Cactus plantation | ಇಂಧನ, ಆಹಾರಕ್ಕಾಗಿ ಬಂಜರು ಭೂಮಿಗಳಲ್ಲಿ ಪಾಪಾಸುಕಳ್ಳಿ ಗಿಡಗಳನ್ನು ನೆಡಲು ಕೇಂದ್ರ ಚಿಂತನೆ - Vistara News

ಪ್ರಮುಖ ಸುದ್ದಿ

Cactus plantation | ಇಂಧನ, ಆಹಾರಕ್ಕಾಗಿ ಬಂಜರು ಭೂಮಿಗಳಲ್ಲಿ ಪಾಪಾಸುಕಳ್ಳಿ ಗಿಡಗಳನ್ನು ನೆಡಲು ಕೇಂದ್ರ ಚಿಂತನೆ

ಬರಡು ಭೂಮಿಗಳಲ್ಲಿ ಪಾಪಸ್‌ ಕಳ್ಳಿ ಗಿಡಗಳನ್ನು ಔಷಧ, ಜೈವಿಕ ಇಂಧನ, ಆಹಾರ ಉದ್ದೇಶಗಳಿಗೆ ಬಳಸಲು ಕೇಂದ್ರ ಸರ್ಕಾರ (Cactus plantation) ಉದ್ದೇಶಿಸಿದೆ.

VISTARANEWS.COM


on

cacutus
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ನವ ದೆಹಲಿ: ಬಂಜರು ಭೂಮಿ ಇರುವ ಕಡೆಗಳಲ್ಲಿ ವಾಣಿಜ್ಯಾತ್ಮಕವಾಗಿ ಪಾಪಾಸು ಕಳ್ಳಿ ಗಿಡಗಳನ್ನು ಬೆಳೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇವುಗಳನ್ನು ಜೈವಿಕ ಇಂಧನ, ಆಹಾರ ಉದ್ದೇಶಕ್ಕೆ (Cactus plantation) ಬಳಸಿಕೊಳ್ಳಲು ಪರಿಶೀಲನೆ ನಡೆದಿದೆ.

ಮುಂಬರುವ 2023-24ರ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆ ಇದೆ. ಈ ಬಗ್ಗೆ ಕಳೆದ ಒಂದು ತಿಂಗಳಿನಲ್ಲಿಯೇ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಹಲವಾರು ಸುತ್ತುಗಳಲ್ಲಿ ಮಾತುಕತೆ ನಡೆದಿದೆ. ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಈ ಸಭೆಗಳ ಅಧ್ಯಕ್ಷತೆ ವಹಿಸಿದ್ದರು.

ಏನಿದರ ಪ್ರಯೋಜನ? ಪಾಪಸ್‌ ಕಳ್ಳಿ ಗಿಡಗಳಿಗೆ ಅದರದ್ದೇ ಆದ ವೈದ್ಯಕೀಯ ಮೌಲ್ಯ ಇದೆ. ಇವುಗಳ ಸಾರಗಳಿಗೆ ಸೋಂಕು ನಿರೋಧಕ ಸಾಮರ್ಥ್ಯ ಇದೆ. ಅತಿಯಾದ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ಔಷಧ ತಯಾರಿಸುವಾಗ ಬಳಸುತ್ತಾರೆ. ಆಹಾರದ ರೂಪದಲ್ಲಿಯೂ ಪಾಪಸ್‌ ಕಳ್ಳಿ ಗಿಡದ ಎಲೆ ಮತ್ತು ಹಣ್ಣನ್ನು ಬಳಸುತ್ತಾರೆ. ಜೈವಿಕ ಇಂಧನವಾಗಿಯೂ ಬಳಸುವ ಬಗ್ಗೆ ಸಂಶೋಧನೆಗಳು ನಡೆದಿವೆ. ಬರಡು ಭೂಮಿಯಲ್ಲೂ ಇವುಗಳು ಬೆಳೆಯುತ್ತವೆ. ಆದರೆ ಪಾಪಸ್‌ ಕಳ್ಳಿ ಗಿಡಗಳನ್ನು ನೃವಾಗಿ ಜಾನುವಾರುಗಳಿಗೆ ಮೇವಾಗಿ ಬಳಸುವಂತಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

