Ambani Wedding Fashion: ಇಶಾ ಅಂಬಾನಿಯ ಸೌತ್‌ ಇಂಡಿಯನ್‌ ಲುಕ್‌ಗೆ ಸಾಥ್‌ ನೀಡಿದ ದುಬಾರಿ ಜಡೆ ಬಿಲ್ಲೆ! - Vistara News

ಫ್ಯಾಷನ್

Ambani Wedding Fashion: ಇಶಾ ಅಂಬಾನಿಯ ಸೌತ್‌ ಇಂಡಿಯನ್‌ ಲುಕ್‌ಗೆ ಸಾಥ್‌ ನೀಡಿದ ದುಬಾರಿ ಜಡೆ ಬಿಲ್ಲೆ!

Ambani Wedding Fashion: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮವೊಂದರಲ್ಲಿ ಇಶಾ ಅಂಬಾನಿ ಸೌತ್‌ ಇಂಡಿಯನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೈತಲೆ ತೆಗೆದ ಜಡೆಗೆ ವಜ್ರ-ವೈಢೂರ್ಯ ಸಹಿತವಿರುವ ದುಬಾರಿ ಬಂಗಾರದ ಜಡೆ ಬಿಲ್ಲೆ ಹಾಗೂ ಹೂವು ಧರಿಸಿ, ತಮ್ಮ ನಾರ್ತ್‌ ಇಂಡಿಯನ್‌ ಲೆಹೆಂಗಾ ಜೊತೆ ಮ್ಯಾಚ್‌ ಮಾಡಿದ್ದಾರೆ. ಅವರ ಈ ಲುಕ್‌ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Ambani Wedding Fashion
ಚಿತ್ರಗಳು: ಇಶಾ ಅಂಬಾನಿ ಸೌತ್‌ ಇಂಡಿಯನ್‌ ಲುಕ್‌ಗೆ ಸಾಥ್‌ ನೀಡಿದ ದುಬಾರಿ ಬಂಗಾರದ ಜಡೆ ಬಿಲ್ಲೆ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಂಗಾರದ ದುಬಾರಿ ಜಡೆ ಬಿಲ್ಲೆ (Ambani Wedding Fashion) ಧರಿಸಿದ ಇಶಾ ಅಂಬಾನಿ ಪಕ್ಕಾ ಸೌತ್‌ ಇಂಡಿಯನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ನ ಕಾರ್ಯಕ್ರಮವೊಂದರಲ್ಲಿ ಇಶಾ ಅಂಬಾನಿ, ಬೈತಲೆ ತೆಗೆದು ಜಡೆ ಹೆಣೆದ ಕೂದಲಿಗೆ ಟ್ರೆಡಿಷನಲ್‌ ಆಂಟಿಕ್‌ ಜ್ಯುವೆಲರಿಗೆ ಸೇರುವ ಉದ್ದದ ಬಂಗಾರದ ಜಡೆ ಬಿಲ್ಲೆ ಧರಿಸಿದ್ದಾರೆ. ಅಷ್ಟು ಮಾತ್ರವಲ್ಲ, ದಕ್ಷಿಣ ಭಾರತದ ನಾರಿಯರು ಮಾಡುವ ಹೇರ್‌ಸ್ಟೈಲ್‌ನಂತೆ ಜಡೆಯ ಮೇಲ್ಗಡೆ ಹೂವನ್ನು ಮುಡಿದಿದ್ದಾರೆ.

Ambani Wedding Fashion

ಇಶಾ ಅಂಬಾನಿಯ ಟ್ರೆಡಿಷನಲ್‌ ಲುಕ್‌ ಸ್ಯಾಂಪಲ್ಸ್

“ಅಂಬಾನಿ ಫ್ಯಾಮಿಲಿಯ ಎಲ್ಲಾ ಪ್ರಿ-ವೆಡ್ಡಿಂಗ್‌ ಸಮಾರಂಭಗಳಲ್ಲೂ ಡಿಫರೆಂಟ್‌ ಲುಕ್‌ಗಳಲ್ಲಿ ಕಾಣಿಸಿಕೊಂಡಿರುವ ಇಶಾ ಅಂಬಾನಿ, ಈಗಾಗಲೇ ಸಾಕಷ್ಟು ಬಗೆಯ ಟ್ರೆಡಿಷನಲ್‌ ಲುಕ್‌ಗಳನ್ನು ಟ್ರೈ ಮಾಡಿದ್ದಾರೆ. ತಮ್ಮ ಗುಜರಾತಿ ಸ್ಟೈಲಿಂಗ್‌ಗೆ ಸಾಥ್‌ ನೀಡುವ ಡಿಸೈನರ್‌ವೇರ್‌ಗಳಿಂದಿಡಿದು, ಪಂಜಾಬಿ, ಮಾರ್ವಾಡಿ ಹೀಗೆ ನಾನಾ ಬಗೆಯ ಟ್ರೆಡಿಷನಲ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇಕೆ! ಇಂಡೋ-ವೆಸ್ಟರ್ನ್‌ ಲುಕ್‌ ನೀಡುವ ಸೀರೆಗಳಲ್ಲಂತೂ ತಮ್ಮದೇ ಆದ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳನ್ನೇ ಅನಾವರಣಗೊಳಿಸಿದ್ದಾರೆ. ಸಂಗೀತ್‌ ಕಾರ್ಯಕ್ರಮದಿಂದಿಡಿದು ಅರಿಷಿಣ ಶಾಸ್ತ್ರದಲ್ಲೂ, ಆದಷ್ಟೂ ವಿಭಿನ್ನವಾಗಿ ಅಂದವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದೀಗ ಹೊಸ ಪ್ರಯೋಗ ಎಂಬಂತೆ, ಅನೈತಾ ಶ್ರಾಫ್‌ ಸ್ಟೈಲಿಂಗ್‌ ಸಹಕಾರದೊಂದಿಗೆ ಮಾರ್ವಾಡಿ ಡಿಸೈನರ್‌ವೇರ್‌ಗೆ ಸೌತ್‌ ಇಂಡಿಯನ್‌ ಮೇಕಪ್‌ ಹಾಗೂ ಹೇರ್‌ಸ್ಟೈಲ್‌ ಮ್ಯಾಚ್‌ ಮಾಡಿ, ಅಚ್ಚರಿ ಮೂಡಿಸಿದ್ದಾರೆ” ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್‌.

