CLT Exam : ಸರ್ಕಾರಿ ನೌಕರರ ಕಂಪ್ಯೂಟರ್‌ ಟೆಸ್ಟ್‌; ಮತ್ತೆ ಡಿ.31ರ ವರೆಗೆ ಅವಕಾಶ ನೀಡಿದ ಸರ್ಕಾರ - Vistara News

ನೌಕರರ ಕಾರ್ನರ್

CLT Exam : ಸರ್ಕಾರಿ ನೌಕರರ ಕಂಪ್ಯೂಟರ್‌ ಟೆಸ್ಟ್‌; ಮತ್ತೆ ಡಿ.31ರ ವರೆಗೆ ಅವಕಾಶ ನೀಡಿದ ಸರ್ಕಾರ

ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಸರ್ಕಾರಿ ನೌಕರರು ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ (CLT Exam) ಉತ್ತೀರ್ಣರಾಗಿರಲೇಬೇಕೆಂದು ಸರ್ಕಾರ ಹೇಳಿದ್ದು, ಇದಕ್ಕೆ ನೀಡಿದ್ದ ಗಡುವನ್ನು ಈಗ ಡಿ .31ರ ವರೆಗೆ ವಿಸ್ತರಿಸಿ, ಸರ್ಕಾರ ಅಧಿಸೂಚನೆ ಹೊರಡಿಸಿದೆ.

VISTARANEWS.COM


on

CLT Exam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ (CLT Exam) ಉತ್ತೀರ್ಣರಾಗಲು ನಿಗದಿಪಡಿಸಿದ್ದ ಗಡುವನ್ನು ಮತ್ತೆ ವಿಸ್ತರಿಸಲಾಗಿದೆ. ಈಗ ದಿನಾಂಕ 31-12-2023ರ ಒಳಗೆ ನೌಕರರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿರುತ್ತದೆ.

2022ರ ಮೇ 5ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಸರ್ಕಾರಿ ನೌಕರರು ದಿನಾಂಕ 31-12-2022ರೊಳಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ಉತ್ತೀರ್ಣರಾಗದೇ ಇದ್ದಲ್ಲಿ ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿಗಳಿಸಲು ಅನರ್ಹರಾಗುತ್ತಾರೆ ಎಂದು ತಿಳಿಸಲಾಗಿತ್ತು. ಈ ಅಧಿಸೂಚನೆಗೆ ಮತ್ತೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ಈಗ ಡಿಸೆಂಬರ್‌ 31, 2023ರ ವರೆಗೆ ಗಡುವನ್ನು ವಿಸ್ತರಿಸಿದೆ.

ಕಳೆದ ಜನವರಿಯಲ್ಲಿಯೇ ಮಾರ್ಚ್‌ 31ರ ವರೆಗೆ ಗಡುವನ್ನು ವಿಸ್ತರಿಸಿ ಅಧಿಸೂಚನೆ ಪ್ರಕಟಗೊಂಡಿತ್ತಾದರೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಪರೀಕ್ಷೆಯ ಅವಧಿಯನ್ನು ಡಿಸೆಂಬರ್‌ 31ರವರೆಗೆ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿತ್ತು. ಸಂಘದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿ ಮತ್ತೊಂದು ಅಧಿಸೂಚನೆ ಹೊರಡಿಸಲು ಸೂಚಿಸಿದ್ದರು. ಅದರಂತೆಯೇ ಫೆ.17ರಂದು ಈ ತಿದ್ದುಪಡಿ ಅಧಿಸೂಚನೆ ಪ್ರಕಟವಾಗಿದೆ.

