Star Fashion: ಗ್ಲಾಮರಸ್‌ ಕಟೌಟ್‌ ಡ್ರೆಸ್‌ನಲ್ಲಿ ನಟಿ ಮೌನ ಗುಡ್ಡೆಮನೆ ಹಾಲಿಡೇ ಫ್ಯಾಷನ್‌ Vistara News

ಫ್ಯಾಷನ್

Star Fashion: ಗ್ಲಾಮರಸ್‌ ಕಟೌಟ್‌ ಡ್ರೆಸ್‌ನಲ್ಲಿ ನಟಿ ಮೌನ ಗುಡ್ಡೆಮನೆ ಹಾಲಿಡೇ ಫ್ಯಾಷನ್‌

ರಾಮಾಚಾರಿ ಸೀರಿಯಲ್‌ ಖ್ಯಾತಿಯ ನಟಿ ಮೌನ ಗುಡ್ಡೆಮನೆ, ಹಾಲಿಡೇ ಫ್ಯಾಷನ್‌ನಲ್ಲಿ ಕಟೌಟ್‌ ಡ್ರೆಸ್‌ ಧರಿಸಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಔಟ್‌ಆಫ್‌ ಸೀಸನ್‌ ಲಿಸ್ಟ್‌ನಲ್ಲಿರುವ ಈ ಔಟ್‌ಫಿಟ್‌ ಬಗ್ಗೆ ಫ್ಯಾಷನ್‌ (Star Fashion) ವಿಮರ್ಶಕರು ಹೇಳಿರುವುದೇನು? ಏನಿದು ಕಟೌಟ್‌ ಡ್ರೆಸ್‌ ಎಂಬುದರ ಬಗ್ಗೆ ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Star Fashion
ಚಿತ್ರಗಳು: ಮೌನ ಗುಡ್ಡೆಮನೆ, ನಟಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಮಾಚಾರಿ ಸೀರಿಯಲ್‌ ಖ್ಯಾತಿಯ ನಟಿ ಮೌನ ಗುಡ್ಡೆಮನೆ, ಇತ್ತೀಚೆಗೆ ಹಾಲಿಡೇ ಫ್ಯಾಷನ್‌ನಲ್ಲಿ (Star Fashion) ಕಟೌಟ್‌ ಡ್ರೆಸ್‌ ಧರಿಸಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ ತಾರೆಯರ ನೆಚ್ಚಿನ ಈ ಕಟೌಟ್‌ ಡ್ರೆಸ್‌ ಇದೀಗ ಕನ್ನಡದ ನಟಿಯರನ್ನು ಸೆಳೆಯುತ್ತಿದೆ. ಸಮ್ಮರ್‌ನ ಹಾಟ್‌ ಟ್ರೆಂಡ್‌ನಲ್ಲಿದ್ದ ಈ ಔಟ್‌ಫಿಟ್‌ ಇದೀಗ ತಾರೆಯರ ಮೂಲಕ ವಿಂಟರ್‌ ಸೀಸನ್‌ನಲ್ಲೂ ಕಾಣಿಸಿಕೊಂಡಿದೆ. ಸದ್ಯ ಔಟ್‌ಆಫ್‌ ಸೀಸನ್‌ ಲಿಸ್ಟ್‌ನಲ್ಲಿರುವ ಈ ಔಟ್‌ಫಿಟ್‌ ಬಗ್ಗೆ ಅಷ್ಟೊಂದು ಒಲವೇಕೆ ಎಂಬುದರ ಬಗ್ಗೆ ಫ್ಯಾಷನ್‌ ವಿಮರ್ಶಕರು ವಿಮರ್ಶಿಸಿದ್ದಾರೆ. ಜೊತೆಗೆ ಕಟೌಟ್‌ ಡ್ರೆಸ್‌ ಬಗ್ಗೆ ತಿಳಿಸಿದ್ದಾರೆ.

What is a cutout dress?

ಏನಿದು ಕಟೌಟ್‌ ಡ್ರೆಸ್‌?

ಸಿಂಪಲ್‌ ಆಗಿ ಹೇಳುವುದಾದಲ್ಲಿ ಯಾವುದೇ ಉಡುಪು ಅಥವಾ ಔಟ್‌ಫಿಟ್‌ ನಾನಾ ಕಡೆ ಕಟ್‌ ಆಗಿದಂತೆ ಕಾಣುವುದು ಅಥವಾ ಅಲ್ಲಲ್ಲಿ ಒಪನ್‌ ಡಿಸೈನ್‌ ಹೊಂದಿರುವುದು ಎಂದರ್ಥ. ಇನ್ನು ಆಡು ಭಾಷೆಯಲ್ಲಿ ಹೇಳುವುದಾದಲ್ಲಿ ನಾನಾ ಕಡೆ ಕೊಂಚ ಕಟ್‌ ಆಗಿರುವಂತೆ ಕಾಣುವ ವಿನ್ಯಾಸದ ಗ್ಲಾಮರಸ್‌ ಉಡುಪುಗಳಿವು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಅವರ ಪ್ರಕಾರ, ಕಟೌಟ್‌ ಡ್ರೆಸ್‌ಗಳು ಸಮ್ಮರ್‌ ಸೀಸನ್‌ನ ಹಾಟ್‌ ಟ್ರೆಂಡ್‌ನಲ್ಲಿದ್ದವು. ಅತಿ ಸುಲಭವಾಗಿ ಗಾಳಿಯಾಡುವ ಡ್ರೆಸ್‌ಗಳಿವು. ಅದರಲ್ಲೂ ಬೀಚ್‌ ಹಾಗೂ ಟ್ರಾವೆಲ್‌ ಫ್ಯಾಷನ್‌ನಲ್ಲಿ ಪ್ರಿಫರ್‌ ಮಾಡುವ ಜೆನ್‌ ಜಿ ಔಟ್‌ಫಿಟ್‌ಗಳಿವು, ದೇಹದ ಭಾಗವನ್ನು ಎಕ್ಸ್‌ಪೋಸ್‌ ಮಾಡುತ್ತವೆ. ನೋಡಲು ಗ್ಲಾಮರಸ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ.

