ವಿಸ್ತಾರ Fact Check: ಶಾಲಾ ಪಠ್ಯ ಪುಸ್ತಕದ ಮೇಲೆ ಜಿಎಸ್‌ಟಿ ಹೇರಿದ ಕೇಂದ್ರ ಸರ್ಕಾರ?; ಸತ್ಯಾಂಶ ಏನು? - Vistara News

ಫ್ಯಾಕ್ಟ್ ಚೆಕ

ವಿಸ್ತಾರ Fact Check: ಶಾಲಾ ಪಠ್ಯ ಪುಸ್ತಕದ ಮೇಲೆ ಜಿಎಸ್‌ಟಿ ಹೇರಿದ ಕೇಂದ್ರ ಸರ್ಕಾರ?; ಸತ್ಯಾಂಶ ಏನು?

Fact Check: ಜಿಎಸ್‌ಟಿ ಮಂಡಳಿಯ 47ನೇ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಅನ್ವಯ ಜುಲೈ 18 ರಿಂದ ಹಲವು ವಸ್ತಗಳು ಜಿಎಸ್‌ಟಿ ಅಡಿ ಬರುತ್ತಿವೆ. ಅದರಲ್ಲಿ ಶಾಲಾ ಪುಸ್ತಕಗಳೂ ಸೇರಿವೆಯಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

VISTARANEWS.COM


on

School Books
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ನವ ದೆಹಲಿ: ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 47ನೇ ಸಭೆ ಜೂನ್‌ ಕೊನೇ ವಾರದಲ್ಲಿ ನಡೆದಿದೆ. ಈ ಹಿಂದೆ ತೆರಿಗೆ ಮುಕ್ತವಾಗಿದ್ದ ಹಲವು ವಸ್ತುಗಳನ್ನು ಜಿಎಸ್‌ಟಿಯಡಿ ತರುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಅದರ ಅನ್ವಯ, ಜುಲೈ 18ರಿಂದ ಪ್ಯಾಕ್ಡ್‌ ತಿಂಡಿಗಳು, ಹೋಟೆಲ್‌ ಕೋಣೆಗಳು, ಆಸ್ಪತ್ರೆ ಬೆಡ್‌ಗಳು, ಎಲ್‌ಇಡಿ ದೀಪ, ಲ್ಯಾಂಪ್ಸ್‌ಗಳೆಲ್ಲ ದುಬಾರಿಯಾಗುತ್ತಿವೆ. ಇದೆಲ್ಲದರ ಮಧ್ಯೆ ಕೇಂದ್ರ ಸರ್ಕಾರ ಶಾಲಾ ಪಠ್ಯಗಳ ಮೇಲೆಯೂ ಜಿಎಸ್‌ಟಿ ಹೇರಿದೆ ಎಂಬ ಮಾಹಿತಿಯೊಂದು ಹಬ್ಬುತ್ತಿದೆ. ಶಾಲಾ ಮಕ್ಕಳ ಪುಸ್ತಕಕ್ಕೂ ಜಿಎಸ್‌ಟಿ ಹೇರಿಕೆಯಾ? ಎಂಬರ್ಥದ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳು ಸಿಕ್ಕಾಪಟೆ ಹರಿದಾಡುತ್ತಿವೆ. ಇಡೀ ವಿಶ್ವದಲ್ಲಿ ಮಕ್ಕಳ ಶಾಲಾ ಪಠ್ಯ ಪುಸ್ತಕಕ್ಕೂ ಜಿಎಸ್‌ಟಿ ವಿಧಿಸಿದ ಏಕೈಕ ದೇಶ ಭಾರತ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಮತ್ತೊಮ್ಮೆ ಸದ್ದು ಮಾಡುತ್ತಿದೆ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ವ್ಯಂಗ್ಯ ಕೂಡ ಮಾಡಲಾಗುತ್ತಿದೆ.

ಫೇಕ್‌ ಮಾಹಿತಿಯನ್ನು ಹೊಂದಿದ ಸೋಷಿಯಲ್‌ ಮೀಡಿಯಾ ಪೋಸ್ಟ್‌

ಆದರೆ ನಿಜಕ್ಕೂ ಕೇಂದ್ರ ಸರ್ಕಾರ ಶಾಲಾ ಪುಸ್ತಕಗಳ ಮೇಲೆ ಜಿಎಸ್‌ಟಿ ಹೇರುತ್ತಿದೆಯಾ? ಈ ಪ್ರಶ್ನೆಗೆ ಉತ್ತರ ʼಇಲ್ಲʼ. ಈ ಬಗ್ಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳೆಲ್ಲ ಪಕ್ಕಾ ಫೇಕ್‌. ಅಂದರೆ ತಪ್ಪು ಮಾಹಿತಿಯಿಂದ ಕೂಡಿದವಾಗಿವೆ ಎಂಬುದು ಇಂಡಿಯಾ ಟುಡೆ ಮಾಧ್ಯಮದ ಫ್ಯಾಕ್ಟ್‌ಚೆಕ್‌ನಿಂದ ಬೆಳಕಿಗೆ ಬಂದಿದೆ. ಶಾಲಾ ಮಕ್ಕಳ ಪುಸ್ತಕಕ್ಕೆ ಜಿಎಸ್‌ಟಿ ಹೇರಿಕೆ ವಿಚಾರವಾಗಿ ವೈರಲ್‌ ಆಗುತ್ತಿರುವ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳ ಬಗ್ಗೆ ಇಂಡಿಯಾ ಟುಡೆ ಮಾಧ್ಯಮದ ಆ್ಯಂಟಿ ಫೇಕ್‌ನ್ಯೂಸ್‌ ವಾರ್‌ ರೂಮ್‌ ಫ್ಯಾಕ್ಟ್‌ಚೆಕ್‌ (ಸತ್ಯಶೋಧನೆ) ನಡೆಸಿತ್ತು. ಯಾವೆಲ್ಲ ಪದಾರ್ಥಗಳು, ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆಯಾಗಿದೆ, ಹೇರಿಕೆಯಾಗಿಲ್ಲ ಎಂಬುದನ್ನು ಪರಿಶೀಲಿಸಲು ಈ ಫ್ಯಾಕ್ಟ್‌ಚೆಕ್‌ ರೂಮ್‌ India Filings ವೆಬ್‌ಸೈಟ್‌ ಮತ್ತು ಜಿಎಸ್‌ಟಿ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳನ್ನು ಕೂಡ ಚೆಕ್‌ ಮಾಡಿ ವರದಿ ನೀಡಿದೆ.

