ವಿಸ್ತಾರ ಸಂಪಾದಕೀಯ: ತೆರೆಮರೆಯ ಸಾಧಕರಿಗೆ ಪದ್ಮ ಪ್ರಶಸ್ತಿ ಶ್ಲಾಘನೀಯ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ತೆರೆಮರೆಯ ಸಾಧಕರಿಗೆ ಪದ್ಮ ಪ್ರಶಸ್ತಿ ಶ್ಲಾಘನೀಯ

Vistara Editorial: ಹೆಚ್ಚಾಗಿ ಸುದ್ದಿಗೆ ಬಾರದ, ವಿಶಿಷ್ಟವಾದ ಸಾಧನೆಗಳನ್ನು ಮಾಡುತ್ತ ತೆರೆಮರೆಯಲ್ಲೇ ಇರುವ ಸಾಧಕರನ್ನು ಗುರುತಿಸಿ ಪದ್ಮ ಪ್ರಶಸ್ತಿ ನೀಡಿದಾಗ ಹಲವು ಪ್ರಯೋಜನಗಳಾಗುತ್ತವೆ. ಪ್ರಶಸ್ತಿಗಳು ಯೋಗ್ಯರಿಗೆ ಸಲ್ಲುತ್ತವೆ. ಅಯೋಗ್ಯರ ಪಾಲಾಗುವುದು ತಪ್ಪುತ್ತದೆ.

VISTARANEWS.COM


on

Vistara Editorial, Padma Award for much less known achievers
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೇಂದ್ರ ಸರ್ಕಾರವು ಗಣರಾಜ್ಯೋತ್ಸವದ (Republic Day) ಸಂದರ್ಭದಲ್ಲಿ 2024ರ ಪದ್ಮ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು(Padma Awards) ಅದರಲ್ಲಿ ಕರ್ನಾಟಕದ ಎಂಟು ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಕರ್ನಾಟಕದ ಜೇನು ಕುರುಬ ಸಮುದಾಯ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಮೈಸೂರಿನ ಸೋಮಣ್ಣ, ಮನೋವಿಜ್ಞಾನಿ ಹಾಗೂ ವೈದ್ಯ ಸಿ.ಆರ್ ಚಂದ್ರಶೇಖರ್, ಕಲಾವಿದೆ ಅನುಪಮಾ ಹೊಸಕೆರೆ, ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಪ್ಲಾಸ್ಟಿಕ್‌ ಸರ್ಜನ್‌ ಪ್ರೇಮಾ ಧನರಾಜ್, ಶ್ರೀಧರ್ ಎಂ. ಕೃಷ್ಣಮೂರ್ತಿ, ಸಾಮಾಜಿಕ ಸೇವೆಗಾಗಿ ಕೆ.ಎಸ್ ರಾಜಣ್ಣ, ಉದ್ಯಮಿ ಶಶಿ ಸೋನಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಉದ್ಯಮವನ್ನು ಹೊಂದಿರುವ ಸೀತಾರಾಮ್ ಜಿಂದಾಲ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗುತ್ತಿದೆ. ಹಾಗೆಯೇ ಹಲವು ತಳಿಯ ಭತ್ತ ಬೆಳೆಯುವ ಕಾಸರಗೋಡಿನ ರೈತ ಸತ್ಯ ನಾರಾಯಣ ಬೇಳೇರಿ ಅವರೂ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಒಟ್ಟು 110 ಜನರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿಲಾಗಿದೆ. ಇವರೆಲ್ಲರೂ ಅರ್ಹರು ಹಾಗೂ ತೆರೆಮರೆಯಲ್ಲಿ ತಮ್ಮ ಕಾಯಕವನ್ನು ನಡೆಸಿಕೊಂಡು ಹೋಗುತ್ತಿದ್ದವರು ಎಂಬುದು ವಿಶೇಷ(Vistara Editorial).

ಈ ಪ್ರಶಸ್ತಿಗಳನ್ನು ಪಡೆದವರೆಲ್ಲ ನಿಜವಾದ ಸಾಧಕರು; ಎಲ್ಲರ ಕೊಡುಗೆಯೂ ಸ್ಮರಿಸುವಂಥದು. ಉದಾಹರಣೆಗೆ, ಹರಿಯಾಣದ ಸಿರ್ಸಾ ಜಿಲ್ಲೆಯವರಾದ ಗುರ್ವಿಂದರ್‌ ಸಿಂಗ್‌ ಕಳೆದ 34 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಗುರ್ವಿಂದರ್‌ ಸಿಂಗ್‌ ಅವರು ಚಿಕ್ಕವರಿದ್ದಾಗಲೇ ಟ್ರಕ್‌ ಗುದ್ದಿದ ಪರಿಣಾಮ ಅವರ ಸೊಂಟವು ಸ್ವಾಧೀನ ಕಳೆದುಕೊಂಡಿತು. ಹಾಗಾಗಿ ಅವರು ವ್ಹೀಲ್‌ಚೇರ್‌ನಲ್ಲಿಯೇ ಇಡೀ ಜೀವನ ಕಳೆದರೂ ಅದರಿಂದ ಹತಾಶರಾಗದೆ, ಸಮಾಜ ಸೇವೆಯಲ್ಲಿ ತೊಡಗಿ, ಸಾವಿರಾರು ಜನರಿಗೆ ಆಶ್ರಯವಾಗಿದ್ದಾರೆ. ಅನಾಥರು, ದಿವ್ಯಾಂಗರು, ವೃದ್ಧರ ಸೇವೆಯಲ್ಲಿ ತೊಡಗಿರುವ ಇವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅನಾಥ ಮಕ್ಕಳ ರಕ್ಷಣೆಗಾಗಿ ಬಾಲ ಗೋಪಾಲ ಧಾಮ ಎಂಬ ಸಂಸ್ಥೆ ಕಟ್ಟಿ 300 ಮಕ್ಕಳಿಗೆ ಆಶ್ರಯ ನೀಡಿದ್ದಾರೆ. ಇಂಥವರಿಗಲ್ಲವೇ ಪ್ರಶಸ್ತಿ ನೀಡಬೇಕಾದ್ದು?

ಇನ್ನು ಭಾರತದ ಮೊದಲ ಮಹಿಳಾ ಆನೆ ಮಾವುತ ಎಂದೇ ಕರೆಯಲ್ಪಡುವ ಪಾರ್ವತಿ ಬರುವಾ (Parbati Baruah) ಅವರಿಗೂ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ತಮ್ಮ 14ರ ಹರೆಯದಲ್ಲೇ ಮಾವುತರಾಗಿ ಗುರುತಿಸಿಕೊಂಡ ಅವರು 4 ದಶಕಗಳಿಂದ ಆನೆಯ ಒಡನಾಡಿಯಾಗಿದ್ದಾರೆ. ಬಾಲ್ಯದಿಂದಲೇ ಕುಟುಂಬದತ್ತವಾಗಿ ಬಂದ ಆನೆಗಳನ್ನು ಸಾಕುವುದರ ಜೊತೆಗೆ ಆನೆಗಳ ಜೀವನ ಮಟ್ಟ ಸುಧಾರಣೆಗೂ ಹಲವು ರೀತಿಯ ಕ್ರಮ ಕೈಗೊಂಡಿದ್ದಾರೆ. ಹೊಸದಾಗಿ ಪಳಗಿಸಿದ ಆನೆಗಳ ಚಿಕಿತ್ಸೆ ಮತ್ತು ಶುಶ್ರೂಷೆ, ಆನೆ ಗಣತಿ, ಮಾವುತರು ಮತ್ತು ಕ್ಷೇತ್ರ ಸಿಬ್ಬಂದಿಗೆ ತರಬೇತಿ ಇತ್ಯಾದಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಬಿಬಿಸಿ ಹೊರ ತಂದ ʼಕ್ವೀನ್‌ ಆಫ್‌ ಎಲಿಫೆಂಟ್‌ʼ ಎಂಬ ಸಾಕ್ಷ್ಯಚಿತ್ರದ ಬಳಿಕ ಪಾರ್ವತಿ ಹೆಸರು ಇನ್ನಷ್ಟು ಜನಪ್ರಿಯವಾಯಿತು. ಅವರು ಆನೆಗಳ ಬಗ್ಗೆ ಸಾಕಷ್ಟು ಬರೆದಿದ್ದಾರೆ. ವಿಶ್ವಸಂಸ್ಥೆಯ ಏಷ್ಯನ್ ಎಲಿಫೆಂಟ್ ಸ್ಪೆಷಲಿಸ್ಟ್ ಗ್ರೂಪ್ ಮತ್ತು ಅಸ್ಸಾಂ ಸರ್ಕಾರದ ʼಮಾನವ-ಆನೆ ಸಂಘರ್ಷʼ (Man- Elephant Conflict) ಕಾರ್ಯಪಡೆಯ ಸದಸ್ಯರೂ ಹೌದು. 1989ರಲ್ಲಿ ವಿಶ್ವಸಂಸ್ಥೆಯ ʼಗ್ಲೋಬಲ್ 500- ರೋಲ್ ಆಫ್ ಹಾನರ್ʼ ಪ್ರಶಸ್ತಿಯೂ ಲಭಿಸಿದೆ.

