿ ನಾವೆಲ್ಲ ತುಂಬ ತುಂಬ ಓದಿದೆವು. ಸುಮಾರು ಅರುವತ್ತು ಸಾವಿರ ಜನ ಸತ್ಯಾಗ್ರಹಿಗಳು ಸೆರೆಮನೆ ಸೇರಬೇಕಾಯಿತು. ಕರ್ನಾಟಕದ ಪಾತ್ರವೂ ಈ ಸತ್ಯಾಗ್ರಹದಲ್ಲಿ ಬಹಳ ದೊಡ್ಡದು. ಕರ್ನಾಟಕದಲ್ಲಿ ಸದಾಶಿವರಾವ್‌, ಗಂಗಾಧರ ರಾವ್ ದೇಶಪಾಂಡೆ, ಆರ್‌.ಆರ್‌. ದಿವಾಕರ್‌, ಬಿ.ಎಸ್‌.ನಾಯಕ್‌, ಎನ್.ಎಸ್‌.ಹರ್ಡೀಕರ್‌, ಕಡಪ ರಾಘವೇಂದ್ರ ರಾವ್‌, ಹನುಮಂತರಾವ್‌ ಕೌಜಲಗಿ, ಎಂ.ಪಿ.ನಾಡಕರ್ಣಿ ಮೊದಲಾದವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯಿತು. ಅಂಕೋಲ, ಮಂಗಳೂರು, ಉಡುಪಿ, ಕುಂದಾಪುರ ಮತ್ತು ಬಸನಾಳ ಮುಂತಾದ 30 ಕೇಂದ್ರಗಳಲ್ಲಿ ಸತ್ಯಾಗ್ರಹ ನಡೆಯಿತು. 1931ರ ಮಾರ್ಚ್ ತಿಂಗಳಲ್ಲಿ ನಡೆದ ಗಾಂಧೀ – ಅರ್ವಿನ್ ಒಪ್ಪಂದದಂತೆ ಸತ್ಯಾಗ್ರಹಿಗಳ ಬಿಡುಗಡೆಯಾಯಿತು ಮತ್ತು ಸತ್ಯಾಗ್ರಹವನ್ನು ಹಿಂದೆಗೆದುಕೊಳ್ಳಲು ಗಾಂಧೀಜಿಯವರು ಒಪ್ಪಂದಕ್ಕೆ ಸಹಿ ಹಾಕಿದರು.

dandi march

ನಾವು ಭಾರತೀಯರು ತುಂಬಾ ತುಂಬಾ ಮುಗ್ಧರು, ಅಮಾಯಕರು. ಉಪ್ಪಿನ ಸತ್ಯಾಗ್ರಹದ ವೈಭವೀಕರಣವೇನೋ ಸರಿ, ಉಪ್ಪಿನ ಮೇಲಿನ ತೆರಿಗೆ ಕಡಿಮೆಯಾಯಿತೇ? ಎನ್ನುವುದನ್ನು ಕೇಳುವುದನ್ನೂ ಮರೆತೆವು, ತಿಳಿದುಕೊಳ್ಳಲೂ ಹೋಗಲಿಲ್ಲ. ನೋವಿನ ಸಂಗತಿಯೆಂದರೆ, 1947ರವರೆಗೆ ಉಪ್ಪಿನ ಮೇಲಿನ ತೆರಿಗೆಯು ಕಡಿಮೆಯಾಗಲೂ ಇಲ್ಲ. ಉಪ್ಪಿನ ಸತ್ಯಾಗ್ರಹದ ಪ್ರಮುಖ ಗುರಿ ಈಡೇರಿತೇ, ಎಂಬುದನ್ನು ನಾವು ಸಹ ತಿಳಿದುಕೊಳ್ಳಲು ಪ್ರಯತ್ನಪಡಲೇ ಇಲ್ಲ. ಇಷ್ಟೇ ಅಲ್ಲ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇಂತಹ ನೂರಾರು ಸತ್ಯಸಂಗತಿಗಳ ಬಗೆಗೆ ನಮ್ಮನ್ನು ಇನ್ನೂ ಅಂಧಕಾರವೇ ಕವಿದಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಬೌದ್ಧ ನಿರ್ಮಾಣಗಳನ್ನು ಹಿಂದೂಗಳು ನಾಶ ಮಾಡಿದರೇ?

