7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ Vistara News
Connect with us

ನೌಕರರ ಕಾರ್ನರ್

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

ಸದ್ಯವೇ 7ನೇ ವೇತನ ಆಯೋಗ (7th Pay Commission) ರಚಿಸಿ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗಕ್ಕೆ ಸ್ಪಷ್ಟ ಭರವಸೆ ನೀಡಿದ್ದಾರೆ.

VISTARANEWS.COM


on

7th Pay Commission
Koo

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯೋತ್ಸವದ ಸಂದರ್ಭದಲ್ಲಿ ಸರ್ಕಾರ ಸಿಹಿ ಸುದ್ದಿ ನೀಡುವುದು ಬಹುತೇಕ ಖಚಿತವಾಗಿದೆ. ನವೆಂಬರ್‌ ಮೊದಲ ವಾರದಲ್ಲಿಯೇ ಸರ್ಕಾರ ಏಳನೇ ವೇತನ ಆಯೋಗವನ್ನು (7th Pay Commission) ರಚಿಸಿ ಆದೇಶ ಹೊರಡಿಸಲಿದೆ.

ಈ ಸಂಬಂಧ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಸರವಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಕುರಿತು ಸ್ಪಷ್ಟ ಭರವಸೆ ನೀಡಿದ್ದಾರೆ. “ನಿಗದಿತ ಕಾಲ ಮಿತಿಯಲ್ಲಿಯೇ ಆಯೋಗ ರಚನೆಯಾಗಲಿದೆ. ಇದರಲ್ಲಿ ಅನುಮಾನವೇ ಬೇಡ. ಸದ್ಯವೇ ಈ ಸಂಬಂಧ ಆದೇಶ ಹೊರಡಿಸಲಾಗುವುದುʼʼ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಏಳನೇ ವೇತನ ಆಯೋಗ ರಚಿಸಬೇಕೆಂದು ಸರ್ಕಾರಿ ನೌಕರರ ಸಂಘ ಒತ್ತಾಯಿಸುತ್ತಲೇ ಬಂದಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗ ರಚಿಸಲಾಗುವುದು ಎಂದು ಪ್ರಕಟಿಸಿದ್ದರು. ಆದರೆ ಅಕ್ಟೋಬರ್‌ ತಿಂಗಳು ಮುಗಿದರೂ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿರಲಿಲ್ಲ.

ಅಲ್ಲದೆ, ಕಳೆದ ವಿಧಾನಸಭಾ ಅಧಿವೇಶನದಲ್ಲಿ ಈ ಸಂಬಂಧ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಸಿಎಂ “ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯ ವಿಷಯವು ಸರ್ಕಾರದ ನೀತಿ ನಿರ್ಣಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ರಾಜ್ಯದ ಆರ್ಥಿಕ ಸ್ಥಿತಿಗಳನ್ನು ಗಮನದಲ್ಲಿರಿಸಿ ಸಂದರ್ಭಾನುಸಾರ ಕ್ರಮ ತೆಗೆದುಕೊಳ್ಳಲಾ ಗುವುದುʼʼ ಎಂದಷ್ಟೇ ಹೇಳಿದ್ದರು. ಹೀಗಾಗಿ ಆಯೋಗ ರಚನೆಯು ಕಾಲಮಿತಿಯಲ್ಲಿ ಆಗುವ ಕುರಿತು ಅನುಮಾನ ವ್ಯಕ್ತವಾಗಿತ್ತು.

ಆದರೆ ಈ ಬಗ್ಗೆ ಇದ್ದ ಅನುಮಾನಗಳನ್ನು ಈಗ ಮುಖ್ಯಮಂತ್ರಿಗಳೇ ದೂರ ಮಾಡಿದ್ದು, ಆಯೋಗ ರಚನೆಯ ಪ್ರಕ್ರಿಯೆ ಜಾರಿಯಲ್ಲಿದೆ. ಸದ್ಯವೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. “ಮುಖ್ಯಮಂತ್ರಿಗಳು ಈ ಕುರಿತು ಸ್ಪಷ್ಟವಾಗಿ ತಿಳಿಸಿದ್ದು, ಇನ್ನೊಂದೆರಡು ದಿನಗಳ ಒಳಗೆ ಆದೇಶ ಹೊರಬೀಳಬಹುದುʼʼ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ “ವಿಸ್ತಾರ ನ್ಯೂಸ್‌ʼʼಗೆ ತಿಳಿಸಿದ್ದಾರೆ.

