ವಿಸ್ತಾರ ಸಂಪಾದಕೀಯ: ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸ್ವಾಗತಾರ್ಹ Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸ್ವಾಗತಾರ್ಹ

ವಾಸ್ತವವಾಗಿ ಮುಜರಾಯಿ ದೇವಾಲಯಗಳಿಗೆ ಸಂಬಂಧಿಸಿ ಆಗಬೇಕಾದ ಕೆಲಸಗಳು ಬಹಳಷ್ಟಿವೆ. ಭಕ್ತಾದಿಗಳು ದೇವಸ್ಥಾನಗಳಿಗೆ ನೀಡುವ ದೇಣಿಗೆ ಹಣ ಸರಿಯಾಗಿ ಸದ್ಬಳಕೆ ಆಗುತ್ತಿದೆಯೇ ಎನ್ನುವುದೂ ಮುಖ್ಯ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜ್ಯ 25 ಎ- ಗ್ರೇಡ್ ದೇವಸ್ಥಾನಗಳ ಆಮೂಲಾಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸುತ್ತಿರುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಇದರ ಜತೆಗೆ ಭಕ್ತಾದಿಗಳಿಗೆ ದೇವಾಲಯಗಳಲ್ಲಿ ನೈರ್ಮಲ್ಯದ ವಾತಾವರಣ ಮತ್ತು ಶುಚಿ ಪರಿಸರವನ್ನು ನೀಡುವ ಉದ್ದೇಶವನ್ನು ಹೊಂದಿರುವ ಸ್ವಚ್ಛ ಮಂದಿರ ಅಭಿಯಾನವೂ ಉದ್ಘಾಟನೆಗೆ ಸಿದ್ದವಾಗಿದೆ. ಇದು ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ (Religious & Charitable Endownment) ಯೋಜನೆ. ಇವು ತುರ್ತಾಗಿ ಆಗಬೇಕಿರುವ ಕೆಲಸ. ಅಭಿವೃದ್ಧಿ ಹಾಗೂ ಸ್ವಚ್ಛತೆ ಜತೆ ಜತೆಯಾಗಿ ಸಾಗಬೇಕಿವೆ. ವಾಸ್ತವವಾಗಿ ಮುಜರಾಯಿ ದೇವಾಲಯಗಳಿಗೆ ಸಂಬಂಧಿಸಿ ಆಗಬೇಕಾದ ಕೆಲಸಗಳು ಬಹಳಷ್ಟಿವೆ.

ರಾಜ್ಯದಲ್ಲಿ ಮುಜರಾಯಿ ಸುಪರ್ದಿಯಲ್ಲಿರುವ ಕೆಲವು ಕ್ಷೇತ್ರಗಳು ಶ್ರೀಮಂತವಾಗಿವೆ. ಉದಾಹರಣೆಗೆ ಆದಾಯದಲ್ಲಿ ನಂಬರ್‌ ವನ್‌ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಗಳಿಸುತ್ತಿರುವ ವಾರ್ಷಿಕ ಆದಾಯ ಸುಮಾರು 100 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು. ರಾಜ್ಯದ ಟಾಪ್ 10 ದೇವಾಲಯಗಳ ಆದಾಯ ಸರಾಸರಿ 10 ಕೋಟಿಯಿಂದ 100 ಕೋಟಿ ರೂ.ವರೆಗಿದೆ. ಇದರಲ್ಲಿ ಎಷ್ಟು ಕ್ಷೇತ್ರಕ್ಕಾಗಿ ವಿನಿಯೋಗವಾಗುತ್ತಿದೆ ಎಂಬುದರ ಸಮರ್ಪಕವಾದ ಲೆಕ್ಕವಿಲ್ಲ. ಕಳೆದ ಐದು ವರ್ಷಗಳಿಂದ ದೇವಾಲಯದ ಆದಾಯ ಸರಿಯಾದ ಆಡಿಟ್‌ ಆಗಿಲ್ಲ ಎಂಬ ದೂರು ಇದೆ. ದೇವಾಲಯದಂಥ ಪವಿತ್ರ ಕ್ಷೇತ್ರಗಳ ಆಡಳಿತದ ಬಗ್ಗೆಯೇ ಇಂಥ ಅವ್ಯವಹಾರದ ದೂರುಗಳು ದಾಖಲಾಗಬಾರದು. ಇದು ಒಂದು ಉದಾಹರಣೆ ಮಾತ್ರ. ಇಂಥ ಹಲವಾರು ಶ್ರೀಮಂತ ದೇವಾಲಯಗಳಿವೆ. ಇವುಗಳ ಆದಾಯ ಒಂದು ಭಾಗವನ್ನು ಅಲ್ಲಿಯೇ ಸೂಕ್ತ ರೀತಿಯಲ್ಲಿ ಬಳಸುವ ವ್ಯವಸ್ಥೆ ಆಗಬೇಕು. ಯಾಕೆಂದರೆ ಭಕ್ತಾದಿಗಳು ಈ ಕ್ಷೇತ್ರಗಳಿಗಾಗಿಯೇ ಹಣ ನೀಡುವುದು. ಈ ಹಣದ ಸದ್ಬಳಕೆ ಆಗುತ್ತಿದೆಯೇ ಎಂಬುದು ಮುಖ್ಯ.

ಇನ್ನು ಕೆಲವು ಕ್ಷೇತ್ರಗಳು ಹೆಸರಿಗೆ ಮಾತ್ರ ಮುಜರಾಯಿ. ಶ್ರೀಮಂತ ಕ್ಷೇತ್ರಗಳಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸುವ ಇಲಾಖೆ, ಇಂಥ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಿಲ್ಲ. ಅಂಥ ಕಡೆ ಕ್ಷೇತ್ರಗಳಿಗೆ ತಲುಪಲು ಸುಗಮ ರಸ್ತೆ, ವಾಹನಗಳ ಸೌಕರ್ಯ, ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್‌, ಜನದಟ್ಟಣೆ ನಿಯಂತ್ರಿಸುವುದಕ್ಕೆ ಬೇಕಾದ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವುದು ಅಗತ್ಯ. ಕೆಲವು ಕಡೆ ಈಗಿರುವ ಸೌಲಭ್ಯಗಳು ಸಾಕಾಗದೆ ಜನರು ಬಯಲಿನಲ್ಲಿಯೇ ಶೌಚ, ಸ್ನಾನ ಮತ್ತು ಅಡುಗೆ ಮಾಡುವುದನ್ನು ಕಾಣಬಹುದು. ಲಕ್ಷಾಂತರ ಆದಾಯ ಹೊಂದಿರುವ ದೇವಸ್ಥಾನ ಸಮಿತಿಗಳು ಹಕ್ಕೊತ್ತಾಯದಿಂದ ಸೌಲಭ್ಯ ಕಲ್ಪಿಸಿಕೊಂಡು ಭಕ್ತರ ಅನುಕೂಲಕ್ಕೆ ಮುಂದಾಗಬೇಕು. ಸುಸಜ್ಜಿತ ವಸತಿ ಗೃಹಗಳು, ಶೌಚಾಲಯ, ಶುದ್ಧ ಕುಡಿವ ನೀರು, ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಸ್ವಚ್ಛ ಮಂದಿರ ಅಭಿಯಾನದ ಮೂಲಕ ದೇವಸ್ಥಾನಗಳಲ್ಲಿ ಹಾಗೂ ದೇವಸ್ಥಾನದ ಆವರಣದಲ್ಲಿ ಉತ್ಪತ್ತಿಯಾಗುವ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಒದಗಿಸಬೇಕು. ತ್ಯಾಜ್ಯ ಉತ್ಪಾದನೆ ಕಡಿಮೆ ಮಾಡಲು ಹಾಗೂ ತ್ಯಾಜ್ಯ ಸಂಗ್ರಹಣೆ, ಸಂಸ್ಕರಣೆ, ವಿಲೇವಾರಿಗೆ ವ್ಯವಸ್ಥಿತ ಕ್ರಮ ಆಗಬೇಕು. ದೇವಸ್ಥಾನವನ್ನು ಸುಸ್ಥಿರ ಮತ್ತು ಶೂನ್ಯ ತ್ಯಾಜ್ಯ ಆವರಣವನ್ನಾಗಿ ಮಾಡುವ ಗುರಿಯನ್ನು ಸ್ವಚ್ಛ ದೇವಾಲಯ ಯೋಜನೆ ಹೊಂದಿದೆ. ಅದು ಜಾರಿಗೂ ಬರಬೇಕಿದೆ. ನಮ್ಮ ದೇವಾಲಯಗಳಿಗೆ ಹೋದಾಗ ಅಲ್ಲಿನ ಸ್ವಚ್ಛತೆಯಿಂದಲೇ ದೇವತಾ ಸಾನ್ನಿಧ್ಯದ ಪುಳಕ ಭಕ್ತಾದಿಗಳಿಗೆ ಉಂಟಾಗಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರೈಲ್ವೆ ಯೋಜನೆಗಳಿಗೆ ದಾಖಲೆಯ ಅನುದಾನ, ಇದು ಕಾರ್ಯರೂಪಕ್ಕೆ ಬರಲಿ

