Cyber Crime: ಆನ್‌ಲೈನ್‌ ವಂಚನೆಗೆ ಇನ್ನೊಂದು ಬಲಿ; ಮೆಸೇಜ್‌ ಕ್ಲಿಕ್‌ ಮಾಡಿ 2 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆ - Vistara News

ಕ್ರೈಂ

Cyber Crime: ಆನ್‌ಲೈನ್‌ ವಂಚನೆಗೆ ಇನ್ನೊಂದು ಬಲಿ; ಮೆಸೇಜ್‌ ಕ್ಲಿಕ್‌ ಮಾಡಿ 2 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆ

Cyber Crime: ದೇಶದಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಜತೆಗೆ ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣವೂ ವೃದ್ಧಿಸುತ್ತಿದೆ. ಇದಕ್ಕೆ ಇನ್ನೊಂದು ಉದಾಹರಣೆ ಮುಂಬೈಯ 18 ವರ್ಷದ ಹದಿಹರೆಯದ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ. ಲಿಂಕ್‌ ಕಳುಹಿಸಿ ವಂಚಕರು ಯುವಕನ ತಂದೆಯ ಅಕೌಂಟ್‌ನಿಂದ 2 ಲಕ್ಷ ರೂ. ದೋಚಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

VISTARANEWS.COM


on

cyber crime
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸೈಬರ್‌ ಅಪರಾಧ (Cyber Crime)ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಇದಕ್ಕೆ ಇಲ್ಲಿದೆ ಮತ್ತೊಂದು ತಾಜಾ ಉದಾಹರಣೆ. ತನ್ನ ತಾಯಿಯ ಮೊಬೈಲ್‌ನಲ್ಲಿ ಗೇಮ್‌ ಆಡುತ್ತಿದ್ದ 18 ವರ್ಷದ ಯುವಕ ಆನ್‌ಲೈನ್‌ ವಂಚನೆಗೆ ಬಲಿಯಾಗಿದ್ದ. ವಂಚಕರು ಲಿಂಕ್‌ ಕಳುಹಿಸಿ ಆತನ ತಂದೆಯ ಬ್ಯಾಂಕ್‌ ಅಕೌಂಟ್‌ನಿಂದ ಸುಮಾರು 2 ಲಕ್ಷ ರೂ. ದೋಚಿದ್ದರು. ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆಘಾತಕಾರಿ ಘಟನೆ ಮುಂಬೈಯಲ್ಲಿ ನಡೆದಿದೆ.

ಘಟನೆ ವಿವರ

ಮುಂಬೈನ ನಲಸೊಪರದ ಈ ಯುವಕ ಎಂದಿನಂತೆ ಬುಧವಾರ (ಏಪ್ರಿಲ್‌ 3) ತನ್ನ ತಾಯಿಯ ಮೊಬೈಲ್‌ನಲ್ಲಿ ಗೇಮ್‌ ಆಡುತ್ತಿದ್ದ. ಆಗ ವಂಚಕರು ಲಿಂಕ್‌ ಒಂದನ್ನು ಆ ಮೊಬೈಲ್‌ಗೆ ಕಳುಹಿಸಿದ್ದರು. ಆತ ತಪ್ಪಿ ಆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದ್ದ. ಇದರಿಂದ ವಂಚಕರು ಆತನ ತಂದೆಯ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಅಕೌಂಟ್‌ನಿಂದ 2 ಲಕ್ಷ ರೂ. ಡ್ರಾ ಮಾಡಿದ್ದರು. ತಾನು ವಂಚನೆಗೊಳಗಾದ ವಿಷಯ ಅರಿವಿಗೆ ಬರುತ್ತಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ʼʼಹನ್ನೊಂದನೇ ತರಗತಿಯ ವಿದ್ಯಾರ್ಥಿ ಫೋನ್‌ಗೆ ಬಂದ ನಕಲಿ ಎಸ್ಎಂಎಸ್ ಅನ್ನು ಕ್ಲಿಕ್ ಮಾಡಿದ್ದಾನೆ. ಕೆಲವೇ ನಿಮಿಷಗಳಲ್ಲಿ, ಆತನ ತಂದೆಯ ಖಾತೆಯಿಂದ 2 ಲಕ್ಷ ರೂ.ಗಳನ್ನು ಡೆಬಿಟ್ ಮಾಡಲಾಗಿದೆ ಎಂದು ಮತ್ತೊಂದು ಸಂದೇಶ ಬಂದಿದೆ. ಇದರಿಂದ ಆತ ಗಾಬರಿಗೊಳಗಾಗಿ ಈ ಕೃತ್ಯ ಎಸಗಿದ್ದಾನೆ. ನಗದು ಡ್ರಾ ಆಗಿರುವ ಬಗ್ಗೆ ಬ್ಯಾಂಕ್‌ನಿಂದ ಬಂದ ಮೆಸೇಜ್‌ ಕುರಿತು ಆತ ಯಾರಿಗೂ ತಿಳಿಸಿರಲಿಲ್ಲ. ಮಗ ಮೃತಪಟ್ಟ ಬಳಿಕ ಮಹಿಳೆ ಈ ಮೆಸೇಜ್‌ ಗಮನಿಸಿದ್ದರುʼʼ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಹೆತ್ತವರು ನಿಂದಿಸುತ್ತಾರೆ ಎನ್ನುವ ಭಯದಿಂದ ಆತ ಕೀಟನಾಶಕವನ್ನು ಸೇವಿಸಿದ್ದ. ಆತನ ಬಾಯಿಯಲ್ಲಿ ನೊರೆ ಬರಲು ಪ್ರಾರಂಭಿಸಿದಾಗ ತಾಯಿ ಕೂಡಲೇ ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ʼʼಯಾವುದೇ ಡೆತ್‌ ನೋಟ್‌ ಪತ್ತೆಯಾಗದ ಕಾರಣ, ಸೈಬರ್ ವಂಚನೆಯ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮೊಬೈಲ್‌ ಫೋನ್ ಅನ್ನು ಪರೀಕ್ಷೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಯುವಕ ತನ್ನ ತಂದೆ-ತಾಯಿ ಮತ್ತು ಕಿರಿಯ ಸಹೋದರನೊಂದಿಗೆ ವಾಸವಾಗಿದ್ದ.