ಕರ್ನಾಟಕ

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

VISTARANEWS.COM


on

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

ಬೆಂಗಳೂರು: ಶಾಲೆಗಳಲ್ಲಿ ಇನ್ನು ಮುಂದೆ ಅಶ್ಲೀಲ ಹಾಡು ಮತ್ತು ಅಸಭ್ಯ ನೃತ್ಯಗಳಿಗೆ ಅವಕಾಶ ನೀಡದಂತೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ದ್ವಂದ್ವಾರ್ಥದ ಸಿನಿಮಾ ಹಾಡು ಹಾಗೂ ನೃತ್ಯಗಳನ್ನು ಪ್ರದರ್ಶಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಶಾಲಾ ಕಾರ್ಯಕ್ರಮಗಳಲ್ಲಿ ಕೇವಲ ಜಾನಪದ, ದೇಶಭಕ್ತಿ ಗೀತೆಗಳು, ಪರಿಸರ ಕಾಳಜಿಯ ಹಾಡುಗಳು ಮತ್ತು ಸಮಾಜಮುಖಿ ಚಿಂತನೆಯುಳ್ಳ ಸಂಗೀತಕ್ಕೆ ಮಾತ್ರ ಆದ್ಯತೆ ನೀಡಬೇಕು. ನೃತ್ಯದ ಸಮಯದಲ್ಲಿ ವಿದ್ಯಾರ್ಥಿಗಳು ಧರಿಸುವ ಉಡುಪುಗಳು ಕೂಡ ಸಭ್ಯವಾಗಿರಬೇಕು ಹಾಗೂ ಅರೆಬರೆ ವಸ್ತ್ರಗಳನ್ನು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮನರಂಜನೆಯ ಹೆಸರಿನಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಅಥವಾ ಮಕ್ಕಳ ನೈತಿಕ ಹಾಗೂ ಮಾನಸಿಕ ಆರೋಗ್ಯ ಕೆಡಿಸುವ ಯಾವುದೇ ಹಾಡುಗಳನ್ನು ಬಳಸದಂತೆ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ನಿಯಮಗಳನ್ನು ಜಾರಿಗೆ ತರುವ ಸಂಪೂರ್ಣ ಜವಾಬ್ದಾರಿಯನ್ನು ಶಾಲಾ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಗೆ ವಹಿಸಲಾಗಿದೆ.

Continue Reading

ರಾಜಕೀಯ

ಮೋದಿ ಅಥವಾ ದೀದಿ? ಪ.ಬಂಗಾಳದ ಭವಿಷ್ಯ ನಿರ್ಧರಿಸಲಿದೆ 142 ಸೀಟು

VISTARANEWS.COM


on

ಪಶ್ಚಿಮ ಬಂಗಾಳವನ್ನು ಈ ಸಲ ಗೆದ್ದೇ ಗೆಲ್ಲಬೇಕು ಎಂಬ ಬಿಜೆಪಿ ಹಠ-ನಾಲ್ಕನೇ ಬಾರಿಯೂ ಸಿಎಂ ಪಟ್ಟ ಉಳಿಸಿಕೊಳ್ಳಬೇಕು ಎಂಬ ಮಮತಾ ಬ್ಯಾನರ್ಜಿ ಛಲ – ಈ ಸಲ ಪಶ್ಚಿಮ ಬಂಗಾಲದಲ್ಲಿ ಮೋದಿಯಾ..ದೀದಿಯಾ ಅನ್ನೋ ಪ್ರಶ್ನೆಗೆ ಬುಧವಾರದ ವೋಟಿಂಗ್‌ ನಿರ್ಧರಿಸಲಿದೆ. ಬುಧವಾರ 142 ಸೀಟುಗಳೇ ಬಂಗಾಳದ ರಾಜಕೀಯ ಭವಿಷ್ಯ ಬರೆಯಲಿವೆ.

