Krishna Janmastami: ಕೃಷ್ಣ ಜನ್ಮಾಷ್ಟಮಿ ಸೆಲೆಬ್ರೇಷನ್‌ಗೆ 5 ಬಗೆಯ ಆಕರ್ಷಕ ಅಲಂಕಾರ - Vistara News

ಫ್ಯಾಷನ್

Krishna Janmastami: ಕೃಷ್ಣ ಜನ್ಮಾಷ್ಟಮಿ ಸೆಲೆಬ್ರೇಷನ್‌ಗೆ 5 ಬಗೆಯ ಆಕರ್ಷಕ ಅಲಂಕಾರ

ಕೃಷ್ಣ ಜನ್ಮಾಷ್ಟಮಿಯ (Krishna Janmastami) ಅಲಂಕಾರಕ್ಕೆ ಈಗಾಗಲೇ ಮಾರುಕಟ್ಟೆಯಲ್ಲಿ ನಾನಾ ಬಗೆಯ ವೆರೈಟಿ ಡೆಕೋರೇಟಿವ್‌ ಸಾಮಗ್ರಿಗಳು ಕಾಲಿಟ್ಟಿದ್ದು, ಅವುಗಳನ್ನು ಬಳಸಿಕೊಂಡು 5 ಬಗೆಯ ಆಕರ್ಷಕ ಅಲಂಕಾರವನ್ನು (Krishna Janmastami Decoration) ಮಾಡಬಹುದು ಎನ್ನುತ್ತಾರೆ ಎಕ್ಸ್‌ಪಟ್ರ್ಸ್. ಈ ಬಗ್ಗೆ ಸಂಕ್ಷೀಪ್ತವಾಗಿ ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Krishna Janmastami Decoration
ಚಿತ್ರಗಳು : ಮಿಂಚು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗೋಕುಲಾಷ್ಟಮಿ (Krishna Janmastami) ಹಬ್ಬದ ಸಂಭ್ರಮ ಹೆಚ್ಚಿಸಲು ಮಾರುಕಟ್ಟೆಗೆ ನಾನಾ ಬಗೆಯ ಅಲಂಕಾರಿಕ ಸಾಮಗ್ರಿಗಳು ಕಾಲಿಟ್ಟಿದ್ದು, ಅವುಗಳನ್ನು ಬಳಸಿಕೊಂಡು ಹೇಗೆಲ್ಲಾ ಆಕರ್ಷಕವಾಗಿ ಅಂದವಾಗಿ ಅಲಂಕರಿಸಬಹುದು (Krishna Janmastami Decoration) ಎಂಬುದರ ಬಗ್ಗೆ ಎಕ್ಸ್‌ಪರ್ಟ್ ರಮಣಿ ಅಯ್ಯಂಗಾರ್‌ ಇಲ್ಲಿ ತಿಳಿಸಿದ್ದಾರೆ.

Decoration of Muddu Krishna in Mini Jokali

ಮಿನಿ ಜೋಕಾಲಿಯಲ್ಲಿ ಮುದ್ದು ಕೃಷ್ಣನ ಅಲಂಕಾರ

ಇಂದು ಮಾರುಕಟ್ಟೆಯಲ್ಲಿ ನಾನಾ ಬಗೆಯ ಹಲವಾರು ಸೈಝಿನ ಮುದ್ದು ಕೃಷ್ಣನ ಮಿನಿ ಜೋಕಾಲಿಗಳು ದೊರೆಯುತ್ತಿವೆ. ಇದಕ್ಕೆ ಹೊಂದುವಂತೆ ಪುಟ್ಟದಾದ ಕೃಷ್ಣನ ಉತ್ಸವ ಮೂರ್ತಿಯನ್ನು ಆಯ್ಕೆ ಮಾಡಿ, ಒಳಗೆ ಕುಳ್ಳಿರಿಸಿ ಅಥವಾ ಮಲಗಿಸಿ ಅಲಂಕರಿಸಿದಾರಾಯಿತು. ನೋಡಲು ಮಗುವಿನಂತೆ ಅತ್ಯಾಕರ್ಷಕವಾಗಿ ಕಾಣುತ್ತದೆ. ಸುತ್ತಲೂ ಹೂವುಗಳ ರಂಗೋಲಿ ಹಾಗೂ ದೀಪಗಳಿಂದ ಸಿಂಗರಿಸಿದಲ್ಲಿ ನೋಡಲು ಮತ್ತಷ್ಟು ಚೆನ್ನಾಗಿ ಕಾಣುತ್ತದೆ.

ನವಿಲುಗರಿ ಆರ್ಟ್

ಮನೆಯಲ್ಲಿ ವಾಝ್‌ನಲ್ಲಿ ನವಿಲುಗರಿ ಸಿಂಗರಿಸಿಟ್ಟಿದ್ದಲ್ಲಿ ಅದನ್ನು ಕೃಷ್ಣನ ಅಲಂಕಾರಕ್ಕೆ ಬಳಸಬಹುದು. ಅಲ್ಲದೇ, ಮಾರುಕಟ್ಟೆಯಲ್ಲಿ ನಾನಾ ಬಗೆಯ ನವಿಲುಗರಿಯ ಆರ್ಟಿಸ್ಟಿಕ್‌ ಡೆಕೋರೇಟಿವ್‌ ಐಟಂಗಳು ದೊರೆಯುತ್ತವೆ. ಅವನ್ನು ಬಳಸಿ, ಕೃಷ್ಣನ ಮೂರ್ತಿಯ ಸುತ್ತಲೂ ಅಲಂಕರಿಸಿದರಾಯಿತು. ಇದು ನೋಡಲು ಟ್ರೆಡಿಷನಲ್‌ ಲುಕ್‌ ನೀಡುತ್ತದೆ.

Butter decoration in a small pot

ಪುಟ್ಟ ಮಡಿಕೆಯಲ್ಲಿ ಬೆಣ್ಣೆ ಅಲಂಕಾರ

ಇದೀಗ ಮಾರುಕಟ್ಟೆಯಲ್ಲಿ ನಾನಾ ಬಗೆಯ ಅಲಂಕಾರಿಕ ಸಾಮಗ್ರಿಗಳಲ್ಲಿ ಬೆಣ್ಣೆ ತುಂಬಿರುವಂತೆ ಕಾಣುವ ರೆಡಿಮೇಡ್‌ ಬೆಣ್ಣೆ ತುಂಬಿದಂತೆ ಕಾಣುವ ಮಡಿಕೆಗಳು ಅಥವಾ ಮಟ್ಕಾಗಳು ದೊರೆಯುತ್ತವೆ. ನಿಮಗೆ ಬೇಕಾದ ಸೈಝಿನ ಮಟ್ಕಾಗಳನ್ನು ಆಯ್ಕೆ ಮಾಡಿ, ಕೃಷ್ಣನನ್ನು ಇರಿಸಿರುವ ಜಾಗದ ಸುತ್ತಾ ಮುತ್ತಾ ಇಲ್ಲವೇ ಕಾರ್ನರ್‌ನಲ್ಲಿ ಅಲಂಕರಿಸಬಹುದು. ಇಲ್ಲವೇ ಕೃಷ್ಣನ ಬೊಂಬೆಯ ಬಳಿಯೂ ಇರಿಸಬಹುದು. ಮಿನಿ ಸೈಝ್‌ನದ್ದಾದಲ್ಲಿ ಓವಲ್‌ ಶೇಪ್‌ನಲ್ಲಿ ಸುತ್ತಲೂ ಇರಿಸಬಹುದು.

