Cyber Crime: ದೇಶದ 81.5 ಕೋಟಿ ನಾಗರಿಕರ ಕೋವಿಡ್‌ ಪರೀಕ್ಷಾ ಮಾಹಿತಿ ರಹಸ್ಯ ಮಾರಾಟ! ನಿಮ್ಮದೂ ಇರಬಹುದು! - Vistara News

ಕ್ರೈಂ

Cyber Crime: ದೇಶದ 81.5 ಕೋಟಿ ನಾಗರಿಕರ ಕೋವಿಡ್‌ ಪರೀಕ್ಷಾ ಮಾಹಿತಿ ರಹಸ್ಯ ಮಾರಾಟ! ನಿಮ್ಮದೂ ಇರಬಹುದು!

Xನಲ್ಲಿ ಹ್ಯಾಂಡಲ್ ಹೊಂದಿರುವ ಸೈಬರ್‌ ದುಷ್ಕರ್ಮಿಯೊಬ್ಬ ಡಾರ್ಕ್ ವೆಬ್‌ನಲ್ಲಿ ಈ ಡೇಟಾ ಉಲ್ಲಂಘನೆಯ ಮಾಹಿತಿಯನ್ನು ಪ್ರಕಟಿಸಿದ್ದಾನೆ. ಇದು 81.5 ಕೋಟಿ ಭಾರತೀಯ ನಾಗರಿಕರ ದಾಖಲೆಗಳನ್ನು ಒಳಗೊಂಡಿದೆ.

VISTARANEWS.COM


on

cyber crime
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಬಳಿ ಇದ್ದ ಸುಮಾರು 81.5 ಕೋಟಿ ಭಾರತೀಯ ನಾಗರಿಕರ Covid-19 ಪರೀಕ್ಷಾ ಮಾಹಿತಿ ಮಾರಾಟವಾಗಿದೆ ಎಂಬ ರಹಸ್ಯ ಬಹಿರಂಗವಾಗಿದೆ. ಇದುವರೆಗೆ ಭಾರತದಲ್ಲಿ ನಡೆದಿರಬಹುದಾದ ಡೇಟಾ ಸೋರಿಕೆ ಅವ್ಯವಹಾರಗಳಲ್ಲೇ ಅತಿ ದೊಡ್ಡದು ಎಂದು ಈ ಪ್ರಕರಣವನ್ನು ಶಂಕಿಸಲಾಗಿದೆ.

ಘಟನೆಯ ಗಂಭೀರ ಸ್ವರೂಪವನ್ನು ಗಮನಿಸಿದರೆ, ಐಸಿಎಂಆರ್ ದೂರು ದಾಖಲಿಸಿದ ನಂತರ ಭಾರತದ ಪ್ರಧಾನ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಈ ವಿಷಯವನ್ನು ತನಿಖೆ ಮಾಡುವ ಸಾಧ್ಯತೆಯಿದೆ.

Xನಲ್ಲಿ ಹ್ಯಾಂಡಲ್ ಹೊಂದಿರುವ ಸೈಬರ್‌ ದುಷ್ಕರ್ಮಿಯೊಬ್ಬ ಡಾರ್ಕ್ ವೆಬ್‌ನಲ್ಲಿ ಈ ಡೇಟಾ ಉಲ್ಲಂಘನೆಯ ಮಾಹಿತಿಯನ್ನು ಪ್ರಕಟಿಸಿದ್ದಾನೆ. ಇದು 81.5 ಕೋಟಿ ಭಾರತೀಯ ನಾಗರಿಕರ ದಾಖಲೆಗಳನ್ನು ಒಳಗೊಂಡಿದೆ. ಇವರ ಹೆಸರುಗಳು, ಫೋನ್ ಸಂಖ್ಯೆಗಳು, ವಿಳಾಸಗಳು, ಆಧಾರ್ ಮತ್ತು ಪಾಸ್‌ಪೋರ್ಟ್ ಮಾಹಿತಿಗಳು ಸೋರಿಕೆಯಾಗಿವೆ. ಕೋವಿಡ್- 19 ಸಂದರ್ಭದಲ್ಲಿ ಮಾಡಲಾದ ವೈದ್ಯಕೀಯ ಪರೀಕ್ಷಾ ವಿವರಗಳಿಂದ ಈ ಡೇಟಾವನ್ನು ಹೊರತೆಗೆಯಲಾಗಿದೆಯಂತೆ. ಇದನ್ನು ICMRನಿಂದ ಪಡೆಯಲಾಗಿದೆ ಎಂದು ಈ ದುಷ್ಕರ್ಮಿ ಹೇಳಿಕೊಂಡಿದ್ದಾನೆ.

