Vastu Tips: ಸಂಪತ್ತು, ಆರೋಗ್ಯ ವೃದ್ಧಿಗೆ ಇಲ್ಲಿದೆ ಸರಳ ಮಾರ್ಗ Vistara News

ಆರೋಗ್ಯ

Vastu Tips: ಸಂಪತ್ತು, ಆರೋಗ್ಯ ವೃದ್ಧಿಗೆ ಇಲ್ಲಿದೆ ಸರಳ ಮಾರ್ಗ

Vastu Tips: ಸಂಪತ್ತು ಮತ್ತು ಆರೋಗ್ಯ ಜತೆಗೆ ವಾಸ್ತು ಶಾಸ್ತ್ರವು ಸಂಬಂಧ ಹೊಂದಿದೆ. ಉತ್ತಮ ಜೀವನಕ್ಕಾಗಿ ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ ಎಂದು ಸಲಹೆ ನೀಡುತ್ತಾರೆ ತಜ್ಞರು.

VISTARANEWS.COM


on

vastu home
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಯಾವುದೇ ಕಾರಣವಿಲ್ಲದೆ ಬೆಳಗ್ಗೆ ಆಲಸ್ಯ ಮತ್ತು ಖಿನ್ನತೆಯನ್ನು ಅನುಭವಿಸುತ್ತಿದ್ದೀರಾ? ಅಥವಾ ಹೊಸ ಮನೆಗೆ ಸ್ಥಳಾಂತರಗೊಂಡಾಗ ಇದ್ದಕ್ಕಿದ್ದಂತೆ ಹಣಕಾಸಿನ ಮೇಲೆ ಹೊಡೆತ ಬಿದ್ದ ಅನುಭವ ಆಗಿದೆಯಾ? ಹೌದು ಎಂದಾದರೆ ಇದು ಸ್ಥಳದ ವಾಸ್ತು ಕಾರಣದಿಂದ ಹೀಗೆ ಸಂಭವಿಸುತ್ತಿರಬಹುದು ಎಂದು ತಜ್ಞರು ಹೇಳುತ್ತಾರೆ. ಸುತ್ತಮುತ್ತಲಿರುವ ಶಕ್ತಿಗಳು ನಿಮ್ಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯ ಮೇಲೆ ನಿರಂತರವಾಗಿ ಪರಿಣಾಮ ಬೀರುತ್ತವೆ. ಆದರೆ ಈ ಬಗ್ಗೆ ಚಿಂತೆ ಬೇಡ. ಇಂದಿನ ವಾಸ್ತು ಟಿಪ್ಸ್‌ (Vastu Tips) ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿ ನೀಡಲಿದೆ.

ಕುಬೇರ ಯಂತ್ರ

ಭಾರತದಲ್ಲಿ ಕುಬೇರನನ್ನು ಸಂಪತ್ತು ಮತ್ತು ಸಮೃದ್ಧಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಕುಬೇರ ಚಿನ್ನ ಮತ್ತು ಶ್ರೀಮಂತಿಕೆಯ ಸಂಕೇತವೂ ಹೌದು. ಹೀಗಾಗಿ ಕುಬೇರ ಯಂತ್ರವನ್ನು ಮನೆಯಲ್ಲಿ ಇಡುವ ಮೂಲಕ ಸಮೃದ್ಧಿ ಹೊಂದಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ. ಈಶಾನ್ಯ ಭಾಗವನ್ನು ಕುಬೇರ ಮೂಲೆ ಎಂದು ಕರೆಯಲಾಗುತ್ತದೆ. ಆದ್ದರಿಂದ ಇಲ್ಲಿ ನೀವು ಕುಬೇರ ಯಂತ್ರವನ್ನು ಇರಿಸಬೇಕು. ಮಾತ್ರವಲ್ಲ ನಿಮ್ಮ ಮನೆಯ ಈಶಾನ್ಯ ಭಾಗವು ಶೌಚಾಲಯ, ಶೂ / ಚಪ್ಪಲಿ ಸ್ಟ್ಯಾಂಡ್‌ ಮತ್ತು ಭಾರವಾದ ಪೀಠೋಪಕರಣಗಳಿಂದ ಮುಕ್ತವಾಗಿದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು.

ಶುಚಿತ್ವಕ್ಕೆ ಗಮನ ಹರಿಸಿ

ಅಸ್ತವ್ಯಸ್ತವಾದ, ಶುಚಿತ್ವ ಇಲ್ಲ ಮನೆಯ ಬಹು ವೇಗವಾಗಿ ನಕಾರಾತ್ಮಕ ಶಕ್ತಿಯನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ಸ್ವಚ್ಛತೆಯ ಕೊರತೆ ನಿಮ್ಮ ಊಹೆಗೂ ನಿಲುಕದ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಮಾತ್ರವಲ್ಲ ಇದು ಆರೋಗ್ಯ ಮತ್ತು ಸಂಪತ್ತನ್ನು ಭಾದಿಸುತ್ತದೆ. ಹೀಗಾಗಿ ಯಾವತ್ತೂ ಮನೆಯ ಸ್ವಚ್ಛತೆಗೆ ಗಮನ ಕೊಡಿ. ಧನಾತ್ಮಕ ಶಕ್ತಿಯ ಸಂಚಾರಕ್ಕಾಗಿ ಬಾಗಿಲು, ಕಿಟಕಿಗಳನ್ನೂ ಶುಚಿಯಾಗಿಡಿ. ಬಳಸದೇ ಇರುವ ವಸ್ತುಗಳನ್ನು ಅಡ್ಡಾದಿಡ್ಡಿಯಾಗಿ ಎಲ್ಲೆಂದರಲ್ಲಿ ಎಸೆಯಬೇಡಿ.