ಇನ್ನು ಕಾಸರಗೋಡಿನ ಬೆಳ್ಳೂರು ಗ್ರಾಮ ಪಂಚಾಯತ್‌ ಸತ್ಯನಾರಾಯಣ ಸುಮಾರು 12 ವರ್ಷಗಳಿಂದ ದೇಸಿ ಭತ್ತದ ತಳಿಗಳ ಸಂರಕ್ಷಣೆಗೆ ಕಂಕಣಬದ್ಧರಾಗಿದ್ದು, 650ಕ್ಕೂ ಹೆಚ್ಚಿನ ಭತ್ತದ ತಳಿಗಳ ಸಂರಕ್ಷಣೆ ಮಾಡುತ್ತಿದ್ದಾರೆ. ಸಾಧಾರಣ ಕೃಷಿ ಕುಟುಂಬ ಹಿನ್ನೆಲೆಯ ಅವರು ಇದೀಗ ಅಸಾಧಾರಣ ಕೃಷಿ ಕಾರ್ಯದ ಮೂಲಕ ದೇಶದ ಗಮನ ಸೆಳೆದಿದ್ದಾರೆ. ರಾಜಕಯಮೆ, ಗಂಧಸಾಲೆ, ಅತಿಕಾರ, ಸುಗ್ಗಿಕಯಮೆ, ನವರ, ಮೈಸೂರು ರಾಜರು ಬಳಸುತ್ತಿದ್ದ ರಾಜಮುಡಿ, ರಾಜಭೋಗ, ಉಪ್ಪು ನೀರಿನಲ್ಲಿಯೂ ಬೆಳೆಯಬಹುದಾದ ಕಗ್ಗ, ಬರ ನಿರೋಧಕ ಪುಟ್ಟ ಭತ್ತ, ಅವಲಕ್ಕಿಗೆ ಬೇಕಾದ ಸ್ವರಟಾ, ಫಿಲಿಪೈನ್ಸ್‌ನ ಮನಿಲಾ, ಸುಶ್ರುತ ಕಾಲದ ಕಳಮೆ, ಬುದ್ಧನ ಕಾಲಘಟ್ಟದ ಕಲಾನಾಮಕ್‌, ನೇರಳೆ ಬಣ್ಣದ ಡಾಂಬಾರ್‌ ಕಾಳಿ, ಕಾರ್‌ ರೆಡ್‌ ರೈಸ್‌, ಕಲಾವತಿ, ನಜರ್‌ ಬಾತ್‌, ಮೈಸೂರು ಮಲ್ಲಿಗೆ, ಜಾಸ್ಮಿನ್‌ ಮುಂತಾದ ಅಮೂಲ್ಯ ತಳಿಗಳನ್ನು ಸತ್ಯನಾರಾಯಣ ಸಂರಕ್ಷಿಸುತ್ತಿದ್ದಾರೆ. ಜತೆಗೆ ಕರ್ನಾಟಕ, ಮಣಿಪುರ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಶಾ ಮುಂತಾದೆಡೆಗಳ ಭತ್ತದ ತಳಿಯೂ ಇವರ ಸಂಗ್ರಹದಲ್ಲಿದೆ. ಇರುವ 5 ಎಕ್ರೆ ಜಮೀನಿನಲ್ಲಿಯೇ ಇದನ್ನೆಲ್ಲ ಮಾಡಿದ್ದಾರೆ ಎಂದರೆ ನಂಬಲೇಬೇಕು!

ಹೀಗೆ ಹೆಚ್ಚಾಗಿ ಸುದ್ದಿಗೆ ಬಾರದ, ವಿಶಿಷ್ಟವಾದ ಸಾಧನೆಗಳನ್ನು ಮಾಡುತ್ತ ತೆರೆಮರೆಯಲ್ಲೇ ಇರುವ ಸಾಧಕರನ್ನು ಗುರುತಿಸಿ ಪದ್ಮ ಪ್ರಶಸ್ತಿ ನೀಡಿದಾಗ ಹಲವು ಪ್ರಯೋಜನಗಳಾಗುತ್ತವೆ. ಪ್ರಶಸ್ತಿಗಳು ಯೋಗ್ಯರಿಗೆ ಸಲ್ಲುತ್ತವೆ. ಅಯೋಗ್ಯರ ಪಾಲಾಗುವುದು ತಪ್ಪುತ್ತದೆ. ಸಾಧಕರಿಗೆ ನಿಜವಾದ ರಾಷ್ಟ್ರ ಗೌರವ ಸಲ್ಲಿಸಿದಂತಾಗುತ್ತದೆ. ಸಾಧನೆ ಮಾಡಿದ್ದರೂ ಅದಕ್ಕೆ ಪ್ರಚಾರವಿಲ್ಲದೆ ಮರೆಯಲ್ಲೇ ಉಳಿದವರು ರಾಷ್ಟ್ರ ಮಟ್ಟದ ಪ್ರಚಾರ ಪಡೆಯುತ್ತಾರೆ. ಇದರಿಂದ ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಜನರಿಗೆ ಲಾಭಗಳಾಗುವುದು ಸಾಧ್ಯ. ಪ್ರಶಸ್ತಿಗಳು ನಿಜಕ್ಕೂ ಯೋಗ್ಯರಿಗೆ ಸಲ್ಲುತ್ತವೆ ಎಂಬ ಭಾವ ಪ್ರಜೆಗಳಲ್ಲಿ ಉಳಿಯುತ್ತದೆ. ಸಾಧಕರಿಗೂ ತಮ್ಮನ್ನು ಗುರುತಿಸುವವರಿದ್ದಾರೆ ಎಂಬ ಸಾರ್ಥಕ ಭಾವ ಮೂಡುತ್ತದೆ. ಹೀಗಾಗಿ ಈ ಸಲದ ಪದ್ಮ ಪ್ರಶಸ್ತಿಗಳು ಅರ್ಥಪೂರ್ಣವಾಗಿವೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತದ ಮಿಲಿಟರಿ ಶಕ್ತಿ ಈಗ ರಫ್ತಿಗೂ ಸೈ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್​ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ

ಪ್ರಸ್ತುತ ದಿನಗಳಲ್ಲಿ ಎಲ್ಲವೂ ಇದ್ದು ಅಂಪೈರ್​ಗಳು ತಪ್ಪು ಮಾಡುತ್ತಿರುವುದಕ್ಕೆ ಅಂಪೈರ್​ಗಳ ಸೋಂಬೇರಿತನ ಅಥವಾ ನಿರ್ಲಕ್ಷ್ಯ ಕಾರಣವಾಗಿರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ. ಹೊಸ ಹೊಸ ತಾಂತ್ರಿಕತೆಗಳು ಸ್ಪರ್ಧೆಯ