ಫೆಬ್ರವರಿಯಿಂದ ಐಸಿಎಂಆರ್ ಅನೇಕ ಸೈಬರ್ ದಾಳಿಯ ಪ್ರಯತ್ನಗಳನ್ನು ಎದುರಿಸಿದೆ. ಕೇಂದ್ರೀಯ ತನಿಖಾ ಏಜೆನ್ಸಿಗಳಿಗೆ ಇದು ತಿಳಿದಿತ್ತು. ಐಸಿಎಂಆರ್ ಸರ್ವರ್‌ಗಳನ್ನು ಹ್ಯಾಕ್ ಮಾಡಲು ಕಳೆದ ವರ್ಷ 6,000ಕ್ಕೂ ಹೆಚ್ಚು ಪ್ರಯತ್ನಗಳನ್ನು ಮಾಡಲಾಗಿದೆ. ಯಾವುದೇ ಡೇಟಾ ಸೋರಿಕೆಯನ್ನು ತಪ್ಪಿಸಲು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಏಜೆನ್ಸಿಗಳು ಐಸಿಎಂಆರ್ ಅನ್ನು ಕೇಳಿಕೊಂಡಿದ್ದವು.

CERT-In ಡೇಟಾ ಉಲ್ಲಂಘನೆಯ ಬಗ್ಗೆ ICMRಗೆ ಮಾಹಿತಿ ನೀಡಿದೆ. ಮಾರಾಟದಲ್ಲಿರುವ ಮಾದರಿ ಡೇಟಾದ ಪರಿಶೀಲನೆ, ICMRನ ನೈಜ ಡೇಟಾದೊಂದಿಗೆ ಹೊಂದಾಣಿಕೆಯಾಗುತ್ತದೆ ಎಂದೂ ಗೊತ್ತಾಗಿದೆ. ಕೇಂದ್ರ ತನಿಖಾ ಏಜೆನ್ಸಿಗಳು ಈ ಬಗ್ಗೆ ತನಿಖೆಗಿಳಿದಿವೆ.

ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ, ವಿವಿಧ ತನಿಖಾ ಏಜೆನ್ಸಿಗಳು ಮತ್ತು ಸಚಿವಾಲಯಗಳ ಎಲ್ಲಾ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಮಾಹಿತಿ ಸೋರಿಕೆಯಲ್ಲಿ ವಿದೇಶಿ ಶಕ್ತಿಗಳು ಶಾಮೀಲಾಗಿರುವುದರಿಂದ, ಅದನ್ನು ಪ್ರಧಾನ ತನಿಖಾ ಏಜೆನ್ಸಿಯಿಂದಲೇ ತನಿಖೆ ಮಾಡಬೇಕಿದೆ. ಪ್ರಸ್ತುತ ಹಾನಿ ತಡೆಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕೋವಿಡ್-19 ಪರೀಕ್ಷಾ ದತ್ತಾಂಶದ ಭಾಗಗಳು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ), ಐಸಿಎಂಆರ್ ಮತ್ತು ಆರೋಗ್ಯ ಸಚಿವಾಲಯದ ನಡುವೆ ಹಂಚಿಕೆಯಾಗಿವೆ. ಹೀಗಾಗಿ ಸೋರಿಕೆಯ ಕೇಂದ್ರಬಿಂದುವನ್ನು ಇನ್ನೂ ಗುರುತಿಸಲಾಗಿಲ್ಲ. ಆರಂಭದಲ್ಲಿ ಈ ಸೋರಿಕೆಯನ್ನು ಗಮನಿಸಿದ್ದು ಅಮೇರಿಕನ್ ಸೈಬರ್ ಸೆಕ್ಯುರಿಟಿ ಮತ್ತು ಗುಪ್ತಚರ ಸಂಸ್ಥೆ ರೆಸೆಕ್ಯುರಿಟಿ. ʻpwn0001′ ಎಂಬ ಅಲಿಯಾಸ್ ಹೆಸರಿನ ಮೂಲಕ ಸೈಬರ್‌ ದುಷ್ಕರ್ಮಿಯೊಬ್ಬ ಅಕ್ಟೋಬರ್ 9ರಂದು ಅಕ್ರಮ ಜಾಲತಾಣಗಳಲ್ಲಿ ಇದರ ಥ್ರೆಡ್ ಅನ್ನು ಪೋಸ್ಟ್ ಮಾಡಿದ್ದಾನೆ. 81.5 ಕೋಟಿ ಭಾರತೀಯ ನಾಗರಿಕರ ಆಧಾರ್ ಮತ್ತು ಪಾಸ್‌ಪೋರ್ಟ್ ದಾಖಲೆಗಳನ್ನು ಮಾರಿದ್ದಾನೆ.