ಮುಖ್ಯದ್ವಾರ ಹೀಗಿರಲಿ

ಮುಖ್ಯದ್ವಾರದ ಮೂಲಕವೇ ಧನಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುತ್ತದೆ. ಹೀಗಾಗಿ ನೀವು ಪ್ರವೇಶ ದ್ವಾರದ ವಿಚಾರದಲ್ಲಿ ಬಹಳ ಮುತುವರ್ಜಿ ವಹಿಸಬೇಕಾಗುತ್ತದೆ. ಈಶಾನ್ಯ ದಿಕ್ಕಿನಲ್ಲಿ ಮುಖ್ಯದ್ವಾರ ಇದ್ದರೆ ಉತ್ತಮ. ಸಂಪತ್ತು ಮತ್ತು ಆರೋಗ್ಯ ವೃದ್ಧಿಗಾಗಿ ಮುಂಭಾಗದ ಬಾಗಿಲು ಯಾವುದೇ ಬಿರುಕು ಅಥವಾ ವಿರೂಪಗಳಿಲ್ಲದೆ ಗಟ್ಟಿಮುಟ್ಟಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರವೇಶ ದ್ವಾರವನ್ನು ನಾಮಫಲಕ, ಸಸ್ಯ, ಗಂಟೆ ಮತ್ತು ಧಾರ್ಮಿಕ ಚಿಹ್ನೆಗಳಿಂದ ಅಲಂಕರಿಸಬಹುದು. ಆದರೆ ಕನ್ನಡಿಗಳನ್ನು ಇರಿಸಬೇಡಿ.

ಬಾತ್‌ರೂಮ್‌ ಹೇಗಿದ್ದರೆ ಚೆನ್ನ?

ಬಾತ್‌ರೂಮ್‌ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ. ಇದು ಸಂಪತ್ತಿನ ಮೇಲೆ ಮಾತ್ರವಲ್ಲ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ ಬಾತ್‌ರೂಮ್‌ ಮನೆಯ ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿರಬೇಕು. ಪ್ರವೇಶ ದ್ವಾರ ಅಥವಾ ಮನೆಯ ಮಧ್ಯದಲ್ಲಿ ಎಂದಿಗೂ ಬಾತ್‌ರೂಮ್‌ ನಿರ್ಮಿಸಬೇಡಿ. ಯಾಕೆಂದರೆ ಅದು ಪ್ರವೇಶ ದ್ವಾರದಿಂದ ಕೇಂದ್ರದ ಕಡೆಗೆ ಹರಿಯುವ ದೈವಿಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಅದೇ ರೀತಿ ಬಾತ್‌ರೂಮ್‌ ಮೂಲೆಗಳನ್ನು ತಪ್ಪಿಸಿ. ಸ್ಥಳವನ್ನು ಶುದ್ಧೀಕರಿಸಲು ನೀವು ಕೆಲವು ಸಸ್ಯಗಳನ್ನು ಇರಿಸಬಹುದು.

ನೀರಿನ ಮೂಲಗಳು

ಹರಿಯುವ ನೀರು ನಿಮ್ಮ ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಹೊತ್ತು ತರುತ್ತದೆ. ಯಾವುದೇ ಕಾರಣಕ್ಕೂ ಮನೆಯ ಈಶಾನ್ಯ ಅಥವಾ ಆಗ್ನೇಯ ಮೂಲೆಯಲ್ಲಿ ಈಜುಕೊಳಗಳು ಅಥವಾ ಕಾರಂಜಿಗಳಂತಹ ಯಾವುದೇ ಜಲಮೂಲಗಳನ್ನು ಇಡಬೇಡಿ. ಇದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯೊಳಗೆ ಅಕ್ವೇರಿಯಂ ಇರಿಸಬಹುದು. ಆದಾಗ್ಯೂ ಸೋರಿಕೆಯು ಸಂಪತ್ತಿನ ನಷ್ಟವನ್ನು ಸೂಚಿಸುವುದರಿಂದ ಎಲ್ಲಿಯೂ ನೀರಿನ ಸೋರಿಕೆ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ ಆರೋಗ್ಯ ಮತ್ತು ಸಂಪತ್ತಿಗಾಗಿ ಓವರ್ ಹೆಡ್ ಟ್ಯಾಂಕ್ ಅನ್ನು ಮನೆಯ ಆಗ್ನೇಯ ಅಥವಾ ಈಶಾನ್ಯ ಮೂಲೆಗಳಲ್ಲಿ ಇಡಬೇಡಿ.  ಓವರ್ ಹೆಡ್ ಟ್ಯಾಂಕ್ ಅನ್ನು ಮನೆಯ ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಇರಿಸಬೇಕು. ಒಂದು ವೇಳೆ ನೀವು ಅದನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಿದರೆ ಚಾವಣಿಯಿಂದ ಎರಡು ಅಡಿ ಎತ್ತರದಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: Vastu Tips: ಹೊಸ ಮನೆ ನಿರ್ಮಿಸುವಾಗ ಈ ಅಂಶಗಳನ್ನು ಗಮನಿಸಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

ಚಳಿಗಾಲ ಮುಗಿಯುವಷ್ಟರಲ್ಲಿ ತಲೆಯಲ್ಲಿ ಕೂದಲುಗಳೂ ಮುಗಿದಿರುತ್ತವೆ ಎಂದು ಗೊಣಗುತ್ತಿದ್ದೀರಾ? ಅಗಸೆ ಬೀಜದಿಂದ (Flax Seeds Benefits For Hair) ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Flax Seeds Benefits For Hair
Koo

ಚಳಿಗಾಲದ ಹಲವು ಸಮಸ್ಯೆಗಳಲ್ಲಿ ಕೂದಲಿನದ್ದೂ ಒಂದು. ಸಿಕ್ಕುಸಿಕ್ಕಾಗಿ, ಒಣಗಿ, ಹೊಟ್ಟಾಗಿ, ತುಂಡಾಗಿ, ಉದುರಿ, ಬೋಳಾಗುವುದನ್ನು ತಪ್ಪಿಸುವುದು ಚಳಿಗಾಲದಲ್ಲಿ ಹರಸಾಹಸ. ಸೂಕ್ತ ಪೋಷಣೆಯಿಂದ ಇಂಥ ಸಮಸ್ಯೆಗಳನ್ನು ದೂರಮಾಡುವುದಕ್ಕೆ ಸಾಧ್ಯವಿರುವುದು ಹೌದಾದರೂ, ಯಾವುದನ್ನು ಹೇಗೆ ಪೋಷಿಸಬೇಕು ಎಂಬ ಮಾಹಿತಿ ಬೇಕಲ್ಲ. ಕೂದಲಿಗಾಗಿ ಮಾರುಕಟ್ಟೆಯಲ್ಲಿ ಲ‍ಭ್ಯವಿರುವ ಎಣ್ಣೆ, ಶಾಂಪುಗಳು ಕೆಲಸ ಮಾಡದಿದ್ದಾಗ ಕೆಲವು ಸರಳ ಸೂತ್ರಗಳನ್ನು ಬಳಸಿ ನಾವೇ ಕೂದಲಿನ ಆರೈಕೆ ಮಾಡಿಕೊಳ್ಳಬಹುದು. ಅಂದಹಾಗೆ, ಅಗಸೆ ಬೀಜ ಗೊತ್ತಲ್ಲವೇ? ಇದನ್ನು ಬಳಸಿ ಕೂದಲನ್ನು (Flax Seeds Benefits For Hair) ಆರೋಗ್ಯಪೂರ್ಣವಾಗಿಸಲು ಸಾಧ್ಯವಿದೆ.