ಬೆಣ್ಣೆ ಕೃಷ್ಣನ ಹೆಜ್ಜೆಯ ಗುರುತು

ಶ್ವೇತ ವರ್ಣ, ಕೆಂಪು, ಆರೆಂಜ್‌ ಹೀಗೆ ನಾನಾ ವರ್ಣಗಳಲ್ಲಿ ಅದರಲ್ಲೂ ಪರ್ಲ್, ಗೋಲ್ಡನ್‌ ಬೀಡ್ಸ್‌ನಲ್ಲಿ ಸಿದ್ಧಪಡಿಸಿರುವ ಕೃಷ್ಣ ಹೆಜ್ಜೆಯಂತೆ ಕಾಣುವ ಫೂಟ್‌ ಸ್ಟಿಕ್ಕರ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ. ನಿಮಗೆ ಅಗತ್ಯವಿರುವಷ್ಟು ಕೊಂಡು ತಂದು ಇವುಗಳನ್ನು ಬಾಗಿಲಿನಿಂದ ಕೃಷ್ಣನ ಅಲಂಕಾರ ಮಾಡಿರುವ ಕಡೆಯವರೆಗೂ ಹೂವಿನೊಂದಿಗೆ ಸಿಂಗರಿಸಬಹುದು.

Decorate according to the theme

ಥೀಮ್‌ಗೆ ತಕ್ಕಂತೆ ಅಲಂಕಾರ

ಥೀಮ್‌ಗೆ ತಕ್ಕಂತೆಯೂ ಅಲಂಕಾರ ಮಾಡಬಹುದು. ಗೋವಿನೊಂದಿಗೆ ಇರುವ ಬಾಲ ಕೃಷ್ಣ, ಗೋಪಿಕೆಯರೊಂದಿಗೆ ಇರುವ ಗೋಪಾಲ, ಬಾಲಕೃಷ್ಣ ಹೀಗೆ ಥೀಮ್‌ಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಕೃಷ್ಣನ ಬೊಂಬೆ ಸೆಟ್‌ಗಳು ಕೂಡ ದೊರೆಯುತ್ತದೆ. ಆನ್‌ಲೈನ್‌ನಲ್ಲಿ ಸಾಕಷ್ಟು ಬಗೆಯವು ಸಿಗುತ್ತವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Krishna Janmashtami: ಕೃಷ್ಣ ಜನ್ಮಾಷ್ಟಮಿ; ಮಕ್ಕಳ ಅಲಂಕಾರದ ಉಡುಪುಗಳಿಗೆ ಭರ್ಜರಿ ಬೇಡಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Pearl Fashion: ಮುತ್ತಿನ ಹಾರಕ್ಕೆ ಸಿಕ್ತು ನ್ಯೂ ಲುಕ್‌!

Pearl fashion: ಮಹಿಳೆಯರನ್ನು ಸಿಂಗರಿಸುತ್ತಿದ್ದ ಮುತ್ತಿನ ಆಭರಣಗಳು ಟ್ರೆಡಿಷನಲ್‌ ಲುಕ್‌ನಿಂದ ಮುಕ್ತಿ ಪಡೆದು, ಇದೀಗ ನಯಾ ಜಮಾನದ ಯುವತಿಯರಿಗೂ ಪ್ರಿಯವಾಗುವಂತಹ ಫ್ಯಾಷನ್‌ ಜ್ಯುವೆಲರಿ ಡಿಸೈನ್‌ನಲ್ಲಿ ಬಂದಿವೆ. ಯಾವ್ಯಾವ ಡಿಸೈನ್‌ನವು ಈ ಸಾಲಿನ ಟ್ರೆಂಡ್‌ನಲ್ಲಿವೆ ಎಂಬುದರ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Pearl Fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುತ್ತಿನ ಹಾರಗಳು ಇದೀಗ ಫ್ಯಾಷನ್‌ (Pearl fashion) ಟಚ್‌ ಪಡೆದು ಹೊಸ ಲುಕ್‌ನಲ್ಲಿ ಎಂಟ್ರಿ ನೀಡಿವೆ.
ಹೌದು, ಸದಾ ಮಾನಿನಿಯರನ್ನು ಸಿಂಗರಿಸುತ್ತಿದ್ದ, ಬಗೆಬಗೆಯ ಮುತ್ತಿನ ಆಭರಣಗಳು ಹಳೆಯ ಕಾಲದ ಟ್ರೆಡಿಷನಲ್‌ ಲುಕ್‌ನಿಂದ ಮುಕ್ತಿ ಪಡೆದು, ಇದೀಗ ನಯಾ ಜಮಾನದ ಯುವತಿಯರಿಗೂ ಪ್ರಿಯವಾಗುವಂತಹ ಹೊಸ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದು, ಫ್ಯಾಷನ್‌ ಜ್ಯುವೆಲರಿಗಳ ಟಾಪ್‌ ಲಿಸ್ಟ್ ಗೆ ಸೇರಿಕೊಂಡಿವೆ.

