Karnataka Election 2023 Rs 62,000 crore spending per year for Congress guarantee schemesKarnataka Election 2023 : ಕಾಂಗ್ರೆಸ್‌ನ ಗ್ಯಾರಂಟಿ ಸ್ಕೀಮುಗಳಿಗೆ ಬೇಕು ವರ್ಷಕ್ಕೆ 62,000 ಕೋಟಿ ರೂ!

ಪ್ರಮುಖ ಸುದ್ದಿ

Karnataka Election 2023 : ಕಾಂಗ್ರೆಸ್‌ನ ಗ್ಯಾರಂಟಿ ಸ್ಕೀಮುಗಳಿಗೆ ಬೇಕು ವರ್ಷಕ್ಕೆ 62,000 ಕೋಟಿ ರೂ!

Karnataka Election 2023 ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿ ಸ್ಕೀಮ್‌ಗಳ ಜಾರಿಗೆ ವರ್ಷಕ್ಕೆ 62,000 ಕೋಟಿ ರೂ. ಖರ್ಚು ಬೀಳಲಿದೆ ಎಂದು ವರದಿಯಾಗಿದೆ. ವಿವರ ಇಲ್ಲಿದೆ.

VISTARANEWS.COM


on

cash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕಾಂಗ್ರೆಸ್‌ ಪಕ್ಷ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಗಳಿಸುವ ನಿಟ್ಟಿನಲ್ಲಿ ಹಲವಾರು ಕಾರಣಗಳಿವೆ. ಅವುಗಳ ಪೈಕಿ ಗ್ಯಾರಂಟಿ ಸ್ಕೀಮ್‌ಗಳ ( Congress Guarantees ) ಘೋಷಣೆ ಕೂಡ ಪ್ರಮುಖವಾಗಿತ್ತು. ( Karnataka Election 2023) ಹಾಗಾದರೆ ಇವುಗಳನ್ನು ಜನರಿಗೆ ಮುಟ್ಟಿಸಬೇಕಾದರೆ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರದ ಬೊಕ್ಕಸಕ್ಕೆ ಎಷ್ಟು ಹೊರೆ ಬೀಳಲಿದೆ? ಜನರ ಎಷ್ಟು ತೆರಿಗೆ ಹಣ ವೆಚ್ಚವಾಗಲಿದೆ ಎಂಬ ಅಂದಾಜು ಲೆಕ್ಕಾಚಾರ ಈಗ ನಡೆಯುತ್ತಿದೆ.

ಕಾಂಗ್ರೆಸ್‌ ನೀಡಿದ್ದ ಭರವಸೆಗಳೇನು? ಕುಟುಂಬದ ಮಹಿಳಾ ಪ್ರಮುಖರಿಗೆ (ಮನೆಯ ಯಜಮಾನಿ) ಮಾಸಿಕ 2,000 ರೂ. ಪ್ರತಿಯೊಬ್ಬ ಡಿಪ್ಲೊಮಾ ನಿರುದ್ಯೋಗಿಗೆ ಮಾಸಿಕ 1,500 ರೂ, ಪದವೀಧರ ನಿರುದ್ಯೋಗಿಗೆ ಮಾಸಿಕ 3,000 ರೂ. ಸಿಗಲಿದೆ. ಮಹಿಳೆಯರಿಗೆ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ. ಪ್ರತಿ ಕುಟುಂಬಕ್ಕೆ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ಸಿಗಲಿದೆ. ಅನ್ನ ಭಾಗ್ಯ ಅಡಿ ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಆಹಾರ ಧಾನ್ಯ ಸಿಗಲಿದೆ.

ಕಾಂಗ್ರೆಸ್‌ ರಾಜ್ಯದ ಮತದಾರರಿಗೆ ನೀಡಿರುವ 5 ಪ್ರಮುಖ ಆಶ್ವಾಸನೆಗಳು
ಗೃಹಲಕ್ಷ್ಮಿ : ಕುಟುಂಬದ ಮಹಿಳಾ ಪ್ರಮುಖರಿಗೆ (ಮನೆಯ ಯಜಮಾನಿ) ಪ್ರತಿ ತಿಂಗಳು 2,000 ರೂ.
ಯುವನಿಧಿ: ಪ್ರತಿ ಡಿಪ್ಲೊಮಾ ನಿರುದ್ಯೋಗಿಗೆ 2 ವರ್ಷಗಳ ತನಕ ಮಾಸಿಕ 1,500 ರೂ.
ಪದವೀಧರ ನಿರುದ್ಯೋಗಿಗೆ 2 ವರ್ಷಗಳ ತನಕ ಮಾಸಿಕ 3,000 ರೂ.
ಶಕ್ತಿ: ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ
ಅನ್ನ ಭಾಗ್ಯ: ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಆಹಾರ ಧಾನ್ಯ
ಗೃಹ ಜ್ಯೋತಿ: ಪ್ರತಿ ಕುಟುಂಬಕ್ಕೆ 200 ಯುನಿಟ್‌ ವಿದ್ಯುತ್‌ ಉಚಿತ

ಇದನ್ನೂ ಓದಿ: Modi In Karnataka: ಕಾಂಗ್ರೆಸ್‌ ಗ್ಯಾರಂಟಿ ಸುಳ್ಳು, ನಂಬಿದರೆ ಮುಳ್ಳು; ಬೊಮ್ಮಾಯಿ ತವರಲ್ಲಿ ಮೋದಿ ಅಬ್ಬರ

