ರಾಜ ಮಾರ್ಗ ಅಂಕಣ : ರೋಬೋಟಿಗೂ ಇವರಿಗೂ ವ್ಯತ್ಯಾಸವಿಲ್ಲ! ಭಾವನೆಗಳೇ ಇಲ್ಲದವರ ಜತೆ ಬದುಕೋದು ಹೇಗೆ? Vistara News
Connect with us

ಅಂಕಣ

ರಾಜ ಮಾರ್ಗ ಅಂಕಣ : ರೋಬೋಟಿಗೂ ಇವರಿಗೂ ವ್ಯತ್ಯಾಸವಿಲ್ಲ! ಭಾವನೆಗಳೇ ಇಲ್ಲದವರ ಜತೆ ಬದುಕೋದು ಹೇಗೆ?

ರಾಜ ಮಾರ್ಗ ಅಂಕಣ : ಭಾವನೆಗಳೇ ಇಲ್ಲದ ಮನುಷ್ಯರ ಜತೆ ಬದುಕುವುದಾದರೂ ಹೇಗೆ? ಸಂಸಾರ ಎಂದರೆ ಬರೀ ಕರ್ತವ್ಯ ಅಲ್ಲ, ಭಾವನೆಗಳೇ ಎಲ್ಲ ಅಂತ ಅವರಿಗೆ ಅರ್ಥ ಮಾಡಿಸೋದು ಯಾರು?

VISTARANEWS.COM


on

Robot family
Koo
RAJAMARGA

ಕಳೆದ ಮೂವತ್ತು ವರ್ಷಗಳಿಂದ ಸಾವಿರಾರು ಮಾನವೀಯ ಸಂಬಂಧಗಳ ಬಗ್ಗೆ ತರಬೇತಿ ಕಾರ್ಯಗಾರಗಳನ್ನು ನಡೆಸುತ್ತಾ ಬಂದ ನನಗೆ ತುಂಬಾ ಆಶ್ಚರ್ಯ ಮತ್ತು ಆಘಾತ ತಂದು ಕೊಟ್ಟ ಒಂದು ಸಂಬಂಧದ ಬಗ್ಗೆ ಇವತ್ತು ಬರೆಯಬೇಕು. ಇಂತಹವರು ನಮ್ಮ ಸುತ್ತ ಇದ್ದರೂ ಇರಬಹುದು. ಒಂದು ನಿಜವಾದ ಉದಾಹರಣೆಯಿಂದ ಇಂದು ನನ್ನ ಲೇಖನ ಆರಂಭಿಸುತ್ತೇನೆ.

ಆ ಕುಟುಂಬ ತುಂಬಾನೇ ವಿಚಿತ್ರ ಆಗಿತ್ತು!

ನಮ್ಮ ಊರಿನಲ್ಲಿ ಮಧ್ಯಮ ವರ್ಗದ ಒಂದು ವಿಚಿತ್ರವಾದ ಕುಟುಂಬ ಇತ್ತು. ಆ ಕುಟುಂಬದಲ್ಲಿ ಮಾತುಕತೆ ನಿಂತು ಹೋಗಿ ಎಷ್ಟೋ ವರ್ಷ ಆಗಿತ್ತು! ಹೆಂಡತಿ ಏನಾದರೂ ಗಂಡನಿಗೆ ಹೇಳಬೇಕು ಅನ್ನಿಸಿದಾಗ ಮಕ್ಕಳ ಮೂಲಕ ಹೇಳುವ ಅಭ್ಯಾಸ ಮಾಡಿಕೊಂಡಿದ್ದರು. ಗಂಡನು ಹೆಂಡತಿಯ ಜೊತೆಗೆ ಮಾತಾಡುವಾಗ ಗೋಡೆಗೆ ಮುಖ ಮಾಡಿ ಉತ್ತರಿಸುತ್ತಾನೆ! ಅವರ ಮನೆಯಲ್ಲಿ ಹಬ್ಬ, ಉತ್ಸವಗಳ ಆಚರಣೆಗಳು ಇಲ್ಲದೆ ಎಷ್ಟೋ ವರ್ಷಗಳೇ ಆಗಿ ಹೋಗಿದ್ದವು! ಅವರ ಮನೆಗೆ ನೆಂಟರು, ಆಪ್ತರು ಬರುವುದನ್ನು ಬಿಟ್ಟಿದ್ದರು.

ಅವರ ನಾಲ್ಕು ಮಕ್ಕಳು ಕೂಡ ಮನೆಯಲ್ಲಿ ಅಂತರ್ಮುಖಿಗಳು! ಹೊರಗೆ ಬಂದರೆ ಅವರೆಲ್ಲರೂ ನ್ಯಾಚುರಲ್. ಈ ಬಗ್ಗೆ ಗಂಡನನ್ನು ಮಾತನಾಡಿಸಿದಾಗ ಅವರ ಉತ್ತರ ನನಗೆ ಶಾಕ್ ನೀಡಿತ್ತು.

“ನನಗೆ ಅವಳು ಇಷ್ಟ ಇರಲಿಲ್ಲ. ನಮ್ಮ ಹೆತ್ತವರು ಬಲವಂತ ಆಗಿ ನಮಗೆ ಮದುವೆ ಮಾಡಿದ್ದರು. ನಾನು ಗಂಡನಾಗಿ ನನ್ನ ಕರ್ತವ್ಯ ಮಾತ್ರ ಮಾಡುತ್ತಿದ್ದೇನೆ!”

ಅಂದ ಹಾಗೆ ಅವರ ಕರ್ತವ್ಯದ ಫಲವಾಗಿ ನಾಲ್ಕು ಮಕ್ಕಳು ಹುಟ್ಟಿದ್ದಾರೆ! ಆ ಮಕ್ಕಳೂ ಮನೆಯಲ್ಲಿ ಒಂದು ಮಾತು ಆಡುತ್ತಿರಲಿಲ್ಲ! ಇತ್ತೀಚೆಗೆ ಗಂಡ ತೀರಿಕೊಂಡರು. ಮಕ್ಕಳು, ಹೆಂಡತಿ ಯಾರೂ ಕಣ್ಣೀರು ಹಾಕಲೇ ಇಲ್ಲ! ಮಕ್ಕಳು ತಮ್ಮ ತಂದೆಯ ಉತ್ತರಕ್ರಿಯೆ ಮಾಡಿ ತಮ್ಮ ಕರ್ತವ್ಯ ಮುಗಿಸಿದರು!

ಇದು ನಮಗೆಲ್ಲಾ ಬಹಳ ಅತಿರೇಕದ ಕುಟುಂಬ ಅನ್ನಿಸಬಹುದು. ಆದರೆ ನಮ್ಮ ಸುತ್ತ ಹೀಗೆ ಭಾವನೆಗಳೇ ಇಲ್ಲದೆ ಯಾಂತ್ರಿಕ ಆಗಿ ಬದುಕುವವರು ತುಂಬಾ ಮಂದಿ ಇದ್ದಾರೆ.

ಯಾಂತ್ರಿಕವಾಗಿ ಬದುಕುವವರು!

ಅವರ ಜೀವನದಲ್ಲಿ ಸಂತಸ, ದುಃಖ, ಸಂಭ್ರಮ ಮೊದಲಾದ ಯಾವ ಭಾವನೆಗಳು ಇರುವುದಿಲ್ಲ.
ಯಾರಿಂದಲಾದರೂ ಒಂದು ಉಪಕಾರ ಆಯಿತು ಅಂತಾದರೆ ಒಂದು ಥ್ಯಾಂಕ್ಸ್ ಬಿಸಾಡಿ ಅವರು ತಮ್ಮ ಕರ್ತವ್ಯ ಮುಗಿಸುತ್ತಾರೆ! ತಮ್ಮ ಗೆಳೆಯರು, ಓರಗೆಯವರು, ಒಡಹುಟ್ಟಿದವರು, ಹೆಂಡತಿ, ಮಕ್ಕಳು ಎಲ್ಲರ ಬಗ್ಗೆಯೂ ಅವರದ್ದು ನಿರ್ಲಿಪ್ತ ಭಾವ! ಬೇರೆ ಬೇರೆ ಸಂದರ್ಭದಲ್ಲಿ ಇಂತಹ ಜನರು ಆಡುವ ಮಾತುಗಳನ್ನು ಕೇಳಿ.

ಎದುರಿಗೆ ಮಾತ್ರ ಮನುಷ್ಯರು ಹಿಂದಿನಿಂದ ಯಂತ್ರಗಳು

ನೂರು ಮಂದಿ – ನೂರು ಮಾತು!

1) ಶಿಕ್ಷಕಿ – ನಾನು ನನ್ನ ಪಾಠ ಮುಗಿಸಿದ್ದೇನೆ. ಇನ್ನು ಏನಿದ್ದರೂ ಮಕ್ಕಳು ಓದಿಕೊಳ್ಳಬೇಕು!
2) ಪೋಷಕರು – ಅಷ್ಟು ಖರ್ಚು ಮಾಡಿ ಫೀಸ್ ತುಂಬಿಸಿ ಮಗನನ್ನು ದೊಡ್ಡ ಶಾಲೆಗೆ ಸೇರಿಸಿದ್ದೇವೆ. ಹಾಗಿರುವಾಗ ಮಾರ್ಕ್ಸ್ ತೆಗೆಯಲು ಏನು ಅಡ್ಡಿ?
3) ಗಂಡ ಹೆಂಡತಿಗೆ – ನಾನು ದುಡಿದು ಸುಸ್ತಾಗಿ ಮನೆಯ ಹೊಣೆಯನ್ನು ಹೊತ್ತಿಲ್ಲವಾ?
ನಿನಗೆ ಮಕ್ಕಳ ಜವಾಬ್ದಾರಿ ಹೊರಲು ಏನು ಅಡ್ಡಿ?
4) ಹೆಂಡತಿ ಗಂಡನಿಗೆ – ನಾನು ನನ್ನ ತವರು ಮನೆ, ಅಪ್ಪ ಅಮ್ಮ ಎಲ್ಲಾ ಬಿಟ್ಟು ನಿಮ್ಮನ್ನು ನಂಬಿ ನಿಮ್ಮ ಹಿಂದೆ ಬಂದಿಲ್ಲವೇ? ನೀವು ತಾನೇ ನನ್ನನ್ನು ನೋಡಿಕೊಳ್ಳಬೇಕು!

5) ಸೋದರಿಯರು – ಹಿರಿಯಣ್ಣ ಆಗಿ ಹುಟ್ಟಿದ ಮೇಲೆ ತಂಗಿಯರ ಮದುವೆ ಮಾಡಬೇಕು ಅಲ್ವಾ? ನಾವೇನು ಸಿಕ್ಕವರ ಜೊತೆಗೆ ಓಡಿ ಹೋಗುವುದಾ?
6) ಬೆಳೆದ ಮಕ್ಕಳು – ಎಲ್ಲರ ಹಾಗೆ ನಮ್ಮ ಅಪ್ಪ, ಅಮ್ಮ ನಮಗಾಗಿ ಏನೂ ಆಸ್ತಿ ಮಾಡಿಲ್ಲ. ಮತ್ತೆ ನಮ್ಮನ್ನು ಯಾಕೆ ಹುಟ್ಟಿಸಬೇಕಿತ್ತು?
7) ಗೆಳೆಯ – ಅವಳು ನನಗೆ ಒಂದು ಗಿಫ್ಟ್ ತಂದು ಕೊಟ್ಟಳು. ಒಂದು ಥ್ಯಾಂಕ್ಸ್ ಬಿಸಾಡಿ ಕಳುಹಿಸಿದೆ.
8) ವಿದ್ಯಾರ್ಥಿ – ನಮ್ಮ ಶಿಕ್ಷಕರು ಏನು ಧರ್ಮಕ್ಕೆ ಪಾಠ ಮಾಡ್ತಾರ? ಅವರಿಗೆ ಸಂಬಳ ಕೊಟ್ಟಿಲ್ಲವ? ಮತ್ತೆ ಯಾಕೆ ನಾವು ಅವರಿಗೆ ಋಣಿ ಆಗಿರಬೇಕು?

9) ಹದಿಹರೆಯದ ಹುಡುಗ/ ಹುಡುಗಿ – ಅಪ್ಪ ಅಮ್ಮ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಲ್ವಾ? ಅವರ ಕಷ್ಟ ಹೇಳುತ್ತಾ ಕೂತರೆ ನಾವು ಕೇಳುತ್ತಾ ಇರಬೇಕಾ?
10) ವೈದ್ಯ – ನಾನು ನನ್ನ ಡ್ಯೂಟಿ ಮಾಡ್ತಾ ಇದ್ದೇನೆ. ಬದುಕಿಸುವುದು ನಮ್ಮ ಕೈಯ್ಯಲ್ಲಿ ಇಲ್ಲ!
11) ಅವನು – ಸಣ್ಣ ಸಣ್ಣ ಕಾರಣಕ್ಕೆ ಅವನು ಅಳೋದು ಯಾಕೆ? ಅವನು ಗಂಡು ಹುಡುಗ ತಾನೇ?
12) ಅವಳು – ನಾವು ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಬೇಕು. ಅಳೋ ಸೀನೇ ಇಲ್ಲ!
13) ನಾವು – ಆಚೆಯ ಮನೆಯ ಹುಡುಗ ಸೆಕೆಂಡ್ ಕ್ಲಾಸ್ ಪಾಸ್ ಅಂತೆ. ಅದಕ್ಕೆಲ್ಲ ಅವರ ಸಂಭ್ರಮ ಜಾಸ್ತಿ ಆಯ್ತಲ್ಲವಾ?

