Killer CEO : 4 ವರ್ಷದ ಮಗನ ಕೊಂದ ಸುಚನಾ ಸೇಠ್‌ ವಿರುದ್ಧ 642 ಪುಟಗಳ ಚಾರ್ಜ್‌ ಶೀಟ್‌ ಸಲ್ಲಿಕೆ - Vistara News

ಕ್ರೈಂ

Killer CEO : 4 ವರ್ಷದ ಮಗನ ಕೊಂದ ಸುಚನಾ ಸೇಠ್‌ ವಿರುದ್ಧ 642 ಪುಟಗಳ ಚಾರ್ಜ್‌ ಶೀಟ್‌ ಸಲ್ಲಿಕೆ

Killer CEO : ಗೋವಾದಲ್ಲಿ ತಾಯಿಯಿಂದಲೇ ಮಗನ (Goa Murder Case) ಹತ್ಯೆ ಪ್ರಕರಣಕ್ಕೆ (Mother Kills 4 Year Old Son) ಸಂಬಂಧಿಸಿದ್ದಂತೆ ತನಿಖೆ ಮುಂದುವರಿದಿದೆ. ಮಗನನ್ನು ಕೊಂದು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಬಂದ ಬೆಂಗಳೂರಿನ ಸ್ಟಾರ್ಟಪ್ ಸಿಇಒ ಸುಚನಾ ಸೇಠ್‌ (Suchana seth) ವಿರುದ್ಧ ಗೋವಾ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿದ್ದಾರೆ.

VISTARANEWS.COM


on

Killer CEO Suchana Seth
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು/ ಪಣಜಿ: ಮಗನಿಗೆ ತಂದೆಯ ಜತೆ ಅಟ್ಯಾಚ್‌ಮೆಂಟ್ ಹೆಚ್ಚಾಗುತ್ತೆ ಎಂಬ ಕಾರಣಕ್ಕೆ ಬೆಂಗಳೂರಿನ ಸ್ಟಾರ್ಟಪ್ ಸಿಇಒ ಸುಚನಾ ಸೇಠ್‌ ತನ್ನ 4 ವರ್ಷದ ಮಗನನ್ನು ಗೋವಾದ (Goa Murder Case) ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆಗೈದಿದ್ದಳು. ಮಗನನ್ನು ಹತ್ಯೆಗೈದ ಆರೋಪದ (Killer CEO) ಮೇಲೆ ಬಂಧಿತಳಾಗಿರುವ ಸುಚನಾ ಸೇಠ್‌ (39) (Suchana Seth) ವಿರುದ್ಧ ಗೋವಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ.

ಕಲ್ಲಂಗೋಟ್ ಪೊಲೀಸರು ಗೋವಾ ಬಾಲಾಪರಾಧಿ ನ್ಯಾಯಾಲಯದಲ್ಲಿ ಸುಚನಾ ಸೇಠ್ ವಿರುದ್ಧ 642 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಮಗುವಿನ ಕತ್ತು ಹಿಸುಕಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಸುಚನಾ ಸೇಠ್ ವಿರುದ್ಧ ಸೆಕ್ಷನ್ 302 (ಕೊಲೆ) ಮತ್ತು 201 ಗೋವಾ ಮಕ್ಕಳ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ನೂ ಗೋವಾ ಪೊಲೀಸರು ಈ ಪ್ರಕರಣದಲ್ಲಿ 59 ಜನರ ಸಾಕ್ಷಿಗಳನ್ನು ಹೆಸರಿಸಿದ್ದಾರೆ. ಜತೆಗೆ ಆರೋಪಿ ಸುಚನಾ ಸೇಠ್‌ ಪತಿ ವೆಂಕಟರಮಣ ಅವರ ಹೇಳಿಕೆಯನ್ನು ಸಹ ದಾಖಲಿಸಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶದ ಹೊರತಾಗಿಯೂ, ಸುಚಾನ ಸೇಠ್ ಮಗನನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದು ವೆಂಕಟರಮಣ ತಿಳಿಸಿದ್ದರು.

ಜೂನ್‌ 14ಕ್ಕೆ ವಿಚಾರಣೆ

ಗೋವಾ ಮಕ್ಕಳ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜೂನ್ 14 ರಂದು ನಡೆಸಲಿದೆ. ಸದ್ಯ ಸುಚನಾ ಸೇಠ್‌ ನ್ಯಾಯಾಂಗ ಬಂಧನದಲ್ಲಿದ್ದು, ಟಿಶ್ಯೂ ಪೇಪರ್‌ ಮೇಲೆ ಐ ಲೈನರ್‌ನಲ್ಲಿ ಹತ್ಯೆಯ ಸಂಚು ರೂಪಿಸಿದ್ದ, ಕೈ ಬರಹದ ಟಿಪ್ಪಣಿಯನ್ನು ಚಾರ್ಜ್‌ ಶೀಟ್‌ನಲ್ಲಿ ಲಗತ್ತಿಸಿದ್ದಾರೆ. ಈ ಕೈ ಬರಹವನ್ನು ಫಾರೆನ್ಸಿಕ್‌ ಸೈನ್ಸ್‌ ಲಾಬ್ (Forensic Science Laboratory-FSL)ಗೆ ಕಳುಹಿಸಲಾಗಿತ್ತು. ಅದರ ದೃಢೀಕರಣ ವರದಿಯನ್ನು ಸಹ ಲಗತ್ತಿಸಿದ್ದಾರೆ.

ಇದನ್ನೂ ಓದಿ: Arvind Kejriwal: ಜೈಲು ವಾಸದಲ್ಲಿ 4.5 ಕೆಜಿ ತೂಕ ಕಳೆದುಕೊಂಡ ಕೇಜ್ರಿವಾಲ್!

