ಮನಿ ಗೈಡ್
ವಿಸ್ತಾರ Money Guide | ಮ್ಯೂಚುಯಲ್ ಫಂಡ್ ಹೂಡಿಕೆ ಹೇಗೆ? ಎಷ್ಟು ಹೂಡಿಕೆ ಮಾಡಬಹುದು?
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆಯ ಲಾಭಗಳು ಹಲವು. ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಸಮಯ ಮತ್ತು ಪರಿಣತಿ ಬೇಕು. ಇಲ್ಲದಿದ್ದರೆ ಮ್ಯೂಚುಯಲ್ ಫಂಡ್ ಹೂಡಿಕೆ ಸೂಕ್ತ. (ವಿಸ್ತಾರ Money Guide) ವಿವರ ಇಲ್ಲಿದೆ.
ಪ್ರಮುಖ ಸುದ್ದಿ
PAN-Aadhaar linking : ಪ್ಯಾನ್ -ಆಧಾರ್ ಮಾತ್ರವಲ್ಲ, ಈ ಹಣಕಾಸು ವಿಚಾರಗಳಿಗೂ ಗಡುವು ವಿಸ್ತರಣೆ
ಪ್ಯಾನ್ – ಆಧಾರ್ ಮಾತ್ರವಲ್ಲದೆ, ಮ್ಯೂಚುವಲ್ ಫಂಡ್, ಡಿಮ್ಯಾಟ್, ಟ್ರೇಡಿಂಗ್ ಖಾತೆಗೆ ನಾಮಿನಿ ( PAN-Aadhaar linking) ಹೆಸರಿಸಲು ನಿಗದಿಯಾಗಿದ್ದ ಗಡುವನ್ನು ಮುಂದೂಡಲಾಗಿದೆ. ವಿವರ ಇಲ್ಲಿದೆ.
ಪ್ಯಾನ್ -ಆಧಾರ್ ಕಾರ್ಡ್ ಲಿಂಕ್ ಮಾಡಲು (PAN-Aadhaar linking deadline) ನಿಗದಿಯಾಗಿದ್ದ 2023ರ ಮಾರ್ಚ್ 31ರ ಗಡುವನ್ನು ಜೂನ್ 30ಕ್ಕೆ ವಿಸ್ತರಿಸಲಾಗಿದೆ. ಆದರೆ ಇದೊಂದೇ ಅಲ್ಲದೆ, ಇನ್ನೂ ಕೆಲವು ಹಣಕಾಸು ವಿಷಯಗಳ ಗಡುವನ್ನು ವಿಸ್ತರಿಸಲಾಗಿದೆ. ವಿವರ ಇಂತಿದೆ.
ಉದಾಹರಣೆಗೆ ಮ್ಯೂಚುವಲ್ ಫಂಡ್ ಹೂಡಿಕೆದಾರರು ತಮ್ಮ ನಾಮಿನಿ ವಿವರಗಳನ್ನು (mutual fund nomination) ಸಲ್ಲಿಸಲು ನಿಗದಿಯಾಗಿದ್ದ ಗಡುವು 2023ರ ಮಾರ್ಚ್ 31ರಿಂದ 2023ರ ಸೆಪ್ಟೆಂಬರ್ 30ಕ್ಕೆ ವಿಸ್ತರಣೆಯಾಗಿದೆ. ಮಾರುಕಟ್ಟೆ ನಿಯಂತ್ರಕ ಸೆಬಿಯು ಈ ಬಗ್ಗೆ ಮಂಗಳವಾರ ಸುತ್ತೋಲೆ ಹೊರಡಿಸಿದೆ. ಮ್ಯೂಚುವಲ್ ಫಂಡ್ ಸಂಸ್ಥೆಗಳು ನಾಮಿನೇಶನ್ ಪ್ರಕ್ರಿಯೆಯನ್ನು ಇದುವರೆಗೆ ಮಾಡದಿರುವ ಹೂಡಿಕೆದಾರರಿಗೆ, ಪೂರ್ಣಗೊಳಿಸಲು ಉತ್ತೇಜನ ನೀಡಬೇಕು. ಇ-ಮೇಲ್, ಎಸ್ಸೆಮ್ಮೆಸ್‌ಗಳನ್ನು ಕಳಿಸಬೇಕು ಎಂದು ಸೆಬಿ ತಿಳಿಸಿದೆ.