ಭಾರತದ ಸಂಪೂರ್ಣ ಜನಸಂಖ್ಯೆ 148.6 ಕೋಟಿ. ಹೀಗಾಗಿ ಬಹುದೊಡ್ಡ ಸಂಖ್ಯೆಯ ಮಾಹಿತಿ ಸೋರಿಕೆಯಾಗಿದೆ. ಪುರಾವೆಯಾಗಿ ಆಧಾರ್ ಡೇಟಾದ ತುಣುಕುಗಳೊಂದಿಗೆ ನಾಲ್ಕು ದೊಡ್ಡ ಸೋರಿಕೆ ಮಾದರಿಗಳನ್ನು Pwn0001 ಹಂಚಿಕೊಂಡಿದೆ.

ಭಾರತದ ಆರೋಗ್ಯ ವ್ಯವಸ್ಥೆಯು ಹ್ಯಾಕರ್‌ಗಳಿಂದ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ AIIMS ಸೈಬರ್ ದಾಳಿಯನ್ನು ಎದುರಿಸಿತು. ಅದು ವಿವಿಧ ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಿತು. ಈ ದಾಳಿಯು “ಭಾರತದ ನೆರೆಯ ರಾಷ್ಟ್ರಗಳಲ್ಲಿ ಒಂದಕ್ಕೆ” ಸಂಪರ್ಕವನ್ನು ಹೊಂದಿದೆ ಎಂದು ಗೊತ್ತಾಗಿತ್ತು. ಏಜೆನ್ಸಿಗಳು ಅಲ್ಲಿನ ಐಪಿ ವಿಳಾಸವನ್ನು ಕಂಡುಹಿಡಿದಿದ್ದವು.

ನವೆಂಬರ್ 23ರಂದು ಸರ್ವರ್‌ಗಳು ಸ್ಥಗಿತಗೊಂಡಾಗ ತೊಂದರೆ ಪ್ರಾರಂಭವಾಯಿತು. ಹೊರರೋಗಿ ವಿಭಾಗ (OPD) ಮತ್ತು ಮಾದರಿ ಸಂಗ್ರಹ ಸೇವೆಗಳ ಮೇಲೆ ಪರಿಣಾಮ ಬೀರಿತು. ಕೆಲವು ದಿನಗಳ ನಂತರ, AIIMS ಅಂತಿಮವಾಗಿ ತನ್ನ OPD ಅನ್ನು ಆನ್‌ಲೈನ್ ಬುಕಿಂಗ್ ಮೂಲಕ ಮರುಪ್ರಾರಂಭಿಸಬೇಕಾಯಿತು.

ಇದನ್ನೂ ಓದಿ: Cyber Crime: ಬೆಂಗಳೂರಿನಲ್ಲಿ ಖತರ್ನಾಕ್ ಹ್ಯಾಕರ್ ಬಂಧನ; 4.16 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Suicide News : ಮಗನ ಕುಡಿತದ ಚಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅಪ್ಪ, ಅಮ್ಮ

Suicide News: ಮಗ ಪ್ರಶಾಂತನಿಗೆ ವರ್ಷಗಳ ಹಿಂದೆ ಮದುವೆ ಮಾಡಿದ್ದರು. ಆದರೆ ಮಗ ಕುಡಿತದಿಂದ ಮನೆ ಬರೋದು ಕಡಿಮೆ ಮಾಡಿದ್ದ, ಇದರಿಂದ ನೊಂದು ಕಳೆದ ಮೂರು ತಿಂಗಳ ಹಿಂದೆ ಪ್ರಶಾಂತನ ಹೆಂಡತಿ ಮನೆ ಬಿಟ್ಟು ತವರು ಮನೆ ಸೇರಿದ್ದರು. ಇದರಿಂದ‌ ಮಗನ‌ ಬಾಳು ಹೀಗಾಯಿತು ಎಂದು ನೊಂದು ಕೊಂಡಿದ್ದರು.