ಯಾಕೆ ಬುಧವಾರ ನಿರ್ಣಾಯಕ?:
ಬುಧವಾರ ಎರಡನೇ ಹಂತದಲ್ಲಿ ಬಂಗಾಳದ 8 ಜಿಲ್ಲೆಗಳಲ್ಲಿ ಮತದಾನ ನಡೆಯಲಿವೆ. ಕೋಲ್ಕತ್ತಾ ಉತ್ತರ, ಕೋಲ್ಕತ್ತಾ ದಕ್ಷಿಣ, ಹೌರಾ, ನಾಡಿಯಾ, ಉತ್ತರ 24 ಪರಗಣ, ದಕ್ಷಿಣ 24 ಪರಗಣ, ಹೂಗ್ಲಿ ಮತ್ತು ಪೂರ್ವ ಬರ್ಧಮನ್‌ ಜಿಲ್ಲೆಗಳಲ್ಲಿ ಮತಯುದ್ಧ ನಡೆಯಲಿವೆ. ಹಾಗೆ ನೋಡಿದರೆ ಈ ಎಂಟೂ ಜಿಲ್ಲೆಗಳು ಟಿಎಂಸಿಯ ಭದ್ರಕೋಟೆ. 2021ರ ಫಲಿತಾಂಶ ಒಮ್ಮೆ ನೋಡಿದರೆ, 142 ಸೀಟುಗಳಲ್ಲಿ ಟಿಎಂಸಿ 123ನ್ನು ಗೆದ್ದಿದೆ. ಬಿಜೆಪಿ ಗೆಲುವಿನ ನಗೆ ಬೀರಿದ್ದು ಕೇವಲ 18 ಸೀಟುಗಳಲ್ಲಿ. ಮತ್ತೊಂದು ಸೀಟು ಐಎಸ್‌ಎಫ್‌ ಪಾಲಾಗಿದೆ. ಹಾಗಾಗಿ, ಅಧಿಕಾರ ಉಳಿಸಿಕೊಳ್ಳಲು ಟಿಎಂಸಿಗೆ, ಅಧಿಕಾರ ಕಿತ್ತುಕೊಳ್ಳಲು ಬಿಜೆಪಿಗೆ ಈ 142 ಸೀಟುಗಳೇ ನಿರ್ಣಾಯಕ.
ವೋಟಿನ ಲೆಕ್ಕಾಚಾರ ಗಮನಿಸಿದರೆ ಎರಡನೇ ಹಂತದ ಮತದಾನದಲ್ಲಿ ಟಿಎಂಸಿ ಮುಂದೆ ಬಿಜೆಪಿ ಲೆಕ್ಕಕ್ಕೇ ಇಲ್ಲ. 2021ರಲ್ಲಿ ಎರಡನೇ ಹಂತದ ಕ್ಷೇತ್ರಗಳಲ್ಲಿ ಟಿಎಂಸಿಯದ್ದು ಅಭೂತಪೂರ್ವ ಶೇ. 82ರ ಸ್ಟ್ರೈಕ್‌ ರೇಟ್‌ (142ರಲ್ಲಿ 123 ಸೀಟು). ಬಿಜೆಪಿಯದ್ದು ಏನಿದ್ದರೂ ಶೇ. 17 ( 142ರಲ್ಲಿ 18 ಸೀಟು). ಆದರೆ, ಲೋಕಸಭಾ ಚುನಾವಣೆಯ ಹೊತ್ತಿಗೆ ಈ ಎಂಟು ಜಿಲ್ಲೆಗಳಲ್ಲಿ ಬಿಜೆಪಿಯ ವೋಟ್‌ ಶೇರಿಂಗ್‌ ಗಣನೀಯವಾಗಿ ಸುಧಾರಿಸಿದೆ. ಹಾಗಾಗಿ ಎರಡನೇ ಹಂತ ಮಮತಾ ಬ್ಯಾನರ್ಜಿಗೆ ಸುಲಭದ ತುತ್ತಲ್ಲ.