ಅತ್ಯಂತ ಕ್ರೂರಿ, ಭಾರತ-ದ್ವೇಷಿ ಚರ್ಚಿಲ್ ಬ್ರಿಟಿಷ್ ಪ್ರಧಾನಮಂತ್ರಿಯಾಗಿದ್ದ. 1943ರಲ್ಲಿ ತನ್ನ ಸೈನಿಕರಿಗಾಗಿ ಇಡೀ ಬಂಗಾಳದ ದವಸ ಧಾನ್ಯಗಳನ್ನು ಒಂದು ಕಾಳೂ ಬಿಡದಂತೆ ಬಲವಂತವಾಗಿ ಲೂಟಿ ಮಾಡಿದ. ಬಿತ್ತನೆಯ ಬೀಜಗಳಿಗೂ ಧಾನ್ಯಗಳನ್ನು ಉಳಿಸಲಿಲ್ಲ. ಮೂವತ್ತು ಲಕ್ಷ ಜನ ಭಾರತೀಯರು ಹಸಿವಿನಿಂದಾಗಿ ಸತ್ತುಹೋದರು. ಕೋಲ್ಕತ್ತಾದ ಬೀದಿಬೀದಿಗಳಲ್ಲಿ ಹಸಿವಿನಿಂದ ಸತ್ತವರ ಹೆಣಗಳು ರಾಶಿ ರಾಶಿ ಬಿದ್ದಿದ್ದವು. ತಮ್ಮ ಉಪವಾಸವನ್ನು ಬ್ರಹ್ಮಾಸ್ತ್ರದಂತೆ ಬಳಸುತ್ತಿದ್ದ ಮಹಾತ್ಮಾ ಗಾಂಧೀಜಿಯವರು ಈ ಕುರಿತಂತೆ ಆಮರಣಾಂತ ಉಪವಾಸ ಸತ್ಯಾಗ್ರಹವನ್ನೇನೂ ಹಮ್ಮಿಕೊಳ್ಳಲಿಲ್ಲ. 1946ರಲ್ಲಿ ಕೋಲ್ಕತ್ತಾದಲ್ಲಿ ಜಿನ್ನಾ – ಸುಹ್ರವರ್ದಿ ಪ್ರಾಯೋಜಿಸಿದ ಹಿಂದೂ ಹತ್ಯಾಕಾಂಡ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಸುಲಿಗೆ, ಲೂಟಿ, ಬೆಂಕಿ ಹಚ್ಚುವುದು ಇತ್ಯಾದಿ ನಡೆಯಿತು. ಗಾಂಧೀಜಿಯವರು ಈ ಕುರಿತಂತೆಯೂ ಉಪವಾಸ ಸತ್ಯಾಗ್ರಹ ಮಾಡಲಿಲ್ಲ.