VISTARANEWS.COM


on

IPL 2024
Koo

ಕೋಲ್ಕೊತಾ ನೈಟ್​ ರೈಡರ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವಿನ ಐಪಿಎಲ್​ ಪಂದ್ಯವು (IPL 2024) ಫಲಿತಾಂಶಕ್ಕಿಂತ ಹೆಚ್ಚಾಗಿ ಕಳಪೆ ಅಂಪೈರಿಂಗ್​ ಕಾರಣಕ್ಕೆ ಸುದ್ದಿಯಾಗಿದೆ. ಆರ್​ಸಿಬಿ ಈ ಪಂದ್ಯದಲ್ಲಿ ವೀರೋಚಿತ 1 ರನ್ ಸೋಲು ಕಂಡಿರುವುದು ಶ್ರೀಮಂತ ಕ್ರಿಕೆಟ್​ ಲೀಗ್​ನ ರೋಚಕತೆಗೆ ಸಾಕ್ಷಿ ಎಂದು ಹೇಳಲಾಗುತ್ತಿದ್ದರೂ ಅಂಪೈರ್​ಗಳು ಮಾಡಿರುವ ಎಡವಟ್ಟು ಈ ಫಲಿತಾಂಶವನ್ನೇ ಉಲ್ಟಾ ಮಾಡಿದೆ ಎಂಬ ಅಸಮಾಧಾನ ಹುಟ್ಟು ಹಾಕಿದೆ. ಕೆಕೆಆರ್ ಬೌಲರ್​ ನಿತೀಶ್ ರಾಣಾ ಎಸೆದ ಬೀಮರ್ ಎಸೆತ (ಬ್ಯಾಟರ್​​ನ ಸೊಂಟ ಮಟ್ಟಕ್ಕಿಂತ ಮೇಲೆ ಎಸೆಯುವ ಹೈ ಫುಲ್​ಟಾಸ್​​ ) ವಿರಾಟ್ ಕೊಹ್ಲಿಯ ಬ್ಯಾಟ್​ಗೆ ಬಡಿದು ರಿಟರ್ನ್​ ಕ್ಯಾಚ್ ಆಯಿತು. ರಾಣಾ ಚೆಂಡನ್ನು ಹಿಡಿದ ತಕ್ಷಣ ಅಂಪೈರ್​ ಬೆರಳೆತ್ತಿ ಔಟ್ ಎಂದರು. ವಿರಾಟ್ ಕೊಹ್ಲಿ ಡಿಆರ್​ಎಸ್​ ತೆಗೆದುಕೊಂಡರೆ, ಮೂರನೇ ಅಂಪೈರ್​ ಕೂಡ ಲೆಕ್ಕಾಚಾರ ಹಾಕಿ ಫೀಲ್ಡ್​ ನಿರ್ಧಾರವನ್ನು ಎತ್ತಿ ಹಿಡಿದರು. ಕೊಹ್ಲಿ ಕ್ರೀಸ್​ಗಿಂತ ಮುಂದಿದ್ದರು. ಹೀಗಾಗಿ ನಿಯಮ ಅನ್ವಯಿಸುವುದಿಲ್ಲ ಎಂಬುದೇ ಮೂರನೇ ಅಂಪೈರ್​ ಸಮರ್ಥನೆ. ಈ ವಿಚಾರಕ್ಕೆ ಕೊಹ್ಲಿ ಮತ್ತು ಅಂಪೈರ್​ಗಳ ನಡುವೆ ವಾಗ್ವಾದವೇ ಆಯಿತು. ಆಟದ ಅಧಿಕಾರಿಗಳ ಜತೆ ಮಾತು ಬೆಳೆಸಿದ ತಪ್ಪಿಗಾಗಿ ಬಿಸಿಸಿಐ ಕೊಹ್ಲಿಗೆ ಸಂಭಾವನೆಯ ಶೇಕಡಾ 50ರಷ್ಟು ಮೊತ್ತವನ್ನು ದಂಡ ವಿಧಿಸಲಾಗಿದೆ.

ಇದೇ ಪಂದ್ಯದ 17ನೇ ಓವರ್​ನಲ್ಲಿ ಆರ್​​ಸಿಬಿಯ ಇಂಪ್ಯಾಕ್ಟ್​​ ಪ್ಲೇಯರ್​ ಸುಯಾಶ್ ಪ್ರಭುದೇಸಾಯಿ, ಕೆಕೆಆರ್​ ಬೌಲರ್​ ವರುಣ್ ಚಕ್ರವರ್ತಿಯ ಎಸೆತಕ್ಕೆ ಸಿಕ್ಸರ್​ ಬಾರಿಸಿದ್ದರು. ಅದರು ಬೌಂಡರಿ ಗೆರೆಯ ಪಕ್ಕದಲ್ಲೇ ಬಿದ್ದಿತ್ತು. ಇಂಥ ಗೊಂದಲಕಾರಿ ಸಂದರ್ಭದಲ್ಲಿ ಅಂಪೈರ್​ಗಳು ಟಿವಿ ಅಂಪೈರ್​ಗಳ ನೆರವು ಪಡೆಬೇಕು. ಇಲ್ಲಿ ಹಾಗೆ ಮಾಡಲಿಲ್ಲ. ತಮಗೆ ಅನಿಸಿದ ಹಾಗೆ ಫೋರ್​ ಎಂದು ಕೈಬೀಸಿದರು. ಪಂದ್ಯದಲ್ಲಿ ಆರ್​​ಸಿಬಿ ಸೋತಿದ್ದು ಒಂದು ರನ್​ನಿಂದ. ಅಂಪೈರ್ ಫೋರ್​ ಬದಲು ಸಿಕ್ಸರ್ ಘೋಷಿಸಿದ್ದರೆ ಫಲಿತಾಂಶವೇ ಬದಲಾಗುತ್ತಿತ್ತು. ಇವೆರಡು ಹತ್ತಿರದ ಉದಾಹರಣೆಗಳಷ್ಟೇ. ಐಪಿಎಲ್​ 17ನೇ ಆವೃತ್ತಿಯಲ್ಲಿ ಇಂಥ ಹಲವಾರು ಯಡವಟ್ಟುಗಳುಗಳು ನಡೆಯುತ್ತಲೇ ಇವೆ.

ಅದಕ್ಕಿಂತ ಹಿಂದೆ ಪಂಜಾಬ್ ಮತ್ತು ಮುಂಬೈ ನಡುವಿನ ಪಂದ್ಯದ ವೇಳೆ ಡಗ್​ಔಟ್​ನಲ್ಲಿದ್ದ ಆಟಗಾರ ಟಿಮ್​ ಡೇವಿಡ್ ಹಾಗೂ ಕೋಚ್​ ಕೀರನ್​ ಪೊಲಾರ್ಡ್​ ಸೂಚನೆ ಮೇರೆಗೆ ಮುಂಬೈ ಬ್ಯಾಟರ್​ ಸೂರ್ಯಕುಮಾರ್​ ವೈಡ್​ ಪರಿಶೀಲಿಸಲು ಡಿಆರ್​ಎಸ್​ ತೆಗೆದುಕೊಂಡಿದ್ದರು. ಇದು ಅಕ್ರಮ. ಪಂಜಾಬ್ ತಂಡದ ನಾಯಕ ಸ್ಯಾಮ್ ಕರ್ರನ್​ ತಕ್ಷಣವೇ ಅಂಪೈರ್ ಗಮನಕ್ಕೆ ತಂದಿದ್ದರು. ಅಂಪೈರ್​ಗಳು ಸೂರ್ಯನ ಮನವಿ ತಿರಸ್ಕರಿಸಬಹುದಾಗಿತ್ತು. ಆದರೆ, ಹಾಗೆ ಮಾಡದೇ ಪರಿಶೀಲನೆ ನಡೆಸಿ ವೈಡ್​ ಎಂದರು. ಸಿಎಸ್​ಕೆ ಮಾಜಿ ನಾಯಕ ಧೋನಿ ಬ್ಯಾಟ್ ಮಾಡುವಾಗ ಬ್ಯಾಟ್ ಕೆಳಗಿನಿಂದ ಚೆಂಡು ಹೋದರೂ ವೈಡ್​ ಎಂದು ಡಿಆರ್​ಎಸ್​ ಪರಿಶೀಲನೆಯ ಬಳಿಕವೂ ಹೇಳಿದ್ದು, ಬುಮ್ರಾ ವೈಡ್ ಹಾಕಿದಾಗಲೂ ವೈಡ್ ಕೊಡದೇ ಇರುವುದು. ಮುಂಬೈ ತಂಡದ ಡಿಆರ್​ಎಸ್ ಆಯ್ಕೆ (ಒಟ್ಟು 2) ಮುಗಿದ ಬಳಿಕವೂ ಅಂಪೈರ್​ಗಳೇ ಸ್ವತಃ ಪರಿಶೀಲನೆ ನೆಪದಲ್ಲಿ ವೈಡ್​ ಸ್ಕೋರ್ ಕೊಟ್ಟಿರುವುದು. ಇವೆಲ್ಲವೂ ಅಂಪೈರಿಂಗ್​ ಎಡವಟ್ಟುಗಳಿಗೆ ಉದಾಹರಣೆಗಳು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಚೀನಾವನ್ನೂ ಹಿಂದಿಕ್ಕಿದ ಭಾರತದ ಆರ್ಥಿಕತೆಯ ಬೆಳವಣಿಗೆ ಐತಿಹಾಸಿಕ

ಕ್ರಿಕೆಟ್​ ಅಂಪೈರಿಂಗ್​ಗಾಗಿ ಹಲವಾರು ತಂತ್ರಜ್ಞಾನಗಳು ಚಾಲ್ತಿಯಲ್ಲಿವೆ. ಸ್ಮಾರ್ಟ್​ ರಿಪ್ಲೆ ಟಿವಿ ರಿಪ್ಲೈ ದೊಡ್ಡ ಕೊಡುಗೆ. ಉಳಿದಂತೆ ಹಾಟ್​ಸ್ಪಾಟ್​, ಲೈಟ್​ ಮೀಟರ್​, ಸ್ನಿಕ್​-ಒ ಮೀಟರ್​, ಐ ಸ್ಪೀಡ್​ ಹಾಕ್-ಐ ನಿಖರತೆಗೆ ನೆರವು ಕೊಡುತ್ತವೆ ಅಂಪೈರ್​ಗಳಿಗೆ, ಆಟಗಾರರಿಗೆ ಇದನ್ನು ಅಗತ್ಯ ಸಂದರ್ಭಗಳಲ್ಲಿ ಬಳಸುವ ಅನುಕೂಲವಿದೆ. ಇವೆಲ್ಲ ಇದ್ದ ಮೇಲೆಯೂ ಅಂಪೈರ್​ಗಳು ತಪ್ಪು ಮಾಡುವುದು ಯಾಕೆ ಎಂಬುದೇ ಕ್ರಿಕೆಟ್ ಪಂಡಿತರ ಪ್ರಶ್ನೆ.

