ವಿಸ್ತಾರ ಸಂಪಾದಕೀಯ: ಅಂತರ್ಜಲ ಕೊರತೆ, ಜಲಾಂದೋಲನಕ್ಕೆ ಜನ ಕೈಜೋಡಿಸಬೇಕಿದೆ - Vistara News

ದೇಶ

ವಿಸ್ತಾರ ಸಂಪಾದಕೀಯ: ಅಂತರ್ಜಲ ಕೊರತೆ, ಜಲಾಂದೋಲನಕ್ಕೆ ಜನ ಕೈಜೋಡಿಸಬೇಕಿದೆ

Vistara Editorial: ಭವಿಷ್ಯದ ತಲೆಮಾರುಗಳಿಗಾಗಿ ನಾವು ಅಂತರ್ಜಲವನ್ನು ಉಳಿಸಿಕೊಳ್ಳಲೇಬೇಕಿದೆ. ʼಪಾನಿ ಪಂಚಾಯತಿʼಗಳ ಪರಿಕಲ್ಪನೆಯ ಮೂಲಕ ಪ್ರಧಾನ ಮಂತ್ರಿಗಳು ನೀರಿನ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಜಲ ಸಂರಕ್ಷಣೆಯನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಬೇಕು. ಇದಕ್ಕೆ ಜನಸಾಮಾನ್ಯರೂ ಕೈಜೋಡಿಸಬೇಕು.

VISTARANEWS.COM


on

Vistara Editorial, People should initiate movement to save Ground water
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿನ ಇಂಡೋ- ಗಂಗಾ (Indo Ganges) ಜಲಾನಯನ ಪ್ರಾಂತ್ಯದ ಕೆಲವು ಪ್ರದೇಶಗಳು ಅಂತರ್ಜಲ (Groundwater Level) ಕುಸಿತದ ಮಿತಿಯನ್ನು ದಾಟಿವೆ. ದೇಶದ ವಾಯವ್ಯ ಪ್ರದೇಶ ಸಂಪೂರ್ಣ 2025ರ ವೇಳೆಗೆ ತುಂಬಾ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸುತ್ತದೆ ಎಂದು ವಿಶ್ವಸಂಸ್ಥೆಯ ಹೊಸ ವರದಿ ಹೇಳಿದೆ. ಸೌದಿ ಅರೇಬಿಯಾದಂತಹ ಕೆಲವು ದೇಶಗಳು ಈಗಾಗಲೇ ಅಂತರ್ಜಲ ಕೊರತೆಯ ಅಪಾಯದ ಮಿತಿಯನ್ನು ಮೀರಿವೆ. ಭಾರತ ಸೇರಿದಂತೆ ಇತರ ದೇಶಗಳೂ ಈ ಅಪಾಯದಿಂದ ದೂರವಿಲ್ಲ. “ಇಂಟರ್‌ಕನೆಕ್ಟೆಡ್ ಡಿಸಾಸ್ಟರ್ ರಿಸ್ಕ್ ರಿಪೋರ್ಟ್ 2023” ಎಂಬ ಶೀರ್ಷಿಕೆಯಡಿ ವಿಶ್ವಸಂಸ್ಥೆಯ ಇನ್‌ಸ್ಟಿಟ್ಯೂಟ್ ಫಾರ್ ಎನ್ವಿರಾನ್‌ಮೆಂಟ್ ಅಂಡ್ ಹ್ಯೂಮನ್ ಸೆಕ್ಯುರಿಟಿ (ಯುಎನ್‌ಯು-ಇಹೆಚ್‌ಎಸ್) ಇದರಿಂದ ವರದಿ ಪ್ರಕಟವಾಗಿದೆ. ಇದು ನಮ್ಮ ಚಿಂತೆಗೆ- ಚಿಂತನೆಗೆ ಕಾರಣವಾಗಬೇಕಿದೆ(Vistara Editorial).