ವೇತನ ಆಯೋಗಕ್ಕೆ ವೇತನ ಪರಿಷ್ಕರಿಸಿ ಶಿಫಾರಸಲು ಮಾಡಲು ನಾಲ್ಕು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ನವೆಂಬರ್‌ನಲ್ಲಿ ಆಯೋಗ ರಚನೆಯಾದರೆ 2023ರ ಮಾರ್ಚ್‌ ಒಳಗೆ ಆಯೋಗ ವರದಿ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. 6ನೇ ವೇತನ ಆಯೋಗವನ್ನು 2017ರ ಜೂನ್‌ನಲ್ಲಿ ರಚಿಸಲಾಗಿತ್ತು. ವರದಿ ನೀಡಲು ನಾಲ್ಕು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ ಆಯೋಗದ ಕೋರಿಕೆಯ ಮೇರೆಗೆ ಕೊನೆಗೆ ಇದಕ್ಕೆ ಒಟ್ಟು ಹನ್ನೊಂದು ತಿಂಗಳು ಕಾಲಾವಕಾಶ ನೀಡಲಾಗಿತ್ತು. 2018ರ ಜನವರಿಯಲ್ಲಿ ಆಯೋಗ ಮೊದಲ ಸಂಪುಟದ ವರದಿ ನೀಡಿತ್ತು.

ಇದನ್ನೂ ಓದಿ | 8th Pay Commission| ಎಂಟನೇ ವೇತನ ಆಯೋಗ ಈ ವರ್ಷ ಇಲ್ಲ, 2026ಕ್ಕೆ ಮುಂದಿನ ಆಯೋಗ ಸಾಧ್ಯತೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ನೌಕರರ ಕಾರ್ನರ್

Govt Employees News : ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆಗೆ ಚಾಲನೆ; ವೇಳಾಪಟ್ಟಿ ಇಲ್ಲಿದೆ!

ರಾಜ್ಯ ಸರ್ಕಾರವು ಸಾರ್ವತ್ರಿಕ ವರ್ಗಾವಣೆಗೆ ಅನುಮತಿ ನೀಡದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆಯು ವರ್ಗಾವಣೆಯ ವೇಳಾಪಟ್ಟಿ ಪ್ರಕಟಿಸಿದೆ (Govt Employees News). ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Edited by

health department employees
Koo

ಬೆಂಗಳೂರು: ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವರ್ಗಾವಣೆ ಪ್ರಕ್ರಿಯೆಗೆ ಚಾಲನೆ (Govt Employees News) ನೀಡಿದೆ. ಜತೆಗೆ ವರ್ಗಾವಣಾ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ.

ವರ್ಗಾವಣೆಗೆ ಇಚ್ಛಿಸುವ ಅಧಿಕಾರಿಗಳು/ ನೌಕರರು ಜೂನ್‌ 12 ರಿಂದ 26 ರವರೆಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಜುಲೈ 31ರ ಒಳಗೆ ಈ ವರ್ಗಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ. ಜುಲೈ 4 ರಿಂದ 10 ರವರೆಗೆ ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಪ್ರಪಟಿಸಲಾಗುತ್ತದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಏಳು ದಿನ ಕಾಲಾವಕಾಶ ನೀಡಲಾಗುತ್ತದೆ. ಜುಲೈ 14 ರಿಂದ ವೃತವಾರು ಸಮಾಲೋಚನೆಯನ್ನು ಪ್ರಾರಂಭಿಸಲಾಗುತ್ತದೆ.

ವೃಂದಬಲದ ಕಾರ್ಯನಿರತ ಹುದ್ದೆಯ ಶೇ. 15 ರಷ್ಟು ಸಂಖ್ಯೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಅವಕಾಶ ಇರುತ್ತದೆ ಎಂದು ಇಲಾಖೆಯು ತಿಳಿಸಿದ್ದು, ಶೇಕಡ 15 ರಷ್ಟು ವೃಂದಬಲದಲ್ಲಿ ಶೇ.2 ರಷ್ಟು ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆ ಮಾಡಲು ಇಲಾಖೆಯು ತೀರ್ಮಾನಿಸಿದೆ.

ವರ್ಗಾವಣೆ ವೇಳಾಪಟ್ಟಿ ಇಲ್ಲಿದೆ ನೋಡಿ;

governor employees transfer

health department transfer time table

ʻʻಗ್ರೂಪ್‌ ಎ, ಗ್ರೂಪ್‌ ಬಿ, ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ವರ್ಗದ ನೌಕರರಿಗೆ ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6 ರಷ್ಟನ್ನು ಮೀರದಂತೆ ದಿನಾಂಕ 01-06-2023 ರಿಂದ 15-06-2023ರವರೆಗೆ ಸಾರ್ವತ್ರಿಕ ವರ್ಗಾವಣೆಯನ್ನು ಕೈಗೊಳ್ಳಲು ಅಯಾ ಇಲಾಖೆಯ ಸಚಿವರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆʼʼ ಎಂದು ಸರ್ಕಾರವು ಇತ್ತೀಚೆಗೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಈ ವರ್ಗಾವಣೆ ಪ್ರಕ್ರಿಯೆ ಕೈಗೆತ್ತಿಕೊಂಡಿದೆ.