ಮಿಕ್ಸ್ ಮ್ಯಾಚ್‌ ಕಾನ್ಸೆಪ್ಟ್

ಹಾಗೆಂದು ಇಶಾ ಅಂಬಾನಿ ಕಂಪ್ಲೀಟ್‌ ಸೌತ್‌ ಇಂಡಿಯನ್‌ ಆಗಿ ಕಾಣಿಸಿಕೊಂಡಿಲ್ಲ! ತಮ್ಮ ಲುಕ್‌ನಲ್ಲಿ ಮಾತ್ರ ಬದಲಾವಣೆ ತಂದಿದ್ದಾರೆ. ಮಿಕ್ಸ್ ಮ್ಯಾಚ್‌ ಕಾನ್ಸೆಪ್ಟ್ ಅಳವಡಿಸಿಕೊಂಡಿದ್ದಾರೆ.

Ambani Wedding Fashion

ಇಶಾ ಅಂಬಾನಿಯ ದುಬಾರಿ ಜಡೆ ಬಿಲ್ಲೆ

ದಕ್ಷಿಣ ಭಾರತದ ಮದುವೆಗಳಲ್ಲಿ ಅದರಲ್ಲೂ ಮದುವೆಯಾಗುವ ವಧು ಧರಿಸುವಂತಹ ಜಡೆ ಬಿಲ್ಲೆ ಇಶಾ ಅಂಬಾನಿಯ ಕೂದಲನ್ನು ಶ್ರೀಮಂತಗೊಳಿಸಿದೆ. ಪ್ರಿಶಿಯಸ್‌ ಸ್ಟೋನ್ಸ್, ರೂಬಿ, ಎಮರಾಲ್ಡ್, ವಜ್ರ-ವೈಢೂರ್ಯಗಳನ್ನು ಹೊಂದಿರುವ ಈ ಆಂಟಿಕ್‌ ವಿನ್ಯಾಸದ ಜಡೆ ಬಿಲ್ಲೆ ಮೂರು ಬಂಗಾರದ ಕುಚ್ಚುಗಳನ್ನು ಹೊಂದಿದ್ದು, ಟೆಂಪಲ್‌ ವಿನ್ಯಾಸದ್ದಾಗಿದೆ. ಜಡೆ ಸುತ್ತಲೂ ಹೂವಿನ ದಿಂಡಿನಿಂದ ಅಲಂಕರಿಸಲಾಗಿದೆ. ಇನ್ನು ಕುಂದನ್‌ ಹಾಗೂ ಜುಮ್ಕಾ ಕಿವಿಯೊಲೆ ಮಿಕ್ಸ್ ಮ್ಯಾಚ್‌ ಸ್ಟೈಲಿಂಗ್‌ಗೆ ಸಾಥ್‌ ನಿಡಿದೆ.

ಇದನ್ನೂ ಓದಿ: Ambani Wedding Fashion: ಅಂಬಾನಿ ಮಗನ ಬಂದ್ಗಾಲ ಸೂಟ್ ಬಂಗಾರದ್ದು! ರಾಜರ ಕಾಲದ ಉಡುಗೆಯ ಮರು ಸೃಷ್ಟಿ

ಸೌತ್‌ ಹಾಗೂ ನಾರ್ತ್‌ ಲುಕ್‌ನ ಸಮಾಗಮ

ಹಣೆಗೆ ಇರಿಸಿರುವ ಬಿಂದಿ ಸೌತ್‌ ಇಂಡಿಯನ್‌ ಲುಕ್‌ಗೆ ಸಾಥ್‌ ನೀಡಿದರೇ, ಇಶಾ ಅಂಬಾನಿ ಧರಿಸಿರುವ ಲೆಹೆಂಗಾ ಮಾರ್ವಾಡಿ ಸ್ಟೈಲಿಂಗ್‌ ಪ್ರತಿನಿಧಿಸಿದೆ. ಒಟ್ಟಾರೆ, ಲುಕ್‌ಗಳನ್ನು ಮಿಕ್ಸ್ ಮ್ಯಾಚ್‌ ಮಾಡಿಯೂ ಆಕರ್ಷಕವಾಗಿ ಕಾಣಿಸಬಹುದು ಎಂಬುದಕ್ಕೆ ಇಶಾ ಅಂಬಾನಿಯ ಜಡೆ ಬಿಲ್ಲೆ ಸಿಂಗಾರವೇ ಸಾಕ್ಷಿ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ವಿದ್ಯಾ ವಿವೇಕ್‌.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Monsoon Ethnicwear: ಮಾನ್ಸೂನ್‌ಗೆ ಕಾಲಿಟ್ಟ ಮೆನ್ಸ್ ಜಾಕೆಟ್‌ ಸ್ಟೈಲ್‌ ಎಥ್ನಿಕ್‌ ವೇರ್ಸ್

Monsoon Ethnicwear: ಮಾನ್ಸೂನ್‌ ಸೀಸನ್‌ಗೆ ಹೊಂದುವಂತಹ ನಾನಾ ವಿನ್ಯಾಸದಲ್ಲಿ ಮೆನ್ಸ್ ಎಥ್ನಿಕ್‌ವೇರ್ಸ್ ಮಾರುಕಟ್ಟೆಗೆ ಕಾಲಿಟ್ಟಿವೆ. ಅವು ಯಾವುವು? ಆಯ್ಕೆ ಹೇಗೆ? ಸ್ಟೈಲಿಂಗ್‌ ಹೇಗೆ? ಎಂಬುದರ ಬಗ್ಗೆ ಮೆನ್ಸ್ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

By

Monsoon Ethnicwear
Koo
ಶೀಲಾ ಸಿ. ಶೆಟ್ಟಿ, ಬೆಂಗಳೂರು

ಜಾಕೆಟ್‌ ಹಾಗೂ ಕೋಟ್‌ (Jacket and coat style) ಸ್ಟೈಲ್‌ನ ಮೆನ್ಸ್ ಎಥ್ನಿಕ್‌ವೇರ್ಸ್ (Monsoon Ethnicwear) ಈ ಮಾನ್ಸೂನ್‌ ಸೀಸನ್‌ನಲ್ಲಿ (Monsoon season trend) ಟ್ರೆಂಡಿಯಾಗಿವೆ. ಹೌದು, ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ವಿನ್ಯಾಸಗೊಂಡಿರುವ ಈ ಮೆನ್ಸ್ ಎಥ್ನಿಕ್‌ವೇರ್ಸ್ ನೋಡಲು ಮಾತ್ರವಲ್ಲ, ಲೇಯರ್‌ ಲುಕ್‌ ನೀಡುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.