ಇದನ್ನೂ ಓದಿ: Vistara Exclusive | ಬಿಜೆಪಿ ವಿರುದ್ಧ `ದೇಶದ್ರೋಹಿʼ ಅಸ್ತ್ರ: ದೇಶಾದ್ಯಂತ ಕಾಂಗ್ರೆಸ್‌ ಅಭಿಯಾನ

ಜಿಎಸ್‌ಟಿ ವೆಬ್‌ಸೈಟ್‌ನಲ್ಲಿ ಶಾಲಾ ಮಕ್ಕಳ ಪುಸ್ತಕದ ಮೇಲೆ ತೆರಿಗೆ ವಿಧಿಸಿದ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಯಾವೆಲ್ಲ ವಸ್ತುಗಳು ಜಿಎಸ್‌ಟಿಗೆ ಒಳಪಡುವುದಿಲ್ಲ ಎಂಬ ಕಾಲಂನಲ್ಲಿ, ʼಮುದ್ರಿತ ಪುಸ್ತಕಗಳು, ಬ್ರೈಲ್‌ ಲಿಪಿ, ಸುದ್ದಿ ಪತ್ರಿಕೆಗಳು, ಜರ್ನಲ್‌ಗಳು, ನಿಯತಕಾಲಿಕೆಗಳು, ಮಕ್ಕಳ ಬಣ್ಣದ ಮತ್ತು ಡ್ರಾಯಿಂಗ್‌ ಪುಸ್ತಕʼಗಳನ್ನು ಸೇರಿಸಲಾಗಿದೆ. ಅಂದರೆ ಇವು ಯಾವುದಕ್ಕೂ ಜಿಎಸ್‌ಟಿ ಹೇರಿಕೆಯಿಲ್ಲ. ಇಲ್ಲಿ ಶಾಲಾ ಪುಸ್ತಕ ಎಂದು ಪ್ರತ್ಯೇಕವಾಗಿ ಹೇಳದೆ ಇದ್ದರೂ, ಮುದ್ರಿತ ಪುಸ್ತಕದ ವಿಭಾಗದಲ್ಲಿ ಶಾಲಾ ಪಾಠ ಪುಸ್ತಕಗಳೂ ಒಳಪಡುತ್ತವೆ. ಹೀಗಾಗಿ ಶಾಲಾ ಪುಸ್ತಕಗಳ ಮೇಲೆ ತೆರಿಗೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಆ್ಯಂಟಿ ಫೇಕ್‌ನ್ಯೂಸ್‌ ವಾರ್‌ ರೂಮ್‌ ತಿಳಿಸಿದೆ.

ಈ ಹಿಂದೆ 2020ರಲ್ಲಿ ಒಂದು ಬಾರಿ ಇದೇ ರೀತಿಯ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳು ವೈರಲ್‌ ಆಗಿದ್ದವು. ಆಗ ಪಿಐಬಿ (Press Information Bureau) ಫ್ಯಾಕ್ಟ್‌ ಚೆಕ್‌ ನಡೆಸುವ ಮೂಲಕ ಸತ್ಯಾಂಶ ತಿಳಿಸಿತ್ತು. ಈ ಸಲವೂ ಕೂಡ ಸುಳ್ಳು ಸುದ್ದಿಗಳು ಹರಡುತ್ತಿವೆ. ಆದರೆ ನಕ್ಷೆಗಳು ಮತ್ತು ಚಾರ್ಟ್‌ಗಳ ಮೇಲೆ ಜಿಎಸ್‌ಟಿ ಹೇರಲಾಗಿದೆಯೇ ಹೊರತು ಸ್ಕೂಲ್‌ ಬುಕ್‌ಗಳ ಮೇಲಲ್ಲ ಎಂಬುದು ವೆಬ್‌ಸೈಟ್‌ನಲ್ಲಿ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇದನ್ನೂ ಓದಿ: ವಿಸ್ತಾರ Fact Check: ಆರ್ಥಿಕತೆ ಬೆಳವಣಿಗೆಯಲ್ಲಿ 3ನೇ ಸ್ಥಾನದಿಂದ 164ಕ್ಕೆ ಕುಸಿಯಿತಾ ಭಾರತ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Fact Check

Fact Check: ಬೈಕ್ ಕದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರೆ ಪಂಜಾಬ್ ಸಿಎಂ ಭಗವಂತ್ ಮಾನ್?