Flax Seeds with Pottery

ಒಮೇಗಾ 3 ಕೊಬ್ಬಿನಾಮ್ಲ, ಪ್ರೊಟೀನ್‌, ವಿಟಮಿನ್‌ ಇ ಮತ್ತು ಹಲವು ಬಿ ವಿಟಮಿನ್‌ಗಳು ಹಾಗೂ ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅಗಸೆಬೀಜವನ್ನು ನಿತ್ಯದ ಅಡುಗೆಯಲ್ಲಿ ಉಪಯೋಗಿಸಬಹುದು. ಇದರಿಂದ ಇಡೀ ದೇಹದ ಸ್ವಾಸ್ಥ್ಯ ಹೆಚ್ಚುತ್ತದೆ. ಆದರೆ ಇದನ್ನು ನೇರವಾಗಿ ಕೂದಲಿಗೇ ಉಪಯೋಗಿಸಬಹುದೇ? ಕೂದಲು ಉದುರದಂತೆ ತಡೆಯಲು ಅಗಸೆ ಬೀಜ ಹೇಗೆ ನೆರವಾಗುತ್ತದೆ? ಇದರಿಂದ ಎಣ್ಣೆ ಮಾಡಬಹುದೇ? ಮುಂತಾದ ಹಲವು ಪ್ರಶ್ನೆಗಳು ಮನದಲ್ಲಿ ಬಂದೀತು. ಅವುಗಳಿಗೆಲ್ಲ ಇಲ್ಲಿದೆ ಉತ್ತರ:
ಅಗಸೆ ಬೀಜವನ್ನು ಎಣ್ಣೆ ಮಾಡಿ ಕೂದಲಿಗೆ ಉಪಯೋಗಿಸಬಹುದು. ಇದನ್ನು ರುಬ್ಬಿ ಜೆಲ್‌ನಂತೆ ಮಾಡಿ ಹೇರ್‌ಪ್ಯಾಕ್‌ಗೆ ಬಳಸಬಹುದು. ಪುಡಿ ಮಾಡಿ, ಮೊಸರಿನಲ್ಲಿ ಕಲೆಸಿ ಕೂದಲಿಗೆ ಹಚ್ಚಬಹುದು. ಇದು ಎಣ್ಣೆ ಬೀಜವೇ ಆದ್ದರಿಂದ ಅಗಸೆ ಎಣ್ಣೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದರ ಜೆಲ್‌ಗಳೂ ಲಭ್ಯವಿವೆ. ಸ್ವಲ್ಪ ಸಮಯ ಹೊಂದಿಸಿಕೊಂಡರೆ, ನಾವೇ ಮಾಡಿಕೊಳ್ಳುವುದು ಸಹ ಕಷ್ಟವಲ್ಲ. ಕೂದಲಿಗೆ ಅಗಸೆ ಬೀಜವನ್ನು ಉಪಯೋಗಿಸುವುದರಿಂದ ಆಗುವ ಪ್ರಯೋಜನಗಳೇನು ಎಂಬ ಮಾಹಿತಿಯಿದು.

Woman Is Massaging the Scalp. Isolated on a White Background.

ತಲೆಯ ಚರ್ಮಕ್ಕೆ ಲಾಭ

ತಲೆಯ ಚರ್ಮದಲ್ಲಿನ ಕಿರಿಕಿರಿಯನ್ನು ಕಡಿಮೆ ಮಾಡುವ ಸಾಧ್ಯತೆ ಅಗಸೆಬೀಜಕ್ಕಿದೆ. ಕೂದಲ ಬುಡದಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಿ, ಬುಡಕ್ಕೆ ಪೋಷಣೆ ಒದಗಿಸುತ್ತದೆ. ತಲೆಯ ಚರ್ಮದಲ್ಲಿರುವ ತೈಲ ಗ್ರಂಥಿಗಳು ಸಮರ್ಪಕವಾಗಿ ಕೆಲಸ ಮಾಡುವಂತೆ ಪ್ರಚೋದಿಸಿ, ಅತಿಯಾಗಿ ಎಣ್ಣೆ ಜಿಡ್ಡಾಗದಂತೆ ತಡೆಯುತ್ತವೆ.

ಯಾವ ರೀತಿಯ ಕೂದಲು?

ಎಲ್ಲಾ ರೀತಿಯ ಕೂದಲುಗಳಿಗೂ ಅಗಸೆ ಬೀಜ ಉಪಯುಕ್ತ. ಒಣಗಿದ ಶುಷ್ಕ ಕೂದಲು, ಎಣ್ಣೆಜಿಡ್ಡಿನ ಕೂದಲು, ನೇರ ವೇಣಿ, ಸುರುಳಿ ಕೇಶಗಳು- ಹೀಗೆ ಎಲ್ಲ ರೀತಿಯ ಕೂದಲುಗಳಿಗೂ ಇದು ಉಪಯುಕ್ತ. ಕೂದಲನ್ನು ನಯವಾಗಿಸಿ, ಹೊಳಪು ನೀಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತದೆ ಅಗಸೆ ಬೀಜ.

ಕೂದಲನ್ನು ಬಲಗೊಳಿಸುತ್ತದೆ

ಕೂದಲು ಬಲಹೀನವಾಗಿ ತುಂಡಾಗುವುದನ್ನು ತಪ್ಪಿಸುವಂಥ ಉತ್ತಮ ಕೊಬ್ಬು ಮತ್ತು ವಿಟಮಿನ್‌ ಇ ಜೀವಸತ್ವ ಅಗಸೆಯಲ್ಲಿದೆ. ಕೂದಲ ಬುಡದಲ್ಲಿರುವ ಉರಿಯೂತ ಕಡಿಮೆಯಾಗುತ್ತಿದ್ದಂತೆ, ಸತ್ವಗಳನ್ನು ಹೀರಿಕೊಳ್ಳಲು ಕೂದಲಿಗೆ ಸಾಧ್ಯವಾಗುತ್ತದೆ. ಇದರಿಂದ ಸಹಜವಾಗಿ ಕೂದಲು ಶಕ್ತಿಯುತವಾಗುತ್ತದೆ. ಇದರಿಂದ ಒರಟಾದ ಕೂದಲುಗಳನ್ನೂ ನಯವಾಗಿಸಿ, ಮೃದುವಾಗಿಸಬಹುದು.

