RBI : ಕ್ರೆಡಿಟ್‌ ಕಾರ್ಡ್‌, ಪರ್ಸನಲ್‌ ಲೋನ್‌ ವಿತರಣೆ ಹೆಚ್ಚಳದ ಬಗ್ಗೆ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡಿದ ಎಚ್ಚರಿಕೆ ಏನು? - Vistara News

ಪ್ರಮುಖ ಸುದ್ದಿ

RBI : ಕ್ರೆಡಿಟ್‌ ಕಾರ್ಡ್‌, ಪರ್ಸನಲ್‌ ಲೋನ್‌ ವಿತರಣೆ ಹೆಚ್ಚಳದ ಬಗ್ಗೆ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡಿದ ಎಚ್ಚರಿಕೆ ಏನು?

ಬ್ಯಾಂಕ್‌ಗಳಲ್ಲಿ ಕ್ರೆಡಿಟ್‌ ಕಾರ್ಡ್‌, ಪರ್ಸನಲ್‌ ಲೋನ್‌ ಮೊದಲಾದ ಅನ್‌ ಸೆಕ್ಯೂರ್ಡ್‌ ಸಾಲದ ವಿತರಣೆ ಹೆಚ್ಚುತ್ತಿರುವುದರ ಬಗ್ಗೆ ಆರ್‌ಬಿಐ ಎಚ್ಚರಿಕೆ ನೀಡಿದೆ. ವಿವರ (RBI) ಇಲ್ಲಿದೆ.

VISTARANEWS.COM


on

rbi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಹೆಚ್ಚುತ್ತಿರುವ ಅನ್‌ ಸೆಕ್ಯೂರ್ಡ್‌ ಸಾಲಗಳ ವಿತರಣೆಯ ಬಗ್ಗೆ ಎಚ್ಚರದಿಂದಿರಬೇಕು ಎಂದು ಆರ್‌ಬಿಐ, (RBI) ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ. ಅನ್‌ ಸೆಕ್ಯೂರ್ಡ್‌ ಎಂದರೆ ಬಹುತೇಕ ವೈಯಕ್ತಿಕ ಸಾಲಗಳು ಹಾಗೂ ಕ್ರೆಡಿಟ್‌ ಕಾರ್ಡ್‌ ಸಾಲಗಳಾಗಿವೆ. ( personal loans and credit cards) ಈ ಸಾಲಗಳಿಗೆ ಯಾವುದೇ ಅಡಮಾನ (collateral) ಇರುವುದಿಲ್ಲ. ಆದರೆ ಬಡ್ಡಿ ದರ ಹೆಚ್ಚಳ ಮತ್ತು ಅಧಿಕ ಹಣದುಬ್ಬರದ ಹಿನ್ನೆಲೆಯಲ್ಲಿ ಈ ಅನ್‌ ಸೆಕ್ಯೂರ್ಡ್‌ ಸಾಲಗಳ ವಿತರಣೆ ಬಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದು ಸಲಹೆ ನೀಡಿದೆ.

ಬ್ಯಾಂಕ್‌ಗಳು 2023ರ ಜನವರಿ 27ರ ವೇಳೆಗೆ ಕ್ರೆಡಿಟ್‌ ಕಾರ್ಡ್‌ ಮೂಲಕ 1.87 ಲಕ್ಷ ಕೋಟಿ ರೂ. ಸಾಲವನ್ನು ವಿತರಿಸಿವೆ. 2022ರ ಇದೇ ಅವಧಿಯಲ್ಲಿ 1.53 ಲಕ್ಷ ಕೋಟಿ ರೂ. ಸಾಲ ವಿತರಿಸಲಾಗಿತ್ತು ಎಂದು ಆರ್‌ಬಿಐ ತಿಳಿಸಿದೆ.

ಅನ್‌ ಸೆಕ್ಯೂರ್ಡ್‌ ಸಾಲಗಳಲ್ಲಿ ಬ್ಯಾಂಕ್‌ಗಳಿಗೆ ರಿಸ್ಕ್‌ ಕೂಡ ಹೆಚ್ಚಿರುತ್ತದೆ. ಹೀಗಾಗಿ ಈ ವಿಭಾಗದ ಸಾಲ ಆರ್‌ಬಿಐನ ತೀವ್ರ ನಿಗಾದಲ್ಲಿ ಇರುತ್ತದೆ ಎಂದು ಖಾಸಗಿ ಬ್ಯಾಂಕಿನ್‌ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಾಲದ ಬಡ್ಡಿ ದರಗಳು ಏರಿಕೆಯಾಗಿರುವುದರಿಂದ ಸುಸ್ತಿಸಾಲಗಾರರ ಸಂಖ್ಯೆಯೂ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅನ್‌ಸೆಕ್ಯೂರ್ಡ್‌ ಸಾಲಗಳ ಬಗ್ಗೆ ಆರ್‌ಬಿಐ ಎಚ್ಚರ ವಹಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದೆ.

ಸಾಲಗಾರರಿಗೆ ದಂಡದ ಬಗ್ಗೆ ಆರ್‌ಬಿಐ ಸೂಚನೆ:

ಹಲವಾರು ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತಮ್ಮ ಸಾಲಗಾರರು ಸಾಲವನ್ನು ಸಮರ್ಪಕವಾಗಿ ಮರು ಪಾವತಿಸದಿದ್ದರೆ ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡವನ್ನು, ಸಾಮಾನ್ಯ ಬಡ್ಡಿ ದರದ ಜತೆಗೆ ಸಮೀಕರಿಸಿ ವಿಧಿಸುವುದನ್ನು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಪತ್ತೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ಸಾಲಗಳಿಗೆ ದಂಡ ವಿಧಿಸುವುದಕ್ಕೆ ಸಂಬಂಧಿಸಿ ಕರಡು ನಿಯಮಾವಳಿಗಳನ್ನು ರಚಿಸಿದೆ. 2023ರ ಏಪ್ರಿಲ್‌ 12ರಂದು ಬಿಡುಗಡೆಗೊಳಿಸಿದೆ. ಹಾಗಾದರೆ ದಂಡಕ್ಕೆ ಸಂಬಂಧಿಸಿ ಆರ್‌ಬಿಐ ಏನು ಹೇಳಿದೆ ಎಂಬುದನ್ನು ನೋಡೋಣ.

