Atiq Ahmed Shot Dead: ಪೊಲೀಸರ ಎದುರೇ ಅತೀಕ್‌, ಅಶ್ರಫ್‌ ಮೇಲೆ ಗುಂಡು ಹಾರಿಸಿದ್ದು ಹೇಗೆ? ಇಲ್ಲಿದೆ ವಿಡಿಯೊ - Vistara News

ಕ್ರೈಂ

Atiq Ahmed Shot Dead: ಪೊಲೀಸರ ಎದುರೇ ಅತೀಕ್‌, ಅಶ್ರಫ್‌ ಮೇಲೆ ಗುಂಡು ಹಾರಿಸಿದ್ದು ಹೇಗೆ? ಇಲ್ಲಿದೆ ವಿಡಿಯೊ

Atiq Ahmed Shot Dead: ಅತೀಕ್‌ ಅಹ್ಮದ್‌ ಹಾಗೂ ಅಶ್ರಫ್‌ ಅಹ್ಮದ್‌ರನ್ನು ವೈದ್ಯಕೀಯ ತಪಾಸಣೆಗಾಗಿ ಪ್ರಯಾಗ್‌ರಾಜ್‌ ಮೆಡಿಕಲ್‌ ಕಾಲೇಜಿಗೆ ಕರೆದೊಯ್ಯುವಾಗಲೇ ಅನಾಮಧೇಯ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಭೀಕರ ದಾಳಿಯ ವಿಡಿಯೊ, ಮಾಹಿತಿ ಇಲ್ಲಿದೆ.

VISTARANEWS.COM


on

Atiq Ahmad SHOT Dead: Moment Atiq And His Brother Ashraf Ahmed Shot Dead In Presence Of Police
ಗುಂಡಿನ ದಾಳಿಗೆ ಕೆಲವೇ ಕ್ಷಣಗಳ ಮೊದಲು ಅತೀಕ್‌ ಹಾಗೂ ಅಶ್ರಫ್‌ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ: ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ ಅಹ್ಮದ್‌ಗೆ ಅನಾಮಿಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ವೈದ್ಯಕೀಯ ತಪಾಸಣೆಗಾಗಿ ಪ್ರಯಾಗ್‌ರಾಜ್‌ಗೆ ಕೊಂಡೊಯ್ಯುವ ವೇಳೆ ಇಬ್ಬರು ಗ್ಯಾಂಗ್‌ಸ್ಟರ್‌ಗಳ ಮೇಲೆ ಆರೋಪಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಏನಾಗುತ್ತಿದೆ ಎನ್ನುವಷ್ಟರಲ್ಲಿಯೇ ಗ್ಯಾಂಗ್‌ಸ್ಟರ್‌ಗಳಿಬ್ಬರೂ ನೆಲದ ಮೇಲೆ ಹೆಣವಾಗಿ (Atiq Ahmed Shot Dead) ಬಿದ್ದಿದ್ದ ದೃಶ್ಯಗಳು ಲಭ್ಯವಾಗಿವೆ.

ಅಷ್ಟಕ್ಕೂ ಏನಾಯ್ತು?

ಅತೀಕ್‌ ಅಹ್ಮದ್‌ ಹಾಗೂ ಅಶ್ರಫ್‌ ಅಹ್ಮದ್‌ರ ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ವಾಹನದಲ್ಲಿ ಕರೆದುಕೊಂಡು ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದರು. ಪ್ರಯಾಗ್‌ರಾಜ್‌ ಮೆಡಿಕಲ್‌ ಕಾಲೇಜಿಗೆ ವಾಹನ ತೆರಳುತ್ತಲೇ ಅತೀಕ್‌ ಹಾಗೂ ಅಶ್ರಫ್‌ ವಾಹನದಿಂದ ಕೆಳಗಿಳಿದರು. ಇದೇ ವೇಳೆ ಅತೀಕ್‌ ಹಾಗೂ ಅಶ್ರಫ್‌ ಅವರು ಮಾಧ್ಯಮಗಳ ಜತೆ ಮಾತನಾಡುತ್ತಿದ್ದರು. ಪೊಲೀಸರು ಇಬ್ಬರನ್ನೂ ಕರೆದುಕೊಂಡು ಹೋಗುವಾಗ ಮಾಧ್ಯಮದವರ ಜತೆ ಅತೀಕ್‌ ಅಹ್ಮದ್‌ ಮಾತನಾಡಲು ಆರಂಭಿಸಿದ್ದರು.

ಹೀಗೆ ನಡೆಯಿತು ದಾಳಿ

ಪರಿಸ್ಥಿತಿ ಹೀಗಿರುವಾಗಲೇ ಅನಾಮಧೇಯ ವ್ಯಕ್ತಿಗಳು ಮೊದಲು ಅತೀಕ್‌ ಅಹ್ಮದ್‌ ಅವರ ಮೇಲೆ ಗುಂಡು ಹಾರಿಸಿದರು. ಇದಾದ ಕೆಲವೇ ಕ್ಷಣದಲ್ಲಿ ಅಶ್ರಫ್‌ ಅಹ್ಮದ್‌ ಮೇಲೆ ಗುಂಡು ಹಾರಿಸಿದರು. ನೋಡ ನೋಡುತ್ತಲೇ ಗುಂಡಿನ ದಾಳಿ ನಡೆದ ಕಾರಣ ಪೊಲೀಸರು ಹಾಗೂ ಮಾಧ್ಯಮದವರು ಚದುರಿಹೋದರು. ಅಷ್ಟೊತ್ತಿಗಾಗಲೇ ಇಬ್ಬರ ಮೇಲೂ ಹಲವು ಸುತ್ತಿನ ಗುಂಡಿನ ದಾಳಿ ನಡೆದ ಕಾರಣ, ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದರು.

ಮೂವರು ದಾಳಿಕೋರರ ಬಂಧನ

ಅತೀಕ್‌ ಅಹ್ಮದ್‌ ಹಾಗೂ ಅಶ್ರಫ್‌ ಅಹ್ಮದ್‌ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಹಾಗೂ ಮಾಧ್ಯಮದವರ ಸಮೀಪ ನಿಂತು ಇಬ್ಬರು ಗ್ಯಾಂಗ್‌ಸ್ಟರ್‌ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು ಅಚ್ಚರಿಯಾಗಿದ್ದು, ಬಂಧಿತರು ಯಾರು? ಅವರು ಯಾವ ಗ್ಯಾಂಗ್‌ಗೆ ಸೇರಿದವರು, ದಾಳಿ ನಡೆಸಿದ್ದು ಏಕೆ ಎಂಬುದು ಸೇರಿ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅತೀಕ್‌ನದ್ದು ಗ್ಯಾಂಗ್‌ಸ್ಟರ್‌ ಕುಟುಂಬ

