ಕಿರುತೆರೆ
Nisha narasapa: ಬಗೆದಷ್ಟು ಬೆಳಕಿಗೆ ಬರ್ತಿದೆ ನಿಶಾ ನರಸಪ್ಪ ಮಾಡಿರುವ ಮಹಾ ಮೋಸ!
Nisha narasapa: ನಿಶಾಗೆ ಹಣ ಕೊಟ್ಟು ಕಳೆದುಕೊಂಡ ಹಲವರು ನಿಶಾ ನರಸಪ್ಪ ಮನೆಯ ಬಳಿ ಹೋಗಿ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಸುಮಾರು ಎರಡು ಕೋಟಿ ರೂಪಾಯಿ ವಂಚನೆಯನ್ನು ನಿಶಾ ನರಸಪ್ಪ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಮಾಸ್ಟರ್ ಆನಂದ್ (Master anadh) ಮಗಳ ಹೆಸರು ಬಳಸಿ ಜನರಿಗೆ ವಂಚನೆ (Fraud Case) ಮಾಡುತ್ತಿರುವ ಆರೋಪ ಎದುರಿಸುತ್ತಿರುವ ನಿಶಾ ನರಸಪ್ಪ (Nisha narasapa) ಜಾಲ ಬೆಳೆಯುತ್ತಲೇ ಇದೆ. ಎನ್ಎನ್ ಪ್ರೊಡಕ್ಷನ್ ಮತ್ತು ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಪ್ರಮೋಷನ್‌ಗಾಗಿ ಸೆಲೆಬ್ರಿಟಿಗಳನ್ನು ಸಂಪರ್ಕಿಸುವ ನಿಶಾ ಮಾತಲ್ಲೇ ಮರಳು ಮಾಡುತ್ತಿದ್ದರು. ಬಳಿಕ ಅದೇ ಸೆಲೆಬ್ರಿಟಿ ಹೆಸರು ಬಳಸಿಕೊಂಡು ಜನರಿಂದ ಲಕ್ಷ ಲಕ್ಷ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ. ನಿಶಾಗೆ ಹಣ ಕೊಟ್ಟು ಕಳೆದುಕೊಂಡ ಹಲವರು ನಿಶಾ ನರಸಪ್ಪ ಮನೆಯ ಬಳಿ ಹೋಗಿ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಸುಮಾರು ಎರಡು ಕೋಟಿ ರೂಪಾಯಿ ವಂಚನೆಯನ್ನು ನಿಶಾ ನರಸಪ್ಪ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ನಿಶಾ ಮೋಸದ ಬಲೆಗೆ ಬಿದ್ದು 10 ಲಕ್ಷ ರೂ. ಅರ್ಜುನ್ ಎಂಬುವರು ಕಳೆದುಕೊಂಡಿದ್ದಾರೆ. ನಿಶಾ ನರಸಪ್ಪ ಮಾಡಿರುವ ಮೋಸದ ಬಗ್ಗೆ ಆಡಿಯೊ ಕ್ಲಿಪ್ ಕೂಡ ಅರ್ಜುನ್ ಬಿಡುಗಡೆ ಮಾಡಿದ್ದಾರೆ. ಮನೆ ಹತ್ತಿರ ಬಂದು ಗಲಾಟೆ ಮಾಡಿದರೆ, ಒಂದು ರೂಪಾಯಿ ಸಹ ಸಿಗಲ್ಲ ಎಂದು ರಾಜಾರೋಷವಾಗಿ ನಿಶಾ ಹೇಳಿದ್ದಾಳೆ. ʻʻದುಡ್ಡೇ ಕೊಡಬೇಡ ಎಂದು ನಮ್ಮ ಮನೆಯವರು ಸಪೋರ್ಟ್ ಮಾಡುತ್ತಾರೆ. ನನ್ ಕಡೆ ಲಾಯರ್ ಇದಾರೆ. ನಮ್ಮ ಕಂಪನಿಯಿಂದ ತಿಂಗಳಿಗೆ ಇಷ್ಟು ಅಂತ ಅಮೌಂಟ್ ಲಾಯರ್‌ಗೆ ಕೊಡ್ತೇನೆ. ನಾನು ಕೋರ್ಟ್‌ಗೂ ಬರಲ್ಲ. ಸ್ಟೇಷನ್‌ಗೂ ಬರಲ್ಲʼʼಎಂದು ಓಪನ್ ಆಗಿ ಚಾಲೆಂಜ್ ಮಾಡಿದ್ದಾರೆ ನಿಶಾ.
