ಇದು ಮಿಸ್‌ ಅಲ್ಲ ಮಿಸಸ್‌ ಇಂಡಿಯಾ ಕರ್ನಾಟಕ; ವಿವಾಹಿತ ಮಹಿಳೆಯರ ಸೌಂದರ್ಯ ಸ್ಪರ್ಧೆ Vistara News

ಫ್ಯಾಷನ್

ಇದು ಮಿಸ್‌ ಅಲ್ಲ ಮಿಸಸ್‌ ಇಂಡಿಯಾ ಕರ್ನಾಟಕ; ವಿವಾಹಿತ ಮಹಿಳೆಯರ ಸೌಂದರ್ಯ ಸ್ಪರ್ಧೆ

ವಿವಾಹಿತ ಮಹಿಳೆಯರಿಗಾಗಿಯೇ ಆಯೋಜಿಲಾಗಿರುವ ಮಿಸಸ್‌ ಇಂಡಿಯಾ ಕರ್ನಾಟಕ ಎಂಬ ವಿಭಿನ್ನ ಸೌಂದರ್ಯ ಸ್ಪರ್ಧೆ ಇದಾಗಿದ್ದು, ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಈ ಮೂಲಕ ಮಹಿಳೆಯರು ಸಂದೇಶವನ್ನು ನೀಡಲಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಿಸಸ್‌ ಇಂಡಿಯಾ ಕರ್ನಾಟಕ ಎಂಬ ವಿಭಿನ್ನ ಸ್ಪರ್ಧೆಯ ಅಂತಿಮ ಸುತ್ತು ಇಲ್ಲಿನ ಯಲಹಂಕದಲ್ಲಿ ಆಗಸ್ಟ್‌ 8ರಿಂದ ಆರಂಭವಾಗಿದ್ದು, ೧೦ರವರೆಗೆ ನಡೆಯಲಿದೆ. ಇದು ವಿವಾಹಿತ ಮಹಿಳೆಯರಿಗಾಗಿ ಆಯೋಜಿಸಲಾದ ಸೌಂದರ್ಯ ಸ್ಪರ್ಧೆಯಾಗಿದ್ದು, ಪ್ರತಿಭಾ ಸಂಶೀಮಠ್‌ ನೇತೃತ್ವ ವಹಿಸಿದ್ದಾರೆ.

ವಿಭಿನ್ನ ಸ್ಪರ್ಧೆಯ ಆರಂಭ ಹೇಗೆ?

ಪ್ರತಿಭಾ ಸಂಶೀಮಠ

ಪ್ರತಿಭಾ ಸಂಶೀಮಠ್‌ ಅವರು 2015ನೇ ಸಾಲಿನ ಅಂತಾರಾಷ್ಟ್ರೀಯ ‘ಕ್ಲಾಸಿಕ್ ಮಿಸಸ್ ಏಷಿಯಾ ಇಂಟರ್ನಾಶನಲ್ ಫೋಟೋಜೆನಿಕ್ʼ ಎಂಬ ಸೌಂದರ್ಯ ಸ್ಪರ್ಧೆಯ ವಿಜೇತರಾಗಿದ್ದಾರೆ. ವಿವಾಹಿತ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ವಿಜಯ ಸಾಧಿಸುವ ಮೂಲಕ “ಮಿಸಸ್‌ ಇಂಡಿಯಾ” ಕಿರೀಟ ಗೆದ್ದ ದಕ್ಷಿಣ ಭಾರತದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಪ್ರತಿಭಾ ಪಾತ್ರರಾಗಿದ್ದಾರೆ. ಇವರು ಕರ್ನಾಟಕದವರಾಗಿದ್ದು, ರಾಜ್ಯಕ್ಕೆ ಕೀರ್ತಿ ತಂದವರು.

ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಆಯೋಜನೆ

ವಿವಾಹಿತ ಮಹಿಳೆಯರಿಗಾಗಿ ದಕ್ಷಿಣ ಭಾರತದಲ್ಲಿ ಯಾವುದೇ ರೀತಿಯ ಸೌಂದರ್ಯ ಸ್ಪರ್ಧೆ ಆಯೋಜನೆ ಆಗದಿರುವ ಹಿನ್ನೆಲೆಯಲ್ಲಿ ಪ್ರತಿಭಾ ಸಂಶೀಮಠ್‌ ಅವರು ದಕ್ಷಿಣ ಭಾರತದ ವಿವಾಹಿತ ಮಹಿಳೆಯರಿಗಾಗಿ ʼಮಿಸಸ್‌ ಇಂಡಿಯಾ ಕರ್ನಾಟಕʼ ಎಂಬ ವಿಶಿಷ್ಟವಾದ ಸ್ಪರ್ಧೆಗೆ 2016ರಲ್ಲಿ ಚಾಲನೆ ನೀಡಿದರು. ಇದು ಕನ್ನಡದ ವಿವಾಹಿತ ಮಹಿಳೆಯ‌ರಿಗಾಗಿ ಆಯೋಜಿಸಿದ ಪ್ರಥಮ ಹಾಗೂ ಅತಿ ದೊಡ್ಡ ಸೌಂದರ್ಯ ಸ್ಪರ್ಧೆಯಾಗಿದೆ. ಇದರಲ್ಲಿ‌ ಕರ್ನಾಟಕದ ಮಹಿಳಯರು ಮಾತ್ರವಲ್ಲದೆ, ಇತರ ರಾಜ್ಯದ ಕನ್ನಡಿಗರೂ ಭಾಗವಹಿಸಬಹುದಾಗಿದೆ. ಈ ಸಾಲಿನಲ್ಲಿ ನಡೆಯುತ್ತಿರುವ ʼಮಿಸಸ್‌ ಇಂಡಿಯಾ ಕರ್ನಾಟಕʼ ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್‌ ಮಾಧ್ಯಮ ಸಹಯೋಗವಿದೆ.

ಯಾಕೆ ಈ ಸ್ಪರ್ಧೆ?

