Rain news: ಚಾರ್ಮಾಡಿ ಘಾಟಿಯಲ್ಲಿ ಮಳೆಗೆ ಸಿಲುಕಿಕೊಂಡ ನೂರಾರು ಪ್ರಯಾಣಿಕರು - Vistara News

ಮಳೆ

Rain news: ಚಾರ್ಮಾಡಿ ಘಾಟಿಯಲ್ಲಿ ಮಳೆಗೆ ಸಿಲುಕಿಕೊಂಡ ನೂರಾರು ಪ್ರಯಾಣಿಕರು

Rain news: ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ನೂರಾರು ಪ್ರಯಾಣಿಕರು ಮಳೆಗೆ ಸಿಕ್ಕಿಹಾಕಿಕೊಂಡರು. ತುಮಕೂರು ಮುಂತಾದ ಕಡೆ ಮಳೆ ಹಾವಳಿ ಎಬ್ಬಿಸಿದೆ.

VISTARANEWS.COM


on

rain news charamadi ghat traffic jam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಮಗಳೂರು: ಚಿಕ್ಕಮಗಳೂರು- ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ (Charmadi Ghat) ಹೆದ್ದಾರಿಯಲ್ಲಿ (Highway) ಮಳೆಯ ಪರಿಣಾಮ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಹಾಳಾಗಿ ನಿಂತುದರಿಂದ ನೂರಾರು ಪ್ರಯಾಣಿಕರು ಮಳೆಯಲ್ಲಿ (Rain news) ಸಿಲುಕಿಕೊಂಡು ಪಾಡು ಪಟ್ಟಿದ್ದಾರೆ. ನಿನ್ನೆ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ದಾರಿ ಕಾಣದೆ ವಾಹನ ಸವಾರರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದುದರಿಂದ ಟ್ರಾಫಿಕ್‌ ಜಾಮ್‌ (Traffic jam) ಉಂಟಾಯಿತು. ಜೊತೆಗೆ ಎರಡು ಕೆಎಸ್‌ಆರ್‌ಟಿಸಿ ಬಸ್ಸುಗಳು ಕೆಟ್ಟು ನಿಂತ ಪರಿಣಾಮ, ವಾಹನಗಳು ಅತ್ತಿತ್ತ ಹೋಗಲಾಗದೆ ಪ್ರಯಾಣಿಕರು ಬವಣೆ ಅನುಭವಿಸಿದರು.

ಚಾರ್ಮಾಡಿ ಘಾಟಿನ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಮಳೆಯ ನಡುವೆ KSRTC ಬಸ್ಸುಗಳೆರಡು ಕೆಟ್ಟು ರಸ್ತೆ ಮಧ್ಯದಲ್ಲಿ ನಿಂತವು. ಬಸ್ಸುಗಳು ಕೆಟ್ಟು ನಿಂತ ಪರಿಣಾಮ ಕಿಲೋಮೀಟರ್‌ಗಳಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಯಿತು. ಹೀಗಾಗಿ ಬೆಳಗಿನ ಜಾವದಿಂದ ನೂರಾರು ವಾಹನಗಳು ನಿಂತಲ್ಲೇ ನಿಂತವು. ನಿರಂತರ ಮಳೆಯಲ್ಲಿ ಪ್ರಯಾಣಿಕರು ಬಾಕಿಯಾದರು. ಮಂಗಳೂರಿಗೆ ರೋಗಿಯನ್ನು ಒಯ್ಯುತ್ತಿದ್ದ ಒಂದು ಆಂಬ್ಯುಲೆನ್ಸ್ ಟ್ರಾಫಿಕ್ ನಡುವೆ ಸಿಲುಕಿಕೊಂಡಿತು. ಟ್ರಾಫಿಕ್ ಕ್ಲಿಯರ್ ಮಾಡಲು ಬಣಕಲ್, ಮೂಡಿಗೆರೆ ಪೊಲೀಸರು ಹರಸಾಹಸಪಟ್ಟರು.

ಚಿಕ್ಕಮಗಳೂರು ಜಿಲ್ಲೆಯ ಹಲವಡೆ ಮಳೆಯ ಆರ್ಭಟ ಮುಂದುವರಿದಿದೆ. ಚಿಕ್ಕಮಗಳೂರು, ಕೊಪ್ಪ, ಕಡೂರು, ಕಳಸಾಪುರ, ಪಂಚನಹಳ್ಳಿ, ಬೀರೂರು, ಶಿವನಿ, ಬೆಳವಾಡಿ, ಮೂಡಿಗೆರೆ, ಹಿರೇನಲ್ಲೂರು, ಚಿಕ್ಕನಲ್ಲೂರು, ಭಾಗದಲ್ಲಿ ಭಾರಿ ಮಳೆಯಾಗಿದ್ದು, ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ಸ್ಥಗಿತವಾಗಿದೆ.