A cutout dress is the right choice for a holiday spot

ಹಾಲಿಡೇ ಸ್ಪಾಟ್‌ಗೆ ಕಟೌಟ್‌ ಡ್ರೆಸ್‌ ಸರಿಯಾದ ಆಯ್ಕೆ

ಇತ್ತೀಚೆಗೆ ಗೋವಾದಲ್ಲಿ ಹಾಲಿಡೇ ಮಾಡಿದ ಮೌನ ಗುಡ್ಡೇಮನೆ ನಾನಾ ಔಟ್‌ಫಿಟ್‌ಗಳಲ್ಲಿ ಬಿಂದಾಸ್‌ ಆಗಿ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರು ಧರಿಸಿದ್ದ ವೈಟ್‌ ಕಲರ್‌ನ ಕಟೌಟ್‌ ಡ್ರೆಸ್‌ ಮಾತ್ರ ಫ್ಯಾಷನ್‌ ಪ್ರೇಮಿಗಳನ್ನು ಸೆಳೆಯಿತು. ಅದರಲ್ಲೂ ಈ ಜನರೇಷನ್‌ ಹುಡುಗಿಯರ ಚಾಯ್ಸ್‌ನಲ್ಲಿರುವ ಈ ಔಟ್‌ಫಿಟ್‌ ಗೋವಾದಲ್ಲಿನ ಬಿಸಿಲಿನ ಹವಮಾನಕ್ಕೆ ಹೊಂದುತ್ತಿತ್ತು. ಹಾಗಾಗಿ ಅವರು ಇದನ್ನು ಧರಿಸಿದಾಗ ಕಂಫರ್ಟಬಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಉಡುಪು ಹಿಲ್‌ ಸ್ಟೇಷನ್‌ಗಳಲ್ಲಿ ಧರಿಸಲಾಗುವುದಿಲ್ಲ. ಈ ಸೀಸನ್‌ಗೆ ಹೊಂದುವುದಿಲ್ಲ. ಸೀಸನ್‌ ಬದಲಾದರೂ ಅವರು ಧರಿಸಿದ್ದ ಹಾಲಿಡೇ ಸ್ಪಾಟ್‌ ಈ ಉಡುಪಿಗೆ ಸರಿಯಾಗಿ ಹೊಂದಿಕೆಯಾಗಿದೆ. ಹಾಗಾಗಿ ನಟಿಯ ಈ ಚಾಯ್ಸ್‌ ಅಲ್ಲಿನ ವಾತವರಣಕ್ಕೆ ಸೂಕ್ತವಾಗಿದೆ ಎಂದು ಫ್ಯಾಷನ್‌ ವಿಮರ್ಶಕಿ ದೀಪಿಕಾ ರಿವ್ಯೂ ನೀಡಿದ್ದಾರೆ.

Fashion critics advice on cutout dress

ಫ್ಯಾಷನ್‌ ವಿಮರ್ಶಕರ ಸಲಹೆ

  • ಕಟೌಟ್‌ ಡ್ರೆಸ್‌ ಧರಿಸುವುದಾದಲ್ಲಿ ಬಿಸಿಲಿರುವ ಜಾಗದಲ್ಲಿ ಮಾತ್ರ ಧರಿಸಿ.
  • ನಿಮ್ಮ ಬಾಡಿಟೈಪ್‌ಗೆ ಹೊಂದುವಂತಿರಬೇಕು.
  • ಈ ಸೀಸನ್‌ನಲ್ಲಿ ಈ ಟ್ರೆಂಡ್‌ ಇಲ್ಲ ಎಂಬುದು ನೆನಪಿರಲಿ.
  • ಕಟೌಟ್‌ ಡ್ರೆಸ್‌ ಈ ಚಳಿಗೆ ಸೂಕ್ತವಲ್ಲ!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Show: ಫ್ಯಾಷನ್‌ ಶೋನಲ್ಲಿ ಬಿಂದಾಸ್‌ ರ‍್ಯಾಂಪ್‌ ವಾಕ್‌ ಮಾಡಿದ ಡಾಕ್ಟರ್ಸ್!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Velvet Lehenga Fashion: ವಿಂಟರ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ವೆಲ್ವೆಟ್‌ ಲೆಹೆಂಗಾ ಜಾದೂ

ಈ ಬಾರಿಯ ವಿಂಟರ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ವೆಲ್ವೆಟ್‌ ಲೆಹೆಂಗಾಗಳು (Velvet Lehenga Fashion) ಹಂಗಾಮ ಎಬ್ಬಿಸಿವೆ. ಚುಮು ಚುಮು ಚಳಿಗೆ ಬೆಚ್ಚಗಿಡುವ ಈ ಫ್ಯಾಬ್ರಿಕ್‌ನ ಡಿಸೈನರ್‌ ಲೆಹೆಂಗಾಗಳು ಮದುಮಗಳ ಸೌಂದರ್ಯಕ್ಕೆ ಸಾಥ್‌ ನೀಡುತ್ತವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Velvet Lehenga Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಡಿಸೈನರ್‌ ಬ್ರೈಡಲ್‌ ವೆಲ್ವೆಟ್‌ ಲೆಹೆಂಗಾಗಳು (Velvet Lehenga Fashion) ಟ್ರೆಂಡಿಯಾಗಿವೆ. ಈ ಸೀಸನ್‌ನ ಚುಮು ಚುಮು ಚಳಿಗೆ ಬೆಚ್ಚಗಿಡುವ ಈ ವೆಲ್ವೆಟ್‌ ಫ್ಯಾಬ್ರಿಕ್‌ನ ಡಿಸೈನರ್‌ ಲೆಹೆಂಗಾಗಳು ಮದುಮಗಳ ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುತ್ತಿವೆ.