ಈ ವೇದಿಕೆಯು ಮಹಿಳೆಯರಿಗೆ ಜೀವನದಲ್ಲಿ ಹೆಚ್ಚು ಸಾಧನೆ ಮಾಡಲು ಸ್ಫೂರ್ತಿ ನೀಡುತ್ತದೆ. ವಯಸ್ಸು ಎಂದರೆ ಕೇವಲ ಸಂಖ್ಯೆ ಎಂದು ಈ ಸ್ಪರ್ಧೆ ನಂಬಿರುತ್ತದೆ. ಹೀಗಾಗಿ ಈ ಸ್ಪರ್ಧೆಯಲ್ಲಿ 60 ವಯಸ್ಸಿನ ಮೇಲ್ಪಟ್ಟ ಮಹಿಳೆಯರೂ ಭಾಗವಹಿಸಬಹುದು. ಅವರಿಗಾಗಿ “ಸೂಪರ್ ಕ್ಲಾಸಿಕ್” ಎಂಬ ವಿಶೇಷ ವರ್ಗವನ್ನು ಮಾಡಲಾಗಿದೆ ಎಂದು ಪ್ರತಿಬಾ ಸಂಶೀಮಠ್‌ ತಿಳಿಸಿದ್ದಾರೆ.

ಪ್ರತಿವರ್ಷವೂ ಈ ಸ್ಪರ್ಧೆಯನ್ನು ವಿನೂತವಾಗಿ ಆಯೋಜಿಸಲಾಗುತ್ತದೆ. ಇದರಿಂದ ರಾಜ್ಯದ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ. ರಿ-ಯೂಸ್, ರಿ-ಸ್ಟೈಲ್, ರಿ-ಸೈಕಲ್ : ಈ 3 ‘ಆರ್’ ಗಳ ಸಿದ್ಧಾಂತವನ್ನು ಈ ಸ್ಪರ್ಧೆಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ ಎಂದು ಪ್ರತಿಭಾ ತಿಳಿಸಿದ್ದಾರೆ.

ಏನಿರಲಿದೆ ಈ ಸ್ಪರ್ಧೆಯಲ್ಲಿ?

ಪೈಜಾಮ ಹಾಗೂ ಇತರ ವಿಭಿನ್ನ ಉಡುಪಗಳನ್ನು ಧರಿಸಿ ಫೋಟೋಶೂಟ್‌ ಮಾಡಿಸಲಾಗುತ್ತದೆ. ಅಲ್ಲದೆ, ಈ ಸ್ಪರ್ಧೆಯಲ್ಲಿ ಗಿಲ್ಲಿ ದಾಂಡು, ಲಗೋರಿ, ಖೋ-ಖೋ ಸೇರಿದಂತೆ ಅನೇಕ ಕ್ರೀಡೆಗಳನ್ನು ಆಡಿಸಲಾಗುತ್ತದೆ. ಈ ಮೂಲಕ ಭಾರತೀಯ ಕ್ರೀಡೆಗಳನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಪ್ರತಿಭಾ ಹೇಳಿದ್ದಾರೆ.

ಈ ವರ್ಷ ಏನಿರಲಿದೆ?

ಈ ಸ್ಪರ್ಧೆ ಒಟ್ಟು ಮೂರು ದಿನಗಳ ಕಾಲ ನಡೆಯಲಿದೆ. ಅಗಸ್ಟ್‌ 8ರಿಂದ ಆರಂಭಗೊಂಡು ಆಗಸ್ಟ್‌ ೧೦ಕ್ಕೆ ಅಂತಿಮ ಸುತ್ತು ನಡೆಯಲಿದೆ. ಈ ಬಾರಿ ಸ್ಪರ್ಧಿಗಳು ಕರ್ನಾಟಕದ ಕೈಮಗ್ಗ ಸೀರೆಗಳನ್ನೇ ಧರಿಸಲಿದ್ದಾರೆ. ಈ ವಿಭಿನ್ನ ಯೋಚನೆಗೆ ಸ್ಫೂರ್ತಿಯಾಗಿದ್ದು, ನನ್ನ ಮಗಳು ಎಂದು ಪ್ರತಿಭಾ ಹೇಳುತ್ತಾರೆ. ಇಳಕಲ್‌ ಸೀರೆ ಖರೀದಿಸುವ ಸಂದರ್ಭದಲ್ಲಿ ರಾಜ್ಯದ ಕೈಮಗ್ಗ ವಸ್ತುಗಳನ್ನು ಪ್ರದರ್ಶಿಸಿ ಅವುಗಳಿಗೆ ಉತ್ತೇಜನ ನೀಡಬೇಕು ಎಂಬ ಯೋಚನೆ ಮೂಡಿತು ಎಂದು ಪ್ರತಿಭಾ ತಿಳಿಸಿದ್ದಾರೆ.

ಇದರಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ. ಅಲ್ಲದೆ, ಮುಂಬೈ ಮತ್ತು ಮಸ್ಕತ್‌ ಪ್ರದೇಶದಿಂದ ಕೂಡ ಸ್ಪರ್ಧಿಗಳು ಆಗಮಿಸಲಿದ್ದು, ಒಟ್ಟು 36 ಸ್ಪರ್ಧಿಗಳಿದ್ದಾರೆ. ಇವರಲ್ಲಿ ಗೃಹಿಣಿಯರೂ ಸೇರಿದಂತೆ ವೈದ್ಯಕೀಯ, ಸಾಫ್ಟ್‌ವೇರ್ ಇಂಜಿನಿಯರಿಂಗ್, ಶಿಕ್ಷಣ ಹೀಗೆ ಎಲ್ಲ‌ ಕ್ಷೇತ್ರಗಳ ಮಹಿಳೆಯರೂ ಭಾಗವಹಿಸುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
5 Comments

5 Comments

  1. Pratibha

    6 August 2022, 11:35 PM at 11:35 pm

    Thanks so much for the much deserved support for our women who have dated to step out of their comfort zone and challenge new ventures..and at the same time maintain and respect our culture

  2. Apoorva

    7 August 2022, 12:13 AM at 12:13 am

    Hats off to Pratibha ma’am for all the hard work and encouraging all womens to bring the change in the society

  3. Mallamma Ganigi

    7 August 2022, 7:18 AM at 7:18 am

    Very detailed article. Thank you

  4. Deepa

    7 August 2022, 2:53 PM at 2:53 pm

    It is a very thoughtful initiative. Good luck to the team and everyone involved in this event.

