Cryptocurrency| ವರ್ಚುವಲ್‌ ಕರೆನ್ಸಿ ನಿಷೇಧಕ್ಕೆ ರಿಸರ್ವ್‌ ಬ್ಯಾಂಕ್‌ ಒಲವು - Vistara News

ಪ್ರಮುಖ ಸುದ್ದಿ

Cryptocurrency| ವರ್ಚುವಲ್‌ ಕರೆನ್ಸಿ ನಿಷೇಧಕ್ಕೆ ರಿಸರ್ವ್‌ ಬ್ಯಾಂಕ್‌ ಒಲವು

ಕ್ರಿಪ್ಟೊ ಕರೆನ್ಸಿಗಳನ್ನು ನಿಷೇಧಿಸಲು ಆರ್‌ಬಿಐ ಒತ್ತಾಯಿಸುತ್ತಿದ್ದರೂ. ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಜಾಗತಿಕ ಸಹಕಾರ ಅಗತ್ಯ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

VISTARANEWS.COM


on

crypto
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕ್ರಿಪ್ಟೊ ಕರೆನ್ಸಿ ಮುಂತಾದ ವರ್ಚುವಲ್‌ ಆಸ್ತಿಗಳನ್ನು ನಿಷೇಧಿಸಲು ಆರ್‌ಬಿಐ ಒಲವು ವ್ಯಕ್ತಪಡಿಸಿದೆ. ಆದರೆ ಇವುಗಳ ನಿಷೇಧ ಅಥವಾ ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸಹಕಾರ ಅಗತ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಕ್ರಿಪ್ಟೊ ಕರೆನ್ಸಿಗೆ ಸಂಬಂಧಿಸಿ ಸಂಸದ ತಿರುಮಾ ವಳನ್‌ ಅವರ ಲಿಖಿತ ಪ್ರಶ್ನೆಗೆ ಸಂಸತ್ತಿನಲ್ಲಿ ಉತ್ತರ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಈ ವಿಷಯ ತಿಳಿಸಿದರು.

ಭಾರತದಲ್ಲಿ ಕಳೆದ ೧೦ ವರ್ಷಗಳಲ್ಲಿ ಕ್ರಿಪ್ಟೊ ಕರೆನ್ಸಿಗಳ ಬಿಡುಗಡೆ, ಚಲಾವಣೆ, ಮಾರಾಟ, ಖರೀದಿಗೆ ಸಂಬಂಧಿಸಿ ಆರ್‌ಬಿಐ ಯಾವುದಾದರೂ ನಿರ್ದೇಶನ ಹೊರಡಿಸಿದೆಯೇ ಎಂಬ ಸಂಸದರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

“ಆರ್‌ಬಿಐ ವರ್ಚುವಲ್‌ ಕರೆನ್ಸಿಗಳ ಬಳಕೆ ಬಗ್ಗೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದೆ. ೨೦೧೩ರ ಡಿಸೆಂಬರ್‌ ೨೪, ೨೦೧೭ರ ಫೆಬ್ರವರಿ ೧ ಮತ್ತು ೨೦೧೭ರ ಡಿಸೆಂಬರ್‌ ೫ರಂದು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ. ಇಂಥ ವರ್ಚುವಲ್‌ ಆಸ್ತಿಗಳಲ್ಲಿ ಹೂಡಿಕೆಯಿಂದ ಸಂಭವನೀಯ ಅಪಾಯಗಳ ಬಗ್ಗೆ ಎಚ್ಚರಿಸಿದೆ. ಹೀಗಿದ್ದರೂ, ಕ್ರಿಪ್ಟೊ ಕರೆನ್ಸಿಗಳಿಗೆ ಯಾವುದೇ ಗಡಿ ಇರುವುದಿಲ್ಲ. ಆದ್ದರಿಂದ ಇವುಗಳನ್ನು ನಿಷೇಧಿಸಲು ಅಥವಾ ನಿಯಂತ್ರಿಸಲು ಅಂತಾರಾಷ್ಟ್ರೀಯ ಸಹಕಾರ ಅಗತ್ಯ. ಕೇವಲ ನಿಷೇಧದ ಕಾನೂನು ಒಂದರಿಂದಲೇ ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿಲ್ಲʼʼ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ಕ್ರಿಪ್ಟೊ ಕರೆನ್ಸಿಯಂಥ ವರ್ಚುವಲ್‌ ಕರೆನ್ಸಿಗಳೇ ನಿಜವಾಗಿ ಅಪಾಯಕಾರಿ. ಇವುಗಳು ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರಬಲ್ಲುದು ಎಂದು ಎಚ್ಚರಿಸಿದೆ. ಜತೆಗೆ ನಿಷೇಧ ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna : ಪ್ರಜ್ವಲ್​ ರೇವಣ್ಣ ಅರೆಸ್ಟ್​ ಆಗುವಾಗ ಧರಿಸಿದ್ದ ಬಟ್ಟೆ ಬ್ರಾಂಡ್ ಯಾವುದು? ಅದಕ್ಕೆಷ್ಟು ಬೆಲೆ?

Prajwal Revanna : ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಬೆಂಗಳೂರಿಗೆ ಬರುವಾಗ ಬೂದು ಬಣ್ಣದ ಹೂಡಿ ಬಟ್ಟೆಯನ್ನು ಧರಿಸಿದ್ದರು. ಅದು ಅಂಡರ್​ ಆರ್ಮರ್​ ಬ್ರಾಂಡ್​ನ ಕರಿ ಬಿಗ್ ಸ್ಲ್ಪಾಷ್​ ಹೂಡಿ ಟಿಶರ್ಟ್​. ಅಂಡರ್ ಆರ್ಮರ್ ಅಮೆರಿಕ ಮೂಲದ ಸ್ಪೋರ್ಟ್ಸ್​ ಬ್ರಾಂಡ್​ ಆಗಿದೆ. ಇದು ನಾನಾ ರೀತಿಯ ಸ್ಪೋರ್ಟ್ಸ್​ ಮೆಟೀರಿಯಲ್​ ಅನ್ನು ಉತ್ಪಾದನೆ ಮಾಡುತ್ತದೆ.

