Education News : Assam to scrap Class 10th board exams what about in karnatakaEducation News : ಅಸ್ಸಾಂನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು, ರಾಜ್ಯದಲ್ಲಿ ಕತೆಯೇನು? - Vistara News

ಪ್ರಮುಖ ಸುದ್ದಿ

Education News : ಅಸ್ಸಾಂನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು, ರಾಜ್ಯದಲ್ಲಿ ಕತೆಯೇನು?

ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೆ ತಂದಿರುವ ಅಸ್ಸಾಂ ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು ಪಡಿಸಿರುವುದಾಗಿ (Education News) ಪ್ರಕಟಿಸಿದೆ. ರಾಜ್ಯದಲ್ಲಿಯೂ ಎನ್‌ಇಪಿ ಜಾರಿಯಲ್ಲಿದೆ. ಈ ಪರೀಕ್ಷೆ ಇಲ್ಲಿಯೂ ರದ್ದಾಗಲಿದೆಯೇ?

VISTARANEWS.COM


on

Education News sslc students
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಅನ್ನು ಅಳವಡಿಸಿಕೊಂಡಿರುವ ಅಸ್ಸಾಂ ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ಎಸ್‌ಎಸ್‌ಎಲ್‌ಸಿ (Sslc Exam) ಪರೀಕ್ಷೆ (10ನೇ ತರಗತಿ) ನಡೆಸುವುದಿಲ್ಲ (Education News) ಎಂದು ಅಧಿಕೃತವಾಗಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಏನಾಗಲಿದೆ ಎಂಬ ಚರ್ಚೆ ಪೋಷಕರ ವರ್ಗದಲ್ಲಿ ನಡೆಯುತ್ತಿದೆ.

ಮಂಗಳವಾರ ಅಸ್ಸಾಂ ಮುಖ್ಯಮಂತ್ರಿ ಹಿಮವಂತ್‌ ಬಿಸ್ವಾ ಶರ್ಮಾ ಟ್ವೀಟ್‌ ಮಾಡಿ, ʻʻರಾಜ್ಯದಲ್ಲಿ 10 ನೇ ತರಗತಿಗೆ ಬೋರ್ಡ್‌ ಲೆವೆಲ್‌ ಪರೀಕ್ಷೆ ನಡೆಸುವುದಿಲ್ಲ. 12 ನೇ ತರಗತಿಗೆ ಬೋರ್ಡ್‌ (education news) ಲೆವೆಲ್‌ ಪರೀಕ್ಷೆ ನಡೆಸಲಾಗುವುದು. ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಯ ಮಟ್ಟದಲ್ಲಿಯೇ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತದೆ. ಹತ್ತರಿಂದ ಹನ್ನೊಂದನೇ ತರಗತಿಗೆ ನೇರವಾಗಿ ಪ್ರವೇಶ ಪಡೆಯಲಿದ್ದಾರೆʼʼ ಎಂದು ತಿಳಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಟ್ವಿಟ್ಟರ್‌ನಲ್ಲಿ ಹೇಳಿದ್ದೇನು?

ರಾಷ್ಟ್ರೀಯ ಶಿಕ್ಷಣ ನೀತಿ 2020 (national education policy 2020) ಜಾರಿಗೆ ತಂದಿರುವ ಅಲ್ಲಿಯ ಸರ್ಕಾರ ಈ ನೀತಿಯಂತೆಯೇ ಈ ಬದಲಾವಣೆ ಮಾಡಿದ್ದು, ಎಸ್‌ಎಸ್‌ಎಲ್‌ಸಿ ಮಂಡಳಿಯನ್ನು (SEBA) ಪಿಯು ಮಂಡಳಿಯೊಂದಿಗೆ (AHSEC)ವಿಲೀನಗೊಳಿಸಿದೆ. ನಮ್ಮ ರಾಜ್ಯದಲ್ಲಿಯೂ ಈ ಹಿಂದಿನ ಬಿಜೆಪಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಜಾರಿಗೆ ತ್ವರಿತ ಕ್ರಮ ತೆಗೆದುಕೊಂಡಿತ್ತು. ಈಗಾಗಲೇ ರಾಜ್ಯದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ (Education News) ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿ ವಿಲೀನಗೊಳಿಸಲಾಗಿದೆ. ʻಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ)ʼ ಮಂಡಳಿಯನ್ನು ರೂಪಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೆ ಮುಂದಾದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿತ್ತು. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಈ ನೀತಿ ಜಾರಿಯಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಕೂಡ ಮುಂದಿನ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗುವುದಿಲ್ಲ ಎಂದೇ ಶಿಕ್ಷಣ ಇಲಾಖೆ ಹೇಳಿಕೊಂಡು ಬಂದಿತ್ತು. ಆದರೆ ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಎನ್‌ಇಪಿ ಜಾರಿಗೆ ತರುವುದಿಲ್ಲ ಎಂದು ಹೇಳುತ್ತಿದೆ. ಹೀಗಾಗಿ ಈಗಿರುವ ವ್ಯವಸ್ಥೆಯೇ ಮುಂದುವರಿಯಲಿದೆಯೇ ಎಂಬ ಚರ್ಚೆ ಈಗ ನಡೆಯುತ್ತಿದೆ.

ಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಕಾಂಗ್ರೆಸ್‌ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿಯೇ ಹೇಳಿತ್ತು. ಇತ್ತೀಚೆಗೆ ಬೆಳಗಾವಿಯಲ್ಲಿ ಎಎನ್‌ಐ ಸುದ್ದಿಸಂಸ್ಥೆಗೆ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ʻʻದೇಶಾದ್ಯಂತ ಜಾರಿಯಲ್ಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ತಿರಸ್ಕರಿಸಲಾಗುತ್ತದೆ. ರಾಜ್ಯದ ಹೊಸ ಶಿಕ್ಷಣ ನೀತಿ ಬರಲಿದೆ. ನಮಗೆ ನಾಗಪುರ್‌ ಶಿಕ್ಷಣ ನೀತಿಯ ಅಗತ್ಯವಿಲ್ಲ. ನಾವು ವಿಸ್ತೃತವಾಗಿ ಚರ್ಚೆ ನಡೆಸಿ ಹೊಸ ನೀತಿಯನ್ನು ಜಾರಿ ಮಡುತ್ತೇವೆ. ಇಷ್ಟು ದಿನ ಇದ್ದ ನೀತಿಯಿಂದ ಏನೇನಾಯಿತು ಎಂದು ಪರಿಶೀಲಿಸುತ್ತೇವೆʼʼ ಎಂದಿದ್ದರು.