  5. Akshatha Shet

    7 August 2022, 3:51 PM at 3:51 pm

    Thank you vistaranews

Leave a Reply

Your email address will not be published. Required fields are marked *

ಫ್ಯಾಷನ್

Shimmer Half Shoes Trend: ಎಥ್ನಿಕ್‌ ಲುಕ್‌ ನೀಡುವ ಶಿಮ್ಮರ್‌ ಹಾಫ್‌ ಶೂ ಹವಾ!

ಈ ಸೀಸನ್‌ನಲ್ಲಿ ಮಿನುಗುವ ಶಿಮ್ಮರ್‌ ಹಾಫ್‌ ಶೂಗಳು (Shimmer half shoes trend) ಟ್ರೆಂಡಿಯಾಗಿವೆ. ಎಥ್ನಿಕ್‌ ಲುಕ್‌ ನೀಡುವ ಇವುಗಳು ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಔಟ್‌ಫಿಟ್‌ ಜೊತೆ ಹೇಗೆಲ್ಲಾ ಇವನ್ನು ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಐಡಿಯಾ ನೀಡಿದ್ದಾರೆ.

VISTARANEWS.COM


on

Shimmer half shoes trend
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವೆಡ್ಡಿಂಗ್‌ ಸೀಸನ್‌ನಲ್ಲಿ, ಧರಿಸಿದಾಗ (Shimmer half shoes trend) ಪಾದಗಳನ್ನು ಆಕರ್ಷಕವಾಗಿ ಬಿಂಬಿಸುವಂತಹ ಮಿನುಗುವ ಮಹಿಳೆಯರ ಶಿಮ್ಮರ್‌ ಹಾಫ್‌ ಶೂಗಳು ಟ್ರೆಂಡಿಯಾಗಿವೆ. ಫಾರ್ಮಲ್‌ ಲುಕ್‌ ಜೊತೆಗೆ ಇಂಡೋ-ವೆಸ್ಟರ್ನ್ ಲುಕ್‌ ನೀಡುವ ಇವು ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.

Shimmer half shoe that won the hearts of girls

ಹುಡುಗಿಯರ ಮನ ಗೆದ್ದ ಶಿಮ್ಮರ್‌ ಹಾಫ್‌ ಶೂ

ಸಮಾರಂಭಗಳಲ್ಲಿ ಮಾತ್ರವಲ್ಲ, ಗ್ರ್ಯಾಂಡ್‌ ಫಂಕ್ಷನ್‌ ಹಾಗೂ ಪಾರ್ಟಿಗಳಲ್ಲಿ ಧರಿಸಬಹುದಾದ ಜಗಮಗಿಸುವ ಹಾಫ್‌ ಶೂಗಳು ಹುಡುಗಿಯರ ಮನ ಗೆದ್ದಿವೆ. ಗೌನ್‌ಗಳು, ಲೆಹೆಂಗಾ, ಸಲ್ವಾರ್‌-ಕಮೀಝ್‌ ಸೇರಿದಂತೆ ಗ್ರ್ಯಾಂಡ್‌ ಉಡುಪಿನ ಜೊತೆ ಮ್ಯಾಚ್‌ ಮಾಡಬಹುದಾದ ಇವು ಹೀಲ್ಸ್ ಹಾಗೂ ಹೀಲ್ಸ್ ರಹಿತ ಡಿಸೈನ್‌ನಲ್ಲೂ ಲಭ್ಯ. ಹಾಗಾಗಿ ಇವು ಹೆಚ್ಚು ಬೇಡಿಕೆಯಲ್ಲಿವೆ.

ಯಾವ್ಯಾವ ಡಿಸೈನ್‌ನಲ್ಲಿ ಲಭ್ಯ?

ಸಿಲ್ವರ್‌, ಗೋಲ್ಡನ್‌, ಹಾಫ್‌ ವೈಟ್‌, ಪ್ಲಾಟಿನಂ ಶೇಡ್‌, ಬ್ರೌನ್‌, ರೆಡ್‌, ಸ್ಟೋನ್‌ ಡಿಸೈನ್‌ ಸೇರಿದಂತೆ ನಾನಾ ಶೇಡ್‌ ಹಾಗೂ ವಿನ್ಯಾಸದ ಶಿಮ್ಮರಿಂಗ್‌ ಹಾಫ್‌ ಶೂಗಳು ದೊರೆಯುತ್ತಿವೆ. ಎಥ್ನಿಕ್‌ ಲುಕ್‌ ನೀಡುವ ಶಿಮ್ಮರಿಂಗ್ ಹಾಫ್‌ ಶೂಗಳು ಮಹಿಳೆಯರನ್ನು ಸೆಳೆದರ, ಹೈ ಹೀಲ್ಸ್‌ ಇರುವಂತವು ಹುಡುಗಿಯರನ್ನು ಆಕರ್ಷಿಸುತ್ತಿವೆ. ಕೆಲವು ಜಗಮಗಿಸುವ ಮೆಟಿರಿಯಲ್‌ನ ಪ್ಯಾಚ್‌ ವರ್ಕ್ ಹೊಂದಿರುವಂತವು ಬಂದಿವೆ. ಒಟ್ಟಿನಲ್ಲಿ , ಈ ವೆಡ್ಡಿಂಗ್‌ ಸೀಸನ್‌ಗೆ ಹೊಂದುವಂತಿವೆ.

How can you mix and match?

ಹೇಗೆಲ್ಲಾ ಮಿಕ್ಸ್‌ ಮ್ಯಾಚ್‌ ಮಾಡಬಹುದು?