2022ರ ಜೂನ್ 15ರ ಸುತ್ತೋಲೆಯಲ್ಲಿ ಸೆಬಿಯು ಮ್ಯೂಚುವಲ್ ಫಂಡ್ ಹೂಡಿಕೆಗೆ ನಾಮಿನೇಶನ್ ಕಡ್ಡಾಯ ಎಂದು ತಿಳಿಸಿತ್ತು. ಬಳಿಕ ಗಡುವನ್ನು 2022ರ ಅಕ್ಟೋಬರ್ 1ಕ್ಕೆ ವಿಸ್ತರಿಸಲಾಯಿತು. ಬಳಿಕ 2023ರ ಮಾರ್ಚ್ 31ಕ್ಕೆ ಹಾಗೂ ಇದೀಗ 2023ರ ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ.
ನಾಮಿನೇಶನ್ ಏಕೆ? ಮ್ಯೂಚುವಲ್ ಫಂಡ್ ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬುದನ್ನು ನಾಮಿನೇಶನ್ ಮೂಲಕ ತಿಳಿಸಲಾಗುತ್ತದೆ. ಇದರಿಂದ ಹೂಡಿಕೆಯ ಹಿಂತೆಗೆತ ಪ್ರಕ್ರಿಯೆ ಸುಗಮವಾಗುತ್ತದೆ. ಆದ್ದರಿಂದ ನಾಮಿನೇಶನ್ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ನಿಮ್ಮ ಮ್ಯೂಚುವಲ್ ಫಂಡ್ ಸಂಸ್ಥೆಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲೂ ನಾಮಿನೇಶನ್ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಮ್ಯೂಚುವಲ್ ಫಂಡ್ ಖಾತೆಗೆ ನಾಮಿನಿಯನ್ನು ಸೇರಿಸುವುದು ಹೇಗೆ?
ಮ್ಯೂಚುವಲ್ ಫಂಡ್ ಹೂಡಿಕೆದಾರರು ನಾಮಿನೇಶನ್ ಅರ್ಜಿಯನ್ನು ಮೊದಲು ಭರ್ತಿಗೊಳಿಸಬೇಕು. ಸಹಿ ಹಾಕಬೇಕು, ಬಳಿಕ ಮ್ಯೂಚುವಲ್ ಫಂಡ್ ಕಂಪನಿಗೆ ಅಥವಾ ನೋಂದಾಯಿತ ಏಜೆನ್ಸಿಗೆ ರವಾನಿಸಬೇಕು. ಆನ್‌ಲೈನ್ ಮೂಲಕವೂ ನಾಮಿನಿಯನ್ನು ಸೇರಿಸಬಹುದು.
ಡಿಮ್ಯಾಟ್, ಟ್ರೇಡಿಂಗ್ ಖಾತೆಗೆ ನಾಮಿನಿ ಸೇರಿಸಲು ಗಡುವು ವಿಸ್ತರಣೆ:
ಮಾರುಕಟ್ಟೆ ನಿಯಂತ್ರಕ ಸೆಬಿಯು ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗೆ ನಾಮಿನಿಯನ್ನು ಸೇರಿಸಲು ಗಡುವನ್ನು 2023ರ ಸೆಪ್ಟೆಂಬರ್ 30 ತನಕ ವಿಸ್ತರಿಸಿದೆ.
ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಸೇರಿಸುವ ವಿಧಾನ:
ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಸೇರಿಸಬಹುದು. ಡಿಮ್ಯಾಟ್ ಖಾತೆಯನ್ನು ತೆರೆದು ಪ್ರೊಫೈಲ್ ಸೆಗ್ಮೆಂಟ್‌ಗೆ (Profile Segment) ತೆರಳಬೇಕು.
ಡಿಮ್ಯಾಟ್ ಅಕೌಂಟ್‌ಗೆ ಲಾಗಿನ್ ಆದ ಬಳಿಕ Add Nominee ಅಥವಾ Opt-out ಆಯ್ಕೆ ಮಾಡಿಕೊಳ್ಳಿ.
ವಿವರಗಳನ್ನು ಭರ್ತಿಗೊಳಿಸಿ, ಐಡಿ ಪ್ರೂಫ್ ಸಲ್ಲಿಸಿ.
ಆಧಾರ್ ಒಟಿಪಿ ಮೂಲಕ ಇ-ಸೈನ್ ಪ್ರಕ್ರಿಯೆ ಪೂರ್ಣಗೊಳಿಸಿ. ನಾಮಿನಿಯ ವಿವರಗಳನ್ನು ನಮೂದಿಸಿ.
