Karnataka education department makes 4 years minimum age for LKGEducation News : ನಿಮ್ಮ ಮಗುವಿಗೆ 4 ವರ್ಷ ಪೂರ್ಣಗೊಂಡಿದೆಯೇ? ಹಾಗಿದ್ರೆ ಮಾತ್ರ ಎಲ್‌ಕೆಜಿಗೆ ಸೇರಿಸಿ! - Vistara News

ಪ್ರಮುಖ ಸುದ್ದಿ

Education News : ನಿಮ್ಮ ಮಗುವಿಗೆ 4 ವರ್ಷ ಪೂರ್ಣಗೊಂಡಿದೆಯೇ? ಹಾಗಿದ್ರೆ ಮಾತ್ರ ಎಲ್‌ಕೆಜಿಗೆ ಸೇರಿಸಿ!

2025-26ನೇ ಸಾಲಿನಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಿಕೊಳ್ಳಲು ಮಗುವಿಗೆ ಆರು ವರ್ಷ ಪೂರ್ಣಗೊಂಡಿರುವುದು ಕಡ್ಡಾಯ ಎಂದು ಈಗಾಗಲೇ ಶಿಕ್ಷಣ ಇಲಾಖೆ (Education News) ಸೂಚಿಸಿದೆ. ಹೀಗಾಗಿ ಈ ವರ್ಷ ಎಲ್‌ಕೆಜಿಗೆ ಸೇರಿಸುವಾಗ ಮಗುವಿಗೆ ನಾಲ್ಕು ವರ್ಷ ಪೂರ್ಣಗೊಂಡಿರಬೇಕಾದದು ಕಡ್ಡಾಯ.

VISTARANEWS.COM


on

Education News age calculator for school admission in karnataka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು 2025-26 ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಜೂನ್‌ 1ನೇ ತಾರೀಖಿಗೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರುವ ಮಗುವನ್ನು ಮಾತ್ರ ಒಂದೇ ತರಗತಿಗೆ ದಾಖಲಿಸಿಕೊಳ್ಳುವಂತೆ ಕಳೆದ ವರ್ಷವೇ ಆದೇಶ ಹೊರಡಿಸಿದೆ. ಹೀಗಾಗಿ ಈ ಶೈಕ್ಷಣಿಕ ಸಾಲಿನಿಂದಲೇ ಎಲ್‌ಕೆಜಿ ತರಗತಿಗೆ ದಾಖಲು ಮಾಡಿಕೊಳ್ಳಲು ಜೂನ್‌ 01ನೇ ತಾರೀಖಿಗೆ ಅನ್ವಯವಾಗುವಂತೆ ನಾಲ್ಕು (4) ವರ್ಷಗಳ ವಯೋಮಿತಿಯನ್ನು (Education News) ನಿಗದಿಪಡಿಸಲಾಗಿದೆ.

ಈ ಸಂಬಂಧ ಇಲಾಖೆಯು ಜ್ಞಾಪನ ಪತ್ರ ಹೊರಡಿಸಿದ್ದು, ಬರುವ ಜೂನ್‌ 1ಕ್ಕೆ ನಾಲ್ಕು ವರ್ಷ ಪೂರ್ಣಗೊಂಡ ಮಕ್ಕಳು ಮಾತ್ರ ಈ ಬಾರಿ ಎಲ್‌ಕೆಜಿಗೆ ಸೇರಬಹುದಾಗಿದೆ. ಮುಂದೆ ಗೊಂದಲವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಇಲಾಖೆಯು ಈ ಕ್ರಮತೆಗೆದುಕೊಂಡಿದೆ.

ಕಳೆದ ವರ್ಷ ಅಂದರೆ 2022 ಜುಲೈ 26ರಂದು ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ ಇನ್ನು ಮುಂದೆ ಒಂದು ಮಗುವಿಗೆ ಒಂದನೇ ತರಗತಿಗೆ ಪ್ರವೇಶ ನೀಡಬೇಕಾದರೆ ಜೂನ್‌ ಒಂದನೇ ತಾರೀಖಿಗೆ ಅನ್ವಯವಾಗುವಂತೆ ಆರು ವರ್ಷ ತುಂಬಿರಲೇಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು 2023-24 ನೇ ಸಾಲಿನಿಂದಲೇ ಜಾರಿಗೆ ತರಬೇಕೆಂದು ಸೂಚಿಸಲಾಗಿತ್ತಾದರೂ ಪೋಷಕರು ಮತ್ತು ಶಾಲೆಗಳ ಆಡಳಿತ ಮಂಡಳಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಇದನ್ನು 2025-26 ನೇ ಸಾಲಿನ ಶೈಕ್ಷಣಿಕ (Education News) ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಪ್ರಕಟಿಸಿತ್ತು.

Karnataka education department
4 years minimum age for LKG
ಶಿಕ್ಷಣ ಇಲಾಖೆ ಹೊರಡಿಸಿದ ಜ್ಞಾಪನ ಪತ್ರ.

ಹೊಸ ನಿಯಮದಂತೆ 2025-26ನೇ ಸಾಲಿನಲ್ಲಿ ಒಂದನೇ ತರಗತಿಗೆ ನಿಮ್ಮ ಮಗುವನ್ನು ಸೇರಿಸಿಬೇಕೆಂದರೆ ಎಲ್‌ಕೆಜಿ ಸೇರ್ಪಡೆ ವಿಷಯದಲ್ಲಿ ಈಗಿನಿಂದಲೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದರೆ 2025-26ನೇ ಸಾಲಿಗೆ ಬರುವಾಗ ಒಂದನೇ ತರಗತಿ ಸೇರುವ ಮಗುವಿಗೆ ಆರು ವರ್ಷ ತುಂಬಿರುವುದು (Education News) ಕಡ್ಡಾಯ. ಹಾಗಾಗಿ, ಈ ವರ್ಷ ಎಲ್‌ಕೆಜಿಗೆ ಸೇರಿಸುವಾಗ ನಿಮ್ಮ ಮಗು ಕಡ್ಡಾಯವಾಗಿ ನಾಲ್ಕು ವರ್ಷ ಪೂರ್ಣಗೊಳಿಸಿರಬೇಕು. ಇಲ್ಲದೇ ಇದ್ದಲ್ಲಿ ಎಲ್‌ಕೆಜಿ ಅಥವಾ ಯುಕೆಜಿಯಲ್ಲಿಯೇ ಮಗು ಒಂದು ವರ್ಷ ಹೆಚ್ಚಾಗಿ ಉಳಿದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಲಿದ್ದು, ಇದು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾಗಿದೆ.