ಇವರಿಗೆ ಇಡೀ ವರ್ಷವೂ ಸೂತಕದ ದಿನಗಳು!

ಇಂತಹ ವ್ಯಕ್ತಿಗಳು ನಿತ್ಯ ಸೂತಕದ ಮನಸ್ಥಿತಿಯವರು. ಜೀವನದ ಸಣ್ಣ ಸಣ್ಣ ಖುಷಿ ಅವರು ಎಂಜಾಯ್ ಮಾಡೋದೇ ಇಲ್ಲ! ದೊಡ್ಡ ಸಾಧನೆ ಅವರು ಮಾಡುವುದೂ ಇಲ್ಲ!
ಇಂಥ ಉಸಿರುಕಟ್ಟುವ ಮೈಂಡ್ ಸೆಟ್ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದರೆ ನಾವು ಬದುಕುವುದು ಹೇಗೆ? ಇವರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ಮಾಡುತ್ತಾರೊ ಇಲ್ಲವೋ ಗೊತ್ತಿಲ್ಲ, ಆದರೆ ಬೇರೆಯವರ ಕರ್ತವ್ಯಗಳ ಬಗ್ಗೆ ಪದೇಪದೆ ನೆನಪಿಸುತ್ತಾರೆ!

ರೋಬೋಟಿಗೂ ಇವರಿಗೂ ಏನಾದರೂ ವ್ಯತ್ಯಾಸ ಇದೆಯಾ?

ನಿರ್ಭಾವುಕರಾದ, ನೂರಕ್ಕೆ ನೂರರಷ್ಟು ನಿರ್ಲಿಪ್ತರಾದ, ಜೀವನ ಇಡೀ ಕರ್ತವ್ಯ ಎಂದು ಬಾಯಿ ಬಡಿದುಕೊಳ್ಳುವ, ಜೀವನದ ಸಣ್ಣ ಸಣ್ಣ ಖುಷಿಗಳನ್ನು ಸೆಲೆಬ್ರೇಟ್ ಮಾಡಲೂ ಕಂಜೂಸ್ ಮಾಡುವ, ನಕ್ಕರೆ ಮುತ್ತು ಉದುರಿಹೋದೀತು ಎಂದು ಭಾವಿಸುವ, ಸದಾ ಅಂತರ್ಮುಖಿಗಳಾಗಿ ಒಳಗೊಳಗೇ ಸುಖಿಸುವ, ಮಕ್ಕಳಿಗೆ ಸಲಿಗೆ ಕೊಟ್ಟರೆ ತಲೆಯ ಮೇಲೆ ಬಂದು ಕೂರುತ್ತಾರೆ ಎಂದು ಯೋಚನೆ ಮಾಡುವ ಹೆತ್ತವರು, ಮಕ್ಕಳನ್ನು ಹತ್ತಿರ ಕರೆದು ಮಾತಾಡಿಸಿದರೆ ನಿಯಂತ್ರಣ ತಪ್ಪುತ್ತಾರೆ ಎಂದು ಭಾವಿಸುವ ಶಿಕ್ಷಕರು….ಇಂತಹವರು ನಮ್ಮ ನಡುವೆ ಖಂಡಿತವಾಗಿಯೂ ಇದ್ದಾರೆ.

ಇಂತಹವರಿಗೂ ರೋಬೋಟಿಗೂ ಏನಾದರೂ ವ್ಯತ್ಯಾಸ ಇದೆಯಾ?

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಪ್ರೀತಿಯ ಅಪ್ಪು ಸರ್‌, ನಿಮ್ಮ ಸಿನಿಮಾ, ಬದುಕು, ನಡವಳಿಕೆಗಳು ಸರ್ವಕಾಲಕ್ಕೂ ಸ್ಫೂರ್ತಿ

ಅಂಕಣ

ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!

ವಿಶ್ವದಾದ್ಯಂತ ಸೈಬರ್ ವಂಚಕರು ನಮ್ಮ ಎರಡು ದುರ್ಬಲತೆಯನ್ನು ಬಳಸಿಕೊಳ್ಳಲು ನೋಡುತ್ತಿರುತ್ತಾರೆ. ಮೊದಲನೆಯದು ಭಯ, ಎರಡನೆಯದು ದುರಾಸೆ. ಹಾಗಾಗಿ, ಇಂದಿನ ಈ ಸೈಬರ್ ಬ್ರಹ್ಮಾಂಡದಲ್ಲಿ ವ್ಯವಹರಿಸುವಾಗ ಜಾಣರಾಗಿ, ಜಾಗರೂಕರಾಗಿರಿ. ಸುಖವಾದ ಸೈಬರ್ ಸರ್ಫ್‌ಗೆ ಹನ್ನೆರಡು ಸೂತ್ರಗಳು ಇಲ್ಲಿವೆ.

VISTARANEWS.COM


on

Edited by

cyber secutrity
Koo

cyber mitra column logo

ಅಗರ್ತಲಾದ ಇಕ್ಫಾಯಿ (ICAFI) ಯೂನಿವರ್ಸಿಟಿಯಿಂದ ಹೊರಡ್ತಾ ಇದ್ದೆ. ಆಗ ನನ್ನ ಫೇಸ್‌ಬುಕ್ ಗೆಳೆಯರೊಬ್ಬರು ಕರೆ ಮಾಡಿ ಅವರ ಪರಿಚಿತರೊಬ್ಬರು ಸೈಬರ್ ವಂಚನೆಗೀಡಾಗಿದ್ದಾರೆ. ಅವರಿಗೆ ನಿಮ್ಮ ಸಲಹೆ, ಮಾರ್ಗದರ್ಶನ ಬೇಕು, ನಿಮ್ಮ ನಂಬರ್ ಕೊಡಬಹುದಾ ಎಂದರು. ಅವರಿಗೆ ಒಪ್ಪಿಗೆ ಕೊಟ್ಟು ಏರ್‌ಪೋರ್ಟ್ ತಲುಪಿದೆ. ಅಲ್ಲಿ ಲಗೇಜ್ ಚೆಕ್ಇನ್, ಸೆಕ್ಯೂರಿಟಿ ಚೆಕ್ಇನ್ ಮುಗಿಸುವಷ್ಟರಲ್ಲಿ ಒಂದು ಅಪರಿಚಿತ ನಂಬರ್‌ನಿಂದ ಪೋನ್ ರಿಂಗಣಿಸಿತು. ನನ್ನ ಸ್ನೇಹಿತರ ಪರಿಚಿತರಿರಬಹುದೆಂದು ಉತ್ತರಿಸಿದೆ. ಅವರೇ ಕರೆ ಮಾಡಿದ್ದರು.

ʼನಾನು ಚಕ್ರಪಾಣಿ (ಹೆಸರು ಬದಲಾಯಿಸಿದ್ದೇನೆ), ನಿಮ್ಮ ಫೇಸ್‌ಬುಕ್ ಸ್ನೇಹಿತರು ಹೇಳಿದ್ರಲ್ಲ, ನಾನೇʼ ಅಂದರು. ಅವರು ಯಾವುದೋ ಕೆಲಸದಲ್ಲಿದ್ದಾಗ ಅವರ ಬ್ಯಾಂಕಿನಿಂದ ಒಂದು SMS ಬಂತಂತೆ. ಅದರಲ್ಲಿ ಅವರ KYC ನವೀಕರಿಸದಿದ್ದರೆ ಅಕೌಂಟ್ ಬ್ಲಾಕ್ ಆಗುತ್ತೆ ಅಂತ ಇತ್ತಂತೆ. ತಕ್ಷಣ ನವೀಕರಿಸುವುದಕ್ಕೆ ಈ ಲಿಂಕ್ ಕ್ಲಿಕ್ ಮಾಡಿ ಎಂದು ಒಂದು ಲಿಂಕ್ ಕೊಟ್ಟಿದ್ರಂತೆ. ಕೆಲಸದ ನಡುವೆ ಬಂದ ಈ SMSಗೆ ಗಾಬರಿಯಿಂದ ಗಡಿಬಿಡಿಯಲ್ಲಿ ಕ್ಲಿಕ್ ಮಾಡಿ ತಮ್ಮ ಮಾಹಿತಿಯನ್ನು ಕೊಟ್ಟರಂತೆ. ಸ್ವಲ್ಪ ಹೊತ್ತಿನಲ್ಲೇ ಅವರ ಅಕೌಂಟಿನಿಂದ ತೊಂಬತ್ತು ಸಾವಿರ ರೂಪಾಯಿ ಡೆಬಿಟ್ ಆಗಿದೆ ಎಂದು ಇನ್ನೊಂದು ಮೆಸೇಜ್ ಬಂತಂತೆ. OTP ಕೂಡ ಬರದೇ ಅಕೌಂಟಿನಿಂದ ಹಣ ಹೋಗಿದೆ, ಏನು ಮಾಡೋದು ಅಂತ ಅಲವತ್ತುಕೊಂಡರು. ಅವರಿಗೆ ಧೈರ್ಯ ಹೇಳಿ ಮೊಟ್ಟಮೊದಲು ಕೈಗೊಳ್ಳಬೇಕಾದ ಕಾರ್ಯಗಳನ್ನು ತಿಳಿಸಿ, ನಾನು ಬೆಂಗಳೂರಿನ ವಿಮಾನ ಹತ್ತಿದೆ.

ಬೆಂಗಳೂರಿಗೆ ಬಂದು ಒಂದೆರಡು ದಿನಗಳ ನಂತರ ಮತ್ತೆ ಚಕ್ರಪಾಣಿಯವರಿಗೆ ಕರೆ ಮಾಡಿ ಮಾತನಾಡಿದೆ. ಅವರೂ ಕೂಡ ಅವರ ಊರಿನ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದರು. ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (https://www.cybercrime.gov.in/) ನಲ್ಲೂ ಅವರ ದೂರು ದಾಖಲಿಸಲು ಸಲಹೆ ನೀಡಿದೆ. ಮತ್ತು ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರೊ. ಅನಂತ ಪ್ರಭು ಅವರ ನೆರವನ್ನೂ ಪಡೆದುಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದೆ. ಅದೇ ರೀತಿ ಅನಂತ ಪ್ರಭುಗಳಿಗೂ ಮೆಸೇಜ್ ಮಾಡಿ ಚಕ್ರಪಾಣಿಯವರಿಗೆ ಬೇಕಾದ ಸಹಾಯ ಮಾಡಲು ಕೇಳಿಕೊಂಡೆ.

ಕಳೆದ ವಾರ, ಚಕ್ರಪಾಣಿಯವರು ಕರೆ ಮಾಡಿ ಹಣ ಪುನಃ ಅಕೌಂಟಿನಲ್ಲಿ ಬಂದಿದೆ ಎಂದು ಬಹಳ ಸಂತೋಷದಿಂದ ಹೇಳಿದರು. ಆದರೆ ಸದ್ಯಕ್ಕೆ ಬ್ಲಾಕ್ ಆಗಿದೆ. ಕೆಲವು ದಿನಗಳಲ್ಲಿ ವ್ಯವಹಾರಕ್ಕೆ ಸಿಗಬಹುದು ಅಂತ ಹೇಳಿದರು. ಸಕಾಲಿಕ ಸಲಹೆಗಳಿಗೆ ಧನ್ಯವಾದಗಳನ್ನೂ ಹೇಳಿದರು. ನಾನು ಅವರಿಗೆ ರಿಸರ್ವ್ ಬ್ಯಾಂಕಿನ ಸೈಬರ್ ಸೆಕ್ಯೂರಿಟಿಯ ಧ್ಯೇಯ ವಾಕ್ಯದಿಂದ “ಜಾಣರಾಗಿ, ಜಾಗರೂಕರಾಗಿರಿ” ಎಂದು ಹಾರೈಸಿದೆ.

ಕೋವಿಡ್ ಮಹಾಮಾರಿಯ ಸಮಯದಿಂದ ನಮ್ಮೆಲ್ಲರ ಆನ್ಲೈನ್ ವಹಿವಾಟು ಜಾಸ್ತಿ ಆಗಿದೆ. ಈ ಸಂದರ್ಭದಲ್ಲಿ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಕೋವಿಡ್ ಕಾಲದಲ್ಲಿ ರೋಗ ಬಾರದಂತೆ ಹೇಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೆವೋ ಹಾಗೆ ಸೈಬರ್ ಲೋಕದಲ್ಲಿ ವ್ಯವಹರಿಸುವಾಗಲೂ ಕೆಲವು ಅತಿ ಮುಖ್ಯವಾದ ಸುರಕ್ಷತಾ ಸಲಹೆಗಳನ್ನು ಪಾಲಿಸಿದರೆ ನಮ್ಮ ಆನ್ಲೈನ್ ಜೀವನವೂ ನಿರಾತಂಕವಾಗಿರುತ್ತದೆ.

