Mobile Export | ಭಾರತದಿಂದ 72,900 ಕೋಟಿ ರೂ. ಮೊಬೈಲ್‌ ಹ್ಯಾಂಡ್‌ಸೆಟ್‌ ರಫ್ತು - Vistara News

ಪ್ರಮುಖ ಸುದ್ದಿ

Mobile Export | ಭಾರತದಿಂದ 72,900 ಕೋಟಿ ರೂ. ಮೊಬೈಲ್‌ ಹ್ಯಾಂಡ್‌ಸೆಟ್‌ ರಫ್ತು

ಭಾರತದಲ್ಲಿ ಮೇಕ್‌ ಇನ್‌ ಇಂಡಿಯಾ ಅಭಿಯಾದ ಪರಿಣಾಮ ಸ್ಥಳೀಯವಾಗಿ ಸ್ಮಾರ್ಟ್‌ ಫೋನ್‌ ಉತ್ಪಾದನೆ (Mobile Export) ಹೆಚ್ಚುತ್ತಿದೆ. ಇಲ್ಲಿ ತಯಾರಿಸಿ ರಫ್ತು ಮಾಡಲಾಗುತ್ತಿದೆ.

VISTARANEWS.COM


on

mobile
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತದಿಂದ 2022-23ರಲ್ಲಿ ಒಟ್ಟು 72,900 ಕೋಟಿ ರೂ. ಮೌಲ್ಯದ (Mobile Export) ಮೊಬೈಲ್‌ ಹ್ಯಾಂಡ್‌ಸೆಟ್‌ ರಫ್ತಾಗುವ ನಿರೀಕ್ಷೆ ಇದೆ.

ಕಳೆದ 2021-22ರ ಸಾಲಿನಲ್ಲಿ 46,980 ಕೋಟಿ ರೂ. ಮೌಲ್ಯದ ಮೊಬೈಲ್‌ ಹ್ಯಾಂಡ್‌ಸೆಟ್‌ ರಫ್ತಾಗಿತ್ತು. ಉತ್ಪಾದಕರು ಮೊಬೈಲ್‌ ಉತ್ಪಾದನೆ ಮತ್ತು ರಫ್ತನ್ನು ವೃದ್ಧಿಸಿರುವುದು ಇದಕ್ಕೆ ಕಾರಣ.

ಆ್ಯಪಲ್‌ನ ಉತ್ಪಾದನೆಯಲ್ಲಿ ಉಂಟಾಗಿರುವ ಹೆಚ್ಚಳ, ಸ್ಯಾಮ್‌ಸಂಗ್‌ ಸೇರಿದಂತೆ ಇತರ ಕಂಪನಿಗಳೂ ಹ್ಯಾಂಡ್‌ ಸೆಟ್‌ ಉತ್ಪಾದನೆಯನ್ನು ಹೆಚ್ಚಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ರಾಜ್ಯಗಳಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪಾದನೆಯನ್ನು ಹೆಚ್ಚಿಸಲು ಎಲ್ಲ ರಾಜ್ಯಗಳ ಐಟಿ ಸಚಿವರುಗಳ ಜತೆಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Aiden Markram: ಧೋನಿಯಂತೆ ಮಾರ್ಕ್ರಮ್​ ಕೂಡ ಲಕ್ಕಿ ಕ್ಯಾಪ್ಟನ್​; ಸಾಧನೆ ಹೀಗಿದೆ

Aiden Markram:ಐಡನ್‌ ಮಾರ್ಕ್ರಮ್ ನಾಯಕತ್ವದಲ್ಲಿ 2014ರ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್‌ ಆಗಿತ್ತು. ಇದೀಗ ಸೀನಿಯರ್‌ ಮಟ್ಟದಲ್ಲಿಯೂ ಅವರ ನಾಯಕತ್ವದಲ್ಲೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದೆ. 32 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಗಡಿ ದಾಟಿದ್ದು ಕೂಡ ಇವರ ನಾಯಕತ್ವದಲ್ಲೇ.