ನಿಶಾ ಮೇಲೆ ಈ ಹಿಂದೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ಹಾಗೂ ಯಶವಂತಪುರ ಪೊಲೀಸ್ ಠಾಣೆಗಳಲ್ಲಿಯೂ ದೂರುಗಳು ದಾಖಲಾಗಿವೆ. ನಿಶಾ ತಮ್ಮ ಸಹೋದರನಿಂದ ಇಬ್ಬರಿಗೆ ಜೀವ ಬೆದರಿಕೆ ಹಾಕಿದ ಕುರಿತಾಗಿಯೂ ದೂರು ದಾಖಲಾಗಿತ್ತು. ಆದರೆ ಈಗ ವಂಶಿಕಾ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದ ಬಳಿಕವಷ್ಟೆ ನಿಶಾರ ಬಂಧನವಾಗಿದೆ. ವಂಚನೆ ಹಣದಿಂದ ಐಶಾರಾಮಿ ಜೀವನ್ನು ನಿಶಾ ನರಸಪ್ಪ ಕಳೆಯುತ್ತಿದ್ದರು, ದುಬಾರಿ ಇನ್ನೋವಾ ಕಾರನ್ನು ಸಹ ನಿಶಾ ಖರೀದಿಸಿದ್ದರು.
ಇದನ್ನೂ ಓದಿ: Nisha Narasapa: ಮಾಡೆಲಿಂಗ್ ಜತೆ ವಂಚನೆಗೂ ಎತ್ತಿದ ಕೈ, ಯಾರು ಈ ನಿಶಾ ನರಸಪ್ಪ?
ನಿಶಾ ನರಸಪ್ಪ ಸಾಮಾಜಿಕ ಜಾಲತಾಣದಲ್ಲಿ ತನಿಖೆ ಪ್ರಗತಿಯಲ್ಲಿದ್ದು, ಎಲ್ಲದ್ದಕ್ಕೂ ಉತ್ತರ ಕೊಡುತ್ತೇನೆ. ಹೊಸದಾಗಿ ಫೋಟೊ ಶೂಟ್ಗೆ ರಿಜಿಸ್ಟ್ರೇಷನ್ ಮಾಡಿಸುವವರು ದಯವಿಟ್ಟು ಎಲ್ಲರು ತಾಳ್ಮೆಯಿಂದ ಕಾಯಿರಿ ಎಂದು ಬರೆದುಕೊಂಡಿದ್ದಾರೆ. ನಿಶಾ ನರಸಪ್ಪ ಸದಾಶಿವನಗರ ಹಾಗೂ ಯಲಹಂಕ ನ್ಯೂಟೌನ್ನಲ್ಲಿ ಮೋಸ ಹೋದ ಪೋಷಕರು ಮತ್ತಷ್ಟು ವಂಚನೆ ಪ್ರಕರಣದ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?
ವಂಶಿಕಾ ಅಂಜನಿ ಕಶ್ಯಪ ಕಿರುತೆರೆಯಲ್ಲಿ ತನ್ನದೆ ಛಾಪು ಮೂಡಿಸಿ ಎಲ್ಲರ ಮನ ಗೆಲುತ್ತಿರುವ ಪೋರಿ. ತಂದೆ ನಟ ಮಾಸ್ಟರ್ ಆನಂದ್‌ರಂತೆ (Master anadh) ಅರಳು ಹುರಿದಂತೆ ಮಾತನಾಡುವ ವಂಶಿಕಾ (Vanshika Anjani kashyapa) ಸೋಶಿಯಲ್ ಮೀಡಿಯಾದಲ್ಲೂ (Social Media) ಹೆಚ್ಚು ಸದ್ದು ಮಾಡುತ್ತಿದ್ದಾಳೆ. ಈ ಬಾಲನಟಿ ವಂಶಿಕಾ ಹೆಸರನ್ನು ದುರುಪಯೋಗ (Fraud Case) ಮಾಡಿಕೊಳ್ಳಲಾಗುತ್ತಿದೆ ಎಂದು ತಾಯಿ ಯಶಸ್ವಿನಿ ಜು.13ರಂದು ಠಾಣೆ ಮೆಟ್ಟಿಲೇರಿದ್ದರು.
ವಂಶಿಕಾ ಮಾಸ್ಟರ್ ಆನಂದ್ ಹೆಸರಿನಲ್ಲಿ (Vanshika Anjani kashyapa) ಹಣ ಪೀಕಿದ ನಿಶಾ ನರಸಪ್ಪಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಒಂದೊಂದು ಹಳೇ ವಂಚನೆ ಕೇಸ್‌ಗಳು (Fraud Case) ಬೆಳಕಿಗೆ ಬರುತ್ತಿವೆ. ನಿಶಾ ನರಸಪ್ಪ (nisha narasapa) ವಿರುದ್ಧ ಇದೇ ಮೊದಲಲ್ಲ, ಈ ಹಿಂದೆಯೇ ವಂಚನೆ ಕೇಸ್ ದಾಖಲಾಗಿದೆ.
ಇವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ತಾರಾ ಎಂಬುವರಿಗೆ 20 ಲಕ್ಷ ರೂ. ವಂಚನೆ ಮಾಡಿರುವ ಆರೋಪವು ಕೇಳಿ ಬಂದಿದೆ. ಈ ಬಗ್ಗೆ ಕಳೆದ ತಿಂಗಳು ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ರೀತಿ ಕೋಣನಕುಂಟೆ ಹಾಗೂ ಜ್ಞಾನಭಾರತಿ ಠಾಣೆಯಲ್ಲೂ ವಂಚನೆ ದೂರುಗಳು ದಾಖಲಾಗಿದೆ. ಸದಾಶಿವನಗರ ಠಾಣೆಯಲ್ಲಿ ದಾಖಲಾದ ಕೇಸ್‌ನಲ್ಲಿ ಬರೋಬ್ಬರಿ 35 ಲಕ್ಷ ರೂ. ದೋಖಾ ಆಗಿದೆ.
