Murder Case: ಮತ್ತೊಂದು ʼಫ್ರಿಜ್‌ನಲ್ಲಿ ಹೆಣʼ ಕೇಸು: ಹೈದರಾಬಾದ್‌ನಲ್ಲಿ ಪ್ರೇಯಸಿಯ ಕೊಂದು ಕತ್ತರಿಸಿ ಅಡಗಿಸಿಟ್ಟ ಪಾತಕಿ - Vistara News

ಕ್ರೈಂ

Murder Case: ಮತ್ತೊಂದು ʼಫ್ರಿಜ್‌ನಲ್ಲಿ ಹೆಣʼ ಕೇಸು: ಹೈದರಾಬಾದ್‌ನಲ್ಲಿ ಪ್ರೇಯಸಿಯ ಕೊಂದು ಕತ್ತರಿಸಿ ಅಡಗಿಸಿಟ್ಟ ಪಾತಕಿ

ಯರ್ರಂ ಅನುರಾಧ ರೆಡ್ಡಿ ಎಂಬಾಕೆಯ ಜತೆಗೆ ಈತ ಅಕ್ರಮ ಸಂಬಂಧ ಹೊಂದಿದ್ದ. ಸುಮಾರು 7 ಲಕ್ಷ ರೂಪಾಯಿಗಳಷ್ಟು ಸಾಲವನ್ನು ಈತ ಆಕೆಯ ಬಳಿ ಮಾಡಿದ್ದು, ಆಕೆ ಮರಳಿ ಕೇಳಿದಾಗ ಆಕೆಯನ್ನು ಕೊಂದು ಹಾಕಿದ್ದಾನೆ.

VISTARANEWS.COM

on

murder culprit chandrmohan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್:‌ ನಗರದ 48 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಕೊಂದು 6 ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಅಡಗಿಸಿಟ್ಟು ಬರ್ಬರತೆ ಮೆರೆದಿದ್ದಾನೆ. ವಾಸನೆ ಬರತೊಡಗಿ ಪರಿಶೀಲಿಸಿದಾಗ ಕೃತ್ಯ ಹೊರಬಿದ್ದಿದೆ.

ಪಾತಕಿಯನ್ನು ಚಂದ್ರಮೋಹನ್‌ ರೆಡ್ಡಿ (48) ಎಂದು ಗುರುತಿಸಲಾಗಿದೆ. ಯರ್ರಂ ಅನುರಾಧ ರೆಡ್ಡಿ (55) ಎಂಬಾಕೆಯ ಜತೆಗೆ ಈತ ಅಕ್ರಮ ಸಂಬಂಧ ಹೊಂದಿದ್ದ. ಸುಮಾರು 7 ಲಕ್ಷ ರೂಪಾಯಿಗಳಷ್ಟು ಸಾಲವನ್ನು ಈತ ಆಕೆಯ ಬಳಿ ಮಾಡಿದ್ದು, ಆಕೆ ಮರಳಿ ಕೇಳಿದಾಗ ಆಕೆಯನ್ನು ಕೊಂದು ಹಾಕಿದ್ದಾನೆ.

ಪ್ರಕರಣ ಬಯಲಿಗೆ ಬಂದುದು ಹೀಗೆ: ಮೊದಲಿಗೆ ಆಕೆಯ ಕತ್ತರಿಸಿದ ತಲೆ ಕಸದ ತೊಟ್ಟಿಯಲ್ಲಿ ಕಂಡುಬಂದಿತ್ತು. ಇದರ ಹಿಂದೆ ಹೋದ ಪೊಲೀಸರಿಗೆ ಪಾತಕಿ ಸಿಕ್ಕಿಬಿದ್ದಿದ್ದ. ದೇಹದ ಇತರ ಭಾಗಗಳು ಫ್ರಿಜ್‌ನಲ್ಲಿ ಕಂಡುಬಂದಿದ್ದವು. ಇನ್ನಿತರ ಹಲವು ಭಾಗಗಳನ್ನು ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟಿದ್ದ. ಚೂರಿಯಿಂದ ಇರಿದು ಆಕೆಯನ್ನು ಕೊಂದಿದ್ದ ಪಾತಕಿ, ಕಲ್ಲು ಕತ್ತರಿಸುವ ಯಂತ್ರದಿಂದ ದೇಹದ ಭಾಗಗಳನ್ನು ಕತ್ತರಿಸಿದ್ದ.