ಈ ವರ್ಷ ಎಲ್‌ಕೆಜಿಗೆ ಸೇರಿಸುವಾಗಲೇ ವಯಸ್ಸನ್ನು ಸರಿಯಾಗಿ ನೋಡಿಕೊಂಡು ಸೇರಿಸಿದಲ್ಲಿ, ಮುಂದೆ ಗೊಂದಲವಾಗುವುದು ತಪ್ಪಲಿದೆ. ಆರು ವರ್ಷಪೂರ್ಣಗೊಳ್ಳದ ಮಕ್ಕಳನ್ನು ಯಾವುದೇ ಕಾರಣಕ್ಕೂ ಮುಂದೆ (2025-26ನೇ ಸಾಲಿನಲ್ಲಿ ) ಒಂದನೇ ತರಗತಿಗೆ ಸೇರಿಸಿಕೊಳ್ಳಲಾಗುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ವಯಸ್ಸು ಎಷ್ಟಿತ್ತು?

ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ 2016-17ನೇ ಶೈಕ್ಷಣಿಕ ವರ್ಷದಲ್ಲಿ ಎಲ್​ಕೆಜಿ ಪ್ರವೇಶಕ್ಕೆ ಮಗುವಿಗೆ 4 ವರ್ಷ, 10 ತಿಂಗಳು ತುಂಬಿರಬೇಕು ಎಂದು ನಿಯಮ ಮಾಡಲಾಗಿತ್ತು. ಅದಕ್ಕೂ ಮೊದಲು ಎಲ್​ಕೆಜಿ ಪ್ರವೇಶಕ್ಕೆ 3 ವರ್ಷ 10 ತಿಂಗಳು ಆಗಿದ್ದರೆ ಸಾಕಾಗಿತ್ತು. ಅದೇ ರೀತಿ 1ನೇ ತರಗತಿ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳ ನಡುವೆ ಮಗುವಿನ ವಯಸ್ಸು ಇದ್ದರೆ ದಾಖಲಾತಿ ಮಾಡಿಕೊಳ್ಳಬಹುದು ಎಂದು ನಿಯಮ ರೂಪಿಸಿತ್ತು.

ಕರ್ನಾಟಕ ಸರ್ಕಾರವು ಈ ನಿಯಮವನ್ನು 2018ರಲ್ಲಿ ಮತ್ತೊಮ್ಮೆ ಸಡಿಲಿಸಿತ್ತು. 1ನೇ ತರಗತಿಗೆ ದಾಖಲಿಸಲು ಕನಿಷ್ಠ 5 ವರ್ಷ 5 ತಿಂಗಳು, ಗರಿಷ್ಠ 7 ವರ್ಷ ಆಗಿರಬೇಕು ಎಂದು ಆದೇಶ ಹೊರಡಿಸಿತ್ತು.

ಇದನ್ನೂ ಓದಿ : Travel Tips: ಮಕ್ಕಳಲ್ಲಿ ಕಾಡಿನ ಬಗ್ಗೆ ಪ್ರೀತಿ ಬೆಳೆಸಲು ಈ ಬೇಸಿಗೆಯಲ್ಲಿ ಕಾಡಿಗೆ ಕರೆದೊಯ್ಯದಿದ್ದರೆ ಹೇಗೆ?!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Dr Sushruth Gowda: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಡಾ.ಶುಶ್ರುತ್ ಗೌಡ

Dr Sushruth Gowda: ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಶ್ರುತ್ ಗೌಡ ಅವರು ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

VISTARANEWS.COM


on

Dr Sushruth Gowda
Koo

ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಯುವ ನಾಯಕ ಸುಶ್ರುತ್ ಗೌಡ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಗರದ ಮಲ್ಲೇಶ್ವರದಲ್ಲಿರುವ ಭಾರತೀಯ ಜನತಾ ಪಕ್ಷದ ರಾಜ್ಯ ಕಚೇರಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಅವರ ಸಮ್ಮುಖದಲ್ಲಿ ಸುಶ್ರುತ್ ಗೌಡ (Dr Sushruth Gowda) ಅವರು ಬಿಜೆಪಿಗೆ ಸೇರ್ಪಡೆಯಾದರು.

ನಂತರ ಮಾತನಾಡಿದ ಡಾ.ಶುಶ್ರುತ್‌ ಗೌಡ ಅವರು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೋಸ್ಕರ ನಾನು ಬಿಜೆಪಿ ಸೇರಿದ್ದೇನೆ. ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌‌ ಕೈತಪ್ಪಿದ್ದಕ್ಕೂ, ನಾನು ಪಕ್ಷ ತೊರೆದಿರುವುದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಈ ಸಂದರ್ಭ ರಾಜ್ಯ ಘಟಕದ ಪದಾಧಿಕಾರಿಗಳು ಹಾಗೂ ಸುಶ್ರುತ್‌ ಗೌಡ ಅವರ ಬೆಂಬಲಿಗರು ಉಪಸ್ಥಿತರಿದ್ದರು.

ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಅನುಭವ

ಡಾ.ಶುಶ್ರುತ್‌ಗೌಡ ಅವರು ನರರೋಗ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಮೈಸೂರಿನ ಡಾ.ಎಚ್.ಸಿ.ವಿಷ್ಣುಮೂರ್ತಿ ಹಾಗೂ ಕೆ.ಜಿ. ರೇಖಾಮೂರ್ತಿ ದಂಪತಿಯ ಪುತ್ರನಾಗಿರುವ ಡಾ.ಶುಶ್ರುತ್‌ಗೌಡ ತಂದೆಗೆ ತಕ್ಕ ಮಗನಾಗಿ ಹೆಸರು ಮಾಡಿ ಚಿಕ್ಕವಯಸ್ಸಿನಲ್ಲೇ ಅಪಾರ ಕೀರ್ತಿಯನ್ನು ಗಳಿಸಿದ್ದಾರೆ.

Dr Sushruth Gowda

ಎಂ.ಬಿ. ಪಾಟೀಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮುಗಿಸಿ ಚೆನ್ನೈನಲ್ಲಿರುವ ಸ್ಟ್ಯಾನ್ಲಿ ಮೆಡಿಕಲ್ ಕಾಲೇಜು ಮತ್ತು ಅಮೆರಿಕದ ಯೂನಿವರ್ಸಿಟಿ ಆಫ್ ಫ್ಲೋರಿಡಾದಲ್ಲಿ ನರರೋಗದ ಬಗ್ಗೆ ಅತ್ಯುನ್ನತ ವಿದ್ಯಾಭ್ಯಾಸವನ್ನು ಪಡೆದು ಪ್ರತಿಭಾವಂತರಾಗಿದ್ದಾರೆ. ಅಮೆರಿಕದ ವಿವಿಧ ಯೂನಿವರ್ಸಿಟಿಗಳಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಈ ಹಿನ್ನೆಲೆಯಲ್ಲಿ ಇವರ ಸಾಧನೆಯನ್ನು ಗುರುತಿಸಿ ಯೂನಿವರ್ಸಿಟಿ ಆಫ್ ಪ್ಲೋರಿಡಾದಿಂದ ಡಾ.ಕೆನತ್ ಹೆಲ್ ಮ್ಯಾನ್ ರಿಸರ್ಚ್ ಅವಾರ್ಡ್ ಸೇರಿದಂತೆ ಪ್ರತಿಷ್ಠಿತ ಯೂನಿವರ್ಸಿಟಿಗಳಿಂದ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದ ಇವರು ಹೆಸರಾಂತ ನರರೋಗ ತಜ್ಞರಲ್ಲಿ ಒಬ್ಬರಾಗಿದ್ದಾರೆ.

ಇದನ್ನೂ ಓದಿ | ಯಾವ ಬೂತ್‌ನಲ್ಲಿ ಮತ ಹಾಕಬೇಕು? ರೂಟ್‌ ಯಾವುದು? ಎಲ್ಲ ಮಾಹಿತಿಗೂ ಇದೊಂದು App ಸಾಕು

ತವರಲ್ಲಿ ಸಮಾಜಸೇವೆ ಮಾಡುವ ಹಂಬಲಕ್ಕೆ ಸ್ವದೇಶಕ್ಕೆ

ವಿದೇಶದಲ್ಲಿ ಹೆಸರಾಂತ ನರರೋಗ ತಜ್ಞರಾಗಿ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಬಹುದಾಗಿತ್ತಾದರೂ ತವರಲ್ಲಿ ಸಮಾಜ ಸೇವೆ ಮಾಡುವ ಹಂಬಲದಿಂದ ಸ್ವದೇಶಕ್ಕೆ ಮರಳಿ ತವರಲ್ಲಿ ಕೆಲಸ ಮಾಡುತ್ತಿದ್ದಾರೆ. ತವರು ಕ್ಷೇತ್ರದಲ್ಲಿ ಕೆಲಸ ಮಾಡುವ ಸಲುವಾಗಿ ಪ್ರಸ್ತುತ ಪ್ರತಿಷ್ಠಿತ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ನರರೋಗ ಕೇಂದ್ರವನ್ನು ತೆರೆದು ಸಾವಿರಾರು ರೋಗಿಗಳಿಗೆ ಶುಶ್ರೂಷೆ ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಡವರು, ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ನರರೋಗ ಸಮಸ್ಯೆಯನ್ನು ಹೊತ್ತು ಬಂದವರಿಗೆ ಚಿಕಿತ್ಸೆ ನೀಡುವ ಮೂಲಕ ಅವರ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದ್ದಾರೆ. ಇದರಿಂದಾಗಿಯೇ ನಗರದಲ್ಲಿ ಇವರ ಕೈಗುಣದ ಸೇವೆ ಪಡೆಯಲು ಅನೇಕರು ಮುಂಚಿತವಾಗಿ ನೋಂದಣಿ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವುದು ವಿಶೇಷವಾಗಿದೆ.

ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ

ಕೊರೊನಾ ಕಾಲದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಆರಂಭಿಸಿದ ಟೆಲಿ ಮೆಡಿಸನ್ ಚಿಕಿತ್ಸೆ ಸೇವೆ ಇಂದಿಗೂ ಮುಂದುವರಿಯುವ ಜತೆಗೆ ಇದುವರೆಗೂ 13,500 ಮಂದಿಗೆ ಅತ್ಯಾಧುನಿಕ ಶೈಲಿಯ ಚಿಕಿತ್ಸೆಯನ್ನು ನೀಡಿರುವುದು ವಿಶೇಷವಾಗಿದೆ. ಕೋವಿಡ್ ಕಾಣಿಸಿಕೊಂಡ ಮೇಲೆ ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ಆಸ್ಪತ್ರೆಗೆ ಬರುವುದು ತುಂಬಾ ತೊಂದರೆಯಾಗಿದ್ದ ಕಾರಣ ಅಮೆರಿಕ ದೇಶದಲ್ಲಿರುವ ವ್ಯವಸ್ಥೆಯ ಮಾದರಿಯನ್ನೇ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ಟೆಲಿಹೆಲ್ತ್ ಅಡ್ವೈಸರಿ ಫಾರ್ ರೂರಲ್ ರೆನ್ ಪ್ರಾರಂಭಿಸಿ ಸೇವೆ ನೀಡಲಾಗುತ್ತಿತ್ತು. ಕಡಕೊಳ, ಸಿಂಧುವಳ್ಳಿ, ಸಿದ್ದಲಿಂಗಪುರ, ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಗಿರಿಜನರು ಹೆಚ್ಚಾಗಿ ವಾಸಿಸುವ ಹಾಡಿಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಮಧುಮೇಹ, ಅಸ್ತಮಾ ಸಣ್ಣ ಸಣ್ಣ ಸಮಸ್ಯೆಗಳಿಗೆ ಸೀಮಿತವಾಗದೆ ನುರಿತ ತಜ್ಞ ವೈದ್ಯರ ಮೂಲಕಟೆಲಿಮೆಡಿಸನ್ ಮೂಲಕ ಸೇವೆ ನೀಡಲಾಗುತ್ತಿದೆ.