ಮಗುವಿನ ಕೊಲೆ ಪ್ರಕರಣ: ಏನೇನು ನಡೆಯಿತು? ಕೊಂದಿದ್ದು ಹೇಗೆ?

-ಸುಚನಾ ಸೇಠ್‌ ಜನವರಿ 6ರಂದು ಉತ್ತರ ಗೋವಾದ ಕಾಂಡೋಲಿಮ್‌ನಲ್ಲಿರುವ ಸರ್ವಿಸ್‌ ಅಪಾರ್ಟ್‌ಮೆಂಟ್‌ಗೆ ಪ್ರವೇಶ ಪಡೆದಿದ್ದರು. ಹಾಗೆ ಒಳಗೆ ಹೋಗುವಾಗ ಆಕೆಯ ಕೈಯಲ್ಲಿದ್ದದ್ದು ಒಂದು ಬ್ಯಾಗ್‌ ಮತ್ತು ಪುಟ್ಟ ನಾಲ್ಕು ವರ್ಷದ ಮಗ.

-ಅಲ್ಲಿ ಎರಡು ದಿನ ಕಳೆದ ಸುಚನಾ ಅಪಾರ್ಟ್‌ಮೆಂಟ್‌ ಸಿಬ್ಬಂದಿಗೆ ಒಂದು ಬೇಡಿಕೆ ಸಲ್ಲಿಸುತ್ತಾರೆ. ನಾನು ಒಂದು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಬೇಕಾಗಿದೆ. ನನಗೆ ಒಂದು ಟ್ಯಾಕ್ಸಿ ಅರೇಂಜ್‌ ಮಾಡಿಕೊಡಿ.

– ಆಗ ಅಲ್ಲಿನ ಸಿಬ್ಬಂದಿ, ಟ್ಯಾಕ್ಸಿ ಯಾಕೆ ಮೇಡಂ, ಅದು ತುಂಬಾ ಕಾಸ್ಟ್ಲೀ. ಅದಕ್ಕಿಂತ ವಿಮಾನವೇ ಒಳ್ಳೆಯದು, ಕಡಿಮೆ ದುಡ್ಡಿನಲ್ಲಿ ಆಗುತ್ತದೆ ಮತ್ತು ಬೇಗನೆ ತಲುಪುತ್ತದೆ ಎಂದು ಹೇಳಿದ್ದರು. ಆದರೆ, ನನಗೆ ಟ್ಯಾಕ್ಸಿನೇ ಬೇಕು ಎಂದು ಸುಚನಾ ಹಠ ಹಿಡಿದಿದ್ದರು.

-ಅಂತಿಮವಾಗಿ ಜನವರಿ 8ರಂದು ಟ್ಯಾಕ್ಸಿಯನ್ನು ಬುಕ್‌ ಮಾಡಿ ಕೊಡಲಾಯಿತು. ಮುಂಜಾನೆ ಅವರು ಅಲ್ಲಿಂದ ಟ್ಯಾಕ್ಸಿ ಹತ್ತಿ ಹೊರಟಿದ್ದಾರೆ.

-ಟ್ಯಾಕ್ಸಿ ಹೊರಟು ಹೋದ ಬಳಿಕ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ ಸುಚನಾ ಅವರು ತಂಗಿದ್ದ ಕೋಣೆಯನ್ನು ಕ್ಲೀನ್‌ ಮಾಡಲು ಹೋಗುತ್ತಾರೆ. ಅಲ್ಲಿನ ಟವೆಲ್‌ನಲ್ಲಿ ರಕ್ತದ ಕಲೆಗಳು ಗೋಚರಿಸುತ್ತವೆ. ಆಗ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.

-ಈ ನಡುವೆ, ಸುಚನಾ ಸೇಠ್‌ ಜತೆಗೆ ಬಂದಿದ್ದ ನಾಲ್ಕು ವರ್ಷದ ಮಗ ಚಿನ್ಮಯಿ ಮರಳಿ ಹೋಗುವಾಗ ಇರಲಿಲ್ಲ ಎನ್ನುವುದು ಸಿಬ್ಬಂದಿಗೆ ನೆನಪಾಗುತ್ತದೆ. ಜತೆಗೆ ಆಕೆ ಒಂದು ಭಾರವಾದ ಸೂಟ್‌ ಕೇಸನ್ನು ಎತ್ತಿಕೊಂಡು ಹೋಗಿದ್ದರು ಎಂದು ಪೊಲೀಸರಿಗೆ ತಿಳಿಸುತ್ತಾರೆ.

-ಪೊಲೀಸರು ಚಾಲಕನಿಗೆ ಕರೆ ಮಾಡಿ ಸುಚನಾ ಅವರಿಗೆ ಫೋನ್‌ ಕೊಡುವಂತೆ ಕೇಳುತ್ತಾರೆ. ಫೋನ್‌ನಲ್ಲಿ ರಕ್ತದ ಕಲೆ, ಮತ್ತು ಮಗು ಇಲ್ಲದಿರುವ ಬಗ್ಗೆ ಕೇಳುತ್ತಾರೆ.

-ಆಗ ಸುಚನಾ ಅವರು ಟವೆಲ್‌ನಲ್ಲಿದ್ದದ್ದು ಋತುಸ್ರಾವಕ್ಕೆ ಸಂಬಂಧಿಸಿದ್ದು ಎನ್ನುತ್ತಾರೆ. ಮಗನನ್ನು ದಕ್ಷಿಣ ಗೋವಾದ ಮರ್ಗೋವಾ ಪಟ್ಟಣದಲ್ಲಿರುವ‌ ಸ್ನೇಹಿತರ ಮನೆಯಲ್ಲಿ ಬಿಟ್ಟಿದ್ದಾಗಿ ಹೇಳುತ್ತಾರೆ. ಮತ್ತು ನಂಬರ್‌ ಕೂಡಾ ಕೊಡುತ್ತಾರೆ. ಆದರೆ, ಅದು ಫೇಕ್‌ ನಂಬರ್‌ ಎನ್ನುವುದು ಪರಿಶೀಲಿಸಿದಾಗ ಗೊತ್ತಾಗುತ್ತದೆ.