ಮಳೆಗಾಲಕ್ಕೆ ಲಗ್ಗೆ ಇಟ್ಟ ಲೇಯರ್ಡ್ ಎಥ್ನಿಕ್‌ವೇರ್ಸ್

“ತುಂತುರು ಮಳೆಯಲ್ಲಿ ನಡೆಯುವ ಸಮಾರಂಭ ಹಾಗೂ ಕಾರ್ಯಕ್ರಮಗಳಿಗೆ ಹೊಂದುವಂತೆ ದೇಹವನ್ನು ಬೆಚ್ಚಗಿಡುವ ನಾನಾ ಶೈಲಿಯ ಜಾಕೆಟ್‌/ಕೋಟ್‌ ಸ್ಟೈಲ್‌ನ ಎಥ್ನಿಕ್‌ವೇರ್ಸ್ಗಳು, ಪುರುಷರನ್ನು ಅಲಂಕರಿಸುತ್ತಿದ್ದು, ನೋಡಲು ರಾಯಲ್‌ ಲುಕ್‌ ನೀಡುವುದರೊಂದಿಗೆ ಸೀಸನ್‌ಗೆ ತಕ್ಕಂತೆ ವಿನ್ಯಾಸಗೊಂಡಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ. ಅವರ ಪ್ರಕಾರ, ಈ ಸೀಸನ್‌ನಲ್ಲಿ ಜಾಕೆಟ್‌ ಹಾಗೂ ಕೋಟ್‌ ಸ್ಟೈಲ್‌ನಂತಹ ಲೇಯರ್‌ ಲುಕ್‌ ನೀಡುವ ನಾನಾ ಬಗೆಯ ಎಥ್ನಿಕ್‌ವೇರ್‌ಗಳು ಮಿಕ್ಸ್ ಮ್ಯಾಚ್‌ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ ಎನ್ನುತ್ತಾರೆ.

Monsoon Ethnicwear


ಟ್ರೆಂಡಿಯಾಗಿರುವ ಜಾಕೆಟ್‌/ಕೋಟ್‌ ಸ್ಟೈಲ್‌ ಎಥ್ನಿಕ್‌ವೇರ್ಸ್

ಸಾಮಾನ್ಯವಾಗಿ ಹುಡುಗರಿಗೆ ಶೆರ್ವಾನಿಯನ್ನು ಧರಿಸುವುದೇ ಹೆವಿ ಎಂದೆನಿಸುವಾಗ, ಇದಕ್ಕೆ ಕೋಟ್‌ ಅಥವಾ ಜಾಕೆಟ್‌ ಶೈಲಿಯ ಓವರ್‌ಕೋಟ್‌ಗಳು ಬೇಡ ಎಂದೆನಿಸುತ್ತವೆ. ಆದರೆ, ಯುವಕರಿಗೆ ಇಷ್ಟವಾಗುವಂತೆ, ಈ ಸೀಸನ್‌ನಲ್ಲಿ ತೆಳುವಾದ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿದ ಶೆರ್ವಾನಿಯೊಂದಿಗೆ ಚೈನಾ ಕಾಲರ್‌ ಇರುವಂತಹ ಜಾಕೆಟ್‌ ಶೈಲಿಯ ಕೋಟ್‌ಗಳು ಜೊತೆಯಾಗಿವೆ. ಇದು ನೋಡಲು ರಾಯಲ್‌ ಲುಕ್‌ ಸಹ ನೀಡುತ್ತವೆ.

ಇನ್ನು, ಕುರ್ತಾ ಮೇಲೆ ಕೋಟ್‌ ಶೈಲಿಯ ಓವರ್‌ಕೋಟ್‌ ಧರಿಸುವುದು ಫ್ಯಾಷನ್‌ ಆಗಿದೆ. ಒಳಗಿನ ಸಾದಾ ಕುರ್ತಾ ಸೆಟ್‌ನೊಂದಿಗೆ ಅದರ ಮೇಲೆ ವೇಸ್‌ಕೋಟ್‌ ಶೈಲಿಯ ಲಾಂಗ್‌ ಕೋಟ್‌ನಂತವು ಸಾಥ್‌ ನೀಡುತ್ತಿವೆ.

ನೋಡಲು ಬಂದ್ಗಾಲದಂತೆ ಕಂಡರೂ, ಒಳಗೊಂದು ಹೊರಗೊಂದು ಎಂಬಂತೆ, ಲೇಯರ್‌ ಲುಕ್‌ ನೀಡುವ ಎಂಬ್ರಾಯ್ಡರಿ ಜಾಕೆಟ್‌, ಪ್ಯಾಚ್‌ ವರ್ಕ್‌ ಕೋಟ್‌, ಗ್ರ್ಯಾಂಡ್‌ ಡಬ್ಬಲ್‌ ಲೇಯರ್‌ ಬಂಡಿ ಸೆಟ್‌ ಹೀಗೆ ಲೆಕ್ಕವಿಲ್ಲದಷ್ಟು ಮಿಕ್ಸ್ ಮ್ಯಾಚ್‌ ವಿನ್ಯಾಸದ ಮೆನ್ಸ್ ಎಥ್ನಿಕ್‌ವೇರ್ಸ್ಗಳು ಈ ಸೀಸನ್‌ನಲ್ಲಿ ಕಾಲಿಟ್ಟಿವೆ.


ನಮ್ಮಲ್ಲಿ ಫೆಸ್ಟಿವ್‌ ಸೀಸನ್‌ ಮುಂದಿನ ತಿಂಗಳು ಇದ್ದರೂ ಈಗಾಗಲೇ ಈ ಎಥ್ನಿಕ್‌ವೇರ್ಸ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಸೆಲೆಬ್ರೆಟಿಗಳು ಇವನ್ನು ಈಗಾಗಲೇ ಧರಿಸಿ ಟ್ರೆಂಡಿಯಾಗಿರಿಸಿರುವುದು ಚಾಲ್ತಿಗೆ ಬರಲು ಕಾರಣವಾಗಿದೆ ಎನ್ನುತ್ತಾರೆ ಮೆನ್ಸ್ ಡಿಸೈನರ್‌ ಕೃಷ್ಣ ರಾಜ್‌.

ಇದನ್ನೂ ಓದಿ: Hand Painted lehenga Fashion: ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿದ ರಾಧಿಕಾ ಮರ್ಚೆಂಟ್‌ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ!

ಕೋಟ್‌/ಜಾಕೆಟ್‌ ಸ್ಟೈಲ್‌ ಎಥ್ನಿಕ್‌ವೇರ್ಸ್ ಆಯ್ಕೆಗೆ 3 ಟಿಪ್ಸ್

· ಲೈಟ್‌ವೈಟ್‌ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಿ.
· ಲೈಟ್‌ ಹಾಗೂ ಪಾಸ್ಟೆಲ್‌ ಕಲರ್ಸ್ ಟ್ರೆಂಡಿಯಾಗಿದೆ.
· ಸಿಕ್ವಿನ್ಸ್ನಂತಹ ಓವರ್‌ಕೋಟ್‌ಗಳು ಚಾಲ್ತಿಯಲ್ಲಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)
Continue Reading

ಫ್ಯಾಷನ್

Natasha ponawala jewelled kurta: ರಿಯಲ್‌ ಜ್ಯುವೆಲ್ಡ್ ಕುರ್ತಾ ಧರಿಸಿದ್ದ ಏಕೈಕ ಫ್ಯಾಷನ್‌ ಐಕಾನ್‌ ನತಾಶಾರ ‘ಮೊಗಲ್‌ ರಾಣಿ’ ಲುಕ್‌!