ಇದನ್ನೂ ಓದಿ | Lok Sabha Election 2024: ಬೆಂಗಳೂರು ಗ್ರಾಮಾಂತರಕ್ಕೆ ಡಬಲ್ ಸೆಕ್ಯೂರಿಟಿ; 28 ಲೋಕಸಭಾ ಕ್ಷೇತ್ರದ ಮತದಾರರು ಎಷ್ಟು?

ಅದೇ ರೀತಿ ಹೃದ್ರೋಗ, ನರರೋಗ, ಗ್ಯಾಸ್ಟ್ರೋಎಂಟರಾಲಜಿ, ಪ್ರಸೂತಿ ಮೊದಲಾದ ಕಾಯಿಲೆಗಳ ರೋಗಿಗಳಿಗೆ ಆಸ್ಪತ್ರೆಯಿಂದಲೇ ಸಮಾಲೋಚನೆ ನಡೆಸುವ ಮೂಲಕ ಗಮನ ಸೆಳೆಯಲಾಗಿತ್ತು. ಇದುವರೆಗೂ 60ಕ್ಕೂ ಹೆಚ್ಚು ಕ್ಯಾಂಪ್‌ಗಳನ್ನು ನಡೆಸಿ 13500 ಮಂದಿಗೆ ಅನುಕೂಲ ಕಲ್ಪಿಸಲಾಗಿದೆ. ಆಶಾ ಕಾರ್ಯಕರ್ತರು ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದರಿಂದ ಆರೋಗ್ಯ ತಪಾಸಣೆ ಮಾಡುವ ಜತೆಗೆ, ನಗರದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿರ ಆರೋಗ್ಯದ ಹಿತದೃಷ್ಟಿಯಿಂದ 2 ಸಾವಿರ ಪೌರ ಕಾರ್ಮಿಕರಿಗೆ ಆರೋಗ್ಯ ಶಿಬಿರ ನಡೆಸಿ ಅನುಕೂಲ ಮಾಡಲಾಗಿದೆ. ಇದಲ್ಲದೆ, ಕೆ.ಆರ್.ಆಸ್ಪತ್ರೆ, ಎಸ್‌ಎಂಟಿ ಆಸ್ಪತ್ರೆ, ರಾಜೀವ್‌ನಗರ ಆಸ್ಪತ್ರೆಗೆ ಜಂಬೋ ಸಿಲಿಂಡರ್, ಆಕ್ಸಿಜನ್ ಸಿಲಿಂಡರ್ ಮೊದಲಾದ ವೈದ್ಯಕೀಯ ಸಲಕರಣೆಗಳನ್ನು ವಿತರಿಸುವ ಮೂಲಕ ಅನುಕೂಲ ಮಾಡಿದ್ದನ್ನು ಇಂದಿಗೂ ವೈದ್ಯರು ಮತ್ತು ಸಾರ್ವಜನಿಕರು ನೆನಪಿಸಿಕೊಳ್ಳುತ್ತಾರೆ.

Continue Reading

ದೇಶ

Railway Ticket: ಎಲ್ಲರಿಗೂ ರೈಲ್ವೆ ಟಿಕೆಟ್‌, ವೇಟಿಂಗ್‌ ಮಾತೇ ಇಲ್ಲ; ಕೇಂದ್ರ ಮಹತ್ವದ ಘೋಷಣೆ!

Railway Ticket: ಮುಂದಿನ ಐದು ವರ್ಷಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಮತ್ತಷ್ಟು ಕ್ರಾಂತಿಕಾರಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ಅದರಲ್ಲೂ, ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿ, ಪ್ರತಿಯೊಬ್ಬರಿಗೂ ಕನ್ಫರ್ಮ್ಡ್‌ ಟಿಕೆಟ್‌ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

VISTARANEWS.COM


on

Railway Ticket
Koo

ನವದೆಹಲಿ: ದೇಶದ ರೈಲ್ವೆ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲಾಗಿದೆ. ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ವಂದೇ ಭಾರತ್‌ನಂತಹ ಅತ್ಯಾಧುನಿಕ ರೈಲುಗಳನ್ನು ಪರಿಚಯಿಸಲಾಗಿದೆ. ಇದರ ಬೆನ್ನಲ್ಲೇ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರು ಮಹತ್ವದ ಘೋಷಣೆ ಮಾಡಿದ್ದಾರೆ. “ಮುಂದಿನ 5 ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಯಾಣಿಕರಿಗೂ (Railway Ticket) ಕನ್ಫರ್ಮ್ಡ್‌ ಟಿಕೆಟ್‌ (Confirmed Tickets) ಸಿಗಲಿವೆ. ಇದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಗ್ಯಾರಂಟಿಯಾಗಿದೆ” ಎಂಬುದಾಗಿ ತಿಳಿಸಿದ್ದಾರೆ.

