Oil price | ಸಾರ್ವಜನಿಕ ತೈಲ ಕಂಪನಿಗಳಿಗೆ 20,000 ಕೋಟಿ ರೂ. ನೆರವು - Vistara News

ಪ್ರಮುಖ ಸುದ್ದಿ

Oil price | ಸಾರ್ವಜನಿಕ ತೈಲ ಕಂಪನಿಗಳಿಗೆ 20,000 ಕೋಟಿ ರೂ. ನೆರವು

ಅಂತಾರಾಷ್ಟ್ರೀಯ ದರ ಬ್ಯಾರೆಲ್‌ಗೆ ನೂರು ಡಾಲರ್‌ಗಿಂತ ಮೇಲಿದ್ದಾಗಲೂ ರಿಟೇಲ್ ದರವನ್ನು ಏರಿಸದಿದ್ದುದರಿಂದ, ಜಾಗತಿಕ ದರ ಇಳಿದಿರುವ ಈ ಸಂದರ್ಭದಲ್ಲಿ ನಷ್ಟ ಸರಿದೂಗಿಸಲು ರಿಟೇಲ್‌ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ತೈಲ ಸಚಿವರು ತಿಳಿಸಿದ್ದಾರೆ.

VISTARANEWS.COM


on

Petrol rate hike in Pakistan by rs 10 per liter
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತವು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಸೇರಿದಂತೆ ಸಾರ್ವಜನಿಕ ತೈಲ ಕಂಪನಿಗಳಿಗೆ ಅಡುಗೆ ಅನಿಲ ಮಾರಾಟದಲ್ಲಿ ಉಂಟಾಗುತ್ತಿರುವ ನಷ್ಟದ ಭಾಗಶಃ ಪರಿಹಾರದ (Oil price ) ಸಲುವಾಗಿ ಸುಮಾರು 20,000 ಕೋಟಿ ರೂ.ಗಳ ನೆರವನ್ನು ನೀಡಲು ನಿರ್ಧರಿಸಿದೆ.

ತೈಲ ಸಚಿವಾಲಯವು 28,000 ಕೋಟಿ ರೂ. ಪರಿಹಾರವನ್ನು ನಿರೀಕ್ಷಿಸಿತ್ತು. ಆದರೆ ಹಣಕಾಸು ಸಚಿವಾಲಯವು 20,000 ಕೋಟಿ ರೂ. ಒದಗಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ವಲಯದ ಮೂರು ಅತಿ ದೊಡ್ಡ ತೈಲ ಕಂಪನಿಗಳು ಒಟ್ಟಾಗಿ ಭಾರತದ 90% ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರ ಮತ್ತು ರಿಟೇಲ್‌ ದರದ ವ್ಯತ್ಯಾಸದಿಂದ ತ್ರೈಮಾಸಿಕ ಲೆಕ್ಕದಲ್ಲಿ ನಷ್ಟಕ್ಕೀಡಾಗಿವೆ.

ಸರ್ಕಾರ ಪ್ರಸಕ್ತ ಸಾಲಿನ ತೈಲ ಸಬ್ಸಿಡಿ ವೆಚ್ಚವಾಗಿ 5,800 ಕೋಟಿ ರೂ. ಮತ್ತು ರಸಗೊಬ್ಬರ ಸಬ್ಸಿಡಿಯಾಗಿ 1.05 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು.

ಕಚ್ಚಾ ತೈಲ ದರ ಇಳಿದರೂ, ಪೆಟ್ರೋಲ್‌- ಡೀಸೆಲ್ ದರ ಯಥಾಸ್ಥಿತಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ದರದಲ್ಲಿ ಕಳೆದ ಏಳು ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದರೂ, ಪೆಟ್ರೋಲ್‌ ಮತ್ತು ಡೀಸೆಲ್‌ನ ರಿಟೇಲ್‌ ದರಗಳಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲ ಎಂದು ವರದಿಯಾಗಿದೆ.

ಕಳೆದೊಂದು ವಾರದಿಂದೀಚೆಗೆ ಬ್ರೆಂಟ್‌ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗಿಂತ ಕೆಳಕ್ಕಿಳಿದಿದೆ. ಕಳೆದ ಫೆಬ್ರವರಿಯಿಂದೀಚೆಗಿನ ಕನಿಷ್ಠ ದರ ಇದಾಗಿದೆ. ಹೀಗಿದ್ದರೂ, ಪೆಟ್ರೋಲ್‌ ಮತ್ತು ಡೀಸೆಲ್‌ನ ರಿಟೇಲ್‌ ದರಗಳು ಇಳಿಕೆಯಾಗಿಲ್ಲ.

ಒಂದು ಕಡೆ ರಷ್ಯಾದಿಂದ ತೈಲ ಪೂರೈಕೆ ಇಳಿಕೆಯಾಗುವ ಸಾಧ್ಯತೆ, ಮತ್ತೊಂದು ಕಡೆ ಒಪೆಕ್‌ ತನ್ನ ತೈಲೋತ್ಪಾದನೆಯನ್ನು ಕಡಿತಗೊಳಿಸುವ ನಿರೀಕ್ಷೆ ಇದೆ. ಇದರ ಪರಿಣಾಮ ತೈಲ ದರಗಳು ಮತ್ತೆ ಏರಿಕೆಯಾಗುವ ಸಾಧ್ಯತೆಯೂ ಇದೆ. ಕಳೆದ 158 ದಿನಗಳಿಂದ ಪೆಟ್ರೋಲ್-ಡೀಸೆಲ್‌ ದರ ಯಥಾಸ್ಥಿತಿಯಲ್ಲಿ ಇವೆ.