ಇನ್ನು ಒತ್ತುವರಿ, ಅತಿಕ್ರಮಣದ ಸಮಸ್ಯೆ. ಮುಜರಾಯಿ ಇಲಾಖೆಯ ಅಡಿಯಲ್ಲಿ 34,559 ದೇವಾಲಯಗಳಿವೆ. ಇದರಲ್ಲಿ ಸಾವಿರಾರು ದೇವಸ್ಥಾನಗಳನ್ನು ಒತ್ತುವರಿ ಮಾಡಲಾಗಿದೆ. ಒತ್ತುವರಿ ತೆರವಿಗೆ ಸರ್ವೆ ಕಾರ್ಯ ಆಗಬೇಕು. ಇದುವರೆಗೆ 6000 ದೇವಾಲಯಗಳ ಸರ್ವೆ ಆಗಿದ್ದು, ಇನ್ನೂ 28,000 ದೇವಸ್ಥಾನಗಳ ಸರ್ವೇ ಕಾರ್ಯ ಬಾಕಿಯಿದೆ. ಹೀಗಾಗಿ ಒತ್ತುವರಿಯ ಪೂರ್ಣ ಚಿತ್ರಣವೇ ಸಿಕ್ಕಿಲ್ಲ. ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಆಗಿದೆ ಎಂಬುದಂತೂ ಖಚಿತ. ಮುಜರಾಯಿ ಇಲಾಖೆಯು ಭೂಮಾಪಕರ ಕೊರತೆ ಎದುರಿಸುತ್ತಿರುವುದರಿಂದ ಸರ್ವೆಯೂ ಸರಿಯಾಗಿ ಆಗುತ್ತಿಲ್ಲ. ಶೀಘ್ರ ಸರ್ವೆ ಹಾಗೂ ಅತಿಕ್ರಮಣ ತೆರವಾಗಿ ಅದು ಮುಜರಾಯಿ ಬಳಕೆಗೆ ಸಿಗುವಂತಾದರೆ ಅನುಕೂಲವಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ವಿಸ್ತಾರ ಸಂಪಾದಕೀಯ: ಕಾಶ್ಮೀರಿ ಪಂಡಿತರ ಅಳಲು ಕೊನೆಯಾಗಲು ಹೊಸ ವಿಧೇಯಕ ನೆರವಾಗಲಿ

Vistara Editorial: ಭಯೋತ್ಪಾದನೆಯ ಕಾರಣದಿಂದ ಕಾಶ್ಮೀರ ತೊರೆದವರಿಗೆ ಕೇಂದ್ರ ಸರ್ಕಾರ ಮಂಡಿಸಿರುವ ಹೊಸ ಎರಡು ವಿಧೇಯಕಗಳು ನ್ಯಾಯ ಒದಗಿಸಲಿವೆ. ಇನ್ನಾದರೂ ಕಾಶ್ಮೀರಿ ಪಂಡಿತರ ಮುಖದಲ್ಲಿ ನಗು ಅರಳಲಿ.

VISTARANEWS.COM


on

Vistara Editorial, New bill must help to kashmiri pandit
Koo

ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು (PM Jawahar Lal Nehru) ಕೈಗೊಂಡ ಎರಡು ತಪ್ಪು ನಿರ್ಧಾರಗಳಿಂದ ಕಾಶ್ಮೀರವು (Jammu and Kashmir) ದಶಕಗಳಿಂದ ಬಳಲುವಂತಾಗಿದೆ. ಅವರ ತಪ್ಪಿನಿಂದಾಗಿ ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಯಾಯಿತು (POK). ಆದರೆ ಕಾಶ್ಮೀರ ಎಂದೆಂದಿಗೂ ನಮ್ಮದೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಬುಧವಾರ ಪ್ರತಿಪಾದಿಸಿದ್ದಾರೆ. 2023ರ ಜಮ್ಮು ಮತ್ತು ಕಾಶ್ಮೀರ ಮೀಸಲು (ತಿದ್ದುಪಡಿ) ವಿಧೇಯಕ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ವಿಧೇಯಕಗಳನ್ನು ಅವರು ಮಂಡಿಸಿದ್ದಾರೆ. ಪ್ರಧಾನಿ ಜವಾಹರಲಾಲ್ ನೆಹರು ಅವರ ಅಧಿಕಾರಾವಧಿಯಲ್ಲಿ ಆದ ಎರಡು ಪ್ರಮಾದಗಳಿಂದಾಗಿ ಕಾಶ್ಮೀರ ಸಂಕಷ್ಟ ಅನುಭವಿಸುತ್ತಾ ಬಂದಿದೆ. ನಮ್ಮ ಪಡೆಗಳು ಗೆಲ್ಲುತ್ತಿರುವಾಗಲೂ ಕದನ ವಿರಾಮ ಘೋಷಿಸಲಾಯಿತು ಮತ್ತು ಪಾಕಿಸ್ತಾನ ಆಕ್ರಮಿತ ಪ್ರದೇಶವು ಅಸ್ತಿತ್ವಕ್ಕೆ ಬಂದದ್ದು ದೊಡ್ಡ ತಪ್ಪು. ಕದನ ವಿರಾಮವನ್ನು ಮೂರು ದಿನಗಳ ಕಾಲ ವಿಳಂಬ ಮಾಡಿದ್ದರೆ, ಪಿಒಕೆ ಭಾರತದ ಭಾಗವಾಗುತ್ತಿತ್ತು. ಇದು ನೆಹರು ಅವರ ಮೊದಲನೇ ತಪ್ಪು. ನಮ್ಮ ಸಮಸ್ಯೆಯನ್ನು ವಿಶ್ವ ಸಂಸ್ಥೆಗೆ ತೆಗೆದುಕೊಂಡು ಹೋಗಿದ್ದು ಎರಡನೇ ತಪ್ಪು ಎಂದು ಅಮಿತ್ ಶಾ ಹೇಳಿದ್ದಾರೆ(Vistara Editorial).