ಇದನ್ನೂ ಓದಿ: Cyber Crime: ಕಾಣೆಯಾದ ಮಗು ಸಿಕ್ಕಿದೆ ಎಂದು 900 ಕುಟುಂಬಗಳಿಂದ ಹಣ ವಸೂಲಿ ಮಾಡಿದರು!

ʼʼಒಂದು ವೇಳೆ ಆ ಯುವಕ ಅಕೌಂಟ್‌ನಿಂದ ಹಣ ವಿತ್‌ ಡ್ರಾ ಆಗಿರುವ ಬಗ್ಗೆ ಹೇಳಿಕೊಂಡಿದ್ದರೆ ಅದನ್ನು 24 ಗಂಟೆಯೊಳಗೆ ಮರಳಿ ಪಡೆಯಬಹುದಿತ್ತುʼʼ ಎಂದು ಪೊಲೀಸರು ತಿಳಿಸಿದ್ದಾರೆ. ʼʼಕೂಡಲೇ ಬ್ಯಾಂಕ್‌ ಅಧಿಕಾರಿಗಳನ್ನು ಸಂಪರ್ಕಿಸಿ ಹಣ ವರ್ಗಾವಣೆಯನ್ನು ಸ್ಥಗಿತಗೊಳಿಸುವ ವ್ಯವಸ್ಥೆ ಇದೆ. ದೇಶಾದ್ಯಂತ ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹದಿಹರೆಯದವರು ಮತ್ತು ಹಿರಿಯ ನಾಗರಿಕರೇ ವಂಚಕರ ಗುರಿ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕುʼʼ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!

Prajwal Revanna Case: ಪ್ರಜ್ವಲ್‌ ರೇವಣ್ಣ ಮೇಲೆ ಕೇಸ್‌ ದಾಖಲಾಗಿ 17 ದಿನವೇ ಗತಿಸಿಹೋಗಿದೆ. ಇನ್ನು ಈ ಕೇಸ್‌ಗೆ ಸಂಬಂಧಿಸಿ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿದ ಆರೋಪ ಎದುರಿಸಿ ಎಚ್‌.ಡಿ. ರೇವಣ್ಣ ಜೈಲು ಸೇರಿದ್ದರೂ ಆ ಕಡೆ ಭವಾನಿ ಕಣ್ಣೆತ್ತಿಯೂ ನೋಡಿಲ್ಲ. ಇನ್ನು ಇದೇ ಕೇಸ್‌ ವಿಚಾರವಾಗಿ ಎಸ್ಐಟಿ ಎರಡು ಬಾರಿ ನೋಟಿಸ್‌ ಕೊಟ್ಟರೂ ಡೋಂಟ್‌ ಕೇರ್‌ ಎಂಬಂತೆ ಕುಳಿತುಬಿಟ್ಟಿದ್ದಾರೆ. ಪ್ರಜ್ವಲ್ ರೀತಿಯಲ್ಲಿ ತಾಯಿಯೂ ವಿಚಾರಣೆಗೆ ಬರಲು ಹಿಂದೇಟು ಹಾಕಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ರೇವಣ್ಣ ಅವರಿಗೆ ಜಾಮೀನು ಸಿಕ್ಕರೂ ಖುಷಿ ವ್ಯಕ್ತಪಡಿಸೋಕೆ ಕೂಡಾ ಅವರು ಕಾಣಿಸಿಕೊಳ್ಳಲಿಲ್ಲ. ಇದೆಲ್ಲವೂ ದೇವೇಗೌಡರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಸಂಬಂಧ ಎಚ್‌.ಡಿ. ರೇವಣ್ಣ ಅವರ ಬಳಿ ವಿಸ್ತೃತವಾಗಿ ಚರ್ಚೆ ಮಾಡಿ ತಾಕೀತು ಮಾಡಿದ್ದಾರೆನ್ನಲಾಗಿದೆ.

VISTARANEWS.COM


on

Prajwal Revanna Case Deve Gowda lashes out at Bhavani
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣ ಹಾಗೂ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭವಾನಿ ರೇವಣ್ಣ (Bhavani Revanna) ಅವರ ನಡೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (HD Devegowda) ಗರಂ ಆಗಿದ್ದಾರೆ ಎನ್ನಲಾಗಿದೆ. ಇನ್ನು ಮುಂದೆ ಕುಟುಂಬಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೋ, ಅವರಿಗೆ ಆ ನಿಟ್ಟಿನಲ್ಲಿ ಯಾವ ರೀತಿ ಎಚ್ಚರಿಕೆ ನೀಡುತ್ತೀಯೋ ನಿನಗೆ ಬಿಟ್ಟಿದ್ದು ಎಂಬುದಾಗಿ ಪುತ್ರ ಎಚ್.ಡಿ. ರೇವಣ್ಣ ಅವರಿಗೆ ಕಡ್ಡಿ ಮುರಿದಂತೆ ಹೇಳಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್‌ ರೇವಣ್ಣ ಮೇಲೆ ಕೇಸ್‌ ದಾಖಲಾಗಿ 17 ದಿನವೇ ಗತಿಸಿಹೋಗಿದೆ. ಇನ್ನು ಈ ಕೇಸ್‌ಗೆ ಸಂಬಂಧಿಸಿ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿದ ಆರೋಪ ಎದುರಿಸಿ ಎಚ್‌.ಡಿ. ರೇವಣ್ಣ ಜೈಲು ಸೇರಿದ್ದರೂ ಆ ಕಡೆ ಭವಾನಿ ಕಣ್ಣೆತ್ತಿಯೂ ನೋಡಿಲ್ಲ. ಇನ್ನು ಇದೇ ಕೇಸ್‌ ವಿಚಾರವಾಗಿ ಎಸ್ಐಟಿ ಎರಡು ಬಾರಿ ನೋಟಿಸ್‌ ಕೊಟ್ಟರೂ ಡೋಂಟ್‌ ಕೇರ್‌ ಎಂಬಂತೆ ಕುಳಿತುಬಿಟ್ಟಿದ್ದಾರೆ. ಪ್ರಜ್ವಲ್ ರೀತಿಯಲ್ಲಿ ತಾಯಿಯೂ ವಿಚಾರಣೆಗೆ ಬರಲು ಹಿಂದೇಟು ಹಾಕಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ರೇವಣ್ಣ ಅವರಿಗೆ ಜಾಮೀನು ಸಿಕ್ಕರೂ ಖುಷಿ ವ್ಯಕ್ತಪಡಿಸೋಕೆ ಕೂಡಾ ಅವರು ಕಾಣಿಸಿಕೊಳ್ಳಲಿಲ್ಲ. ಅಲ್ಲದೆ, ದೇವೇಗೌಡರ ಮನೆಯತ್ತಲೂ ಸುಳಿಯಲಿಲ್ಲ. ಇದು ದೇವೇಗೌಡರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗಿದೆ. ತಾವು ಗಳಿಸಿಟ್ಟ ಗೌರವ, ಹೆಸರನ್ನು ಮಣ್ಣು ಪಾಲಾಗಲು ಬಿಡುವುದಿಲ್ಲ. ಆ ರೀತಿ ಮಾಡಲು ಇನ್ನು ಮುಂದೆ ಅವಕಾಶವನ್ನೂ ಕೊಡುವುದಿಲ್ಲ ಎಂದು ಗುಡುಗಿದ್ದಾರೆನ್ನಲಾಗಿದೆ.