ಷೇರ್‌ ಮಾರುಕಟ್ಟೆಯಲ್ಲಿ ಹಣ ತೊಡಗಿಸಿದ್ದ ಈತ, ಪ್ರೇಯಸಿ ಅನುರಾಧ ಬಳಿ 7 ಲಕ್ಷ ರೂ. ಹಣ ಪಡೆದಿದ್ದ. ಆಕೆ ಈತನ ಮನೆಯ ಕೆಳಮಹಡಿಯಲ್ಲಿ ವಾಸವಾಗಿದ್ದಳು. ಪತಿಯನ್ನು ಕಳೆದುಕೊಂಡಿದ್ದ ಈಕೆಯೊಂದಿಗೆ ಸುಮಾರು 15 ವರ್ಷಗಳಿಂದ ಈತ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದೀಗ ಪೊಲೀಸರ ಕಸ್ಟಡಿಯಲ್ಲಿದ್ದಾನೆ.

ಇದನ್ನೂ ಓದಿ: Murder case: ಶೀಲ ಶಂಕಿಸಿ ಪತ್ನಿಯ ಕೊಲೆ ಮಾಡಿದ ಶಿಕ್ಷಕ; ಮನೆಗೆ ಬೀಗ ಹಾಕಿ ಪರಾರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೈಂ

Physical Abuse: ಹಿಟಾಚಿ ಕೆಳಗೇ 7 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪಿಶಾಚಿ

Physical Abuse: ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಾಯಿ ಮತ್ತು ಮಗು ಗರುಡ ಮಾಲ್ ಪಕ್ಕದಲ್ಲಿ ಭಿಕ್ಷೆ ಬೇಡುತ್ತಿದ್ದವರಾಗಿದ್ದು, ತಾಯಿಗೆ ಮಾತು ಬಾರದು. ಮಗುವಿನಲ್ಲಿ ಆಗುತ್ತಿರುವ ರಕ್ತಸ್ರಾವ ಗಮನಿಸಿ ತಾಯಿ ಮತ್ತು ಸ್ಥಳೀಯರು ಪೊಲೀಸರ ಮೊರೆ ಹೋಗಿದ್ದಾರೆ.

VISTARANEWS.COM

on

Pune Police 60 Hours Operation; Drugs worth more than Rs 1300 crore seized
Koo

ಬೆಂಗಳೂರು: ರಾಜಧಾನಿಯಲ್ಲಿ ಕಾಮಪಿಶಾಚಿಯೊಬ್ಬ 7 ವರ್ಷದ ಹೆಣ್ಣುಮಗುವಿನ ಮೇಲೆ‌ ಅತ್ಯಾಚಾರ (Physical Abuse) ಎಸಗಿದ್ದಾನೆ. ಪಾನಿಪುರಿ ಕೊಡಿಸ್ತೇನೆ ಅಂತ ಕರೆದೊಯ್ದವನು ಈ ಅಮಾನುಷ ಕೃತ್ಯ (Crime News) ಎಸಗಿದ್ದಾನೆ.

ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಾಯಿ ಮತ್ತು ಮಗು ಗರುಡ ಮಾಲ್ ಪಕ್ಕದಲ್ಲಿ ಭಿಕ್ಷೆ ಬೇಡುತ್ತಿದ್ದವರಾಗಿದ್ದು, ತಾಯಿಗೆ ಮಾತು ಬಾರದು. ಮಗುವಿನಲ್ಲಿ ಆಗುತ್ತಿರುವ ರಕ್ತಸ್ರಾವ ಗಮನಿಸಿ ತಾಯಿ ಮತ್ತು ಸ್ಥಳೀಯರು ಪೊಲೀಸರ ಮೊರೆ ಹೋಗಿದ್ದಾರೆ.