ಇದನ್ನೂ ಓದಿ: Vanshika Anjani kashyapa : ಇವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ನಿಶಾ ದೋಖಾ!
ಲಾಭಾಂಶದ ನಶೆ ಎರಿಸುವ ನಿಶಾ
ಸಾಲದ ರೂಪದಲ್ಲಿ ಹಾಗೂ ಇನ್ವೆಸ್ಟ್ ಮಾಡಿದರೆ ಲಾಭಾಂಶ ನೀಡುವುದಾಗಿ ಆಸೆ ತೋರಿ ನಿಶಾ ನರಸಪ್ಪ ಮೋಸ ಮಾಡಿರುವುದು ಕಂಡು ಬಂದಿದೆ. ಮೊದ ಮೊದಲು ಲಾಭಾಂಶದ ಹಣ ಕೊಟ್ಟು ಬಳಿಕ ಎರಡರಷ್ಟು ಹಣ ಪಡೆದಿದ್ದಾರೆ. ರಾಮನಗರ ಮೂಲದ ನಿಶಾ ನರಸಪ್ಪ, ಬೆಂಗಳೂರಿನ ದೊಡ್ಡ ಮಾಲ್‌ಗಳಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದರು. ಇದಲ್ಲದೆ ಬೆಂಗಳೂರು ಹೊರ ವಲಯದ ರೆಸಾರ್ಟ್‌ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರಿಗೆ ಯಮಾರಿಸುತ್ತಿದ್ದರು ಎನ್ನಲಾಗಿದೆ.
ಸದ್ಯ ಸದಾಶಿವನಗರ ಠಾಣೆಗೆ ಹರಿದು ಬರುತ್ತಿರುವ ದೂರುಗಳನ್ನು ತಮ್ಮ ಮನೆ ವ್ಯಾಪ್ತಿಯ ಠಾಣೆಯಲ್ಲಿ ನೀಡಲು ಸೂಚನೆ ನೀಡಲಾಗಿದೆ. ಹೈಕೋರ್ಟ್‌ನಲ್ಲೂ ಓರ್ವ ಮಹಿಳೆ ಕೇಸ್ ಹಾಕಿದ್ದು, ವಿಚಾರಣೆ ಹಂತದಲ್ಲಿದೆ.
ಕಿರುತೆರೆ
Brindavana Serial Kannada: ಅಪರೂಪದ ಕತೆಯೊಂದಿಗೆ ʻಕನ್ನಡತಿ’ ಅಮ್ಮಮ್ಮ; ʻಬೃಂದಾವನʼಕ್ಕೆ ಯೋಗರಾಜ್ ಭಟ್ ಸಾಥ್!
Brindavana Serial Kannada: ‘ಪುಟ್ಟಗೌರಿ ಮದುವೆ’, ‘ಮಂಗಳಗೌರಿ ಮದುವೆ’, ‘ರಂಗನಾಯಕಿ’, ‘ನಾಗಿಣಿ- 2’, ‘ಗೀತಾ’, ‘ರಾಣಿ’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಕೆ. ಎಸ್ ರಾಮ್ ಜೀ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಪ್ರಸಾರದ ಅನೌನ್ಸ್ ಬೆನ್ನಲ್ಲೇ ಕಲರ್ಸ್ ಕನ್ನಡ ಮತ್ತೊಮ್ಮೆ ಸಿಹಿ ಸುದ್ದಿಯನ್ನು ಹೊತ್ತು ತಂದಿದೆ. ಅಷ್ಟೇ ಅಲ್ಲದೇ ‘ಕನ್ನಡತಿ’ ಧಾರಾವಾಹಿ ಮೂಲಕ ಅಮ್ಮಮ್ಮ ಎಂದೇ ಖ್ಯಾತಿ ಪಡೆದ ಚಿತ್ಕಲಾ ಬಿರಾದಾರ್ (Chitkala Biradar) ಅವರು ಮತ್ತೊಮ್ಮೆ ಕಿರುತೆರೆಯಲ್ಲಿ ಮಿಂಚಲು ರೆಡಿ ಆಗಿದ್ದಾರೆ. ‘ಪುಟ್ಟಗೌರಿ ಮದುವೆ’, ‘ಮಂಗಳಗೌರಿ ಮದುವೆ’, ‘ರಂಗನಾಯಕಿ’, ‘ನಾಗಿಣಿ- 2’, ‘ಗೀತಾ’, ‘ರಾಣಿ’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಕೆ. ಎಸ್ ರಾಮ್ ಜೀ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮತ್ತೆ ಬೃಂದಾವನ(Brundavana