ಗೌನ್‌ಗಳೊಂದಿಗೆ ಮ್ಯಾಚ್‌ ಮಾಡುವುದು ತೀರಾ ಸುಲಭ. ಆದರೆ, ಇವು ಹೀಲ್ಸ್ ಹೊಂದಿದ ಹಾಫ್‌ ಶೂಗಳಾಗಿರಬೇಕು. ಇನ್ನು ಹೀಲ್ಸ್‌ ಇಲ್ಲದವನ್ನು ಯಾವುದೇ ಎಥ್ನಿಕ್‌ ಲುಕ್‌ ನೀಡುವ ಔಟ್‌ಫಿಟ್‌ನೊಂದಿಗೆ ಧರಿಸಿದರೂ ಒಕೆ. ಸ್ಟೋನ್‌ ಹಾಗೂ ಶೈನಿಂಗ್‌ ಇರುವ ಹಾಫ್‌ ಶೂಗಳಲ್ಲಿ ಗೋಲ್ಡನ್‌ ಕಲರ್‌ನವು ಎಲ್ಲಾ ಬಗೆಯ ಗ್ರ್ಯಾಂಡ್‌ ಉಡುಪುಗಳಿಗೂ ಮ್ಯಾಚ್‌ ಆಗುತ್ತವೆ. ಇತರೇ ವರ್ಣದವಾದಲ್ಲಿ ಅವಕ್ಕೆ ಹೊಂದು ಶೇಡ್‌ನದ್ದಕ್ಕೆ ಮ್ಯಾಚ್‌ ಮಾಡಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Tips for Shimmer Half Shoe Lovers

ಶಿಮ್ಮರ್‌ ಹಾಫ್‌ ಶೂ ಪ್ರಿಯರಿಗೆ ಟಿಪ್ಸ್

  • ಹೀಲ್ಸ್‌ ಇರುವಂತಹ ಹಾಫ್‌ ಶೂ ಆದಲ್ಲಿ ಸರಿಯಾದ ಸೈಜ್‌ನದ್ದೇ ಕೊಳ್ಳಿ. ಲೂಸಾಗಿರಕೂಡದು.
  • ಗೋಲ್ಡನ್‌ ಶೇಡ್‌ನಲ್ಲೂ ನಾಲ್ಕೈದು ಬಗೆಯವು ದೊರೆಯುತ್ತವೆ.
  • ಎಥ್ನಿಕ್‌ ಲುಕ್‌ ಇದ್ದಲ್ಲಿ ಬಹುತೇಕ ಉಡುಪಿಗೆ ಧರಿಸಬಹುದು.
  • ಗೋಲ್ಡನ್‌ ಹಾಗೂ ಸಿಲ್ವರ್‌ ಶೇಡ್‌ನ ಶಿಮ್ಮರ್‌ ಹಾಫ್‌ ಶೂಗಳು ಟ್ರೆಂಡಿಯಾಗಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಡಿಸೈನ್‌ನ ಮುತ್ತಿನ ಮೂಗುತಿಗಳಿವು

Continue Reading

ಫ್ಯಾಷನ್

Mens Velvet Pant Suit: ವಿಂಟರ್‌ ಮೆನ್ಸ್ ಫ್ಯಾಷನ್‌ನಲ್ಲಿ ಹಿಟ್‌ ಆದ ವೆಲ್ವೆಟ್‌ ಪ್ಯಾಂಟ್‌ ಸೂಟ್‌

ಈ ಬಾರಿಯ ವಿಂಟರ್‌ ಮೆನ್ಸ್‌ ಫ್ಯಾಷನ್‌ನಲ್ಲಿ ಬಾಲಿವುಡ್‌ ನಟ ವಿಜಯ್‌ ವರ್ಮಾ ಧರಿಸಿದ್ದ ವೆಲ್ವೆಟ್‌ ಪ್ಯಾಂಟ್‌ ಸೂಟ್‌ (Mens Velvet Pant Suit) ಈಗ ಟ್ರೆಂಡಿಯಾಗಿದೆ. ಈ ಔಟ್‌ಫಿಟ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳುತ್ತಾರೆ? ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Mens Velvet Pant Suit
ಚಿತ್ರಗಳು: ವಿಜಯ್‌ ವರ್ಮಾ , ನಟ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್‌ ಮೆನ್ಸ್‌ ಫ್ಯಾಷನ್‌ನಲ್ಲಿ ನಟ ವಿಜಯ್‌ ವರ್ಮಾ ಧರಿಸಿದ್ದ ವೆಲ್ವೆಟ್‌ ಪ್ಯಾಂಟ್‌ ಸೂಟ್‌ (Mens Velvet Pant Suit) ಈಗ ಟ್ರೆಂಡಿಯಾಗಿದೆ. ಪುರುಷರೂ ಕೂಡ ವೆಲ್ವೆಟ್‌ ಸೂಟ್‌ ಧರಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಫಾರ್ಮಲ್ಸ್ ಸೂಟ್‌ನಲ್ಲಿದ್ದ ಈ ಸ್ಟೈಲಿಂಗ್‌ ಇದೀಗ ನಮ್ಮಲ್ಲೂ ಸಾಮಾನ್ಯವಾಗತೊಡಗಿದೆ. ಸ್ಟಾರ್‌ಗಳಿಗೆ ಸೀಮಿತವಾಗಿದ್ದ ವೆಲ್ವೆಟ್‌ ಪ್ಯಾಂಟ್‌ ಸೂಟ್‌ ಇದೀಗ ಸಾಮಾನ್ಯರನ್ನು ಆವರಿಸಿಕೊಳ್ಳತೊಡಗಿದೆ. ಇನ್ನು ಮನೀಶ್‌ ಮಲ್ಹೋತ್ರಾ ಲೆಬೆಲ್‌ನ ವೆಲ್ವೆಟ್‌ ಪ್ಯಾಂಟ್‌ ಸೂಟನ್ನು ನಟ ವಿಜಯ್‌ ವರ್ಮಾ ಧರಿಸಿದ ನಂತರ, ಈ ಔಟ್‌ಫಿಟ್‌ ಫ್ಯಾಷನ್‌ ಪ್ರಿಯ ಯುವಕರನ್ನು ಆಕರ್ಷಿಸಿದೆ.

What do fashion critics say about Men Velvet Pant Suit

ಫ್ಯಾಷನ್‌ ವಿಮರ್ಶಕರು ಹೇಳುವುದೇನು?

