ವಿಸ್ತಾರ ಸಂಪಾದಕೀಯ: ಬೃಹತ್ ಕಾಮಗಾರಿ ವೇಳೆ ಕಾರ್ಮಿಕರ ಸುರಕ್ಷತೆ ಖಾತರಿಪಡಿಸಿ - Vistara News

ಅವಿಭಾಗೀಕೃತ

ವಿಸ್ತಾರ ಸಂಪಾದಕೀಯ: ಬೃಹತ್ ಕಾಮಗಾರಿ ವೇಳೆ ಕಾರ್ಮಿಕರ ಸುರಕ್ಷತೆ ಖಾತರಿಪಡಿಸಿ

Vistara Editorial: ದೇಶದಾದ್ಯಂತ ಸುಮಾರು 79 ಕಿ.ಮೀ ಉದ್ದದ ಒಟ್ಟು 29 ಸುರಂಗಗಳು ನಿರ್ಮಾಣ ಹಂತದಲ್ಲಿವೆ. ಹಿಮಾಚಲ ಪ್ರದೇಶದಲ್ಲಿ 12, ಜಮ್ಮು ಮತ್ತು ಕಾಶ್ಮೀರದಲ್ಲಿ ಆರು, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲಿ ತಲಾ ಎರಡು, ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಢ, ಉತ್ತರಾಖಂಡ ಮತ್ತು ದೆಹಲಿಯಲ್ಲಿ ತಲಾ ಒಂದೊಂದು ಸುರಂಗಗಳಿವೆ. ಇಲ್ಲೆಲ್ಲ ಸುರಕ್ಷತಾ ಕ್ರಮಗಳ ಪರಿಶೀಲನೆ ಅಗತ್ಯ.

VISTARANEWS.COM


on

Vistara Editorial, Ensure safety of workers during massive projects
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ದೇಶದಾದ್ಯಂತ ನಿರ್ಮಾಣ ಹಂತದಲ್ಲಿರುವ ಎಲ್ಲಾ 29 ಸುರಂಗಗಳ ಸುರಕ್ಷತೆ ಮತ್ತು ಅತ್ಯುನ್ನತ ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸುರಕ್ಷತಾ ಆಡಿಟ್ ಅನ್ನು ಕೈಗೊಳ್ಳಲಿದೆ ಎಂದು ಅದರ ಅಧಿಕೃತ ಹೇಳಿಕೆ ಬುಧವಾರ ತಿಳಿಸಿದೆ. ಎನ್‌ಎಚ್‌ಎಐ ಅಧಿಕಾರಿಗಳು, ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ತಜ್ಞರ ತಂಡ ಮತ್ತು ಇತರ ಸುರಂಗ ತಜ್ಞರು ಈಗ ನಡೆಯುತ್ತಿರುವ ಸುರಂಗ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ ಮತ್ತು ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರಂತೆ. ನವೆಂಬರ್ 12ರಂದು ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದ ಕುಸಿತ ಹಾಗೂ ಅದರ ಒಳಗೆ 41 ಕಾರ್ಮಿಕರು ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಈ ಕ್ರಮ ಕೈಗೊಳ್ಳುತ್ತಿದೆ(Vistara editorial).

ದೇಶದಾದ್ಯಂತ ಸುಮಾರು 79 ಕಿ.ಮೀ ಉದ್ದದ ಒಟ್ಟು 29 ಸುರಂಗಗಳು ನಿರ್ಮಾಣ ಹಂತದಲ್ಲಿವೆ. ಹಿಮಾಚಲ ಪ್ರದೇಶದಲ್ಲಿ 12, ಜಮ್ಮು ಮತ್ತು ಕಾಶ್ಮೀರದಲ್ಲಿ ಆರು, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲಿ ತಲಾ ಎರಡು, ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಢ, ಉತ್ತರಾಖಂಡ ಮತ್ತು ದೆಹಲಿಯಲ್ಲಿ ತಲಾ ಒಂದೊಂದು ಸುರಂಗಗಳಿವೆ. NHAI ಸಹ ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL)ನೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಒಪ್ಪಂದದ ಭಾಗವಾಗಿ, ಸುರಂಗ ನಿರ್ಮಾಣ ಮತ್ತು NHAI ಯೋಜನೆಗಳ ಇಳಿಜಾರು ಸ್ಥಿರೀಕರಣಕ್ಕೆ ಸಂಬಂಧಿಸಿದ ವಿನ್ಯಾಸ, ರೇಖಾಚಿತ್ರ ಮತ್ತು ಸುರಕ್ಷತೆ ಅಂಶಗಳನ್ನು KRCL ಪರಿಶೀಲಿಸುತ್ತದೆ.