ಅತೀಕ್‌ ಅಹ್ಮದ್‌ನದ್ದು ಗ್ಯಾಂಗ್‌ಸ್ಟರ್‌ ಕುಟುಂಬವಾಗಿತ್ತು. ಅತೀಕ್‌ ಅಹ್ಮದ್‌, ಆತನ ಸಹೋದರ ಅಶ್ರಫ್‌ ಅಹ್ಮದ್‌ ಹಾಗೂ ಪುತ್ರ ಅಸಾದ್‌ ಅಹ್ಮದ್‌ ಸೇರಿ ಇವನ ಕುಟುಂಬದ ಹಲವರು ಗ್ಯಾಂಗ್‌ಸ್ಟರ್‌ಗಳಾಗಿದ್ದರು. ಹಾಗಾಗಿಯೇ, ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆಯ ಪ್ರಮುಖ ಸಾಕ್ಷಿ ಉಮೇಶ್‌ ಪಾಲ್‌ನನ್ನು ಅತೀಕ್‌ ಅಹ್ಮದ್‌ನು ಜೈಲಿನಲ್ಲಿದ್ದೇ ಹತ್ಯೆ ಮಾಡಿಸಿದ್ದ. ಕೆಲ ದಿನಗಳ ಹಿಂದಷ್ಟೇ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ಅಸಾದ್‌ ಅಹ್ಮದ್‌ನೇ ಉಮೇಶ್‌ ಪಾಲ್‌ ಮೇಲೆ ಗುಂಡಿನ ದಾಳಿ ನಡೆಸಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಉಮೇಶ್​ ಪಾಲ್​ ಕೊಲೆ ಆರೋಪಿಗಳಾದ ಅತೀಕ್​ ಅಹ್ಮದ್​, ಅಶ್ರಫ್​ ಅನಾಮಿಕರ ಗುಂಡೇಟಿಗೆ ಬಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna Case: ಇಂದು ರೇವಣ್ಣ ಕುಟುಂಬದ ಮೂವರಿಗೂ ಅಗ್ನಿಪರೀಕ್ಷೆ !

ಪ್ರಜ್ವಲ್‌ ರೇವಣ್ಣ (Hassan MP Prajwal revanna Case) ಅವರಿಗೆ ಜಾಮೀನೋ, ಜೈಲೋ ಎಂಬುದು ಇಂದು ನಿರ್ಧಾರವಾಗಲಿದೆ. ಜೊತೆಗೆ ಭವಾನಿ ರೇವಣ್ಣ (Bhavani Revanna) ಅವರ ಜಾಮೀನು ಅರ್ಜಿಯೂ ಇಂದೇ ವಿಚಾರಣೆಗೆ ಬರಲಿದೆ. ಎಚ್‌ಡಿ ರೇವಣ್ಣ (HD revanna) ಅವರು ತಮ್ಮ ಮೇಲಿನ ಎಫ್‌ಐಆರ್‌ ರದ್ದತಿಗೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಇಂದು ನಡೆಯಲಿದೆ.

VISTARANEWS.COM


on

Prajwal Revanna Case Another case against Revanna transferred to SIT Notice to Bhavani
Koo

ಬೆಂಗಳೂರು: ಇಂದು ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ಅವರ ಕುಟುಂಬದ ಮೂವರಿಗೂ ಅಗ್ನಿಪರೀಕ್ಷೆ ಕಾದಿದೆ. ಅಶ್ಲೀಲ ವಿಡಿಯೋ (obscene video) ಹಾಗೂ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲಿ ನಿನ್ನೆ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda international airport) ಆರೆಸ್ಟ್ ಆಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassan MP Prajwal revanna Case) ಅವರಿಗೆ ಜಾಮೀನೋ, ಜೈಲೋ ಎಂಬುದು ಇಂದು ನಿರ್ಧಾರವಾಗಲಿದೆ. ಜೊತೆಗೆ ಭವಾನಿ ರೇವಣ್ಣ (Bhavani Revanna) ಅವರ ಜಾಮೀನು ಅರ್ಜಿಯೂ ಇಂದೇ ವಿಚಾರಣೆಗೆ ಬರಲಿದೆ. ಎಚ್‌ಡಿ ರೇವಣ್ಣ (HD revanna) ಅವರು ತಮ್ಮ ಮೇಲಿನ ಎಫ್‌ಐಆರ್‌ ರದ್ದತಿಗೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಇಂದು ನಡೆಯಲಿದೆ.

ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ‌ ಅವರ ಪರ ವಕೀಲರು ಜನಪ್ರತಿನಿಧಿಗಳ ಕೋರ್ಟ್‌ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮೇ 29ರಂದೇ ನಿರೀಕ್ಷಣಾ ಜಾಮೀನಿಗೆ ವಕೀಲ ಅರುಣ್ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಪ್ರಜ್ವಲ್ ರೇವಣ್ಣ ಬಂಧನವಾಗಿರುವ ಹಿನ್ನೆಲೆಯಲ್ಲಿ ಇನ್ನು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ‌ ಅವಶ್ಯಕತೆ ಇಲ್ಲ. ಹಾಗಾಗಿ ಇಂದು ಪ್ರಜ್ವಲ್ ರೇವಣ್ಣ ಪರ ವಕೀಲರು ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ಕೋರ್ಟ್‌ ಮುಂದೆ ಸಲ್ಲಿಸಲಿದ್ದಾರೆ.

ಎಸ್‌ಐಟಿ ಕೂಡ ಇಂದು ಅಗತ್ಯ ಮೆಡಿಕಲ್‌ ಟೆಸ್ಟ್‌ಗಳ ಬಳಿಕ ಪ್ರಜ್ವಲ್‌ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಬೇಕಿದೆ. ನ್ಯಾಯಾಲಯಕ್ಕೆ‌ ಹಾಜರುಪಡಿಸಿ ಕನಿಷ್ಠ 14 ದಿನಗಳ ಕಸ್ಟಡಿಗೆ ಎಸ್ಐಟಿ ಅಧಿಕಾರಿಗಳು ಮನವಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ. ಯಾಕೆಂದರೆ ಅಷ್ಟೊಂದು ಅಗಾಧ ಪ್ರಮಾಣದ ತನಿಖೆ ನಡೆಯಬೇಕಿದೆ. ಪ್ರಕರಣದ ಗಂಭೀರತೆ ಹೆಚ್ಚು ಇರುವುದರಿಂದ ಎಸ್ಐಟಿ ಅಧಿಕಾರಿಗಳ ವಶಕ್ಕೆ ಪ್ರಜ್ವಲ್‌ ಅವರನ್ನು ನೀಡುವ ಸಾಧ್ಯತೆಯೇ ಅಧಿಕವಾಗಿದೆ.