VISTARANEWS.COM


on

suicide news
Koo

ಬೆಂಗಳೂರು: ಮಗನ ಕುಡಿತದಿಂದ ಉಂಟಾಗಿರುವ ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಹಿರಿಯ ವಯಸ್ಸಿನ ಪೋಷಕರು ಆತ್ಮಹತ್ಯೆ (Suicide News ) ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಘಟನೆ ನಡೆದಿದೆ. ಚಂದ್ರಶೇಖರ್ (54) ಹಾಗೂ ಶಾರದಮ್ಮ ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಮಗ ಪ್ರಶಾಂತನಿಗೆ ವರ್ಷಗಳ ಹಿಂದೆ ಮದುವೆ ಮಾಡಿದ್ದರು. ಆದರೆ ಮಗ ಕುಡಿತದಿಂದ ಮನೆ ಬರೋದು ಕಡಿಮೆ ಮಾಡಿದ್ದ, ಇದರಿಂದ ನೊಂದು ಕಳೆದ ಮೂರು ತಿಂಗಳ ಹಿಂದೆ ಪ್ರಶಾಂತನ ಹೆಂಡತಿ ಮನೆ ಬಿಟ್ಟು ತವರು ಮನೆ ಸೇರಿದ್ದರು. ಇದರಿಂದ‌ ಮಗನ‌ ಬಾಳು ಹೀಗಾಯಿತು ಎಂದು ನೊಂದು ಕೊಂಡಿದ್ದರು.

ಸೋಮವಾ ಎರಡನೇ‌ ಮಗನನ್ನ ಅಂಗಡಿ ಕಳಿಸಿ ದಂಪತಿ ನೇಣಿಗೆ ಶರಣಾಗಿದ್ದರು. ಮಗ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರು ಹೊಸಕೋಟೆ ಮೂಲದವರು. ಅವರು ಹಲವು ವರ್ಷಗಳಿಂದ‌ ಹಳೆ ಬೈಯಪ್ಪನಹಳ್ಳಿ ಯಲ್ಲಿ ವಾಸ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲೊ ಕೂಲಿ ಕೆಲಸ ಮಾಡಿಕೊಂಡಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟವನಿಗೆ 20 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಅಪರಾಧಿಯೊಬ್ಬನಿಗೆ 20 ವರ್ಷಗಳ ಕಾಲ ಕಠಿಣ ಜೈಲುಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿದ 1ನೇ ತ್ವರಿತಗತಿ ನ್ಯಾಯಾಲಯ ಆದೇಶಿಸಿದೆ. ದೇವರಾಜ್ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ.

ಇದನ್ನೂ ಓದಿ: Hemant Nimbalkar: ವಾರ್ತಾ ಇಲಾಖೆ ಆಯುಕ್ತರಾಗಿ ಐಪಿಎಸ್​ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮರು ನೇಮಕ

ಆರೋಪಿ ದೇವರಾಜ್​ ಲಗ್ಗೆರೆ ನಿವಾಸಿಯಾಗಿದ್ದು, 2021ರಲ್ಲಿ ಬಾಲಕಿಯನ್ನ ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ. ಆತನ ವಿರುದ್ಧ ವಿರುದ್ಧ ಫೊಕ್ಸೊ ಕಾಯ್ದೆಯಡಿ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.. ಅಂದಿನ ಇನ್ ಸ್ಪೆಕ್ಟರ್ ವೆಂಕಟೇಗೌಡ ಅವರು ಆರೋಪಿಯನ್ನ ಬಂಧಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿ ಕೃತ್ಯವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಯನ್ನ ದೋಷಿ ನ್ಯಾಯಾಲಯ ಪರಿಗಣಿಸಿದೆ.

ಆರೋಪಿ ದೇವರಾಜ್​​ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಅದೇ ದಿನವೇ ಬಾಲಕಿಗೆ ಜ್ವರ ಬಂದಿದ್ದರಿಂದ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು ಬಾಲಕಿಯ ಗುಪ್ತಾಂಗಕ್ಕೆ ಬಲವಾದ ಏಟಾಗಿದೆ ಎಂದು ವರದಿ ನೀಡಿದ್ದರು. ಈ ಬಗ್ಗೆ ಪೋಷಕರು ಆಕೆಯನ್ನು ಪ್ರಶ್ನಿಸಿದಾಗ ಆರೋಪಿಯು ತನ್ನನ್ನು ಮನೆಗೆ ಕರೆದೊಯ್ದು ಕೃತ್ಯವೆಸಗಿರುವುದಾಗಿ ತಿಳಿಸಿದ್ದಳು.

ಈ ಸಂಬಂಧ ನಂದಿನಿಲೇಔಟ್ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಪೊಕ್ಸೊ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಪೊಲೀಸರು ಬಂಧಿಸಿದ್ದರು.