ಪ್ರಮುಖ ಸುದ್ದಿ
PPF Investment : ಪಿಪಿಎಫ್ ಸೇರಿ ಸಣ್ಣ ಉಳಿತಾಯ ಹೂಡಿಕೆಗಳ ನಿಯಮ ಸಡಿಲ, ಪ್ಯಾನ್ ಬದಲಿಗೆ ಆಧಾರ್ ಬಳಕೆ ಶೀಘ್ರ
ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯ ಕೆವೈಸಿ ನಿಯಮಗಳನ್ನು ಸಡಿಲಗೊಳಿಸುವುದರಿಂದ, ಪ್ಯಾನ್ ಬದಲಿಗೆ ಆಧಾರ್ ಬಳಕೆಗೆ ಅನುಮತಿ ನೀಡುವುದರಿಂದ, ಗ್ರಾಮೀಣ ಭಾಗದಲ್ಲಿ ಹೂಡಿಕೆ ಹೆಚ್ಚಳವಾಗುವ (PPF Investment) ನಿರೀಕ್ಷೆ ಉಂಟಾಗಿದೆ.
ನವ ದೆಹಲಿ: ಹಣಕಾಸು ಸಚಿವಾಲಯವು ಸಣ್ಣ ಉಳಿತಾಯ ಯೋಜನೆಗಳಲ್ಲಿನ (PPF Investment ) ಹೂಡಿಕೆ ಕುರಿತ ಕೆವೈಸಿ (KYC) ನಿಯಮಾವಳಿಗಳನ್ನು ಸಡಿಲಗೊಳಿಸಲು ಮುಂದಾಗಿದೆ. ಪ್ಯಾನ್ ಬದಲಿಗೆ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿಟ್ಟುಕೊಂಡು ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲೂ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಹೆಚ್ಚುವ ನಿರೀಕ್ಷೆ ಇದೆ. (small savings schemes)
ಕೆವೈಸಿ ನಿಯಮ ಸಡಿಲಗೊಳಿಸುವ ಭಾಗವಾಗಿ ಮೂರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮೊದಲನೆಯದಾಗಿ ಪ್ಯಾನ್ ಕಾರ್ಡ್ ಬದಲು ಆಧಾರ್ ಬಳಸಿಯೂ ಹೂಡಿಕೆಯನ್ನು ಮಾಡಬಹುದು. ಏಕೆಂದರೆ ಭಾರತದಲ್ಲಿ ಪ್ಯಾನ್ ಕಾರ್ಡ್ ಬಳಕೆದಾರರಿಗಿಂತ ಹೆಚ್ಚು ಆಧಾರ್ ಕಾರ್ಡ್‌ದಾರರು ಇದ್ದಾರೆ. ಈ ನೀತಿ ಸಡಿಲಗೊಳಿಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಠೇವಣಿಗಳು ಲಭಿಸುವ ಸಾಧ್ಯತೆ ಇದೆ.
ಎರಡನೆಯದಾಗಿ ಯಾವುದೇ ವಿವಾದ ಇಲ್ಲದೆ ಮೃತಪಟ್ಟಿರುವ ಠೇವಣಿದಾರರ ಹಣವನ್ನು ಅವರ ಉತ್ತರಾಧಿಕಾರಿಗಳಿಗೆ ಸರಾಗವಾಗಿ ಹಸ್ತಾಂತರಿಸಲು ಪ್ರಕ್ರಿಯೆ ಸುಗಮವಾಗಲಿದೆ. ಮೂರನೆಯದಾಗಿ ನಾಮಿನೇಶನ್ ಪ್ರಕ್ರಿಯೆ ಸರಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೂಡಿಕೆಯ ಕೆವೈಸಿ ನಿಯಮಗಳನ್ನು ಸಡಿಲಗೊಳಿಸುವುದರಿಂದ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗೆ (National small savings fund) ಹೂಡಿಕೆಯ ಹರಿವು ಹೆಚ್ಚಲಿದೆ. ಸಾರ್ವಜನಿಕ ಭವಿಷ್ಯನಿಧಿ, ಸುಕನ್ಯಾಸಮೃದ್ಧಿ, ಎನ್‌ಎಸ್‌ಸಿ ಇತ್ಯಾದಿಗಳು ಸಣ್ಣ ಉಳಿತಾಯ ಯೋಜನೆಗಳಾಗಿವೆ.
ಪ್ರಮುಖ ಸುದ್ದಿ
PAN-Aadhaar Link : ಈಗ ಪ್ಯಾನ್-ಆಧಾರ್ ಲಿಂಕ್ ಮಾಡಲು ಎಷ್ಟು ದಂಡ ನೀಡಬೇಕು?