Serial Kannada) ಧಾರಾವಾಹಿ ಮೂಲಕ ಹೊಸ ಕತೆಯನ್ನು ಹೊತ್ತು ತರುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಬೃಂದಾವನ ಧಾರಾವಾಹಿಯ ಪ್ರೋಮೊ ಹಂಚಿಕೊಂಡಿದೆ. ಪ್ರೋಮೊದಲ್ಲಿ ಅಮ್ಮಮ್ಮ ಪ್ರಮುಖ ಹೈಲೈಟ್. ಈ ಪ್ರೋಮೊದಲ್ಲಿ ಕೂಡು ಕುಟುಂಬದ ಕಥೆ ಎದ್ದು ಕಾಣುತ್ತಿದೆ. ಈ ಕುಟುಂಬದಲ್ಲಿ 36 ಜನ ಇದ್ದಾರೆ. ಯೋಗರಾಜ್ ಭಟ್ ಧ್ವನಿಯಲ್ಲಿ ಪ್ರೋಮೊ ಮೂಡಿ ಬಂದಿದೆ. ಮೊಮ್ಮೊಗನಿಗೆ ಮದುವೆ ಮಾಡಬೇಕು ಎನ್ನುವುದು ಸುಧಾ ಮೂರ್ತಿ (ಚಿತ್ಕಲಾ ಬಿರಾದಾರ್) ಆಸೆ. ಆದರೆ, ಮನೆಯಲ್ಲಿರುವ ಎಲ್ಲರ ಒಪ್ಪಿಗೆ ಇದಕ್ಕೆ ಸಿಗಬೇಕು. ಸದ್ಯ ಧಾರಾವಾಹಿ ಪ್ರೋಮೊ ಗಮನ ಸೆಳೆಯುತ್ತಿದೆ. ನೋಡುಗರು ʻʻಬೃಂದಾವನ ಹೆಸರು ಕೇಳಿದಾಗಲೇ ಗೊತ್ತಿತ್ತು. ಇದು ಕೂಡು ಕುಟುಂಬ ಅಂತ. ಆದರೆ ಇಷ್ಟೊಂದು ದೊಡ್ಡ ಕುಟುಂಬ ಅಂತ ಗೊತ್ತಿರಲಿಲ್ಲ. ಪ್ರೋಮೊ ಮಾತ್ರ ಯಾವ ಸಿನಿಮಾ ಟೀಸರ್‌ಗೂ ಕಡಿಮೆ ಇಲ್ಲʼʼಎಂದು ಕಮೆಂಟ್ ಮಾಡಿದ್ದಾರೆ.
ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಮತ್ತು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಣಿ’ ಧಾರಾವಾಹಿಯನ್ನು ರಾಮ್ ಜೀ ನಿರ್ದೇಶಿಸುತ್ತಿದ್ದಾರೆ. ಮೂಲಗಳ ಪ್ರಕಾರ ‘ಗೀತಾ’ ಧಾರಾವಾಹಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಈ ಧಾರಾವಾಹಿ ಮುಗಿದ ಬಳಿಕ ‘ಬೃಂದಾವನ’ ಆರಂಭ ಆಗಲಿದೆ ಎನ್ನಲಾಗುತ್ತಿದೆ. ಪ್ರೋಮೊ ಕಂಡವರು ʻಕನ್ನಡತಿ’ ಧಾರಾವಾಹಿಯ ಅಮ್ಮಮ್ಮ ಅವರನ್ನು ಕಂಡು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ‘ಬೃಂದಾವನ’ ಧಾರಾವಾಹಿಯಲ್ಲಿ ಹೊಸ ರೀತಿಯ ಪಾತ್ರದ ಮೂಲಕ ಮತ್ತೆ ಬಂದಿದ್ದಾರೆ.
ಇದನ್ನೂ ಓದಿ: Kannada Serials TRP: ʻಅಮೃತಧಾರೆʼ ಬೀಟ್ ಮಾಡಿದ ʻಗಟ್ಟಿಮೇಳʼ; ಟಿಆರ್‌ಪಿ ರೇಸ್‌ನಲ್ಲಿ ʻಶ್ರೀರಸ್ತು ಶುಭಮಸ್ತುʼ!
‘ರಾಮಾಚಾರಿ’ ಸೇರಿ ಹಲವು ಧಾರಾವಾಹಿಗಳು ಇನ್ನು ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದು, ಇವುಗಳ ಜತೆಗೆ ಈಗ ‘ಬೃಂದಾವನ’ ಧಾರಾವಾಹಿ ಕೂಡ ಪ್ರಸಾರ ಕಾಣಲಿದೆ. ಈ ಧಾರಾವಾಹಿ ಸಂಜೆ 7 ಗಂಟೆ ಸ್ಲಾಟ್‌ಗೆ ಬಿಗ್ ಬಾಸ್ – ಸೀಸನ್ 10 ಮುಗಿದ ಬಳಿಕ ಪ್ರಸಾರವಾಗಲಿದೆ ಎಂದು ವರದಿಯಾಗಿದೆ.