ಸಾಲದ ಖಾತೆಗೆ ಸಂಬಂಧಿಸಿದ ದಂಡವನ್ನು ಶುಲ್ಕ ಎಂದು ಪರಿಗಣಿಸಬೇಕೇ ವಿನಾ, ಒಟ್ಟು ಬಡ್ಡಿ ದರ ಎಂದು ಬಡ್ಡಿಯ ಜತೆಗೆ ಸೇರಿಸಬಾರದು ಎಂದು ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ.

ಬ್ಯಾಂಕ್‌ಗಳು ದಂಡವನ್ನು ವಿಧಿಸುವುದೇಕೆ?

cash

ಬ್ಯಾಂಕ್‌ಗಳು ಎಲ್ಲರಿಗೂ ಮುಕ್ತ ಹಾಗೂ ಪಾರದರ್ಶಕವಾಗಿ ಸೇವೆ ನೀಡುತ್ತದೆ ಎಂಬುದನ್ನು ಖಾತರಿಪಡಿಸಲು ದಂಡವನ್ನು ವಿಧಿಸುತ್ತದೆ. ಜತೆಗೆ ಸಾಲಗಾರರಲ್ಲಿ ಸಾಲದ ಶಿಸ್ತು (credit discipline) ಬೆಳೆಸಲು ಕೂಡ ಇದು ಸಹಕಾರಿ. ಸಾಲಗಾರರು ಸಾಲ ಮರು ಪಾವತಿಸುವಲ್ಲಿ ವಿಳಂಬಿಸಿದರೆ ಅಥವಾ ಇಎಂಐ (equated monthly installment) ಅನ್ನು ಸರಿಯಾಗಿ ಕಟ್ಟದಿದ್ದರೆ ದಂಡ ವಿಧಿಸಲಾಗುತ್ತದೆ. ಬೇರೆ ಬೇರೆ ಬ್ಯಾಂಕ್‌ಗಳು ಭಿನ್ನ ದಂಡವನ್ನು ವಿಧಿಸುತ್ತವೆ. ದಂಡ ಅಥವಾ Penal interest ವಾರ್ಷಿಕ 24% ಇದ್ದರೆ ಮಾಸಿಕ ಇಎಂಐ ಪಾವತಿಗೆ ವಿಳಂಬವಾದರೆ 2% ದಂಡ ಅನ್ವಯಿಸುತ್ತದೆ. ಉದಾಹರಣೆಗೆ ನೀವು 50,000 ರೂ. ಇಎಂಐ ಕಟ್ಟುತ್ತಿದ್ದೀರಿ ಎಂದಿಟ್ಟುಕೊಳ್ಳಿ. penal interest ವಾರ್ಷಿಕ 24% ಇದ್ದರೆ ಮಾಸಿಕ 2% ಆಗುತ್ತದೆ. ಅಂದರೆ 1,000 ರೂ. ದಂಡ (50,000 ರೂ.ಗಳ 2%) ಪಾವತಿಸಬೇಕಾಗುತ್ತದೆ.

ದಂಡಕ್ಕೆ ಬಡ್ಡಿ ಇರುತ್ತದೆಯೇ? : ಇದೆ. 2018ರಲ್ಲಿ GST-AAR (GST Authority for Advance Rulings) ಅಡಿಯಲ್ಲಿ ವಿಳಂಬಿತ ಸಾಲ ಮರು ಪಾವತಿಯ ಮೇಲೆ 18% ಜಿಎಸ್‌ಟಿಯನ್ನು ವಿಧಿಸಲಾಯಿತು. ಹೀಗಾಗಿ ಮೇಲ್ಕಂಡ ಉದಾಹರಣೆಯಲ್ಲಿ 1,000 ರೂ.ಗೆ 18% ಜಿಎಸ್‌ಟಿ ಸೇರಿ ಒಟ್ಟು 1,180 ರೂ. ನೀಡಬೇಕಾಗುತ್ತದೆ. ಎಸ್‌ಬಿಐ ವೆಬ್‌ ಸೈಟ್‌ ಪ್ರಕಾರ ಆ ಬ್ಯಾಂಕ್‌ನಲ್ಲಿ 25,000 ರೂ. ತನಕದ ಸಾಲದ ಮೇಲೆ ದಂಡ (penal Interest) ಅನ್ವಯವಾಗುವುದಿಲ್ಲ. 25,000 ರೂ.ಗಿಂತ ಹೆಚಿನ ಸಾಲಕ್ಕೆ 2% ಅನ್ವಯವಾಗುತ್ತದೆ.