Assorted Velvet Lehenga

ಬಗೆಬಗೆಯ ವೆಲ್ವೆಟ್‌ ಲೆಹೆಂಗಾ

ಸಿಲ್ಕ್‌ ವೆಲ್ವೆಟ್‌, ರಯಾನ್‌ ವೆಲ್ವೆಟ್‌, ಲೆನಿನ್‌ ವೆಲ್ವೆಟ್‌, ಸಿಂಥೆಟಿಕ್‌, ಕ್ರಶ್ಡ್ ವೆಲ್ವೆಟ್‌ ಹಾಗೂ ಮೊಹೈರ್‌ ವೆಲ್ವೆಟ್‌ ಫ್ಯಾಬ್ರಿಕ್‌ನ ಲೆಹೆಂಗಾಗಳು ಹೆವ್ವಿ ವರ್ಕ್ ಹಾಗೂ ಡಿಸೈನ್‌ನಲ್ಲಿ ಆಗಮಿಸಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಸಾಫ್ಟ್‌ ಸಿಲ್ಕ್‌ ಫ್ಯಾಬ್ರಿಕ್‌ನವು ಅತಿ ಹೆಚ್ಚು ಪ್ರಚಲಿತದಲ್ಲಿವೆ. ಇದಕ್ಕೆ ಕಾರಣ, ಲೈಟ್‌ವೈಟ್‌ ಹಾಗೂ ಧರಿಸಿದಾಗ ಫ್ಲೋ ಆಗುವ ಗುಣ. ಇನ್ನು, ಸಾಕಷ್ಟು ಲೆಹೆಂಗಾಗಳು ಸೆಮಿ ಸ್ಟಿಚ್‌ನಲ್ಲಿ ದೊರಕುತ್ತಿದ್ದು, ಆಯಾ ಮದುಮಗಳ ಅಭಿಲಾಷೆಗೆ ತಕ್ಕಂತೆ ಹೊಲೆಸಿಕೊಳ್ಳಬಹುದು. ಇದನ್ನು ಆಯಾ ಶಾಪಿಂಗ್‌ ಸೆಂಟರ್‌ ಹಾಗೂ ಬೋಟಿಕ್‌ನವರೇ ಖುದ್ದು ಆಸಕ್ತಿವಹಿಸಿ ಮಾಡಿಕೊಡುತ್ತಾರೆ.

Winter Dark Shades Velvet Lehenga

ವಿಂಟರ್‌ ಡಾರ್ಕ್ ಶೇಡ್ಸ್ ವೆಲ್ವೆಟ್‌ ಲೆಹೆಂಗಾ

ಈ ಸೀಸನ್‌ನಲ್ಲಿ ಡಾರ್ಕ್ ಶೇಡ್‌ನ ವೆಲ್ವೆಟ್‌ ಲೆಹೆಂಗಾಗಳು ಚಾಲ್ತಿಯಲ್ಲಿವೆ. ವೈನ್‌ ಕಲರ್‌, ಬ್ಲಡ್‌ ರೆಡ್‌, ಪರ್ಪಲ್‌, ಮೆಜೆಂತಾ, ಇಂಕ್‌ ಬ್ಲ್ಯೂ, ರಾಯಲ್‌ ಬ್ಲ್ಯೂ, ಚಾಕೋಲೇಟ್‌ ಶೇಡ್‌ನವು ಹೆಚ್ಚು ಮಾರಾಟವಾಗುತ್ತಿವೆ. ಹಾಗೆಂದು ಇವೆಲ್ಲಾ ಸಾದಾ ಫ್ಯಾಬ್ರಿಕ್‌ನದ್ದಲ್ಲ! ಬದಲಿಗೆ ಹ್ಯಾಂಡ್‌ ಎಂಬ್ರಾಯ್ಡರಿ, ಮೆಷಿನ್‌ ಎಂಬ್ರಾಯ್ಡರಿ, ಬೂಟಾ ಹೀಗೆ ನಾನಾ ವಿನ್ಯಾಸಗಳು ಹರಡಿರುತ್ತವೆ. ಆಯಾ ವಿನ್ಯಾಸಕ್ಕೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ. ಹ್ಯಾಂಡ್‌ ಎಂಬ್ರಾಯ್ಡರಿ ವೆಲ್ವೆಟ್‌ ಲೆಹೆಂಗಾಗಳು ಕೊಂಚ ದುಬಾರಿ. ಎರಡ್ಮೂರು ಸಾವಿರ ರೂ.ಗಳಿಂದ ಹಿಡಿದು ನಾಲ್ಕೈದು ಲಕ್ಷ ರೂ,ಗಳವರೆಗೂ ದೊರೆಯುತ್ತವೆ. ಇನ್ನು ಸೆಲೆಬ್ರೆಟಿ ಡಿಸೈನರ್‌ಗಳಾದ್ದಾದಲ್ಲಿ ಇನ್ನು ಬೆಲೆಬಾಳುವಂತವು ಸಿಗುತ್ತವೆ ಎನ್ನುತ್ತಾರೆ ಲೆಹೆಂಗಾ ಡಿಸೈನರ್ಸ್.

Replica Designer Brand Velvet Lehengas

ಡಿಸೈನರ್ಸ್ ಬ್ರಾಂಡ್‌ ವೆಲ್ವೆಟ್‌ ಲೆಹೆಂಗಾಗಳ ರಿಪ್ಲಿಕಾ

ಲಕ್ಷಗಟ್ಟಲೇ ಸುರಿದು ಕೊಳ್ಳಲಾಗದಿದ್ದಲ್ಲಿ, ಅವುಗಳ ರಿಪ್ಲಿಕಾ ವೆಲ್ವೆಟ್‌ ಲೆಹೆಂಗಾಗಳು ಇದೀಗ ಲಭ್ಯ. ಸಾಮಾನ್ಯ ಯುವತಿಯರು ಫೋಟೋ ಶೂಟ್‌ಗಾಗಿ ಹಾಗೂ ಲಕ್ಷುರಿ ಲುಕ್‌ಗಾಗಿ ಇಂತಹವನ್ನೂ ಖರೀದಿಸುತ್ತಾರೆ ಎನ್ನುತ್ತಾರೆ ಡಿಸೈನರ್ಸ್.

How to choose a velvet lehenga?

ವೆಲ್ವೆಟ್‌ ಲೆಹೆಂಗಾ ಆಯ್ಕೆ ಹೇಗೆ?

  • ಸ್ಲಿಮ್‌ ಇರುವವರಿಗೆ ವೆಲ್ವೆಟ್‌ ಲೆಹೆಂಗಾ ಬೆಸ್ಟ್ ಚಾಯ್ಸ್.
  • ಸಿಲ್ಕ್ ವೆಲ್ವೆಟ್‌ ಲೆಹೆಂಗಾ ಎಲ್ಲರಿಗೂ ಆಕರ್ಷಕವಾಗಿ ಕಾಣುತ್ತದೆ.
  • ಮದುಮಗಳ ಸ್ಕಿನ್‌ ಟೊನ್‌ಗೆ ಮ್ಯಾಚ್‌ ಆಗುವ ಕಲರ್‌ ಆಯ್ಕೆ ಮಾಡಿ.
  • ರಿಪ್ಲಿಕಾ ಲೆಹೆಂಗಾಗಳು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ನೆನಪಿರಲಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Kundan Jhumka Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಡಿಷನಲ್‌ ಜುಮಕಿ ಕುಂದನ್‌ ಜುಮ್ಕಾ ಆದ ಕಥೆ!