ದಶಕಗಳ ಹಿಂದೆ ಕ್ರಿಕೆಟ್​ ಅಂಪೈರ್​ಗಳಿಗೆ ಯಾವುದೇ ಆಧುನಿಕ ತಂತ್ರಜ್ಞಾನಗಳ ನೆರವು ಇರಲಿಲ್ಲ. ಆದರೆ, ಅವರ ಅಂಪೈರಿಂಗ್​ ನಿರ್ಧಾರಗಳಲ್ಲಿ ಸ್ಪಷ್ಟತೆಯಿತ್ತು. ಹೀಗಾಗಿ ಪ್ರಸ್ತುತ ದಿನಗಳಲ್ಲಿ ಎಲ್ಲವೂ ಇದ್ದು ಅಂಪೈರ್​ಗಳು ತಪ್ಪು ಮಾಡುತ್ತಿರುವುದಕ್ಕೆ ಅಂಪೈರ್​ಗಳ ಸೋಂಬೇರಿತನ ಅಥವಾ ನಿರ್ಲಕ್ಷ್ಯ ಕಾರಣವಾಗಿರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ. ಹೊಸ ಹೊಸ ತಾಂತ್ರಿಕತೆಗಳು ಸ್ಪರ್ಧೆಯ ಮೌಲ್ಯ ಹೆಚ್ಚಿಸುತ್ತದೆ ಎಂದು ಅಂದುಕೊಳ್ಳುವ ವೇಳೆಯಲ್ಲಿ ತಪ್ಪುಗಳೇ ಹೆಚ್ಚಾಗುತ್ತಿರುವುದು ವಿಪರ್ಯಾಸ.

ಕ್ರಿಕೆಟ್​ ನಿಯಮಗಳು ಕಾಲಕಾಲಕ್ಕೆ ಬದಲಾಗುತ್ತಿರುವುದು ಸಹಜ ಮತ್ತು ಅನಿವಾರ್ಯ. ಜತೆಗೆ ಕ್ರಿಕೆಟ್ ಬ್ಯಾಟ್ಸ್​​ಮನ್​​ಗಳ ಕ್ರೀಡೆಯಾಗುತ್ತಿರುವ ಕಾರಣಕ್ಕೆ ನಿಯಮಗಳ ನೆರವು ಬೇಕೇ ಬೇಕು. ಇದರ ಜತೆಗೆ ಅಂಪೈರ್​ಗಳಿಗೂ ಹೊಸ ನಿಯಮಗಳ ಬಗ್ಗೆ ಕಾಲಕಾಲಕ್ಕೆ ತರಬೇತಿ ಸಿಗುತ್ತಿವೆ. ಅವರಿಗೆ ಕೊಡಲಾಗುವ ಸೌಕರ್ಯಗಳು ಸಾಕಷ್ಟಿವೆ. ಅಂಪೈರ್​ಗಳ ವೇತನ ಗಣನೀಯವಾಗಿ ಹೆಚ್ಚಾಗಿದೆ. ಅವರ ತಲೆ ಮೇಲೆಯೇ ಕ್ಯಾಮೆರಾ ಅಳವಡಿಸುವುದರಿಂದ ಹಿಡಿದು ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿ ಒತ್ತಡ ಕಡಿಮೆ ಮಾಡಲಾಗಿದೆ. ಆದಾಗ್ಯೂ ತಪ್ಪು ನಡೆಯುತ್ತಿರುವುದು ಪ್ರಶ್ನಾರ್ಹ ವಿಷಯ

ಅಂಪೈರ್​ಗಳ ತಪ್ಪುಗಳು ಕ್ರಿಕೆಟ್​​ ಫಲಿತಾಂಶವನ್ನು ಮಾತ್ರ ಬದಲಿಸುವುದಿಲ್ಲ. ಅಭಿಮಾನಿಗಳ ಮನಸ್ಸಿಗೂ ಘಾಸಿ ಮಾಡುತ್ತವೆ. ಅವರು ಕ್ರಿಕೆಟ್ ನ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನಕ್ಕೆ ಧಕ್ಕೆ ತರುತ್ತದೆ. ಐಪಿಎಲ್​ನಂಥ ನಗದು ಶ್ರೀಮಂತ ಟೂರ್ನಿಯ ವಿಶ್ವಾಸರ್ಹತೆಯೂ ಕುಂದುತ್ತದೆ. ತಾಂತ್ರಿಕತೆಯ ನೆರವಿನೊಂದಿಗೆ ಐಪಿಎಲ್​ನ ಅಂಪೈರಿಂಗ್​ನಲ್ಲಿ ನಿಖರತೆ ಹೆಚ್ಚಬೇಕು. ‘ಜಂಟಲ್​ಮ್ಯಾನ್ಸ್​ ಗೇಮ್​​ನ ಮರ್ಯಾದೆ ಹೆಚ್ಚಬೇಕು.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಚೀನಾವನ್ನೂ ಹಿಂದಿಕ್ಕಿದ ಭಾರತದ ಆರ್ಥಿಕತೆಯ ಬೆಳವಣಿಗೆ ಐತಿಹಾಸಿಕ

ಭಾರತದ ಆರ್ಥಿಕತೆ ಚಿಕ್ಕದಾಗಿದ್ದರೂ ಸಾಗುತ್ತಿರುವ ವೇಗ ಹೆಚ್ಚಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್)​ ಏಷ್ಯಾ ಮತ್ತು ಪೆಸಿಫಿಕ್ (ಎಪಿಎಸಿ) ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಅವರು ಹೇಳಿದ್ದಾರೆ. ಭಾರತದ ಪ್ರಭಾವಶಾಲಿ ಬೆಳವಣಿಗೆಗೆ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆ ಕಾರಣ. ಮುಂದಿನ ದಿನಗಳಲ್ಲಿ ಭಾರತದ ಮುನ್ನಡೆಗೆ ಅಡೆತಡೆಗಳಿಲ್ಲ ಎಂದಿದ್ದಾರೆ. ಇದು ಚೀನಾವನ್ನೇ ಮೀರಿಸುತ್ತಿರುವುದು ಆಶಾದಾಯಕವಾಗಿದೆ.

VISTARANEWS.COM


on

Indian Economy
Koo

ಭಾರತದ ಆರ್ಥಿಕತೆ (Indian Economy) ಚೀನಾವನ್ನು ಹಿಂದಿಕ್ಕಿ ವೇಗವಾಗಿ ಬೆಳೆಯುತ್ತಿದ್ದು, ಗಾತ್ರದಲ್ಲಿ ಭಾರತದ ಆರ್ಥಿಕತೆ ಚಿಕ್ಕದಾಗಿದ್ದರೂ ಸಾಗುತ್ತಿರುವ ವೇಗ ಹೆಚ್ಚಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್)​ ಏಷ್ಯಾ ಮತ್ತು ಪೆಸಿಫಿಕ್ (ಎಪಿಎಸಿ) ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಅವರು ಹೇಳಿದ್ದಾರೆ. ಇದು ನಿರೀಕ್ಷಿತವಾಗಿದ್ದು, ಅಚ್ಚರಿಯ ಸಂಗತಿಯೇನೂ ಅಲ್ಲ. ಚೀನಾದ ಆರ್ಥಿಕತೆಯ ಗಾತ್ರ ಭಾರತಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ಆದರೆ ಭಾರತವು ಇಂದು ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದಿರುವ ಅವರು ಭಾರತದ ಆರ್ಥಿಕ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದು, 2024-25ರ ಹಣಕಾಸು ವರ್ಷದಲ್ಲಿ ಭಾರತದ ಯೋಜಿತ ಬೆಳವಣಿಗೆಯ ದರ 6.8% ಎಂದು ನಿರೀಕ್ಷಿಸಿದ್ದಾರೆ.