ಶಿಕ್ಷಣ ನೀತಿ ಕುರಿತು ಡಿಕೆಶಿ ಮಾತು

ನಿರ್ಧಾರವಾಗಿಲ್ಲ ಎಂದ ಸಚಿವ ಸುಧಾಕರ್‌

ಮಂಗಳವಾರದಂದು ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಪಡಿಸುವ ಕುರಿತು ಸಭೆ ನಡೆಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ. ಸಿ. ಸುಧಾಕರ್‌ ಈ ಬಗ್ಗೆ ಇನ್ನೂ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ತಿಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಜಾರಿಗೆ ಬಂದಿರುವ ಈ ನೀತಿಯ ಸಾಧಕ-ಬಾಧಕ ಬಗ್ಗೆ ಚರ್ಚೆ ನಡೆದಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಜತೆಯಲ್ಲಿ ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ʻʻನಮ್ಮ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದತಿ ಬಗ್ಗೆ ಉಲ್ಲೇಖ ಮಾಡಿದ್ದೇವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಗ್ರ ಚಿಂತನೆ. ಮಾಡಿ ನಿರ್ಣಯ ತೆಗೆದುಕೊಳ್ಳುವುದು ಈಗಿನ ಅಗತ್ಯವಾಗಿದೆʼʼ ಎಂದು ಅವರು ಈ ಸಭೆಯ ಬಳಿಕ ಹೇಳಿದ್ದರು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಈ ನೀತಿ ಜಾರಿಯ ಕುರಿತು ಶಿಕ್ಷಣ ತಜ್ಞರ ಜತೆ ಈಗ ಒಂದು ಸಭೆ ನಡೆದಿದೆ ಅಷ್ಟೇ. ಸಭೆಯಲ್ಲಿ ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಹಾಗೂ ಹಲವು ಶಿಕ್ಷಣ (Education News) ತಜ್ಞರು ಭಾಗಿಯಾಗಿದ್ದರು. ಇಲಾಖೆಯ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿವರ ಪಡೆದುಕೊಂಡಿದ್ದೇನೆ. ಕಾಂಗ್ರೆಸ್‌ ಪಕ್ಷದ ನಿಲುವು, ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದೇನೆ ಎಂದು ವಿವರಿಸಿರುವ ಅವರು ರಾಷ್ಟ್ರೀಯ ಶಿಕ್ಷಣ (Education News) ನೀತಿಯಲ್ಲಿ ಇರುವ ಲೋಪದೋಷಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಆತುರಾತುರವಾಗಿ ಇದನ್ನು ಅನುಷ್ಠಾನ ಮಾಡಲಾಗಿದೆ ಎನ್ನುವ ಅಭಿಪ್ರಾಯಗಳು ಬಂದಿವೆ. ಈ ನೀತಿ ಜಾರಿಯಾಗಿ ಎರಡು ವರ್ಷಗಳ ಆಗಿರುವು ಕಾರಣದಿಂದ ಏಕಾಏಕಿ ನಿರ್ಧಾರ ಕಷ್ಟ ಸಾಧ್ಯವಿದೆ ಎಂದು
ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿ ಮಾಡುವ ಉದ್ದೇಶ ನಮಗೆ ಇಲ್ಲ. ಈ ಬಗ್ಗೆ ಆದಷ್ಟು ಬೇಗ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್‌ ಭರವಸೆ ನೀಡಿದ್ದಾರೆ. ಆದರೆ ಈ ಬಗ್ಗೆ ಪೋಷಕರ ವರ್ಗದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಆದಷ್ಟು ಬೇಗ ಈ ಗೊಂದಲ ಬಗೆಹರಿಸಬೇಕೆಂದು ಒತ್ತಾಯಿಸಲಾಗುತ್ತಿದೆ.

ಇದನ್ನೂ ಓದಿ: NCF 2023 Draft: ಪಿಯುಗೆ ವರ್ಷಕ್ಕೆ ಇನ್ಮುಂದೆ ಒಂದಲ್ಲ 2 ಬಾರಿ ಪರೀಕ್ಷೆ; ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ವರದಿಯಲ್ಲಿ ಏನಿದೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Bullet Train: ಬುಲೆಟ್‌ ರೈಲು ಓಡೋದು ಯಾವಾಗ? ರೈಲ್ವೆ ಸಚಿವ ಹೇಳೋದಿಷ್ಟು

Bullet Train: ದೇಶದ ಮೊದಲ ಬುಲೆಟ್‌ ರೈಲು ಯೋಜನೆಯ ಮಾಹಿತಿ ಇರುವ ವಿಡಿಯೊವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಹಂಚಿಕೊಂಡಿದ್ದಾರೆ. ಆ ವಿಡಿಯೊ ಇಲ್ಲಿದೆ.

VISTARANEWS.COM


on

Bullet Train
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ, ದೇಶದ ಶತಕೋಟಿ ಜನರ ಬುಲೆಟ್‌ ಟ್ರೇನ್‌ ಕನಸು ನನಸಾಗುವ ದಿನಗಳು ದೂರವಿಲ್ಲ! ಹೌದು, ದೇಶದ ಮೊದಲ ಬುಲೆಟ್‌ ರೈಲು (Bullet Train) ಸಂಚಾರದ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. “ಮುಂಬೈ-ಅಹಮದಾಬಾದ್‌ ಬುಲೆಟ್‌ (Mumbai to Ahmedabad) ರೈಲು ಯೋಜನೆ ಶೀಘ್ರದಲ್ಲಿಯೇ ಮುಗಿಯಲಿದೆ” ಎಂದು ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಅವರೊಂದು ವಿಡಿಯೊ ಹಂಚಿಕೊಂಡಿದ್ದು, ರೈಲು ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿದ್ದಾರೆ.

ಮುಂಬೈ-ಅಹಮದಾಬಾದ್‌ ಬುಲೆಟ್‌ ರೈಲು ಗಂಟೆಗೆ 320 ಕಿಲೋಮೀಟರ್‌ ವೇಗದಲ್ಲಿ ಓಡಲಿದೆ. ಈಗಾಗಲೇ ದೇಶದ ಮೊದಲ ಬ್ಯಾಲಾಸ್ಟ್‌ಲೆಸ್‌ ಟ್ರ್ಯಾಕ್‌ ಸಿಸ್ಟಮ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಅಷ್ಟೇ ಅಲ್ಲ, 295.5 ಕಿಲೋಮೀಟರ್‌ ರೈಲು ಮಾರ್ಗ ನಿರ್ಮಿಸಲಾಗಿದೆ. 153 ಕಿಲೋಮೀಟರ್‌ ಉದ್ದದ ರೈಲ್ವೆ ಟ್ರ್ಯಾಕ್‌ಅನ್ನು ಸೇತುವೆ ಮೂಲಕ ನಿರ್ಮಿಸಲಾಗಿದೆ ಎಂಬುದಾಗಿ ಅಶ್ವಿನಿ ವೈಷ್ಣವ್‌ ಹಂಚಿಕೊಂಡ ವಿಡಿಯೊದಲ್ಲಿ ತಿಳಿಸಲಾಗಿದೆ.