ಯಾವುದೇ ಸರ್ಕಾರಿ ಕಾಮಗಾರಿ, ನಿರ್ಮಾಣ ಕಾರ್ಯಕ್ಕೆ ʼಭಾರತೀಯ ಮಾನಕʼ (Indian standard) ಅನ್ನು ಅನ್ವಯಿಸಲಾಗುತ್ತದೆ. ಇದೊಂದು ಬೃಹತ್‌ ದಾಖಲೆ ಮತ್ತು ಎಲ್ಲ ಕಾಮಗಾರಿಗೂ ಸಂಬಂಧಿಸಿದ ಸುರಕ್ಷತಾ ಸೂತ್ರಗಳು ಇದರಲ್ಲಿವೆ. ಮಣ್ಣಿನ ಪರೀಕ್ಷೆ ಮಾಡುವುದು, ಅದು ಗಟ್ಟಿ ನೆಲವೋ ಮೆದು ನೆಲವೋ ಎಂದು ಪರೀಕ್ಷಿಸುವುದರಿಂದ ಆರಂಭಿಸಿ, ಆ ಮಣ್ಣಿನಲ್ಲಿ ಯಾವ ಖನಿಜಾಂಶಗಳಿವೆ, ಅದು ಬೇಗನೆ ಕುಸಿಯಬಹುದೇ, ಸುರಂಗ ಕಾಮಗಾರಿಯ ಸಂದರ್ಭ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ತುರ್ತು ಸಂದರ್ಭ ಒದಗಿದಾಗ ಒಳಗಿರುವ ಕಾರ್ಮಿಕರ ರಕ್ಷಣೆಗೆ ಯಾವ ಸೂತ್ರ ಅನುಸರಿಸಬೇಕು, ಒಳಗಿರುವವರಿಗೆ ವೆಂಟಿಲೇಶನ್‌ ಹಾಗೂ ಬೆಳಕಿನ ವ್ಯವಸ್ಥೆ ಹೇಗಿರಬೇಕು- ಎಂಬಿತ್ಯಾದಿ ಎಲ್ಲ ಅಂಶಗಳನ್ನೂ ಈ ಐಎಸ್‌ ಸಮಗ್ರವಾಗಿ ನಿರ್ದೇಶನ ರೂಪದಲ್ಲಿ ನೀಡಿದೆ. ಸುರಂಗ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ಪರಿಣತಿ ಹಾಗೂ ದಕ್ಷತೆ ಹೊಂದಿರುವ ಕಂಪನಿಗಳಿಗೆ, ತಜ್ಞರಿಗೆ ಅದನ್ನು ಒಪ್ಪಿಸಲಾಗುತ್ತದೆ. ತುಂಬಾ ಆಳಕ್ಕೆ ಕೊರೆಯುವ ಗಣಿಗಳಲ್ಲಿ ಭೂಕುಸಿತ ಉಂಟಾಗಿ ಕಾರ್ಮಿಕರು ಸಾಯುವ ಘಟನೆಗಳು ಭಾರತದಲ್ಲಿ ಸಾಕಷ್ಟು ನಡೆದಿವೆ. ಆದರೆ ಸುರಂಗ ಕೊರೆತದ ವೇಳೆ ಇಂಥ ಘಟನೆಗಳು ಆಗಿರುವುದು ತುಂಬಾ ಕಡಿಮೆ. ದಿಲ್ಲಿ ಮೆಟ್ರೋ, ಬೆಂಗಳೂರು ಮೆಟ್ರೋ ಮುಂತಾದವುಗಳ ರಚನೆಯ ಮೇಲೆ ಈ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ ಪರಿಣಾಮ ಯಾವುದೇ ಅವಘಡ ಸಂಭವಿಸಿಲ್ಲ.