ಕಚ್ಚಾ ತೈಲ ದರಗಳು ಅಂತಾರಾಷ್ಟ್ರೀಯವಾಗಿ ಉನ್ನತ ಮಟ್ಟದಲ್ಲಿ ಇದ್ದಾಗ ರಿಟೇಲ್‌ ದರವನ್ನು ತೈಲ ಕಂಪನಿಗಳು ಏರಿಸಿರಲಿಲ್ಲ. ಇದರಿಂದ ಉಂಟಾಗಿರುವ ನಷ್ಟದಲ್ಲಿ ಸ್ವಲ್ಪ ಪಾಲನ್ನು ಸರಿದೂಗಿಸಬೇಕಲ್ಲವೇ ಎಂದು ತೈಲ ಸಚಿವ ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದರು.

ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ಏಪ್ರಿಲ್‌ನಲ್ಲಿ 102.97 ಡಾಲರ್‌, ಮೇನಲ್ಲಿ 109.51 ಡಾಲರ್‌, ಜೂನ್‌ನಲ್ಲಿ 116.01 ಡಾಲರ್‌ ಇತ್ತು. ಜುಲೈನಲ್ಲಿ 105 ಡಾಲರ್‌, ಆಗಸ್ಟ್‌ನಲ್ಲಿ 92.87 ಡಾಲರ್‌ಗೆ ಇಳಿದಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Indian Railways: ಹಿರಿಯ ನಾಗರಿಕ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಲೋವರ್ ಬರ್ತ್ ಕಾಯ್ದಿರಿಸುವಿಕೆಗೆ ಹೊಸ ನಿಯಮ

Indian Railways: ಪ್ರಯಾಣಿಕರ ಮನ ಗೆದ್ದಿರುವ ಭಾರತೀಯ ರೈಲ್ವೆ ಹೊಸದೊಂದು ನಿಯಮ ಜಾರಿಗೊಳಿಸಿದೆ. ಇನ್ನು ಮುಂದೆ ಹಿರಿಯ ನಾಗರಿಕರು ಇನ್ನಷ್ಟು ಆರಾಮದಾಯಕವಾಗಿ ರೈಲ್ವೆ ಪ್ರಯಾಣ ನಡೆಸಬಹುದು. ಸಾಮಾನ್ಯವಾಗಿ ಹಿರಿಯ ನಾಗರಿಕರು ವಿವಿಧ ಕಾರಣಗಳಿಂದ ಲೋವರ್‌ ಬರ್ತ್‌ ಹೊಂದಲು ಬಯಸುತ್ತಾರೆ. ಹೀಗಾಗಿ ವಯಸ್ಸಾದ ಪ್ರಯಾಣಿಕರಿಗೆ ಕೆಳ ಬರ್ತ್‌ಗಳನ್ನು ಕಾಯ್ದಿರಿಸುವುದಕ್ಕೆ ಆದ್ಯತೆ ನೀಡುವ ಹೊಸ ನಿಯಮ ಜಾರಿಗೆ ತರಲಾಗಿದೆ.

VISTARANEWS.COM


on

Indian Railways
Koo

ನವದೆಹಲಿ: ದೇಶದಲ್ಲಿ ರೈಲು ಪ್ರಯಾಣ ಸುರಕ್ಷಿತ ಮತ್ತು ಹೆಚ್ಚು ಅನುಕೂಲ ಎಂದೇ ಪರಿಗಣಿಸಲಾಗುತ್ತದೆ. ದೂರ ಸಂಚಾರ ಇರಲಿ ಸಮೀಪದ ಗಮ್ಯವೇ ಇರಲಿ ಬಹುತೇಕರ ಮೊದಲ ಆಯ್ಕೆ ರೈಲು ಪ್ರಯಾಣವೇ ಆಗಿರುತ್ತದೆ. ಅದರಲ್ಲೂ ವಯಸ್ಸಾದವರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ಇದು ಇನ್ನೂ ಅನೂಕೂಲ. ಇತ್ತೀಚಿನ ದಿನಗಳಲ್ಲಿ ರೈಲು ಸೇವೆಯೂ ಸಾಕಷ್ಟು ಸುಧಾರಣೆ ಕಂಡಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಹತ್ತಿರವಾಗಿದೆ. ಈ ಮಧ್ಯೆ ಭಾರತೀಯ ರೈಲ್ವೆ (Indian Railways) ಹಿರಿಯ ನಾಗರಿಕರಿಗೆ ಗುಡ್‌ನ್ಯೂಸ್‌ ನೀಡಿದೆ. ಲೋವರ್ ಬರ್ತ್ ಕಾಯ್ದಿರಿಸುವಿಕೆ (Lower Berth Reservation)ಯ ನಿಯಮದಲ್ಲಿ ಬದಲಾವಣೆ ತಂದಿದೆ.