ಮೂಕ ತಾಯಿಯ ಮಗುವನ್ನು ರೇಪ್ ಮಾಡಿದ 54ರ ವ್ಯಕ್ತಿ, ಪಾನಿಪುರಿ ಕೊಡಿಸುತ್ತೇನೆ ಎಂದು ಮಗುವನ್ನು ಕರೆದೊಯ್ದು ರಸ್ತೆಯ ಪಕ್ಕದಲ್ಲಿದ್ದ ಹಿಟಾಚಿ ಕೆಳಗೆ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ರೇಪ್‌ ಮಾಡಿದವನೂ ನಿರ್ವಸತಿ ವ್ಯಕ್ತಿ ಎಂದು ತಿಳಿದುಬಂದಿದೆ. ಮೆಗ್ರಾತ್ ರೋಡ್ ಮುಖ್ಯರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ತರಲಾಗಿದ್ದ ಹಿಟಾಚಿ ರಸ್ತೆ ಪಕ್ಕ ನಿಂತಿತ್ತು. ಸದ್ಯ ಮಗುವಿಗೆ ಮೆಡಿಕಲ್ ಚೆಕಪ್‌ ಮಾಡಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಅಶೋಕನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಿಸಿಕೊಳ್ಳುತ್ತಿದ್ದಾರೆ.

ಚುನಾವಣೆ ಗಲಾಟೆ, ವಾಟರ್ ಮ್ಯಾನ್ ಅನುಮಾನಾಸ್ಪದ ಸಾವು

ತುಮಕೂರು: ಚುನಾವಣೆ ಸಂಬಂಧಿತ ಗಲಾಟೆ ಸಂಭವಿಸಿದ ಬಳಿಕ ವಾಟರ್ ಮ್ಯಾನ್ ಒಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಕಿಚ್ಚೇವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚಂದ್ರಪ್ಪ (56) ಮೃತ ವಾಟರ್ ಮ್ಯಾನ್. ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು “ನೀನು ಬಿಜೆಪಿ ಪರವಾಗಿ ಕೆಲಸ‌ ಮಾಡ್ತಿಯಾ?” ಎಂದು ಈತನ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಚಂದ್ರಪ್ಪ ಶವ ಪತ್ತೆಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಾದ ನಟೇಶ್, ರವೀಶ್, ವೆಂಕಟೇಶ, ಸಂತೋಷ ನಿನ್ನೆ ಗಲಾಟೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಮುಸ್ಲಿಮ್ ಯುವಕರಿಂದ ಬಸ್​ ಚಾಲಕನ ಮೇಲೆ ಹಲ್ಲೆ, ನೌಕರರಿಂದ ​ ಧರಣಿ

ಬೈಲಹೊಂಗಲ: ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ ಘಟನೆ (Bus driver Attacked) ನಡೆದಿದೆ. ಆಕ್ರೋಶಗೊಂಡ ಸಾರಿಗೆ ನೌಕರರು ಬೈಲಹೊಂಗಲ ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತರು. ಚಾಲಕ ಬಸ್ ನಿಲ್ಲಿಸಲಿಲ್ಲ ಎಂದು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ಧಾರವಾಡದಿಂದ ಬೈಲಹೊಂಗಕ್ಕೆ ಮುಸ್ಲಿಂ ಯುವಕರು ಬಂದಿದ್ದರು. ಬಸ್​​ ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟಿತ್ತು. ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಗುಂಪುಕಟ್ಟಿ ಹಲ್ಲೆ ನಡೆಸಿದ್ದರು. ಬೇಸತ್ತ ಚಾಲಕರು ವೃತ್ತಿಯ ವೇಳೆ ಸುರಕ್ಷತೆ ನೀಡಿ ಧರಣಿ ಮಾಡಿದ್ದರು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿರುವ ಸಾರಿಗೆ ಮೇಲಧಿಕಾರಿಗಳು ಬಂದು ಮಾತು ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಇದನ್ನೂ ಓದಿ: lok sabha election : ಒಂದು ವರ್ಷದ ಕೂಸಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಬಂದ ಪೊಲೀಸ್​​!