ಆದರೆ ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ನಡೆದಿರುವ ಘಟನೆಯ ಮೂಲ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಡಿಲವಾದ, ಮೆದುವಾದ ಮಣ್ಣಿನ ರಚನೆಯನ್ನು ಸರಿಯಾಗಿ ಗಮನಿಸದೆ ಕಾಮಗಾರಿ ನಡೆಸಿದ ಕಾರಣ ಹೀಗಾಗಿದೆಯೇ ಅಥವಾ ದಿಡೀರ್‌ ಎಂದು ಬಂದ ಮಳೆಯ ಕಾರಣ ಹೀಗಾಗಿದೆಯೇ ಎಂಬುದು ತಿಳಿದುಬಂದಿಲ್ಲ. ಅದೇನೇ ಇದ್ದರೂ, ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದುದಕ್ಕಾಗಿ ಸುರಂಗ ಕಾಮಗಾರಿ ನಡೆಸುತ್ತಿರುವ ಕಂಪನಿಯ ಕ್ರಮ ಕೈಗೊಳ್ಳಬೇಕಾಗಿದೆ. ಹೈದರಾಬಾದ್‌ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಸುರಂಗದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ. ಜತೆಗೆ ಸುರಕ್ಷತಾ ಕ್ರಮಗಳಲ್ಲಿ ರಾಜಿ ಮಾಡಿಕೊಳ್ಳಲು ಬಜೆಟ್‌ನಲ್ಲಿ ಕಡಿತವಾಗುವಂತೆ ಅಧಿಕಾರಿಗಳಿಗೆ ಲಂಚ ನೀಡಿದ್ದರೆ ಅವರಿಗೂ ಶಿಕ್ಷೆಯಾಗಬೇಕು. ಮೊದಲು ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರು ಹೊರಗೆ ಬರಲಿ; ನಂತರ ಸಮಗ್ರ ತನಿಖೆ ನಡೆಯಲಿ. ಇದೇ ವೇಳೆಗೆ ದೇಶದಲ್ಲಿ ನಡೆಯುತ್ತಿರುವ ಇತರ ಸುರಂಗ ಕಾಮಗಾರಿಗಳ ಸುರಕ್ಷತಾ ಪರೀಕ್ಷೆಯೂ ಅಗತ್ಯವಾಗಿ ನಡೆಯಬೇಕಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಮಾಯಣ, ಮಹಾಭಾರತ ಕಲಿಕೆ ಶಿಫಾರಸು ಸ್ವಾಗತಾರ್ಹ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

BJP’s national convention: ಮುಂದಿನ 1,000 ವರ್ಷ ರಾಮರಾಜ್ಯ ಸ್ಥಾಪನೆಗೆ ರಾಮ ಮಂದಿರ ನಾಂದಿ; ಬಿಜೆಪಿ ನಿರ್ಣಯದಲ್ಲಿ ಪ್ರಶಂಸೆ

BJP’s national convention : ನರೇಂದ್ರ ಮೋದಿ ನಾಯಕತ್ವದಿಂದ ಭಾರತದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆ ಉಳಿದಿದೆ ಎಂಬುದಾಗಿ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

VISTARANEWS.COM


on

BJP national Convention
Koo

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಭಾನುವಾರ ನಡೆದ ಬಿಜೆಪಿಯ ರಾಷ್ಟ್ರೀಯ ಸಮಾವೇಶ ಮಹತ್ವದ ನಿರ್ಣಯವನ್ನು (BJP’s national convention) ಅಂಗೀಕರಿಸಲಾಗಿದ್ದು , ಮಂದಿರವು ಮುಂದಿನ 1,000 ವರ್ಷಗಳವರೆಗೆ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಗೆ ನಾಂದಿ ಹಾಡಲಿದೆ ಎಂದು ಪ್ರತಿಪಾದಿಸಿದೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ನಡೆದ ದೇವಾಲಯವು ರಾಷ್ಟ್ರೀಯ ಪ್ರಜ್ಞೆಯ ಪ್ರತೀಕವಾಗಿದೆ. “ವಿಕಸಿತ್​​ ಭಾರತ್” ನ ಅಗತ್ಯಗಳನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ಮತ್ತು ದೈವಿಕ ದೇವಾಲಯ ನಿರ್ಮಿಸುವುದು ಐತಿಹಾಸಿಕ ಮತ್ತು ಅದ್ಭುತ ಸಾಧನೆಯಾಗಿದೆ. ಇದು ಮುಂದಿನ 1,000 ವರ್ಷಗಳ ಕಾಲ ಭಾರತದಲ್ಲಿ ‘ರಾಮರಾಜ್ಯ’ ಸ್ಥಾಪನೆಗೆ ಪೂರಕವಾಗಲಿದೆ. ಹೊಸ ಶಕೆಯ ಆರಂಭವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಇದೇ ವೇಳೆ ರಾಮನ ಪ್ರತಿಷ್ಠಾಪನೆಯನ್ನು ಯಶಸ್ವಿ ನಡೆಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ನಿರ್ಣಯದಲ್ಲಿ ಅಭಿನಂದಿಸಲಾಗಿದೆ.