ಎರಡನೇ ಹಂತದ ಮೇಲೆ ಬಿಜೆಪಿ ಕಣ್ಣೇಕೆ?
ಪಶ್ಚಿಮ ಬಂಗಾಳದಲಿ ಬಿಜೆಪಿ ಧ್ವಜ ಹಾರಿಸಬೇಕಾದರೆ ಬುಧವಾರ ಮತದಾನವನ್ನು ಗೆಲ್ಲಲೇಬೇಕು ಎಂಬ ಸತ್ಯ ಬಿಜೆಪಿಗೆ ಅರಿವಿದೆ. ದೀದಿಯಿಂದ ಅಧಿಕಾರ ಕಿತ್ತುಕೊಳ್ಳಬೇಕಾದರೆ ಬಂಗಾಳದ ದಕ್ಷಿಣದ 8 ಜಿಲ್ಲೆಗಳಲ್ಲಿ ಬಿಜೆಪಿ ಪರಾಕ್ರಮ ತೋರಲೇ ಬೇಕಿದೆ. ಯಾಕಂದರೆ, ಉತ್ತರ ಬಂಗಾಳದಲ್ಲಿ ಬಿಜೆಪಿ ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದೆ. ಅಲ್ಲಿ 59 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಆದರೆ, ದಕ್ಷಿಣ ಬಂಗಾಳದಲ್ಲಿ ಆ ಪಾರಮ್ಯವನ್ನು ಸಾಬೀತುಪಡಿಸಬೇಕಿದೆ. ಹಾಗಿದ್ದರೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಧ್ವಜ ರಾರಾಜಿಸಬಹುದು.

ಪ. ಬಂಗಾಳದಲ್ಲಿ ಬಿಜೆಪಿ ಗುಪ್ತಗಾಮಿನಿ:
ದೀದಿನಾಡಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನೇರಾನೇರ ಹಣಾಹಣಿ ಇದೆ. ಮೂರು ಸಲ ಸತತ ಸಿಎಂ ಆಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಆಡಳಿತ ವಿರೋಧಿ ಅಲೆಯೂ ಇದೆ. ಕಳೆದ ಸಲ ಈ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿತ್ತು. ಆದರೂ ಅದರ ಸೀಟು ಮೂರರಿಂದ 77ಕ್ಕೆ ಏರಿತ್ತು. ಇದು ಕೂಡಾ ಗಮನಾರ್ಹ ಸಾಧನೆಯೇ. ಒಮ್ಮೆ ಪಶ್ಚಿಮ ಬಂಗಾಳದ ಅತಿದೊಡ್ಡ ಶಕ್ತಿಯಾಗಿ ಮೆರೆದಿದ್ದ ಎಡಪಕ್ಷಗಳು ಈಗ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ. ಕಾಂಗ್ರೆಸ್‌ ಕೂಡಾ ಕಣದಲ್ಲಿದೆಯಾದರೂ ಆ ಪಕ್ಷಕ್ಕೇ ಗೆಲ್ಲುವ ಯಾವುದೇ ಆತ್ಮವಿಶ್ವಾಸ ಇಲ್ಲ. ಆದರೆ, ಬಿಜೆಪಿ ಈ ಸಲ ತನ್ನ ರಣತಂತ್ರ ಬದಲಾಯಿಸಿದೆ. ಗುಪ್ತಗಾಮಿನಿಯಾಗಿ ಬಿಜೆಪಿಯ ಕಾರ್ಯಕರ್ತರು ಜನರ ನಡುವೆ ಸೇರಿದ್ದು, ಪಕ್ಷದ ಪರ ಸೈಲೆಂಟಾಗಿ ಪ್ರಚಾರ ನಡೆಸುತ್ತಿದ್ದಾರೆ. ಹೈವೋಲ್ಟೇಜ್‌ ಪ್ರಚಾರದಿಂದ ಬಿಜೆಪಿ ದೂರ ಉಳಿದಿದೆ. ಜೊತೆಗೆ ಮಮತಾ ಬ್ಯಾನರ್ಜಿಗೆ ವ್ಯಕ್ತಿಗತ ನಿಂದನೆಯಿಂದ ಹಿಂದೆ ಸರಿದಿದೆ. ಮಮತಾ ಆಡಳಿತ ವಿರೋಧಿ ಅಲೆ, ನುಸುಳುಕೋರರ ಸಮಸ್ಯೆ, ತುಷ್ಟೀಕರಣ ನೀತಿಯನ್ನೇ ಹೈಲೈಟ್‌ ಮಾಡಿ ಪ್ರಚಾರ ನಡೆಸುತ್ತಿದೆ. ಮತದಾರರ ಧ್ರುವೀಕರಣಕ್ಕೂ ಬಿಜೆಪಿ ರಣತಂತ್ರ ರೂಪಿಸಿದೆ. ಇದು ಫಲನೀಡಿದ್ರೆ, ಕಮಲ ಅರಳುವ ಎಲ್ಲಾ ಸಾಧ್ಯತೆಗಳಿವೆ.