2015-16, 2017-18 ನೇ ಸಾಲಿನ ವರ್ಗಾವಣೆ ಸಮಯದಲ್ಲಿ ಸರ್ಕಾರವು 10 ವರ್ಷಗಳಿಗೂ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ತಜ್ಞ (ವೈದ್ಯಾಧಿಕಾರಿಗಳು, ಬಿ ವೃಂದ ಮತ್ತು ಸಿ. ವೃಂದದ ಹುದ್ದೆಗಳನ್ನು ಖಾಲಿ ಹುದ್ದೆಗಳೆಂದು ಪ್ರಕಟಿಸಿ, ವಯೋ ನಿವೃತ್ತಿ ಹೊಂದಲು 2 ವರ್ಷ ಸೇವೆ ಬಾಕಿ ಇರುವವರನ್ನು ಹೊರತುಪಡಿಸಿ) ಸಮಾಲೋಚನೆ ಮುಖಾಂತರ ಈ ಸ್ಥಳಗಳನ್ನು ಭರ್ತಿ ಮಾಡಲು ಹಾಗೂ ಈ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಹಾಜರಾದ ಬಳಿಕ ಕರ್ತವ್ಯದಿಂದ ಬಿಡುಗಡೆ ಹೊಂದಿದ ವೈದ್ಯರುಗಳನ್ನು ಹಾಗು ಇತರೆ ಬಿ ವೃಂದ ಮತ್ತು ಸಿ ವೃಂದದ ನೌಕರನ್ನು ಮುಂದಿನ ನೇಮಕಾತಿಗೆ ಆಯುಕ್ತಾಲಯಕ್ಕೆ ವರದಿ ಮಾಡಿಕೊಂಡ ನಂತರ ಅವರುಗಳಿಗೆ
ಸಮಾಲೋಚನೆ ಮುಖಾಂತರ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ ಸರ್ಕಾರ ಅನುಮತಿ ನೀಡಿತ್ತು. ಇದೇ ಕ್ರಮವನ್ನು 2023- 24 ನೇ ಸಾಲಿನಲ್ಲಿ ಅಳವಡಿಸಿಕೊಳ್ಳಲು ಅನುಮತಿ ನೀಡಬೇಕೆಂದು ಇಲಾಖೆಯ ಆಯುಕ್ತರು ಕೋರಿದ್ದು, ಇದಕ್ಕೆ ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳಿವೆ.

ಇಲಾಖೆಯ ಅಧೀನದ 19 ಜಿಲ್ಲಾ ಆಸ್ಪತ್ರೆ, ಜಿಲ್ಲಾ ಮಟ್ಟದ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರಸ್ತುತ ಖಾಲಿ ಇರುವ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಒಂದು ಬಾರಿಗೆ ಸಮಾಲೋಚನೆ ಮುಖಾಂತರ ಭರ್ತಿ ಮಾಡಲು ಕೂಡ ಇಲಾಖೆ ನಿರ್ಧರಿಸಿದೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಒಂದೇ ಕಚೇರಿ ಅಥವಾ ಆಸ್ಪತ್ರೆಯಲ್ಲಿ 15 ವರ್ಷಕ್ಕೂ ಮೇಲ್ಪಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್‌ ಡಿ ನೌಕರರು ವರ್ಗಾವಣೆ ಕೋರಿಕೆ ಅರ್ಜಿ ಸಲ್ಲಸಿದ ಸಂದರ್ಭದಲ್ಲಿ ಮಾತ್ರ ವರ್ಗಾವಣೆಗೆ ಪರಿಗಣಿಸಲಾಗುತ್ತದೆ. ಪತಿ-ಪತ್ನಿ ಪ್ರಕರಣ/ಅಂಗವಿಕಲ/ವಿಧವೆ/ವಿಧುರ ಪ್ರಕರಣದಡಿ ಒಂದು ಬಾರಿ ವರ್ಗಾವಣೆ ತೆಗೆದುಕೊಂಡ ನಂತರ ಕನಿಷ್ಠ ಮೂರು ವರ್ಷಗಳ ನಂತರವೇ ನಿಯಮಾನುಸಾರ ವರ್ಗಾವಣೆಯ ಅರ್ಜಿ ಪರಿಗಣಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ : Teacher Transfer : ಶಿಕ್ಷಕರ ವರ್ಗಾವಣೆಗೆ ಮುಹೂರ್ತ ಫಿಕ್ಸ್‌; ಪರಿಷ್ಕೃತ ವೇಳಾಪಟ್ಟಿ ಪ್ರಕಟ

Continue Reading

ಉದ್ಯೋಗ

KPSC Departmental Examination : ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆ; ಪ್ರವೇಶ ಪತ್ರ ಪ್ರಕಟ

ಕೆಪಿಎಸ್‌ಸಿಯು 2021ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ (KPSC Departmental Examination) ಪ್ರವೇಶ ಪತ್ರವನ್ನು ವೆಬ್‌ಸೈಟ್‌ನಲ್ಲಿ ಒದಗಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Edited by

KPSC Departmental Examination
Koo

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 2021ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ (KPSC Departmental Examination) ಪ್ರವೇಶ ಪತ್ರವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಜೂನ್‌ 9 ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಜುಲೈ 9 ರವರೆಗೆ ನಡೆಯಲಿವೆ.

ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಆಫ್‌ಲೈನ್‌ ಮಾದರಿಯಲ್ಲಿಯೇ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ಸಂಬಂಧಿಸಿದಂತೆ ಜನವರಿ 6 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಸರ್ಕಾರಿ ನೌಕರರು (ಗ್ರೂಪ್‌-ಡಿ ನೌಕರರು ಹೊರತುಪಡಿಸಿ), ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ/ಮಂಡಳಿ/ಸ್ಥಳೀಯ ಸಂಸ್ಥೆಗಳು/ ವಿಶ್ವವಿದ್ಯಾಲಯಗಳ/ ಪ್ರಾಧಿಕಾರಗಳ ಕಾಯಂ ನೌಕರರಿಗೆ ಈ ಪರೀಕ್ಷೆ ನಡೆಸಲಾಗುತ್ತದೆ.

ಎಲ್ಲ ವಿಭಾಗೀಯ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಅಧಿಸೂಚನೆಯಲ್ಲಿ ಆನ್‌ಲೈನ್‌ ಮಾದರಿಯ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿತ್ತಾದರೂ ಈಗ ಕೆಪಿಎಸ್‌ಸಿಯು ಆಫ್‌ಲೈನ್‌ ಪರೀಕ್ಷೆ ನಡೆಸುವುದಾಗಿ ಹೇಳಿದೆ. ಈ ಇಲಾಖಾ ಪರೀಕ್ಷೆಯನ್ನು ಒಟ್ಟು ಎರಡು ಹಂತದಲ್ಲಿ ನಡೆಸಲಾಗುತ್ತದೆ. ಪ್ರಥಮ ಹಂತದ ಪರೀಕ್ಷೆಯನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಎರಡನೇ ಹಂತದ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ.

ವಿವಿಧ ವಿಷಯಗಳ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಒಟ್ಟು 99 ಪತ್ರಿಕೆಗಳಿಗೆ ಹಾಗೂ ವಿವರಣಾತ್ಮಕ ಮಾದರಿಯ ಒಟ್ಟು 19 ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳ ಪಠ್ಯಕ್ರಮಗಳು ಪರಿಷ್ಕೃತಗೊಂಡಿದ್ದು, ಈ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ;

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://kpsc.kar.nic.in/

Continue Reading

ನೌಕರರ ಕಾರ್ನರ್

Teacher Transfer : ಶಿಕ್ಷಕರ ವರ್ಗಾವಣೆಗೆ ಮುಹೂರ್ತ ಫಿಕ್ಸ್‌; ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಚುನಾವಣೆಯ ಕಾರಣದಿಂದ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ (Teacher Transfer) ಪ್ರಕ್ರಿಯೆಯನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡದ ಬೆನ್ನಲ್ಲೆ ಶಾಲಾ ಶಿಕ್ಷಣ ಇಲಾಖೆಯು ವರ್ಗಾವಣೆಯ ವೇಳಾಪಟ್ಟಿ ಪ್ರಕಟಿಸಿದೆ.

VISTARANEWS.COM


on

Edited by

teacher transfer
Koo

ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲಾ ಮತ್ತು ಪ್ರೌಢ ಶಾಲಾ ಶಿಕ್ಷಕರು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ವರ್ಗಾವಣೆ (Teacher Transfer) ಪ್ರಕ್ರಿಯೆಯನ್ನು ಶಾಲಾ ಶಿಕ್ಷಣ ಇಲಾಖೆಯು ಮತ್ತೆ ಆರಂಭಿಸಿದ್ದು, ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿ ಪ್ರಕಟಿಸಿದೆ.