“ಕಳೆದ 10 ವರ್ಷಗಳಲ್ಲಿ ಭಾರತದ ರೈಲ್ವೆಯನ್ನು ನರೇಂದ್ರ ಮೋದಿ ಅವರು ರೂಪಾಂತರಗೊಳಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ ದೇಶದ ರೈಲ್ವೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದು ನರೇಂದ್ರ ಮೋದಿ ಅವರ ಗ್ಯಾರಂಟಿಯಾಗಿದೆ. ದೇಶಾದ್ಯಂತ ರೈಲುಗಳನ್ನು ಹೆಚ್ಚಿಸಿ, ಪ್ರತಿಯೊಬ್ಬ ಪ್ರಯಾಣಿಕರಿಗೆ ಕನ್ಫರ್ಮ್ಡ್‌ ಟಿಕೆಟ್‌ ಸಿಗುವಂತೆ ಮಾಡಲಾಗುತ್ತದೆ. ಇದರಿಂದ ಪ್ರಯಾಣಿಕರು ವೇಟಿಂಗ್‌ ಲಿಸ್ಟ್‌ ನೋಡುತ್ತ ಕಾಯುವುದು ತಪ್ಪುತ್ತದೆ. ಎಲ್ಲರಿಗೂ ಸುಲಭವಾಗಿ ರೈಲು ಟಿಕೆಟ್‌ ಕೊಡುವಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ” ಎಂದು ಐಎಎನ್‌ಎಸ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಅಶ್ವಿನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ.

“ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯು ಮತ್ತಷ್ಟು ಬಲಿಷ್ಠವಾಗಲಿದೆ. ಇದು ದೇಶಾದ್ಯಂತ ರೈಲ್ವೆ ಪ್ರಯಾಣಿಕರಿಗೆ ಹೊಸ ಸೌಲಭ್ಯ, ಮೂಲ ಸೌಕರ್ಯಗಳನ್ನು ಒದಗಿಸಲು ನೆರವಾಗಲಿದೆ. ಅದೇ ರೀತಿ, ಪ್ರಯಾಣಿಕರು ಸುಲಭವಾಗಿ ಹಾಗೂ ಕ್ಷಿಪ್ರವಾಗಿ ರೈಲು ಟಿಕೆಟ್‌ಗಳನ್ನು ಪಡೆಯುವಂತೆ ಮಾಡುವುದು ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ, ಇನ್ನಷ್ಟು ರೈಲುಗಳ ಓಡಾಟ, ದೇಶಾದ್ಯಂತ ರೈಲು ವಿಸ್ತರಣೆ ಮಾಡುವುದು, ರೈಲ್ವೆ ಲೇನ್‌ಗಳನ್ನು ವಿಸ್ತರಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ” ಎಂದು ತಿಳಿಸಿದ್ದಾರೆ.

“2014ರಿಂದ 2024ರ ಅವಧಿಯಲ್ಲಿ ದೇಶಾದ್ಯಂತ 31 ಸಾವಿರ ಹೊಸ ಟ್ರ್ಯಾಕ್‌ಗಳನ್ನು ಅಳವಡಿಸಲಾಗಿದೆ. 2004ರಿಂದ 2014ರ ಅವಧಿಯಲ್ಲಿ 5 ಸಾವಿರ ಕಿಲೋಮೀಟರ್‌ ರೈಲು ಮಾರ್ಗವು ವಿದ್ಯುದ್ದೀಕರಣವಾಗಿತ್ತು. ಆದರೆ, ಕಳೆದ 10 ವರ್ಷದಲ್ಲಿ ರೈಲ್ವೆ ಮಾರ್ಗದ ವಿದ್ಯುದ್ದೀಕರಣದ ಪ್ರಮಾಣವು 44 ಸಾವಿರ ಕಿಲೋಮೀಟರ್‌ಗೆ ಏರಿಕೆಯಾಗಿದೆ. ಯುಪಿಎ 1 ಹಾಗೂ 2 ಆಡಳಿತದ ಅವಧಿಯಲ್ಲಿ 32 ಸಾವಿರ ಬೋಗಿಗಳನ್ನು ಉತ್ಪಾದಿಸಲಾಗಿತ್ತು. ಆದರೆ, ಕಳೆದ 10 ವರ್ಷದಲ್ಲಿ 54 ಸಾವಿರ ಬೋಗಿಗಳನ್ನು ತಯಾರಿಸಲಾಗಿದೆ” ಎಂದು ವಿವರಿಸಿದರು.

ಇದನ್ನೂ ಓದಿ: Train Ticket Cancellation: ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಆರ್‌ಎಸಿ ಟಿಕೆಟ್‌ ರದ್ದು ಪಡಿಸಿದರೆ ಇನ್ನು ಮುಂದೆ ಕೇವಲ 60 ರೂ. ಕಡಿತ

Continue Reading

ದೇಶ

VVPAT Verification: ವಿವಿಪ್ಯಾಟ್‌ ಕೇಸ್; ಚುನಾವಣೆಯನ್ನು ನಾವು ನಿಯಂತ್ರಿಸಲಾಗದು ಎಂದ ಸುಪ್ರೀಂಕೋರ್ಟ್; ಮತಯಂತ್ರ ವಿರೋಧಿಗಳಿಗೆ ಹಿನ್ನಡೆ

VVPAT Verification: ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳನ್ನು ತಾಳೆ ಮಾಡಬೇಕು ಎಂಬುದಾಗಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಚುನಾವಣೆ ಆಯೋಗದಲ್ಲಿ ಬದಲಾವಣೆಗಳನ್ನು ತರುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಿತು. ಹಾಗೆಯೇ, ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿತು.