Continue Reading

ಕ್ರೈಂ

UDR Case: ಚುನಾವಣೆ ಗಲಾಟೆ, ವಾಟರ್ ಮ್ಯಾನ್ ಅನುಮಾನಾಸ್ಪದ ಸಾವು

UDR Case: ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು “ನೀನು ಬಿಜೆಪಿ ಪರವಾಗಿ ಕೆಲಸ‌ ಮಾಡ್ತಿಯಾ?” ಎಂದು ಈತನ ಮೇಲೆ ಹಲ್ಲೆ (Assault case) ಮಾಡಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ನೇಣು ಬಿಗಿದ (Self Harming) ಸ್ಥಿತಿಯಲ್ಲಿ ಚಂದ್ರಪ್ಪ ಶವ ಪತ್ತೆಯಾಗಿದೆ.

VISTARANEWS.COM

on

Crime Scene
Koo

ತುಮಕೂರು: ಚುನಾವಣೆ (Lok sabha Election 2024) ಸಂಬಂಧಿತ ಗಲಾಟೆ ಸಂಭವಿಸಿದ ಬಳಿಕ ವಾಟರ್ ಮ್ಯಾನ್ (Water man) ಒಬ್ಬರು ಅನುಮಾನಾಸ್ಪದವಾಗಿ (UDR Case, unnatural death) ಸಾವಿಗೀಡಾಗಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಕಿಚ್ಚೇವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚಂದ್ರಪ್ಪ (56) ಮೃತ ವಾಟರ್ ಮ್ಯಾನ್. ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು “ನೀನು ಬಿಜೆಪಿ ಪರವಾಗಿ ಕೆಲಸ‌ ಮಾಡ್ತಿಯಾ?” ಎಂದು ಈತನ ಮೇಲೆ ಹಲ್ಲೆ (Assault case) ಮಾಡಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ನೇಣು ಬಿಗಿದ (Self Harming) ಸ್ಥಿತಿಯಲ್ಲಿ ಚಂದ್ರಪ್ಪ ಶವ ಪತ್ತೆಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಾದ ನಟೇಶ್, ರವೀಶ್, ವೆಂಕಟೇಶ, ಸಂತೋಷ ನಿನ್ನೆ ಗಲಾಟೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಮುಸ್ಲಿಮ್ ಯುವಕರಿಂದ ಬಸ್​ ಚಾಲಕನ ಮೇಲೆ ಹಲ್ಲೆ, ನೌಕರರಿಂದ ​ ಧರಣಿ

ಬೈಲಹೊಂಗಲ: ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ ಘಟನೆ (Bus driver Attacked) ನಡೆದಿದೆ. ಆಕ್ರೋಶಗೊಂಡ ಸಾರಿಗೆ ನೌಕರರು ಬೈಲಹೊಂಗಲ ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತರು. ಚಾಲಕ ಬಸ್ ನಿಲ್ಲಿಸಲಿಲ್ಲ ಎಂದು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ಧಾರವಾಡದಿಂದ ಬೈಲಹೊಂಗಕ್ಕೆ ಮುಸ್ಲಿಂ ಯುವಕರು ಬಂದಿದ್ದರು. ಬಸ್​​ ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟಿತ್ತು. ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಗುಂಪುಕಟ್ಟಿ ಹಲ್ಲೆ ನಡೆಸಿದ್ದರು. ಬೇಸತ್ತ ಚಾಲಕರು ವೃತ್ತಿಯ ವೇಳೆ ಸುರಕ್ಷತೆ ನೀಡಿ ಧರಣಿ ಮಾಡಿದ್ದರು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿರುವ ಸಾರಿಗೆ ಮೇಲಧಿಕಾರಿಗಳು ಬಂದು ಮಾತು ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಜೀಪ್ ಮರಕ್ಕೆ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು

ರಿಪ್ಪನ್‌ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಜೀಪ್‌ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ (Road Accident) ಸ್ಥಳದಲ್ಲೇ ಚಾಲಕ ಮೃತಪಟ್ಟಿರುವ ಘಟನೆ ಹೊಸನಗರ ತಾಲೂಕಿನ ಅರಸಾಳು ಬಳಿಯ 9ನೇ ಮೈಲಿಕಲ್ಲಿನ ಸಮೀಪ ನಡೆದಿದೆ.