Viral news: ಹತ್ತು ವರ್ಷಗಳ ಹಿಂದೆ ಬೈಕ್ ದರೋಡೆ ಪ್ರಕರಣದಲ್ಲಿ ಮಾನ್ ಅವರು ಬಂಧನಕ್ಕೊಳಗಾದ ಛಾಯಾ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ನಿಜವೇ ?

VISTARANEWS.COM


on

By

Viral news

ಪಂಜಾಬ್: ನಿರಂತರ ಒಂದಲ್ಲ ಒಂದು (Fact Check) ಕಾರಣದಿಂದ ಸುದ್ದಿಯಲ್ಲಿರುವ ಹೊಸದಾಗಿ ಚುನಾಯಿತರಾದ ಪಂಜಾಬ್ (Punjab) ಮುಖ್ಯಮಂತ್ರಿ (Chief Minister) ಭಗವಂತ್ ಮಾನ್ (Bhagwant Mann) ಅವರನ್ನು ಈ ಹಿಂದೆ ಬೈಕ್ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಪಡಿಸಲಾಗಿತ್ತು ಎನ್ನುವ ಫೋಟೋ ಸಹಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral news) ಆಗಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ವಿವಾದಗಳಿಗೆ ಹೊಸದೇನಲ್ಲ. ರಾಜ್ಯದ ಅತ್ಯುನ್ನತ ಹುದ್ದೆಗೇರಿದ ಬಳಿಕ ಅವರ ಕುರಿತು ಜನರು ತಮ್ಮ ಅಭಿಪ್ರಾಯಗಳನ್ನು ಮತ್ತು ಹಳೆಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಸಾಕಷ್ಟು ಮಂದಿ ವೀಕ್ಷಿಸುತ್ತಿದ್ದಾರೆ.

ಇದೀಗ ಸುಮಾರು ಒಂದು ದಶಕದ ಹಿಂದೆ ಬೈಕ್ ದರೋಡೆ ಪ್ರಕರಣದಲ್ಲಿ ಮಾನ್ ಬಂಧನಕ್ಕೊಳಗಾದ ಛಾಯಾ ಚಿತ್ರ ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾನ್ ಅವರು ಇತರ ಮೂವರೊಂದಿಗೆ ನೆಲದ ಮೇಲೆ ಕುಳಿತಿರುವ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್

ಈ ಫೋಟೋ ದ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದ ನ್ಯೂಸ್‌ಚೆಕರ್ ಇದು ಸುಳ್ಳೆಂದು ತಿಳಿಸಿದೆ. ಆದರೂ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಸಾಕಷ್ಟು ಮಂದಿ ವೀಕ್ಷಿಸುತ್ತಿದ್ದಾರೆ ಮತ್ತು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಭಗವಂತ್ ಮಾನ್ ಅವರು 2022ರ ಮಾರ್ಚ್ 16ರಂದು ಪಂಜಾಬ್ ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಮಾಜಿ ಶಾಸಕರಿಗೆ ಪಿಂಚಣಿ ಪಾವತಿ, ಶಿಕ್ಷಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಅವರ ಸರ್ಕಾರದ ‘ದೊಡ್ಡ’ ನಿರ್ಧಾರಗಳಿಗಾಗಿ ಅವರು ನಿರಂತರ ಸುದ್ದಿಯಲ್ಲಿದ್ದಾರೆ.


ಮಾನ್ ಅವರನ್ನು ಪಂಜಾಬ್‌ನಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗಿನಿಂದ ಹಾಸ್ಯನಟ-ರಾಜಕಾರಣಿ ಮಾನ್ ಅವರನ್ನು ಪದೇ ಪದೇ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಪಂಜಾಬ್ ಸಿಎಂ ಬಗೆಗಿನ ಹಲವಾರು ಸುಳ್ಳು ಮಾಹಿತಿಗಳನ್ನು ನ್ಯೂಸ್‌ಕೆಕರ್ ತನಿಖೆ ನಡೆಸಿದೆ.

ಇದೀಗ ವೈರಲ್ ಆಗಿರುವ ಚಿತ್ರದ ಹುಡುಕಾಟ ನಡೆಸಿದಾಗ ಪಂಜಾಬಿ ಗಾಯಕ ಮತ್ತು ನಟ ಕರಮ್‌ಜಿತ್ ಅನ್ಮೋಲ್ ಅವರು ಮ್ಯಾಚ್ 18ರಂದು ಫೇಸ್‌ಬುಕ್ ನಲ್ಲಿ ಮಾಡಿರುವ ಪೋಸ್ಟ್ ಸಿಕ್ಕಿದೆ. ಅದರಲ್ಲಿ ಅವರು ಭಗವಂತ್ ಮಾನ್ ಮತ್ತು ಮಂಜಿತ್ ಸಿಧು ಅವರೊಂದಿಗೆ ಹೋಳಿ ನೆನಪುಗಳು ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಬೈಕ್ ಕಳ್ಳತನ ಪ್ರಕರಣದಲ್ಲಿ ಮಾನ್ ಬಂಧನ ಎಂಬಂತೆ ಬಿಂಬಿಸಿರುವ ಈ ಚಿತ್ರ ದ ಹೇಳಿಕೆಯನ್ನು ಮಂಜಿತ್ ಸಿಧು ಅವರು ತಳ್ಳಿಹಾಕಿದ್ದಾರೆ. ಇದು ನಕಲಿ ಸುದ್ದಿ ಎಂದು ಹೇಳಿದ್ದಾರೆ.