ಇದರ ಜತೆಗೆ ಆಳ ಸಮುದ್ರ ಮೀನುಗಾರಿಕೆಗೆ 500 ಲೀಟರ್‌ ತೆರಿಗೆ ಮುಕ್ತ ಡೀಸೆಲ್‌, ಮೀನುಗಾರಿಕೆಗೆ ರಜೆಯ ಅವಧಿಯಲ್ಲಿ ಎಲ್ಲ ಮೀನುಗಾರರಿಗೆ 6,000 ರೂ. ನೆರವು, ಹಸುವಿನ ಸೆಗಣಿಯನ್ನು ಕೆ.ಜಿಗೆ 3 ರೂ. ದರದಲ್ಲಿ ಖರೀದಿಯ ಆಶ್ವಾಸನೆಯನ್ನು ಕಾಂಗ್ರೆಸ್‌ ಘೋಷಿಸಿತ್ತು.

ನಗದು ಪಾವತಿಗಳು ಮತ್ತು ವಿದ್ಯುತ್‌ ಸಬ್ಸಿಡಿಗೇ ವಾರ್ಷಿಕ 62,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಕೆಲ ವರದಿಗಳು ತಿಳಿಸಿವೆ. ಅಂದರೆ ರಾಜ್ಯ ಬಜೆಟ್‌ನ 20% ಪಾಲು ಇಂಥ ಯೋಜನೆಗಳಿಗೆ ವೆಚ್ಚವಾಗಲಿದೆ.

ಕಾಂಗ್ರೆಸ್‌ ನಾಯಕರು ಹೇಳುವುದೇನು?

Karnataka Election 2023 Rs 62,000 crore spending per year for Congress guarantee schemes

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿರುವ ರಣ್‌ದೀಪ್‌ ಸಿಂಗ್‌ ಸುರ್ಜೇವಾಲ ಹೇಳುವ ಪ್ರಕಾರ, ಪಕ್ಷವು ಘೋಷಿಸಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ತಗಲುವ ವೆಚ್ಚ‌, ರಾಜ್ಯ ಬಜೆಟ್ ಗಾತ್ರದ 15% ಮೀರುವ ಸಾಧ್ಯತೆ ಇಲ್ಲ. ಮುಂದಿನ 5 ವರ್ಷಗಳಲ್ಲಿ ಬಜೆಟ್‌ ಗಾತ್ರ ವೃದ್ಧಿಸುವ ನಿರೀಕ್ಷೆಯೂ ಇದೆ. ಕರ್ನಾಟಕ ಪ್ರಬಲ ಆದಾಯ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. 2022-23 ರಲ್ಲಿ 72,000 ಕೋಟಿ ರೂ. ಕಂದಾಯ ಸಂಗ್ರಹಣೆಯ ಗುರಿಯನ್ನು ಹೊಂದಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್‌ ಮನೆಯಿಂದ ಹಾಸಿಗೆ, ಹೊದಿಕೆ ಕೊಂಡೊಯ್ದ ಎಸ್‌ಐಟಿ; ಏನ್‌ ಸಿಗ್ತು?

Prajwal Revanna Case: ಮಂಗಳವಾರ ಸತತ ಹತ್ತು ಗಂಟೆಗಳ ಕಾಲ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ (FSL) ತಂಡಗಳು ಹಾಸನ ಸಂಸದನ ಮನೆಯಲ್ಲಿ ಸಂಪೂರ್ಣ ತಪಾಸಣೆ ನಡೆಸಿದವು. ಪ್ರಜ್ವಲ್‌ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ಎಸ್‌ಐಟಿ ಕೊಂಡೊಯ್ದಿದೆ.

VISTARANEWS.COM


on

prajwal revanna case mattress
Koo

ಹಾಸನ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassan MP Prajwal Revanna Case) ಭಾಗಿಯಾಗಿರುವ ಅಶ್ಲೀಲ ವಿಡಿಯೋ (Obscene video) ಹಾಗೂ ಲೈಂಗಿಕ ದೌರ್ಜನ್ಯ (Physical abuse) ಪ್ರಕರಣಕ್ಕೆ ಸಂಬಂಧಿಸಿ, ಒಂದೆಡೆ ತಾನು ಮೇ 31ರಂದು ಭಾರತಕ್ಕೆ ಬರುವುದನ್ನು ಪ್ರಜ್ವಲ್‌ ಖಚಿತಪಡಿಸಿದ್ದರೆ, ಇನ್ನೊಂದೆಡೆ ಸಂಸದನ ಮನೆಯಲ್ಲಿ ವಿಶೇಷ ತನಿಖಾ ತಂಡ (SIT) ಸಮಗ್ರ ತಪಾಸಣೆ ನಡೆಸಿದೆ.

ಮಂಗಳವಾರ ಸತತ ಹತ್ತು ಗಂಟೆಗಳ ಕಾಲ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ (FSL) ತಂಡಗಳು ಹಾಸನ ಸಂಸದನ ಮನೆಯಲ್ಲಿ ಸಂಪೂರ್ಣ ತಪಾಸಣೆ ನಡೆಸಿದವು. ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಪರಿಶೀಲನೆ ಮುಗಿಸಿ ಬೆಳಗ್ಗೆ 4 ಗಂಟೆಗೆ ಹೊರಬಿದ್ದವು. ಪ್ರಜ್ವಲ್‌ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ಎಸ್‌ಐಟಿ ಕೊಂಡೊಯ್ದಿದೆ.