ಅವರು ಹೇಳುತ್ತಿರುವುದರಲ್ಲಿ ಸುಳ್ಳೇನೂ ಇಲ್ಲ. ನಮ್ಮ ಹಿರಿಯರು ಮಾಡಿದ ಅನೇಕ ತಪ್ಪುಗಳಿಗೆ ನಾವು ಇಂದು ಬೆಲೆ ತೆರಬೇಕಾಗಿದೆ. ಜಮ್ಮು- ಕಾಶ್ಮೀರ ಹಿಂದೂ ಧರ್ಮಕ್ಕೆ ಅವಿನಾಭಾವವಾದ ಶೈವ ಪಂಥದ ಉಗಮ, ಬೆಳವಣಿಗೆ, ಅದು ಸಾಧಿಸಿದ ಎತ್ತರಗಳಿಗೆ ಸಾಕ್ಷಿಯಾದ ನೆಲ. ಭರತಖಂಡದ ದಕ್ಷಿಣೋತ್ತರಗಳನ್ನು ಒಂದು ಮಾಡಿದ ಶಂಕರಾಚಾರ್ಯರು ದಕ್ಷಿಣದ ಕೇರಳದ ಕಾಲ್ನಡಿಗೆಯಿಂದ ನಡೆದು ಉತ್ತರದ ತುತ್ತತುದಿಯಲ್ಲಿ ಶಕ್ತಿಪೀಠವನ್ನು ಸ್ಥಾಪಿಸುವ ಮೂಲಕ ಇಡೀ ಭರತಖಂಡವನ್ನು ಒಂದು ಎಂದು ಸಾರಿದ್ದು ಆಕಸ್ಮಿಕವಲ್ಲ, ಅದೊಂದು ಐತಿಹಾಸಿಕ ಸಂದೇಶ. ಇಂಥ ನೆಲ ಹತ್ತೊಂಬತ್ತನೇ ಶತಮಾನದಲ್ಲಿ ಕ್ರೂರಿಗಳ, ಮತಾಂಧರ ಆಡುಂಬೊಲವಾದದ್ದು ವಿಪರ್ಯಾಸ. ಇದನ್ನು ಆದ್ಯಂತವಾಗಿ ತಡೆಗಟ್ಟಬೇಕಾದುದು ನಮ್ಮನ್ನು ಆಳುವವರ ಆದ್ಯ ಕರ್ತವ್ಯವಾಗಿತ್ತು. ಆದರೆ ಈ ವಿಷಯದಲ್ಲಿ ದಿಟ್ಟ ನಿಲುವನ್ನು ಯಾರೂ ತೆಗೆದುಕೊಳ್ಳಲಿಲ್ಲ. ಭಾರತೀಯ ಸಂಸ್ಕೃತಿಗೆ ಅತ್ಯಪೂರ್ವ ಜೀವನಧಾರೆಯನ್ನು, ಸಾಂಸ್ಕೃತಿಕ ಕೊಡುಗೆಗಳನ್ನು ನೀಡಿದ ಕಾಶ್ಮೀರಿ ಪಂಡಿತರ ಸಮುದಾಯವೇ ಆಳುವವರ ಹೇಡಿತನ, ತಪ್ಪು ನಿರ್ಧಾರಗಳಿಂದಾಗಿ ಮತಾಂಧರ ದಾಳಿಗೆ ಸಿಲುಕಿ ನಲುಗಿ ಅಳಿವಿನಂಚಿಗೆ ಬಂದು ನಿಂತಿತು. ಹೀಗಾಗಿ ಕಾಶ್ಮೀರ ಪಂಡಿತರ ಹತ್ಯೆಗೆ ಕಾಂಗ್ರೆಸ್ ಕಾರಣ, ಮತ ರಾಜಕಾರಣವನ್ನು ಅದು ಕೈ ಬಿಟ್ಟಿದ್ದರೆ ಆ ಅಮಾನವೀಯ ಹತ್ಯೆಗಳನ್ನು ತಡೆಯಬಹುದಾಗಿತ್ತು ಎಂದು ಶಾ ಹೇಳಿದ್ದರಲ್ಲಿ ನಿಜಾಂಶವಿದೆ.

ಸದ್ಯ ಕಾಶ್ಮೀರದಲ್ಲಿದ್ದ ಆರ್ಟಿಕಲ್‌ 370 ಅನ್ನು 2019ರಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿದಾಗ, ಅತಿ ಘೋರ ತಪ್ಪು ನಡೆಯಿತೆಂಬಂತೆ ಪಾಕ್‌ ಮತ್ತು ಪಾಕ್‌ ಪ್ರೇರಿತ ಮತಾಂಧರು ಬೊಬ್ಬೆ ಹಾಕಿದರು. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಯಿತು ಎಂದು ದೂರಿದರು. ಚೀನಾ ಕೂಡ ಈ ವಿಚಾರದಲ್ಲಿ ಮೂಗು ತೂರಿಸಲು ಬಂದಿತು. ಆದರೆ ವಿಶ್ವಸಂಸ್ಥೆಯಲ್ಲಿ ಭಾರತ ತನ್ನ ನಿಲುಮೆಯನ್ನು ದೃಢವಾಗಿ ಪ್ರದರ್ಶಿಸಿದ್ದಲ್ಲದೆ, ಕಾಶ್ಮೀರದ ಬಗ್ಗೆ ಬೇರೆ ಯಾರೂ ಮಾತನಾಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿತು. ಆರ್ಟಿಕಲ್‌ 370ರ ರದ್ದತಿ ಹಾಗೂ ಜಮ್ಮು- ಕಾಶ್ಮೀರಗಳೆಂಬ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಎಂಬ ದಿಟ್ಟ ಕ್ರಮಗಳು ಇಂದು ಅಲ್ಲಿನ ಶೈಕ್ಷಣಿಕ, ಔದ್ಯಮಿಕ, ಆರ್ಥಿಕ ಉನ್ನತಿಗಳ ಮೂಲ ಬೀಜಗಳಾಗಿ ಮೊಳಕೆಯೊಡೆದಿವೆ. ಅಲ್ಲಿ ಇತರ ದೇಶವಾಸಿಗಳೂ ಜಮೀನು ಖರೀದಿ, ಉದ್ಯಮ ಸ್ಥಾಪನೆ ಮಾಡಬಹುದಾಗಿದೆ. ಆಂತರಿಕ ಹಾಗೂ ವಿದೇಶಿ ಹೂಡಿಕೆಗಳು ದೊಡ್ಡ ಪ್ರಮಾಣದಲ್ಲಿ ಬರುತ್ತಿವೆ. ಇದೀಗ ಕೇಂದ್ರಾಡಳಿತ ಪ್ರದೇಶ ಮೀಸಲು ಕಾಯ್ದೆಗೆ ತಿದ್ದುಪಡಿಯನ್ನು ಬಯಸುವ 2023ರ ಜಮ್ಮು ಮತ್ತು ಕಾಶ್ಮೀರ ಮೀಸಲು ತಿದ್ದುಪಡಿ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಡಿಸಿದೆ. 2023ರ ಜುಲೈ 26ರಂದು ಇದನ್ನು ಮಂಡಿಸಿದ್ದು, ಇದು ಈ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲು ಕಲ್ಪಿಸುತ್ತದೆ. ಜತೆಗೆ, ಜಮ್ಮು ಮತ್ತು ಕಾಶ್ಮೀರ ಮರು ಸಂಘಟನಾ ತಿದ್ದುಪಡಿ ವಿಧೇಯಕವು ರಾಜ್ಯಪಾಲರಿಗೆ, ಕಾಶ್ಮೀರ ವಲಸೆ ಸಮುದಾಯದ ಇಬ್ಬರನ್ನು ಅಸೆಂಬ್ಲಿಗೆ ನಾಮ ನಿರ್ದೇಶನ ಮಾಡುವ ಅಧಿಕಾರವನ್ನು ನೀಡುತ್ತದೆ. ನಿರ್ಗತಿಕರಾಗಿರುವ ಕಾಶ್ಮೀರಿ ಪಂಡಿತರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಬೇಕಾದ ಪ್ರಾತಿನಿಧ್ಯವನ್ನು ನೀಡುತ್ತದೆ. ಭಯೋತ್ಪಾದನೆಯ ಕಾರಣದಿಂದ ಕಾಶ್ಮೀರ ತೊರೆದವರಿಗೆ ಈ ವಿಧೇಯಕಗಳು ನ್ಯಾಯ ಒದಗಿಸಲಿವೆ. ಇನ್ನಾದರೂ ಕಾಶ್ಮೀರಿ ಪಂಡಿತರ ಮುಖದಲ್ಲಿ ನಗು ಅರಳಲಿ. ಮತ-ಬ್ಯಾಂಕ್ ರಾಜಕೀಯವನ್ನು ಪರಿಗಣಿಸದೆ, ಇದರ ಉಪಯುಕ್ತತೆಯನ್ನು ಮನಗಂಡು ಎಲ್ಲ ಪಕ್ಷಗಳೂ ಇದನ್ನು ಬೆಂಬಲಿಸಬೇಕಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಡಿಕೆ ಬೆಳೆಯ ಸಂಕಷ್ಟಗಳನ್ನು ನಿವಾರಿಸಿ