“ಬುಲೆಟ್‌ ರೈಲು ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಬುಲೆಟ್‌ ರೈಲು ಯೋಜನೆಯು ಸಂಪರ್ಕ ಕ್ರಾಂತಿ ಜತೆಗೆ ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಬುಲೆಟ್‌ ರೈಲು ಸಂಚರಿಸುವ ಮುಂಬೈ, ವಾಪಿ, ಬರೋಡಾ, ಸೂರತ್‌, ಆನಂದ್‌ ಹಾಗೂ ಅಹಮದಾಬಾದ್‌ ನಗರಗಳು ಆರ್ಥಿಕ ನಗರಗಳಾಗಿ ಬದಲಾಗಲಿವೆ. ಈ ನಗರಗಳಲ್ಲಿ ಪ್ರತ್ಯೇಕ ಆರ್ಥಿಕತೆಯೇ ಸೃಷ್ಟಿಯಾಗುತ್ತದೆ. ಯೋಜನೆಯ ಪ್ರಗತಿಯು ಕ್ಷಿಪ್ರವಾಗಿ ಸಾಗುತ್ತಿದೆ” ಎಂದು ಮಾಹಿತಿ ಕೆಲ ದಿನಗಳ ಹಿಂದಷ್ಟೇ ಅಶ್ವಿನಿ ವೈಷ್ಣವ್‌ ಹೇಳಿದ್ದರು.

ಸೂರತ್‌ನಲ್ಲಿ ತಿಂಡಿ, ಮುಂಬೈನಲ್ಲಿ ಕೆಲಸ

ಬುಲೆಟ್‌ ರೈಲು ಓಡಾಟ ಆರಂಭವಾದ ಬಳಿಕ ಜನರ ಜೀವನಶೈಲಿ ಹೇಗೆ ಬದಲಾಗುತ್ತದೆ? ಸಂಪರ್ಕ ಕ್ರಾಂತಿ ಹೇಗಾಗುತ್ತದೆ ಎಂಬುದನ್ನು ಅಶ್ವಿನಿ ವೈಷ್ಣವ್‌ ಅವರು ಉದಾಹರಣೆ ಸಮೇತ ತಿಳಿಸಿದರು. “ಬುಲೆಟ್ ರೈಲು ಓಡಾಟ ಆರಂಭವಾದರೆ, ಜನ ಸೂರತ್‌ನಲ್ಲಿ ತಿಂಡಿ ತಿಂದು, ಮುಂಬೈನಲ್ಲಿ ಕೆಲಸ ಮುಗಿಸಿಕೊಂಡು, ರಾತ್ರಿ ತಮ್ಮ ಮನೆ ಸೇರಬಹುದು. ಬುಲೆಟ್‌ ರೈಲುಗಳಲ್ಲಿ ಓಡಾಡುವ ಟಿಕೆಟ್‌ ದರ ಕೂಡ ನಿಯಮಿತವಾಗಿಯೇ ಇರಲಿದೆ” ಎಂದು ರೈಲ್ವೆ ಸಚಿವ ತಿಳಿಸಿದರು.

ಇದನ್ನೂ ಓದಿ: PM Narendra Modi: ಬೆಂಗಳೂರು- ಕಲಬುರಗಿ, ಮೈಸೂರು- ಚೆನ್ನೈ ಸೇರಿ 10 ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ಮುಂಬೈ-ಅಹಮದಾಬಾದ್‌ ಬುಲೆಟ್‌ ರೈಲು ಕಾರಿಡಾರ್‌ ಯೋಜನೆಯು 2021ರ ನವೆಂಬರ್‌ನಲ್ಲಿ ಆರಂಭವಾಗಿದೆ. ಇದಾದ ಆರು ತಿಂಗಳಲ್ಲಿ ಒಂದು ಕಿಲೋಮೀಟರ್‌ ರೈಲು ಮಾರ್ಗ ನಿರ್ಮಿಸಲಾಗಿದೆ. 2023ರ ಏಪ್ರಿಲ್‌ ವೇಳೆಗೆ 50 ಕಿಲೋಮೀಟರ್‌ ಆಗಿದೆ. ಇದೇ ಕಾರಿಡಾರ್‌ ಭಾಗವಾಗಿ ಎಂಟು ನದಿಗಳಿಗೆ ಸೇತುವೆ ನಿರ್ಮಿಸಲಾಗುತ್ತದೆ. ಮೊದಲ ಬುಲೆಟ್‌ ರೈಲು ಯೋಜನೆಗೆ 1.08 ಲಕ್ಷ ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದಕ್ಕೆ ಜಪಾನ್‌ ಸರ್ಕಾರವು ಕೇವಲ 0.1ರ ಬಡ್ಡಿದರದಲ್ಲಿ ಸಾಲ ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Lok Sabha Election 2024: ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಯಶಸ್ವಿ; ಎಲೆಕ್ಷನ್‌ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್!

Lok Sabha Election 2024: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯನ್ನು ಆಯೋಜಿಸಲಾಗಿತ್ತು. ಎಲ್ಲ ಕಡೆ ಎರಡೂ ಪಕ್ಷದ ಪ್ರಮುಖ ನಾಯಕರು ಪ್ರಚಾರ ನಡೆಸಲಿದ್ದು, ಕಾರ್ಯಕರ್ತರೂ ಜತೆಯಾಗಬೇಕು. ರಾಜ್ಯದಲ್ಲಿ ಮೈತ್ರಿಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು. 28ಕ್ಕೆ 28 ಕ್ಷೇತ್ರವನ್ನು ಗೆದ್ದುಕೊಡುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ಶ್ರಮವನ್ನು ಹಾಕಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

VISTARANEWS.COM


on

Lok Sabha Election 2024 BJP JDS coordination committee meeting successful Fight to win with the workers
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಹೋರಾಟಕ್ಕೆ ಸಜ್ಜಾಗಿದೆ. ಈ ಸಂಬಂಧ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯನ್ನು (BJP JDS coordination committee meeting) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದು, ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (BS Yediyurappa), ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra), ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್‌ ಅಗರ್‌ವಾಲ್‌ (Radha Mohandas Agarwal) ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD DeveGowda), ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸೇರಿದಂತೆ ಉಭಯ ಪಕ್ಷಗಳ ಹಲವು ನಾಯಕರು ಭಾಗಿಯಾಗಿದ್ದಾರೆ. ಈ ವೇಳೆ ಪಕ್ಷದ ಶಾಲುಗಳನ್ನು ಪರಸ್ಪರ ಹಾಕಿಕೊಂಡು ಮುಂದಿನ ರಣತಂತ್ರವನ್ನು ಹೆಣೆಯಲು ರೂಪುರೇಷೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಬಿಜೆಪಿ, ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು ಸೇರಿದಂತೆ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ಅಭ್ಯರ್ಥಿ ಗೋವಿಂದ ಕಾರಜೋಳ, ಜೆಡಿಎಸ್‌ ಸಮನ್ವಯ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಇತರರು ಹಾಜರಿದ್ದರು.

Lok Sabha Election 2024 BJP JDS coordination committee meeting successful Fight to win with the workers

ನಡೆದ ಚರ್ಚೆಗಳೇನು?