ದೇವರು ನಾವಿರುವ ಭೂಮಿಯನ್ನು ಮತ್ತು ಜೀವ ವೈವಿಧ್ಯವನ್ನು ಸೃಷ್ಟಿಸಿದಂತೆ, ನಾವು ಸೈಬರ್‌ಸ್ಪೇಸ್ ಎಂಬ ಹೊಸ ಬ್ರಹ್ಮಾಂಡವನ್ನು ರಚಿಸಿದ್ದೇವೆ. ಎಲ್ಲದರಂತೆ ಅದರಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇದೆ. ಈ ಹೊಸ ಆಯಾಮಗಳು ಅದ್ಭುತಗಳಿಗಿಂತ ಹೆಚ್ಚು ಅನಾಹುತಗಳನ್ನು ಹುಟ್ಟುಹಾಕುವುದೇ ಎಂದು ನಮಗೆ ಇನ್ನೂ ತಿಳಿದಿಲ್ಲ, ಆದರೆ ಹಿಂತಿರುಗಲು ತುಂಬಾ ತಡವಾಗಿದೆ.‌

ಇದನ್ನೂ ಓದಿ: ವಾಕಿಂಗ್‌ ಚಿತ್ರಗಳು: ಚಾಟ್‌ ಜಿಪಿಟಿ- ರೋಬಾಟ್ ಪರ್‌ಫೆಕ್ಟು, ಹಲವು ಎಡವಟ್ಟು

ನಾವು ತಂತ್ರಜ್ಞಾನ ಮತ್ತು ಇಂಟರ್ನೆಟ್ಟಿನ ಮೇಲೆ ಎಷ್ಟು ಅವಲಂಬಿತರಾಗಿದ್ದೇವಲ್ವಾ? ಬೆಳಿಗ್ಗೆ ಎದ್ದೊಡನೆ ಕಣ್ಮುಂದೆ ಬರೋದು ಮೊಬೈಲ್ ಮತ್ತು ಅದರಲ್ಲಿ ಬಂದ ಮೆಸೇಜುಗಳ ಅವಲೋಕನ. ಹೀಗಿರುವಾಗ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕಲ್ವೇ? ಅದಕ್ಕಾಗಿ ಈ ಕೆಳಗಿನ ಕೆಲವು ಸಲಹೆಗಳನ್ನು ಪಾಲಿಸಬಹುದು. ಸುಖವಾದ ಸೈಬರ್ ಸರ್ಫ್‌ಗೆ ಹನ್ನೆರಡು ಸೂತ್ರಗಳು.

  1. ಕ್ಲಿಕ್ಕಿಸುವ ಮೊದಲು ಯೋಚಿಸಿ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಅಂತ ಗಾದೆನೇ ಇದೆ ಅಲ್ವಾ?
  2. ಸುಭದ್ರವಾದ ಮತ್ತು ವಿಭಿನ್ನವಾದ ಪಾಸ್‌ವರ್ಡ್‌ಗಳನ್ನು ಬಳಸಿ.
  3. ನಿಮ್ಮ ಎಲ್ಲಾ ಆನ್‌ಲೈನ್ ಅಕೌಂಟುಗಳಿಗೂ ಮಲ್ಟಿ-ಫ್ಯಾಕ್ಟರ್ ಅಥೆಂಟಿಫಿಕೇಷನ್ (MFA) ಅಥವಾ ಎರಡು ಫ್ಯಾಕ್ಟರ್ ಸೆಕ್ಯೂರಿಟಿ ಅಳವಡಿಸಿಕೊಳ್ಳಿ.
  4. ನಿಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್/ಡೆಸ್ಕ್‌ಟಾಪ್‌ಗಳ ಸಾಫ್ಟವೇರನ್ನು ನಿಯಮಿತವಾಗಿ ಅಪ್‌ಡೇಟ್ ಮಾಡ್ಕೊಳ್ತಿರಿ.
  5. ಫೈರ್ ವಾಲ್ ಮತ್ತು anti-ವೈರಸ್ ಬಳಸಿ.
  6. ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡನ್ನು ಆದಷ್ಟೂ ಕಡಿಮೆ ಬಳಸಿ.
  7. ಸೈಬರ್ ಜಗತ್ತಿನ ಸುರಕ್ಷತೆಯ ಬಗ್ಗೆ ಜಾಣರಾಗಿರಿ.
  8. ಅಪರಿಚಿತ ಮತ್ತು ಅಸುರಕ್ಷಿತ ಜಾಲತಾಣಗಳಿಗೆ ಭೇಟಿ ಮಾಡಬೇಡಿ.
  9. ಅನವಶ್ಯಕ ಡೌನ್‌ಲೋಡ್ ಮಾಡಬೇಡಿ.
  10. ನಿಮ್ಮ ಮುಖ್ಯವಾದ ದತ್ತಾಂಶ (data)ವನ್ನು ಬ್ಯಾಕಪ್ ಮಾಡ್ಕೊಳಿ.
  11. ಉಚಿತವಾಗಿ ಸಿಗುತ್ತೆ ಅಂತ ಸಾರ್ವಜನಿಕ ವೈಫೈ(WiFi) ಬಳಸಬೇಡಿ.
  12. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಏರ್ಪೋರ್ಟ್‌ಗಳಲ್ಲಿ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಚಾರ್ಜ್‌ಗೆ ಹಾಕುವಾಗ ಡೇಟಾ ಅಥವಾ ವೈಫೈ ಆಫ್ ಮಾಡಿಕೊಳ್ಳಿ. ನಿಮ್ಮ ಡಿವೈಸನ್ನು ಪೂರ್ತಿ ಆಫ್ ಮಾಡಿ ಚಾರ್ಜ್ ಮಾಡೋದು ಬಹಳ ಒಳ್ಳೆಯದು.

ವಿಶ್ವದಾದ್ಯಂತ ಸೈಬರ್ ವಂಚಕರು ನಮ್ಮ ಎರಡು ದುರ್ಬಲತೆಯನ್ನು ಬಳಸಿಕೊಳ್ಳಲು ನೋಡುತ್ತಿರುತ್ತಾರೆ. ಮೊದಲನೆಯದು ಭಯ, ಎರಡನೆಯದು ಆಸೆ (ದುರಾಸೆ). ಮೇಲಿನ ಘಟನೆಯಲ್ಲಿ ಬಳಕೆಯಾಗಿದ್ದು ಭಯ. ಎಲ್ಲಿ ತಮ್ಮ ಅಕೌಂಟ್ ಬ್ಲಾಕ್ ಆಗಿಬಿಡುವುದೋ ಎನ್ನುವ ಭಯದಲ್ಲಿ ಚಕ್ರಪಾಣಿಯವರು smsನಲ್ಲಿದ್ದ ಲಿಂಕ್ ಒತ್ತಿಬಿಟ್ಟರು. ಇನ್ನೊಂದು ರೀತಿಯ ವಂಚನೆಯಲ್ಲಿ ನಮ್ಮಲ್ಲಿ ಆಸೆ (ದುರಾಸೆ) ಹುಟ್ಟಿಸಿ ನಮ್ಮಿಂದ ಅವರಿಗೆ ಬೇಕಾದ ಮಾಹಿತಿ ಪಡೆಯುತ್ತಾರೆ.

ಹಾಗಾಗಿ, ಇಂದಿನ ಈ ಸೈಬರ್ ಬ್ರಹ್ಮಾಂಡದಲ್ಲಿ ವ್ಯವಹರಿಸುವಾಗ ಜಾಣರಾಗಿ, ಜಾಗರೂಕರಾಗಿರಿ.

(ಸೈಬರ್‌ ಸುರಕ್ಷತೆಯ ಬಗ್ಗೆ ಮನದಟ್ಟು ಮಾಡಿಕೊಡುವ ಈ ನೂತನ ಅಂಕಣ ಪ್ರತಿವಾರ ಪ್ರಕಟವಾಗಲಿದೆ)

ಇದನ್ನೂ ಓದಿ: ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಮುಂದಿರುವ ಸವಾಲುಗಳು

Continue Reading

ಅಂಕಣ

Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?

ಈಗ ರಂಜಾನ್‌ ಮಾಸ. ಮುಸ್ಲಿಂ ಬಾಂಧವರು ಇಡೀ ದಿನ ಉಪವಾಸ (Ramzan Fasting) ಆಚರಿಸಿ ದೇಹ ಮತ್ತು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವ ಮಹಾ ಸಂಕಲ್ಪದಲ್ಲಿದ್ದಾರೆ. ಹಾಗಿದ್ದರೆ ಈ ಉಪವಾಸದ ಹಿಂದಿನ ವೈಜ್ಞಾನಿಕ ಸಂಗತಿಗಳೇನು? ಹಾಶಿಂ ಬನ್ನೂರು ವಿವರಿಸಿದ್ದಾರೆ.

VISTARANEWS.COM


on

Edited by

Ramzan fasting
Koo

ಹಾಶಿಂ ಬನ್ನೂರು (ಲೇಖಕರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ)
ಇಸ್ಲಾಮಿಕ್ ಹಿಜರಿ ಕ್ಯಾಲೆಂಡರ್ ಪ್ರಕಾರ ಹನ್ನೆರಡು ತಿಂಗಳುಗಳಲ್ಲಿ ಅತ್ಯಂತ ಶ್ರೇಷ್ಠವಾದಂತಹ ತಿಂಗಳಾಗಿದೆ ಪವಿತ್ರ ರಮಳಾನ್. ಎಲ್ಲಾ ತಿಂಗಳುಗಳ ರಾಜ ಎಂಬ ಕೀರ್ತಿಯೂ ಈ ತಿಂಗಳಿಗಿದೆ. ಇಸ್ಲಾಮಿನ ಪವಿತ್ರ ಗ್ರಂಥ ಖುರ್-ಆನ್ ಅವತರಣಗೊಂಡದ್ದು ಈ ತಿಂಗಳಲ್ಲಿ. ಅಲ್ಲದೇ ಹಲವಾರು ಇಸ್ಲಾಮಿಕ್ ಚಾರಿತ್ರಿಕ ಘಟನೆಗಳಿಗೆ ಈ ತಿಂಗಳು ಸಾಕ್ಷಿಯಾಗಿದೆ.

ಇಸ್ಲಾಮಿನ ಕರ್ಮಶಾಸ್ತ್ರ ಪಂಚ ಸ್ಥಂಭಗಳಲ್ಲಿರುವ ಎರಡನೇಯ ಝಕಾತ್ (ದಾನ) ನೀಡುವುದು ಮತ್ತು ಮೂರನೇ ಉಪವಾಸ ವ್ರತಾಚರಣೆ ಕರ್ಮ ಈ ತಿಂಗಳ ಪ್ರಮುಖ ಆರಾಧನೆಯಾಗಿದೆ. ಅನಾರೋಗ್ಯ, ದೀರ್ಘ ಯಾತ್ರೆ ಮತ್ತು ಮುಟ್ಟಿನಂತಹ ಸಮಸ್ಯೆ ಇರುವವರನ್ನು ಹೊರತುಪಡಿಸಿ ಷರತ್ತುಗಳ ಅನ್ವಯದೊಂದಿಗೆ ಪ್ರತಿಯೊಬ್ಬ ಮುಸ್ಲಿಮನಿಗೂ ಈ ತಿಂಗಳ ವ್ರತಾಚರಣೆ ಕಡ್ಡಾಯವಾಗಿದೆ.

ವ್ರತಾಚರಣೆಯಿಂದ ಆಧ್ಯಾತ್ಮಿಕತೆಯ ವರ್ಧನೆ ಹಾಗೂ ದೇಹ ಇಚ್ಛೆಯನ್ನು ತ್ಯಜಿಸಿ ದೈವ ಇಚ್ಛೆಯನ್ನು ಮೈಗೂಡಿಸಿಕೊಂಡು ಪುಣ್ಯ ಪ್ರಾಪ್ತಿಯೇ ಮೂಲ ಉದ್ದೇಶ. ಹೆಚ್ಚಿನ ಸಮಯಗಳ ಕಾಲ ಖಾಲಿ ಹೊಟ್ಟೆಯಲ್ಲಿ ಇರುವುದರಿಂದ ಆಧ್ಯಾತ್ಮಿಕತೆ ಹೆಚ್ಚಿಸಲು ಮತ್ತು ಧ್ಯಾನಾರಾಧನೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ಕೇವಲ ಖಾಲಿ ಹೊಟ್ಟೆಯಲ್ಲಿ ಇರುವುದರಿಂದ ವ್ರತಾಚರಣೆ ಸಂಪೂರ್ಣವಲ್ಲ ನಮ್ಮ ಮನಸ್ಸು ಶುದ್ಧೀಕರಣಗೊಳಿಸಿ ದುಶ್ಚಟಗಳಿಂದ ದೂರವಿದ್ದು ಕಾಮಾಸಕ್ತಿಯಿಂದ ಮುಕ್ತವಾಗಿರಬೇಕು.

ಒಂದು ತಿಂಗಳ ಕಾಲ ನಿರಂತರವಾಗಿ ವ್ರತಾಚರಣೆಯಿಂದ ಹಲವಾರು ಉಪಯೋಗಗಳಿವೆ. ಇದು ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಸಾಬೀತಾಗಿದೆ, ಇದಕ್ಕೆ ಪುರಾವೆಗಳು ಇವೆ. ಮನುಷ್ಯನಲ್ಲಿ ಚಿಂತನಾ ಶಕ್ತಿ ವೃದ್ಧಿಸುತ್ತದೆ, ದೇಹದೊಳಗಿನ ಟ್ಯಾಕ್ಸಿನ್ ಗಳು ನಿವಾರಣೆಯಾಗುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗಾಗಿಯೇ ಆಧುನಿಕ ವಿಜ್ಞಾನಿಗಳು ಹಲವಾರು ಮಾರಕ ರೋಗಗಗಳಿಗೆ ಉಪವಾಸ ವ್ರತಾಚರಣೆ ಸಿದ್ಧೌಷಧ ಎಂದು ಹೇಳಿದ್ದಾರೆ.