ಭವಾನಿಗೂ ಕಷ್ಟ

ಅತ್ತ ಭವಾನಿ ರೇವಣ್ಣ ಅವರಿಗೂ ಇಂದು ಜಾಮೀನು ಟೆನ್ಷನ್ ಇದೆ. ಕೆ.ಆರ್‌.ನಗರ ತಾಲೂಕಿನ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜನಪ್ರತಿನಿಧಿಗಳ ಕೋರ್ಟ್​ ಜಡ್ಜ್ ಇಂದು ಬೇಲ್ ಅರ್ಜಿ ತೀರ್ಪು ಪ್ರಕಟಿಸಲಿದ್ದಾರೆ. ಸಂತ್ರಸ್ತೆಯ ಅಪಹರಣದ ಆರೋಪದಲ್ಲಿ SIT ಪರ ವಕೀಲ ಹಾಗೂ ಭವಾನಿ ಪರ ವಕೀಲರ ವಾದವನ್ನು ಆಲಿಸಿದ್ದ ಕೋರ್ಟ್​ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿಂದ ತೀರ್ಪು ಹೊರಬೀಳಲಿದೆ.

ರೇವಣ್ಣ ಎಫ್‌ಐಆರ್‌ ರದ್ದು ಅರ್ಜಿ

ಎಫ್ಐಆರ್ ರದ್ದು ಕೋರಿ ರೇವಣ್ಣ ಸಲ್ಲಿಸಿರುವ ಅರ್ಜಿ ಸಹ ಇಂದು ವಿಚಾರಣೆ ನಡೆಯಲಿದೆ. ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ತಮ್ಮ ಮೇಲಿರುವ ದೂರನ್ನು ಕೈಬಿಡಲು ರೇವಣ್ಣ ಕೋರಿದ್ದಾರೆ. ಅಪಹರಣ ಪ್ರಕರಣದಲ್ಲೂ, ಹೊಳೆನರಸೀಪುರ (Holenarasipura) ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲೂ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna case) ಅವರಿಗೆ ಜಾಮೀನು (Bail) ಮಂಜೂರಾಗಿದೆ. ಆದರೆ ಜನಪ್ರತಿನಿಧಿಗಳ ಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಎಸ್ಐಟಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಆದೇಶವನ್ನು ಪ್ರಶ್ನೆ ಮಾಡಲಿದೆ.

ಎಚ್‌ಡಿಕೆ ಎಲ್ಲಿದ್ದಾರೆ?

ಅತ್ತ ಪ್ರಜ್ವಲ್ ರಾಜ್ಯಕ್ಕೆ ಎಂಟ್ರಿ ಆಗುತ್ತಾರೆ ಅನ್ನುವ ಸುದ್ದಿ ಬಂದ ತಕ್ಷಣ ಎಚ್‌ಡಿ ಕುಮಾರಸ್ವಾಮಿ ಹಾಗೂ ಕುಟುಂಬ ಬೆಂಗಳೂರು ಬಿಟ್ಟು ಹೊರ ಹೋಗಿದ್ದು, ಜಂಗಲ್‌ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಪ್ರತಿಯೊಂದು ಕಾನೂನು ಹೋರಾಟದ ವಿವರಗಳನ್ನು ಪಡೆದುಕೊಳ್ಳುತ್ತಿದ್ದು, ರಾಜಕೀಯವಾಗಿಯೂ ಈ ಪ್ರಕರಣದಲ್ಲಿ ಮುಂದಿನ ನಡೆ ಹೇಗೆ ಎಂಬ ಬಗ್ಗೆ ಪಕ್ಷದ ಮುಖಂಡರು ಹಾಗೂ ಆಪ್ತರ ಜೊತೆ ಚರ್ಚಿಸುತ್ತಿದ್ದಾರೆ.

ಪ್ರಜ್ವಲ್‌ ಪುರುಷತ್ವ ಪರೀಕ್ಷೆ

ಆರೆಸ್ಟ್ ಆಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಇಂದು ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಎಸ್‌ಐಟಿ ಮುಂದಾಗಿದೆ. ಆರೋಪಿ ತನಿಖೆಗೆ ಸಹಕರಿಸಲು ದೈಹಿಕ- ಮಾನಸಿಕವಾಗಿ ಸಿದ್ಧನಾಗಿದ್ದಾನೆಯೇ ಎಂಬುದನ್ನು ಈ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ.

ಪ್ರಕರಣದ ತನಿಖೆ ಹಾಗೂ ವಿಚಾರಣೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಎಸ್‌ಐಟಿ ನಡೆಸಿದೆ. ಒಂದು ವೇಳೆ, ವಿಡಿಯೋದಲ್ಲಿ ಇರುವಂಥ ಕಾಮಕಾಂಡ ತಾನೇನೂ ಮಾಡಿಲ್ಲ ಎಂದು ಪ್ರಜ್ವಲ್ ಅಫಿಡವಿಟ್ ಸಲ್ಲಿಸಿದರೆ, ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ತಾನು ಅತ್ಯಾಚಾರ ಮಾಡಿಲ್ಲ ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಸಾಧ್ಯತೆಯೂ ಇರುವುದರಿಂದ, ಮುಂದಿನ ಹಂತದಲ್ಲಿ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆಯನ್ನು ಎಸ್‌ಐಟಿ ಮಾಡಿಸಲಿದೆ.

ನಂತರ ಹಾಸನ ಸಂಸದರ ನಿವಾಸದಲ್ಲಿ ಸಂಗ್ರಹಿಸಲಾದ ಹಾಸಿಗೆ- ಹೊದಿಕೆ ಇತ್ಯಾದಿಗಳಲ್ಲಿ ಕಂಡುಬಂದಿರುವ ಡಿಎನ್‌ಎಗೂ, ಪ್ರಜ್ವಲ್‌ ಡಿಎನ್‌ಎಗೂ ಮ್ಯಾಚ್‌ ಮಾಡಲಾಗುತ್ತದೆ. ಒಟ್ಟು ಮೂರು ಹಂತದಲ್ಲಿ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಈ ಹಿಂದೆಯೂ ಅನೇಕರಿಗೆ ಅತ್ಯಾಚಾರ ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಸ್ವಾಮಿ ನಿತ್ಯಾನಂದ, ಮುರುಘಾ ಶ್ರೀ, ಅಸಾರಾಂ ಬಾಪು ಸೇರಿದಂತೆ ಹಲವರಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.

ಇದನ್ನೂ ಓದಿ: Prajwal Revanna Case: ವಿದೇಶದಲ್ಲಿಯೇ ಮೊಬೈಲ್‌ ನಾಶ ಮಾಡಿದರಾ ಪ್ರಜ್ವಲ್?

Continue Reading

ಪ್ರಮುಖ ಸುದ್ದಿ

Prajwal Revanna Case: ವಿದೇಶದಲ್ಲಿಯೇ ಮೊಬೈಲ್‌ ನಾಶ ಮಾಡಿದರಾ ಪ್ರಜ್ವಲ್?