-ಪೊಲೀಸರು ಕೂಡಲೇ ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಕೊಂಕಣಿಯಲ್ಲಿ ಮಾತನಾಡಿ, ಟ್ಯಾಕ್ಸಿಯನ್ನು ಸಮೀಪದ ಪೊಲೀಸ್‌ ಠಾಣೆಗೆ ಕರೆದೊಯ್ಯುವಂತೆ ಸೂಚಿಸುತ್ತಾರೆ. ಅವನು ಚಿತ್ರದುರ್ಗದ ಐಮಂಗಲ ಪೊಲೀಸ್‌ ಠಾಣೆಯ ಮುಂದೆ ಟ್ಯಾಕ್ಸಿ ನಿಲ್ಲಿಸುತ್ತಾನೆ.

-ಐಮಂಗಲ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ಮಗುವಿನ ಶವ ಪತ್ತೆಯಾಗುತ್ತದೆ, ಆಗ ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು.

ಎತ್ತಿ ಆಡಿಸಿದ ತೋಳಲ್ಲಿ ಮಗನ ಅಂತ್ಯಕ್ರಿಯೆ ಮಾಡಿದ್ದ ತಂದೆ

ಗಂಡ-ಹೆಂಡತಿ ಜಗಳದಲ್ಲಿ 4 ವರ್ಷದ ಮಗು ಬಲಿಯಾಗಿತ್ತು. ಮಗುವನ್ನು ಮುದ್ದಾಡಬೇಕಿದ್ದ ಕೈಗಳು ಕರುಳಬಳ್ಳಿಗೆ ಕೊಳ್ಳಿ ಇಟ್ಟು (Killer CEO) ಜೈಲು ಕಂಬಿ ಹಿಂದೆ ಇದ್ದರೆ, ಇತ್ತ ಜ.10ರಂದು ಬೆಂಗಳೂರಿನ ಹರಿಶ್ಚಂದ್ರಘಾಟ್​​​ನಲ್ಲಿ ತಂದೆ ವೆಂಕಟರಮಣ ಅತೀವ ದುಃಖದಲ್ಲೇ ಪುತ್ರ ಚಿನ್ಮಯ್‌ನ ಅಂತ್ಯಸಂಸ್ಕಾರ (Funeral) ನಡೆಸಿದ್ದರು. ಈ ದೃಶ್ಯ ನೋಡಿದವರೆಲ್ಲೂ ಈ ನೋವು ಯಾವ ತಂದೆಗೂ ಬೇಡಪ್ಪಾ ಎಂದು ಎದೆಭಾರ ಮಾಡಿಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Self Harming : ಪಿಎಸ್‌ಐ ಕಿರುಕುಳ; ಕುಡಿದ ಅಮಲಿನಲ್ಲಿ ಠಾಣೆ ಎದುರೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ

Self Harming : ಕುಡಿದ ಅಮಲಿನಲ್ಲಿ ಠಾಣೆಗೆ ಬಂದ ವ್ಯಕ್ತಿಯೊಬ್ಬ ಪಿಎಸ್‌ಐ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಠಾಣೆ ಎದುರೇ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

VISTARANEWS.COM


on

By

Self Harming
ಸಾಂದರ್ಭಿಕ ಚಿತ್ರ
Koo

ಕಾರವಾರ: ಪಿಎಸ್ಐ ಮಾನಸಿಕ ಕಿರುಕುಳ (Self Harming) ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ರಾಮನಗರ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದೆ.

ರಾಮನಗರ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಆತ್ಮಹತ್ಯೆಗೆ ಯತ್ನಿಸಿದವರು. ಜೂಜಾಟ ಆರೋಪದಡಿ ಭಾಸ್ಕರ್‌ ವಿರುದ್ಧ ರಾಮನಗರ ಪಿಎಸ್ಐ ಬಸವರಾಜ್ ಮಗನೂರು ಪ್ರಕರಣ ದಾಖಲಿಸಿದ್ದರು. ನಿನ್ನೆ ಗುರುವಾರ ಜಮೀನು ವಿಚಾರಕ್ಕೆ ಭಾಸ್ಕರ್‌ ಮದ್ಯ ಸೇವಿಸಿ ಬೈಕ್‌ ಮೂಲಕ ಠಾಣೆಗೆ ತೆರಳಿದ್ದಾನೆ.

ಮದ್ಯ ಸೇವಿಸಿದ್ದರಿಂದ ಬೈಕ್ ಠಾಣೆಯಲ್ಲಿ ಬಿಟ್ಟು ಹೋಗುವಂತೆ ಪಿಎಸ್ಐ ಬಸವರಾಜ್‌ ಸೂಚಿಸಿದ್ದಾರೆ. ಇಷ್ಟಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮದ್ಯದ ಅಮಲಿನಲ್ಲಿ ಭಾಸ್ಕರ್‌ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಗಂಭೀರವಾಗಿ ಗಾಯಗೊಂಡ ಭಾಸ್ಕರ್‌ನನ್ನು ಬೆಳಗಾವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: Udupi News : ತಂದೆ ಸಾವಿನಿಂದ ಖಿನ್ನತೆಗೆ ಜಾರಿದವಳು ಬಾವಿಗೆ ಹಾರಿ ಆತ್ಮಹತ್ಯೆ; ಮಕ್ಕಳಿಬ್ಬರು ಅನಾಥ