Pearl Fashion

ನ್ಯೂ ಲುಕ್‌ನಲ್ಲಿ ಮುತ್ತಿನ ಹಾರಗಳು

“ಮುತ್ತಿನ ಹಾರಗಳು ಬಹುತೇಕ ಮಾನಿನಿಯರ ಫೆವರೇಟ್‌ ಆಭರಣಗಳು. ಹಳೆ ಜನರೇಷನ್‌ ಮಹಿಳೆಯರ ಜ್ಯುವೆಲರಿ ಸಂಗ್ರಹಗಳಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿವೆ. ಟ್ರೆಡಿಷನಲ್‌ ಡಿಸೈನ್‌ನಲ್ಲಿ ಸಾಕಷ್ಟು ಪ್ರಚಲಿತದಲ್ಲಿದ್ದವು. ಬರಬರುತ್ತಾ ಈ ಮುತ್ತಿನ ಹಾರಗಳು ಜ್ಯುವೆಲ್‌ ಡಿಸೈನರ್‌ಗಳ ಕೈ ಸೇರಿ ನಾನಾ ಬಗೆಯ ವಿನ್ಯಾಸಕ್ಕೆ ಒಳಪಟ್ಟು, ಹೊಸ ರೂಪ ಪಡೆದವು. ಅಷ್ಟೇಕೆ! ಮುತ್ತಿನ ಹಾರಗಳು ಇಂತಹ ರೂಪ ಪಡೆಯಬಹುದೇ ಎನ್ನುವಷ್ಟರ ಮಟ್ಟಿಗೆ ಹೊಸ ಡಿಸೈನ್‌ಗಳಲ್ಲಿ ಇದೀಗ ಬಿಡುಗಡೆಗೊಳ್ಳಲಾರಂಭಿಸಿವೆ. ಒಂದಕ್ಕಿಂತ ಒಂದು ಹೊಸ ಹೊಸ ಡಿಸೈನ್‌ನಲ್ಲಿ ಎಂಟ್ರಿ ನೀಡಲಾರಂಭಿಸಿವೆ. ಪರಿಣಾಮ. ಈ ಜನರೇಷನ್‌ನ ಯುವತಿಯರು ಕೂಡ ಇವುಗಳತ್ತ ಆಕರ್ಷಿತರಾಗತೊಡಗಿದ್ದಾರೆ” ಎನ್ನುತ್ತಾರೆ ಆಭರಣ ವಿನ್ಯಾಸಕಾರರಾದ ರಚನಾ ಆಚಾರ್‌. ಅವರ ಪ್ರಕಾರ, ಮುತ್ತಿನ ಹಾರಗಳಿಗೆ ಅದರದ್ದೇ ಆದ ಹಿಸ್ಟರಿ ಇದೆ. ಕಾಲ ಬದಲಾದಂತೆ ತಮ್ಮ ರೂಪ ಬದಲಿಸಿಕೊಂಡಿವೆ ಅಷ್ಟೇ ಎನ್ನುತ್ತಾರೆ.

Pearl Fashion

ಟ್ರೆಂಡ್‌ನಲ್ಲಿರುವ ಮುತ್ತಿನ ಹಾರಗಳು

ಬಿಗ್‌ ಪೆಂಡೆಂಟ್‌ನ ಮುತ್ತಿನ ಹಾರ, ಪ್ರಿಶಿಯಸ್‌ ಸ್ಟೋನ್ಸ್ ಮಿಕ್ಸ್ ಮ್ಯಾಚ್‌ ಹೊಂದಿದ ಮುತ್ತಿನ ಹಾರ, ಲಾಂಗ್‌ ಚೈನ್‌ ಹೊಂದಿದ ಮುತ್ತಿನ ಹಾರ, ನಾಗರ, ಗಂಡು-ಭೇರುಂಡ, ನವಿಲು ಹೀಗೆ ನಾನಾ ಡಿಸೈನ್‌ನ ಅಗಲವಾದ ಪೆಂಡೆಂಟ್‌ ಹೊಂದಿರುವ ಹಾರ, ಟೈನಿ ಮುತ್ತಿನ ಎಳೆಗಳನ್ನು ಹೊಂದಿರುವ ಹಾರ, ಬಿಗ್‌ ಪರ್ಲ್ನ ವಿಕ್ಟೋರಿಯಾ ಸೆಟ್‌, ಜಿರ್ಕೊನಿ ಡಿಸೈನ್‌ ಪೆಂಡೆಂಟ್‌ನ ಹಾರ ಸೇರಿದಂತೆ ನಾನಾ ಬಗೆಯ ಮುತ್ತಿನ ಹಾರಗಳು ಟ್ರೆಂಡ್‌ನಲ್ಲಿವೆ.

Pearl Fashion

ಮುತ್ತಿನ ಹಾರದ ರಿಪ್ಲೀಕಾ

ಇದೀಗ ಫ್ಯಾಷನ್‌ ಜ್ಯುವೆಲರಿಗಳಲ್ಲಿ ಮುತ್ತಿನ ಹಾರದ ರಿಪ್ಲೀಕಾಗಳು ಬಂದಿವೆ. ಹೆಚ್ಚು ಬೆಲೆ ಇರದ ಫೇಕ್‌ ಮುತ್ತಿನಿಂದ ತಯಾರಿಸಲಾದ ಈ ಹಾರಗಳು ಕೂಡ ಟ್ರೆಂಡ್‌ನಲ್ಲಿವೆ. ಹೆಚ್ಚು ಬೆಲೆ ತೆತ್ತು ಕೊಳ್ಳಲಾಗದವರು ಇವನ್ನು ಧರಿಸಿ ಸಮಾಧಾನಪಟ್ಟುಕೊಳ್ಳಬಹುದು ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರಾಣಿ.

  • ಬಿಗ್‌ ಸ್ಟೋನ್‌ ಪೆಂಡೆಂಟ್‌ ಮುತ್ತಿನ ಹಾರ ಚಾಲ್ತಿಯಲ್ಲಿದೆ.
  • ಎಳೆಎಳೆಯಾಗಿರುವಂತಹ ಮುತ್ತಿನ ಹಾರಗಳು ಬೇಡಿಕೆ ಪಡೆದುಕೊಂಡಿವೆ.
  • ಸಮೀಕ್ಷೆಯೊಂದರ ಪ್ರಕಾರ, ನೂರರಲ್ಲಿ ಹತ್ತು ಮಹಿಳೆಯರ ಬಳಿ ಒಂದಲ್ಲ ಒಂದು ಮುತ್ತಿನ ಹಾರ ಇದ್ದೇ ಇರುತ್ತದಂತೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: New Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಬೆರಳನ್ನು ಆಕ್ರಮಿಸಿದ ಫಂಕಿ ಉಂಗುರಗಳು!

Continue Reading

ಫ್ಯಾಷನ್

Ambani Family Fashion: ಅಂಬಾನಿ ಮಹಿಳೆಯರ ದುಬಾರಿ ಉಡುಗೆಗಳು; ಇವರ ಮದುವೆ ಡ್ರೆಸ್‌‌ಗಳು ಹೇಗಿವೆ?