VISTARANEWS.COM


on

Aiden Markram
Koo

ಬಾರ್ಬಡೋಸ್​: ವಿಶ್ವಕಪ್‌(T20 World Cup 2024) ಇತಿಹಾಸದಲ್ಲೇ ಮೊದಲ ಸಲ ಪ್ರಶಸ್ತಿ ಸುತ್ತಿಗೆ ನೆಗೆದು ಇತಿಹಾಸ ಬರೆಯಲು ಮುಂದಾಗಿರುವ ದಕ್ಷಿಣ ಆಫ್ರಿಕಾ(South Africa vs India Final) ತಂಡಕ್ಕೆ ಐಡನ್‌ ಮಾರ್ಕ್ರಮ್(Aiden Markram)​ ಲಕ್ಕಿ ಕ್ಯಾಪ್ಟನ್​(lucky captain) ಆಗಿದ್ದಾರೆ. ಇದು ಈಗಾಗಲೇ ಸಾಬೀತಾಗಿದೆ. ಅವರ ನಾಯಕತ್ವದ ಸಾಧನೆ ಇಂತಿದೆ.

ಹೌದು, ಐಡನ್‌ ಮಾರ್ಕ್ರಮ್ ನಾಯಕತ್ವದಲ್ಲಿ 2014ರ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್‌ ಆಗಿತ್ತು. ಇದೀಗ ಸೀನಿಯರ್‌ ಮಟ್ಟದಲ್ಲಿಯೂ ಅವರ ನಾಯಕತ್ವದಲ್ಲೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದೆ. 32 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಗಡಿ ದಾಟಿದ್ದು ಕೂಡ ಇವರ ನಾಯಕತ್ವದಲ್ಲೇ. ಇದೀಗ ಫೈನಲ್​ನಲ್ಲಿ ಇವರ ಲಕ್‌ ಹೇಗಿದೆ, ಚೋಕರ್ಸ್ ಹೋಗಿ ಚಾಂಪಿಯನ್​ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಧೋನಿ 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ತಮ್ಮ ನಾಯಕತ್ವದ ಮೊದಲ ಪ್ರಯತ್ನದಲ್ಲೇ ಕಪ್​ ಗೆದ್ದು ಭಾರತದ ಪಾಲಿಗೆ ಲಕ್ಕಿ ಕ್ಯಾಪ್ಟನ್​ ಎನಿಸಿಕೊಂಡಿದ್ದರು. 2013ರಲ್ಲಿ ಇವರ ನಾಯಕತ್ವದಲ್ಲೇ ಚಾಂಪಿಯನ್ಸ್​ ಟ್ರೋಫಿ ಕೂಡ ಗೆದ್ದಿತ್ತು. ಇದಾದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ದಕ್ಷಿಣ ಆಫ್ರಿಕಾ ಕೂಡ ಇದುವರೆಗೂ ಒಂದೇ ಒಂದು ವಿಶ್ವಕಪ್​ ಗೆದ್ದಿಲ್ಲ. ಇದೀಗ ಧೋನಿಯಂತೆ ಮಾರ್ಕ್ರಮ್​ ಅವರು ದಕ್ಷಿಣ ಆಫ್ರೀಕಾಗೆ ಐತಿಹಾಸಿಕ ಕಪ್​ ಗೆಲ್ಲವು ಕಾತರದಲ್ಲಿದ್ದಾರೆ. ಅಜೇಯವಾಗಿ ಫೈನಲ್ ಪ್ರವೇಶಿಸಿರುವವ ಹರಿಣ ಪಡೆಗೆ ಈ ಬಾರಿಯಾದರೂ ಕಪ್​ ಗೆಲ್ಲುವ ಭಾಗ್ಯ ಇದೆಯಾ ಎಂದು ಕಾದು ನೋಡಬೇಕಿದೆ. ಈ ಹಿಂದೆ ಆಡಿದ ಎಲ್ಲ 7(ಏಕದಿನ, ಟಿ20) ಸೆಮಿಫೈನಲ್​ ಪಂದ್ಯದಲ್ಲಿಯೂ ಸೋಲು ಕಂಡಿತ್ತು.

ಇದನ್ನೂ ಓದಿ IND vs SA Final: ವಿಶ್ವಕಪ್​ ಗೆಲ್ಲಲು ಕೊಹ್ಲಿ, ರೋಹಿತ್​, ದ್ರಾವಿಡ್​ಗೆ ಇದು ಕೊನೆಯ ಅವಕಾಶ!