Continue Reading

ಫ್ಯಾಷನ್

Mens Winter Fashion: ಚಳಿಗಾಲದ ಮೆನ್ಸ್ ಲೇಯರ್‌ ಲುಕ್‌ಗೆ 3 ಮಿಕ್ಸ್‌ ಮ್ಯಾಚ್‌ ಸ್ಟೈಲಿಂಗ್‌ ರೂಲ್ಸ್

ಚಳಿಗಾಲದಲ್ಲಿ ಲೇಯರ್‌ ಲುಕ್‌ (Mens Winter Fashion) ಅಳವಡಿಸಿಕೊಂಡ ಪುರುಷರೂ ಕೂಡ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಒಂದಿಷ್ಟು ಮಿಕ್ಸ್‌ ಮ್ಯಾಚ್‌ ಐಡಿಯಾ ಪಾಲಿಸಬೇಕಾಗುತ್ತದೆ ಎನ್ನುವ ಸ್ಟೈಲಿಸ್ಟ್‌ಗಳು ಇದಕ್ಕಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಸಿಂಪಲ್ಲಾಗಿ ತಿಳಿಸಿದ್ದಾರೆ.

VISTARANEWS.COM


on

Mens Winter Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ಪುರುಷರು ಲೇಯರ್‌ ಲುಕ್‌ನಲ್ಲೂ (Mens Winter Fashion) ಆಕರ್ಷಕವಾಗಿ ಕಾಣಿಸಿಕೊಳ್ಳಬೇಕೆಂದಲ್ಲಿ ಒಂದಿಷ್ಟು ಮಿಕ್ಸ್‌ ಮ್ಯಾಚ್‌ ಸ್ಟೈಲಿಂಗ್‌ ರೂಲ್ಸ್ ಫಾಲೋ ಮಾಡಬೇಕು. ಧರಿಸುವಾಗ ಟ್ರೆಂಡಿ ಶೇಡ್ಸ್‌ ಆಯ್ಕೆ ಮತ್ತು ಸೂಕ್ತ ಉಡುಪಿನ ಸೆಲೆಕ್ಷನ್‌ ಮಾಡಿದಲ್ಲಿ, ನಿರಾಂತಕವಾಗಿ ಹ್ಯಾಂಡ್‌ಸಮ್‌ ಆಗಿ ಕಾಣಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. “ಇನ್ನು ಚಳಿಗಾಲದ ಫ್ಯಾಷನ್‌ನಲ್ಲಿ ಲೇಯರ್‌ ಲುಕ್‌ಗೆಬ (Mens Winter Fashion) ಅಗ್ರಸ್ಥಾನ. ಯುವತಿಯರು ಮಾತ್ರವಲ್ಲ, ಯುವಕರು ಕೂಡ ಚಳಿ-ಗಾಳಿಗೆ ಲೇಯರ್‌ ಲುಕ್‌ ಅಳವಡಿಸಿಕೊಳ್ಳಬೇಕಾಗುತ್ತದೆ. ಸಿಂಪಲ್ಲಾಗಿ ಈ ಸೀಸನ್‌ಗೆ ಒಪ್ಪುವಂತೆ ಹೇಗೆಲ್ಲಾ ಕಾಣಿಸಿಕೊಳ್ಳಬಹುದು” ಎಂಬುದರ ಬಗ್ಗೆ ಸ್ಟೈಲಿಸ್ಟ್‌ ಯಶ್‌ ರಾಮ್‌ ಸಿಂಪಲ್ಲಾಗಿ ತಿಳಿಸಿದ್ದಾರೆ.

Mix and match properly

ಸರಿಯಾಗಿ ಮಿಕ್ಸ್‌ –ಮ್ಯಾಚ್‌ ಮಾಡಿ

ಯಾವುದೋ ಉಡುಪಿಗೆ ಇನ್ಯಾವುದೋ ಶೇಡ್‌ ಮಿಕ್ಸ್‌ ಮ್ಯಾಚ್‌ ಮಾಡುವುದು ನಾಟ್‌ ಓಕೆ. ಪುರುಷರು ಅವರ ಉದ್ಯೋಗ ಹಾಗೂ ಅವರು ಕೆಲಸ ಮಾಡುವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅದಕ್ಕೆ ಪೂರಕವಾಗುವಂತೆ ಔಟ್‌ಫಿಟ್‌ ಮಿಕ್ಸ್‌ ಮ್ಯಾಚ್‌ ಮಾಡಬೇಕು. ಉದಾಹರಣೆಗೆ., ಟೀಚರ್‌, ಪ್ರೊಫೆಸರ್‌ ಹಾಗೂ ಸರಕಾರಿ ನೌಕರರಾದಲ್ಲಿ ಫಂಕಿ ಲುಕ್‌ ಮಾಡಕೂಡದು. ಬದಲಿಗೆ ಡೀಸೆಂಟ್‌ ಫುಲ್‌ ಸ್ಲೀವ್‌ ಶರ್ಟ್, ಫಾರ್ಮಲ್‌ ಪ್ಯಾಂಟ್‌ ಅದಕ್ಕೆ ಹೊಂದುವಂತಹ ಹಾಫ್‌ ಸ್ವೆಟರ್ ಧರಿಸಬಹುದು. ಇನ್ನು ಕಾಲೇಜು ಹುಡುಗರಾದಲ್ಲಿ ಫಂಕಿ ಲುಕ್‌ ನೀಡುವ ವೈಬ್ರೆಂಟ್‌ ಶೇಡ್ಸ್ನ ಔಟ್‌ಫಿಟ್‌ ಮಿಕ್ಸ್‌ ಮ್ಯಾಚ್‌ ಮಾಡಬಹುದು.