ದಂಡಗಳು ಬ್ಯಾಂಕ್‌ಗಳ ಆದಾಯ ಹೆಚ್ಚಿಸುವುದಕ್ಕಲ್ಲ:

ಬ್ಯಾಂಕ್‌ಗಳು ಸಾಲಗಾರರಿಗೆ ದಂಡವನ್ನು ವಿಧಿಸುವ ಮೂಲಕವೇ ತಮ್ಮ ಆದಾಯವನ್ನು ಹೆಚ್ಚಿಸಬಾರದು. ಅದು ದಂಡದ ಪರಿಕಲ್ಪನೆಯ ದುರ್ಬಳಕೆಯಾದಂತಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಈ ಬಗ್ಗೆ 2023ರ ಫೆಬ್ರವರಿ 8ರಂದು ಆರ್‌ಬಿಐ ಪ್ರಕಟಣೆಯೊಂದನ್ನು ಹೊರಡಿಸಿತ್ತು. ದಂಡ ಶುಲ್ಕವನ್ನು (penal charges) ತಾರ್ಕಿಕ ಮತ್ತು ಪಾರದರ್ಶಕ ರೀತಿಯಲ್ಲಿ (reasonable and transparent manner) ನಿಗದಿಪಡಿಸಬೇಕು. ದಂಡ ಬಡ್ಡಿ (penal interest) ಎಂದು ಬಡ್ಡಿಯ ಜತೆಗೆ ಸಮೀಕರಿಸಬಾರದು ಎಂದು ಸ್ಪಷ್ಟಪಡಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Hindu Girl Kidnaping: ಪಾಕ್‌ನಲ್ಲಿ ಹಿಂದೂ ಬಾಲಕಿಯ ಅಪಹರಿಸಿ ಇಸ್ಲಾಂಗೆ ಮತಾಂತರ, ಬಲವಂತದ ಮದುವೆ

Hindu Girl Kidnaping: ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಪಾಕಿಸ್ತಾನದ ಶಹದಾಬ್ಕೋಟ್ ಪಟ್ಟಣದ ನಿವಾಸಿ ಗುಲ್ ಹಸನ್ ಅವರ ಪುತ್ರ ಸಮೀರ್ ಅಲಿ ಎಂಬಾತ ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸಿ ನಂತರ ಬಲವಂತವಾಗಿ ಮದುವೆಯಾದ ಘಟನೆ ನಡೆದಿದೆ.

VISTARANEWS.COM


on

Hindu Girl Kidnaping
Koo

ಪಾಕಿಸ್ತಾನ : ಪಾಕಿಸ್ತಾನದ ಕರಾಚಿ ಪ್ರದೇಶದಿಂದ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಅಪಹರಿಸಿ ((Hindu Girl Kidnaping) ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ನಂತರ ಆಕೆಯನ್ನು ಬಲವಂತವಾಗಿ ಮದುವೆಯಾದ ಆಘಾತಕಾರಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. 16 ವರ್ಷದ ಹುಡುಗಿಯನ್ನು ಪಾಕಿಸ್ತಾನದ ಶಹದಾಬ್ಕೋಟ್ ಪಟ್ಟಣದ ನಿವಾಸಿ ಗುಲ್ ಹಸನ್ ಅವರ ಪುತ್ರ ಸಮೀರ್ ಅಲಿ ಎಂಬಾತ ಅಪಹರಿಸಿ ಮುಸ್ಲಿಂಧರ್ಮಕ್ಕೆ ಮತಾಂತರಿಸಿ ನಂತರ ಬಲವಂತವಾಗಿ ಮದುವೆಯಾದ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನಿ ಕ್ರಿಶ್ಚಿಯನ್ ಕಾರ್ಯಕರ್ತ ಫರಾಜ್ ಪರ್ವೈಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದ್ದಾರೆ. ಅದರ ಪ್ರಕಾರ ಸಂಗೀತಾ ಎಂಬ ಬಾಲಕಿಯನ್ನು ಸಮೀರ್ ಅಲಿ ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ನಂತರ ಆಕೆಯನ್ನು ಬಲವಂತವಾಗಿ ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೇ ಮತಾಂತರದ ನಂತರ ಆಕೆಗೆ ಹಮೀದಾ ಎಂಬ ಹೊಸ ಹೆಸರನ್ನು ನೀಡಿದ್ದಾರೆ. ಆಕೆಗೆ 15 ವರ್ಷ ವಯಸ್ಸಾಗಿದ್ದರೂ ಕೂಡ ಆರೋಪಿ ಆಕೆಯ ದಾಖಲೆಗಳನ್ನು ಪೋರ್ಜರಿ ಮಾಡಿ ಆಕೆ 19 ವರ್ಷದ ವಯಸ್ಕಳು ಎಂದು ಬಿಂಬಿಸಿ ಆಕೆ ತನ್ನನ್ನು ಮದುವೆಯಾಗಲು ಸಿದ್ಧಳಿದ್ದಾಳೆ ಎಂಬುದಾಗಿ ನಿರೂಪಿಸಿದ್ದಾನೆ.

ಅದಕ್ಕಾಗಿ ಆರೋಪಿಯು ಹುಡುಗಿಗೆ ತಾನು ವಯಸ್ಕಳು ಹಾಗೂ ತನ್ನ ಇಚ್ಛೆಯಂತೆ ಪ್ರೀತಿಯಿಂದ ಆರೋಪಿಯನ್ನು ಮದುವೆಯಾಗುತ್ತಿರುವೆ ಎಂದು ಅಫಿಡವಿಟ್‌ಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾನೆ. ಮತ್ತು ಆರೋಪಿಯ ವಿರುದ್ಧ ಯಾರಾದರೂ ಪೊಲೀಸರಿಗೆ ದೂರು ನೀಡಿದರೆ ಸಂತ್ರಸ್ತೆ ಇಚ್ಛೆಯಂತೆ ಮದುವೆಯಾಗುತ್ತಿರುವುದು ಎಂದು ತೋರಿಸಲು ಈ ತಯಾರಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯನ್ನು ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಜೂನ್ 2ರಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 14 ವರ್ಷದ ಹಿಂದೂ ಹುಡುಗಿಯನ್ನು ಗನ್ ತೋರಿಸಿ ಹೆದರಿಸಿ ಅಪಹರಣ ಮಾಡಿ ಬಲವಂತವಾಗಿ ಮತಾಂತರಿಸಿ ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸಿದ್ದರು. ಈ ಬಗ್ಗೆ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಆಕ್ರೋಶ ವ್ಯಕ್ತವಾದ ಕಾರಣ ಪೊಲೀಸರು ಆಕೆಯನ್ನು ಪೋಷಕರ ಬಳಿ ಮರಳಿಸಿದ್ದಾರೆ. ಹಾಗೇ ತನಗಾದ ಅನ್ಯಾಯದ ಬಗ್ಗೆ ಸಂತ್ರಸ್ತೆ ಕೋರ್ಟ್‌ನಲ್ಲಿ ತಿಳಿಸಿದರೂ ನ್ಯಾಯಾಧೀಶರು ಆಕೆಗೆ ಹೆತ್ತವರೊಡನೆ ಕಳುಹಿಸಲು ನಿರಾಕರಿಸಿದರು ಎನ್ನಲಾಗಿದೆ.