VISTARANEWS.COM


on

Prajwal revanna
Koo

ಬೆಂಗಳೂರು : ಪೆನ್​ಡ್ರೈವ್​ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಎಸ್​ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣ (Prajwal Revanna) ಜರ್ಮನಿಯಿಂದ ಬರುವಾಗ ಹಾಕಿಕೊಂಡು ಬಂದಿರುವ ಬಟ್ಟೆಯ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಜರ್ಮನಿಯಿ ಮ್ಯೂನಿಕ್​ನಿಂದ ವಿಮಾನ ಏರುವಾಗ ಹಾಕಿದ್ದ ಬಟ್ಟೆಯಲ್ಲಿಯೇ ಅವರು ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ. ಈ ವೇಳೆ ಅವರ ಬೂದು ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಶುಕ್ರವಾರ ಅವರನ್ನು ಎಸ್​ಐಟಿ ಅಧಿಕಾರಿಗಳು ಮೆಡಿಕಲ್​ ಟೆಸ್ಟ್​ ಹಾಗೂ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ವೇಳೆಯೂ ಅದೇ ಬಟ್ಟೆಯನ್ನು ಧರಿಸಿದ್ದರು. ಹೀಗಾಗಿ ಆ ಬಟ್ಟೆಯ ಬಗ್ಗೆ ಚರ್ಚೆ ನಡೆದಿದೆ.

ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಬೆಂಗಳೂರಿಗೆ ಬರುವಾಗ ಬೂದು ಬಣ್ಣದ ಹೂಡಿ ಬಟ್ಟೆಯನ್ನು ಧರಿಸಿದ್ದರು. ಅದು ಅಂಡರ್​ ಆರ್ಮರ್​ ಬ್ರಾಂಡ್​ನ ಕರಿ ಬಿಗ್ ಸ್ಲ್ಪಾಷ್​ ಹೂಡಿ ಟಿಶರ್ಟ್​. ಅಂಡರ್ ಆರ್ಮರ್ ಅಮೆರಿಕ ಮೂಲದ ಸ್ಪೋರ್ಟ್ಸ್​ ಬ್ರಾಂಡ್​ ಆಗಿದೆ. ಇದು ನಾನಾ ರೀತಿಯ ಸ್ಪೋರ್ಟ್ಸ್​ ಮೆಟೀರಿಯಲ್​ ಅನ್ನು ಉತ್ಪಾದನೆ ಮಾಡುತ್ತದೆ. ಭಾರತದಲ್ಲೂ ಈ ಬ್ರಾಂಡ್​ ಸಿಕ್ಕಾಪಟ್ಟೆ ಫೇಮಸ್. ಆದರೆ, ಇದರ ಬೆಲೆ ಕನಿಷ್ಠ 6 ಸಾವಿರ ರೂಪಾಯಿಂದ ಆರಂಭಗೊಳ್ಳುತ್ತದೆ. ಅಂತೆಯೇ ಪ್ರಜ್ವಲ್ ರೇವಣ್ಣ ಬಂಧನದ ವೇಳೆ ಹಾಕಿಕೊಂಡಿದ್ದ ಬಟ್ಟೆಗೆ ಆನ್​ಲೈನ್​ನಲ್ಲಿ 7 ಸಾವಿರ ರೂಪಾಯಿ ತೋರಿಸುತ್ತಿದೆ. ಅದು ಡಿಸ್ಕೌಂಟ್ ಬೆಲೆಯಲ್ಲಿ. ಅಲ್ಲದೆ , ಪ್ರಜ್ವಲ್ ಹಾಕಿದ ಬಟ್ಟೆಯ ಬಗ್ಗೆಯೇ ಹುಡುಕಿಕೊಂಡು ಹೋದರೆ ಬೆಲೆಗಳನ್ನು ಡಾಲರ್​ ಲೆಕ್ಕದಲ್ಲಿ ತೋರಿಸುತ್ತಿದೆ.

ಇದನ್ನೂ ಓದಿ: Bhavani Reavanna : ಭವಾನಿ ರೇವಣ್ಣಗೆ ಬಂಧನ ಭೀತಿ; ಜಾಮೀನು ಅರ್ಜಿ ತೀರ್ಪು ಮುಂದಕ್ಕೆ

ಪ್ರಜ್ವಲ್ ರೇವಣ್ಣ ಈ ಬಟ್ಟೆಯನ್ನು ಜರ್ಮನಿಯಿಂದಲೇ ಖರೀದಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಅಂತಾರಾಷ್ಟ್ರೀಯ ಬ್ರಾಂಡ್​ ಆಗಿರುವ ಕಾರಣ ಅವರು ಅಲ್ಲಿಯೇ ಖರೀದಿ ಮಾಡಿ ಬಂದಿರಬಹುದು. ಹೀಗಾಗಿ ಅವರು ಡಾಲರ್ ಲೆಕ್ಕದಲ್ಲಿಯೇ ದುಡ್ಡು ಪಾವತಿ ಮಾಡಿರಬಹುದು. ಹೀಗಾಗಿ ಅವರು ಕನಿಷ್ಠ 10 ಸಾವಿರ ರೂಪಾಯಿ ಕೊಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ನಾನವನಲ್ಲ, ನಾನವನಲ್ಲ; ಪೊಲೀಸರ ಪ್ರಶ್ನೆಗೆ ಈ ಒಂದೇ ಉತ್ತರ ನೀಡುತ್ತಿರುವ ಪ್ರಜ್ವಲ್​ ರೇವಣ್ಣ!