ಕಿರುತೆರೆ
Kannada Serials TRP: ʻಅಮೃತಧಾರೆʼ ಬೀಟ್ ಮಾಡಿದ ʻಗಟ್ಟಿಮೇಳʼ; ಟಿಆರ್‌ಪಿ ರೇಸ್‌ನಲ್ಲಿ ʻಶ್ರೀರಸ್ತು ಶುಭಮಸ್ತುʼ!
ʻಸೀತಾ ರಾಮ’ ಧಾರಾವಾಹಿ (Kannada Serials TRP) ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ದಿನೇದಿನೆ ಹೆಚ್ಚು ಪೈಪೋಟಿ ನೀಡಲು ಶುರು ಮಾಡಿದೆ. ಈ ವಾರದ ಟ ಆರ್‌ಪಿ ಡಿಟೇಲ್ಸ್ ಇಲ್ಲಿದೆ.
ಬೆಂಗಳೂರು: ‘ಪುಟ್ಟಕ್ಕನ ಮಕ್ಕಳು’ (Puttakkana Makkalu Serial) ಧಾರಾವಾಹಿಯು ಟಿಆರ್‌ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಹಲವು ಧಾರಾವಾಹಿಗಳ ಟಿಆರ್‌ಪಿಯಲ್ಲಿ ಬದಲಾವಣೆ ಆಗಿದೆ. ʻಸೀತಾ ರಾಮ’ ಧಾರಾವಾಹಿ (Kannada Serials TRP) ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ದಿನೇದಿನೆ ಹೆಚ್ಚು ಪೈಪೋಟಿ ನೀಡಲು ಶುರು ಮಾಡಿದೆ. ಈ ವಾರದ ಟ ಆರ್‌ಪಿ ಡಿಟೇಲ್ಸ್ ಇಲ್ಲಿದೆ.
ಪುಟ್ಟಕ್ಕನ ಮಕ್ಕಳು
ಉಮಾಶ್ರೀ ನಟನೆಯ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನವನ್ನು ಉಳಿಸಿಕೊಂಡು ಬರುತ್ತಲೇ ಇದೆ. ಈಗಲೂ ಒಳ್ಳೆಯ ಟಿಆರ್ಪಿಯೊಂದಿಗೆ ಈ ಧಾರಾವಾಹಿ ಮುನ್ನುಗ್ಗುತ್ತಿದೆ. ಪುಟ್ಟಕ್ಕನ ಮೆಸ್‌ಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಬಂಗಾರಮ್ಮ ಇದೀಗ ಆರೋಪಿಗಳನ್ನು ಪುಟ್ಟಕ್ಕನ ಮುಂದೆ ತಂದು ನಿಲ್ಲಿಸಿದ್ದಾಳೆ. ಪುಟ್ಟಕ್ಕನ ಮಗಳು ಹಾಗೂ ಬಂಗಾರಮ್ಮನ ಮಗ ಕಂಠಿ ನಡುವೆ ಆಪ್ತತೆ ಹೆಚ್ಚಾಗುತ್ತಿದೆ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ನಗರ ಭಾಗದಲ್ಲೂ ಮೊದಲ ಸ್ಥಾನದಲ್ಲಿದೆ ಎನ್ನುವುದು ವಿಶೇಷ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.
ಸೀತಾ ರಾಮ
‘ಸೀತಾ ರಾಮ’ ಧಾರಾವಾಹಿ ಕಳೆದ ವಾರವೂ ಎರಡನೇ ಸ್ಥಾನದಲ್ಲಿ ಇತ್ತು. ಈ ವಾರವೂ ಎರಡನೇ ಸ್ಥಾನ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ. ರಾಮ ಹಾಗೂ ಸೀತಾ (ವೈಷ್ಣವಿ-ಗಗನ್) ಮಧ್ಯೆ ಈಗ ತಾನೇ ಆಪ್ತತೆ ಮೂಡುತ್ತಿದೆ. ರೀತು ಸಿಂಗ್ ಹೆಸರಿನ ಬಾಲಕಿ ವೈಷ್ಣವಿ ಗೌಡ ಮಗಳಾಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ. ಈ ಧಾರಾವಾಹಿ 50ನೇ ಎಪಿಸೋಡ್‌ಗಳನ್ನು ಪೂರೈಸಿದೆ. ಸೀತಾ ರಾಮ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.
ಇದನ್ನೂ ಓದಿ: Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!
ಗಟ್ಟಿಮೇಳ
‘ಗಟ್ಟಿಮೇಳ’ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದ ಟಿಆರ್‌ಪಿ ಪರಿಗಣಿಸಿದರೆ ‘ಗಟ್ಟಿಮೇಳ’ ಹಾಗೂ ‘ಸೀತಾ ರಾಮ’ ಧಾರಾವಾಹಿ ಟಿಆರ್‌ಪಿ ಸಮನಾಗಿದೆ. ಆದರೆ, ನಗರ ವಿಭಾಗದಲ್ಲಿ ಸೀತಾ ರಾಮ ಧಾರಾವಾಹಿ ಮೇಲುಗೈ ಸಾಧಿಸಿದೆ. ‘ಸೀತಾ ರಾಮ’ ಬರುವುದಕ್ಕೂ ಮೊದಲು ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು. ಹಿಂದಿನ ವಾರ ಅಮೃತಧಾರೆ ಧಾರಾವಾಹಿ ಬೀಟ್ ಮಾಡಿತ್ತು. ಟಿಆರ್‌ಪಿಯಲ್ಲಿ ಭಾರಿ ಕುಸಿತ ಕಂಡಿತ್ತು. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.