ಬಾಲಿವುಡ್‌ ನಟ ವಿಜಯ್‌ ವರ್ಮಾ ಅವಾರ್ಡ್ ಸಮಾರಂಭಕ್ಕೆಂದು ಧರಿಸಿದ್ದ ಇಂಕ್‌ ಬ್ಲ್ಯೂ ವೆಲ್ವೆಟ್‌ ಪ್ಯಾಂಟ್‌ ಸೂಟ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದೇ ತಡ, ಫ್ಯಾಷನ್‌ ಲೋಕವು ಮತ್ತಷ್ಟು ಇಂತಹ ಸೂಟ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಪ್ರತಿಷ್ಠಿತ ಬ್ರಾಂಡ್‌ಗಳಲ್ಲಿ ಮಾತ್ರ ಲಭ್ಯವಿದ್ದ ಈ ಶೈಲಿಯ ವೆಲ್ವೆಟ್‌ ಸೂಟ್‌ಗಳನ್ನು ಇದೀಗ ಲೋಕಲ್‌ ಮೆನ್ಸ್ವೇರ್‌ ಬೋಟಿಕ್‌ಗಳು ಹಾಗೂ ಫ್ಯಾಷನ್‌ವೇರ್‌ ಬ್ರಾಂಡ್‌ಗಳು ರಿಪ್ಲಿಕಾ ಸೂಟ್‌ಗಳನ್ನು ಸಿದ್ಧಪಡಿಸಲು ಮುಂದಾಗಿವೆ. ಒಟ್ಟಿನಲ್ಲಿ, ಈ ವಿಂಟರ್‌ ಸೀಸನ್‌ಗೆ ಮ್ಯಾಚ್‌ ಆಗುವ ಹಾಗೂ ಬೆಚ್ಚಗಿಡುವ ಈ ವೆಲ್ವೆಟ್‌ ಪ್ಯಾಂಟ್‌ ಸೂಟ್‌ಗಳು ಸದ್ಯ ಟ್ರೆಂಡ್‌ ಲಿಸ್ಟ್‌ನಲ್ಲಿವೆ.

Silk velvet pant suit

ಸಿಲ್ಕ್‌ ವೆಲ್ವೆಟ್‌ ಪ್ಯಾಂಟ್‌ ಸೂಟ್‌

ಅಂದಹಾಗೆ, ಅತ್ಯುತ್ತಮ ವೆಲ್ವೆಟ್‌ ಸಿಲ್ಕ್ ಫ್ಯಾಬ್ರಿಕ್‌ ಕೊಂಚ ದುಬಾರಿ. ಇನ್ನು ಇಂಟರ್‌ನ್ಯಾಷನಲ್‌ ಬ್ರಾಂಡ್‌ಗಳು ತಮ್ಮ ಆನ್‌ಲೈನ್‌ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ವೆಲ್ವೆಟ್‌ ಪ್ಯಾಂಟ್‌ ಸೂಟ್‌ಗಳು ಲಕ್ಷಗಟ್ಟಲೆ ಬೆಲೆಬಾಳುತ್ತವೆ. ಇನ್ನು ಇದಕ್ಕೆ ತದ್ವಿರುದ್ಧ ಎಂಬಂತೆ, ಸಾಮಾನ್ಯ ಟೈಲರ್‌ ಹಾಗೂ ನುರಿತ ಮಾಸ್ಟರ್‌ಗಳು ಇವನ್ನು ವೆಡ್ಡಿಂಗ್‌ ರಿಸಪ್ಷನ್‌ಗಳಲ್ಲಿ ಮದುಮಗ ಧರಿಸಲು ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಸಿದ್ಧಪಡಿಸಿಕೊಡುತ್ತಾರೆ. ಬ್ರಾಂಡ್‌ ಹೆಸರಿರುವುದಿಲ್ಲ ಅಷ್ಟೇ ವ್ಯತ್ಯಾಸ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

All you need to know about men's velvet pant suit

ಮೆನ್ಸ್ ವೆಲ್ವೆಟ್‌ ಪ್ಯಾಂಟ್‌ ಸೂಟ್‌ ಬಗ್ಗೆ ತಿಳಿದಿರಬೇಕಾದದ್ದು

  • ಶೇಡ್ಸ್ ಹೊಂದುವಂಥದ್ದನ್ನು ಮಾತ್ರ ಆಯ್ಕೆ ಮಾಡಿ.
  • ಸ್ಲಿಮ್‌ ಫಿಟ್‌ ಆದಲ್ಲಿ ಪರ್ಫೆಕ್ಟ್ ಫಿಟ್‌ ಆಗಿ ಕೂರುತ್ತದೆ.
  • ಮದುವೆಗಾದಲ್ಲಿ ಎಕ್ಸ್‌ಟ್ರಾ ವರ್ಕ್ ಇರುವಂತದ್ದನ್ನು ಚೂಸ್‌ ಮಾಡಿ.
  • ಈ ಸೂಟ್‌ ಕಚೇರಿಗೆ ಧರಿಸಲು ಹೊಂದದು.
  • ಯಾವುದೇ ಸಮಾರಂಭಗಳಲ್ಲೂ ಸೂಟ್‌ ಆಗುತ್ತದೆ.
  • ಡಿಸೈನರ್‌ ಬಟನ್‌ ಇರುವಂತವು ಮತ್ತಷ್ಟು ಮೆರಗು ನೀಡುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಡಿಸೈನ್‌ನ ಮುತ್ತಿನ ಮೂಗುತಿಗಳಿವು

Continue Reading

ದೇಶ

Rohit Bal: ಜನಪ್ರಿಯ ಫ್ಯಾಷನ್‌ ಡಿಸೈನರ್‌ ರೋಹಿತ್‌ ಬಾಲ್‌ ಆರೋಗ್ಯ ಸ್ಥಿತಿ ಚಿಂತಾಜನಕ

Rohit Bal: ಭಾರತದ ಜನಪ್ರಿಯ ಫ್ಯಾಷನ್‌ ಡಿಸೈನರ್‌ ರೋಹಿತ್‌ ಬಾಲ್‌ ಅವರ ಸ್ಥಿತಿ ಚಿಂತಾಜನಕವಾಗಿದೆ. ವಿಪರೀತ ಮದ್ಯದ ಸೇವನೆಯಿಂದ ಅವರ ಆರೋಗ್ಯ ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

VISTARANEWS.COM


on

rohith bal
Koo

ನವದೆಹಲಿ: ಜನಪ್ರಿಯ ಫ್ಯಾಷನ್‌ ಡಿಸೈನರ್‌ (Fashion Designer) ರೋಹಿತ್‌ ಬಾಲ್‌ (Rohit Bal) ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ಗುರುಗ್ರಾಮದ ಮೇದಾಂತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮೂಲಗಳು ತಿಳಿಸಿವೆ.