ಸಾಮಾನ್ಯವಾಗಿ ಹಿರಿಯ ನಾಗರಿಕರು ವಿವಿಧ ಕಾರಣಗಳಿಂದ ಲೋವರ್‌ ಬರ್ತ್‌ ಹೊಂದಲು ಬಯಸುತ್ತಾರೆ. ಒಂದು ವೇಳೆ ಅಪ್ಪರ್ ಬರ್ತ್ ಲಭ್ಯವಿದ್ದರೆ ಅದನ್ನು ಲೋವರ್‌ ಬರ್ತ್‌ಗೆ ಬದಲಾಯಿಸುವುದು ದೊಡ್ಡ ತಲೆನೋವಿನ ಸಂಗತಿ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ವಯಸ್ಸಾದ ಪ್ರಯಾಣಿಕರಿಗೆ ಕೆಳ ಬರ್ತ್‌ಗಳನ್ನು ಕಾಯ್ದಿರಿಸುವುದಕ್ಕೆ ಆದ್ಯತೆ ನೀಡುವ ಹೊಸ ನಿಯಮ ಜಾರಿಗೆ ತರಲಾಗಿದೆ. ರೈಲು ಪ್ರಯಾಣದ ಸಮಯದಲ್ಲಿ ಹಿರಿಯ ನಾಗರಿಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ʼʼವೃದ್ಧರಿಗೆ, ವಯಸ್ಸಾದವರಿಗೆ ಅನುಕೂಲ ಒದಗಿಸಲು, ಅತ್ಯುತ್ತಮ ಪ್ರಯಾಣದ ಅನುಭವ ನೀಡಲು ಲೋವರ್ ಬರ್ತ್‌ಗಳನ್ನು ಕಾಯ್ದಿರಿಸುವ ಆಯ್ಕೆ ಪರಿಚಯಿಸಿದ್ದೇವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವರ್ಗದ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ರೈಲ್ವೆ ಇಲಾಖೆ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಭಾರತೀಯ ರೈಲ್ವೆಯ ಪ್ರಕಟಣೆ ಪ್ರಕಾರ, ಪ್ರಯಾಣಿಕರು ಲೋವರ್ ಬರ್ತ್ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಬುಕಿಂಗ್ ಸಮಯದಲ್ಲಿ ಲೋವರ್ ಬರ್ತ್ ಮೀಸಲಾತಿಯ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಬೇಗ ಸೀಟು ಕಾಯ್ದಿರಿಸಿದವರಿಗೆ ಲೋವರ್ ಬರ್ತ್ ಸಿಗುತ್ತದೆ. ಲಭ್ಯತೆಯ ಆಧಾರದ ಮೇಲೆ ಸಾಮಾನ್ಯ ಕೋಟಾದಡಿ ಸೀಟುಗಳನ್ನು ಸ್ವಯಂಚಾಲಿತವಾಗಿ ನಿಗದಿಪಡಿಸಲಾಗಿದ್ದರೂ ಪ್ರಯಾಣಿಕರು ಲಭ್ಯವಿದ್ದರೆ ಲೋವರ್ ಬರ್ತ್‌ಗಾಗಿ ರೈಲು ಟಿಕೆಟ್ ಪರೀಕ್ಷಕರೊಂದಿಗೆ (TTE) ಮಾತುಕತೆ ನಡೆದಬಹುದಾಗಿದೆ.

ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ

ಈ ಹೊಸ ನಿಯಮದ ಅನುಷ್ಠಾನವು ಹಿರಿಯ ನಾಗರಿಕರ ಪ್ರಯಾಣದ ಅನುಭವವನ್ನು ಸುಧಾರಿಸಲಿದೆ ಎನ್ನುವ ನಿರೀಕ್ಷೆ ಇದೆ. ಆರೋಗ್ಯ ಸಮಸ್ಯೆ ಇರುವ ವೃದ್ಧ ಸಂಬಂಧಿಯೊಬ್ಬರು ಲೋವರ್ ಬರ್ತ್ ಬುಕ್ ಮಾಡಿದ್ದರೂ ಅವರಿಗೆ ಅಪ್ಪರ್‌ ಬರ್ತ್‌ಗಳ ಹಂಚಿಕೆ ಮಾಡಿರುವ ಬಗ್ಗೆ ವ್ಯಕ್ತಿಯೊಬ್ಬರು ಇತ್ತೀಚೆಗೆ ಸಾಮಾಜಿಕ ಜಾಲತಾಣ ಪ್ರಶ್ನಿಸಿದ್ದರು. ಇದು ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಹೀಗಾಗಿ ಈ ಹೊಸ ನಿಯಮ ಜಾರಿಗೆ ತರಲಾಗಿದೆ. ʼʼಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡಲು ಸದಾ ಸಿದ್ಧ. ಈ ರೀತಿಯ ಅಗತ್ಯ ಎಲ್ಲ ಕ್ರಮಗಳು ಕೈಗೊಳ್ಳಲಾಗುವುದುʼʼ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

Continue Reading

Lok Sabha Election 2024

Lok Sabha Election 2024: ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್ ಬಿಜೆಪಿಗೆ ಗುಡ್‌ ಬೈ; ನಾಳೆ ಕಾಂಗ್ರೆಸ್‌ ಸೇರ್ಪಡೆ