A jacket-coat mix match

ಜಾಕೆಟ್‌-ಕೋಟ್‌ ಮಿಕ್ಸ್‌ ಮ್ಯಾಚ್‌ ಹೀಗೆ

ಯಾವುದೇ ಪ್ಯಾಂಟ್‌ ಶರ್ಟ್ ಮೇಲೆ ಜಾಕೆಟ್‌ ಧರಿಸುವುದಾದಲ್ಲಿ ಮೊದಲಿಗೆ ಅದರ ಡಿಸೈನ್‌ ನೋಡಿ. ಡಿಸೆಂಟ್‌ ಲುಕ್‌ ಇದ್ದಲ್ಲಿ ಫಾರ್ಮಲ್‌ ಜೊತೆಗೆ ಧರಿಸಬಹುದು. ಫಂಕಿ ಜಾಕೆಟ್‌ ಆದಲ್ಲಿ ಜೀನ್ಸ್ ಪ್ಯಾಂಟ್‌ ಜೊತೆ ಧರಿಸಬಹುದು. ಇನ್ನು ವೃತ್ತಿಪರರು ಆದಷ್ಟೂ ಕೋಟ್‌ಗಳ ಆಯ್ಕೆ ಮಾಡುವುದು ಸೂಕ್ತ. ಅದರಲ್ಲೂ ಡಿಸೆಂಟ್‌ ಲುಕ್‌ ನೀಡುವ ಬ್ರೌನ್‌, ಬ್ಲ್ಯೂ ಹಾಗೂ ಬ್ಲಾಕ್‌ ಕಲರ್‌ ಆಯ್ಕೆ ಮಾಡಬೇಕು. ಇನ್ನು ಕಾಲೇಜು ಹುಡುಗರಿಗೆ ಡೆನೀಮ್‌ ಜಾಕೆಟ್‌ ಓಕೆ. ವೈಬ್ರೆಂಟ್‌ ಶೇಡ್‌ನವು ಓಕೆ. ಮಧ್ಯವಯಸ್ಕರಿಗೆ ಲಾಂಗ್‌ ಜಾಕೆಟ್ಸ್ ಬೆಸ್ಟ್.

Sweater-Pullovers

ಸ್ವೆಟರ್‌ – ಪುಲ್‌ಓವರ್ಸ್

ಸ್ವೆಟರ್‌ ಧರಿಸಲು ಬಯಸುವ ಪುರುಷರು ಆದಷ್ಟೂ ತಮ್ಮ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಬೇಕು. ಯುವಕರಿಗೆ ಯಾವುದೇ ಸ್ಟೈಲ್‌ನದ್ದಾದರೂ ಸರಿ. ಆದರೆ, ವೃತ್ತಿಪರರು ಮಾತ್ರ ಸಾದಾ ಇಲ್ಲವೇ ಸ್ಟ್ರೈಪ್ಸ್‌ನ ಸ್ವೆಟರ್‌ ಧರಿಸಬಹುದು. ಒಳಗೆ ತೆಳುವಾದ ಶರ್ಟ್ ಅಥವಾ ಟೀ ಶರ್ಟ್ ಧರಿಸುವುದು ಸೂಕ್ತ. ಇನ್ನು ಪುಲ್‌ಓವರ್ಸ್, ವೀಕೆಂಡ್‌ ಅಥವಾ ಹಾಲಿಡೇ ಟ್ರಾವೆಲ್‌ಗೆ ಬೆಸ್ಟ್‌ ಅಪ್ಷನ್‌.

  • ರಾತ್ರಿ ವೇಳೆ ಜಾಕೆಟ್‌ ಜೊತೆ ಮಫ್ಲರ್‌ ಸ್ಟೈಲಾಗಿ ಧರಿಸಬಹುದು.
  • ಲೈಟ್‌ವೈಟ್‌ ಪುಲ್‌ಓವರ್ಸ್ ಆಯ್ಕೆ ಮಾಡಿ.
  • ಕಾಮನ್‌ ಕಲರ್‌ ಕೋಟ್‌ ಆದಲ್ಲಿ ಯಾವ ಔಟ್‌ಫಿಟ್‌ಗಾದರೂ ಮ್ಯಾಚ್‌ ಆಗುತ್ತದೆ.
  • ಟ್ರಾವೆಲ್‌ ಮಾಡುವಾಗ ಟ್ರೆಂಡಿ ವುಲ್ಲನ್‌ ಕ್ಯಾಪ್‌ ಧರಿಸಬಹುದು
  • ಈ ಸೀಸನ್‌ಗೆ ಇವುಗಳೊಂದಿಗೆ ಶೂ ಧರಿಸಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Mens Fashion: ಸೀಸನ್‌ ಎಂಡ್‌ನಲ್ಲಿ ಮೆನ್ಸ್ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಲಿನನ್‌ ಶರ್ಟ್ ಜಾಕೆಟ್‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಫ್ಯಾಷನ್

Kundan Jhumka Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಡಿಷನಲ್‌ ಜುಮಕಿ ಕುಂದನ್‌ ಜುಮ್ಕಾ ಆದ ಕಥೆ!

ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಜುಮಕಿಗಳು ಇದೀಗ ನಾರ್ತ್ ಇಂಡಿಯನ್‌ ಸ್ಟೈಲ್‌ನ ಕುಂದನ್‌ ಜುಮ್ಕಾಗಳಾಗಿ (Kundan Jhumka Fashion) ಬದಲಾಗಿವೆ. ಯಾವ್ಯಾವ ಡಿಸೈನ್‌ನಲ್ಲಿ ಇವು ಲಭ್ಯವಿದೆ. ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.
ಸಾಂದರ್ಭಿಕ ಚಿತ್ರಗಳು