ಹೆಚ್ಚಿದ ದೀರ್ಘಾಯುಷ್ಯ, ಜೀವಕೋಶಗಳ ಪುನರುತ್ಪಾದನೆ ಮತ್ತು ದುರಸ್ತಿ, ಹೆಚ್ಚಿದ ನ್ಯೂರಾನ್ ಉತ್ಪಾದನೆ, ಹೆಚ್ಚು ಸಮತೋಲಿತ ಇನ್ಸುಲಿನ್ ಮಟ್ಟಗಳು ಮತ್ತು ಸುಧಾರಿತ ಮೆದುಳಿನ ಪ್ಲಾಸ್ಟಿಟಿ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಉಪವಾಸವು ಒದಗಿಸುತ್ತದೆ ಎಂದು ಪಾಶ್ಚಿಮಾತ್ಯ ಔಷಧ ವಿಜ್ಞಾನವು ಈಗ ಗುರುತಿಸುತ್ತದೆ.

ಉಪವಾಸದ ಬಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಸ್ಟೋಕ್ರಾಟರ್ ರಂತಹ ಅನೇಕ ವೈದ್ಯರು ತಮ್ಮ ಬಳಿ ಬರುವ ರೋಗಿಗಳಿಗೆ ವ್ರತಾಚರಿಸುವಂತೆ ನಿರ್ದೇಶಿಸುತ್ತಿದ್ದರು ಎಂದು ಚರಿತ್ರೆಯ ಪುಟಗಳಿಂದ ತಿಳಿದು ಬರುತ್ತದೆ.

ಅಲ್ಲದೆ ಉಪವಾಸ ಹಾರ್ಟ್ ಅಟ್ಯಾಕ್, ಫ್ಯಾಟ್, ಕೊಲೆಸ್ಟ್ರಾಲ್, ರಕ್ತದೊತ್ತಡ, ಅಸ್ತಮಾ, ಚರ್ಮದ ಸಮಸ್ಯೆಗಳಿಗೆ ಸುಲಭ ಪರಿಹಾರ, ಕ್ಷಯ ಹಾಗೂ ಮಲೇರಿಯ ರೋಗಿಗಳು ಉಪವಾಸ ಕೈಗೊಂಡರೆ ಬೇಗನೆ ಗುಣಮುಖರಾಗಬಹುದೆಂದು ಅಧುನಿಕ ಸಂಶೋಧಕರ ಅಭಿಪ್ರಾಯ.

ವಿಶ್ವವಿಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ‘ಮಾನವ ಪೂರ್ಣ ಆರೋಗ್ಯದಿಂದಿರಬೇಕಾದರೆ ವ್ರತಚರಣೆ ಅನಿವಾರ್ಯ’ ಎಂದಿದ್ದಾರೆ. ‘ಅನೇಕ ಅಲೋಪತಿ ಔಷಧಗಳಿಂದ ಗುಣವಾಗದ ರೋಗಗಳನ್ನು ಉಪವಾಸದ ಮೂಲಕ ನಾನು ಗುಣಪಡಿಸುತ್ತಿದ್ದೆ. ಈ ಕುರಿತು ಜನರು ಹೆಚ್ಚು ಜಾಗೃತವಾದರೆ ಹಲವು ಮಾರಕ ರೋಗಗಳನ್ನು ತಡೆಯಲು ಖಂಡಿತಾ ಸಾಧ್ಯವಿದೆ’ ಎಂದು ಖ್ಯಾತ ವೈದ್ಯ ಡಾ. ಝಹರ್ ಬರ್ಟ್ ಹೇಳುತ್ತಾರೆ.

ಲಂಡನ್ ವಿಶ್ವವಿದ್ಯಾನಿಲಯದ ಡಾ. ಅಲೆಕ್ಸ್ ಕಂಫರ್ಟ್ ಎಂಬ ವಿಶ್ವವಿಖ್ಯಾತ ಸಂಶೋಧಕ ಕೆಲವು ಇಲಿಗಳಗೆ ಆಹಾರ ನೀಡಿಯೂ, ಇನ್ನೂ ಕೆಲವು ಇಲಿಗಳಿಗೆ ಆಹಾರ ನೀಡದೆಯೂ ಸಂಶೋಧನೆ ನಡೆಸಿದಾಗ, ಉಪವಾಸವಿದ್ದ ಇಲಿಗಳು ಆಹಾರ ತಿಂದ ಇಲಿಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ ಎಂದು ಸಾಬೀತಾಯಿತು.

ಜಗತ್ತಿನ ಮನುಷ್ಯರೆಲ್ಲರೂ ಕೆಲವೊಂದು ಸಂದರ್ಭಗಳಲ್ಲಿ ಉಪವಾಸ ಕೈಗೊಂಡರೆ ದೀರ್ಘಾಯುಷ್ಯ ಲಭಿಸುತ್ತದೆ ಎಂದು ಡಾ. ಅಲೆಕ್ಸ್ ಕಂಫರ್ಟ್ ಅವರ ಅಭಿಮತ. ಬ್ಯಾಕ್ಟೀರಿಯಗಳ ಮನೆಯಾದ ಹೊಟ್ಟೆಗೆ ಉಪವಾಸದ ಸಮಯದಲ್ಲಿ ಅನ್ನ ಸೇರದಿರುವುದರಿಂದ ಜಠರದ ಮೇಲೆ ಒತ್ತಡ ಕಡಿಮೆಯಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ. ಹೀಗೆ ಹಲವಾರು ವಿಜ್ಞಾನಿಗಳು ವೃತಾಚರಣೆಯ ಉಪಯೋಗಗಳ ಕುರಿತು ಸಂಶೋಧನೆಗಳು ನಡೆಸಿದ್ದಾರೆ ಅಲ್ಲದೇ ಬುದ್ಧಿ ಜೀವಿಗಳು ಮತ್ತು ಆರೋಗ್ಯ ತಜ್ಞರಿಂದಲೂ ಸಾಬೀತಾಗಿದೆ.

ಒಟ್ಟಿನಲ್ಲಿ ಎಲ್ಲಾ ವಿಧ ಮಾನವ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ, ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶ. ಬದುಕಿನಲ್ಲಿ ಮಾಡಿದ ಪಾಪ ಕರ್ಮಗಳಿಗೆ ಕ್ಷಮೆ ಯಾಚಿಸುತ್ತಾ, ಮನಸ್ಸಿನಲ್ಲಿ ಮೂಡುವ ದುಷ್ಟ ಚಿಂತನೆಗಳಿಂದ ವಿಮೋಚನೆ ಪಡೆಯಬೇಕಾದ ಕಾಲ. ಶಾಂತಿ ಸುಖ ನೆಮ್ಮದಿಯಿಂದ ಇರಬೇಕಾದ ಸಮಯ. ಬಡವರಿಗೆ ದಾನ ಧರ್ಮಗಳನ್ನು ಮಾಡುವ ಮೂಲಕ ಇನ್ನೊಬ್ಬರ ಕಷ್ಟದಲ್ಲೂ ಪಾಲ್ಗೊಳ್ಳಲು ಝಕಾತ್ ನೀಡುವುದು ಕೂಡ ಕಡ್ಡಾಯವಾಗಿಸಿದೆ. ರಂಝಾನ್ ತಿಂಗಳಿನಲ್ಲಿ ಬಡವರು ಶ್ರೀಮಂತರು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಂದಾಗಿ ಪ್ರೀತಿ ವಿಶ್ವಾಸದಿಂದ ಕೂಡಿ ಹಬ್ಬವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ : Summer Juices: ರಂಜಾನ್‌ ತಿಂಗಳಲ್ಲಿ ದೇಹ ತಂಪಾಗಿರಿಸಲು ಕುಡಿಯಲೇ ಬೇಕಾದ ಪಾನೀಯಗಳಿವು!

Continue Reading

ಅಂಕಣ

ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?

ರಾಜ ಮಾರ್ಗ ಅಂಕಣ : ನೀವು ನಂಬಲೇಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು ಉಳಿದಿರುವುದು ಆರು ದಿನ ಮಾತ್ರ. ನೀವು ಇದುವರೆಗೆ ಏನೂ ಓದಿಲ್ಲ ಅಂದರೂ, ಇನ್ನು ಓದಿದರೂ ಪಾಸಾಗಬಹುದು. ಅಂಥ ತಂತ್ರಗಳನ್ನು ಹೇಳುತ್ತಿದ್ದಾರೆ ಹೈಸ್ಕೂಲಿನಲ್ಲಿ ಗಣಿತ ಶಿಕ್ಷಕರೂ ಆಗಿರುವ ಅಂಕಣಕಾರ ರಾಜೇಂದ್ರ ಭಟ್‌ ಕೆ.

VISTARANEWS.COM


on

Edited by

SSLC exam
Koo
RAJAMARGA

ಪ್ರೀತಿಯ ಎಸೆಸೆಲ್ಸಿ ವಿದ್ಯಾರ್ಥಿಗಳೇ, ನಿಮಗೆಲ್ಲಾ ಮೊದಲಾಗಿ ನಮ್ಮ ಶುಭಾಶಯಗಳು
ನೀವು ನಿಮ್ಮ ಜೀವನದ ಮೊದಲ ಬೋರ್ಡ್ ಪರೀಕ್ಷೆಯನ್ನು ಬರೆಯುತ್ತಿದ್ದೀರಿ. ಇದು ನೀವು ಎದುರಿಸುವ ಮೊದಲ ರಾಜ್ಯಮಟ್ಟದ ಪರೀಕ್ಷೆ. ಮುಂದೆ ನೀವು ಎದುರಿಸುವ ಹಲವು ಬೋರ್ಡ್ ಪರೀಕ್ಷೆಗಳಿಗೆ ಇದು ಖಂಡಿತವಾಗಿಯೂ ಪಂಚಾಂಗ ಆಗುತ್ತದೆ.

2023ರ ಎಸೆಸೆಲ್ಸಿ ಪರೀಕ್ಷೆಗೆ ಈಗಾಗಲೇ ಕ್ಷಣಗಣನೆಯು ಆರಂಭ ಆಗಿದೆ. ಮಾರ್ಚ್ 31, ಶುಕ್ರವಾರ ನಿಮ್ಮ ಪರೀಕ್ಷೆಗಳು ಆರಂಭ ಆಗಲಿವೆ. ನಿಮಗೆ ಕಳೆದ ವರ್ಷ ಮೇ 16ರಿಂದ ಇಂದಿನ ದಿನದವರೆಗೂ ನಿಮ್ಮ ಅಧ್ಯಾಪಕರ ಮಾರ್ಗದರ್ಶನದಲ್ಲಿ ಉತ್ತಮವಾದ ತರಬೇತಿಯು ದೊರಕಿದ್ದು ಪರೀಕ್ಷೆಗೆ ಮಾನಸಿಕವಾಗಿ ಪ್ರಿಪೇರ್ ಆಗ್ತಾ ಇದ್ದೀರಿ. ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಕೊರೊನಾ ಕಾರಣಕ್ಕೆ ನಿಮಗೆ ಬಿಗಿಯಾದ ಪರೀಕ್ಷೆಯೇ ಇಲ್ಲದೆ ಎಲ್ಲರೂ ಪಾಸಾಗಿ ಇಂದು ಹತ್ತನೇ ತರಗತಿಯಲ್ಲಿ ಇದ್ದೀರಿ.

ಆದ್ದರಿಂದ ಈ ವರ್ಷದ ಪರೀಕ್ಷೆಯು ನಿಮಗೆ ನಿಜವಾದ ಅಗ್ನಿಪರೀಕ್ಷೆಯೇ ಆಗಬಹುದು. ಆದರೆ ಆತಂಕ ಮಾಡುವ ಅಗತ್ಯವೇ ಇಲ್ಲ. ಆತಂಕ ಮಾಡಿದರೆ ನಿಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗದೆ ಹೋಗಬಹುದು. ಆದ್ದರಿಂದ ಕೂಲ್ ಆಗಿ ಒಂದೆಡೆ ಕುಳಿತು ಕೊನೆಯ ಕ್ಷಣದ ಕೆಲವು ಸಿದ್ಧತೆಗಳನ್ನು ಮಾಡಿದರೆ ಗೆಲುವು ಖಂಡಿತ ನಿಮ್ಮದೆ ಆಗುತ್ತದೆ.

ಈ ವರ್ಷ ನಿಮಗೆ ಇನ್ನೂ ಕೆಲವು ಅನುಕೂಲಗಳು ಇವೆ!

1. ಈ ವರ್ಷ ಕೊರೊನಾ ತೊಂದರೆ ಇಲ್ಲದೆ ಇಡೀ ವರ್ಷ ಸರಿಯಾದ ಪಾಠಗಳು ನಡೆದಿವೆ. ಎಲ್ಲ ಕಡೆಯೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹೆಚ್ಚು ಬೆವರು ಹರಿಸಿದ್ದಾರೆ. ಇದು ಖಂಡಿತವಾಗಿ ಪಾಸಿಟಿವ್ ಅಂಶವಾಗಿದೆ.

