Raja Marga column: Abortion becoming a normal process as morality declining ರಾಜ ಮಾರ್ಗ ಅಂಕಣ: ಆತಂಕವಿಲ್ಲ, ಲಜ್ಜೆ ಇಲ್ಲ, ಭಾವನೆಗಳೇ ಇಲ್ಲ! ಗರ್ಭವನ್ನು ಕಿತ್ತು ಕಿತ್ತು ಎಸೆಯುತ್ತಿದ್ದಾರೆ ನವ ಯುವ ಜನತೆ! Vistara News
Connect with us

ಅಂಕಣ

ರಾಜ ಮಾರ್ಗ ಅಂಕಣ: ಆತಂಕವಿಲ್ಲ, ಲಜ್ಜೆ ಇಲ್ಲ, ಭಾವನೆಗಳೇ ಇಲ್ಲ! ಗರ್ಭವನ್ನು ಕಿತ್ತು ಕಿತ್ತು ಎಸೆಯುತ್ತಿದ್ದಾರೆ ನವ ಯುವ ಜನತೆ!

Raja Marga column: ಯಾವ ಭಾವನೆಗಳೂ ಇಲ್ಲ! ಅದು ನನ್ನ ಮಗು ಎಂದಾಗಲೀ, ನನ್ನರಕ್ತ ಮಾಂಸದ ಜೀವ ಎಂದಾಗಲೀ ಇಲ್ಲವೇ ಇಲ್ಲ. ಕ್ಷಣಿಕ ಸುಖದ ಫಲವಾದ ಭ್ರೂಣಗಳನ್ನು ಕಿತ್ತು ಎಸೆಯಲು ಯಾವ ಮುಲಾಜೂ ಇಲ್ಲ. ಇದು ಇವತ್ತಿನ ನಯಾ ದುನಿಯಾ!

VISTARANEWS.COM


on

Raja Marga column Abortion becoming a normal process as morality declining
Koo
RAJAMARGA

ಇತ್ತೀಚೆಗೆ ಇಂಟರ್ನೆಟ್ ಮೂಲಕ ಮಾನವ ಅಂಡಾಣುಗಳನ್ನು ಮಾರಾಟ ಮಾಡುವ ಸಂಗತಿಗಳು ಹೆಚ್ಚುತ್ತಿವೆ. ಅದರಲ್ಲಿಯೂ ಸೂಪರ್ ಮಾಡೆಲ್‌ಗಳ ಅಂಡಾಣುಗಳಿಗೆ ಭಾರಿ ಬೇಡಿಕೆ ಇದೆ. ಈಗಾಗಲೇ ರಕ್ತ ಬ್ಯಾಂಕುಗಳು ಇರುವ ಹಾಗೆ ಮಾನವರ ವೀರ್ಯ ಬ್ಯಾಂಕುಗಳು ಜನಪ್ರಿಯ ಆಗ್ತಾ ಇವೆ. ಮಕ್ಕಳಿಲ್ಲದ ದಂಪತಿಗಳಿಗೆ ಮಗುವನ್ನು ಪಡೆಯಲು ಇಂದು ಹತ್ತಾರು ಕಾನೂನುಬದ್ಧವಾದ ದಾರಿಗಳು ಇವೆ. ದುಃಖಪಡುತ್ತಾ ಮೂಲೆ ಸೇರುವ ಕಾಲವು ಇನ್ನಿಲ್ಲ ಎಂದೇ ಹೇಳಬಹುದು.

ತಮ್ಮ ವೀರ್ಯದಾನ ಮಾಡಿ ಸಾವಿರಾರು ಮಕ್ಕಳ ಜನನಕ್ಕೆ ಕಾರಣ ಆಗಲು ವೀರ್ಯವಂತ ಪುರುಷರು ತುದಿಗಾಲಲ್ಲಿ ನಿಂತಿದ್ದಾರೆ. ಹಾಗೆಯೇ ದುಡ್ಡಿದ್ದವರ ಮಗುವಿಗೆ ತಾಯಿ ಆಗಲು ತಮ್ಮ ಗರ್ಭಾಶಯವನ್ನು ತೆರೆದಿಟ್ಟು ಹಲವು ಬಾಡಿಗೆಯ ತಾಯಂದಿರು ಕೂಡ ಅಷ್ಟೇ ಉತ್ಸಾಹದಲ್ಲಿ ರೆಡಿ ಇದ್ದಾರೆ. ಅದೇ ರೀತಿಯಲ್ಲಿ ಇತ್ತೀಚೆಗೆ ಮಾನವ ಕ್ಲೋನಿಂಗ್ ಮೂಲಕ ತಮ್ಮದೇ ವಂಶವಾಹಿ ಇರುವ ಮಗುವನ್ನು ಪಡೆಯಲು ದಂಪತಿಗಳಿಗೆ ಸಾಧ್ಯ ಇರುವ ಸಂಶೋಧನೆಗಳು ಫಲಿತಾಂಶವನ್ನು ಕೊಡುತ್ತಿವೆ. ಇನ್ನು ಮುಂದೆ ಬಂಜೆತನ ಒಂದು ಶಾಪ ಎಂದು ಯಾವ ದಂಪತಿಗಳೂ ದುಃಖ ಪಡಬೇಕು ಅಂತ ಇಲ್ಲ! ಮಕ್ಕಳಿಲ್ಲ ಎಂಬ ಕಾರಣಕ್ಕೆ ಕೀಳರಿಮೆಗೆ, ಕೊರಗಿಗೆ ಹೋಗುವ ಅಗತ್ಯ ಕೂಡ ಇಲ್ಲ!

ಮಗು ಇಲ್ಲದ ದಂಪತಿಗಳ ದುಃಖ ಒಂದೆಡೆಯಾದರೆ..

ಆರೋಗ್ಯಪೂರ್ಣ ದಂಪತಿಗಳು ಮಗುವನ್ನು ಪಡೆಯಲು ವಿಫಲವಾದಾಗ ಪಡುವ ಅಪಮಾನ, ನೋವು ಅವರಿಗೆ ಮಾತ್ರ ಗೊತ್ತು. ಆ ಗಂಡನನ್ನು ನಪುಂಸಕ ಎಂದೂ, ಹೆಣ್ಣನ್ನು ಬಂಜೆ ಎಂದೂ ಸಮಾಜ ಇಂದಿಗೂ ಕರೆಯುತ್ತದೆ. ಹೆಣ್ಣಿನ ಮೇಲೆ ಬರುವ ಅಪವಾದಗಳು ಜಾಸ್ತಿ. ಈ ಅಪಮಾನಗಳಿಂದ ಹೊರಬರಲು ಅಡ್ಡದಾರಿ ಹುಡುಕುವ ದಂಪತಿಗಳ ಸಂಖ್ಯೆಯೂ ಸಾಕಷ್ಟು ಇದೆ! ಆದರೆ ಇಂದು ಅತ್ಯಂತ ವೇಗವಾಗಿ ಓಡುತ್ತಿರುವ ವೈದ್ಯಕೀಯ ವಿಜ್ಞಾನವು ಅದಕ್ಕೆಲ್ಲ ಪರಿಹಾರಗಳನ್ನು ಈಗಲೇ ಹುಡುಕಿ ಆಗಿದೆ. ಅವುಗಳಲ್ಲಿ 60% ಪರಿಹಾರಗಳಿಗೆ ನಮ್ಮ ದೇಶದ ಕಾನೂನು ಮಾನ್ಯತೆ ಕೊಟ್ಟಿದೆ. ದೇಶದ ಕಾನೂನುಬದ್ಧವಾದ ವಿಧಾನಗಳ ಮೂಲಕ ಈಗ ತಮ್ಮದೇ ಮಗುವನ್ನು ಪಡೆಯಲು ನೂರಾರು ಅವಕಾಶಗಳು ಇವೆ. ಅದಕ್ಕಾಗಿ ದಂಪತಿಗಳು ಲಕ್ಷ ಲಕ್ಷ ದುಡ್ಡು ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ತಮ್ಮದೇ ಮಗುವನ್ನು ಪಡೆಯುವ ಖುಷಿಯು ಲಕ್ಷ ಕೋಟಿ ದುಡ್ಡಿಗೂ ಮೀರಿದ್ದು ಎಂಬುದು ಅವರ ಭಾವನೆ. ಸ್ವಲ್ಪ ಬ್ರಾಡ್ ಆಗಿ ಯೋಚನೆ ಮಾಡುವವರು ಅನಾಥಾಶ್ರಮದ ಒಂದು ಮಗುವನ್ನು ಅಧಿಕೃತವಾಗಿ ದತ್ತು ತೆಗೆದುಕೊಂಡು ತಮ್ಮ ಮಗುವಿನ ಹಾಗೆ ಪ್ರೀತಿಯನ್ನು ಕೊಡುವವರೂ ಇದ್ದಾರೆ. ಅಂತವರನ್ನು ನಾವು ಹೆಚ್ಚು ಅಭಿನಂದಿಸೋಣ.

ಆ ಮಗು ಬೇಡ ಎಂದು ಕಿತ್ತು ಹಾಕುವವರು!

ಇದೇ ಸಮಸ್ಯೆಯ ಇನ್ನೊಂದು ಮುಖವನ್ನು ನನ್ನ ಆತ್ಮೀಯರಾದ ವೈದ್ಯರು ನನ್ನ ಜೊತೆ ಹೇಳುತ್ತಾ ಹೋದರು. ಅವರು ಮತ್ತು ಅವರ ಪತ್ನಿ ಒಂದು ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ವೃತ್ತಿ ಮಾಡುತ್ತಿದ್ದಾರೆ. ಅಲ್ಲಿ ವಾರಕ್ಕೆ ಕನಿಷ್ಠ 18-20 ಅಬಾರ್ಷನ್‌ಗಳು ನಡೆಯುತ್ತಿವೆ ಅನ್ನೋದನ್ನು ಅವರು ಹೇಳಿದಾಗ ನನ್ನ ಬೆನ್ನುಮೂಳೆಯಲ್ಲಿ ಚಳಕ್ ಎಂದು ಕರೆಂಟ್ ಓಡಿತು!

ಅನೈತಿಕತೆಯ ಫಲ – ಮಾಂಸದ ಮುದ್ದೆ!

ಆ ವೈದ್ಯರು ತಮ್ಮ ಹೆಸರನ್ನು ಉಲ್ಲೇಖ ಮಾಡಬಾರದು ಎಂದು ಹೇಳಿದ್ದಾರೆ. ಅವರು ಹೇಳಿದ್ದು ನಿಜಕ್ಕೂ ಭಯಾನಕವಾದ ವಿಷಯ. ಅದರಲ್ಲಿ ಹೆಚ್ಚಿನವರು 18-23 ವರ್ಷ ಪ್ರಾಯದ ಮೆಡಿಕಲ್
ವಿದ್ಯಾರ್ಥಿನಿಯರು! ಅಪ್ಪ ಅಮ್ಮನಿಂದ ದೂರ ಇರುವವರು. ಒಬ್ಬಂಟಿತನ ಹೋಗಲಾಡಿಸಲು ಪ್ರೀತಿ, ಪ್ರೇಮ, ಪ್ರಣಯ, ಸೆಕ್ಸ್, ಡ್ರಗ್ಸ್ ಇವುಗಳ ಮೊರೆ ಹೋಗುವವರು. ಸ್ವಚ್ಛಂದದ ರೆಕ್ಕೆ ಬಿಚ್ಚಿ ಹಾರಾಡುವವರು.

ಎಲ್ಲಾ ಹುಡುಗಿಯರು ಹಾಗೆ ಅಂತ ಅಲ್ಲವೇ ಅಲ್ಲ!

ವೈದ್ಯರು ಹೇಳುವ ಪ್ರಕಾರ ಮೆಡಿಕಲ್ ಕಲಿಯಲು ಬರುವ ಎಲ್ಲ ಹುಡುಗಿಯರೂ, ಹುಡುಗರೂ ಹಾಗೆ ಅಂತಲ್ಲ. ತುಂಬಾ ಸೀರಿಯಸ್ ಆಗಿ ಕಲಿಯುವ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಆದರೆ ಸ್ವಚ್ಛಂದತೆಯ ಬದುಕು ಆಸೆ ಪಡುವ ಹಲವರು ವರ್ಷಕ್ಕೆ ಎರಡು, ಮೂರು ಬಾರಿ ಅಬಾರ್ಷನ್ ಮಾಡಿಸಿಕೊಳ್ಳಲು ಕೂಡ ಹಿಂದೇಟು ಹಾಕುವುದಿಲ್ಲ! ಗರ್ಭಪಾತಕ್ಕೆ ಹೆದರುವುದೇ ಇಲ್ಲ. ಹೀಗೆಲ್ಲ ಮಾಡಿದರೆ ಮುಂದೆ ನಿಮಗೆ ಮಕ್ಕಳಾಗುವುದೇ ಇಲ್ಲ ಎಂದು ವೈದ್ಯರು ಎಚ್ಚರಿಕೆ ಕೊಟ್ಟರೂ ಅವರು ಕ್ಯಾರೇ ಅನ್ನುತ್ತಿಲ್ಲ ಅನ್ನೋದು ಇನ್ನೂ ಭಯ ಹುಟ್ಟಿಸುವ ಸಂಗತಿ. ಅವರು ವೈದ್ಯಕೀಯ ವಿದ್ಯಾರ್ಥಿಗಳು. ಅವರಿಗೆ ಎಲ್ಲವೂ ಗರ್ಭ ನಿರೋಧಕ ವಿಧಾನಗಳು ಗೊತ್ತಿವೆ. ಆದರೆ ಆ ಕ್ಷಣಕ್ಕೆ ಮೈ ಮರೆವು ಅವರನ್ನು ಈ ಹಂತಕ್ಕೆ ತಲುಪಿಸುತ್ತದೆ. ಈಗಿನ ಆಧುನಿಕ ಸಿನಿಮಾಗಳು, ವೆಬ್ ಸೀರೀಸ್, ಮೊಬೈಲ್, ಜಾಲತಾಣಗಳು, ಆಧುನಿಕ ಜೀವನ ಪದ್ಧತಿ ಮತ್ತು ಸುಲಭದಲ್ಲಿ ದೊರೆಯುವ ಡ್ರಗ್ಸ್ ಅವರನ್ನು ಪ್ರಪಾತಕ್ಕೆ ದೂಡುತ್ತಿದೆ.