VISTARANEWS.COM


on

Kundan Jhumka Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕುಂದನ್‌ ಜುಮ್ಕಾಗಳು (Kundan Jhumka Fashion) ಇದೀಗ ಮಹಿಳೆಯರನ್ನು ಅಲಂಕರಿಸುತ್ತಿವೆ. ಹೌದು. ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಜುಮಕಿಗಳು ಇದೀಗ ನಾರ್ತ್ ಇಂಡಿಯನ್‌ ಸ್ಟೈಲ್‌ನ ಕುಂದನ್‌ ಜುಮ್ಕಾಗಳಾಗಿ ಬದಲಾಗಿವೆ. ನೋಡಲು ಮನಮೋಹಕ ಡಿಸೈನ್‌ನಲ್ಲಿ ಆಗಮಿಸಿರುವ ಇವು ಉತ್ತರ-ದಕ್ಷಿಣದ ವಿನ್ಯಾಸದ ಸಂಗಮವಾಗಿವೆ. ಅಂದ ಹಾಗೆ, ಜುಮಕಿಗಳು ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳಲ್ಲೊಂದಾಗಿವೆ. ಮುತ್ತಿನ ಜುಮಕಿ, ಹರಳಿನ ಜುಮಕಿ, ಏಳು ಕಲ್ಲಿನ ಜುಮಕಮ ಬೆಳ್ಳಿ ಮೋಡ ಜುಮಕಿ ಸೇರಿದಂತೆ ನಾನಾ ಡಿಸೈನ್‌ಗಳು ಸೌತ್‌ ಇಂಡಿಯಾದ ವೆಡ್ಡಿಂಗ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಅದರಲ್ಲೂ ಮದುಮಗಳ ಪ್ರಮುಖ ಜ್ಯುವೆಲರಿಗಳಲ್ಲಿ ಸ್ಥಾನ ಪಡೆದಿವೆ ಎನ್ನುವ ಜ್ಯುವೆಲ್‌ ಡಿಸೈನರ್‌ ರಾಶಿ ಪ್ರಕಾರ, ಕಾಲಕಳೆದಂತೆ ಇವು ಕೂಡ ನಾನಾ ರೂಪದಲ್ಲಿ ಬದಲಾಗುತ್ತಿವೆಯಂತೆ.

The story of Kundan Jhumka

ಕುಂದನ್‌ ಜುಮ್ಕಾ ಕಥೆ

ಮೊದಲಿನಿಂದಲೂ ಉತ್ತರ ಭಾರತದ ಆಭರಣಗಳಲ್ಲಿ ಕುಂದನ್‌ ಡಿಸೈನ್‌ಗಳು ಹೆಚ್ಚು ಪ್ರಚಲಿತದಲ್ಲಿವೆ. ಇದಕ್ಕೆ ಪೂರಕ ಎಂಬಂತೆ ಇದೀಗ ಅಲ್ಲಿನ ಹೆಣ್ಣುಮಕ್ಕಳಿಗೆ ಪ್ರಿಯವಾಗುವಂತೆ, ಕುಂದನ್‌ ಸೂಕ್ಷ್ಮ ವಿನ್ಯಾಸದ ನಾನಾ ಡಿಸೈನ್‌ಗಳು ಜುಮಕಿಗಳಲ್ಲಿ ಕಾಣಿಸತೊಡಗಿವೆ. ಜ್ಯುವೆಲ್‌ ಡಿಸೈನರ್‌ಗಳು ಇದನ್ನು ಮೊದಲಿಗೆ ಪ್ರಯೋಗಾತ್ಮಕವಾಗಿ ವಿನ್ಯಾಸಗೊಳಿಸಿ ಬಿಡುಗಡೆಗೊಳಿಸಿದ್ದು, ಇದೀಗ ಟ್ರೆಂಡಿಯಾಗಿದೆ. ಅಲ್ಲಿನ ಸ್ಟೇಟ್‌ಮೆಂಟ್‌ ಜ್ಯುವೆಲರಿಯೊಂದಿಗೆ ಸೇರಿಸಿ, ಊಹೆಗೂ ಮೀರಿದ ಡಿಸೈನ್‌ಗಳ ಜುಮ್ಕಾಗಳನ್ನು ಪರಿಚಯಿಸಿದ್ದಾರೆ. ಇದು ಅಲ್ಲಿಯವರಿಗೆ ಪ್ರಿಯವಾಗಿದ್ದು, ಇದೀಗ ಪಾಫುಲರ್‌ ಆಗಿದೆ. ಪರಿಣಾಮ, ಇಲ್ಲಿನ ಸಾಂಪ್ರಾದಾಯಿಕ ಜುಮಕಿಗಳು ಜುಮ್ಕಾಗಳಾಗಿ ಬದಲಾಗಿವೆ. ಇತ್ತೀಚಿನ ಅಲಿಯಾ ಭಟ್‌ ನಟಿಸಿದ ಹಿಂದಿ ಸಿನಿಮಾದಲ್ಲಿ ಸಖತ್‌ ಪಾಪುಲರ್‌ ಹಾಡು ಜುಮ್ಕಾ ಗೀರಾ ರೇ…ಇದಕ್ಕೆ ಸಾಕ್ಷಿ ಎನ್ನಬಹುದು.

Popular Kundan Jhumka Designs

ಪಾಫುಲರ್‌ ಕುಂದನ್‌ ಜುಮ್ಕಾ ಡಿಸೈನ್ಸ್

ಚಾಂದ್‌ ಬಾಲಿ ಶೈಲಿಯ ಜುಮ್ಕಾ, ಅಗಲವಾದ ಸ್ಟಡ್ಸ್ ಜೊತೆ ಜುಮ್ಕಾ, ಸೂರ್ಯನಂತಹ ಓಲೆಯ ಜೊತೆ ಜುಮ್ಕಾ, ಪರ್ಲ್ –ಕುಂದನ್‌ ಜುಮ್ಕಾ, ಕುಂದನ್‌ – ಸ್ಟೋನ್ಸ್ ಜುಮ್ಕಾ, ಕುಂದನ್‌ನ ಬಿಗ್‌ ಜುಮ್ಕಾ ಸೇರಿದಂತೆ ಸಾಕಷ್ಟು ಡಿಸೈನ್‌ನವು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

How to match Kundan Jhumka?

ಕುಂದನ್‌ ಜುಮ್ಕಾ ಮ್ಯಾಚಿಂಗ್‌ ಮಾಡುವುದು ಹೇಗೆ?