ದೇವೇಗೌಡರ ಕುಟುಂಬಕ್ಕೆ ತಲೆ ನೋವಾದ ಭವಾನಿ ರೇವಣ್ಣ!

ಹಾಗಾದರೆ ಭವಾನಿ ಅವರಿಗೆ ಎಚ್.ಡಿ. ರೇವಣ್ಣ ಅವರ ಮೇಲೆಯೂ ಪ್ರೀತಿ ಇಲ್ಲವೇ? ದೇವೇಗೌಡರ ಬಗ್ಗೆ ಭಯವಿಲ್ಲವೇ? ಯಾಕಿಷ್ಟು ಮೊಂಡುತನವನ್ನು ತೋರುತತಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ. ಪತಿಯ ಮೇಲೆ ಪ್ರೀತಿ ಇದ್ದಿದ್ದರೆ ಅವರು ಜೈಲು ಸೇರಿದಾಗ ಬೆಂಬಲಕ್ಕೆ ನಿಲ್ಲಬೇಕಿತ್ತು. ನಿಮ್ಮ ಜತೆಗೆ ನಾನಿದ್ದೇನೆ, ಹೆದರಬೇಡಿ ಎಂದು ಬೆನ್ನಿಗೆ ನಿಲ್ಲಬೇಕಿತ್ತು. ಆಸರೆಯ ಮಾತನಾಡಬೇಕಿತ್ತು. ಆದರೆ, ಈ ಯಾವುದನ್ನೂ ಮಾಡದ ಭವಾನಿ, ತಮ್ಮ ಸೇಫ್‌ ಅನ್ನು ಮಾತ್ರವೇ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ಪುತ್ರ ಪ್ರಜ್ವಲ್ ಸಹ ತಂದೆ ಜೈಲುಪಾಲಾದರೂ ನನಗೇನು ಎಂಬ ರೀತಿಯಲ್ಲಿ ವಿದೇಶವನ್ನು ಬಿಟ್ಟು ಹೊರ ಬರುತ್ತಿಲ್ಲ. ಇದೆಲ್ಲವೂ ದೇವೇಗೌಡರಿಗೆ ಸಿಟ್ಟು ತರಿಸಿದೆ ಎನ್ನಲಾಗಿದೆ.

ಅಮ್ಮ – ಮಗನ ಆಟಕ್ಕೆ ರೇವಣ್ಣ ಬಲಿ ಎಂದು ಅಸಮಾಧಾನ

ಸಾಮಾನ್ಯವಾಗಿ ಪುತ್ರನ ಕುಟುಂಬದ ವ್ಯವಹಾರಗಳಿಗೆ ತಲೆ ಹಾಕದ ಎಚ್.ಡಿ. ದೇವೇಗೌಡರು, ಈ ಪ್ರಕರಣದಲ್ಲಿ ತಮ್ಮ ಹಾಗೂ ಕುಟುಂಬದ ಹೆಸರು ಮಣ್ಣುಪಾಲಾಗುತ್ತಿರುವುದನ್ನು ಕಂಡು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ರೇವಣ್ಣ ಅವರನ್ನು ಕರೆದು ಒಂದಷ್ಟು ಬುದ್ಧಿ ಮಾತುಗಳನ್ನು ಹೇಳಿದ್ದಾರೆ. ಅಮ್ಮ – ಮಗನ ಆಟಕ್ಕೆ ನೀನು ಬಲಿಯಾಗುತ್ತಿರುವೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ನಿನ್ನ ಕಷ್ಟದ ಕಾಲದಲ್ಲಿಯೂ ಭವಾನಿ ಸಾಥ್‌ ಕೊಡಲಿಲ್ಲವೆಂದರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ನಿನ್ನ ಒಳ್ಳೆಯತನವೇ ಮುಳುವಾಯಿತು ಎಂದು ಎಚ್‌.ಡಿ. ದೇವೇಗೌಡ ಕಿಡಿಕಾರಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Prajwal Revanna Case: ನಿಮ್ಮ ಸರ್ಕಾರದ ಮೇಲೆ ಮಹಿಳೆಯರು ವಿಶ್ವಾಸ ಇಡಬಹುದೇ? ಸಿದ್ದರಾಮಯ್ಯಗೆ ಸಾಹಿತಿಗಳ ಬಹಿರಂಗ ಪತ್ರ!

ಕರೆದು ಬುದ್ಧಿ ಹೇಳು, ಮತ್ತೆ ಹೀಗಾಗದಂತೆ ನೋಡಿಕೋ!!