ಈ ಚಿತ್ರವನ್ನು 1994 ಅಥವಾ 1995 ರಲ್ಲಿ ಕೆನಡಾದ ಗಾಯಕ ಹರ್ಭಜನ್ ಮಾನ್ ಭಾರತಕ್ಕೆ ಬಂದಾಗ ಪಟಿಯಾಲದಲ್ಲಿ ತೆಗೆದಿದ್ದಾರೆ. ಹೋಳಿ ಹಬ್ಬದಂದು ಹರ್ಭಜನ್ ಮಾನ್ ಅವರ ಮನೆಯ ಟೆರೇಸ್‌ನಲ್ಲಿ ಚಿತ್ರ ತೆಗೆಯಲಾಗಿದೆ. ಭಗವಂತ್ ಮಾನ್, ಕರಮ್ಜಿತ್ ಅನ್ಮೋಲ್ ಮತ್ತು ಹರ್ಭಜನ್ ಮಾನ್ ಕೂಡ ಅಲ್ಲಿ ಹಾಜರಿದ್ದರು. ಭಗವಂತ್ ಮಾನ್ ಮತ್ತು ನಾನು ಕಾಲೇಜು ದಿನಗಳಿಂದಲೂ ಸ್ನೇಹಿತರಾಗಿದ್ದೇವೆ ಎಂದು ಸಿಧು ತಿಳಿಸಿದ್ದಾರೆ.

ಈ ಕುರಿತು ಮತ್ತಷ್ಟು ಸ್ಪಷ್ಟಿಕರಣಕ್ಕಾಗಿ ಮಾನ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಅನ್ನು ಪರಿಶೀಲಿಸಲಾಗಿದೆ. ಆದರೆ ಯಾವುದೇ ಅಪರಾಧ ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಅದರಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ತಿಳಿದು ಬಂದಿದೆ.

Continue Reading

ವೈರಲ್ ನ್ಯೂಸ್

Viral news: ಚುನಾವಣೆಗೆ ಮೊದಲೇ 19 ಲಕ್ಷ ಇವಿಎಂ ಕಾಣೆಯಾಗಿದ್ದು ನಿಜವೇ? ಏನಿದರ ಅಸಲಿಯತ್ತು ?

Viral news: ಲೋಕಸಭೆ ಚುನಾವಣೆಗೂ ಮುನ್ನ 1.9 ಮಿಲಿಯನ್ ಇವಿಎಂಗಳನ್ನು ಕಳವು ಮಾಡಲಾಗಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಳವಾಗಿರುವ ಇವಿಎಂ ಗಳು ಎಲ್ಲಿ ಹೋಗಿವೆ ? ಈ ಸುದ್ದಿ ಎಲ್ಲಿಂದ ಬಂತು ಗೊತ್ತೇ ?

VISTARANEWS.COM


on

By

Lok Sabha Election 2024

ನವದೆಹಲಿ: ಲೋಕಸಭಾ ಚುನಾವಣೆ- 2024ರ (Lok sabha election-2024) ಮೊದಲ ಹಂತದ ಮತದಾನ ಪ್ರಕ್ರಿಯೆಗಳು ಶುಕ್ರವಾರ ದೇಶದ ವಿವಿಧ ಭಾಗಗಳಲ್ಲಿ ನಡೆದಿದೆ. ಮತದಾನ ಪ್ರಾರಂಭಕ್ಕೂ ಮೊದಲು 1.9 ಮಿಲಿಯನ್ ಎಲೆಕ್ಟ್ರಾನಿಕ್ ಮತಯಂತ್ರಗಳು (EVM) ಕಾಣೆಯಾಗಿವೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ (social media) ಸಂದೇಶ ಹರಡಿದ್ದು (viral news) ಇದು ಸುಳ್ಳು ಎಂದು ತಿಳಿದು ಬಂದಿದೆ.

ಏಪ್ರಿಲ್ 19ರಂದು 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗುವ ಮೊದಲು ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಇದರಲ್ಲಿ 1.9 ಮಿಲಿಯನ್ ಎಲೆಕ್ಟ್ರಾನಿಕ್ ಮತಯಂತ್ರಗಳು ಕಾಣೆಯಾಗಿದೆ ಎಂದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅನೇಕ ಬಳಕೆದಾರರು ಹೇಳಿಕೊಂಡಿದ್ದರು.

ಈ ಕುರಿತು ತನಿಖೆ ನಡೆಸಿದ ವಿಶ್ವಸ್ ನ್ಯೂಸ್ ಈ ಹೇಳಿಕೆ ಸುಳ್ಳು ಎಂದು ಪತ್ತೆ ಹಚ್ಚಿದೆ. ಚುನಾವಣಾ ಆಯೋಗವೂ ಕೂಡ ಇದೊಂದು ನಕಲಿ ಸುದ್ದಿ ಎಂದು ಹೇಳಿದೆ. ಈ ವರ್ಷದ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಕೂಡ ಇವಿಎಂ ನಾಪತ್ತೆಯಾಗಿರುವ ಆರೋಪಗಳನ್ನು ತಳ್ಳಿಹಾಕಿತ್ತು.

ಇದನ್ನೂ ಓದಿ: Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!


ಸುಳ್ಳು ಸುದ್ದಿ

ಸಾಮಾಜಿಕ ಮಾಧ್ಯಮ ಬಳಕೆದಾರ ನಿಹಾಲ್ ಸಿಂಗ್ ನಿಗಮ್ ಅವರು, 1.9 ಮಿಲಿಯನ್ ಇವಿಎಂ ಯಂತ್ರಗಳನ್ನು ಕಳವು ಮಾಡಲಾಗಿದೆ ಮತ್ತು ಈ ಬಗ್ಗೆ ಯಾವುದೇ ಕುರುಹು ಕಂಡು ಬಂದಿಲ್ಲ ಎನ್ನುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಂದಿನಿಂದ ಈ ಪೋಸ್ಟ್ ಭಾರೀ ವೈರಲ್ ಆಗಿದೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಲವಾರು ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ.