ಚಿಕ್ಕಮಗಳೂರು ತಾಲೂಕಿನ ಈಶ್ವರಹಳ್ಳಿ ಗ್ರಾಮದಲ್ಲಿ ರೈತ ಬಸವರಾಜು ಎಂಬವರಿಗೆ ಸೇರಿದ 4 ಎಕರೆ ಬಾಳೆ ತೋಟ ಭಾರಿ ಗಾಳಿ ಮಳೆಗೆ ನೆಲಕಚ್ಚಿದೆ. ಕೇವಲ ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರಬೇಕಿದ್ದ ಬೆಳೆ ನಾಶವಾಗಿದ್ದು, ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗಿ ರೈತ ಕಂಗಾಲಾಗಿದ್ದಾರೆ

ಚಿಕ್ಕಮಗಳೂರಿನ ಬಯಲು ಸೀಮೆ ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಭಾರಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ರಾತ್ರಿಯಿಡೀ ಸುರಿದ ಮಳೆಗೆ ಹೊಂಗೆ ಹಳ್ಳ ಉಕ್ಕಿ ಹರಿಯುತ್ತಿದ್ದು, ಅಜ್ಜಂಪುರ ತಾಲೂಕಿನ ಐತಿಹಾಸಿಕ ಶಿವನಿ ಕೆರೆಗೆ ಭಾರಿ ಪ್ರಮಾಣದ ನೀರು ಬಂದಿದೆ. ಹೊಂಗೆ ಹಳ್ಳದ ಸುತ್ತಮುತ್ತಲಿನ ಕೆಲವು ತೋಟಗಳು ಜಲಾವೃತವಾಗಿವೆ. ಸೇತುವೆ ರಸ್ತೆಯ ಮೇಲೆ ಹಳ್ಳದ ನೀರು ಹರಿಯಿತು.

ದೇವಾಲಯದ ಶಿಖರಕ್ಕೆ ಸಿಡಿಲು

ಯಾದಗಿರಿ: ಜಿಲ್ಲೆಯ ದೋರನಹಳ್ಳಿ ಗ್ರಾಮದ ಶ್ರೀ ಪರಮಾನಂದೇಶ್ವರ ದೇವಸ್ಥಾನದ ಶಿಖರಕ್ಕೆ ಸಿಡಿಲು ಅಪ್ಪಳಿಸಿದ್ದು, ಮೇಲ್ಭಾಗದಿಂದ ಕೆಳಭಾಗದವರಗೆ ಹಾನಿಯಾಗಿದೆ. ದೇವಸ್ಥಾನದಲ್ಲಿ ಮಲಗಿದ್ದ ವೃದ್ಧೆ ಅಪಾಯದಿಂದ ಪಾರಾಗಿದ್ದಾರೆ.

ತುಮಕೂರು: ತುಮಕೂರು ‌ಜಿಲ್ಲೆಯಲ್ಲಿ‌ ತಡರಾತ್ರಿ ಮಳೆ ಅಬ್ಬರಕ್ಕೆ ಹೆಚ್ ಬೈರಾಪುರ ಗ್ರಾಮದ ಎರಡು ಸೇತುವೆಗಳು ಸಂಪೂರ್ಣ ಜಲಾವೃತವಾಗಿವೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೆಚ್ ಬೈರಾಪುರ ಗ್ರಾಮದ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡಿದರು.

rain news tumkur

ತುಮಕೂರು ಜಿಲ್ಲೆಯ ಶಿರಾ ನಗರದ 18ನೇ ವಾರ್ಡ್‌ನ ಕೆಲ ಮನೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿದೆ. ವಾಣಿಜ್ಯ ಮಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿದ್ದು, ಮನೆಯೊಳಗಿದ್ದ ಅಪಾರ ಪ್ರಮಾಣದ ಧವಸ ಧಾನ್ಯ, ಪೀಠೋಪಕರಣಗಳು ನೀರು ಪಾಲಾಗಿವೆ. ಶಿರಾ ನಗರಸಭೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ 18ನೇ ವಾರ್ಡ್ ಜನ ಆಕ್ರೋಶಿಸಿದ್ದಾರೆ.

ಮಗುಚಿದ ಬೋಟ್‌, ಪ್ರಯಾಣಿಕರ ರಕ್ಷಣೆ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಸಮೀಪ ಪ್ರವಾಸಿ ಬೋಟ್ ಪಲ್ಟಿಯಾಗಿದ್ದು, ಸಮುದ್ರದ ಹಿನ್ನೀರಿನಲ್ಲಿ ಮಗುಚಿದ ಪ್ರವಾಸಿಗರ ಬೋಟ್‌ನಿಂದ 40 ಪ್ರವಾಸಿಗರನ್ನು ರಕ್ಷಣೆ ಮಾಡಲಾಯಿತು.

Tourist boat capsizes

ಅಳಿವೆ ಸಂಗಮ ಸ್ಥಳದಿಂದ ತುಸು ದೂರದಲ್ಲಿ ಘಟನೆ ನಡೆದಿದ್ದು, ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ರಕ್ಷಣಾ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು. ಮೂಡಂಗಿಯ ಗಣೇಶ, ರಮೇಶ ಎನ್ನುವವರಿಗೆ ಸೇರಿದ ಪ್ರವಾಸಿ ಬೋಟ್ ಇದಾಗಿದ್ದು, ನಿಗದಿಗಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿ ಹತ್ತಿಸಿಕೊಂಡಿದ್ದರಿಂದ ಮಗುಚಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Karnataka Weather : ವರ್ಷಾಘಾತಕ್ಕೆ ಜನ ಸುಸ್ತು; ಮಳೆಯಾಟಕ್ಕೆ ಬಿರುಗಾಳಿ ಸಾಥ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