ಅದಕ್ಕಿಂತ ಹೆಚ್ಚಿನ ಭಯಪಡುವ ಸಂಗತಿ ಎಂದರೆ ಗ್ರಾಮಾಂತರ ಭಾಗದ ವಿದ್ಯಾವಂತ ಹೆಣ್ಣುಮಕ್ಕಳು ಪ್ರೀತಿ, ಪ್ರೇಮದ ಆಮಿಷಗಳಿಗೆ ಬಲಿಯಾಗಿ ಗರ್ಭ ಧರಿಸುತ್ತಿದ್ದಾರೆ! ಅವರ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆ ಬೇಡದ ಮಗುವನ್ನು ಕಿತ್ತು ಕಸದ ಬುಟ್ಟಿಗೆ ಎಸೆಯಲು ಅವರು ಹೇಸುತ್ತಿಲ್ಲ. ಆ ಅನೈತಿಕತೆಯ ಫಲವಾದ ಮಾಂಸದ ಪಿಂಡವನ್ನು ತೆಗೆದು ಬಿಸಾಡಲು ಇಂದು ಹದಿಹರೆಯದ ಜೋಡಿಗಳು ಹಿಂದೆ ಮುಂದೆ ನೋಡುತ್ತಿಲ್ಲ!

ಮೊಬೈಲ್ ಮೂಲಕ, ವಿವಿಧ ಜಾಲತಾಣಗಳ ಮೂಲಕ ಗೆಳೆತನ ಮಾಡಿಕೊಂಡ ಹದಿಹರೆಯದ ಜೋಡಿಗಳು ಬಹಳ ಬೇಗ ನಿಕಟವಾಗುತ್ತಾರೆ . ಸಂಯಮ ಕಳೆದುಕೊಂಡು ಈ ಭಾವುಕ ಕ್ಷಣದಲ್ಲಿ ಮೈಮರೆಯುತ್ತಾರೆ.
ಅವುಗಳಲ್ಲಿ 90% ಪ್ರೀತಿಗಳು ಮದುವೆಯವರೆಗೂ ಹೋಗುವುದಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯವಾದ ಸಂಗತಿ. ಆ ಹುಡುಗ ಮತ್ತು ಹುಡುಗಿ ಯಾವ ಪಾಪ ಪ್ರಜ್ಞೆಯೂ ಇಲ್ಲದೆ ಮಾಂಸದ ಮುದ್ದೆಯನ್ನು ಕಸದ ಬುಟ್ಟಿಗೆ ಎಸೆದು ಮುಂದಕ್ಕೆ ಹೋಗುತ್ತಿರುವುದು ಕೂಡ ಹೆಚ್ಚು ಆತಂಕಕ್ಕೆ ಕಾರಣವಾಗಿದೆ.

ಒಂದೆಡೆ ಮಗು ಬೇಕೂ ಎಂದು ದಂಪತಿಗಳು ತೀವ್ರವಾಗಿ ಹಂಬಲಿಸುವುದು, ಅದಕ್ಕಾಗಿ ಲಕ್ಷ ಲಕ್ಷ ದುಡ್ಡು ಸುರಿಯಲು ಕೂಡ ಮುಂದಾಗುವ ದೃಶ್ಯ! ಇನ್ನೊಂದೆಡೆ ತಮ್ಮ ಫೇಕ್ ಪ್ರೀತಿಯ ಪ್ರತೀಕವಾದ ಮುಗ್ಧ ಮಗು (ಅವರ ಪ್ರಕಾರ ಮಾಂಸದ ಮುದ್ದೆಯನ್ನು) ಕಿತ್ತು ಬಿಸಾಡಿ ಧಿಮಾಕು ತೋರುವ ಯುವ ಪ್ರೇಮಿಗಳು!

ಈ ದುರಂತಕ್ಕೆ ಕಾರಣರು ಯಾರು? ನಮ್ಮ ಯುವ ಸಮಾಜವು ಎತ್ತ ಕಡೆಗೆ ಹೋಗುತ್ತಿದೆ?

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ನಾವೂ ನಮ್ಮದೇ ಸ್ಪೆಷಲ್‌ ಬ್ರಾಂಡ್‌ ಕ್ರಿಯೇಟ್‌ ಮಾಡಿಕೊಳ್ಳುವುದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಫೇಸ್‌ಬುಕ್ ‘ಫ್ರೆಂಡ್ ರಿಕ್ವೆಸ್ಟ್’ ಎಂಬ ಮೋಸದ ಜಾಲ

ನಿಮ್ಮನ್ನು ಮೋಸ ಮಾಡಲು ಸೈಬರ್ ಕ್ರಿಮಿನಲ್‌ಗಳು ಬಳಸುವ ಅನೇಕ ತಂತ್ರಗಳಲ್ಲಿ ಒಂದು, ಫೇಸ್‌ಬುಕ್ಕಿನಲ್ಲಿ ಅಪರಿಚಿತರಿಂದ ನಿಮಗೆ ಬರುವ ಫ್ರೆಂಡ್ ರಿಕ್ವೆಸ್ಟ್‌ಗಳು. ಸುಂದರಿಯ ಚಿತ್ರ ಬಂತು ಎಂದು ಕ್ಲಿಕ್ಕಿಸುವ ಮುನ್ನ ಹುಷಾರು!

VISTARANEWS.COM


on

Edited by

facebook fraud
Koo
cyber safty logo

ಜನವರಿಯಲ್ಲಿ ಬಿಡುಗಡೆ ಆದ TRAI (Telecom Regulatory Authority of India) ವರದಿಯ ಪ್ರಕಾರ, 30 ನವೆಂಬರ್ 2022ರವರೆಗೆ ಭಾರತದಲ್ಲಿನ ಮೊಬೈಲ್ ಬಳಕೆದಾರರ ಸಂಖ್ಯೆ 114 ಕೋಟಿ ದಾಟಿದೆ (1143 ಮಿಲಿಯನ್). ಅಂದರೆ ನಮ್ಮ ದೇಶದ ಜನಸಂಖ್ಯೆಯ ಶೇಕಡ 83ರಷ್ಟು ಜನ ಮೊಬೈಲ್ ಬಳಸುತ್ತಾರೆ. ಇವರಲ್ಲಿ 82 ಕೋಟಿ ಬ್ರಾಡ್ ಬ್ಯಾಂಡ್ ಬಳಕೆದಾರರಿದ್ದಾರೆ. 46 ಕೋಟಿಯಷ್ಟು ಜನ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. 31 ಕೋಟಿ ಜನರು ಫೇಸ್‌ಬುಕ್ ಬಳಸುತ್ತಾರೆ. ಇದು ಹ್ಯಾಕರ್‌ಗಳಿಗೆ, ಸೈಬರ್ ಕ್ರಿಮಿನಲ್‌ಗಳಿಗೆ ಜನರನ್ನು ವಂಚಿಸಲು ವಿಫುಲ ಅವಕಾಶ ಒದಗಿಸುತ್ತದೆ.

ಇದೇ ರೀತಿ ಇನ್ಸ್ಟಾಗ್ರಾಮ್ ಹೆಚ್ಚಾಗಿ ಬಳಸುವವರು, ವಾಟ್ಸ್ಯಾಪ್ ಬಳಕೆದಾರರು ತುಂಬಾ ಇದ್ದಾರೆ. ನಾನು ಕಳೆದ ವಾರ ಹೇಳಿದಂತೆ ನಮ್ಮ ಸಾಮಾಜಿಕ ಜಾಲತಾಣಗಳ ಬಳಕೆ ವ್ಯಸನವಾಗುತ್ತಿದೆ. ಅಂಗೈಯಲ್ಲಿಯೇ ಅಂತರ್ಜಾಲ ಸೈಬರ್ ಕ್ರಿಮಿನಲ್‌ಗಳಿಗೆ ಅಪರಿಮಿತವಾದ ಸಾಧ್ಯತೆಗಳನ್ನು ಕೊಡುತ್ತಿದೆ. ಅದರಲ್ಲಿ ಒಂದು ಮುಖ್ಯವಾದ ತಂತ್ರ ಫೇಸ್‌ಬುಕ್ಕಿನಲ್ಲಿ ಅಪರಿಚಿತರಿಂದ ನಿಮಗೆ ಬರುವ ಫ್ರೆಂಡ್ ರಿಕ್ವೆಸ್ಟ್‌ಗಳು.

ನಿಮಗೆ ತಿಳಿದಿಲ್ಲದ ಜನರು ಪ್ರಪಂಚದಾದ್ಯಂತದಿಂದ ನಿಮ್ಮ ಸ್ನೇಹಿತರಾಗಲು ಕೇಳುತ್ತಾರೆ. ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಆ “ಸ್ನೇಹಿತರು” ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿಯಲು ಬಯಸುತ್ತಾರೆ. ನಿಮ್ಮ ಗುರುತು ಮತ್ತು ನಿಮ್ಮ ಹಣವನ್ನು ಕದಿಯಲು ಪ್ರಯತ್ನಿಸುತ್ತಾರೆ ಎನ್ನುತ್ತಾರೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಫೇಸ್‌ಬುಕ್ಕಿನ ತಾಂತ್ರಿಕ ದೋಷವು ಬಳಕೆದಾರರು ನೋಡಿದ ಪ್ರತಿ ಪ್ರೊಫೈಲ್‌ಗೆ ಸ್ನೇಹದ ವಿನಂತಿಗಳನ್ನು ಸ್ವಯಂಚಾಲಿತವಾಗಿ ಕಳುಹಿಸುತ್ತಿದೆ ಎಂದು ತಿಳಿಯಿತು. ಮೆಟಾ ಕಂಪೆನಿ ಈ ದೋಷಕ್ಕಾಗಿ ಕ್ಷಮೆ ಯಾಚಿಸಿದೆ ಮತ್ತು ಇದೀಗ ಅದನ್ನು ಪರಿಹರಿಸಲಾಗಿದೆ ಎಂದು ಹೇಳಿಕೆ ನೀಡಿದೆ.

ಫೇಸ್‌ಬುಕ್ಕಿನಲ್ಲಿ ನಕಲಿ ಸ್ನೇಹದ ವಿನಂತಿಯನ್ನು ಕಳಿಸುವವರು ಯಾರು?

  1. ಸ್ಕ್ಯಾಮರ್‌ಗಳು: ಸ್ಕ್ಯಾಮರ್‌ಗಳು ನಕಲಿ Facebook ಪ್ರೊಫೈಲ್‌ಗಳನ್ನು ರಚಿಸುತ್ತಾರೆ ಮತ್ತು ನೀವು “ಸ್ನೇಹಿತರಿಗೆ ಮಾತ್ರ” ನಿರ್ಬಂಧಿಸುವ ವೈಯಕ್ತಿಕ ಮಾಹಿತಿಗೆ ಪ್ರವೇಶವನ್ನು ಪಡೆಯಲು ನಿಮ್ಮ ಸ್ನೇಹಿತರಾಗಲು ವಿನಂತಿಸುತ್ತಾರೆ.
  2. ದುರುದ್ದೇಶಪೂರಿತ ಲಿಂಕರ್‌ಗಳು: ನಿಮ್ಮ ಫೇಸ್‌ಬುಕ್ ನ್ಯೂಸ್‌ಫೀಡ್‌ನಿಂದ ಮಾಲ್‌ವೇರ್ ಅಥವಾ ಫಿಶಿಂಗ್ ಸೈಟ್‌ಗಳ ಲಿಂಕ್‌ಗಳನ್ನು ಪೋಸ್ಟ್ ಮಾಡುವ ದುರುದ್ದೇಶದಿಂದ ನಿಮಗೆ ಫ್ರೆಂಡ್ ರಿಕ್ವೆಸ್ಟ್ ಬರಬಹುದು.
  3. ಕ್ಯಾಟ್‌ಫಿಶರ್ಸ್: “ಕ್ಯಾಟ್‌ಫಿಶ್ಡ್” ಎಂಬ ಟೆಲಿವಿಷನ್ ಶೋನಲ್ಲಿ ತೋರಿಸಿದಂತೆ, ಆಕರ್ಷಕ ಪ್ರೊಫೈಲ್ ಚಿತ್ರದ ಹಿಂದೆ ಇರುವ ವ್ಯಕ್ತಿ ಚಿತ್ರದಲ್ಲಿರುವಂತೆ ಕಾಣುವುದಿಲ್ಲ. ಕ್ಯಾಟ್‌ಫಿಶರ್‌ಗಳು ವಿಕ್ಟಿಮ್‌ಗಳನ್ನು ಸೆಳೆಯಲು ರೂಪದರ್ಶಿಗಳ ಚಿತ್ರಗಳನ್ನು ಬಳಸಿಕೊಂಡು ವಿಸ್ತಾರವಾದ ಆನ್‌ಲೈನ್ ಪ್ರೊಫೈಲ್‌ಗಳನ್ನು ರಚಿಸುತ್ತಾರೆ. ಆನ್‌ಲೈನ್‌ನಲ್ಲಿ ಪ್ರೀತಿಯನ್ನು ಹುಡುಕುತ್ತಿರುವ, ನೊಂದಿರುವ, ಏಕಾಂಗಿತನವನ್ನು ಹೊರಹಾಕುತ್ತಿರುವವರನ್ನು ಕಂಡುಹಿಡಿಯಲು ಹ್ಯಾಕರ್‌ಗಳು ಅಪಾರ ಸಂಖ್ಯೆಯ ಜನರಿಗೆ ಸ್ನೇಹದ ವಿನಂತಿಗಳನ್ನು ಕಳುಹಿಸುತ್ತಾರೆ.
  4. ಮಾಜಿ ಪತ್ನಿ, ಮಾಜಿ ಪತಿ, ಮಾಜಿ ಗೆಳತಿ, ಮಾಜಿ ಗೆಳೆಯ: ಸಂಬಂಧವು ಕೆಟ್ಟದಾಗಿ ಕೊನೆಗೊಂಡರೆ ಮತ್ತು ನೀವು ವ್ಯಕ್ತಿಯನ್ನು ಅನ್‌ಫ್ರೆಂಡ್ ಮಾಡಿದರೆ, ನಿಮ್ಮ ಮಾಜಿ ಪರಿಚಿತ ವ್ಯಕ್ತಿ ಫೇಸ್‌ಬುಕ್ ಸ್ನೇಹಿತರ ವಲಯದಿಂದ ಹೊರಗೆ ಹೋದ ಎಂದು ನೀವು ಭಾವಿಸಬಹುದು. ಆಗಲೂ, ನಿಮ್ಮ ಮಾಜಿ ವ್ಯಕ್ತಿ ತಪ್ಪು ಪ್ರೊಫೈಲ್ ಅನ್ನು ರಚಿಸುವ ಮೂಲಕ ಮತ್ತು ಅಲಿಯಾಸ್ ಅನ್ನು ಬಳಸಿಕೊಂಡು ನಿಮ್ಮೊಂದಿಗೆ ಸ್ನೇಹ ಬೆಳೆಸುವ ಮೂಲಕ ನಿಮ್ಮ ಫೇಸ್‌ಬುಕ್ ಖಾತೆಗೆ ಹಿಂತಿರುಗುವ ಮಾರ್ಗವನ್ನು ಕಂಡುಕೊಳ್ಳಬಹುದು. ನಿಮ್ಮ ಮಾಜಿ ವ್ಯಕ್ತಿ ಪರದೆಯ ಇನ್ನೊಂದು ಬದಿಯಲ್ಲಿರುವುದನ್ನು ನೀವು ತಿಳಿಯದೆ, ನಿಮ್ಮೆಲ್ಲಾ ಆಗುಹೋಗುಗಳನ್ನು ಅವರು ಗಮನಿಸುತ್ತಾರೆ.
  5. ಪ್ರಸ್ತುತ ಹೆಂಡತಿ, ಪತಿ, ಗೆಳತಿ, ಗೆಳೆಯ: ನಿಮ್ಮ ಸಂಗಾತಿ ನೀವು ಯಾವ ಪೋಸ್ಟ್‌ಗಳಿಗೆ ಅಥವಾ ಚಾಟ್‌ಗಳಿಗೆ ಪ್ರತಿಕ್ರಿಯಿಸುತ್ತೀರಾ ಎಂದು ತಿಳಿಯಲು, ನಿಮ್ಮ ನಿಷ್ಠೆಯನ್ನು ಪರೀಕ್ಷಿಸಲು ಆಕರ್ಷಕ ಪ್ರೊಫೈಲ್ ಚಿತ್ರದೊಂದಿಗೆ ಸುಳ್ಳು ಪ್ರೊಫೈಲ್ ಅನ್ನು ರಚಿಸಿ ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಬಹುದು. ನಿಮ್ಮ ಸಂಗಾತಿಯು ಈ ಮಾಹಿತಿಯನ್ನು ನಂತರ ನಿಮ್ಮ ವಿರುದ್ಧ ಬಳಸುವ ಉದ್ದೇಶದಿಂದ ರೆಕಾರ್ಡ್ ಮಾಡಬಹುದು.
    ಇಂತವರು ಹೊಸ ಹೊಸ ರೂಪದಲ್ಲಿ ಬರುತ್ತಿರುತ್ತಾರೆ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು.