2. ಈ ವರ್ಷದ ವಿದ್ಯಾರ್ಥಿಗಳು ಕೂಡ ಎಂಟು ಮತ್ತು ಒಂಬತ್ತನೇ ತರಗತಿಗಳಲ್ಲಿ ಕೊರೊನಾ ಕಾರಣಕ್ಕೆ ಸಂತ್ರಸ್ತರಾದ ಕಾರಣ (ಅದು ಸರಕಾರ ಮತ್ತು ಎಸೆಸೆಲ್ಸಿ ಬೋರ್ಡ್ ಇಬ್ಬರಿಗೂ ಗೊತ್ತಿರುವ ಕಾರಣ) ಹೆಚ್ಚು ಸುಲಭವಾದ ಪ್ರಶ್ನೆಪತ್ರಿಕೆಗಳು ಈ ವರ್ಷ ಬರುವ ಎಲ್ಲ ಸಾಧ್ಯತೆಗಳು ಇವೆ. ಎಲ್ಲ ಪ್ರಶ್ನೆಪತ್ರಿಕೆಗಳಲ್ಲಿ ಕಠಿಣತೆಯ ಮಟ್ಟ ಕಡಿಮೆ ಆಗಲಿದೆ ಎನ್ನುವುದು ನಿಮಗೆ ಪೂರಕ.

3. ಗಣಿತ ಮತ್ತು ವಿಜ್ಞಾನದ ವಿಷಯಗಳಲ್ಲಿ ಹಿಂದಿನ ವರ್ಷಗಳಲ್ಲಿ 20% ಕಠಿಣ ಮಟ್ಟದ ಅನ್ವಯ ಪ್ರಶ್ನೆಗಳು ಬರುತ್ತಿದ್ದು ಈ ವರ್ಷ ಅದು ಖಂಡಿತ 15% ಆಗಲಿದೆ. ಅಂದರೆ 80 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 12 ಅಂಕಗಳ ಪ್ರಶ್ನೆಗಳು ಮಾತ್ರ ಕಠಿಣ ಆಗಿರಬಹುದು. ಉಳಿದ 68 ಅಂಕಗಳ ಪ್ರಶ್ನೆಗಳು ಸುಲಭ ಮತ್ತು ನೇರ ಆಗಿರುತ್ತವೆ.

4. ವಿಜ್ಞಾನ ವಿಷಯದಲ್ಲಿ 12-14 ಅಂಕಗಳನ್ನು ಚಿತ್ರಗಳ ಮೂಲಕ ಪಡೆಯಲು ಅವಕಾಶ ಇದ್ದು ಇದು ಜಸ್ಟ್ ಪಾಸ್ ಆಗುವ ವಿದ್ಯಾರ್ಥಿಗಳಿಗೆ ವರದಾನ ಆಗಲಿದೆ. ಅದರ ಜೊತೆಗೆ ಬೆಳಕು ಪಾಠದಲ್ಲಿ ಕಿರಣ ಚಿತ್ರಗಳು (Ray Diagrams), ವಿದ್ಯುಚ್ಛಕ್ತಿ ಪಾಠದಲ್ಲಿ ಸರ್ಕ್ಯುಟ್‌ಗಳು, ಓಮನ ನಿಯಮ, ಜೌಲನ ನಿಯಮ ಮೊದಲಾದವುಗಳು ಸುಲಭದಲ್ಲಿ ನಿಮಗೆ ಅಂಕ ತಂದುಕೊಡುತ್ತವೆ.

5. ಗಣಿತದಲ್ಲಿ 8-9 ಅಂಕಗಳು ರಚನೆಗೆ ನಿಗದಿ ಆಗಿದ್ದು ಯಾವ ಸೂತ್ರ, ಗುಣಾಕಾರ, ಭಾಗಾಕಾರ ಇಲ್ಲದೆ ಪಡೆಯಬಹುದಾದ ಅಂಕಗಳು ಇವು. ಇದರ ಜೊತೆಗೆ ಗ್ರಾಫ್ ನಾಲ್ಕು ಅಂಕಗಳು, ಓಜೀವ್ ಮೂರು ಅಂಕಗಳು, ಪ್ರಮೇಯದ ಏಳು ಅಂಕಗಳು ಬೋನಸ್ ನಿಮಗೆ!

6. ಯಾವುದೇ ವಿಷಯದಲ್ಲಿ 45 ಅಂಕಗಳನ್ನು ಗುರುತು ಮಾಡುವುದು ಸುಲಭ ಈ ವರ್ಷ. ಯಾವುದೇ ಪರಿಣತ ಅಧ್ಯಾಪಕರು 45 ಅಂಕಗಳನ್ನು ಪಟ್ಟಿ ಮಾಡಲು ನಿಮಗೆ ಸಹಾಯ ಮಾಡಬಹುದು. ಅಷ್ಟನ್ನು ಇನ್ನು ಕೂಡ ಕಲಿಯಲು ಸಮಯ ಇದೆ!

7. ಪ್ರತೀ ವಿಷಯದ ಮಾದರಿ ಪ್ರಶ್ನೆಗಳನ್ನು ನಿಮ್ಮ ಅಧ್ಯಾಪಕರಿಂದ ಪಡೆಯಿರಿ. ಪ್ರತೀ ವಿಷಯದಲ್ಲಿ ಒಂದೆರಡು ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಇನ್ನೂ ಸಮಯ ಇದೆ. ಅವುಗಳನ್ನು ಉತ್ತರಿಸಿ ಆದನಂತರ ನಿಮ್ಮ ಅಧ್ಯಾಪಕರಿಂದ ಮೌಲ್ಯಮಾಪನ ಮಾಡಿಸಿಕೊಳ್ಳಲು ಮರೆಯಬೇಡಿ.

8. ಎಸೆಸೆಲ್ಸಿ ಪರೀಕ್ಷೆಯ ವೇಳಾಪಟ್ಟಿಯು ಈ ವರ್ಷ ನಿಮಗೆ ತುಂಬಾ ಅನುಕೂಲ ಇದೆ. ಎಲ್ಲ ವಿಷಯಗಳ ಪರೀಕ್ಷೆಗಳ ಮಧ್ಯದಲ್ಲಿ ಭರ್ಜರಿಯಾಗಿ ರಜೆ ದೊರೆತಿದೆ. ಇದು ನಿಮ್ಮ ಅಧ್ಯಯನಕ್ಕೆ ಅನುಕೂಲ. ಆದ್ದರಿಂದ ಆತಂಕ ಮಾಡದೆ ಓದಿ.

9. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಅಲೆಯು ತೀವ್ರವಾಗಿ ಇದ್ದ ಕಾರಣ ಪರೀಕ್ಷಾ ಕೇಂದ್ರದಲ್ಲಿ ವಿಪರೀತವಾದ ಒತ್ತಡ ಇತ್ತು. ಈ ವರ್ಷ ಅಷ್ಟು ಉಸಿರುಗಟ್ಟುವ ವಾತಾವರಣವು ಇರಲಾರದು. ಈ ಬಾರಿಯ ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳು ಹೆಚ್ಚು ವಿದ್ಯಾರ್ಥಿಸ್ನೇಹಿ ಆಗಿರುತ್ತವೆ.

10. ಪರೀಕ್ಷೆಯ ಅಂತಿಮ ಹಂತವಾದ ಮೌಲ್ಯಮಾಪನ ಕೂಡ ಈ ಬಾರಿ ವಿದ್ಯಾರ್ಥಿಸ್ನೇಹಿ ಆಗಿರುವ ಎಲ್ಲ ಸಾಧ್ಯತೆಗಳು ನಮಗೆ ಕಾಣುತ್ತಿವೆ. ಈ ಅಂಶ ಕೂಡ ವಿದ್ಯಾರ್ಥಿಗಳಿಗೆ ಅನುಕೂಲ.

ನೀವು ತಕ್ಷಣವೇ ಮಾಡಬೇಕಾದದ್ದು…..

ಇದು ಪಾಸ್ ಆಗಲು ಕಷ್ಟ ಪಡುವ ವಿದ್ಯಾರ್ಥಿಗಳಿಗೆ ಮಾತ್ರ!

1. ನಿಮ್ಮ ಅಧ್ಯಾಪಕರ ಮಾರ್ಗದರ್ಶನ ಪಡೆದು ಪ್ರತೀ ವಿಷಯದಲ್ಲಿ 45 ಅಂಕದ ಪಾಸಿಂಗ್ ಪ್ಯಾಕೇಜ್ ಪ್ರಶ್ನೆಗಳನ್ನು ಪಟ್ಟಿ ಮಾಡಿ. ಅವುಗಳ ಮೇಲೆ ಹೆಚ್ಚು ಫೋಕಸ್ ಮಾಡಿ ಓದಿ.

2. ಇನ್ನು ಪಾಠ 1, ಪಾಠ 2……..ಹೀಗೆ ಓದುವುದನ್ನು ಬಿಟ್ಟು ಪ್ರಶ್ನೆಪತ್ರಿಕೆಗಳನ್ನು ಸ್ವತಂತ್ರವಾಗಿ ಬಿಡಿಸುವುದು ಸೂಕ್ತ. ಬಿಡಿಸಿದ ನಂತರ ಅವುಗಳನ್ನು ನಿಮ್ಮ ಶಿಕ್ಷಕರಿಂದ ಮೌಲ್ಯಮಾಪನವನ್ನು ಮಾಡಿಸಿಕೊಂಡರೆ ಇನ್ನೂ ಒಳ್ಳೆಯದು.

3. ವಿವಿಧ ವಿಷಯಗಳ ಪರಿಣತ ಅಧ್ಯಾಪಕರು ನಡೆಸಿಕೊಡುವ ರೇಡಿಯೋ ಮತ್ತು ಟಿವಿ ಕಾರ್ಯಕ್ರಮಗಳು ತುಂಬಾ ಚೆನ್ನಾಗಿವೆ. ಅವುಗಳನ್ನು ಆಲಿಸಿ.

4. ಭಾಷಾ ವಿಷಯಗಳಲ್ಲಿ ವ್ಯಾಕರಣ (ಗ್ರಾಮರ್) ವಿಭಾಗವು ನಿಮಗೆ ಹೆಚ್ಚು ಗೊಂದಲವನ್ನು ಉಂಟುಮಾಡುವ ವಿಭಾಗ. ಅದಕ್ಕೆ ಪೂರಕವಾದ ಎರಡು ಅಥವ ಮೂರು ಗಂಟೆಗಳ ಒಂದು ತರಗತಿಯು ನಿಮಗೆ ಈಗ ಖಂಡಿತ ಅಗತ್ಯ ಇದೆ. ನಿಮ್ಮ ಅಧ್ಯಾಪಕರನ್ನು ಈ ಬಗ್ಗೆ ವಿನಂತಿ ಮಾಡಿ.

5. ಹಾಗೆಯೇ ಭಾಷಾ ವಿಷಯಗಳಲ್ಲಿ ಪದ್ಯ ಬಾಯಿಪಾಠ, ಸಾರಾಂಶ ಬರೆಯುವುದು, ಪತ್ರ ಲೇಖನ, ಪ್ರಬಂಧ ರಚನೆ, ಸಂದರ್ಭ ಸಹಿತ ಅರ್ಥ ವಿವರಣೆ, ಕವಿ ಕಾವ್ಯ ಪರಿಚಯ, ಗಾದೆ ವಿಸ್ತಾರ ಇವುಗಳು ಹೆಚ್ಚು ಸುಲಭ ಆದವು. ಈ ಅಂಕಗಳನ್ನು ಮಿಸ್ ಮಾಡಿಕೊಳ್ಳಬೇಡಿ. ಅವುಗಳನ್ನು ಈಗಲೂ ನೀವು ಕಲಿಯಬಹುದು.

6. ಪರೀಕ್ಷಾ ಕೇಂದ್ರದಲ್ಲಿ ಮೂರುಕಾಲು ಘಂಟೆ ಕುಳಿತುಕೊಳ್ಳುವುದು ಬಹಳ ದೊಡ್ಡ ತಪಸ್ಸು. ಅದಕ್ಕೆ ಬೆಟ್ಟದಷ್ಟು ತಾಳ್ಮೆ ಬೇಕು. ಅದನ್ನು ಹೆಚ್ಚು ಮಾಡಲು ಮಾನಸಿಕವಾಗಿ ಸಿದ್ಧತೆ ಮಾಡಿ.

7. ನೀವೀಗ ದಿನಕ್ಕೆ ಕನಿಷ್ಠ ಒಂದೆರಡು ಗಂಟೆಗಳ ಕಾಲ ಬರೆಯುವುದನ್ನು ಅಭ್ಯಾಸ ಮಾಡಬೇಕು. ಇದರಿಂದ ಅಕ್ಷರ ಚಂದ ಆಗುತ್ತದೆ ಮತ್ತು ನಿಮ್ಮ ಸೈಕೊಮೋಟಾರ್ ಕೌಶಲವು ವೃದ್ಧಿ ಆಗುತ್ತದೆ ಮತ್ತು ನೆನಪಿನ ಶಕ್ತಿಯು ಜಾಸ್ತಿಯಾಗುತ್ತದೆ.