Ambani Family Fashion: ಅಂಬಾನಿ ಫ್ಯಾಮಿಲಿಯ ರಾಧಿಕಾ ಮರ್ಚೆಂಟ್‌- ಅನಂತ್‌ ಅಂಬಾನಿಯ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ ಇದೀಗ ಬೆಳ್ಳಿ-ಬಂಗಾರ ಮಿಶ್ರಿತ ಜರತಾರಿಯಲ್ಲಿ ಮಿಂದೆದ್ದ ಗ್ರ್ಯಾಂಡ್‌ ಡಿಸೈನರ್‌ ಲೆಹೆಂಗಾಗಳದ್ದೇ ಕಾರುಬಾರು! ಯಾರ್ಯಾರು ಯಾವ್ಯಾವ ಬಗೆಯ ಲೆಹೆಂಗಾಗಳಲ್ಲಿ ಕಾಣಿಸಿಕೊಂಡರು ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್ !

VISTARANEWS.COM


on

Ambani Family Fashion
ಚಿತ್ರಕೃಪೆ : ಇನ್ಸ್‌ಸ್ಟಾಗ್ರಾಮ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ (Ambani Family Fashion) ಇದೀಗ ಗ್ರ್ಯಾಂಡ್‌ ಡಿಸೈನರ್‌ ಲೆಹೆಂಗಾಗಳದ್ದೇ ಕಾರುಬಾರು! ನೋಡಲು ಮನಮೋಹಕವಾಗಿರುವ ಬೆಳ್ಳಿ-ಬಂಗಾರ, ಪ್ರಿಶಿಯಸ್‌ ಸ್ಟೋನ್ಸ್ ಹಾಗೂ ಅತ್ಯಮೂಲ್ಯ ಹ್ಯಾಂಡ್‌ವರ್ಕ್‌ನಿಂದ ಸಿದ್ಧಗೊಂಡ ಈ ಭಾರಿ ಡಿಸೈನ್‌ನ ಪ್ರತಿ ಲೆಹೆಂಗಾಗಳ ಬೆಲೆಯೂ ಅಷ್ಟೇ! ಕೋಟಿ ಕೋಟಿ ರೂ. ಬೆಲೆ ಬಾಳುತ್ತದೆ. ಸಿಂಪಲ್‌ ಭಾಷೆಯಲ್ಲಿ ಹೇಳುವುದಾದಲ್ಲಿ ಶ್ರೀ ಸಾಮಾನ್ಯನೊಬ್ಬ ಈ ಪ್ರತಿ ಲೆಹೆಂಗಾ ಬೆಲೆಗೆ ಫ್ಲ್ಯಾಟ್‌ವೊಂದನ್ನು ಖರೀದಿಸಬಹುದು ಇಲ್ಲವೇ, ಸ್ವಂತ ಮನೆಯೊಂದನ್ನು ಖರೀದಿ ಮಾಡಬಹುದು. ಆ ಮಟ್ಟಿಗೆ ಅಂಬಾನಿ ಮಹಿಳೆಯರು ಧರಿಸಿದ ಲೆಹೆಂಗಾಗಳು ದುಬಾರಿ ಟ್ಯಾಗ್‌ ಹೊಂದಿವೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.
ಹೌದು, ರಾಧಿಕಾ ಮರ್ಚೆಂಟ್‌- ಅನಂತ್‌ ಅಂಬಾನಿಯ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ, ಕುಟುಂಬದ ಮಹಿಳೆಯರೆಲ್ಲರೂ ಲೆಹೆಂಗಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಯಾರ್ಯಾರು, ಯಾವ್ಯಾವ ಬಗೆಯ ವಿಶೇಷ ಡಿಸೈನ್‌ನ ಲೆಹೆಂಗಾಗಳಲ್ಲಿ ಕಾಣಿಸಿಕೊಂಡರು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷೀಪ್ತ ಡಿಟೇಲ್ಸ್.

ವಿಂಟೇಜ್‌ ಲೆಹೆಂಗಾದಲ್ಲಿ ನೀತಾ ಅಂಬಾನಿ

ಲೆಹೆಂಗಾದಲ್ಲಿ ಥೇಟ್‌ ಬಾಲಿವುಡ್‌ ಸ್ಟಾರ್‌ನಂತೆ ಕಾಣಿಸಿಕೊಂಡ ನೀತಾ ಅಂಬಾನಿಯವರು ಒಮ್ಮೆ ಸೆಲೆಬ್ರೆಟಿ ಡಿಸೈನರ್‌ ಸಭ್ಯಸಾಚಿಯವರ ಬಾಂದನಿ ಲೆಹೆಂಗಾದಲ್ಲಿ ಮತ್ತೊಮ್ಮೆ ಮನೀಶ್‌ ಮಲ್ಹೋತ್ರಾ ಅವರ ಐವರಿ ವಿಂಟೇಜ್‌ ಲೆಹೆಂಗಾದಲ್ಲಿ ತಾರೆಯಂತೆ ಮಿನುಗಿದರು. ವಿಂಟೇಜ್‌ ಲೆಹೆಂಗಾ ಕಸ್ಟಮೈಸ್ಡ್ ಟ್ರೆಡಿಷನಲ್‌ ಜರ್ದೋಸಿ ಎಂಬ್ರಾಯ್ಡರಿ ಹಾಗೂ ಜರಿ ಬಾರ್ಡರ್‌ನ ಬನರಾಸಿ ಟಿಶ್ಯೂ ದುಪಟ್ಟಾ ಹೊಂದಿತ್ತು. ಸರಿ ಸುಮಾರು ಕೋಟಿ ರೂ. ಗೆ ಸನಿಹವಾಗಿದೆ ಎಂದು ಅಂದಾಜಿಸಿದ್ದಾರೆ ಫ್ಯಾಷನ್‌ ವಿಶ್ಲೇಷಕರು.

Ambani Family Fashion

ರಾಧಿಕಾ ಮರ್ಚೆಂಟ್‌ ಲೆಹೆಂಗಾ ತುಂಬೆಲ್ಲಾ ದುರ್ಗಾ ಶ್ಲೋಕ

ಪ್ರಿ-ವೆಡ್ಡಿಂಗ್‌ ಸಮಾರಂಭದಲ್ಲಿ, ರಾಧಿಕಾ ಧರಿಸಿದ್ದ ವೈಬ್ರೆಂಟ್‌ ಬನಾರಸಿ ಬ್ರೋಕೆಡ್‌ನ ರಾಣಿ ಪಿಂಕ್‌ ಕಲರ್‌ನ ಕ್ಲಾಸಿಕ್‌ ಎಂಬ್ರಾಯ್ಡರಿ ಹೊಂದಿದ ಗೋಲ್ಡ್ ಜರ್ದೋಸಿ ಲೆಹೆಂಗಾ ವಿಶೇಷತೆಯೆಂದರೇ, ಲೆಹೆಂಗಾದಲ್ಲಿ ಎಲ್ಲೆಡೆ ದುರ್ಗಾ ದೇವಿಯ ಶ್ಲೋಕವನ್ನುಕಾಣಬಹುದು. ಅಲ್ಲದೇ, ಸುಮಾರು 35 ಮೀಟರ್‌ ಬಂದೇಜನ್ನು ಗಾಗ್ರ ಡಿಸೈನ್‌ಗೆ ಬಳಸಲಾಗಿದೆ. ವಿಂಟೇಜ್‌ ಕೋಟಿಯಿಂದ ಬ್ಲೌಸ್ ಡಿಸೈನ್‌ಗೆ ಸ್ಪೂರ್ತಿ ಪಡೆಯಲಾಗಿದೆ.