ನಕಲಿ ಫ್ರೆಂಡ್ ರಿಕ್ವೆಸ್ಟ್ ಗುರುತಿಸುವುದು ಹೇಗೆ?

ಸ್ನೇಹದ ವಿನಂತಿಯು ನಕಲಿ ಪ್ರೊಫೈಲ್‌ನಿಂದ ಆಗಿರಬಹುದಾ ಎಂಬುದನ್ನು ನಿರ್ಧರಿಸಲು ಈ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ:

  1. ನೀವು ವಿನಂತಿಸುವವರನ್ನು ತಿಳಿದಿದ್ದೀರಾ ಅಥವಾ ಸಮಾನ ಸ್ನೇಹಿತರನ್ನು ಹೊಂದಿದ್ದೀರಾ? ನಿಮ್ಮ ಉತ್ತರ “ಇಲ್ಲ” ಎಂದಾದರೆ, ಅದು ನಿಮಗೆ ಮೊದಲ ಸುಳಿವು. ನಿಜ ಜೀವನದಲ್ಲಿ ಭೇಟಿಯಾಗಿದ್ದ ವ್ಯಕ್ತಿಯನ್ನು ಅಥವಾ ಪರಸ್ಪರ ಸ್ನೇಹಿತರ ಮೂಲಕ ಭೇಟಿಯಾದುದನ್ನು ನೀವು ನೆನಪಿಸಿಕೊಳ್ಳದಿದ್ದರೆ, ನಿಮಗೆ ಬಂದ ಸ್ನೇಹದ ವಿನಂತಿ ಫೇಕ್ ಆಗಿರಬಹುದು. ವ್ಯಕ್ತಿಯ ಸ್ನೇಹಿತರ ಪಟ್ಟಿಯನ್ನು ವೀಕ್ಷಿಸಬಹುದಾದರೆ ಅದನ್ನು ಪರಿಶೀಲಿಸಿ ಮತ್ತು ನಿಮ್ಮಿಬ್ಬರಿಗೂ ತಿಳಿದಿರುವ ಯಾರನ್ನಾದರೂ ನೋಡಲು ಪರಸ್ಪರ ಸ್ನೇಹಿತರ ಪಟ್ಟಿಯನ್ನು (mutual friends) ಕ್ಲಿಕ್ ಮಾಡಿ ಪರಿಶೀಲಿಸಿ.
  2. ಸ್ನೇಹ ವಿನಂತಿಯು ಆಕರ್ಷಕ ವ್ಯಕ್ತಿಯಿಂದ ಆಗಿದೆಯೇ? ತನಗೆ ತಿಳಿದಿಲ್ಲದ ಸುಂದರ ಮಹಿಳೆಯಿಂದ ಇದ್ದಕ್ಕಿದ್ದಂತೆ ಸ್ನೇಹದ ವಿನಂತಿಯನ್ನು ಪಡೆಯುವ ವ್ಯಕ್ತಿ ಅದರ ಬಗ್ಗೆ ಹುಷಾರಾಗಿರಬೇಕು. ವಿದೇಶಿ ಮಹಿಳೆಯರ ಹೆಸರಲ್ಲಿ ಕೂಡ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ. ಪ್ರಚೋದನಕಾರಿಯಾಗಿ ಪೋಸ್ ನೀಡುತ್ತಿರುವ ಆಕರ್ಷಕ ವ್ಯಕ್ತಿಯ ಚಿತ್ರವಿರುವ ಫ್ರೆಂಡ್ ರಿಕ್ವೆಸ್ಟ್ ಅನ್ನು ನಕಲಿ ಫ್ರೆಂಡ್ ರಿಕ್ವೆಸ್ಟ್ ಗಳನ್ನು ಸೃಷ್ಟಿಸುವ ಜನರು ಹೆಚ್ಚಾಗಿ ಬಳಸುತ್ತಾರೆ.
  3. ಸೀಮಿತ ಫೇಸ್‌ಬುಕ್ ಇತಿಹಾಸ ಹೊಂದಿರುವ ವ್ಯಕ್ತಿಯಿಂದ ವಿನಂತಿಯು ಬಂದಿದೆಯೇ? ವ್ಯಕ್ತಿ ಸ್ವಲ್ಪ ಸಮಯದ ಹಿಂದೆ ಫೇಸ್‌ಬುಕ್‌ಗೆ ಸೇರ್ಪಡೆಗೊಂಡಿದ್ದರೆ, ಸ್ನೇಹಿತರ ವಿನಂತಿಯು ಬೋಗಸ್ ಆಗಿರುವ ಸಾಧ್ಯತೆ ಇದೆ. ಹೆಚ್ಚಿನ ಫೇಸ್‌ಬುಕ್ ಬಳಕೆದಾರರು ತಮ್ಮ ಟೈಮ್‌ಲೈನ್‌ನಲ್ಲಿ ಹಲವಾರು ವರ್ಷಗಳ ಹಿಂದಿನ ಸುದೀರ್ಘ ಇತಿಹಾಸವನ್ನು ಹೊಂದಿರುತ್ತಾರೆ. ನಕಲಿ ಪ್ರೊಫೈಲ್‌ಗಳನ್ನು ಆಗಾಗ್ಗೆ ತರಾತುರಿಯಲ್ಲಿ ರಚಿಸಲಾಗುತ್ತದೆ ಮತ್ತು ಹೆಚ್ಚಿನ ಪ್ರೊಫೈಲ್‌ಗಳು ವ್ಯಕ್ತಿಯು ಫೇಸ್‌ಬುಕ್‌ಗೆ ಸೇರಿದ ದಿನವನ್ನು ಸೂಚಿಸುತ್ತವೆ. ಖಾತೆ ಮತ್ತು ಟೈಮ್‌ಲೈನ್ ಅನ್ನು ಕೆಲವೇ ದಿನಗಳ ಹಿಂದೆ ರಚಿಸಿದ್ದರೆ, ವ್ಯಕ್ತಿಯು ನಿಮ್ಮನ್ನು ವಂಚಿಸಲು ಪ್ರಯತ್ನಿಸುತ್ತಾನೆ.
  4. ವ್ಯಕ್ತಿಯು ಅಸಾಮಾನ್ಯವಾಗಿ ಸಣ್ಣ ಅಥವಾ ದೊಡ್ಡ ಸಂಖ್ಯೆಯ ಸ್ನೇಹಿತರನ್ನು ಹೊಂದಿದ್ದಾನೆಯೇ ಮತ್ತು ಅವರೆಲ್ಲರೂ ಒಂದೇ ಲಿಂಗವೇ? ಕಾಲ್ಪನಿಕ ಪ್ರೊಫೈಲ್‌ಗಳು ತಮ್ಮ ಸ್ನೇಹಿತರ ಪಟ್ಟಿಯಲ್ಲಿ ಅತ್ಯಂತ ಕಡಿಮೆ ಅಥವಾ ಅಸಾಧ್ಯವಾದ ದೊಡ್ಡ ಸಂಖ್ಯೆಯ ಸ್ನೇಹಿತರನ್ನು ಹೊಂದಿರಬಹುದು. ಮತ್ತೊಂದು ಸುಳಿವು ಅವರ ಸ್ನೇಹಿತರ ಪಟ್ಟಿಯಲ್ಲಿರುವವರ ಲಿಂಗ. ಸ್ನೇಹ ವಿನಂತಿಸಿದವರ ವಿರುದ್ಧ ಲಿಂಗದ ಸ್ನೇಹಿತರನ್ನು ನೀವು ನೋಡಬಹುದು ಏಕೆಂದರೆ ಅವರು ಟಾರ್ಗೆಟ್ ಆಗಿರಬಹುದು. ವಿನಂತಿಯು ಪುರುಷರನ್ನು ಗುರಿಯಾಗಿಸುವ ಮಹಿಳೆಯಿಂದ ಆಗಿದ್ದರೆ, ನಿಜವಾದ ವ್ಯಕ್ತಿಯಿಂದ ನಿಮ್ಮಂತಹ ಪುರುಷರು ಮತ್ತು ಮಹಿಳೆಯರ ಮಿಶ್ರಣದ ಬದಲಿಗೆ ಸ್ನೇಹಿತರ ಪಟ್ಟಿಯಲ್ಲಿ ಬಹುತೇಕ ಎಲ್ಲ ಪುರುಷರನ್ನು ನಿರೀಕ್ಷಿಸಿ.
  5. ಅವರ ಟೈಮ್‌ಲೈನ್‌ನಲ್ಲಿ ಕಡಿಮೆ ವೈಯಕ್ತಿಕ ವಿಷಯವಿದೆಯೇ? ನೀವು ನಕಲಿ ಪ್ರೊಫೈಲ್‌ನಲ್ಲಿ ದಿನನಿತ್ಯದ ಚಟುವಟಿಕೆಯನ್ನು ನೋಡುವುದಿಲ್ಲ. ನೀವು ಕೆಲವು ಚಿತ್ರಗಳನ್ನು, ಬಹುಶಃ ಕೆಲವು ಲಿಂಕ್‌ಗಳನ್ನು ನೋಡಬಹುದು, ಆದರೆ ನೀವು ಬಹುಶಃ ಹೆಚ್ಚಿನ ಸ್ಥಳ ಚೆಕ್-ಇನ್‌ಗಳು ಅಥವಾ ಸ್ಥಿತಿ ನವೀಕರಣಗಳು ಕಾಣುವುದಿಲ್ಲ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸಾಮಾಜಿಕ ಜಾಲತಾಣಗಳ ವ್ಯಸನ! ಬಚಾವಾಗೋದು ಹೇಗೆ?

ನಿಮಗೆ ಬಂದ ನಕಲಿ ಫ್ರಂಡ್ ರಿಕ್ವಸ್ಟ್ ಖಾತೆಯನ್ನು ಹೇಗೆ ವರದಿ ಮಾಡುವುದು?

ನಕಲಿ ಖಾತೆಯ ಪ್ರೊಫೈಲ್ ಪುಟದಿಂದ, ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಆಯ್ಕೆಮಾಡಿ, ನಂತರ ಬೆಂಬಲವನ್ನು ಹುಡುಕಿ ಅಥವಾ ವರದಿ ಮಾಡಿಯನ್ನು (Find support or Report) ಆಯ್ಕೆಮಾಡಿ. ಅಲ್ಲಿಂದ, ತೆರೆಯ ಮೇಲಿನ ಸೂಚನೆಗಳನ್ನು ಅನುಸರಿಸಿ ಖಾತೆಯ ವಿವರಗಳನ್ನು ಭರ್ತಿ ಮಾಡಿ, ಸಲ್ಲಿಸಿ.

ನೀವು ನಕಲಿ ಖಾತೆಯನ್ನು ವರದಿ ಮಾಡಿದಾಗ ಏನಾಗುತ್ತದೆ?

ವರದಿಯನ್ನು ಸ್ವೀಕರಿಸಿದ ನಂತರ, ಮಾಹಿತಿಯನ್ನು ಪರಿಶೀಲಿಸುವುದಾಗಿ ಮತ್ತು ಸಮುದಾಯ ಮಾನದಂಡಗಳ ಉಲ್ಲಂಘನೆಯನ್ನು ನಿರ್ಧರಿಸಿದರೆ ಕ್ರಮ ತೆಗೆದುಕೊಳ್ಳುವುದಾಗಿ ಫೇಸ್‌ಬುಕ್ ಹೇಳುತ್ತದೆ. ನಕಲಿ ಖಾತೆಯವರಿಗೆ ವರದಿಯನ್ನು ಯಾರು ಸಲ್ಲಿಸಿದ್ದಾರೆಂದು ತಿಳಿಯುವುದಿಲ್ಲ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಹ್ಯಾಕರ್‌ಗಳು ಬ್ಯಾಂಕ್‌ಗಳಿಂದ 100 ಕೋಟಿ ಡಾಲರ್ ಕದ್ದ‌ ಕಥೆ! ಭಾಗ – 3

Continue Reading

ಅಂಕಣ

ರಾಜಮಾರ್ಗ ಅಂಕಣ: ವಿಶ್ವ ಪರಿಸರ ದಿನ; ಗಮನಿಸಿ, ಇವುಗಳು ಬೆಚ್ಚಿ ಬೀಳಿಸುವ ಅಂಶಗಳು!

ಭಾರತದ ಉಷ್ಣ ವಿದ್ಯುತ್ ಸ್ಥಾವರಗಳು ಉರಿಸುತ್ತಿರುವುದು ಅದೇ ಅಂತ್ರಾಸೈಟ್ ಕಲ್ಲಿದ್ದಲ್ಲನ್ನು! ಅದಕ್ಕೆ ಅವರು ಕೊಡುವ ಕಾರಣ ಖರ್ಚು ಉಳಿಸಲು ಎಂದು. ಶುದ್ಧ ಪರಿಸರವು ಅವರ್ಯಾರ ಕಾಳಜಿಯೂ ಅಲ್ಲ!