8. ಮೌನವು ಅತೀ ಹೆಚ್ಚು ಪ್ರಭಾವಶಾಲೀ ಮಾಧ್ಯಮ. ಪರೀಕ್ಷೆ ಸಮೀಪ ಬರುತ್ತಿದ್ದ ಹಾಗೆ ಹೆಚ್ಚು ಹೊತ್ತು ಮೌನ ಆಗಿರಿ. ಮೌನ ಪ್ರಾರ್ಥನೆಗಳು ಹೆಚ್ಚು ಶಕ್ತಿಶಾಲಿ.

9. ಬೆಳಗ್ಗೆ ಎದ್ದು ಸ್ವಲ್ಪ ಹೊತ್ತು Instrumental Music (ಸಿತಾರ್, ವೀಣೆ ಇತ್ಯಾದಿ) ಕೇಳುವುದು ನಿಮ್ಮ ಏಕಾಗ್ರತೆ ಹೆಚ್ಚು ಮಾಡಲು ಉತ್ತಮ ಅಭ್ಯಾಸ. ಏಕೆಂದರೆ ಸಂಗೀತಕ್ಕೆ ನಿಮ್ಮ ಮೆಮೊರಿ ಮತ್ತು ಏಕಾಗ್ರತೆ ಎರಡನ್ನೂ ಹೆಚ್ಚು ಮಾಡುವ ಶಕ್ತಿ ಇದೆ. ಮನಸ್ಸು ರಿಲ್ಯಾಕ್ಸ್ ಮಾಡಲು ಕೂಡ ಮ್ಯೂಸಿಕ್ ಹೆಚ್ಚು ಅನುಕೂಲಕರ.

10. ನಿಮ್ಮ ಮೇಲೆ ಬೇರೆ ಯಾರಾದರೂ ಭರವಸೆಯನ್ನು ಇಡುವುದಕ್ಕಿಂತ ನಿಮ್ಮ ಮೇಲೆ ನೀವೇ ಹೆಚ್ಚು ಭರವಸೆ ಇಡುವುದು ಮುಖ್ಯ. ಅದು ಪಾಸಿಟಿವ್ ಥಿಂಕಿಂಗ್ ಮಾಡುವುದರಿಂದ ಸಾಧ್ಯ ಆಗುತ್ತದೆ. ‘ನನಗೆ ಖಂಡಿತ ಸಾಧ್ಯ ಇದೆ’ ಅನ್ನುವುದೇ ನಿಮ್ಮ ಯಶಸ್ಸಿನ ಬೀಜ ಮಂತ್ರ.

(ನಾಳೆ ಮುಂದುವರಿಯುವುದು)

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ದಕ್ಷಿಣ ಭಾರತದ ಕೋಗಿಲೆ ಕೆ.ಎಸ್‌.ಚಿತ್ರಾ; ಅವರ ಕಂಠವೆಂದರೆ ಜಿನುಗುವ ಭಾವದೊರತೆ

Continue Reading

ಅಂಕಣ

ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ

ಸುಗಮ ಉದ್ಯಮ ಸೂಚ್ಯಂಕ ಇರುವಂತೆ ಸುಗಮ ರಾಜಕಾರಣ ಸೂಚ್ಯಂಕವೂ ಇರಬೇಕು. ಉತ್ಸಾಹಿಗಳು ರಾಜಕಾರಣಕ್ಕೆ ಪ್ರವೇಶಿಸಲು ಇರುವ ಆರಂಭಿಕ ಅಡೆತಡೆಗಳನ್ನು ನಿವಾರಿಸಬೇಕು. ಚುನಾವಣೆಯಲ್ಲಿ ಹಣ ಚೆಲ್ಲಿ ಗೆಲ್ಲುವುದು ಹಣವಂತರಿಗೂ ಕಷ್ಟ ಎಂಬಂಥ ವಾತಾವರಣ ಇಂದು ಮೂಡಿರುವಾಗ, ಈ ಕುರಿತು ಒಂದು ಚಿಂತನೆ ಇಲ್ಲಿದೆ.

VISTARANEWS.COM


on

Edited by

parliment
Koo
Vistara Column Hariprakash Konemane

ಬೂತ್ ಕ್ಯಾಪ್ಚರಿಂಗ್ ಎಂಬ ಪದವನ್ನು ಬಹುಶಃ ಈಗಿನ ಅನೇಕ ಮತದಾರರು ಕೇಳಿರುವುದೇ ಇಲ್ಲ. ಸುಮಾರು ಮೂರು ದಶಕದ ಹಿಂದೆ ಭಾರತದ ಪ್ರತಿ ಚುನಾವಣೆಗಳ ಸಂದರ್ಭದಲ್ಲೂ ಈ ಪದ ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗಿ ಕಾಣಿಸಿಕೊಳ್ಳುತ್ತಲೇ ಇತ್ತು. ರಾಜಕೀಯ ಪಕ್ಷಗಳೂ, ಅದರ ಚೇಲಾಗಳು, ಗೂಂಡಾಗಳು ಬೂತ್‌ಗಳ ಬಳಿ ನಿಂತು ಮತದಾರರನ್ನು ಬೆದರಿಸುತ್ತಿದ್ದರು. ತಮ್ಮ ವಿರುದ್ಧ ಮತ ಹಾಕಬಹುದು ಎನ್ನುವ ಅನುಮಾನ ಇರುವವರನ್ನು ಒಳಗೆ ಬಿಡದೆ, ತಮ್ಮವರನ್ನೇ ಒಳಗೆ ಕಳುಹಿಸಿ ಕಳ್ಳ ಮತದಾನ ಮಾಡಿಸುತ್ತಿದ್ದರು. ತಮ್ಮ ಹೆಸರಿನಲ್ಲಿ ಮತದಾನ ಆಗಿಹೋಗಿದೆ ಎನ್ನುವ ವಿಚಾರವೇ ಅನೇಕರಿಗೆ ತಿಳಿಯುತ್ತಿರಲಿಲ್ಲ. ಇನ್ನೊಂದು ವಿಧಾನವೆಂದರೆ, ತಮ್ಮ ಪಕ್ಷದ ವಿರುದ್ಧ ಮತ ಚಲಾಯಿಸಬಲ್ಲ ಮತದಾರರಿಗೆ ಹಣ ನೀಡಿ ಅಥವಾ ಬೆದರಿಸಿ, ಅವರನ್ನು ತಟಸ್ಥರನ್ನಾಗಿಸುವ ಪ್ರಯತ್ನವೂ ಎಗ್ಗಿಲ್ಲದೇ ನಡೆಯುತ್ತಿತ್ತು.

ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಮತಗಟ್ಟೆಯಿಂದ ಮತಪೆಟ್ಟಿಗೆ ಹೊತ್ತು ತೆರಳುವ ವಾಹನಗಳನ್ನು ತಡೆದು ಇಡೀ ಮತಪೆಟ್ಟಿಗೆಯನ್ನೇ ಅಪಹರಿಸುವುದು. ತಮ್ಮ ಬಳಿ ಅಂತಹದ್ದೇ ಮತಪೆಟ್ಟಿಗೆಯನ್ನು ಸಿದ್ಧಪಡಿಸಿಟ್ಟುಕೊಂಡು, ತಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಚಲಾಯಿಸಿರುವಂತೆ ನಕಲಿ ಮತದಾನ ಮಾಡಿಟ್ಟುಕೊಳ್ಳುವುದು. ಅಸಲಿ ಮತಪೆಟ್ಟಿಗೆ ಜಾಗದಲ್ಲಿ ನಕಲಿ ಮತಪೆಟ್ಟಿಗೆಯನ್ನೇ ಇರಿಸುವುದು-ನೆನಪಿಸಿಕೊಂಡರೆ, ನಾವೆಂಥಾ ಕಾಲವನ್ನು ಹಾದು ಬಂದಿವಲ್ಲಾ ಎನಿಸಿಬಿಡುತ್ತದೆ !

ಇದೇ ಕಾರಣಕ್ಕೆ ಚುನಾವಣೆಯಲ್ಲಿ ʼಹಣಬಲ ಹಾಗೂ ತೋಳ್ಬಲʼ ಎಂಬ ಮಾತು ಚಾಲ್ತಿಗೆ ಬಂದಿದೆ. ಹಣಬಲ ಎಂದರೆ ಮತದಾರರಿಗೆ ಹಣದ ಆಮಿಷ ಒಡ್ಡುವುದು. ತೋಳ್ಬಲ ಎಂದರೆ ರೌಡಿಗಳು, ಗೂಂಡಾಗಳು, ಅಂಡರ್ವರ್ಲ್ಡ್ ಕ್ರಿಮಿನಲ್‌ಗಳನ್ನು ಬಳಸಿಕೊಂಡು ಹೆದರಿಸುವುದು. ಆದರೆ, ಈ ಮೂರು ದಶಕದಲ್ಲಿ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ಮೊದಲ ಅಂಥ ಮೂರು ಬದಲಾವಣೆಗಳನ್ನು ಗಮನಿಸೋಣ. ಮೊದಲನೆಯದ್ದು- ಮತಗಟ್ಟೆಯಲ್ಲಿ ನಿಜವಾದ ಮತದಾರರನ್ನು ತಡೆಯುವ, ಬೆದರಿಸುವ ಕಾರ್ಯಕ್ಕೆ ಬ್ರೇಕ್ ಹಾಕುವ ಸಲುವಾಗಿ ಸಾಮಾನ್ಯ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ವಿಂಗಡಿಸುವ ಪದ್ಧತಿ ಶುರುವಾಯಿತು. ಸಾಮಾನ್ಯ ಮತಗಟ್ಟೆ ಎಂದರೆ ಅಕ್ರಮಗಳು ಅತ್ಯಂತ ಕಡಿಮೆ ನಡೆಯುವ ಹಾಗೂ ಅತಿ ಸೂಕ್ಷ್ಮ ಎಂದರೆ ಅಕ್ರಮಗಳು ಹೆಚ್ಚು ನಡೆಯುವ ಬೂತ್‌ಗಳು ಎಂದರ್ಥ. ಸಾಮಾನ್ಯ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಯಷ್ಟೆ ಅಲ್ಲದೆ, ಸಿಆರ್‌ಪಿಎಫ್, ಕೆಲವೆಡೆ ಸೇನಾ ಯೋಧರನ್ನೂ ನಿಯೋಜನೆ ಮಾಡಲಾಯಿತು. ಮತಗಟ್ಟೆಯಿಂದ ನೂರು ಮೀಟರ್ ದೂರದಲ್ಲಿ ಯಾವುದೇ ಪ್ರಚಾರ, ಒತ್ತಡ ಹೇರದಂತೆ ಲಕ್ಷ್ಮಣ ರೇಖೆ ಎಳೆಯಲಾಗುವುದು. ಎರಡನೆಯ ಬದಲಾವಣೆ- ಮತದಾರರು ಗುರುತಿನ ಚೀಟಿಯನ್ನು ವಶಕ್ಕೆ ಪಡೆದು ಮತದಾನವನ್ನು ತಡೆಯುವುದನ್ನು ತಡೆಯಲು ಗುರುತಿನ ಚೀಟಿಗಳ ಮಾನದಂಡವನ್ನು ಮಾರ್ಪಾಟು ಮಾಡಲಾಯಿತು. ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿಯಷ್ಟೆ ಅಲ್ಲದೆ, ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಸೇರಿ ಹತ್ತಾರು ದಾಖಲೆಗಳಿದ್ದರೂ ಮತದಾನ ಮಾಡಬಹುದು ಎಂದು ನಿಯಮ ರೂಪಿಸಲಾಯಿತು.

mogasale defection

ಇನ್ನು ಮೂರನೆಯ ಸಮಸ್ಯೆ ಮತಪೆಟ್ಟಿಗೆ ಅಪಹರಣ. ಈ ಅಕ್ರಮಕ್ಕೆ ತಂತ್ರಜ್ಞಾನ ತಡೆ ವಿಧಿಸಿತು. ಬೆಂಗಳೂರು ಕೇಂದ್ರಿತ ಪ್ರತಿಷ್ಠಿತ ಸಂಸ್ಥೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್( ಬಿಇಎಲ್) ರೂಪಿಸಿದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲು ಆರಂಭಿಸಲಾಯಿತು. ಮತಪತ್ರಗಳನ್ನು ಮುದ್ರಿಸಿ ಡಬ್ಬಗಳಲ್ಲಿ ತುಂಬಿ ಅಸಲಿ ಮತಪೆಟ್ಟಿಗೆಯನ್ನು ಬದಲಾಯಿಸುತ್ತಿದ್ದ ಗೂಂಡಾಗಳಿಗೆ ಈ ತಂತ್ರಜ್ಞಾನ ತಲೆಗೆ ಹೋಗಲಿಲ್ಲ. ಹಾಗಾಗಿ ಈ ವಿಧಾನ ಶೇಕಡಾ ನೂರರಷ್ಟು ನಿಂತುಹೋಗಿದೆ. ಹೀಗೆ ಅನೇಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಆದರೂ ಇನ್ನೂ ರಂಗೋಲಿ ಕೆಳಗೆ ತೂರುವ ನಿರಂತರ ಪ್ರಯತ್ನ ನಡೆದೇ ಇದೆ.