ವಿಶ್ವಸಂಸ್ಥೆ ವರದಿಯಲ್ಲಿ ಇದಲ್ಲದೇ ಇನ್ನೂ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಅಂತರ್ಜಲದಲ್ಲಿ ಸುಮಾರು 70 ಪ್ರತಿಶತವನ್ನು ಕೃಷಿಗಾಗಿ, ನೆಲದ ಮೇಲಿನ ನೀರಿನ ಮೂಲಗಳು ಸಾಕಷ್ಟಿಲ್ಲದಿದ್ದಾಗ ಬಳಸಲಾಗುತ್ತಿದೆ. ಜಲಕ್ಷಾಮದಿಂದ ಉಂಟಾಗುವ ಕೃಷಿ ನಷ್ಟವನ್ನು ತಗ್ಗಿಸುವಲ್ಲಿ ಜಲಸೆಲೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ. ಹವಾಮಾನ ಬದಲಾವಣೆಯಿಂದಾಗಿ ಈ ಸವಾಲು ಉಲ್ಬಣಗೊಳ್ಳುವ ನಿರೀಕ್ಷೆಯಿದೆ. ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಪ್ರಮುಖ ಜಲಸೆಲೆಗಳು ನೈಸರ್ಗಿಕವಾಗಿ ಮರುಪೂರಣಗೊಳ್ಳುವುದಕ್ಕಿಂತ ವೇಗವಾಗಿ ಕ್ಷೀಣಿಸುತ್ತಿವೆ. ಅಸ್ತಿತ್ವದಲ್ಲಿರುವ ಬಾವಿ ಕೆರೆಗಳಿಂದ ನೀರಿನ ಮಟ್ಟ ಮತ್ತೂ ಕಡಿಮೆಯಾದಾಗ ರೈತರು ನೀರಿನ ನೆಲೆಯನ್ನೇ ಕಳೆದುಕೊಳ್ಳಬಹುದು. ಇದು ಸಂಪೂರ್ಣ ಆಹಾರ ಉತ್ಪಾದನಾ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ. ಭಾರತದ ವಾಯುವ್ಯ ಪ್ರದೇಶವು ರಾಷ್ಟ್ರದ ಬೆಳೆಯುತ್ತಿರುವ 140 ಕೋಟಿ ಜನರಿಗೆ ಆಹಾರಮೂಲವಾಗಿ ಕಾರ್ಯನಿರ್ವಹಿಸುತ್ತಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ದೇಶದ ಅಕ್ಕಿ ಪೂರೈಕೆಯ 50 ಶೇಕಡಾ ಮತ್ತು ಶೇ.85 ಗೋಧಿ ಉತ್ಪಾದಿಸುತ್ತವೆ. ಇಲ್ಲೇ ಅಂತರ್ಜಲ ಅಪಾಯದಲ್ಲಿರುವುದು. ಪಂಜಾಬ್‌ನ ಶೇಕಡಾ 78ರಷ್ಟು ಬಾವಿಗಳನ್ನು ಅತಿಯಾಗಿ ಬಳಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ವಾಯವ್ಯ ಪ್ರದೇಶವು 2025ರ ವೇಳೆಗೆ ತೀರಾ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ಇತ್ತೀಚೆಗೆ, ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ (CGWB) ಮಾಡಿದ ನೀರಿನ ಮಟ್ಟದ ವಿಶ್ಲೇಷಣೆಯ ಪ್ರಕಾರ, ಸಮೀಕ್ಷಿಸಲಾದ ಬಾವಿಗಳಲ್ಲಿ 33%ದಷ್ಟು 2 ಮೀಟರ್‌ವರೆಗೆ ಅಂತರ್ಜಲ ಮಟ್ಟದಲ್ಲಿ ಕುಸಿತವನ್ನು ದಾಖಲಿಸಿದೆ. ಹೊಸದಿಲ್ಲಿ, ಚೆನ್ನೈ, ಇಂದೋರ್, ಮಧುರೈ, ವಿಜಯವಾಡ, ಗಾಜಿಯಾಬಾದ್, ಕಾನ್ಪುರ ಮತ್ತು ಲಕ್ನೋ ಮುಂತಾದ ಮೆಟ್ರೋ ನಗರಗಳಲ್ಲಿ 4 ಮೀಟರ್‌ಗಿಂತಲೂ ಹೆಚ್ಚು ಕುಸಿತವನ್ನು ಗಮನಿಸಲಾಗಿದೆ. UNESCO ವರ್ಲ್ಡ್ ವಾಟರ್ ಡೆವಲಪ್‌ಮೆಂಟ್ ರಿಪೋರ್ಟ್- 2018ರ ಪ್ರಕಾರ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅಂತರ್ಜಲವನ್ನು ತೆಗೆಯುವ ದೇಶವಾಗಿದೆ. ಆದರೆ ರಾಷ್ಟ್ರೀಯ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಅಂತರ್ಜಲದ ಕೊಡುಗೆ ಎಷ್ಟು ಎಂಬುದನ್ನು ಅಳೆಯುವ ಕ್ರಮವೇ ಇಲ್ಲ. CGWB ಪ್ರಕಾರ, ಭಾರತದಲ್ಲಿ ಕೃಷಿ ಭೂಮಿ ನೀರಾವರಿಗಾಗಿ ಪ್ರತಿ ವರ್ಷ 230 ಶತಕೋಟಿ ಕ್ಯೂಬಿಕ್‌ ಮೀಟರ್‌ ಅಂತರ್ಜಲವನ್ನು ಹೊರತೆಗೆಯಲಾಗುತ್ತದೆ. ಆದರೆ ಇದೇ ಪ್ರಮಾಣದಲ್ಲಿ ಮರುಪೂರಣ ಆಗುತ್ತಿಲ್ಲ.

ಇದಕ್ಕೆಲ್ಲ ಕಾರಣಗಳು ನಮಗೆ ಗೊತ್ತೇ ಇದೆ. ಹಸಿರು ಕ್ರಾಂತಿಯ ಹೆಸರಿನಲ್ಲಿ ಅತಿ ನೀರಾವರಿ ಬೆಳೆಗಳ ಬೆಳೆಯುವಿಕೆ ಮತ್ತು ಅದಕ್ಕಾಗಿ ಅಂತರ್ಜಲದ ಅತಿಯಾದ ಬಳಕೆ, ಕೈಗಾರಿಕೆಗಳ ಅವಶ್ಯಕತೆ, ಭೂಕುಸಿತಗಳು- ಸೆಪ್ಟಿಕ್ ಟ್ಯಾಂಕ್‌ಗಳು- ರಸಗೊಬ್ಬರಗಳ ಅತಿಯಾದ ಬಳಕೆಯಿಂದ ಮಾಲಿನ್ಯದ ಸಂದರ್ಭದಲ್ಲಿ ಅಂತರ್ಜಲ ಸಂಪನ್ಮೂಲಗಳ ಹಾನಿ, ಅಸಮರ್ಪಕ ನಿಯಂತ್ರಣ, ಕೊಳವೆ ಬಾವಿಗಳ ಕೊರೆಯುವಿಕೆಗೆ ನಿಯಂತ್ರಣವಿಲ್ಲದಿರುವುದು ಇತ್ಯಾದಿಗಳು ಕಾರಣವಾಗಿವೆ. ಸಂವಿಧಾನದಲ್ಲಿ ʼನೀರುʼ ರಾಜ್ಯದ ವಿಷಯ. ನೀರಿನ ಸಂರಕ್ಷಣೆ ಮತ್ತು ನೀರು ಕೊಯ್ಲು ಸೇರಿದಂತೆ ನೀರಿನ ನಿರ್ವಹಣೆಯ ಉಪಕ್ರಮಗಳು ಮತ್ತು ಪ್ರಜೆಗಳಿಗೆ ಸಾಕಷ್ಟು ಕುಡಿಯುವ ನೀರು ಲಭ್ಯವಾಗುವಂತೆ ಮಾಡುವುದು ಪ್ರಾಥಮಿಕವಾಗಿ ರಾಜ್ಯಗಳ ಜವಾಬ್ದಾರಿ. ಆದರೆ ಯೋಜನೆಗಳಿಗೆ ಹಣಕಾಸು ಸೇರಿದಂತೆ ಪ್ರಮುಖ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ. ಜಲಶಕ್ತಿ ಅಭಿಯಾನ, ಅಟಲ್‌ ಬಹುಜಲ ಯೋಜನೆ ಮುಂತಾದ ಯೋಜನೆಗಳು ಇವೆ. ಆದರೆ ಸಮರ್ಪಕ ಅನುಷ್ಠಾನದ ಕೊರತೆಯಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಜಗತ್ತಿನ ಮೂರನೇ ಬೃಹತ್ ಆರ್ಥಿಕತೆಯ ರಾಷ್ಟ್ರವಾಗುವತ್ತ ಭಾರತ