Prajwal Revanna Case: ಏಪ್ರಿಲ್‌ 26ರಂದು ತರಾತುರಿಯಲ್ಲಿ ವಿದೇಶಕ್ಕೆ ಹಾರಿದ್ದ ಪ್ರಜ್ವಲ್‌, ಮೊಬೈಲ್‌ ಅನ್ನೂ ಜೊತೆಗೆ ಕೊಂಡೊಯ್ದಿದ್ದರು. ಇದೀಗ ಪ್ರಜ್ವಲ್‌ ಜೇಬಿನಲ್ಲಿ ಎಸ್‌ಐಟಿ ಅಧಿಕಾರಿಗಳು ಮೊದಲಿಗೆ ತಡಕಾಡಿರುವುದೇ ಮೊಬೈಲ್‌ಗಾಗಿ. ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿರುವ ಮೊಬೈಲ್‌ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದು, ಅದು ಇನ್ನೂ ಎಸ್‌ಐಟಿ ಅಧಿಕಾರಿಗಳಿಗೆ ದೊರೆತಿಲ್ಲ ಎನ್ನಲಾಗುತ್ತಿದೆ.

VISTARANEWS.COM


on

prajwal revanna case mobile
Koo

ಬೆಂಗಳೂರು: ಬೆಂಗಳೂರು: ಅಶ್ಲೀಲ ವಿಡಿಯೋ (obscene video) ಹಾಗೂ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲಿ ನಿನ್ನೆ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda international airport) ಆರೆಸ್ಟ್ ಆಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassan MP Prajwal revanna Case) ಅವರಿಂದ ಪ್ರಕರಣದ ವಿಚಾರಣೆಗೆ ಅಗತ್ಯವಾಗಿರುವ ಸಾಕ್ಷ್ಯಗಳನ್ನು (ವಶಪಡಿಸಿಕೊಳ್ಳಲು ಎಸ್‌ಐಟಿ ಮುಂದಾಗಿದೆ. ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿರುವ ಮೊಬೈಲ್‌ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದು, ಅದು ಇನ್ನೂ ಎಸ್‌ಐಟಿ ಅಧಿಕಾರಿಗಳಿಗೆ ದೊರೆತಿಲ್ಲ ಎನ್ನಲಾಗುತ್ತಿದೆ.

ಏಪ್ರಿಲ್‌ 26ರಂದು ತರಾತುರಿಯಲ್ಲಿ ವಿದೇಶಕ್ಕೆ ಹಾರಿದ್ದ ಪ್ರಜ್ವಲ್‌, ಮೊಬೈಲ್‌ ಅನ್ನೂ ಜೊತೆಗೆ ಕೊಂಡೊಯ್ದಿದ್ದರು. ಇದೀಗ ಪ್ರಜ್ವಲ್‌ ಜೇಬಿನಲ್ಲಿ ಎಸ್‌ಐಟಿ ಅಧಿಕಾರಿಗಳು ಮೊದಲಿಗೆ ತಡಕಾಡಿರುವುದೇ ಮೊಬೈಲ್‌ಗಾಗಿ. ವಿಡಿಯೋಗಳನ್ನು ಈಗಾಗಲೇ ನಾಶ ಮಾಡಿರಬಹುದಾದರೂ, ಮೊಬೈಲ್‌ ಸಿಕ್ಕಿದರೆ ಅವುಗಳನ್ನು ರಿಟ್ರೀವ್‌ ಮಾಡುವ ಅವಕಾಶ ಇದೆ. ಸಾಧನವೇ ಸಿಗದೇ ಹೋದರೆ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮೊಬೈಲ್‌ ಅಧಿಕಾರಿಗಳ ಕೈಗೆ ಸಿಗದಂತೆ ಪ್ರಜ್ವಲ್‌ ಎಚ್ಚರ ವಹಿಸಿರಬಹುದು ಎನ್ನಲಾಗಿದೆ.

ಪ್ರಜ್ವಲ್ ರೇವಣ್ಣ ತಾವು ಬಳಸುತ್ತಿದ್ದ ಮೊಬೈಲ್ ಅನ್ನು ವಿದೇಶದಲ್ಲಿಯೇ ನಾಶ ಮಾಡಿರುವ ಸಾಧ್ಯತೆ ಇದೆ. ಪ್ರಕರಣ ದಾಖಲಾಗಿ ಎಸ್‌ಐಟಿ ರಚನೆಯಾಗುತ್ತಿದ್ದಂತೆಯೇ ಇದರ ತೀವ್ರತೆ ಅರಿತುಕೊಂಡ ಪ್ರಜ್ವಲ್‌, ಜರ್ಮನಿಯಲ್ಲಿಯೇ ಅಡಗಿಕೊಂಡಿದ್ದರು. ಅಲ್ಲಿಯೇ ಮೊಬೈಲ್ ಬಿಸಾಕಿರುವ ಸಾಧ್ಯತೆ ಇದೆ. ಮೊಬೈಲ್‌ ಬಚ್ಚಿಟ್ಟಿದ್ದರೆ ಅದನ್ನು ಆನ್‌ ಮಾಡಿದಾಗ ಲೊಕೇಶನ್‌ ಪತ್ತೆಯಾಗಲಿದೆ. ಹೀಗಾಗಿ ಮೊಬೈಲ್‌ ಅನ್ನು ನಾಶ ಮಾಡಿರುವ ಸಾಧ್ಯತೆಯೇ ಅಧಿಕವಾಗಿದೆ. ಈ ಎಲ್ಲದರ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸಲಿದೆ.

ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಹಿನ್ನೆಡೆ ಆಗಿತ್ತು. ಇಂದಿನಿಂದ ಪ್ರಜ್ವಲ್ ರೇವಣ್ಣ ಅಸಲಿ ತನಿಖೆ ಶುರುವಾಗಲಿದೆ. ಈಗಾಗಲೇ ಬಂಧಿತರಾಗಿರುವ ಪ್ರಜ್ವಲ್‌ರನ್ನು ನೇರವಾಗಿ ಎಸ್ಐಟಿ ಕಚೇರಿಗೆ ಕರೆತಂದಿರುವ ಅಧಿಕಾರಿಗಳು, ಇಂದು ಬೆಳಗ್ಗೆ ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದು, ಆರೋಪಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳನ್ನು ದಾಖಲಿಸಿಕೊಳ್ಳಲಿದ್ದಾರೆ. ಆರೋಪಿ ತನಿಖಾಧಿಕಾರಿಗಳ ಮುಂದೆ ನೀಡುವ ಹೇಳಿಕೆಗಳನ್ನು ಪೂರ್ಣ ಮಾನಸಿಕ ಆರೋಗ್ಯದ ಸ್ಥಿತಿಯಲ್ಲಿ ನೀಡಿದ್ದಾನೆ ಎಂದು ಇವು ಖಚಿತಪಡಿಸಲಿವೆ.