Bangalore Rain: ಬೆಂಗಳೂರಿನಲ್ಲಿ ಕೆ.ಆರ್. ಸರ್ಕಲ್ ಅಂಡರ್ ಪಾಸ್ ದುರಂತದ ಬಳಿಕ ಮತ್ತೊಂದು ದುರಂತ ತಪ್ಪಿದೆ. ಶೇಷಾದ್ರಿಪುರಂ ಅಂಡರ್ ಪಾಸ್‌ನ ನೀರಿನಲ್ಲಿ ಬಿಎಂಟಿಸಿ ಬಸ್ ಸಿಲುಕಿದ್ದು, 20 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಹಲವೆಡೆ ಭಾರಿ ಮಳೆಯಿಂದ ಹತ್ತಾರು ಮರಗಳು ಧರೆಗುರುಳಿದ್ದು, ಹಲವು ವಾಹನಗಳು ಜಖಂಗೊಂಡಿವೆ.

VISTARANEWS.COM


on

Bangalore Rain
Koo

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿಯೂ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಬಿರುಗಾಳಿ, ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ಇನ್ನು ಕೆಲವು ಕಡೆ ಬೃಹತ್‌ ಮರಗಳು ನೆಲಕ್ಕುರುಳಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು.

ತಪ್ಪಿದ ಮತ್ತೊಂದು ದುರಂತ

ಕೆ.ಆರ್. ಸರ್ಕಲ್ ಅಂಡರ್ ಪಾಸ್ ದುರಂತದ ಬಳಿಕ ಮತ್ತೊಂದು ದುರಂತ ತಪ್ಪಿದೆ. ಶೇಷಾದ್ರಿಪುರಂ ಅಂಡರ್ ಪಾಸ್‌ನ ನೀರಿನಲ್ಲಿ ಬಿಎಂಟಿಸಿ ಬಸ್ ಸಿಲುಕಿದ್ದು, 20 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ ಮುಂದೆ ಮೂವ್ ಆಗ್ತಿದ್ದಂತೆ, ಅಪಾಯದ ಮುನ್ಸೂಚನೆ ಅರಿತು ಬಸ್ ಚಾಲಕ ಅಲ್ಲೇ ನಿಲ್ಲಿಸಿದ್ದಾರೆ. ನಂತರ ಬಸ್‌ನಲ್ಲಿದ್ದವರನ್ನು ಸ್ಥಳೀಯ ವ್ಯಕ್ತಿ ಮಣಿಕಂಠ ಹೊರ ಕರೆತಂದಿದ್ದಾರೆ. ಓರ್ವ ವೃದ್ಧೆ, ಇಬ್ಬರು ಮಹಿಳೆಯರು, ಮಗುವನ್ನು ಬಸ್‌ನಿಂದ ರಕ್ಷಣೆ ಮಾಡಲಾಗಿದೆ.

ಅಂಡರ್‌ಪಾಸ್‌ನಲ್ಲಿ ನೀರಿಗೆ ಬಿದ್ದ ಇಬ್ಬರು ಯುವಕರು

ಬಿರುಸಿನ ಮಳೆಯಿಂದ ಕೋರಮಂಗಲ, ಮಡಿವಾಳ, ವಿಲ್ಸನ್ ಗಾರ್ಡನ್, ಡೈರಿ ಸರ್ಕಲ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು K.R. ಸರ್ಕಲ್ ಅಂಡರ್ ಪಾಸ್‌ನಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ಬ್ಯಾರಿಕೇಡ್ ಹಾಕಿ ಮುಚ್ಚಲಾಗಿತ್ತು. ಹೆಚ್ಚು ನೀರು ಇರುವುದು ತಿಳಿಯದೇ ಬೈಕ್‌ನಲ್ಲಿ ವೇಗವಾಗಿ ಬಂದ ಇಬ್ಬರು ಯುವಕರು ನೀರಿಗೆ ಬಿದ್ದಿದ್ದು, ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.‌

ಮೆಟ್ರೋ ವಯಡಕ್ಟ್ ಮೇಲೆ ಬಿದ್ದ ಮರ

ಸಂಜೆ ಭಾರಿ ಮಳೆಯಿಂದಾಗಿ ಎಂಜಿ ರಸ್ತೆ ಮತ್ತು ಟ್ರಿನಿಟಿ ರೋಡ್‌ ನಿಲ್ದಾಣದ ನಡುವಿನ ವಯಡಕ್ಟ್ ಟ್ರ್ಯಾಕ್‌ನಲ್ಲಿ ಮರ ಬಿದ್ದ ಹಿನ್ನೆಲೆಯಲ್ಲಿ ಎಂಜಿ ರಸ್ತೆ ಮತ್ತು ಇಂದಿರಾನಗರ ನಡುವೆ ರೈಲು ಸೇವೆ ಸ್ಥಗಿತಗೊಂಡಿದೆ. ಆದರೆ, ಇಂದಿರಾನಗರ ಮತ್ತು ವೈಟ್‌ಫೀಲ್ಡ್ ನಡುವೆ ಶಾರ್ಟ್ ಲೂಪ್‌ಗಳು ಚಾಲನೆಯಲ್ಲಿವೆ. ಚಲ್ಲಘಟ್ಟ ಮತ್ತು ಎಂಜಿ ರೋಡ್ ನಡುವೆ
ಉಂಟಾದ ಅನನುಕೂಲತೆ ಬಗ್ಗೆ ಬಿಎಂಆರ್‌ಸಿಎಲ್‌ ವಿಷಾದ ವ್ಯಕ್ತಪಡಿಸಿದೆ.