VISTARANEWS.COM


on

Edited by

Rajamarga Ankana
Koo
RAJAMARGA

ಈಗ ಎಚ್ಚರ ಆಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!

ಜಗತ್ತಿನ ಮೊದಲ ಹತ್ತು ಅತೀ ಪರಿಸರ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಭಾರತದ ಏಳು ನಗರಗಳು ಇವೆ!

ರಾಜಧಾನಿ ದೆಹಲಿಯು ವಾಸಿಸಲು ಯೋಗ್ಯವಲ್ಲದ ನಗರ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಣೆ ಮಾಡಿದೆ!

ಭಾರತದ ಹತ್ತು ಮಂದಿಯಲ್ಲಿ ಕನಿಷ್ಠ ನಾಲ್ಕು ಮಂದಿಗೆ ಉಸಿರಾಟದ ತೀವ್ರ ಸಮಸ್ಯೆ ಇದೆ!

ಪರಿಸರ ಹಾನಿಯ ಕಾರಣದಿಂದ ಮನುಷ್ಯನ ಒಟ್ಟಾಯುಷ್ಯ ಎರಡೂವರೆ ವರ್ಷ ಕಡಿಮೆ ಆಗುತ್ತಾ ಇದೆ!

ಶುದ್ಧ ಕುಡಿಯುವ ನೀರಿನ ಕೊರತೆಯಿಂದಾಗಿ ಭಾರತದಲ್ಲಿ ವರ್ಷಕ್ಕೆ ಕನಿಷ್ಟ ಎಂದರೂ ಎರಡೂವರೆ ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ!

ಈ ಅಂಶಗಳು ಖಂಡಿತವಾಗಿ ನಮ್ಮನ್ನು ಬೆಚ್ಚಿ ಬೇಳಿಸುತ್ತವೆ!

ಇದಕ್ಕೆ ಕಾರಣಗಳು ಏನು?

ಹಸಿರು ಮರಗಳ ನಾಶ ಒಂದು ಪ್ರಮುಖ ಕಾರಣ ಆಗಿದೆ. ಆದರೆ ಅದಕ್ಕಿಂತ ಪ್ರಮುಖವಾದ ಕಾರಣ ಎಂದರೆ ನಾವು ಅತಿಯಾಗಿ ಬಳಸುವ ಫಾಸಿಲ್ ಇಂಧನಗಳು. ಕಲ್ಲಿದ್ದಲ್ಲು, ಮೀಥೆನ್, ಪೆಟ್ರೋಲ್, ಡೀಸೆಲ್ ಇವುಗಳು ಪ್ರಮುಖವಾದ ಫಾಸಿಲ್ ಇಂಧನಗಳು.

ಫಾಸಿಲ್ ಇಂಧನಗಳ ಮೇಲೆ ಹೆಚ್ಚು ಅವಲಂಬನೆ!

ಜಗತ್ತಿನ ಒಟ್ಟು ಶಕ್ತಿ ಪೂರೈಕೆಯಲ್ಲಿ ಫಾಸಿಲ್ ಇಂಧನಗಳ ಬಳಕೆ 65% ಇದೆ. ಅದರಲ್ಲಿ ಕಲ್ಲಿದ್ದಲ್ಲು ಬಳಕೆಯೇ 36% ಇದೆ. ನೈಸರ್ಗಿಕ ಅನಿಲಗಳಿಂದ 23%, ಪೆಟ್ರೋಲ್ ಮತ್ತು ಡೀಸೆಲಗಳಿಂದ 3% ಇಂಧನ ಪೂರೈಕೆಯು ಆಗುತ್ತಿದೆ. ಇವೆಲ್ಲವೂ ಅಪಾಯಕಾರಿಗಳೇ ಆಗಿವೆ. ಅದರಲ್ಲಿ ಕೂಡ ಕಲ್ಲಿದ್ದಲ್ಲು ಉರಿಸುವುದರಿಂದ ಹಾನಿ ಹೆಚ್ಚು. ಅದರಲ್ಲಿ ಕೂಡ ಹೆಚ್ಚು ಕಾರ್ಬನ್ ಅಂಶ ಇರುವ ಆಂತ್ರಾಸೈಟ್ ಎಂಬ ಕಲ್ಲಿದ್ದಲು ಉರಿಸುವುದರಿಂದ ಪರಿಸರಕ್ಕೆ ಹಾನಿ ಅತೀ ಹೆಚ್ಚು!

Rajamarga Column Today Is Environment Day

ಭಾರತದ ಉಷ್ಣ ವಿದ್ಯುತ್ ಸ್ಥಾವರಗಳು ಉರಿಸುತ್ತಿರುವುದು ಅದೇ ಅಂತ್ರಾಸೈಟ್ ಕಲ್ಲಿದ್ದಲ್ಲನ್ನು! ಅದಕ್ಕೆ ಅವರು ಕೊಡುವ ಕಾರಣ ಖರ್ಚು ಉಳಿಸಲು ಎಂದು. ಶುದ್ಧ ಪರಿಸರವು ಅವರ್ಯಾರ ಕಾಳಜಿಯೂ ಅಲ್ಲ!

ವಾತಾವರಣಕ್ಕೆ ಸೇರುತ್ತಿವೆ ಅಗಾಧವಾದ ಶಾಖ ವರ್ಧಕ ಅನಿಲಗಳು!
ಮನುಷ್ಯರ ಚಟುವಟಿಕೆಗಳಿಂದ ವರ್ಷಕ್ಕೆ 51 ಶತ ಕೋಟಿ ಟನಗಳಷ್ಟು ಶಾಖವರ್ಧಕ ಅನಿಲಗಳು ವಾತಾವರಣವನ್ನು ಸೇರುತ್ತವೆ! ಅದರಲ್ಲಿಯೂ ಕಾರ್ಬನ್ ಡೈಆಕ್ಸೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಹೆಚ್ಚು. ಮತ್ತೆ ಭೂಮಿ ಬಾಯಾರದೆ ಇರುತ್ತದೆಯೇ?

ಅಪಾಯಕಾರಿ ಕಾರ್ಬನ್ ಮಾನಾಕ್ಸೈಡ್!

ಇದರಿಂದ ವರ್ಷದಿಂದ ವರ್ಷಕ್ಕೆ ವಾತಾವರಣದ ಉಷ್ಣತೆ ಹೆಚ್ಚುತ್ತಿರುವುದು ನಿಮ್ಮ ಗಮನಕ್ಕೆ ಖಂಡಿತವಾಗಿಯು ಬಂದಿರುತ್ತದೆ. ಕಾರ್ಬನ್ ಡೈಆಕ್ಸೈಡ್ (CO 2) ಅನಿಲಕ್ಕಿಂತ ಕಾರ್ಬನ್ ಮಾನಾಕ್ಸೈಡ್ (CO) ಅನಿಲವು ಅಧಿಕ ಅಪಾಯಕಾರಿ! ಏಕೆಂದರೆ ಅದು ಕಾರ್ಬನನ ಅಪೂರ್ಣ ದಹನದ ಉತ್ಪನ್ನ. ನಮ್ಮಲ್ಲಿ ಉಸಿರು ಕಟ್ಟುವ ಅನುಭವ ಉಂಟುಮಾಡುವ ಪ್ರಮುಖವಾದ ಅನಿಲವೇ ಕಾರ್ಬನ್ ಮಾನಾಕ್ಸೈಡ್! ಪೆಟ್ರೋಲ್ ಮತ್ತು ಡೀಸೆಲ್ ಬಳಸುವ ವಾಹನಗಳಿಂದ ಹೊರಬರುವ ತ್ಯಾಜ್ಯ ರಾಶಿಯಲ್ಲಿ ಅತ್ಯಂತ ಅಪಾಯಕಾರಿ ಆದದ್ದು ಕಾರ್ಬನ್ ಮಾನಾಕ್ಸೈಡ್!

Rajamarga Column Today Is Environment Day

ಮಹಾ ನಗರಗಳಲ್ಲಿ ವಾಹನಗಳ ಹೊಗೆ ಅಪಾಯಕಾರಿ!

ಮುಂಬೈ, ಕೊಲ್ಕತ್ತ, ಬೆಂಗಳೂರು ಮೊದಲಾದ ಮಹಾ ನಗರಗಳಲ್ಲಿ ಮನೆಯ ಒಳಗೆ ಕೆಲಸವನ್ನು ಮಾಡುವ ಗೃಹಿಣಿಯರು ಒಂದು ದಿನಕ್ಕೆ ಒಂದು ಪ್ಯಾಕೆಟ್ ಸಿಗರೇಟ್ ಸೇದಿದಷ್ಟು ಕಾರ್ಬನ್ ಕಂಟೆಂಟನ್ನು ತಮ್ಮ ಶ್ವಾಸಕೋಶಕ್ಕೆ ಸೇರಿಸಲು ಮುಖ್ಯ ಕಾರಣ ವಾಹನಗಳು!

ಕೋರೋನ ಬಂದು ಹೋದ ನಂತರ ಜನರು ಸೋಷಿಯಲ್ ಡಿಸ್ಟೆನ್ಸ್ ಕಾರಣಕ್ಕೆ ಹೆಚ್ಚು ಬೈಕ್, ಮೊಪೆಡಗಳ ಖರೀದಿ ಮಾಡುತ್ತಿದ್ದಾರೆ. ಅವರ ಆರೋಗ್ಯದ ಕಾಳಜಿ ನಿಜಕ್ಕೂ ಪ್ರಶಂಸನೀಯ. ಆದರೆ ಪರಿಸರದ ಹಾನಿ? ಅದರ ಬಗ್ಗೆ ಯಾರೂ ಯೋಚನೆ ಮಾಡಿದ ಹಾಗೆ ಇಲ್ಲ!

ಎಲ್ಲಾದಕ್ಕೂ ಫಾಸಿಲ್ ಇಂಧನಗಳೇ ಬೇಕು!

ಜಗತ್ತಿನ 90% ಕೆಲಸಗಳು ಇಂದು ನಡೆಯುತ್ತಿರುವುದು ಫಾಸಿಲ್ ಇಂಧನಗಳ ಪೂರೈಕೆಯಿಂದಲೆ! ಇಂದಿಗೂ ಕಾರು, ಬೈಕ್, ಬಸ್ಸು, ರೈಲು, ಹಡಗು, ವಿಮಾನಗಳ ಸಂಚಾರಕ್ಕೆ ಫಾಸಿಲ್ ಇಂಧನಗಳೇ ಬೇಕು. ಕಟ್ಟಡಗಳ ನಿರ್ಮಾಣ, ಸಿಮೆಂಟ್ ಕಾರ್ಖಾನೆ, ರಸಗೊಬ್ಬರ ತಯಾರಿ, ಬಟ್ಟೆಯ ಕಾರ್ಖಾನೆ, ರಸ್ತೆ ನಿರ್ಮಾಣ, ಬೋರವೆಲ್ ಕೊರೆಯಲು, ಕ್ರೇನ್ ಬಳಸಲು, ನೀರು ಮೇಲೆತ್ತಲು, ಉಕ್ಕಿನ ಕಾರ್ಖಾನೆ… ಹೀಗೆ ಪ್ರತೀಯೊಂದು ಕೆಲಸಕ್ಕೂ ನಾವು ಇಂದು ಬಳಕೆ ಮಾಡುವುದು ಫಾಸಿಲ್ ಇಂಧನಗಳನ್ನೇ!

ಗ್ಲೋಬಲ್ ವಾರ್ಮಿಂಗ್ ಎಚ್ಚರಿಕೆಯ ಗಂಟೆ!

ಗ್ಲೋಬಲ್ ವಾರ್ಮಿಂಗ್ ಬಗ್ಗೆ ಮೊದಲೇ ಎಚ್ಚರಿಕೆಯ ಗಂಟೆ ಬಡಿದ ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಮುಂದುವರೆದ ಮತ್ತು ಪ್ರಗತಿಶೀಲ ರಾಷ್ಟ್ರಗಳನ್ನು ಒಂದೆಡೆ ಸೇರಿಸಿ ಒಂದು ಪ್ರಮುಖ ಒಪ್ಪಂದವನ್ನು ಮಾಡಿಕೊಂಡಿವೆ. ಎಲ್ಲಾ ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತ ಕೂಡ ಈ ಒಪ್ಪಂದಕ್ಕೆ ಸಹಿ ಹಾಕಿದೆ.

ಏನಿದೆ ಆ ಒಪ್ಪಂದದಲ್ಲಿ?

ಫಾಸಿಲ್ ಇಂಧನಗಳ ಬಳಕೆ ಕಡಿಮೆ ಮಾಡಿ ಪರ್ಯಾಯ ಇಂಧನಗಳ ಬಳಕೆ ಜಾಸ್ತಿ ಮಾಡುವುದು ಆ ಒಪ್ಪಂದದ ಪ್ರಮುಖ ಅಂಶ. ಅಂದರೆ ಸೌರ ಶಕ್ತಿ, ಗಾಳಿ ಶಕ್ತಿ, ಭೂಗರ್ಭ ಉಷ್ಣ ಶಕ್ತಿ, ಸಮುದ್ರದ ಅಲೆಗಳ ಶಕ್ತಿ, ಜೈವಿಕ ಶಕ್ತಿಗಳ ಬಳಕೆಯನ್ನು ಹೆಚ್ಚು ಮಾಡುವುದು!

ಹೆಚ್ಚಿನ ರಾಷ್ಟ್ರಗಳು ಈ ಉದ್ದೇಶಕ್ಕೆ ತುಂಬಾ ಧನವನ್ನು ವಿನಿಯೋಗ ಮಾಡಿ ಕಾಲನಿರ್ಧಾರಿತ ಗುರಿಗಳನ್ನು ಇಟ್ಟುಕೊಂಡಿವೆ.

ಉದಾಹರಣೆಗೆ ಚೀನಾ ಸರಕಾರ 2060ರ ಒಳಗೆ ತನ್ನ ದೇಶವನ್ನು ಸಂಪೂರ್ಣ ಸೋಲಾರ್ ಮಾಡಲು ಹೊರಟಿದೆ. ಅದಕ್ಕಾಗಿ ಬೃಹತ್ ಸೌರ ವಿದ್ಯುತ್ ಘಟಕಗಳ ಸ್ಥಾಪನೆ ಮಾಡಲು ಹೊರಟಿದೆ.

ಅಮೆರಿಕ ಇನ್ನು ಹತ್ತು ವರ್ಷಗಳ ಅವಧಿಯಲ್ಲಿ ತನ್ನ 50% ಕಾರುಗಳು ಬ್ಯಾಟರಿಯಿಂದ ಓಡಲಿವೆ ಎಂದು ಯೋಜನೆ ಹಾಕಿದೆ!