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಪೆನ್​ಡ್ರೈವ್ ಹಗರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣನನ್ನು (Prajwal Revanna) ಎಸ್​ಐಟಿ ತನಿಖಾಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಆದರೆ, ಪೊಲೀಸರು ಕೇಳುವ ಎಲ್ಲ ಪ್ರಶ್ನೆಗಳಿಗೆ ಪ್ರಜ್ವಲ್ ರೇವಣ್ಣ ‘ನಾನವನಲ್ಲ, ನನಗೆ ಗೊತ್ತಿಲ್ಲ’ ಎಂಬ ಉತ್ತರವನ್ನೇ ನೀಡುತ್ತಿದ್ದಾರೆ. ಈ ಮೂಲಕ ಆರಂಭಿಕ ಹಂತದಲ್ಲಿ ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಲು ಸಿದ್ದತೆ ನಡೆಸಿಕೊಂಡು ಬಂದಿದ್ದಾನೆ ಪ್ರಜ್ವಲ್ ರೇವಣ್ಣ

ಎಸ್​ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂದಲು 24 ಗಂಟೆಗಳ ಅವಧಿಯನ್ನು ಹೊಂದಿದ್ದಾರೆ. ಹೀಗಾಗಿ ಪೊಲೀಸರು ಪ್ರಾಥಮಿಕ ಹಂತದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಮಾತ್ರ ಯಾವುದೆಕ್ಕೂ ಸಮರ್ಥ ಉತ್ತರ ನೀಡುತ್ತಿಲ್ಲ ಎಂದು ಹೇಳಲಾಗಿದೆ.

ಎಸ್​ಐಟಿ ಪೊಲೀಸರು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ಮೂರು ಎಫ್​ಐಆರ್ ಕುರಿತಾಗಿ ಪ್ರಶ್ನೆಗಳನ್ನು ಕೇಳುತತಿದ್ದಾರೆ. ಅವರ ಹೇಳಿಕೆಗಳ ಕುರಿತು ವಿಡಿಯೊ ದಾಖಲೆಯನ್ನು ಸೃಷ್ಟಿಸಲು ಪೊಲೀಸರು ಮುಂದಾಗಿದ್ದಾರೆ. ಅದೇ ರೀತಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎಂದು ಹೇಳಲಾದ ವಿಡಿಯೊಗಳಲ್ಲಿರುವ ಕೆಲವು ದೃಶ್ಯಗಳ ಕುರಿತೂ ಅವರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

Continue Reading

ದೇಶ

Aadhaar-PAN Link: ಇನ್ನೂ ಆಧಾರ್‌, ಪ್ಯಾನ್‌ ಲಿಂಕ್‌ ಆಗಿಲ್ಲವೆ? ಇಂದೇ ಕೊನೆಯ ದಿನ; ಲಿಂಕ್‌ ಮಾಡುವ ವಿಧಾನ ಇಲ್ಲಿದೆ

Aadhaar-PAN Link: ನಿಮ್ಮ ಪ್ಯಾನ್‌ ನಂಬರ್‌ ಅನ್ನು ಆಧಾರ್‌ನೊಂದಿಗೆ ಇನ್ನೂ ಲಿಂಕ್‌ ಮಾಡಿಲ್ಲವೆ? ಹಾಗಾದರೆ ಈಗಲೇ ಮಾಡಿ. ಯಾಕೆಂದರೆ ಮೇ 31ರೊಳಗೆ ಪ್ಯಾನ್‌ ನಂಬರ್‌ ಆಧಾರ್‌ನೊಂದಿಗೆ ಲಿಂಕ್‌ ಆಗದಿದ್ದರೆ ಟಿಡಿಎಸ್ ಅನ್ನು ದುಪ್ಪಟ್ಟು ಪ್ರಮಾಣದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ ತಿಳಿಸಿದೆ. ಹಾಗಾದರೆ ಆನ್‌ಲೈನ್‌, ಆಫ್‌ಲೈನ್‌ನಲ್ಲಿ ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Aadhaar-PAN Link
Koo

ಬೆಂಗಳೂರು: ನಿಮ್ಮ ಪ್ಯಾನ್‌ ನಂಬರ್‌ (Permanent Account Number) ಅನ್ನು ಆಧಾರ್‌ (Aadhaar)ನೊಂದಿಗೆ ಇನ್ನೂ ಲಿಂಕ್‌ ಮಾಡಿಲ್ಲವೆ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು (Aadhaar-PAN Link). ಯಾಕೆಂದರೆ ಮೇ 31ರೊಳಗೆ ಪ್ಯಾನ್‌ ನಂಬರ್‌ ಆಧಾರ್‌ನೊಂದಿಗೆ ಲಿಂಕ್‌ ಆಗದಿದ್ದರೆ ಟಿಡಿಎಸ್ ಅನ್ನು ದುಪ್ಪಟ್ಟು ಪ್ರಮಾಣದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ (Income tax) ತಿಳಿಸಿದೆ. ಹಾಗಾದರೆ ಆನ್‌ಲೈನ್‌, ಆಫ್‌ಲೈನ್‌ನಲ್ಲಿ ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹೀಗೆ ಲಿಂಕ್‌ ಮಾಡಿ

ಪ್ಯಾನ್‌ ಮತ್ತು ಆಧಾರ್‌ ಅನ್ನು ಹಲವು ವಿಧಗಳ ಮೂಲಕ ಲಿಂಕ್‌ ಮಾಡಬಹುದು. ಮೊದಲೇ ಹೇಳಿದಂತೆ ಇದಕ್ಕಾಗಿ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರ್ಗಗಳನ್ನು ಬಳಸಬಹುದು.