Continue Reading

ಕರ್ನಾಟಕ

ವಿಸ್ತಾರ ಸಂಪಾದಕೀಯ: ಅಡಿಕೆ ಬೆಳೆಯ ಸಂಕಷ್ಟಗಳನ್ನು ನಿವಾರಿಸಿ

Vistara Editorial: ಅಡಿಕೆಗೆ ಸಂಬಂಧಿಸಿ ಸರ್ಕಾರ ತಾನು ನೀಡಿರುವ ಭರವಸೆಗಳನ್ನು ಈಡೇರಿಸುವ ಕೆಲಸ ಕೂಡಲೇ ಮಾಡಬೇಕು. ಎಲೆಚುಕ್ಕಿ ಹಾಗೂ ಹಳದಿ ರೋಗಗಳ ಮತ್ತದರ ಪರಿಹಾರದ ಕುರಿತ ಅಧ್ಯಯನ ಎಲ್ಲಿಗೆ ತಲುಪಿದೆ ಎಂಬುದನ್ನು ತಿಳಿಸಬೇಕು.

VISTARANEWS.COM


on

Vistara Editorial, Leaf spot disease for areca nut
Koo

ವಾಣಿಜ್ಯ ಬೆಳೆ ಅಡಿಕೆ ಅಮರಿಕೊಂಡಿರುವ ಸಂಕಷ್ಟಗಳು ಒಂದೆರಡಲ್ಲ. ರಾಜ್ಯದಲ್ಲಿ ಬೆಳೆ ನಷ್ಟ, ಎಲೆ ಚುಕ್ಕೆ ರೋಗ (Leaf spot disease for areca nut), ಹಳದಿ ರೋಗ, ಬೆಲೆ ಕುಸಿತಗಳಂತಹ ಹೊಡೆತದಿಂದ ಕಂಗಾಲಾಗಿರುವ ಅಡಿಕೆ ಬೆಳಗಾರರಿಗೆ ಈಗ ಮತ್ತೊಂದು ಶಾಕಿಂಗ್‌ ನ್ಯೂಸ್‌. ರಾಜ್ಯದಲ್ಲಿ ಅಡಿಕೆ ಅಕ್ರಮ ದಂಧೆಯ ವ್ಯವಸ್ಥಿತ ಜಾಲವೊಂದು ಹುಟ್ಟಿಕೊಂಡಿದೆ. ಅಂತಾರಾಜ್ಯ ಜಾಲ ಇದಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11 ಟನ್‌ ಅಕ್ರಮ ಅಡಿಕೆಯನ್ನು (Illegal Areca nut) ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ಈ ವಿಷಯ ತಿಳಿದುಬಂದಿದೆ. ಇತರ ರಾಜ್ಯಗಳಿಂದ ರಾಜ್ಯದ ಮಾರುಕಟ್ಟೆಯನ್ನು ಅಡಿಕೆ ಅಕ್ರಮವಾಗಿ ಪ್ರವೇಶ ಮಾಡುತ್ತಿದೆ ಎಂಬುದು ಕಳವಳಕಾರಿ ಸಂಗತಿ. ಭೂತಾನ್, ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಅಡಿಕೆಯನ್ನು ಭಾರತಕ್ಕೆ ಸಾಗಾಟ ಮಾಡಲಾಗುತ್ತಿದೆ. ಈಶಾನ್ಯ ಪ್ರದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಗಳು ಬರುತ್ತಿವೆ. ಅಸ್ಸಾಂ ಮತ್ತು ಮಣಿಪುರದಂತಹ ಪ್ರದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟ ಇಲ್ಲದ ಅಡಿಕೆ ಪೂರೈಸುವ ಜಾಲ ವ್ಯಾಪಕವಾಗಿ ವ್ಯಾಪಿಸುತ್ತಿದೆ. ಇದು ಇಲ್ಲಿ ಅಡಿಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಆತಂಕ ಎದುರಾಗಿದೆ. ಇಂತಹ ಅಕ್ರಮಕ್ಕೆ ಕೂಡಲೇ ಕಡಿವಾಣ ಹಾಕಿ, ಈ ಬಗ್ಗೆ ಕಠಿಣ ಕಾನೂನು ರೂಪಿಸಬೇಕು ಎಂಬುದು ಎಲ್ಲ ಅಡಿಕೆ ಬೆಳೆಗಾರರ ಆಗ್ರಹ(Vistara Editorial).

ಭಾರತದಲ್ಲಿ ಅಡಿಕೆ ಬೆಳೆಯುವ ಪ್ರಮುಖ ರಾಜ್ಯ ಕರ್ನಾಟಕ. ಅದರಲ್ಲೂ ಇಂದು ಮಲೆನಾಡು ಹಾಗೂ ಕರಾವಳಿ ಭಾಗಗಳ ಜೀವನಾಡಿಯೇ ಅಡಿಕೆ ಎಂಬಂತಾಗಿದೆ. ಭೂತಾನ್‌ನಿಂದ ಹಸಿ ಅಡಿಕೆ ಆಮದಿಗೆ ಸರ್ಕಾರ ಒಪ್ಪಿಗೆ ನೀಡಿದ್ದ ಸುದ್ದಿ ಹರಡುತ್ತಿದ್ದಂತೆ ರಾಜ್ಯದಲ್ಲಿ ರಾಶಿ ಕೆಂಪಡಿಕೆಯ ಬೆಲೆಯಲ್ಲಿ ಅಲ್ಪ ಕುಸಿತ ಕಂಡಿತ್ತು. ಅಂದರೆ ಇಲ್ಲಿ ಆಗುವ ಒಂದು ಸಣ್ಣ ಚಲನೆಯೂ ಕೋಟ್ಯಂತರ ಮೌಲ್ಯದ ಅಡಿಕೆ ಮಾರುಕಟ್ಟೆಯಲ್ಲಿ ತೀವ್ರ ಏರುಪೇರಿಗೆ ಕಾರಣವಾಗುತ್ತದೆ. ಇದರ ಜೊತೆಗೆ ಅಡಿಕೆಯನ್ನು ಕಾಡುತ್ತಿರುವ ಇನ್ನೂ ಹಲವು ಸಮಸ್ಯೆಗಳಿವೆ. ಮುಖ್ಯವಾಗಿ ಎಲೆ ಚುಕ್ಕಿ ರೋಗ ಮತ್ತು ಹಳದಿ ರೋಗ. ಮಲೆನಾಡು, ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದ ಕೆಲವು ಕಡೆ ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ರೋಗದ (Leaf spot Disease) ವಿಷಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಪ್ರಸ್ತಾಪವಾಗಿದೆ. ಎಲೆ ಚುಕ್ಕಿ ರೋಗದ ತೀವ್ರತೆ ಬಗ್ಗೆ ಪರಿಷತ್‌ನಲ್ಲಿ ಪರಿಷತ್ ಸದಸ್ಯ ರುದ್ರೇಗೌಡ ಪ್ರಸ್ತಾಪಿಸಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉತ್ತರಿಸಿದ್ದಾರೆ.