ರಿಪೇರಿ ಕೆಲಸ

ಇದರಲ್ಲಿರುವ ಜೀವಸತ್ವಗಳಲ್ಲಿ ಮುಖ್ಯವಾದವು ವಿಟಮಿನ್‌ ಇ ಮತ್ತು ಬಿ ಜೀವಸತ್ವಗಳು. ಹಲವು ರೀತಿಯ ಬಿ ವಿಟಮಿನ್‌ಗಳು ಅಗಸೆ ಬೀಜದಲ್ಲಿ ಇರುವುದರಿಂದ, ಕೂದಲಿಗೆ ಆಗಿರುವ ಹಾನಿಯನ್ನು ಸರಿ ಪಡಿಸುವ ಸಾಧ್ಯತೆಯನ್ನಿದು ಹೊಂದಿದೆ. ಕೂದಲ ಬೆಳವಣಿಗೆಗೂ ಈ ಜೀವಸತ್ವಗಳು ನೆರವಾಗುತ್ತವೆ. ಇನ್ನು ವಿಟಮಿನ್‌ ಇ ಎಂಬುದು ಪ್ರಬಲ ಉತ್ಕರ್ಷಣ ನಿರೋಧಕವೂ ಹೌದು. ಇವೆಲ್ಲವುಗಳ ಫಲವಾಗಿ, ಕೂದಲ ಹಾನಿ ಕಡಿಮೆಯಾಗಿ, ಕೇಶ ಸಶಕ್ತವಾಗುತ್ತದೆ.

Flax Seeds in a Wooden Spoon

ಹೇಗೆಲ್ಲಾ ಉಪಯೋಗಿಸಬಹುದು?

ಇದೊಂದು ಎಣ್ಣೆ ಬೀಜವಾದ್ದರಿಂದ, ಅಗಸೆಯ ಎಣ್ಣೆ ಲಭ್ಯವಿದೆ. ಇದನ್ನು ಆಹಾರವಾಗಿ ಉಪಯೋಗಿಸಬಹುದು. ಬೀಜಗಳನ್ನಂತೂ ನಾನಾ ರೀತಿಯಲ್ಲಿ ತಿನ್ನುವುದಕ್ಕೆ ಬಳಸಲಾಗುತ್ತದೆ. ಹಾಗಿಲ್ಲದಿದ್ದರೆ, ಕೊಬ್ಬರಿ ಎಣ್ಣೆಯಂಥ ಬೇರೆ ತೈಲದ ಜೊತೆ ಸೇರಿಸಿಕೊಂಡು, ಈ ಎಣ್ಣೆಯನ್ನು ತಲೆಗೆ ಮಸಾಜ್‌ ಮಾಡಬಹುದು. ಇದರ ಜೆಲ್‌ ಲಭ್ಯವಿದ್ದು, ಇದನ್ನು ತಲೆಗೆ ಹಚ್ಚಿದ ಮೇಲೆ ಒಂದೆರಡು ದಿನಗಳ ಕಾಲ ಹಾಗೆಯೇ ಬಿಡಬಹುದು, ಥೇಟ್‌ ಎಣ್ಣೆಯಂತೆ. ಬೇಕಾದಾಗ ತಲೆಸ್ನಾನ ಮಾಡಿದರಾಯಿತು.

ಇದನ್ನೂ ಓದಿ: Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

Continue Reading

ಆರೋಗ್ಯ

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ; ಉ.ಕ ಜಿಲ್ಲಾ ಶಾಸಕರಲ್ಲೇ ಒಡಕು! ತಮ್ಮ ತಾಲೂಕಿಗೇ ಬೇಕೆಂದು ಸದನದಲ್ಲಿ ಕಿತ್ತಾಟ

Super Speciality Hospital : ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಶಾಸಕರಲ್ಲೇ ಒಡಕು ಮೂಡಿದೆ. ನನ್ನ ತಾಲೂಕಿಗೆ ಕೊಡಿ, ನನ್ನ ತಾಲೂಕಿಗೆ ಕೊಡಿ ಎಂದು ವಿಧಾನ ಮಂಡಲ ಅಧಿವೇಶನದಲ್ಲಿ ಬೇಡಿಕೆ ಇಟ್ಟಿದ್ದಾರೆ. ಕಾರವಾರ ಶಾಸಕ ಸತೀಶ್ ಸೈಲ್‌, ಕುಮಟಾ ಶಾಸಕ ದಿನಕರ್ ಶೆಟ್ಟಿ, ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ತಮ್ಮ ತಮ್ಮ ತಾಲೂಕಿಗೆ ಬೇಕು ಎಂದು ಕೇಳಿದ್ದಾರೆ.

VISTARANEWS.COM


on

super speciality hospital in Uttara Kannada District
Koo

ಬೆಳಗಾವಿ: ಉತ್ತರ ಕನ್ನಡ ಜಿಲ್ಲೆಯ (Uttara Kannada District) ದಶಕಗಳ ಬೇಡಿಕೆಯಾಗಿದ್ದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ಕನಸು ಸದ್ಯಕ್ಕೆ ಈಡೇರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೊನೇ ಬಜೆಟ್‌ನಲ್ಲಿ ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದಕ್ಕಾಗಿ ಕುಮಟಾದಲ್ಲಿ ಜಾಗವನ್ನೂ ಗುರುತಿಸಿ ಓಕೆ ಮಾಡಲಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕಳೆದ ಬಜೆಟ್‌ನಲ್ಲಿ (Karnataka budget 2023) ಅನುದಾನ ನೀಡಿರಲಿಲ್ಲ. ಈಗ ಜಿಲ್ಲೆಯ ಶಾಸಕರಲ್ಲೇ ಒಡಕು ಮೂಡಿದೆ. ನನ್ನ ತಾಲೂಕಿಗೆ ಕೊಡಿ, ನನ್ನ ತಾಲೂಕಿಗೆ ಕೊಡಿ ಎಂದು ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಬೇಡಿಕೆ ಇಟ್ಟಿದ್ದಾರೆ. ಕಾರವಾರ ಶಾಸಕ ಸತೀಶ್ ಸೈಲ್‌, ಕುಮಟಾ ಶಾಸಕ ದಿನಕರ್ ಶೆಟ್ಟಿ, ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ತಮ್ಮ ತಮ್ಮ ತಾಲೂಕಿಗೆ ಬೇಕು ಎಂದು ಕೇಳಿದ್ದಾರೆ.