ರಾಮ ಮಂದಿರವು ಭಾರತದ ದೃಷ್ಟಿಕೋನ, ತತ್ವಶಾಸ್ತ್ರ ಮತ್ತು ಸನ್ಮಾರ್ಗದ ಸಂಕೇತವಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. “ಶ್ರೀ ರಾಮ್ ದೇವಾಲಯವು ನಿಜವಾಗಿಯೂ ರಾಷ್ಟ್ರೀಯ ಪ್ರಜ್ಞೆಯ ದೇವಾಲಯವಾಗಿದೆ” ಎಂದು ಅದು ಹೇಳಿದೆ. ಭಗವಾನ್ ಶ್ರೀ ರಾಮನ ದೈವಿಕ ಪ್ರತಿಷ್ಠಾಪನೆಯನ್ನು ನೋಡಿ ಪ್ರತಿಯೊಬ್ಬ ಭಾರತೀಯ ಸಂತೋಷ ಪಟ್ಟಿದ್ದಾನೆ ಎಂದು ಉಲ್ಲೇಖದಲ್ಲಿ ತಿಳಿಸಲಾಗಿದೆ. ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಪ್ರತಿಯೊಂದು ಅಂಶದಲ್ಲೂ ಭಗವಾನ್ ರಾಮ, ಸೀತೆ ಮತ್ತು ರಾಮಾಯಣವಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಮೂಲಭೂತ ಹಕ್ಕುಗಳಿಗೆ ಸ್ಫೂರ್ತಿ

ಭಾರತದ ಸಂವಿಧಾನದ ಮೂಲ ಪ್ರತಿಯಲ್ಲಿ, ಮೂಲಭೂತ ಹಕ್ಕುಗಳ ವಿಭಾಗದಲ್ಲಿ, ವಿಜಯದ ನಂತರ ಅಯೋಧ್ಯೆಗೆ ಮರಳಿದ ನಂತರ ಭಗವಾನ್ ಶ್ರೀ ರಾಮ, ತಾಯಿ ಸೀತಾ ಮತ್ತು ಲಕ್ಷ್ಮಣ ಜಿ ಅವರ ಚಿತ್ರವಿದೆ. ಭಗವಾನ್ ಶ್ರೀ ರಾಮ ಮೂಲಭೂತ ಹಕ್ಕುಗಳಿಗೆ ಸ್ಫೂರ್ತಿ ಎಂಬುದಕ್ಕೆ ಅದುವೇ ಪುರಾವೆ ಎಂದು ಅದು ಹೇಳಿದೆ. ಅದೇ ರೀತಿ ರಾಮರಾಜ್ಯದ ಕಲ್ಪನೆಯು ಮಹಾತ್ಮ ಗಾಂಧಿಯವರ ಹೃದಯದಲ್ಲಿಯೂ ಇತ್ತು’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ರಾಮರಾಜ್ಯದ ಕಲ್ಪನೆಯೇ ನಿಜವಾದ ಪ್ರಜಾಪ್ರಭುತ್ವದ ಕಲ್ಪನೆ ಎಂದು ಗಾಂಧೀಜಿ ಹೇಳುತ್ತಿದ್ದರು. ಭಗವಾನ್ ಶ್ರೀ ರಾಮನ ಆದರ್ಶಗಳನ್ನು ಅನುಸರಿಸಿ, ಪ್ರಧಾನಿ ದೇಶದಲ್ಲಿ ಉತ್ತಮ ಆಡಳಿತವನ್ನು ಸ್ಥಾಪಿಸುವ ಮೂಲಕ ನಿಜವಾದ ಅರ್ಥದಲ್ಲಿ ರಾಮರಾಜ್ಯ’ದ ಸ್ಫೂರ್ತಿಯನ್ನು ಜಾರಿಗೆ ತಂದಿದ್ದಾರೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಇದನ್ನೂ ಓದಿ : ಲೋಕಸಭೆ ಚುನಾವಣೆ ಗೆಲುವಿಗಾಗಿ ಕಾರ್ಯಕರ್ತರಿಗೆ 100 ದಿನಗಳ ಟಾಸ್ಕ್‌ ಕೊಟ್ಟ ಮೋದಿ!

ಭಗವಾನ್ ರಾಮನು ತನ್ನ ಮಾತುಗಳಲ್ಲಿ ಮತ್ತು ಆಲೋಚನೆಗಳಲ್ಲಿ ತುಂಬಿದ ಮೌಲ್ಯಗಳನ್ನು ಅನುಸರಿಸಲಾಗುತ್ತಿದೆ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮತ್ತು ‘ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್​ ಅದಕ್ಕೆ ಸ್ಫೂರ್ತಿ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಮೋದಿಯವರ ನಾಯಕತ್ವದಲ್ಲಿ, ಭಾರತದ ಏಕತೆ ಮತ್ತು ಒಗ್ಗಟ್ಟು ಸಾರ್ವಜನಿಕರ ಭಾಗವಹಿಸುವಿಕೆಯು ಹೆಚ್ಚಿದೆ. ಅವರು ತಮ್ಮ ನೀತಿಗಳು ರಾಷ್ಟ್ರದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ.. ಕಳೆದ 10 ವರ್ಷಗಳಲ್ಲಿ ಭಾರತೀಯ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಐತಿಹಾಸಿಕ ಹೆಮ್ಮೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ಅದು ಹೇಳಿದೆ.