ಗಡುವು ವಿಸ್ತರಿಸಿದ ಸರ್ಕಾರಿ ಆದೇಶ ಇಲ್ಲಿದೆ

ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ) ನಿಯಮಗಳು, 2012 ರಲ್ಲಿ “ಈ ನಿಯಮದ ಪ್ರಾರಂಭದ ದಿನಾಂಕದಿಂದ ಹತ್ತು ವರ್ಷಗಳ ಅವಧಿಯೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿಗೆ ಅನರ್ಹರಾಗುತ್ತಾರೆʼʼ ಎಂದು ತಿಳಿಸಲಾಗಿತ್ತು. 2014ರ ಡಿಸೆಂಬರ್‌ನಲ್ಲಿಯೇ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ (ಡಿಪಿಎಆರ್ 104 ಇ-ಆಡಳಿತ 2014) ಹೊರಡಿಸಿತ್ತು. ಇದಕ್ಕೆ ಕಳೆದ ಮೇನಲ್ಲಿ ತಿದ್ದುಪಡಿ ತಂದು, “ಹತ್ತು ವರ್ಷಗಳ ಅವಧಿಯೊಳಗೆʼʼ ಎಂಬುದಕ್ಕೆ ಬದಲಾಗಿ, “ಯಾವುದೇ ಸರ್ಕಾರಿ ನೌಕರನು ದಿನಾಂಕ:31-12-2022ರೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿಗಳಿಸಲು ಅನರ್ಹನಾಗತಕ್ಕದ್ದಲ್ಲʼʼ ಎಂದು ಹೇಳಲಾಗಿತ್ತು. ಈಗ ತಿದ್ದುಪಡಿ ಅಧಿಸೂಚನೆ ಹೊರಡಿಸಿ, ಮಾರ್ಚ್‌ 31 ರವರೆಗೆ ವಿಸ್ತರಿಸಲಾಗಿದೆ.

ಸರ್ಕಾರಿ ನೌಕರರು ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ಕಲಿಯಬೇಕೆಂಬ ಉದ್ದೇಶದಿಂದ ಸರ್ಕಾರ ಈ ಪರೀಕ್ಷೆ ನಡೆಸುತ್ತಿದೆ. ಮೊದಲ ಬಾರಿಗೆ ಉಚಿತವಾಗಿ ಈ ಪರೀಕ್ಷೆ ಬರೆಯಬಹುದಾಗಿರುತ್ತದೆ. ಒಂದು ವೇಳೆ ಇದರಲ್ಲಿ ಉತ್ತೀರ್ಣರಾಗದೇ ಇದ್ದಲ್ಲಿ, ಮುಂದೆ ಪರೀಕ್ಷೆ ಬರೆಯಲು 359 ರೂ. ಹಾಗೂ ಬ್ಯಾಂಕ್‌ ಸೇವಾ ಶುಲ್ಕವನ್ನು ನೌಕರರು ಪಾವತಿಸ ಬೇಕಾಗಿರುತ್ತದೆ. ಶುಲ್ಕ ಪಾವತಿಸಿದ ದಿನಾಂಕದಿಂ­­­­ದ 90 ದಿನಗಳೊಳಗೆ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ಕಿಯೋನಿಕ್ಸ್ ಸಂಸ್ಥೆಯು ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ ಆನ್ ಲೈನ್ ನಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸುತ್ತಿದೆ. ಇದಕ್ಕಾಗಿ ವಿಶೇಷವಾದ ವೆಬ್‌ಸೈಟ್‌ ಪ್ರಾರಂಭಿಸಲಾಗಿದೆ. ನೌಕರರು ಇದರಲ್ಲಿ ಮೊದಲಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಯಶಸ್ವಿಯಾಗಿ ಹೆಸರು ನೊಂದಾಯಿಸಿಕೊಂಡವರು, ಮುಂದೆ ಪರೀಕ್ಷೆಯ ಸ್ಲಾಟ್‌ ಅನ್ನು ಬುಕ್‌ ಮಾಡಿಕೊಂಡು ನಿಗದಿತ ದಿನದಂದು ಈ ಪರೀಕ್ಷೆ ಬರೆಯಬಹುದಾಗಿರುತ್ತದೆ. ಆನ್‌ಲೈನ್‌ನಲ್ಲಿ ಮಾತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಪರೀಕ್ಷೆ ಬರೆಯಲು ವೆಬ್‌ ವಿಳಾಸ ಇಂತಿದೆ: https://clt.karnataka.gov.in/