ಹಾಸನ ಸಂಸದರು ತಮ್ಮ ಅಧಿಕೃತ ನಿವಾಸಕ್ಕೇ ಸಂರಸ್ತ ಮಹಿಳೆಯರನ್ನು ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡು ಅದನ್ನು ಸ್ವತಃ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು ಎಂಬ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸಾಕ್ಷಿಗಳ ಸಂಗ್ರಹ ಮಹತ್ವ ಪಡೆದಿದೆ. ಈ ಹಾಸಿಗೆ ಹೊದಿಕೆಗಳ ಮೇಲಿರಬಹುದಾದ ಡಿಎನ್‌ಎ ಸಾಕ್ಷಿಗಳ ಸಂಗ್ರಹ ಹಾಗೂ ಪರಿಶೀಲನೆಗೆ ಎಫ್‌ಎಸ್‌ಎಲ್‌ ಮುಂದಾಗಲಿದೆ.

ಮೇ 31ಕ್ಕೆ ಪ್ರಜ್ವಲ್‌ ರೇವಣ್ಣ ಬರುವ ಹೇಳಿಕೆ ನೀಡಿದ ಬೆನ್ನಲ್ಲೆ ಮಹತ್ವದ ದಾಖಲೆ ಸಂಗ್ರಹಿಸಲು ಮುಂದಾದ ಎಸ್‌ಐಟಿ, ಪೂರಕ ಸಾಕ್ಷಿ ಕಲೆಹಾಕಲು ಮುಂದಾಗಿದೆ. ಹಾಸನದಲ್ಲಿರುವ ಸಂಸದರ ಮನೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಕೊಂಡೊಯ್ದಿದೆ. ಇದಕ್ಕಾಗಿ ನಿನ್ನೆ ಇಡೀ ತಪಶೀಲು ನಡೆಸಿದ ತಂಡ, ಹಾಸನ ನಗರ ಠಾಣೆ ಪೊಲೀಸರ ಸಹಾಯ ಪಡೆಯಿತು.‌

ಹೊಳೆನರಸೀಪುರದಲ್ಲೂ ಶೋಧ

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಬೆನ್ನಲ್ಲೆ ಹೊಳೆನರಸೀಪುರಕ್ಕೂ ಎಸ್ಐಟಿ ತಂಡ ಬಂದಿದೆ. ಹೊಳೆನರಸೀಪುರದ ಹೆಚ್.ಡಿ ರೇವಣ್ಣ ಮನೆಗೆ ಮತ್ತೆ ಬಂದ ಎಸ್ಐಟಿ ತಂಡ, ರೇವಣ್ಣ ಮನೆಯಲ್ಲಿ ಶೋಧ ನಡೆಸಿದೆ. ಗನ್ನಿಕಡ ತೋಟದ ಮನೆಯಲ್ಲೂ ಸ್ಥಳ ಮಹಜರ್ ನಡೆಸುತ್ತಿದೆ. ಒಟ್ಟು ಮೂರು ಕಡೆಗಳಲ್ಲಿ ಎಸ್ಐಟಿ ತಂಡಗಳಿಂದ ಏಕಕಾಲಕ್ಕೆ ಮಹಜರ್ ನಡೆದಿದೆ.‌

ಟಿಕೆಟ್‌ ಬುಕ್‌ ಮಾಡಿದ ಪ್ರಜ್ವಲ್‌ ರೇವಣ್ಣ

ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ವಾಪಸ್​ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಏರ್​ ಟಿಕೆಟ್​ ಬುಕ್ ಮಾಡಿದ ವಿವರ ‘ವಿಸ್ತಾರನ್ಯೂಸ್​’ಗೆ ಲಭ್ಯವಾಗಿದೆ. ಪ್ರಕರಣದ ತನಿಖೆ ನಡೆಸುವ ಎಸ್​ಐಟಿ ಪ್ರಜ್ವಲ್ ರೇವಣ್ಣಗಾಗಿ ಕಾಯುತ್ತಿದ್ದು ಭಾರತಕ್ಕೆ ಬಂದ ತಕ್ಷಣ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್​ನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಟಿಕೆಟ್​ ಬುಕ್​ ಮಾಡಿಕೊಂಡಿದ್ದು ಅಲ್ಲಿಂದಲೇ ಅವರನ್ನು ಎಸ್​ಐಟಿ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಿದ್ದಾರೆ.