ಕೋವಿಡ್- 19 ಸಾಂಕ್ರಾಮಿಕ ರೋಗ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಲ್ಫ್ ಪ್ರದೇಶದಲ್ಲಿ ಇತ್ತೀಚಿನ ಉದ್ವಿಗ್ನತೆ ಸೇರಿದಂತೆ ಅನೇಕ ಆಘಾತಗಳನ್ನು ಪರಿಹರಿಸಿಕೊಂಡಿರುವ ಭಾರತದ ಸಾಮರ್ಥ್ಯದ ಬಗ್ಗೆ ಶ್ರೀನಿವಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಭಾವಶಾಲಿ ಬೆಳವಣಿಗೆಗೆ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆ ಕಾರಣ. ಮುಂದಿನ ದಿನಗಳಲ್ಲಿ ಭಾರತದ ಮುನ್ನಡೆಗೆ ಅಡೆತಡೆಗಳಿಲ್ಲ. ಸಮಗ್ರ ಸುಧಾರಣೆಗಳನ್ನು ಶ್ರದ್ಧೆಯಿಂದ ಜಾರಿಗೆ ತಂದರೆ ಮುಂದಿನ ಹಲವಾರು ವರ್ಷಗಳಲ್ಲಿ ಭಾರತವು 6.5% ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯ ದರ ಸಾಧಿಸಬಹುದು ಎಂದವರು ಹೇಳಿದ್ದಾರೆ. ವಿಸ್ತರಿಸುತ್ತಿರುವ ಕಾರ್ಮಿಕ ಶಕ್ತಿಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಗಮನಾರ್ಹ ಸುಧಾರಣೆಗಳ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ. ಭಾರತವು ಯುವ, ಬೆಳೆಯುತ್ತಿರುವ ಜನಸಂಖ್ಯೆಯನ್ನು ಹೊಂದಿದೆ. ಇದು ಪ್ರತಿವರ್ಷ ಸುಮಾರು 1.5 ಕೋಟಿ ಜನರನ್ನು ಕಾರ್ಮಿಕ ಬಲಕ್ಕೆ ಸೇರಿಸಲಿದೆ. ಈ ಜನಸಂಖ್ಯಾ ಅನುಕೂಲವನ್ನು ಬಳಸಿಕೊಳ್ಳಲು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಗಣನೀಯ ಹೂಡಿಕೆಗಳು ನಿರ್ಣಾಯಕ ಎಂಬುದು ಅವರ ಕಾಳಜಿ. ಬೆಳೆಯುತ್ತಿರುವ ಕಾರ್ಮಿಕ ಶಕ್ತಿಯು ಆರ್ಥಿಕತೆಗೆ ನೆರವು ನೀಡಬಹುದು ಎಂಬ ಅವರ ಮಾತಿನಲ್ಲಿ ಅರ್ಥವಿದೆ.

ಕಳೆದ ವರ್ಷ ಜಾಗತಿಕ ಆರ್ಥಿಕ ಪ್ರಗತಿ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ರಷ್ಯಾ- ಉಕ್ರೇನ್‌ ಯುದ್ಧ, ಕೋವಿಡ್‌ ನಂತರದ ಸ್ಥಿತಿಗತಿ ಮತ್ತಿತರ ಕಾರಣಗಳಿಂದ ಅದು ಕುಸಿದಿತ್ತು. ಆದರೆ ಭಾರತ ವಿಶ್ವದ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂದು ವಿಶ್ವ ಹಣಕಾಸು ಸಂಸ್ಥೆ (ಐಎಂಎಫ್‌) ಹೇಳಿದಂತೆ ಭಾರತ ಬೆಳವಣಿಗೆ ಕಂಡಿತ್ತು. ಐಎಂಎಫ್‌ ವರದಿ ಹಾಗೂ ಆರ್ಥಿಕ ಸಮೀಕ್ಷೆಗಳು ಮುಂದಿಟ್ಟಿರುವ ದೇಶದ ಆರ್ಥಿಕ ಚಿತ್ರಣ ಭರವಸೆದಾಯಕವಾಗಿದೆ. ಕೊರೊನಾದಿಂದ ಮುಕ್ತವಾದ ಬಳಿಕ ದೇಶದ ಮಾರುಕಟ್ಟೆಯಲ್ಲಿ ಚಲನಶೀಲತೆ ಮರಳಿದೆ. ಪಟ್ಟಣ ಹಾಗೂ ಗ್ರಾಮೀಣ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಗಳು ಮರಳಿರುವುದರಿಂದ, ಗ್ರಾಹಕ ಮಾರುಕಟ್ಟೆಯಲ್ಲಿ ಗ್ರಾಹಕನಿಗೆ ವೆಚ್ಚ ಮಾಡುವ ಧೈರ್ಯವೂ ಹೆಚ್ಚಿದೆ. 2024ರಲ್ಲಿ ಭಾರತದ ಆರ್ಥಿಕತೆಯಲ್ಲಿ ಶೇಕಡಾ 7.5ರ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಒಟ್ಟಾರೆಯಾಗಿ ದಕ್ಷಿಣ ಏಷ್ಯಾದ ಬೆಳವಣಿಗೆಯು 2024ರಲ್ಲಿ 6.0 ಪ್ರತಿಶತದಷ್ಟು ಪ್ರಬಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಮುಖ್ಯವಾಗಿ ಭಾರತದಲ್ಲಿನ ದೃಢವಾದ ಬೆಳವಣಿಗೆಯಿಂದ ಉಂಟಾಗಿದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. ಇಲ್ಲಿನ ಹಣದುಬ್ಬರವನ್ನೂ ಆರ್‌ಬಿಐ ನಿಯಂತ್ರಣದಲ್ಲಿಟ್ಟಿದೆ.

ಭಾರತದ ಜನಸಂಖ್ಯೆ ಚೀನಾವನ್ನೂ ಮೀರಿಸಿ ಈಗಾಗಲೇ ಮುಂದಡಿಯಿಟ್ಟಿದೆ. ಚೀನಾದ ಜನಸಂಖ್ಯೆಯ ಹೆಚ್ಚಿನ ಪ್ರಮಾಣ 40 ವರ್ಷ ಮೀರುತ್ತಿದ್ದರೆ, ಭಾರತದ ಶೇ.50 ಮಂದಿ 30 ವರ್ಷಕ್ಕಿಂತ ಕೆಳಗಿನವರು ಹಾಗೂ ಅದೇ ಕಾರಣಕ್ಕಾಗಿ ಇವರು ಮುಂದಿನ ಮೂರು ದಶಕಗಳ ಕಾಲ ದುಡಿಯುವವರಾಗಿರುತ್ತಾರೆ. ಭಾರತದ ಫಲವತ್ತತೆ ದರವೂ ಚೀನಾಕ್ಕಿಂತ ಮುಂದಿದೆ ಹಾಗೂ ಮುಂದಿನ ದಶಕದಲ್ಲಿ ಅದು ಚೀನಾವನ್ನೂ ಅಭಿವೃದ್ಧಿಯಲ್ಲಿ ಹಿಂದಿಕ್ಕಲಿದೆ. ಇದೇ ಕಾರಣದಿಂದ ಮುಂದಿನ ದಶಕಗಳು ಭಾರತದ್ದಾಗಿದ್ದು, ಇಲ್ಲಿನ ದುಡಿಯುವ ಕೈಗಳು ಜಗತ್ತಿನ ಪಾಲಿಗೆ ಭರವಸೆಯ ಕಿರಣಗಳಾಗಿ ಹೊಮ್ಮಲಿವೆ. ಈ ಹಿಂದೆ ಎರಡು ಬಾರಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾದಾಗಲೂ ಭಾರತಕ್ಕೆ ಅದರ ಬಿಸಿ ತಟ್ಟಿರಲಿಲ್ಲ. ಈ ಬಾರಿ ವಿಶ್ವದ ಹಲವು ದೇಶಗಳು ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದ್ದರೂ ಭಾರತ ಯಥಾಸ್ಥಿತಿಯಲ್ಲಿದೆ ಎಂಬುದು ಮಹತ್ವದ ಅಂಶ. ಕೇಂದ್ರ ಸರ್ಕಾರದ ಹಲವಾರು ದೃಢ ಕ್ರಮಗಳು ಈ ಉನ್ನತಿಯ ಹಿಂದೆ ಇವೆ. ಕಳೆದ ಒಂದು ದಶಕದಿಂದ ದೇಶದ ವಿತ್ತ ವಲಯದಲ್ಲಿ ಮಾಡಿದ ಸುಧಾರಣೆಗಳು, ಡಿಜಿಟಲ್‌ ಪಾವತಿ ಹಾಗೂ ಜನಧನ್‌ನಂಥ ಉಪಕ್ರಮಗಳು, ಗ್ಯಾಸ್‌ ಸಬ್ಸಿಡಿ, ಉಚಿತ ವಿದ್ಯುತ್‌ನಂಥ ಯೋಜನೆಗಳು, ಸುಸ್ಥಿರ ಇಂಧನ ಬಳಕೆ, ಗಡಿಯಲ್ಲಿ ಸುಭದ್ರತೆಯ ಭರವಸೆ ಇತ್ಯಾದಿಗಳು ಎಕಾನಮಿಗೆ ಮಹತ್ವದ ಕೊಡುಗೆ ನೀಡಿವೆ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ: Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ನೇಹಾ ಹಿರೇಮಠಗೆ ನ್ಯಾಯ ಸಿಗಲಿ, ಆರೋಪಿಗೆ ಗಲ್ಲು ಶಿಕ್ಷೆಯಾಗಲಿ