ಈಗಾಗಲೇ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ನೌಕರರಿಗೆ ಐದು ಸಾವಿರ ರೂ. ಪ್ರೋತ್ಸಾಹ ಧನವನ್ನು ಸರ್ಕಾರ ಘೋಷಿಸಿತ್ತು. ಕರ್ನಾಟಕ ಸಿವಿಲ್‌ ಸೇವಾ (ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ) ನಿಯಮಗಳು -2012 ಜಾರಿಗೆ ಬಂದ 22-03-2012ರಂದು ಸೇವೆಯಲ್ಲಿದ್ದು, ದಿನಾಂಕ 17-04-2021 ರೊಳಗೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾ ನಿರತ ನೌಕರರಿಗೆ ಈ ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಸರ್ಕಾರಿ ನೌಕರರಾಗಿರುವ ಚಾಲಕರಿಗೆ, ಪೊಲೀಸ್‌ ಕಾನ್ಸ್‌ಟೇಬಲ್‌, ನರ್ಸ್‌, ಫಾರೆಸ್ಟ್‌ ಗಾರ್ಡ್‌, ಫಾರೆಸ್ಟ್‌ ವಾಚರ್ಸ್‌, ಅಬಕಾರಿ ರಕ್ಷಕರಿಗೆ ಮತ್ತು “ಡಿʼʼ ದರ್ಜೆಯ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. 45 ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಬೇಕೆಂದೂ ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಈ ಕುರಿತು ಇನ್ನಷ್ಟೇ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಇದನ್ನೂ ಓದಿ: CLT Exam : ಕಂಪ್ಯೂಟರ್‌ ಪರೀಕ್ಷೆಯಲ್ಲಿ ಈಗಾಗಲೇ ಉತ್ತೀರ್ಣರಾಗಿರುವ ನೌಕರರಿಗೆ ಐದು ಸಾವಿರ ಪ್ರೋತ್ಸಾಹ ಧನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

UPSC Results 2023: ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್‌ ಆದ ಪೊಲೀಸ್‌ ಅಧಿಕಾರಿ!

UPSC Results 2023: ಪಿಯುಸಿಯಲ್ಲಿ ಫೇಲ್‌ ಆಗಿದ್ದರೂ ಛಲ ಬಿಡದೇ ನಿರಂತರ ಅಧ್ಯಯನದೊಂದಿಗೆ ಪಿಎಸ್‌ಐ ಆಗಿ ನೇಮಕವಾಗಿದ್ದ ಬಳ್ಳಾರಿಯ ಶಾಂತಪ್ಪ ಕುರುಬರ್ ಅವರು, ಇದೀಗ ಯುಪಿಎಸ್‌ಸಿ ಫಲಿತಾಂಶದಲ್ಲಿ 644 ರ‍್ಯಾಂಕ್‌ ಪಡೆದಿದ್ದಾರೆ. ಸದ್ಯ ಇವರು ವಿಧಾನಸೌಧ ಭದ್ರತಾ ವಿಭಾಗದಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