ಭಾರತವನ್ನು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎನ್ನಲಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಭಾರತವು ಕೇವಲ ಅತಿ ದೊಡ್ಡ ಪ್ರಜಾಪ್ರಭುತ್ವವಲ್ಲ, ಪ್ರಜಾಪ್ರಭುತ್ವದ ಜನ್ಮಭೂಮಿ ಎಂದು ಹೇಳುತ್ತಿದ್ದಾರೆ. ಈ ವಿಚಾರಕ್ಕೆ, ನಮ್ಮದೇ ಕರ್ನಾಟಕದ ಅಣ್ಣ ಬಸವಣ್ಣ ಜಾರಿ ಮಾಡಿದ್ದ ಅನುಭವ ಮಂಟಪವೇ ಆಧಾರ ಎನ್ನುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಚಾರ.

ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ದೇಶದಲ್ಲಿ ಜೀವಂತವಾಗಿದೆ ಎಂದರೆ ಅದರ ಪ್ರಮುಖ ಲಕ್ಷಣ ಚುನಾವಣೆ ನಡೆಯುವುದು. ಚುನಾವಣೆ ಎಷ್ಟು ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ನಡೆಯುತ್ತದೆ, ಚುನಾವಣೆ ನಡೆದ ನಂತರ ಎಷ್ಟು ಸರಾಗವಾಗಿ ಅಧಿಕಾರ ಹಸ್ತಾಂತರ ಆಗುತ್ತದೆ ಎನ್ನುವುದರ ಆಧಾರದಲ್ಲಿ ಪ್ರಜಾಪ್ರಭುತ್ವವನ್ನು ಅಳೆಯಲಾಗುತ್ತದೆ. ಅಧಿಕಾರ ಬಂದ ನಂತರ ಸರ್ಕಾರ ಹೇಗೆ ನಡೆಯುತ್ತದೆ ಎನ್ನುವುದು ಮುಂದಿನ ಭಾಗ. ಆದರೆ ಚುನಾವಣೆ ಪ್ರಕ್ರಿಯೆಯೇ ಮೊದಲ ಮಾನದಂಡ.

ಈ ವಿಚಾರದಲ್ಲಿ ವಿಶ್ವಾದ್ಯಂತ ಭಾರತ ಸಾಕಷ್ಟು ವಿಶ್ವಾಸಾರ್ಹತೆ ಹೊಂದಿದೆ. ಇಂದಿರಾಗಾಂಧಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದು ಅಸಿಂಧು ಎಂದು ತೀರ್ಪು ಬಂದ ಕೂಡಲೆ ತುರ್ತು ಪರಿಸ್ಥಿತಿಯನ್ನು ಹೇರಿದ ಒಂದು ಕಪ್ಪು ಚುಕ್ಕಿ ನಮ್ಮ ಪ್ರಜಾಪ್ರಭುತ್ವಕ್ಕೆ ಇದೆ. ಆದರೆ ಅದನ್ನು ಹೊರತುಪಡಿಸಿ ನಮ್ಮ ದೇಶದ ಕೇಂದ್ರ ಹಾಗೂ ರಾಜ್ಯಗಳಲ್ಲಿ ಚುನಾವಣೆ ನಂತರ ಬಹುತೇಕ ಸರಾಗವಾಗಿ, ಕನಿಷ್ಠ ಪಕ್ಷ ಕಾನೂನಿಗೆ ಅನುಗುಣವಾಗಿ ಅಧಿಕಾರ ಹಸ್ತಾಂತರ ನಡೆದಿದೆ. ಅಷ್ಟರ ಮಟ್ಟಿಗೆ ಪ್ರಜಾಪ್ರಭುತ್ವದ ಮೊದಲ ಹೆಜ್ಜೆಯಲ್ಲಿ ಭಾರತ ಸಫಲವಾಗಿದೆ.

ಮೇಲ್ನೋಟಕ್ಕೆ ಹೀಗೆನ್ನಿಸಿದರೂ ಒಳಗೆ ನೂರಾರು ಹುಳುಕು ಇರುವುದು ಕಣ್ಣಿಗೆ ರಾಚುತ್ತಿದೆ. ಮುಖ್ಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದರೆ ಕೋಟ್ಯಂತರ ರೂ. ಖರ್ಚು ಮಾಡಬೇಕು ಎನ್ನುವುದು ಹಗಲಿನಷ್ಟೆ ಸತ್ಯ. 2014ರವರೆಗೆ ಒಂದು ಲೋಕಸಭೆ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ 70 ಲಕ್ಷ ರೂ. ವೆಚ್ಚ ಮಾಡಬಹುದಿತ್ತು. ಅದನ್ನು 2022ರಲ್ಲಿ 95 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ವಿಧಾನಸಭೆ ಚುನಾವಣೆಗೆ ಈ ಹಿಂದೆ ಇದ್ದ 28 ಲಕ್ಷ ರೂ.ನಿಂದ 40 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.

ಇದೀಗ ಕರ್ನಾಟಕದಲ್ಲಿ ಚುನಾವಣೆ ಎದುರಾಗುತ್ತಿದೆ. 40 ಲಕ್ಷ ರೂ.ನಲ್ಲಿ ಒಂದು ವಿಧಾನಸಭೆ ಚುನಾವಣೆಯ ಶೇ. 20 ವೆಚ್ಚವೂ ತಗಲುವುದಿಲ್ಲ ಎನ್ನುವುದು ರಾಜಕಾರಣದ ಕನಿಷ್ಠ ಜ್ಞಾನ ಇರುವವರಿಗಾದರೂ ಗೊತ್ತು. ಇದು ಸುಮ್ಮನೆ ಬಾಯಿ ಮಾತಿಗೆ ಹೇಳುವ ಮಾತಲ್ಲ. 2010ರಲ್ಲಿ ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಇಲಾಖೆಯು ಚುನಾವಣೆ ಸುಧಾರಣೆ ಕುರಿತು ಸಿದ್ಧಪಡಿಸಿದ್ದ ವರದಿಯಲ್ಲೇ ಇದನ್ನು ತಿಳಿಸಿತ್ತು. “ಕಾನೂನಾತ್ಮಕವಾಗಿ ಮಾಡಬಹುದಾದ ವೆಚ್ಚಕ್ಕಿಂತಲೂ ವಾಸ್ತವ ವೆಚ್ಚವು ಬಹಳಷ್ಟು ಪಟ್ಟು ಹೆಚ್ಚಾಗಿದೆ ಎಂದು ನಂಬಲಾಗಿದೆ” ಎಂದು ವರದಿಯ ಆರಂಭದಲ್ಲೇ ತಿಳಿಸಲಾಗಿತ್ತು. ಅಂದರೆ ಇದೇನು ಯಾರಿಗೂ ಗೊತ್ತಿಲ್ಲದ ಸಂಗತಿ ಏನಲ್ಲ.

CM agrees to 17 salary increase Formation of committee to decide cancellation of NPS

ಇತ್ತೀಚೆಗೆ ಸದನದಲ್ಲಿ ಕರ್ನಾಟಕದ ಹಾಸನ ಜಿಲ್ಲೆಯ ಅರಸೀಕೆರೆಯ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರು ಮಾತನಾಡುತ್ತಿದ್ದನ್ನು ಗಮನಿಸಿದ್ದೆ. ಚುನಾವಣೆ ನಡೆಸುವುದು ಬಹಳ ಕಷ್ಟವಾಗಿದೆ ಎಂದು ಅವರು ಹೇಳುತ್ತಿದ್ದರು. ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಮಾಡದೆ ಹೋದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವುದಿಲ್ಲ. ಎಲ್ಲ ಅಭ್ಯರ್ಥಿಗಳೂ ಪ್ರಚಾರಕ್ಕೆ ಮನೆಗಳಿಗೆ ತೆರಳುವುದು, ತಂತಮ್ಮ ಬೃಹತ್ ಸಮಾವೇಶಗಳನ್ನು ನಡೆಸುವುದೇ ಭ್ರಷ್ಟಾಚಾರಕ್ಕೆ ಮೂಲವಾಗುತ್ತಿದೆ. ಯಾರೂ ಮತದಾರರ ಬಳಿ ತೆರಳುವಂತೆಯೇ ಇರಬಾರದು. ಪ್ರತಿ ತಾಲೂಕು ಮಟ್ಟದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೂ, ಎಲ್ಲ ಅಭ್ಯರ್ಥಿಗಳಿಗೂ ಒಂದೆಡೆ ಮಾತನಾಡಲು ಅವಕಾಶ ನೀಡಬೇಕು. ತಾನು ಅಧಿಕಾರಕ್ಕೆ ಬಂದರೆ ಏನೇನು ಕೆಲಸ ಮಾಡುತ್ತೇನೆ ಎಂದು ಎಲ್ಲರೂ ತಿಳಿಸಬೇಕು. ಅದರ ಆಧಾರದಲ್ಲಿ ಮತಗಳನ್ನು ಕೇಳಬೇಕು. ಒಂದು ರೂ. ಸಹ ಯಾರೂ ಖರ್ಚು ಮಾಡುವಂತಿರಬಾರದು. ಹೀಗೆ ಆಯ್ಕೆಯಾಗಿ ಬಂದವರು ಮತದಾರರಿಗೆ ಉತ್ತರದಾಯಿಯಾಗಿರುತ್ತಾರೆ. ನಿನ್ನಿಂದ ಒಂದು ರೂ. ಸಹ ಪಡೆಯದೆ ಮತ ನೀಡಿ ಗೆಲ್ಲಿಸಿದ್ದೇವೆ, ಈ ಕೆಲಸ ಏಕೆ ಮಾಡಲಿಲ್ಲ? ಎಂದು ಕೊರಳು ಪಟ್ಟಿ ಹಿಡಿದು ಕೇಳುತ್ತಾರೆ. ಇಂತಹ ಸುಧಾರಣೆ ಆಗಬೇಕು ಎಂದು ಶಿವಲಿಂಗೇಗೌಡರು ಹೇಳಿದ್ದರು.

ಅವರು ಹೇಳಿದ್ದಕ್ಕೆ ಒಂದಷ್ಟು ಸೇರಿಸಬಹುದು. ಈಗ ಸಾಮಾಜಿಕ ಜಾಲತಾಣಗಳು ಎಲ್ಲ ಮನೆಯನ್ನೂ ತಲುಪಿವೆ. ಮನೆಗಿಂತಲೂ ಒಂದು ಹೆಜ್ಜೆಮುಂದೆ ಹೋಗಿ ಪ್ರತಿ ಕೈಯನ್ನೂ ತಲುಪಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸುದ್ದಿಗಳನ್ನು, ಜಗತ್ತಿನ ಆಗುಹೋಗುಗಳನ್ನು ಜನರು ತಿಳಿದುಕೊಳ್ಳುತ್ತಿದ್ದಾರೆ. ಈ ಮಾಧ್ಯಮವನ್ನೂ ಚುನಾವಣಾ ಆಯೋಗ ಬಳಸಿಕೊಂಡರೆ, ಯಾವ ಅಭ್ಯರ್ಥಿಯೂ ಯಾರ ಮನೆಗೂ ತೆರಳದೆ, ಒಂದು ರೂ. ಖರ್ಚು ಮಾಡದೆ ಚುನಾವಣೆಯಲ್ಲಿ ಜಯಗಳಿಸಬಹುದು. ಇದು ಒಂದು ಸಾಧ್ಯತೆ.

ಹಣದ ಆಮಿಷ ಒಡ್ಡುವಿಕೆಯಿಂದಾಗಿ ಭಾರತದ ಪ್ರಜಾಪ್ರಭುತ್ವದಲ್ಲಿ ಮತ್ತೊಂದು ಬದಲಾವಣೆ ಆಗುತ್ತಿದೆ. ಅದೆಂದರೆ ಪಕ್ಷೇತರ ಅಭ್ಯರ್ಥಿಗಳು ಬಹುತೇಕ ಇಲ್ಲದಂತೆಯೇ ಆಗಿರುವುದು. ಕೆಲವು ಚುನಾವಣೆಗಳ ಅಂಕಿ ಅಂಶಗಳನ್ನು ನೋಡೋಣ. 1957ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 179 ಕ್ಷೇತ್ರದಲ್ಲಿ 35 ಪಕ್ಷೇತರರು ಜಯಿಸಿದ್ದರು. ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ.28 ಮತ ಪಡೆದಿದ್ದರು. 1967ರಲ್ಲಿ ಒಟ್ಟು 216 ಕ್ಷೇತ್ರದಲ್ಲಿ 41 ಪಕ್ಷೇತರರು ಜಯಿಸಿದರು. 1983ರಲ್ಲಿ 224 ಕ್ಷೇತ್ರದಲ್ಲಿ ಪಕ್ಷೇತರ ಶಾಸಕರ ಸಂಖ್ಯೆ 22ಕ್ಕೆ ಇಳಿಯಿತು. ಒಟ್ಟು ಪಡೆದ ಮತ ಶೇ.15.47 ಆಯಿತು. 2008ರಲ್ಲಿ ಕೇವಲ 6 ಪಕ್ಷೇತರರು ಜಯಿಸಿದರು. ಒಟ್ಟು ಮತದಲ್ಲಿ ಪಕ್ಷೇತರರು ಪಡೆದ ಮತಗಳ ಪ್ರಮಾಣ ಕೇವಲ ಶೇ. 6.92. ಇನ್ನು 2018ರಲ್ಲಿ ಕೇವಲ ಒಬ್ಬರು ಪಕ್ಷೇತರರು ಜಯಿಸಿದರು. ಪಕ್ಷೇತರರು ಪಡೆದ ಮತಗಳ ಪ್ರಮಾಣ ಶೇ. 3.93. ಹಾಗೆಂದು ಸ್ಪರ್ಧಿಸುವ ಪಕ್ಷೇತರರ ಪ್ರಮಾಣ ಕಡಿಮೆಯಾಗಿಲ್ಲ. ಆದರೆ ಅವರು ಗೆಲ್ಲುವ ಸಾಧ್ಯತೆ ಕುಂದುತ್ತಿದೆ.