ಈ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರ ಮೇ. 31 ರಂದು ಒಪ್ಪಿಗೆ ನೀಡಿತ್ತು. ಇದರ ಬೆನ್ನಲ್ಲೇ ಇಲಾಖೆಯ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದು, ಈಗ ವೇಳಾಪಟ್ಟಿ ಪ್ರಕಟಿಸಿದೆ. ಇದರಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು/ ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು / ತತ್ಸಮಾನ ವೃಂದದ ಶಿಕ್ಷಕರ ವರ್ಗಾವಣೆಗೆ ಕೊನೆಗೂ ದಿನ ಕೂಡಿಬಂದಂತಾಗಿದೆ.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಜೂನ್‌ 6 ರಿಂದ ಜುಲೈ 31 ರವರೆಗೆ ನಡೆಯಲಿದೆ. ಜೂನ್‌6 ರಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹೆಚ್ಚುವರಿ ಶಿಕ್ಷಕರ ಪರಿಷ್ಕೃತ ಕರಡು ಪಟ್ಟಿ ಪ್ರಕಟವಾಗಲಿದೆ. ಜೂನ್‌ 10 ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಜೂನ್‌ 6 ಮತ್ತು 10 ರೊಳಗೆ ವರ್ಗಾವಣೆ ತಂತ್ರಾಂಶದ ಮೂಲಕ ಆದ್ಯತೆ ಕೋರಿ ಅರ್ಜಿ, ದಾಖಲೆ ಅಪ್‌ಲೋಡ್‌ ಮಾಡಲು ಅವಕಾಶ ನೀಡಲಾಗುತ್ತದೆ. ಜೂನ್‌ 14ಕಕ್ಕೆ ಕರಡು ಜೇಷ್ಠತಾ ಪಟ್ಟಿ ಪ್ರಕಟವಾಗಲಿದೆ.

ಜೂನ್‌ 17 ಕ್ಕೆ ಕೌನ್ಸಿಲಿಂಗ್ಗೆ ಲಭ್ಯವಿರುವ ವೃಂದವಾರು ವಿಷಯವಾರು ಖಾಲಿ ಹುದ್ದೆಗನ್ನು ಪ್ರಕಟಿಸಲಾಗುತ್ತದೆ. ಜುಲೈ 27 ಕ್ಕೆ ಅಂತಿಮ ಆದ್ಯತಾ ಪಟ್ಟಿಯಂತೆ ಪರಸ್ಪರ ವರ್ಗಾವಣೆಗಳ ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿ ನಡೆಯಲಿದೆ.

ಶಿಕ್ಷಕರ ವರ್ಗಾವಣೆಯ ವೇಳಾಪಟ್ಟಿ ಇಲ್ಲಿದೆ;

ಕಳೆದ ವರ್ಷ ಜಾರಿಗೆ ಬಂದ ಹೊಸ ವರ್ಗಾವಣೆ ನಿಯಮದಂತೆ ಈ ವರ್ಗಾವಣೆ ನಡೆಯಲಿದ್ದು, ಪರಸ್ಪರ ವರ್ಗಾವಣೆಗೆ ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಇದುವರೆಗೆ ಒಂದು ಬಾರಿ ಮಾತ್ರ ಈ ರೀತಿಯ ವರ್ಗಾವಣೆ ಮಾಡಿಕೊಳ್ಳಬಹುದಾಗಿತ್ತು. ಒಮ್ಮೆ ವರ್ಗಾವಣೆಯಾದ ಬಳಿಕ ಮತ್ತೆ ಮೂರು ವರ್ಷ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂಬ ನಿಯಮವೂ ಇದರಲ್ಲಿ ಸೇರಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು, ಮಲೆನಾಡು ವಲಯ ಹಾಗೂ ನಂಜುಂಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲೂಕುಗಳಿಗೆ ಹೋಗ ಬಯಸುವವರಿಗೆ ವಿಶೇಷ ಆದ್ಯತೆ ದೊರೆಯಲಿದೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಸಾರ್ವತ್ರಿಕ ವರ್ಗಾವಣೆ ಒಟ್ಟು ವೃಂದ ಬಲದ ಶೇ.11ರಷ್ಟು ಮಿತಿ ಇರುತ್ತದೆ. ವಿಶೇಷ ಆದ್ಯತೆಯಡಿ ವರ್ಗಾವಣೆ ಬಯಸುವವರಿಗೆ ಈ ನಿಯಮ ಅನ್ವಯವಾಗದು. ಯಾವುದೇ ಒಂದು ಘಟಕ ಹಾಗೂ ವೃಂದದಲ್ಲಿ ಕನಿಷ್ಠ 10 ವರ್ಷ ಅಥವಾ ಎಲ್ಲ ವೃಂದಗಳೂ ಸೇರಿ 15 ವರ್ಷ ಕೆಲಸ ಮಾಡಿದ ಶಿಕ್ಷಕರನ್ನು ಶೇ.25 ರಷ್ಟು ಮಿತಿಯ ಒಳಗೆ ಖಾಲಿ ಹುದ್ದೆಗಳಿರುವ ತಾಲೂಕಿಗೆ ವರ್ಗಾವಣೆಗೆ ಅವಕಾಶವಿರುತ್ತದೆ. ಈಗಾಗಲೇ ಶಿಕಕ್ಷರ ವರ್ಗಾವಣೆ ಮಾರ್ಗಸೂಚಿಯಲ್ಲಿರುವಂತೆ ಶಿಕ್ಷಕರ ವೇಯ್ಟೆಡ್‌ ಅಂಕಗಳ (ಸೇವಾ ಅಂಕಳಗ) ಲೆಕ್ಕಾಚಾರವನ್ನು ಹೊಸ ನಿಯಮಾವಳಿಗೆ ಸೇರಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://www.schooleducation.kar.nic.in/indexKn.html