ಇನ್‌ಕಂ ಟ್ಯಾಕ್ಸ್‌ ಡಿಪಾರ್ಟ್‌ಮೆಂಟ್‌ ಪೋರ್ಟಲ್‌ ಮೂಲಕ

  • ಅದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ incometaxindiaefiling.gov.inಗೆ ಭೇಟಿ ನೀಡಿ.
  • ಈಗ ತೆರೆದುಕೊಳ್ಳುವ ಪುಟದ ಎಡಭಾಗದಲ್ಲಿ ಕಾಣಿಸುವ ‘Quick Links’ ವಿಭಾಗದ ‘Link Aadhaar’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
  • ಈಗ ಹೊಸ ಪುಟ ತೆರೆದುಕೊಳ್ಳಲಿದ್ದು, ಅಲ್ಲಿ ಪ್ಯಾನ್‌, ಆಧಾರ್‌ ನಂಬರ್‌ ನಮೂದಿಸಿ. ಜತೆಗೆ ಇತರ ಅಗತ್ಯ ಮಾಹಿತಿಯನ್ನು ನೀಡಿ.

ಎಸ್‌ಎಂಎಸ್‌ ಮೂಲಕ

  • UIDPAN 10-ಅಂಕಿಗಳ ಪ್ಯಾನ್‌ ಕಾರ್ಡ್‌ ನಂಬರ್‌, 12-ಅಂಕಿಗಳ ಆಧಾರ್‌ ಕಾರ್ಡ್‌ ನಂಬರ್‌ ನಮೂದಿಸಿ ಒಂದು ಸ್ಪೇಸ್‌ ಕೊಟ್ಟು 567678 ಅಥವಾ 56161ಗೆ ಎಸ್‌ಎಂಎಸ್‌ ಕಳುಹಿಸಿ.
  • ಬಳಿಕ ಪ್ಯಾನ್-ಆಧಾರ್ ಲಿಂಕ್ ಸ್ಥಿತಿಯನ್ನು ಎಸ್ಎಂಎಸ್ ನಿಮಗೆ ತಿಳಿಸಲಾಗುತ್ತದೆ. ಗಮನಿಸಿ ಜನ್ಮ ದಿನಾಂಕವು ಎರಡೂ ದಾಖಲೆಗಳಲ್ಲಿ ಹೊಂದಿಕೆಯಾದರೆ ಮಾತ್ರ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲಾಗುತ್ತದೆ.

ಆಧಾರ್-ಪ್ಯಾನ್‌ ಲಿಂಕ್‌ ಆಗಿದ್ಯಾ ಎನ್ನುವುದನ್ನು ಪರಿಶೀಲಿಸುವ ವಿಧಾನ

  • ಅದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ incometaxindiaefiling.gov.inಗೆ ಭೇಟಿ ನೀಡಿ.
  • ಈಗ ತೆರೆದುಕೊಳ್ಳುವ ಪುಟದ ಎಡಭಾಗದಲ್ಲಿ ಕಾಣಿಸುವ ‘Quick Links’ ವಿಭಾಗದ ‘Link Aadhaar Status’ ಆಪ್ಶನ್‌ ಮೇಲೆ ಕ್ಲಿಕ್‌ ಮಾಡಿ.
  • ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಪ್ಯಾನ್‌ ಮತ್ತು ಆಧಾರ್‌ ನಂಬರ್‌ ನಮೂದಿಸಿ.
  • ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ ಬಳಿಕ ‘View Link Aadhaar Status’ ಆಪ್ಶನ್‌ ಸೆಲೆಕ್ಟ್‌ ಮಾಡಿ.
  • ಆಗ ಒಂದು ವೇಳೆ ಲಿಂಕ್‌ ಆಗಿದ್ದರೆ ನಿಮ್ಮ ಪ್ಯಾನ್‌ (ಪ್ಯಾನ್‌ ನಂಬರ್‌) ಆಧಾರ್‌ ನಂಬರ್‌ (ಆಧಾರ್‌ ನಂಬರ್‌ನ ಅಂಕಿ)ನೊಂದಿಗೆ ಲಿಂಕ್‌ ಆಗಿದೆ ಎನ್ನುವ ಸಂದೇಶ ಮೂಡುತ್ತದೆ.

ಕಡ್ಡಾಯ ಯಾಕೆ?

ನಕಲಿ ಪ್ಯಾನ್‌ ಕಾರ್ಡ್‌ಗಳನ್ನು ತಡೆಗಟ್ಟಲು, ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಜಾರಿಗೆ ತರುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಕೂಡಲೇ ಲಿಂಕ್‌ ಮಾಡಿ.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

Continue Reading

ಪ್ರಮುಖ ಸುದ್ದಿ

Valmiki Corporation Scam: ಸಚಿವ ನಾಗೇಂದ್ರ ತಲೆದಂಡ ಫಿಕ್ಸ್‌; ರಾಜೀನಾಮೆ ಕೊಡಲು ಸಿಎಂ ಸೂಚನೆ

Valmiki Corporation Scam: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಆರೋಪಗಳು ಕೇಳಿಬಂದಿದ್ದರಿಂದ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

VISTARANEWS.COM


on

Valmiki Corporation Scam
Koo

ಬೆಂಗಳೂರು: ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಬೆಳಕಿಗೆ ಬಂದ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Corporation Scam) ಸಿಎಂ ಸಿದ್ದರಾಮಯ್ಯ ಅವರಿಗೆ ತಲೆನೋವು ತಂದಿದೆ. ಅಕ್ರಮದಲ್ಲಿ ಸಚಿವ ಬಿ.ನಾಗೇಂದ್ರ ಹೆಸರು ಕೇಳಿಬಂದಿರುವುದರಿಂದ ಸಿಬಿಐ ಎಂಟ್ರಿಗೂ ಮುನ್ನವೇ ನಾಗೇಂದ್ರ ರಾಜೀನಾಮೆ ಸಾಧ್ಯತೆ ಇದೆ. ಇನ್ನು ಸಿಬಿಐ ಎಂಟ್ರಿಯಾದರೆ ಸರ್ಕಾರಕ್ಕೂ ಸಂಕಷ್ಟ ಎದುರಾಗಲಿದೆ. ಹೀಗಾಗಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ಸಚಿವ ಬಿ.ನಾಗೇಂದ್ರಗೆ (B Nagendra) ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದ ರಾಜ್ಯ ಸರ್ಕಾರದ ಮೊದಲ ವಿಕಟ್‌ ಪತನವಾದಂತಾಗಿದೆ.

ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಈಗಾಗಲೇ ಸಿಐಡಿಗೆ ನೀಡಿದೆ. ಒಂದು ವೇಳೆ ಸಿಬಿಐ ಎಂಟ್ರಿಯಾದರೆ ಸಿಐಡಿಗೆ ತನಿಖೆ ನಡೆಸುವ ಅವಕಾಶ ಇರಲ್ಲ. ಹೀಗಾಗಿ ಸಿಬಿಐ ತನಿಖೆ ಬಿಸಿ ತಟ್ಟುವ ಮುನ್ನ ನಾಗೇಂದ್ರ ರಾಜಿನಾಮೆ ಪಡೆಯುವುದು ಸೂಕ್ತ ಎನ್ನುವ ಅಭಿಪ್ರಾಯ ಸರ್ಕಾರದ ಮಟ್ಟದಲ್ಲಿ ವ್ಯಕ್ತವಾಗಿದೆ.

ಅಕ್ರಮ ಹಣ ವರ್ಗಾವಣೆ ಸಂಬಂಧ ಈಗಾಗಲೇ ನಿಗಮದ ಎಂಡಿ ಸೇರಿದಂತೆ ಪ್ರಕರಣದಲ್ಲಿ ಹೆಸರು ಕೇಳಿಬಂದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು CIDಗೆ ವಹಿಸಲಾಗಿದೆ. ಮತ್ತೊಂದೆಡೆ ಈ ಪ್ರಕರಣದಿಂದ ಸರ್ಕಾರಕ್ಕೆ ಮುಖಭಂಗವಾಗಬಾರದು. ಹೀಗಾಗಿ ಸಚಿವ ರಾಜೀನಾಮೆ ನೀಡುವುದು ಒಳಿತು. ಪ್ರಕರಣದ ತನಿಖೆ ನಂತರ ಸಂಪುಟಕ್ಕೆ ಮತ್ತೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.

185 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆಯ (Illegal Money transfer) ಗಂಭೀರ ಸ್ವರೂಪದ ಪ್ರಕರಣ ಇದಾಗಿರುವುದರಿಂದ ಈಗಾಗಲೇ ಸಿಐಡಿ ತನಿಖೆಗೆ ಸರ್ಕಾರ ನೀಡಿದೆ. ಆದರೆ ಪ್ರತಿಪಕ್ಷಗಳು ಸಿಬಿಐ ತನಿಖೆಗೆ ನೀಡಲು ಒತ್ತಾಯಿಸುತ್ತಿವೆ.

185 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆಯ (Illegal Money transfer) ಗಂಭೀರ ಸ್ವರೂಪದ ಪ್ರಕರಣ ಇದಾಗಿರುವುದರಿಂದ ಈಗಾಗಲೇ ಸಿಐಡಿ ತನಿಖೆಗೆ ಸರ್ಕಾರ ನೀಡಿದೆ. ಆದರೆ ಪ್ರತಿಪಕ್ಷಗಳು ಸಿಬಿಐ ತನಿಖೆಗೆ ನೀಡಲು ಒತ್ತಾಯಿಸುತ್ತಿವೆ. RBI ರೂಲ್ಸ್ ಪ್ರಕಾರ, 10 ಕೋಟಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ಸಿಬಿಐ ಕೂಡ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಚಿವರ ರಾಜೀನಾಮೆ ಪಡೆಯಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಏನಿದು ಪ್ರಕರಣ?

ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಅವರು ಮೇ 26ರಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದ 187 ಕೋಟಿ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ, ಇದರಲ್ಲಿ 88 ಕೋಟಿ ಹಣ ದುರುಪಯೋಗವಾಗಿದೆ ಎಂದು ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದರು. ಹೀಗಾಗಿ ಎಂಡಿ ಮತ್ತು ಲೆಕ್ಕಾಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಚಂದ್ರಶೇಖರ್‌ ಬರೆದಿರುವ ಡೆತ್ ನೋಟ್‌ನಲ್ಲಿ ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್‌ ಹಾಗೂ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಸುಚಿಸ್ಮಿತಾ ಅವರೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದರು. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್‌ರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ವಾಲ್ಮೀಕಿ ನಿಗಮಕ್ಕೆ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ. ಆರ್. ರಾಜ್ ಕುಮಾರ್ ಅವರನ್ನು ನೇಮಿಸಿದೆ.

ಇದನ್ನೂ ಓದಿ | Prajwal Revanna : ನಾನವನಲ್ಲ, ನಾನವನಲ್ಲ; ಪೊಲೀಸರ ಪ್ರಶ್ನೆಗೆ ಈ ಒಂದೇ ಉತ್ತರ ನೀಡುತ್ತಿರುವ ಪ್ರಜ್ವಲ್​ ರೇವಣ್ಣ!