ಭಾರತದಲ್ಲಿ ಈಗಾಗಲೇ ಇಲೆಕ್ಟ್ರಿಕ್ ಬೈಕಗಳು ಮಾರುಕಟ್ಟೆಗೆ ಬಂದಿವೆ. ಸರಕಾರವೇ ಅದನ್ನು ಪ್ರಮೋಟ್ ಮಾಡುತ್ತಿದೆ. ಆದರೂ ಅದನ್ನು ಖರೀದಿ ಮಾಡುವವರ ಸಂಖ್ಯೆ ತುಂಬಾ ಕಡಿಮೆ. ಕೇಳಿದರೆ ರೇಟ್ ಜಾಸ್ತಿ ಆಯಿತು ಅನ್ನುತ್ತಾರೆ! ನಮ್ಮಲ್ಲಿ ಪರಿಸರದ ಬಗ್ಗೆ ಜಾಗೃತಿ ಕಡಿಮೆ. ನಾವು ಅಲ್ಪ ಕಾಲದ ಲಾಭಗಳನ್ನು ಲೆಕ್ಕ ಹಾಕುತ್ತೇವೆ ಹೊರತು ದೀರ್ಘ ಕಾಲದ ಆಶಯಗಳನ್ನು ಯೋಚನೆ ಮಾಡುವುದೇ ಇಲ್ಲ!

30 ವರ್ಷಗಳ ಗುರಿ ನಿಗದಿ!

ಭಾರತ ಸರಕಾರ ಮುಂದಿನ 30 ವರ್ಷಗಳ ಒಳಗೆ ಫಾಸಿಲ್ ಇಂಧನಗಳ ಬಳಕೆಯನ್ನು ಸೊನ್ನೆಗೆ ತರುವ ಮಾತಾಡುತ್ತಿದೆ. ನಮಗೆ ಇದು ಸಾದ್ಯ ಎಂದು ಅನಿಸುತ್ತಿದೆಯೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿದೆ!

Continue Reading

ಅಂಕಣ

Brand story : ಜಗತ್ತನ್ನೇ ದಂಗುಬಡಿಸಿದ ಚಾಟ್‌ಜಿಪಿಟಿ ಜನಕ ಓಪನ್‌ಎಐನಲ್ಲಿ ಇನ್ಫೋಸಿಸ್‌ ಹಣ ಹೂಡಿದ್ದೇಕೆ?!

Brand story ಜಗತ್ತಿನಾದ್ಯಂತ ತಂತ್ರಜ್ಞಾನ ಮತ್ತು ಕಾರ್ಪೊರೇಟ್‌ ವಲಯದಲ್ಲಿ ಈಗ ಚಾಟ್‌ ಜಿಪಿಟಿಯದ್ದೇ ಮಾತು. ಇದರ ರೂವಾರಿ ಓಪನ್‌ಎಐ ಹಿಂದಿನ ಬ್ರಾಂಡ್‌ ಸ್ಟೋರಿ ಇಲ್ಲಿದೆ.

VISTARANEWS.COM


on

Edited by

Koo
brand story

ಆರು ತಿಂಗಳಿನ ಹಿಂದೆ ಇಂಥದ್ದೊಂದು ಚಾಟ್‌ಬೋಟ್‌ ಈ ಜಗತ್ತಿನಲ್ಲೇ ಇದ್ದಿರಲಿಲ್ಲ. ಆದರೆ ಈಗ ಕಾರ್ಪೊರೇಟ್‌ ವಲಯದ ಪಡಸಾಲೆಗಳಲ್ಲಿ ಕಾಳ್ಗಿಚ್ಚಿನಂತೆ ಇದರ ಪ್ರತಾಪದ ಬಗ್ಗೆ ಚರ್ಚೆ ನಡೆದಿದೆ. ಇಂಥ ಸಾಧನಗಳಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಆತಂಕ ಮನೆ ಮಾಡಿದೆ. ದೈತ್ಯ ಟೆಕ್‌ ಕಂಪನಿಗಳು ಇವುಗಳ ಮೇಲೆ ಭಾರಿ ಹೂಡಿಕೆಯನ್ನು ಮಾಡಿವೆ. ನಿಮ್ಮ ಊಹೆ ನಿಜ, ( ChatGPT) ಅಮೆರಿಕದ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ರಿಸರ್ಚ್‌ ಲ್ಯಾಬೊರೇಟರಿ ಸಂಸ್ಥೆಯಾದ ಓಪನ್‌ ಎಐ, (Brand story) ಚಾಟ್‌ಜಿಪಿಟಿ ಎಂಬ ಕೃತಕಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್‌ ಟೆಕ್ನಾಲಜಿ ಆಧರಿತ ಚಾಟ್‌ಬೋಟ್‌ ಬಿಡುಗಡೆಗೊಳಿಸಿ ಪ್ರಪಂಚದಲ್ಲೇ ಸಂಚಲನ ಸೃಷ್ಟಿಸಿದೆ.

ಚಾಟ್‌ಬೋಟ್‌ (Chatbot) ಅಂದರೆ ಒಂದು ಸಾಫ್ಟ್‌ವೇರ್‌ ಅಪ್ಲಿಕೇಶನ್.‌ ಅದು ಮನುಷ್ಯರ ಸಂಭಾಷಣೆಯನ್ನು ಆನ್‌ಲೈನ್‌ನಲ್ಲಿ ಟೆಕ್ಸ್ಟ್‌ ಅಥವಾ ಧ್ವನಿಯ ರೂಪದಲ್ಲಿ ಅನುಕರಿಸುತ್ತದೆ. ಈ ಚಾಟ್‌ಜಿಪಿಟಿಯ ಕ್ರಾಂತಿಕಾರಕ ಪ್ರಯೋಜನ ಏನೆಂದರೆ ಸಹಜವಾಗಿ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತದೆ ಮತ್ತು ಮನುಷ್ಯರ ಜತೆ Text ಸಂಭಾಷಣೆ ನಡೆಸಬಲ್ಲುದು. ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಬಳಕೆದಾರರ ಇಂಗಿತವನ್ನೂ ಅರಿಯಬಲ್ಲುದು. ಕೇವಲ ಚಾಟ್‌ಬೋಟ್‌ಗಿಂತ ಹೆಚ್ಚು ಆಧುನಿಕ. ನೀವು ಚಾಟ್‌ಜಿಪಿಟಿಗೆ ಪ್ರಶ್ನೆಗಳನ್ನು ಕೇಳಬಹುದು. ಗೂಗಲ್‌ ಸರ್ಚ್‌ ಎಂಜಿನ್‌ಗೂ ಚಾಟ್‌ಜಿಪಿಟಿಗೂ ಇರುವ ವ್ಯತ್ಯಾಸ ಏನು? ಗೂಗಲ್‌ ಮಾಹಿತಿಗಳ ಲಿಂಕ್‌ಗಳನ್ನು ಮಾತ್ರ ನೀಡುತ್ತದೆ. ಆದರೆ ಚಾಟ್‌ಜಿಪಿಟಿ ಬಳಕೆದಾರರಿಗೆ ತಾನೇ ಹಲವಾರು ಕ್ಷೇತ್ರಗಳಲ್ಲಿ (domains) ಮಾಹಿತಿಯನ್ನು ಸಂಸ್ಕರಿಸಿ ಸಂಭಾಷಣೆಯ ಶೈಲಿಯಲ್ಲಿ ನೀಡುತ್ತದೆ. ಉದಾಹರಣೆಗೆ ಕಾರು ಸಾಲದ ಬಗ್ಗೆ ಲೇಖನ ಕೋರಿದರೆ ಗೂಗಲ್‌, ಹಲವು ಲಿಂಕ್‌ಗಳನ್ನು ಕೊಡಬಹುದು. ಆದರೆ ಚಾಟ್‌ಜಿಪಿಟಿ ಲೇಖನವನ್ನೇ ಸಿದ್ಧಪಡಿಸಿ ಕೊಡುತ್ತದೆ. ಹಾಗಂತ ಗೂಗಲ್‌ಗಿಂತಲೂ ಚಾಟ್‌ಜಿಪಿಟಿ ಮೇಲು ಎಂದಲ್ಲ, ಎರಡಕ್ಕೂ ಅದರದ್ದೇ ಆದ ವಿಶೇಷತೆ ಇದೆ.

10 ಕೋಟಿ ಬಳಕೆದಾರರೊಂದಿಗೆ ಇತಿಹಾಸ ಸೃಷ್ಟಿಸಿದ ಚಾಟ್‌ಜಿಪಿಟಿ : ಓಪನ್‌ ಎಐ ಸಂಸ್ಥೆ ಕೃತಕಬುದ್ಧಿಮತ್ತೆ ಕುರಿತ ಸಂಶೋಧನೆ, ಎಐ ಉತ್ಪನ್ನಗಳ ಅಭಿವೃದ್ಧಿ ಮತ್ತು ಮಾರಾಟವನ್ನು ಮಾಡುತ್ತದೆ. ಇದರ ಉತ್ಪನ್ನಗಳೆಂದರೆ ಜಿಪಿಟಿ-4, DALL-4, ಓಪನ್‌ಎಐ ಫೈವ್‌, ಚಾಟ್‌ಜಿಪಿಟಿ, ಓಪನ್‌ಎಐ ಕೋಡೆಕ್ಸ್.‌ (www.openai.com) ವಿಶ್ವದಲ್ಲೇ ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೆಬ್‌ಸೈಟ್‌ ಓಪನ್‌ಎಐನದ್ದಾಗಿದೆ (OpenAI) ಚಾಟ್‌ಜಿಪಿಟಿ ಇಡೀ ಜಗತ್ತಿನಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಕೇವಲ 7 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಓಪನ್‌ಎಐ ಮಾಡುತ್ತಿರುವ ಸದ್ದು ಅಷ್ಟಿಷ್ಟಲ್ಲ. ಚಾಟ್‌ಜಿಪಿಟಿ 2023ರ ಜನವರಿಯಲ್ಲಿ ಕನ್‌ಸ್ಯೂಮರ್‌ ಸಾಫ್ಟ್‌ವೇರ್‌ ಅಪ್ಲಿಕೇಶನ್‌ನ ಇತಿಹಾಸದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಅಪ್ಲಿಕೇಶನ್‌ ಆಗಿ ಚಾಟ್‌ಜಿಪಿಟಿ ಹೊರಹೊಮ್ಮಿತು. ಇದರ ವೇಗ ಕಂಡು ಬೆಚ್ಚಿದ ಗೂಗಲ್‌, ತನ್ನ ಚಾಟ್‌ಬೋಟ್‌ ಬಾರ್ಡ್‌ ಅನ್ನು ಅಭಿವೃದ್ಧಿಪಡಿಸಿತು.

ಓಪನ್‌ ಎಐ ಸ್ಥಾಪಕರು ಯಾರು?

ಓಪನ್‌ ಎಐ ಸಿಇಒ ಸ್ಯಾಮುಯೆಲ್‌ ಹ್ಯಾರಿಸ್‌ ಆಲ್ಟ್‌ಮನ್

ಓಪನ್‌ ಎಐ ಅನ್ನು ಹತ್ತು ಮಂದಿ ತಂತ್ರಜ್ಞರು ಸೇರಿ 2015ರಲ್ಲಿ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಸ್ಥಾಪಿಸಿದರು. ವಾಸ್ತವವಾಗಿ ಮೊದಲಿಗೆ ಓಪನ್‌ ಎಐ ಒಂದು ಎನ್‌ಜಿಒ ಆಗಿ ಅಸ್ತಿತ್ವಕ್ಕೆ ಬಂದಿತ್ತು. ಆರಂಭದಲ್ಲಿ ಇನ್ಫೋಸಿಸ್‌, ಎಲಾನ್‌ ಮಸ್ಕ್‌ ಮತ್ತಿತರ ಮೂಲಗಳಿಂದ 1 ಶತಕೋಟಿ ಡಾಲರ್‌ ಹೂಡಿಕೆ ಲಭಿಸಿತ್ತು (ಅಂದಾಜು 8,200 ಕೋಟಿ ರೂ.) ಇಲ್ಯಾ ಸುಟ್ಸ್‌ಕೆವರ್‌, ಗ್ರೇಗ್‌ ಬ್ರೋಕ್‌ ಮನ್‌, ಟ್ರೆವೊರ್‌ ಬ್ಲಾಕ್‌ವೆಲ್‌, ವಿಕಿ ಚೆಯುಂಗ್‌, ಆಂಡ್ರೇಜ್‌ ಕಾರ್‌ಪಥಿ, ಡ್ಯುರ್ಕ್‌ ಕಿಂಗ್‌ಮಾ, ಜೆಸ್ಸಿಕಾ ಲಿವಿಂಗ್‌ಸ್ಟನ್‌, ಜಾನ್‌ ಸ್ಕುಲ್‌ಮ್ಯಾನ್‌, ಪಮೇಲಾ ವಗಾಟಾ ಮತ್ತು ವೊಜಿಸ್ಕ್‌ ಜೆರೆಮ್‌ಬಾ. ಉದ್ಯಮಿ ಸ್ಯಾಮ್‌ ಅಲ್ಟ್‌ಮನ್‌ ಮತ್ತು ಎಲಾನ್‌ ಮಸ್ಕ್‌ ಆರಂಭಿಕ ಹಂತದಲ್ಲಿ ಕಂಪನಿಯ ನಿರ್ದೇಶಕರುಗಳ ಮಂಡಳಿಯ ಸದಸ್ಯರಾಗಿದ್ದರು. ಸ್ಯಾಮ್‌ ಆಲ್ಟ್‌ಮನ್‌ ಕಂಪನಿಯ ಸಿಇಒ ಆಗಿದ್ದಾರೆ. ಇವರೆಲ್ಲರೂ ಅಸಾಧಾರಣ ಯುವ ತಂತ್ರಜ್ಞಾನಿಗಳು. ಸಿಇಒ ಆಲ್ಟ್‌ಮನ್‌ ಅವರಿಗೆ ಈಗ 37 ವರ್ಷ ವಯಸ್ಸು. ಯೆಹೂದಿ ಕುಟುಂಬದಲ್ಲಿ ಜನಿಸಿದ್ದ ಆಲ್ಟ್‌ಮನ್‌ 8 ವರ್ಷದ ಬಾಲಕನಾಗಿದ್ದಾಗ ಕಂಪ್ಯೂಟರ್‌ ಬಳಸುತ್ತಿದ್ದ. 2005ರಲ್ಲಿ ಸ್ಟಾನ್‌ಫೋರ್ಡ್‌ ಯುನಿವರ್ಸಿಟಿಯಲ್ಲಿ 1 ವರ್ಷ ಕಂಪ್ಯೂಟರ್‌ ಸೈನ್ಸ್‌ ಓದಿ ಡ್ರಾಪೌಟ್‌ ಆಗಿದ್ದರು. 2005ರಲ್ಲಿ ಲೊಕೇಶನ್‌ ಆಧರಿತ ಮೊಬೈಲ್‌ ಅಪ್ಲಿಕೇಶನ್‌ ಲೂಪ್ಟ್‌ ಅನ್ನು ಅಭಿವೃದ್ಧಿಪಡಿಸಿದ್ದರು. 2020ರಲ್ಲಿ ಓಪನ್‌ ಎಐನ ಸಿಇಒ ಆದರು. 2023ರಲ್ಲಿ ಟೈಮ್‌ ನಿಯತಕಾಲಿಕೆಯ ಪ್ರಕಾರ 100 ಪ್ರಭಾವಿಶಾಲಿ ವ್ಯಕ್ತಿಗಳಲ್ಲಿ ಆಲ್ಟ್‌ ಮನ್‌ ಕೂಡ ಒಬ್ಬರಾಗಿದ್ದಾರೆ. ಆಲ್ಟ್‌ಮನ್‌ ಒಬ್ಬ ಅದ್ಭುತ ಉದ್ಯಮಿ ಎನ್ನುತ್ತಾರೆ ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾಡೆಳ್ಳಾ.