ಮೇ 31ಕ್ಕೆ ಬೆಂಗಳೂರಿಗೆ ತಲುಪುವ ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಪ್ರಜ್ವಲ್ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ವಿಮಾನದ ಬ್ಯುಸಿನೆಸ್​ ಕ್ಲಾಸ್​ ವರ್ಗದಲ್ಲಿ ಅವರು ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಭಾರತ ಬಿಟ್ಟು ಪರಾರಿಯಾಗಿದ್ದ ಅವರು ವಾಪಸ್​ ಬರಲು ನಿರ್ಧರಿಸಿದ್ದಾರೆ. ಎಸ್​ಐಟಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸುವುದಕ್ಕಿಂತ ಮೊದಲೇ ಅವರು ಭಾರತದಿಂದ ಹೊರಟ್ಟಿದ್ದರು. ಪ್ರಕರಣ ಕಾವು ಪಡೆದು ಪ್ರತಿಭಟನೆ ಹಾಗೂ ಧರಣಿಗಳು ನಡೆಯುವ ಸಂದರ್ಭದಲ್ಲಿ ದೇಶದಿಂದ ದೂರವಿದ್ದರು. ಎಸ್​ಐಟಿ ಪೊಲೀಸರು ಪ್ರಜ್ವಲ್​ ವಶಕ್ಕೆ ಪಡೆಯಲು ನಾನಾ ರಾಜತಾಂತ್ರಿಕ ಸಮಸ್ಯೆ ಎದುರಾದ ಕಾರಣ ಕಾಯಬೇಕಾಯಿತು. ಅಂತಿಮವಾಗಿ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲರ ಒತ್ತಾಯ ಹಾಗೂ ತಮಗೆ ಹಾಜರಾಗಲು ನೀಡಿದ ನೋಟಿಸ್​ನ ಗಡುವು ಮುಗಿದ ಕಾರಣ ಜರ್ಮನಿಯಿಂದ ಬರಲಿದ್ದಾರೆ.

ಇದನ್ನೂ ಓದಿ: Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

Continue Reading

ಪರಿಸರ

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ (wildlife sanctuaries) ಅನುಭವಗಳನ್ನು ನೀಡುತ್ತವೆ

VISTARANEWS.COM


on

Wildlife Sanctuaries
Koo

ಮಳೆಗಾಲ ಮತ್ತು ಕಾಡು! ಪ್ರಕೃತಿ ಪ್ರಿಯರ ಅತ್ಯಂತ ಇಷ್ಟದ ಕಾಂಬಿನೇಷನ್‌ ಇದು. ಮಳೆಗಾಲದಲ್ಲೊಮ್ಮೆ ಕಾಡಿಗೆ ಕರೆದರೆ ಯಾವ ಪ್ರಕೃತಿಪ್ರೇಮಿ ಬೇಡ ಅನ್ನಲಾರ ಹೇಳಿ? ವನ್ಯಜೀವಿ ಪ್ರಿಯರ, ಪ್ರಕೃತಿಪ್ರಿಯರ ಈ ಆಸೆಗೆ ತಣ್ಣೀರೆರಚುವಂತೆ ಮಳೆಗಾಲ ಬಂದ ತಕ್ಷಣ ರಾಷ್ಟ್ರೀಯ ಉದ್ಯಾನ/ವನ್ಯಜೀವಿಧಾಮಗಳೆಲ್ಲ ಬಾಗಿಲು ಮುಚ್ಚುತ್ತವೆ. ಕಾಡಿನ ಮದ್ಯದಲ್ಲಿ ಸಫಾರಿ ಹೋಗಲು, ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ ಅನುಭವಗಳನ್ನು ನೀಡುತ್ತವೆ. ಬನ್ನಿ, ಯಾವೆಲ್ಲ ರಾಷ್ಟ್ರೀಯ ಉದ್ಯಾನಗಳನ್ನು ಮಳೆಗಾಲಕ್ಕೆ ಸ್ವಲ್ಪವೇ ಮುನ್ನ ನೀವು ನೋಡುವುದೇ ಒಂದು ಅನುಭವ (wildlife sanctuaries) ಎಂಬುದನ್ನು ತಿಳಿಯೋಣ ಬನ್ನಿ.

Jim Corbett National Park, Uttarakhand

ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ, ಉತ್ತರಾಖಂಡ

ಉತ್ತರಾಖಂಡದ ಬಹು ಪ್ರಸಿದ್ಧ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಹಳೆಯ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳನ್ನು ಕಾಣಲು ಇದು ಪ್ರಶಸ್ತ ಜಾಗ. ಜೂನ್‌ ಮದ್ಯದಲ್ಲಿ ಇದು ಮುಚ್ಚಿದರೆ ಮತ್ತೆ ತೆರೆಯುವುದು ಅಕ್ಟೋಬರ್‌ನಲ್ಲಿಯೇ. ಆದರೆ, ಜೂನ್‌ ಆರಂಭದಲ್ಲಿ ಈ ಕಾಡು ನೋಡುವುದು ಬಲು ಸೊಗಸು.

Ranthambore National Park, Rajasthan

ರಣಥಂಬೋರ್‌ ರಾಷ್ಟ್ರೀಯ ಉದ್ಯಾನ, ರಾಜಸ್ಥಾನ

ಭಾರತದ ದೊಡ್ಡ ರಾಷ್ಟ್ರೀಯ ಉದ್ಯಾನಗಳ ಪೈಕಿ ಇದೂ ಒಂದು. ಹುಲಿಗಳನ್ನು ನೋಡಬೇಕೆಂದು ಬಯಸುವ ಪ್ರತಿ ವನ್ಯಜೀವಿ ಪ್ರೇಮಿ ಹಾಗೂ ವನ್ಯಜೀವಿ ಛಾಯಾಗ್ರಾಹಕರು ಈ ರಾಷ್ಟ್ರೀಯ ಉದ್ಯಾನಕ್ಕೆ ಬೇಟಿ ಕೊಡಲು ಬಯಸುವುದು ಸಾಮಾನ್ಯ. ಇದು ಜೂನ್‌ 30ರ ವೇಳೆಗೆ ಮುಚ್ಚುವ ಕಾರಣ ಅದಕ್ಕೂ ಮೊದಲು ಬೇಟಿ ಕೊಟ್ಟರೆ ಅಪರೂಪದ ಅನುಭವಗಳು ನಿಮ್ಮದಾಗಬಹುದು.