Lok Sabha Election 2024: ನಿತಿನ್‌ ಬಿಜೆಪಿ ಸೇರ್ಪಡೆ ಸಂಬಂಧ ಮಾಲೀಕಯ್ಯ ಗುತ್ತೇದಾರ್‌ ಅವರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. 2018ರ ಚುನಾವಣೆಯಲ್ಲಿ ನಾನು ಬಿಜೆಪಿಯಿಂದ ಗೆಲ್ಲಬೇಕಿತ್ತು. ನಿತಿನ್‌ ಮತ್ತು ಕೆಲವು ಬಿಜೆಪಿ ಮುಖಂಡರು ನನಗೆ ಮೋಸ ಮಾಡಿದರು. 2023ರಲ್ಲಿ ನಿತಿನ್‌ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ನನ್ನನ್ನು ಸೋಲಿಸಿದ್ದಾನೆ. ಈಗ ಆತನಿಂದ ಕೋಟಿ ಕೋಟಿ ಹಣ ಪಡೆದು ಅವನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್‌ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ.

VISTARANEWS.COM


on

Lok Sabha Election 2024 Malikayya Guttedar Joining Congress April 19
Koo

ಕಲಬುರಗಿ: ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲೇ ಕಲಬುರಗಿಯಲ್ಲಿ ಬಿಜೆಪಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್ (Malikayya Guttedar) ಘರ್ ವಾಪ್ಸಿಗೆ ಸಿದ್ಧತೆ ನಡೆಸಿದ್ದಾರೆ. ಅವರು ಶುಕ್ರವಾರ (ಏಪ್ರಿಲ್‌ 18) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ (KPCC Office) ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಂದ ಅಫಜಲಪುರ ಶಾಸಕ ಎಂ.ವೈ. ಪಾಟೀಲ್‌ಗೆ ದೂರವಾಣಿ ಕರೆ ಹೋಗಿದೆ. ಅಲ್ಲಿ ಮಾಲೀಕಯ್ಯ ಗುತ್ತೇದಾರ್‌ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರ ಒಪ್ಪಿಗೆಯನ್ನೂ ಪಡೆದುಕೊಳ್ಳಲಾಗಿದೆ. ಹೀಗಾಗಿ ಅವರ ಪಕ್ಷ ಸೇರ್ಪಡೆಗೆ ಯಾವುದೇ ವಿರೋಧ ಎದುರಾಗಿಲ್ಲ ಎನ್ನಲಾಗಿದೆ.

ಏಕೆ ಈ ನಿರ್ಧಾರ?

ಸಹೋದರ ನಿತಿನ್ ಗುತ್ತೇದಾರ್ ಹಾಗೂ ಮಾಲೀಕಯ್ಯ ಗುತ್ತೇದಾರ್ ನಡುವಿನ ಸಂಬಂಧ ಮೊದಲಿನಿಂದಲೂ ಎಣ್ಣೆ ಶೀಗೇಕಾಯಿ ಆಗಿತ್ತು. ಒಬ್ಬರು ಒಂದು ಪಕ್ಷದಲ್ಲಿದ್ದರೆ ಮತ್ತೊಬ್ಬರು ಆ ಪಕ್ಷವನ್ನು ತೊರೆಯುತ್ತಾರೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೀಕಯ್ಯ ಗುತ್ತೇದಾರ್‌ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಆಗ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಿತಿನ್‌ ಗುತ್ತೇದಾರ್‌ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಇದರಿಂದ ಮಾಲೀಕಯ್ಯ ಗುತ್ತೇದಾರ್‌ ಸೋಲು ಕಾಣಬೇಕಾಯಿತು. ಈಗ ಈಚೆಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿತಿನ್‌ ಗುತ್ತೇದಾರ್‌ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇದು ಮಾಲೀಕಯ್ಯ ಅವರ ಕಣ್ಣನ್ನು ಕೆಂಪಗಾಗಿಸಿತ್ತು.

ಬಹಿರಂಗ ಅಸಮಾಧಾನ

ನಿತಿನ್‌ ಬಿಜೆಪಿ ಸೇರ್ಪಡೆ ಸಂಬಂಧ ಮಾಲೀಕಯ್ಯ ಗುತ್ತೇದಾರ್‌ ಅವರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. 2018ರ ಚುನಾವಣೆಯಲ್ಲಿ ನಾನು ಬಿಜೆಪಿಯಿಂದ ಗೆಲ್ಲಬೇಕಿತ್ತು. ನಿತಿನ್‌ ಮತ್ತು ಕೆಲವು ಬಿಜೆಪಿ ಮುಖಂಡರು ನನಗೆ ಮೋಸ ಮಾಡಿದರು. 2023ರಲ್ಲಿ ನಿತಿನ್‌ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ನನ್ನನ್ನು ಸೋಲಿಸಿದ್ದಾನೆ. ಈಗ ಆತನಿಂದ ಕೋಟಿ ಕೋಟಿ ಹಣ ಪಡೆದು ಅವನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್‌ ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: Lok Sabha Election 2024: ಈ ಬಾರಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ: ಸಿಎಂ ಸಿದ್ದರಾಮಯ್ಯ ಭವಿಷ್ಯ