ಶ್ಲೋಕ ಅಂಬಾನಿಯ ಲೆಹೆಂಗಾ

ಸೆಲೆಬ್ರೆಟಿ ಡಿಸೈನರ್‌ ತರುಣ್‌ ತೆಹ್ಲಾನಿ ಸಿದ್ಧಪಡಿಸಿರುವಂತಹ ಶ್ಲೋಕಾ ಅಂಬಾನಿಯ ಲೆಹೆಂಗಾ ಜಮಾವಾರ್‌ ಶಾಲ್‌ನಿಂದ ಸ್ಪೂರ್ತಿಗೊಂಡಿದ್ದು, ಕಶೀದಾ ವರ್ಕ್‌ ಜೊತೆಗೆ ಹ್ಯಾಂಡ್ ಪೇಂಟ್‌ ಆರ್ಟ್ ವರ್ಕ್‌ ಮಾಡಲಾಗಿದೆ. ಕುಂದನ್‌ ಡಿಸೈನ್‌, ದುಪಟ್ಟಾ ಹೊಂದಿದೆ. ಇನ್ನು, ಬ್ಲೌಸ್‌ ಪ್ರಿಶಿಯಸ್‌ ಸ್ಟೋನ್ಸ್ನಿಂದ ಕಂಗೊಳಿಸಿದೆ. ಈ ಮೇಲಿನ ಲೆಹೆಂಗಾಗಳ ವಿವರಣೆಗಳು ಕೇವಲ ಒಂದಿಷ್ಟು ಸಮಾರಂಭದ ಸ್ಯಾಂಪಲ್‌ ಉದಾಹರಣೆಗಳಷ್ಟೇ! ಇನ್ಮುಂದೆ ಧರಿಸಲಿರುವ ಡಿಸೈನರ್‌ವೇರ್‌ಗಳು ಇವಕ್ಕಿಂತ ಇನ್ನೆಷ್ಟು ಕೋಟಿ ರೂ.ಗಳು ಹೆಚ್ಚು ಬಾಳಬಹುದು ಎಂಬುದನ್ನು ಕಾದು ನೋಡಬೇಕಾಗಿದೆ ಎಂದಿದ್ದಾರೆ ಫ್ಯಾಷನ್‌ ವಿಶ್ಲೇಷಕರು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Zircon Jewellery Fashion: ಹೈ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ಗೆ ಸೇರಿದ ವೈವಿಧ್ಯಯಮಯ ಜಿರ್ಕೊನ್‌ ಆಭರಣಗಳ ಹಂಗಾಮಾ!

Continue Reading

ಫ್ಯಾಷನ್

New Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಬೆರಳನ್ನು ಆಕ್ರಮಿಸಿದ ಫಂಕಿ ಉಂಗುರಗಳು!

New Fashion Trend: ಜೆನ್‌ ಜಿ ಹುಡುಗಿಯರ ಬೆರಳುಗಳನ್ನು ಚಿತ್ರ-ವಿಚಿತ್ರ ಫಂಕಿ ಫಿಂಗರ್‌ ರಿಂಗ್‌ಗಳು ಆಕ್ರಮಿಸಿದ್ದು, ಈ ಜನರೇಷನ್‌ ಯಂಗ್‌ಸ್ಟರ್ಸ್ ಸ್ಟೈಲಿಂಗ್‌ ಲಿಸ್ಟ್‌ಗೆ ಸೇರಿವೆ. ಹಾಗಾದಲ್ಲಿ, ಏನಿದು ಫಂಕಿ ಫಿಂಗರ್‌ ರಿಂಗ್ಸ್ ಫ್ಯಾಷನ್‌? ಈ ಕುರಿತಂತೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

New Fashion Trend
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್‌ ಜಿ ಹುಡುಗಿಯರ (New Fashion Trend) ಬೆರಳುಗಳನ್ನು ಚಿತ್ರ-ವಿಚಿತ್ರ ಫಂಕಿ ಫಿಂಗರ್‌ ರಿಂಗ್‌ಗಳು ಆಕ್ರಮಿಸಿವೆ. ಹೌದು, ಊಹೆಗೂ ಮೀರಿದ ಡಿಸೈನ್‌ಗಳನ್ನೊಳಗೊಂಡ ಕೈ ಬೆರಳಿನ ನಾನಾ ಶೈಲಿಯ ಉಂಗುರಗಳು, ಈ ಜನರೇಷನ್‌ ಹುಡುಗಿಯರ ಆಕ್ಸೆಸರೀಸ್‌ ಸ್ಟೈಲಿಂಗ್‌ ಲಿಸ್ಟ್‌ಗೆ ಸೇರಿವೆ. ಅವರ ಫ್ಯಾಷನ್‌ ಲುಕ್‌ಗೆ ಸಾಥ್‌ ನೀಡುತ್ತಿವೆ.

ಚಿತ್ರ-ವಿಚಿತ್ರ ಡಿಸೈನ್‌ಗೆ ಆದ್ಯತೆ

“ಫಿಂಗರ್‌ ರಿಂಗ್‌ಗಳು ಕೈ ಬೆರಳುಗಳ ಅಂದವನ್ನು ಹೆಚ್ಚಿಸುತ್ತವೆ. ಸುಂದರ ವಿನ್ಯಾಸಗಳಲ್ಲಿರುವ ಉಂಗುರಗಳು ಈಗಲೂ ಚಾಲ್ತಿಯಲ್ಲಿವೆ. ಆದರೆ, ಜನರೇಷನ್‌ ಬದಲಾದಂತೆ, ಈ ಜನರೇಷನ್‌ನ ಹುಡುಗಿಯರ ಅಭಿರುಚಿ ಬದಲಾಗಿದ್ದು, ಅವರಿಗೆ ಇಷ್ಟವಾಗುವಂತಹ ಬಂಗಾರೇತರ ಫಂಕಿ ಫಿಂಗರ್‌ರಿಂಗ್ಸ್ ಸ್ಟ್ರೀಟ್‌ ಮಾರುಕಟ್ಟೆಗೆ ಚಿತ್ರ-ವಿಚಿತ್ರ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ. ಮೊದಮೊದಲು ಉಂಗುರಗಳೆಂದರೇ ದೂರ ಓಡಿ ಹೋಗುತ್ತಿದ್ದ ಹುಡುಗಿಯರು ಹಾಗೂ ಹುಡುಗರು ಇಬ್ಬರೂ ಕೂಡ ಇದೀಗ ಇತರೇ ಲೋಹದ ಉಂಗುರಗಳತ್ತ ವಾಲತೊಡಗಿದ್ದಾರೆ. ಹಾಗೆಂದು ಈ ಉಂಗುರಗಳು ನೋಡಲು ಡಿಸೆಂಟ್‌ ಡಿಸೈನ್‌ ಹೊಂದಿಲ್ಲ, ಬದಲಿಗೆ ಊಹೆಗೂ ಮೀರಿದ ಚಿತ್ರ-ವಿಚಿತ್ರ ವಿನ್ಯಾಸಗಳನ್ನೊಳಗೊಂಡಿವೆ” ಎನ್ನುತ್ತಾರೆ ಡಿಸೈನರ್‌ ದಕ್ಷ್.