ವಿಧಾನ ಪರಿಷತ್‌ ಕಲಾಪ ವೇಳೆ ಕಾರವಾರ ಶಾಸಕ ಸತೀಶ್‌ ಸೈಲ್‌ ಮಾತನಾಡಿ, ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೇ ಬೇಕು. ಹೀಗಾಗಿ ಸದ್ಯಕ್ಕೆ ಕಾರವಾರದಲ್ಲಿ ಮಾಡಿಕೊಡಿ. ನಂತರ ಉತ್ತರ ಕನ್ನಡದ ಬೇರೆ ಪ್ರದೇಶದಲ್ಲಿ ನಿರ್ಮಾಣ ಮಾಡಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Road Accident : ಆಯತಪ್ಪಿ ಬಿದ್ದ ಸವಾರನ ಮೇಲೆ ಹರಿದ ಲಾರಿ! ತುಂಡಾದ ದೇಹ

ಇದರಿಂದ ಅಸಮಾಧಾನಗೊಂಡ ಕುಮಟಾ ಶಾಸಕ ದಿನಕರ್ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಬೇಕು. ಈಗಾಗಲೇ ಈ ಬಗ್ಗೆ ಒಮ್ಮೆ ನಿರ್ಣಯ ಕೂಡಾ ಆಗಿದೆ. ಅಲ್ಲದೆ, ಸ್ಥಳವನ್ನೂ ಗುರುತಿಸಲಾಗಿದ್ದು, ಎಲ್ಲರೂ ಆಗ ಒಪ್ಪಿಗೆ ನೀಡಿದ್ದರು. ಹೀಗಾಗಿ ಕುಮಟಾದಲ್ಲಿಯೇ ಆಗಬೇಕು. ಇದು ಜಿಲ್ಲೆಯ ಹೃದಯ ಸ್ಥಳ ಆಗಿರುವುದರಿಂದ ಜಿಲ್ಲೆಯ ಎಲ್ಲರಿಗೂ ಇಲ್ಲಿಗೆ ಬರಲು ಅನುಕೂಲ ಆಗಲಿದೆ ಎಂದು ಆಗ್ರಹಿಸಿದರು.

ಆಗ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಮಾತನಾಡಿ, ಶಿರಸಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿ ಎಂದು ಆಗ್ರಹಿಸಿದ್ದಾರೆ. ಅದಕ್ಕೆ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರು, ಘಟ್ಟದ ಮೇಲೊಂದು, ಘಟ್ಟದ ಕೆಳಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಒತ್ತಾಯ ಮಾಡಿದರು. ಹೀಗಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಡಿಮ್ಯಾಂಡ್‌ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಶಾಸಕರಿಂದಲೂ ಕೇಳಿಬಂತು.

ಇದಕ್ಕೆ ಸಚಿವ ಶರಣ ಪ್ರಕಾಶ್ ಪಾಟೀಲ್ ಉತ್ತರ ನೀಡಿ, ಬಹಳ ದಿನಗಳಿಂದ ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಇದೆ. ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಮಾಡಬೇಕು ಎಂಬ ಪ್ರಯತ್ನ ನಡೆದಿದೆ. ಆದರೆ, ಕಾರವಾರದಲ್ಲಿ ಅಗತ್ಯ ವೈದ್ಯ ಹುದ್ದೆಗಳಿಗೆ ಎರಡು ಸಲ ಕಾಲ್ ಫಾರ್ ಮಾಡಿದರೂ ಯಾರೂ ಅರ್ಜಿ ಹಾಕಿಲ್ಲ. ಮತ್ತೊಮ್ಮೆ ವೈದ್ಯ ಹುದ್ದೆಗಳಿಗೆ ಆಹ್ವಾನ ನೀಡಲಾಗುತ್ತದೆ. ಈ ಕೆಲಸವಾದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸುಲಭವಾಗಲಿದೆ ಎಂದು ಹೇಳಿದರು.

ಉ.ಕ. ಜನರಿಂದ ನಡೆದಿದ್ದ ಆಂದೋಲನ

ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಬಹಳ ದೊಡ್ಡದಿರುವ ಕಾರಣ, ಅಪಘಾತವಾದರೆ ಇಲ್ಲವೇ ತುರ್ತು ಚಿಕಿತ್ಸೆ ಬೇಕಿದ್ದರೆ ಪಕ್ಕದ ಮಂಗಳೂರು, ಗೋವಾ ಇಲ್ಲವೇ ಹುಬ್ಬಳ್ಳಿಯಂತಹ ಕಡೆಗಳಿಗೆ ಹೋಗಬೇಕು. ಇದರಿಂದ ಸಾಕಷ್ಟು ಜೀವ ಹಾನಿಯಾಗುತ್ತಲಿದೆ. ರಾಜ್ಯಕ್ಕೆ ವಿದ್ಯುತ್‌ ಕೊಟ್ಟ ಜಿಲ್ಲೆಯ ಜನರಿಗೆ ಕನಿಷ್ಠ ಮೂಲ ಸೌಕರ್ಯವೂ ಇಲ್ಲದಂತೆ ಆಗಿದ್ದು, ಕೊನೇ ಪಕ್ಷ ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನಾದರೂ ನೀಡಬೇಕು ಎಂದು ಈಚೆಗೆ ಭಾರಿ ಹೋರಾಟ ನಡೆದಿತ್ತು.

ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಮೇಲೆ ಸಾಕಷ್ಟು ಒತ್ತಡವನ್ನು ಹೇರಲಾಗಿತ್ತು. ಹೀಗಾಗಿ ಆಗಿನ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು ಉತ್ತರ ಕನ್ನಡ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಭೆ ನಡೆಸಿದ್ದಲ್ಲದೆ, ಜಿಲ್ಲೆಗೆ ಭೇಟಿ ನೀಡಿ ಸ್ಥಳಪರಿಶೀಲನೆಯನ್ನೂ ನಡೆಸಿದ್ದರು. ಕೊನೆಗೆ ಸರ್ಕಾರ ಸಹ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸುವಾಗ ಇದರ ಪ್ರಸ್ತಾಪವೇ ಇರಲಿಲ್ಲ. ಇದು ಉತ್ತರ ಕನ್ನಡ ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿತ್ತು.

ಬಗೆಹರಿದಿದ್ದ ಜಾಗದ ಗೊಂದಲ

ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ವೆ ನಂಬರ್ 440ರಲ್ಲಿ 15.35 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಹಿಂದೆ ಈ ಜಾಗವನ್ನು ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣಕ್ಕಾಗಿ ಮೀಸಲಿಡಲಾಗಿತ್ತು. ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗವಾಗಿರುವ ಹಿನ್ನೆಲೆಯಲ್ಲಿ ಸದ್ಯ ಈ ಜಾಗವನ್ನು ಆಸ್ಪತ್ರೆಗಾಗಿ ನೀಡುವಂತೆ ಸೂಚನೆ ನೀಡಲಾಗಿತ್ತು. ವಸತಿ ಶಾಲೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಪರ್ಯಾಯ ಜಾಗವನ್ನು ಒದಗಿಸುವ ಭರವಸೆಯನ್ನು ನೀಡಲಾಗಿತ್ತು.

ಇದನ್ನೂ ಓದಿ: NPS Cancellation: ರಾಜ್ಯದಲ್ಲಿ ಹಳೇ ಪಿಂಚಣಿ ಶೀಘ್ರ ಜಾರಿ? 10 ದಿನದಲ್ಲಿ ಸಮಿತಿ ಪುನಾರಚನೆ: ಕೃಷ್ಣ ಬೈರೇಗೌಡ

ವಸತಿ ಶಾಲೆಯ ಜಾಗ ಆಸ್ಪತ್ರೆಗೆ

ಉತ್ತರ ಕನ್ನಡ ಜಿಲ್ಲಾಡಳಿತವು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಏಕಲವ್ಯ ವಸತಿ ಶಾಲೆಗೆ ಮೀಸಲಿರಿಸಲಾಗಿದ್ದ ಜಾಗವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ನೀಡುವಂತೆ ಇಲಾಖೆಗೆ ಕಳೆದ ವರ್ಷ ಪತ್ರ ಬರೆಯಲಾಗಿತ್ತು. ಆಗಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಉತ್ತರ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಅವರು ಆ ಜಾಗವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಅನುಮತಿ ನೀಡಿದ್ದರು. ಅದರಂತೆ ಏಕಲವ್ಯ ವಸತಿ ಶಾಲೆಗಾಗಿ ನಿಗದಿಪಡಿಸಿ ಇರಿಸಲಾಗಿದ್ದ 17 ಎಕರೆ 14 ಗುಂಟೆ ಜಮೀನಿನಲ್ಲಿ, 15 ಎಕರೆ 35 ಗುಂಟೆಯಷ್ಟು ಪ್ರದೇಶವನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು. ಜತೆಗೆ ಏಕಲವ್ಯ ವಸತಿ ಶಾಲೆಗೆ ಪರ್ಯಾಯ ಜಾಗ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಷರತ್ತು ವಿಧಿಸಿ, ಆ ಪ್ರದೇಶವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಕಾಯ್ದಿರಿಸಲು ಸರ್ಕಾರದ ಆಪ್ತ ಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದರು.

Continue Reading

ಆರೋಗ್ಯ

Heart Attack : ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯೆಯೇ ಹೃದಯಾಘಾತದಿಂದ ಮೃತ್ಯು

Heart Attack : ಉಡುಪಿಯ ವೈದ್ಯರೊಬ್ಬರು ರೋಗಿಯ ಪರೀಕ್ಷೆ ನಡೆಸುತ್ತಿದ್ದಾಗಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಮಹಿಳಾ ವೈದ್ಯೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

VISTARANEWS.COM


on

Heart attack doctor death in Udupi
Koo

ಉಡುಪಿ : ದೇಶಾದ್ಯಂತ ಹೃದಯಾಘಾತ (Heart Attack) ಒಂದೇ ಸಮನೆ ಹೆಚ್ಚುತ್ತಿದ್ದು, ಇದೀಗ ವೈದ್ಯೆಯೊಬ್ಬರು ಚಿಕಿತ್ಸೆ ನೀಡುತ್ತಿರುವ ವೇಳೆಯೇ ಹೃದಯದ ನೋವಿನಿಂದ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ (Udupi District Hospital) ಈ ದುರಂತ ಘಟನೆ ನಡೆದಿದೆ. ಡಾ. ಶಶಿಕಲಾ (Dr Shashikala) ಚಿಕಿತ್ಸೆ ನೀಡುತ್ತಿದ್ದ ವೇಳೆ ಮೃತಪಟ್ಟವರು.

ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಸಿನ್ ವಿಭಾಗದ ವೈದ್ಯರಾಗಿರುವ ಡಾ. ಶಶಿಕಲಾ ಅವರು ರೋಗಿಗೆ ಚಿಕಿತ್ಸೆ ನೀಡುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಅವರಿಗೆ 60 ವರ್ಷ ಆಗಿತ್ತು.

ಶಶಿಕಲಾ ಅವರು 2022ರ ಫೆಬ್ರವರಿಯಲ್ಲಿ ವಯೋ ನಿವೃತ್ತಿ ಹೊಂದಿದ್ದರು. ಆದರೆ, ವೈದ್ಯರಿಲ್ಲದ ಹಿನ್ನೆಲೆಯಲ್ಲಿ ಅವರನ್ನು ಹೊರಗುತ್ತಿಗೆಯಲ್ಲಿ ಮುಂದುವರಿಸಲಾಗಿತ್ತು. ಅವರು ಹೊರರೋಗಿಗಳ ವಿಭಾಗದಲ್ಲಿ ಪ್ರಮುಖವಾಗಿ ರೋಗಿಗಳನ್ನು ನೋಡುತ್ತಿದ್ದರು.