ಚೋಕರ್ಸ್​

ದಕ್ಷಿಣ ಆಫ್ರಿಕಾ ತಂಡ(South Africa) 1992ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ​ ಸೆಮಿಫೈನಲ್​ ಪ್ರವೇಶಿಸಿತ್ತು. ಇನ್ನೇನು ಪಂದ್ಯ ಗೆಲ್ಲುತ್ತದೆ ಎನ್ನುವಷ್ಟರಲ್ಲಿ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. 13 ಎಸೆತಗಳಲ್ಲಿ ಗೆಲುವಿಗೆ 22 ರನ್ ಬೇಕಿತ್ತು.​ ಮತ್ತೆ ಆಟ ಮುಂದುವರಿದಾಗ ಮೊಟ್ಟ ಮೊದಲ ಬಾರಿಗೆ ಪರಿಚವಾಗಿದ್ದ ಡಕ್​ವರ್ತ್​ ಲೂಯಿಸ್​ ನಿಯದ ಪ್ರಕಾರ ಹರಿಣ ಪಡೆಗೆ 1 ಎಸೆತದಲ್ಲಿ 22 ರನ್​ ಗಳಿಸುವ ಗುರಿ ನೀಡಲಾಯಿತು. ಈ ಪಂದ್ಯ ಸೋತ ಬಳಿಕ 1999ರಲ್ಲಿ ಬರ್ಮಿಂಗ್‌ಹ್ಯಾಮ್​ನಲ್ಲಿ ಆಸ್ಟ್ರೇಲಿಯ ವಿರುದ್ದದ ಪಂದ್ಯ ಟೈ ಆಗಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯ ಲೆಕ್ಕಾಚಾರದ ಮೂಲಕ ಫೈನಲ್ ಪ್ರವೇಶಿಸಿ ಕಪ್ ಗೆದ್ದಿತ್ತು. 2007 ರಲ್ಲಿ ಆಸ್ಟ್ರೇಲಿಯ ವಿರುದ್ಧ ಗ್ರಾಸ್‌ ಐಲೆಟ್‌ ನಲ್ಲಿ 7 ವಿಕೆಟ್‌ ಸೋಲು ಅನುಭವಿಸಿ ಆಘಾತಕ್ಕೆ ಗುರಿಯಾಗಿತ್ತು. 2015 ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಆಕ್ಲೆಂಡ್‌ ನಲ್ಲಿ 4 ವಿಕೆಟ್‌ ಸೋಲು ಅನುಭವಿಸಿ ಚೋಕರ್ಸ್ ಎಂದು ಮತ್ತೆ ಕರೆಸಿಕೊಳ್ಳುವ ಸ್ಥಿತಿ ಹರಿಣಗಳ ಪಾಲಿಗೆ ಬಂದೊದಗಿತ್ತು.

Continue Reading

ದೇಶ

5 Soldiers Killed: ಲಡಾಕ್‌ನ ನದಿಯಲ್ಲಿ ಸೇನಾ ವಾಹನ ಮಗುಚಿ ಭೀಕರ ದುರಂತ; ಐವರು ಯೋಧರು ಹುತಾತ್ಮ

5 Soldiers Killed: ಲಡಾಕ್‌ನ ವಾಸ್ತವಿಕ ನಿಯಂತ್ರಣ ರೇಖೆ ಯ ಬಳಿ ಶ್ಯೋಕ್ ನದಿ ದಾಟುವ ಸಮಯದಲ್ಲಿ ಟ್ಯಾಂಕ್ ಅಪಘಾತಕ್ಕೀಡಾಗಿ ಐವರು ಸೈನಿಕರು ಮೃತಪಟ್ಟಿರುವ ಆಘಾತಕಾರಿ ಘಟನೆ ಶನಿವಾರ ನಡೆದಿದೆ. ಲಡಾಕ್‌ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ ಬಳಿ ಟಿ -72 ಟ್ಯಾಂಕ್‌ ನದಿಯನ್ನು ದಾಟುವಾಗ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

VISTARANEWS.COM


on

5 Soldiers Killed
Koo

ಲಡಾಕ್‌: ಲಡಾಕ್‌ನ ವಾಸ್ತವಿಕ ನಿಯಂತ್ರಣ ರೇಖೆ (Line of Actual Control)ಯ ಬಳಿ ಶ್ಯೋಕ್ (Shyok) ನದಿ ದಾಟುವ ಸಮಯದಲ್ಲಿ ಟ್ಯಾಂಕ್ ಅಪಘಾತಕ್ಕೀಡಾಗಿ ಐವರು ಸೈನಿಕರು ಮೃತಪಟ್ಟಿರುವ ಆಘಾತಕಾರಿ ಘಟನೆ ಶನಿವಾರ ನಡೆದಿದೆ (5 Soldiers Killed). ಮೃತಪಟ್ಟ ಐವರು ಜೂನಿಯರ್ ಕಮಿಷನ್ಡ್ ಆಫೀಸರ್ (Junior Commissioned Officer) ಎಂದು ಗುರುತಿಸಲಾಗಿದೆ.