ಶ್ರೀನಗರ ಮೂಲದ ರೋಹಿತ್‌ 1986ರಲ್ಲಿ ಫ್ಯಾಷನ್‌ ಡಿಸೈನರ್‌ ಆಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ದೇಶದ ಜನಪ್ರಿಯ ಫ್ಯಾಷನ್‌ ಡಿಸೈನರ್‌ಗಳ ಪೈಕಿ ಒಬ್ಬರೆನಿಸಿಕೊಂಡರು. 62ರ ಹರೆಯದ ರೋಹಿತ್‌ ವಿಪರೀತ ಮದ್ಯ ಸೇವಿಸುತ್ತಿದ್ದುದೇ ಆರೋಗ್ಯ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ತಕ್ಷಣ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹಿಂದೆಯೂ ರೋಹಿತ್‌ ಅವರಿಗೆ ಅನಾರೋಗ್ಯ ಕಾಡಿತ್ತು. 2010ರ ಫೆಬ್ರವರಿಯಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಆಗ ತುರ್ತು ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ರೋಹಿತ್‌ 2006ರಲ್ಲಿ ಇಂಡಿಯನ್ ಫ್ಯಾಷನ್ ಅವಾರ್ಡ್ಸ್ ಮತ್ತು 2001ರಲ್ಲಿ ಕಿಂಗ್‌ ಫಿಷರ್‌ನ ಫ್ಯಾಷನ್ ಅಚೀವ್‌ಮೆಂಟ್‌ ಪ್ರಶಸ್ತಿಗಳ ಪೈಕಿ ‘ಡಿಸೈನರ್ ಆಫ್ ದಿ ಇಯರ್’ ಅವಾರ್ಡ್‌ ಪಡೆದುಕೊಂಡಿದ್ದರು. 2012ರಲ್ಲಿ ಅವರನ್ನು ಲ್ಯಾಕ್ಮೆ ಗ್ರ್ಯಾಂಡ್ ಫಿನಾಲೆ ಡಿಸೈನರ್‌ಗೆ ಹೆಸರಿಸಲಾಗಿತ್ತು. 2020ರಲ್ಲಿ ರಜನಿಗಂಧ ಪರ್ಲ್ಸ್ ಇಂಡಿಯಾ ಫ್ಯಾಷನ್ ಪ್ರಶಸ್ತಿಗಳ ತೀರ್ಪುಗಾರರು “ದೇಶದ ಐಕಾನಿಕ್ ಫ್ಯಾಷನ್ ಡಿಸೈನರ್” ಎಂದು ಗುರುತಿದ್ದರು.

“ರೋಹಿತ್‌ ತುಂಬಾ ಕೆಟ್ಟ ಸ್ಥಿತಿಯಲ್ಲಿದ್ದಾರೆ. ವೈದ್ಯರು ಅವರ ದೇಹದಿಂದ ಆಲ್ಕೋಹಾಲ್ ಮತ್ತು ನಿದ್ರೆ ಮಾತ್ರೆಗಳನ್ನು ಹೊರಹಾಕಿದ್ದಾರೆʼʼ ಎಂದು ರೋಹಿತ್ ಬಾಲ್ ಅವರ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಹಿನ್ನಲೆ

ಮೇ 8, 1961ರಂದು ಜನಿಸಿದ ರೋಹಿತ್ ಬಾಲ್ 1986ರಲ್ಲಿ ಸಹೋದರನೊಂದಿಗೆ ಆರ್ಕಿಡ್ ಓವರ್ಸೀ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1990ರಲ್ಲಿ ತಮ್ಮ ಸ್ವತಂತ್ರ ಬಟ್ಟೆಗಳ ಸಂಗ್ರಹವನ್ನು ಪ್ರಾರಂಭಿಸಿದರು. ಸೇಂಟ್ ಸ್ಟೀಫನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಅವರು ದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ರೂಟ್‌ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಅಧ್ಯಯನ ನಡೆಸಿದ್ದರು.

ರೋಹಿತ್ ಬಾಲ್ ಅಂತಾರಾಷ್ಟ್ರೀಯ ಗ್ರಾಹಕರನ್ನು ಹೊಂದಿದ್ದಾರೆ. ಈ ಪೈಕಿ ಸಿಂಡಿ ಕ್ರಾಫೋರ್ಡ್, ಪಮೇಲಾ ಆಂಡರ್ಸನ್ ಮತ್ತು ಉಮಾ ಥುರ್ಮನ್ ಸೇರಿದಂತೆ ವಿವಿಧ ಭಾರತೀಯ ಸೆಲೆಬ್ರಿಟಿಗಳೂ ಸೇರಿದ್ದಾರೆ. ರೋಹಿತ್ ಬಾಲ್ ಒಮೆಗಾ ಗಡಿಯಾರಗಳ ರಾಯಭಾರಿಯೂ ಆಗಿದ್ದಾರೆ. ಅಲ್ಲದೆ ಭಾರತದ ಜನಪ್ರಿಯ ಗೇಮ್‌ ಶೋ ಕೌನ್‌ ಬನೇಗಾ ಕರೋಡ್‌ಪತಿಗಾಗಿ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದರು.

ಇದನ್ನೂ ಓದಿ: Supreme Court: ಇಡಿ ಬಂಧಿಸಿದ ತಮಿಳುನಾಡು ಸಚಿವರಿಗೆ ವೈದ್ಯಕೀಯ ಜಾಮೀನು ನೀಡದ ಸುಪ್ರೀಂ ಕೋರ್ಟ್‌