ಇದನ್ನೂ ಓದಿ: Terror attack : ಉಗ್ರರ ದಾಳಿ; ತನ್ನ ಪ್ರಾಣ ತ್ಯಾಗ ಮಾಡಿ ಪ್ರಯಾಣಿಕರ ಜೀವ ಉಳಿಸಿದ ಬಸ್‌ ಚಾಲಕ

ಇಷ್ಟೆಲ್ಲಾ ದೌರ್ಜನ್ಯಗಳು ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರ ಮೇಲೆ ಆಗುವುದನ್ನು ಕಂಡು ವಿಶ್ವಸಂಸ್ಥೆಯು ಖಂಡಿಸಿದೆ. ಮುಸ್ಲಿಂರು ಹಿಂದೂಗಳ ಮೇಲೆ ದೌರ್ಜನ್ಯ ಎಸಗುವುದನ್ನು ಕಂಡು ನಿರಾಶೆ ವ್ಯಕ್ತಪಡಿಸಿದೆ. ಬಲವಂತದ ವಿವಾಹ ಮತ್ತು ಧಾರ್ಮಿಕ ಮತಾಂತರಗಳಿಂದಾಗಿ ಪಾಕಿಸ್ತಾನವನ್ನು ಟೀಕಿಸಿದೆ. ಹಾಗೇ ಇಂತಹ ಪ್ರಕ್ರಿಯೆಗಳು ಇನ್ನು ಮುಂದೆ ನಡೆಯಬಾರದೆಂದು ವಿಶ್ವಸಂಸ್ಥೆ ಪಾಕಿಸ್ತಾನಕ್ಕೆ ಕರೆ ನೀಡಿದೆ. ಹಾಗೇ ಬಲವಂತದ ಮದುವೆ ಮತ್ತು ಅಪಹರಣದಿಂದ ರಕ್ಷಿಸುವ ಕಾನೂನುಗಳ ಜಾರಿಯನ್ನು ಬಲಪಡಿಸಲು ಮತ್ತು ದೇಶದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಬದ್ಧತೆಗಳನ್ನು ಪೂರೈಸಲು ವಿಶ್ವಸಂಸ್ಥೆ ತಿಳಿಸಿದೆ.

Continue Reading

ಪ್ರಮುಖ ಸುದ್ದಿ

Weight Lifting: ಮೊಣಕಾಲಿನ ಸಂಧಿವಾತವಿದ್ದರೂ 68ನೇ ವಯಸ್ಸಿನಲ್ಲಿ 60 ಕೆಜಿ ಭಾರ ಎತ್ತುವ ಅಜ್ಜಿ!

Weight Lifting: ಆರೋಗ್ಯದ ವಿಷಯಕ್ಕೆ ಬಂದಾಗ ಕೆಲವರು ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ. ಇಲ್ಲೊಬ್ಬರು ಅಜ್ಜಿ ತಮಗೆ ಸಂಧಿವಾತ ಸಮಸ್ಯೆ ಇದೆ ಎಂದು ಗೊತ್ತಾದ ತಕ್ಷಣ ಕೊರಗದೇ ವೇಟ್‌ಲಿಪ್ಟಿಂಗ್‌ಗೆ ಮುಂದಾಗಿದ್ದಾರೆ. ಅಜ್ಜಿಯ ಈ ಸಾಹಸ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

VISTARANEWS.COM


on

weight lifting
Koo

ಬೆಂಗಳೂರು: ನಮ್ಮಲ್ಲಿ ಹೆಚ್ಚಿನ ಜನರು ವಯಸ್ಸಾದ ಮೇಲೆ ಸಂಧಿವಾತ ಸಮಸ್ಯೆಯಿಂದ ನರಳುತ್ತಿರುವುದನ್ನು ನಾವು ನೋಡಿರುತ್ತೇವೆ. ಇದರಿಂದ ಅವರಿಗೆ ನಡೆಯಲು, ಕುಳಿತುಕೊಳ್ಳಲು, ಕೆಲಸ ಮಾಡಲು ಕಷ್ಟವಾಗುತ್ತದೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ಪಡೆಯಬೇಕು ಇಲ್ಲವಾದರೆ ಇದು ನಮ್ಮನ್ನು ಹಾಸಿಗೆ ಹಿಡಿಯುವಂತೆ ಮಾಡುತ್ತದೆ. ಇನ್ನು ಈಗಿನ ಯುವಜನತೆ ಬೆಳಿಗ್ಗೆದ್ದು ವಾಕಿಂಗ್‌ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಇಲ್ಲೊಬ್ಬರು ಅಜ್ಜಿ ಮೊಣಕಾಲಿನ ಸಂಧಿವಾತ ಸಮಸ್ಯೆ ಇದ್ದರೂ ವೇಟ್‌ಲಿಪ್ಟಿಂಗ್ (Weight Lifting )ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾರೆ. ಸಂಧಿವಾತದಿಂದ ಬಳಲುತ್ತಿದ್ದ 68 ವರ್ಷದ ಈ ಅಜ್ಜಿ ಪ್ರತಿದಿನ 60 ಕೆಜಿ ತೂಕವನ್ನು ಎತ್ತುತ್ತಾರಂತೆ. ಇದಕ್ಕೆ ಸಂಬಂಧಿಸಿದ ಪೋಸ್ಟ್ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ.