ಭವಿಷ್ಯದ ತಲೆಮಾರುಗಳಿಗಾಗಿ ನಾವು ಅಂತರ್ಜಲವನ್ನು ಉಳಿಸಿಕೊಳ್ಳಲೇಬೇಕಿದೆ. ʼಪಾನಿ ಪಂಚಾಯತಿʼಗಳ ಪರಿಕಲ್ಪನೆಯ ಮೂಲಕ ಪ್ರಧಾನ ಮಂತ್ರಿಗಳು ನೀರಿನ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಜಲ ಸಂರಕ್ಷಣೆಯನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಬೇಕು. ನೀರಿನ ಸಂರಕ್ಷಣೆಯನ್ನು ಗ್ರಾಮೀಣ ಮಟ್ಟಕ್ಕೆ ವಿಕೇಂದ್ರೀಕರಿಸುವುದು ತುಂಬಾ ಪರಿಣಾಮಕಾರಿ. ಜಲಮೂಲಗಳ ಅತಿಕ್ರಮಣವನ್ನು ನಿರ್ಬಂಧಿಸುವುದು, ಒಳಚರಂಡಿ ಕಾಲುವೆಗಳ ಅಕ್ರಮಕ್ಕೆ ಬಿಡದಿರುವುದು, ಜಲಮೂಲಗಳನ್ನು ಪುನಃಸ್ಥಾಪಿಸುವುದು ಮತ್ತು ಸರಿಯಾಗಿ ನಿರ್ವಹಿಸುವುದು, ಅಂತರ್ಜಲ ಬಳಕೆಗೆ ಶುಲ್ಕ, ಸ್ಪ್ರಿಂಕ್ಲರ್ ಅಥವಾ ಹನಿ ನೀರಾವರಿಯಂತಹ ಸೂಕ್ಷ್ಮ ನೀರಾವರಿ ತಂತ್ರಗಳಿಗೆ ಪ್ರೋತ್ಸಾಹ, ಅಂತರ್ಜಲದ ಕೃತಕ ಮರುಪೂರಣ, ಅಂತರ್ಜಲ ನಿರ್ವಹಣಾ ಸ್ಥಾವರಗಳ ನಿರ್ಮಾಣ, ಮಳೆಕೊಯ್ಲಿಗೆ ಪ್ರೋತ್ಸಾಹ ಮುಂತಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸುವುದರ ಮೂಲಕ ಅಂತರ್ಜಲ ಕೊರತೆಯ ಕಂಟಕವನ್ನು ನೀಗಬಹುದು.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Green Ammonia Export: ಜಪಾನ್‌ಗೆ ಇನ್ನು ಭಾರತದಿಂದ ಹಸಿರು ಅಮೋನಿಯಾ ರಫ್ತು! ಒಪ್ಪಂದಕ್ಕೆ ಸಹಿ

ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಒಂದು ಹೆಜ್ಜೆ ಮುಂದಿರುವ ಭಾರತ ಇದೀಗ ಜಪಾನ್‌ಗೆ ಹಸಿರು ಅಮೋನಿಯಾ ರಫ್ತು (Green Ammonia Export) ಮಾಡಲು ಒಪ್ಪಂದ ಮಾಡಿಕೊಂಡಿದೆ. ನವದೆಹಲಿಯಲ್ಲಿ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಜಪಾನ್‌ಗೆ ಇದೇ ಮೊದಲ ಬಾರಿ ಹಸಿರು ಅಮೋನಿಯ ರಫ್ತು ಯೋಜನೆ ಆಫ್‌ಟೇಕ್ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಾತನಾಡಿದ್ದಾರೆ.

VISTARANEWS.COM


on

Green Ammonia Export
Koo

ನವದೆಹಲಿ: ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಒಂದು ಹೆಜ್ಜೆ ಮುಂದಿರುವ ಭಾರತ ಇದೀಗ ಜಪಾನ್‌ಗೆ ಹಸಿರು ಅಮೋನಿಯಾ ರಫ್ತು (Green Ammonia Export) ಮಾಡಲು ಒಪ್ಪಂದ ಮಾಡಿಕೊಂಡಿದೆ. ನವದೆಹಲಿಯಲ್ಲಿ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಜಪಾನ್‌ಗೆ ಇದೇ ಮೊದಲ ಬಾರಿ ಹಸಿರು ಅಮೋನಿಯ ರಫ್ತು ಯೋಜನೆ ಆಫ್‌ಟೇಕ್ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ವೇಳೆ ಸಚಿವ ಪ್ರಲ್ಹಾದ್‌ ಜೋಶಿ ಮಾತನಾಡಿ, ಜಪಾನ್‌ಗೆ ಹಸಿರು ಅಮೋನಿಯಾ ರಫ್ತು ಮಾಡುವ ಈ ಒಪ್ಪಂದ ಹಸಿರು ಹೈಡ್ರೋಜನ್ ಮತ್ತು ಅಮೋನಿಯಾ ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕನಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ ಎಂದು ತಿಳಿಸಿದರು.

ಇದನ್ನೂ ಓದಿ: KPSC Exams : ಕೆಪಿಎಸ್‌ಸಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಸ್ಪರ್ಧಾತ್ಮಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಭಾರತದಲ್ಲಿ ಹಸಿರು ಅಮೋನಿಯಾ ಉತ್ಪಾದನೆಗೆ ಸೆಂಬ್‌ಕಾರ್ಪ್ ಇಂಡಸ್ಟ್ರೀಸ್ ಮುಂದಾಗಿದ್ದು, ಇದಕ್ಕಾಗಿ ದೇಶದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಳ್ಳುತ್ತದೆ ಎಂದರು. ಜಪಾನ್‌ ತನ್ನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಬಳಕೆಯನ್ನು ಭಾಗಶಃ ಬದಲಾಯಿಸಿ ಹಸಿರು ಅಮೋನಿಯಾ ಬಳಕೆಗೆ ಮುಂದಾಗಿದ್ದು, ಭಾರತ ಹಸಿರು ಅಮೋನಿಯಾ ಪೂರೈಕೆ ಮಾಡುವ ಮೂಲಕ ಜಪಾನ್ ಈ ಕಾರ್ಯಕ್ಕೆ ಸಾಥ್ ನೀಡಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಸಿರು ಜಲಜನಕ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಹಸಿರು ಅಮೋನಿಯಾ ರಫ್ತು ಮಾಡುವ ಜಪಾನ್ ನೊಂದಿಗಿನ ಒಪ್ಪಂದ ನಿದರ್ಶನ ಎಂದು ಹೇಳಿದರು.