ಜ್ಯುವೆಲ್‌ಭರಿತ ಬ್ಲೌಸ್‌ ಗೊತ್ತು! ಜ್ಯುವೆಲ್‌ ಸಹಿತ ಕುರ್ತಾ ಬಗ್ಗೆ ಗೊತ್ತೇ! ಫ್ಯಾಷನ್‌ ಐಕಾನ್‌ ನತಾಶ ಪೂನಾವಾಲ (Natasha ponawala jewelled kurta) ಈ ಪ್ರಯೋಗಾತ್ಮಕ ಡಿಸೈನರ್‌ವೇರ್‌ನಲ್ಲಿ ಮೊಗಲರ ರಾಣಿಯಂತೆ ಕಾಣಿಸಿಕೊಂಡಿದ್ದಾರೆ. ಏನಿದು ಜ್ಯುವೆಲ್ಡ್ ಕುರ್ತಾ? ಇದ್ಯಾವ ಬಗೆಯ ಔಟ್‌ಫಿಟ್‌? ಇಲ್ಲಿದೆ ಡಿಟೇಲ್ಸ್.

VISTARANEWS.COM


on

By

Natasha ponawala jeweled kurta
Koo
ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫ್ಯಾಷನ್‌ ಐಕಾನ್‌ ನತಾಶ ಪೂನಾವಾಲ (Natasha ponawala jewelled kurta) ಜ್ಯುವೆಲ್‌ಭರಿತ ಕುರ್ತಾ ಸೆಟ್‌ನಲ್ಲಿ (kurta set) ಕಾಣಿಸಿಕೊಂಡಿರುವುದು, ಎಥ್ನಿಕ್‌ ಡಿಸೈನರ್ಸ್ (Ethnic Designers) ಲೋಕದಲ್ಲಿ ಡಿಸೈನರ್‌ಗಳ ಹುಬ್ಬೇರಿಸಿದೆ. ಹೌದು, ಅಂಬಾನಿ ಮದುವೆಯಲ್ಲಿ (ambani wedding) ಜ್ಯುವೆಲ್‌ ಭರಿತವಾದ ಡಿಸೈನರ್‌ ಸೀರೆ, ಲೆಹೆಂಗಾ ಬ್ಲೌಸ್‌ಗಳನ್ನು ಕಣ್ಣಾರೆ ಕಂಡು ಪಾವನರಾಗಿದ್ದ ಫ್ಯಾಷನ್‌ ಪ್ರಿಯರು ಇದೀಗ ನತಾಶರ ಆಭರಣಗಳಿಂದಲೇ ಸಿದ್ಧಪಡಿಸಿದ್ದ ಜ್ಯುವೆಲ್ಡ್ ಕುರ್ತಾ ಕಂಡು ದಂಗಾಗಿದ್ದಾರೆ.

ಸದಾ ಪ್ರಯೋಗಾತ್ಮಕ ಡಿಸೈನರ್‌ವೇರ್ ಧರಿಸುವ ನತಾಶ

ಮಾಡರ್ನ್‌ ಡ್ರೆಸ್‌ಗೂ ಸೈ, ಆಂಟಿಕ್‌ ಡಿಸೈನ್‌ನ ಎಥ್ನಿಕ್‌ವೇರ್‌ಗಳಿಗೂ ಸೈ ಎನ್ನುವ ನತಾಶ, ಅಂಬಾನಿಯವರ ಮದುವೆಗೆಂದು ವಿದೇಶದಿಂದ ಇಲ್ಲಿಗೆ ಹಾರಿ ಬಂದಿದ್ದರು. ಆದರೆ, ಅವರ ಔಟ್‌ಫಿಟ್‌ ಕಡೆ ಯಾರೂ ಹೆಚ್ಚಾಗಿ ಗಮನ ನೀಡಲಿಲ್ಲ! ಆದರೆ, ಇದೀಗ ಸೆಲೆಬ್ರೆಟಿ ಡಿಸೈನರ್‌ ಅಬು ಜಾನಿ ಸಂದೀಪ್‌ ಅವರು ನತಾಶ ಅವರಿಗಾಗಿ ಸಿದ್ಧಪಡಿಸಿದ್ದ ವಿಶೇಷ ಜ್ಯುವೆಲ್ಡ್ ಕುರ್ತಾ ಸೆಟ್ಟಿನ ವಿನ್ಯಾಸವನ್ನು ಅನಾವರಣಗೊಳಿಸಿದ್ದಾರೆ.

Natasha ponawala jeweled kurta

ಎಥ್ನಿಕ್‌ವೇರ್‌ ಡಿಸೈನರ್‌ಗಳ ಕಣ್ಣರಳಿಸಿದ ಜ್ಯುವೆಲ್ಡ್ ಕುರ್ತಾ

ಕುರ್ತಾ ಎಂದಾಕ್ಷಣ ಮಾರುದ್ದ ಇರುವ ಡಿಸೈನ್‌ ಟಾಪ್‌ ಅಲ್ಲ, ಶಾರ್ಟ್ ಲೆಂಥ್‌ನ ಕುರ್ತಾ ಶೈಲಿ ಹೋಲುವಂತಹ ಉಡುಗೆಯಿದು. ರಾಣಿ-ಮಹಾರಾಣಿಯರು ಅದರಲ್ಲೂ ಮೊಗಲರ ರಾಣಿಯರು ಧರಿಸುತ್ತಿದ್ದ ಡಿಸೈನ್‌ ಇದು ಎನ್ನಲಾಗಿದೆ. ಆದರೆ, ಅಂದು ಆ ಮಹಾರಾಣಿಯರು ಈ ಮಟ್ಟಿಗೆ ಆಭರಣಗಳಿಂದಲೇ ಡಿಸೈನ್‌ ಮಾಡಿಸಿದ ಕುರ್ತಾ ಧರಿಸಿದ್ದರೋ ಇಲ್ಲವೋ ಗೊತ್ತಿಲ್ಲ! ಆದರೆ, ಈ ಕಲಿಯುಗದಲ್ಲಿ ನತಾಶ ಈ ಜ್ಯುವೆಲ್ಡ್‌ ಕುರ್ತಾ ಧರಿಸಿ ಮೆರೆದಿದ್ದಾರೆ.