Bandhavgarh National Park, Madhya Pradesh

ಬಾಂಧವಗಢ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಹುಲಿಯನ್ನು ನೋಡಲು ಬಯಸುವ ಪ್ರತಿಯೊಬ್ಬ ವನ್ಯಜೀವಿ ಪ್ರಿಯರಿಗೂ ತಿಳಿದ ವನ್ಯಜೀವಿಧಾಮ ಇದು. ಇಲ್ಲಿ ಹುಲಿ ದರ್ಶನದ ಸಾಧ್ಯತೆ ಹೆಚ್ಚು. ಈಗಷ್ಟೇ ಮಳೆಬಿದ್ದ ಕಾಡು ಹಸಿರಾಗಿ ಕಂಗೊಳಿಸುವ ಸಂದರ್ಭ ಮಧ್ಯದಲ್ಲಿ ಆಕಳಿಸುತ್ತಾ ಕುಳಿತ ಹುಲಿಯನ್ನೊಮ್ಮೆ ಕಲ್ಪಿಸಿ ನೋಡಿ. ರೋಮಾಂಚಿತಗೊಳ್ಳುವುದಿಲ್ಲವೇ ಹೇಳಿ! ಜುಲೈನಿಂದ ಅಕ್ಟೋಬರ್‌ವರೆಗೆ ಈದು ಮುಚ್ಚಿರುವ ಕಾರಣ ಜೂನ್‌ನಲ್ಲಿ ಭೇಟಿಕೊಡಲು ಸುಸಮಯ.

Kanha National Park, Madhya Pradesh

ಕನ್ಹಾ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಇದೂ ಕೂಡಾ ಹುಲಿಗಳಿಗೆ ಬಲುಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನ. ಮಳೆಗಾಲ ಆರಂಭವಾದ ತಕ್ಷಣ ಕಾಣಲು ಇದು ಬಲು ಚಂದ. ಜೂನ್‌ 30ರಿಂದ ಅಕ್ಟೋಬರ್‌ 15ರವರೆಗೆ ಇದು ಮುಚ್ಚಿರುತ್ತದೆ.

Pench National Park, Madhya Pradesh and Maharashtra

ಪೆಂಚ್‌ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ

ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಈ ರಾಷ್ಟ್ರೀಯ ಉದ್ಯಾನ ಅತ್ಯಂತ ಸುಂದರವಾದ ಕಾಡುಗಳಲ್ಲಿ ಒಂದು. ರುಡ್ಯಾರ್ಡ್‌ ಕಿಪ್ಲಿಂಗ್‌ ಅವರ ದಿ ಜಂಗಲ್‌ ಬುಕ್‌ ಇದೇ ಕಾಡಿನಿಂದ ಸ್ಪೂರ್ತಿಗೊಂಡು ರಚಿತವಾದ ಕತೆ. ಹೆಚ್ಚು ಹುಲಿಗಳಿರುವ ಈ ಕಾಡು ಜೂನ್‌ 16ರಿಂದ ಸೆಪ್ಟೆಂಬರ್‌ವರೆಗೆ ಪ್ರವಾಸಿಗರಿಗೆ ಮುಚ್ಚಿರುತ್ತದೆ.

Nagarhole National Park, Karnataka

ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಕರ್ನಾಟಕ

ನಮ್ಮ ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಸುಂದರವಾದ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳ ಜೊತೆಗೆ ಆನೆ, ಚಿರತೆ, ಜಿಂಕೆ, ಕಾಡಮ್ಮೆಗಳೂ ಸೇರಿದಂತೆ ಅನೇಕ ಪ್ರಾಣಿಗಳ ಸಂತಿತಿ ಇಲ್ಲಿ ವಿಪುಲವಾಗಿದೆ. ಮಳೆ ಈಗಷ್ಟೇ ಬರಲು ಆರಂಭವಾಗುವ ಸಂದರ್ಭ ಇದು ರಮ್ಯವಾಗಿ ಕಾಣುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇದು ಮುಚ್ಚಿರುತ್ತದೆ. ಅಕ್ಟೋಬರ್‌ ತಿಂಗಳಲ್ಲೂ ಇದು ಅದ್ಭುತವಾಗಿ ಕಾಣುತ್ತದೆ.