ಭವಾನಿ ಮತ್ತು ಮಕ್ಕಳು ಏನು ಬೇಕಿದ್ದರೂ ಮಾಡಿಕೊಳ್ಳಲಿ. ಆದರೆ, ಇನ್ನು ಮುಂದೆ ಕುಟುಂಬಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಿ. ಈ ಬಗ್ಗೆ ಸಮಯ ನೋಡಿ ಅವರೆಲ್ಲರಿಗೂ ಎಚ್ಚರಿಕೆ ಕೊಡು. ಪ್ರಜ್ವಲ್ ವಿದೇಶದಿಂದ ಬಂದು ಕೋರ್ಟ್‌ನಿಂದ ಜಾಮೀನು ಪಡೆದ ಸಾರ್ವಜನಿಕ ಜೀವನದಲ್ಲಿ ಎಚ್ಚರಿಕೆಯಿಂದ ಇರಬೇಕು. ಈ ನಿಟ್ಟಿನಲ್ಲಿ ನೀನು ಜವಾಬ್ದಾರಿಯಿಂದ ನೋಡಿಕೊ ಎಂದು ಎಚ್.ಡಿ. ರೇವಣ್ಣ ಅವರಿಗೆ ಎಚ್.ಡಿ. ದೇವೇಗೌಡ ತಾಕೀತು ಮಾಡಿದ್ದಾರೆ.

Continue Reading

ಕ್ರೈಂ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಈ ಬಗ್ಗೆ ಜರ್ಮನಿ ಮ್ಯೂನಿಕ್ ಏರ್‌ಪೋರ್ಟ್‌ನಿಂದ ವಿಸ್ತಾರ ನ್ಯೂಸ್‌ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಬೆಂಗಳೂರಿಗೆ ಬರುವ ಫ್ಲೈಟ್‌ನಲ್ಲಿ ಪ್ರಜ್ವಲ್‌ ಹತ್ತಿಲ್ಲ ಎಂಬ ಸಂಗತಿ ಗೊತ್ತಾಗಿದೆ. ಎಲ್ಲ ಪ್ರಯಾಣಿಕರಿಗೆ ಫ್ಲೈಟ್‌ ಹತ್ತಲು ಬೋರ್ಡಿಂಗ್‌ ಕ್ಲೋಸ್‌ ಆಗಿತ್ತು. 3.35ಕ್ಕೆ ಲುಫ್ತಾನ್ಸಾ ಏರ್‌ಲೈನ್ಸ್ LH764 ಟೇಕ್‌ ಆಫ್‌ ಆಗಿದೆ. ಈ ನಡುವೆ ಇನ್ನು ಸಿಬಿಐ ಮೂಲಕ ಇಂಟರ್‌ಪೋಲ್‌ನಿಂದ ಬ್ಲೂ ಕಾರ್ನರ್ ನೋಟಿಸ್‌ ಕೂಡಾ ಜಾರಿ ಮಾಡಲಾಗಿದ್ದು, ಕಾನೂನಿಗೆ ಡೋಂಟ್‌ ಕೇರ್ ಎಂದು ಪ್ರಜ್ವಲ್ ಹೇಳುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.

VISTARANEWS.COM


on

Prajwal Revanna Case Prajwal never boarded a flight from Germany
Koo

ಬೆಂಗಳೂರು: ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ (Prajwal Revanna Case) ಎಸ್‌ಐಟಿ ಮೋಸ್ಟ್ ವಾಂಟೆಡ್‌ ಲಿಸ್ಟ್‌ನಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣ, ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಎಂಬುದು ಸುಳ್ಳಾಗಿದೆ. ಅವರು ಜರ್ಮನಿ ಮ್ಯೂನಿಕ್ ಏರ್‌ಪೋರ್ಟ್‌ನ ಲಾಂಜ್‌ನಲ್ಲಿಯೇ ಕಾಣಿಸಿಕೊಂಡಿಲ್ಲ ಎಂಬ ಸಂಗತಿ ಗೊತ್ತಾಗಿದೆ. ಅಲ್ಲದೆ, ಫ್ಲೈಟ್‌ ಟೇಕ್‌ ಆಫ್‌ ಆಗಿದ್ದರೂ ಅವರು ಅವರು ಅತ್ತ ಸುಳಿದಿಲ್ಲ. ಹೀಗಾಗಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಟಿಕೆಟ್‌ ಮಾಡಿಸಿಯೂ ಅವರು ವಿಮಾನವನ್ನು ಹತ್ತಿಲ್ಲ ಎಂಬ ಸಂಗತಿ ಗೊತ್ತಾಗಿದೆ.

ಈ ಬಗ್ಗೆ ಜರ್ಮನಿ ಮ್ಯೂನಿಕ್ ಏರ್‌ಪೋರ್ಟ್‌ನಿಂದ ವಿಸ್ತಾರ ನ್ಯೂಸ್‌ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಬೆಂಗಳೂರಿಗೆ ಬರುವ ಫ್ಲೈಟ್‌ನಲ್ಲಿ ಪ್ರಜ್ವಲ್‌ ಹತ್ತಿಲ್ಲ ಎಂಬ ಸಂಗತಿ ಗೊತ್ತಾಗಿದೆ. ಎಲ್ಲ ಪ್ರಯಾಣಿಕರಿಗೆ ಫ್ಲೈಟ್‌ ಹತ್ತಲು ಬೋರ್ಡಿಂಗ್‌ ಕ್ಲೋಸ್‌ ಆಗಿತ್ತು. 3.35ಕ್ಕೆ ಲುಫ್ತಾನ್ಸಾ ಏರ್‌ಲೈನ್ಸ್ LH764 ಟೇಕ್‌ ಆಫ್‌ ಆಗಿದೆ. ಇದರ ಬ್ಯುಸಿನೆಸ್ ಕ್ಲಾಸ್ ಫ್ಲೈಟ್ ಟಿಕೆಟ್‌ಗೆ
ಸುಮಾರು 3 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ. ಇಷ್ಟಾದರೂ ಪ್ರಜ್ವಲ್ ಅಲ್ಲಿಂದ ಹೊರಟೇ ಇಲ್ಲ ಎಂದು ತಿಳಿದುಬಂದಿದೆ.

ಬುಕ್ ಮಾಡಿದ್ದ ಲುಫ್ತಾನ್ಸಾ ಫ್ಲೈಟ್‌ ಹತ್ತದ ಪ್ರಜ್ವಲ್ ರೇವಣ್ಣ!