ಎಲೆ ಚುಕ್ಕಿ ರೋಗವನ್ನು ತಡೆಗಟ್ಟಲು ಸಂಶೋಧನೆ ನಡೆಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸಂಶೋಧನೆಗೆ ಹಣ ಕೂಡ ಬಿಡುಗಡೆ ಮಾಡಲಾಗಿದೆ. ಇದನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಚಲುವರಾಯಸ್ವಾಮಿ ಉತ್ತರಿಸಿದ್ದಾರೆ. ಮಲೆನಾಡು ಭಾಗದಲ್ಲಿ ಅಡಿಕೆಯನ್ನು ಕಾಡುತ್ತಿರುವ ಎಲೆ ಚುಕ್ಕೆ ರೋಗದ ಕುರಿತು ʻವಿಸ್ತಾರ ನ್ಯೂಸ್‌ʼ ನಡೆಸಿದ್ದ ʻಅಡಕತ್ತರಿಯಲ್ಲಿ ಅಡಕೆʼ ಎಂಬ ಅಭಿಯಾನದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ (Congress Government) ಈ ರೋಗದ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧವನ್ನು ಕಂಡು ಹಿಡಿಯುವ ಸಂಶೋಧನೆಗೆ ಹಣಕಾಸಿನ ನೆರವನ್ನು ಈಚೆಗೆ ನೀಡಿತ್ತು. ಮೊದಲ ಹಂತವಾಗಿ ಶಿವಮೊಗ್ಗ ತೋಟಗಾರಿಕಾ ವಿವಿಗೆ ಸಂಶೋಧನೆಯ ಉದ್ದೇಶಕ್ಕಾಗಿ 43.61 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ರಾಜ್ಯದ 7 ಜಿಲ್ಲೆಗಳಲ್ಲಿನ 53,977.04 ಹೆಕ್ಟೇರ್‌ಗೂ ಹೆಚ್ಚಿನ ಅಡಿಕೆ ತೋಟಗಳು ಎಲೆಚುಕ್ಕಿ ರೋಗದಿಂದ ನಾಶವಾಗುವ ಹಂತ ತಲುಪಿವೆ. ಇದರ ನಿಯಂತ್ರಣಕ್ಕೆ ನಿರ್ದಿಷ್ಟವಾದ ಔಷಧ ಇಲ್ಲದಿರುವುದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಮಲೆನಾಡು ಜಿಲ್ಲೆಗಳಲ್ಲಿ ಈ ರೋಗದ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶೇ.74 ಅಡಿಕೆ ತೋಟ ನಾಶವಾಗಿದೆ. ಈ ರೋಗದ ನಿಯಂತ್ರಣಕ್ಕೆ ಔಷಧಿಯನ್ನು ಕಂಡು ಹಿಡಿಯಬೇಕೆಂಬ ಉದ್ದೇಶದಿಂದ ಶೃಂಗೇರಿ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗಿದೆ.

ಹಾಗೆಯೇ ಹಳದಿ ರೋಗ ಕೂಡ. ಆರಂಭದಲ್ಲಿ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಭಾಗದಲ್ಲಿ ಕಾಣಿಸಿಕೊಂಡ ಹಳದಿ ರೋಗ ಅಡಿಕೆ ತೋಟವನ್ನು ನಾಶ ಮಾಡಿ ಅಡಕೆ ಕೃಷಿಕರ ಬದುಕನ್ನು ಸಂಕಷ್ಟಕ್ಕೀಡು ಮಾಡಿತ್ತು. ನಂತರ ಇದು ದಕ್ಷಿಣ ಕನ್ನಡದಾದ್ಯಂತ ವ್ಯಾಪಿಸಿದೆ. ತುಂಬಾ ಕೃಷಿಕರು ಹಳದಿ ರೋಗ ಬಂದು ನಾಶವಾದ ತೋಟವನ್ನು ಕಡಿದುಹಾಕಿದ್ದಾರೆ. ಅಡಿಕೆ ದೀರ್ಘಾವಧಿ ಬೆಳೆಯಾದ್ದರಿಂದ ಅದನ್ನು ಕಡಿದುಹಾಕಿದರೆ ಮುಂದಿನ ಹಲವಾರು ವರ್ಷಗಳು ಯಾವ ಆದಾಯವೂ ಇರುವುದಿಲ್ಲ. ಕಾಸರಗೋಡಿನ ಸಿಪಿಸಿಆರ್‌ಐನಿಂದ 7 ಕೋಟಿ ವೆಚ್ಚದಲ್ಲಿ ಹಳದಿ ಎಲೆ ರೋಗದ ನಿಯಂತ್ರಣ ಅಧ್ಯಯನ ಆರಂಭಿಸಲಾಗಿತ್ತು. ಹಳದಿ ಎಲೆ ರೋಗ ನಿರೋಧಕ ತಳಿಯ ಅಭಿವೃದ್ಧಿಯ ಬಗ್ಗೆಯೂ ಸಂಶೋಧನೆ ಆರಂಭವಾಗಿತ್ತು. ಎಲೆಚುಕ್ಕಿ ಹಾಗೂ ಹಳದಿ ರೋಗಗಳ ಕಾಟದಿಂದ ರೋಗದಿಂದ ತೋಟ ನಾಶವಾಗಿದ್ದರಿಂದ ಮುಂದೇನು ಮಾಡಬೇಕೆಂದು ತೋಚದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಶೃಂಗೇರಿ ತಾಲೂಕಿನಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ಊರು ತೊರೆದಿದ್ದವು.

ಸರ್ಕಾರ ತಾನು ನೀಡಿರುವ ಭರವಸೆಗಳನ್ನು ಈಡೇರಿಸುವ ಕೆಲಸ ಕೂಡಲೇ ಮಾಡಬೇಕು. ಎಲೆಚುಕ್ಕಿ ಹಾಗೂ ಹಳದಿ ರೋಗಗಳ ಮತ್ತದರ ಪರಿಹಾರದ ಕುರಿತ ಅಧ್ಯಯನ ಎಲ್ಲಿಗೆ ತಲುಪಿದೆ, ಅದರ ಮೇಲೆ ಸರ್ಕಾರದ ನೆಲೆಯಿಂದ ಯಾರಾದರೂ ನಿಗಾ ಇಟ್ಟಿದ್ದಾರೆಯೇ, ಎಂಬುದರ ಬಗ್ಗೆ ಮಾಹಿತಿಯಿಲ್ಲ. ಈ ರೋಗಗಳ ಕಂಟಕದ ನಡುವೆ ಅಕ್ರಮ ಅಡಿಕೆಯೂ ರಾಜ್ಯವನ್ನು ಪ್ರವೇಶಿಸಿದರೆ ನಮ್ಮ ಅಡಿಕೆ ಬೆಳೆಗಾರರ ಮರಣ ಶಾಸನ ಬರೆದಂತೆಯೇ. ರೋಗಗಳ ಬಗೆಗೆ ಹೇಗೋ ಹಾಗೇ ಅಕ್ರಮ ಅಡಿಕೆಯ ಆಗಮನವನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಡಿಕೆಯು ಕರಾವಳಿ ಹಾಗೂ ಮಲೆನಾಡಿನ ನಾಲ್ಕು ಜಿಲ್ಲೆಗಳ, ಆ ಮೂಲಕ ನಾಡಿನ ಶ್ರೀಮಂತಿಕೆಗೆ ಕಾರಣವಾಗಿದೆ. ಇಲ್ಲಿಂದ ರಫ್ತಾಗುವ ಅಡಿಕೆಗೆ ಉತ್ತಮ ಗುಣಮಟ್ಟ, ಒಳ್ಳೆಯ ಹೆಸರು ಇದೆ. ಅದನ್ನು ಉಳಿಸಿಕೊಳ್ಳಬೇಕು. ಅಗ್ಗದ ಅಡಿಕೆಗೆ ಹಾಗೂ ಮದ್ದಿಲ್ಲದ ರೋಗಗಳಿಗೆ ನಮ್ಮ ಅಡಿಕೆ ಬಲಿಯಾಗದಿರಲಿ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ದಸರಾ ಹೀರೊ ‘ಅರ್ಜುನ’ ದಾರುಣ ಸಾವು, ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ

Continue Reading

ಕರ್ನಾಟಕ

ವಿಸ್ತಾರ ಸಂಪಾದಕೀಯ: ದಸರಾ ಹೀರೊ ‘ಅರ್ಜುನ’ ದಾರುಣ ಸಾವು, ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ

Vistara Editorial: ಮೈಸೂರು ದಸರಾ ವೇಳೆ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯು ಕಾರಣವಾಯಿತೇ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ವಯಸ್ಸಾದ ಅರ್ಜನನಿಗೆ ಕಾಡಾನೆಯನ್ನು ಪಳಗಿಸುವ ಸಾಮರ್ಥ್ಯ ಇದೆಯೇ, ಇಲ್ಲವೇ ಎಂಬುದನ್ನು ಅಧಿಕಾರಿಗಳ ಪರಿಶೀಲಿಸಬೇಕಿತ್ತು.