ಸಾಲದ ಶೂಲಕ್ಕೆ ಮನನೊಂದ ರೈತ; ಕೆರೆಗೆ ಹಾರಿ ಆತ್ಮಹತ್ಯೆ

ಮೈಸೂರು: ಬೆಳೆ ಸಾಲ ತೀರಿಸಲಾಗದೆ ಕೆರೆಗೆ ಹಾರಿ ರೈತರೊಬ್ಬರು (Farmer Death) ಆತ್ಮಹತ್ಯೆ (Self Harming) ಮಾಡಿಕೊಂಡು ಮೃತಪಟ್ಟಿದ್ದಾರೆ. ಮೈಸೂರು (Mysuru News) ಜಿಲ್ಲೆಯ ಹುಣಸೂರು ತಾಲೂಕಿನ ಮನುಗನಹಳ್ಳಿಯಲ್ಲಿ ಘಟನೆ ನಡೆದಿದೆ. ಅಣ್ಣೇಗೌಡ (57) ಮೃತ ದುರ್ದೈವಿ.

ಅಣ್ಣೇಗೌಡ ಮೂರು ಎಕರೆಯಲ್ಲಿ ತಂಬಾಕು ಮತ್ತಿತರೆ ಬೆಳೆ ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗಾಗಿ ಪಂಚವಳ್ಳಿಯ ಐಒಬಿ ಬ್ಯಾಂಕ್‌ನಲ್ಲಿ 10 ಲಕ್ಷ ರೂ. ಸಾಲ ಪಡೆದಿದ್ದರು. ಖಾಸಗಿ ಬ್ಯಾಂಕ್‌ನಲ್ಲಿ 14 ಲಕ್ಷ ರೂ. ಹಾಗೂ 5 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು. ಬೆಳೆ ಕೈ ಹತ್ತದ ಕಾರಣ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆರೆಯಿಂದ ರೈತನ ಮೃತದೇಹವನ್ನು ಮೇಲಕ್ಕೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮೈಸೂರು

Farmer Death : ಸಾಲದ ಶೂಲಕ್ಕೆ ಮನನೊಂದ ರೈತ; ಕೆರೆಗೆ ಹಾರಿ ಆತ್ಮಹತ್ಯೆ

Farmer Death : ಸಾಲದ ಶೂಲಕ್ಕೆ ಸಿಲುಕಿ ಮನನೊಂದ ರೈತರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಕೆರೆಯಿಂದ ಮೃತದೇಹವನ್ನು ತೆರವು ಮಾಡಿದ್ದಾರೆ.

VISTARANEWS.COM


on

By

Farmer Death
Koo

ಮೈಸೂರು: ಬೆಳೆ ಸಾಲ ತೀರಿಸಲಾಗದೆ ಕೆರೆಗೆ ಹಾರಿ ರೈತರೊಬ್ಬರು (Farmer Death) ಆತ್ಮಹತ್ಯೆ (Self Harming) ಮಾಡಿಕೊಂಡು ಮೃತಪಟ್ಟಿದ್ದಾರೆ. ಮೈಸೂರು (Mysuru News) ಜಿಲ್ಲೆಯ ಹುಣಸೂರು ತಾಲೂಕಿನ ಮನುಗನಹಳ್ಳಿಯಲ್ಲಿ ಘಟನೆ ನಡೆದಿದೆ. ಅಣ್ಣೇಗೌಡ (57) ಮೃತ ದುರ್ದೈವಿ.

ಅಣ್ಣೇಗೌಡ ಮೂರು ಎಕರೆಯಲ್ಲಿ ತಂಬಾಕು ಮತ್ತಿತರೆ ಬೆಳೆ ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗಾಗಿ ಪಂಚವಳ್ಳಿಯ ಐಒಬಿ ಬ್ಯಾಂಕ್‌ನಲ್ಲಿ 10 ಲಕ್ಷ ರೂ. ಸಾಲ ಪಡೆದಿದ್ದರು. ಖಾಸಗಿ ಬ್ಯಾಂಕ್‌ನಲ್ಲಿ 14 ಲಕ್ಷ ರೂ. ಹಾಗೂ 5 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು. ಬೆಳೆ ಕೈ ಹತ್ತದ ಕಾರಣ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆರೆಯಿಂದ ರೈತನ ಮೃತದೇಹವನ್ನು ಮೇಲಕ್ಕೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Self Harming : ಒಂದೇ ದಿನ ನಾಲ್ವರು ಗೃಹಿಣಿಯರ ಆತ್ಮಹತ್ಯೆ; ಅವರಲ್ಲಿಬ್ಬರು ಯೋಧರ ಪತ್ನಿಯರು

6 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ನವ ವಿವಾಹಿತೆ ಶವವಾಗಿ ಪತ್ತೆ; ಕೊಂದವರು ಯಾರು?

ಮೈಸೂರು: ಮದುವೆಯಾದ ಆರೇ ತಿಂಗಳಿಗೆ ನವವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ (Self Harming) ಪತ್ತೆಯಾಗಿದ್ದಾಳೆ. ಮೈಸೂರಿನ ಮಾನಸಿ ನಗರ ಬಿಎಸ್ಎನ್ಎಲ್ ಲೇಔಟ್‌ನಲ್ಲಿ ಘಟನೆ ನಡೆದಿದೆ. ಸೌಮ್ಯಾಶ್ರೀ (27) ಮೃತ ದುರ್ದೈವಿ.