ಹಿಸ್ಟರಿ ರೀ ಕ್ರಿಯೇಟ್‌ ಮಾಡಿದ್ದಾರೆ ಎಂದಿದ್ದಾರೆ ಫ್ಯಾಷನ್‌ ವಿಶ್ಲೇಷಕರು. ಇನ್ನು, ಫ್ಯಾಷನಿಸ್ಟಾ ಪ್ರಸಾದ್‌ ಬಿದ್ದಪ್ಪ ಹೇಳುವಂತೆ, ಇದೊಂದು ಪ್ರಯೋಗಾತ್ಮಕ ಎಥ್ನಿಕ್‌ವೇರ್‌ ಎಲ್ಲರಿಗೂ ಇಂತಹ ಡಿಸೈನರ್‌ವೇರ್‌ ಪ್ರಯೋಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನತಾಶ ತಕ್ಕಣಕ್ಕೆ ನೋಡಲು ಮೊಗಲರ ರಾಣಿಯಂತೆ ಕಂಗೊಳಿಸಿದ್ದಾರೆ ಎಂದಿದ್ದಾರೆ ಸ್ಟೈಲಿಸ್ಟ್ ಜನಕ್‌.

Natasha ponawala jeweled kurta


ಜ್ಯುವೆಲ್ಡ್ ಕುರ್ತಾ ಸೆಟ್‌ ವಿನ್ಯಾಸದ ಗುಟ್ಟು

ಮದುವೆಯಲ್ಲಿ ಮುಖದ ಮುಂದೆ ಧರಿಸುವ ಮದುಮಗನ ಸೆಹ್ರಾ ಡಿಸೈನಿಂದ ಸ್ಪೂರ್ತಿಗೊಂಡು, ಈ ಜ್ಯುವೆಲ್ಡ್ ಶಾರ್ಟ್ ಕುರ್ತಾ ಡಿಸೈನ್‌ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ ಡಿಸೈನರ್‌ ಅಬುಜಾನಿ ಸಂದೀಪ್‌ ಕೋಸ್ಲಾ. ಅವರು ಹೇಳುವಂತೆ, ಈ ಕುರ್ತಾದಲ್ಲಿ ಬೀಡ್ಸ್, ಪ್ರಿಶಿಯಸ್‌ ಸ್ಟೋನ್ಸ್, ಪರ್ಲ್ಸ್ ಎಲ್ಲವನ್ನು ಅತಿ ಸೂಕ್ಷ್ಮವಾಗಿ ಹೆಣೆಯಲಾಗಿದೆ. ಇದನ್ನು ದೇಸಿ ಮೂಲ ಕಲಾಕಾರರಿಂದ ಹೆಣೆಸಲಾಗಿದೆ. ಸ್ಟ್ರಿಂಗ್ಸ್ನಂತೆ ವಿನ್ಯಾಸ ಮಾಡಿ, ಕುರ್ತಾ ರೂಪ ನೀಡಲಾಗಿದೆ.

ಇದನ್ನೂ ಓದಿ: Golden Designer Fashion Wears: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ಗೋಲ್ಡನ್‌ ಡಿಸೈನರ್‌ವೇರ್ಸ್!

ಇದಕ್ಕೆ ಶರಾರ ಶೈಲಿಯಲ್ಲಿರುವ ಅಗಲವಾದ ಸ್ಕರ್ಟ್ ಶೈಲಿಯ ಪ್ಯಾಂಟ್‌ಗಳನ್ನು ಬನಾರಸಿ ಬಾಂದನಿ ಬ್ರೋಕೆಡ್‌ನಿಂದ ವಿನ್ಯಾಸಗೊಳಿಸಲಾಗಿದೆ. ಡಾಕಾದ ಬಾಂದನಿ ಸೀರೆಯಿಂದ ದುಪಟ್ಟಾ ರೂಪಿಸಲಾಗಿದೆ. ಇನ್ನು, ನತಾಶ ತಮ್ಮ ಹೇರ್‌ಸ್ಟೈಲ್‌ಗೆ ಅಜ್ಜಿಯ ಗಿಫ್ಟ್ ಆಂಟಿಕ್‌ ಬಂಗಾರದ ಹಾರವನ್ನು ಧರಿಸಿದ್ದಾರೆ. ಇದು ಕಂಪ್ಲೀಟ್‌ ಮೊಗಲರ ರಾಣಿಯಂತೆ ಆಕೆಯನ್ನು ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

(ಲೇಖಕಿ : ಫ್ಯಾಷನ್‌ ಪರ್ತಕರ್ತೆ)
Continue Reading

ಫ್ಯಾಷನ್

Monsoon star fashion: ಮಾನ್ಸೂನ್‌ ಟ್ರಾವೆಲ್‌ ಫ್ಯಾಷನ್‌ಗೆ ಸೈ ಎಂದ ನಟಿ ಮೋಕ್ಷಿತಾ ಪೈ

Monsoon star fashion: ಪಾರು ಸಿರಿಯಲ್‌ ಖ್ಯಾತಿಯ ನಟಿ ಮೋಕ್ಷಿತಾ ಪೈ ಮಾನ್ಸೂನ್‌ ಟ್ರಾವೆಲ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ. ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿರುವ ಅವರು, ಮಳೆಯಲ್ಲಿ ಪ್ರಯಾಣ ಮಾಡುವಾಗ ಸ್ಟೈಲಿಂಗ್‌ ಹೇಗಿರಬೇಕು? ಸೀಸನ್‌ಗೆ ತಕ್ಕಂತೆ ಹೇಗೆ ಬದಲಾಗಬೇಕು ಎಂಬುದರ ಬಗ್ಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.

VISTARANEWS.COM


on

Monsoon star fashion Actress Mokshita Pai
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾನ್ಸೂನ್‌ ಟ್ರಾವೆಲ್‌ (Monsoon star fashion) ಫ್ಯಾಷನ್‌ಗೆ ಸೈ ಎಂದಿದ್ದಾರೆ ನಟಿ ಮೋಕ್ಷಿತಾ ಪೈ. ಟೊರ್ನ್ ಜೀನ್ಸ್, ಸ್ಟ್ರೈಪ್ಸ್ ಕ್ರಾಪ್‌ ಟಾಪ್‌ ಹಾಗೂ ವುಲ್ಲನ್‌ ಕ್ಯಾಪ್‌ನಲ್ಲಿ ರಾಯಲ್‌ ಬ್ಲ್ಯೂ ಕೊಡೆ ಹಿಡಿದು ಆಕರ್ಷಕವಾಗಿ ಕಾಣಿಸಿಕೊಂಡಿರುವ ಮೋಕ್ಷಿತಾಗೆ ಮಳೆಗಾಲವೆಂದರೇ ಸಖತ್‌ ಲವ್‌ ಅಂತೆ.