ನಗರದ ಬನಶಂಕರಿ, ಕುಮಾರಸ್ವಾಮಿ ಲೇಔಟ್, ಎಳಚೇನಹಳ್ಳಿ, ಉತ್ತರಹಳ್ಳಿ, ಪದ್ಮನಾಭ ನಗರ, ಜಯನಗರ, ಪೀಣ್ಯ, ಬನ್ನೇರುಘಟ್ಟ ರಸ್ತೆ, ಮಲ್ಲೇಶ್ವರ, ರೇಸ್ ಕೋರ್ಸ್, ವಿಜಯನಗರ, ಶಾಂತಿನಗರ, ಎಂಜಿ ರೋಡ್, ಕೆ.ಆರ್ ಸರ್ಕಲ್, ಚಾಲುಕ್ಯ ಸರ್ಕಲ್ ಸೇರಿದಂತೆ ಹಲವು ಕಡೆ ಬಿರುಸಿನ ಮಳೆಯಾಗಿದೆ.

ಮರಗಳು ಬಿದ್ದು ಹಲವು ವಾಹನ ಜಖಂ

ಭಾರಿ ಮಳೆಯಿಂದ ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ. ಜಯನಗರ-ಬನ್ನೇರುಘಟ್ಟ ರಸ್ತೆ, ಪೀಣ್ಯ ಬಳಿ ಮರಗಳು ನೆಲಕ್ಕುರುಳಿವೆ. ಪೀಣ್ಯದ ಅರವಿಂದ ಮೋಟಾರ್ಸ್ ಬಳಿ ಕಾರಿನ ಮೇಲೆ ಮರ ಬಿದ್ದಿದ್ದು, ಕಾರಿನಲ್ಲಿ ಸಿಲುಕಿರುವ ಚಾಲಕನನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇನ್ನು ಬನ್ನೇರುಘಟ್ಟ ರಸ್ತೆ ವೆಗಾ ಸಿಟಿ ಮಾಲ್ ಬಳಿ ಮರ ಧರೆಗುರುಳಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅದೇ ರೀತಿ ಜಯನಗರದ 4ನೇ ಟಿ ಬ್ಲಾಕ್ ಬಳಿ ಮರ ಧರೆಗುರುಳಿದಿದೆ, ರಾಜಾಜಿನಗರದ ಮಂಜುನಾಥನಗರದಲ್ಲಿ ಮರ ಬಿದ್ದಿದೆ. ಬಸವನಗುಡಿ ರಾಮಕೃಷ್ಣ ಆಶ್ರಮ ಬಳಿ ಮತ್ತು ಕೆಜಿ ರಸ್ತೆ ಪೋತೀಸ್ ಮುಂಭಾಗ ಬೃಹತ್ ಮರ ಧರೆಗಿರುಳಿದೆ. ಹುಳಿಮಾವು ರಸ್ತೆಯಲ್ಲಿ ಮರ ಧರೆಗುರುಳಿದಿದ್ದು, ಪಾನಿಪುರಿ ಅಂಗಡಿ, ಸುಮಾರು 10 ಬೈಕ್‌ಗಳು ಜಖಂಗೊಂಡಿವೆ.

ಇದನ್ನೂ ಓದಿ | Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

ಇನ್ನು ಹಲವು ಕಡೆ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಗೋವಿಂದರಾಜ ನಗರದ ಪಟ್ಟೇಗಾರ ಪಾಳ್ಯದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜೋರಾದ ಮಳೆ ಹಿನ್ನೆಲೆ ಪ್ರಮುಖ ರಸ್ತೆಗಳು ಹೊಳೆಯಂತೆ ಬದಲಾಗಿದ್ದರಿಂದ ಬೈಕ್ ಸವಾರರು ಪರದಾಡಿದರು. ಹಲವೆಡೆ ವಾಹನಗಳು ಕೆಟ್ಟುನಿಂತು ಸವಾರರು ತೊಂದರೆಪಟ್ಟರು.

Continue Reading

ಮಳೆ

Karnataka Weather : ಕೋಲಾರದಲ್ಲಿ ಅಬ್ಬರಿಸಿದ ವರುಣ; ಒಳನಾಡಿನಲ್ಲಿ ತಾಪಮಾನ ಇಳಿಕೆ

Karnataka Weather Forecast : ರಾಜ್ಯದ ಹಲವೆಡೆ ಮಳೆಯು (Rain News) ಅಬ್ಬರಿಸುತ್ತಿದೆ. ಕೋಲಾರದಲ್ಲಿ ಮಳೆಗೆ ಬೆಳೆ ಹಾನಿಯಾದರೆ, ಬೆಂಗಳೂರಲ್ಲಿ ದಿಢೀರ್‌ ವರ್ಷಾಧಾರೆಗೆ ವಾಹನ ಸವಾರರು ಪರದಾಡಬೇಕಾಯಿತು. ಮುಂದಿನ 48 ಗಂಟೆಯಲ್ಲಿ ಮಳೆಯು ಅಬ್ಬರಿಸಿದರೆ, ತಾಪಮಾನ ಇಳಿಕೆಯಾಗಲಿದೆ.