ಪ್ಯಾನ್ – ಆಧಾರ್ ಲಿಂಕ್ ಮಾಡಲು 2023ರ ಜೂನ್ 30 ತನಕ ಗಡುವನ್ನು ವಿಸ್ತರಿಸಲಾಗಿದೆ. (PAN-Aadhaar Link) ಆದರೆ 1000 ರೂ.ಗಳ ದಂಡ ಮುಂದುವರಿದಿದೆ.
ಕೇಂದ್ರ ಸರ್ಕಾರವು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ವಿಚಾರದಲ್ಲಿ ಗಡುವನ್ನು 2023ರ ಜೂನ್ 30ಕ್ಕೆ ವಿಸ್ತರಿಸಿದೆ. ಹೀಗಿದ್ದರೂ, ಈ ಎರಡು ದಾಖಲೆಗಳನ್ನು ಲಿಂಕ್ ಮಾಡಲು ದಂಡವನ್ನು ಕಟ್ಟಬೇಕಾಗುತ್ತದೆ. 2022ರ ಮಾರ್ಚ್ 31 ತನಕ ಪ್ಯಾನ್- ಆಧಾರ್ ಲಿಂಕ್ ಉಚಿತವಾಗಿತ್ತು. (PAN-Aadhaar Link) ಬಳಿಕ ಸರ್ಕಾರ 2023ರ ಮಾರ್ಚ್ 31 ತನಕ, ಅಂದರೆ ಒಂದು ವರ್ಷ ವಿಸ್ತರಿಸಿತು. ಆದರೆ 1,000 ರೂ. ದಂಡವನ್ನೂ ವಿಧಿಸಿತು. ಈಗ ದಂಡವನ್ನು ಮುಂದುವರಿಸಲಾಗಿದೆ.
1,000 ರೂ. ದಂಡ:
ನೀವು ಹೊಸತಾಗಿ ಪ್ಯಾನ್ ಕಾರ್ಡ್ ಮಾಡಬಹುದು. ಇದಕ್ಕಾಗಿ 1,000 ರೂ. ದಂಡ ನೀಡಬೇಕಾಗಿಲ್ಲ. ಆದರೆ ಈಗಾಗಲೇ ಪ್ಯಾನ್ ಕಾರ್ಡನ್ನು ಬ್ಯಾಂಕ್, ಐಟಿ ರಿಟರ್ನ್ಸ್ ಇತ್ಯಾದಿಗೆ ಬಳಸಿದ್ದರೆ, ಹೊಸ ಪ್ಯಾನ್ ಕಾರ್ಡ್ ಮಾಡುವುದು ಸೂಕ್ತವಲ್ಲ. ಆದ್ದರಿಂದ 1,000 ರೂ. ದಂಡವನ್ನು ಕೊಟ್ಟು ಪ್ಯಾನ್ – ಆಧಾರ್ ಲಿಂಕ್ ಮಾಡುವುದು ಉತ್ತಮ ಎನ್ನುತ್ತಾರೆ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ವಿಜಯ್ ಸಾಗರ್ ಶೆಣೈ. (PAN-Aadhaar Linking) 2023ರ ಜೂನ್ 30 ರೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದರೆ ನಿಷ್ಕ್ರಿಯ ಎನ್ನಿಸಲಿದೆ. ನಿಷ್ಕ್ರಿಯ ಪ್ಯಾನ್ ಕಾರ್ಡ್ ಅನ್ನು 1,000 ರೂ. ಶುಲ್ಕ ಕೊಟ್ಟು 30 ದಿನಗಳೊಳಗೆ ಸಕ್ರಿಯಗೊಳಿಸಬಹುದು.
SMS ಮೂಲಕ PAN ಮತ್ತು Aadhaar ಲಿಂಕ್ ಮಾಡುವುದು ಹೇಗೆ?
1. UIDPAN < 12- ಅಂಕಿಗಳ ಆಧಾರ್ ><10- ಅಂಕಿಗಳ ಪ್ಯಾನ್ >
2. ಈ ಎಸ್ಸೆಮ್ಮೆಸ್ ಅನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿ, 56161 ಅಥವಾ 567678 ಕ್ಕೆ ಕಳಿಸಿ.
ಪ್ಯಾನ್-ಆಧಾರ್ ಲಿಂಕ್ ಹೇಗೆ?