ರಿಪ್ಪನ್‌ಪೇಟೆ ಸಮೀಪದ ತಳಲೆ ನಿವಾಸಿ ಪ್ರಭೀನ್ (45) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ. 9ನೇ ಮೈಲಿಕಲ್ಲು ಹಾಗೂ ಸೂಡೂರು ಗೇಟ್‌ ನ ನಡುವಿನ ಶೆಟ್ಟಿಕೆರೆ ಅಭಯಾರಣ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಜೀಪ್ ಮರಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದು ಉರುಳಿ ಬಿದ್ದಿದೆ.

ಅಪಘಾತದಲ್ಲಿ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹವನ್ನು ಹೊರತೆಗೆಯಲು ಹರಸಾಹಸ ಪಡಲಾಯಿತು. ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ನಿಂಗರಾಜ್ ಕೆ.ವೈ. ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: lok sabha election : ಒಂದು ವರ್ಷದ ಕೂಸಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಬಂದ ಪೊಲೀಸ್​​!

Continue Reading

ಕರ್ನಾಟಕ

Bus driver Attacked : ಮುಸ್ಲಿಮ್ ಯುವಕರಿಂದ ಬಸ್​ ಚಾಲಕನ ಮೇಲೆ ಹಲ್ಲೆ, ನೌಕರರಿಂದ ​ ಠಾಣೆ ಮುಂಭಾಗ ಧರಣಿ

Bus Driver Attacked: ಧಾರವಾಡದಿಂದ ಬೈಲಹೊಂಗಕ್ಕೆ ಮುಸ್ಲಿಂ ಯುವಕರು ಬಂದಿದ್ದರು. ಬಸ್​​ ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟಿತ್ತು. ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಗುಂಪುಕಟ್ಟಿ ಹಲ್ಲೆ ನಡೆಸಿದ್ದರು. ಬೇಸತ್ತ ಚಾಲಕರು ವೃತ್ತಿಯ ವೇಳೆ ಸುರಕ್ಷತೆ ನೀಡಿ ಧರಣಿ ಮಾಡಿದ್ದರು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿರುವ ಸಾರಿಗೆ ಮೇಲಧಿಕಾರಿಗಳು ಬಂದು ಮಾತು ನಡೆಸಿದ್ದಾರೆ.

VISTARANEWS.COM

on

Bus Driver attacked
Koo

ಬೈಲಹೊಂಗಲ: ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ ಘಟನೆ (Bus driver Attacked) ನಡೆದಿದೆ. ಆಕ್ರೋಶಗೊಂಡ ಸಾರಿಗೆ ನೌಕರರು ಬೈಲಹೊಂಗಲ ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತರು. ಚಾಲಕ ಬಸ್ ನಿಲ್ಲಿಸಲಿಲ್ಲ ಎಂದು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ಧಾರವಾಡದಿಂದ ಬೈಲಹೊಂಗಕ್ಕೆ ಮುಸ್ಲಿಂ ಯುವಕರು ಬಂದಿದ್ದರು. ಬಸ್​​ ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟಿತ್ತು. ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಗುಂಪುಕಟ್ಟಿ ಹಲ್ಲೆ ನಡೆಸಿದ್ದರು. ಬೇಸತ್ತ ಚಾಲಕರು ವೃತ್ತಿಯ ವೇಳೆ ಸುರಕ್ಷತೆ ನೀಡಿ ಧರಣಿ ಮಾಡಿದ್ದರು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿರುವ ಸಾರಿಗೆ ಮೇಲಧಿಕಾರಿಗಳು ಬಂದು ಮಾತು ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಜೀಪ್ ಮರಕ್ಕೆ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು

ರಿಪ್ಪನ್‌ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಜೀಪ್‌ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ (Road Accident) ಸ್ಥಳದಲ್ಲೇ ಚಾಲಕ ಮೃತಪಟ್ಟಿರುವ ಘಟನೆ ಹೊಸನಗರ ತಾಲೂಕಿನ ಅರಸಾಳು ಬಳಿಯ 9ನೇ ಮೈಲಿಕಲ್ಲಿನ ಸಮೀಪ ನಡೆದಿದೆ.