ಸೀಸನ್‌ಗೆ ತಕ್ಕಂತೆ ಬದಲಾಗುವ ಮೋಕ್ಷಿತಾ

ಇನ್ನು, ನಿಮಗೆಲ್ಲರಿಗೂ ಗೊತ್ತಿರುವಂತೆ ಪಾರು ಸೀರಿಯಲ್‌ ಮೂಲಕ ಖ್ಯಾತಿ ಗಳಿಸಿರುವ ನಟಿ ಮೋಕ್ಷಿತಾ ಪೈಗೆ ಆಗಾಗ ಟ್ರಾವೆಲ್‌ ಮಾಡುವುದು ಅವರಿಗೆ ಇಷ್ಟವಾದ ಸಂಗತಿಗಳಲ್ಲೊಂದಂತೆ. ಇದಕ್ಕೆ ಪೂರಕ ಎಂಬಂತೆ, ಆಯಾ ಸೀಸನ್‌ ಹಾಗೂ ಹವಮಾನಕ್ಕೆ ತಕ್ಕಂತೆ ನಾನಾ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರಂತೆ. ತಮ್ಮ ಮಾನ್ಸೂನ್‌ ಟ್ರಾವೆಲ್‌ ಫ್ಯಾಷನ್‌ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಅವರು ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್ ಹಂಚಿಕೊಂಡಿದ್ದಾರೆ.

ಮೋಕ್ಷಿತಾ ಹಿಲ್‌ ಸ್ಟೇಷನ್‌ ಲವ್‌

ನನಗೆ ಮೊದಲಿನಿಂದಲೂ ಹಿಲ್‌ ಸ್ಟೇಷನ್‌ ಅಂದ್ರೆ ಇಷ್ಟ. ಅದರಲ್ಲೂ ಈ ಮಳೆಗಾಲದಲ್ಲಿ ಹಿಲ್‌ಸ್ಟೇಷನ್‌ಗಳಲ್ಲಿ ಉಳಿದು ಕೊಂಡು ಪ್ರಕೃತಿ ಸೌಂದರ್ಯ ಸವಿಯುವ ಯೂನಿಕ್‌ ಅನುಭವವೇ ಒಂಥರ ಖುಷಿ ನೀಡುತ್ತದೆ. ಈ ಬಾರಿ ಊಟಿ ಹೋಗಿದ್ವಿ. ಅಲ್ಲಿನ ವಾತಾವರಣಕ್ಕೆ ತಕ್ಕಂತೆ, ಔಟ್‌ಫಿಟ್ಸ್ ಧರಿಸಿದ್ದೆ. ಹೋಗುವಾಗ ಜೀನ್ಸ್ ಪ್ಯಾಂಟ್‌ ಹಾಗೂ ಶೂನಲ್ಲಿ ಇದ್ದೆ. ಆದರೆ, ನಂತರ ನನ್ನ ಔಟ್‌ಫಿಟ್ಸ್ ಕಂಪ್ಲೀಟ್‌ ಬದಲಾಯಿತು. ಒದ್ದೆಯಾದ ಶೂ ಬದಲು ಚಪ್ಪಲಿ ಧರಿಸಬೇಕಾಯಿತು. ಜೊತೆಗೆ ಚಳಿಯಿಂದ ಕಾಪಾಡಿಕೊಳ್ಳಲು ಕ್ಯಾಪ್‌ ಬಳಸಿದೆ. ಅದು ನೋಡಲು ಕೊಂಚ ಸ್ಟೈಲಾಗಿಯೇ ಕಾಣಿಸಿತು ಎಂದು ನಗುತ್ತಾರೆ ಮೋಕ್ಷಿತಾ ಪೈ.

ಇದನ್ನೂ ಓದಿ: The Birthday Boy: ಹೆಸರು ಬದಲಾಯಿಸಿ ಕದ್ದು ಮುಚ್ಚಿ ಸಿನಿಮಾ ಮಾಡಿ, ಮಾಸ್ಕ್‌ ಧರಿಸಿ ಬಂದ ನಿರ್ದೇಶಕ! ಏನು ಕಥೆ?

ಟ್ರಾವೆಲ್‌ಗೆ ತಕ್ಕಂತಿರಲಿ ಫ್ಯಾಷನ್‌

ಮಾನ್ಸೂನ್‌ ಸೀಸನ್‌ನಲ್ಲಿ ಟ್ರಾವೆಲ್‌ ಮಾಡುವಾಗ ಆದಷ್ಟೂ, ಸೀಸನ್‌ಗೆ ತಕ್ಕಂತೆ ಉಡುಪು ಧರಿಸುವುದು ಮುಖ್ಯ. ಇಲ್ಲವಾದಲ್ಲಿ ಆರೋಗ್ಯ ಹದಗೆಡಬಹುದು. ಪ್ರಯಾಣ ಸುಖಕರವಾಗದೇ ಇರಬಹುದು. ಅಲ್ಲದೇ, ಜಿಟಿಜಿಟಿ ಮಳೆಗೆ ಕಿರಿಕಿರಿ ಎಂದೆನಿಸಬಹುದು. ಹಾಗಾಗಿ ಟ್ರಾವೆಲ್‌ ಸಮಯದಲ್ಲಿ ಮಾತ್ರ, ಮೊದಲೇ ನಿಮ್ಮ ಔಟ್‌ಫಿಟ್ಸ್ ಪ್ಲಾನ್‌ ಮಾಡಿ. ಸ್ಟೈಲಿಂಗ್‌ಗಿಂತ ಹೆಚ್ಚಾಗಿ, ನಿಮ್ಮ ದೇಹವನ್ನು ಬೆಚ್ಚಗಿಡುವಂತಹ ಉಡುಪನ್ನು ಧರಿಸಿ. ಮಿಡಿ , ಶಾರ್ಟ್ ಡ್ರೆಸ್‌, ಲೇಯರ್‌ ಡ್ರೆಸ್‌ ಓಕೆ. ಶೂಗಳ ಬದಲು ಚಪ್ಪಲಿ ಆಯ್ಕೆ ಮಾಡಿ ಎನ್ನುವ ಮೋಕ್ಷಿತಾ ಇನ್ನೊಂದಿಷ್ಟು ಸಿಂಪಲ್‌ ಸಲಹೆಗಳನ್ನು ನೀಡಿದ್ದಾರೆ.