ಲುಫ್ತಾನ್ಸಾ ಏರ್‌ಲೈನ್ಸ್ ಫ್ಲೈಟ್ LH764 ರಲ್ಲಿ ಬ್ಯುಸಿನೆಸ್ ಕ್ಲಾಸ್ ಕ್ಯಾಟಗರಿ 6ಜಿ ಸೀಟ್‌ ಅನ್ನು ಪ್ರಜ್ವಲ್‌ ರೇವಣ್ಣ ಬುಕ್ ಮಾಡಿದ್ದರು. ಈ ನಿರೀಕ್ಷೆಯಲ್ಲಿ ಎಸ್‌ಐಟಿ ಅಧಿಕಾರಿಗಳ ತಂಡ ಸಹ ಇದ್ದವು. ಆದರೆ, ಎಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ಕಳ್ಳಾಟ ಆಡಲು ಶುರು ಮಾಡಿದರೋ, ಅದೀಗ ಎಸ್‌ಐಟಿ ತಂಡವನ್ನು ಗರಂ ಆಗಿಸಿದೆ. ಒಂದು ಕಡೆ ಕಾನೂನಿಗೆ ತಲೆಬಾಗುತ್ತೇನೆ ಎಂದು ಪ್ರಜ್ವಲ್ ಅಪ್ಪ ಎಚ್.ಡಿ. ರೇವಣ್ಣ ಹೇಳುತ್ತಾರೆ. ಆದರೆ, ಇನ್ನೊಂದು ಕಡೆ ಕಾನೂನಿಗೆ ಡೋಂಟ್‌ ಕೇರ್ ಎಂದು ಪ್ರಜ್ವಲ್ ಹೇಳುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಇನ್ನು ಸಿಬಿಐ ಮೂಲಕ ಇಂಟರ್‌ಪೋಲ್‌ನಿಂದ ಬ್ಲೂ ಕಾರ್ನರ್ ನೋಟಿಸ್‌ ಕೂಡಾ ಜಾರಿ ಮಾಡಲಾಗಿದೆ.

ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧನವಾಗಿದ್ದ ಎಚ್‌.ಡಿ.ರೇವಣ್ಣ ಅವರಿಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಪ್ರಜ್ವಲ್‌ ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಪ್ರಜ್ವಲ್‌ ರೇವಣ್ಣ ವಿದೇಶದಿಂದ ಇಂದೇ ವಾಪಸ್‌ ಬರಲಿದ್ದಾರೆ ಎಂಬ ಮಹತ್ವದ ಮಾಹಿತಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿತ್ತು.

ಹೌದು, ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಮರಳುವ ಬಗ್ಗೆ ವಿಸ್ತಾರ ನ್ಯೂಸ್‌ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಜರ್ಮನಿಯಲ್ಲಿರುವ ಪ್ರಜ್ವಲ್‌, ಲುಫ್ತಾನ್ಸಾ ಏರ್‌ಲೈನ್ಸ್‌ ಮೂಲಕ ಪ್ರಜ್ವಲ್‌ ಭಾರತಕ್ಕೆ ಹಿಂತಿರುಗಲಿದ್ದಾರೆ. ಜರ್ಮನಿಯಲ್ಲಿ ಬುಧವಾರ (ಮೇ 15) ಬೆಳಗ್ಗೆ 11.20 ರಿಂದ 11.50ರೊಳಗೆ ಬೋರ್ಡಿಂಗ್‌ ಆಗಲಿದ್ದು, ಅವರಿಗಾಗಿ ಸೀಟ್‌ ನಂಬರ್‌ 6ಜಿ ಬುಕ್‌ ಮಾಡಲಾಗಿದೆ. LH0764 ವಿಮಾನದಲ್ಲಿ ಸಂಸದ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು.

ಹರಿಯಾಣದ ಅಕಲ್‌ ಟ್ರಾವೆಲ್ಸ್‌ನಿಂದ ಪ್ರಜ್ವಲ್‌ಗೆ ಟಿಕೆಟ್‌ ಬುಕ್‌ ಮಾಡಲಾಗಿದೆ. ಜರ್ಮನಿಯ ಮ್ಯೂನಿಚ್‌ನಲ್ಲಿ ಇಂದು ಬೆಳಗ್ಗೆ 12.05ಕ್ಕೆ ಫ್ಲೈಟ್‌ ಟೇಕಾಫ್‌ ಆಗಲಿದ್ದು, ರಾತ್ರಿ 12.30ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಬಂದ ಕೂಡಲೇ ಅವರನ್ನು ವಶಕ್ಕೆ ಪಡೆಯಲು ಎಸ್‌ಐಟಿ ಸಜ್ಜಾಗಿದ್ದು, ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯನ್ನು ಆಯೋಜಿಸಲಾಗಿತ್ತು. ಆದರೆ, ಟಿಕೆಟ್‌ ಬುಕ್‌ ಮಾಡಿದ್ದ ಪ್ರಜ್ವಲ್‌ ಮಾತ್ರ ಇತ್ತ ಸುಳಿಯಲೇ ಇಲ್ಲ.

ಇದನ್ನೂ ಓದಿ | HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್‌ಗೆ ಲುಕ್‌ ಔಟ್‌ ನೋಟಿಸ್‌ ಹಾಗೂ ಬ್ಲೂ ಕಾರ್ನರ್‌ ನೋಟಿಸ್‌ ಜಾರಿ ಮಾಡಲಾಗಿತ್ತು. ತಂದೆಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ನ್ಯಾಯಾಲಯದ ಮುಂದೆ ಶರಣಾಗುವ ಸಾಧ್ಯತೆ ಇದ್ದು, ಬಹುತೇಕ ಈ ವಾರದಲ್ಲೇ ವಿದೇಶದಿಂದ ಆಗಮಿಸಬಹುದು ಎನ್ನಲಾಗಿತ್ತು.