ಈಗಾಗಲೇ ಬಿಜೆಪಿ – ಜೆಡಿಎಸ್‌ ಮೈತ್ರಿಯಾಗಿದೆ. ಆದರೆ, ಇದು ದೆಹಲಿ ಮಟ್ಟದಲ್ಲಿ ಆಗಿದೆ. ಕಾರ್ಯಕರ್ತರನ್ನು ಈ ಬಗ್ಗೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಉಭಯ ಪಕ್ಷಗಳ ರಾಜ್ಯ ನಾಯಕರು ಸಹ ಒಟ್ಟಾಗಿಲ್ಲ ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು. ಆದರೆ, ಇದಕ್ಕೆ ಬ್ರೇಕ್‌ ಹಾಕುವ ಸಂಬಂಧ ಈಗಾಗಲೇ ಮಂಡ್ಯ ಸೇರಿದಂತೆ ಕೆಲವು ಕಡೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಜತೆಗೆ ಪ್ರಚಾರ ಕಾರ್ಯವನ್ನು ಒಟ್ಟಾಗಿ ಮಾಡಲಾಗಿದೆ. ಈ ಮೂಲಕ ಎರಡೂ ಪಕ್ಷದ ಕಾರ್ಯಕರ್ತರಿಗೆ ನಾವೆಲ್ಲರೂ ಒಂದು ಎಂಬ ಭಾವನೆ ಮೂಡುವಂತೆ ಕೆಲಸ ಮಾಡಲಾಗುತ್ತಿದೆ. ಇನ್ನು ಎಲ್ಲ ಕಡೆ ಎರಡೂ ಪಕ್ಷದ ಪ್ರಮುಖ ನಾಯಕರು ಪ್ರಚಾರ ನಡೆಸಲಿದ್ದು, ಕಾರ್ಯಕರ್ತರೂ ಜತೆಯಾಗಬೇಕು. ರಾಜ್ಯದಲ್ಲಿ ಮೈತ್ರಿಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು. 28ಕ್ಕೆ 28 ಕ್ಷೇತ್ರವನ್ನು ಗೆದ್ದುಕೊಡುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ಶ್ರಮವನ್ನು ಹಾಕಬೇಕು. ಕಾರ್ಯಕರ್ತರು ಈ ನಿಟ್ಟಿನಲ್ಲಿ ಜತೆಯಾಗಬೇಕು ಎಂಬ ಬಗ್ಗೆ ಚರ್ಚೆಯನ್ನು ನಡೆಸಲಾಯಿತು.

Lok Sabha Election 2024 BJP JDS coordination committee meeting successful Fight to win with the workers

ಒಟ್ಟಾಗಿ ದುಡಿಯುವ ವಾತಾವರಣ ಸೃಷ್ಟಿ: ಬಿ.ವೈ. ವಿಜಯೇಂದ್ರ‌

ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ ಸಭೆ ಇದಾಗಿದೆ. ಬಹಳ ಹಿಂದೆಯೇ ಇಂಥದ್ದೊಂದು ಸಭೆ ಆಗಬೇಕಿತ್ತು. ಕಾರಣಾಂತರದಿಂದ ಮುಂದೂಡಲಾಗಿತ್ತು. ಬಿಜೆಪಿ – ಜೆಡಿಎಸ್ ಸಮಾಗಮವಾಗಿದೆ. ದೇಶದ ಭವಿಷ್ಯದಿಂದ ಗಂಭೀರವಾಗಿ ಪರಿಗಣಿಸಿ ಎಲ್ಲರೂ ಕೆಲಸ ಮಾಡಬೇಕು. ಎರಡೂ ಪಕ್ಷದ ನಾಯಕರು ಒಗ್ಗೂಡಲಾಗಿದೆ. ಬಿಜೆಪಿ – ಜೆಡಿಎಸ್‌ ಸಮ್ಮಿಲನd ರಾಜಕೀಯ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆಯುವಂತಾಗಲಿದೆ ಎಂದು ಹೇಳಿದರು.

Lok Sabha Election 2024 BJP JDS coordination committee meeting successful Fight to win with the workers

ಬಿಜೆಪಿ-ಜೆಡಿಎಸ್ ನಡುವೆ ಈ ಹಿಂದೆಯೂ ಹೊಂದಾಣಿಕೆ ಆಗಿತ್ತು. ಆದರೆ, ಸೈದ್ಧಾಂತಿಕ ದೃಷ್ಟಿಯಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಒಪ್ಪಿಗೆ ಕೊಟ್ಟಿರಲಿಲ್ಲ. 2024ರಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಿಗೆ ಸೇರಿದೆ ಅಂದರೆ ಇದರಲ್ಲಿ ದೇವೇಗೌಡರ ಆಶೀರ್ವಾದ ಬಹಳ ಮುಖ್ಯವಾಗಿದೆ. ಮುತ್ಸದ್ದಿ ರಾಜಕಾರಣಿ ದೇವೇಗೌಡರು ದೇಶದ ಅಭಿವೃದ್ಧಿ ದೃಷ್ಟಿಯಿಂದ, ಭದ್ರತೆ ದೃಷ್ಟಿಯಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ‌ ಪ್ರಧಾನಿ ಆಗಬೇಕು ಎಂದು ಆಶಯವನನು ವ್ಯಕ್ತಪಡಿಸಿದ್ದಾರೆ. ಇದು ನಮಗೆ ಆನೆ ಬಲ‌ವನ್ನು ತಂದಿದೆ. ಎರಡೂ ಪಕ್ಷಗಳು ಒಂದಾಗಿ ಹಲವಾರು ತಿಂಗಳಾಗಿದೆ. ನಾನು ಕೂಡ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಜತೆ ಎರಡು ದಿನಗಳಲ್ಲಿ ಮೈಸೂರು, ಮಂಡ್ಯದಲ್ಲಿ ಜಂಟಿ ಪ್ರವಾಸ ಮಾಡಿದ್ದೇವೆ. ಇದರಿಂದ ಎರಡೂ ಪಕ್ಷದ ಕಾರ್ಯಕರ್ತರಿಗೆ ಸಂದೇಶ ರವಾನೆಯಾಗಿದೆ. ಇಂದಿನ ಒಗ್ಗಟ್ಟಿನ ಪರಿಣಾಮ, ರಾಜ್ಯದ ಪ್ರಜ್ಞಾವಂತ ಮತದಾರರಿಗೂ ಸಂತೋಷವಾಗಿದೆ. ನಿನ್ನೆ ಮೈಸೂರು, ಮಂಡ್ಯದಲ್ಲಿ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ ಎಂದು ಹೇಳಿದರು.