VISTARANEWS.COM


on

UPSC Results 2023
Koo

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ನಾಗರಿಕ ಸೇವೆಗಳ ಅಂತಿಮ ಪರೀಕ್ಷೆ 2023ರ ಫಲಿತಾಂಶ ಪ್ರಕಟಿಸಿದ್ದು, ಒಟ್ಟು 1,016 ಅಭ್ಯರ್ಥಿಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಈ ಪೈಕಿ ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಳ್ಳಾರಿಯ ಶಾಂತಪ್ಪ ಕುರುಬರ್ (ಶಾಂತಪ್ಪ ಜಡೆಮ್ಮನವರ್‌) ಅವರು ನಾಗರಿಕ ಸೇವೆಗೆ (UPSC Results 2023) ಆಯ್ಕೆಯಾಗಿದ್ದು, ಇವರು ಕನ್ನಡದಲ್ಲೇ ಪರೀಕ್ಷೆ ಬರೆದು ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಶಾಂತಪ್ಪ ಕುರುಬರ್ ಬಳ್ಳಾರಿಯಿಂದ ಬೆಂಗಳೂರಿಗೆ ವಲಸೆ ಬಂದು ವಿದ್ಯಾಭ್ಯಾಸ ಮಾಡಿದ್ದಾರೆ. ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಇವರು ಪಿಯುಸಿಯಲ್ಲಿ ಫೇಲ್‌ ಆಗಿದ್ದರೂ ಛಲ ಬಿಡದೇ ನಿರಂತರ ಅಧ್ಯಯನದೊಂದಿಗೆ ಪಿಎಸ್‌ಐ ಆಗಿ ನೇಮಕವಾಗಿದ್ದರು. ಇದೀಗ ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದಿದ್ದಾರೆ.

ಕರ್ತವ್ಯದ ಜತೆಗೆ ಸಮಾಜಮುಖಿ ಕಾರ್ಯ

ಶಾಂತಪ್ಪ ಕುರುಬರ್ ಅವರು ಪೊಲೀಸ್‌ ಆಗಿ ಕೆಲಸ ನಿರ್ವಹಿಸುತ್ತಲೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಬೆಂಗಳೂರಿನ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕರಿಗಾಗಿ 10 ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ ಮಾಡಿದ್ದಾರೆ. ಇವರು ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ ಮಾಡಲು ಕಾರಣ ಅವರ ತಾಯಿ. ಈ ಮಾರ್ಗದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ತಾಯಿ ಶೌಚಾಲಯಕ್ಕೆ ಹೋಗಬೇಕು ಎಂದಿದ್ದರು. ಆಗ ಹತ್ತಿರದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಶೌಚಕ್ಕೆ ಹೋಗಲು ತೊಂದರೆಯಾಗಿತ್ತು. ಇದರಿಂದ ತಮ್ಮ ತಾಯಿಗಾದ ಕಷ್ಟ ಯಾರಿಗೂ ಆಗಬಾರದು ಎಂದು ಸಾರ್ವಜನಿಕರಿಗೆ ನೆರವಾಗಲು ಮೊಬೈಲ್‌ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ | UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

ಪಿಯುಸಿ ಅನುತ್ತೀರ್ಣವಾಗಿದ್ದ ಶಾಂತಪ್ಪ ಕುರುಬರ್

ಯುಪಿಎಸ್‌ಸಿ ಫಲಿತಾಂಶದ ಬಗ್ಗೆ ಪಿಎಸ್‌ಐ ಶಾಂತಪ್ಪ ಕುರುಬರ್ ಪ್ರತಿಕ್ರಿಯಿಸಿ, ಕನ್ನಡದಲ್ಲಿ ಪರೀಕ್ಷೆ ಬರೆಯುವುದು ಎಂದರೆ ತುಂಬಾ ಕಷ್ಟ. ಪಿಯುಸಿ ಅನುತ್ತೀರ್ಣವಾಗಿದ್ದೆ, ಆಗ ಊರಿನಲ್ಲಿ ಜನ ಅಡಿಕೊಂಡಿದ್ದರು. ಅಗ ತೀರ್ಮಾನ ಮಾಡಿ ಓದಲು ಮುಂದೆ ಬಂದೆ. ನಂತರ ಸಬ್ ಇನ್ ಸ್ಪೆಕ್ಟರ್ ಆದೆ. ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದೆ. ಈಗ ವಿಧಾನಸೌಧ ಭದ್ರತಾ ವಿಭಾಗದಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