ಕಾಂಗ್ರೆಸ್‌ ಸೇರ್ಪಡೆಗೆ ಮುಹೂರ್ತ ಫಿಕ್ಸ್‌

ಈಗ ಲೋಕಸಭಾ ಚುನಾವಣೆ ನಡೆಯುತ್ತಿದೆ. ಮಾಲಿಕಯ್ಯ ಗುತ್ತೇದಾರ್ ಈ ಹಿಂದೆ ಸಚಿವರೂ ಸಹ ಆಗಿದ್ದವರು. ಅಲ್ಲದೆ, ಜಿಲ್ಲೆಯಲ್ಲಿ ಅವರದ್ದೇ ಆದ ಪ್ರಭಾವವೂ ಇದೆ. ಈಗ ಅವರ ವಿರೋಧಿ ನಿತಿನ್‌ ಗುತ್ತೇದಾರ್‌ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಅವರನ್ನು ಸೆಳೆದರೆ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಅದಕ್ಕೆ ಸರಿಯಾಗಿ ಮಾಲೀಕಯ್ಯ ಸಹ ಕಾಂಗ್ರೆಸ್‌ ಕದವನ್ನು ತಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪಕ್ಷ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ, ಆ ಭಾಗದ ಶಾಸಕ ಎಂ.ವೈ. ಪಾಟೀಲ್‌ ಅವರ ಒಪ್ಪಿಗೆಯನ್ನೂ ಪಡೆದುಕೊಂಡಿದ್ದಾರೆ. ಈಗ ಮಾಲೀಕಯ್ಯ ಅವರ ಸೇರ್ಪಡೆ ಕಾಂಗ್ರೆಸ್‌ಗೆ ಯಾವ ರೀತಿಯಾಗಿ ಲಾಭ ತಂದುಕೊಡಲಿದೆ ಎಂಬ ಲೆಕ್ಕಾಚಾರಗಳು ರಾಜಕೀಯ ಪಡೆಸಾಲೆಗಳಲ್ಲಿ ನಡೆಯುತ್ತಿವೆ.

Continue Reading

ಪ್ರಮುಖ ಸುದ್ದಿ

Lok Sabah Election : ತಮಿಳುನಾಡಿನಲ್ಲಿ ಕತ್ತೆಗಳ ಮೂಲಕ ಹಳ್ಳಿಗಳಿಗೆ ಇವಿಎಂ ತಲುಪಿಸಿದ ಅಧಿಕಾರಿಗಳು!

Lok Sabah Election: ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ದಿಂಡಿಗಲ್ ಜಿಲ್ಲೆಯ ನಥಮ್ ಪ್ರದೇಶದ ಹಳ್ಳಿಗಳಿಗೆ ಕತ್ತೆಗಳು ಮೇಲೇರಿಸಿ ಇವಿಎಂಗಳನ್ನು ಸಾಗಿಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಸಂಸ್ಥೆ ಎಎನ್ಐ ಈ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದೆ.

VISTARANEWS.COM


on

Lok Sabah Election
Koo

ಚೆನ್ನೈ: ತಮಿಳುನಾಡಿನ ಎಲ್ಲ 39 ಲೋಕಸಭಾ ಕ್ಷೇತ್ರಗಳಿಗೆ (Lok Sabah Election) ಏಪ್ರಿಲ್ 19ರಂದು ಮತದಾನ ನಡೆಯಲಿದೆ. ಇದು 17ನೇ ಲೋಕಸಭೆಗೆ ಮೊದಲ ಹಂತದ ಚುನಾವಣಾ ಪ್ರಕ್ರಿಯೆಯಾಗಿದೆ. ಮತದಾನಕ್ಕಾಗಿ ಅಧಿಕಾರಿಗಳು ಸಕಲ ಸಿದ್ದತೆ ನಡೆಸಲಾಗಿದ್ದು, ಬೂತ್​ಗಳಿಗೆ ಇವಿಎಂ ಯಂತ್ರಗಳು ತಲುಪಿವೆ. ಏತನ್ಮಧ್ಯೆ ತಮಿಳುನಾಡಿನಲ್ಲಿ ಮತದಾನದ ಒಂದು ದಿನ ಮುಂಚಿತವಾಗಿ ಕತ್ತೆಗಳ ಮೂಲಕ ಇವಿಎಂಗಳನ್ನು ದೂರದ ಪ್ರದೇಶಗಳಿಗೆ ಸಾಗಿಸುವ ವೀಡಿಯೊವೊಂದು ವೈರಲ್ ಆಗಿದೆ. ಇದು ರಸ್ತೆ ಮೂಲಸೌಕರ್ಯದ ಕೊರತೆಯ ಚರ್ಚೆಯನ್ನು ಹುಟ್ಟುಹಾಕಿದೆ.

ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ದಿಂಡಿಗಲ್ ಜಿಲ್ಲೆಯ ನಥಮ್ ಪ್ರದೇಶದ ಹಳ್ಳಿಗಳಿಗೆ ಕತ್ತೆಗಳು ಮೇಲೇರಿಸಿ ಇವಿಎಂಗಳನ್ನು ಸಾಗಿಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಸಂಸ್ಥೆ ಎಎನ್ಐ ಈ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಸ್ಥಳೀಯರು ಇವಿಎಂಗಳನ್ನು ಲೋಡ್ ಮಾಡುವುದನ್ನು ಮತ್ತು ನಂತರ ಇವಿಎಂಗಳನ್ನು ಕತ್ತೆಗಳಿಗೆ ಕಟ್ಟುವುದನ್ನು ವೀಡಿಯೊದಲ್ಲಿ ಕಾಣಬಹುದು. ವೀಡಿಯೊ ಮುಂದುವರಿಯುತ್ತಿದ್ದಂತೆ, ಕತ್ತೆಗಳು ಬಿಗಿ ಭದ್ರತೆಯಲ್ಲಿ ಇವಿಎಂಗಳನ್ನು ಹೊತ್ತುಕೊಂಡು ಹೋಗುವುದನ್ನು ನೋಡಬಹುದು.

ಏಜೆನ್ಸಿ ಏಪ್ರಿಲ್ 18 ರಂದು ವೀಡಿಯೊವನ್ನು ಹಂಚಿಕೊಂಡಿದೆ. ಅಲ್ಲಿಂದ ಅದು 41,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಅದೆರ ಸಂಖ್ಯೆಗಳು ಇನ್ನೂ ಹೆಚ್ಚುತ್ತಿವೆ. ಅನೇಕರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಪೋಸ್ಟ್ ನ ಕಾಮೆಂಟ್ ವಿಭಾಗವನ್ನು ಬಳಸಿಕೊಂಡಿದ್ದಾರೆ.

“ನಾವು ಗಗನಯಾತ್ರಿಗಳನ್ನು ಚಂದ್ರನಿಗೆ ಕಳುಹಿಸಲು ಸಿದ್ಧರಾಗುತ್ತಿದ್ದೇವೆ. ಆದರೆ ದೂರದ ಪ್ರದೇಶಗಳಲ್ಲಿ ಹೆಲಿಕಾಪ್ಟರ್​ ಮೂಲಕ ಮತ ಪೆಟ್ಟಿಗೆ ತರಲು ಸಾಧ್ಯವಾಗುತ್ತಿಲ್ಲ. ಇಸ್ರೋದ ಆರಂಭಿಕ ದಿನಗಳಲ್ಲಿ ಬೈಸಿಕಲ್​​ಗಳಲ್ಲಿ ರಾಕೆಟ್ ಭಾಗಗಳನ್ನು ಸಾಗಿಸುವ ಚಿತ್ರ ನೆನಪಿರಬಹುದು. ಈ ವೀಡಿಯೊವನ್ನು ನೆನಪಿಟ್ಟುಕೊಳ್ಳಿ” ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Arvind Kejriwal : ಜಾಮೀನಿಗಾಗಿ ಕುತಂತ್ರ; ಸಿಹಿ ತಿಂಡಿ ತಿಂದು ಸಕ್ಕರೆ ಕಾಯಿಲೆ ಎನ್ನುತ್ತಿರುವ ಕೇಜ್ರಿವಾಲ್​ ಎಂದ ಇಡಿ

“ಇದು ಭಾರತದ ಚುನಾವಣಾ ಆಯೋಗದ ಮೇಲೆ ಕೆಟ್ಟ ಸ್ಥಿತಿಗೆ ಉದಾಹರಣೆ” ಎಂದು ಇನ್ನೊಬ್ಬರು ಹೇಳಿದರು.

ಕಳಪೆ ರಸ್ತೆ ಮೂಲಸೌಕರ್ಯಗಳ ಬಗ್ಗೆ ಅನೇಕರು ಆಡಳಿತಾರೂಢ ಸರ್ಕಾರವನ್ನು ಟೀಕಿಸಿದ್ದಾರೆ. ಒಬ್ಬರು ಇದನ್ನು “ಡಿಎಂಕೆ ಅಭಿವೃದ್ಧಿ” ಎಂದು ಕರೆದಿದ್ದಾರೆ.

ಲೋಕಸಭಾ ಚುನಾವಣೆ 2024: ಮೊದಲ ಹಂತದ ಮತದಾನ

18ನೇ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆಯಲಿದೆ. ಈ ಹಂತದಲ್ಲಿ 21 ರಾಜ್ಯಗಳ ಒಟ್ಟು 102 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಪೈಕಿ ಪುದುಚೇರಿಯ ಏಕೈಕ ಕ್ಷೇತ್ರ ಸೇರಿದಂತೆ ತಮಿಳುನಾಡಿನ 39 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Continue Reading

ಪ್ರಮುಖ ಸುದ್ದಿ

Israel Iran War : ಇಸ್ರೇಲ್​ ಮೇಲಿನ ದಾಳಿಗೆ ಪ್ರತಿಕಾರ; ಅಮೆರಿಕ, ಬ್ರಿಟನ್ ನಿಂದ ಇರಾನ್​​ಗೆ ಭಾರಿ ನಿರ್ಬಂಧ

Israel Iran War: ಡಮಾಸ್ಕಸ್​ನಲ್ಲಿರುವ ಇರಾನಿನ ದೂತಾವಾಸದ ಮೇಲೆ ಏಪ್ರಿಲ್ 1 ರಂದು ನಡೆದ ವಾಯು ದಾಳಿಗೆ ಪ್ರತೀಕಾರವಾಗಿ ಇರಾನ್​ ಶನಿವಾರ ತಡರಾತ್ರಿ ಇಸ್ರೇಲ್ ಮೇಲೆ ತನ್ನ ಮೊದಲ ನೇರ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿತು. ದೊಡ್ಡ ಪ್ರಮಾಣದ ದಾಳಿಯು 300 ಕ್ಕೂ ಹೆಚ್ಚು ಡ್ರೋನ್​ಗಳು ಮತ್ತು ಕ್ಷಿಪಣಿಗಳನ್ನು ಒಳಗೊಂಡಿದ್ದವು.