dandi march

ತಥಾಕಥಿತ ಸ್ವಾತಂತ್ರ್ಯ ಬಂದ ಮೇಲೆ, ಹೊಸ ಇಸ್ಲಾಮೀ ದೇಶ ಪಾಕಿಸ್ತಾನವು ತಕ್ಷಣವೇ ಕಾಶ್ಮೀರವನ್ನು ಕಬಳಿಸುವ ಕುತಂತ್ರವನ್ನು ಮಾಡಿತು. ಕಾಶ್ಮೀರದ ಮೇಲೆ ಸೈನಿಕ ಆಕ್ರಮಣವೇ ಪ್ರಾರಂಭವಾಗಿಬಿಟ್ಟಿತು. ಗಾಂಧೀಜಿಯವರ ಮಾನಸಪುತ್ರ, ರಾಜಕೀಯ ಉತ್ತರಾಧಿಕಾರಿ ಎನಿಸಿದ್ದ ಜವಾಹರ ಲಾಲ್ ನೆಹರೂ ಅವರೇ, ಸೂಕ್ತ ಕ್ರಮ ಕೈಗೊಂಡು ಪಾಕಿಸ್ತಾನಕ್ಕೆ ಕೊಡಬೇಕಿದ್ದ ೫೫ ಕೋಟಿ ರೂಪಾಯಿಗಳನ್ನು ತಡೆಹಿಡಿದರು. ಏಕೆಂದರೆ, ಆ ಹಣದಿಂದ ಪಾಕಿಸ್ತಾನವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತದೆ, ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ, ಜನವರಿ 1948ರಲ್ಲಿ, ಗಾಂಧೀಜಿಯವರು ಹಣ ಬಿಡುಗಡೆಗೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡರು. ಆಗ ಅನಿರ್ವಾಹವಾಗಿ ನೆಹರೂ ಅವರು ಆ ಹಣವನ್ನು ಬಿಡುಗಡೆ ಮಾಡಲು ಒಪ್ಪಬೇಕಾಯಿತು. ಅಂದಿನ ಕೇಂದ್ರ ಸರ್ಕಾರದ ಮಂತ್ರಿಮಂಡಲದ ಸಭೆ ಎಲ್ಲಿ ನಡೆಯಿತು ಊಹಿಸುವಿರಾ? ಗಾಂಧೀಜಿಯವರು ಆಗ ವಾಸಿಸುತ್ತಿದ್ದ “ಬಿರ್ಲಾ ಭವನ”ದಲ್ಲಿಯೇ (ಈಗ ಅದೇ ಕಟ್ಟಡ “ಗಾಂಧೀ ಸ್ಮೃತಿ” ಎಂಬ ಹೆಸರಿನಲ್ಲಿ ಸ್ಮಾರಕವಾಗಿದೆ) ಸಭೆ ನಡೆಯಿತು ಮತ್ತು 1948ರ ಜನವರಿ 16ರ ಪ್ರಾರ್ಥನಾ ಸಭೆಯಲ್ಲಿ, ಪಾಕಿಸ್ತಾನಕ್ಕೆ ಹಣ ಬಿಡುಗಡೆ ಮಾಡಿದ ಈ ನಿರ್ಧಾರವನ್ನು ಗಾಂಧೀಜಿಯವರು ಮುಕ್ತಕಂಠದಿಂದ ಶ್ಲಾಘಿಸಿದರು.

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ನಿಜ-ಚಿತ್ರಗಳೇ ಹೀಗೆ. ವಿಷಾದ, ದುಃಖ, ನೋವುಗಳನ್ನೇ ತರುತ್ತವೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: Gandhi Jayanthi: ಅಹಿಂಸೆಗೊಂದು ಅಸ್ಮಿತೆಯನ್ನು ಕೊಟ್ಟ ಸನಾತನಿ

Continue Reading

ಅಂಕಣ

Raja Marga Column : ಗಾಂಧಿ ಕ್ಲಾಸ್‌ ಹೆಸರು ಬಂದಿದ್ದು ಹೇಗೆ?; ನೀವೆಂದೂ ಕೇಳಿರದ 25 ಸಂಗತಿಗಳು

Raja Marga Column : ಮಹಾತ್ಮಾ ಗಾಂಧಿ ಎಂಬ ಒಬ್ಬ ವ್ಯಕ್ತಿ ಆ ರೀತಿಯಾಗಿ ಇದ್ದರು ಎಂದು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಂತೆ ಅವರು ಬದುಕಿದರು. ಅವರ ಚಿಂತನೆ, ಅವರ ನಡೆ ನುಡಿ, ಇಡೀ ದೇಶ ಮಾತ್ರವಲ್ಲ, ಜಗತ್ತನ್ನು ಆವರಿಸಿಕೊಂಡ ರೀತಿ ಕಲ್ಪನಾತೀತ. ಅವರ 154ನೇ ಜನ್ಮದಿನದ ಸಂದರ್ಭದಲ್ಲಿ ಗಾಂಧೀಜಿ ಅವರ ಬದುಕಿನ ಕುತೂಹಲಕರ ಸಂಗತಿಗಳು ಇಲ್ಲಿವೆ.