ಬೆಂಗಳೂರಿನ ಅಚಾರ್ಯ ಐಎಎಸ್ ಕೋಚಿಂಗ್ ಸೆಂಟರ್‌ನ 3 ವಿದ್ಯಾರ್ಥಿಗಳು ಪಾಸ್‌

ಶಾಂತಪ್ಪ ಕುರುಬರ್, ಭರತ್ ಸಿ ಯಾರಮ್ ಹಾಗೂ ಭಾನು ಪ್ರಕಾಶ್

ಯೂಪಿಎಸ್‌ಸಿ ಪರೀಕ್ಷೆಯಲ್ಲಿ ಬೆಂಗಳೂರಿನ ಅಚಾರ್ಯ ಐಎಎಸ್ ಕೋಚಿಂಗ್ ಸೆಂಟರ್‌ನ ಮೂವರು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಬಳ್ಳಾರಿಯ ಶಾಂತಪ್ಪ ಕುರುಬರ್ (644 ರ‍್ಯಾಂಕ್‌), ಮೈಸೂರಿನ ಭಾನು ಪ್ರಕಾಶ್ (600 ರ‍್ಯಾಂಕ್‌), ಶಿವಮೊಗ್ಗ ಭರತ್ ಸಿ ಯಾರಮ್ (667 ರ‍್ಯಾಂಕ್‌) ಉತ್ತೀರ್ಣರಾದವರು.

ಶಾಂತಪ್ಪ ಕುರುಬರ್ ಬಳ್ಳಾರಿಯಿಂದ ಬೆಂಗಳೂರಿಗೆ ವಲಸೆ ಬಂದು ವಿದ್ಯಾಭ್ಯಾಸ ಮಾಡಿದ್ದಾರೆ. ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಇವರು ಪಿಯುಸಿಯಲ್ಲಿ ಫೇಲ್‌ ಆಗಿದ್ದರೂ ಛಲ ಬಿಡದೇ ನಿರಂತರ ಅಧ್ಯಯನದೊಂದಿಗೆ ಪಿಎಸ್‌ಐ ಆಗಿ ನೇಮಕವಾಗಿದ್ದರು. ಇದೀಗ ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದಿದ್ದಾರೆ.

ಭಾನು ಪ್ರಕಾಶ್ ಅವರು ಮೂಲತಃ ಮೈಸೂರಿನವರಾಗಿದ್ದು, ಕಳೆದ ಬಾರಿ ಐಪಿಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು.
ಮತ್ತೆ ಐಎಎಸ್ ಮಾಡುವ ಕನಸಿನೊಂದಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಈ ಬಾರಿ 600ನೇ ರ‍್ಯಾಂಕ್‌ ಪಡೆದಿದ್ದಾರೆ.

ಭರತ್ ಸಿ ಯಾರಮ್ ಅವರು ಶಿವಮೊಗ್ಗ ಮೂಲದವರಾಗಿದ್ದು, ನಾಲ್ಕನೇ ಬಾರಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದು, ಇವರು 667 ರ‍್ಯಾಂಕ್‌ ಪಡೆದಿದ್ದಾರೆ.

2023ರ ಸೆಪ್ಟೆಂಬರ್ 15, 16, 17, 23 ಮತ್ತು 24ರಂದು ನಡೆದ ಪರೀಕ್ಷೆಗಳಲ್ಲಿ ನಾಗರಿಕ ಸೇವೆಗಳ ಮುಖ್ಯ ಸಂದರ್ಶನ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸೇವಾ ಆಯೋಗವು 2024ರ ಮೊದಲ ಎರಡು ತಿಂಗಳುಗಳಲ್ಲಿ ಸಂದರ್ಶಿಸಿತು.

ಇದನ್ನೂ ಓದಿ | UPSC Results 2023: ಕೋಚಿಂಗ್‌ ಇಲ್ಲದೆ ಓದಿದ ಅನನ್ಯಾ ರೆಡ್ಡಿಗೆ ಯುಪಿಎಸ್‌ಸಿಯಲ್ಲಿ 3ನೇ ರ‍್ಯಾಂಕ್!