ಫಂಕಿ ಫಿಂಗರ್‌ ರಿಂಗ್‌ ಫ್ಯಾಷನ್‌

ವೈಲ್ಡ್‌ ಲುಕ್‌ ನೀಡುವ ಸ್ಕೆಲಿಟನ್‌ ಮುಖ, ಟೈಗರ್‌ ಮುಖ, ನರಿ ಮುಖ, ಸೈತಾನನ ಮುಖ, ಮಾನ್‌ ಸ್ಟರ್‌, ದೆವ್ವ-ಭೂತಗಳ ಮಾಸ್ಕ್‌ ಹೊಂದಿರುವಂತಹ ಫಿಂಗರ್‌ ರಿಂಗ್ಸ್ ಹುಡುಗರ ಕೈ ಬೆರಳುಗಳನ್ನು ಅಲಂಕರಿಸಿದರೇ, ಹುಡುಗಿಯರ ಬೆರಳನ್ನು ಮಿಕ್ಸ್ ಮ್ಯಾಚ್‌ ಉಂಗುರಗಳು, ಒಂದರಲ್ಲೆ ಮಲ್ಟಿ ಡಿಸೈನ್‌ ಹೊಂದಿರುವಂತವು, ಪ್ರಾಣಿ-ಪಕ್ಷಿ, ಸಿಂಬಲ್ಸ್ ಇರುವಂತವು ಬೆರಳುಗಳನ್ನು ಸಿಂಗರಿಸುತ್ತಿವೆ. ಇನ್ನು, ಇತ್ತೀಚೆಗೆ ಒಂದೆರೆಡು ಬೆರಳಿಗೆ ಉಂಗುರಗಳನ್ನು ಧರಿಸುವ ಕಾನ್ಸೆಪ್ಟ್ ಸೈಡಿಗೆ ಸರಿದಿದೆ. ಒಟ್ಟೊಟ್ಟಿಗೆ ಮೂರ್ನಾಲ್ಕು ಬೆರಳಿಗೆ ಚಿತ್ರ-ವಿಚಿತ್ರ ಉಂಗುರಗಳನ್ನು ಮಿಕ್ಸ್ ಮ್ಯಾಚ್‌ ಮಾಡಿ ಧರಿಸುವ ಕಾನ್ಸೆಪ್ಟ್ ಬಂದಿದೆ. ಇದಕ್ಕೆ ಪೂರಕ ಎನ್ನುವಂತೆ, ವೆರೈಟಿ ಉಂಗುರಗಳು ಮಾರುಕಟ್ಟೆಗೆ ಆಗಮಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಆನ್‌ಲೈನ್‌ನಲ್ಲಿ ಫಂಕಿ ಉಂಗುರಗಳ ಸೆಟ್‌

ಒಂದು ಉಂಗುರವಲ್ಲ, ಎರಡೂ ಕೈಗಳಿಗೆ ಧರಿಸಬಹುದಾದ ಅರ್ಧ ಡಜನ್‌ಗಟ್ಟಲೇ ಉಂಗುರಗಳ ಸೆಟ್‌ಗಳು ಆನ್‌ಲೈನ್‌ ಶಾಪ್‌ಗಳಲ್ಲಿ ನೋಡಬಹುದು. ಇವನ್ನು ಯಾವ ಕೈಗಳಿಗೆ ಬೇಕಾದರೂ ಧರಿಸಬಹುದು. ಮಲ್ಟಿ ಹೂಪ್‌ ಶೈಲಿಯವು, ಜಾಲರಿಯಂತವು, ಸ್ಟೋನ್ಸ್ ನವು, ಸ್ನೇಕ್‌ ಡಿಸೈನ್‌ನಂತವು ಸಾಕಷ್ಟು ಡಿಸೈನ್‌ನವು ಸೆಟ್‌ಗಳಲ್ಲಿ ದೊರೆಯುತ್ತಿವೆ.

ಇದನ್ನೂ ಓದಿ: Monsoon Fashion: ಮಾನ್ಸೂನ್‌ಗೆ ರೀ ಎಂಟ್ರಿ ನೀಡಿದ ಪ್ರಿಂಟೆಡ್‌ ಕಲರ್‌ ನೆಕ್‌ ಕುರ್ತಾ ಫ್ಯಾಷನ್‌

ಫಂಕಿ ಫಿಂಗರ್‌ ರಿಂಗ್ಸ್ ಕ್ರೇಜ್‌

ಟಿನೇಜ್ ಹುಡುಗ-ಹುಡುಗಿಯರು ಒಟ್ಟಾರೆ, ತಾವು ಧರಿಸಿದ ಡ್ರೆಸ್‌ಗೆ ಮಿಸ್‌ ಮ್ಯಾಚ್‌ ಆಗುವಂತಹ ಕಾನ್ಸೆಪ್ಟ್‌ನ ಫಂಕಿ ಫಿಂಗರ್‌ ರಿಂಗ್ಸ್ ಈ ಫ್ಯಾಷನ್‌ಗೆ ಕೈ ಜೋಡಿಸಿದೆ ಎನ್ನುತ್ತಾರೆ ಜೆನ್‌ ಜಿ ಸ್ಟೈಲಿಸ್ಟ್ ರಿಂಕು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Monsoon Fashion: ಮಾನ್ಸೂನ್‌ಗೆ ರೀ ಎಂಟ್ರಿ ನೀಡಿದ ಪ್ರಿಂಟೆಡ್‌ ಕಾಲರ್‌ ನೆಕ್‌ ಕುರ್ತಾ ಫ್ಯಾಷನ್‌