Continue Reading

ಕರ್ನಾಟಕ

Kolar News: ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಯುವಕನ ಬಂಧನ

Kolar News: ಕೋಲಾರ ಹೊರ ವಲಯದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

VISTARANEWS.COM


on

Kolar News
Koo

ಕೋಲಾರ: ಕಲಬುರಗಿ ಹಾಸ್ಟೆಲ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮಗುವಿಗೆ ಜನ್ಮ ನೀಡಿದ್ದು ಸುದ್ದಿಯಾದ ಬೆನ್ನಲ್ಲೇ ಅಂತಹುದೇ ಘಟನೆ ನಗರದಲ್ಲಿ ನಡೆದಿದೆ. ನಗರದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು (17) ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಕೋಲಾರ ಹೊರ ವಲಯದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಕಾಲೇಜಿನಲ್ಲಿದ್ದಾಗ ಹೊಟ್ಟೆ ನೋವೆಂದು ಶೌಚಾಲಯಕ್ಕೆ ಹೋಗಿದ್ದ ವಿದ್ಯಾರ್ಥಿನಿ ಅಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಆಕೆಗೆ ತಾನು ಗರ್ಭಿಣಿ ಎನ್ನುವುದು ಕೂಡ ಗೊತ್ತೆ ಇರಲಿಲ್ಲ ಎಂದು ತಿಳಿದುಬಂದಿದೆ.

ಸದ್ಯ ವಿದ್ಯಾರ್ಥಿಯನ್ನು ಆ‌ರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಪೊಲೀಸರು ಹುಡುಕಾಟ ನಡೆಸಿದಾಗ ಮುಳಬಾಗಿಲಿನ ಅನಿಲ್‌ ಕುಮಾರ್‌ (21) ಎಂಬಾತ ಬಾಲಕಿ ಗರ್ಭಿಣಿ ಆಗಲು ಕಾರಣ ಎಂದು ತಿಳಿದುಬಂದಿದೆ. ಆತನನ್ನು ನಗರದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯು ಶ್ರೀನಿವಾಸಪುರ ತಾಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು.

ಕಳೆದ ವರ್ಷ ಡಿಸೆಂಬ‌ರ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಹಾಸ್ಟೆಲ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ನವಜಾತ ಶಿಶುವಿನೊಂದಿಗೆ ವಿದ್ಯಾರ್ಥಿಯನ್ನು ಕಲಬುರಗಿಯ ಶಿಶು ಗೃಹಕ್ಕೆ ದಾಖಲಿಸಲಾಗಿತ್ತು. ನಂತರ ಪೊಲೀಸರು ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಬಾಲಕಿ ಮಗುವಿಗೆ ಜನ್ಮ ನೀಡಲು ಕಾರಣವಾದವನು ಅಪ್ರಾಪ್ತೆಯ ಸೋದರ ಸಂಬಂಧಿ ಎನ್ನುವುದು ಗೊತ್ತಾಗಿತ್ತು. ನಂತರ ಆತನನ್ನು ಪತ್ತೆ ಮಾಡಿ ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದರು.

ಇದನ್ನೂ ಓದಿ | Bomb Blast: ಜೋಯಿಡಾದಲ್ಲಿ ಪತ್ರಕರ್ತರು ಸಾಗುತ್ತಿದ್ದ ಕಾರಿನಡಿ ನಾಡ ಬಾಂಬ್ ಸ್ಫೋಟ

Krishna River Tragedy: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಮಂದಿ ನೀರುಪಾಲು, ಒಬ್ಬರ ಮೃತದೇಹ ಪತ್ತೆ

ವಿಜಯಪುರ: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಜನ ನೀರುಪಾಲಾಗಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ. ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿ ಕೃಷ್ಣಾ ನದಿಯಲ್ಲಿ ದುರ್ಘಟನೆ ನಡೆದಿದೆ. ನದಿ ಆಚೆಯ ನಡುಗಡ್ಡೆಗೆ ತೆರಳಿ ವಾಪಸ್‌ ಬರುತ್ತಿದ್ದ ವೇಳೆ ಘಟನೆ ನಡೆದಿದ್ದು, ಸ್ಥಳಕ್ಕೆ ಕೊಲ್ಹಾರ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹೆಚ್ಚುವರಿ ಎಸ್.ಪಿ. ಶಂಕರ ಮಾರಿಹಾಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳೀಯರು ಹಾಗೂ ಅಧಿಕಾರಿಗಳಿಂದ ನೀರು ಪಾಲಾದವರಿಗಾಗಿ (raft capsizes) ಶೋಧಕಾರ್ಯ ನಡೆಯುತ್ತಿದೆ.