ಈಗಾಗಲೇ ಪ್ರಜ್ವಲ್ ರೇವಣ್ಣ ಬಳಿ ಇರುವ ವಸ್ತುಗಳುನ್ನು, ವಿಮಾನದಲ್ಲಿ ಬಂದ ಲಗ್ಗೇಜ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಜ್ವಲ್‌ ಬಳಸುತ್ತಿದ್ದ ಮೊಬೈಲ್ ಸೇರಿ ಆತನ ಬಳಿ ಇದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಇದು ಯಾವ ಮೊಬೈಲ್‌ ಎಂದು ಗೊತ್ತಾಗಿಲ್ಲ. ನಿನ್ನೆ ರಾತ್ರಿ ಎಸ್‌ಐಟಿ ಕಚೇರಿಯಲ್ಲಿಯೇ ಕಳೆದಿರುವ ಪ್ರಜ್ವಲ್‌ ಅವರನ್ನು ಇಂದು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಪ್ರಜ್ವಲ್‌ ಪರ ವಕೀಲರು ಈಗಾಗಲೇ ಪೊಲೀಸ್‌ ಕಸ್ಟಡಿ ನಿರಾಕರಿಸುವ ವಾದಗಳನ್ನು ಸಿದ್ಧ ಮಾಡಿಕೊಂಡಿದ್ದಾರೆ.

ಇಂದು ನಡೆಯಲಿದೆ ಪುರಯಷತ್ವ ಪರೀಕ್ಷೆ

ಪ್ರಕರಣದ ತನಿಖೆ ಹಾಗೂ ವಿಚಾರಣೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಎಸ್‌ಐಟಿ ನಡೆಸಿದೆ. ಒಂದು ವೇಳೆ, ವಿಡಿಯೋದಲ್ಲಿ ಇರುವಂಥ ಕಾಮಕಾಂಡ ತಾನೇನೂ ಮಾಡಿಲ್ಲ ಎಂದು ಪ್ರಜ್ವಲ್ ಅಫಿಡವಿಟ್ ಸಲ್ಲಿಸಿದರೆ, ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ತಾನು ಅತ್ಯಾಚಾರ ಮಾಡಿಲ್ಲ ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಸಾಧ್ಯತೆಯೂ ಇರುವುದರಿಂದ, ಮುಂದಿನ ಹಂತದಲ್ಲಿ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆಯನ್ನು ಎಸ್‌ಐಟಿ ಮಾಡಿಸಲಿದೆ.

ನಂತರ ಹಾಸನ ಸಂಸದರ ನಿವಾಸದಲ್ಲಿ ಸಂಗ್ರಹಿಸಲಾದ ಹಾಸಿಗೆ- ಹೊದಿಕೆ ಇತ್ಯಾದಿಗಳಲ್ಲಿ ಕಂಡುಬಂದಿರುವ ಡಿಎನ್‌ಎಗೂ, ಪ್ರಜ್ವಲ್‌ ಡಿಎನ್‌ಎಗೂ ಮ್ಯಾಚ್‌ ಮಾಡಲಾಗುತ್ತದೆ. ಒಟ್ಟು ಮೂರು ಹಂತದಲ್ಲಿ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಈ ಹಿಂದೆಯೂ ಅನೇಕರಿಗೆ ಅತ್ಯಾಚಾರ ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಸ್ವಾಮಿ ನಿತ್ಯಾನಂದ, ಮುರುಘಾ ಶ್ರೀ, ಅಸಾರಾಂ ಬಾಪು ಸೇರಿದಂತೆ ಹಲವರಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.

ಹಾಗಿದ್ರೆ ಹೇಗೆ ನಡೆಯುತ್ತೆ ಪುರುಷತ್ವ ಪರೀಕ್ಷೆ?

ಇದು ಲೈಂಗಿಕ ಸಾಮರ್ಥ್ಯ ಸಾಬೀತು ಪಡಿಸುವ ಪರೀಕ್ಷೆ. ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ದೂರುಗಳು ಕೇಳಿ ಬಂದಾಗ ಆರೋಪಿ ಪುರುಷತ್ವ ಪರೀಕ್ಷೆ ನಡೆಸಲಾಗುತ್ತೆ. ಪ್ರಾಥಮಿಕ ಹಂತದಲ್ಲಿ ಮೂರು ರೀತಿ ಪರೀಕ್ಷೆ ನಡೆಸಲಾಗುತ್ತದೆ.

1) ಪುರುಷರ ಜನನಾಂಗ ನಿಮಿರುವಿಕೆ, ವೀರ್ಯ ವಿಶ್ಲೇಷಣೆ, ಶಿಶ್ನಕ್ಕೆ ಪೂರೈಕೆಯಾಗುವ ರಕ್ತನಾಳಗಳ ಪರೀಕ್ಷೆಯನ್ನು ಮುಖ್ಯವಾಗಿ ನಡೆಸಲಾಗುತ್ತದೆ. ಆಂಡ್ರೋಲಜಿಸ್ಟ್ ಸೇರಿದಂತೆ ನಾಲ್ವರು ತಜ್ಞ ವೈದ್ಯರ ತಂಡ ಈ ಪರೀಕ್ಷೆ ನಡೆಸುತ್ತಾರೆ.

2) ನಂತರ ವೀರ್ಯ ವಿಶ್ಲೇಷಣೆ (A Semen Analysis) ನಡೆಯುತ್ತದೆ. ಪುರುಷನ ವೀರ್ಯ ಮತ್ತು ವೀರ್ಯಾಣುಗಳ ಗುಣಲಕ್ಷಣಗಳ ಮೌಲ್ಯಮಾಪನ ನಡೆಸುವ ಪರೀಕ್ಷೆ ಇದು.

3) ಡಾಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆ (Penile Doppler Ultrasound) ನಡೆಯಲಿದೆ. ಆರೋಪಿಯ ಖಾಸಗಿ ಅಂಗಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುತ್ತಿದೆಯೆ? ಕ್ತದ ಪ್ರಮಾಣ ಎಷ್ಟಿದೆ? ಎಂಬುದು ತಿಳಿಯುವ ಟೆಸ್ಟ್. ವಯಾಗ್ರಾದಂಥ ಮೆಡಿಸಿನ್ ಸೇವಿಸಿದರೂ ಕೂಡ ಈ ಪರೀಕ್ಷೆಯಲ್ಲಿ ಗೊತ್ತಾಗುತ್ತೆ.

4) Nocturnal Penile Tumescence (NPT) Test. ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುವ ಪರೀಕ್ಷೆ ಇದು. ಆರೋಪಿಯ ಖಾಸಗಿ ಅಂಗ ರಾತ್ರಿ ನಿದ್ರೆಯಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತೆ ಎಂದು ಎನ್‌ಪಿಟಿ ಪರೀಕ್ಷೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಈ ಪರೀಕ್ಷೆ ಸಾಮಾನ್ಯವಾಗಿ ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುತ್ತದೆ. ಆರೋಪಿಯ ಅರಿವಿಗೆ ಬಾರದಂತೆ ನಡೆಯುವ ಪರೀಕ್ಷೆ ಇದು. ಈ ಮೂರು ಟೆಸ್ಟ್ ಮೂಲಕ ಆರೋಪಿಯ ಪುರುಷತ್ವ ಪರೀಕ್ಷೆ ನಡೆಯುತ್ತವೆ. ಈ ಟೆಸ್ಟ್‌ನ ರಿಪೋರ್ಟ್‌ಗಳು ಅತ್ಯಾಚಾರ ಪ್ರಕರಣದಲ್ಲಿ ಬಹಳ ಮುಖ್ಯವಾಗುತ್ತವೆ.