7.5 ಲಕ್ಷ ಟಿಪಿಎಗೆ ಟೆಂಡರ್

ಪ್ರಸ್ತುತದಲ್ಲಿ ಗ್ರೀನ್ ಅಮೋನಿಯಾದ 7.5 ಲಕ್ಷ ಟಿಪಿಎಗೆ ಟೆಂಡರ್ ಆಗಿದೆ. 4.5 ಲಕ್ಷ ಟಿಪಿಎ ಸಾಮರ್ಥ್ಯಕ್ಕೆ ಹೆಚ್ಚುವರಿ ಟೆಂಡರ್‌ಗಳನ್ನು ಸಹ ನಿರೀಕ್ಷಿಸಲಾಗಿದೆ ಎಂದು ಸಚಿವ ಜೋಶಿ ತಿಳಿಸಿದರು.

1 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ

ಭಾರತದಲ್ಲಿ ವಾರ್ಷಿಕ ಒಂದು ಮಿಲಿಯನ್ ಟನ್‌ಗಳಷ್ಟು ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ ಹೊಂದಿದ್ದು, ಇದಕ್ಕಾಗಿ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಹಸಿರು ಶಕ್ತಿ ಉತ್ಪಾದನೆಯಲ್ಲಿ ಭಾರತ ತ್ವರಿತ ಮತ್ತು ಅಭೂತಪೂರ್ವ ಸಾಧನೆ ತೋರುತ್ತಿದೆ ಎಂದರು.

ಇದನ್ನೂ ಓದಿ: Kannada New Movie: ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ ಅಭಿನಯದ ʼಆಪರೇಷನ್ ಲಂಡನ್ ಕೆಫೆʼ ಚಿತ್ರದ ಟೀಸರ್ ರಿಲೀಸ್‌

ಭಾರತ, ಜಪಾನ್ ಮತ್ತು ಸಿಂಗಾಪುರ ಈ ಮೂರು ದೇಶಗಳು ಇಂಧನ ದಕ್ಷತೆ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ಮೇಲೆ ಸಹಯೋಗ ಮಾಡುತ್ತಿವೆ ಎಂದು ತಿಳಿಸಿದರು.

Continue Reading

ರಾಜಕೀಯ

TVK Party Flag Unveils: ತಮ್ಮ ರಾಜಕೀಯ ಪಕ್ಷದ ಧ್ವಜ, ಚಿಹ್ನೆ ಅನಾವರಣಗೊಳಿಸಿದ ನಟ ವಿಜಯ್

ತಮಿಳಗ ವೆಟ್ರಿ ಕಳಗಂ ಪಕ್ಷದ ಮೆರೂನ್ (ಕೆಂಗಂದು) ಮತ್ತು ಹಳದಿ ಬಣ್ಣದ ಧ್ವಜವನ್ನು (TVK Party Flag Unveils) ನಟ ವಿಜಯ್ ಅನಾವರಣಗೊಳಿಸಿದರು. ಧ್ವಜದ ಮಧ್ಯದಲ್ಲಿ ಎರಡು ಆನೆಗಳು ಮತ್ತು ನಕ್ಷತ್ರಗಳಿಂದ ಸುತ್ತುವರಿದ ನವಿಲಿನ ಗುರುತು ಇದೆ. ಈ ಧ್ವಜವನ್ನು ಪನೈಯೂರ್ ಪಕ್ಷದ ಕಚೇರಿಯಲ್ಲಿ ವಿಜಯ್ ಧ್ವಜಾರೋಹಣ ಮಾಡಿ ಬಳಿಕ ರಾಜಕೀಯ ಪಕ್ಷದ ಅಧಿಕೃತ ಹಾಡನ್ನು ಬಿಡುಗಡೆ ಮಾಡಲಿದ್ದಾರೆ.

VISTARANEWS.COM


on

By

TVK Party Flag Unveils
Koo

ತಮಿಳು ಚಿತ್ರರಂಗದ (Tamil cinema) ಸೂಪರ್ ಸ್ಟಾರ್ (Super star) ವಿಜಯ್ (actor vijay) ಅವರು ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂನ (Tamizhaga Vetri Kazhagam) ಧ್ವಜ ಮತ್ತು ಚಿಹ್ನೆಯನ್ನು (TVK Party Flag Unveils) ಗುರುವಾರ ಅನಾವರಣಗೊಳಿಸಿದರು.

ಮೆರೂನ್ (ಕೆಂಗಂದು) ಮತ್ತು ಹಳದಿ ಬಣ್ಣವಿರುವ ಧ್ವಜದ ಮಧ್ಯದಲ್ಲಿ ಎರಡು ಆನೆಗಳು ಮತ್ತು ನಕ್ಷತ್ರಗಳಿಂದ ಸುತ್ತುವರಿದ ನವಿಲಿನ ಗುರುತು ಇದೆ. ಈ ಧ್ವಜವನ್ನು ಪನೈಯೂರ್ ಪಕ್ಷದ ಕಚೇರಿಯಲ್ಲಿ ವಿಜಯ್ ಧ್ವಜಾರೋಹಣ ಮಾಡಿ ಬಳಿಕ ರಾಜಕೀಯ ಪಕ್ಷದ ಅಧಿಕೃತ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಫೆಬ್ರವರಿಯಲ್ಲಿ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿ, ತಮಿಳುನಾಡಿನಲ್ಲಿ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದರು. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷವು ಯಾವುದೇ ರಾಜಕೀಯ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ.