ಆರು ತಿಂಗಳ ಹಿಂದೆ ಮೈಸೂರಿನ ಮಂಜುನಾಥ್ ಎಂಬುವರ ಜತೆ ಸೌಮ್ಯಾಶ್ರೀ ಮದುವೆಯಾಗಿದ್ದರು. ಸೌಮ್ಯಾಶ್ರೀ ತಂದೆ ಶ್ರೀಧರ್ ಬೆಂಗಳೂರಿನಿಂದ ಮೈಸೂರಿಗೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಸೌಮ್ಯಾಳ ನಡತೆ ಮೇಲೆ ಪತಿ ಮಂಜುನಾಥ್ ಅನುಮಾನ ಪಡುತ್ತಿದ್ದ ಎನ್ನಲಾಗಿದೆ.

ಈ ಕುರಿತು ಸೌಮ್ಯಾ ಹೆತ್ತವರಿಗೆ ಮಾಹಿತಿ ನೀಡಿದ್ದಳು. ಹೀಗಾಗಿ ಮಂಜುನಾಥ್ ಹಾಗೂ ಅವರ ಮನೆಯವರೆಲ್ಲ ಸೇರಿ ಸೌಮ್ಯಾಳನ್ನ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಮಗಳ ಶವ ಕಂಡು ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Self Harming
ಸೌಮ್ಯಳ ಶವ ಕಂಡು ಪೋಷಕರ ಆಕ್ರಂದನ

ಸ್ಥಳಕ್ಕೆ ಮೈಸೂರಿನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Self Harming : ಒಂದೇ ದಿನ ನಾಲ್ವರು ಗೃಹಿಣಿಯರ ಆತ್ಮಹತ್ಯೆ; ಅವರಲ್ಲಿಬ್ಬರು ಯೋಧರ ಪತ್ನಿಯರು

Self Harming : ಒಂದೇ ದಿನ ನಾಲ್ವರು ಗೃಹಿಣಿಯರು ಆತ್ಮಹತ್ಯೆಗೆ ಶರಣಾಗಿದ್ದು, ಅವರಲ್ಲಿಬ್ಬರು ಯೋಧರ ಪತ್ನಿಯರಾಗಿದ್ದಾರೆ. ಒಬ್ಬರಿಗೆ ಅತ್ತೆ ಕಾಟವಾದರೆ ಮತ್ತೊಬ್ಬರಿಗೆ ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

VISTARANEWS.COM


on

By

Self Harming
Koo

ಕೊಪ್ಪಳ/ ಚಿಕ್ಕೋಡಿ: ಕೊಪ್ಪಳದ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಗೃಹಿಣಿಯೊಬ್ಬರು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ವೀಣಾ ಬಸಯ್ಯ ಸಸಿ (25) ಆತ್ಮಹತ್ಯೆಗೆ ಶರಣಾದವರು.

ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ವೀಣಾ ಗುರುವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ವೀಣಾ ಪತಿ ರಾಜಸ್ಥಾನದಲ್ಲಿದ್ದು, ಅಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಜತೆಗೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಅತ್ತೆ ಕಾಟಕ್ಕೆ ಬೇಸತ್ತು ನೇಣಿಗೆ ಶರಣಾದಳು

ಅತ್ತೆಯ ಕಾಟದಿಂದ ಬೇಸತ್ತ ಯೋಧನ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಘಟನೆ ನಡೆದಿದೆ. ರೂಪಾಬಾಯಿ ಬಾಳು ರೂಪನವರ (31) ಆತ್ಮಹತ್ಯೆ ಮಾಡಿಕೊಂಡವರು.

ಪತಿ ಬಾಳು ರೂಪನವರ ಅರುಣಾಚಲಪ್ರದೇಶ ಗ್ಯಾಂಟುಕನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ತೆ ಸೇವಂತಾ ಸಿದರಾಯ ರೂಪಾಬಾಯಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ. ರೂಪಾಬಾಯಿಗೆ ಎರಡು ಮಕ್ಕಳಿದ್ದು, ಅನಾಥರಾಗಿವೆ.

ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕಾಗವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Actor Darshan: ಚಿನ್ನುಮರಿ ತಂಟೆಗೆ ಹೋದ್ರೆ ಒದೆ, ಪವಿತ್ರಾ ಗೌಡ ತಂಟೆಗೆ ಬಂದ್ರೆ ಕೊಲೆ; ಟ್ರೋಲ್ ಆಗುತ್ತಿದೆ ​ದರ್ಶನ್​ ಕೊಲೆ ಕೇಸ್​​

ತಂದೆ ಸಾವಿನಿಂದ ಖಿನ್ನತೆಗೆ ಜಾರಿದವಳು ಬಾವಿಗೆ ಹಾರಿದಳು

ಉಡುಪಿ: ಬಾವಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಉಡುಪಿಯ (Udupi News) ಕಾಪು ತಾಲೂಕಿನ ಮಲ್ಲಾರು ಎಂಬಲ್ಲಿ ಘಟನೆ ನಡೆದಿದೆ. ಮಲ್ಲಾರು ಚುಕ್ಕು ತೋಟ ನಿವಾಸಿ ಮೋಸಿನಾ (34) ಆತ್ಮಹತ್ಯೆ ಮಾಡಿಕೊಂಡವರು.

ಮೋಸಿನಾ ತಂದೆಯ ನಿಧನದ ನಂತರ ಖಿನ್ನತೆಗೊಳಗಾಗಿದ್ದರು. ಮೋಸಿನಾಗೆ 7 ವರ್ಷ ಮತ್ತು ಒಂದೂವರೆ ವರ್ಷದ ಇಬ್ಬರು ಮಕ್ಕಳಿದ್ದರು. ತಂದೆಯ ಕೊರಗಿನಲ್ಲೇ ಖಿನ್ನತೆಗೆ ಒಳಗಾದ ಮೋಸಿನಾ ಮನೆ ಬಳಿ ಇದ್ದ ಬಾವಿ ಹಾರಿ ಮೃತಪಟ್ಟಿದ್ದಾರೆ. ಸ್ಥಳೀಯರು ಇದನ್ನೂ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Udupi News Self Harming

ಉಡುಪಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸ್ಥಳೀಯರ ಸಹಾಯದಿಂದ ಮಹಿಳೆಯ ಮೃತದೇಹ ಬಾವಿಯಿಂದ ತೆರವು ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾಪು ಪೊಲೀಸರು ಈ ಸಂಬಂಧ ಪ್ರಕರಣ ದಾಖಲಾಗಿದೆ.