ಓಪನ್‌ ಎಐನಲ್ಲಿ ಇನ್ಫೋಸಿಸ್‌ ಹೂಡಿದ್ದೇಕೆ?

ವಿಶಾಲ್‌ ಸಿಕ್ಕಾ ಮಾಜಿ ಸಿಇಒ ಇನ್ಫೋಸಿಸ್

ಚಾಟ್‌ಜಿಪಿಟಿ ತಯಾರಕ ಓಪನ್‌ಎಐ ಆರಂಭದಲ್ಲಿ ಎನ್‌ಜಿಒ ( non-profit) ಆಗಿತ್ತು. ಆದರೆ 2015ರಲ್ಲೇ ಇನ್ಫೋಸಿಸ್‌, ಎಲಾನ್‌ ಮಸ್ಕ್‌, ವೈಸಿ ರೀಸರ್ಚ್‌, ಎಡಬ್ಲ್ಯುಎಸ್‌ ಮುಖ್ಯಸ್ಥರು ಓಪನ್‌ ಎಐನಲ್ಲಿ ಸುಮಾರು 1 ಶತಕೋಟಿ ಡಾಲರ್‌ ಹೂಡಿಕೆ ಮಾಡಿದ್ದರು ಎಂದು ವರದಿಯಾಗಿತ್ತು. ಅದರಲ್ಲೂ ಆಗ ಇನ್ಫೋಸಿಸ್‌ನ ಸಿಇಒ ಆಗಿದ್ದ ವಿಶಾಲ್‌ ಸಿಕ್ಕಾ ಅವರಿಗೆ ಎಐ ತಂತ್ರಜ್ಞಾನದ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಇತ್ತು. ಹೀಗಾಗಿ ಇನ್ಫೋಸಿಸ್‌, ಓಪನ್‌ಎಐಗೆ ಡೊನೇಶನ್‌ ನೀಡಿತ್ತು. ಸಿಕ್ಕಾ ಅವರು ಓಪನ್‌ ಎಐಗೆ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಆಗ ಓಪನ್‌ ಎಐ ಮುಕ್ತ ತಂತ್ರಾಂಶ ಅಭಿವೃದ್ಧಿಗೆ ಬದ್ಧವಾಗಿತ್ತು. ಆದರೆ 2017ರಲ್ಲಿ ವಿಶಾಲ್‌ ಸಿಕ್ಕಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಇದರೊಂದಿಗೆ ಓಪನ್‌ ಎಐ ಟೆಕ್ನಾಲಜಿಯನ್ನು ಇನ್ಫೋಸಿಸ್‌ ಜತೆ ಸಂಯೋಜಿಸುವ ಯೋಜನೆ ನನೆಗುದಿಗೆ ಬಿತ್ತು. 2019ರ ವೇಳೆಗೆ ಓಪನ್‌ಎಐನಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ಎನ್‌ಜಿಒ ಆಗಿದ್ದ ಓಪನ್‌ ಎಐ, ಕಂಪನಿಯಾಗಿ ಬದಲಾಯಿತು. ಇದಕ್ಕೆ ಕಾರಣ ಓಪನ್‌ ಎಐನ ಹಾಲಿ ಸಿಇಒ ಆಲ್ಟ್‌ಮನ್!

ಕಂಪ್ಯೂಟರ್‌ ಕೋಡ್‌ ಅನ್ನೂ ಬರೆಯಬಲ್ಲ ಸ್ಫೋಟಕ ಎಐ ಟೂಲ್ಸ್! ಓಪನ್‌ ಎಐನಲ್ಲಿ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ ಪವರ್‌ಫುಲ್ ಎಐ ಟೂಲ್ಸ್‌ಗಳು ಸಿಲಿಕಾನ್‌ ವ್ಯಾಲಿಯಲ್ಲೇ ಮಿಂಚಿನ ಸಂಚಾರ ಮೂಡಿಸಿದೆ.‌ ಅದು ಸಂಕೀರಣ text ಗಳಿಂದ computer code ತನಕ ಎಲ್ಲವನ್ನೂ ಮಾಡಬಲ್ಲ ಸಾಮರ್ಥ್ಯ ಹೊಂದಿವೆ. ಓಪನ್‌ಎಐನ GPT2 ಲಾಂಗ್ವೇಜ್‌ ಮಾಡೆಲ್‌ ಟೂಲ್‌ ಬಿಡುಗಡೆಯಾದಾಗ, ಸ್ವತಃ ಕಂಪನಿಯ ಉದ್ಯೋಗಿಗಳು ಇದರ ದುರ್ಬಳಕೆ ಆಗಬಹುದೇನೋ ಎಂದು ಆತಂಕ ವ್ಯಕ್ತಪಡಿಸಿದ್ದರಂತೆ. ಜಿಪಿಟಿ2 ಟೂಲ್‌ ಸಮಕಾಲೀನ ಘಟನೆಗಳ ಬಗ್ಗೆ ಒಂದು ಸಾಲು ಸಿಕ್ಕಿದರೂ, ಅದನ್ನು ಸುದ್ದಿಯಾಗಿ ಬರೆಯುವ ಸಾಮರ್ಥ್ಯ ಹೊಂದಿದೆ. ಸಾಂಸ್ಥಿಕ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಎಐ ತಂತ್ರಜ್ಞಾನದ ಕಾರುಬಾರು ಶುರುವಾಗಿದೆ. ಇಮೇಜ್‌ಗಳ ಸೃಷ್ಟಿಯಲ್ಲಿ ಕ್ರಾಂತಿಕಾರಕ ಪರಿವರ್ತನೆಯಾಗುತ್ತಿದೆ. ನಿಮಗೆ ಬೇಕಾದಂಥ ಚಿತ್ರಗಳ ಸೃಷ್ಟಿ ಇಲ್ಲಿ ಸಾಧ್ಯ. ಆಟೊಮ್ಯಾಟಿಕ್‌ ಫೊಟೊ ಎಡಿಟಿಂಗ್‌ ಅನ್ನು ಮಾಡಬಹುದು. ಚಿತ್ರ ಕಲಾವಿದರು, ಸಂಗೀತಜ್ಞರು, ಬಿಸಿನೆಸ್‌ಮ್ಯಾನ್‌, ಸ್ಟಾರ್ಟಪ್‌ ನಡೆಸುವವರು ಹೀಗೆ ಎಲ್ಲರೂ ಎಐ ನೆರವನ್ನು ಪಡೆಯುತ್ತಿದ್ದಾರೆ.

ಎಐ ತಂತ್ರಜ್ಞಾನ ಕ್ರಾಂತಿಯ ಬಗ್ಗೆ ಓಪನ್‌ ಎಐ ಸಿಇಒ ಹೇಳಿದ್ದೇನು? ಈ ಹಿಂದಿನ ತಂತ್ರಜ್ಞಾನಗಳು ಉದ್ಯೋಗ, ಉದ್ದಿಮೆ ವಲಯದ ಮೇಲೆ ಗಣನೀಯ ಪ್ರಭಾವ ಬೀರಿದೆ. ಎಐ ಟೆಕ್ನಾಲಜಿ ಕೂಡ ಇದೇ ಸಾಲಿನಲ್ಲಿದೆ. ಆದರೆ ಇದರ ಪರಿಣಾಮ ಹೇಗಿರಬಹುದು ಎಂದು ಊಹಿಸುವುದು ಕಷ್ಟ. ತಂತ್ರಜ್ಞಾನ ಅಭಿವೃದ್ಧಿಗಳ ಎರಡೂ ಮುಖಗಳನ್ನು ನೋಡಬೇಕು. ಆದರೆ ಭವಿಷ್ಯದಲ್ಲಿ ಉದ್ಯೋಗಗಳ ಸ್ಥಿತಿಗತಿ ಮತ್ತು ಗುಣಮಟ್ಟ ಸುಧಾರಿಸಲಿದೆ ಎಂದು ನಾನು ನಂಬುತ್ತೇನೆ. ಈಗಾಗಲೇ ಜಿಪಿಟಿ 4 ಬಳಸುತ್ತಿರುವ ಜನತೆ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಜನ ಜೀವನದ ಗುಣಮಟ್ಟ ಅಭಿವೃದ್ಧಿಗೆ ಎಐ ಸಹಕಾರಿಯಾಗುವುದಿದ್ದರೆ ಅದನ್ನು ತಡೆಯುವುದು ಕಷ್ಟ. ನಾನು ಆಶಾವಾದಿಯಾಗಿದ್ದೇನೆ ಎನ್ನುತ್ತಾರೆ ಓಪನ್‌ ಎಐ ಸಿಇಒ ಆಲ್ಟ್‌ಮನ್. ಎಐ ಟೆಕ್ನಾಲಜಿ ಉದ್ಯೋಗಗಳನ್ನು ಕಸಿದುಕೊಳ್ಳಲಿದೆಯೇ ಎಂಬ ಚರ್ಚೆ ಈಗ ವ್ಯಾಪಕವಾಗಿದೆ. ಹಾಲಿ ಮನುಷ್ಯರು ಮಾಡುವ ಏಕತಾನತೆಯ ಟಾಸ್ಕ್‌ಗಳನ್ನು (automate tasks) ಭವಿಷ್ಯದಲ್ಲಿ ಎಐ ಟೂಲ್‌ಗಳು ಮಾಡಲಿವೆ. ಆಗ ಮನುಷ್ಯರು ಏನು ಮಾಡಬಹುದು? ಮತ್ತಷ್ಟು ಸೃಜನಶೀಲ ಅಥವಾ ಮಹತ್ವದ ಕೆಲಸಗಳನ್ನು ಮಾಡಬಹುದು. ಅದೇ ರೀತಿ ಹೊಸ ಕೆಲಸಗಳು ಕೂಡ ಸೃಷ್ಟಿಯಾಗಬಹುದು ಎನ್ನುತ್ತಾರೆ ತಜ್ಞರು.

2024ರಲ್ಲಿ ಬಿಡುಗಡೆಯಾಗಲಿದೆಯೇ GPT 5 ? ಓಪನ್‌ ಎಐ ಜಿಪಿಟಿ5 ( Generative Pre-trained Transformer) ಅನ್ನು ತಯಾರಿಸುತ್ತಿದೆ. 2024ರಲ್ಲಿ ಇದು ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದು ಗೇಮ್‌ ಚೇಂಜರ್‌ ಆಗಲಿದೆ ಎನ್ನುತ್ತಾರೆ ಕಂಪನಿಯ ಸಿಇಒ ಆಲ್ಟ್‌ಮನ್.‌ ಜಿಪಿಟಿ 5 ಸ್ವತಃ ವೆಬ್‌ ಸೈಟ್‌ ಅನ್ನು ತಯಾರಿಸಲಿದೆ. ಇದರ ಮೆಮೊರಿ ಜಾಸ್ತಿಯಾಗಿರಲಿದೆ. ಇದರಲ್ಲಿ ಸುದೀರ್ಘ ಮೆಸೇಜ್‌ಗಳನ್ನು ಬಳಕೆದಾರರು ಕಳಿಸಬಹುದು. ಮಲ್ಟಿಪಲ್‌ ಟಾಸ್ಕ್‌ಗಳನ್ನು ಜಿಪಿಟಿ 5ಗೆ ನೀಡಬಹುದು. ಲಾಜಿಕಲ್‌ ರೀಸನಿಂಗ್‌ ಸುಧಾರಿಸಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಏಐ ಪ್ರಭಾವ ಬೀರಲಿದೆ. ಓಪನ್‌ ಎಐ ಅಕಾಡೆಮಿ ಎಂಬ ಪ್ರಾಜೆಕ್ಟ್‌ ಅನ್ನೂ ಕಂಪನಿ ಆರಂಭಿಸಲು ಉದ್ದೇಶಿಸಿದೆ. ಅಂದರೆ ಇದರ ಮೂಲಕ ಯಾರಿಗೂ ಯಾವುದೇ ವಿಷಯದ ಬಗ್ಗೆ ಕಲಿಯಲು ಹಾದಿ ಸುಗಮವಾಗಲಿದೆ ಎನ್ನುತ್ತಾರೆ ಆಲ್ಟ್‌ಮನ್.‌

ಎಐ ಗೇಮ್‌ನಲ್ಲಿ ಯಾರಿದ್ದಾರೆ?