ಪ್ರಕರಣದಲ್ಲಿ ಸರ್ಕಾರದ ಪೂರ್ವ ಅನುಮತಿ ಪಡೆದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಡಿ & ಸಿಇಒ ಹಾಗೂ ಎಲ್ಲಾ ನಿರ್ದೇಶಕರು ಸೇರಿ 6 ಬ್ಯಾಂಕ್ ಅಧಿಕಾರಿಗಳ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಇನ್ನು 88 ಕೋಟಿ ದುರುಪಯೋಗ ಹಣವನ್ನು ಈಗಾಗಲೇ ಮುಖ್ಯ ಖಾತೆಗೆ ಅಧಿಕಾರಿಗಳು ವಾಪಸ್ ಪಡೆಯುತ್ತಿದ್ದಾರೆ. ಶಿವಮೊಗ್ಗ ಮತ್ತು ಬೆಂಗಳೂರಿನ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Prajwal Revanna : ನಾನವನಲ್ಲ, ನಾನವನಲ್ಲ; ಪೊಲೀಸರ ಪ್ರಶ್ನೆಗೆ ಈ ಒಂದೇ ಉತ್ತರ ನೀಡುತ್ತಿರುವ ಪ್ರಜ್ವಲ್​ ರೇವಣ್ಣ!

Prjwal Revanna:ಎಸ್​ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂದಲು 24 ಗಂಟೆಗಳ ಅವಧಿಯನ್ನು ಹೊಂದಿದ್ದಾರೆ. ಹೀಗಾಗಿ ಪೊಲೀಸರು ಪ್ರಾಥಮಿಕ ಹಂತದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಮಾತ್ರ ಯಾವುದೆಕ್ಕೂ ಸಮರ್ಥ ಉತ್ತರ ನೀಡುತ್ತಿಲ್ಲ ಎಂದು ಹೇಳಲಾಗಿದೆ.

VISTARANEWS.COM


on

Prajwal Revanna
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಪೆನ್​ಡ್ರೈವ್ ಹಗರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣನನ್ನು (Prajwal Revanna) ಎಸ್​ಐಟಿ ತನಿಖಾಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಆದರೆ, ಪೊಲೀಸರು ಕೇಳುವ ಎಲ್ಲ ಪ್ರಶ್ನೆಗಳಿಗೆ ಪ್ರಜ್ವಲ್ ರೇವಣ್ಣ ‘ನಾನವನಲ್ಲ, ನನಗೆ ಗೊತ್ತಿಲ್ಲ’ ಎಂಬ ಉತ್ತರವನ್ನೇ ನೀಡುತ್ತಿದ್ದಾರೆ. ಈ ಮೂಲಕ ಆರಂಭಿಕ ಹಂತದಲ್ಲಿ ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಲು ಸಿದ್ದತೆ ನಡೆಸಿಕೊಂಡು ಬಂದಿದ್ದಾನೆ ಪ್ರಜ್ವಲ್ ರೇವಣ್ಣ

ಎಸ್​ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂದಲು 24 ಗಂಟೆಗಳ ಅವಧಿಯನ್ನು ಹೊಂದಿದ್ದಾರೆ. ಹೀಗಾಗಿ ಪೊಲೀಸರು ಪ್ರಾಥಮಿಕ ಹಂತದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಮಾತ್ರ ಯಾವುದೆಕ್ಕೂ ಸಮರ್ಥ ಉತ್ತರ ನೀಡುತ್ತಿಲ್ಲ ಎಂದು ಹೇಳಲಾಗಿದೆ.

ಎಸ್​ಐಟಿ ಪೊಲೀಸರು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ಮೂರು ಎಫ್​ಐಆರ್ ಕುರಿತಾಗಿ ಪ್ರಶ್ನೆಗಳನ್ನು ಕೇಳುತತಿದ್ದಾರೆ. ಅವರ ಹೇಳಿಕೆಗಳ ಕುರಿತು ವಿಡಿಯೊ ದಾಖಲೆಯನ್ನು ಸೃಷ್ಟಿಸಲು ಪೊಲೀಸರು ಮುಂದಾಗಿದ್ದಾರೆ. ಅದೇ ರೀತಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎಂದು ಹೇಳಲಾದ ವಿಡಿಯೊಗಳಲ್ಲಿರುವ ಕೆಲವು ದೃಶ್ಯಗಳ ಕುರಿತೂ ಅವರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಆಮೀಷ ಒಡ್ಡಿ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದೀರಾ? ಬಿಡುಗಡೆಗೊಂಡ ವಿಡಿಯೊದಲ್ಲಿ ಇರುವವರು ನೀವೇನಾ ಎಂಬ ಪ್ರಶ್ನೆಗಳನ್ನು ಪೊಲೀಸರು ಕೇಳುತ್ತಿದ್ದಾರೆ. ಆದರೆ, ಎಲ್ಲ ಪ್ರಶ್ನೆಗಳಿಗೆ ಪ್ರಜ್ವಲ್ ಒಂದೇ ಉತ್ತರ ನೀಡುತ್ತಿದ್ದಾರೆ. ಇವೆಲ್ಲವೂ ತನ್ನ ವಿಡಿಯೊಗಳು ಅಲ್ಲ. ಎಲ್ಲವನ್ನೂ ಎಡಿಟ್ ಮಾಡಿ ಮಾರ್ಫ್ ಮಾಡಲಾಗಿದೆ. ವಿಡಿಯೊದಲ್ಲಿ ನಾನು ಇದ್ದೇನೆ ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಎಲ್ಲವನ್ನೂ ದ್ವೇಷದಿಂದ ಮಾಡಿರುವಂಥದ್ದು. ಎಲ್ಲಾ ವಿಡೀಯೋಗಳನ್ನು ತಿರುಚಲಾಗಿದೆ. ಇದು ತನ್ನದಲ್ಲ ಎಂದ ಮೇಲೆ ಉಳಿದ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರ ಇಲ್ಲ ಎಂದು ಪ್ರಜ್ವಲ್ ಹೇಳಿಕೆ ನೀಡಿದ್ದಾರ ಎಂಬುದಾಗಿ ಮೂಲಗಳು ತಿಳಿಸಿವೆ.