VISTARANEWS.COM


on

By

Karnataka Weather Forecast
Koo

ಕೋಲಾರ/ಬೆಂಗಳೂರು: ಭಾನುವಾರ ಕೋಲಾರ ಜಿಲ್ಲೆಯ ಹಲವು ಕಡೆ ಗುಡುಗು ಸಹಿತ (rain News) ಮಳೆಯಾಗಿದೆ. ಮಧ್ಯಾಹ್ನ 3 ಗಂಟೆಗೆ ಶುರುವಾದ ಮಳೆಗೆ (Karnataka Weather Forecast) ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬಿಟ್ಟುಬಿಡದೆ ಸುರಿದ ಮಳೆಗೆ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದವು. ಮುಳಬಾಗಲು, ಕೋಲಾರದಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ತೋಟದ ಬೆಳೆಗಳಿಗೆ ಹಾನಿಯಾಗಿತ್ತು. ಮಳೆಯಿಂದ ಮಾವು, ಟೊಮೊಟೊ ಬೆಳೆಗಾರರಿಗೆ ಸಂಕಷ್ಟ ಎದುರಾಯಿತು.

ಇತ್ತ ರಾಜಧಾನಿ ಬೆಂಗಳೂರಿನಲ್ಲೂ ಮಳೆಯಾಗಿದೆ. ಬನಶಂಕರಿ, ಕುಮಾರಸ್ವಾಮಿ ಲೇಔಟ್, ಎಳಚೇನಹಳ್ಳಿ, ಉತ್ತರಹಳ್ಳಿ, ಪದ್ಮನಾಭ ನಗರ ಸುತ್ತಮುತ್ತ ಮಳೆಯಾಗಿದ್ದರಿಂದ ವಾಹನ ಸವಾರರಿಗೆ ಅನಾನುಕೂಲ ಉಂಟಾಯಿತು. ದಿಢೀರ್‌ ಮಳೆಗೆ ಜನರು ಬಸ್‌ ನಿಲ್ದಾಣ, ಅಂಗಡಿಗಳನ್ನು ಆಶ್ರಯಿಸಿದರು.

ಇನ್ನೂ ಶನಿವಾರ ದಕ್ಷಿಣ ಒಳನಾಡು ಹಾಗೂ ಕರಾವಳಿ, ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿರುವ ವರದಿ ಆಗಿದೆ. ಮಂಡ್ಯದ ಹೊನಕೆರೆಯಲ್ಲಿ 8 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ ಗರಿಷ್ಟ ಉಷ್ಣಾಂಶ 40.3 ಡಿ.ಸೆ ದಾಖಲಾಗಿದೆ.

ಇದನ್ನೂ ಓದಿ: Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

ಬೆಂಗಳೂರು ಸೇರಿ ದಕ್ಷಿಣ ಒಳನಾಡು ಆವರಿಸಿದ ಮುಂಗಾರು

ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಕರ್ನಾಟಕದ ಬಹುತೇಕ ಭಾಗವನ್ನು ಮುಂಗಾರು ಆವರಿಸಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಗದಗ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯೊಂದಿಗೆ ಗುಡುಗು ಸಹಿತ ಗಾಳಿಯು 30-40 ಕಿ.ಮೀ ವೇಗದಲ್ಲಿ ಬೀಸಲಿದೆ.

ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ದಾವಣಗೆರೆ, ಕೊಡಗು, ಕೋಲಾರ ಸೇರಿದಂತೆ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಉಳಿದಂತೆ ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ , ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.

ತಾಪಮಾನದ ಮುನ್ಸೂಚನೆ

ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್‌ನಿಂದ ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಬೆಂಗಳೂರು ನಗರ ಮತ್ತು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿ.ಸೆ ಇರಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Karnataka rain : ವಾರದವರೆಗೂ ಬಿಡುವು ನೀಡಿದ್ದ ವರುಣ ನಿನ್ನೆ ಶನಿವಾರದಿಂದ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಭಾನುವಾರ ಸಂಜೆ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ (Rain news) ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

VISTARANEWS.COM


on

By

Karnataka Rain
Koo

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು 30-40 ಕಿ.ಮೀ ಗಾಳಿ ಬೀಸುವ (Karnataka Rain) ಸಾಧ್ಯತೆಯಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಚದುರಿದಂತೆ ಹಾಗೂ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ ಸಾಧಾರಣ ಮಳೆಯಾದರೆ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಯಾದಗಿರಿ, ಬೆಳಗಾವಿ, ಧಾರವಾಡ, ಗದಗದಲ್ಲಿ, ವಿಜಯನಗರ ಮತ್ತು ಹಾವೇರಿಯ ಬಹುತೇಕ ಕಡೆಗಳಲ್ಲಿ ಮಳೆಯು ಅಬ್ಬರಿಸಲಿದೆ.

ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಗುಡುಗು ಸಹಿತ ಸಾಧಾರಣ ಮಳೆಯಾದರೆ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

ರಾಜಧಾನಿಯಲ್ಲಿ ಅಬ್ಬರದ ಮಳೆ

ಬೆಂಗಳೂರಿನಲ್ಲಿ ಭಾನುವಾರ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚನೆ ಇದೆ. ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಿಸಿಲಿನಿಂದ ಕಂಗೆಟ್ಟ ಸಿಟಿ ಮಂದಿಗೆ ರಾತ್ರಿ ಪೂರ್ತಿ ಸುರಿದ ಮಳೆಯಿಂದಾಗಿ ವಾತಾವರಣವೂ ಕೂಲ್‌ ಆಗಿದೆ.