ಅಮೃತಧಾರೆ
‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾ ಬಲಗಾಲಿಟ್ಟು ಗೌತಮ್ ಮನೆಗೆ ಬಂದಾಗಿದೆ. ಕಳೆದ ವಾರ ‘ಗಟ್ಟಿಮೇಳ’ ಧಾರಾವಾಹಿ ಹಿಂದಿಕ್ಕಿ ಮೂರನೇ ಸ್ಥಾನ ಪಡೆದುಕೊಂಡಿತ್ತು. ರಾಜೇಶ್ ನಟರಂಗ, ಛಾಯಾ ಸಿಂಗ್ ಮೊದಲಾದವರು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಇದನ್ನೂ ಓದಿ: Kannada Serials TRP: ಈ ಬಾರಿಯೂ ‘ಸೀತಾ ರಾಮ’ ಟಾಪ್; ಸುಧಾರಿಸಿದ ‘ಅಮೃತಧಾರೆ’ ಧಾರಾವಾಹಿ!
ಸತ್ಯ -ಶ್ರೀರಸ್ತು ಶುಭಮಸ್ತು
‘ಸತ್ಯ’ ಹಾಗೂ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಐದು ಹಾಗೂ ಆರನೇ ಸ್ಥಾನದಲ್ಲಿದೆ. ಈ ಧಾರಾವಾಹಿಗಳಿಗೆ ವೀಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ‘ಸತ್ಯ’ ಧಾರಾವಾಹಿ ಮೊದಲಿನಿಂದಲೂ ಒಳ್ಳೆಯ ಟಿಆರ್‌ಪಿ ಪಡೆದುಕೊಂಡಿರುವ ಧಾರಾವಾಹಿ. ಅತ್ತೆ ಕೂಡ ಸತ್ಯಳನ್ನು ಪ್ರೀತಿಸಲು ಶುರು ಮಾಡಿದಂತಿದೆ. ಈ ಎರಡೂ ಧಾರಾವಾಹಿಗಳು ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.
South Cinema
Megha Shetty: ಮದುವೆ ಫಿಕ್ಸ್ ಆಯ್ತಾ ಬಂಗಾರ? ಮೂಗು ಚುಚ್ಚಿಸಿಕೊಂಡ ಮೇಘಾ ಶೆಟ್ಟಿಗೆ ಫ್ಯಾನ್ಸ್ ಪ್ರಶ್ನೆ!
Megha Shetty: ʻಬಂಗಾರʼ ಅಂತಲೇ ಧಾರಾವಾಹಿಯಲ್ಲಿ ಅಪ್ಪ ಸುಬ್ಬವಿನಿಂದ ಕರೆಸಿಕೊಳ್ಳುತ್ತಿದ್ದ ಮೇಘನಾ ಇದೀಗ ಮೂಗು ಚುಚ್ಚಿಸಿಕೊಂಡಿದ್ದಾರೆ. ʻʻಬಂಗಾರಗೆ ಮದುವೆ ಫಿಕ್ಸ್ ಆಯ್ತಾ?ʼʼಎಂದು ಅವರ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ (Megha Shetty) ಆಗಾಗ ರೀಲ್ಸ್ ಮಾಡುವುದರ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಇದೀಗ ಹಲವು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ʻಬಂಗಾರʼ ಅಂತಲೇ ಧಾರಾವಾಹಿಯಲ್ಲಿ ಅಪ್ಪ ಸುಬ್ಬವಿನಿಂದ ಕರೆಸಿಕೊಳ್ಳುತ್ತಿದ್ದ ಮೇಘನಾ ಇದೀಗ ಮೂಗು ಚುಚ್ಚಿಸಿಕೊಂಡಿದ್ದಾರೆ. ʻʻಬಂಗಾರಗೆ ಮದುವೆ ಫಿಕ್ಸ್ ಆಯ್ತಾ?ʼʼಎಂದು ಅವರ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಮೇಘಾ ಶೆಟ್ಟಿ ಮೂಗು ಚುಚ್ಚಿಕೊಳ್ಳುವ ವಿಡಿಯೊ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಮೂಗು ಚುಚ್ಚಿಸಿಕೊಳ್ಳುವುದಕ್ಕೂ ಮುನ್ನ ಸಹಜವಾಗಿಯೇ ಮೇಘಾ ಕೂಡ ಹೆದರಿದ್ದಾರೆ. ಆದರೆ, ಮೂಗು ಚುಚ್ಚುವವರು ಕೊಂಚ ಧೈರ್ಯ ಹೇಳಿದ್ದಾರೆ. ಬಳಿಕ ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ಚುಚ್ಚಿದ್ದಾರೆ. ಈ ವಿಡಿಯೊ ಕಂಡು ಮೇಘನಾ ಫ್ಯಾನ್ಸ್ ಮದುವೆಗೆ ತಯಾರಿ ಆದ್ರಾ? ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ʻʻಬಂಗಾರ ಈಗ ಇನ್ನು ಮುದ್ದಾಗಿ ಕಾಣಿಸುತ್ತಿದ್ದೀಯಾʼʼಎಂದು ಕಮೆಂಟ್ ಮಾಡಿದ್ದಾರೆ. ಮೇಘಾ ಶೆಟ್ಟಿ ಆಗಾಗ ಫೋಟೊಶೂಟ್ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಹಳ್ಳಿ ಉಡುಗೆಯಾಗಿರುವ ಲಂಗ ದಾವಣಿ ತೊಟ್ಟು ನಟಿ ಮೇಘಾ ಶೆಟ್ಟಿ ಮಿಂಚಿದ್ದರು. ಮಾದಕ ನೋಟದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದ ಮೇಘಾ ಶೆಟ್ಟಿ ಸಿಂಪಲ್ ಲುಕ್ನಲ್ಲಿ ಕಂಡಿದ್ದರು. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ನಟಿ ಮೇಘಾ ಶೆಟ್ಟಿ ಬ್ಯುಸಿ ಇದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಸಖತ್ ಆ್ಯಕ್ಟಿವ್ ಆಗಿದ್ದಾರೆ.