- ಆದಾಯ ತೆರಿಗೆ ಇಲಾಖೆಯು ಪ್ಯಾನ್ ಅನ್ನು ಆಧಾರ್ ಜತೆಗೆ ಲಿಂಕ್ ಮಾಡಲು ಹಲವು ವಿಧಾನಗಳನ್ನು ಕಲ್ಪಿಸಿದೆ.
- ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in ಮೂಲಕ ಲಿಂಕ್ ಮಾಡಬಹುದು.
- ಈ ವೆಬ್ ಸೈಟ್‌ನಲ್ಲಿ (www.incometax.gov.in) ರಿಜಿಸ್ಟರ್ ಆಗದಿದ್ದಲ್ಲಿ ರಿಜಿಸ್ಟರ್ ಆಗಿ. ನಿಮ್ಮ ಪ್ಯಾನ್ ನಂಬರ್ ಯೂಸರ್ ಐಡಿ ಆಗಿರುತ್ತದೆ. ಜನ್ಮ ದಿನಾಂಕ ಪಾಸ್ ವರ್ಡ್ ಆಗಿರುತ್ತದೆ.
- ಲಾಗಿನ್ ಆದ ಬಳಿಕ ಪೇಜ್‌ನಲ್ಲಿ ಲಿಂಕ್ ಯುವರ್ ಪ್ಯಾನ್ ವಿತ್ ಆಧಾರ್ ಲಭಿಸುತ್ತದೆ. ಸಿಗದಿದ್ದರೆ ಪ್ರೊಫೈಲ್ ಸೆಟ್ಟಿಂಗ್ಸ್‌ಗೆ ಹೋಗಿ ಲಿಂಕ್ ಆಧಾರ್ ಮೇಲೆ ಕ್ಲಿಕ್ಕಿಸಿ.
- ಪ್ಯಾನ್ ವಿವರಗಳನ್ನು ಪರಿಶೀಲಿಸಿ. ಹೊಂದಾಣಿಕೆ ಆಗದಿದ್ದರೆ ಸರಿಪಡಿಸಬೇಕಾಗುತ್ತದೆ. ಹೊಂದಾಣಿಕೆ ಆಗುವುದಿದ್ದರೆ ಲಿಂಕ್ ನೌ ಬಟನ್ ಒತ್ತಿರಿ.
- ಯಶಸ್ವಿಯಾಗಿ ಲಿಂಕ್ ಆದ ಬಳಿಕ ಮೆಸೇಜ್ ಸಿಗುತ್ತದೆ.
- NSDL/UTIIL ಕಚೇರಿಗೆ ತೆರಳಿ ಪ್ಯಾನ್- ಆಧಾರ್ ಲಿಂಕ್ ಮಾಡಬಹುದು.
- ಪ್ಯಾನ್ -ಆಧಾರ್ ಲಿಂಕ್ ಮಾಡಲು ಗಡುವು ತಪ್ಪಿದರೆ ಬಳಿಕ ಪ್ಯಾನ್ ನಿಷ್ಕ್ರಿಯ ಎನ್ನಿಸುವುದು.
ಯಾರು ಆಧಾರ್-ಪ್ಯಾನ್ ಲಿಂಕ್ ಮಾಡಬೇಕು?
ಆದಾಯ ತೆರಿಗೆ ಕಾಯಿದೆಯ 139ಎಎ ಸೆಕ್ಷನ್ ಪ್ರಕಾರ 2017ರ ಜುಲೈ1ಕ್ಕೆ ಹಾಗೂ ಬಳಿಕ ಪ್ಯಾನ್ ಕಾರ್ಡ್ ಗಳಿಸಿದ ಪ್ರತಿಯೊಬ್ಬರೂ ಆಧಾರ್-ಪ್ಯಾನ್ ಲಿಂಕ್ ಮಾಡಬೇಕು. ಆದರೆ ಇಲ್ಲಿ ಕೆಲವರಿಗೆ ಇದು ಕಡ್ಡಾಯವಲ್ಲ. ಈ ವಿನಾಯಿತಿಯು ಅಸ್ಸಾಂ, ಜಮ್ಮು ಕಾಶ್ಮೀರ, ಮೇಘಾಲಯದ ನಿವಾಸಿಗಳಿಗೆ ಅನ್ವಯವಾಗುತ್ತದೆ. ಭಾರತದ ನಾಗರಿಕರಲ್ಲದವರು, 80 ವರ್ಷ ಮೀರಿದವರು ವಿನಾಯಿತಿ ಪಡೆದಿದ್ದಾರೆ.