ಇದನ್ನೂ ಓದಿ: Weather Updates:ಇಡೀ ರಾತ್ರಿ ಭಾರೀ ಮಳೆ; ಮುಂಗಾರು ಆರಂಭದಲ್ಲೇ ಬೆಂಗಳೂರು ಅಸ್ತವ್ಯಸ್ತ

ಮೈಸೂರಿನಲ್ಲಿ ಗಾಳಿ-ಮಳೆಗೆ ನೆಲಕ್ಕುರುಳಿದ ಬಾಳೆ ಬೆಳೆ

ಮೈಸೂರಿನಲ್ಲಿ ವಿವಿಧೆಡೆ ಭಾರಿ ಮಳೆ ಗಾಳಿಗೆ ಬಾಳೆ ಬೆಳೆ ನೆಲಕ್ಕುರುಳಿದೆ. ಮಳೆ, ಗಾಳಿಯು ಕೈಯಿಗೆ ಬಂದ ತುತ್ತು ಬಾಯಿಗೆ ಇಲ್ಲದಂತೆ ಮಾಡಿದೆ. ಶನಿವಾರ ಸುರಿದ ಮಳೆ ಹಾಗೂ ಗಾಳಿಗೆ ಅವಾಂತರವೇ ಸೃಷ್ಟಿಯಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ, ದೊಡ್ಡ ಹೊಮ್ಮ ಸೇರಿದಂತೆ ಹಲವೆಡೆ ಗಾಳಿ ಮಳೆಗೆ ಹತ್ತಾರು ಎಕರೆ ಬಾಳೆ ನಾಶವಾಗಿದೆ. ಚಿಕ್ಕಹೊಮ್ಮ ಗ್ರಾಮದ ನಾಗೇಂದ್ರ ಎಂಬುವವರ ಜಮೀನಲ್ಲಿ ಎರಡು ಸಾವಿರ ಬಾಳಿ ಗಿಡ ನೆಲಕ್ಕುರುಳಿದ್ದು ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸೂಕ್ತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ವ್ಯಾಪ್ತಿಯಲ್ಲಿ ಮಳೆಗೆ ಅಪಾರ ಪ್ರಮಾಣದ ತಂಬಾಕು ಹಾಗೂ ಶುಂಠಿ ಬೆಳೆ ನಾಶವಾಗಿದೆ. ಪೆಂಜಹಳ್ಳಿ, ಹರಳಹಳ್ಳಿ, ಕಿರಂಗೂರು, ಹಿಂಡಗೂಡ್ಲು ಸುತ್ತ ಮುತ್ತ ಸಾಕಷ್ಟು ಮಳೆ ಅವಾಂತರವೇ ಸೃಷ್ಟಿಯಾಗಿತ್ತು. ತಂಬಾಕು ಸಸಿ ನಾಟಿ ಮಾಡಿ ಗೊಬ್ಬರ ಹಾಕಿದ್ದ ಜಮೀನಿನಲ್ಲಿ ಮಳೆಯ ನೀರು ನಿಂತು ಬೆಳೆ ಹಾನಿಯಾಗಿತ್ತು. ಹರಳಹಳ್ಳಿ ಮಾದಳ್ಳಿಕಟ್ಟೆ, ಹುಲಿಕೆರೆ, ಆದ್ವಾಳಕೆರೆ, ಸೇರಿದಂತೆ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿವೆ.

ಕೆಜಿಎಫ್‌ನಲ್ಲಿ ಭರ್ಜರಿ ಮಳೆ

ಕೋಲಾರ ಜಿಲ್ಲೆಯ ವಿವಿಧಡೆ ತಡರಾತ್ರಿ ಗುಡುಗು ಸಿಡಿಲ ಧಾರಾಕಾರ ಮಳೆಯಾಗಿದೆ. ಕೆಜಿಎಫ್‌ನಲ್ಲಿ 6.4 ಸೆಂ.ಮೀ ಅತಿ ಹೆಚ್ಚು ಮಳೆಯಾಗಿದೆ. ಬಂಗಾರಪೇಟೆ, ಮಾಲೂರು, ಕೋಲಾರ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಕೆಜಿಎಫ್‌ನ ಬೆಮಲ್ ಬಡಾವಣೆಯಲ್ಲಿ ಭಾರಿ ಮಳೆಗೆ ಬೃಹತ್ ಮರವೊಂದು ನೆಲಕ್ಕುರಲಿದೆ. ತಡರಾತ್ರಿ ರಸ್ತೆಗೆ ಮರ ಉರುಳಿದ ಪರಿಣಾಮ ಕೆಲಕಾಲ ಸಂಚಾರವು ಅಸ್ತವ್ಯಸ್ತಗೊಂಡಿತ್ತು.