Continue Reading

ಅವಿಭಾಗೀಕೃತ

Karnataka Live News: ಚಾಮುಂಡೇಶ್ವರಿ ಆಶೀರ್ವಾದ ಪಡೆದ ಅಮಿತ್‌ ಶಾ; ಲೋಕಸಭೆಗೆ ರಣಕಹಳೆ ಊದಿದ ಚಾಣಕ್ಯ!

Karnataka Live News : ರಾಜಕೀಯ ವಿದ್ಯಮಾನ, ಸರ್ಕಾರದ ಪ್ರಮುಖ ನಿರ್ಧಾರ, ಅಪಘಾತ, ಅಪರಾಧ, ಹವಾಮಾನ, ಶೈಕ್ಷಣಿಕ, ಸಾಮಾಜಿಕ ಇತ್ಯಾದಿ ನಾಡಿನ ಪ್ರಮುಖ ಸಂಗತಿಗಳ ತ್ವರಿತ ಅಪ್‌ಡೇಟ್ಸ್ ಇಲ್ಲಿವೆ.

VISTARANEWS.COM


on

By

karnataka live news karnataka today news live vistara news feb 11th
Koo
Continue Reading

ಅವಿಭಾಗೀಕೃತ

Karnataka Live News: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ; ಜೆಡಿಎಸ್ ರಣತಂತ್ರ, ಉಸ್ತುವಾರಿಗಳ ನೇಮಕ

Karnataka Live News : ರಾಜಕೀಯ ವಿದ್ಯಮಾನ, ಸರ್ಕಾರದ ಪ್ರಮುಖ ನಿರ್ಧಾರ, ಅಪಘಾತ, ಅಪರಾಧ, ಹವಾಮಾನ, ಶೈಕ್ಷಣಿಕ, ಸಾಮಾಜಿಕ ಇತ್ಯಾದಿ ನಾಡಿನ ಪ್ರಮುಖ ಸಂಗತಿಗಳ ತ್ವರಿತ ಅಪ್‌ಡೇಟ್ಸ್ ಇಲ್ಲಿವೆ.

VISTARANEWS.COM


on

By

karnataka today news live vistara news 4feb
Koo
Continue Reading

ಟಾಪ್ 10 ನ್ಯೂಸ್

VISTARA TOP 10 NEWS : ಹನುಮ ಧ್ವಜ ಹೋರಾಟ ತಾರಕಕ್ಕೆ, ನೀರೆಂದು ಆ್ಯಸಿಡ್ ಕುಡಿದ ಮಯಾಂಕ್ ಅಗರ್ವಾಲ್ ಆಸ್ಪತ್ರೆಗೆ..

VISTARA TOP 10 NEWS : ಕೆರಗೋಡಿನ ಹನುಮ ಧ್ವಜ ವಿವಾದ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ವಾಗ್ಯುದ್ಧದ ಜತೆಗೆ ರಾಜ್ಯದ ಇತರ ಭಾಗಗಳಿಗೂ ಹರಡಿದೆ. ಇತ್ತ ರಾಜಕೀಯದಲ್ಲಿ ಲಕ್ಷ್ಮಣ ಸವದಿ ಘರ್‌ ವಾಪ್ಸಿಗೆ ವೇದಿಕೆ ಸಿದ್ಧಗೊಳ್ಳುತ್ತಿರುವಂತೆ ಕಾಣುತ್ತಿದೆ. ಹೀಗೆ ದಿನದ ಪ್ರಮುಖ ಸುದ್ದಿಗಳ ಮೇಲೆ ಸುತ್ತುನೋಟವೇ ಈ ವಿಸ್ತಾರ ಟಾಪ್‌ 10 ನ್ಯೂಸ್‌.

VISTARANEWS.COM


on

Vistara Top 10 News 3001
Koo

1. ಹನುಮನ ಪರ ಇಡೀ ಮಂಡ್ಯ ನಿಲ್ಲುತ್ತೆ, ನಮ್ಮ ಹೋರಾಟ ನಿಲ್ಲಲ್ಲ: ಬಿಜೆಪಿ ಘೋಷಣೆ
ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ (Hanuman Flag) ಹಾರಿಸುವವರೆಗೂ ಬಿಜೆಪಿ (BJP Karnataka) ಹೋರಾಟ ನಡೆಸಲಿದೆ. ಕಾಂಗ್ರೆಸ್ ಸರ್ಕಾರ (Congress Government) ಇನ್ನಷ್ಟು ಕೆಣಕಿದರೆ ಇದು ದೇಶವ್ಯಾಪಿ ಹೋರಾಟವಾಗಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್‌ (R Ashok) ಎಚ್ಚರಿಕೆ ನೀಡಿದರು.
ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಮಂಡ್ಯಕ್ಕೆ ಬೆಂಕಿ ಹಚ್ಚಿದ್ದು ನಾನಲ್ಲ, ಸರ್ಕಾರ; ಚಲುವರಾಯಸ್ವಾಮಿಗೆ ಎಚ್‌ಡಿಕೆ ತಿರುಗೇಟು
ಈ ಸುದ್ದಿಯನ್ನೂ ಓದಿ: ಶಿವಾಜಿನಗರದ ಬಿಬಿಎಂಪಿ ಧ್ವಜಸ್ತಂಭದಲ್ಲಿ ಹಸಿರು ಬಾವುಟ; ಏನ್ಮಾಡ್ತೀರಾ ಈಗ?