Monsoon fashion: ಸಾದಾ ಡಿಸೈನ್‌ನಲ್ಲಿ ಚಾಲ್ತಿಯಲ್ಲಿದ್ದ ಕಾಲರ್‌ ನೆಕ್‌ ಕುರ್ತಾಗಳು ಮಾನ್ಸೂನ್‌ನಲ್ಲಿ ಪ್ರಿಂಟೆಡ್‌ ವಿನ್ಯಾಸದಲ್ಲಿ ಫ್ಯಾಷನ್‌ ಲೋಕಕ್ಕೆ ರೀ ಎಂಟ್ರಿ ನೀಡಿವೆ. ಯಾವ್ಯಾವ ಬಗೆಯ ಕಾಲರ್‌ ಡಿಸೈನ್‌ನವು ಹೆಚ್ಚು ಟ್ರೆಂಡಿಯಾಗುತ್ತಿವೆ. ಇವುಗಳ ಆಯ್ಕೆ ಹೇಗೆ ಎಂಬುದರ ಬಗ್ಗೆ ಡಿಸೈನರ್ಸ್ ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Monsoon Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ ಸೀಸನ್‌ಗೆ (Monsoon fashion) ಪ್ರಿಂಟೆಡ್‌ ಕಾಲರ್‌ ಕುರ್ತಾಗಳು ರೀ ಎಂಟ್ರಿ ನೀಡಿದ್ದು, ಉದ್ಯೋಗಸ್ಥ ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ಸಾಕಷ್ಟು ವರ್ಷಗಳ ಕಾಲ ಸಾದಾ ಸಾಲಿಡ್‌ ಕಲರ್‌ಗಳಲ್ಲಿ ಮಾತ್ರ ಚಾಲ್ತಿಯಲ್ಲಿದ್ದ ಬಗೆಬಗೆಯ ಕಾಲರ್‌ ನೆಕ್‌ ಕುರ್ತಾಗಳು, ಇದೀಗ ವೆರೈಟಿ ಪ್ರಿಂಟೆಡ್‌ ವಿನ್ಯಾಸದಲ್ಲಿ ಪ್ರಚಲಿತಕ್ಕೆ ಬಂದಿವೆ.

ಮಳೆಗಾಲಕ್ಕೆ ರೀ ಎಂಟ್ರಿ

“ಮಳೆಗಾಲ ಕಾಲಿಡುತ್ತಿದ್ದಂತೆ ಕುರ್ತಾಗಳು ರೀ ಎಂಟ್ರಿ ನೀಡಿವೆ. ಅದು ಪ್ರಿಂಟೆಡ್‌ ಸೆಟ್‌ ರೂಪದಲ್ಲಿ ಕಾಲರ್‌ ನೆಕ್‌ಲೈನ್‌ ಇರುವಂತವು ಮಹಿಳೆಯರನ್ನು ಆಕರ್ಷಿಸಿವೆ. ಮೊದಲೆಲ್ಲಾ ಸಮ್ಮರ್‌ಗೆ ಮಾತ್ರ ಮೀಸಲಾಗಿದ್ದ ಪ್ರಿಂಟೆಡ್‌ ವಿನ್ಯಾಸದ ಫ್ಯಾಬ್ರಿಕ್‌ ಇದೀಗ ಈ ಸೀಸನ್‌ಗೂ ಮುಂದುವರೆದಿದ್ದು, ಮಳೆ-ಗಾಳಿಗೆ ಬೆಚ್ಚಗಿಡುವಂತಹ ಕಾಲರ್‌ ನೆಕ್‌ಲೈನ್‌ ವಿನ್ಯಾಸದಲ್ಲಿ ಮೂಡಿಬಂದಿವೆ” ಎನ್ನುತ್ತಾರೆ ಡಿಸೈನರ್‌ ರಾಣಿ, ಅವರ ಪ್ರಕಾರ, ಬೇಸಿಗೆಯಲ್ಲಿ ಕಾಲರ್‌ ಇಲ್ಲದ ಕುರ್ತಾಗಳು ಇದ್ದವು. ಸೀಸನ್‌ ಬದಲಾದಂತೆ ಕಾಲರ್‌ ಸಮೇತ ಇರುವಂತವು ಎಂಟ್ರಿ ಕೊಟ್ಟವು ” ಎನ್ನುತ್ತಾರೆ.

ಟ್ರೆಂಡ್‌ನಲ್ಲಿರುವ ವೆರೈಟಿ ಕಾಲರ್‌ ಪ್ರಿಂಟೆಡ್‌ ಕುರ್ತಾಗಳು

ಶರ್ಟ್ ಕಾಲರ್‌ ಕುರ್ತಾ, ಮ್ಯಾಂಡರೀನ್‌ ಕಾಲರ್‌, ಚೈನಾ ಕಾಲರ್‌, ರೌಂಡ್‌ ಕಾಲರ್‌, ಕಾಲರ್‌ ವಿತ್‌ ಬಟನ್‌, ಫುಲ್‌ ಕಾಲರ್‌, ಸ್ಟ್ಯಾಂಡ್‌ ಕಾಲರ್‌, ಚೈನೀಸ್‌ ಕಾಲರ್‌, ಸ್ಟಾಪ್‌ ಸ್ಟೈಲ್‌ ಕಾಲರ್‌, ಫ್ಲವರ್‌ ಸ್ಟೈಲ್‌ ಕಾಲರ್‌ ಸೇರಿದಂತೆ ನಾನಾ ಕಾಲರ್‌ ನೆಕ್‌ಲೈನ್‌ ಇರುವಂತವು ಪ್ರಿಂಟೆಡ್‌ ವಿನ್ಯಾಸದಲ್ಲಿ ಬಂದಿವೆ. ಫ್ಲೋರಲ್‌, ಟ್ರಾಪಿಕಲ್‌, ಜಾಮಿಟ್ರಿಕಲ್‌, ಸ್ಟ್ರೈಪ್ಸ್, ಪೋಲ್ಕಾ, ಅನಿಮಲ್‌ ಪ್ರಿಂಟ್ಸ್, ಕೌ ಪ್ರಿಂಟ್ಸ್, ಪೀಕಾಕ್‌ ಪ್ರಿಂಟ್ಸ್, ಡೈಮಂಡ್‌ , ಸ್ಟಾರ್‌, ಬ್ರಶ್‌ ಸ್ಟ್ರೋಕ್ಸ್, ಅಬ್‌ಸ್ಟ್ರಾಕ್ಟ್ ಹೀಗೆ ಊಹೆಗೂ ಮೀರಿದ ಡಿಜಿಟಲ್‌ ಪ್ರಿಂಟ್ಸ್‌ಗಳವು ಕೂಡ ಮಾರುಕಟ್ಟೆಗೆ ಕಾಲಿಟ್ಟಿವೆ. ಕಳೆದ ಸೀಸನ್‌ನಲ್ಲಿ ಕಾಟನ್‌ ಫ್ಯಾಬ್ರಿಕ್‌ನಲ್ಲಿ ಮಾತ್ರ ಲಭ್ಯವಿದ್ದ, ಇವು ಇದೀಗ ಕಾಟನ್‌ ಸಿಲ್ಕ್, ಸಿಲ್ಕ್, ಸಾಟೀನ್‌, ರಯಾನ್‌, ವೂಲ್‌, ನಿಟ್ಟೆಡ್‌ ಸೇರಿದಂತೆ ನಾನಾ ಫ್ಯಾಬ್ರಿಕ್‌ಗಳಲ್ಲಿ ಕಾಣಿಸತೊಡಗಿವೆ. ವೆರೈಟಿ ಡಿಸೈನ್‌ಗಳಿಗೆ ನಾಂದಿ ಹಾಡಿವೆ ಎನ್ನುತ್ತಾರೆ ಡಿಸೈನರ್‌ ರಾಜಿ.