Gujarat 2nd Phase Voting

ಇನ್ನು ಲೋಕಸಭೆ ಚುನಾವಣೆಯಲ್ಲಂತೂ ಪಕ್ಷೇತರರು ಜಯಿಸುವುದು ಬಹುತೇಕ ಅಸಾಧ್ಯ ಎನ್ನುವಂತಾಗಿದೆ. ಕರ್ನಾಟಕದಲ್ಲಿ ಕಳೆದ 50 ವರ್ಷದಲ್ಲಿ ಯಾರೂ ಲೋಕಸಭೆಗೆ ಪಕ್ಷೇತರರಾಗಿ ಆಯ್ಕೆ ಆಗಿರಲಿಲ್ಲ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಜಯಿಸಿದ್ದೇ ಅರ್ಧ ಶತಮಾನದ ದಾಖಲೆ. ಮತದಾರರನ್ನು ಎಲ್ಲ ಅಭ್ಯರ್ಥಿಗಳೂ ತಲುಪಲು ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಎಲ್ಲ ಅಭ್ಯರ್ಥಿಗಳಿಗೂ, ಎಲ್ಲ ಪಕ್ಷಗಳಿಗೂ ಸೆಣೆಸುವ ಸಮಾನ ಅವಕಾಶ ಇಲ್ಲ ಎನ್ನುವುದು ಸಾಬೀತಾಗಿರುವ ಅಂಶ. ಶಿವಲಿಂಗೇಗೌಡರು ಹೇಳಿದ ಮಾರ್ಗವಿರಬಹುದು, ಅಥವಾ ಚುನಾವಣಾ ತಜ್ಞರು ಕುಳಿತು ಚರ್ಚಿಸಿ ನಿರ್ಧರಿಸುವ ಬೇರಾವುದೇ ಮಾರ್ಗವಿರಬಹುದು, ಇದನ್ನು ಸರಿಪಡಿಸಲು ಪ್ರಯತ್ನ ಮಾಡಲೇಬೇಕು.

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತದ ಬಹುತ್ವ ಕಾಪಾಡಲು ಹಿಂದು ರಾಷ್ಟ್ರವಲ್ಲದೆ ಮತ್ಯಾವ ಹಾದಿ?!

ಈಗ ಉದ್ಯಮಗಳಲ್ಲಿ Entry Barrier ತೆಗೆಯುವ ಕೆಲಸ ಆಗುತ್ತಿದೆ. ಯಾವುದೇ ವ್ಯಕ್ತಿ ತನ್ನಲ್ಲಿ ಹಣವಿಲ್ಲ, ರಾಜಕಾರಣಿಗಳ ಪರಿಚಯವಿಲ್ಲ ಎಂಬ ಕಾರಣಕ್ಕೆ ತನ್ನ ಉದ್ಯಮವನ್ನು ಆರಂಭಿಸುವುದಕ್ಕೆ ತೊಡಕಾಗಬಾರದು. ಆತನಿಗೆ ಆಸ್ತಿ ಇಲ್ಲದಿದ್ದರೂ ಬ್ಯಾಂಕ್‌ಗಳು ಸಾಲ ನೀಡಬೇಕು, ಯಾವುದೇ ಅಧಿಕಾರಿಗಳು, ರಾಜಕಾರಣಿಗಳು ಹಸ್ತಕ್ಷೇಪವಿಲ್ಲದೆ ಉದ್ಯಮ ಪರವಾನಗಿಗಳು ದೊರಕಬೇಕು ಎಂಬ ನಿಟ್ಟಿನಲ್ಲಿ ಒಂದಷ್ಟು ಸುಧಾರಣೆಗಳು ಕಾಣುತ್ತಿವೆ. ಅದನ್ನು Ease of Doing Business (EoDB) ಎಂದು ಕರೆಯಲಾಗುತ್ತದೆ. ಈ ಸೂಚ್ಯಂಕದಲ್ಲಿ ಯಾವ ದೇಶವು ಉತ್ತಮ ಸ್ಥಾನ ಹೊಂದಿದೆಯೋ, ಆ ದೇಶದಲ್ಲಿ ಉದ್ಯಮಿಗಳು ಸರಾಗವಾಗಿ ವ್ಯಾಪಾರ ವಹಿವಾಟು ನಡೆಸಬಹುದು ಎಂದರ್ಥ.

ಹಾಗಾದರೆ ಇದೇ ವಿಚಾರವನ್ನು ರಾಜಕಾರಣಕ್ಕೆ ಏಕೆ ಅನ್ವಯಿಸಬಾರದು? ಯಾರಾದರೊಬ್ಬ ರಾಜಕಾರಣಕ್ಕೆ ಪ್ರವೇಶಿಸಲು ಇರುವ ಅನೇಕ Entry Barrier ಅಂದರೆ ಆರಂಭಿಕ ಅಡೆತಡೆಗಳನ್ನು ಏಕೆ ನಿವಾರಿಸಬಾರದು? ಅದರಲ್ಲೂ ಢಾಳಾಗಿ ಕಾಣುತ್ತಿರುವ ಹಣಬಲ, ಪಕ್ಷಬಲ, ಸಮಾನ ಅವಕಾಶಗಳ ವಿಚಾರದಲ್ಲಿ ಏಕೆ ಹೊಸ ಮಾರ್ಗವನ್ನು ಕಂಡುಕೊಳ್ಳಬಾರದು? Ease of Doing Business (EoDB) ರೀತಿಯಲ್ಲಿ Ease of Doing Politics (EoDP) ಸೂಚ್ಯಂಕ ಏಕೆ ಸ್ಥಾಪನೆಯಾಗಬಾರದು? ಉದ್ಯಮ ನಡೆಸಲು ಇರುವ ಅತಿ ದೊಡ್ಡ ತೊಂದರೆ ಭ್ರಷ್ಟಾಚಾರ. EoDP ಸಂಪೂರ್ಣ ಜಾರಿ ಸಾಧ್ಯವಾದರೆ EoDB ತನ್ನಿಂತಾನೇ ಉತ್ತಮವಾಗುತ್ತದೆಯಲ್ಲವೇ? ಈ ಬಗ್ಗೆ ಒಂದಿಷ್ಟು ಆಲೋಚನೆಗಳು ನಡೆಯಲಿ. ಪಕ್ಷಾಂತರವೆಂಬ ಮತ್ತೊಂದು ಪೆಡಂಭೂತದ ಕುರಿತು ಮುಂದಿನ ಲೇಖನದಲ್ಲಿ ಚರ್ಚೆ ಮಾಡೋಣ.

ಅವಕಾಶಗಳು ಮುಖ್ಯವಾಗುತ್ತವೆ. ಭಾರತದಂತಹ ಬಹು ವೈವಿಧ್ಯತೆ ಹೊಂದಿರುವ ದೇಶದಲ್ಲಿ ಎಲ್ಲ ಸಮುದಾಯಗಳು, ಪ್ರದೇಶಗಳಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸುವ ಸಮತಟ್ಟು ನೆಲ ಇರಬೇಕು. ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಸಾಧನಗಳಿರುತ್ತವೆ. ಅದರಲ್ಲಿ ಪ್ರಮುಖವಾಗಿ ಕಾರ್ಯಕರ್ತರು. ಅದಕ್ಕಿಂತಲೂ ಪ್ರಮುಖವಾದ ಅಂಶ ಎಂದರೆ ಹಣ. ಹಣ ವ್ಯಯಿಸುವ ಸಾಮರ್ಥ್ಯ ಇಲ್ಲದವನು ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ ಎನ್ನುವುದು ಕರ್ನಾಟಕ ಶೇ. 95 ಕ್ಷೇತ್ರಗಳಲ್ಲಿ ಶತಃಸಿದ್ಧ. ಅಂದಮೇಲೆ ಹಣ ಇಲ್ಲದವನು ಉತ್ತಮ ಆಡಳಿತಗಾರ, ನೀತಿ ನಿರೂಪಕ, ಶಾಸಕ ಆಗಬಾರದು ಎಂದು ನಿರ್ಧರಿಸಲಾಗಿದೆಯೇ?

ಇದನ್ನೂ ಓದಿ: ವಿಸ್ತಾರ ಅಂಕಣ: ನರೇಂದ್ರ ಮೋದಿಯವರತ್ತ ಬೆರಳು ತೋರಿಸಿ ಎಷ್ಟು ವಿಚಾರ ಮುಚ್ಚಿಡಲು ಸಾಧ್ಯ?

Continue Reading
Advertisement
Modi in Karnataka
ಕರ್ನಾಟಕ25 mins ago

Modi in Karnataka: ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ; ನಿಷೇಧಿತ ಪ್ರದೇಶಕ್ಕೆ ನುಗ್ಗಿದ ಇಬ್ಬರು ವಶಕ್ಕೆ

rahul-gandhi-will-act-like-a-martyr-with-an-eye-on-karnataka-elections-bjp
ದೇಶ29 mins ago

ಕರ್ನಾಟಕ ಚುನಾವಣೆ ಮೇಲೆ ಕಣ್ಣಿಟ್ಟು ಹುತಾತ್ಮನಂತೆ ನಟಿಸ್ತಾ ಇರೋ ರಾಹುಲ್ ಗಾಂಧಿ: ಬಿಜೆಪಿ

Your rules don't apply to the Gandhi family; Spark of Congress MP!
ದೇಶ1 hour ago

Rahul Gandhi Disqualified : ನಿಮ್ಮ ರೂಲ್ಸ್​ ಗಾಂಧಿ ಫ್ಯಾಮಿಲಿಗೆ ಅನ್ವಯವಾಗಲ್ಲ; ಕಾಂಗ್ರೆಸ್​ ಸಂಸದನ ಕಿಡಿ!

Zaheer Khan: Team India is still sailing in an old boat; Why did Zaheer Khan say this?
ಕ್ರಿಕೆಟ್1 hour ago

Zaheer Khan: ಟೀಮ್​ ಇಂಡಿಯಾ ಇನ್ನೂ ಹಳೆಯ ಬೋಟ್​ನಲ್ಲೇ ಪ್ರಯಾಣಿಸುತ್ತಿದೆ; ಜಹೀರ್​ ಖಾನ್​ ಹೀಗೆ ಹೇಳಿದ್ದು ಏಕೆ?

Amit Shah to visit karnataka on march 26 and Participate in various programmes
ಕರ್ನಾಟಕ2 hours ago

Amit Shah Visit: ಭಾನುವಾರ ಅಮಿತ್‌ ಶಾ ರಾಜ್ಯ ಪ್ರವಾಸ; ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

heavy rainfall likely to occur at isolated places in the karnataka on March 26 and 27
ಕರ್ನಾಟಕ2 hours ago

Karnataka Rain: ಮಾ.26, 27 ರಂದು ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ

Tricolor flag flown in America; Patriots strike back at Khalistanis
ದೇಶ2 hours ago

ವಿಸ್ತಾರ ಸಂಪಾದಕೀಯ: ಅಮೆರಿಕದಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ಖಲಿಸ್ತಾನಿಗಳಿಗೆ ದೇಶಪ್ರೇಮಿಗಳ ತಿರುಗೇಟು

WPL 2023: Nita Ambani dances with team players in Khasi in finals; The video is viral
ಕ್ರಿಕೆಟ್2 hours ago

WPL 2023: ಫೈನಲ್​ಗೆ ಲಗ್ಗೆಯಿಟ್ಟ ಖಷಿಯಲ್ಲಿ ತಂಡದ ಆಟಗಾರ್ತಿಯರೊಂದಿಗೆ ಕುಣಿದು ಕುಪ್ಪಳಿಸಿದ ನೀತಾ ಅಂಬಾನಿ; ವಿಡಿಯೊ ವೈರಲ್

Final race of Moto GP today in Portugal
ಕ್ರೀಡೆ2 hours ago

Moto GP : ಫೋರ್ಚುಗಲ್​ನಲ್ಲಿ ಭಾನುವಾರ ಮೋಟೊ ಜಿಪಿ ಮೊದಲ ಸುತ್ತಿನ ಫೈನಲ್​ ರೇಸ್​

Women's Boxing: Sweetie Boora gave gold a sweet kiss
ಕ್ರೀಡೆ3 hours ago

Women’s Boxing: ಚಿನ್ನಕ್ಕೆ ಸಿಹಿ ಮುತ್ತು ನೀಡಿದ ಸ್ವೀಟಿ ಬೂರಾ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಕರ್ನಾಟಕ4 days ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ4 days ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ4 days ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ5 days ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ5 days ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ6 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ6 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ6 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ1 week ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ1 week ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!