ಎಸ್ಐಟಿ ಮುಂದೆ ಬುಧವಾರ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದ್ದು, ಪ್ರಜ್ವಲ್‌ ರೇವಣ್ಣ ಬುಧವಾರ ಸಂಜೆ ಬೆಂಗಳೂರಿಗೆ ಬಂದು ಗುರುವಾರ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇದೆ. ರೇವಣ್ಣಗೆ ಜಾಮೀನು ಸಿಕ್ಕ ಬಳಿಕ ನ್ಯಾಯಾಲಯದ ಮುಂದೆ ಹಾಜರಾಗುವಂತೆ ರೇವಣ್ಣ ಕುಟುಂಬದ ವಕೀಲರು ಸಲಹೆ ನೀಡಿದ್ದರಿಂದ ಪ್ರಜ್ವಲ್‌ ರೇವಣ್ಣ ವಿದೇಶದಿಂದ ಬರುತ್ತಿದ್ದಾರೆ ಎಂದೇ ಭಾವಿಸಲಾಗಿತ್ತು.

Continue Reading

ಕರ್ನಾಟಕ

B C Mylarappa: ಅಕ್ರಮ ಭೂ ವ್ಯವಹಾರ; ಪ್ರೊ. ಮೈಲಾರಪ್ಪ ಅಮಾನತಿಗೆ ಉನ್ನತ ಶಿಕ್ಷಣ ಇಲಾಖೆ ಸೂಚನೆ

B C Mylarappa: ಅಕ್ರಮ ಭೂ ವ್ಯವಹಾರ ಆರೋಪದಲ್ಲಿ ಬಂಧನವಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್‌ ಬಿ.ಸಿ.ಮೈಲಾರಪ್ಪ ಅವರನ್ನು ಅಮಾನತು ಮಾಡಲು ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.

VISTARANEWS.COM


on

B C Mylarappa
Koo

ಬೆಂಗಳೂರು: ಅಕ್ರಮ ಭೂ ವ್ಯವಹಾರ ಆರೋಪದಲ್ಲಿ ಬಂಧನವಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್‌ ಬಿ.ಸಿ.ಮೈಲಾರಪ್ಪ (B C Mylarappa) ಅವರನ್ನು ಅಮಾನತು ಮಾಡುವಂತೆ ಬೆಂಗಳೂರು ವಿವಿ ಕುಲಸಚಿವರಿಗೆ ಉನ್ನತ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

ಹೈದರಬಾದ್‌ನ ಜ್ಯುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಕೆ. ಶಶಿಧರ್ ರೆಡ್ಡಿ ಎಂಬುವರು 2023ರ ಫೆ. 15ರಂದು ನೀಡಿದ್ದ ದೂರಿನ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು, 2024ರ ಮಾ.22ರಂದು ಮೈಲಾರಪ್ಪ ಸೇರಿ ಪ್ರಕರಣದ ಇತರ ಆರೋಪಿಗಳಾದ ಕೊರಟಗೆರೆ ಕೃಷ್ಣಪ್ರಸಾದ್, ಆರ್. ಜಗನ್ನಾಥ್, ಸುರೇಂದರ್ ರೆಡ್ಡಿ ಅವರನ್ನು ಬಂಧಿಸಿದ್ದರು.

ಮೈಲಾರಪ್ಪ ಅವರ ಬಂಧನದ ಬಗ್ಗೆ ತೆಲಂಗಾಣ ಪೊಲೀಸರು ಬೆಂಗಳೂರು ವಿವಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಂತರ ನೀತಿ ಸಂಹಿತೆ ಜಾರಿಯಾದ ಕಾರಣ ವಿವಿಯ ಸಿಂಡಿಕೇಟ್‌ ಸಭೆ ಕರೆದು ತೀರ್ಮಾನ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ ಅಭಿಪ್ರಾಯ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಪತ್ರ ಬರೆದಿದ್ದು, ಮೈಲಾರಪ್ಪ ಅವರು 48 ಗಂಟೆಗೂ ಅಧಿಕ ಕಾಲ ಕಾರಾಗೃಹ ವಾಸದಲ್ಲಿದ್ದುದರಿಂದ ಬಂಧಿಸಲಾದ ದಿನಾಂಕದಿಂದ (ಮಾ.22) ಪೂರ್ವಾನ್ವಯ ಆಗುವಂತೆ ಅಮಾನತಿನಲ್ಲಿಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Prajwal Revanna Case: ನಿಮ್ಮ ಸರ್ಕಾರದ ಮೇಲೆ ಮಹಿಳೆಯರು ವಿಶ್ವಾಸ ಇಡಬಹುದೇ? ಸಿದ್ದರಾಮಯ್ಯಗೆ ಸಾಹಿತಿಗಳ ಬಹಿರಂಗ ಪತ್ರ!

ಏನಿದು ಪ್ರಕರಣ?

ಶಶಿಧರ್‌ ರೆಡ್ಡಿ ತಮ್ಮ ಒಡೆತನದ ಶ್ರಿವೆನ್‌ ಇನ್‌ಫ್ರಾ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದರು. ಅವರಿಗೆ ಯಲಹಂಕದ ಹೊಸಹಳ್ಳಿಯಲ್ಲಿ ಕೃಷ್ಣಪ್ರಸಾದ್ ಎಂಬುವವರಿಗೆ ಸೇರಿದ ಜಮೀನು ಕೊಡಿಸುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 5 ಕೋಟಿ ರೂ. ಮುಂಗಡ ಹಣವನ್ನು ಆರೋಪಿಗಳು ಪಡೆದಿದ್ದರು. ಆ ಜಮೀನು ಕೃಷ್ಣಪ್ರಸಾದ್ ಅವರಿಗೆ ಸೇರಿಲ್ಲ ಎಂದು ತಿಳಿದ ಹಿನ್ನೆಲೆಯಲ್ಲಿ ಮುಂಗಡ ಹಣ ವಾಪಸ್ ನೀಡುವಂತೆ ಶಶಿಧರ್ ರೆಡ್ಡಿ ಕೇಳಿದ್ದರು. ಆಗ ಪ್ರೊ. ಮೈಲಾರಪ್ಪ ಕರೆ ಮಾಡಿ ತನಗೆ ಸರ್ಕಾರದ ಮಟ್ಟದಲ್ಲಿ ಉತ್ತಮ ಸಂಪರ್ಕವಿದೆ, ಹಣಕ್ಕಾಗಿ ಆರೋಪಿಗಳ ಮೇಲೆ ಒತ್ತಡ ಹೇರಬೇಡಿ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆ ಬಳಿಕ ಈ ಜಮೀನನ್ನು ಸರ್ಕಾರವು ವೈಎಎಸ್ ಚಾರಿಟಬಲ್ ಟ್ರಸ್ಟ್ ಮತ್ತು ಕೊಡವ ಸಮಾಜಕ್ಕೆ ಹಂಚಿಕೆ ಮಾಡಿರುವುದು ಶಶಿಧರ್ ರೆಡ್ಡಿ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಣ ವಾಪಸ್ ನೀಡುವಂತೆ ಕೇಳಿದಾಗ ಬೆದರಿಕೆ ಮತ್ತು ನಿರ್ಲಕ್ಷ್ಯ ತೋರಿದ್ದಾರೆ ಎಂದು ಶಶಿಧರ್ ರೆಡ್ಡಿ ತಮ್ಮ ದೂರಿನಲ್ಲಿ ತಿಳಿಸಿದ್ದರು.