ದಾಖಲೆ ವೋಟಿಂಗ್‌ ಯಾರಿಗೆ ವರ?
ಮೊದಲ ಹಂತದಲ್ಲಿ ಪ. ಬಂಗಾಳದಲ್ಲಿ ಶೇ. 93.19ರಷ್ಟು ಮತದಾನವಾಗಿದೆ. ಇದೊಂದು ಮಹಾ ದಾಖಲೆ. ಯಾಕೆ ಇಷ್ಟೊಂದು ಪ್ರಮಾಣದ ವೋಟಿಂಗ್‌ ಆಗಿದೆ ಅನ್ನೋದಕ್ಕೆ ಮೊದಲು ಸಿಗುವ ಉತ್ತರ ಎಸ್‌ಐಆರ್‌. ಮತಪಟ್ಟಿಯ ನವೀಕರಣ ಸಂದರ್ಭದಲ್ಲಿ ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸುಮಾರು 90 ಲಕ್ಷ ಮತದಾರರು ಪಟ್ಟಿಯಿಂದ ಡಿಲೀಟ್‌ ಆಗಿದ್ದಾರೆ. ಇದು ಕೂಡಾ ಮತದಾನದ ದಾಖಲೆಗೆ ಕಾರಣ. ಈ ದಾಖಲೆ ವೋಟಿಂಗ್‌ ಲಾಭ ಬಿಜೆಪಿ ಪಡೆಯುತ್ತಾ? ಟಿಎಂಸಿಗೆ ಸಿಗುತ್ತಾ ಎಂಬುದಕ್ಕೆ ಹಲವು ತರ್ಕಗಳಿವೆ. ಇದಕ್ಕೆ ಉತ್ತರ ಮೇ 4ಕ್ಕೆ ಸಿಗಲಿದೆ

Continue Reading

ಕರ್ನಾಟಕ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ನ್ಯಾಯಾಲಯ

VISTARANEWS.COM


on

ಮಂಗಳೂರು ನಗರವನ್ನು ಬೆಚ್ಚಿಬೀಳಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್‌ಗೆ ಬೆಂಗಳೂರಿನ ಎನ್‌ಐಎ (NIA) ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಈ ಸ್ಫೋಟ ಸಂಭವಿಸಿತ್ತು. ಆರೋಪಿ ಶಾರಿಕ್ ಸ್ಫೋಟಕ ತುಂಬಿದ್ದ ಕುಕ್ಕರ್ ಅನ್ನು ಸಾಗಿಸುತ್ತಿದ್ದಾಗಲೇ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ, ನಗರದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು. ಈ ಘಟನೆಯಲ್ಲಿ ಶಾರಿಕ್ ಮತ್ತು ಆಟೋ ಚಾಲಕ ಇಬ್ಬರೂ ಗಾಯಗೊಂಡಿದ್ದರು.