  • ಗ್ರ್ಯಾಂಡ್‌ ಉಡುಪುಗಳಿಗೆ ಮ್ಯಾಚ್‌ ಮಾಡಬಹುದು.
  • ಫ್ಯೂಶನ್‌ ಡ್ರೆಸ್‌ಗಳಿಗೂ ಧರಿಸಬಹುದು.
  • ಶಿಮ್ಮರ್‌ ಎಥ್ನಿಕ್‌ ಉಡುಪುಗಳಿಗೆ ಬೆಸ್ಟ್ ಮ್ಯಾಚಿಂಗ್‌.
  • ಕಲರ್‌ ಮ್ಯಾಚಿಂಗ್‌ ಕೂಡ ಮಾಡಬಹುದು.
  • ಮಿರರ್‌ನಂತೆ ಮಿನುಗುವ ಜುಮ್ಕಾಗಳು ಲೆಹೆಂಗಾಗೆ ಸಖತ್ತಾಗಿ ಕಾಣುತ್ತವೆ.
  • ಮುಖದ ಆಕಾರಕ್ಕೆ ತಕ್ಕ ಸೈಝಿನ ಜುಮ್ಕಾ ಧರಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Tatoo Chokers Fashion: ಯುವತಿಯರ ಫಂಕಿ ಆಕ್ಸೆಸರೀಸ್‌ ಲಿಸ್ಟ್ ಗೆ ಮರಳಿದ ಟ್ಯಾಟೂ ಚೋಕರ್ಸ್‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಫ್ಯಾಷನ್

Tatoo Chokers Fashion: ಯುವತಿಯರ ಫಂಕಿ ಆಕ್ಸೆಸರೀಸ್‌ ಲಿಸ್ಟ್ ಗೆ ಮರಳಿದ ಟ್ಯಾಟೂ ಚೋಕರ್ಸ್‌

ತೂಕವಿಲ್ಲದ ಹಗುರವಾದ ಟ್ಯಾಟೂ ಸ್ಟೈಲ್‌ ಚೋಕರ್ಸ್‌ (Tatoo Chokers fashion) ಈ ಸೀಸನ್‌ನಲ್ಲಿ ಯುವತಿಯರ ಫಂಕಿ ವಿಂಟರ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಮರಳಿದೆ. ಹೇಗೆಲ್ಲಾ ವೆಸ್ಟರ್ನ್ ಔಟ್‌ಫಿಟ್‌ ಜೊತೆ ಇವನ್ನು ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Tatoo Chokers Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ಯಾಟು ಸ್ಟೈಲ್‌ ಚೋಕರ್‌ಗಳು (Tatoo Chokers fashion) ಫಂಕಿ ಆಕ್ಸೆಸರೀಸ್‌ ಲೋಕಕ್ಕೆ ಮರಳಿವೆ. ತಕ್ಷಣಕ್ಕೆ ನೋಡಲು ಟ್ಯಾಟೂ ಡಿಸೈನ್‌ ಬಿಡಿಸಿದಂತೆ ಕಾಣುವ ಇವು ತೂಕವಿಲ್ಲದ ಚೋಕರ್ಸ್! ಮಾಡರ್ನ್ ಯುವತಿಯರಿಗೆ ಹೇಳಿಮಾಡಿಸಿದಂತಿವೆ. ಹಾಗೆಂದು ಇದೇನು ಹೊಸ ಕಾನ್ಸೆಪ್ಟ್‌ ಚೋಕರ್ಸ್‌ಗಳಲ್ಲ! ನಯಾ ಡಿಸೈನ್‌ ಹಾಗೂ ಹೊಸ ವೆರೈಟಿ ಕಾನ್ಸೆಪ್ಟ್‌ನಲ್ಲಿ ಆಗಮಿಸಿವೆ. ಸದ್ಯಕ್ಕೆ ಲೈಟ್‌ವೇಟ್‌ ಆಕ್ಸೆಸರೀಸ್‌ ಲಿಸ್ಟ್‌ನಲ್ಲಿರುವ ಇವು ಸುಲಭವಾಗಿ ಕ್ಯಾರಿ ಮಾಡಬಹುದಾದಂತಹ ಆಕ್ಸೆಸರೀಸ್‌ಗಳಿವು.

What are tattoo chokers?

ಏನಿದು ಟ್ಯಾಟೂ ಚೋಕರ್ಸ್‌

ನೋಡಲು ಟ್ಯಾಟೂ ಡಿಸೈನ್‌ ಹೊಂದಿರುವ ಚೋಕರ್‌ ಧರಿಸಿದಾಗ ನೆಕ್‌ಗೆ ಅಂಟಿದಂತೆ, ನೋಡಲು ಟ್ಯಾಟೂ ಬಿಡಿಸಿದಂತೆ ಕಾಣುತ್ತವೆ. ನಾನಾ ಶೈಲಿಯ ಸಿಂಪಲ್‌ ಟ್ಯಾಟೂ ಡಿಸೈನ್‌ಗಳಿಂದ ಹಿಡಿದು ಕಾಂಪ್ಲಿಕೇಟೆಡ್‌ ಟ್ಯಾಟೂ ಚೋಕರ್ಸ್‌ಗಳು ಇದೀಗ ಲಭ್ಯ. ಲೈಟ್‌ವೇಟ್‌ ವೈರ್‌ನಂತಹ ಮೆಟಿರಿಯಲ್‌ನಲ್ಲಿ ಇವನ್ನು ಸಿದ್ಧಪಡಿಸಲಾಗಿರುತ್ತದೆ. ನೋಡಲು ನೆಕ್‌ ಮೇಲೆ ಟ್ಯಾಟೂ ಅಂಟಿಸಿದ ರೀತಿಯಲ್ಲೆ ಕಾಣಿಸುತ್ತವೆ. ಹಾಗೆಂದು ಇವನ್ನು ಧರಿಸುವುದರಿಂದ ಉಸಿರುಗಟ್ಟಿದಂತಾಗುವುದಿಲ್ಲ. ಧರಿಸಿದರೂ ಭಾರವೆನಿಸುವುದಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Chokers Variety Designs

ಚೋಕರ್ಸ್ ವೆರೈಟಿ ಡಿಸೈನ್ಸ್‌

ಟ್ಯಾಟೂ ಹೆಸರೇ ಹೇಳುವಂತೆ ಲೆಕ್ಕವಿಲ್ಲದಷ್ಟು ಸೂಕ್ಷ್ಮ ಡಿಸೈನ್‌ಗಳವನ್ನು ಕಾಣಬಹುದು. ನೋಡಲು ಎಲ್ಲವೂ ಒಂದೇ ಬಗೆಯಂತೆ ಕಂಡರೂ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಸುರುಳಿಯಾಕಾರ, ಮಧ್ಯೆ ಮಧ್ಯೆ ಬೀಡ್ಸ್‌, ಬ್ಲಾಕ್‌ ಪರ್ಲ್‌, ಬಾರ್ಡರ್‌ ಚಿತ್ತಾರ ಹೀಗೆ ಸಾಮಾನ್ಯ ಡಿಸೈನ್‌ಗಳಿಂದಿಡಿದು ಎರಡ್ಮೂರಿಂಚಿನ ಟ್ಯಾಟೂ ಡಿಸೈನ್‌ನ ಚೋಕರ್ಸ್ ಹುಡುಗಿಯರ ಕತ್ತನ್ನು ಸಿಂಗರಿಸುತ್ತಿವೆ.