ಇದನ್ನೂ ಓದಿ : Teacher Transfer : ಶಾಲೆ ಆರಂಭದ ದಿನವೇ ಶಿಕ್ಷಕರಿಗೆ ಸಿಹಿ ಸುದ್ದಿ! ಸರ್ಕಾರಿ ಶಿಕ್ಷಕರ ವರ್ಗಾವಣೆಗೆ ಸರ್ಕಾರದ ಅನುಮತಿ

Continue Reading

ನೌಕರರ ಕಾರ್ನರ್

Govt Employees News : ಸರ್ಕಾರಿ ನೌಕರರು ತಿಂಗಳು ಮುಗಿಯುವ ಮೊದಲೇ ವೇತನ ಪಡೆಯಬಹುದು! ರಾಜಸ್ಥಾನದಲ್ಲಿಈ ಸೌಲಭ್ಯ

ರಾಜಸ್ಥಾನ ಸರ್ಕಾರವು ರಾಜ್ಯದ ಸರ್ಕಾರಿ ನೌಕರರಿಗೆ ತಮ್ಮ ವೇತನವನ್ನು ಮುಂಗಡವಾಗಿ ಪಡೆಯಲು ಅವಕಾಶ (Govt Employees News) ನೀಡಿದೆ. ಈ ಯೋಜನೆ ಜೂನ್‌ 1 ರಿಂದಲೇ ಜಾರಿಗೆ ಬಂದಿದೆ.

VISTARANEWS.COM


on

Edited by

money Earned Salary Advance Drawal Scheme
Koo

ಜೈಪುರ: ರಾಜಸ್ಥಾನ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ (Govt Employees News) ನೀಡಿದೆ. ಅಲ್ಲಿಯ ಸರ್ಕಾರಿ ನೌಕರರು ಹಣದ ಅಗತ್ಯವಿದ್ದರೆ ವೇತನ ನೀಡುವುದಕ್ಕಿಂತ ಮೊದಲೇ ಮುಂಗಡವಾಗಿ ಹಣವನ್ನು ಪಡೆಯಬಹುದು. ಇದಕ್ಕಾಗಿ ಅಲ್ಲಿಯ ಸರ್ಕಾರ ʻಅರ್ನ್‌ಡ್‌ ಸ್ಯಾಲರಿ ಅಡ್ವಾನ್ಸ್‌ ಡ್ರಾ ಸ್ಕೀಮ್‌ʼ (Earned Salary Advance Drawal Scheme) ಎಂಬ ಯೋಜನೆ ರೂಪಿಸಿದೆ. ಈ ಯೋಜನೆಯನ್ನು ಮೇ 31ರಂದು ರಾಜಸ್ಥಾನದ ಆರ್ಥಿಕ ಇಲಾಖೆಯು ಘೋಷಿಸಿದೆ.

ಸರ್ಕಾರಿ ನೌಕರರಿಗೆ ಈ ರೀತಿ ಮುಂಗಡವಾಗಿ ವೇತನ ಪಡೆಯಲು ಅವಕಾಶ ಮಾಡಿಕೊಟ್ಟ ದೇಶದಲ್ಲಿಯೇ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಗಿದೆ. ಜೂನ್‌ 1ರಿಂದ ಈ ಯೋಜನೆ ಜಾರಿಗೆ ಬಂದಿದೆ. ಇಂಟ್ರಿಗೆಟೆಡ್‌ ಫೈನಾನ್ಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (IFMS-3.0) ಮೂಲಕ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಸರ್ಕಾರಿ ನೌಕರರು ತಿಂಗಳಿನಲ್ಲಿ ಎಷ್ಟು ಬಾರಿ ಬೇಕಾದರೂ ಮುಂಗಡವಾಗಿ ಹಣವನ್ನು ಪಡೆಯಬಹುದು. ಆದರೆ ಅವರು ಪಡೆಯುವ ಮಾಸಿಕ ವೇತನದ ಶೇ.50 ಕ್ಕಿಂತ ಹೆಚ್ಚು ಹಣವನ್ನು ಮುಂಗಡವಾಗಿ ನೀಡಲಾಗುವುದಿಲ್ಲ. ಒಂದು ವೇಳೆ ನೌಕರರು ತಿಂಗಳ 21 ನೇ ತಾರೀಖಿನೊಳಗೆ ಮುಂಗಡ ಹಣ ಪಡೆದುಕೊಂಡಿದ್ದರೆ, ಅದೇ ತಿಂಗಳ ವೇನತದಲ್ಲಿಯೇ ಈ ಹಣವನ್ನು ಹೊಂದಿಸಿ, ವೇತನ ನೀಡಲಾಗುತ್ತದೆ.