ಲಡಾಕ್‌ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ ಬಳಿ ಟಿ -72 ಟ್ಯಾಂಕ್‌ (T-72 Tank) ನದಿಯನ್ನು ದಾಟುವಾಗ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಅಪಘಾತದ ವೇಳೆ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದ ಸೈನಿಕರು ತಮ್ಮ ಟಿ -72 ಟ್ಯಾಂಕ್‌ನಲ್ಲಿ ಲೇಹ್‌ನಿಂದ 148 ಕಿ.ಮೀ. ದೂರದಲ್ಲಿರುವ, ಚೀನಾ ಗಡಿ ಸಮೀಪದ ದೌಲತ್ ಬೇಗ್ ಓಲ್ಡಿಯ ಮಂದಿರ್ ಮೋರ್ಹ್ ಬಳಿ ನದಿಯನ್ನು ದಾಟುತ್ತಿದ್ದರು.

ʼʼಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ನದಿ ದಾಟುವಾಗ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಿಂದ ಈ ದುರ್ಘಟನೆ ನಡೆದಿದೆ. ಎಲ್ಲ ಐದು ಸೈನಿಕರ ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆʼʼ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಹಿಮ ಕರಗುವಿಕೆಯಿಂದಾಗಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿದೆ ಎಂದು ಊಹಿಸಲಾಗಿದೆ. ಶ್ಯೋಕ್ ಸಿಂಧೂ ನದಿಯ ಉಪನದಿಯಾಗಿದೆ.

ರಾಜನಾಥ್‌ ಸಿಂಗ್‌ ಸಂತಾಪ

ಘಟನೆ ಬಗ್ಗೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ʼʼಲಡಾಕ್‌ನಲ್ಲಿ ನದಿ ದಾಟುವಾಗ ಸಂಭವಿಸಿದ ಅಪಘಾತದಲ್ಲಿ ನಮ್ಮ ಐವರು ಧೈರ್ಯಶಾಲಿ ಸೈನಿಕರು ಪ್ರಾಣ ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ನಮ್ಮ ಸೈನಿಕರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆʼʼ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

ಶ್ರೀನಗರ: ಕಳೆದ ಕೆಲ ದಿನಗಳಿಂದ ಉಗ್ರರ ದಾಳಿಗೆ ನಲುಗಿ ಹೋಗಿರುವ ಜಮ್ಮು-ಕಾಶ್ಮೀರದಲ್ಲಿ (Jammu Kashmir) ಜೂನ್‌ 13ರಂದು ಮತ್ತೊಂದು ದುರಂತ ಸಂಭವಿಸಿತ್ತು. ರಾಜೌರಿ ಜಿಲ್ಲೆಯಲ್ಲಿ ಸೇನೆಯ ವಾಹನವೊಂದು (Army Vehicle) ಕಂದಕಕ್ಕೆ ಉರಳಿ ಒಬ್ಬ ಯೋಧ ಮೃತಪಟ್ಟಿದ್ದರೆ, ನಾಲ್ವರು ಸೈನಿಕರು ಗಾಯಗೊಂಡಿದ್ದರು. ಗಾಯಗೊಂಡಿರುವ ಯೋಧರನ್ನು ಸೇನೆಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ನೌಶೇರಾ ಸೆಕ್ಟರ್‌ ಬಳಿಯ ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಭವಾನಿ ಗ್ರಾಮದ ಮೂಲಕ ಸೇನಾ ವಾಹನವು ಗುರುವಾರ ಸಂಜೆ ತೆರಳುತ್ತಿತ್ತು. ವಾಹದಲ್ಲಿ ಐವರು ಯೋಧರು ಇದ್ದರು. ಇದೇ ವೇಳೆ, ವಾಹನವು ಚಾಲಕನ ನಿಯಂತ್ರಣ ತಪ್ಪಿದ್ದು, ಕಂದಕಕ್ಕೆ ಉರುಳಿದೆ. ದುರಂತ ಸಂಭವಿಸುತ್ತಲೇ ಐವರೂ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಒಬ್ಬ ಯೋಧ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಜಾಸ್ತಿಯಾಗಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸೇರಿ ಹಲವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಕಾಶ್ಮೀರದಲ್ಲಿ ಉಗ್ರರ ನಿರ್ನಾಮಕ್ಕೆ ಸೂಚಿಸಿದ್ದಾರೆ. ಹಾಗೆಯೇ, ಎಲ್ಲ ಸೈನಿಕರನ್ನು ಗಡಿಯಲ್ಲಿ ನಿಯೋಜಿಸುವ ಮೂಲಕ ಉಗ್ರರಿಗೆ ತಿರುಗೇಟು ನೀಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Jammu Kashmir: ಕಾಶ್ಮೀರದಲ್ಲಿ ಮತ್ತೊಂದು ದುರಂತ; ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