ತನಿಖೆಯಲ್ಲೇನಿದೆ?

ದಿ ಎಕನಾಮಿಕ್ ಟೈಮ್ಸ್ ನ ಮಾರ್ಚ್ 15 ವರದಿಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು 2016 ಮತ್ತು 2019 ರ ನಡುವೆ ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ 1.9 ಮಿಲಿಯನ್ ಇವಿಎಂಗಳು ನಾಪತ್ತೆಯಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಅರ್ಜಿಯನ್ನು ವಜಾಗೊಳಿಸಿತ್ತು. 1.9 ಮಿಲಿಯನ್ ಇವಿಎಂಗಳು ಕಾಣೆಯಾಗಿದೆ ಎಂದು ಐಎನ್‌ಸಿ ಹೇಳಿರುವುದು ಸಂಪೂರ್ಣವಾಗಿ ಆಧಾರ ರಹಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

2019ರಲ್ಲಿಯೂ ನಾಪತ್ತೆಯಾದ ಇವಿಎಂಗಳ ವರದಿಗಳು ಬಂದಿದ್ದವು. ಫ್ರಂಟ್‌ಲೈನ್ ಮತ್ತು ಟಿವಿ9 ಭಾರತ ವರ್ಷ್ ಈ ಕುರಿತು ವರದಿಗಳನ್ನು ಪ್ರಕಟಿಸಿತ್ತು. ಇದನ್ನೂಚುನಾವಣಾ ಆಯೋಗವು ಆಧಾರ ರಹಿತ ಎಂದು ಹೇಳಿ ಟ್ವಿಟ್ ಮಾಡಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ FAQ ವಿಭಾಗದಲ್ಲಿಯೂ ಈ ಸಮಸ್ಯೆಯನ್ನು ಉಲ್ಲೇಖಿಸಲಾಗಿದೆ. ವೈರಲ್ ಹಕ್ಕು ಕುರಿತು ಚುನಾವಣಾ ಆಯೋಗದ ಅಧಿಕಾರಿಗಳನ್ನು ಸಂಪರ್ಕಿಸಿರುವ ವಿಶ್ವಸ್ ನ್ಯೂಸ್ ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಷಯದ ಕುರಿತು ಸ್ಪಷ್ಟೀಕರಣವನ್ನು ನೀಡಲಾಗಿದೆ ಎಂದು ತಿಳಿಸಿರುವುದಾಗಿ ತಿಳಿದು ಬಂದಿದೆ.

Continue Reading

ದೇಶ

Lok Sabha Election: ಏ.19ರವರೆಗೆ ಲೋಕಸಭೆ ಚುನಾವಣೆ; ಮೇ 22ಕ್ಕೆ ರಿಸಲ್ಟ್?

Lok Sabha Election: ಮಾರ್ಚ್ 12ರಂದು ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭವಾಗಿ, ಏಪ್ರಿಲ್ 19ರಂದು ಮತದಾನ ನಡೆಯಲಿದೆ ಮತ್ತು ಮೇ 22ರಂದು ಫಲಿತಾಂಶ ಪ್ರಕಟವಾಗಲಿದೆ ಎಂಬ ವಾಟ್ಸಾಪ್ ಮೆಸೇಜ್ ಭಾರೀ ವೈರಲ್ ಆಗಿದೆ. ಅಸಲಿ ಸಂಗತಿ ಏನು?

VISTARANEWS.COM


on

Lok Sabha Election on April 19 and Result on May 22

ನವದೆಹಲಿ: ಲೋಕಸಭೆ ಚುನಾವಣಾ (Lok Sabha Election) ವೇಳಾ ಪಟ್ಟಿ ಕುರಿತು ಎಲ್ಲರಲ್ಲೂ ಕುತೂಹಲವಿದೆ(Election Schedule). ಯಾವಾಗ ದಿನಾಂಕ ಪ್ರಕಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ, ಏಪ್ರಿಲ್ 19ರಂದು ಚುನಾವಣೆ ನಡೆದು, ಮೇ 22ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ವಾಟ್ಸಾಪ್‌ ಮೆಸೇಜ್‌ವೊಂದು ಭಾರೀ ವೈರಲ್ ಆಗಿದೆ(WhatsApp Message Viral). ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಚುನಾವಣಾ ಆಯೋಗವು(Election Commission of India), ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾಗುತ್ತದೆಯೇ ಹೊರತು, ಪಠ್ಯ ಅಥವಾ ವಾಟ್ಸಾಪ್ ಮೆಸೇಜ್ ಮೂಲಕ ಅಲ್ಲ. ಹಾಗಾಗಿ ಇದೊಂದು ಫೇಕ್ ನ್ಯೂಸ್ (Fake News) ಎಂದು ಕೇಂದ್ರ ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.