VISTARANEWS.COM


on

Dasara Elephant Arjuna
Koo

ಮೈಸೂರು ದಸರಾದಲ್ಲಿ ಎಂಟು ಬಾರಿ ‘ಅಂಬಾರಿ’ ಹೊತ್ತಿದ್ದ ಸಾಕಾನೆ ಅರ್ಜುನ (Dasara Elephant Arjuna) ಮೃತಪಟ್ಟಿದೆ. ಸಕಲೇಶಪುರ ತಾಲೂಕಿನ‌ ಯಸಳೂರು ವಲಯದ ಬಾಳೆಕೆರೆ ಅರಣ್ಯದಲ್ಲಿ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡು ಅರ್ಜುನ ಕೊನೆಯುಸಿರೆಳೆದಿದೆ. ಅರಣ್ಯದಲ್ಲಿ ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. 12 ಕಾಡಾನೆಗನ್ನು ಸೆರೆ ಹಿಡಿಯಲು ಅರಿವಳಿಕೆ ಮದ್ದು ನೀಡುವಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ದಾಳಿ ತೀವ್ರವಾಗುತ್ತಿದ್ದಂತೆ ಮೂರು ಆನೆಗಳು ಹಿಂದೆ ಸರಿದಿವೆ. ಆದರೆ, ಹಿಮ್ಮೆಟ್ಟಿಸಲು ಯತ್ನಿಸಿದ ಅರ್ಜುನ ಮೇಲೆ ಕಾಡಾನೆ ಭೀಕರ ದಾಳಿ ನಡೆಸಿ ಹೊಟ್ಟೆ ಭಾಗಕ್ಕೆ ದಂತಗಳಿಂದ ತಿವಿದಿದ್ದರಿಂದ ಅರ್ಜುನ ಮೃತಪಟ್ಟಿದೆ. ಸಾವಿನ ವೇಳೆಯೂ, ಸಾಕಾನೆ ಕಾಡನೆ ಜತೆ ಜಗಳಕ್ಕೆ ನಿಂತು ಹಲವರ ಪ್ರಾಣಿ ಉಳಿಸಿದೆ. ಇದರೊಂದಿಗೆ ಮಾನವ ಮತ್ತು ಪ್ರಾಣಿಗಳ ನಡುವೆ ಸಾಂಸ್ಕೃತಿಕ ಕೊಂಡಿಯಂತಿದ್ದ ‘ಅರ್ಜನ’ನ ಅಧ್ಯಾಯ ಅಂತ್ಯವಾಗಿದೆ(Vistara Editorial).

‘ಅರ್ಜುನ’ ಎಂದಕೂಡಲೇ ನಮ್ಮ ಮನಸ್ಸಿನಲ್ಲಿ ಅಂಬಾರಿ ಹೊತ್ತ ಗಂಭೀರ ನಡಿಗೆ ಗಜರಾಜನ ಚಿತ್ರ ಮೂಡುತ್ತದೆ. ಅಷ್ಟರ ಮಟ್ಟಿಗೆ ಈ ಸಾಕಾನೆ ಕನ್ನಡ ನಾಡಿನ ಪರಂಪರೆಯೊಂದಿಗೆ ಬೆಸೆದುಕೊಂಡಿತ್ತು. ಅದೀಗ, ಇತಿಹಾಸವಷ್ಟೇ. ಅರ್ಜುನ ಸಾವು ಹಲವು ಪ್ರಶ್ನೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ ಎನ್ನುವುದು ಕಟು ವಾಸ್ತವ. ವಯಸ್ಸಾಗಿದ್ದ ಅರ್ಜುನನ್ನು ಮದವೇರಿದ ಕಾಡಾನೆ ಪಳಗಿಸಲು ಬಳಸಿದ್ದು ಸರಿಯೇ ಎಂಬ ಪ್ರಶ್ನೆಗಳು ಸಾರ್ವಜನಿಕವಾಗಿ ಎದ್ದಿವೆ. ಕಾರ್ಯಾಚರಣೆ ವೇಳೆ, ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಪಾಲಿಸಲಾಗಿಲ್ಲ ಎಂಬ ದೂರು ಹೆಚ್ಚಾಗಿ ಕೇಳಿ ಬರುತ್ತದೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಗಮನ ಸೆಳೆದಿದ್ದು ಸೂಕ್ತವಾಗಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನಗಳ ಪ್ರಕಾರ 60 ವರ್ಷ ಮೇಲ್ಪಟ್ಟ ಪ್ರಾಣಿಗಳ ಮೇಲೆ ಭಾರ ಹೊರಿಸುವ ಕೆಲಸಕ್ಕೆ ಬಳಸಬಾರದು. 64 ವರ್ಷಗಳನ್ನು ಕಂಡಿರುವ ಅರ್ಜನನ್ನು ಇದೇ ಕಾರಣಕ್ಕಾಗಿ ಮೈಸೂರು ದಸರಾದಲ್ಲಿ 750 ಕೆ ಜಿ ತೂಗುವ ಅಂಬಾರಿ ಹೊರುವ ಕೆಲಸಕ್ಕೆ ಮುಕ್ತಿ ನೀಡಲಾಗಿತ್ತು. ಇದಕ್ಕೂ ಮೊದಲು ಅಂದರೆ, 2012ರಿಂದ 2019ರವರೆಗೆ ಅರ್ಜುನ ಒಟ್ಟು 8 ಬಾರಿ ದಸರಾದಲ್ಲಿ ಅಂಬಾರಿ ಹೊತ್ತಿದ್ದಾನೆ. ಜತೆಗೆ, ಕಾಡಾನೆಗಳನ್ನು ಪಳಗಿಸುವ ಅಪಾರ ಅನುಭವ ಈ ಅರ್ಜನ ಆನೆಗಿತ್ತು. ಅದೇ ಕಾರಣಕ್ಕಾಗಿ ಈ ಕಾರ್ಯಾಚರಣೆಯನ್ನು ಅರ್ಜನನ್ನು ಬಳಸಲಾಗಿತ್ತು ಎಂಬ ಸಬೂಬನ್ನು ಅಧಿಕಾರಿಗಳು ನೀಡಬಹುದು. ಆದರೆ, ವಯಸ್ಸಾದ ಆನೆಯನ್ನು, ಮದವೇರಿದ ಆನೆಗಳ ಜತೆ ಕಾದಾಟಕ್ಕೆ ಬಿಡುವುದು ಎಷ್ಟು ಸರಿ ಎಂಬುದು ಪ್ರಾಣಿಪ್ರಿಯರ ಪ್ರಶ್ನೆಯಾಗಿದೆ.