VISTARANEWS.COM


on

VVPAT Verification
Koo

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳನ್ನು ತಾಳೆ ಮಾಡುವ ದಿಸೆಯಲ್ಲಿ ಇವಿಎಂ ಬಳಿ ಇರಿಸುವ ವಿವಿಪ್ಯಾಟ್‌ಗಳ ತಾಳೆಯ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ನಾವು ಚುನಾವಣೆ ಆಯೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಇವಿಎಂನಲ್ಲಿ ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್‌ ಜತೆ ತಾಳೆ ಹಾಕಿ ನೋಡಬೇಕು ಹಾಗೂ ವಿವಿಪ್ಯಾಟ್‌ ಸ್ಲಿಪ್‌ಗಳನ್ನು (VVPAT Verification) ಬ್ಯಾಲೆಟ್‌ ಬಾಕ್ಸ್‌ನಲ್ಲಿ ಠೇವಣಿ ಮಾಡಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಗಳ ಸಂಬಂಧಿಸಿದಂತೆ ಚುನಾವಣೆ ಆಯೋಗದ (Election Commission) ಸ್ಪಷ್ಟನೆ ಪಡೆದ ಸರ್ವೋಚ್ಚ ನ್ಯಾಯಾಲಯವು (Supreme Court), ಶೇ.100ರಷ್ಟು ತಾಳೆಗೆ ನಿರ್ದೇಶನ ನೀಡಬೇಕು ಎಂಬ ಬಗೆಗಿನ ತೀರ್ಪನ್ನು ಕಾಯ್ದರಿಸಿತು.

“ನಾವು ಚುನಾವಣೆ ಆಯೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಚುನಾವಣೆ ಆಯೋಗವು ದೇಶದ ಸಂವಿಧಾನದ ಅನ್ವಯ ರಚಿಸಲಾದ ಸಂಸ್ಥೆಯಾಗಿದೆ. ಹಾಗಾಗಿ, ಅದರ ಕಾರ್ಯಚಟುವಟಿಕೆಗಳನ್ನು ನಾವು ನಿಯಂತ್ರಿಸಲು ಆಗುವುದಿಲ್ಲ. ಅನುಮಾನದ ಆಧಾರದ ಮೇಲೆ ನಾವು ಆದೇಶ ಹೊರಡಿಸಲು ಬರುವುದಿಲ್ಲ. ನೀವು (ಅರ್ಜಿದಾರರು) ಅನುಮಾನ ವ್ಯಕ್ತಪಡಿಸಿದಿರಿ ಎಂಬ ಮಾತ್ರಕ್ಕೆ ನಾವು ಯಾವುದೇ ಆದೇಶ ಹೊರಡಿಸಲು ಆಗುವುದಿಲ್ಲ. ಹಾಗೆಯೇ, ನಾವು ನಿಮ್ಮ ಯೋಚನಾ ಲಹರಿಯನ್ನೂ ಬದಲಿಸಲ್ಲ” ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತಾ ನೇತೃತ್ವದ ನ್ಯಾಯಪೀಠ ತಿಳಿಸಿತು.

ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, “ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆಗಳು ಆಗಬೇಕು. ಇವಿಎಂ ಮತಗಳನ್ನು ವಿವಿಪ್ಯಾಟ್‌ ಜತೆ ಶೇ.100ಕ್ಕೆ 100ರಷ್ಟು ತಾಳೆ ಮಾಡಬೇಕು” ಎಂಬುದಾಗಿ ತಿಳಿಸಿದರು. ಆಗ ನ್ಯಾಯಾಲಯವು, “ಚುನಾವಣೆ ಆಯೋಗದ ಪ್ರಕ್ರಿಯೆಗಳನ್ನು ಬದಲಿಸಲು, ಅದರ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ” ಎಂದು ತಿಳಿಸಿತು.

ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗವು ಮತಯಂತ್ರಗಳ ಜತೆಗೆ ವಿವಿಪ್ಯಾಟ್‌ಗಳನ್ನೂ (ವೋಟರ್‌ ವೇರಿಫೈಡ್‌ ಪೇಪರ್‌ ಆಡಿಟ್‌ ಟ್ರಯಲ್)‌ ಇರಿಸುತ್ತದೆ. ಮತಎಣಿಕೆ ಮಾಡುವಾಗ ಇವಿಎಂನಲ್ಲಿ ದಾಖಲಾದ ಹಾಗೂ ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ತಾಳೆ ಮಾಡುತ್ತದೆ. ಈಗ ಪ್ರತಿ ಕ್ಷೇತ್ರದಲ್ಲೂ ಐದು ಇವಿಎಂಗಳನ್ನು ಆಯ್ಕೆ ಮಾಡಿಕೊಂಡು, ನಂತರ ಇವಿಎಂಗಳ ಜತೆ ತಾಳೆ ಮಾಡುವ ವಿಧಾನ ಇದೆ. ಆದರೆ, ಎಲ್ಲ ಇವಿಎಂಗಳ ಜತೆ ತಾಳೆ ಹಾಕಬೇಕು ಎಂಬುದು ಅರ್ಜಿದಾರರ ವಾದವಾಗಿದೆ.

ಇದನ್ನು ಓದಿ: ವಿಸ್ತಾರ explainer: VVPAT Verification: ಇವಿಎಂನಲ್ಲಿ ನಿಮ್ಮ ಮತ ದಾಖಲಾಗುವುದು ಹೇಗೆ? ವಿವಿಪ್ಯಾಟ್‌ ಕೆಲಸ ಏನು? ಇಲ್ಲಿದೆ ಸಮಗ್ರ ವಿವರ

Continue Reading

ದೇಶ

Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

Sunita Williams: ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಯುನೈಟೆಡ್ ಲಾಂಚ್ ಅಲಯನ್ಸ್ ಅಟ್ಲಾಸ್ ವಿ ರಾಕೆಟ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಮೇಲಕ್ಕೆ ತೆರಳಿ ಕಕ್ಷೆಯ ಪ್ರಯೋಗಾಲಯದಲ್ಲಿ ತಂಗಲಿದ್ದಾರೆ. ಅಲ್ಲಿ ಅವರು ಸುಮಾರು ಒಂದು ವಾರ ಉಳಿಯುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