VISTARANEWS.COM


on

Edited by

Mahatma gandhi biirthday
Koo
RAJAMARGA

ಇಂದು ಗಾಂಧಿ ಜಯಂತಿ. ಮಹಾತ್ಮಾ ಗಾಂಧಿ ಯವರ (Mahatma Gandhi) 154ನೆಯ ಹುಟ್ಟುಹಬ್ಬ. ಗುಜರಾತಿನ ಪೋರಬಂದರಿನಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ವ್ಯಕ್ತಿ ಇಡೀ ಜಗತ್ತನ್ನು ಪ್ರಭಾವಿಸಿದ್ದು ಸಾಮಾನ್ಯ ಸಂಗತಿ ಅಲ್ಲ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ (Fight for Indian Independence) 33 ಕೋಟಿ ಭಾರತೀಯರು ಗಾಂಧಿಯವರ ಮಾತುಗಳನ್ನು ಆಲಿಸುತ್ತಿದ್ದರು ಅಂದರೆ ಅದೂ ಆಶ್ಚರ್ಯವೇ. ಅದರ ಬೆಳಕಿನಲ್ಲಿ ಗಾಂಧಿಯವರ ಬದುಕಿನ ಕೆಲವು ರೋಚಕ ಸಂಗತಿಗಳು ಇಲ್ಲಿವೆ.

1. ಗಾಂಧೀಜಿ ಹುಟ್ಟು ಹಬ್ಬವನ್ನು ವಿಶ್ವ ಅಹಿಂಸಾ ದಿನವಾಗಿ (World Non violence day) ಜಗತ್ತು ಆಚರಿಸುತ್ತದೆ. 2007ರಿಂದ ವಿಶ್ವ ಸಂಸ್ಥೆಯು ಗಾಂಧಿಗೆ ಕೊಟ್ಟ ಗೌರವ ಇದು.

2. ಜಗತ್ತಿನ ಅತೀ ಹೆಚ್ಚು ದೇಶಗಳು ಗಾಂಧಿಯವರ ಫೋಟೊ ಇರುವ ಸ್ಟಾಂಪ್ ಬಿಡುಗಡೆ ಮಾಡಿವೆ. ಈ ದಾಖಲೆಯಲ್ಲಿ ಕೂಡ ಗಾಂಧಿ ಎಲ್ಲರಿಗಿಂತ ಮುಂದೆ ಇದ್ದಾರೆ.

3. ಗಾಂಧಿಯವರನ್ನು ಬ್ರಿಟಿಷರು ‘ಅರೆ ನಗ್ನ ಫಕೀರ’ ಎಂದು ಕರೆದರು. ಗಾಂಧಿಯವರ ಡ್ರೆಸ್ ಕೋಡ್ ಹಾಗೆಯೇ ಇತ್ತು. ಅದೇ ಡ್ರೆಸ್ಸಲ್ಲಿ ಗಾಂಧಿ ಇಂಗ್ಲೆಂಡಿಗೆ ದುಂಡು ಮೇಜಿನ ಪರಿಷತ್ತಿಗೆ ಹೋಗಿ ಬಂದರು.

Half Naked Fakeera Mahatma Gandhi

4. ಗಾಂಧಿ ಜೊತೆ ಒಂದೇ ಟೇಬಲ್ ಮೇಲೆ ಊಟ ಮಾಡಲು ಇಂಗ್ಲೆಂಡ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ (Winston Churchil) ಒಪ್ಪಲಿಲ್ಲ. ಗಾಂಧೀಜಿ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

5. ಅಹಿಂಸೆ ಮತ್ತು ಸತ್ಯಾಗ್ರಹ (Nonviolence and Satyagrah) ಎಂಬ ಎರಡು ಅಸ್ತ್ರಗಳನ್ನು ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿ ಬಳಸಿದರು. ಅದರಲ್ಲಿಯೂ ಸತ್ಯಾಗ್ರಹ ಎಂಬ ಹೋರಾಟವು ಜಗತ್ತಿನ ಹಲವು ಮಹಾ ನಾಯಕರ ಗಮನ ಸೆಳೆಯಿತು. ಮುಂದೆ ಹಲವು ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೆ ಸತ್ಯಾಗ್ರಹವು ಪ್ರೇರಣೆ ಕೊಟ್ಟಿತು.

6. ಮಾರ್ಟಿನ್ ಲೂಥರ್ ಕಿಂಗ್ ಅವರು ಗಾಂಧೀಜಿಯವರನ್ನು ತನ್ನ ಐಕಾನ್ ಆಗಿ ಆರಿಸಿಕೊಂಡಿದ್ದರು. ಅವರ ಕಚೇರಿಯಲ್ಲಿ ಅವರ ಎದುರಿನ ಗೋಡೆಯಲ್ಲಿ ಗಾಂಧಿಯ ಫೋಟೊ ಇತ್ತು.