ಚಲಿಸುತ್ತಿದ್ದ ಬೈಕ್‌ ಮೇಲೆ ಬಿದ್ದ ಮರ, ಸವಾರ ಗಂಭೀರ

ಇನ್ನೂ ವಿಜಯನಗರದ ನಿವಾಸಿ ಬೈಕ್‌ನಲ್ಲಿ ಬರುವಾಗ ಗಾಳಿ ಮಳೆಗೆ ಮರ ಬಿದ್ದಿದೆ. ಪರಿಣಾಮ ಬೈಕ್ ಸವಾರ ಇಮ್ಯುನಿಯಲ್ ಎಂಬಾತ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಜಿಎಫ್ ನ ಮಾರಿಕೊಪ್ಪ ಮತ್ತು ಆಂಧ್ರದ ಕುಪ್ಪಂ ರಾಮಕುಪ್ಪಂ ಬಂಗಾರಪೇಟೆ ಮಾಲೂರು ಕಡೆ ಬಿರುಸಿನ ಮಳೆಯಾಗಿದೆ .ಹಳ್ಳ ಕೊಳ್ಳಗಳು ತುಂಬಿ ನೀರು ಹರಿದಿದೆ. ಇನ್ನು ಎರಡು ದಿನಗಳ ಕಾಲ ಕೋಲಾರ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ವಿಜಯಪುರದಲ್ಲಿ ಗಾಳಿ ರಭಸ

ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಭೀಕರ ಬರಗಾಲದಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆಯಿಂದಾಗಿ ರೈತರ ಮೊಗದಲ್ಲಿ ಸಂತಸ ಮೂಡಿದೆ. ರಭಸವಾಗಿ ಸುರಿದ ಮಳೆಯಿಂದಾಗಿ ಕೆರೆ ಹಾಗೂ ರಸ್ತೆಗಳು ತುಂಬಿ ಹರಿದಿದ್ದವು. ಭಾರಿ ಗಾಳಿ ಸಮೇತವಾಗಿ ಸತತ ಮೂರು ಗಂಟೆ ಸುರಿದ ಮಳೆಗೆ ಮರಗಳು‌ ಹಾಗೂ ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Weather Updates:ಇಡೀ ರಾತ್ರಿ ಭಾರೀ ಮಳೆ; ಮುಂಗಾರು ಆರಂಭದಲ್ಲೇ ಬೆಂಗಳೂರು ಅಸ್ತವ್ಯಸ್ತ

Weather Updates: ಕಳೆದ 24 ಗಂಟೆಯಲ್ಲಿ ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಅಂತ ನೋಡೋದಾದ್ರೆ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ 7.8ಸೆಂ.ಮೀ, ಹೊರಮಾವು 7 ಸೆಂ.ಮೀ, ವಿದ್ಯಾಪೀಠ 6.3ಸೆಂ.ಮೀ, ಹಂಪಿನಗರ 6.2ಸೆಂ.ಮೀ, ಕೊಡಿಗೆಹಳ್ಳಿ 6ಸೆಂ.ಮೀ, ಹೇರೋಹಳ್ಳಿ 5.9 ಸೆಂಮೀ, ದೊಡ್ಡನೆಕುಂದಿ 5.8ಸೆಂಮೀ, ಜಕ್ಕೂರು 5.6 ಸೆಂ.ಮೀ, ನಾಗೇನಹಳ್ಳಿ 5.3ಸೆಂ.ಮೀ, ಯಲಹಂಕಾ 5.3 ಸೆಂ.ಮೀ, RR ನಗರ 5.2 ಸೆಂ.ಮೀ ಮಳೆಯಾಗಿದೆ.

VISTARANEWS.COM


on

Weather Updates
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಸುರಿದ ಮಳೆ(Weather Updates)ಗೆ ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿ ಇಡೀ ಹಲವಡೆ ಭಾರೀ ಮಳೆಯಾಗಿದ್ದು, ಮುಂಗಾರು ಆರಂಭದಲ್ಲೇ ಪ್ರವಾಹ ಸ್ಥಿತಿ ಎದುರಾಗಿದೆ. ಇನ್ನು ರಸ್ತೆ, ಮನೆಗಳಿಗೆ ನುಗ್ಗಿದ ನೀರು ಒಂದೇ ದಿನಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇನ್ನು ಭಾರೀ ಗಾಳಿ ಮಳೆಗೆ ಮರಗಳು ರಸ್ತೆಗುರುಳಿದ್ದು, ಸಂಚಾರಕ್ಕೆ ಭಾರೀ ಅಡ್ಡಿಯಾಗಿತ್ತು.

ಕಳೆದ 24 ಗಂಟೆಯಲ್ಲಿ ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಅಂತ ನೋಡೋದಾದ್ರೆ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ 7.8ಸೆಂ.ಮೀ, ಹೊರಮಾವು 7 ಸೆಂ.ಮೀ, ವಿದ್ಯಾಪೀಠ 6.3ಸೆಂ.ಮೀ, ಹಂಪಿನಗರ 6.2ಸೆಂ.ಮೀ, ಕೊಡಿಗೆಹಳ್ಳಿ 6ಸೆಂ.ಮೀ, ಹೇರೋಹಳ್ಳಿ 5.9 ಸೆಂಮೀ, ದೊಡ್ಡನೆಕುಂದಿ 5.8ಸೆಂಮೀ, ಜಕ್ಕೂರು 5.6 ಸೆಂ.ಮೀ, ನಾಗೇನಹಳ್ಳಿ 5.3ಸೆಂ.ಮೀ, ಯಲಹಂಕಾ 5.3 ಸೆಂ.ಮೀ, RR ನಗರ 5.2 ಸೆಂ.ಮೀ ಮಳೆಯಾಗಿದೆ.

ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿತ್ತು. ಇದರಿಂದ ರೊಚ್ಚಿಗೆದ್ದ ಜನ ಬೀದಿಗಿಳಿದು ಮಳೆ ನೀರಲ್ಲೇ ನಿಂತು ರಸ್ತೆ ತಡೆದು ಬಿಬಿಎಂಪಿ ವಿರುದ್ಧ ಜನ ಪ್ರತಿಭಟನೆ ನಡೆಸಿದರು. ಸರ್ಜಾಪುರ, ರಾಜಪಾಳ್ಯ, ಮಾರತ್ತಹಳ್ಳಿ, ಯಲಹಂಕಾ ಸುತ್ತಮುತ್ತ ರಸ್ತೆಗಳು ಕೆರೆಯಂತಾಗಿದ್ದು, ಬಿಬಿಎಂಪಿ ವಿರುದ್ಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದರು.

ಇನ್ನು ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮುಂಗಾರು ಅಬ್ಬರ ಹೆಚ್ಚಾಗಲಿದ್ದು, ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು 30-40 ಕಿ.ಮೀ ಗಾಳಿ ಬೀಸುವ (Karnataka weather Forecast) ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ವ್ಯಾಪಕ ಲಘುದಿಂದ ಸಾಧಾರಣ ಮಳೆ ಸಾಧ್ಯತೆ ಇದೆ. ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಯಾದಗಿರಿ, ಬೆಳಗಾವಿ, ಧಾರವಾಡ, ಗದಗದಲ್ಲಿ ಸಾಧಾರಣ ಮಳೆಯಾಗಲಿದೆ. ವಿಜಯನಗರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

ಮಲೆನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

Continue Reading
Advertisement
Amul Milk
ದೇಶ1 hour ago

Amul Milk: ಗ್ರಾಹಕರಿಗೆ ಬಿಗ್‌ ಶಾಕ್‌; ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಳ

Odisha Assembly Election
ದೇಶ3 hours ago

Odisha Assembly Election: ಒಡಿಶಾ ವಿಧಾನಸಭಾ ಚುನಾವಣೆ; ಬಿಜೆಡಿ-ಬಿಜೆಪಿ ನಡುವೆ ತೀವ್ರ ಹಣಾಹಣಿ: ಹಳೆ ದೋಸ್ತಿಗೆ ಠಕ್ಕರ್‌ ಕೊಡುತ್ತಾ ಕಮಲ ಪಡೆ?

Mysore lok sabha constituency
ಪ್ರಮುಖ ಸುದ್ದಿ3 hours ago

Mysore lok sabha Constituency : ಕಿಂಗ್​​ ವರ್ಸಸ್​ ಆರ್ಡಿನರಿ ಸಿಟಿಜನ್​ ಫೈಟ್​​ನಲ್ಲಿ ಗೆಲುವು ಯಾರಿಗೆ?

Haveri Lok Sabha Constituency
ಹಾವೇರಿ4 hours ago

Haveri Lok Sabha Constituency: ಹಾವೇರಿಯಲ್ಲಿ ಅನುಭವಿ vs ಉತ್ಸಾಹಿ; ಯಾರಿಗೆ ಜಯದ ಮಾಲೆ?

Hyderabad City : Hyderabad no longer joint capital of Andhra Pradesh, Telangana from today
ಪ್ರಮುಖ ಸುದ್ದಿ4 hours ago

Hyderabad City : ಹೈದರಾಬಾದ್​ ಇನ್ನು ತೆಲಂಗಾಣಕ್ಕಷ್ಟೇ ರಾಜಧಾನಿ; ಏನಿದು ವಿಂಗಡಣೆ?

Loksabha Election 2024
Lok Sabha Election 20244 hours ago

Lok Sabha Election 2024: ಮತ ಎಣಿಕೆಗೆ 1 ದಿನವಷ್ಟೇ ಬಾಕಿ; ಚುನಾವಣಾ ಆಯೋಗದ ಕದ ತಟ್ಟಿದ ಎನ್‌ಡಿಎ, ʼಇಂಡಿಯಾʼ ಮೈತ್ರಿಕೂಟ

Chikballapur lok sabha constituency
ಪ್ರಮುಖ ಸುದ್ದಿ4 hours ago

Chikballapur lok sabha constituency : ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ತರುವರೇ ಸುಧಾಕರ್​?

Bangalore Rain
ಕರ್ನಾಟಕ5 hours ago

Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

Kannada New Movie
ಸಿನಿಮಾ5 hours ago

Kannada New Movie: ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರದಲ್ಲಿ ಒಂದಾದ ದುನಿಯಾ ವಿಜಯ್, ಶ್ರೇಯಸ್ ಮಂಜು

Koppal Lok Sabha Constituency
ಕೊಪ್ಪಳ5 hours ago

Koppal Lok Sabha Constituency: ಮಾಜಿ ಶಾಸಕರ ಪುತ್ರರ ನಡುವಿನ ಸ್ಪರ್ಧೆಯಲ್ಲಿ ಯಾರಾಗುವರು ಸಂಸದ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ15 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