2023ರ ಸೆಪ್ಟೆಂಬರ್‌ನಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ನಾಗರಿಕ ಸೇವೆಗಳ ಲಿಖಿತ ಪರೀಕ್ಷೆಯ ಫಲಿತಾಂಶ ಮತ್ತು 2024ರ ಜನವರಿ- ಏಪ್ರಿಲ್‌ಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳ ಆಧಾರದ ಮೇಲೆ ಒಟ್ಟು 1,016 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳಲ್ಲಿ ಗುಂಪು ʼಎʼ ಮತ್ತು ಗುಂಪು ʼಬಿʼ ಹುದ್ದೆಗಳಿಗೆ ಇವರು ನಿಯುಕ್ತರಾಗುತ್ತಾರೆ.

Continue Reading

ಪ್ರಮುಖ ಸುದ್ದಿ

UPSC Result 2024: ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ ಪ್ರಥಮ ರ್‍ಯಾಂಕ್

UPSC Result 2024: ಅಗ್ರಸ್ಥಾನ ಗಳಿಸಿದವರ ಟಾಪ್‌ 10 ಪಟ್ಟಿಯಲ್ಲಿ ಅನಿಮೇಶ್ ಪ್ರಧಾನ್, ಡೋಣೂರು ಅನನ್ಯಾ ರೆಡ್ಡಿ, ಪಿಕೆ ಸಿದ್ಧಾರ್ಥ್ ರಾಮ್‌ಕುಮಾರ್ ಮತ್ತು ರುಹಾನಿ ಅವರು ಪಟ್ಟಿಯಲ್ಲಿ ಅಗ್ರ ಐದು ಅಭ್ಯರ್ಥಿಗಳಾಗಿದ್ದರೆ, ಸೃಷ್ಟಿ ದಾಬಾಸ್, ಅನ್ಮೋಲ್ ರಾಥೋಡ್, ಆಶಿಶ್ ಕುಮಾರ್, ನೌಶೀನ್ ಮತ್ತು ಆಸಿಹ್ವರಾಯಮ್ ಪ್ರಜಾಪತಿ ನಂತರದ ಸ್ಥಾನಗಳಲ್ಲಿದ್ದಾರೆ.

VISTARANEWS.COM


on

UPSC Result 2024:
Koo

ಹೊಸದಿಲ್ಲಿ: ಕೇಂದ್ರ ಸಾರ್ವಜನಿಕ ಸೇವಾ ಆಯೋಗ (Union Public Service Commission – UPSC) ನಡೆಸಿದ ಈ ವರ್ಷದ ಪರೀಕ್ಷೆಯ ಫಲಿತಾಂಶಗಳನ್ನು (UPSC Result 2024) ಪ್ರಕಟಿಸಿದೆ. ಆದಿತ್ಯ ಶ್ರೀವಾಸ್ತವ (Aditya Srivastava) ಅವರು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಅಗ್ರಸ್ಥಾನ (UPSC Result 2024 topper) ಗಳಿಸಿದ್ದಾರೆ.

ಅಗ್ರಸ್ಥಾನ ಗಳಿಸಿದವರ ಟಾಪ್‌ 10 ಪಟ್ಟಿಯಲ್ಲಿ ಅನಿಮೇಶ್ ಪ್ರಧಾನ್, ಡೋಣೂರು ಅನನ್ಯಾ ರೆಡ್ಡಿ, ಪಿಕೆ ಸಿದ್ಧಾರ್ಥ್ ರಾಮ್‌ಕುಮಾರ್ ಮತ್ತು ರುಹಾನಿ ಅವರು ಪಟ್ಟಿಯಲ್ಲಿ ಅಗ್ರ ಐದು ಅಭ್ಯರ್ಥಿಗಳಾಗಿದ್ದರೆ, ಸೃಷ್ಟಿ ದಾಬಾಸ್, ಅನ್ಮೋಲ್ ರಾಥೋಡ್, ಆಶಿಶ್ ಕುಮಾರ್, ನೌಶೀನ್ ಮತ್ತು ಆಸಿಹ್ವರಾಯಮ್ ಪ್ರಜಾಪತಿ ನಂತರದ ಸ್ಥಾನಗಳಲ್ಲಿದ್ದಾರೆ.