ಗುರುವಾರ ಅವರು ಜಿಲ್ಲಾಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಸೇವೆ ನೀಡುತ್ತಿದ್ದ ವೇಳೆ ಒಮ್ಮೆಗೇ ಕುಸಿದು ಬಿದ್ದರು. ರೋಗಿಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲೇ ಕುಸಿದು ಬಿದ್ದಿದ್ದ ಶಶಿಕಲಾ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದರು. ಆದರೆ, ಶಶಿಕಲಾ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ಕಳೆದುಕೊಂಡರು. ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಾಕ್ಟರ್‌ಗೇ ಈ ರೀತಿಯಾ ಹೃದಯಾಘಾತ ಸಂಭವಿಸಿದ್ದು, ವೈದ್ಯಕೀಯ ವಲಯದಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: Bomb Threat: ಗಂಡನ ಮೇಲಿನ ಸಿಟ್ಟಿಗೆ ಫೇಕ್‌ ಬಾಂಬ್‌ ಇಟ್ಟಳು! ಇದರ ಹಿಂದಿತ್ತು Love ಕಹಾನಿ

ಸಿಂಧನೂರಿನಲ್ಲಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು

ರಾಯಚೂರು: ಟಾಟಾ ಎಸಿ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು ಒಬ್ಬರು ಗಾಯಗೊಂಡ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾ.ಪಗಡದಿನ್ನಿ ಕ್ಯಾಂಪ್ ಬಳಿ ನಡೆದಿದೆ.

ಇಸ್ಮಾಯಿಲ್(25),ಚನ್ನಬಸವ (26),ಅಂಬರೀಶ್ (20), ರವಿ( 21) ಮೃತರು. ಗಂಭೀರವಾಗಿ ಗಾಯಗೊಂಡವನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮೃತದೇಹಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಆರೋಗ್ಯ

Meftal: ನೋವು ನಿವಾರಕ ಮೆಫ್ಟಾಲ್ ಮಾತ್ರೆ ಸೇವನೆಯಿಂದ ಗಂಭೀರ ಪರಿಣಾಮ!

Health news: ಸಾಮಾನ್ಯವಾಗಿ ಬಳಸುವ ನೋವು ನಿವಾರಕ ಮಾತ್ರೆ ಮೆಫ್ಟಾಲ್ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ.

VISTARANEWS.COM


on

tablet
Koo

ಬೆಂಗಳೂರು: ಮೆಫ್ಟಾಲ್ (Meftal) ಬ್ರ್ಯಾಂಡ್‌ ಹೆಸರಿನಲ್ಲಿ ಜನಪ್ರಿಯವಾಗಿ ಮಾರಾಟವಾಗುವ, ಸಾಮಾನ್ಯವಾಗಿ ಬಳಸುವ ನೋವು ನಿವಾರಕ (Painkiller) ಔಷಧ, ಮಾತ್ರೆಯ ಬಳಕೆಯ ಬಗ್ಗೆ ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್ (Indian Pharmacopoeia Commission-IPC) ಎಚ್ಚರಿಕೆ ನೀಡಿದೆ. ಇದರಲ್ಲಿ ಬಳಸಾಗುವ ಮೆಫೆನಾಮಿಕ್ ಆಮ್ಲದಿಂದ ಅಡ್ಡ ಪರಿಣಾಮ (Side effect) ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಮತ್ತು ರೋಗಿಗಳಿಗೆ ಅದು ಮುನ್ನೆಚ್ಚರಿಕೆಯ ಸಂದೇಶ ರವಾನಿಸಿದೆ (Health news).

ಔಷಧೀಯ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಮೇಲ್ವಿಚಾರಣೆ ನಡೆಸುವ ಮತ್ತು ಮಾಹಿತಿಯನ್ನು ಸಂಗ್ರಹಿಸುವ ಫಾರ್ಮಾಕೊವಿಜಿಲೆನ್ಸ್ ಪ್ರೋಗ್ರಾಂ ಆಫ್ ಇಂಡಿಯಾ (PvPI) ತನ್ನ ಪ್ರಾಥಮಿಕ ತನಿಖೆಯಲ್ಲಿ ಮೆಫೆನಾಮಿಕ್ ಆಮ್ಲವು ಇಸಿನೊಫಿಲಿಯಾ ಮತ್ತು ಡ್ರೆಸ್ ಸಿಂಡ್ರೋಮ್ ಎಂದು ಕರೆಯಲ್ಪಡುವ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಕಂಡುಕೊಂಡಿದೆ.

ಈ ಔಷಧವು ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಬಹುದಾದ ಒಟಿಸಿ ಉತ್ಪನ್ನವಲ್ಲವಾದರೂ, ಮುಟ್ಟಿನ ನೋವು, ತಲೆನೋವು ಮತ್ತು ಸ್ನಾಯು ಮತ್ತು ಕೀಲು ನೋವನ್ನು ನಿವಾರಿಸುವಂತಹ ವಿವಿಧ ಕಾರಣಗಳಿಗಾಗಿ ಭಾರತೀಯರು ಇದನ್ನು ವ್ಯಾಪಕವಾಗಿ ಬಳಸುತ್ತಾರೆ. ಅಲ್ಲದೆ ಜ್ವರ ಬಾಧಿತ ಮಕ್ಕಳಿಗೂ ನೀಡಲಾಗುತ್ತದೆ.

ಬ್ಲೂ ಕ್ರಾಸ್ ಲ್ಯಾಬೊರೇಟರೀಸ್‌ನ ಮೆಫ್ಟಾಲ್, ಮ್ಯಾನ್‌ಕೈಂಡ್‌ ಫಾರ್ಮಾದ ಮೆಫ್ಕಿಂಡ್ ಪಿ, ಫಿಜರ್ಸ್‌ನ ಪೊನ್‌ಸ್ಟಾನ್‌, ಸೀರಮ್ ಇನ್‌ಸ್ಟಿಟ್ಯೂಟ್‌ನ ಮೆಫಾನಾರ್ಮ್ ಮತ್ತು ಡಾ. ರೆಡ್ಡೀಸ್‌ನ ಇಬುಕ್ಲಿನ್ ಪಿ ಮೆಫೆನಾಮಿಕ್ ಆಮ್ಲವನ್ನು ಒಳಗೊಂಡಿದೆ.

ಏನಿದು ಡ್ರೆಸ್ ಸಿಂಡ್ರೋಮ್?