ಸಾರ್ವತ್ರಿಕ ಚುನಾವಣೆಯ ಸಂಪೂರ್ಣ ವೇಳಾಪಟ್ಟಿಯ ನಕಲಿ ಸಂದೇಶವೊಂದು ಹರಿದಾಡುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿಗೆ ತರುವ ಮೂಲಕ ಮಾರ್ಚ್ 12 ರಂದು ಚುನಾವಣೆಯನ್ನು ಅಧಿಸೂಚಿಸಲಾಗುವುದು ಎಂದು ಅದರಲ್ಲಿ ತಿಳಿಸಲಾಗಿದೆ. ನಾಮಪತ್ರ ಸಲ್ಲಿಸಲು ಮಾರ್ಚ್ 28 ಕೊನೆಯ ದಿನಾಂಕ ಮತ್ತು ಏಪ್ರಿಲ್ 19 ಮತದಾನ ಮತ್ತು ಮೇ 22ರಂದು ಫಲಿತಾಂಶ ನಡೆಯಲಿದೆ ಎಂದು ನಕಲಿ ಸುದ್ದಿಯಲ್ಲಿ ತಿಳಿಸಲಾಗಿದೆ.

ಚುನಾವಣಾ ಆಯೋಗದ ಲೆಟರ್‌ಹೆಡ್‌‌ನಲ್ಲಿ ನಕಲಿ ಸಂದೇಶವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡಲು ಪ್ರಾರಂಭಿಸಿತು. ಸಾರ್ವತ್ರಿಕ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವುದು ಹೇಗೆ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ.

ಈ ಗೊಂದಲದ ನಡುವೆಯೇ ನಿನ್ನೆ ಚುನಾವಣಾ ಆಯೋಗ ವೈರಲ್ ಸಂದೇಶ ನಕಲಿ ಎಂದು ಸ್ಪಷ್ಟಪಡಿಸಿದೆ. ಲೋಕಸಭಾ ಚುನಾವಣೆಯ ವೇಳಾಪಟ್ಟಿಯ ಕುರಿತು ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ನಕಲಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶವು ನಕಲಿಯಾಗಿದೆ. ಆಯೋಗವು ಇಲ್ಲಿಯವರೆಗೆ ಯಾವುದೇ ದಿನಾಂಕಗಳನ್ನು ಘೋಷಿಸಿಲ್ಲ ಎಂದು ಎಕ್ಸ್ ವೇದಿಕೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಪೋಸ್ಟ್ ಮಾಡಿದೆ.

ಎಲೆಕ್ಷನ್ ವೇಳಾಪಟ್ಟಿಯನ್ನು ಆಯೋಗವು ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡುತ್ತದೆ. #VerifyBeforeYouAmplify ಎಂಬ ಹ್ಯಾಷ್ ಟ್ಯಾಗ್ ಬಳಸಿರುವ ಆಯೋಗವು, ವಾಟ್ಸಾಪ್ ಸಂದೇಶಗಳನ್ನು ಫಾರ್ವರ್ಡ್ ಮಾಡುವಾಗ ದೃಢೀಕರಿಸಬೇಕು ಎಂದು ಹೇಳಿದೆ.

ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯಿಂದ ಪ್ರಸಾರವಾದ ಆಂತರಿಕ ಟಿಪ್ಪಣಿ ಗೊಂದಲಕ್ಕೆ ಕಾರಣವಾದ ಒಂದು ತಿಂಗಳ ಬಳಿಕ ಈ ನಕಲಿ ಸಂದೇಶವೂ ವೈರಲ್ ಆಗಿದೆ. ಈ ಆಂತರಿಕ ಟಿಪ್ಪಣಿಯಲ್ಲಿ ಏಪ್ರಿಲ್ 16 ಅನ್ನು ತಾತ್ಕಾಲಿಕ “ಚುನಾವಣೆ ದಿನಾಂಕ” ಎಂದು ಉಲ್ಲೇಖಿಸಲಾಗಿದ್ದು ಮತ್ತು ಅಧಿಕಾರಿಗಳಿಗೆ ಸಿದ್ಧತೆಗಳನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿತ್ತು.

ಈ ಸುದ್ದಿಯನ್ನೂ ಓದಿ: Lok Sabha Election: ಈ ದಿನಾಂಕದಂದು ಲೋಕಸಭೆ ಚುನಾವಣಾ ವೇಳಾಪಟ್ಟಿ ಪ್ರಕಟ

Continue Reading

ದೇಶ

Fact Check: ಅಮುಲ್‌ನಿಂದ ʼಶರಮ್‌ʼ ಹೆಸರಿನ ಚೀಸ್ ಬಿಡುಗಡೆ?

Fact Check: ಇತ್ತೀಚೆಗೆ ಅಮುಲ್‌ ಶರಮ್‌ ಹೆಸರಿನ ಚೀಸ್‌ ಬಿಡುಗಡೆ ಮಾಡಿದೆ ಎನ್ನುವ ಸುದ್ದಿ ವೈರಲ್‌ ಆಗಿತ್ತು. ಆದರೆ ಇದೀಗ ಕಂಪೆನಿ ಸ್ಪಷ್ಟನೆ ನೀಡಿ, ಇದು ನಕಲಿ ಸುದ್ದಿ ಎಂದು ಎಚ್ಚರಿಸಿದೆ.