ಪ್ರಮುಖ ಸುದ್ದಿ
Mutual fund nomination : ಮ್ಯೂಚುವಲ್ ಫಂಡ್ ನಾಮಿನೇಶನ್ ಗಡುವು 2023 ಸೆಪ್ಟೆಂಬರ್ 30ಕ್ಕೆ ವಿಸ್ತರಣೆ
ಮ್ಯೂಚುವಲ್ ಫಂಡ್ ಹೂಡಿಕೆದಾರರು ತಮ್ಮ ಉತ್ತರಾಧಿಕಾರಿ ಯಾರು ಎಂಬುದರ ಬಗ್ಗೆ ನಾಮಿನೇಶನ್ ಮೂಲಕ ವಿವರ (Mutual fund nomination) ಸಲ್ಲಿಸಬೇಕಾಗುತ್ತದೆ. ಈ ಕುರಿತ ಮಾರ್ಚ್ 30ರ ಗಡುವನ್ನು ಇದೀಗ 2023 ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ.
ನವ ದೆಹಲಿ: ಮ್ಯೂಚುವಲ್ ಫಂಡ್ ಹೂಡಿಕೆದಾರರು ತಮ್ಮ ನಾಮಿನಿ ವಿವರಗಳನ್ನು (mutual fund nomination) ಸಲ್ಲಿಸಲು ನಿಗದಿಯಾಗಿದ್ದ ಗಡುವುದು 2023ರ ಮಾರ್ಚ್ 31ರಿಂದ 2023ರ ಸೆಪ್ಟೆಂಬರ್ 30ಕ್ಕೆ ವಿಸ್ತರಣೆಯಾಗಿದೆ. ಮಾರುಕಟ್ಟೆ ನಿಯಂತ್ರಕ ಸೆಬಿಯು ಈ ಬಗ್ಗೆ ಮಂಗಳವಾರ ಸುತ್ತೋಲೆ ಹೊರಡಿಸಿದೆ.
ಮ್ಯೂಚುವಲ್ ಫಂಡ್ ಸಂಸ್ಥೆಗಳು ನಾಮಿನೇಶನ್ ಪ್ರಕ್ರಿಯೆಯನ್ನು ಇದುವರೆಗೆ ಮಾಡದಿರುವ ಹೂಡಿಕೆದಾರರಿಗೆ, ಪೂರ್ಣಗೊಳಿಸಲು ಉತ್ತೇಜನ ನೀಡಬೇಕು. ಇ-ಮೇಲ್, ಎಸ್ಸೆಮ್ಮೆಸ್‌ಗಳನ್ನು ಕಳಿಸಬೇಕು ಎಂದು ಸೆಬಿ ತಿಳಿಸಿದೆ.
2022ರ ಜೂನ್ 15ರ ಸುತ್ತೋಲೆಯಲ್ಲಿ ಸೆಬಿಯು ಮ್ಯೂಚುವಲ್ ಫಂಡ್ ಹೂಡಿಕೆಗೆ ನಾಮಿನೇಶನ್ ಕಡ್ಡಾಯ ಎಂದು ತಿಳಿಸಿತ್ತು. ಬಳಿಕ ಗಡುವನ್ನು 2022ರ ಅಕ್ಟೋಬರ್ 1ಕ್ಕೆ ವಿಸ್ತರಿಸಲಾಯಿತು. ಬಳಿಕ 2023ರ ಮಾರ್ಚ್ 31ಕ್ಕೆ ಹಾಗೂ ಇದೀಗ 2023ರ ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ.
ನಾಮಿನೇಶನ್ ಏಕೆ? ಮ್ಯೂಚುವಲ್ ಫಂಡ್ ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬುದನ್ನು ನಾಮಿನೇಶನ್ ಮೂಲಕ ತಿಳಿಸಲಾಗುತ್ತದೆ. ಇದರಿಂದ ಹೂಡಿಕೆಯ ಹಿಂತೆಗೆತ ಪ್ರಕ್ರಿಯೆ ಸುಗಮವಾಗುತ್ತದೆ. ಆದ್ದರಿಂದ ನಾಮಿನೇಶನ್ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ನಿಮ್ಮ ಮ್ಯೂಚುವಲ್ ಫಂಡ್ ಸಂಸ್ಥೆಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲೂ ನಾಮಿನೇಶನ್ ಪ್ರಕ್ರಿಯೆ ಪೂರ್ಣಗೊಳಿಸಬಹುದು.
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ13 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ14 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್11 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ14 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!