ಎರಡೂ ಪಕ್ಷದ ಮುಖಂಡರಿಗೆ ಜವಾಬ್ದಾರಿ ಹೆಚ್ಚಿದೆ. ಸಮ್ಮಿಲನ ಆಗಿದೆ. ಇದನ್ನು ರಾಜ್ಯದ ಜನ ಗಂಭೀರವಾಗಿ ಪರಿಗಣಿಸಿದ್ದಾರೆ. ಒಟ್ಟಾಗಿ ದುಡಿಯುವ ವಾತಾವರಣ ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ದುಡಿಯಬೇಕು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಕಾರಣಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಆರೋಗ್ಯವನ್ನು ಕಡೆಗಣಿಸಿ, ವಿಶ್ರಾಂತಿ ಪಡೆಯದೆ ನಮ್ಮ‌ ಜತೆ ಓಡಾಡುತ್ತಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಮೂರೇ ದಿನದಲ್ಲಿ ಪ್ರವಾಸ ಆರಂಭಿಸಿದ್ದಾರೆ. ಇದು ಅವರ ಬದ್ಧತೆಯನ್ನು ತೋರಿಸುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಿಂದ ಕನಿಷ್ಠ 15-20 ಸಚಿವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಗೆ ಹೆದರಿ, ಒಬ್ಬ ಸಚಿವರೂ ಚುನಾವಣೆ ಸ್ಪರ್ಧೆಯನ್ನು ಎದುರಿಸಲು ಮುಂದೆ ಬರಲಿಲ್ಲ. ಕಾಂಗ್ರೆಸ್ ಕಳೆದ ಒಂಭತ್ತು ತಿಂಗಳ ಆಡಳಿತವನ್ನು ಗಮನಿಸಿದರೆ ಜನವಿರೋಧವನ್ನು ಕಟ್ಟಿಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ದೇಶಗಳಲ್ಲಿ ಭ್ರಷ್ಟ ಸರ್ಕಾರ ಇದ್ದರೆ ಅದು ರಾಜ್ಯದ ಕಾಂಗ್ರೆಸ್ ಸರ್ಕಾರವಾಗಿದೆ. ದಲಿತ ವಿರೋಧಿ, ಬಡವರ ಪರ ಕಾಳಜಿ ಇಲ್ಲದ ಸರ್ಕಾರ ಇದಾಗಿದೆ. ಒಂದೇ ಒಂದು ರೂಪಾಯಿ ಅಭಿವೃದ್ಧಿಗೆ ನೀಡದ ಸರ್ಕಾರ ಇದು. ಈ ಬಗ್ಗೆ ಜನರೂ ಆಕ್ರೋಶಗೊಂಡಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

Lok Sabha Election 2024 BJP JDS coordination committee meeting successful Fight to win with the workers

ರಾಜ್ಯದಲ್ಲಿ 28 ಸ್ಥಾನವನ್ನು ಗೆಲ್ಲಬೇಕು: ಎಚ್‌ಡಿಕೆ ಕರೆ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅಗ್ರಗಣ್ಯ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿ ಜನಪ್ರಿಯತೆ ಹೆಚ್ಚಿದೆಯೇ ಹೊರತು, ಕಡಿಮೆಯಾಗಿಲ್ಲ. ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಬೇಕು. ರಾಜ್ಯದಲ್ಲಿ 28 ಸ್ಥಾನವನ್ನು ಗೆಲ್ಲಬೇಕು. ಮತದಾನದ ಕೊನೆಯವರೆಗೂ ಶ್ರಮಿಸಬೇಕು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: Lok Sabha Election 2024: ಅಮಿತ್‌ ಶಾ ರೌಡಿ, ಗೂಂಡಾ ಎಂದ ಯತೀಂದ್ರ ಸಿದ್ದರಾಮಯ್ಯ; ಮೆಚ್ಯುರಿಟಿ, ಬುದ್ಧಿ ಇಲ್ಲವೆಂದ ಬಿಜೆಪಿ

ನಿನ್ನೆಯಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. 28 ಕ್ಷೇತ್ರದಲ್ಲಿ ಎರಡೂ ಪಕ್ಷದವರು ಒಟ್ಟಾಗಿ ದುಡಿಯಬೇಕು. ಅಷ್ಟೂ ಕ್ಷೇತ್ರದಲ್ಲಿ ಗೆಲುವು ನಮ್ಮದಾಗಬೇಕು. ಈ ಹಿಂದೆಯೂ ನನ್ನ ಮೇಲೆ ಬಿಜೆಪಿಯ ಶಾಸಕರು ಪ್ರೀತಿ, ಗೌರವದಿಂದ ನೋಡಿದ್ದೀರಿ. ಹಿಂದೆ ಬಿ.ಎಸ್. ಯಡಿಯೂರಪ್ಪ, ನಾವು ಒಟ್ಟಿಗೆ ಸೇರಿ ಉತ್ತಮ ಆಡಳಿವನ್ನು ನೀಡಿದ್ದೆವು. ಅಂದು ನಮ್ಮ‌ ತಂದೆಯವರ ಅನುಮತಿ ದೊರೆತಿರಲಿಲ್ಲ. ವಿಧಾನಸಭೆಯನ್ನು ವಿಸರ್ಜನೆ ಮಾಡಿ ಹೋಗುವ ಸಂದರ್ಭದಲ್ಲಿ, ಎರಡೂ ಪಕ್ಷದ ಶಾಸಕರು ಮೈತ್ರಿ ಸರ್ಕಾರ ಮಾಡುವ ಒತ್ತಡ ಹಾಕಿದರು. ಅಂದಿನ ನನ್ನ ಉದ್ದೇಶ ಇದ್ದಿದ್ದು, ತಾತ್ಕಾಲಿಕ ಸರ್ಕಾರವಾಗಿತ್ತು. ಅಲ್ಲದೆ, ಶಾಶ್ವತ ಮೈತ್ರಿ ಇರಬೇಕು ಅಂತ ಅಂದುಕೊಂಡಿದ್ದೆ. ಹಲವಾರು ರಾಜಕೀಯ ಬೆಳವಣಿಗೆಯಿಂದ ಮೈತ್ರಿ ಸರ್ಕಾರವನ್ನು ನಡೆಸಲಾಗಲಿಲ್ಲ. ಅಂದು ನಮ್ಮ ತಂದೆಯವರಿಗೆ ತಪ್ಪು ಮಾಹಿತಿ ನೀಡುವ ಕೆಲಸ‌ವನ್ನು ಕೆಲವರು ಮಾಡಿದರು ಎಂದು ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