2023ರ ಸೆಪ್ಟೆಂಬರ್ 15, 16, 17, 23 ಮತ್ತು 24ರಂದು ನಡೆದ ಪರೀಕ್ಷೆಗಳಲ್ಲಿ ನಾಗರಿಕ ಸೇವೆಗಳ ಮುಖ್ಯ ಸಂದರ್ಶನ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸೇವಾ ಆಯೋಗವು 2024ರ ಮೊದಲ ಎರಡು ತಿಂಗಳುಗಳಲ್ಲಿ ಸಂದರ್ಶಿಸಿತು.

2023ರ ಸೆಪ್ಟೆಂಬರ್‌ನಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ನಾಗರಿಕ ಸೇವೆಗಳ ಲಿಖಿತ ಪರೀಕ್ಷೆಯ ಫಲಿತಾಂಶ ಮತ್ತು 2024ರ ಜನವರಿ- ಏಪ್ರಿಲ್‌ಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳ ಆಧಾರದ ಮೇಲೆ ಒಟ್ಟು 1,016 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳಲ್ಲಿ ಗುಂಪು ʼಎʼ ಮತ್ತು ಗುಂಪು ʼಬಿʼ ಹುದ್ದೆಗಳಿಗೆ ಇವರು ನಿಯುಕ್ತರಾಗುತ್ತಾರೆ.

ಶಿಫಾರಸು ಮಾಡಿದ 355 ಅಭ್ಯರ್ಥಿಗಳ ಉಮೇದುವಾರಿಕೆಯನ್ನು ತಾತ್ಕಾಲಿಕವಾಗಿ ಇಟ್ಟುಕೊಳ್ಳಲಾಗಿದೆ. UPSC ತನ್ನ ಕ್ಯಾಂಪಸ್‌ನಲ್ಲಿರುವ ಪರೀಕ್ಷಾ ಹಾಲ್‌ನ ಬಳಿ “ಸಂಪರ್ಕ ಕೌಂಟರ್” ಅನ್ನು ತೆರೆದಿದೆ. ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳು/ನೇಮಕಾತಿಗಳ ಕುರಿತು ಯಾವುದೇ ಮಾಹಿತಿ/ಸ್ಪಷ್ಟೀಕರಣವನ್ನು ಕೆಲಸದ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 23385271/23381125/23098543 ಮೂಲಕ ಪಡೆಯಬಹುದು.

ಫಲಿತಾಂಶ ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗೆ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಪ್ರಕಟಿಸಲಾಗುತ್ತದೆ. ವ್ಯಕ್ತಿತ್ವ ಪರೀಕ್ಷೆಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು UPSC ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಪರಿಶೀಲಿಸಬಹುದು.

ಫಲಿತಾಂಶವನ್ನು ಪರಿಶೀಲಿಸಲು ಹೀಗೆ ಮಾಡಿ:

1) ನಿಮ್ಮ ಬ್ರೌಸರ್‌ನಲ್ಲಿ upsc.gov.in ತೆರೆಯಿರಿ

2) What’s New ಸೆಕ್ಷನ್‌ನ ಅಡಿಯಲ್ಲಿ ‘UPSC Civil Services Examination 2023 Final Results’ ಎಂಬುದರ ಮೇಲೆ ಕ್ಲಿಕ್ ಮಾಡಿ.

3) ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಹೆಸರನ್ನು ಪಿಡಿಎಫ್ ಮೂಲಕ ನೀಡಲಾಗಿರುವುದು ತೆರೆಯುತ್ತದೆ.