ಪಕ್ಷದ ಧ್ವಜ ಮತ್ತು ಚಿಹ್ನೆಯನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದ ವಿಜಯ್, ನೀವೆಲ್ಲರೂ ನಮ್ಮ ಮೊದಲ ರಾಜ್ಯ ಸಮ್ಮೇಳನಕ್ಕಾಗಿ ಕಾಯುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲೇ ನಾನು ಅದನ್ನು ಘೋಷಿಸುತ್ತೇನೆ. ಅದಕ್ಕೂ ಮೊದಲು ನಾನು ಇಂದು ನಮ್ಮ ಪಕ್ಷದ ಧ್ವಜವನ್ನು ಅನಾವರಣ ಮಾಡಿದ್ದೇನೆ. ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ತಮಿಳುನಾಡಿನ ಅಭಿವೃದ್ಧಿಗೆ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ತಮಿಳುನಾಡಿನ ಕಲ್ಯಾಣಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ ಅವರು, ಇನ್ನು ಮುಂದೆ ತಮಿಳುನಾಡು ಉತ್ತಮವಾಗಿರುತ್ತದೆ. ಗೆಲುವು ಖಚಿತ ಎಂದು ತಿಳಿಸಿದ್ದಾರೆ. ಉತ್ತರ ತಮಿಳುನಾಡಿನ ವಿಕ್ರವಾಂಡಿಯಲ್ಲಿ ಸಾರ್ವಜನಿಕರ ದೃಷ್ಟಿಯಲ್ಲಿ ಔಪಚಾರಿಕವಾಗಿ ಪಕ್ಷವನ್ನು ಪ್ರಾರಂಭಿಸಲು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬೃಹತ್ ರಾಲಿಯನ್ನು ನಡೆಸಿ ಧ್ವಜವನ್ನು ಬಹಿರಂಗಪಡಿಸಲಾಗುತ್ತದೆ. ಚುನಾವಣಾ ಆಯೋಗದ ಅಡಿಯಲ್ಲಿ ಪಕ್ಷದ ನೋಂದಣಿ ಮುಂದುವರಿದ ಹಂತದಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಿದರು.


ಇದನ್ನೂ ಓದಿ: Jagan Mohan Reddy: ಬರೀ ಎಗ್‌ ಪಫ್ಸ್‌ಗಾಗಿ ಒಂದಲ್ಲ.. ಎರಡಲ್ಲ ಬರೋಬ್ಬರಿ 3.6 ಕೋಟಿ ರೂ. ವೆಚ್ಚ- ಜಗನ್‌ ಮತ್ತೊಂದು ಹಗರಣ ಬಯಲು

ಧ್ವಜ ಗೀತೆಯನ್ನು ಜನಪ್ರಿಯ ಸಂಗೀತ ನಿರ್ದೇಶಕ ಎಸ್. ಥಮನ್ ಸಂಯೋಜಿಸಿದ್ದು, ಸಾಹಿತ್ಯವನ್ನು ವಿ. ವಿವೇಕ್ ಬರೆದಿದ್ದಾರೆ. ಕಾರ್ಯಕ್ರಮದಲ್ಲಿ ಪಕ್ಷದ 300ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ವಿಜಯ್ ಅವರ ಅಭಿಮಾನಿಗಳ ಸಂಘಗಳ ಸದಸ್ಯರನ್ನು ಆಹ್ವಾನಿಸಲಾಗಿದೆ ಎನ್ನಲಾಗಿದೆ.

Continue Reading

ಕ್ರೀಡೆ

Kolkata Doctor Murder Case: ‘ಖಾಸಗಿ ಅಂಗಕ್ಕೆ ಹೊಡೆದು ಗಲ್ಲಿಗೇರಿಸಿ’; ವೈದ್ಯೆಯ ಅತ್ಯಾಚಾರ, ಕೊಲೆ ಖಂಡಿಸಿ ಕ್ರಿಕೆಟಿಗ ಚಹಲ್​ ಪೋಸ್ಟ್​

Kolkata Doctor Murder Case: ಭಾರತ ತಂಡದ ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಕೂಡ ವೈದ್ಯೆಯ ಅತ್ಯಾಚಾರ, ಕೊಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು.

VISTARANEWS.COM


on

Kolkata Doctor Murder Case
Koo

ಕೊಲ್ಕತ್ತಾ: ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ(Kolkata Doctor Murder Case) ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಈಗಾಗಲೇ ಹಲವು ಕ್ರಿಕೆಟಿಗರು ಮತ್ತು ಸಿನಿಮಾ ನಟ-ನಟಿಯರು ಒತ್ತಾಯಿಸಿದ್ದಾರೆ. ಇದೀಗ ಟೀಮ್​ ಇಂಡಿಯಾದ ಹಿರಿಯ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal)​ ಕೂಡ ಈ ಪ್ರಕರಣದ ವಿರುದ್ಧ ಧ್ವನಿ ಎತ್ತಿದ್ದಾರೆ.

ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿರುವ ಚಹಲ್​, ‘ಈ ಪ್ರಕರಣದ ಆರೋಪಿಯ ಕಾಲನ್ನು 90 ಡಿಗ್ರಿಗಳಲ್ಲಿ ಮುರಿಯಬೇಕು. ಖಾಸಗಿ ಭಾಗಗಳಿಗೆ ಗಾಯ ಮಾಡಿ. ಎಲ್ಲಾ ಭಯಾನಕ ಚಿತ್ರಹಿಂಸೆಗಳನ್ನು ಅನುಭವಿಸುವಂತೆ ಮಾಡಬೇಕು. ಬಳಿಕ ಗಲ್ಲಿಗೇರಿಸಿ’ ಎಂದು ಬರೆದುಕೊಂಡಿದ್ದರು. ಆಕ್ರೋಶಭರಿತ ಪೋಸ್ಟ್​ನಿಂದ ಪ್ರತಿಭಟನಾಕಾರರು ಹಿಂಸಾತ್ಮಕ ಕೃತ್ಯಗಳನ್ನು ಮಾಡುವ ಸಾಧ್ಯತೆ ಇದೆ ಎಂಬ ಭಯದಿಂದ ಚಹಲ್​ ತಾವು ಪೋಸ್ಟ್​ ಮಾಡಿದ ಒಂದು ಗಂಟೆ ಬಳಿಕ ಈ ಪೋಸ್ಟ್​ ಡಿಲೀಟ್​ ಮಾಡಿದ್ದಾರೆ. ಆದರೂ ಕೆಲ ನೆಟ್ಟಿಗರು ಈ ಪೋಸ್ಟ್​ನ ಸ್ಕ್ರೀನ್ ಶಾಟ್ ತೆಗೆದಿದ್ದಾರೆ. ಈ ಪೋಸ್ಟ್​ ಇದೀಗ ವೈರಲ್​ ಆಗುತ್ತಿದೆ. ಚಹಲ್ ಅವರ ಈ ಪೋಸ್ಟ್​ಗೆ ಹಲವರು ಬೆಂಬಲ ಸೂಚಿಸಿದ್ದಾರೆ.