Continue Reading

ಕರ್ನಾಟಕ

DK Shivakumar: ಸಿಎಂ, ಡಿಸಿಎಂ ಚರ್ಚೆ ಇಲ್ಲ, ಬಾಯಿಗೆ ಬೀಗ ಹಾಕಿಕೊಂಡಿರಿ; ಡಿಕೆಶಿ ಖಡಕ್‌ ಎಚ್ಚರಿಕೆ

DK Shivakumar: ಕರ್ನಾಟಕದ ಸಿಎಂ ಹಾಗೂ ಡಿಸಿಎಂ ಕುರಿತು ಚರ್ಚೆಯೂ ಇಲ್ಲ, ಸಿಎಂ ಪ್ರಶ್ನೆಯೂ ಇಲ್ಲ. ಯಾವ ರೆಕಮಂಡೇಷನ್‌ ಕೂಡ ಅವಶ್ಯಕತೆ ಇಲ್ಲ. ನಾನು, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ಸೇರಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಯಾವ ಶಾಸಕ ಕೂಡ ಇದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂಬುದಾಗಿ ಸಿಎಂ ಹಾಗೂ ಡಿಸಿಎಂ ಗೊಂದಲದ ಬಗ್ಗೆ ಡಿ.ಕೆ.ಶಿವಕುಮಾರ್‌ ಅವರು ಹೇಳಿದ್ದಾರೆ.

VISTARANEWS.COM


on

DK Shivakumar
Koo

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಮುಗಿದ ಬೆನ್ನಲ್ಲೇ ಕರ್ನಾಟಕದಲ್ಲಿ (Karnataka) ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಸಮುದಾಯವಾರು ಡಿಸಿಎಂ ಹುದ್ದೆ ನೀಡಬೇಕು ಎಂದು ಒಂದಷ್ಟು ಜನ ಆಗ್ರಹಿಸಿದರೆ, ಡಿ.ಕೆ.ಶಿವಕುಮಾರ್‌ ಅವರಿಗೇ ಸಿಎಂ ಹುದ್ದೆ ನೀಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ, ಸಿಎಂ, ಡಿಸಿಎಂ ಚರ್ಚೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಪ್ರತಿಕ್ರಿಯಿಸಿದ್ದು, “ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡಿರಿ” ಎಂಬುದಾಗಿ ಬಣ ರಾಜಕೀಯ ಮಾಡುವವರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

“ಕರ್ನಾಟಕದ ಸಿಎಂ ಹಾಗೂ ಡಿಸಿಎಂ ಕುರಿತು ಚರ್ಚೆಯೂ ಇಲ್ಲ, ಸಿಎಂ ಪ್ರಶ್ನೆಯೂ ಇಲ್ಲ. ಯಾವ ರೆಕಮಂಡೇಷನ್‌ ಕೂಡ ಅವಶ್ಯಕತೆ ಇಲ್ಲ. ನಾನು, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ಸೇರಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಯಾವ ಶಾಸಕ ಕೂಡ ಇದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಇಲ್ಲದಿದ್ದರೆ, ಎಐಸಿಸಿ ಹಾಗೂ ನಾನು ವಿಧಿಯಿಲ್ಲದೆ ನೋಟಿಸ್‌ ನೀಡಬೇಕಾಗುತ್ತದೆ. ಅನಿವಾರ್ಯವಾಗಿ ಪಕ್ಷದ ಶಿಸ್ತು ಕಾಪಾಡಲು ನೋಟಿಸ್ ನೀಡಬೇಕಾಗುತ್ತದೆ” ಎಂದು ಲಾಬಿ ಮಾಡುವ ಶಾಸಕರಿಗೆ ಎಚ್ಚರಿಕೆ ನೀಡಿದರು.