 • ಮಳೆಗಾಲಕ್ಕೆ ಮೋಕ್ಷಿತಾ ಸ್ಟೈಲಿಂಗ್‌ ಟಿಪ್ಸ್:
 • ರೇನ್‌ ಕೋಟ್‌ ಹಾಗೂ ಅಂಬ್ರೆಲ್ಲಾ ಪ್ರಯಾಣದ ಜೊತೆಗಿರಲಿ.
 • ಹುಡುಗಿಯರು ಲಾಂಗ್‌ ಸ್ಕರ್ಟ್ಸ್, ಮ್ಯಾಕ್ಸಿ, ಗೌನ್‌ ಆವಾಯ್ಡ್ ಮಾಡಿ.
 • ಭಾರವೆನಿಸುವ ಹೆವ್ವಿ ಕ್ಲಾತಿಂಗ್‌ ಬೇಡ!
 • ಜಾಕೆಟ್‌, ಶ್ರಗ್ಸ್, ಸ್ಕಾರ್ಫ್‌ ಎಲ್ಲವೂ ಜೊತೆಗಿರಲಿ.
 • ತೆಳುವಾದ ಲೇಯರ್‌ ಲುಕ್‌ಗೆ ಆದ್ಯತೆ ನೀಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Golden Designer Fashion Wears: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ಗೋಲ್ಡನ್‌ ಡಿಸೈನರ್‌ವೇರ್ಸ್!

Golden Designer Fashion Wears: ಅಂಬಾನಿ ಫ್ಯಾಮಿಲಿಯ ಮದುವೆಯಲ್ಲಿ ಸೆಲೆಬ್ರೆಟಿಗಳ ಗೋಲ್ಡನ್‌ ಲುಕ್‌ ಸಖತ್‌ ಟ್ರೆಂಡಿಯಾಗಿದೆ. ಅವುಗಳಲ್ಲಿ 3 ಶೈಲಿಯ ಡಿಸೈನರ್‌ವೇರ್‌ಗಳಲ್ಲಿನ ಲುಕ್‌ ಪಾಪುಲರ್‌ ಆಗಿದೆ. ಹಾಗಾದಲ್ಲಿ, ಅವು ಯಾವುವು? ಆಯ್ಕೆ ಮಾಡುವುದಾದರೇ ಹೇಗೆ? ಡಿಸೈನರ್‌ಗಳು ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ.  ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Golden Designer Fashion Wears Trendy Golden Designer Wedding Fashion
ಚಿತ್ರಗಳು: ಸೆಲೆಬ್ರೆಟಿಗಳ ಗೋಲ್ಡನ್‌ ಲುಕ್‌ ಡಿಸೈನರ್‌ವೇರ್ಸ್
Koo

– ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅನಂತ್‌ ಅಂಬಾನಿ –ರಾಧಿಕಾ ಮರ್ಚೆಂಟ್‌  (Golden Designer Fashion Wears) ಮದುವೆಯಲ್ಲಿ, ಸೆಲೆಬ್ರೆಟಿಗಳು ಧರಿಸಿದ ಗೋಲ್ಡನ್‌ ಡಿಸೈನರ್ವೇರ್‌ಗಳು ಇದೀಗ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡ್‌ ಸೆಟ್‌ ಮಾಡಿವೆ. ರಾಯಲ್‌ ಲುಕ್‌ ನೀಡುವ ಈ  3 ಶೈಲಿಯ ಗೋಲ್ಡನ್‌ ಲುಕ್‌ ನೀಡಿದ ಡಿಸೈನರ್‌ವೇರ್‌ಗಳ್ಯಾವು? ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್.

ಗೋಲ್ಡನ್ ಶೇಡ್‌ ರೆಡಿ ಸೀರೆ

ಬಂಗಾರ ವರ್ಣದ  ರೆಡಿ ಸೀರೆಗಳು ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಸಖತ್‌ ಟ್ರೆಂಡಿಯಾಗಿವೆ. ಸಾಲಿಡ್‌ ಶೇಡ್‌ನ ಬಂಗಾರ ವರ್ಣದ ಕಲರ್‌ನ ಡಿಸೈನರ್‌ ರೆಡಿ ಸೀರೆಗಳು ಇದೀಗ ಸೆಲೆಬ್ರೆಟಿಗಳನ್ನು ಅಲಂಕರಿಸಿದ್ದು, ನೋಡುಗರ ಕಣ್ಮನ ಸೆಳೆದಿವೆ. ಇ, ಕಾಪರ್‌ ಗೋಲ್ಡ್, ಲೈಟ್‌ ಗೋಲ್ಡ್, ಕ್ರೀಮ್‌ ಗೋಲ್ಡನ್‌ ಸೀರೆಗಳಲ್ಲಿ ಮೆರ್ಮೈಡ್, ಬಾಡಿಕಾನ್‌ ಡಿಸೈನ್‌ನವು ಮಹಿಳೆಯರಿಗೆ ಹೆಚ್ಚು ಇಷ್ಟವಾಗಿವೆ.

ಗೋಲ್ಡನ್‌ ಡಿಸೈನರ್‌ ಘಾಗ್ರ ಗಮ್ಮತ್ತು

ಬಂಗಾರ ವರ್ಣದ ಘಾಗ್ರಗಳು ಕೂಡ ಮದುವೆ ಫ್ಯಾಷನ್‌ನಲ್ಲಿ ಸೇರಿಕೊಂಡಿದ್ದು, ಧರಿಸಿದವರನ್ನು ಮೆರೆಸಿವೆ. ನೋಡಲು ಮೊಗಲರ ರಾಣಿಯರಂತೆ ಬಿಂಬಿಸುವ ಇವು ಇದೀಗ ನಾನಾ ಡಿಸೈನರ್‌ ಬ್ಲೌಸ್‌ಗಳ ಜೊತೆ ಜೊತೆಯಾಗಿವೆ. ಇನ್ನು ಐವರಿ, ಹಾಫ್‌ ವೈಟ್‌, ಕ್ರಿಮೀಶ್‌ ಗೋಲ್ಡನ್‌ನಂತಹ ನಾನಾ ಮಿಕ್ಸ್ ಮ್ಯಾಚ್‌ ಗೋಲ್ಡ್ ಥೀಮ್‌ನ ಈ ಘಾಗ್ರಗಳು ಯುವತಿಯರನ್ನುಹೆಚ್ಚಾಗಿ  ಸೆಳೆದಿವೆ.

ಇದನ್ನೂ ಓದಿ: Hand Painted lehenga Fashion: ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿದ ರಾಧಿಕಾ ಮರ್ಚೆಂಟ್‌ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ!