ಹನುಮ ಧ್ವಜ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

2.ರಾಮ ಭಕ್ತ ಗಾಂಧೀಜಿ ಕೊಂದ ಗೋಡ್ಸೆಯನ್ನು ಪೂಜಿಸುವವರಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ
ಆದರ್ಶಮಯ ಆಡಳಿತವನ್ನು ನೀಡಿದ ಶ್ರೀರಾಮಚಂದ್ರನನ್ನು (Lord Rama) ಪೂಜಿಸುವ ಮಹಾತ್ಮ ಗಾಂಧಿಯವರನ್ನು (Mahatma Gandhi) ಮತಾಂಧನಾಗಿದ್ದ ನಾಥೂರಾಮ್ ಗೋಡ್ಸೆ (Nathuram Godse) ಹತ್ಯೆಗೈಯುತ್ತಾನೆ. ಅಂತಹ ಮಹಾನ್ ವ್ಯಕ್ತಿಯ ಹತ್ಯೆಗೈದ ಗೋಡ್ಸೆಯನ್ನು ಪೂಜಿಸುವವರು ನಮ್ಮ ನಡುವೆ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಶಾಸಕರಿಗಾಯ್ತು ಈಗ 34 ಕಾರ್ಯಕರ್ತರಿಗೆ ನಿಗಮ-ಮಂಡಳಿ ಸ್ಥಾನ; ಯಾರಿಗೆಲ್ಲ ಅವಕಾಶ?