“ಪಕ್ಷವನ್ನು ಕಟ್ಟಲು ಬಹಳ ಕಷ್ಟಪಟ್ಟಿದ್ದೇವೆ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ನಿಮ್ಮ ಬಾಯಿಗೆ ಬೀಗ ಹಾಕಿಕೊಂಡು ಇದ್ದರೆ ಒಳ್ಳೆಯದಾಗುತ್ತದೆ. ಚಂದ್ರಶೇಖರ ಸ್ವಾಮೀಜಿ ಅವರು ನನ್ನ ಮೇಲಿನ ಅಭಿಮಾನಕ್ಕಾಗಿ ಹಾಗೆ ಮಾತನಾಡಿದ್ದಾರೆ. ಬೇರೆ ಯಾವ ಸ್ವಾಮೀಜಿಗಳೂ ಮಾತನಾಡಿಲ್ಲ. ಎಲ್ಲರಿಗೂ ಕೈ ಮುಗಿಯುತ್ತೇನೆ. ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಬೇಡಿ” ಎಂದು ಕೂಡ ಹೇಳಿದರು.

ಚಂದ್ರಶೇಖರ ಸ್ವಾಮೀಜಿ ಹೇಳಿದ್ದೇನು?

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಕೆಲ ದಿನಗಳ ಹಿಂದೆ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆಯೇ ಡಿ.ಕೆ.ಶಿವಕುಮಾರ್‌ ಅವರ ಪರವಾಗಿ ಬ್ಯಾಟಿಂಗ್‌ ಮಾಡಿದ್ದರು. “ಎಲ್ಲರೂ ಮುಖ್ಯಮಂತ್ರಿಗಳಾಗಿ ತಮ್ಮ ತಮ್ಮ ಅಧಿಕಾರ ಅನುಭವಿಸಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಒಬ್ಬರು ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಸಿಎಂ ಸ್ಥಾನ ಅನುಭವಿಸಿದ್ದಾರೆ. ಆ ಕಾರಣಕ್ಕಾಗಿ ಇನ್ನು ಮುಂದೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು” ಹೇಳಿದ್ದರು.

ಇದನ್ನೂ ಓದಿ: DK Shivakumar: ಸಿಎಂ ಬದಲಾವಣೆ; ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಡಿ.ಕೆ. ಶಿವಕುಮಾರ್

Continue Reading

Latest

Deepika Padukone: ‘ಕಲ್ಕಿ 2898 ಎಡಿ’ ಚಿತ್ರದ ದೀಪಿಕಾ ಪಡುಕೋಣೆ ನಗ್ನ ಚಿತ್ರ ಸೋರಿಕೆ; ನೆಟ್ಟಿಗರು ಹೇಳಿದ್ದೇನು?

Deepika Padukone ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಅವರ ‘ಕಲ್ಕಿ 2898 ಎಡಿ’ ಚಿತ್ರ ಜೂನ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ ಮತ್ತು ಇದು ಅಭಿಮಾನಿಗಳು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇನ್ನು ನಾಗ್ ಅಶ್ವಿನ್ ನಿರ್ದೇಶನದ ಬಗ್ಗೆ ಜನರು ಹೊಗಳಿದ್ದರು. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೀಪಿಕಾ ಸುಮತಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತನ್ನ ಗರ್ಭದಲ್ಲಿ ಇಡೀ ವಿಶ್ವದ ದುಷ್ಟ ಶಕ್ತಿಗಳಿಗೆ ಶತ್ರುವಾದ ಮಗುವನ್ನು ಹೊತ್ತುಕೊಂಡು ಬೆಂಕಿಯ ಮೂಲಕ ನಡೆಯುತ್ತಾ ಬರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಇದು ಈಗ ವೈರಲ್ ಆಗಿದೆ.

VISTARANEWS.COM


on

deepika padukone
Koo

ಮುಂಬೈ : ಬಾಲಿವುಡ್ ಖ್ಯಾತ ನಟಿಯರಲ್ಲಿ ದೀಪಿಕಾ ಪಡುಕೋಣೆ (Deepika Padukone )ಕೂಡ ಒಬ್ಬರು. ಇವರು ತಮ್ಮ ನಟನೆಯ ಮೂಲಕ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಖ್ಯಾತನಟಿ ದೀಪಿಕಾ ಪಡುಕೋಣೆ ಅವರ ‘ಕಲ್ಕಿ 2898 ಎಡಿ’ ಚಿತ್ರದ ಬೆಂಕಿಯಲ್ಲಿ ನಡೆದು ಬರುವ ಅವರ ನಗ್ನ ಚಿತ್ರ ಸೋರಿಕೆಯಾಗಿದೆ.