VISTARANEWS.COM


on

Iran Israel war
Koo

ಬೆಂಗಳೂರು: ಇಸ್ರೇಲ್ ಮೇಲಿನ ಇರಾನ್​ ಮಿಲಿಟರಿ ದಾಳಿಗೆ (Israel Iran War) ಪ್ರತಿಕ್ರಿಯೆಯಾಗಿ ಯುನೈಟೆಡ್ ಸ್ಟೇಟ್ಸ್ ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್ ಗುರುವಾರ ವ್ಯಾಪಕ ಕೈಗಾರಿಕೆ ಬೆಂಬಲ ಹಿಂದೆಗೆತ ಸೇರಿದಂತೆ ನಿರ್ಬಂಧಗಳನ್ನು ವಿಧಿಸಿವೆ . “ಏಪ್ರಿಲ್ 13 ರ ದಾಳಿಯಲ್ಲಿ ಬಳಸಲಾದ ಇರಾನ್​ನ ಮಾನವ ರಹಿತ ಯುದ್ಧ ವಿಮಾನಗಳ ಕಾರ್ಯಾಚರಣೆಯಾಗಿರುವ ಶಹೀದ್​​ಗೆ ಎಂಜಿನ್ ಪೂರೈಕೆಗಳ ಮೇಲೆ ನಿರ್ಬಂಧ ಹೇರಲಾಗಿದೆ. ಜತೆಗೆ ಯುಎವಿ (ಮಾನವ ರಹಿತ ಯುದ್ಧ ಡ್ರೊನ್​ಗಳು) ಉತ್ಪಾದನೆಗೆ ನೆರವಾಗುವ 16 ವ್ಯಕ್ತಿಗಳು ಮತ್ತು ಎರಡು ಘಟಕಗಳಿಗೆ ನಿರ್ಬಂಧಗಳನ್ನು ಪ್ರಕಟಿಸಲಾಗಿದೆ.

ಇರಾನ್​​ನ ಯುಎವಿ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕೈಗಾರಿಕೆಗಳಲ್ಲಿ ಭಾಗಿಯಾಗಿರುವ ಹಲವಾರು ಮಿಲಿಟರಿ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಘಟಕಗಳಿಗೆ ಯುನೈಟೆಡ್ ಕಿಂಗ್ಡಮ್ ನಿರ್ಬಂಧಗಳನ್ನು ವಿಧಿಸಿದೆ.

ಡಮಾಸ್ಕಸ್​ನಲ್ಲಿರುವ ಇರಾನಿನ ದೂತಾವಾಸದ ಮೇಲೆ ಏಪ್ರಿಲ್ 1 ರಂದು ನಡೆದ ವಾಯು ದಾಳಿಗೆ ಪ್ರತೀಕಾರವಾಗಿ ಇರಾನ್​ ಶನಿವಾರ ತಡರಾತ್ರಿ ಇಸ್ರೇಲ್ ಮೇಲೆ ತನ್ನ ಮೊದಲ ನೇರ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿತು. ದೊಡ್ಡ ಪ್ರಮಾಣದ ದಾಳಿಯು 300 ಕ್ಕೂ ಹೆಚ್ಚು ಡ್ರೋನ್​ಗಳು ಮತ್ತು ಕ್ಷಿಪಣಿಗಳನ್ನು ಒಳಗೊಂಡಿದ್ದವು. ಅವುಗಳಲ್ಲಿ ಹೆಚ್ಚಿನವು ಇಸ್ರೇಲ್ ಮತ್ತು ಯುಎಸ್ ಮತ್ತು ಯುಕೆ ಸೇರಿದಂತೆ ಅದರ ಮಿತ್ರರಾಷ್ಟ್ರಗಳ ಪ್ರತಿ ದಾಳಿಯಿಂದ ನಾಶವಾಗಿದ್ದವು.

ಈ ದಾಳಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದರು.

“ಇಂದು, ಯುನೈಟೆಡ್ ಕಿಂಗ್​ಡಮ್​ನ ಸಮನ್ವಯದೊಂದಿಗೆ ಮತ್ತು ಮಿತ್ರರಾಷ್ಟ್ರಗಳೊಂದಿಗೆ ಸಮಾಲೋಚಿಸಿ, ಇಸ್ರೇಲ್ ಮೇಲಿನ ಇರಾನ್​​ ದಾಳಿಗೆ ಪ್ರತಿಕ್ರಿಯಿಸಲು ನಾವು ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ಯುಎಸ್ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Arvind Kejriwal : ಜಾಮೀನಿಗಾಗಿ ಕುತಂತ್ರ; ಸಿಹಿ ತಿಂಡಿ ತಿಂದು ಸಕ್ಕರೆ ಕಾಯಿಲೆ ಎನ್ನುತ್ತಿರುವ ಕೇಜ್ರಿವಾಲ್​ ಎಂದ ಇಡಿ