ಅಜ್ಜಿಯ ವೇಟ್‌ಲಿಪ್ಟಿಂಗ್ ಹಿಂದಿನ ಕತೆ

ಕೆಲವರು ಯಾವುದಾದರೂ ಆರೋಗ್ಯ ಸಮಸ್ಯೆ ಬರುವವರೆಗೂ ಆರೋಗ್ಯದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಇನ್ನು ಕೆಲವರು ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಾಗ ಕಾಳಜಿ ವಹಿಸಿ ಅದರಿಂದ ಹೊರಗೆ ಬರುವುದಕ್ಕೆ ನೋಡುತ್ತಾರೆ. ಈ ಅಜ್ಜಿಯ ವಿಷಯದಲ್ಲೂ ಅದೇ ಆಗಿದ್ದು. ಸೆಪ್ಟೆಂಬರ್ 2022ರಲ್ಲಿ ಇವರಿಗೆ ಸಂಧಿವಾತ ಸಮಸ್ಯೆ ಇರುವುದು ಗೊತ್ತಾಯಿತು. ವಯಸ್ಸಾಯಿತು ಎಂದು ಸುಮ್ಮನಿರದೇ ಈ ಅಜ್ಜಿ ತಾನು ಫಿಟ್‌ ಆಗಿರಬೇಕು ಎಂದು ವೇಟ್‌ಲಿಪ್ಟಿಂಗ್ ಮಾಡುವುದಕ್ಕೆ ಶುರುಮಾಡಿದರಂತೆ. ತಾಯಿಗೆ ಬೆಂಬಲವಾಗಿ ನಿಂತಿದ್ದು ಅವರ ಮಗ. ನಂತರ ವೇಟ್‌ಲಿಪ್ಟಿಂಗ್‌ ತರಬೇತುದಾರರ ಅಡಿಯಲ್ಲಿ ಕೂಡ ಇವರು ಕಲಿಯುತ್ತಿದ್ದಾರಂತೆ. ಈಗ ಯಾವುದೇ ನೋವು ಇಲ್ಲ ಎಂಬುದಾಗಿ ಅವರ ಮಗ ತಿಳಿಸಿದ್ದಾರೆ. ಈ ಅಜ್ಜಿಯ ಆರೋಗ್ಯದ ಕಾಳಜಿ, ಹುಮ್ಮಸ್ಸು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ತೂಕ ಎತ್ತುವುದು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ ಕೂಡ ಮೊಣಕಾಲಿನ ಸಂಧಿವಾತ ಸಮಸ್ಯೆ ಇರುವವರು ಇದನ್ನು ಮಾಡುವಾಗ ಎಚ್ಚರಿಕೆಯಿಂದಿರಬೇಕು. ಭಾರೀ ತೂಕ ಎತ್ತುವುದು ಮೊಣಕಾಲುಗಳನ್ನು ಒಳಗೊಂಡಂತೆ ಕೀಳುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ಮೊಣಕಾಲಿನ ಸಂಧಿವಾತ ಹೊಂದಿರುವವರಿಗೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಮೂಳೆ ತಜ್ಞರು ಹೇಳಿದ್ದಾರೆ.

ವೇಟ್‌ಲಿಪ್ಟಿಂಗ್ ಪ್ರಾರಂಭಿಸುವ ಮುನ್ನ ಆರೋಗ್ಯ ತಜ್ಞರು ಮತ್ತು ವೈದ್ಯರ ಬಳಿ ಸಮಾಲೋಚನೆ ಮಾಡುವುದು ಸೂಕ್ತ. ಅವರು ವ್ಯಕ್ತಿ ನಿರ್ದಿಷ್ಟ ಸ್ಥಿತಿ ಮತ್ತು ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ನಿಮಗೆ ಸೂಕ್ತವಾದ ಸಲಹೆಗಳನ್ನು ನೀಡುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: Terror attack : ಉಗ್ರರ ದಾಳಿ; ತನ್ನ ಪ್ರಾಣ ತ್ಯಾಗ ಮಾಡಿ ಪ್ರಯಾಣಿಕರ ಜೀವ ಉಳಿಸಿದ ಬಸ್‌ ಚಾಲಕ

ಅಲ್ಲದೇ ಕಡಿಮೆ ಪ್ರಭಾವ ಬೀರುವ ವ್ಯಾಯಾಮಗಳು ಅಥವಾ ವಾಟರ್ ಏರೋಬಿಕ್ಸ್ ನಂತಹ ಪರ್ಯಾಯಗಳು ಮೊಣಕಾಲುಗಳ ಮೇಲೆ ಕಡಿಮೆ ಒತ್ತಡವನ್ನುಂಟುಮಾಡುತ್ತದೆ ಮತ್ತು ಪ್ರಯೋಜನಕಾರಿಯಾಗಿದೆ. ಕೀಲುಗಳು ಮತ್ತು ಬೆನ್ನಿನ ಮೇಲೆ ಒತ್ತಡ ಹೇರುವ ಬದಲು ಸ್ನಾಯುಗಳನ್ನು ಬಲಪಡಿಸುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.
ಹಾಗಾಗಿ ವೇಟ್‌ಲಿಪ್ಟಿಂಗ್ ಮಾಡುವುದು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾದರೂ ಕೂಡ ಸಂಧಿವಾತ ಸಮಸ್ಯೆ ಇರುವವರು ಇದನ್ನು ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಹಾಗೇ ತಮ್ಮ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

Continue Reading

ಪ್ರಮುಖ ಸುದ್ದಿ

Online Order Tragedy: ಆನ್‌ಲೈನ್‌ನಿಂದ ತರಿಸಿದ ಐಸ್‌ಕ್ರೀಂನಲ್ಲಿತ್ತು ಮನುಷ್ಯರ ಬೆರಳು!