ಭಾರತ ತಂಡದ ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಕೂಡ ವೈದ್ಯೆಯ ಅತ್ಯಾಚಾರ, ಕೊಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಬುಧವಾರ ಗಂಗೂಲಿ ಅವರ ಪತ್ನಿ ಡೊನ್ನಾ ಅವರ ನೃತ್ಯ ಶಾಲೆ ದೀಕ್ಷಾ ಮಂಜರಿಯಿಂದ ಪ್ರತಿಭಟನಾ ರ್ಯಾಲಿ ಆಯೋಜಿಸಿತ್ತು. ಇದರಲ್ಲಿ ಗಂಗೂಲಿ ಕೂಡ ಪಾಲ್ಗೊಂಡಿದ್ದರು.

ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, “ದೇಶದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಬದಲಾವಣೆಯಾಗಲು ಮತ್ತೊಂದು ಅತ್ಯಾಚಾರ ಪ್ರಕರಣಕ್ಕಾಗಿ ದೇಶ ಕಾಯಲು ಸಾಧ್ಯವಿಲ್ಲ” ಎಂದು ಕಟುವಾಗಿ ಹೇಳಿದ್ದರು. ಅಸ್ತಿತ್ವದಲ್ಲಿರುವ ಕಾಯ್ದೆಗಳು ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸಾಂಸ್ಥಿಕ ಸುರಕ್ಷತಾ ಮಾನದಂಡಗಳನ್ನು ಖಾತರಿಪಡಿಸುವುದಿಲ್ಲ. ಪುರುಷಪ್ರಭುತ್ವದಿಂದಾಗಿ ಮಹಿಳಾ ವೈದ್ಯರೇ ಹೆಚ್ಚು ಗುರಿಯಾಗುತ್ತಿದ್ದಾರೆ ಎಂದು ಸಿಜೆಐ ಚಂದ್ರಚೂಡ್ ಗಮನಿಸಿದ್ದರು.

ಇದನ್ನೂ ಓದಿ Sourav Ganguly : ಕೊಲೆಗಡುಕರಿಗೆ ಈ ರೀತಿ ಮಾಡಿ; ಕೋಲ್ಕೊತಾ ವೈದ್ಯೆಯ ಅತ್ಯಾಚಾರ, ಕೊಲೆ ಬಗ್ಗೆ ಸೌರವ್​ ಗಂಗೂಲಿ ಅಭಿಪ್ರಾಯ ಹೀಗಿತ್ತು

ಪ್ರತಿಭಟಿಸುವ ವೈದ್ಯರ ಮೇಲೆ ನಿಮ್ಮ ಅಧಿಕಾರವನ್ನು ಪ್ರದರ್ಶಿಸಬೇಡಿ ಎಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೇಳಿದೆ. ಕೋರ್ಟ್‌ ವೈದ್ಯರಿಗೆ ಕೆಲಸವನ್ನು ಪುನರಾರಂಭಿಸಲು ಕೇಳಿದೆ. ವೈದ್ಯರ ಕಳವಳವನ್ನು ಅತ್ಯಂತ ಪ್ರಾಮುಖ್ಯತೆಯೊಂದಿಗೆ ಸ್ವೀಕರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದ್ದು, ಕಾರ್ಯಪಡೆಯು ತನ್ನ ಮಧ್ಯಂತರ ವರದಿಯನ್ನು ಮೂರು ವಾರಗಳಲ್ಲಿ ಮತ್ತು ಅಂತಿಮ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸಲಿದೆ ಎಂದು ಹೇಳಿದೆ.

ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲರು ಸೇರಿದಂತೆ ಶಂಕಿತರನ್ನು ಸಿಬಿಐ ತನಿಖೆಗೊಳಪಡಿಸಿದೆ. ನಿನ್ನೆ ಮುಂಜಾನೆ ಪ್ರಕರಣದ ಹಲವಾರು ಶಂಕಿತರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಯಿಂದ ಸರಣಿ ತನಿಖೆಗೆ ಒಳಗಾದರು. ಸುಪ್ರೀಂ ಕೋರ್ಟ್ ಪ್ರಕರಣವನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದು, ಆಗಸ್ಟ್ 22ರೊಳಗೆ ತನಿಖೆಯ ಸ್ಥಿತಿಗತಿಯ ವರದಿಯನ್ನು ಸಲ್ಲಿಸುವಂತೆ ಏಜೆನ್ಸಿಯನ್ನು ಕೇಳಿದೆ.

Continue Reading

ಸಿನಿಮಾ

Kangana Ranaut: ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಚಿತ್ರಕ್ಕೆ ನಿಷೇಧ ಹೇರಲು ಸಿಖ್ಖರ ಒತ್ತಾಯ

ಕಂಗನಾ ರಣಾವತ್ (Kangana Ranaut) ಅಭಿನಯದ ಎಮರ್ಜೆನ್ಸಿ ಚಿತ್ರದ ಬಿಡುಗಡೆಯಾದ ಆಯ್ದ ಭಾಗಗಳಲ್ಲಿ ಉದ್ದೇಶಪೂರ್ವಕವಾಗಿ ಸಿಖ್ಖರ ಪಾತ್ರವನ್ನು ಪ್ರತ್ಯೇಕತಾವಾದಿಗಳೆಂದು ತಪ್ಪಾಗಿ ನಿರೂಪಿಸಲಾಗಿದೆ. ಇದು ಆಳವಾದ ಪಿತೂರಿಯ ಭಾಗವಾಗಿದೆ. 1984ರ ಜೂನ್ ನಲ್ಲಿ ಹುತಾತ್ಮರಾದವರ ಬಗ್ಗೆ ಸಿಖ್ ವಿರೋಧಿ ನಿರೂಪಣೆಯನ್ನು ರಚಿಸುವ ಮೂಲಕ ಸಮುದಾಯವನ್ನು ಅಗೌರವಿಸುವ “ಹೇಯ ಕೃತ್ಯ” ಇದಾಗಿದೆ ಎಂದು ಸಿಖ್ಖ್ ಸಮುದಾಯ ಆರೋಪಿಸಿದೆ.