ಇತಿಹಾಸ, ಫ್ಯಾಂಟಸಿ ಮತ್ತು ಜಾನಪದವನ್ನು ಬಳಸಿಕೊಂಡು ರೋಹಿತ್ ಬಾಲ್ ವಿವಿಧ ಬಟ್ಟೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಅವರು ಫ್ಯಾಷನ್ ಪ್ರಪಂಚದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಅವರು ನಿರಂತರ ಅಧ್ಯಯನ ನಡೆಸುತ್ತಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ. ರೋಹಿತ್ ಬಾಲ್ ಬಟ್ಟೆ ಮಾತ್ರವಲ್ಲ ಆಭರಣ ವಿನ್ಯಾಸ ಪ್ರಪಂಚಕ್ಕೂ ಕಾಲಿಟ್ಟಿದ್ದರು. ಅವರು ಆಭರಣದಲ್ಲಿ ಕಮಲ ಮತ್ತು ನವಿಲಿನ ಆಕಾರಗಳ ಬಳಕೆಯನ್ನು ಜನಪ್ರಿಯಗೊಳಿಸಿದ್ದಾರೆ. ಜತೆಗೆ ಆಗಾಗ್ಗೆ ವೆಲ್ವೆಟ್ ಮತ್ತು ಬ್ರೊಕೇಡ್‌ನಂತಹ ದುಬಾರಿ ಬಟ್ಟೆಗಳನ್ನೂ ಬಳಸುತ್ತಿದ್ದರು. ಅವರು ಲಂಡನ್, ಪ್ಯಾರಿಸ್, ನ್ಯೂಯಾರ್ಕ್, ಸಿಂಗಾಪುರ್, ಮಾಸ್ಕೋ, ಜಕಾರ್ತಾ, ಕೊಲಂಬೊ, ಸಾವೊ ಪಾಲೊ, ಮ್ಯೂನಿಚ್, ಜಿನೀವಾ ಮತ್ತು ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಫ್ಯಾಷನ್ ಶೋಗಳನ್ನು ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಫ್ಯಾಷನ್

Wedding Jewel Fashion: ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಡಿಸೈನ್‌ನ ಮುತ್ತಿನ ಮೂಗುತಿಗಳಿವು

ಈ ಸೀಸನ್‌ನ ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ನಲ್ಲಿ (Wedding Jewel Fashion) ಗ್ರ್ಯಾಂಡ್ ಲುಕ್ ನೀಡುವ ಮುತ್ತಿನ ಮೂಗುತಿಗಳು ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಇದೀಗ ಪ್ರಚಲಿತದಲ್ಲಿವೆ. ಯಾವ ಆಕಾರದ ಮುಖದವರಿಗೆ ಯಾವುದು ಮ್ಯಾಚ್ ಆಗುತ್ತದೆ ಎಂದು ಜ್ಯುವೆಲ್ ಸ್ಟೈಲಿಸ್ಟ್‌ಗಳು ವಿವರದೊಂದಿಗೆ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Wedding Jewel Fashion
ಚಿತ್ರಕೃಪೆ: ಪಿಕ್ಸೆಲ್
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ವೆಡ್ಡಿಂಗ್ ಗ್ರ್ಯಾಂಡ್ ಜ್ಯುವೆಲ್ (Wedding Jewel Fashion) ಫ್ಯಾಷನ್‌ನಲ್ಲಿ ಮುತ್ತಿನ ಮೂಗುತಿಗಳು ಟಾಪ್ ಲಿಸ್ಟ್‌ನಲ್ಲಿವೆ. ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ಗ್ರ್ಯಾಂಡ್ ಲುಕ್ ಜೊತೆಗೆ ರಾಯಲ್ ಲುಕ್ ನೀಡುತ್ತವೆ. ಬ್ರೈಡಲ್ ಜ್ಯುವೆಲ್‌ನಲ್ಲಿ ಮಾತ್ರವಲ್ಲ, ಗ್ರ್ಯಾಂಡ್ ಲುಕ್ ಬಯಸುವ ಯುವತಿಯರ ಮುಖವನ್ನು ಸಿಂಗರಿಸುತ್ತಿವೆ. ಹಾಫ್ ವೈಟ್, ಕ್ರೀಮ್, ಮಿಲ್ಕಿ ವೈಟ್ ಮುತ್ತಿನ ಮೂಗುತಿಗಳು ಚಾಲ್ತಿಯಲ್ಲಿವೆ.

Zaveri pearl earrings

ಜವೇರಿ ಪರ್ಲ್ ಮೂಗುತಿಗಳು

ಇದೀಗ ಗ್ರ್ಯಾಂಡ್ ಲುಕ್ ನೀಡುವ ಪರ್ಲ್ ಜರ್ಕೋನಿ ವೆಡ್ಡಿಂಗ್ ಕಲೆಕ್ಷನ್‌ಗಳು ಇದೀಗ ಸಖತ್ ಟ್ರೆಂಡಿಯಾಗಿವೆ. ತಮ್ಮ ಸಂಪ್ರದಾಯದ ರಿವಾಜಿನಲ್ಲಿ ಇಂತಹ ಮೂಗುತಿಗಳನ್ನು ಧರಿಸುವ ಪರಿಪಾಠ ಇಲ್ಲದಿದ್ದರೂ ಕೂಡ ಫೋಟೋಶೂಟ್ ಹಾಗೂ ಗ್ರ್ಯಾಂಡ್ ಲುಕ್ಗಾಗಿ ಇಂತವನ್ನು ಧರಿಸುವುದು ಹೆಚ್ಚಾಗಿದೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇವು ಮುಖದಲ್ಲಿ ಇವು ಎದ್ದು ಕಾಣುತ್ತವೆ.

Pearl nose hoop ring

ಪರ್ಲ್ ನೋಸ್ ಹೂಪ್ ರಿಂಗ್

ಪುಟ್ಟ ರಿಂಗ್‌ನಲ್ಲಿ ಮುತ್ತಿನ ಎಳೆ ಪೊಣಿಸಿದಂತೆ ಕಾಣುವ ಇವು ತೆಳುವಾದ ಬಂಗಾರದ ತಂತಿಯಲ್ಲಿ ಹೂಪ್ನಂತೆ ಸಿದ್ಧಪಡಿಸಲಾಗಿರುತ್ತದೆ. ಮೈಕ್ರೋ ಪರ್ಲ್ ಅಂದರೆ. ತೀರಾ ಚಿಕ್ಕದಾದ ಸೈಝಿನ ಮುತ್ತುಗಳ ನೋಸ್ ಹೂಪ್ ರಿಂಗ್ ಮುತ್ತಿನ ಬ್ರೈಡಲ್ ಸೆಟ್‌ಗೆ ಮ್ಯಾಚ್ ಆಗುವಂತೆ ಧರಿಸಲಾಗುತ್ತದೆ.