ರಿಪ್ಪನ್‌ಪೇಟೆ ಸಮೀಪದ ತಳಲೆ ನಿವಾಸಿ ಪ್ರಭೀನ್ (45) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ. 9ನೇ ಮೈಲಿಕಲ್ಲು ಹಾಗೂ ಸೂಡೂರು ಗೇಟ್‌ ನ ನಡುವಿನ ಶೆಟ್ಟಿಕೆರೆ ಅಭಯಾರಣ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಜೀಪ್ ಮರಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದು ಉರುಳಿ ಬಿದ್ದಿದೆ.

ಇದನ್ನೂ ಓದಿ: lok sabha election : ಒಂದು ವರ್ಷದ ಕೂಸಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಬಂದ ಪೊಲೀಸ್​​!

ಅಪಘಾತದಲ್ಲಿ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹವನ್ನು ಹೊರತೆಗೆಯಲು ಹರಸಾಹಸ ಪಡಲಾಯಿತು. ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ನಿಂಗರಾಜ್ ಕೆ.ವೈ. ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

ಪ್ರಮುಖ ಸುದ್ದಿ

Car Accident : ಟೈರ್​ ಬ್ಲಾಸ್ಟ್​ ಆಗಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕಾರು; ಇಬ್ಬರ ದುರ್ಮರಣ

Car Accident: ಅತಿ ವೇಗದಲ್ಲಿ ಕಾರು ಚಲಿಸುತ್ತಿದ್ದ ವೇಳೆ ಟೈರ್ ಬ್ಲಾಸ್ಟ್​ ಆಗಿದ್ದರಿಂದ ಕಾರಿನ ಚಾಲಕನ ನಿಯಂತ್ರಣ ತಪ್ಪಿದೆ. ಅದು ಬೈಕ್​ಗೆ ಗುದ್ದಿದ್ದು ಬೈಕ್ ಸವಾರು ಎಗರಿಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಅವರನ್ನು ರಾಯಬಾಗ ತಾಲೂಕಿನ ಬೆನ್ನಿವಾಡ ಗ್ರಾಮದ ರಮೇಶ ಪಾಟೀಲ ಎಂದು ತಿಳಿದುಬಂದಿದೆ.

VISTARANEWS.COM

on

Car Accident
Koo

ಬೆಳಗಾವಿ : ವೇಗವಾಗಿ ಚಲಿಸುತ್ತಿದ್ದ ಕಾರಿನ ಹಿಂಭಾಗದ ಟೈರ್​ ಬ್ಲಾಸ್ಟ್​​ ಆದ ಕಾರಣ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಗೊಂದಕ್ಕೆ ಗುದ್ದಿ ಪಲ್ಟಿಯಾದ (Car Accident) ಹಿನ್ನೆಲೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪೂರ ಪಟ್ಟಣದ ರೈಲ್ವೆ ಬ್ರಿಡ್ಜ್ ಬಳಿಯ ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಕಾರಿನ ಟೈರ್​ ಬ್ಲಾಸ್ಟ್ ಆಗಿದ್ದರಿಂದ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂಬುದಾಗಿ ಸ್ಥಳೀಯರು ಹೇಳಿದ್ದಾರೆ.

ಅತಿ ವೇಗದಲ್ಲಿ ಕಾರು ಚಲಿಸುತ್ತಿದ್ದ ವೇಳೆ ಟೈರ್ ಬ್ಲಾಸ್ಟ್​ ಆಗಿದ್ದರಿಂದ ಕಾರಿನ ಚಾಲಕನ ನಿಯಂತ್ರಣ ತಪ್ಪಿದೆ. ಅದು ಬೈಕ್​ಗೆ ಗುದ್ದಿದ್ದು ಬೈಕ್ ಸವಾರು ಎಗರಿಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಅವರನ್ನು ರಾಯಬಾಗ ತಾಲೂಕಿನ ಬೆನ್ನಿವಾಡ ಗ್ರಾಮದ ರಮೇಶ ಪಾಟೀಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Lok Sabha Election 2024: ಮುಸ್ಲಿಂ ಮೀಸಲಾತಿ ಬಗ್ಗೆ ಮೋದಿ ಹೇಳಿದ್ದು ಸುಳ್ಳು: ದಿನೇಶ್ ಗುಂಡೂರಾವ್