ಡ್ರೆಸ್ ಸಿಂಡ್ರೋಮ್ ಎನ್ನುವುದು ಗಂಭೀರ ಅಲರ್ಜಿ. ಇದು ಮಾರಣಾಂತಿಕವಾಗುವ ಸಾಧ್ಯತೆಯೂ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ದೇಶದಲ್ಲಿ ಸುಮಾರು ಶೇ. 10ರಷ್ಟು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ದೇಹವು ಕೆಲವು ಔಷಧಗಳಿಗೆ ಪ್ರತಿಕ್ರಿಯಿಸಿದಾಗ ಈ ಕಾಯಿಲೆ ಕಂಡುಬರುತ್ತದೆ. ಇದು ಮೊದಲು ಚರ್ಮದ ದದ್ದುಗಳಾಗಿ ಕಾಣಿಸಿಕೊಳ್ಳುತ್ತದೆ ಮತ್ತು ಕ್ರಮೇಣ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಔಷಧಗಳ ಬಳಕೆ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. “ಅಂತಹ ಲಕ್ಷಣ ಕಂಡುಬಂದರೆ, ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್‌ಗೆ ವರದಿ ಮಾಡಿʼʼ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Made in India: ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧ ಆವಿಷ್ಕಾರ; 100 ಪಟ್ಟು ಇಳಿಯಲಿದೆ ಚಿಕಿತ್ಸೆ ವೆಚ್ಚ!

ವೈದ್ಯರು ಏನು ಹೇಳುತ್ತಾರೆ?

“ನಾನ್‌ಸ್ಟಿರಾಯಿಡಲ್ ಆ್ಯಂಟಿ-ಇನ್ಫಮೇಟರಿ ಡ್ರಗ್ಸ್ (Nonsteroidal anti-inflammatory drugs-ಎನ್ಎಸ್ಎಐಡಿ) ಸೇವನೆಯಿಂದ ಪ್ರತಿಯೊಬ್ಬರಿಗೂ ಈ ತೀವ್ರ ಅಲರ್ಜಿ ಕಂಡು ಬರುವ ಸಾಧ್ಯತೆ ಇಲ್ಲ. ದೇಹದ ಸ್ಥಿತಿಗೆ ಹೊಂದಿಕೊಂಡು ಇದು ಕೆಲವರಲ್ಲಿ ಮಾತ್ರ ಪರಿಣಾಮ ಬೀರುತ್ತದೆ‌ʼʼ ಎಂದು ಸುಮಾರು 20 ವರ್ಷಗಳಿಂದ ವೃತ್ತಿ ನಿರ್ವಹಿಸುತ್ತಿರುವ ವೈದ್ಯರೊಬ್ಬರು ತಿಳಿಸಿದ್ದಾರೆ. ಗುರುಗ್ರಾಮ್ ಮೂಲದ ಆಸ್ಪತ್ರೆಯ ಇನ್ನೊಬ್ಬರು ವೈದ್ಯರು ಮಾತನಾಡಿ, ʼʼಮೆಫ್ಟಾಲ್‌ ಸೇವನೆಯಿಂದ ಡ್ರೆಸ್‌ ಸಿಂಡ್ರೋಮ್‌ ಕಾಣಿಸಿಕೊಳ್ಳುವುದು ಅಪರೂಪ. ಆದರೂ ಎನ್ಎಸ್ಎಐಡಿಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳು ಡ್ರೆಸ್ ಸಿಂಡ್ರೋಮ್‌ನಂತಹ ಅಪರೂಪದ, ಆದರೆ ತೀವ್ರ ಅಡ್ಡ ಪರಿಣಾಮ ಬೀರುವ ಬಗ್ಗೆ ತಿಳಿದಿರುವುದು ಬಹಳ ಮುಖ್ಯ” ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಯಾವುದೇ ಔಷಧಗಳನ್ನು ಸೇವಿಸುವ ಮುನ್ನ ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು ಮುಖ್ಯ ಎಂದು ಎಚ್ಚರಿಸಲಾಗಿದೆ.

Continue Reading
Advertisement
Vistara News impact, Governmet to scrap 7 d rule of SCSP and TSP act
ಕರ್ನಾಟಕ5 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್5 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್5 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Pro Kabaddi
ಕ್ರೀಡೆ5 hours ago

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Is 500 note with star symbol is fake, What Fact Check says?
Fact Check6 hours ago

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

kavya maran
ಐಪಿಎಲ್ 20236 hours ago

ಸ್ಟಾರ್​​ ಆಟಗಾರನ ಖರೀದಿಗೆ ಸ್ಕೆಚ್​ ಹಾಕಿದ ಸಖತ್ ಕ್ಯೂಟ್ ಓನರ್ ಕಾವ್ಯ ಮಾರನ್

Inauguration of Hulleshwar Jnana vikas Center at Yakshi Village
ಶಿವಮೊಗ್ಗ7 hours ago

Shivamogga News: ಯಕ್ಷಿ ಗ್ರಾಮದಲ್ಲಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

14 Medium and Large Irrigation Projects Completed in Kalyana Karnataka says Minister Ramalinga reddy
ಕರ್ನಾಟಕ7 hours ago

ಕಲ್ಯಾಣ ಕರ್ನಾಟಕ ಭಾಗದಲ್ಲಿ 14 ಮಧ್ಯಮ, ಬೃಹತ್ ನೀರಾವರಿ ಯೋಜನೆಗಳು ಪೂರ್ಣ: ರಾಮಲಿಂಗಾರೆಡ್ಡಿ

More than a hundred people from Kiravatti have joined the Congress party
ಉತ್ತರ ಕನ್ನಡ7 hours ago

Uttara Kannada News: ಕಿರವತ್ತಿ ಭಾಗದ 100ಕ್ಕೂ ಹೆಚ್ಚು ಜನ ಕಾಂಗ್ರೆಸ್‌ಗೆ ಸೇರ್ಪಡೆ

Vistara Top 10 News 7-12
ಕರ್ನಾಟಕ7 hours ago

VISTARA TOP 10 NEWS : ಮೌಲ್ವಿ ಐಸಿಸ್‌ ಸಂಪರ್ಕ ನಿಜವೇ? ಹಳೆಪಿಂಚಣಿ ಮರುಜಾರಿ ಖಚಿತವೇ? ಇತರ ಪ್ರಮುಖ ಸುದ್ದಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ10 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ10 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ16 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ23 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ2 days ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