ಗೃಹ ಸಚಿವರು ಈ ಕುರಿತು ಪ್ರತಿಕ್ರಿಯೆ ನೀಡುತ್ತ, “ನೇಹಾ ಕೊಲೆ ಆಕಸ್ಮಿಕ. ಆಕೆಯೂ ಆರೋಪಿಯೂ ಪ್ರೀತಿಸುತ್ತಿದ್ದರು. ಆಕೆ ನಿರಾಕರಿಸಿದ್ದರಿಂದ ಕೊಲೆ ಮಾಡಿದ್ದಾನೆ” ಎಂದು ಹಗುರವಾದ ಹೇಳಿಕೆ ನೀಡಿದ್ದಾರೆ. ಇದೊಂದು ಬೇಜವಾಬ್ದಾರಿ ಹೇಳಿಕೆ. ಆಕಸ್ಮಿಕ ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಇಂಥ ಅಪರಾಧಗಳು ಆಕಸ್ಮಿಕವಾಗಿ ಆಗುವುದಿಲ್ಲ. ಗೃಹ ಸಚಿವರು ಹಾಗೂ ಪೊಲೀಸರು ರಾಜ್ಯದ ಕಾನೂನು ಸುವ್ಯವಸ್ಥೆಯತ್ತ ಗಂಭೀರ ಗಮನ ನೆಟ್ಟಿದ್ದಾರೆಯೇ ಎಂದು ಪ್ರಶ್ನಿಸುವಂತಾಗಿದೆ.

VISTARANEWS.COM


on

Neha Murder Case
Koo

ಬೆಳಗಿ ಬಾಳಬೇಕಾದ ಕುಡಿಯೊಂದು ಯವ್ವನದಲ್ಲೇ ಕಮರಿಹೋಗಿದೆ. ಬೆಳಗಾವಿ ಮೂಲದ ಯುವತಿಯೊಬ್ಬಳನ್ನು ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಸಿಎ ಮೊದಲ ವರ್ಷದಲ್ಲಿ ಓದುತ್ತಿದ್ದ ನೇಹಾ ಹಿರೇಮಠ ಎಂಬಾಕೆಯನ್ನು ಫಯಾಜ್ ಎನ್ನುವವನು ಕೊಂದು ಹಾಕಿದ್ದಾನೆ. ಈ ಹಿಂದೆ ನೇಹಾ ಓದುತ್ತಿದ್ದ ಕಾಲೇಜಿನಲ್ಲಿ ಈಕೆಯ ಸಹಪಾಠಿಯಾಗಿದ್ದ ಈತ, ತನ್ನ ಪ್ರೀತಿಯನ್ನು ಆಕೆ ತಿರಸ್ಕರಿಸಿದ್ದರಿಂದ ರೊಚ್ಚಿಗೆದ್ದಿದ್ದ. ಬಿಸಿಎಯಲ್ಲಿ ಫೇಲ್ ಆಗಿದ್ದ ಈತನ ಯಾವ ʼಕಲ್ಯಾಣ ಗುಣʼ ನೋಡಿ ಆಕೆ ತನ್ನನ್ನು ಪ್ರೀತಿಸಬೇಕು ಎಂದುಕೊಂಡಿದ್ದನೋ ಗೊತ್ತಿಲ್ಲ. ನಿನ್ನೆ ಏಕಾಏಕಿ ಅವಳು ಓದುತ್ತಿದ್ದ ಕಾಲೇಜಿಗೆ ಬಂದು, ಕ್ಯಾಂಪಸ್‌ನಲ್ಲಿಯೇ ಆಕೆಯನ್ನು ಇರಿದು ಕೊಂದಿದ್ದಾನೆ. ಕೊಲೆ ಮಾಡಿದ ರೀತಿಯೂ ಬೆಚ್ಚಿ ಬೀಳಿಸುವಂತಿದೆ. ಒಂಬತ್ತು ಬಾರಿ ಚಾಕುವಿನಿಂದ ಇರಿದ ಈತ, ನೋವಿನಿಂದ ಆಕೆ ನರಳಾಡುತ್ತಿದ್ದರೂ, ಆಕೆ ಕೊನೆಯುಸಿರು ಎಳೆದದ್ದನ್ನು ಖಚಿತಪಡಿಸಿಕೊಂಡೇ ಅಲ್ಲಿಂದ ತೆರಳಿದ್ದಾನೆ. ಅಂದ ಮೇಲೆ ಆತನಲ್ಲಿ ಇದ್ದುದು ಪ್ರೀತಿಯಲ್ಲ, ಕ್ರೌರ್ಯ ಮಾತ್ರ. ಪ್ರೇಮ ಎಂದೂ ಇಂಥ ವಿಕೃತಿಯನ್ನು ತಾಳಲು ಸಾಧ್ಯವಿಲ್ಲ.

ಘಟನೆಯನ್ನು ಖಂಡಿಸಿ, ಎಂದಿನಂತೆ, ಹಿಂದೂ ಸಂಘಟನೆಗಳು ಬೀದಿಗಿಳಿದಿವೆ. ಹುಡುಗಿಯ ಮೂಲ ಊರಾದ ಮುನವಳ್ಳಿಯಲ್ಲಿ ಮೂರು ದಿನಗಳ ಕಾಲ ಬಂದ್‌ ಸಾರಲಾಗಿದೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಬಿಜೆಪಿ ಮುಖಂಡರು ಸಂತ್ರಸ್ತ ಯುವತಿಯ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸಬೇಕು ಎಂದು ಪೊಲೀಸರನ್ನು ಹೆಚ್ಚಿನವರು ಆಗ್ರಹಿಸಿದ್ದಾರೆ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸಿಎಂ ಅವರು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ʼಬಿಜೆಪಿ ಇದನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆʼ ಎಂದು ಆರೋಪಿಸುವುದು ಸುಲಭ; ಆದರೆ ಇಷ್ಟಾದರೂ ಪ್ರತಿಭಟನೆಯ ಧ್ವನಿ ಎಬ್ಬಿಸದೇ ಹೋದರೆ, ಪೊಲೀಸರು ಹಾಗೂ ಆಡಳಿತದಲ್ಲಿ ಇರುವವರು ಇದನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇತ್ತೇ? ರಾಜ್ಯದಲ್ಲಿ ಪ್ರತಿದಿನ ಹಲವಾರು ಕೊಲೆಗಳಾಗುತ್ತವೆ. ನಿನ್ನೆಯಂತೂ ಗದಗದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿಯ ಕೊಲೆಯಾಗಿದೆ. ಪೊಲೀಸರು ತಮ್ಮದೇ ವೇಗದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಪ್ರಕರಣದ ಗಂಭೀರತೆಯನ್ನು ಆಡಳಿತಕ್ಕೆ ಮುಟ್ಟಿಸಿ, ತನಿಖೆ- ವಿಚಾರಣೆ- ಶಿಕ್ಷೆ ತೀವ್ರಗತಿಯಲ್ಲಿ ನಡೆಯುವಂತೆ ಮಾಡುವುದಂತೂ ಈ ಮೂಲಕ ಸಾಧ್ಯವಿದೆ.

ಇಂಥ ಅಪರಾಧಗಳ ಮೂಲದಲ್ಲಿ ಏನಿರುತ್ತದೆ? ಇನ್ನೊಬ್ಬ ವ್ಯಕ್ತಿಯನ್ನು ಕೊಲ್ಲುವುದು ಇಷ್ಟೊಂದು ಸುಲಭವೇ? ತನ್ನ (ವಿಕೃತ)ಪ್ರೇಮವನ್ನು ತಿರಸ್ಕರಿಸಿದಳೆಂದು ಯುವತಿಯೊಬ್ಬಳನ್ನು ಕೊಲ್ಲುವ ಈ ಮನಸ್ಥಿತಿ ಎಷ್ಟು ವಿಕೃತವಾದುದು ಎಂಬುದನ್ನು ಮತ್ತೆ ಹೇಳಬೇಕಿಲ್ಲ. ತನಗೆ ದೊರೆಯದ ಯುವತಿ ಇನ್ಯಾರಿಗೂ ದೊರೆಯುವುದು ಬೇಡ, ಆಕೆ ಬದುಕುವುದೂ ಬೇಡ ಎನ್ನುವುದು ಬಣ್ಣಿಸಲೂ ಮಾತುಗಳಿಲ್ಲದ ನೀಚತನ. ಇದು ಅಪರೂಪದಲ್ಲಿ ಅಪರೂಪದ ದುಷ್ಕೃತ್ಯ. ಈತನಿಗೆ ಗಲ್ಲು ಶಿಕ್ಷೆ ಆಗಲೇಬೇಕಿದೆ. ಈತನ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಪೊಲೀಸರು ಕಲೆಹಾಕಿ ನ್ಯಾಯಾಲಯದಲ್ಲಿ ಗಟ್ಟಿಯಾಗಿ ವಾದ ಮಂಡಿಸಲು ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ಇದು ಸಾಧ್ಯ.