ಪರಾರಿಯಾಗಿದ್ದು ಯಾಕೆ?

ವಿಡಿಯೊ ಅಲ್ಲ ಎಂದ ಮೇಲೆ ವಿದೇಶಕ್ಕೆ ಪರಾರಿಯಾಗಿದ್ದು ಯಾಕೆ? ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತೆ ಎಂದು ನಿಮಗೆ ಗೊತ್ತಿದ್ದೇ ವಿದೇಶಕ್ಕೆ ಹೋದ್ರಾ ಎಂಬುದಾಗಿಯೂ ಪೊಲೀಸರು ಮರುಪ್ರಶ್ನೆಗಳನ್ನು ಹಾಕಿದ್ದಾರೆ. ನನ್ನ ಪ್ರವಾಸ ಪೂರ್ವನಿಯೋಜಿತ. ಅದಕ್ಕೆ ಮೊದಲೇ ಪ್ಲ್ಯಾನ್​ ರೆಡಿ ಆಗಿತ್ತು. ವಿಡಿಯೊ ನನ್ನದಲ್ಲ ಎಂಬ ಕಾರಣಕ್ಕೆ ನಾನು ಧೈರ್ಯವಾಗಿದ್ದೆ. ಹೀಗಾಗಿ ನಾನು ವಿದೇಶದಲ್ಲಿ ಟೂರ್ ಮಾಡುತ್ತಿದ್ದೆ. ಹೀಗಾಗಿ ನನಗೆ ಮೊದಲು ಮಾಹಿತಿ ಬಂದಾಗ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.

ಇದನ್ನೂ ಓದಿ ;Bhavani Reavanna : ಭವಾನಿ ರೇವಣ್ಣಗೆ ಬಂಧನ ಭೀತಿ; ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

ಪೆನ್​ಡ್ರೈವ್ ಮೂಲಕ ಸಿಕ್ಕಿರುವ ವಿಡಿಯೋಗಳು ಇಷ್ಟರ ಮಟ್ಟಿಗೆ ಸದ್ದು ಮಾಡುತ್ತೆ ಎಂದು ಗೊತ್ತಿರಲಿಲ್ಲ. ಆದರೆ ನನ್ನ ವಿರುದ್ಧ ಮಾಡಿರುವ ಷಡ್ಯಂತ್ರಕ್ಕೆ ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದೆ. ಈ ಹಿಂದೆ ನಾನು ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹಾಕಿದ್ದ ವೇಳೆ ತಪ್ಪು ಮಾಡಿಲ್ಲ ಎಂಬ ಕಾರಣಕ್ಕೆ ಏಳು ದಿನಗಳ ಕಾಲ ಸಮಯ ಕೇಳಿದ್ದೆ. ಆದರೆ, ಇದೊಂದು ಕ್ರಿಮಿನಲ್ ಪಿತೂರಿ. ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲೆಂದೇ ನಾನಾ ರೀತಿಯಲ್ಲಿ ಒತ್ತಡ ತಂದು ದೊಡ್ಡ ಮಟ್ಟಕ್ಕೆ ಸುದ್ದಿ ಮಾಡಲಾಗಿದೆ ಎಂದು ಪ್ರಜ್ವಲ್ ಹೇಳಿಕೆ ನೀಡಿದ್ದಾರೆ.

ನನ್ನ ವಿರುದ್ಧದ ಷಡ್ಯಂತ್ರದಿಂದಾಗಿ ನಾನು ಭಾರತಕ್ಕೆ ಬರಲು ಭಯ ಪಡುವಂತಾಗಿದೆ. ಆಗಿರುವ ಮೋಸದಿಂದ ನಾನು ಖಿನ್ನತೆಗೆ ಒಳಗಾಗಿದ್ದೆ. ಹೀಗಾಘಿ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.

ಸಮಸ್ಯೆ ತರಲಿದೆ 376(2)n ಸೆಕ್ಷನ್

ಪ್ರಜ್ವಲ್ ರೇವಣ್ಣ ವಿರುದ್ಧ ಐಪಿಸಿ 376(2)n ದಾಖಲಾಗಿದೆ. ಇದು ನಿರಂತರವಾಗಿ ಒಬ್ಬ ಮಹಿಳೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಸೆಕ್ಷನ್ ಆಗಿದೆ. ಈ ಸೆಕ್ಷನ್ ನಡಿಯಲ್ಲಿ ಸ್ಟೇಟ್​ಮೆಂಟ​ ಕೊಟ್ಟಿರುವ ಮಹಿಳೆಯ ಹೇಳಿಕೆ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ತಮ್ಮ ವಶಕ್ಕೆ ಪ್ರಜ್ವಲ್​ ಪಡೆದ ತಕ್ಷಣ ಇದೇ ಸೆಕ್ಷನ್ ನಡಿ ದಾಖಲಾದ ಪ್ರಕರಣದ ಬಗ್ಗೆ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ.

ಸಂತ್ರಸ್ತೆಯ ಹೇಳಿಕೆ ಹೇಳಿಕೆ ಆಧರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಫಾರ್ಮ್ ಹೌಸ್ ನಲ್ಲಿ ಪ್ರಜ್ವಲ್​ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಇದಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ತಾನು ಅತ್ಯಾಚಾರ ಮಾಡಿದ್ದೇ ಆದಲ್ಲಿ ಮೂರ್ನಾಲ್ಕು ವರ್ಷ ಸುಮ್ಮನಿರೋದಕ್ಕೆ ಕಾರಣವೇನು ಎಂದು ಪ್ರಜ್ವಲ್ ಪ್ರಶ್ನಿಸಿದ್ದಾರೆ.