ಇದನ್ನೂ ಓದಿ: Zircon Jewellery Fashion: ಹೈ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ಗೆ ಸೇರಿದ ವೈವಿಧ್ಯಯಮಯ ಜಿರ್ಕೊನ್‌ ಆಭರಣಗಳ ಹಂಗಾಮಾ!

ಯಾರಿಗೆ ಯಾವುದು ಸೂಕ್ತ?

  • ಸ್ಲಿಮ್‌ ಬಾಡಿ ಮಾಸ್‌ ಇಂಡೆಕ್ಸ್ ಹೊಂದಿರುವವರಿಗೆ ಯಾವುದೇ ಬಗೆಯ ಕುರ್ತಾ ಧರಿಸಿದರೂ ಓಕೆ.
  • ಪ್ಲಂಪಿಯಾಗಿರುವವರು ಆದಷ್ಟೂ ಸ್ಟ್ರೆಟ್‌ ಕಟ್‌, ಎ ಲೈನ್‌ ಕಾಲರ್‌ ಕುರ್ತಾ ಧರಿಸುವುದು ಸೂಕ್ತ.
  • ಕತ್ತನ್ನು ಹಿಡಿದಿಡುವಂತಹ ಕಾಲರ್‌ ಪ್ರಿಂಟೆಡ್‌ ಕುರ್ತಾಗಳ ಆಯ್ಕೆ ಬೇಡ.
  • ಹೈ ಕಾಲರ್‌ ಕುರ್ತಾ ಧರಿಸುವವರು ಮಿನಿಮಲ್‌ ಆಕ್ಸೆಸರೀಸ್‌ ಧರಿಸಿದರೇ ಸಾಕು.
  • ತ್ರೀ ಫೋರ್ತ್‌ ಸ್ಲೀವ್‌ನವು ಈ ಸೀಸನ್‌ನಲ್ಲಿ ಚಾಲ್ತಿಯಲ್ಲಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
School Principal
ದೇಶ3 hours ago

School Principal: ಶಾಲೆಯಲ್ಲೇ ಮಹಿಳಾ ಟೀಚರ್‌ ಜತೆ ಪ್ರಿನ್ಸಿಪಾಲ್‌ ರೊಮ್ಯಾನ್ಸ್;‌ ವೈರಲ್‌ ಫೋಟೊ ಇಲ್ಲಿದೆ

WCPL 2024
ಪ್ರಮುಖ ಸುದ್ದಿ4 hours ago

WCPL 2024 : ಸಿಪಿಎಲ್​​ನ ಟ್ರಿನ್​ಬ್ಯಾಗೊ ರೈಡರ್ಸ್​ ತಂಡಕ್ಕೆ ಜೆಮಿಮಾ, ಶಿಖಾ ಸೇರ್ಪಡೆ

KRS Inflow
ದೇಶ4 hours ago

KRS Inflow: ಕೆಆರ್‌ಎಸ್‌ಗೆ ದಾಖಲೆಯ 11 ಸಾವಿರ ಕ್ಯುಸೆಕ್‌ ನೀರು ಒಳಹರಿವು; ಸೋಮವಾರದಿಂದ ನಾಲೆಗಳಿಗೆ ನೀರು

Abhishek Sharma
ಕ್ರೀಡೆ4 hours ago

Abhishek Sharma : 47 ಎಸೆತಕ್ಕೆ ಶತಕ ಬಾರಿಸಿ ಹಲವಾರು ದಾಖಲೆ ಮುರಿದಿ ಅಭಿಷೇಕ್​ ಶರ್ಮಾ

Dengue Scare
ಕರ್ನಾಟಕ5 hours ago

Dengue Scare: ಸರ್ಕಾರದಿಂದಲೇ ಉಚಿತವಾಗಿ ಡೆಂಗ್ಯೂ ಪರೀಕ್ಷೆ ಮಾಡಿಸಲಿ; ಆರ್.‌ ಅಶೋಕ್‌ ಆಗ್ರಹ

World Biryani Day:
ಪ್ರಮುಖ ಸುದ್ದಿ5 hours ago

World Biryani Day : ಕೋಲ್ಕತಾ, ಹೈದರಾಬಾದ್ ಬಿರಿಯಾನಿ ತಿಂದಿರಬಹುದು; ಇವುಗಳ ಹಿನ್ನೆಲೆ ಗೊತ್ತಾ?

Accident
Latest6 hours ago

Accident: ಟೆರೇಸ್ ಮೇಲೆ ನಿಂತು ಜಗಳ ನೋಡುತ್ತಿದ್ದ ಮಹಿಳೆಗೇ ಬಿತ್ತು ಗುಂಡೇಟು!

Puri Jagannath Rath Yatra
ಪ್ರಮುಖ ಸುದ್ದಿ6 hours ago

Puri Jagannath Rath Yatra: ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಒಬ್ಬನ ಸಾವು, 400 ಭಕ್ತರಿಗೆ ಗಾಯ!

NIA Arrest
ದೇಶ6 hours ago

NIA Arrest: ಹಿಜ್ಬುಲ್‌, LeT ಉಗ್ರ ಸಂಘಟನೆಗಳ ಜೊತೆ ನಂಟು; ಪ್ರಮುಖ ಆರೋಪಿ ಅರೆಸ್ಟ್‌

Elephant attack car in Kodagu‌ four people escape
ಕೊಡಗು6 hours ago

Elephant attack :ಕಾರಿನ ಮೇಲೆ ಕಾಡಾನೆ ದಾಳಿ; ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ8 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ10 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ11 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ21 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ1 day ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