ಇದರ ಜೊತೆಗೆ ಮತಾಂಧತೆಯೂ ಸೇರಿದಂತಿದೆ. ಇದು ಒಬ್ಬ ವ್ಯಕ್ತಿಯ ಮನಸ್ಥಿತಿ ಮಾತ್ರವೇ ಅಲ್ಲ; ಹೀಗೆ ಸಮಾಜದಲ್ಲಿ ಭಯ ಉತ್ಪಾದಿಸುವ ಸಂಘಟನೆಗಳ ವರ್ತನೆಯೂ ಹೀಗೇ ಇರುತ್ತದೆ. ಈತನ ಹಿಂದೆ ಇನ್ಯಾರದಾದರೂ ಕೈವಾಡವಿದೆಯೇ ಎಂಬ ಕೋನದಲ್ಲಿ ಕೂಡ ತನಿಖೆ ನಡೆಸುವುದು ಒಳಿತು. ಈತನ ಕೃತ್ಯವನ್ನು ನೋಡಿದರೆ ಇದು ʼಲವ್‌ ಜಿಹಾದ್‌ ಕೊಲೆʼ ಆಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

ಇದರ ಜೊತೆಗೆ ಕಾನೂನು ಸುವ್ಯವಸ್ಥೆಯ ಪ್ರಶ್ನೆಯೂ ತಳುಕು ಹಾಕಿಕೊಂಡಿದೆ. ಗೃಹ ಸಚಿವರು ಈ ಕುರಿತು ಪ್ರತಿಕ್ರಿಯೆ ನೀಡುತ್ತ, “ನೇಹಾ ಕೊಲೆ ಆಕಸ್ಮಿಕ. ಆಕೆಯೂ ಆರೋಪಿಯೂ ಪ್ರೀತಿಸುತ್ತಿದ್ದರು. ಆಕೆ ನಿರಾಕರಿಸಿದ್ದರಿಂದ ಕೊಲೆ ಮಾಡಿದ್ದಾನೆ” ಎಂದು ಹಗುರವಾದ ಹೇಳಿಕೆ ನೀಡಿದ್ದಾರೆ. ಇದೊಂದು ಬೇಜವಾಬ್ದಾರಿ ಹೇಳಿಕೆ. ಆಕಸ್ಮಿಕ ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಇಂಥ ಅಪರಾಧಗಳು ಆಕಸ್ಮಿಕವಾಗಿ ಆಗುವುದಿಲ್ಲ. ಅದರ ಹಿಂದೆ ತರ್ಕಬದ್ಧ ಯೋಜನೆ ಇರುತ್ತದೆ. ಆದ್ದರಿಂದ ಈತ ಗರಿಷ್ಠ ಶಿಕ್ಷೆಗೆ ಅರ್ಹ. ಗೃಹ ಸಚಿವರು ಹಾಗೂ ಪೊಲೀಸರು ರಾಜ್ಯದ ಕಾನೂನು ಸುವ್ಯವಸ್ಥೆಯತ್ತ ಗಂಭೀರ ಗಮನ ನೆಟ್ಟಿದ್ದಾರೆಯೇ? ಈ ಪ್ರಶ್ನೆಯನ್ನು ಅವರು ಉತ್ತರಿಸಬೇಕಿದೆ. ಅಪರಾಧಗಳು ಸಂಭವಿಸದಂತೆ ಕಠಿಣ ಕಾನೂನು ಸುವ್ಯವಸ್ಥೆಯನ್ನು ಜಾರಿಯಲ್ಲಿಡುವುದೇ ಅಪರಾಧಗಳನ್ನು ತಡೆಯುವ ಸುಲಭ ವಿಧಾನ. ಇಂಥ ಅಪರಾಧಗಳು ಇನ್ನು ಘಟಿಸದಿರಲಿ.

Continue Reading

ಆಹಾರ/ಅಡುಗೆ

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

ಬೀದಿ ಬದಿಯ ಆಹಾರ ತಿಂಡಿಗಳ ಸೇವನೆ ಯಾವಾಗಲೂ ರಿಸ್ಕ್‌ ಅಂಶದಿಂದ ಕೂಡಿರುವಂಥದು. ಇಲ್ಲಿ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರಿಗೆ ಯಾವ ಅವಕಾಶವೂ ಇಲ್ಲ. ಸ್ಥಳೀಯಾಡಳಿತಗಳ ಬಳಿಯೂ ಯಾವುದೇ ಮಾನದಂಡ ಇರುವಂತಿಲ್ಲ. ರುಚಿಯಾಗಿದೆ ಎಂದು ಕಾಣಿಸುವ ಆಹಾರವೆಲ್ಲವೂ ಶುಚಿಯಾಗಿರಬೇಕಿಲ್ಲ. ಈ ಬಗ್ಗೆ ಜನ ಜಾಗೃತರಾಗುವುದು ಮುಖ್ಯ.

VISTARANEWS.COM


on

Steet Food
Koo

ಬೇಸಿಗೆಯ ಬಿಸಿಲಿನ ತೀವ್ರತೆ ಹಾಗೂ ನೀರಿನ ಲಭ್ಯತೆಯ ಕೊರತೆ ಹೆಚ್ಚಾಗುತ್ತಿರುವಂತೆ, ಬೀದಿ ಬದಿಯ ಆಹಾರ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವಿತರಣೆಯಾಗುವ ಆಹಾರವನ್ನು ಸೇವಿಸಿ ಅಸ್ವಸ್ಥರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಂಡ್ಯದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ಐಸ್ ಕ್ರೀಂ ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು (Twin Children death) ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿದ್ದಾರೆ. ದಾವಣಗೆರೆಯಲ್ಲಿ ನಡೆಯುತ್ತಿದ್ದ ಎಕ್ಸಿಬಿಷನ್‌ನಲ್ಲಿ ಬಾಲಕನೊಬ್ಬ ಸ್ಮೋಕ್‌ ಬಿಸ್ಕೆಟ್‌ ತಿಂದು ಅಸ್ವಸ್ಥನಾಗಿದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊಡವತ್ತಿ ಕ್ರಾಸ್‌ನ ಗೊಲ್ಲರಹಟ್ಟಿಯಲ್ಲಿ ರಾಮನವಮಿಯಂದು ಪಾನಕ, ಮಜ್ಜಿಗೆ ಸೇವಿಸಿ ಒಂದೇ ಗ್ರಾಮದ 45 ಮಂದಿ ಅಸ್ವಸ್ಥರಾಗಿದ್ದಾರೆ. ಬುಧವಾರ ರಾಮನವಮಿ ಹಿನ್ನೆಲೆಯಲ್ಲಿ ಭಕ್ತರು ಮಜ್ಜಿಗೆ, ಪಾನಕವನ್ನು ಸೇವನೆ ಮಾಡಿದ್ದರು. ಇವರಿಗೆ ಮಧ್ಯರಾತ್ರಿಯಿಂದ ಹೊಟ್ಟೆನೋವು, ವಾಂತಿ- ಭೇದಿ ಶುರುವಾಗಿದೆ.