ತಾನು ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ. ನನ್ನ ರಾಜಕೀಯ ಭವಿಷ್ಯ ಹಾಗು ತನ್ನ ಕುಟುಂಬದ ವರ್ಚಸ್ಸು ಹಾಳು ಮಾಡುವ ಸಲುವಾಗಿ ನಡೆದಿರುವ ಷಡ್ಯಂತ್ರ ಇದಾಗಿದೆ. ಈಗಾಗಲೆ ತನ್ನದಲ್ಲದ ತಪ್ಪಿಗೆ ತನ್ನ ಕುಟುಂಬ ನೋವು ಅನುಭವಿಸ್ತಾ ಇದೆ ಎಂದು ಪ್ರಜ್ವಲ್ ಹೇಳಿದ್ದಾರೆ.

ನನ್ನ ತಂದೆ ಜೈಲಿಗೆ ಕೂಡ ಹೋಗಿ ಬಂದಿದ್ದಾರೆ. ಇದರಿಂದಾಗಿ ಎಲ್ಲರೂ ಸಮಸ್ಯೆಯಾಗಿ ಉಳಿದಿದೆ. ಇದೊಂದು ರಾಜಕೀಯ ಷಡ್ಯಂತ್ರ ಎಂದು ಪ್ರಜ್ವಲ್ ಪದೇಪದೇ ಹೇಳುತ್ತಿದ್ದಾರೆ. ಇಂತಹ ಕೀಳು ಮಟ್ಟದ ಬೆಳವಣಿಗೆಯಿಂದ ತನಗೆ ಆಘಾತವಾಗಿದೆ ಎಂದ ಪ್ರಜ್ವಲ್ ಪೊಲೀಸರು ಮುಂದೆ ಹೇಳಿಕೆ ನೀಡಿದ್ದಾರೆ

Continue Reading
Advertisement
Prajwal revanna
ಪ್ರಮುಖ ಸುದ್ದಿ7 mins ago

Prajwal Revanna : ಪ್ರಜ್ವಲ್​ ರೇವಣ್ಣ ಅರೆಸ್ಟ್​ ಆಗುವಾಗ ಧರಿಸಿದ್ದ ಬಟ್ಟೆ ಬ್ರಾಂಡ್ ಯಾವುದು? ಅದಕ್ಕೆಷ್ಟು ಬೆಲೆ?

contractor self harming
ಕ್ರೈಂ17 mins ago

Self Harming: ಕಂಟ್ರಾಕ್ಟರ್‌ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ, ಮತ್ತೊಂದು ಸರ್ಕಾರಿ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಯಲಿಗೆ!

Aadhaar-PAN Link
ದೇಶ31 mins ago

Aadhaar-PAN Link: ಇನ್ನೂ ಆಧಾರ್‌, ಪ್ಯಾನ್‌ ಲಿಂಕ್‌ ಆಗಿಲ್ಲವೆ? ಇಂದೇ ಕೊನೆಯ ದಿನ; ಲಿಂಕ್‌ ಮಾಡುವ ವಿಧಾನ ಇಲ್ಲಿದೆ

Valmiki Corporation Scam
ಪ್ರಮುಖ ಸುದ್ದಿ44 mins ago

Valmiki Corporation Scam: ಸಚಿವ ನಾಗೇಂದ್ರ ತಲೆದಂಡ ಫಿಕ್ಸ್‌; ರಾಜೀನಾಮೆ ಕೊಡಲು ಸಿಎಂ ಸೂಚನೆ

RBI
ದೇಶ51 mins ago

RBI: 33 ವರ್ಷಗಳ ನಂತರ ಬ್ರಿಟನ್‌ನಿಂದ 100 ಟನ್‌ಗಿಂತಲೂ ಹೆಚ್ಚು ಪ್ರಮಾಣದ ಚಿನ್ನ ಭಾರತಕ್ಕೆ!

Raghu Thatha Hombale Films Realease date announced
ಕಾಲಿವುಡ್52 mins ago

Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

Anant Ambani Shakira set to perform 2nd pre-wedding
ಬಾಲಿವುಡ್56 mins ago

Anant Ambani: ಅನಂತ್ ಅಂಬಾನಿ ಕ್ರೂಸ್ ಪಾರ್ಟಿಯಲ್ಲಿ ರಂಜಿಸಲಿದ್ದಾರೆ ‘ವಾಕಾ ವಾಕಾ’ ಖ್ಯಾತಿಯ ಪಾಪ್ ಗಾಯಕಿ!

Prajwal Revanna
ಪ್ರಮುಖ ಸುದ್ದಿ60 mins ago

Prajwal Revanna : ನಾನವನಲ್ಲ, ನಾನವನಲ್ಲ; ಪೊಲೀಸರ ಪ್ರಶ್ನೆಗೆ ಈ ಒಂದೇ ಉತ್ತರ ನೀಡುತ್ತಿರುವ ಪ್ರಜ್ವಲ್​ ರೇವಣ್ಣ!

T20 World Cup 2024
ಕ್ರೀಡೆ1 hour ago

T20 World Cup 2024: ನ್ಯೂಯಾರ್ಕ್​ನಲ್ಲಿ ಕಳಪೆ ಗುಣಮಟ್ಟದ ಆಹಾರ; ಟೀಮ್​ ಇಂಡಿಯಾ ಆಟಗಾರರಿಂದ ಅಸಮಾಧಾನ

Vijayanagara News
ವಿಜಯನಗರ1 hour ago

Vijayanagara News : ದೇವಸ್ಥಾನಕ್ಕೆ ನುಗ್ಗಿ ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ1 day ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