ನಿಮಯಗಳನ್ನು ಮೀರಿ, ಅನುಭವ ಇದೆ ಎಂಬ ಕಾರಣಕ್ಕಾಗಿ ಕಾರ್ಯಾಚರಣೆಗೆ ಬಳಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಕಾರ್ಯಾಚರಣೆಗೆ ಬಳಕೆ ಮಾಡುವಾಗ ಅವುಗಳ ಸಾಮರ್ಥ್ಯವನ್ನು ನೋಡಿಕೊಳ್ಳಬೇಕು. ಆನೆ ಸೆರೆ ಕಾರ್ಯಾಚರಣೆ ಎಂದರೆ ಸುಲಭದ ಮಾತಲ್ಲ. ಅಲ್ಲಿ ಇಂತಹ ಪ್ರತಿ ದಾಳಿಗಳು ಪುಂಡಾನೆಗಳಿಂದ ಸಾಮಾನ್ಯ. ಅದನ್ನು ತಡೆಯುವಂತಹ, ನಿಭಾಯಿಸುವಂತಹ ಶಕ್ತಿ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಆನೆಗಳಿಗೆ ಇರಬೇಕಾಗುತ್ತದೆ. ಆದರೆ, ಅರ್ಜುನನಿಗೆ ಈಗಾಗಲೇ ವಯಸ್ಸು ಆಗಿರುವುದರಿಂದ ಇದನ್ನು ತಡೆಯುವ ಶಕ್ತಿ ಇದೆಯೇ ಎಂಬುದನ್ನು ಪರಿಶೀಲನೆಯನ್ನು ಮಾಡಿಕೊಂಡು ಕಾರ್ಯಾಚರಣೆಗೆ ಬಳಸಿಕೊಳ್ಳಬೇಕಿತ್ತು. ಈ ವಿಷಯದಲ್ಲಿ ಅಧಿಕಾರಿಗಳಿಂದ ಸ್ಪಷ್ಟವಾಗಿ ಕರ್ತವ್ಯ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಮುಖ್ಯವಾಗಿ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸಬೇಕಿತ್ತು. ಇದ್ಯಾವುದನ್ನೂ ಮಾಡದೆ ಕಾರ್ಯಾಚರಣೆಗೆ ನೇರವಾಗಿ ಇಳಿಸಿದ್ದರಿಂದ ಅನ್ಯಾಯವಾಗಿ ಅರ್ಜನನನ್ನು ನಾವು ಕಳೆದುಕೊಳ್ಳಬೇಕಾಯಿತು.

ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆ ಅರ್ಜುನ ಬಳಕೆಗೆ ಸಂಬಂಧಿಸಿದಂತೆ ಸಾಕಷ್ಟು ಲೋಪಗಳನ್ನು ಎಸಗಿರುವ ಮತ್ತು ನಿಯಮಗಳನ್ನು ಮೀರಿರುವ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ತಪ್ಪಿತಸ್ಧರು ಎಂದು ಕಂಡುಬಂದರೆ ಖಂಡಿತವಾಗಿಯೂ ಅವರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಬೇಕು. ಯಾಕೆಂದರೆ, ಮೃತಪಟ್ಟಿರುವುದು ಯಾವುದೋ ಸಾಮಾನ್ಯ ಆನೆಯಲ್ಲ. ಅದು ಈ ನಾಡಿನ ಸಾಂಸ್ಕೃತಿಕ ಬೆಸುಗೆಯನ್ನು ಬೆಸೆದ ಮಹತ್ವ ಆನೆ. ಅರ್ಜನ ಆನೆಗೆ ಅವನದ್ದೇ ಆದ ಮಹತ್ವವಿದೆ. ಆ ಕಾರಣಕ್ಕಾಗಿ, ಈ ವಿಷಯದಲ್ಲಿ ರಾಜ್ಯ ಸರ್ಕಾರವು ಹೆಚ್ಚು ಮುತುವರ್ಜಿ ವಹಿಸಿ, ಸಮಗ್ರ ತನಿಖೆ ನಡೆಸಬೇಕು ಎಂಬುದು ಪ್ರಾಣಿ ಪ್ರಿಯರು ಮತ್ತು ಈ ನಾಡಿನ ಜನರ ಆಗ್ರಹವಾಗಿದೆ. ಜತೆಗೆ, ಈ ರೀತಿಯ ಪ್ರಕರಣಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

Continue Reading

ದೇಶ

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

Vistara Editorial: ಬಿಜೆಪಿ ಈ ಫಲಿತಾಂಶವನ್ನು ಸಹಜವಾಗಿಯೇ ಹುಮ್ಮಸ್ಸಿನಿಂದ ಸ್ವೀಕರಿಸಿದೆ. ಅದು ಸಹಜ. ಇದು ಲೋಕಸಭೆ ಚುನಾವಣೆ ಫಲಿತಾಂಶದ ದಿಕ್ಸೂಚಿಯೂ ಹೌದು. ದುರಾಡಳಿತ, ಕಳಪೆ ಆಡಳಿತವನ್ನು ಜನ ಸಹಿಸುವುದಿಲ್ಲ ಎಂಬ ಸಂದೇಶವನ್ನೂ ಈ ಫಲಿತಾಂಶ ರವಾನಿಸಿದೆ.

VISTARANEWS.COM


on

4 state election results shows us that, freebies are not the way for win elections
Koo

2024ರ ಲೋಕಸಭೆ ಚುನಾವಣೆಯ (Lok Sabha Election 2024) ಸೆಮಿಫೈನಲ್‌ ಎಂದೇ ವಿಶ್ಲೇಷಿಸಲಾಗಿದ್ದ ಪಂಚರಾಜ್ಯ ಚುನಾವಣೆಯಲ್ಲಿ (Assembly Elections 2023) ನಾಲ್ಕು ರಾಜ್ಯಗಳ ಫಲಿತಾಂಶ ಭಾನುವಾರ (ಡಿಸೆಂಬರ್‌ 3) ಹೊರಬಿದ್ದಿದ್ದು, ಭಾರತೀಯ ಜನತಾ ಪಕ್ಷ ಮೂರು ರಾಜ್ಯಗಳಲ್ಲಿ ನಿಚ್ಚಳ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಕಾಂಗ್ರೆಸ್‌ ಒಂದು ರಾಜ್ಯವನ್ನು ಗೆದ್ದುಕೊಂಡಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಗದ್ದುಗೆ ಏರಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಿದೆ. ಬಿಜೆಪಿ ಮಧ್ಯಪ್ರದೇಶವನ್ನು ಉಳಿಸಿಕೊಂಡು ರಾಜಸ್ಥಾನ ಮತ್ತು ಛತ್ತೀಸ್‌ ಗಢವನ್ನು ಕಾಂಗ್ರೆಸ್‌ ಕೈಯಿಂದ ಕಸಿದುಕೊಂಡಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ತೆಲಂಗಾಣದಲ್ಲಿ 10 ವರ್ಷಗಳ ಕೆ ಚಂದ್ರಶೇಖರ ರಾವ್‌ (ಭಾರತ ರಾಷ್ಟ್ರ ಸಮಿತಿ- ಬಿಆರ್‌ಎಸ್‌) ಪಾರುಪತ್ಯವನ್ನು ಕೊನೆಗಾಣಿಸಿದೆ. ಈ ಫಲಿತಾಂಶಗಳು ನೀಡುತ್ತಿರುವ ಸಂದೇಶವನ್ನು ನಾವು ವಿಶ್ಲೇಷಿಸಬಹುದಾಗಿದೆ(Vistara editorial).

ಮೂರು ರಾಜ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಉತ್ತರ ಭಾರತದಲ್ಲಿ ಬಿಜೆಪಿ ತನ್ನ ಪಾರಮ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದರೆ, ಕಾಂಗ್ರೆಸ್‌ ತೆಲಂಗಾಣದ ಗೆಲುವಿನ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಗ್ಯಾರಂಟಿಗಳ ಪ್ರಭಾವದಿಂದ ಕಾಂಗ್ರೆಸ್‌ ದೊಡ್ಡ ಗೆಲುವನ್ನು ಸಾಧಿಸಿದ ಬಳಿಕ ಗೊಂದಲದಲ್ಲಿ ಮುಳುಗಿದ್ದ ಬಿಜೆಪಿಗೆ ಈ ಚುನಾವಣೆ ಫಲಿತಾಂಶ ಧೈರ್ಯವನ್ನು ತುಂಬಿದೆ. ಇದು ಬಿಜೆಪಿಯ 2024ರ ಲೋಕಸಭಾ ಚುನಾವಣಾ ಓಟಕ್ಕೆ ಎದುರಾಗಿದ್ದ ಆತಂಕವನ್ನು ದೂರ ಮಾಡಿದೆ. ಬಿಜೆಪಿ ಗೆದ್ದಿರುವ ಮೂರು ರಾಜ್ಯಗಳಲ್ಲೇ 65 ಸ್ಥಾನಗಳಿವೆ. ಇದು ಬಹುತೇಕ ಸಾರಾಸಗಟು ಬಿಜೆಪಿ ಪಕ್ಷಕ್ಕೆ ಬರುವ ಸಾಧ್ಯತೆಗಳು ಕಂಡುಬರುತ್ತಿವೆ.