ಇದನ್ನೂ ಓದಿ: Prajwal Revanna Case: ಮೇ 31ರಂದೇ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರಲು ಕಾರಣವೇನು? ಇಲ್ಲಿದೆ ಇಂಟರೆಸ್ಟಿಂಗ್‌ ಸ್ಟೋರಿ

Continue Reading

ಕ್ರೈಂ

Prajwal Revanna Case: ಪ್ರಜ್ವಲ್ ರೇವಣ್ಣಗೆ ಮೊದಲು ನಡೆಯೋದೇ ಆ ಟೆಸ್ಟ್‌ ! ಹೇಗೆ ನಡೆಯುತ್ತೆ ಪುರುಷತ್ವ ಪರೀಕ್ಷೆ?

Prajwal Revanna Case: ಪ್ರಕರಣದ ತನಿಖೆ ಹಾಗೂ ವಿಚಾರಣೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಎಸ್‌ಐಟಿ ನಡೆಸಿದೆ. ಒಂದು ವೇಳೆ, ವಿಡಿಯೋದಲ್ಲಿ ಇರುವಂಥ ಕಾಮಕಾಂಡ ತಾನೇನೂ ಮಾಡಿಲ್ಲ ಎಂದು ಪ್ರಜ್ವಲ್ ಅಫಿಡವಿಟ್ ಸಲ್ಲಿಸಿದರೆ, ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

VISTARANEWS.COM


on

prajwal revanna case airport arrest
Koo

ಬೆಂಗಳೂರು: ಅಶ್ಲೀಲ ವಿಡಿಯೋ (obscene video) ಹಾಗೂ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲಿ ನಿನ್ನೆ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda international airport) ಆರೆಸ್ಟ್ ಆಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassan MP Prajwal revanna Case) ಅವರನ್ನು ಇಂದು ಮೊದಲು ವೈದ್ಯಕೀಯ ಪರೀಕ್ಷೆಗೆ (Medical test) ಒಳಪಡಿಸಲು ಎಸ್‌ಐಟಿ (SIT) ಮುಂದಾಗಿದೆ. ಆರೋಪಿ ತನಿಖೆಗೆ ಸಹಕರಿಸಲು ದೈಹಿಕ- ಮಾನಸಿಕವಾಗಿ ಸಿದ್ಧನಾಗಿದ್ದಾನೆಯೇ ಎಂಬುದನ್ನು ಈ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ.

ಪ್ರಕರಣದ ತನಿಖೆ ಹಾಗೂ ವಿಚಾರಣೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಎಸ್‌ಐಟಿ ನಡೆಸಿದೆ. ಒಂದು ವೇಳೆ, ವಿಡಿಯೋದಲ್ಲಿ ಇರುವಂಥ ಕಾಮಕಾಂಡ ತಾನೇನೂ ಮಾಡಿಲ್ಲ ಎಂದು ಪ್ರಜ್ವಲ್ ಅಫಿಡವಿಟ್ ಸಲ್ಲಿಸಿದರೆ, ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ತಾನು ಅತ್ಯಾಚಾರ ಮಾಡಿಲ್ಲ ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಸಾಧ್ಯತೆಯೂ ಇರುವುದರಿಂದ, ಮುಂದಿನ ಹಂತದಲ್ಲಿ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆಯನ್ನು ಎಸ್‌ಐಟಿ ಮಾಡಿಸಲಿದೆ.

ನಂತರ ಹಾಸನ ಸಂಸದರ ನಿವಾಸದಲ್ಲಿ ಸಂಗ್ರಹಿಸಲಾದ ಹಾಸಿಗೆ- ಹೊದಿಕೆ ಇತ್ಯಾದಿಗಳಲ್ಲಿ ಕಂಡುಬಂದಿರುವ ಡಿಎನ್‌ಎಗೂ, ಪ್ರಜ್ವಲ್‌ ಡಿಎನ್‌ಎಗೂ ಮ್ಯಾಚ್‌ ಮಾಡಲಾಗುತ್ತದೆ. ಒಟ್ಟು ಮೂರು ಹಂತದಲ್ಲಿ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಈ ಹಿಂದೆಯೂ ಅನೇಕರಿಗೆ ಅತ್ಯಾಚಾರ ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಸ್ವಾಮಿ ನಿತ್ಯಾನಂದ, ಮುರುಘಾ ಶ್ರೀ, ಅಸಾರಾಂ ಬಾಪು ಸೇರಿದಂತೆ ಹಲವರಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.

ಹಾಗಿದ್ರೆ ಹೇಗೆ ನಡೆಯುತ್ತೆ ಪುರುಷತ್ವ ಪರೀಕ್ಷೆ?

ಇದು ಲೈಂಗಿಕ ಸಾಮರ್ಥ್ಯ ಸಾಬೀತು ಪಡಿಸುವ ಪರೀಕ್ಷೆ. ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ದೂರುಗಳು ಕೇಳಿ ಬಂದಾಗ ಆರೋಪಿ ಪುರುಷತ್ವ ಪರೀಕ್ಷೆ ನಡೆಸಲಾಗುತ್ತೆ. ಪ್ರಾಥಮಿಕ ಹಂತದಲ್ಲಿ ಮೂರು ರೀತಿ ಪರೀಕ್ಷೆ ನಡೆಸಲಾಗುತ್ತದೆ.

1) ಪುರುಷರ ಜನನಾಂಗ ನಿಮಿರುವಿಕೆ, ವೀರ್ಯ ವಿಶ್ಲೇಷಣೆ, ಶಿಶ್ನಕ್ಕೆ ಪೂರೈಕೆಯಾಗುವ ರಕ್ತನಾಳಗಳ ಪರೀಕ್ಷೆಯನ್ನು ಮುಖ್ಯವಾಗಿ ನಡೆಸಲಾಗುತ್ತದೆ. ಆಂಡ್ರೋಲಜಿಸ್ಟ್ ಸೇರಿದಂತೆ ನಾಲ್ವರು ತಜ್ಞ ವೈದ್ಯರ ತಂಡ ಈ ಪರೀಕ್ಷೆ ನಡೆಸುತ್ತಾರೆ.

2) ನಂತರ ವೀರ್ಯ ವಿಶ್ಲೇಷಣೆ (A Semen Analysis) ನಡೆಯುತ್ತದೆ. ಪುರುಷನ ವೀರ್ಯ ಮತ್ತು ವೀರ್ಯಾಣುಗಳ ಗುಣಲಕ್ಷಣಗಳ ಮೌಲ್ಯಮಾಪನ ನಡೆಸುವ ಪರೀಕ್ಷೆ ಇದು.

3) ಡಾಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆ (Penile Doppler Ultrasound) ನಡೆಯಲಿದೆ. ಆರೋಪಿಯ ಖಾಸಗಿ ಅಂಗಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುತ್ತಿದೆಯೆ? ಕ್ತದ ಪ್ರಮಾಣ ಎಷ್ಟಿದೆ? ಎಂಬುದು ತಿಳಿಯುವ ಟೆಸ್ಟ್. ವಯಾಗ್ರಾದಂಥ ಮೆಡಿಸಿನ್ ಸೇವಿಸಿದರೂ ಕೂಡ ಈ ಪರೀಕ್ಷೆಯಲ್ಲಿ ಗೊತ್ತಾಗುತ್ತೆ.

4) Nocturnal Penile Tumescence (NPT) Test. ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುವ ಪರೀಕ್ಷೆ ಇದು. ಆರೋಪಿಯ ಖಾಸಗಿ ಅಂಗ ರಾತ್ರಿ ನಿದ್ರೆಯಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತೆ ಎಂದು ಎನ್‌ಪಿಟಿ ಪರೀಕ್ಷೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಈ ಪರೀಕ್ಷೆ ಸಾಮಾನ್ಯವಾಗಿ ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುತ್ತದೆ. ಆರೋಪಿಯ ಅರಿವಿಗೆ ಬಾರದಂತೆ ನಡೆಯುವ ಪರೀಕ್ಷೆ ಇದು. ಈ ಮೂರು ಟೆಸ್ಟ್ ಮೂಲಕ ಆರೋಪಿಯ ಪುರುಷತ್ವ ಪರೀಕ್ಷೆ ನಡೆಯುತ್ತವೆ. ಈ ಟೆಸ್ಟ್‌ನ ರಿಪೋರ್ಟ್‌ಗಳು ಅತ್ಯಾಚಾರ ಪ್ರಕರಣದಲ್ಲಿ ಬಹಳ ಮುಖ್ಯವಾಗುತ್ತವೆ.

ಇದನ್ನೂ ಓದಿ: Prajwal Revanna Case: ಮೇ 31ರಂದೇ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರಲು ಕಾರಣವೇನು? ಇಲ್ಲಿದೆ ಇಂಟರೆಸ್ಟಿಂಗ್‌ ಸ್ಟೋರಿ

Continue Reading

ಪ್ರಮುಖ ಸುದ್ದಿ

Murder News : ಬಾಯ್​ಫ್ರೆಂಡ್​ ಜತೆ ಸೇರಿ ಅಪ್ಪ, ತಮ್ಮನನ್ನು ಕೊಂದು ಕತ್ತರಿಸಿ ಫ್ರಿಜ್​ನಲ್ಲಿಟ್ಟಿದ್ದ 16ರ ಬಾಲಕಿ

Murder News: ಬಾಲಕಿಯನ್ನು ಪಟ್ಟಣದಲ್ಲಿ ಪತ್ತೆ ಹಚ್ಚಿದ ಬಳಿಕ ಮಂಗಳವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ. ತಾನು ತನ್ನ ಗೆಳೆಯನೊಂದಿಗೆ ಹರಿದ್ವಾರಕ್ಕೆ ಬಂದಿದ್ದೇನೆ ಎಂದು ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾಳೆ

VISTARANEWS.COM


on

Murder News
Koo

ಡೆಹ್ರಾಡೂನ್: ತನ್ನ ಪ್ರೀತಿಗೆ ವಿರೋಧ ಮಾಡಿದ್ದ ತಂದೆ ಹಾಗೂ ತಮ್ಮನನ್ನು ಕೊಲೆ ಮಾಡಿ ತುಂಡಾಗಿ ಕತ್ತರಿಸಿ ಫ್ರಿಜ್​ನಲ್ಲಿಟ್ಟಿದ್ದ 16ರ ಬಾಲಕಿಯೊಬ್ಬಳನ್ನು (Murder News) ಹರಿದ್ವಾರ ಪೊಲೀಸರು ಬಂಧಿಸಿದ್ದಾರೆ. ಆಕೆ 19 ವರ್ಷದ ಬಾಯ್​ಫ್ರೆಂಡ್​ ಜತೆ ಸೇರಿಕೊಂಡು ಇಬ್ಬರನ್ನು ಕತ್ತರಿಸಿ ಫ್ರಿಜ್​ನಲ್ಲಿಟ್ಟು ಪರಾರಿಯಾಗಿದ್ದಳು. ಒಂದು ತಿಂಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು ಬಳಿಕ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಮಾರ್ಚ್ 15 ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಈ ಕೊಲೆ ನಡೆದಿದ್ದು, ಅಂದಿನಿಂದ ಬಾಲಕಿ ಪರಾರಿಯಾಗಿದ್ದಳು. ಆಕೆಯ 19 ವರ್ಷದ ಗೆಳೆಯ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯನ್ನು ಪಟ್ಟಣದಲ್ಲಿ ಪತ್ತೆ ಹಚ್ಚಿದ ಬಳಿಕ ಮಂಗಳವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ. ತಾನು ತನ್ನ ಗೆಳೆಯನೊಂದಿಗೆ ಹರಿದ್ವಾರಕ್ಕೆ ಬಂದಿದ್ದೇನೆ ಎಂದು ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.

19 ವರ್ಷದ ಯುವಕನೊಂದಿಗಿನ ಸಂಬಂಧವನ್ನು ಅಪ್ಪ ವಿರೋಧಿಸಿದ ಕಾರಣ ಅವರನ್ನು ಮೊದಲು ಕೊಂದಿದ್ದಳು. ಅದನ್ನು ನೋಡಿದ ಸಹೋದರನನ್ನೂ ಅಪರಾಧಕ್ಕೆ ಸಾಕ್ಷಿಯಾಗುತ್ತಾನೆ ಹೆದರಿ ಕೊಂದಿದ್ದಾರೆ ಎಂದು ದೋಭಾಲ್ ಹೇಳಿದ್ದಾರೆ. ಅವರು ಶವಗಳನ್ನು ತುಂಡುಗಳಾಗಿ ಕತ್ತರಿಸಿ ಫ್ರಿಜ್​ನಲ್ಲಿಟ್ಟು ತುಂಬಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಪ್ರಕಾರ ಆಕೆಯ ಗೆಳೆಯ ಕೊಗೆ ಸಂಚು ರೂಪಿಸಿದ್ದ. ಬಾಲಕಿಯನ್ನು ಮಧ್ಯಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಆಕೆಯ ಪ್ರಿಯಕರನಿಗಾಗಿ ಶೋಧ ನಡೆಯುತ್ತಿದೆ ಎಂದು ದೋಭಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ ಮರುಜೀವ ನೀಡಿದ ಪೊಲೀಸ್ ಅಧಿಕಾರಿ; ಮನ ಮಿಡಿಯೋ ವಿಡಿಯೊ ಇಲ್ಲಿದೆ

ಸಿಸಿಬಿ ತೆಕ್ಕೆಗೆ ವಕೀಲೆ ಚೈತ್ರಾ ಡೆತ್ ಕೇಸ್; 15 ದಿನಗಳ ಸಿಸಿಟಿವಿ ಪರಿಶೀಲನೆ

ಬೆಂಗಳೂರು: ವಕೀಲೆ ಚೈತ್ರಾ ಅವರ (Advocate Chaitra Gowda Case) ಸಾವು ಅವರ ಆಪ್ತರಿಗೆ ಇನ್ನೂ ಕೂಡ ನಿಗೂಢವಾಗಿಯೇ ಇದೆ. ಪೊಲೀಸರ ವರದಿಯಲ್ಲಿ ಇದೊಂದು ಆತ್ಮಹತ್ಯೆ ಎಂದರೂ ಕೂಡ ಅದನ್ನು ಚೈತ್ರಾ ಆಪ್ತರು ಒಪ್ಪುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಸಿಬಿ ತೆಕ್ಕೆಗೆ (Suspicious Death) ವಹಿಸಲಾಗಿದೆ.