6 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ನವ ವಿವಾಹಿತೆ ಶವವಾಗಿ ಪತ್ತೆ

ಮೈಸೂರು: ಮದುವೆಯಾದ ಆರೇ ತಿಂಗಳಿಗೆ ನವವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ (Self Harming) ಪತ್ತೆಯಾಗಿದ್ದಾಳೆ. ಮೈಸೂರಿನ ಮಾನಸಿ ನಗರ ಬಿಎಸ್ಎನ್ಎಲ್ ಲೇಔಟ್‌ನಲ್ಲಿ ಘಟನೆ ನಡೆದಿದೆ. ಸೌಮ್ಯಾಶ್ರೀ (27) ಮೃತ ದುರ್ದೈವಿ.

ಆರು ತಿಂಗಳ ಹಿಂದೆ ಮೈಸೂರಿನ ಮಂಜುನಾಥ್ ಎಂಬುವರ ಜತೆ ಸೌಮ್ಯಾಶ್ರೀ ಮದುವೆಯಾಗಿದ್ದರು. ಸೌಮ್ಯಾಶ್ರೀ ತಂದೆ ಶ್ರೀಧರ್ ಬೆಂಗಳೂರಿನಿಂದ ಮೈಸೂರಿಗೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಸೌಮ್ಯಾಳ ನಡತೆ ಮೇಲೆ ಪತಿ ಮಂಜುನಾಥ್ ಅನುಮಾನ ಪಡುತ್ತಿದ್ದ ಎನ್ನಲಾಗಿದೆ.

ಈ ಕುರಿತು ಸೌಮ್ಯಾ ಹೆತ್ತವರಿಗೆ ಮಾಹಿತಿ ನೀಡಿದ್ದಳು. ಹೀಗಾಗಿ ಮಂಜುನಾಥ್ ಹಾಗೂ ಅವರ ಮನೆಯವರೆಲ್ಲ ಸೇರಿ ಸೌಮ್ಯಾಳನ್ನ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಮಗಳ ಶವ ಕಂಡು ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Self Harming
ಸೌಮ್ಯಳ ಶವ ಕಂಡು ಪೋಷಕರ ಆಕ್ರಂದನ

ಸ್ಥಳಕ್ಕೆ ಮೈಸೂರಿನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Medical Ethics : ಎದೆ ನೋವೆಂದು ಕ್ಲಿನಿಕ್​ಗೆ ಬಂದ ಯುವತಿ; ತಪಾಸಣೆ ನೆಪದಲ್ಲಿ ಅಂಗಿ ಬಿಚ್ಚಿಸಿ ಮುತ್ತಿಟ್ಟ ವೈದ್ಯ; ಕೇಸ್​ ದಾಖಲಿಸಲು ಕೋರ್ಟ್​ ಸೂಚನೆ

Medical Ethics: ಬೆಂಗಳೂರಿನ ಜರಗನಹಳ್ಳಿಯಲ್ಲಿರುವ ಆಸ್ಪತ್ರೆಯಲ್ಲಿ ಈ ‘ಅಧಿಕ ಪ್ರಸಂಗ ನಡೆದಿದೆ. ಎದೆ ನೋವಿನ ತಪಾಸಣೆ ನಡೆಸಲು ಬಂದ ಯುವತಿಯ ಒಳಉಡುಪುಗಳ ಬಿಚ್ಚಿಸಿದ್ದ ಆರೋಪಿ ವೈದ್ಯ , ಹೃದಯ ಬಡಿತ ಪರೀಕ್ಷೆ ಮಾಡುವ ನೆಪದಲ್ಲಿ ಸ್ತನಗಳ ಮೇಲೆ ಕೈಯಾಡಿಸಿದ್ದ. ಕೊನೆಗೆ ಮುತ್ತು ನೀಡಿದ್ದ. ತಕ್ಷಣ ಯುವತಿ ದೂರು ದಾಖಲಿಸಿದ್ದರು.

VISTARANEWS.COM


on

Medical Ethics
Koo

ಬೆಂಗಳೂರು: ವೈದ್ಯಕೀಯ ನೈತಿಕತೆ (Medical Ethics) ಮರೆತು ತನ್ನ ಬಳಿಕ ಚಿಕಿತ್ಸೆಗಾಗಿ ಬಂದಿದ್ದ ಯುವತಿಗೆ ತಪಾಸಣೆ ನೆಪದಲ್ಲಿ ಬಟ್ಟೆ ಹಾಗೂ ಒಳಉಡುಪುಗಳನ್ನು ಬಿಚ್ಚಿಸಿ ಸ್ತನಗಳ ಮೇಲೆ ಮುತ್ತಿಟ್ಟ ವೈದ್ಯನ ಮೇಲೆ ಕೇಸ್​ ದಾಖಲಿಸುವಂತೆ ಹೈಕೋರ್ಟ್​ ಹೇಳಿದೆ. ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ರದ್ದು ಮಾಡುವಂತೆ ಆರೋಪಿ ವೈದ್ಯ ಸಲ್ಲಿಸಿದ್ದ ಅರ್ಜಿಯನ್ನು ರದ್ದು ಮಾಡಿದ ಕೋರ್ಟ್​, ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶಿಸಿದೆ. ಇದು ವೈದ್ಯಕೀಯ ನೈತಿಕತೆಯನ್ನು ಮರೆಯುವ ವೃತ್ತಿಪರರಿಗೆ ತಕ್ಕ ಪಾಠ ಎಂಬುದಾಗಿ ಕೋರ್ಟ್​​ ಅಭಿಪ್ರಾಯಪಟ್ಟಿದೆ.