VISTARANEWS.COM


on

By

Kangana Ranaut
Koo

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ (Kangana Ranaut) ಅಭಿನಯದ ‘ಎಮರ್ಜೆನ್ಸಿ’ (Emergency) ಚಿತ್ರದ ಟ್ರೇಲರ್ ಬಿಡುಗಡೆ ಬಳಿಕ ಚಿತ್ರಕ್ಕೆ ನಿಷೇಧ (ban for the movie) ಹೇರುವಂತೆ ಸಿಖ್ಖರ ಅಕಾಲ್ ತಖ್ತ್‌ ಮತ್ತು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (SGPC) ಬೇಡಿಕೆಯಿಟ್ಟಿದೆ. ಈ ಚಿತ್ರದಲ್ಲಿ ಸಿಖ್ಖರ ತೇಜೋವಧೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಚಿತ್ರದಲ್ಲಿ ಕಂಗನಾ ರಣಾವತ್, ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿ ಚಿತ್ರವನ್ನು ನಿರ್ಮಿಸಲಾಗಿದೆ. ಕಂಗನಾ ಅವರು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯಾಗಿ ಕಾಣಿಸಿಕೊಂಡಿದ್ದಾರೆ.

ಇಂದಿರಾ ಅವರು ರಾಜಕೀಯಕ್ಕೆ ಪ್ರವೇಶಿಸಿದಾಗ ಅವರ ತಂದೆ ಪ್ರಧಾನಿ ಜವಾಹರಲಾಲ್ ನೆಹರು ಅವರೊಂದಿಗಿನ ಬಾಂಧವ್ಯವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಬಳಿಕ ಇಂದಿರಾ ಅವರ ಸುದೀರ್ಘ ವೃತ್ತಿಜೀವನದ ಘರ್ಷಣೆಗಳು, ರಾಜಕೀಯ ಪ್ರಕ್ಷುಬ್ಧತೆ ಮತ್ತು ಇತರ ಸಮಸ್ಯೆಗಳನ್ನು ಪ್ರತಿಬಿಂಬಿಸಿದೆ.

ಎಸ್‌ಜಿಪಿಸಿ ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಂಗನಾ ರಣಾವತ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿದರು.

ಚಿತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿಸಿರುವ ಅಕಾಲ್ ತಖ್ತ್‌ನ ಜಥೇದಾರ್ (ಮುಖ್ಯಸ್ಥ) ಗ್ಯಾನಿ ರಘ್‌ಬೀರ್ ಸಿಂಗ್, ಚಿತ್ರದ ಬಿಡುಗಡೆಯ ಆಯ್ದ ಭಾಗಗಳಲ್ಲಿ ಉದ್ದೇಶಪೂರ್ವಕವಾಗಿ ಸಿಖ್ಖರ ಪಾತ್ರವನ್ನು ಪ್ರತ್ಯೇಕತಾವಾದಿಗಳೆಂದು ತಪ್ಪಾಗಿ ನಿರೂಪಿಸಿರುವುದು ಸ್ಪಷ್ಟವಾಗಿದೆ, ಇದು ಆಳವಾದ ಪಿತೂರಿಯ ಭಾಗವಾಗಿದೆ. 1984ರ ಜೂನ್ ನಲ್ಲಿ ಹುತಾತ್ಮರಾದವರ ಬಗ್ಗೆ ಸಿಖ್ ವಿರೋಧಿ ನಿರೂಪಣೆಯನ್ನು ರಚಿಸುವ ಮೂಲಕ ಸಮುದಾಯವನ್ನು ಅಗೌರವಿಸುವ “ಹೇಯ ಕೃತ್ಯ” ಇದಾಗಿದೆ ಎಂದು ಹೇಳಿದ್ದಾರೆ.


ಜೂನ್ 1984 ರ ಸಿಖ್ ವಿರೋಧಿ ಕ್ರೌರ್ಯವನ್ನು ಸಮುದಾಯವು ಎಂದಿಗೂ ಮರೆಯಲು ಸಾಧ್ಯವಿಲ್ಲ ಮತ್ತು ರಣಾವತ್ ಅವರ ಚಲನಚಿತ್ರವು ಅಕಾಲ್ ತಖ್ತ್ ಸಾಹಿಬ್ ಅವರಿಂದ ಕ್ವಾಮಿ ಶಾಹೀದ್ (ಸಮುದಾಯದ ಹುತಾತ್ಮ) ಎಂದು ಘೋಷಿಸಲ್ಪಟ್ಟ ಜರ್ನೈಲ್ ಸಿಂಗ್ ಖಾಲ್ಸಾ ಭಿಂದ್ರನ್‌ವಾಲೆಯ ಪಾತ್ರವನ್ನು ಹತ್ಯೆ ಮಾಡಲು ಪ್ರಯತ್ನಿಸಿದೆ ಎಂದು ಹೇಳಿದರು.

ಸಿಖ್ ವಿರೋಧಿ ಮತ್ತು ಪಂಜಾಬ್ ವಿರೋಧಿ ಹೇಳಿಕೆಗಳಿಂದ ವಿವಾದದಲ್ಲಿ ಉಳಿದಿರುವ ರಣಾವತ್ ಅವರು ಸಿಖ್ಖರನ್ನು “ಉದ್ದೇಶಪೂರ್ವಕವಾಗಿ ಪಾತ್ರ ಹತ್ಯೆ” ಮಾಡುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದನ್ನು ಸಮುದಾಯವು ಸಹಿಸುವುದಿಲ್ಲ ಎಂದು ಧಾಮಿ ತಿಳಿಸಿದ್ದಾರೆ.

ರಣಾವತ್ ಅವರು ಸಿಖ್ಖರ ಭಾವನೆಗಳನ್ನು ಕೆರಳಿಸುವ ಹೇಳಿಕೆಗಳನ್ನು ಆಗಾಗ್ಗೆ ಉದ್ದೇಶಪೂರ್ವಕವಾಗಿ ನೀಡುತ್ತಿದ್ದಾರೆ. ಆದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸರ್ಕಾರವು ಅವಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