ಇಂಥ ಪ್ರಕರಣಗಳು ಹೆಚ್ಚುತ್ತಿವೆ; ಹೀಗಾಗಿಯೇ ಸ್ಥಳೀಯಾಡಳಿತಗಳು, ಸರ್ಕಾರದ ಜೊತೆಗೆ ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕಿದೆ. ಬೇಸಿಗೆಯಲ್ಲಿ ಸಹಜವಾಗಿಯೇ ಹೊರಗೆ ಓಡಾಡುವವರಿಗೆ ದಾಹ ಹೆಚ್ಚು. ಈ ಸಲವಂತೂ ಧಗೆ ಇನ್ನಷ್ಟು ಹೆಚ್ಚಿದೆ. ತಣ್ಣಗೆ ಏನಾದರೂ ಸಿಕ್ಕರೆ ಕುಡಿದುಬಿಡೋಣ ಎನಿಸುತ್ತದೆ. ರಾಮನವಮಿ ಕೂಡ ಕಡುಬೇಸಿಗೆಯಲ್ಲಿ ಬರುತ್ತದೆ. ಸಾರ್ವಜನಿಕವಾಗಿ ಪಾನಕ- ಪನಿವಾರ ವಿತರಣೆ ನಡೆಯುತ್ತದೆ. ಹೆಚ್ಚಿನ ಭಕ್ತರು ಸ್ವಚ್ಛತೆಯ ಕಾಳಜಿ ವಹಿಸುತ್ತಾರಾದರೂ, ಕೆಲವೆಡೆ ಪ್ರಮಾದವಶಾತ್‌ ಅವಘಡಗಳು ಸಂಭವಿಸುತ್ತವೆ. ಇದಕ್ಕಾಗಿಯೇ ಸಾರ್ವಜನಿಕವಾಗಿ ಆಹಾರ ಸೇವಿಸುವಾಗ, ಪಾನೀಯ ಸೇವಿಸುವಾಗ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ವಿತರಕರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇನ್ನು ಖಾಸಗಿ, ಬೀದಿ ಬದಿಯ ಆಹಾರ ತಿಂಡಿಗಳ ಸೇವನೆ ಯಾವಾಗಲೂ ರಿಸ್ಕ್‌ ಅಂಶದಿಂದ ಕೂಡಿರುವಂಥದು. ಇಲ್ಲಿ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರಿಗೆ ಯಾವ ಅವಕಾಶವೂ ಇಲ್ಲ. ಸ್ಥಳೀಯಾಡಳಿತಗಳ ಬಳಿಯೂ ಯಾವುದೇ ಮಾನದಂಡ ಇರುವಂತಿಲ್ಲ. ರುಚಿಯಾಗಿದೆ ಎಂದು ಕಾಣಿಸುವ ಆಹಾರವೆಲ್ಲವೂ ಶುಚಿಯಾಗಿರಬೇಕಿಲ್ಲ. ಐಸ್‌ಕ್ರೀಮ್‌ನಂಥ ತಿಂಡಿತಿನಿಸುಗಳು ಸೇವಿಸುವಾಗ ಆಹಾ ಎನಿಸಿದರೂ, ಅದರ ಪರಿಣಾಮ ಆಮೇಲೆ ತಿಳಿಯುತ್ತದೆ. ತಣ್ಣಗೆ ಕೊರೆಯುವ ಐಸ್‌ಕ್ರೀಮ್‌ ಗಂಟಲಿನಲ್ಲಿ ಸೋಂಕು ಉಂಟುಮಾಡಬಲ್ಲದು. ಇದು ಎಲ್ಲ ಐಸ್‌ಕ್ರೀಮ್‌ಗಳಿಗೆ ಹೇಳಿದ ಮಾತಲ್ಲ. ಶುಚಿತ್ವ, ಶುದ್ಧತೆ, ಗ್ರಾಹಕರ ಆರೋಗ್ಯದ ಕಡೆಗೆ ಗಮನ ಕೊಡದ ಈಟರಿಗಳ ಬಗ್ಗೆ ಮಾತ್ರ ಈ ಮಾತನ್ನು ಹೇಳಬಹುದು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಇರಾನ್ -‌ ಇಸ್ರೇಲ್ ಯುದ್ಧ ತಪ್ಪಿಸಲೇಬೇಕಿದೆ

ಹಾಗಾದರೆ ಸ್ಥಳೀಯಾಡಳಿತಗಳು ಸಾರ್ವಜನಿಕರ ಆರೋಗ್ಯ ಖಾತರಿಪಡಿಸಿಕೊಳ್ಳಲು ಏನು ಮಾಡಬಹುದು? ಬೀದಿ ಬದಿಯ ಈಟರಿಗಳಿಗೆ ದಿಡೀರ್‌ ದಾಳಿ ನಡೆಸಿ ಅಲ್ಲಿನ ಹೈಜೀನ್‌ ಅನ್ನು ಪರೀಕ್ಷಿಸುವುದು ಒಂದು ದಾರಿ. ಹೋಟೆಲ್‌ಗಳೂ ಈ ಹೈಜೀನ್‌ ಮಾನದಂಡಗಳನ್ನು ಅನುಸರಿಸಬೇಕು. ಸಾರ್ವಜನಿಕರೂ, ಸ್ವಚ್ಛತೆ ಕಾಪಾಡಿಕೊಳ್ಳದ ಸ್ಥಳಗಳಲ್ಲಿ ಆಹಾರ ಸೇವಿಸುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಕುಡಿಯುವ ನೀರಿನಿಂದ ಹಾಗೂ ಆಹಾರದಿಂದ ಬಂದ ಕಾಲರಾ ಕೂಡ ಕೆಲವರಲ್ಲಿ ಕಂಡುಬಂದಿದೆ. ಸೋಂಕುಗಳು ವ್ಯಾಪಕವಾಗಿರುವ ಕಾಲದಲ್ಲಿ, ಮನೆಯಲ್ಲಿ ಮಾಡಿಕೊಳ್ಳುವ ಆರೋಗ್ಯಕರ ಆಹಾರವೇ ಅತ್ಯುತ್ತಮ.

Continue Reading
Advertisement
Shakti Scheme
ಕರ್ನಾಟಕ4 hours ago

Shakti Scheme: ಸಿಎಂ ಸಿದ್ದರಾಮಯ್ಯಗೆ ಫ್ರೀ ಟಿಕೆಟ್ ಹಾರ ಅರ್ಪಣೆ; ಕಾನೂನು‌ ವಿದ್ಯಾರ್ಥಿನಿಯಿಂದ ವಿಭಿನ್ನವಾಗಿ ಕೃತಜ್ಞತೆ

IPL 2024
ಕ್ರೀಡೆ4 hours ago

IPL 2024 : ಮುಂಬೈ ವಿರುದ್ಧ ರಾಜಸ್ಥಾನ್​ ತಂಡಕ್ಕೆ 9 ವಿಕೆಟ್​ ಅಮೋಘ​ ಗೆಲುವು

Gurulinga Shivacharya Swamiji
ಕರ್ನಾಟಕ5 hours ago

Gurulinga Shivacharya Swamiji: ಕಾರು ಅಪಘಾತದಲ್ಲಿ ಬಂಗರಗಾ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

Actor Darshan election campaign for Mandya Lok Sabha constituency Congress candidate star Chandru
ಮಂಡ್ಯ5 hours ago

Lok Sabha Election 2024: ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಮತ ನೀಡಿ, ಗೆಲ್ಲಿಸಿ: ನಟ ದರ್ಶನ್ ಮನವಿ

Tulsi Gowda
ಪ್ರಮುಖ ಸುದ್ದಿ5 hours ago

Tulsi Gowda: ಮನೆಯಲ್ಲಿ ಕಾಲು ಜಾರಿ ಬಿದ್ದು ಪದ್ಮಶ್ರೀ ತುಳಸಿ ಗೌಡ ಅಸ್ವಸ್ಥ

IPL 2024
ಪ್ರಮುಖ ಸುದ್ದಿ5 hours ago

ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್​ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ

Terrorist Attack
ದೇಶ5 hours ago

Terrorist Attack: ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು; ಉಗ್ರನ ದಾಳಿಗೆ ಸರ್ಕಾರಿ ನೌಕರ ಬಲಿ

Reliance Industries net profit of Rs 18,951 crore, declares interim dividend of Rs 10 per share
ದೇಶ5 hours ago

Reliance Industries: ರಿಲಯನ್ಸ್ ಇಂಡಸ್ಟ್ರೀಸ್‌ಗೆ 18,951 ಕೋಟಿ ರೂ. ನಿವ್ವಳ ಲಾಭ; ಷೇರಿಗೆ 10 ರೂ. ಮಧ್ಯಂತರ ಲಾಭಾಂಶ

Hardik Pandya
ಪ್ರಮುಖ ಸುದ್ದಿ5 hours ago

Hardik Pandya : ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​​ನಲ್ಲಿ ಮತ್ತೆ ವಿಫಲ; ಬೆಂಡೆತ್ತಿದ ಅಭಿಮಾನಿಗಳು

Rain News
ಕರ್ನಾಟಕ6 hours ago

Rain News: ಪ್ರತ್ಯೇಕ ಮಳೆ ಅವಘಡ; ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ಯುವಕರ ದುರ್ಮರಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru karaga 2024
ಬೆಂಗಳೂರು11 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ12 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು15 hours ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು17 hours ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ23 hours ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ2 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ3 days ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

ಟ್ರೆಂಡಿಂಗ್‌