Continue Reading

ಪ್ರಮುಖ ಸುದ್ದಿ

Rishabh Pant : ವಿಶ್ವಕಪ್​​ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ರಿಷಭ್ ಪಂತ್ ವಿಡಿಯೋ ಹಂಚಿಕೊಂಡ ಬಿಸಿಸಿಐ

Rishabh Pant:

VISTARANEWS.COM


on

Rishab Pant
Koo

ಬೆಂಗಳೂರು: ಭೀಕರ ಕಾರು ಅಫಘಾತದ ಬಳಿಕ ಚೇತರಿಸಿಕೊಂಡು ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ರಾಷ್ಟ್ರೀಯ ಕರ್ತವ್ಯಕ್ಕೆ ಹಾಜರಾಗಿರುವ ರಿಷಭ್ ಪಂತ್​ಗೆ ಬಿಸಿಸಿಐ ವಿಶೇಷ ಗೌರವ ಸಲ್ಲಿದೆ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಹೊಸ ನೀಲಿ ಜೆರ್ಸಿಯಲ್ಲಿ ಕಾಣಿಸಿಕೊಂಡಿರುವ ಅವರ ವಿಡಿಯೊವನ್ನು ಶೇರ್ ಮಾಡಿದೆ. ಸುಂದರ ಕ್ರಿಕೆಟ್ ಆಟಗಾರ ಮುಂದಿನ ತಿಂಗಳು ನಡೆಯಲಿರುವ ಟಿ 20 ವಿಶ್ವಕಪ್ 2024 ರಲ್ಲಿ ಮತ್ತೆ ತಮ್ಮ ದೇಶಕ್ಕಾಗಿ ಆಡುವ ವಿಷಯವನ್ನು ಸಂಭ್ರಮಿಸುವಂತೆ ಮಾಡಿದೆ. ಜೂನ್ 5ರಂದು ನ್ಯೂಯಾರ್ಕ್​ನಲ್ಲಿ ಐರ್ಲೆಂಡ್ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನಾಡಲಿದೆ. ತಂಡದ ಮತ್ತೊಬ್ಬ ವಿಕೆಟ್ ಕೀಪರ್-ಬ್ಯಾಟರ್​ ಸಂಜು ಸ್ಯಾಮ್ಸನ್​ಗಿಂತ ಮುಂಚಿತವಾಗಿ ಪಂತ್ ಅವರನ್ನು ಆರಂಭಿಕ ಇಲೆವೆನ್​​ನಲ್ಲಿ ಆಯ್ಕೆ ಮಾಡಿದರೆ, ಅದು ಮೆನ್ ಇನ್ ಬ್ಲೂ ತಂಡದ ಐತಿಹಾಸಿಕ ಕ್ಷಣವಾಗಬಹುದು.

ಪಂತ್ ಪಿಚ್​ಗೆ ಮರಳುವ ಮೊದಲು ಹೃದಯಪೂರ್ವಕ ಸಂದೇಶದೊಂದಿಗೆ ಭಾರತೀಯ ಶರ್ಟ್​ನಲ್ಲಿ ತಮ್ಮ ಹೊಸ ನೋಟದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಒಂದು ಇಣುಕು ನೋಟವನ್ನು ನೀಡಿದ್ದಾರೆ.

“ಸಿದ್ಧ. ಸಮರ್ಥ. ನಿರ್ಧರಿಸಲಾಗಿದೆ! ಪ್ರತಿಕೂಲ ಪರಿಸ್ಥಿತಿಯಿಂದ ಗೆಲುವಿನವರೆಗೆ, ಐಸಿಸಿ ಪುರುಷರ ಟಿ 20 ವಿಶ್ವಕಪ್​ಗೆ ರಿಷಭ್ ಪಂತ್​ ಅವರ ಪ್ರಯಾಣವು ದೃಢನಿಶ್ಚಯಕ್ಕೆ ಸಾಕ್ಷಿ. ಜೂನ್ 5 ರಿಂದ ನಡೆಯಲಿರುವ ಟಿ20 ವಿಶ್ವ ಕಪ್​ನಲ್ಲಿ ವಿಕೆಟ್ ಕೀಪರ್​, “ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: Rishabh Pant : ವಿಶ್ವಕಪ್​​ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ರಿಷಭ್ ಪಂತ್ ವಿಡಿಯೋ ಹಂಚಿಕೊಂಡ ಬಿಸಿಸಿಐ

ಭಯಾನಕ ಘಟನೆಯ ನಂತರ ಪಂತ್ ಮರಳಿದ್ದಾರೆ

ಡಿಸೆಂಬರ್ 30, 2022 ರ ಸಂಜೆ, ಪಂತ್ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ನಡೆದ ಭಯಾನಕ ಕಾರು ಅವಘಡದಲ್ಲಿ ಸಿಲುಕಿದ್ದರು. ಅವರ ವಾಹನವು ರಸ್ತೆ ಬಿಟ್ಟು ಹೆಚ್ಚಿನ ವೇಗದಲ್ಲಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಹೊಸ ವರ್ಷದ ಮುನ್ನಾದಿನವನ್ನು ಕುಟುಂಬದೊಂದಿಗೆ ಕಳೆಯಲು ಮುಂಜಾನೆ ಮನೆಗೆ ಪ್ರಯಾಣಿಸುತ್ತಿದ್ದಾಗ ಪಂತ್ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು.

ಆ ಪ್ರದೇಶದ ಸ್ಥಳೀಯರು ಅವರನ್ನು ಉರಿಯುತ್ತಿರುವ ವಾಹನದಿಂದ ಹೊರಗೆಳೆದು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ್ದರು. ಪುನಶ್ಚೇತನ ಮತ್ತು ಚೇತರಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ಪಂತ್ ಅವರ ಮೊಣಕಾಲುಗಳು ಮತ್ತು ದೇಹದ ಇತರ ಭಾಗಗಳಲ್ಲಿ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು. ಸಂಪೂರ್ಣ ಆರೋಗ್ಯಕ್ಕೆ ಮರಳಲು ಅವರಿಗೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಹಿಡಿಯಿತು. ಆದಾಗ್ಯೂ ಅಷ್ಟೊಂದು ಭೀಕರ ಅಪಘಾತದ ಬಳಿಕ ಅವರು ಚೇತರಿಸಿಕೊಂಡ ವೇಗ ಅಸಾಮಾನ್ಯವಾಗಿದೆ.