ಇದನ್ನೂ ಓದಿ: Megha Shetty: ಮುಕ್ತಾಯವಾಗಲಿದೆಯೇ ʻಜೊತೆ ಜೊತೆಯಲಿʼ ಧಾರಾವಾಹಿ; ಮೇಘಾ ಶೆಟ್ಟಿ ಹೇಳಿದ್ದೇನು?
ಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಜೋತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿಯ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ʻಟ್ರಿಬಲ್ ರೈಡಿಂಗ್ʼ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು ಮೇಘಾ ಶೆಟ್ಟಿ. ಧನ್ವೀರ್ ನಟನೆಯ ʻಕೈವʼ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಮರಾಠಿ ಭಾಷೆಗೂ ಕಾಲಿಟ್ಟಿದ್ದಾರೆ. ‘ಲಂಡನ್ ಕೆಫೆ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.
ಕಿರುತೆರೆ
Amrithadhare Serial Kannada: `ಅಮೃತಧಾರೆ’ಸೆಟ್‌ನಲ್ಲಿ ʻನಾನು ನಂದಿನಿʼ ಸ್ಟೆಪ್; ಎಲ್ಲೆಲ್ಲೂ ವಿಕ್ಕಿಪೀಡಿಯಾ ಸಾಂಗ್ ಗುಂಗು!
ʻಅಮೃತಧಾರೆʼ ಧಾರಾವಾಹಿ (Amrithadhare Serial Kannada) ಖ್ಯಾತಿಯ ಸಾರಾ ಅಣ್ಣಯ್ಯ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಸಾರಾ (sara annaiah) ಅವರಿಗೆ ಸಹ ನಟ ಶಶಿಧರ್ ಹೆಗ್ಡೆ ಸಾಥ್ ಕೊಟ್ಟಿದ್ದಾರೆ.
ತಮ್ಮ ವಿಭಿನ್ನ ಕಾಮಿಡಿ ವಿಡಿಯೊಗಳಿಂದ ವಿಡಿಯೊ ಕ್ರಿಯೇಟರ್ ವಿಕಾಸ್ ( ವಿಕ್ಕಿ ಪೀಡಿಯಾ) (Vicky Pedia) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ʻನಾನು ನಂದಿನಿʼ ಹಾಡಿಗೆ ರೀಲ್ಸ್ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಇದೀಗ ʻಅಮೃತಧಾರೆʼ ಧಾರಾವಾಹಿ (Amrithadhare Serial Kannada) ಖ್ಯಾತಿಯ ಸಾರಾ ಅಣ್ಣಯ್ಯ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಸಾರಾ (sara annaiah) ಅವರಿಗೆ ಸಹ ನಟ ಶಶಿಧರ್ ಹೆಗ್ಡೆ ಸಾಥ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ವಿಕ್ಕಿ ಪೀಡಿಯಾ ಅವರ ಈ ರೀಲ್ಸ್ 15 ಮಿಲಿಯನ್‌ಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.