ಮೈಕ್ರೊಸಾಫ್ಟ್‌, ಗೂಗಲ್‌, ಮೆಟಾ ಇತ್ಯಾದಿ ದಿಗ್ಗಜ ಕಂಪನಿಗಳು ತಮ್ಮದೇ ಎಐ ಟೂಲ್‌ಗಳ ಅಭಿವೃದ್ಧಿಗೆ ಹೂಡಿಕೆ ಮಾಡುತ್ತಿವೆ. ಮೈಕ್ರೊಸಾಫ್ಟ್‌ 2023ರಲ್ಲಿ 10 ಶತಕೋಟಿ ಡಾಲರ್‌ (82,000 ಕೋಟಿ ರೂ.) ಹೂಡಿಕೆ ಮಾಡಿದೆ. ಇದು Azure AI platform ಅನ್ನು ಅಭಿವೃದ್ಧಿಪಡಿಸಿದೆ. ಮೈಕ್ರೊಸಾಫ್ಟ್‌ ಮೊದಲ ಬಾರಿಗೆ ಓಪನ್‌ಎಐನಲ್ಲಿ 2019ರಲ್ಲಿ 1 ಶತಕೋಟಿ ಡಾಲರ್‌ ಹೂಡಿದಾಗ (8200 ಕೋಟಿ ರೂ.) ಈ ಡೀಲ್‌ ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಆಗ ಸ್ಟಾರ್ಟಪ್‌ ಮಾರುಕಟ್ಟೆ ಬೆಳೆಯುತ್ತಿತ್ತು. ಎಲೆಕ್ಟ್ರಿಕ್‌ ವಾಹನ, ಏರೊಸ್ಪೇಸ್‌ ಮಾದರಿಯಲ್ಲಿ ಎಐ ಕ್ಷೇತ್ರ ಕೂಡ ಹೂಡಿಕೆ ಆಕರ್ಷಿಸಿದೆ ಎಂದು ಭಾವಿಸಲಾಗಿತ್ತು. ಆದರೆ ಮೂರು ವರ್ಷಗಳ ಬಳಿಕ ಆಯಾಮ ಬದಲಾಯಿತು. ವರದಿಗಳ ಪ್ರಕಾರ ಮೈಕ್ರೊಸಾಫ್ಟ್‌ ಓಪನ್‌ಎಐನಲ್ಲಿ 13 ಶತಕೋಟಿ ಡಾಲರ್‌ ಹೂಡಿದೆ. (1.06 ಲಕ್ಷ ಕೋಟಿ ರೂ.) ಹೂಡಿಕೆ ಮಾಡಿದೆ. ಇದರಿಂದಾಗಿ ಓಪನ್‌ಎಐನ ಮಾರುಕಟ್ಟೆ ಮೌಲ್ಯ 29 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. (2.37 ಲಕ್ಷ ಕೋಟಿ ರೂ.) ಮೈಕ್ರೊಸಾಫ್ಟ್‌ ಬಿಂಗ್‌ (Microsoft Bing) ಎಂಬುದು ಮೈಕ್ರೊಸಾಫ್ಟ್‌ನ ವೆಬ್‌ ಸರ್ಚ್‌ ಎಂಜಿನ್.‌ ಓಪನ್‌ ಎಐನ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲು ಮೈಕ್ರೊಸಾಫ್ಟ್‌ ಬಯಸಿದೆ.

ಗೂಗಲ್‌ ಕಂಪನಿ ಕೂಡ ಗೂಗಲ್‌ ಬ್ರೈನ್‌ (Google Brain) ಎಂಬ ಡೀಪ್‌ ಲರ್ನಿಂಗ್‌ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಘಟಕವನ್ನು ಹೊಂದಿದೆ. ಈ ಪ್ರಾಜೆಕ್ಟ್‌ 2011ರಲ್ಲೇ ಶುರುವಾಗಿತ್ತು. ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕೂಡ ಮೆಟಾ ಎಐ ಎಂಬ ಎಐ ಲ್ಯಾಬೊರೇಟರಿಯನ್ನು ಹೊಂದಿದೆ. ಭಾರತದಲ್ಲೂ ಟಿಸಿಎಸ್‌, ಇನ್ಫೋಸಿಸ್‌, ವಿಪ್ರೊ, ಎಚ್‌ಸಿಎಲ್‌ ಟೆಕ್‌ ಮತ್ತು ಟೆಕ್‌ ಮಹೀಂದ್ರಾ ಮತ್ತು ಇತರ ಕಂಪನಿಗಳು ಆರ್ಟಿಫಿಶಿಯಲ್‌ ಟೆಕ್ನಾಲಜಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. ಒಟ್ಟಿನಲ್ಲಿ ಎಐ ಕ್ರಾಂತಿಗೆ ಚಾಟ್‌ಜಿಪಿಟಿ ಜನಕ ಓಪನ್‌ ಎಐ ನೀಡಿರುವ ಪುಷ್ಟಿ ಅತ್ಯಂತ ಕುತೂಹಲಕರ. ಇದು ಮನುಕುಲದ ಒಳಿತಿಗೆ ಸಹಕಾರಿಯಾದರೆ ಸಾರ್ಥಕ.

ಇನ್ಫೋಸಿಸ್‌ ಹೂಡಿಕೆ-ಸಂಪರ್ಕ ಮುಂದುವರಿಸುತ್ತಿದ್ದರೆ!? ವಿಶಾಲ್‌ ಸಿಕ್ಕಾ ಅವರು ಸಿಇಒ ಆಗಿದ್ದಾಗ ಮೊದಲ ಬಾರಿಗೆ ಓಪನ್‌ ಎಐನಲ್ಲಿ ಇನ್ಫೋಸಿಸ್‌ ಹೂಡಿಕೆ ಮಾಡಿತ್ತು. ಒಂದು ವೇಳೆ ಬಳಿಕವೂ ಇನ್ಫೋಸಿಸ್‌ ಓಪನ್‌ ಎಐನಲ್ಲಿ ಹೂಡಿಕೆ ಮತ್ತು ಸಹಯೋಗ ಮುಂದುವರಿಸುತ್ತಿದ್ದರೆ ಈಗ ಎಐ ಕ್ಷೇತ್ರದಲ್ಲಿ ಅದು ಗಮನಾರ್ಹ ಮುನ್ನಡೆ ಸಾಧಿಸುತ್ತಿತ್ತೋ ಎನ್ನುತ್ತಾರೆ ಐಟಿ ಕುತೂಹಲಿಗಳು. ಆದರೆ ಸದ್ಯಕ್ಕೆ ಮೈಕ್ರೊಸಾಫ್ಟ್‌ ಓಪನ್‌ ಎಐನಲ್ಲಿ ಭಾರಿ ಹೂಡಿಕೆ ಮಾಡಿದೆ.

ಇದನ್ನೂ ಓದಿ: Brand story : ತಂದೆ ನಡೆಸುತ್ತಿದ್ದ ಸಣ್ಣ ಡಯಾಗ್ನಸ್ಟಿಕ್ಸ್ ಸೇರಿ ದೇಶ-ವಿದೇಶಗಳಲ್ಲಿ 1,500ಕ್ಕೆ ವಿಸ್ತರಿಸಿದ ಮಗಳ ಯಶೋಗಾಥೆ

Continue Reading

ಅಂಕಣ

ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿದೆ!

ಶಾಲೆಗೆ ಸೇರಿಸುವಾಗ ಯಾವುದೋ ಒಂದು ಹೆಸರು ಇಟ್ಟಿದ್ದರು. ಆದರೆ ಆ ಹೆಸರು ಶಾಲೆಯಲ್ಲಿ ಬಳಕೆ ಆದದ್ದು ಕಡಿಮೆ. ಹಾಜರಿ ಕರೆಯುವಾಗ ಟೀಚರ್ ನಂಬರ್ ಕರೆಯುತ್ತಿದ್ದರು. ಪೇಪರ್ ಕೊಡುವಾಗಲೂ ನಂಬರ್. ಅಸೆಂಬ್ಲಿಯಲ್ಲಿಯೂ ನಂಬರ್. ಅಲ್ಲಿ ಕೂಡ ಟೀಚರ್ ಇಂತವರ ಮಗಳು, ಇಂತವರ ತಂಗಿ ಎಂದು ಪರಿಚಯ ಮಾಡುತ್ತಿದ್ದರು. ಸ್ಪರ್ಧೆಗೆ ಹೆಸರು ಕೊಟ್ಟಾಗಲೂ ನಂಬರ್ ಕರೆಯುತ್ತಿದ್ದರು.

VISTARANEWS.COM


on

Edited by

Rajamarga Column
Koo
RAJAMARGA Columnist Rajendra Bhat

ಮನೆಯೊಳಗೆ ಆಕೆಯನ್ನು ಎಲ್ಲರೂ ಅತ್ತಿಗೆ, ಮಾಮಿ, ಅಕ್ಕ ಎಂದೆಲ್ಲ ಕರೆಯುತ್ತಾರೆ. ಆಕೆಯ ಮಕ್ಕಳು ಅಮ್ಮ ಎಂದು ಕರೆಯುತ್ತಾರೆ. ಮೊಮ್ಮಕ್ಕಳು ಅಜ್ಜಿ ಎನ್ನುತ್ತಾರೆ. ಮೊಮ್ಮಕ್ಕಳ ಗೆಳೆಯರು ಮನೆಗೆ ಬಂದರೆ ಅವರೂ ಕೂಡ ಅಜ್ಜಿ ಎನ್ನುತ್ತಾರೆ. ಹೊರಗಿಂದ ಯಾರು ಬಂದರೂ ಆಕೆಯನ್ನು ಆಂಟಿ ಎಂದೇ ಕರೆಯುತ್ತಾರೆ. ಕೈ ಹಿಡಿದ ಗಂಡ ಆಕೆಯನ್ನು ‘ಓ ಇವಳೇ’ ಎಂದು ಕರೆಯುತ್ತಾನೆ. ಮನೆಯ ಹೊರಗೆ ಬಂದರೆ ಅಲ್ಲಿ ಕೂಡ ಆಕೆಯು ಇಂತವನ ಹೆಂಡತಿ ಎಂದೇ ರಿಜಿಸ್ಟರ್ ಆಗಿದ್ದಾಳೆ. ಅವಳಿಗೆ ತನ್ನ ಸ್ವಂತ ಹೆಸರೇ ಮರೆತು ಹೋಗಿದೆ! ಅವಳಿಗೆ ಸ್ವಂತ ಐಡೆಂಟಿಟಿ ಇಲ್ಲದೆ ಎಷ್ಟೋ ವರ್ಷಗಳೇ ಆಗಿ ಹೋಗಿವೆ.

ಆಕೆಯ ಬಾಲ್ಯವೂ ಹಾಗೇ ಇತ್ತು!

ಆಕೆ ಮೊದಲ ಬಾರಿಗೆ ಕಣ್ಣು ತೆರೆದು ಈ ಜಗತ್ತಿಗೆ ಬಂದಾಗ ಕೇಳಿದ ಮೊದಲ ಉದ್ಗಾರ – ಛೇ! ಈ ಬಾರಿಯೂ ಹೆಣ್ಣು! ಆಗ ಅದು ಅವಳಿಗೆ ಅರ್ಥ ಆಗದ ವಯಸ್ಸು.

ಅವಳನ್ನು ತೊಟ್ಟಿಲಲ್ಲಿ ಮಲಗಿಸಿ ಆಕೆಯ ಕಿವಿಯಲ್ಲಿ ಯಾವುದೋ ಒಂದು ಹೆಸರನ್ನು ಹೆತ್ತವರು ಉಸಿರಿದ್ದರು. ಅದೂ ಅವಳಿಗೆ ನೆನಪಿಲ್ಲ. ಮನೆಯವರು ಅಪ್ಪ, ಅಮ್ಮ ಎಲ್ಲರೂ ಆಕೆಯನ್ನು ಪೂರ್ತಿ ಹೆಸರಿನಿಂದ ಕರೆದದ್ದು ಇಲ್ಲವೇ ಇಲ್ಲ. ಅಮ್ಮಿ, ಅಮ್ಮು, ಪುಟ್ಟಿ, ಚಿನ್ನು ಹೀಗೆ ತರಹೇವಾರಿ ಹೆಸರುಗಳು. ಮನೆಯಲ್ಲಿ ತುಂಬಾ ಹೆಣ್ಣು ಮಕ್ಕಳಿದ್ದ ಕಾರಣ ಆಕೆಗೇ ಕೆಲವು ಬಾರಿ ಗೊಂದಲ ಆದದ್ದು ಇದೆ.

ಶಾಲೆಯಲ್ಲಿಯೂ ಆಕೆಗೆ ಐಡೆಂಟಿಟಿ ಇರಲಿಲ್ಲ!

ಶಾಲೆಗೆ ಸೇರಿಸುವಾಗ ಯಾವುದೋ ಒಂದು ಹೆಸರು ಇಟ್ಟಿದ್ದರು. ಆದರೆ ಆ ಹೆಸರು ಶಾಲೆಯಲ್ಲಿ ಬಳಕೆ ಆದದ್ದು ಕಡಿಮೆ. ಹಾಜರಿ ಕರೆಯುವಾಗ ಟೀಚರ್ ನಂಬರ್ ಕರೆಯುತ್ತಿದ್ದರು. ಪೇಪರ್ ಕೊಡುವಾಗಲೂ ನಂಬರ್. ಅಸೆಂಬ್ಲಿಯಲ್ಲಿಯೂ ನಂಬರ್. ಅಲ್ಲಿ ಕೂಡ ಟೀಚರ್ ಇಂತವರ ಮಗಳು, ಇಂತವರ ತಂಗಿ ಎಂದು ಪರಿಚಯ ಮಾಡುತ್ತಿದ್ದರು. ಸ್ಪರ್ಧೆಗೆ ಹೆಸರು ಕೊಟ್ಟಾಗಲೂ ನಂಬರ್ ಕರೆಯುತ್ತಿದ್ದರು. ಆಕೆಯು ಅವಳ ಅಣ್ಣನಷ್ಟು, ಅಕ್ಕನಷ್ಟು ಪ್ರತಿಭಾವಂತೆ ಆಗಿರಲಿಲ್ಲ. ಮಾರ್ಕ್ಸ್ ಕಡಿಮೆ ಬಂದಾಗ ಶಿಕ್ಷಕರು ‘ ನಿನಗೆ ಅಣ್ಣನಷ್ಟು ಯಾಕೆ ಮಾರ್ಕ್ ಬಂದಿಲ್ಲ? ಅಕ್ಕನ ಹಾಗೆ ಯಾಕೆ ಮಾರ್ಕ್ ಬರೋದಿಲ್ಲ?’ ಎಂದು ಕೇಳಿದಾಗ ಆಕೆಗೆ ಸಿಟ್ಟು ಬರುತ್ತಿತ್ತು. ‘ನಾನು ನಾನೇ ‘ ಎಂದು ಕಿರುಚಿ ಹೇಳಬೇಕು ಎಂದು ಹಲವು ಬಾರಿ ಅನ್ನಿಸುತ್ತಿತ್ತು. ಆದರೆ ಆಗುತ್ತಲೇ ಇರಲಿಲ್ಲ. ಆಗಲೇ ಆಕೆಯು ಐಡೆಂಟಿಟಿ ಕಳೆದುಕೊಂಡಾಗಿತ್ತು.

ಮುಂದೆ ಹೈಸ್ಕೂಲಗೆ ಬಂದಾಗಲೂ ಐಡೆಂಟಿಟಿ ಇರಲಿಲ್ಲ!

ಹೈಸ್ಕೂಲ್ ವಿದ್ಯಾಬ್ಯಾಸಕ್ಕೆ ಬಂದಾಗ ಇನ್ನೂ ಕೆಲವು ಕಿರುಕುಳ ಆರಂಭ ಆದವು. ಮೂರು ದಿನ ಹೊರಗೆ ಕೂರಲೇಬೇಕು ಎಂದು ಅಮ್ಮ ಅಪ್ಪಣೆ ಕೊಡಿಸಿದರು. ಆಗ ಶಾಲೆಗೆ ಬಂದಾಗಲೂ ಆಕೆ ಮೈಯನ್ನು ಮುದ್ದೆ ಮಾಡಿ ಕುಳಿತುಕೊಳ್ಳುತ್ತಿದ್ದಳು. ಆಗೆಲ್ಲ ಕೀಳರಿಮೆ ಹೆಚ್ಚಾಯಿತು. ಭಯ ಹೆಚ್ಚಾಯಿತು. ಮಾರ್ಕ್ ಮತ್ತೂ ಕಡಿಮೆ ಆಯಿತು.