ಬೆಂಗಳೂರಿನ ಜರಗನಹಳ್ಳಿಯಲ್ಲಿರುವ ಆಸ್ಪತ್ರೆಯಲ್ಲಿ ಈ ‘ಅಧಿಕ ಪ್ರಸಂಗ ನಡೆದಿದೆ. ಎದೆ ನೋವಿನ ತಪಾಸಣೆ ನಡೆಸಲು ಬಂದ ಯುವತಿಯ ಒಳಉಡುಪುಗಳ ಬಿಚ್ಚಿಸಿದ್ದ ಆರೋಪಿ ವೈದ್ಯ , ಹೃದಯ ಬಡಿತ ಪರೀಕ್ಷೆ ಮಾಡುವ ನೆಪದಲ್ಲಿ ಸ್ತನಗಳ ಮೇಲೆ ಕೈಯಾಡಿಸಿದ್ದ. ಕೊನೆಗೆ ಮುತ್ತು ನೀಡಿದ್ದ. ತಕ್ಷಣ ಯುವತಿ ದೂರು ದಾಖಲಿಸಿದ್ದರು. ಈ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಇದನ್ನು ರದ್ದು ಮಾಡುವಂತೆ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್​ ಅರ್ಜಿ ವಜಾ ಮಾಡುವ ಮೂಲಕ ಆರೋಪಿಯ ಬಂಧನವಾಗಲಿದೆ.

ಕೋರ್ಟ್​ ಅಭಿಪ್ರಾಯವೇನು?

ವೈದ್ಯರು ತನ್ನ ವೃತ್ತಿ ನೈತಿಕತೆ ಹಾಗೂ ಜನರ ನಂಬಿಕೆ ದುರುಪಯೋಗಪಡಿಸಿಕೊಂಡರೆ ವೈದ್ಯ ಮತ್ತು ರೋಗಿಯ ನಡುವಿನ ಸಂಬಂಧಕ್ಕೆ ಅಪಚಾರವಾಗುತ್ತದೆ. ರೋಗಿಯ ದೇಹ ವೈದ್ಯಕೀಯ ತಪಾಸಣೆಗೆ ಸೀಮಿತ. ದುರುಪಯೋಗ ಸಲ್ಲ. ಪ್ರಕರಣದಲ್ಲಿ ಸ್ಪಷ್ಟವಾದ ಲೈಂಗಿಕ ಪ್ರಚೋದನೆ ಕಂಡುಬಂದಿರುವುದರಿಂದ ವೈದ್ಯರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲಾಗದು ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: CM Award : ಕಳಂಕಿತ ಡಿವೈಎಸ್ಪಿಜಾವೀದ್​ಗೆ ಸಿಎಂ ಪದಕ ನೀಡುವಂತೆ ಶಿಫಾರಸು; ಶಾಸಕ ಕಂದಕೂರ ವಿರೋಧ

ವೈದ್ಯರು ದೂರುದಾರರ ಬಳಿ ಆಕೆಯ ಶರ್ಟ್ ಮತ್ತು ಒಳ ಉಡುಪು ಬಿಚ್ಚುವಂತೆ ಹೇಳಿದ್ದಾರೆ. ಪರೀಕ್ಷೆ ಮಾಡುವುದನ್ನು ಬಿಟ್ಟು ಸ್ತನದ ಮೇಲೆ ಮುತ್ತು ನೀಡಿದ ಆರೋಪ ಎದುರಿಸುತ್ತಿದ್ದಾರೆ. ವೈದ್ಯರ ಈ ನಡತೆ ಐಪಿಸಿಯ ಸೆಕ್ಷನ್ 354ಎ(1)(i) ಅಡಿ ಅಪರಾಧವೆಂದು ಪರಿಗಣಿಸಲ್ಪಡುವ ಅಂಶಗಳಾಗಿರುತ್ತದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಹೇಳಿದ್ದಾರೆ.

ಏನಿದು ಪ್ರಕರಣ

ಸಂತ್ರಸ್ತೆ ಯುವತಿ ಎದೆನೋವಿನಿಂದ ಬಳಲುತ್ತಿದ್ದರು. ಅವರು ಜೆಪಿ ನಗರದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಚಿಕಿತ್ಸೆ ನೀಡಿದ ನಂತರ ಇಸಿಜಿ ಮತ್ತು ಎದೆಯ ಎಕ್ಸ್-ರೇ ಪರೀಕ್ಷೆಗೆ ಒಳಗಾಗುವಂತೆ ವೈದ್ಯರು ಸೂಚಿಸಿದ್ದರು. ಅಲ್ಲದೆ, ವರದಿಗಳನ್ನು ವಾಟ್ಸಾಪ್‌ ನಲ್ಲಿ ಕಳುಹಿಸಲು ಹೇಳಿದ್ದರು. ವರದಿಗಳನ್ನು ನೋಡಿದ ವೈದ್ಯರು ಮಾರ್ಚ್ 21 ರಂದು ಮಧ್ಯಾಹ್ನ 2 ಗಂಟೆಗೆ ಜರಗನಹಳ್ಳಿಯಲ್ಲಿರುವ ತನ್ನ ಕ್ಲಿನಿಕ್‌ಗೆ ಭೇಟಿ ನೀಡುವಂತೆ ಹೇಳಿದ್ದರು.