ದೇಶದ ಭದ್ರತೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದ ಈ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಿತ್ತು. ತನಿಖೆಯ ವೇಳೆ ಶಾರಿಕ್ ನಿಷೇಧಿತ ಉಗ್ರಗಾಮಿ ಸಂಘಟನೆಗಳಿಂದ ಪ್ರೇರಿತನಾಗಿದ್ದದ್ದು ಮತ್ತು ಡಾರ್ಕ್ ವೆಬ್ ಮೂಲಕ ವಿದೇಶಿ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದು ಬಾಂಬ್ ತಯಾರಿಕಾ ತರಬೇತಿ ಪಡೆದಿದ್ದ ಎಂಬ ಆಘಾತಕಾರಿ ಸತ್ಯಗಳು ಹೊರಬಂದಿದ್ದವು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಎನ್‌ಐಎ ಸಲ್ಲಿಸಿದ್ದ ಸಾಕ್ಷ್ಯಧಾರಗಳನ್ನು ಪುರಸ್ಕರಿಸಿ ಶಾರಿಕ್ ದೋಷಿ ಎಂದು ತೀರ್ಪು ನೀಡಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೇರಿದಂತೆ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ಪ್ರಕಟಿಸಿದೆ.

Continue Reading

Latest

ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿ ಅವರಿಂದ ವಿಸ್ತಾರ ನ್ಯೂಸ್ ಕಚೇರಿ ಉದ್ಘಾಟನೆ

VISTARANEWS.COM


on

ಬೆಂಗಳೂರು: ಕನ್ನಡ ಜನಮನಗಳಲ್ಲಿ ಈಗಾಗಲೇ ನೆಲೆಯೂರಿರುವ ವಿಸ್ತಾರ ನ್ಯೂಸ್‌ ಹೊಸ ಸ್ವರೂಪದೊಂದಿಗೆ ನಿಮ್ಮ ಮುಂದೆ ಬರಲಿದೆ.

ಈಗಾಗಲೇ ನಿಮ್ಮೆಲ್ಲರ ಮನೆ ಮನಗಳಲ್ಲಿ ಸ್ಥಾನ ಪಡೆದುಕೊಂಡಿದ್ದ ವಿಶ್ವಾಸಾರ್ಹ ಸುದ್ದಿವಾಹಿನಿಯಾದ ವಿಸ್ತಾರ ನ್ಯೂಸ್‌, ಹೊಸ ಹುರುಪು ಮತ್ತು ಛಲದೊಂದಿಗೆ ಸಮಾಜದ ಪರವಾಗಿ ನಿಲ್ಲಲು ಸಜ್ಜಾಗಿದೆ. ಪರಿಣಾಮಕಾರಿ ಪತ್ರಿಕೋದ್ಯಮಕ್ಕೆ ಬದ್ಧವಾಗಿ ಜನಕೇಂದ್ರಿತವಾದ ಪತ್ರಿಕೋದ್ಯಮವನ್ನು ಮುನ್ನೆಲೆಗೆ ತರಲು ವಿಸ್ತಾರ ನ್ಯೂಸ್‌ ಸಿದ್ದ.

ಈ ಸಂದರ್ಭದಲ್ಲಿ ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿರವರ ಬೆಂಬಲ, ಆಶೀರ್ವಾದದ ಜೊತೆಗೆ ಸಂಸ್ಥೆಯ ಎಂ.ಡಿ ಯಾದ ಧರ್ಮೇಶ್‌ ಮತ್ತು ಸಿಇಒ ಹೆಚ್‌ ಜಿ ಪವಿತ್ರ ಗೌಡರವರ ಉಪಸ್ಥಿತಿಯಲ್ಲಿ ವಿಶೇಷ ಪೂಜೆ ಮತ್ತು ದೀಪ ಬೆಳಗುವುದರ ಮೂಲಕ ಕಚೇರಿಯನ್ನು ಉದ್ಘಾಟಿಸಲಾಯಿತು. ಈ ಶುಭ ಘಳಿಗೆಯಲ್ಲಿ ಮಾನ್ಯರು ವಿಸ್ತಾರ ನ್ಯೂಸ್‌ ಡಿಜಿಟಲ್‌ ವೇದಿಕೆಯನ್ನು ಸಕ್ರಿಯಗೊಳಿಸಿದರು.