ಆನ್‌ಲೈನ್‌ನಲ್ಲಿಯೇ ಮುಂಗಡ ಪಡೆಯುವ ವ್ಯವಸ್ಥೆ

ಸರ್ಕಾರಿ ನೌಕರರು ಆನ್‌ಲೈನ್‌ನಲ್ಲಿಯೇ IFMS 3.0 ಸಾಫ್ಟ್‌ವೇರ್‌ನಲ್ಲಿ ಲಾಗಿನ್‌ ಆಗಿ ಅಥವಾ IFMS ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ ಪಡೆದುಕೊಳ್ಳಬಹುದಾಗಿರುತ್ತದೆ. ಇದು ಓಟಿಪಿ ಆಧಾರಿತ ಸೇವೆಯಾಗಿರುತ್ತದೆ.

ಈ ರೀತಿ ಸರ್ಕಾರಿ ನೌಕರರು ಮುಂಗಡವಾಗಿ ಹಣ ಪಡೆದರೆ ಇದಕ್ಕೆ ಯಾವುದೇ ಬಡ್ಡಿಯನ್ನಾಗಲೀ, ಹೆಚ್ಚುವರಿ ಶುಲ್ಕವನ್ನಾಗಲೀ ವಿಧಿಸಲಾಗುವುದಿಲ್ಲ ಎಂದು ಆರ್ಥಿಕ ಇಲಾಖೆಯು ಹೇಳಿದೆ. ಕೇವಲ ಹಣಕಾಸು ವರ್ಗಾವಣೆ ಶುಲ್ಕವನ್ನು ಮಾತ್ರ ಪಡೆದುಕೊಳ್ಳಲಾಗುತ್ತದೆ. ಇದರಿಂದಾಗಿ ಸರ್ಕಾರಿ ನೌಕರರು ತುರ್ತಾಗಿ ಹಣ ಬೇಕಾದಾಗ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವುದು ತಪ್ಪಲಿದೆ ಎಂದು ಸರ್ಕಾರ ಹೇಳಿದೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಈ ಯೋಜನೆಯನ್ನು ಜಾರಿಗೆ ತಂದಿರುವುದಕ್ಕೆ ರಾಜಸ್ಥಾನದ ಸರ್ಕಾರಿ ನೌಕರರು ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸರ್ಕಾರಿ ನೌಕರರ ಒತ್ತಡಕ್ಕೆ ಮಣಿದಿದ್ದ ರಾಜಸ್ಥಾನ ಸರ್ಕಾರವು ನೂತನ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ (ಓಪಿಎಸ್‌) ಜಾರಿಗೆ ತಂದಿತ್ತು.

ಇದನ್ನೂ ಓದಿ: NPS News : ಗ್ಯಾರಂಟಿಗಳಂತೆ ಓಪಿಎಸ್‌ ಜಾರಿ ಕೂಡ ಸದ್ಯಕ್ಕಿಲ್ಲ; ಸರ್ಕಾರ ಯೋಚಿಸುತ್ತಿರುವುದಾದರೂ ಏನು?

Continue Reading
Advertisement
Anita Madhu Bangarappa was felicitated by Block Mahila Congress at soraba
ಕರ್ನಾಟಕ11 mins ago

Shivamogga News: ಸೊರಬ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅನಿತಾ ಮಧು ಬಂಗಾರಪ್ಪ

MLA TB Jayachandra visited Shira Public Hospital
ಕರ್ನಾಟಕ13 mins ago

Tumkur News: ಶಿರಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಟಿ.ಬಿ. ಜಯಚಂದ್ರ ಭೇಟಿ, ಪರಿಶೀಲನೆ

Farooq Abdullah meets HD Devegowda
ಕರ್ನಾಟಕ24 mins ago

Farooq Abdullah: ಮಾಜಿ ಪಿಎಂ ದೇವೇಗೌಡ, ಸಿಎಂ ಸಿದ್ದರಾಮಯ್ಯ ಜತೆ ಫಾರೂಕ್‌ ಅಬ್ದುಲ್ಲಾ ʼಲೋಕಾʼಭಿರಾಮ!

Good Train Accident
ದೇಶ34 mins ago

Odisha Train Accident : ಅಯ್ಯೊ ದುರ್ವಿಧಿ, ಟ್ರೈನ್ ಕೆಳಗೆ ಮಲಗಿದ್ದವರು ಅಲ್ಲೇ ಅಪ್ಪಚ್ಚಿ!