ಅಂತೆಯೇ ಯುವತಿ ಕ್ಲಿನಿಕ್‌ಗೆ ಭೇಟಿ ನೀಡಿದಾಗ ವೈದ್ಯ ಮಾತ್ರ ಅಲ್ಲಿದ್ದರು. ತಪಾಸಣಾ ಕೋಣೆಗೆ ಕರೆದೊಯ್ದು ವೈದ್ಯರು ಮಲಗಲು ಹೇಳಿದ್ದರು. ಬಳಿಕ ಆಕೆಯ ಎದೆಯ ಮೇಲೆ ಸ್ಟೆತಸ್ಕೋಪ್ ಇಟ್ಟು ಹೃದಯ ಬಡಿತ ಪರೀಕ್ಷಿಸಲು ಪ್ರಾರಂಭಿಸಿದ್ದರು. ಮುಂದುವರಿದು ಆಕೆಯ ಬಳಿ ಶರ್ಟ್ ಮತ್ತು ಒಳ ಉಡುಪು ತೆಗೆಯಲು ಹೇಳಿದ್ದರು. ಐದು ನಿಮಿಷಗಳ ಪರೀಕ್ಷೆಯ ನಂತರ, ಕೈಗಳಿಂದ ಸ್ತನವನ್ನು ಸ್ಪರ್ಶಿಸಲು ಪ್ರಾರಂಭಿಸಿದ್ದರು. ಅಂತಿಮವಾಗಿ ಸ್ತನಕ್ಕೆ ಮುತ್ತಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಗಾಬರಿಗೊಂಡ ಆಕೆ ಕ್ಲಿನಿಕ್‌ನಿಂದ ಓಡಿಬಂದು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದರು. ಮರುದಿನ ಅವರು ಪುಟ್ಟೇನಹಳ್ಳಿ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ದಾಖಲಿಸಿದ್ದರು.

Continue Reading
Advertisement
Self Harming
ಉತ್ತರ ಕನ್ನಡ3 mins ago

Self Harming : ಪಿಎಸ್‌ಐ ಕಿರುಕುಳ; ಕುಡಿದ ಅಮಲಿನಲ್ಲಿ ಠಾಣೆ ಎದುರೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ

Shakib Al Hasan
ಕ್ರೀಡೆ21 mins ago

Shakib Al Hasan: ನಿವೃತ್ತಿಯಾಗಿ ಎಂದು ಲೇವಡಿ ಮಾಡಿದ ಸೆಹವಾಗ್​ಗೆ ತಕ್ಕ ತಿರುಗೇಟು ನೀಡಿದ ಬಾಂಗ್ಲಾ ನಾಯಕ

Farmer Death
ಮೈಸೂರು30 mins ago

Farmer Death : ಸಾಲದ ಶೂಲಕ್ಕೆ ಮನನೊಂದ ರೈತ; ಕೆರೆಗೆ ಹಾರಿ ಆತ್ಮಹತ್ಯೆ

Gold Rate Today
ಚಿನ್ನದ ದರ30 mins ago

Gold Rate Today: ಆಭರಣ ಖರೀದಿಸಲು ಇದು ಸಕಾಲ; ಚಿನ್ನದ ಬೆಲೆ ಇಳಿಕೆ

Duniya Vijay wife Nagarathna Facebook Post After Court Order
ಸ್ಯಾಂಡಲ್ ವುಡ್44 mins ago

Duniya Vijay: ಗಂಡ ಕೈಬಿಟ್ರೂ, ನಂಬಿದ ದೇವರು ಕೈ ಬಿಡಲಿಲ್ಲ: ದುನಿಯಾ ವಿಜಯ್ ಪತ್ನಿ ನಾಗರತ್ನ

Actress Bbk 10 Siri Marriage Video Goes Viral
ಬಿಗ್ ಬಾಸ್54 mins ago

Actress Siri: ಸಿಂಪಲ್‌ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ `ಬಿಗ್‌ ಬಾಸ್‌ ಕನ್ನಡ 10′ ಸ್ಪರ್ಧಿ, ನಟಿ ಸಿರಿ!

Self Harming
ಕ್ರೈಂ56 mins ago

Self Harming : ಒಂದೇ ದಿನ ನಾಲ್ವರು ಗೃಹಿಣಿಯರ ಆತ್ಮಹತ್ಯೆ; ಅವರಲ್ಲಿಬ್ಬರು ಯೋಧರ ಪತ್ನಿಯರು

Euro Cup 2024
ಕ್ರೀಡೆ56 mins ago

Euro Cup 2024: ಇಂದಿನಿಂದ ಯುರೋ ಕಪ್ ಟೂರ್ನಿ; ಜರ್ಮನಿ-ಸ್ಕಾಟ್ಲೆಂಡ್ ನಡುವೆ ಮೊದಲ ಪಂದ್ಯ

Medical Ethics
ಪ್ರಮುಖ ಸುದ್ದಿ58 mins ago

Medical Ethics : ಎದೆ ನೋವೆಂದು ಕ್ಲಿನಿಕ್​ಗೆ ಬಂದ ಯುವತಿ; ತಪಾಸಣೆ ನೆಪದಲ್ಲಿ ಅಂಗಿ ಬಿಚ್ಚಿಸಿ ಮುತ್ತಿಟ್ಟ ವೈದ್ಯ; ಕೇಸ್​ ದಾಖಲಿಸಲು ಕೋರ್ಟ್​ ಸೂಚನೆ

Giorgia Meloni
ವೈರಲ್ ನ್ಯೂಸ್1 hour ago

Giorgia Meloni: ಕೈ ಮುಗಿದು, ನಮಸ್ಕಾರ ಮಾಡಿ ಅತಿಥಿಗಳನ್ನು ಸ್ವಾಗತಿಸಿದ ಇಟಲಿ ಪ್ರಧಾನಿ ಮೆಲೋನಿ; ವೈರಲ್‌ ವಿಡಿಯೊ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