2018ರಲ್ಲಿ ನಾವು ನೀವು ಸೇರಿ ಮೈತ್ರಿ ಸರ್ಕಾರ ಮಾಡಿದ್ದರೆ ಇಂದಿಗೂ ನಾವೇ ಅಧಿಕಾರ ಮಾಡಬಹುದಿತ್ತು. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಬರಲು ಆಗುತ್ತಿರಲಿಲ್ಲ. ನಮ್ಮಲ್ಲಿರುವ ಒಡಕು, ಅವಿಶ್ವಾಸದ ಕಾರಣ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಯಿತು. ಈಗ ಜೆಡಿಎಸ್‌ ಮೂಲೆ ಗುಂಪಾಯ್ತು ಅಂತ ಕಾಂಗ್ರೆಸ್ ತಿಳಿದಿದೆ. ದೇಶದ ಭದ್ರ ಬುನಾದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿದ್ದಾರೆ. ಪ್ರಧಾನಿಯವರ ದುಡಿಮೆಯನ್ನು ನೋಡಿದ್ದೇನೆ. ಅವರ ಆಹ್ವಾನದ ಮೇರೆಗೆ ನಾನು ಅವರನ್ನು ಭೇಟಿಯಾಗಿದ್ದೆ. ಅಲ್ಲಿಂದ ಇಲ್ಲಿಯವರೆಗೂ ಬಂದಿದೆ. ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರ ಬಂದಾಗ ಹೆಚ್ಚು ಕಡಿಮೆ ಮನಸ್ತಾಪ ಬಂದಿರಬಹುದು. ಆದರೆ, ಈಗ ಎಲ್ಲವೂ ಬಗೆಹರಿದಿದೆ. ಎರಡೂ ಪಕ್ಷದ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Continue Reading

ವಿದೇಶ

Shani Louk Photo: ಹಮಾಸ್‌ ಒತ್ತೆಯಾಳು ಇಸ್ರೇಲಿ ಮಹಿಳೆಯ ನಗ್ನ ದೇಹದ ಫೋಟೋಗೆ ಪ್ರಶಸ್ತಿ; ಆಕ್ರೋಶ; ಉಗ್ರನೇ ತೆಗೆದ ಫೋಟೋನಾ?

Shani Louk Photo: ಬಹುತೇಕ ಪೂರ್ಣ ಬೆತ್ತಲೆಯಾಗಿರುವ ಇಸ್ರೇಲಿ ಮಹಿಳೆ ಶಾನಿ ಲೌಕ್ ಅವರ ದೇಹವನ್ನು ಜೀಪಿನಲ್ಲಿ ಹಾಕಿ ಮೆರವಣಿಗೆ ಮಾಡುತ್ತಿರುವ ಕರುಳು ಕಿವುಚುವಂಥ ಫೋಟೋವು ಪ್ರಶಸ್ತಿ ಪಡೆದ ಚಿತ್ರಗಳಲ್ಲಿ ಒಂದಾಗಿದೆ.

VISTARANEWS.COM


on

shani louk photo hamas terrorists
Koo

ನ್ಯೂಯಾರ್ಕ್‌: ಹಮಾಸ್‌ ಉಗ್ರರಿಂದ (Hamas Terrorists) ಹತ್ಯೆಗೀಡಾದ ಯಹೂದಿ ಮಹಿಳೆ ಶಾನಿ ಲೌಕ್‌ (Shani Louk) ಬೆತ್ತಲೆ ದೇಹವನ್ನು ಗಾಜಾದ (Gaza strip) ಬೀದಿಗಳಲ್ಲಿ ಹಮಾಸ್ ಭಯೋತ್ಪಾದಕರು ಮೆರವಣಿಗೆ ಮಾಡುತ್ತಿರುವ ಚಿತ್ರಕ್ಕೆ ಫೋಟೋ-ಆಫ್-ದಿ-ಇಯರ್ ಬಹುಮಾನ (Photo Award) ನೀಡಲಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ.

ಬಹುತೇಕ ಪೂರ್ಣ ಬೆತ್ತಲೆಯಾಗಿರುವ ಇಸ್ರೇಲಿ ಮಹಿಳೆ ಶಾನಿ ಲೌಕ್ ಅವರ ದೇಹವನ್ನು ಜೀಪಿನಲ್ಲಿ ಹಾಕಿ ಮೆರವಣಿಗೆ ಮಾಡುತ್ತಿರುವ ಕರುಳು ಕಿವುಚುವಂಥ ಫೋಟೋವು ಪ್ರಶಸ್ತಿ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಇದನ್ನು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ಗಾಗಿ ತೆಗೆಯಲಾಗಿತ್ತು. ಯುಎಸ್ ಮೂಲದ ಡೊನಾಲ್ಡ್ ಡಬ್ಲ್ಯೂ. ರೆನಾಲ್ಡ್ಸ್ ಜರ್ನಲಿಸಂ ಇನ್ಸ್ಟಿಟ್ಯೂಟ್ ಈ ಸ್ಪರ್ಧೆಯನ್ನು ನಡೆಸುತ್ತಿದ್ದು, ಪ್ರಶಸ್ತಿಯನ್ನು ನೀಡುತ್ತದೆ.

ʼಪಿಕ್ಚರ್ಸ್ ಆಫ್ ದಿ ಇಯರ್ ಇಂಟರ್ನ್ಯಾಷನಲ್ʼ ಪ್ರಶಸ್ತಿ ವಿಭಾಗದಲ್ಲಿ ಇದು ಮೊದಲ ಸ್ಥಾನವನ್ನು ಪಡೆದಿದೆ. ಆದರೆ ಈ ಪ್ರಶಸ್ತಿ ಘೋಷಣೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ಎದುರಾಗಿದೆ. ಜನ ಲೌಕ್ ಅವರ ಫೋಟೋವನ್ನು “ಯಹೂದಿ ಮಹಿಳೆಯ ಬದುಕಿನ ಘನತೆಗೆ ಮಾಡಿದ ಅವಮಾನ” ಎಂದು ದೂಷಿಸಿದ್ದಾರೆ.

ಶಾನಿ ಲೌಕ್‌ 22 ವರ್ಷ ವಯಸ್ಸಿನ ಜರ್ಮನ್-ಇಸ್ರೇಲಿ ಮಹಿಳೆಯಾಗಿದ್ದು, ಹಮಾಸ್‌ ನಡೆಸಿದ ಕಳೆದ ವರ್ಷದ ಅಕ್ಟೋಬರ್ 7ರ ದಾಳಿಯ ಸಂದರ್ಭದಲ್ಲಿ ಉಗ್ರರ ಕೈಗೆ ಸಿಕ್ಕಿಬಿದ್ದಿದ್ದರು. ಅವರನ್ನು ಅಪಹರಿಸಿ ಗಾಜಾ ಪಟ್ಟಿಗೆ ಕರೆದೊಯ್ಯಲಾಗಿತ್ತು. ಪ್ಯಾಲೇಸ್ಟಿನಿಯನ್ ಉಗ್ರರು ಈಕೆಯನ್ನು ಗಾಯಗೊಳಿಸಿ, ತೆರೆದ ಜೀಪಿನಲ್ಲಿ ಬೋರಲು ಮಲಗಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದರು. ಈಕೆಯ ಮೈಯ ಮೇಲಿದ್ದ ಉಡುಪು ಬಹುತೇಕ ಹರಿದು ಆಕೆ ವಿವಸ್ತ್ರಳಾಗಿದ್ದು, ಆಕೆಯ ಮೇಲೆ ಹಮಾಸ್‌ ಉಗ್ರನೊಬ್ಬ ಕುಳಿತಿದ್ದುದು ಕಂಡುಬಂದಿತ್ತು. ಈ ಫೋಟೋಗೆ ಪ್ರಶಸ್ತಿ ದೊರೆತಿದೆ.