“ನಾನು ನಂದಿನಿ ಬೆಂಗಳೂರಿಗ್ ಬಂದಿನಿ” ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲಕ್ಷ ಲಕ್ಷ ವ್ಯೂಸ್ ಸಾಧಿಸಿ ದಾಖಲೆ ಬರೆದಿದೆ. ಇದೀಗ ಅಮೃತಧಾರೆ ಧಾರಾವಾಹಿಯ ಕಲಾವಿದರು ಈ ಹಾಡಿಗೆ ರೀಲ್ಸ್ ಮಾಡಿದ್ದು, ಸಖತ್ ಫೇಮಸ್ ಆಗಿದೆ. ಬಿಗ್ ಬಾಸ್ ಖ್ಯಾತಿಯ ವೈನ್ ಸ್ಟೋರ್ ರಘು, ದಿವ್ಯಾ ಉರುಡುಗ, ನಿರೂಪಕಿ ಅನುಪಮಾ ಗೌಡ, ನಟಿ ಚೈತ್ರಾ ಆಚಾರ್, ಚಂದನಾ ಅನಂತಕೃಷ್ಣ ಸೇರಿದಂತೆ ಹಲವರು ಈ ವಿಡಿಯೊ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನ ಮೀಮ್ಸ್ ಪೇಜ್‌ಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.
ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್ (vickypedia) ಕಂಟೆಂಟ್ ಕ್ರಿಯೇಟರ್. ಭಾಷಣ ಟ್ರಾನ್ಸ್‌ಲೇಟ್ ವಿಡಿಯೊ ಅಣಕ ಮಾಡಿ ಇವರು ಸಾಕಷ್ಟು ಫೇಮಸ್ ಆಗಿದ್ದರು. ಚುನಾವಣಾ ಸಮಯದಲ್ಲಿ ರಾಷ್ಟ್ರಮಟ್ಟದ ನಾಯಕರ ಹಿಂದಿ ಭಾಷೆಯ ಭಾಷಣವನ್ನು ಸಖತ್ ಆಗಿ ಕಾಮಿಡಿಯಾಗಿ ಅಣುಕಿಸಿದ್ದರು. ಆದರೀಗ ಹೆಣ್ಣು ಮಕ್ಕಳು ಉದ್ಯೋಗಕ್ಕೆಂದು ನಗರಕ್ಕೆ ಬಂದು, ಪಿಜಿಯಲ್ಲಿ ಯಾವ ರೀತಿ ಸಮಸ್ಯೆಗೆ ಗುರಿಯಾಗುತ್ತಾರೆ, ಅಷ್ಟೇ ಅಲ್ಲದೇ ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲಿಷ್ ಬಾರದೇ ಏನೆಲ್ಲಾ ಸಮಸ್ಯೆಗೆ ಗುರಿಯಾಗುತ್ತಾರೆ ಎಂಬುದನ್ನು ವಿಡಿಯೊ ಮೂಲಕ ಹಾಡಿದ್ದಾರೆ.
ಇದನ್ನೂ ಓದಿ: Viral Video: ನಾನು ನಂದಿನಿ ಬೆಂಗಳೂರು ಬಂದಿನಿ; ಭಾರಿ ವೀಕ್ಷಣೆ ಕಂಡ ವಿಕ್ಕಿಪೀಡಿಯಾ ಹಾಡು!
ಸಾರಾ ಅಣ್ಣಯ್ಯ ಪೋಸ್ಟ್
ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್ ವಿಗ್ ಧರಿಸಿ, ಬಾರ್ಬಿ ಹಾಡಿನ ಟ್ಯೂನ್ ಬಳಸಿಕೊಂಡು ಈ ಹಾಡು ಹಾಡಿದ್ದಾರೆ. ‘ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ, ಐಟಿ ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ, ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ, ಬಾರೆ ನಂದಿನಿ ಪೇಡ ತಿನ್ನಿಸ್ತೀನಿ, ಬೆ ಬೆ ಬೇಡ, ಬಾರೆ ನಂದಿನಿ ಪಿಕ್ಚರ್ ತೋರಿಸ್ತೀನಿ, ಬೇಡ ಬೇಡ, ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು, ಇಲ್ಲ ಅಂದ್ರೆ ಐಟಿಲಿ ಕಷ್ಟ ಆಗುತ್ತೆ ಸರ್ ನಾನು ಕನ್ನಡ ಮೀಡಿಯಾಂನಲ್ಲಿ ಓದಿದ್ದೆ. ಅದಕ್ಕೆ ನನ್ನ ಇಂಗ್ಲೀಷ್ ಅಷ್ಟಕಷ್ಟೆ, ಐ ಕ್ಯಾನ್ ಟ್ರೈ ಐ ಕ್ಯಾನ್ ಟಾಕ್, ಬಟ್ ವಾಟ್ ಐ ಸ್ಪೀಕ್ ಇಟ್ಸ್ ಬಟ್ಲರ್ ಇಂಗ್ಲೀಷ್’ ಇದು ಈ ಹಾಡಿನ ಲಿರೀಕ್ಸ್ ಆಗಿದೆ. ಪೋಷಕರು ಕೂಡ ಮಕ್ಕಳೊಂದಿಗೆ ರೀಲ್ಸ್ ಮಾಡಿದ್ದಾರೆ.
-
ಸುವಚನ4 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವೈರಲ್ ನ್ಯೂಸ್14 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಕರ್ನಾಟಕ19 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
South Cinema16 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಪ್ರಮುಖ ಸುದ್ದಿ12 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
-
ದೇಶ23 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಬಾಲಿವುಡ್19 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕ್ರಿಕೆಟ್20 hours ago
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