ಪರ್ಲ್ ಸ್ಟಡ್ ಮೂಗುತಿ

ಸಿಂಗಲ್ ಪರ್ಲ್, ಸ್ಟಾರ್ ಶೇಪ್‌ನ ಪರ್ಲ್ ಮೂಗುತಿ ಹೀಗೆ ನಾನಾ ಸೈಜ್‌ ಹಾಗೂ ಆಕಾರವಿರುವ ಸ್ಟಡ್ ಪರ್ಲ್ ಮೂಗುತಿಗಳು ಸಿಂಪಲ್ ಲುಕ್ ಜೊತೆಗೆ ಮುಖವನ್ನು ಹೈಲೈಟ್ ಮಾಡುತ್ತವೆ. ಇವು ಬಂಗಾರೇತರ ಮೆಟಲ್‌ಗಳಲ್ಲೂ ಇವು ಪ್ರಚಲಿತದಲ್ಲಿವೆ.

What is suitable for whom?

ಯಾರಿಗೆ ಯಾವುದು ಸೂಕ್ತ?

  • ಉದ್ದ ಮೂಗು ಹೊಂದಿರುವವರಿಗೆ ಹೂಪ್ ಪರ್ಲ್ ಮೂಗುತಿಗಳು ಹೊಂದುತ್ತವೆ.
  • ಅಗಲ ಮೂಗಿರುವವರಿಗೆ ಹೂಪ್ ಅಥವಾ ರಿಂಗ್ ಶೈಲಿಯ ಪರ್ಲ್ ಮೂಗುತಿಗಳು ಮ್ಯಾಚ್ ಆಗುವುದಿಲ್ಲ.
  • ಸ್ಟಡ್ ಪರ್ಲ್ ಮೂಗುತಿಗಳು ಬಹುತೇಕ ಎಲ್ಲಾ ಆಕಾರದ ಮುಖಕ್ಕೆ ಹೊಂದುತ್ತವೆ.
  • ಅಗಲವಾದ ಪರ್ಲ್ ಮೂಗುತಿಗಳು ಅಗಲವಾದ ಮುಖಕ್ಕೆ ಓಕೆ.
  • ಪುಟ್ಟ ಮುಖದವರಿಗೆ ಟೈನಿ ಪರ್ಲ್ ಮೂಗುತಿ ಬೆಸ್ಟ್.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Star Saree Fashion: ಹಾಫ್‌ & ಹಾಫ್‌ ಸೀರೆಯ ರಿ ಎಂಟ್ರಿಗೆ ನಾಂದಿ ಹಾಡಿದ ಸಾರಾ ಅಲಿ ಖಾನ್‌

Continue Reading
Advertisement
mantralaya mutt
ಕರ್ನಾಟಕ20 mins ago

ಮಂತ್ರಾಲಯ ಮಠಕ್ಕೆ ಭಕ್ತರೊಬ್ಬರಿಂದ ಹೆಲಿಕಾಪ್ಟರ್‌ ಕೊಡುಗೆ

Uttarakhand CM announces rs 1 lakh rupees to trapped labourers Who rescued after 17 days
ದೇಶ1 hour ago

ಬದುಕುಳಿದು ಬಂದ ಕಾರ್ಮಿಕರಿಗೆ 1 ಲಕ್ಷ ಪರಿಹಾರ ಎಂದ ಉತ್ತರಾಖಂಡ ಸಿಎಂ ಧಾಮಿ

Maxwell
ಕ್ರಿಕೆಟ್1 hour ago

Ind vs Aus : ಮ್ಯಾಕ್ಸ್​ವೆಲ್​ ಸ್ಫೋಟಕ ಶತಕ; 3ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು

Siddaramaiah
ಕರ್ನಾಟಕ1 hour ago

ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಸಿದ್ದರಾಮಯ್ಯ ಧನ್ಯವಾದ

Uttarkashi Tunnel Rescue and Makeshift hospital
ದೇಶ2 hours ago

ಸುರಂಗದಿಂದ 41 ಕಾರ್ಮಿಕರ ರಕ್ಷಣೆ; ಮುಂದೇನಾಗುತ್ತದೆ ಎಂಬುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Top 10 news
ಕರ್ನಾಟಕ2 hours ago

VISTARA TOP 10 NEWS: ಸುರಂಗದಲ್ಲಿ ಸಿಲುಕಿದ್ದ ಎಲ್ಲ ಕಾರ್ಮಿಕರ ರಕ್ಷಣೆ, ಮಕ್ಕಳ ಮಾರಾಟ ಬೃಹತ್​ ಜಾಲ ಪತ್ತೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Uttarakhand Tunnel Collapse
EXPLAINER2 hours ago

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

Uttarkashi Tunnel rescue success makes us emotional says PM Narendra Modi
ದೇಶ3 hours ago

ಕಾರ್ಮಿಕರ ರಕ್ಷಣೆಯ ಯಶಸ್ಸು ನಮ್ಮನ್ನೆಲ್ಲ ಭಾವುಕರನ್ನಾಗಿಸಿದೆ ಎಂದ ಪ್ರಧಾನಿ ಮೋದಿ

Ruturaj Gaikwad
ಕ್ರಿಕೆಟ್3 hours ago

Ruturaj Gaikwad : ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ ಋತುರಾಜ್​

Child trade in Bangalore
ಕರ್ನಾಟಕ3 hours ago

Child trade : IVFಗೆ ಗಾರ್ಮೆಂಟ್ಸ್‌ ಯುವತಿಯರ ಅಂಡಾಣು!; ಮಕ್ಕಳ ಮಾರಾಟ ಗ್ಯಾಂಗ್‌ ಕರಾಮತ್ತು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ19 hours ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ1 day ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ1 day ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ2 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ2 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

BY Vijayendra and HD Kumarswamy
ಕರ್ನಾಟಕ2 days ago

BJP JDS Alliance: ಎಚ್‌ಡಿಕೆ-ವಿಜಯೇಂದ್ರ ಭೇಟಿ; 28ಕ್ಕೆ 28 ಸ್ಥಾನ ಗೆಲ್ಲುವ ಪಣ!

ಟ್ರೆಂಡಿಂಗ್‌