Mahatma gandhi preaches

7. ಯಾವ ದಕ್ಷಿಣ ಆಫ್ರಿಕ ಗಾಂಧಿ ಅವರನ್ನು ಕರಿಯ (ಬ್ಲಾಕ್) ಎಂಬ ಕಾರಣಕ್ಕೆ ಟ್ರೈನಿಂದ ಹೊರಗೆ ದೂಡಿ ಅಪಮಾನ ಮಾಡಿತ್ತಾ, ಅದೇ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮುಂದೆ ಗಾಂಧಿ ಪ್ರೇರಣೆ ಕೊಟ್ಟರು.

8. ಗಾಂಧಿಯವರು ಮದ್ಯಪಾನ ನಿಷೇಧ ಮತ್ತು ಗೋಹತ್ಯೆ ನಿಷೇಧಗಳ ಪರವಾಗಿ ಬಲವಾಗಿ ನಿಂತಿದ್ದರು.

9. ಜಗತ್ತಿನ ಅತ್ಯಂತ ಜನಪ್ರಿಯ ಪತ್ರಿಕೆ ‘ಟೈಮ್ಸ್ ಮ್ಯಾಗಜೀನ್’ ಗಾಂಧಿಯವರನ್ನು ‘ವರ್ಷದ ವ್ಯಕ್ತಿ ಪ್ರಶಸ್ತಿ’ (Times man of the year) ಮೂಲಕ ಗೌರವಿಸಿತು. ಆ ಗೌರವ ಪಡೆದ ಮೊದಲ ಮತ್ತು ಏಕೈಕ ಭಾರತೀಯ ಅಂದರೆ ಅದು ಗಾಂಧಿ.

Mahatma Gandhi TIMES cover in 1930

10. ವಿದೇಶಗಳಲ್ಲಿ ಗಾಂಧಿ ಹೆಸರಿನ 48 ರಸ್ತೆಗಳು ಇವೆ. ಭಾರತದಲ್ಲಿ 53 ದೊಡ್ಡ ರಸ್ತೆಗಳು ಗಾಂಧಿ ಅವರ ಹೆಸರು ಪಡೆದಿವೆ. ಇನ್ನು ಗಾಂಧಿ ಭವನ್, ಗಾಂಧಿ ಪ್ರತಿಮೆ, ಗಾಂಧಿ ಮೈದಾನ, ಗಾಂಧಿ ಚೌಕ….ಇವುಗಳನ್ನು ಲೆಕ್ಕ ಮಾಡಲು ಸಾಧ್ಯವೇ ಇಲ್ಲ!

11. ಗಾಂಧಿಯವರ ಹೆಸರು ನೊಬೆಲ್ ಶಾಂತಿ ಪುರಸ್ಕಾರಕ್ಕೆ (Nobel Peace Award) ಐದು ಬಾರಿ ಶಿಫಾರಸು ಆಗಿತ್ತು. ಆದರೆ ಅದರದ್ದೇ ಒಂದು ಕಾರಣಕ್ಕೆ ಅದು ನಿರಾಕರಣೆ ಆಯ್ತು.

12. ಜಾಗತಿಕ ಅತೀ ದೊಡ್ಡ ಫೌಂಡೇಶನ್ ಆದ ‘ಹೆನ್ರಿ ಫೋರ್ಡ್ ಫೌಂಡೇಶನ್’ ಗಾಂಧಿಯವರನ್ನು ತನ್ನ ಆದರ್ಶವಾಗಿ ತೆಗೆದುಕೊಂಡಿದೆ. ಆ ಫೌಂಡೇಶನ್ ಪ್ರಕಾರ ಗಾಂಧಿಯವರು ‘ಜಾಗತಿಕ ಐಕಾನ್’ (Universal Icon).

Mahatma gandhi with assistants

13. ಗಾಂಧಿಯವರನ್ನು ಮೊದಲ ಬಾರಿಗೆ ‘ಮಹಾತ್ಮ’ ಎಂದು ಕರೆದದ್ದು ರಾಷ್ಟ್ರಕವಿ ರವೀಂದ್ರನಾಥ್ ಠಾಗೋರ್ ಅವರು.

14. ಗಾಂಧಿಯವರ ಇಂಗ್ಲಿಷ್ ಭಾಷಣದಲ್ಲಿ ಐರಿಷ್ ಅಸೆಂಟ್ ಇತ್ತು. ಅದಕ್ಕೆ ಕಾರಣ ಅವರ ಮೊದಲ ಇಂಗ್ಲಿಷ್ ಟೀಚರ್ ಒಬ್ಬರು ಐರಿಷ್ ಆಗಿದ್ದರು.