ಮುಂದಿನ ದಿನಗಳು ಮತ್ತು ವಾರಗಳಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತೇವೆ. ಇರಾನ್ ಅನ್ನು ಎದುರಿಸಲು ನಾವು ನಮ್ಮ ನಿರ್ಬಂಧಗಳ ಅಧಿಕಾರವನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಇರಾನ್​​ ಯುಎವಿ ಕಾರ್ಯಕ್ರಮದ ವಿರುದ್ಧದ ನಿರ್ಬಂಧಗಳ ಜೊತೆಗೆ, ಇರಾನ್​​ ಉಕ್ಕು ಉದ್ಯಮಕ್ಕೆ ಬಿಡಿ ಭಾಗಗಳನ್ನು ಒದಗಿಸುವ ಐದು ಕಂಪನಿಗಳಿಗೆ ಅಮೆರಿಕೆ ನಿರ್ಬಂಧ ವಿಧಿಸಿದೆ.

“ಇರಾನ್​​ ಲೋಹಗಳ ವಲಯವು ವಾರ್ಷಿಕವಾಗಿ ಹಲವಾರು ಶತಕೋಟಿ ಡಾಲರ್ ಆದಾಯವನ್ನು ಉತ್ಪಾದಿಸುತ್ತದೆ, ಹೆಚ್ಚಿನವು ಆಮದು ಮಾಡಿದ ಬಳಿಕ ಬರುತ್ತವೆ” ಎಂದು ಖಜಾನೆ ಇಲಾಖೆ ಹೇಳಿದೆ, ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್​ಗೆ ವಾಹನಗಳನ್ನು ಒದಗಿಸುವ ಕಂಪನಿಗಳಿಗೂ ನಿರ್ಬಂಧ ಹಾಕಲಾಗಿದೆ.

Continue Reading
Advertisement
congress workers meeting in kudligi
ವಿಜಯನಗರ17 mins ago

Lok Sabha Election 2024: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಗೆಲ್ಲಿಸಲು ಸಂತೋಷ್‌ ಲಾಡ್‌ ಮನವಿ

Indian Railways
ದೇಶ38 mins ago

Indian Railways: ಹಿರಿಯ ನಾಗರಿಕ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಲೋವರ್ ಬರ್ತ್ ಕಾಯ್ದಿರಿಸುವಿಕೆಗೆ ಹೊಸ ನಿಯಮ

Man death in tiger attack in Nittur village
ಕೊಡಗು48 mins ago

Wild Animals Attack: ನಿಟ್ಟೂರು ಗ್ರಾಮದಲ್ಲಿ ಹುಲಿ ದಾಳಿಗೆ ವ್ಯಕ್ತಿ ಬಲಿ; ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಸಾವು

Surapura Assembly Constituency By election BJP candidate Raju Gowda filed nomination
ಯಾದಗಿರಿ52 mins ago

Yadgiri News: ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ; ಬಿಜೆಪಿ ಅಭ್ಯರ್ಥಿ ರಾಜುಗೌಡ ನಾಮಪತ್ರ ಸಲ್ಲಿಕೆ

Preity Zinta
ಕ್ರೀಡೆ1 hour ago

Preity Zinta : ರೋಹಿತ್​ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್​

Lok Sabha Election 2024 Malikayya Guttedar Joining Congress April 19
Lok Sabha Election 20241 hour ago

Lok Sabha Election 2024: ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್ ಬಿಜೆಪಿಗೆ ಗುಡ್‌ ಬೈ; ನಾಳೆ ಕಾಂಗ್ರೆಸ್‌ ಸೇರ್ಪಡೆ

Lok Sabah Election
ಪ್ರಮುಖ ಸುದ್ದಿ1 hour ago

Lok Sabah Election : ತಮಿಳುನಾಡಿನಲ್ಲಿ ಕತ್ತೆಗಳ ಮೂಲಕ ಹಳ್ಳಿಗಳಿಗೆ ಇವಿಎಂ ತಲುಪಿಸಿದ ಅಧಿಕಾರಿಗಳು!

DRDO
ತಂತ್ರಜ್ಞಾನ2 hours ago

DRDO Test: ದೇಶೀಯ ತಂತ್ರಜ್ಞಾನದ ಕ್ರೂಸ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ

Iran Israel war
ಪ್ರಮುಖ ಸುದ್ದಿ2 hours ago

Israel Iran War : ಇಸ್ರೇಲ್​ ಮೇಲಿನ ದಾಳಿಗೆ ಪ್ರತಿಕಾರ; ಅಮೆರಿಕ, ಬ್ರಿಟನ್ ನಿಂದ ಇರಾನ್​​ಗೆ ಭಾರಿ ನಿರ್ಬಂಧ

Record number of students wrote CET 2024 exam Outrage over out of syllabus question
ಶಿಕ್ಷಣ2 hours ago

CET 2024 exam: ದಾಖಲೆ ಸಂಖ್ಯೆಯಲ್ಲಿ ಸಿಇಟಿ ಬರೆದ ವಿದ್ಯಾರ್ಥಿಗಳು; ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ7 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