ಒಮ್ಮೆ ಒಬ್ಬ ಓರಗೆಯ ಹುಡುಗ ಟಿಫಿನ್ ಬಾಕ್ಸನಲ್ಲಿ ಒಂದು ಲವ್ ಲೆಟರ್ ಇಟ್ಟು ಪ್ರೀತಿ ಮಾಡುತ್ತಿಯಾ? ಎಂದು ಬರೆದಿದ್ದ. ಆಗ ಇನ್ನೂ ಭಯ ಹೆಚ್ಚಾಯಿತು. ಮದುವೆ ಆಗ್ತೀಯಾ ಎಂದು ಕೇಳಿದಾಗ ಅವನು ‘ಅದೆಲ್ಲ ಬೇಡ, ಪ್ರೀತಿ ಮಾತ್ರ ಮಾಡೋಣ’ ಅಂದನು. ಆಕೆಗೆ ಅದೆಲ್ಲ ಅರ್ಥ ಆಗಲಿಲ್ಲ. ಮನೆಗೆ ಬಂದಾಗ ಅಮ್ಮ ಪ್ರತೀ ದಿನ ಆಕೆಯ ಶಾಲೆಯ ಬ್ಯಾಗ್ ಚೆಕ್ ಮಾಡುತ್ತಾ ಇದ್ದರು. ಪ್ರತಿಭಟಿಸಬೇಕು ಅನ್ನಿಸಿದರೂ ಆಕೆಗೆ ಧ್ವನಿಯೇ ಬರಲಿಲ್ಲ.

ಆಕೆಯ ತಿಂಗಳ ಆ ಡೇಟ್ ಆಕೆಗೆ ಮರೆತು ಹೋದರೂ ಅಮ್ಮನಿಗೆ ನೆನಪು ಇರುತ್ತಿತ್ತು. ಆಕೆಯ ತಂಗಿ, ತಮ್ಮ ಕೂಡ ಆಕೆಯ ಮೇಲೆ ಡಾಮಿನೇಟ್ ಮಾಡ್ತಾ ಇದ್ದರು. ಆಕೆಗೆ ಸ್ವಾಭಿಮಾನ ಎಂಬ ಶಬ್ದದ ಅರ್ಥವೇ ಮರೆತುಹೋಗಿತ್ತು.

ಕಡಿಮೆ ಮಾರ್ಕ್ ಬಂದ ಕಾರಣ ಆಕೆಯು ಕಾಲೇಜು ಮೆಟ್ಟಲು ಹತ್ತಲಿಲ್ಲ. ‘ಗಂಡನ ಮನೆಗೆ ಹೋದ ನಂತರ ಅಡುಗೆ ಮಾಡಬೇಕಲ್ಲ’ ಎಂದು ಅಮ್ಮ ಅದನ್ನೇ ಚಂದ ಮಾಡಿ ಕಲಿಸಿದರು. ಮನೆಯ ನಾಲ್ಕು ಕೋಣೆಗಳ ನಡುವೆ ಆಕೆಯ ಧ್ವನಿ ಮತ್ತು ಐಡೆಂಟಿಟಿಗಳು ಉಸಿರುಗಟ್ಟುತ್ತಿದ್ದವು.

ಮದುವೆಯ ನಂತರ…

ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ… ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ. ಚಂದ ಅಡುಗೆ ಮಾಡ್ತೀ ಎಂಬ ಪ್ರಶಸ್ತಿ ಕೊಟ್ಟು ಆಕೆಯನ್ನು ಅಡುಗೆ ಮನೆಯ ಮಹಾರಾಣಿ ಮಾಡಿಬಿಟ್ಟರು. ಅನ್ನಪೂರ್ಣೆ ಎಂಬ ಬಿರುದು ಆಕೆಗೆ ಮುಳ್ಳಿನ ಕಿರೀಟ ಆಗಿ ಬಿಟ್ಟಿತು. ಇಡೀ ದಿನ ಊಟ, ತಿಂಡಿ, ಪಾತ್ರೆ, ಬಟ್ಟೆ, ಒಂದೆರಡು ನೆಂಟರು, ಹಬ್ಬಗಳು, ಮದುವೆ, ಮುಂಜಿ, ಗೃಹ ಪ್ರವೇಶ ಇಷ್ಟರಲ್ಲಿ ಆಕೆಯ ದಿನಚರಿಯು ಮುಗಿದು ಹೋಗುತ್ತಿತ್ತು. ಒಂದೆರಡು ಧಾರಾವಾಹಿಗಳು ಸ್ವಲ್ಪ ರಿಲೀಫ್ ಕೊಡುತ್ತಿದ್ದವು. ಆಗೆಲ್ಲ ನನ್ನ ಬದುಕು ಧಾರಾವಾಹಿಗಳ ಕಥೆಯ ಹಾಗೆ ಇಲ್ಲವಲ್ಲ ಎಂಬ ದುಃಖವೂ ಆಕೆಗೆ ಆಗುತ್ತಿತ್ತು.

ಈಗಲೂ ಆಕೆಗೆ ಐಡೆಂಟಿಟಿ ಇಲ್ಲ!

ಮೊಮ್ಮಕ್ಕಳು ಅಜ್ಜಿ ಅಂತ ಕರೆದು ತಿಂಡಿಗಾಗಿ ಓಡಿ ಬರುತ್ತಾರೆ. ಈ ಪಾಠ ಹೇಳಿಕೊಡು, ಈ ಪಾಠ ಹೇಳಿಕೊಡು ಎಂದು ದುಂಬಾಲು ಬೀಳುತ್ತಾರೆ. ಆಗ ಆಕೆಗೆ ಅರ್ಥ ಆಗದೆ ಹೋದಾಗ ‘ ಏನಜ್ಜಿ? ನಿನಗೆ ಏನೂ ಗೊತ್ತಿಲ್ಲ. ಹೋಗಜ್ಜಿ’ ಎಂದು ಅಣಕಿಸಿದಾಗ ನೋವಾಗುತ್ತದೆ. ನೆರೆಹೊರೆಯವರ ಜೊತೆಗೆ ಮಾತಿಗೆ ನಿಂತರೆ ಸಿನೆಮಾ, ಗಾಸಿಪ್, ಫ್ಯಾಷನ್ ಎಂದೆಲ್ಲ ಮಾತಾಡುತ್ತಾರೆ. ಆಗೆಲ್ಲ ಆಕೆಯ ಅಜ್ಞಾನವು ಆಕೆಯನ್ನು ಅಣಕಿಸುತ್ತದೆ. ಆಕೆ ಈಗ ಮನೆಯಿಂದ ಹೊರಗೆ ಹೋಗೋದನ್ನು ಬಿಟ್ಟಿದ್ದಾರೆ. ತವರು ಮನೆಗೆ ಹೋಗದೆ ಎಷ್ಟೋ ವರ್ಷಗಳು ಕಳೆದಿವೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ

ಆಕೆಯ ಗಂಡ ವಿ ಆರ್ ಎಸ್ ತೆಗೆದುಕೊಂಡು ಮನೆಯಲ್ಲಿಯೇ ಇದ್ದಾರೆ. ಪ್ರತೀ ಅರ್ಧ ಘಂಟೆಗೆ ಒಮ್ಮೆ ‘ ಓ ಇವಳೇ, ಟೀ ಮಾಡಿ ಕೊಡು’ ಎಂದು ಕರೆಯುತ್ತಲೆ ಇರುತ್ತಾರೆ. ಮಗ, ಸೊಸೆ ಸಂಜೆ ಆಫೀಸ್ ಮುಗಿಸಿ ಬಂದು ಲ್ಯಾಪ್ ಟಾಪ್ ಕುಟ್ಟುತ್ತಾ ಕೂರುತ್ತಾರೆ. ಮೊಮ್ಮಕ್ಕಳು ಹೊಮ್ ವರ್ಕ್, ಪ್ರಾಜೆಕ್ಟ್, ವಿಡಿಯೋ ಗೇಮ್ ಎಂದು ಮುಳುಗಿರುತ್ತಾರೆ.

ಆಕೆ ಇವತ್ತಿನ ಊಟ, ತಿಂಡಿಯ ಮೆನು ಮುಗಿಯಿತು, ನಾಳೆ ಎಂತ ಮಾಡುವುದು ಎಂದು ಲೆಕ್ಕ ಹಾಕುತ್ತ ತಡರಾತ್ರಿ ಹಾಸಿಗೆಗೆ ಒರಗುತ್ತಾರೆ.

ಆಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

Continue Reading
Advertisement
72 Hoorain bollywood film is ready to release in India
ದೇಶ26 mins ago

72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ

World Environment Day celebration at yadgiri
ಕರ್ನಾಟಕ32 mins ago

Yadgiri News: ಪರಿಸರ ಸಂರಕ್ಷಣೆಗೆ ಇರಲಿ ಎಲ್ಲರ ಕಾಳಜಿ: ಸಂಗಮೇಶ ಉಪಾಸೆ

New Parliament Buliding and loksabha election 2024
ಕರ್ನಾಟಕ33 mins ago

Lok Sabha Election 2024 : ಲೋಕಸಭೆಯಲ್ಲಿ ಕಾಂಗ್ರೆಸ್‌ ಮಣಿಸಲು ಬಿಜೆಪಿ-ಜೆಡಿಎಸ್‌ ಮೈತ್ರಿ ಪ್ರಸ್ತಾಪ!

World Environment Day in Raichur district
ಕರ್ನಾಟಕ34 mins ago

Raichur News: ವಿಶ್ವ ಪರಿಸರ ದಿನಾಚರಣೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣಕ್ಕೆ ವಿಶೇಷ ಜಾಗೃತಿ

Saalumarada Thimmakka World Environment Day
ಕರ್ನಾಟಕ47 mins ago

World Environment Day : ಕೆರೆ ಉಳಿಸಿ ಮರ ಬೆಳೆಸಿ ಎಂದ ಸಾಲುಮರದ ತಿಮ್ಮಕ್ಕ; ವಿಸ್ತಾರ ಅಭಿಯಾನಕ್ಕೆ ಭಾರಿ ಸ್ಪಂದನೆ

Congratulatory meeting by former minister Araga Jnanedra
ಕರ್ನಾಟಕ51 mins ago

Shivamogga News : ಮತದಾರರ ಸಮಸ್ಯೆಗೆ ಸ್ಪಂದಿಸಿರುವುದೇ ನನ್ನ ಗೆಲುವಿಗೆ ಕಾರಣ: ಆರಗ ಜ್ಞಾನೇಂದ್ರ

Sakshi Malik
ಕ್ರಿಕೆಟ್60 mins ago

Wrestlers Protest : ಕುಸ್ತಿಪಟುಗಳ ಬಾಯಿ ಮುಚ್ಚಿಸಿದರೇ ಅಮಿತ್​ ಶಾ? ಕೆಲಸಕ್ಕೆ ಮರಳಿದ ಸಾಕ್ಷಿ

World Environment Day celebration at Shirsi Forest College
ಉತ್ತರ ಕನ್ನಡ1 hour ago

Uttara Kannada News : ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಡಾ. ಆರ್. ವಾಸುದೇವ್

Monsoon Forecast 2023
ದೇಶ1 hour ago

Monsoon Forecast 2023 : ಹವಾಮಾನ ಇಲಾಖೆ VS ಸ್ಕೈಮೆಟ್; ಹೇಗಿರಲಿದೆ ಈ ಬಾರಿಯ ಮುಂಗಾರು ಮಳೆ?

Bus accident in aurad
ಕರ್ನಾಟಕ1 hour ago

ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್‌ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ15 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Chakravarthy Sulibele and MB Patil
ಕರ್ನಾಟಕ9 hours ago

Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

Sevanthige Flower Farming
ಕೃಷಿ9 hours ago

Krishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!

Horoscope Today
ಪ್ರಮುಖ ಸುದ್ದಿ15 hours ago

Horoscope Today : ಈ ನಾಲ್ಕು ರಾಶಿಯ ಉದ್ಯೋಗಿಗಳಿಗೆ ಇಂದು ಅದೃಷ್ಟದ ದಿನವಂತೆ!

Mangalore Moral Policing News
ಉಡುಪಿ1 day ago

Video: ನಮ್ಮ ನಿದ್ದೆಗೆಡಿಸಿದ್ದಾರೆ; ಮುಸ್ಲಿಮರೊಂದಿಗೆ ಬೀಚ್​​ಗೆ ಬಂದಿದ್ದ ಹುಡುಗಿಯರ ವಿರುದ್ಧ ನಿಂತ ಮಹಿಳೆಯರು

horoscope today
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಲೇಬೇಕು!

South facing house vastu
ಭವಿಷ್ಯ2 days ago

Vastu Tips : ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆ ಕೂಡ ಶುಭವಂತೆ! ಹೌದೇ? ಏನೆನ್ನುತ್ತದೆ ವಾಸ್ತು ಶಾಸ್ತ್ರ?

jackfruit
ಕೃಷಿ2 days ago

Krishi Khajane : ಹುಲುಸಾಗಿ ಹಲಸು ಬೆಳೆಯಿರಿ, ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ!

Bus Driver
ಕರ್ನಾಟಕ2 days ago

Viral Video: ಬೆಂಗಳೂರು ಟ್ರಾಫಿಕ್‌ನಲ್ಲೇ ಊಟ ಮಾಡಿ ಮುಗಿಸಿದ ಡ್ರೈವರ್! ಇಲ್ಲಿದೆ ನೋಡಿ ವಿಡಿಯೊ

horoscope today
ಪ್ರಮುಖ ಸುದ್ದಿ3 days ago

Horoscope Today : ಈ ಮೂರು ರಾಶಿಯವರಿಗೆ ಖರ್ಚು ಹೆಚ್ಚು; ಇಂದು ನಿಮ್ಮ ಭವಿಷ್ಯ ಹೀಗಿದೆ

Siddaramaiah
ಕರ್ನಾಟಕ3 days ago

Congress Guarantee : ಹೂ ಈಸ್‌ ಯುವರ್‌ ಯಜಮಾನಿ? ಸಿದ್ದರಾಮಯ್ಯ ಸುದ್ದಿಗೋಷ್ಠಿಯ ತಮಾಷೆ ಪ್ರಸಂಗಗಳು ಇಲ್ಲಿವೆ!

ಟ್ರೆಂಡಿಂಗ್‌

error: Content is protected !!