15. ಗಾಂಧಿಯವರು ಒಳ್ಳೆಯ ಭಾಷಣಕಾರ ಆಗಿರಲಿಲ್ಲ. ಅವರ ಧ್ವನಿಯೂ ಕೀರಲು ಇತ್ತು. ಆದರೆ ಆ ಭಾಷಣವು ಹೆಚ್ಚು ಪ್ರಭಾವಶಾಲಿ ಆಗಿತ್ತು. ಗಾಂಧಿ ತಮ್ಮ ಭಾಷಣದಲ್ಲಿ ಏನಾದರೂ ಕರೆಕೊಟ್ಟರೆ ಸೇರುತ್ತಿದ್ದ ಸಾವಿರಾರು ಜನರು ಅದನ್ನು ಪ್ರಶ್ನಾತೀತವಾಗಿ ಪಾಲನೆ ಮಾಡುತ್ತಿದ್ದರು. ಗಾಂಧಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುತ್ತಾರೆ ಎಂದು ಆಗ ಬಹುಪಾಲು ಭಾರತೀಯರು ನಂಬಿದ್ದರು.

Mahatma gandhi satyagrah

16. ಮುಂದೆ ಬಾಂಗ್ಲಾ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೋಬೆಲ್ ಪ್ರಶಸ್ತಿ ಪಡೆದ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಆರಿಸಿಕೊಂಡದ್ದು ಅಹಿಂಸಾ ಮಾರ್ಗವನ್ನು. ಅದಕ್ಕೆ ಪ್ರೇರಣೆ ಗಾಂಧಿ.

17. ಗಾಂಧಿ ಕರ್ನಾಟಕವನ್ನು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ 18 ಬಾರಿ ಭೇಟಿ ಕೊಟ್ಟಿದ್ದರು. ಅದರಲ್ಲಿ ಉಡುಪಿಗೆ ಬಂದದ್ದು ಒಂದು ಬಾರಿ (ಫೆಬ್ರುವರಿ 25, 1934). ಆಗ ಕೃಷ್ಣ ಮಠದ ಬೀದಿಯಲ್ಲಿ ಗಾಂಧಿ ನಡೆದುಕೊಂಡು ಹೋದರೂ ಕೃಷ್ಣ ಮಠದ ಒಳಗೆ ಅವರು ಬರಲಿಲ್ಲ. ಅಜ್ಜರಕಾಡು ಮೈದಾನದಲ್ಲಿ ಗಾಂಧಿಯವರ ಭಾಷಣವನ್ನು 3000 ಮಂದಿ ಸೇರಿ ಕೇಳಿದ್ದರು. ಆ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದು ಕಾರ್ಪೋರೇಶನ್ ಬ್ಯಾಂಕ್ ಸ್ಥಾಪನೆ ಮಾಡಿದ್ದ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲ ಸಾಹೇಬರು. ಕಾಡಬೆಟ್ಟು ಎಂಬಲ್ಲಿ ಗಾಂಧೀಜಿ ಒಂದು ಖಾದಿ ಭಂಡಾರವನ್ನು ಉದ್ಘಾಟನೆ ಮಾಡಿದ್ದರು.

18. ಗಾಂಧಿ ಅದೇ ಅವಧಿಯಲ್ಲಿ ಮಂಗಳೂರಿಗೆ ಮೂರು ಬಾರಿ ಭೇಟಿ ನೀಡಿದ್ದರು. 1920, 1927, 1934 ಹೀಗೆ ಮೂರು ಭೇಟಿಗಳು. ಗಾಂಧಿಯವರ 1934ರ ಭೇಟಿಯಲ್ಲಿ 10,000 ಮಂದಿ ಸೇರಿದ್ದರು. ಆಗ ಅವರು ಕೆನರಾ ಶಾಲೆಯಲ್ಲಿ ಕೃಷ್ಣ ಮಂದಿರ ಉದ್ಘಾಟನೆ ಮಾಡಿದ್ದರು. ಅವರ ಮಂಗಳೂರು ಸಭೆಗಳನ್ನು ವ್ಯವಸ್ಥೆ ಮಾಡಿದ್ದು ಕಾರ್ನಾಡ್ ಸದಾಶಿವ ರಾಯರು ಮತ್ತು ಆಗಿನ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿದ್ದ ಎಂ.ಡಿ ಅಧಿಕಾರಿಯವರು. ಅವರು ನನ್ನ ಕಾರ್ಕಳ ತಾಲೂಕಿನವರು.