Continue Reading

ಕೋಲಾರ

Blackmail Case: ಗ್ರಾಮ ಪಂಚಾಯಿತಿಯಲ್ಲೇ ಬಲವಂತದ ರೊಮ್ಯಾನ್ಸ್‌, ಬ್ಲ್ಯಾಕ್‌ಮೇಲ್‌ ಎಸಗಿದ ಬಿಲ್‌ ಕಲೆಕ್ಟರ್‌ ಬಂಧನ

Blackmail Case: ಒಂದೆಡೆ ರಾಜ್ಯಾದ್ಯಂತ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಈ ಬಿಲ್‌ ಕಲೆಕ್ಟರ್‌ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ, ಕೆಲಸದ ಅವಧಿಯಲ್ಲೇ ರೊಮ್ಯಾನ್ಸ್‌ ನಡೆಸಿ ಅದನ್ನು ಚಿತ್ರೀಕರಿಸಿಕೊಂಡಿದ್ದ. ಅದನ್ನು ಹಂಚಿದ್ದ. ಈಗ ಮಹಿಳಾ ಉದ್ಯೋಗಿಯಿಂದ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ.

VISTARANEWS.COM


on

blackmail case kgf
Koo

ಕೋಲಾರ: ಕೆಜಿಎಫ್‌ನ ರಾಮಸಾಗರ ಗ್ರಾಮ ಪಂಚಾಯಿತಿ (gram Panchayat) ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರ ಜತೆ ಖಾಸಗಿ ಕ್ಷಣಗಳನ್ನು (romance) ಚಿತ್ರೀಕರಿಸಿಕೊಂಡು, ಅದನ್ನು ಹಂಚಿ ಬ್ಲ್ಯಾಕ್‌ಮೇಲ್‌ (Blackmail Case) ಎಸಗಿದ ಆರೋಪ ಎದುರಿಸುತ್ತಿರುವ ಬಿಲ್‌ ಕಲೆಕ್ಟರ್‌ ಅರ್ಜುನ್‌ ಹರಿಕೃಷ್ಣ ಎಂಬಾತನನ್ನು ಬೇತಮಂಗಲ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ವಿರುದ್ಧ ಲೈಂಗಿಕ ಕಿರುಕುಳ (Physical Abuse), ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಗೆ ಮುಜುಗರ, ಖಾಸಗಿ ಕ್ಷಣಗಳ ಫೋಟೋ ಹಂಚಿಕೆ ಹಾಗೂ ಬೆದರಿಕೆ (threat) ಒಡ್ಡಿದ ಕುರಿತು ಕೋಲಾರ ಜಿಲ್ಲೆ ಬೇತಮಂಗಲ ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ. ಗ್ರಾಮ ಪಂಚಾಯಿತಿಯ ಕಚೇರಿಯ ಮೊದಲ ಮಹಡಿಯ ಕೊಠಡಿಯಲ್ಲಿ ಸಿಸಿಟಿವಿ ಸಂಪರ್ಕ ಕಡಿತಗೊಳಿಸಿದ ಆರೋಪಿಯು ತಮ್ಮ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಸಂತ್ರಸ್ತೆ ನೀಡಿದ ದೂರಿನ ಮೇಲೆ ಅರ್ಜುನ್ ವಿಚಾರಣೆ ನಡೆಸಿದ ಬೇತಮಂಗಲ ಪೊಲೀಸರು ನಂತರ ಆತನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಹೋದಾಗ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ನಡೆಯಿತು. ತನ್ನ ಮಗನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗದಂತೆ ಆರೋಪಿಯ ತಾಯಿ ಪೊಲೀಸರ ಜೀಪ್‌ ಮುಂದೆ ಅಡ್ಡಲಾಗಿ ಮಲಗಿ ತಡೆ ಒಡ್ಡಿದರು. ಕೊನೆಗೆ ಪೊಲೀಸರು ಅವರನ್ನು ಪಕ್ಕಕ್ಕೆ ಸರಿಸಿ ಆರೋಪಿಯನ್ನು ಕರೆದೊಯ್ದರು.

ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಮಸಾಗರ ಗ್ರಾಮ ಪಂಚಾಯಿತಿಯ 14 ಸದಸ್ಯರು ಮಂಗಳವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಹರ್ತಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಆರೋಪಿ ಮತ್ತು ಸಂತ್ರಸ್ತೆಯನ್ನು ಸೇವೆಯಿಂದ ಅಮಾನತು ಮಾಡಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿರುವುದಾಗಿ ಹರ್ತಿ ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸೈಬರ್ ಇನ್‌ಸ್ಪೆಕ್ಟರ್ ಲಕ್ಷ್ಮಿನಾರಾಯಣ ನಡೆಸುತ್ತಿದ್ದಾರೆ.

ಒಂದೆಡೆ ರಾಜ್ಯಾದ್ಯಂತ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಈ ಬಿಲ್‌ ಕಲೆಕ್ಟರ್‌ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ, ಕೆಲಸದ ಅವಧಿಯಲ್ಲೇ ರೊಮ್ಯಾನ್ಸ್‌ ನಡೆಸಿ ಅದನ್ನು ಚಿತ್ರೀಕರಿಸಿಕೊಂಡಿದ್ದ. ಅದನ್ನು ಹಂಚಿದ್ದ. ಈಗ ಮಹಿಳಾ ಉದ್ಯೋಗಿಯಿಂದ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ.