ತುರ್ತು ಪರಿಸ್ಥಿತಿ ಚಿತ್ರದ ಮೂಲಕ ಸಿಖ್ಖರ ಧಾರ್ಮಿಕ ಭಾವನೆಗಳನ್ನು ಕೆರಳಿಸಿರುವ ಲೋಕಸಭಾ ಸಂಸದರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಚಿತ್ರವು “ಸಿಖ್ ಸಮುದಾಯದಲ್ಲಿ ಸಾಕಷ್ಟು ಕೋಪ ಮತ್ತು ಅಸಮಾಧಾನವನ್ನು ಉಂಟುಮಾಡಬಹುದು” ಎಂದು ಹೇಳಿರುವ ಧಾಮಿ, ಸಿಖ್ ಪಾತ್ರಗಳನ್ನು ತಪ್ಪಾಗಿ ಚಿತ್ರಿಸುವುದರಿಂದ ಮತ್ತು ಚಲನಚಿತ್ರಗಳಲ್ಲಿ ಧಾರ್ಮಿಕ ಕಾಳಜಿಯನ್ನು ಕಡೆಗಣಿಸುವುದರಿಂದ ಸಿಖ್ ಭಾವನೆಗಳಿಗೆ ಧಕ್ಕೆ ಉಂಟಾದ ಹಲವಾರು ನಿದರ್ಶನಗಳು ಈ ಹಿಂದೆ ನಡೆದಿವೆ ಎಂದು ಹೇಳಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರು ಕೂಡಲೇ ಚಿತ್ರದ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿರುವ ಅವರು, ಇನ್ನು ಮುಂದೆ ಸಿಖ್ ವಿರೋಧಿ ಭಾವನೆಯುಳ್ಳ ಯಾವುದೇ ಚಿತ್ರ ಬಿಡುಗಡೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಅಧ್ಯಕ್ಷರು, ಸಿಖ್ ಸದಸ್ಯರನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಲ್ಲಿ (CBFC) ಸೇರಿಸಿಕೊಳ್ಳಲು ಕರೆ ನೀಡಿದ ಅವರು ಸಿಖ್ ಸದಸ್ಯರ ಅನುಪಸ್ಥಿತಿಯಿಂದಾಗಿ ಪಕ್ಷಪಾತದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಆತನ ಬದುಕು ಆತನ ಸಿನೆಮಾ ಕಥೆಗಳಿಗಿಂತ ರೋಚಕ!

ಸಿಬಿಎಫ್‌ಸಿಯಲ್ಲಿ ಸಿಖ್ಖರ ಪ್ರತಿನಿಧಿಯನ್ನು ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಎಸ್‌ಜಿಪಿಸಿ ಹಲವಾರು ಬಾರಿ ತನ್ನ ಸಾಮಾನ್ಯ ಸಭೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸಿದೆ. ಆದರೆ ಸರ್ಕಾರವು ಬೇಡಿಕೆಯನ್ನು ಈಡೇರಿಸುತ್ತಿಲ್ಲ ಎಂದು ಅವರು ಹೇಳಿದರು.

ಭಾರತೀಯ ಪ್ರಜಾಪ್ರಭುತ್ವದಲ್ಲಿ ಮಹತ್ವದ ಮತ್ತು ವಿವಾದಾತ್ಮಕ ಅವಧಿಯನ್ನು ಪರಿಶೋಧಿಸುವ ಚಿತ್ರ ಎಮರ್ಜೆನ್ಸಿ 2024ರ ಸೆಪ್ಟೆಂಬರ್ 6ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Continue Reading
Advertisement
Green Ammonia Export
ದೇಶ4 mins ago

Green Ammonia Export: ಜಪಾನ್‌ಗೆ ಇನ್ನು ಭಾರತದಿಂದ ಹಸಿರು ಅಮೋನಿಯಾ ರಫ್ತು! ಒಪ್ಪಂದಕ್ಕೆ ಸಹಿ

TVK Party Flag Unveils
ರಾಜಕೀಯ10 mins ago

TVK Party Flag Unveils: ತಮ್ಮ ರಾಜಕೀಯ ಪಕ್ಷದ ಧ್ವಜ, ಚಿಹ್ನೆ ಅನಾವರಣಗೊಳಿಸಿದ ನಟ ವಿಜಯ್

Viral Video
Latest14 mins ago

Viral Video: ಅಪ್ಪ-ಮಗನ ಗುದ್ದಾಟದಿಂದ ಮೂವರು ಅಮಾಯಕರ ಸ್ಥಿತಿ ಗಂಭೀರ!

Neeraj Chopra
ಕ್ರಿಕೆಟ್29 mins ago

Neeraj Chopra: ಬ್ರ್ಯಾಂಡ್ ಮೌಲ್ಯದಲ್ಲಿ ಹಾರ್ದಿಕ್​ ಪಾಂಡ್ಯ ಹಿಂದಿಕ್ಕಿದ ನೀರಜ್​ ಚೋಪ್ರಾ

cylinder blast
ಬೆಂಗಳೂರು42 mins ago

Gas Cylinder Blast: ಸಿಲಿಂಡರ್‌ ಸ್ಫೋಟಕ್ಕೆ ಸುಟ್ಟುಕರಕಲಾದ ವ್ಯಕ್ತಿ; ಮನೆ ಗೋಡೆ ಬಿದ್ದು ಮಕ್ಕಳು ಗಾಯ

DCM DK Shivakumar
ಪ್ರಮುಖ ಸುದ್ದಿ43 mins ago

DK Shivakumar: ಡಿಕೆ ಶಿವಕುಮಾರ್‌ಗೆ ಇಂದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟೀಸ್

Kannada New Movie
ಬೆಂಗಳೂರು48 mins ago

Kannada New Movie: ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ ಅಭಿನಯದ ʼಆಪರೇಷನ್ ಲಂಡನ್ ಕೆಫೆʼ ಚಿತ್ರದ ಟೀಸರ್ ರಿಲೀಸ್‌

Kalki 2898 AD
ಸಿನಿಮಾ55 mins ago

Kalki 2898AD: ಎರಡು ಪ್ರಮುಖ ಒಟಿಟಿಗಳಲ್ಲಿ ಹಲವು ಭಾಷೆಗಳಲ್ಲಿ ಲಗ್ಗೆ ಇಟ್ಟ ಕಲ್ಕಿ 2898 ಎಡಿ!

murder case
ಚಿಕ್ಕಮಗಳೂರು1 hour ago

Murder Case : ಆಸ್ತಿಗಾಗಿ ಸಹೋದರನ ಕಣ್ಣಿಗೆ ಖಾರದ ಪುಡಿ ಎರಚಿ, ಕೊಚ್ಚಿ ಸಾಯಿಸಿದ ರಾಕ್ಷಸಿ ಸಹೋದರಿಯರು!

Kolkata Doctor Murder Case
ಕ್ರೀಡೆ2 hours ago

Kolkata Doctor Murder Case: ‘ಖಾಸಗಿ ಅಂಗಕ್ಕೆ ಹೊಡೆದು ಗಲ್ಲಿಗೇರಿಸಿ’; ವೈದ್ಯೆಯ ಅತ್ಯಾಚಾರ, ಕೊಲೆ ಖಂಡಿಸಿ ಕ್ರಿಕೆಟಿಗ ಚಹಲ್​ ಪೋಸ್ಟ್​

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