Mahatma gandhi dandi satyaghraha

19. ಗಾಂಧೀಜಿಯವರು ಸಾಮೂಹಿಕ ಪ್ರಾರ್ಥನೆಯನ್ನು ಮತ್ತು ಶ್ರೀ ರಾಮನ ಭಜನೆಗಳನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದರು ಮತ್ತು ಆಚರಣೆ ಮಾಡಿದರು. ‘ವೈಷ್ಣವ ಜನತೋ’ ಅವರು ಅತೀ ಹೆಚ್ಚು ಬಾರಿ ಆಲಿಸಿದ ಪದ್ಯ. ರಾಮರಾಜ್ಯದ ಸುಂದರ ಕಲ್ಪನೆಯ ಬಗ್ಗೆ ಅವರು ಹಲವಾರು ಲೇಖನಗಳನ್ನು ಬರೆದಿದ್ದಾರೆ.

20. ಗಾಂಧಿಯವರು ಎಡಗೈಯಿಂದ ಬರೆಯುತ್ತಿದ್ದರು. ಅವರ ಜೊತೆ ಯಾವಾಗಲೂ ಇರುತ್ತಿದ್ದದ್ದು ಒಂದು ಗಡಿಯಾರ.

Mahatma Gandhi

21. ತನಗೆ ಪತ್ರ ಬರೆಯುತ್ತಿದ್ದ ಪ್ರತಿಯೊಬ್ಬರಿಗೂ ಗಾಂಧೀಜಿ ಅವರು ತಮ್ಮ ಕೈ ಬರಹದಲ್ಲಿ ಉತ್ತರ ಬರೆಯುತ್ತಿದ್ದರು.

22. ಗಾಂಧಿ ತಮ್ಮ ಬದುಕಿನ ಉದ್ದಕ್ಕೂ ರೈಲಿನಲ್ಲಿ ದ್ವಿತೀಯ ದರ್ಜೆಯ ಡಬ್ಬಿಯಲ್ಲಿ ಪ್ರಯಾಣ ಮಾಡಿದ್ದರು. ಮುಂದೆ ಅದನ್ನು ಜನರು `ಗಾಂಧಿ ಕ್ಲಾಸ್’ ಎಂದು ಕರೆದರು.

ಇದನ್ನೂ ಓದಿ: Raja Marga Column : ಅಂದು ಜಿ.ಆರ್‌ ವಿಶ್ವನಾಥ್‌ ಅವರಿಂದಾಗಿ ಭಾರತ ಸೋತಿತ್ತು, ಆದರೆ ಕ್ರಿಕೆಟ್‌ ಗೆದ್ದಿತ್ತು!

23. ಗಾಂಧೀಯವರ ಹತ್ಯೆಯನ್ನು ನಾಥೂರಾಮ್ ಗೋಡ್ಸೆ ಮಾಡಿದಾಗ ಅವರ ಬಾಯಿಂದ ಬಂದ ಮೊದಲ ಶಬ್ದ ಹೇ ರಾಮ್. ಎರಡನೇ ಶಬ್ದ – ಉಸ್ಕೋ ಚೋಡ್ ದೋ!

Mahatma Gandhi memoir at Raj Ghat

24. ಗಾಂಧಿಯವರ ಅಂತಿಮ ಯಾತ್ರೆಯಲ್ಲಿ ಅಂದು ಭಾಗವಹಿಸಿದ ಜನರ ಸಂಖ್ಯೆಯೂ ಮಹಾ ದಾಖಲೆ. ಆಗ ಎಂಟು ಕಿಲೋಮೀಟರ್ ಉದ್ದವಾದ ಅಂತಿಮ ಯಾತ್ರೆಯು ಸಾಗಿ ಬಂದಿತ್ತು.