ಪಂಚಾಯತಿ ಸಿಬ್ಬಂದಿಯ ಈ ಕಿಸ್ಸಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ಹಾಗೂ ಮಹಿಳಾ ಉದ್ಯೋಗಿ ಜೊತೆಗಿರುವ ಖಾಸಗಿ ಫೋಟೋಗಳು ವೈರಲ್ ಆಗಿವೆ. ಆರೋಪಿ ಅರ್ಜುನ್ ಹರಿಕೃಷ್ಣ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮೊದಲ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯ ಬಳಿ ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ವಿರೋಧಿಸಿದಾಗ, ನಿನ್ನ ಗಂಡನಿಗೆ ಗ್ರಾಮ ಪಂಚಾಯಿತಿಯಲ್ಲಿ ಜಲಗಾರ ಕೆಲಸ ಕೊಡಿಸುತ್ತೇನೆ. ಜೊತೆಗೆ ನಿಮಗೆ ವಾಸಕ್ಕೆಂದು ಪಂಚಾಯಿತಿಯಿಂದ ಉಚಿತ ಸರ್ಕಾರಿ ಮನೆ ಕಟ್ಟಿಸಿಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದಾನೆ. ತನಗೆ ಮುತ್ತಿಡುವುದಕ್ಕೆ ಬಲವಂತವಾಗಿ ಪ್ರೇರೇಪಿಸಿ ಅದನ್ನು ತನ್ನ ಮೊಬೈಲ್‌ನಲ್ಲಿ ಸೆಲ್ಫಿ ಫೋಟೋ ತೆಗೆದುಕೊಂಡಿದ್ದಾನೆ. ನಂತರದ ದಿನಗಳಲ್ಲಿ ಲೈಂಗಿಕವಾಗಿ ಸಹಕರಿಸುವಂತೆ, ಇಲ್ಲದಿದ್ದರೆ ಕೆಲಸದಿಂದ ತೆಗೆದುಹಾಕುತ್ತೇನೆ ಎಂದು ಬೆದರಿಸಿದ್ದಾನೆ. ಮುತ್ತು ಕೊಡುವ ಕ್ಷಣಗಳ ಫೋಟೋ ವೈರಲ್‌ ಮಾಡಡುತ್ತೇನೆ ಎಂದು ಬೆದರಿಸಿದ್ದಾನೆ. ಆತನ ಕಿರುಕುಳದಿಂದ ನನ್ನ ಸಂಸಾರ ಹಾಗೂ ಜೀವನಕ್ಕೆ ಮುಳುವಾಗಿದೆ. ಈಗ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Continue Reading
Advertisement
MLC Election
ಕರ್ನಾಟಕ3 mins ago

MLC Election: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಫೈನಲ್‌; ಬಂಡಾಯವಾಗಿ ಬಿಜೆಪಿ ಅಭ್ಯರ್ಥಿ ನಾಮಪತ್ರ

CAA
EXPLAINER4 mins ago

CAA: ಸಿಎಎ ಅನ್ವಯ 14 ಜನಕ್ಕೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

Fortis Hospital doctors team performed a successful complex kidney transplant surgery for two patients with robotic assistance
ಕರ್ನಾಟಕ6 mins ago

Fortis Hospital: ರೋಬೋಟಿಕ್‌ ನೆರವಿನಿಂದ ಇಬ್ಬರಿಗೆ ‘ಸಂಕೀರ್ಣ ಕಿಡ್ನಿ ಕಸಿ’ ಆಪರೇಷನ್ ಸಕ್ಸೆಸ್!

V. Sunil Kumar latest statemetn
ಬೆಂಗಳೂರು14 mins ago

V. Sunil Kumar: ರಾಜ್ಯದಲ್ಲಿ ಅಸಮರ್ಥ ಸಂಪುಟ, ಅಭಿವೃದ್ಧಿ ಶೂನ್ಯ ಸರ್ಕಾರ: ವಿ. ಸುನೀಲ್ ಕುಮಾರ್

private hospitals heads and health department officers Meeting at vijayanagara DC office
ವಿಜಯನಗರ24 mins ago

Vijayanagara News: ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ಲೋಪ ಎಸಗಿದರೆ ಕಾನೂನು ಕ್ರಮ: ಡಿಸಿ ಎಚ್ಚರಿಕೆ

Ram Pothineni Double iSmart teaser with Sanjay Dutt
ಟಾಲಿವುಡ್26 mins ago

Ram Pothineni: ಡೈನಾಮಿಕ್ ಸ್ಟಾರ್ ರಾಮ್‌ – ಸಂಜಯ್ ದತ್ ಭರ್ಜರಿ ಜುಗಲ್ಬಂದಿ: `ಡಬಲ್ ಇಸ್ಮಾರ್ಟ್‘ ಟೀಸರ್‌ ಔಟ್‌!

Prajwal Revanna Case Deve Gowda lashes out at Bhavani
ರಾಜಕೀಯ27 mins ago

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!

Wedding men's jewel Fashion Artificial pearl necklace has entered
ಫ್ಯಾಷನ್27 mins ago

Wedding men’s jewel Fashion: ವೆಡ್ಡಿಂಗ್‌ ಮೆನ್ಸ್‌ ಜ್ಯುವೆಲರಿ ಫ್ಯಾಷನ್‌ಗೆ ಕಾಲಿಟ್ಟ ಆರ್ಟಿಫಿಶಿಯಲ್‌ ಪರ್ಲ್‌ ಹಾರ!

Team India Coach Applications
ಕ್ರೀಡೆ32 mins ago

Team India Coach Applications: ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಸಾವಿರಾರು ಅಭಿಮಾನಿಗಳು; ಪಜೀತಿಗೆ ಸಿಲುಕಿದ ಬಿಸಿಸಿಐ

CAA
ದೇಶ36 mins ago

CAA: ಸಿಎಎ ಅಡಿಯಲ್ಲಿ 14 ಜನರಿಗೆ ಭಾರತದ ಪೌರತ್ವ ನೀಡಿದ ಮೋದಿ ಸರ್ಕಾರ; ಸರ್ಟಿಫಿಕೇಟ್‌ ಕೂಡ ಹಸ್ತಾಂತರ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ10 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ12 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ22 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