BJP lose in karnataka
ಕರ್ನಾಟಕ34 mins ago

BJP Karnataka: ಸೋತು 25 ದಿನದ ನಂತರ ಅವಲೋಕನ ನಡೆಸಲಿದೆ ಬಿಜೆಪಿ!: ಗೆದ್ದ-ಸೋತವರ ಸಭೆ ಗುರುವಾರ

Kolhapur Protest
ದೇಶ43 mins ago

ಮಹಾರಾಷ್ಟ್ರದಲ್ಲೂ ಟಿಪ್ಪು ವಿವಾದ;‌ ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ, ಪರಿಸ್ಥಿತಿ ಉದ್ವಿಗ್ನ

U S Ambassador Eric Garcetti with Indian students
ದೇಶ47 mins ago

Student Visa Day: ಉನ್ನತ ಶಿಕ್ಷಣಕ್ಕೆ ಅಮೆರಿಕ ವೀಸಾ; 3,500 ಭಾರತೀಯ ವಿದ್ಯಾರ್ಥಿಗಳ ಸಂದರ್ಶನ

Leopard Attack
ಕರ್ನಾಟಕ1 hour ago

Leopard Attack: ಮಾಲೀಕನ ಕೊಲ್ಲಲು ಬಂದ ಚಿರತೆಯನ್ನು ಕೊಂಬಿನಿಂದ ತಿವಿದು ಓಡಿಸಿದ ಹಸು!

HDFC Officer Viral Video
ದೇಶ1 hour ago

Viral Video: ಟಾರ್ಗೆಟ್‌ ರೀಚ್‌ ಆಗದ್ದಕ್ಕೆ ಸಹೋದ್ಯೋಗಿಗೆ ಬೈದ ಎಚ್‌ಡಿಎಫ್‌ಸಿ ಅಧಿಕಾರಿ ಸಸ್ಪೆಂಡ್

many aspirants from congress for mlc election
ಕರ್ನಾಟಕ1 hour ago

MLC Election: ಕಾಂಗ್ರೆಸ್‌ ಸರ್ಕಾರಕ್ಕೆ 3ನೇ ಸವಾಲು: 3 ಪರಿಷತ್‌ ಸ್ಥಾನಕ್ಕೆ 19 ಆಕಾಂಕ್ಷಿಗಳು, ನಾಲ್ಕೈದು ಬಣಗಳು!

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ15 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

N Chaluvarayaswamy about Congress guarantee
ಕರ್ನಾಟಕ7 hours ago

Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!

horoscope today love and horoscope
ಪ್ರಮುಖ ಸುದ್ದಿ15 hours ago

Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!

Salman Khan Bigg Boss ott 2
South Cinema1 day ago

Big Boss OTT 2: ಜೂನ್ 17ಕ್ಕೆ ಬಿಗ್‌ಬಾಸ್ ಒಟಿಟಿ 2 ಪ್ರಸಾರ, ಇಲ್ಲೂ ನಿರೂಪಕ ಸಲ್ಲೂ!

dining table vastu tips
ಭವಿಷ್ಯ1 day ago

Vastu Tips : ಮನೆಯ ಡೈನಿಂಗ್‌ ಹಾಲ್‌ನಲ್ಲಿ ಈ ಆಕಾರದ ಟೇಬಲ್‌ ಇರಲೇಬಾರದು!

pineapple cultivation
ಕೃಷಿ1 day ago

Krishi Khajane : ಆರೋಗ್ಯಕರ ಅನಾನಸ್‌ ಬೆಳೆಯುವುದು ಕಷ್ಟವೇನಲ್ಲ!

health and horoscope horoscope today
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರ ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ, ಇರಲಿ ಎಚ್ಚರ!

Chakravarthy Sulibele and MB Patil
ಕರ್ನಾಟಕ2 days ago

Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

Sevanthige Flower Farming
ಕೃಷಿ2 days ago

Krishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!

Horoscope Today
ಪ್ರಮುಖ ಸುದ್ದಿ3 days ago

Horoscope Today : ಈ ನಾಲ್ಕು ರಾಶಿಯ ಉದ್ಯೋಗಿಗಳಿಗೆ ಇಂದು ಅದೃಷ್ಟದ ದಿನವಂತೆ!

Mangalore Moral Policing News
ಉಡುಪಿ3 days ago

Video: ನಮ್ಮ ನಿದ್ದೆಗೆಡಿಸಿದ್ದಾರೆ; ಮುಸ್ಲಿಮರೊಂದಿಗೆ ಬೀಚ್​​ಗೆ ಬಂದಿದ್ದ ಹುಡುಗಿಯರ ವಿರುದ್ಧ ನಿಂತ ಮಹಿಳೆಯರು

ಟ್ರೆಂಡಿಂಗ್‌

error: Content is protected !!