Online Order Tragedy ಮಹಿಳೆಯೊಬ್ಬಳು ದಿನಸಿ ವಸ್ತುಗಳ ಜೊತೆಗೆ ತನ್ನ ಸಹೋದರನಿಗಾಗಿ ಐಸ್ ಕ್ರೀಂ ಕೋನ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾಳೆ. ಐಸ್ ಕ್ರೀಂ ತಿನ್ನುವಾಗ 2 ಸೆಂಟಿಮೀಟರ್ ಉದ್ದವಿರುವ ಮನುಷ್ಯನ ಕೈಬೆರಳು ಇರುವುದು ಪತ್ತೆಯಾಗಿದೆ.

VISTARANEWS.COM


on

Online Order Tragedy
Koo

ಮುಂಬೈ: ಇತ್ತೀಚಿನ ದಿನಗಳಲ್ಲಿ ಜನರು ಬೆಳಗ್ಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟದವರೆಗೂ ಆನ್‌ಲೈನ್‌ನಲ್ಲಿಯೇ ಆರ್ಡರ್‌ ಮಾಡುತ್ತಾರೆ. ಇನ್ನು ಆನ್‌ಲೈನ್‌ ಸರ್ವಿಸ್‌ಗಳು ಒಂದಕ್ಕಿಂತ ಒಂದು ಸ್ಪೀಡ್‌ ಆಗಿದ್ದು ಆರ್ಡರ್‌ ಕೊಟ್ಟು ಕಣ್ಣುಮುಚ್ಚುವುದರೊಳಗೆ ಮನೆಯ ಕಾಲಿಂಗ್‌ ಬೆಲ್‌ ಸದ್ದಾಗುತ್ತದೆ. ಇದರಿಂದ ಜನರಿಗೆ ಮಾರುಕಟ್ಟೆಗೆ ಹೋಗಿ ಬಿಸಿಲು, ಮಳೆಯಲ್ಲಿ ಸುತ್ತಾಡುವುದು ತಪ್ಪುತ್ತದೆ .ಆರಾಮಾಗಿ ಮನೆಯಲ್ಲಿಯೇ ಕುಳಿತು ತಮಗೆ ಏನು ಬೇಕೋ ಅದನ್ನು ಆರ್ಡರ್‌ ಮಾಡಬಹುದು. ಆದರೆ ಈ ಆನ್‌ಲೈನ್‌ ಸರ್ವಿಸ್‌ನಿಂದ ತೊಂದರೆಯಾದ ಘಟನೆ ಕೂಡ ಸಾಕಷ್ಟಿದೆ. ಇತ್ತೀಚೆಗಷ್ಟೇ ಬಾಲಕಿಯೊಬ್ಬಳು ಆನ್‌ಲೈನ್‌ನಲ್ಲಿ ಆರ್ಡರ್‌ (Online Order Tragedy) ಮಾಡಿದ ಕೇಕ್‌ ತಿಂದು ಮರಣಹೊಂದಿದ ಘಟನೆ ಇನ್ನೂ ಮಾಸಿಲ್ಲ, ಅದರ ಬೆನ್ನಲ್ಲೇ ಈಗ ಮಹಿಳೆಯೊಬ್ಬರು ಆನ್‌ಲೈನ್ ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಂನಲ್ಲಿ ಮನುಷ್ಯನ ಕೈಬೆರಳು ಇರುವುದು ಪತ್ತೆಯಾಗಿದೆ.

ಮುಂಬೈನ ಮಲಾಡ್ ಪ್ರದೇಶದ ಮಹಿಳೆಯೊಬ್ಬಳು ದಿನಸಿ ವಸ್ತುಗಳ ಜೊತೆಗೆ ತನ್ನ ಸಹೋದರನಿಗಾಗಿ ಯುಮ್ಮೋ ಐಸ್ ಕ್ರೀಂ ಕಂಪೆನಿಯ ಮೂರು ಬಟರ್ ಸ್ಕಾಚ್ ಕೋನ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾಳೆ. ಮನೆಗೆ ಬಂದ ಐಸ್ ಕ್ರೀಂ ಅನ್ನು ಸಹೋದರ ಬಿಚ್ಚಿ ತಿನ್ನುವಾಗ ನಾಲಿಗೆಗೆ ಏನೋ ತಗುಲಿದ ಹಾಗೆ ಆಗಿದೆ. ಆಗ ಆತ ಅದನ್ನು ಹೊರತೆಗೆದಾಗ ಅದು ಮನುಷ್ಯನ ಕೈಬೆರಳಾಗಿದ್ದು ಸುಮಾರು 2 ಸೆಂಟಿಮೀಟರ್ ಉದ್ದವಿತ್ತು ಎಂಬುದಾಗಿ ತಿಳಿದುಬಂದಿದೆ. ಮಹಿಳೆಯ ಸಹೋದರ ವೈದ್ಯನಾಗಿದ್ದ ಕಾರಣ ಆತ ಅದು ಮನುಷ್ಯನ ಕೈ ಬೆರಳು ಎಂದು ಕೂಡಲೇ ಪತ್ತೆ ಹಚ್ಚಿದ್ದಾನೆ.