Deepika Padukone

ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಅಮಿತಾಭ್‌ ಬಚ್ಚನ್ ಅವರ ‘ಕಲ್ಕಿ 2898 ಎಡಿ’ ಚಿತ್ರ ಜೂನ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ ಮತ್ತು ಇದು ಅಭಿಮಾನಿಗಳು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇನ್ನು ನಾಗ್ ಅಶ್ವಿನ್ ನಿರ್ದೇಶನದ ಬಗ್ಗೆ ಜನರು ಹೊಗಳಿದ್ದರು. ಆದರೆ ಈ ಚಿತ್ರದ ಕೆಲವು ದೃಶ್ಯಗಳು, ಹಲವಾರು ಫೋಟೊಗಳು ಮತ್ತು ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿವೆ.

Deepika Padukone

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೀಪಿಕಾ ಸುಮತಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತನ್ನ ಗರ್ಭದಲ್ಲಿ ಇಡೀ ವಿಶ್ವದ ದುಷ್ಟ ಶಕ್ತಿಗಳಿಗೆ ಶತ್ರುವಾದ ಮಗುವನ್ನು ಹೊತ್ತುಕೊಂಡು ಬೆಂಕಿಯ ಮೂಲಕ ನಡೆಯುತ್ತಾ ಬರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಇದು ಈಗ ವೈರಲ್ ಆಗಿದೆ.

ವಿಡಿಯೊದಲ್ಲಿ ದೀಪಿಕಾ ಬೆಂಕಿಯ ಮೂಲಕ ನಡೆಯುತ್ತಾ ಬರುವಾಗ ಅವರ ಬಟ್ಟೆಗಳು ಬೆಂಕಿಗೆ ಉರಿದುಹೋಗುತ್ತಿದ್ದಂತೆ, ಅವರು ತಮ್ಮ ಎದೆಯನ್ನು ತಮ್ಮ ಕೈಯಿಂದ ಮುಚ್ಚಿಕೊಳ್ಳುತ್ತಾರೆ. ದೀಪಿಕಾ ಅವರ ಈ ಪಾತ್ರವು ಕಥಾಹಂದರಕ್ಕೆ ಪ್ರಮುಖವಾಗಿರುವುದರಿಂದ ಅವರ ಈ ಪಾತ್ರದ ಬಗ್ಗೆ ಚಿತ್ರತಂಡ ಬಹಿರಂಗಪಡಿಸಿರಲಿಲ್ಲ.

ಆದರೂ ಈ ವಿಡಿಯೋ ಸೋರಿಕೆಯಾಗಿದೆ. ಆದರೆ ಇದರಲ್ಲಿ ನಟಿಯ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಬಳಕೆದಾರರು ಈ ಬೆಂಕಿಯ ದೃಶ್ಯವನ್ನು ‘ಅಪ್ರತಿಮ’ ಎಂದು ಕರೆದಿದ್ದಾರೆ.

Deepika Padukone

ದೀಪಿಕಾ ಪಡುಕೋಣೆಯವರ ಇಡೀ ವೃತ್ತಿಜೀವನದ ಅತ್ಯಂತ ಅಪ್ರತಿಮ ದೃಶ್ಯ ಇದಾಗಿದೆ ಎಂದು ಒಬ್ಬ ಬಳಕೆದಾರ ತಿಳಿಸಿದರೆ, ಮತ್ತೊಬ್ಬರು “ದೀಪಿಕಾ ಉರಿಯುತ್ತಿರುವ ಬೆಂಕಿಯ ಮೂಲಕ ನಡೆಯುವುದು ಯುಗಾಂತರಗಳ ದೃಶ್ಯವಾಗಿದೆ” ಎಂದು ಬರೆದಿದ್ದಾರೆ.

ಈ ನಡುವೆ ‘ಕಲ್ಕಿ 2898 ಎಡಿ’ ಚಿತ್ರ ಥಿಯೇಟರ್ ಗಳಲ್ಲಿ ಬಿಡುಗಡೆಯಾದಾಗ ಚಿತ್ರತಂಡ ಚಲನಚಿತ್ರದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ಅಭಿಮಾನಿಗಳಲ್ಲಿ ವಿನಂತಿಸಿದ್ದರು. ಈ ಚಿತ್ರ 4 ವರ್ಷಗಳ ಸುದೀರ್ಘ ಪ್ರಯಾಣ ಮತ್ತು ಇದು ನಾಗ್ ಅಶ್ವಿನ್ ಮತ್ತು ತಂಡದ ಅಪಾರ ಪರಿಶ್ರಮದ ಕಥೆಯಾಗಿದೆ.

Deepika Padukone

ಇದನ್ನೂ ಓದಿ: ಈಗಷ್ಟೇ ಮದುವೆಯಾಗಿರುವ ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿ?