VISTARANEWS.COM


on

Sunita Williams
Koo

ನ್ಯೂಯಾರ್ಕ್‌: ಭಾರತೀಯ ಮೂಲದ ವಿಖ್ಯಾತ ಗಗನಯಾತ್ರಿ (Astronaut) ಸುನೀತಾ ಎಲ್. ವಿಲಿಯಮ್ಸ್ (Sunita Williams), ತಮ್ಮ ಮೂರನೇ ಬಾಹ್ಯಾಕಾಶ ಯಾತ್ರೆಯನ್ನು (Space mission) ನಡೆಸಲು ಸಜ್ಜಾಗಿದ್ದಾರೆ. ಅಮೆರಿಕದ ನಾಸಾ (NASA) ಸಂಸ್ಥೆಯ ಗಗನಯಾತ್ರಿಯಾದ ಸುನೀತಾ, ಪ್ರಸ್ತುತ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಪೈಲಟ್ ಆಗಲು ತರಬೇತಿ ಪಡೆಯುತ್ತಿದ್ದಾರೆ. ಇದು ಆ ವಾಹನದ ಮೊದಲ ಸಿಬ್ಬಂದಿ ವಿಮಾನ. ಮತ್ತು ಸುನೀತಾಗೆ ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಮೂರನೇ ಕಾರ್ಯಾಚರಣೆಯಾಗಿದೆ.

“ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಏಜೆನ್ಸಿಯ ಬೋಯಿಂಗ್ ಕ್ರೂ ಫ್ಲೈಟ್ ಪರೀಕ್ಷೆಯ ತಯಾರಿಗಾಗಿ NASA ಎರಡು ಉಡಾವಣೆಗಳನ್ನು ಆಯೋಜಿಸಿದೆ. ಏಪ್ರಿಲ್ 25ರಂದು EDTನಲ್ಲಿ ಹಾಗೂ ಮೇ 6ರಂದು ಫ್ಲೋರಿಡಾದ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದಲ್ಲಿ ಬಾಹ್ಯಾಕಾಶ ಉಡಾವಣಾ ಸಂಕೀರ್ಣ-41ರಿಂದ.”

ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಯುನೈಟೆಡ್ ಲಾಂಚ್ ಅಲಯನ್ಸ್ ಅಟ್ಲಾಸ್ ವಿ ರಾಕೆಟ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಮೇಲಕ್ಕೆ ತೆರಳಿ ಕಕ್ಷೆಯ ಪ್ರಯೋಗಾಲಯದಲ್ಲಿ ತಂಗಲಿದ್ದಾರೆ. ಅಲ್ಲಿ ಅವರು ಸುಮಾರು ಒಂದು ವಾರ ಉಳಿಯುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ಭಾಗವಾಗಿ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಸಿಬ್ಬಂದಿ ವಿಮಾನದ ಉಡಾವಣೆ, ಡಾಕಿಂಗ್ ಮತ್ತು ಭೂಮಿಗೆ ಹಿಂತಿರುಗುವುದು ಸೇರಿದಂತೆ ಸ್ಟಾರ್‌ಲೈನರ್ ಸಿಸ್ಟಮ್‌ನ ಸಾಮರ್ಥ್ಯಗಳನ್ನು ಪರೀಕ್ಷಿಸಲಾಗಿದೆ.

ಸುನಿತಾ ವಿಲಿಯಮ್ಸ್ ಅವರ ಪರಿಣತಿ

ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಹಾರಾಟದ ಮೊದಲ ಅನುಭವವು ಡಿಸೆಂಬರ್ 9, 2006ರಿಂದ ಜೂನ್ 22, 2007ರವರೆಗೆ ನಡೆಯಿತು. ʼಎಕ್ಸ್‌ಪೆಡಿಶನ್ 14/15ʼನೊಂದಿಗೆ ಪ್ರಾರಂಭವಾಯಿತು. ಅವರು STS-116ನ ಸಿಬ್ಬಂದಿಯೊಂದಿಗೆ ಸಾಗಿ ಫ್ಲೈಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಅವರು ಒಟ್ಟು 29 ಗಂಟೆ 17 ನಿಮಿಷಗಳ ನಾಲ್ಕು ಬಾಹ್ಯಾಕಾಶ ನಡಿಗೆಯೊಂದಿಗೆ ಮಹಿಳೆಯರ ದಾಖಲೆಯನ್ನು ಸ್ಥಾಪಿಸಿದರು. ಜೂನ್ 2007ರಲ್ಲಿ ಯಾನ ಮುಗಿಸಿ STS-117 ಸಿಬ್ಬಂದಿಯೊಂದಿಗೆ ಭೂಮಿಗೆ ಮರಳಿದರು.

ಜುಲೈ 14ರಿಂದ ನವೆಂಬರ್ 18, 2012ರವರೆಗೆ ಅವರ ಎರಡನೇ ಬಾಹ್ಯಾಕಾಶ ಯಾನ, ಎಕ್ಸ್‌ಪೆಡಿಶನ್ 32/33. ಅವರು ರಷ್ಯಾದ ಸೋಯುಜ್ ಕಮಾಂಡರ್ ಯೂರಿ ಮಾಲೆನ್‌ಚೆಂಕೊ ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ಫ್ಲೈಟ್ ಇಂಜಿನಿಯರ್ ಅಕಿಹಿಕೊ ಹೊಶೈಡ್ ಅವರೊಂದಿಗೆ ಕಝಾಕಿಸ್ತಾನ್‌ನ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಜುಲೈ 2012ರಂದು ಹೋದರು. ಕಕ್ಷೆಯ ಪ್ರಯೋಗಾಲಯದಲ್ಲಿ ಸಂಶೋಧನೆ ಮತ್ತು ಪರಿಶೋಧನೆ ನಡೆಸುತ್ತ ನಾಲ್ಕು ತಿಂಗಳು ಕಳೆದಳು.