3. Mayank Agarwal: ವಿಮಾನದಲ್ಲಿ ನೀರೆಂದು ಆ್ಯಸಿಡ್ ಕುಡಿದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್? ಐಸಿಯುನಲ್ಲಿ ಚಿಕಿತ್ಸೆ
ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ (Karnataka Ranji team captain Mayank Agarwal) ಅವರು ತೀವ್ರ ಅಸ್ವಸ್ಥರಾಗಿದ್ದು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ರಣಜಿ ಪಂದ್ಯಕ್ಕಾಗಿ ತ್ರಿಪುರಾದಲ್ಲಿದ್ದ ಅವರು, ವಿಮಾನದಲ್ಲಿ ವಾಪಸ್ ಆಗುತ್ತಿದ್ದಾಗ ತೀವ್ರವಾಗಿ ಅಸ್ವಸ್ಥರಾದರು ಎಂದು ತಿಳಿದು ಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಲಕ್ಷ್ಮಣ್‌ ಸವದಿ ಫರ್‌ ವಾಪ್ಸಿ? ಮಾತುಕತೆ ಫೈನಲ್‌, ಮಹತ್ವದ ಸುಳಿವು ಕೊಟ್ಟ ಕತ್ತಿ, ಜೊಲ್ಲೆ!
ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Jagadish Shettar) ಬಳಿಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಈಗ ದಟ್ಟವಾಗಿ ಹರಡುತ್ತಿದೆ. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ತಂತ್ರಗಾರಿಕೆಯಲ್ಲಿ ತೊಡಗಿದ್ದು, ಘರ್‌ ವಾಪ್ಸಿಗೆ (Ghar Wapsi) ಚಾಲನೆ ನೀಡಿದೆ. ಇದರ ಭಾಗವಾಗಿ ಕಿತ್ತೂರು ಕರ್ನಾಟಕ (Kittur Karnataka) ಭಾಗದ ನಾಯಕರಾಗಿರುವ ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ವಾಪಸ್‌ ಕರೆತರಲು ಕಸರತ್ತು ತೀವ್ರಗೊಂಡಿದೆ. ಮಾಹಿತಿ ಪ್ರಕಾರ, ಅಂತಿಮ ಹಂತಕ್ಕೆ ಬಂದಿದೆ ಎಂದೇ ಹೇಳಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಬಿಜೆಪಿ ನಾಯಕನ ಹತ್ಯೆ; ಪಿಎಫ್‌ಐನ 15 ಸದಸ್ಯರಿಗೆ ಗಲ್ಲು ಶಿಕ್ಷೆ
ಬಿಜೆಪಿ ನಾಯಕ ರಂಜಿತ್‌ ಶ್ರೀನಿವಾಸ್‌ (Ranjith Sreenivas) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (PFI) 15 ಸದಸ್ಯರಿಗೆ ಕೇರಳ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಬಿಜೆಪಿ ಒಬಿಸಿ ವಿಭಾಗದ ನಾಯಕ ರಂಜಿತ್‌ ಶ್ರೀನಿವಾಸ್‌ ಹತ್ಯೆಗೈದ 15 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಕೇರಳದ ಆಲಪ್ಪುಳ ಜಿಲ್ಲೆಯ ಮಾವಲಿಕರ ನ್ಯಾಯಾಲಯವು ಆದೇಶ ಹೊರಡಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಚಂಡೀಗಢ ಮೇಯರ್‌ ಎಲೆಕ್ಷನ್‌ ಗೆದ್ದ ಬಿಜೆಪಿ, ಇಂಡಿಯಾ ಕೂಟಕ್ಕೆ ಸೋಲು! ಹೈಕೋರ್ಟ್‌ ಮೊರೆ ಹೋದ ಆಪ್‌
ಚಂಡೀಗಢ ಮೇಯರ್ ಎಲೆಕ್ಷನ್‌ನಲ್ಲಿ (Chandigarh Mayor Election) ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ (BJP Party Candidate) ಮನೋಜ್ ಸೋನ್ಕರ್ ಅವರು ಗೆಲವು ಸಾಧಿಸಿದ್ದಾರೆ. ಆಪ್ ಮತ್ತು ಕಾಂಗ್ರೆಸ್ ಕೂಟದ (AAP-Congress Candidate) ಅಭ್ಯರ್ಥಿಯಾಗಿದ್ದ ಆಪ್‌ನ ಕುಲ್ದೀಪ್ ಕುಮಾರ್ ಅವರು ಸೋಲುಂಡಿದ್ದಾರೆ. ಈ ಮೂಲಕ, ಇಂಡಿಯಾ ಬ್ಲಾಕ್‌ಗೆ ಮೊದಲು ಸೋಲು ಎದುರಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ರಾಮ ಮಂದಿರದ 2ನೇ ಮಹಡಿ ನಿರ್ಮಾಣ ಯಾವಾಗ? ಇಲ್ಲಿದೆ ಡೇಟ್‌
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ನಿರ್ಮಿಸಲಾಗಿರುವ ರಾಮಮಂದಿರದ ಗರ್ಭಗುಡಿಯಲ್ಲಿ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದಾರೆ. ಇದರ ಬೆನ್ನಲ್ಲೇ, ರಾಮಮಂದಿರ ನಿರ್ಮಾಣದ ಎರಡನೇ ಹಂತದ ಕಾಮಗಾರಿಗೆ (Ram Mandir Construction) ಫೆಬ್ರವರಿ 15ರಿಂದ ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8.ಇಮ್ರಾನ್‌ ಖಾನ್‌ಗೆ 10 ವರ್ಷ ಜೈಲು; ಪಾಕ್‌ ಚುನಾವಣೆ ಮೊದಲೇ ಶಾಕ್‌
ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ, ಮತ್ತೆ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದ್ದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರಿ ಹಿನ್ನಡೆಯಾಗಿದೆ. ಪಾಕಿಸ್ತಾನದ ಸರ್ಕಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಬಹಿರಂಗಗೊಳಿಸಿದ ಪ್ರಕರಣದಲ್ಲಿ ಅವರಿಗೆ ರಾವಲ್ಪಿಂಡಿ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9.ಎಐ ತಂತ್ರಜ್ಞಾನ ಬಳಸಿ ದಿವಂಗತ ಗಾಯಕರ ಧ್ವನಿ ಮರು ಸೃಷ್ಟಿಸಿದ ರೆಹಮಾನ್‌ ಹೇಳಿದ್ದೇನು?
ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್‌.ರೆಹಮಾನ್ ಅವರು ರಜನಿಕಾಂತ್‌ ಅಭಿನಯದ ತಮಿಳು ಚಿತ್ರ ʼಲಾಲ್‌ ಸಲಾಂʼಗಾಗಿ ಕೃತಕ ಬುದ್ಧಿಮತ್ತೆ ಮೊರೆ ಹೋಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತೆ-ಫೋಟೊಗ್ರಾಫರ್‌ ಮಧ್ಯೆ ಕುರ್ಚಿ ಗಲಾಟೆ
ಕೆಪಿಸಿಸಿ ಕಚೇರಿಯಲ್ಲಿ (KPCC Office) ಮಂಗಳವಾರ ಚಿಕ್ಕ ವಿಚಾರಕ್ಕೆ ದೊಡ್ಡ ಗಲಾಟೆ ನಡೆದಿದೆ. ಅದೂ ಕಾಂಗ್ರೆಸ್ (Congress Karnataka) ಕಾರ್ಯಕರ್ತೆ ಹಾಗೂ ಕೆಪಿಸಿಸಿ ಫೋಟೋಗ್ರಾಫರ್ ನಡುವೆ ಜಟಾಪಟಿ ನಡೆದಿದ್ದು, ಕುರ್ಚಿಯ ವಿಚಾರಕ್ಕಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
Fire breaks out in auto shed Burnt autos
ಬೆಂಗಳೂರು6 mins ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