ಈ ಕಥೆಯನ್ನು ಜಾಗತಿಕ ಮಟ್ಟಕ್ಕೆ ತರುವಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ. ಇದನ್ನು ಮುಂದೆ ತರಲು ತಂಡವು ರಕ್ತ ಮತ್ತು ಬೆವರು ಹರಿಸಿದೆ. ಹಾಗಾಗಿ ದಯವಿಟ್ಟು ಸಿನಿಮಾವನ್ನು ಗೌರವಿಸೋಣ. ಅದಕ್ಕಾಗಿ ಸಿನಿಮಾ ತುಣುಕುಗಳನ್ನು ಹಂಚಿಕೊಳ್ಳಬೇಡಿ. ನಿಮಿಷದಿಂದ ನಿಮಿಷಕ್ಕೆ ಅಪ್ಡೇಟ್ ನೀಡಬೇಡಿ ಅಥವಾ ಪೈರಸಿಯಲ್ಲಿ ತೊಡಗಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಈ ಚಿತ್ರದ ಪ್ರಮುಖ ದೃಶ್ಯ ಸೋರಿಕೆಯಾಗಿರುವುದು ಬೇಸರವೇ ಸರಿ.

Continue Reading
Advertisement
Dengue Fever
ಚಿಕ್ಕಮಗಳೂರು15 mins ago

Dengue Fever : ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

Aiden Markram
ಕ್ರೀಡೆ25 mins ago

Aiden Markram: ಧೋನಿಯಂತೆ ಮಾರ್ಕ್ರಮ್​ ಕೂಡ ಲಕ್ಕಿ ಕ್ಯಾಪ್ಟನ್​; ಸಾಧನೆ ಹೀಗಿದೆ

Fahadh Faasil in trouble faces Human Rights Commission action
ಮಾಲಿವುಡ್31 mins ago

Fahadh Faasil: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು

Viral Video
ವೈರಲ್ ನ್ಯೂಸ್32 mins ago

Viral Video: ಖೈದಿ ಜೊತೆಗೆ ಮಹಿಳಾ ಪೊಲೀಸ್‌ ಅಧಿಕಾರಿ ಲೈಂಗಿಕ ಕ್ರಿಯೆ; ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ

5 Soldiers Killed
ದೇಶ35 mins ago

5 Soldiers Killed: ಲಡಾಕ್‌ನ ನದಿಯಲ್ಲಿ ಸೇನಾ ವಾಹನ ಮಗುಚಿ ಭೀಕರ ದುರಂತ; ಐವರು ಯೋಧರು ಹುತಾತ್ಮ

DK Shivakumar
ಕರ್ನಾಟಕ46 mins ago

DK Shivakumar: ಸಿಎಂ, ಡಿಸಿಎಂ ಚರ್ಚೆ ಇಲ್ಲ, ಬಾಯಿಗೆ ಬೀಗ ಹಾಕಿಕೊಂಡಿರಿ; ಡಿಕೆಶಿ ಖಡಕ್‌ ಎಚ್ಚರಿಕೆ

Actor Darshan Suffering From Sade Sati
ಸ್ಯಾಂಡಲ್ ವುಡ್56 mins ago

Actor Darshan: 2024 ಡೇಂಜರಸ್ ಇಯರ್ ಫಾರ್ ಮಿ ಅನ್ನೋದು `ಡೆವಿಲ್‌’ಗೆ ಮೊದಲೇ ಗೊತ್ತಿತ್ತಾ?

deepika padukone
Latest56 mins ago

Deepika Padukone: ‘ಕಲ್ಕಿ 2898 ಎಡಿ’ ಚಿತ್ರದ ದೀಪಿಕಾ ಪಡುಕೋಣೆ ನಗ್ನ ಚಿತ್ರ ಸೋರಿಕೆ; ನೆಟ್ಟಿಗರು ಹೇಳಿದ್ದೇನು?

attika babu
ಬೆಂಗಳೂರು ಗ್ರಾಮಾಂತರ57 mins ago

Attica Babu: ಕಳ್ಳರಿಂದ ಚಿನ್ನ ಖರೀದಿ; ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕ ಮತ್ತೊಮ್ಮೆ ಬಂಧನ

Shah Rukh Khan
ಪ್ರಮುಖ ಸುದ್ದಿ59 mins ago

Shah Rukh Khan: ನಟ ಶಾರುಖ್ ಖಾನ್ ಬಗ್ಗೆ ಶಾಕಿಂಗ್ ಸುದ್ದಿ ಕೊಟ್ಟ ನಟ ಗೋವಿಂದ್ ನಾಮದೇವ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ18 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಟ್ರೆಂಡಿಂಗ್‌