ಇತ್ತೀಚೆಗೆ ಕಾಂಗ್ರೆಸ್ ನೀಡುತ್ತಿರುವ ಉಚಿತ ಗ್ಯಾರಂಟಿಗಳು ಹೆಚ್ಚು ಚರ್ಚಿತವಾಗಿವೆ. ಇವುಗಳಿಂದಾಗಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬುದರಲ್ಲಿ ಭಾಗಶಃ ಸತ್ಯವಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದುದರ ಹಿಂದೆ ಬಿಜೆಪಿಯ ಕಳಪೆ ಆಡಳಿತದ ಬಗ್ಗೆ ಎದ್ದ ಆಕ್ರೋಶವೂ ಕಾರಣವಾಗಿತ್ತು. ಈಗಲೂ ಅದೇ ಸಂಭವಿಸಿದೆ. ಅಂದರೆ, ಗ್ಯಾರಂಟಿಗಳೇ ಎಲ್ಲವೂ ಅಲ್ಲ ಎಂಬುದನ್ನು ಇದು ಸಾರಿದೆ. ಬಿಜೆಪಿ ಕೂಡಾ ಕಾಂಗ್ರೆಸ್‌ನಂತೆಯೇ ಕೆಲವೊಂದು ಉಚಿತ ಯೋಜನೆಗಳನ್ನು ನೀಡಿದ್ದರೂ ಒಟ್ಟಾರೆ ಫಲಿತಾಂಶ ಗ್ಯಾರಂಟಿ ಯೋಜನೆಗಳ ಹಂಗನ್ನು ಮೀರಿ ನಿಂತಿದೆ. ಮತದಾರರು ಗ್ಯಾರಂಟಿಗಳ ಆಮಿಷವನ್ನು ಮೀರಿ ಮತ ಹಾಕಿದ್ದಾರೆ. ಅಂದರೆ ಉತ್ತಮ ಆಡಳಿತವನ್ನು ಅಪೇಕ್ಷಿಸಿದ್ದಾರೆ ಎಂಬುದು ನಿಶ್ಚಿತ. ಉಚಿತಗಳು ಎಕಾನಮಿಗೆ ಒಳ್ಳೆಯದಲ್ಲ ಎಂಬುದನ್ನು ತಜ್ಞರು ಹೇಳುತ್ತಾರೆ. ಮತದಾರರು ಅದನ್ನೇ ಇನ್ನೊಂದು ಬಗೆಯಲ್ಲಿ ಹೇಳಿದಂತಿದೆ. ಇಲ್ಲವಾದರೆ ಮೂರೂ ಕಡೆ ಕಾಂಗ್ರೆಸ್ ವಿಫಲವಾಗುತ್ತಿರಲಿಲ್ಲ. ತೆಲಂಗಾಣದಲ್ಲಿ ಗ್ಯಾರಂಟಿಗಳನ್ನು ಘೋಷಿಸಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ನಿಜ. ಆದರೆ ಹತ್ತು ವರ್ಷಗಳ ಬಿಆರ್‌ಎಸ್ ಆಡಳಿತ ಸಾಕಾಗಿ ಅಲ್ಲಿನ ಜನತೆ ಬದಲಾವಣೆ ಬಯಸಿದ್ದರು ಎಂಬುದೂ ಅಷ್ಟೇ ನಿಜ.

ಬಿಜೆಪಿ ಈ ಫಲಿತಾಂಶವನ್ನು ಸಹಜವಾಗಿಯೇ ಹುಮ್ಮಸ್ಸಿನಿಂದ ಸ್ವೀಕರಿಸಿದೆ. ಅದು ಸಹಜ. ಇದು ಲೋಕಸಭೆ ಚುನಾವಣೆಯ ಮುನ್ಸೂಚನೆಯೂ ಹೌದು. ಆದರೆ ದುರಾಡಳಿತ, ಕಳಪೆ ಆಡಳಿತವನ್ನು ಜನ ಸಹಿಸುವುದಿಲ್ಲ ಎಂಬ ಸಂದೇಶ ಸ್ಪಷ್ಟವಾಗಿದೆ. ಛತ್ತೀಸ್‌ಗಢದಲ್ಲಿ ಭೂಪೇಶ್ ಬಘೇಲ್ ಆಡಳಿತದಲ್ಲಿ ಹಗರಣಗಳ ಮೇಲೆ ಹಗರಣಗಳು ನಡೆದಿದ್ದವು. ಜನತೆ ಸರ್ಕಾರವನ್ನು ಬದಲಿಸಿದ್ದಾರೆ. ಇದು ಬಿಜೆಪಿಗೂ ಪಾಠ. ಮೂರೂ ರಾಜ್ಯಗಳಲ್ಲೂ ಬುಡಕಟ್ಟು ಸಮುದಾಯ ಬಿಜೆಪಿಯ ಕೈಹಿಡಿದಿದೆ. ಇದು ತನ್ನ ಆದ್ಯತೆ ಎಲ್ಲಿಗೆ ಇರಬೇಕೆಂದು ಬಿಜೆಪಿಗೆ ತೋರಿಕೊಟ್ಟಿದೆ. ಕೇಂದ್ರದ ಅಭಿವೃದ್ಧಿ ಯೋಜನೆಗಳು ಮತ ಬಿಜೆಪಿಗೆ ಸಹಾಯ ಮಾಡಿವೆ. ಮುಖ್ಯವಾಗಿ ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಜನಪರ ಯೋಜನೆಗಳು, ಕೇಂದ್ರ ರಾಜ್ಯ ಡಬಲ್ ಎಂಜಿನ್ ಸರ್ಕಾರದ ಎಫೆಕ್ಟ್, ಮೋದಿ ಹವಾ ಕೂಡ ಕೆಲಸ ಮಾಡಿದೆ.

ಗೆಲುವಿನ‌ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಹಾಗೂ ಅದರ ನೇತೃತ್ವದ ಇಂಡಿಯಾ ಬ್ಲಾಕ್‌ಗೆ ನಿರಾಸೆ ಆಗಿರುವುದು ಸಹಜ. ಇದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿ, ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಉಚಿತ ಯೋಜನೆಗಳಿಗಿಂತಲೂ ಖಚಿತ ಅಭಿವೃದ್ಧಿ ಯೋಜನೆಗಳತ್ತ ಹೆಚ್ಚಿನ ಹರಿಸಬೇಕು. ನಾಯಕತ್ವದ ವಿಚಾರದಲ್ಲಿ ಇನ್ನಷ್ಟು ಪ್ರಯೋಗ, ಗಟ್ಟಿತನ ಬೇಕಾದೀತು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಭ್ರೂಣ ಹತ್ಯೆ ಜಾಲ ಆಘಾತಕಾರಿ

Continue Reading
Advertisement
Pressmeet for Demand for construction of bypass road in Yallapur
ಉತ್ತರ ಕನ್ನಡ1 min ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ3 mins ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ3 mins ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ20 mins ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ21 mins ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Flax Seeds Benefits For Hair
ಆರೋಗ್ಯ30 mins ago

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

Wedding Fashion
ಫ್ಯಾಷನ್36 mins ago

Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

U-19 Asia Cup IND vs PAK
ಕ್ರಿಕೆಟ್45 mins ago

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

Veer Savarkar and Priyank Kharge
ಕರ್ನಾಟಕ46 mins ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

job opportunity
ದೇಶ58 mins ago

Job News: ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆಗಳಲ್ಲಿ ಶೇ.14ರಷ್ಟು ಉದ್ಯೋಗ ಹೆಚ್ಚಳ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Veer Savarkar and Priyank Kharge
ಕರ್ನಾಟಕ46 mins ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ6 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ13 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ22 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

ಟ್ರೆಂಡಿಂಗ್‌