ಈ ಕಾರ್ಯಾಚರಣೆಗಳ ಸಮಯದಲ್ಲಿ ಅವರು ಹಲವು ಸಂಶೋಧನೆ ನಡೆಸಿದರು. ಬಾಹ್ಯಾಕಾಶ ನಡಿಗೆಗಳನ್ನು ನಡೆಸಿದರು ಮತ್ತು ಬಾಹ್ಯಾಕಾಶದ ಪರಿಶೋಧನೆಗೆ ಗಮನಾರ್ಹವಾಗಿ ಕೊಡುಗೆ ನೀಡಿದರು. ಸುನೀತಾ ವಿಲಿಯಮ್ಸ್ 50 ಗಂಟೆಗಳು ಮತ್ತು 40 ನಿಮಿಷಗಳ ಸಮಯದೊಂದಿಗೆ ದಾಖಲೆ ಸಮಯದ ಬಾಹ್ಯಾಕಾಶ ನಡಿಗೆ ದಾಖಲೆ ಮಾಡಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳು

ಅವರಿಗೆ ಅನೇಕ ಪ್ರಶಸ್ತಿಗಳು ಮತ್ತು ಗೌರವ ಸಂದಿವೆ. ಅವರು US ನೌಕಾಪಡೆಯ ನಿವೃತ್ತ ಕ್ಯಾಪ್ಟನ್. ಅವರಿಗೆ ಎರಡು ಬಾರಿ ರಕ್ಷಣಾ ಉನ್ನತ ಸೇವಾ ಪದಕ, ಲೀಜನ್ ಆಫ್ ಮೆರಿಟ್, ನೌಕಾಪಡೆಯ ಪ್ರಶಂಸಾ ಪದಕ ಎರಡು ಬಾರಿ, ನೌಕಾಪಡೆ ಮತ್ತು ಮೆರೈನ್ ಕಾರ್ಪ್ಸ್ ಸಾಧನೆ ಪದಕ ಮತ್ತು ಮಾನವೀಯ ಸೇವಾ ಪದಕ ನೀಡಲಾಗಿದೆ. ಪ್ರಸ್ತುತ ವಿಲಿಯಮ್ಸ್ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಪೈಲಟ್ ಆಗಲು ತರಬೇತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಭಾರತೀಯನನ್ನು ಇಳಿಸುವ ತನಕ ಬಿಡಲ್ಲ; ಇಸ್ರೋ ಅಧ್ಯಕ್ಷ ಮಹತ್ವದ ಘೋಷಣೆ

Continue Reading
Advertisement
Dr Sushruth Gowda
ಕರ್ನಾಟಕ4 mins ago

Dr Sushruth Gowda: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಡಾ.ಶುಶ್ರುತ್ ಗೌಡ

Railway Ticket
ದೇಶ8 mins ago

Railway Ticket: ಎಲ್ಲರಿಗೂ ರೈಲ್ವೆ ಟಿಕೆಟ್‌, ವೇಟಿಂಗ್‌ ಮಾತೇ ಇಲ್ಲ; ಕೇಂದ್ರ ಮಹತ್ವದ ಘೋಷಣೆ!

shubman gill
ಕ್ರಿಕೆಟ್9 mins ago

Shubman Gill: ಶತಕದ ಐಪಿಎಲ್​ ಪಂದ್ಯವನ್ನಾಡಲು ಸಜ್ಜಾದ ಗಿಲ್​; ಸಾಧನೆ ಹೇಗಿದೆ?

Chitradurga Lok Sabha Constituency BJP candidate Govinda M karajola election campaign in shira
ತುಮಕೂರು13 mins ago

Lok Sabha Election 2024: ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮತಯಾಚನೆ

Dhanya Ramkumar reels with Kishen Bilagali
ಸ್ಯಾಂಡಲ್ ವುಡ್15 mins ago

Dhanya Ramkumar: ಕಿಶನ್ ಬಿಳಗಲಿ ಜತೆ ಡಾ. ರಾಜ್​ಕುಮಾರ್ ಮೊಮ್ಮಗಳ ಡ್ಯೂಯೆಟ್‌!

Sachin Tendulkar
ಕ್ರಿಕೆಟ್17 mins ago

Sachin Birthday: ಬದುಕಿನಲ್ಲಿ ಸಚಿನ್‌ ಅರ್ಧ ಶತಕ; ಕ್ರಿಕೆಟ್ ದೇವರ ಕುರಿತ 30 ಕುತೂಹಲಕರ ಸಂಗತಿಗಳಿವು

Viral News
ವೈರಲ್ ನ್ಯೂಸ್39 mins ago

Viral News: ತಂಗಿಗೆ ಟಿವಿ ಗಿಫ್ಟ್‌ ಕೊಡಲು ಮುಂದಾದ ಪತಿಯನ್ನು ಕೊಲ್ಲಿಸಿದ ಪತ್ನಿ!

Rajkumar Birth Anniversary ​​Jaggesh said that Rajkumar blessed him when he was admitted due to suicide attempt
ಸ್ಯಾಂಡಲ್ ವುಡ್42 mins ago

Rajkumar Birth Anniversary: ಆತ್ಮಹತ್ಯೆಗೆ ಯತ್ನಿಸಿ ಅಡ್ಮಿಟ್‌ ಆದಾಗ ಅಣ್ಣಾವ್ರು ಆಶೀರ್ವಾದ ಮಾಡಿದ್ದರೆಂದ ಜಗ್ಗೇಶ್‌!

World Chess Championship
ಕ್ರೀಡೆ45 mins ago

World Chess Championship: ಡಿ.ಗುಕೇಶ್‌-ಲಿರೆನ್‌ ನಡುವಣ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಪಂದ್ಯಕ್ಕೆ ಮುಹೂರ್ತ ಫಿಕ್ಸ್​

VVPAT Verification
ದೇಶ1 hour ago

VVPAT Verification: ವಿವಿಪ್ಯಾಟ್‌ ಕೇಸ್; ಚುನಾವಣೆಯನ್ನು ನಾವು ನಿಯಂತ್ರಿಸಲಾಗದು ಎಂದ ಸುಪ್ರೀಂಕೋರ್ಟ್; ಮತಯಂತ್ರ ವಿರೋಧಿಗಳಿಗೆ ಹಿನ್ನಡೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