Demand for black shade

ಬ್ಲಾಕ್‌ ಶೇಡ್‌ಗೆ ಬೇಡಿಕೆ

ಅತಿ ಹೆಚ್ಚು ಟ್ರೆಂಡ್‌ನಲ್ಲಿರುವ ಟ್ಯಾಟೂ ಚೋಕರ್ಸ್‌ನಲ್ಲಿ ಬ್ಲಾಕ್‌ ಕಲರ್‌ನದ್ದಕ್ಕೆ ಹೆಚ್ಚು ಬೇಡಿಕೆಯಿದೆ. ಇದು ಎಲ್ಲಾ ಬಗೆಯ ಉಡುಪುಗಳಿಗೂ ಮ್ಯಾಚ್‌ ಆಗುತ್ತವೆ. ಇದು ಒಂಥರ ಯೂನಿಕ್‌ ಮ್ಯಾಚಿಂಗ್‌ ಆಕ್ಸೆಸರೀಸ್‌ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರೀಟಾ. ಅವರ ಪ್ರಕಾರ, ಬ್ಲಾಕ್‌ ವರ್ಣಗಳ ಟ್ಯಾಟೂ ಚೋಕರ್ಸ್ ಯಾವುದೇ ವೆಸ್ಟರ್ನ್ ಕಾನ್ಸೆಪ್ಟ್‌ನ ಉಡುಪುಗಳಿಗಾದರೂ ಧರಿಸಬಹುದು. ಇದರ ತೆಳುವಾದ ಡಿಸೈನ್ಸ್‌ ಸಿಂಪಲ್‌ ಆಗಿ ಬಿಂಬಿಸುತ್ತವೆ.

5 Tips for Tattoo Chokers Lovers

ಟ್ಯಾಟೂ ಚೋಕರ್ಸ್ ಪ್ರಿಯರಿಗೆ 5 ಟಿಪ್ಸ್

  • ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತವೆ.
  • ಸ್ಟ್ರೀಟ್‌ ಶಾಪಿಂಗ್‌ನಲ್ಲೆ ಖರೀದಿಸಬಹುದು.
  • ಸ್ಪ್ರಿಂಗ್‌ನಂತಹ ಚೊಕರ್ಸ್ ಯಾರೂ ಬೇಕಾದರೂ ಧರಿಸಬಹುದು.
  • ಬಾಳಿಕೆ ಹೆಚ್ಚು ಬರುತ್ತವೆ.
  • ಕಲರ್‌ನವು ಇದೀಗ ದೊರೆಯುತ್ತಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star winter Fashion: ಸೀಸನ್‌ಗೆ ತಕ್ಕಂತೆ ಬದಲಾಯ್ತು ನಟಿ ಶಾನ್ವಿ ಶ್ರೀವಾತ್ಸವ್ ವಿಂಟರ್‌ ಫ್ಯಾಷನ್‌

Continue Reading
Advertisement
Maratha Mahamela cannot be held Belagavi district administration denies permission for MES
ಕರ್ನಾಟಕ12 mins ago

Assembly Session: ಮರಾಠ ಮಹಾಮೇಳಾವ್‌ ನಡೆಸುವಂತಿಲ್ಲ; ಎಂಇಎಸ್‌ಗೆ ಟಕ್ಕರ್‌ ಕೊಟ್ಟ ಜಿಲ್ಲಾಡಳಿತ

Tulu Language
ಕರ್ನಾಟಕ14 mins ago

Tulu Language : ತುಳುಗೆ ಸಿಗಲಿದೆಯೇ ಭಾಷಾ ಪ್ರಾತನಿಧ್ಯ? ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

Rajastan Elections: 10 reasons for BJP Win
ದೇಶ28 mins ago

Rajastan Elections 2023 : ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ; ದಿಗ್ವಿಜಯಕ್ಕೆ 10 ಕಾರಣ

raman singh bhupesh baghel
ದೇಶ29 mins ago

Election Result 2023: ಛತ್ತೀಸ್‌ಗಢದಲ್ಲಿ ಸುಳ್ಳಾದ ಎಕ್ಸಿಟ್‌ ಪೋಲ್‌, ಗೆಲುವಿನತ್ತ ಬಿಜೆಪಿ ದಾಪುಗಾಲು

Ration card not cancelled and Vidhanasoudha
ಕರ್ನಾಟಕ41 mins ago

Ration Card : ಆರು ತಿಂಗಳಿಂದ ರೇಷನ್‌ ಪಡೆದಿಲ್ಲವೇ? ನಿಮ್ಮ ಕಾರ್ಡ್‌ ರದ್ದಾಗುವ ಭಯ ಬೇಡ! ಆದರೆ..?

Sachin Tendulkar says he is super impressed by Vicky Kaushal
ಕ್ರಿಕೆಟ್49 mins ago

Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

Crime Sense Murder Case
ಕರ್ನಾಟಕ1 hour ago

Murder Case : ವ್ಯಕ್ತಿಯ ತಲೆ ಸೀಳಿ ಮೋರಿಗೆ ಶವ ಎಸೆದ ಹಂತಕರು!

election five states
ದೇಶ1 hour ago

Election Results 2023: ಲೋಕಸಭೆ 65 ಸ್ಥಾನಗಳ ಮೇಲೆ ಇದೀಗ ಬಿಜೆಪಿ ಹಿಡಿತ! ಮೋದಿ ಹಾದಿ ಸುಲಭ!

Police call off protest FIR against lawyer who slapped police
ಕರ್ನಾಟಕ2 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Shivraj Singh Chouhan
ದೇಶ2 hours ago

Ladli Behna: ಚೌಹಾಣ್‌ ‘ಗ್ಯಾರಂಟಿ’ಗೆ ಜೈ ಎಂದ ಮಧ್ಯಪ್ರದೇಶ ಜನ;‌ ಏನಿದು ಲಾಡ್ಲಿ ಬೆಹ್ನಾ?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ2 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ8 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ21 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