“ಈ ಫೋಟೋವನ್ನು ತೆಗೆದ ವ್ಯಕ್ತಿಯು ನಾಗರಿಕರನ್ನು ಹತ್ಯೆ ಮಾಡುವ, ಚಿತ್ರಹಿಂಸೆ ನೀಡುವ ಮತ್ತು ಅತ್ಯಾಚಾರ ಮಾಡುವ ಜಿಹಾದಿ ಗ್ಯಾಂಗ್‌ನ ಭಾಗವಾಗಿದ್ದಾನೆ. ಅವಳನ್ನು ಹೀಗೆ ನೆನಪಿಸಿಕೊಳ್ಳುವುದು ಆಕೆಯ ಮನೆಯವರಿಗೆ ಖಂಡಿತಕ್ಕೂ ಇಷ್ಟವಿಲ್ಲ. ಈ ಪ್ರಶಸ್ತಿಯು ಅವಳ ಘನತೆಗೆ ನಿರಂತರ ಅಪಚಾರ ಎಸಗುತ್ತದೆ” ಎಂದು ಒಬ್ಬರು ಆಕ್ರೋಶಿಸಿದ್ದಾರೆ.

“ಶಾನಿ ಲೌಕ್ ಅವರ ದೇಹವನ್ನು ಭಯೋತ್ಪಾದಕರು ಪರೇಡ್ ಮಾಡುತ್ತಿರುವ ಚಿತ್ರವನ್ನು ತೆಗೆದ ಅಸೋಸಿಯೇಟೆಡ್ ಪ್ರೆಸ್ ಹಮಾಸ್ ಫೋಟೋಗ್ರಾಫರ್ ಪ್ರತಿಷ್ಠಿತ ಛಾಯಾಗ್ರಹಣ ಪ್ರಶಸ್ತಿಯನ್ನು ಗೆದ್ದಿದ್ದಾನೆ. ಈ ಛಾಯಾಗ್ರಾಹಕರು ಹಮಾಸ್ ಭಯೋತ್ಪಾದಕರೊಂದಿಗೆ 10/7ರಂದು ಇಸ್ರೇಲ್‌ಗೆ ಬಂದರು ಮತ್ತು ದಾಳಿಯ ಬಗ್ಗೆ ತಿಳಿದಿದ್ದರು” ಎಂದು ಇನ್ನೊಬ್ಬ ಬಳಕೆದಾರರು ಎಕ್ಸ್‌ನಲ್ಲಿ ಸಿಟ್ಟಿನಿಂದ ಟ್ವೀಟ್‌ ಮಾಡಿದ್ದಾರೆ.

ಈ ಫೋಟೋವನ್ನು ಆಲಿ ಮಹಮದ್‌ ಎಂಬ ಫೋಟೋಗ್ರಾಫರ್‌ ಕ್ಲಿಕ್ಕಿಸಿದ್ದಾನೆ. ಈತ ಎಪಿ ಸಂಸ್ಥೆಗೆ ಫೋಟೋ ಒದಗಿಸುವ ಏಜೆನ್ಸಿಗಳಲ್ಲಿ ಒಂದರಲ್ಲಿ ಕೆಲಸ ಮಾಡುತ್ತಾನೆ. “ಈ ಫೋಟೋಗ್ರಾಫರ್‌ ಹಮಾಸ್‌ ಉಗ್ರರ ಜೊತೆಗಿದ್ದ” ಎಂದು ಸೋಶಿಯಲ್‌ ಮೀಡಿಯಾದಲ್ಲಿ ಬಹಳ ಮಂದಿ ಆರೋಪಿಸಿದ್ದಾರೆ. ಆದರೆ ಈ ದಾಳಿಯ ಮಾಹಿತಿ ಮೊದಲೇ ಇತ್ತು ಎಂಬುದನ್ನು ಎಪಿ ಸಂಸ್ಥೆ ನಿರಾಕರಿಸಿದೆ.

ಇದನ್ನೂ ಓದಿ: ʼಅವನೇಕೆ ನನ್ನನ್ನು ರೇಪ್‌ ಮಾಡಲಿಲ್ಲ ಎಂದರೆ…ʼ ಹಾರರ್‌ ಸ್ಟೋರಿ ಬಿಚ್ಚಿಟ್ಟ ಹಮಾಸ್‌ ಒತ್ತೆಯಾಳು

Continue Reading

ದೇಶ

Congress: ಕಾಂಗ್ರೆಸ್‌ಗೆ ಐಟಿ ಮತ್ತೊಂದು ಶಾಕ್;‌ 1,700 ಕೋಟಿ ರೂ. ಟ್ಯಾಕ್ಸ್ ನೋಟಿಸ್‌ ಜಾರಿ‌

Congress: ಆದಾಯ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಐಟಿ ಇಲಾಖೆಯು ಸುಮಾರು 1,700 ಕೋಟಿ ರೂ. ಡಿಮ್ಯಾಂಡ್‌ ನೋಟಿಸ್‌ ನೀಡಿದೆ. ಇದರಿಂದ ಪಕ್ಷವು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Rahul Gandhi And Sonia Gandhi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹೊಸ್ತಿಲಿನಲ್ಲಿಯೇ ಕಾಂಗ್ರೆಸ್‌ಗೆ (Congress) ಸಾಲು ಸಾಲು ಪೆಟ್ಟುಗಳು ಬೀಳುತ್ತಿವೆ. ಕಾಂಗ್ರೆಸ್‌ ನಾಯಕರ ಬಿಜೆಪಿ ಸೇರ್ಪಡೆ, ಇಂಡಿಯಾ ಒಕ್ಕೂಟದಲ್ಲಿ (India Bloc) ಬಿರುಕಿನ ಮಧ್ಯೆಯೇ ಕಾಂಗ್ರೆಸ್‌ಗೆ ಆದಾಯ ತೆರಿಗೆ ಇಲಾಖೆಯು (Income Tax Department) ಹೊಸ ಶಾಕ್‌ ನೀಡಿದೆ. ಕೆಲ ವರ್ಷಗಳಿಂದ ತೆರಿಗೆ ರಿಟರ್ನ್ಸ್‌ನಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ 1,700 ಕೋಟಿ ರೂಪಾಯಿಯ ಟ್ಯಾಕ್ಸ್‌ ನೋಟಿಸ್‌ (Tax Notice) ಜಾರಿಗೊಳಿಸಿದೆ.