ಇದೇ ತಿಂಗಳ ಮೇ 11ರಂದು ಚೈತ್ರಾ ಗೌಡ ಅವರ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದೊಂದದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಪೋಸ್ಟ್‌ ಮಾರ್ಟಮ್‌ ರಿಪೋರ್ಟ್‌ನಲ್ಲಿ ಚೈತ್ರಾ ಸಾವು ಆತ್ಮಹತ್ಯೆಯಿಂದಲೇ (Self Harming) ಆಗಿದೆ ಎಂಬುದು ದೃಢಪಟ್ಟಿತ್ತು. ಆದರೆ ಅವರ ಆಪ್ತ ವಲಯ ಚೈತ್ರಾಗೌಡ ಅವರ ಸಾವು ಸಹಜವಲ್ಲ ಎಂದು ಇಂದಿಗೂ ಕೂಡ ವಾದಿಸುತ್ತಲೆ ಇದೆ. ಹೀಗಾಗಿ ವಕೀಲರ ಸಂಘದವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಈ ಸಾವಿನ ಬಗ್ಗೆ ತನಿಖೆ ನಡೆಸಿ ಎಂದಿದ್ದರು. ಇದರ ಫಲವಾಗಿ ಪ್ರಕರಣದ ಹೆಚ್ಚಿನ ತನಿಖೆಗೆ ಪೊಲೀಸ್ ಆಯುಕ್ತರು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು ಮೊದಲು ಆಕೆಯ ಸಾವಿನ 15 ದಿನಗಳ ಹಿಂದಿನ ಸಿಸಿಟಿವಿಗಳನ್ನು ಕಲೆ ಹಾಕುವ ಕೆಲಸ ಶುರು ಮಾಡಿದೆ. ಜತೆಗೆ ಚೈತ್ರಾರ ಮೊಬೈಲ್‌ಗೆ ಬಂದ ಕರೆಗಳ ಸಿಡಿಆರ್‌ಗಳನ್ನು ಸಂಗ್ರಹಿಸಿದೆ. ಚೈತ್ರಾರಿಗೆ ಯಾರಾದರೂ ತೊಂದರೆ ಕೊಟ್ಟಿರುವುದು ಅಥವಾ ಬೆದರಿಕೆ ಹಾಕಿದ್ದರಾ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹೀಗಾಗಿ ಚೈತ್ರ ಗೌಡ ಅವರ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

Continue Reading
Advertisement
Viral Video
ವೈರಲ್ ನ್ಯೂಸ್47 seconds ago

Viral Video: KSRTC ಬಸ್‌ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರು! ಡ್ರೈವರ್‌ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

Donald Trump
ವಿದೇಶ6 mins ago

ʼಹಷ್‌ ಮನಿʼ ಪ್ರಕರಣದಲ್ಲಿ ಟ್ರಂಪ್‌ ದೋಷಿ; ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಅಮೆರಿಕದ ಮಾಜಿ ಅಧ್ಯಕ್ಷರಿಗೆ ಶತಕೋಟಿ ರೂ. ನಷ್ಟ

Nandamuri Balakrishna pushed incident Anjali breaks silence
South Cinema15 mins ago

Nandamuri Balakrishna: ವೇದಿಕೆ ಮೇಲೆ ತಳ್ಳಿದ್ದ ಬಾಲಯ್ಯ ಬಗ್ಗೆ ಕೊನೆಗೂ ಪ್ರತಿಕ್ರಿಯೆ ಕೊಟ್ಟ ನಟಿ ಅಂಜಲಿ!

T20 World Cup 2024
ಕ್ರಿಕೆಟ್16 mins ago

T20 World Cup 2024: ಟಿ20 ವಿಶ್ವಕಪ್​ ಪಂದ್ಯ ನಡೆಯುವ ತಾಣ,ಭಾರತದ ಪಂದ್ಯಗಳ ಪ್ರಸಾರದ ಮಾಹಿತಿ ಹೀಗಿದೆ

Shatru Bhairavi yaga ಶತ್ರು ಭೈರವಿ ಯಾಗ
ರಾಜಕೀಯ37 mins ago

ಮಾರಣ ಶತ್ರು ಭೈರವಿ ಯಾಗ ಎದುರಿಸಲು ರಕ್ಷಣಾಕವಚ ಮಾಡಿಸಿದ ಡಿಕೆಶಿ! ಹೀಗಿರುತ್ತೆ ನೋಡಿ ಯಾಗ

T20 World Cup 2024
ಕ್ರಿಕೆಟ್53 mins ago

T20 World Cup 2024: ಟಿ20 ವಿಶ್ವಕಪ್​ಗೆ ಕ್ಷಣಗಣನೆ; ಭಾರತ ಸೇರಿ ಬಲಿಷ್ಠ ತಂಡಗಳ ಪಂದ್ಯದ ವೇಳಾಪಟ್ಟಿ ಇಲ್ಲಿದೆ

Shilpa Shetty Shares Special Video From KD Kannada Movie
ಸ್ಯಾಂಡಲ್ ವುಡ್54 mins ago

Shilpa Shetty: ʻಕೆಡಿʼಸಿನಿಮಾ ಶೂಟಿಂಗ್‌ ಮುಗಿಸಿ ಹೊಸ ವಿಡಿಯೊ ಹಂಚಿಕೊಂಡ ಶಿಲ್ಪಾ ಶೆಟ್ಟಿ!

World No Tobacco Day
ಆರೋಗ್ಯ1 hour ago

World No Tobacco Day: ಇಂದು ವಿಶ್ವ ತಂಬಾಕು ರಹಿತ ದಿನ; ತಂಬಾಕು ಸೇವನೆಯಿಂದ ವರ್ಷಕ್ಕೆ 60 ಲಕ್ಷ ಜನರ ಸಾವು!

Air India Flight
ದೇಶ1 hour ago

Air India Flight: ಏರ್ ಇಂಡಿಯಾ ವಿಮಾನ 20 ಗಂಟೆ ವಿಳಂಬ; ಎಸಿ ಇಲ್ಲದೆ ಪ್ರಜ್ಞೆ ತಪ್ಪಿ ಬಿದ್ದ ಪ್ರಯಾಣಿಕರು

PM Narendra Modi
ದೇಶ1 hour ago

PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ21 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