Continue Reading

ಕ್ರೀಡೆ

T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

T20 World Cup: ವರದಿಯ ಪ್ರಕಾರ, ಐಸಿಸ್ ಅನುಯಾಯಿಗಳು Matrix.org ನೆಟ್ವರ್ಕ್​ನಲ್ಲಿ ಆನ್ಲೈನ್ ಚಾಟ್ ರೂಮ್​​ಗಳನ್ನು ಬಳಸುತ್ತಿರುವುದು ಕಂಡುಬಂದಿದೆ, ಅಲ್ಲಿ ಅವರು “ನಿಮ್ಮ ಶಸ್ತ್ರಾಸ್ತ್ರವನ್ನು ಸಿದ್ಧಪಡಿಸಿ, ನಿಮ್ಮ ಯೋಜನೆಯನ್ನು ರೂಪಿಸಿ ಮತ್ತು ನಂತರ ನಮ್ಮವರನ್ನು ಆಕರ್ಷಿಸಿ” ಎಂಬ ಸಂದೇಶ ಹಾಕಿದ್ದಾರೆ. ವಿಶೇಷವಾಗಿ ಟಿ 20 ವಿಶ್ವಕಪ್​ನಂತ ಪ್ರಮುಖ ಕ್ರೀಡಾಕೂಟಗಳನ್ನು ಗುರಿಯಾಗಿಸುವ ಬಗ್ಗೆ ಈ ಸಂದೇಶದಲ್ಲಿ ತಿಳಿಸಲಾಗಿದೆ.

VISTARANEWS.COM


on

T20 World Cup
Koo

ಬೆಂಗಳೂರು: ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿಯಾಗಿ ಆತಿಥ್ಯ ವಹಿಸಲಿರುವ ಮುಂಬರುವ ಟಿ 20 ವಿಶ್ವಕಪ್ 2024 ಗಾಗಿ ಅಭ್ಯಾಸ ಪಂದ್ಯಗಳು ಆರಂಭಗೊಂಡಿವೆ. ಈ ಮೆಗಾ-ಈವೆಂಟ್ ಜೂನ್ 1 ರಂದು ಪ್ರಾರಂಭವಾಗಲಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾಗತಿಕ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಏತನ್ಮಧ್ಯೆ ಟೂರ್ನಿಗೆ ಐಸಿಸ್​ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್​ ಸಿರಿಯಾ ಗ್ರೂಪ್) ಬೆದರಿಕೆ ಒಡ್ಡಿದೆ. ಉಗ್ರರು ಪ್ರಸಾರ ಮಾಡಿದ ಆಘಾತಕಾರಿ ಸಂದೇಶದಿಂದ ಕ್ರಿಕೆಟ್ ಜಗತ್ತು ತಲ್ಲಣಗೊಂಡಿದೆ. ಭಯೋತ್ಪಾದಕ ಬೆದರಿಕೆಯು ಈವೆಂಟ್​ಗೆ ಸಂಬಂಧಿಸಿದ ಸಂಘಟಕರು ಮತ್ತು ಸದಸ್ಯರ ಮೇಲೆ ಮಾತ್ರವಲ್ಲದೆ, ಪಂದ್ಯಾವಳಿಗೆ ಸಜ್ಜಾಗುತ್ತಿರುವ ಕ್ರಿಕೆಟ್ ಉತ್ಸಾಹಿಗಳು ಮತ್ತು ಬೆಂಬಲಿಗರಲ್ಲಿ ಆತಂಕ ಉಂಟು ಮಾಡಿದೆ. ವಆಯಾ ರಾಷ್ಟ್ರಗಳನ್ನು ಹಲವಾರು ಸ್ಥಳಗಳಲ್ಲಿ ಹುರಿದುಂಬಿಸಲು ಈಗಾಗಲೇ ಮನಸ್ಸು ಮಾಡಿದವರ ಅಭಿಮಾನಿಗಳ ಮೇಲೆ ಆತಂಕದ ಛಾಯೆಯನ್ನು ಮೂಡಿಸಿದೆ.

ವರದಿಯ ಪ್ರಕಾರ, ಐಸಿಸ್ ಅನುಯಾಯಿಗಳು Matrix.org ನೆಟ್ವರ್ಕ್​ನಲ್ಲಿ ಆನ್ಲೈನ್ ಚಾಟ್ ರೂಮ್​​ಗಳನ್ನು ಬಳಸುತ್ತಿರುವುದು ಕಂಡುಬಂದಿದೆ, ಅಲ್ಲಿ ಅವರು “ನಿಮ್ಮ ಶಸ್ತ್ರಾಸ್ತ್ರವನ್ನು ಸಿದ್ಧಪಡಿಸಿ, ನಿಮ್ಮ ಯೋಜನೆಯನ್ನು ರೂಪಿಸಿ ಮತ್ತು ನಂತರ ನಮ್ಮವರನ್ನು ಆಕರ್ಷಿಸಿ” ಎಂಬ ಸಂದೇಶ ಹಾಕಿದ್ದಾರೆ. ವಿಶೇಷವಾಗಿ ಟಿ 20 ವಿಶ್ವಕಪ್​ನಂತ ಪ್ರಮುಖ ಕ್ರೀಡಾಕೂಟಗಳನ್ನು ಗುರಿಯಾಗಿಸುವ ಬಗ್ಗೆ ಈ ಸಂದೇಶದಲ್ಲಿ ತಿಳಿಸಲಾಗಿದೆ.