VISTARANEWS.COM


on

amul

ನವದೆಹಲಿ: ಇತ್ತೀಚೆಗೆ ಶರಮ್ (Sharam) ಹೆಸರಿನ ಅಮುಲ್ ಚೀಸ್ (Amul cheese) ಪ್ಯಾಕೆಟ್‌ನ ಪೋಸ್ಟ್ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದನ್ನು ʼಶರಮ್ ನಾಮ್ ಕಿ ಚೀಜ್ ಭಿ ಹೋತಿ ಹೈʼ (Sharam naam ki cheez bhi hoti hai) ಎಂಬ ಹಿಂದಿ ನುಡಿಗಟ್ಟನ್ನು ಆಧರಿಸಿ ಪೋಸ್ಟ್‌ ಮಾಡಲಾಗಿತ್ತು. ನಾಚಿಕೆಯಿಲ್ಲದ ಯಾರಾದರೂ ವರ್ತಿಸುವಾಗ ಸಾಮಾನ್ಯವಾಗಿ ಈ ನುಡಿಗಟ್ಟನ್ನು ಬಳಸಲಾಗುತ್ತದೆ. ವೈರಲ್ ಪೋಸ್ಟ್‌ನಲ್ಲಿ ಹಿಂದಿಯ ʼಚೀಜ್ʼ ಅನ್ನು ಇಂಗ್ಲಿಷ್‌ನ ʼಚೀಸ್‌ʼ ಆಗಿ ಅನುವಾದಿಸಲಾಗಿದೆ. ಈ ವೈರಲ್‌ ಪೋಸ್ಟ್‌ನಲ್ಲಿ ಚೀಸ್ ತುಂಡಿನ ಚಿತ್ರವನ್ನು ಪ್ಯಾಕೆಟ್ ಮೇಲೆ ಮುದ್ರಿಸಿರುವುದು ಕಂಡು ಬಂದಿದೆ. ಈ ಕುರಿತು ಸ್ಪಷ್ಟನೆ ನೀಡಿದ ಅಮುಲ್‌, ʼʼಕಂಪನಿ ಇಂತಹ ಯಾವುದೇ ಉತ್ಪನ್ನ ಹೊರ ತಂದಿಲ್ಲʼʼ ಎಂದು (Fact Check) ಸ್ಪಷ್ಟಪಡಿಸಿದೆ.

ಅಮುಲ್‌ ಹೇಳಿದ್ದೇನು?

ಅಮುಲ್ ಇದಕ್ಕೆ ಪ್ರತಿಕ್ರಿಯಿಸಿ, ಇದು ನಮ್ಮ ಉತ್ಪನ್ನವಲ್ಲ ಮತ್ತು ಕೃತಕ ಬುದ್ಧಿಮತ್ತೆ (Artificial intelligence) ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದೆ. ಅಲ್ಲದೆ ಬ್ರ್ಯಾಂಡ್‌ನ ಅನುಮತಿಯಿಲ್ಲದೆ ಪೋಸ್ಟ್‌ ರಚಿಸಿ ಪೋಸ್ಟ್ ಹರಿಯಬಿಡಲಾಗಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಮುಲ್‌ ಸ್ಪಷ್ಟಪಡಿಸಿದೆ.

“ಹೊಸ ರೀತಿಯ ಅಮುಲ್ ಚೀಸ್‌ಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ನಕಲಿ ಸಂದೇಶವನ್ನು ಫಾರ್ವರ್ಡ್ ಮಾಡಲಾಗುತ್ತಿದೆ. ಪೋಸ್ಟ್‌ನ ಸೃಷ್ಟಿಕರ್ತರು ನಮ್ಮಿಂದ ಯಾವುದೇ ಅನುಮತಿಯಿಲ್ಲದೆ ಇದನ್ನು ಪೋಸ್ಟ್ ಮಾಡಿದ್ದಾರೆ. ಈ ಪ್ಯಾಕ್ ಅನ್ನು ಎಐ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಅಮುಲ್ ಬ್ರ್ಯಾಂಡ್‌ ಅನ್ನು ಕಳಪೆಯಂತೆ ಚಿತ್ರಿಸಲಾಗಿದೆʼʼ ಎಂದು ಕಂಪನಿ ಹೇಳಿದೆ.

“ಈ ಪೋಸ್ಟ್‌ನಲ್ಲಿ ತೋರಿಸಿರುವ ಪ್ಯಾಕ್ ಅಮುಲ್ ಚೀಸ್ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇವೆ. ಈ ಪೋಸ್ಟ್ ಅನ್ನು ತಪ್ಪು ಮಾಹಿತಿಯನ್ನು ಹರಡಲು ಮತ್ತು ಗ್ರಾಹಕರಲ್ಲಿ ಅನಗತ್ಯ ಭಯ ಹಾಗೂ ಗೊಂದಲವನ್ನು ಮೂಡಿಸಲು ಬಳಸಲಾಗಿದೆ. ದಯವಿಟ್ಟು ನಮ್ಮ ಈ ಸಂದೇಶವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಅಮುಲ್ ಎಂದಿಗೂ ಅತ್ಯುತ್ತಮ ಉತ್ಪನ್ನಗಳನ್ನು ಒದಗಿಸುವ ಭರವಸೆ ನೀಡುತ್ತದೆʼʼ ಎಂದು ಕಂಪನಿ ಹೇಳಿದೆ.

ಹಿಂದೆಯೂ ಸುಳ್ಳು ಸುದ್ದಿ ಹರಡಿತ್ತು

ಅಮುಲ್‌ ಉತ್ಪನ್ನಗಳ ವಿರುದ್ಧ ಹಿಂದೆಯೂ ಪಿತೂರಿ ನಡೆದಿತ್ತು. ಅಮುಲ್ ಬೆಣ್ಣೆಯನ್ನು ಚೀನಾದಲ್ಲಿ ಪ್ಯಾಕ್ ಮಾಡಲಾಗುತ್ತಿದೆ ಎಂದು ಕಳೆದ ವರ್ಷ ಫೆಬ್ರವರಿಯಲ್ಲಿ ನಕಲಿ ಸಂದೇಶ ಪ್ರಸಾರವಾಗಿತ್ತು. ಕೂಡಲೇ ಎಚ್ಚೆತ್ತ ಕಂಪನಿಯು ಇದು ನಕಲಿ ಸಂದೇಶ ಎಂದು ಸ್ಪಷ್ಟನೆ ನೀಡಿತ್ತು. ಸುಳ್ಳು ಸುದ್ದಿ ಹಬ್ಬಿಸುವವರಿಗೆ ನೋಟಿಸ್ ರವಾನಿಸಿ, ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿತ್ತು.