ಆಕರ್ಷಕ ಗೋಲ್ಡ್ ಎಂಬ್ರಾಯ್ಡರಿ ಲೆಹೆಂಗಾ

ರಾಯಲ್‌ ಲುಕ್‌ ನೀಡುವ ಗೋಲ್ಡನ್‌ ಲೆಹೆಂಗಾಗಳು ಲೆಕ್ಕವಿಲ್ಲದಷ್ಟು ಸೆಲೆಬ್ರೆಟಿಗಳನ್ನು ಅಲಂಕರಿಸಿವೆ ಎನ್ನಬಹುದು. ಇನ್ನು, ಗ್ಲಾಮರಸ್‌ ಬ್ಲೌಸ್‌, ಟ್ರೆಡಿಷನಲ್‌ ಬ್ಲೌಸ್‌, ಜ್ಯುವೆಲ್‌ ಬ್ಲೌಸ್‌ ಹೀಗೆ ವೆರೈಟಿ ವಿನ್ಯಾಸದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿವೆ. ಪ್ರತಿ ಲೆಹೆಂಗಾ ಡಿಸೈನ್‌ಗಳು ಅಷ್ಟೇ ! ಊಹೆಗೂ ಮೀರಿದ ಡಿಸೈನ್‌ನಲ್ಲಿ ಕಾಣಿಸಿಕೊಂಡು ಹುಡುಗಿಯರ ಮನ ಗೆದ್ದಿವೆ ಎನ್ನುತ್ತಾರೆ ಡಿಸೈನರ್‌ ಜಿಶಾ.

 • ಗೋಲ್ಡನ್‌ ಲುಕ್‌ ಬಯಸುವವರಿಗೆ ಗೋಲ್ಡನ್‌ ಟಿಪ್ಸ್
 • ಗೋಲ್ಡ್‌ ಡಿಸೈನರ್‌ವೇರ್‌ನಲ್ಲಿ ನಿಮಗೆ ಕಂಫರ್ಟಬಲ್‌ ಎಂದೆನಿಸುವಂತಹ ಡ್ರೆಸ್‌ಕೋಡ್‌ ಆಯ್ಕೆ ಮಾಡಿ.
 • ರೆಡಿ ಗೋಲ್ಡ್‌ ಸೀರೆಗಳು ಇಂಡೋ-ವೆಸ್ಟರ್ನ್‌ ಲುಕ್‌ ನೀಡುತ್ತವೆ.
 • ಗೋಲ್ಡ್‌ ಲೆಹೆಂಗಾಗಳು ಸಂಗೀತ್‌, ಮೆಹಂದಿ ಕಾರ್ಯಕ್ರಮಗಳಿಗೆ ಬೆಸ್ಟ್ ಅಪ್ಷನ್‌.
 • ಗೋಲ್ಡ್ ದಾರದ ಹ್ಯಾಂಡ್‌ ಎಂಬ್ರಾಯ್ಡರಿ ಡಿಸೈನ್‌ನ ಲೆಹೆಂಗಾಗಳು ಸೆಲೆಬ್ರೆಟಿ ಲುಕ್‌ ನೀಡುತ್ತವೆ.
 • ಘಾಗ್ರಾಗಳು ಸ್ಲಿಮ್‌ ಇರುವವರಿಗೆ ಬೆಸ್ಟ್.
 • ಪ್ಲಂಪಿಯಾಗಿರುವವರು ಆದಷ್ಟೂ ಫ್ಲೋ ಆಗುವಂತಹ ಫ್ಯಾಬ್ರಿಕ್‌ನ ರೆಡಿ ಸೀರೆ ಚೂಸ್‌ ಮಾಡುವುದು ಉತ್ತಮ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Cargo container ship
ದೇಶ1 hour ago

Cargo container ship: ಕಾರ್ಗೋ ಶಿಪ್‌ನಲ್ಲಿ ಭಾರೀ ಅಗ್ನಿ ಅವಘಡ; ಸುಟ್ಟು ಕರಕಲಾದ ಸರಕುಗಳು-ವಿಡಿಯೋ ಇದೆ

Reliance Industries Announces First Quarter Results 17448 crore rs profit declaration
ವಾಣಿಜ್ಯ1 hour ago

Reliance Industries: ರಿಲಯನ್ಸ್ ಇಂಡಸ್ಟ್ರೀಸ್‌ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟ; 17,448 ಕೋಟಿ ರೂ. ಲಾಭ

Ben Stokes
ಕ್ರೀಡೆ2 hours ago

Ben Stokes : ದೊಡ್ಡ ಮೊತ್ತ ಪಡೆದು ಮುಂಬೈ ತಂಡ ಸೇರಲಿದ್ದಾರೆ ಬೆನ್ ಸ್ಟೋಕ್ಸ್​​

Sexual harassment
ದೇಶ2 hours ago

Sexual Harassment: ಪೋರ್ನ್‌ ವಿಡಿಯೋ ತೋರಿಸಿ ಕಿರುಕುಳ; ಜಿಂದಾಲ್‌ ಕಂಪನಿಯ ಹಿರಿಯ ಅಧಿಕಾರಿ ವಿರುದ್ಧ ಮಹಿಳೆ ಆರೋಪ

Vastu Tips
ಧಾರ್ಮಿಕ3 hours ago

Vastu Tips: ಮನೆಯಲ್ಲಿ ಸಂಪತ್ತು ಸದಾ ತುಂಬಿರಬೇಕೆ? ಈ ನಿಯಮ ಪಾಲಿಸಿ

Women's Asia Cup 2024
ಪ್ರಮುಖ ಸುದ್ದಿ3 hours ago

Women’s Asia Cup 2024 : ಪಾಕಿಸ್ತಾನ ವಿರುದ್ಧ ಭರ್ಜರಿ 7 ವಿಕೆಟ್​ ವಿಜಯ ಸಾಧಿಸಿದ ಭಾರತದ ಮಹಿಳೆಯರು

GT World Mall
ಕರ್ನಾಟಕ3 hours ago

GT World Mall: ರೈತ ಫಕೀರಪ್ಪರನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ ಜಿ.ಟಿ.ಮಾಲ್‌ ಮಾಲೀಕ

Viral Video
Latest3 hours ago

Viral Video: ಮಗಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗುಪ್ತಾಂಗ ತೋರಿಸಿದ ವಿಕೃತ ಕಾಮಿ!

Sadageri village free from gas leakage risk says DC Lakshmipriya
ಕರ್ನಾಟಕ3 hours ago

Uttara Kannada News: ಭೂಕುಸಿತದಿಂದ ಕೊಚ್ಚಿ ಹೋದ ಟ್ಯಾಂಕರ್‌; ಗ್ರಾಮಸ್ಥರೀಗ ಗ್ಯಾಸ್ ಸ್ಫೋಟ ಅಪಾಯದಿಂದ ಪಾರು

Reliance Jio first quarter profit at Rs 5445 crore
ದೇಶ3 hours ago

Reliance Jio: ರಿಲಯನ್ಸ್ ಜಿಯೋಗೆ ಮೂರೇ ತಿಂಗಳಲ್ಲಿ ಎಷ್ಟು ಲಾಭ ನೋಡಿ; 5,445 ಕೋಟಿ ರೂ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ12 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ12 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ1 day ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ4 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ5 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