ಕಾರಿನಲ್ಲಿ ಏಳು ಜನ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಉಳಿದವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖಾನಾಪೂರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಜೀಪ್ ಮರಕ್ಕೆ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು

ರಿಪ್ಪನ್‌ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಜೀಪ್‌ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ (Road Accident) ಸ್ಥಳದಲ್ಲೇ ಚಾಲಕ ಮೃತಪಟ್ಟಿರುವ ಘಟನೆ ಹೊಸನಗರ ತಾಲೂಕಿನ ಅರಸಾಳು ಬಳಿಯ 9ನೇ ಮೈಲಿಕಲ್ಲಿನ ಸಮೀಪ ನಡೆದಿದೆ.

ರಿಪ್ಪನ್‌ಪೇಟೆ ಸಮೀಪದ ತಳಲೆ ನಿವಾಸಿ ಪ್ರಭೀನ್ (45) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ. 9ನೇ ಮೈಲಿಕಲ್ಲು ಹಾಗೂ ಸೂಡೂರು ಗೇಟ್‌ ನ ನಡುವಿನ ಶೆಟ್ಟಿಕೆರೆ ಅಭಯಾರಣ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಜೀಪ್ ಮರಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದು ಉರುಳಿ ಬಿದ್ದಿದೆ.

ಅಪಘಾತದಲ್ಲಿ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹವನ್ನು ಹೊರತೆಗೆಯಲು ಹರಸಾಹಸ ಪಡಲಾಯಿತು. ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ನಿಂಗರಾಜ್ ಕೆ.ವೈ. ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading
Advertisement
Pune Police 60 Hours Operation; Drugs worth more than Rs 1300 crore seized
ಕ್ರೈಂ15 mins ago

Physical Abuse: ಹಿಟಾಚಿ ಕೆಳಗೇ 7 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪಿಶಾಚಿ

Lok Sabha Election 2024 sandalwood celebs where do cast their votes
ರಾಜಕೀಯ17 mins ago

Lok Sabha Election 2024: ಸ್ಯಾಂಡಲ್‌ವುಡ್‌ ತಾರೆಯರು ಎಲ್ಲೆಲ್ಲಿ ವೋಟ್‌ ಹಾಕ್ತಾರೆ?

China Road
ದೇಶ27 mins ago

China Road: ಕಾಶ್ಮೀರ ಗಡಿಯಲ್ಲಿ ರಸ್ತೆ ನಿರ್ಮಿಸಿ ಚೀನಾ ಮತ್ತೆ ಉದ್ಧಟತನ; ಇಲ್ಲಿವೆ ಸ್ಯಾಟಲೈಟ್‌ ಚಿತ್ರಗಳು

Lok sabha election 2024
ದೇಶ55 mins ago

Lok Sabha Election 2024: 12 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ಶುರು

Crime Scene
ಕ್ರೈಂ57 mins ago

UDR Case: ಚುನಾವಣೆ ಗಲಾಟೆ, ವಾಟರ್ ಮ್ಯಾನ್ ಅನುಮಾನಾಸ್ಪದ ಸಾವು

lok sabha election 2024 sudha murthy voting
Live News2 hours ago

Lok Sabha Election 2024: ಲೋಕಸಭೆ ಚುನಾವಣೆ 2024 ಮತದಾನ Live News

ಅಂಕಣ2 hours ago

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Eating Bread
ಆಹಾರ/ಅಡುಗೆ2 hours ago

Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

Lok Sabha Election
ಪ್ರಮುಖ ಸುದ್ದಿ2 hours ago

Lok Sabha Election 2024: ಇಂದು ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

Karnataka Weather Forecast
ಮಳೆ2 hours ago

Karnataka Weather : ಮಳೆಯಾಟ ಬಂದ್‌; 12 ಜಿಲ್ಲೆಗಳಿಗೆ ಹೀಟ್‌ ವೇವ್‌ ಅಟ್ಯಾಕ್‌, ಯೆಲ್ಲೋ ಅಲರ್ಟ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ4 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ17 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ17 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ20 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 202422 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು4 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ4 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು4 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

ಟ್ರೆಂಡಿಂಗ್‌