ಅಂತರ್ಜಾಲದಲ್ಲಿ ಪ್ರಸಾರವಾದ ಗ್ರಾಫಿಕ್ ಪೋಸ್ಟರ್ ಅನ್ನು ಬಳಸಿಕೊಂಡು, ಭಯೋತ್ಪಾದಕ ಸಂಘಟನೆಯು ರೈಫಲ್ ಹಿಡಿದಿರುವ ವ್ಯಕ್ತಿಯನ್ನು ಚಿತ್ರಿಸುವ ಮೂಲಕ ತೀವ್ರ ಬೆದರಿಕೆಯನ್ನು ರವಾನಿಸಿದೆ. ನೀವು ಪಂದ್ಯಗಳಿಗಾಗಿ ಕಾಯಿರಿ…. ಮತ್ತು ನಾವು ನಿಮಗಾಗಿ ಕಾಯುತ್ತೇವೆ……” ಹೆಚ್ಚುವರಿಯಾಗಿ, ಪೋಸ್ಟ್​​ನಲ್ಲಿ ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂ ಮತ್ತು ಜೂನ್ 9 ರ ನಡೆಯಲಿರುವ ಭಾರತ- ಪಾಕ್ ಪಂದ್ಯವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಟಿಕೆಟ್ ಮಾರಾಟ ಮತ್ತು ಪ್ರಸಾರ ಅಂಕಿಅಂಶಗಳ ದೃಷ್ಟಿಯಿಂದ ಹೆಚ್ಚು ಪ್ರಚಾರವನ್ನು ಪಡೆದ ಪಂದ್ಯ ಇದಾಗಿದೆ.

ಚಿತ್ರದಲ್ಲಿ ಕ್ರೀಡಾಂಗಣದ ಚಿತ್ರಣದ ಮೇಲೆ ವೈಮಾನಿಕ ಡ್ರೊನ್​ಗಳನ್ನು ಸುತ್ತಿಸಲಾಗಿದೆ. ಇದರೊಂದಿಗೆ ಡೈನಮೈಟ್ ಕಡ್ಡಿ ಮತ್ತು ಟಿಕ್ಕಿಂಗ್ ಗಡಿಯಾರವಿದೆ. ಮ್ಯಾನ್​ಹಟ್​ನ ಹೊರಗೆ ಇತ್ತೀಚೆಗೆ ನಿರ್ಮಿಸಲಾದ ಸ್ಥಳದಲ್ಲಿ ಇಂಡೋ-ಪಾಕ್ ಪಂದ್ಯಕ್ಕೆ ಗರಿಷ್ಠ 34,000 ಅಭಿಮಾನಿಗಳು ಹಾಜರಾಗುವ ನಿರೀಕ್ಷೆಯಿದೆ. ಐಸೆನ್ಹೋವರ್ ಪಾರ್ಕ್​ನ ತಾತ್ಕಾಲಿಕ ಕ್ರೀಡಾಂಗಣದಲ್ಲಿ ನಡೆಯಲಿರುವ ಎಂಟು ಪಂದ್ಯಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಒಂದಾಗಿದೆ.

Continue Reading
Advertisement
prajwal revanna case mattress
ಪ್ರಮುಖ ಸುದ್ದಿ10 mins ago

Prajwal Revanna Case: ಪ್ರಜ್ವಲ್‌ ಮನೆಯಿಂದ ಹಾಸಿಗೆ, ಹೊದಿಕೆ ಕೊಂಡೊಯ್ದ ಎಸ್‌ಐಟಿ; ಏನ್‌ ಸಿಗ್ತು?

AC Side Effects
ಆರೋಗ್ಯ54 mins ago

AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

karnataka weather forecast
ಮಳೆ1 hour ago

Karnataka weather : ಗುಡುಗು ಸಹಿತ ಮಳೆಯೊಂದಿಗೆ 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

Rishab Pant
ಪ್ರಮುಖ ಸುದ್ದಿ2 hours ago

Rishabh Pant : ವಿಶ್ವಕಪ್​​ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ರಿಷಭ್ ಪಂತ್ ವಿಡಿಯೋ ಹಂಚಿಕೊಂಡ ಬಿಸಿಸಿಐ

Wildlife Sanctuaries
ಪರಿಸರ2 hours ago

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

T20 World Cup
ಕ್ರೀಡೆ2 hours ago

T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

namaz on road
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ನಡುರಸ್ತೆಯಲ್ಲೇಕೆ ನಮಾಜ್‌ ಮಾಡಬೇಕು?

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಜಂಟಿ ಹೂಡಿಕೆ ವ್ಯವಹಾರದಿಂದ ದೂರವಿರಿ

Prajwal Revanna Case
ಪ್ರಮುಖ ಸುದ್ದಿ9 hours ago

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

chakravarthy sulibele
ಕರ್ನಾಟಕ9 hours ago

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ13 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು21 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