ಅಂದರ್ ಬಾಹರ್ (ಇಸ್ಪೇಟ್) ಆಡುವಾಗ ಪೊಲೀಸರು ದಾಳಿ ನಡೆಸಿದ ವೇಳೆ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದಾಗ ಏಳೆಂಟು ಜನರು ನೀರುಪಾಲು ಆಗಿರುವ ಶಂಕೆ ವ್ಯಕ್ತವಾಗಿದೆ. ಅದರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಪುಂಡಲೀಕ ಯಂಕಂಚಿ (35) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಒಬ್ಬ ನದಿಯಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Bomb Blast: ಜೋಯಿಡಾದಲ್ಲಿ ಪತ್ರಕರ್ತರು ಸಾಗುತ್ತಿದ್ದ ಕಾರಿನಡಿ ನಾಡ ಬಾಂಬ್ ಸ್ಫೋಟ

ತೆಪ್ಪದಲ್ಲಿ ತೆರಳಿದವರು ಕೊಲ್ಹಾರ ಹಾಗೂ ಬಳೂತಿ ಗ್ರಾಮದವರು ಎನ್ನಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Continue Reading

ಕರ್ನಾಟಕ

Advocate G Devarajegowda: ಅತ್ಯಾಚಾರ ಕೇಸ್‌; ಜೈಲಿನಿಂದ ವಕೀಲ ದೇವರಾಜೇಗೌಡ ರಿಲೀಸ್‌

Advocate G Devarajegowda: ಹೈಕೋರ್ಟ್ ಏಕಸದಸ್ಯ ಪೀಠ ಸೋಮವಾರ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಇಂದು ದೇವರಾಜೇಗೌಡ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

VISTARANEWS.COM


on

Advocate G Devarajegowda
Koo

ಹಾಸನ: ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿದ್ದ ವಕೀಲ ದೇವರಾಜೇಗೌಡ (Advocate G Devarajegowda) ಜೈಲಿನಿಂದ ಮಂಗಳವಾರ ಬಿಡುಗಡೆಯಾಗಿದ್ದಾರೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾ. ಎಂ.ಜಿ.ಉಮಾ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಸೋಮವಾರ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಇಂದು ದೇವರಾಜೇಗೌಡ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜೂನ್ 5ರಂದು ಹಾಸನ ಜಿಲ್ಲಾ ನ್ಯಾಯಾಲಯಕ್ಕೆ ದೇವರಾಜೇಗೌಡ ಜಾಮೀನು ಅರ್ಜಿ ಸಲ್ಲಿಸಿದಾಗ ಕೋರ್ಟ್ ನಿರಾಕರಿಸಿತ್ತು. ಆದರೆ, ಹೈಕೋರ್ಟ್‌ ಜಾಮೀನು ನೀಡಿದ್ದರಿಂದ ಹಾಸನ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ದೇವರಾಜೇಗೌಡರನ್ನು ಬಿಡುಗಡೆ ಮಾಡಲಾಗಿದೆ.

2023ರ ಡಿ.29ರಂದು ರಂದು ಅತ್ಯಾಚಾರ ಮಾಡಿದ್ದಾರೆ ಎಂದು 2024ರ ಏ.1 ರಂದು ಸಂತ್ರಸ್ತೆ ದೂರು ನೀಡಿದ್ದರು. ಇದಕ್ಕೂ ಮೊದಲು ಹನಿಟ್ರ್ಯಾಪ್ ಎಂದು ದೇವರಾಜೇಗೌಡ ಮಾ.28 ರಂದು ದೂರು ನೀಡಿದ್ದರು. ಆದರೆ, ಮಾರ್ಚ್ 29 ರಂದು ದೇವರಾಜೇಗೌಡ ವಿರುದ್ಧ ಸಂತ್ರಸ್ತೆ ಪತಿ ದೂರು ನೀಡಿದ್ದರು. ಅದರಲ್ಲಿ ಅತ್ಯಾಚಾರದ ಬಗ್ಗೆ ಯಾವುದೇ ಚಕಾರವಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ದೇವರಾಜೇಗೌಡ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ಬಳಿಕ ವಕೀಲ ದೇವರಾಜೇಗೌಡಗೆ ನ್ಯಾ. ಎಂ.ಜಿ.ಉಮಾ ಅವರಿದ್ದ ಹೈಕೋರ್ಟ್ ಪೀಠ ಜಾಮೀನು ನೀಡಿ ಆದೇಶಿಸಿತ್ತು.

ಇದನ್ನೂ ಓದಿ | Krishna River Tragedy: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಮಂದಿ ನೀರುಪಾಲು, ಒಬ್ಬರ ಮೃತದೇಹ ಪತ್ತೆ

ವಕೀಲ ದೇವರಾಜೇಗೌಡ ಬಂಧನವಾಗಿದ್ದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು.