25. ಯಾವುದೇ ಸಾಮಾಜಿಕ ಜಾಲ ತಾಣ ಮತ್ತು ದೂರದರ್ಶನ ಇಲ್ಲದ ಕಾಲದಲ್ಲಿ ಕೂಡ ಒಬ್ಬ ವ್ಯಕ್ತಿ ಇಡೀ ಭಾರತವನ್ನು ತಲುಪಿದ್ದು ಮತ್ತು ಇಡೀ ವಿಶ್ವದ ಮೇಲೆ ಪ್ರಭಾವ ಬೀರಿದ್ದು ದೊಡ್ಡ ಸಾಧನೆಯೇ ಹೌದು. ಅದಕ್ಕಾಗಿ ಅವರು ಮಹಾತ್ಮ ಆದದ್ದು.

Continue Reading
Advertisement
Maharashtra News, another hospital witnessed for 10 patients death
ದೇಶ4 mins ago

Maharashtra News: ಮಹಾರಾಷ್ಟ್ರದ ಮತ್ತೊಂದು ಆಸ್ಪತ್ರೆಯಲ್ಲಿ 10 ರೋಗಿಗಳು ಮೃತ! ತನಿಖೆಗೆ ಮುಂದಾದ ಸರ್ಕಾರ

Arshad Nadeem
ಕ್ರೀಡೆ5 mins ago

Asian Games : ಪಾಕಿಸ್ತಾನದ ಸ್ಪರ್ಧಿ ನದೀಮ್ ಔಟ್​; ನೀರಜ್​ಗೆ ಪದಕ ಬಹುತೇಕ ಖಾತರಿ

rashmika
South Cinema23 mins ago

Rashmika Mandanna: ಮತ್ತೊಮ್ಮೆ ʼರಂಜಿತಮೆʼ, ʼಸಾಮಿʼ ಹಾಡಿಗೆ ಹೆಜ್ಜೆ ಹಾಕಿದ ರಶ್ಮಿಕಾ!

Annu Rani
ಕ್ರೀಡೆ30 mins ago

Asian Games : ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಅನ್ನುರಾಣಿ

Old Pension Scheme Madhu Bangarappa
ಕರ್ನಾಟಕ48 mins ago

Old Pension Scheme : ಸರ್ಕಾರಿ ನೌಕರರಿಗೆ Good News; ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಎಂದ ಮಧು ಬಂಗಾರಪ್ಪ

No Rain Girl waiting For rain and holding Umbrella
ಉಡುಪಿ1 hour ago

karnataka weather forecast : ಮುಕ್ಕಾಲು ರಾಜ್ಯಕ್ಕೆ ಕೈಕೊಟ್ಟ ಮಳೆರಾಯ; ಮತ್ತೆ ಮುಂಗಾರು ದುರ್ಬಲ

Paris facing bed bugs and France government is trying to tackle crisis
ಪ್ರಮುಖ ಸುದ್ದಿ1 hour ago

Bed Bugs: ಪ್ಯಾರಿಸ್‌ನಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ! ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಂಟ್ರಿ ಕೊಟ್ಟ ಫ್ರಾನ್ಸ್ ಸರ್ಕಾರ

Parul won gold medal in asian Games
ಕ್ರೀಡೆ1 hour ago

Asian Games : ಭಾರತಕ್ಕೆ ಮತ್ತೊಂದು ಚಿನ್ನದ ಪದಕ, 5000 ಮೀಟರ್​ ಓಟದಲ್ಲಿ ಮೊದಲ ಸ್ಥಾನ ಪಡೆದ ಪಾರುಲ್​

Siddaramaiah felicitated at Shepherds India International Conference
ಕರ್ನಾಟಕ2 hours ago

Kuruba Conference: ಬೆಳಗಾವಿಯಲ್ಲಿ ಬೃಹತ್‌ ಕುರುಬ ಸಮಾವೇಶದ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನ

Shivamogga encounter Fake News
ಕರ್ನಾಟಕ2 hours ago

Shivamogga Violence : ಎನ್‌ಕೌಂಟರ್‌ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್‌ ಎಂದ ಎಸ್ಪಿ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

The maintenance train finally lifted Metro services as usual
ಕರ್ನಾಟಕ4 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ5 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ15 hours ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ1 day ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ2 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಮನೆಯಲ್ಲೂ ಕಿರಿಕಿರಿ, ಆಫೀಸ್‌ನಲ್ಲೂ ಕಿರಿಕ್‌!

ಟ್ರೆಂಡಿಂಗ್‌