Rahul Gandhi
ದೇಶ15 mins ago

ಶಾ ವಿರುದ್ಧ ಹೇಳಿಕೆ; ಮಾನಹಾನಿ ಕೇಸ್‌ ರದ್ದು ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ ಅರ್ಜಿ ವಜಾ, ಮತ್ತೆ ಸಂಕಷ್ಟ

divorce
ವೈರಲ್ ನ್ಯೂಸ್33 mins ago

ವಿಚ್ಛೇದನ; ಪತ್ನಿಯೇ ಪತಿಗೆ 5 ಸಾವಿರ ರೂ. ಜೀವನಾಂಶ ಕೊಡಲು ಕೋರ್ಟ್‌ ಆದೇಶ!

Hindu temples money used for development of Hindu communities CM Siddaramaiah
ರಾಜಕೀಯ38 mins ago

Hindu Temples: ಹಿಂದೂ ದೇಗುಲದ ಹಣವು ಮುಂದೂ ಆ ಸಮುದಾಯಗಳ ಅಭಿವೃದ್ಧಿಗೇ ಬಳಕೆ: ಸಿಎಂ ಸಿದ್ದರಾಮಯ್ಯ

He sent a private photo video of his girlfriend
ಬೆಳಗಾವಿ39 mins ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

Akash Deep
ಕ್ರಿಕೆಟ್55 mins ago

Akash Deep: ಮೊದಲ ಪಂದ್ಯದಲ್ಲೇ ಕ್ಲೀನ್‌ಬೌಲ್ಡ್‌ ಮಾಡಿದರೂ ಔಟ್‌ ಕೊಡದ ಅಂಪೈರ್;‌ ತಪ್ಪು ಯಾರದ್ದು?

Harish Raj serial Journey shares in interview
ಸ್ಯಾಂಡಲ್ ವುಡ್56 mins ago

Harish Raj: ದಾರೀಲಿ ನಟ ಹರೀಶ್‌ ರಾಜ್‌ಗೆ ಜನ ಏನಂತ ಕರೆಯುತ್ತಿದ್ದರು? ಅವರೇ ಹೇಳಿದ್ದಿಷ್ಟು

Shah Rukh Khan teaches Meg Lanning his iconic pose
ಸಿನಿಮಾ59 mins ago

WPL 2024: ಆಟಗಾರ್ತಿ ಮೆಗ್ ಲ್ಯಾನಿಂಗ್‌ಗೆ ಸಿಗ್ನೇಚರ್ ಸ್ಟೆಪ್ಸ್‌ ಹೇಳಿಕೊಟ್ಟ ಶಾರುಖ್‌: ವಿಡಿಯೊ ವೈರಲ್‌!

Rakul Preet Singh, Jackky Bhagnani reveal their stunning second look
ಬಾಲಿವುಡ್1 hour ago

Rakul Preet Singh: ರಕುಲ್‌ ಪ್ರೀತ್‌ ಸಿಂಗ್‌ ವಿವಾಹದ ಇನ್ನಷ್ಟು ಫೋಟೊಗಳು ರಿವೀಲ್‌!

Karnataka Budget Session 2024 extended by a day to be curtailed to Monday afternoon
ರಾಜಕೀಯ1 hour ago

Karnataka Budget Session 2024: ಅಧಿವೇಶನ ಒಂದು ದಿನ ವಿಸ್ತರಣೆ: ಸೋಮವಾರ ಮಧ್ಯಾಹ್ನಕ್ಕೆ ಮೊಟಕು? ಬಳಿಕ ರೆಸಾರ್ಟ್‌ಗೆ ಶಿಫ್ಟ್‌?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Fire breaks out in auto shed Burnt autos
ಬೆಂಗಳೂರು6 mins ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

read your daily horoscope predictions for february 23 2024
ಭವಿಷ್ಯ9 hours ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು21 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ1 day ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ6 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ6 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

ಟ್ರೆಂಡಿಂಗ್‌