ಈ ಬಗ್ಗೆ ಮಹಿಳೆ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಯುಮ್ಮೋ ಐಸ್ ಕ್ರೀಂ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಾಗೇ ಐಸ್ ಕ್ರೀಂನಲ್ಲಿ ಪತ್ತೆಯಾದ ಮಾನವನ ಕೈಬೆರಳನ್ನು ಫೊರೆನ್ಸಿಕ್‌ಗೆ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಐಸ್ ಕ್ರೀಂ ಕಂಪನಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 272, 271 ಮತ್ತು 336 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Kangana Ranaut: ಸಂಸದೆಯಾಗಿರುವ ನಟಿ ಕಂಗನಾ ರಣಾವತ್‌ಗೆ ಸಿಗುವ ಸಂಬಳ, ಇತರ ಸವಲತ್ತುಗಳು ಏನೇನು?

ಈ ಹಿಂದೆ ಕೂಡ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಕಿತ್ತಳೆ ಹಣ್ಣು ಆರ್ಡರ್ ಮಾಡಿ ಅದರಲ್ಲಿ ಜೀವಂತ ಹುಳಗಳು ಹರಿದಾಡುತ್ತಿರುವುದನ್ನು ನೋಡಿದ್ದಾರೆ. ಹಾಗಾಗಿ ಆನ್ಲೈನ್ನಲ್ಲಿ ಯಾವುದೇ ವಸ್ತುಗಳನ್ನು ಆರ್ಡರ್ ಮಾಡಿ ಬಳಸುವ ಮುನ್ನ ಜನರು ಎಚ್ಚರಿಕೆಯಿಂದರಬೇಕು. ಇಲ್ಲವಾದರೆ ಇದರಿಂದ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ.

Continue Reading

ದೇಶ

Ajit Doval: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್‌ ದೋವಲ್‌ 3ನೇ ಅವಧಿಗೆ ನೇಮಕ; ಉಗ್ರರಿಗೆ ನಡುಕ

Ajit Doval: ಅಜಿತ್ ದೋವಲ್‌ ಅವರನ್ನು ಮೂರನೇ ಅವಧಿಗೆ ನೇಮಿಸಿರುವ ಕುರಿತು ಸಂಪುಟದ ನೇಮಕಾತಿ ಸಮಿತಿಯು ಜೂನ್‌ 10ರಂದೇ ಆದೇಶ ಹೊರಡಿಸಿದೆ. ನೂತನ ಆದೇಶದ ಪ್ರಕಾರ, ಅಜಿತ್‌ ದೋವಲ್‌ ಅವರು ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವವರೆಗೆ ಅಥವಾ ಮುಂದಿನ ಆದೇಶದವರೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಇರಲಿದ್ದಾರೆ. ಇದೇ ನಿಯಮವು ಪಿ.ಕೆ.ಮಿಶ್ರಾ ಅವರಿಗೂ ಅನ್ವಯವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

VISTARANEWS.COM


on

Ajit Doval
Koo

ನವದೆಹಲಿ: ಭಾರತದ ಜೇಮ್ಸ್‌ ಬಾಂಡ್‌ ಎಂದೇ ಖ್ಯಾತಿಯಾಗಿರುವ, ಪಾಕಿಸ್ತಾನದ ಉಗ್ರರ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್, ಬಾಲಾಕೋಟ್‌ ವಾಯುದಾಳಿ ಸೇರಿ ಹಲವು ಕಾರ್ಯಾಚರಣೆಗಳ ಸೂತ್ರಧಾರಿಯಾಗಿರುವ, ದೇಶದ ಟ್ರಬಲ್‌ ಶೂಟರ್‌ ಎಂದೇ ಹೆಸರು ಗಳಿಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ (National Security Advisor) ಅಜಿತ್‌ ದೋವಲ್‌ (Ajit Doval) ಅವರನ್ನು ಕೇಂದ್ರ ಸರ್ಕಾರವು (Central Government) ಮೂರನೇ ಅವಧಿಗೂ ಸಲೆಹೆಗಾರರನ್ನಾಗಿ ನೇಮಿಸಿದೆ. ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರ ಮುಖ್ಯ ಕಾರ್ಯದರ್ಶಿಯಾಗಿ ಪಿ.ಕೆ.ಮಿಶ್ರಾ (PK Mishra) ಅವರೇ ಮುಂದುವರಿಯಲಿದೆ. ಇವರ ನೇಮಕದ ಕುರಿತು ಕೂಡ ಸರ್ಕಾರ ಆದೇಶ ಹೊರಡಿಸಿದೆ.

ಅಜಿತ್ ದೋವಲ್‌ ಅವರನ್ನು ಮೂರನೇ ಅವಧಿಗೆ ನೇಮಿಸಿರುವ ಕುರಿತು ಸಂಪುಟದ ನೇಮಕಾತಿ ಸಮಿತಿಯು ಜೂನ್‌ 10ರಂದೇ ಆದೇಶ ಹೊರಡಿಸಿದೆ. ನೂತನ ಆದೇಶದ ಪ್ರಕಾರ, ಅಜಿತ್‌ ದೋವಲ್‌ ಅವರು ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವವರೆಗೆ ಅಥವಾ ಮುಂದಿನ ಆದೇಶದವರೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಇರಲಿದ್ದಾರೆ. ಇದೇ ನಿಯಮವು ಪಿ.ಕೆ.ಮಿಶ್ರಾ ಅವರಿಗೂ ಅನ್ವಯವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಜಿತ್‌ ದೋವಲ್‌ ಅವರು 1968ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದು, ಕೇಂದ್ರ ಸರ್ಕಾರದ ಮಿಲಿಟರಿ, ಇಂಟಲಿಜೆನ್ಸ್‌ ಸೇರಿ ಹಲವು ವಿಭಾಗಗಳಲ್ಲಿ ಮಹತ್ವದ ಸಲಹೆ-ಸೂಚನೆ ನೀಡುತ್ತಾರೆ. ಇನ್ನು ಡಾ.ಪಿ.ಕೆ.ಮಿಶ್ರಾ ಅವರು 1972ರ ಬ್ಯಾಚ್‌ ಅಧಿಕಾರಿಯಾಗಿದ್ದು, ಪಿಎಂಒದ ಪ್ರಮುಖ ನೇಮಕಾತಿಗಳ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಆಡಳಿತಾತ್ಮಕ ವಿಚಾರಗಳ ಹೊಣೆಯೂ ಇವರದ್ದೇ ಆಗಿದೆ.