ಐಟಿ ಇಲಾಖೆ ನೋಟಿಸ್‌ ನೀಡಿರುವುದನ್ನು ಕಾಂಗ್ರೆಸ್‌ ನಾಯಕ ವಿವೇಕ್‌ ತಂಖಾ ದೃಢಪಡಿಸಿದ್ದಾರೆ. 2017-18ನೇ ಸಾಲಿನಿಂದ 2020-21ನೇ ಹಣಕಾಸು ಸಾಲಿನಲ್ಲಿ ಕಾಂಗ್ರೆಸ್‌ ತೆರಿಗೆ ರಿಟರ್ನ್ಸ್‌ ವೇಳೆ ವ್ಯತ್ಯಾಸವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆಯು ಕಾಂಗ್ರೆಸ್‌ಗೆ 1,700 ಕೋಟಿ ರೂ. ಡಿಮ್ಯಾಂಡ್‌ ನೋಟಿಸ್‌ ಜಾರಿಗೊಳಿಸಿದೆ. ಇದರಲ್ಲಿ ದಂಡ ಹಾಗೂ ಬಡ್ಡಿಯೂ ಸೇರಿದೆ ಎಂದು ವಿವೇಕ್‌ ತಂಖಾ ತಿಳಿಸಿದ್ದಾರೆ. ಅಲ್ಲದೆ, ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಆದಾಯ ತೆರಿಗೆ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ನ ಹಲವು ಖಾತೆಗಳಿಗೆ ತಡೆಹಿಡಿದಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ ಪಕ್ಷದ ಹಲವು ಖಾತೆಗಳಿಂದ ಆದಾಯ ತೆರಿಗೆ ಇಲಾಖೆಯು 65 ಕೋಟಿ ರೂಪಾಯಿ ವಿತ್‌ಡ್ರಾ ಮಾಡಿದೆ. ನವದೆಹಲಿಯ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಐಟಿ ಇಲಾಖೆಯು ಹಣ ವಿತ್‌ಡ್ರಾ ಮಾಡಿದೆ. ಕಾಂಗ್ರೆಸ್‌ನ ಮೂರು ಬ್ಯಾಂಕ್ ಖಾತೆಗಳಿಂದ 60.25 ಕೋಟಿಯನ್ನು ಡಿಮ್ಯಾಂಡ್ ಡ್ರಾಫ್ಟ್‌ಗಳ ರೂಪದಲ್ಲಿ ತೆಗೆದುಕೊಳ್ಳಲಾಗಿದೆ. ಭಾರತೀಯ ಯುವ ಕಾಂಗ್ರೆಸ್‌ನ ಖಾತೆಯಿಂದ 5 ಕೋಟಿ ರೂ. ಪಡೆಯಲಾಗಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

ಇದನ್ನೂ ಓದಿ: Parliament Flashback: ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗ ಸೋತು ಹೋಗಿದ್ದ ಒಡೆಯರ್‌!

ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಕಾಂಗ್ರೆಸ್‌ಗೆ ಕಷ್ಟವಾಗುತ್ತಿದೆ. ಕಾಂಗ್ರೆಸ್‌ ನಾಯಕರಿಗೆ ರೈಲ್ವೆ ಟಿಕೆಟ್‌ ಬುಕ್‌ ಮಾಡಲು ಸಹ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಕಾಂಗ್ರೆಸ್‌ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು, ಆದಾಯ ತೆರಿಗೆ ಇಲಾಖೆಯ ಮರು ಮೌಲ್ಯಮಾಪನ ಪ್ರಕ್ರಿಯೆ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ. ಇದರ ಬೆನ್ನಲ್ಲೇ, ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ನೋಟಿಸ್‌ ಜಾರಿ ಮಾಡಿದೆ. ಇದರಿಂದ ಕಾಂಗ್ರೆಸ್‌ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Unmukt Chand
ಕ್ರೀಡೆ9 mins ago

Unmukt Chand: ಭಾರತ ತಂಡ ತೊರೆದು ಯುಎಸ್​ಎ ಸೇರಿದ ಉನ್ಮುಕ್ತ್‌ಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಅನುಮಾನ

Bullet Train
ದೇಶ45 mins ago

Bullet Train: ಬುಲೆಟ್‌ ರೈಲು ಓಡೋದು ಯಾವಾಗ? ರೈಲ್ವೆ ಸಚಿವ ಹೇಳೋದಿಷ್ಟು

Lok Sabha Election 2024 BJP JDS coordination committee meeting successful Fight to win with the workers
Lok Sabha Election 20241 hour ago

Lok Sabha Election 2024: ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಯಶಸ್ವಿ; ಎಲೆಕ್ಷನ್‌ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್!

tcs jobs IT hiring
ಉದ್ಯೋಗ1 hour ago

IT Hiring: ಟಿಸಿಎಸ್‌ನಲ್ಲಿ ಫ್ರೆಶರ್‌ಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಯಾವಾಗ ಕೊನೆಯ ದಿನ?

Road Accident
ಬೆಂಗಳೂರು ಗ್ರಾಮಾಂತರ1 hour ago

Road Accident : ತಲೆ ಮೇಲೆ ಹರಿದ ಲಾರಿ; ಅರಣ್ಯ ಇಲಾಖೆ ಸಿಬ್ಬಂದಿ ಸಾವು, ಮತ್ತೊಬ್ಬ ಗಂಭೀರ

Sonarika Bhadoria
ಕಿರುತೆರೆ1 hour ago

Sonarika Bhadoria: ಹನಿಮೂನ್‌ನ ಹಾಟ್‌ ಫೋಟೊ ಶೇರ್‌ ಮಾಡಿದ ಹಿಂದಿ ಸೀರಿಯಲ್‌ ನಟಿ!

Riyan Parag
ಕ್ರೀಡೆ1 hour ago

Riyan Parag: 3 ದಿನ ನೋವು ನಿವಾರಕ ಮಾತ್ರೆ ಸೇವಿಸಿ ಹಾಸಿಗೆಯಲ್ಲಿದ್ದೆ; ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ಭಾವುಕರಾದ ​ಪರಾಗ್

Accident Case
ತುಮಕೂರು2 hours ago

Accident Case : ಮರ ಕಡಿಯುವಾಗ ಕರೆಂಟ್‌ ಶಾಕ್‌ಗೆ ಬಲಿ; ಹುಣಸೆ ಹಣ್ಣು ಕೊಯ್ಯುವಾಗ ಬಿದ್ದು ಸಾವು

shani louk photo hamas terrorists
ವಿದೇಶ2 hours ago

Shani Louk Photo: ಹಮಾಸ್‌ ಒತ್ತೆಯಾಳು ಇಸ್ರೇಲಿ ಮಹಿಳೆಯ ನಗ್ನ ದೇಹದ ಫೋಟೋಗೆ ಪ್ರಶಸ್ತಿ; ಆಕ್ರೋಶ; ಉಗ್ರನೇ ತೆಗೆದ ಫೋಟೋನಾ?

Rahul Gandhi And Sonia Gandhi
ದೇಶ2 hours ago

Congress: ಕಾಂಗ್ರೆಸ್‌ಗೆ ಐಟಿ ಮತ್ತೊಂದು ಶಾಕ್;‌ 1,700 ಕೋಟಿ ರೂ. ಟ್ಯಾಕ್ಸ್ ನೋಟಿಸ್‌ ಜಾರಿ‌

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