Continue Reading

ಕರ್ನಾಟಕ

Krishna River Tragedy: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಮಂದಿ ನೀರುಪಾಲು, ಒಬ್ಬರ ಮೃತದೇಹ ಪತ್ತೆ

Krishna River Tragedy: ಅಂದರ್‌ ಬಾಹರ್ (ಇಸ್ಪೇಟ್) ಆಡುವಾಗ ಪೊಲೀಸರು ದಾಳಿ ನಡೆಸಿದ ವೇಳೆ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದಾಗ ಏಳೆಂಟು ಜನರು ನೀರುಪಾಲು ಆಗಿರುವ ಶಂಕೆ ವ್ಯಕ್ತವಾಗಿದೆ.

VISTARANEWS.COM


on

Krishna River Tragedy
Koo

ವಿಜಯಪುರ: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಜನ ನೀರುಪಾಲಾಗಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ. ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿ ಕೃಷ್ಣಾ ನದಿಯಲ್ಲಿ ದುರ್ಘಟನೆ ನಡೆದಿದೆ. ನದಿ ಆಚೆಯ ನಡುಗಡ್ಡೆಗೆ ತೆರಳಿ ವಾಪಸ್‌ ಬರುತ್ತಿದ್ದ ವೇಳೆ ಘಟನೆ ನಡೆದಿದ್ದು, ಸ್ಥಳಕ್ಕೆ ಕೊಲ್ಹಾರ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹೆಚ್ಚುವರಿ ಎಸ್.ಪಿ. ಶಂಕರ ಮಾರಿಹಾಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳೀಯರು ಹಾಗೂ ಅಧಿಕಾರಿಗಳಿಂದ ನೀರು ಪಾಲಾದವರಿಗಾಗಿ (raft capsizes) ಶೋಧಕಾರ್ಯ ನಡೆಯುತ್ತಿದೆ.

ಅಂದರ್ ಬಾಹರ್ (ಇಸ್ಪೇಟ್) ಆಡುವಾಗ ಪೊಲೀಸರು ದಾಳಿ ನಡೆಸಿದ ವೇಳೆ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದಾಗ ಏಳೆಂಟು ಜನರು ನೀರುಪಾಲು ಆಗಿರುವ ಶಂಕೆ ವ್ಯಕ್ತವಾಗಿದೆ. ಅದರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಪುಂಡಲೀಕ ಯಂಕಂಚಿ (35) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಒಬ್ಬ ನದಿಯಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Bomb Blast: ಜೋಯಿಡಾದಲ್ಲಿ ಪತ್ರಕರ್ತರು ಸಾಗುತ್ತಿದ್ದ ಕಾರಿನಡಿ ನಾಡ ಬಾಂಬ್ ಸ್ಫೋಟ

ತೆಪ್ಪದಲ್ಲಿ ತೆರಳಿದವರು ಕೊಲ್ಹಾರ ಹಾಗೂ ಬಳೂತಿ ಗ್ರಾಮದವರು ಎನ್ನಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Sandalwood theft : ಶ್ರೀಗಂಧ ಕದಿಯಲು ಬಂದವನಿಗೆ ಗುಂಡೇಟು;‌ ಮತ್ತೊಬ್ಬ ಗಾಯಾಳು ಸೇರಿ ಹಲವರು ಪರಾರಿ

ಕೋಲಾರ : ಅರಣ್ಯ ಪ್ರದೇಶದಲ್ಲಿ ಶ್ರೀಗಂಧವನ್ನು ಕದಿಯಲು (Sandalwood theft) ಬಂದವನು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗುಂಡೇಟು ತಿಂದಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಾಶಿಪುರ ಅರಣ್ಯ ಪ್ರದೇಶದಲ್ಲಿ (Kashipura Forest) ಘಟನೆ ನಡೆದಿದೆ.

ತಾಯಲೂರು ಗ್ರಾಮದ ಭತ್ಯಪ್ಪ ಎಂಬಾತ ಕಾಲಿಗೆ ಗುಂಡು ತಗುಲಿದೆ. ಅರಣ್ಯ ಇಲಾಖೆ ರಕ್ಷಕ ಅನಿಲ್ ಗುಂಡು ಹಾರಿಸಿದ್ದಾರೆ. ಶ್ರೀಗಂಧ ಕಳ್ಳತನಕ್ಕೆ ಆಂಧ್ರಪ್ರದೇಶದ ಐದಾರು ಮಂದಿ ಜತೆಗೆ ಭತ್ಯಪ್ಪ ಬಂದಿದ್ದ. ಈ ವೇಳೆ ರಕ್ಷಕ ಅನಿಲ್ ಮೇಲೆ ಹಲ್ಲೆಗೆ ಮುಂದಾಗಿದ್ದ.