ಪಿಎಫ್‌ಐ ನಿಷೇಧದ ಹಿಂದೆಯೂ ಅಜಿತ್‌ ದೋವಲ್‌ ಅವರ ಪಾತ್ರ ದೊಡ್ಡದಿದೆ. ಅಜಿತ್‌ ದೋವಲ್‌ ಅವರು 2022ರಲ್ಲಿ ಎನ್‌ಐಎ ದಾಳಿಗೂ ಐದು ದಿನದ ಮೊದಲೇ ಅಂದರೆ, ಸೆಪ್ಟೆಂಬರ್‌ 17ರಂದು ಪ್ರಮುಖ ಮುಸ್ಲಿಂ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿದ್ದರು. ಎನ್‌ಐಎ, ಇ.ಡಿ, ರಾಜ್ಯ ಪೊಲೀಸರು ಸೆ.22ರಂದು ನಡೆಸುವ ದಾಳಿ, ಪಿಎಫ್‌ಐ ವಿರುದ್ಧ ಕ್ರಮ, ಇದರ ಕುರಿತು ಮುಸ್ಲಿಂ ಸಂಘಟನೆಗಳ ಮುಖಂಡರ ಅಭಿಪ್ರಾಯವೇನು ಎಂಬುದನ್ನು ಸಂಗ್ರಹಿಸಿಯೇ ದಾಳಿ, ನಿಷೇಧ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಷ್ಟೇ ಅಲ್ಲ, ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ವೇಳೆ 3,600 ಕೋಟಿ ರೂ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಕ್ರಿಶ್ಟಿಯನ್‌ ಮೈಕೆಲ್‌ನನ್ನು ಭಾರತಕ್ಕೆ ಕರೆತರುವುದು, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವುದು ಸೇರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಪ್ರಮುಖ ತೀರ್ಮಾನಗಳ ಹಿಂದೆ ಅಜಿತ್‌ ದೋವಲ್‌ ಅವರು ಇದ್ದಾರೆ.

ಇದನ್ನೂ ಓದಿ: NSA Ajit Doval: ಅಜಿತ್‌ ದೋವಲ್‌ ಲಂಡನ್‌ ಭೇಟಿ: ಖಲಿಸ್ತಾನ್‌, ಬಿಬಿಸಿ, ಭಯೋತ್ಪಾದನೆ ವಿಚಾರದಿಂದಾಗಿ ಈ ಬಾರಿ ಮಾತುಕತೆ ಕಠಿಣ

Continue Reading
Advertisement
Viral Video
ವೈರಲ್ ನ್ಯೂಸ್22 mins ago

Viral Video: ಮಗನಿಗೆ ಮುಸಲ್ಮಾನರ ಕ್ಯಾಪ್‌ ಹಾಕಿದ ನಟಿ; ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ!

Donkey Population In Pak
ವಿದೇಶ32 mins ago

Donkey Population In Pak: ಹೆಚ್ಚುಹೆಚ್ಚು ಕತ್ತೆಗಳನ್ನು ಸಾಕಿ, ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಿ; ಪಾಕ್‌ಗೆ ಚೀನಾ ಸಲಹೆ!

Celebrity Fashion
ಫ್ಯಾಷನ್39 mins ago

Celebrity Fashion: ಬ್ಲೇಜರ್‌ನಲ್ಲಿ ನಟ ಸುದೀಪ್‌ ಪುತ್ರಿ ಸಾನ್ವಿ ಕ್ಲಾಸಿ ಲುಕ್‌!

There is a Taliban government in the state Opposition party leader R Ashok alleges
ಬೆಂಗಳೂರು42 mins ago

R Ashok: ರಾಜ್ಯದಲ್ಲಿರುವುದು ತಾಲಿಬಾನ್‌ ಸರ್ಕಾರ; ಆರ್. ಅಶೋಕ್‌ ಆರೋಪ

Hindu Girl Kidnaping
Latest52 mins ago

Hindu Girl Kidnaping: ಪಾಕ್‌ನಲ್ಲಿ ಹಿಂದೂ ಬಾಲಕಿಯ ಅಪಹರಿಸಿ ಇಸ್ಲಾಂಗೆ ಮತಾಂತರ, ಬಲವಂತದ ಮದುವೆ

Glasses or Lenses
ಆರೋಗ್ಯ55 mins ago

Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

SSLC examination-2 to begin from tomorrow at over 700 centres
ಬೆಂಗಳೂರು56 mins ago

SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು

weight lifting
ಪ್ರಮುಖ ಸುದ್ದಿ58 mins ago

Weight Lifting: ಮೊಣಕಾಲಿನ ಸಂಧಿವಾತವಿದ್ದರೂ 68ನೇ ವಯಸ್ಸಿನಲ್ಲಿ 60 ಕೆಜಿ ಭಾರ ಎತ್ತುವ ಅಜ್ಜಿ!

Online Order Tragedy
ಪ್ರಮುಖ ಸುದ್ದಿ1 hour ago

Online Order Tragedy: ಆನ್‌ಲೈನ್‌ನಿಂದ ತರಿಸಿದ ಐಸ್‌ಕ್ರೀಂನಲ್ಲಿತ್ತು ಮನುಷ್ಯರ ಬೆರಳು!

Ajit Doval
ದೇಶ1 hour ago

Ajit Doval: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್‌ ದೋವಲ್‌ 3ನೇ ಅವಧಿಗೆ ನೇಮಕ; ಉಗ್ರರಿಗೆ ನಡುಕ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