ಮಾಹಿತಿ ಜೊತೆ ಮನರಂಜನೆ, ನಿಖರ ನಿರೂಪಣೆ, ಪ್ರಖರ ವಿಶ್ಲೇಷಣೆ ಎಂಬ ಸುದ್ದಿ ಸೂತ್ರದೊಂದಿಗೆ ಅತಿ ಶೀಘ್ರದಲ್ಲಿ ನಿಮ್ಮ ಮನೆಯಂಗಳ ಪ್ರವೇಶಿಸಲಿದ್ದೇವೆ. ನಿಮ್ಮ ಸ್ವಾಗತ ಮತ್ತು ಬೆಂಬಲ ಬಯಸುವ ವಿಸ್ತಾರ ನ್ಯೂಸ್‌ ಟೀಂ.





Continue Reading
Advertisement
Latest13 minutes ago

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ

Latest43 minutes ago

ಜಪಾನ್‌ಗೆ ಲಗ್ಗೆ ಇಡಲು ಸಜ್ಜಾದ ʼಧುರಂಧರ್’

bigbreaking52 minutes ago

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಾ ಮೇ ಕ್ಲೈಮ್ಯಾಕ್ಸ್‌?

Latest2 hours ago

ಡಾಲಿ ಧನಂಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ದಂಪತಿ!

Latest4 hours ago

ಶಿಸ್ತು ಮರೆತರಾ ರಿಯಾನ್ ಪರಾಗ್? ಕಾನೂನು ಸಂಕಷ್ಟಕ್ಕೆ ಸಿಲುಕುತ್ತಾರಾ ರಾಜಸ್ಥಾನ ರಾಯಲ್ಸ್ ಆಟಗಾರ?

Latest5 hours ago

ಮತಯಂತ್ರದಲ್ಲಿ ಬಿಜೆಪಿ ಚಿಹ್ನೆಗೆ ಟೇಪ್‌? ಚುನಾವಣಾ ಅಕ್ರಮ ಆರೋಪಿಸಿ ಕೇಸರಿ ಪಡೆ ಆಕ್ರೋಶ

Rakshit Shetty Richard Anthony Produce By Hombale
ಅವಿಭಾಗೀಕೃತ5 hours ago

ಗುಡುಗು ಸಹಿತ ಆಲಿಕಲ್ಲು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Latest6 hours ago

ಜಾಮೀನು ಪಡೆಯಲು ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌.

Latest7 hours ago

ಯಶ್ ಫ್ಯಾನ್ಸ್‌ಗೆ ಶಾಕ್: ಮತ್ತೆ ಮುಂದೂಡಲ್ಪಟ್ಟ ‘ಟಾಕ್ಸಿಕ್’ ರಿಲೀಸ್ ಡೇಟ್! ಹೊಸ ದಿನಾಂಕದ ಬಗ್ಗೆ ಅಪ್‌ಡೇಟ್ ನೀಡಿದ ಚಿತ್ರತಂಡ

Rakshit Shetty Richard Anthony Produce By Hombale
ಅವಿಭಾಗೀಕೃತ7 hours ago

ವಿಭಿನ್ನ ಕಾರ್ಯಯೋಜನೆಯೊಂದಿಗೆ ಸಮಾಜದ ಪ್ರತಿನಿಧಿ ರೂಪದಲ್ಲಿ ಸಿದ್ಧಗೊಳ್ಳುತ್ತಿದೆ ವಿಸ್ತಾರ ನ್ಯೂಸ್-ಸದಾ ನಿಮ್ಮ ಪರ:

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