ರಕ್ಷಣೆಗಾಗಿ ಭತ್ಯಪ್ಪ ಹಾಗೂ ಮತ್ತೋರ್ವನಿಗೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಭತ್ಯಪ್ಪ ಸಿಕ್ಕಿಬಿದ್ದರೆ ಉಳಿದವರು ಕಾಲ್ಕಿತ್ತಿದ್ದಾರೆ. ಗಾಯಾಳು ಭತ್ಯಪ್ಪಗೆ ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Drowned In water : ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಈಜಲು ಹೋಗಿ ಕೊಚ್ಚಿ ಹೋದ ಮಾಜಿ ಸೈನಿಕ

ಕೋರ್ಟ್‌ ಆವರಣದಲ್ಲೇ ಡೆಡ್ಲಿ ಅಟ್ಯಾಕ್‌

ಕಲಬುರಗಿ ಕೋರ್ಟ್ ಆವರಣದಲ್ಲಿ ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯ ಬೆನ್ನತ್ತಿ ದುಷ್ಕರ್ಮಿಗಳು ತಲವಾರ್‌ನಿಂದ ದಾಳಿ ನಡೆಸಿದ್ದಾರೆ. ಧೀರಜ್ ಎಂಬಾತನ ಮೇಲೆ ತಲವಾರ್‌‌ನಿಂದ ದಾಳಿ ನಡೆಸಿದ್ದಾರೆ.

ತಲವಾರ್ ದಾಳಿಯಿಂದ ಧೀರಜ್‌ ಎಂಬಾತ ಗಾಯಗೊಂಡಿದ್ದು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇತ್ತ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ದುಷ್ಕರ್ಮಿಗಳನ್ನು ಸಾರ್ವಜನಿಕರು ಹಾಗೂ ವಕೀಲರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಸಂಬಂಧ ಪ್ರಶಾಂತ್ ಪಾಟೀಲ್ (20), ವಿರೇಶ್ ಪಾಟೀಲ್ (19), ರಾಮು ಪಾಟೀಲ್ (38) ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕಲಬುರಗಿ ನಗರದ ಬಾಪುನಗರ ಬಡಾವಣೆಯ ನಿವಾಸಿಗಳು ಎನ್ನಲಾಗಿದೆ. ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Sour Curd
ಆರೋಗ್ಯ18 mins ago

Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

Dina Bhavishya
ಭವಿಷ್ಯ18 mins ago

Dina Bhavishya : ಒತ್ತಡಗಳು ದೂರವಾಗಿ ಹರ್ಷದಿಂದ ಕಾಲ ಕಳೆಯುವಿರಿ

ಆಟೋಮೊಬೈಲ್4 hours ago

Mahindra Scorpio N : ಮಹೀಂದ್ರಾ ತನ್ನ ಸ್ಕಾರ್ಪಿಯೋ-ಎನ್ Z8 ವೇರಿಯೆಂಟ್​ನಲ್ಲಿ ನೀಡಿದ ಹಲವು ಫೀಚರ್​ಗಳು

suicide news
ಕರ್ನಾಟಕ5 hours ago

Suicide News : ಮಗನ ಕುಡಿತದ ಚಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅಪ್ಪ, ಅಮ್ಮ

Aditya L1
ದೇಶ5 hours ago

Aditya L1: ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದ ಆದಿತ್ಯ ಎಲ್‌ 1; ಇಸ್ರೋಗೆ ಭಾರಿ ಮುನ್ನಡೆ

David Miller :
ಪ್ರಮುಖ ಸುದ್ದಿ6 hours ago

David Miller : ಸೋಲಿನ ಬೇಸರದಲ್ಲಿ ವಿದಾಯ ಹೇಳಿದರೇ ಮಿಲ್ಲರ್​​; ದಕ್ಷಿಣ ಆಫ್ರಿಕಾ ಆಟಗಾರನ ಪ್ರತಿಕ್ರಿಯೆ ಏನು?

Sudha Murty
ದೇಶ6 hours ago

Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!

Physical Abuse
ಕರ್ನಾಟಕ7 hours ago

Physical Abuse : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

Mahua Moitra
ಪ್ರಮುಖ ಸುದ್ದಿ7 hours ago

Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Viral Video
Latest8 hours ago

Viral Video: ಲೈವ್‌ ವರದಿ ಮಾಡುತ್ತಿದ್ದಾಗ ಪಾಕ್ ಟಿವಿ ವರದಿಗಾರ್ತಿ ಮೇಲೆ ಗೂಳಿ ದಾಳಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ10 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