ನಕಲಿ ಉತ್ಪನ್ನ ಮತ್ತು ಕಂಪನಿಯ ನಿಜವಾದ ಉತ್ಪನ್ನಗಳನ್ನು ಹೋಲಿಕೆ ಮಾಡುವ ವಿಡಿಯೊವನ್ನು ಪೋಸ್ಟ್‌ ಮಾಡಿ, ತಪ್ಪು ಮಾಹಿತಿಯನ್ನು ಸೃಷ್ಟಿಸಿ ಗ್ರಾಹಕರಲ್ಲಿ ಭಯ ಮತ್ತು ಗೊಂದಲ ಮೂಡಲು ಬಳಸಲಾಗಿದೆ ಎಂದು ಹೇಳಿತ್ತು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸೂಚನೆಯ ಪ್ರಕಾರ, ಎಲ್ಲ ಹಾಲಿನ ಉತ್ಪನ್ನಗಳು ಪ್ಯಾಕ್‌ನ ಮುಂಭಾಗದಲ್ಲಿ ವೆಜ್ ಲೋಗೋವನ್ನು ತೋರಿಸುವುದು ಕಡ್ಡಾಯ ಅದನ್ನೂ ಗಮನಿಸುವಂತೆ ಹೇಳಿತ್ತು.

ಇದನ್ನೂ ಓದಿ: Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

Continue Reading
Advertisement
HD Revanna
Latest9 hours ago

ಸಚಿವ ಜಮೀರ್‌ರಿಂದ ಸಾಕಷ್ಟು ಅನುಭವಿಸಿದ್ದೇನೆ, ಅವರನ್ನು ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳಲ್ಲ; ಕುಮಾರಸ್ವಾಮಿ ಸ್ಪಷ್ಟೋಕ್ತಿ

Latest9 hours ago

ಮತದಾನಕ್ಕೆ ಕ್ಯೂನಲ್ಲಿ ನಿಂತರೂ ಕಷ್ಟ; ನಿಲ್ಲದಿದ್ದರೂ ಕಷ್ಟ: ಹಾಗಾದ್ರೆ ನಟ ಕಮಲ್‌ ಹಾಸನ್‌ ಏನು ಮಾಡಬೇಕಿತ್ತು?

Latest9 hours ago

ವಿಜಯ್ ಪಕ್ಷಕ್ಕೆ ಮತ ಚಲಾಯಿಸಲು ಸಾಧ್ಯವಾಗದೆ ಬಿಕ್ಕಿ ಬಿಕ್ಕಿ ಅತ್ತ ಯುವತಿ! ವಿಡಿಯೋ ವೈರಲ್

Latest10 hours ago

ಸಮಂತಾ ಕೇಳಿದ ಪ್ರಶ್ನೆಗೆ ದಿಗಂತ್ ಶಾಕ್! ‘ದೂದ್ ಪೇಡ’ ಅಂದ್ರೆ ಯಾರು ಎಂದಿದ್ದಕ್ಕೆ ‘ಚಾಕೊಲೇಟ್ ಹೀರೊ’ ನೀಡಿದ ರಿಯಾಕ್ಷನ್ ಹೇಗಿತ್ತು?

Latest10 hours ago

ಮಹಿಳಾ ಮೀಸಲಾತಿ: ಡಿಎಂಕೆ ಹುನ್ನಾರಕ್ಕೆ ರಾಜ್ಯ ಬಲಿ ಕೊಡುತ್ತಿರುವ ಸಿಎಂ ಸಿದ್ದರಾಮಯ್ಯ: ಬಸವರಾಜ ಬೊಮ್ಮಾಯಿ ಆರೋಪ

Latest10 hours ago

ಬೆಸ್ಕಾಂ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಚಾಲನೆ; ಹೆಚ್‌ಟಿ ಗ್ರಾಹಕರಿಗೆ ಅನುಕೂಲ

Latest10 hours ago

ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಭಾರತಕ್ಕೆ ಅವಮಾನ: ಭಾರತ-ಚೀನಾ ‘ನರಕ’ ಎಂದ ಮೈಕೆಲ್ ಸ್ಯಾವೇಜ್ ಪೋಸ್ಟ್ ಹಂಚಿಕೊಂಡ ಅಧ್ಯಕ್ಷ

HD DeveGowda Wont celebrate 92nd birthday
Latest10 hours ago

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಬಸವ ಶ್ರೀ, ಗುರುರಾಜ ಕರ್ಜಗಿ ಅವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ

Latest11 hours ago

ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ; ಥಳಿಸಿದ ಗ್ರಾಮಸ್ಥರು

Latest11 hours ago

ಪಂಚರಾಜ್ಯ ಚುನಾವಣೆ ನಂತರ,ಪೆಟ್ರೋಲ್‌,ಡೀಸೆಲ್‌ ದರ ಏರಿಕೆ ಇಲ್ಲ : ಕೇಂದ್ರದ ಸ್ಪಷ್ಟನೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