ಇದನ್ನೂ ಓದಿ: UPSC CSE 2024: ಯುಪಿಎಸ್‌ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ನಿಯಮದಲ್ಲಿದೆ ಕೆಲವು ಬದಲಾವಣೆ; ಇಲ್ಲಿದೆ ಮಾಹಿತಿ

Continue Reading

ಉದ್ಯೋಗ

Old Pension Scheme: ಹಳೆಯ ಪಿಂಚಣಿ ಬೇಕಿದ್ದರೆ ಯೋಚಿಸಿ ನಿರ್ಧಾರ ಮಾಡಿ! ಏನಿದು ರಾಜ್ಯ ಸರ್ಕಾರದ ಆದೇಶ?

Old Pension Scheme: ಹಳೇ ಪಿಂಚಣಿ ವ್ಯವಸ್ಥೆಗೆ ಒಳಪಡಿಸುವ ಸಂಬಂಧ 2006 ಏಪ್ರಿಲ್‌ 1ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ಸಂಬಂಧಪಟ್ಟ ಸರ್ಕಾರಿ ನೌಕರರಿಂದ ಅಭಿಮತ ಪಡೆದು ಕ್ರಮ ಕೈಗೊಳ್ಳುವ ಸಂಬಂಧಪಟ್ಟಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.

VISTARANEWS.COM


on

Old Pension Scheme new order from Karnataka state government
Koo

ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆಗೆ (National Pension Scheme) ಸಂಬಂಧಪಟ್ಟಂತೆ ಹಳೇ ಪಿಂಚಣಿ (Old Pension Scheme) ಜಾರಿಗೆ ಒತ್ತಾಯಿಸಿ ಈಗಾಗಲೇ ಸಾಕಷ್ಟು ಹೋರಾಟಗಳು ನಡೆದಿವೆ. ಈಗ ರಾಜ್ಯ ಸರ್ಕಾರವೂ ಜಾರಿಗೆ ಒಪ್ಪಿಗೆ ನೀಡಿದ್ದಲ್ಲದೆ ಆದೇಶವನ್ನು ಸಹ ನೀಡಿದೆ. ಈ ಏಪ್ರಿಲ್‌ 1ರಂದು ರಾಜ್ಯ ಸರ್ಕಾರದಿಂದ ಮತ್ತೊಂದು ಆದೇಶ ಜಾರಿಯಾಗಿದ್ದು, ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. 01.04.2006ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನಾ ವ್ಯಾಪ್ತಿಗೆ ಒಳಪಡಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ನೀಡಿದೆ. ಹಳೇ ಪಿಂಚಣಿ ವ್ಯವಸ್ಥೆಯನ್ನು ತೆಗೆದುಕೊಳ್ಳುವವರು ಸರಿಯಾಗಿ ನಿರ್ಧಾರ ಮಾಡಿ ಆಯ್ಕೆ ಮಾಡಿಕೊಳ್ಳಬೇಕು. ಒಮ್ಮೆ ಆಯ್ಕೆ ಮಾಡಿಕೊಂಡ ಬಳಿಕ ಪುನಃ ಬದಲಾವಣೆ ಮಾಡಲು ಅವಕಾಶ ಇಲ್ಲ ಎಂದು ಹೇಳಿದೆ.

ಹಳೇ ಪಿಂಚಣಿ ವ್ಯವಸ್ಥೆಗೆ ಒಳಪಡಿಸುವ ಸಂಬಂಧ 2006 ಏಪ್ರಿಲ್‌ 1ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ಸಂಬಂಧಪಟ್ಟ ಸರ್ಕಾರಿ ನೌಕರರಿಂದ ಅಭಿಮತ ಪಡೆದು ಕ್ರಮ ಕೈಗೊಳ್ಳುವ ಸಂಬಂಧಪಟ್ಟಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.

ರಾಜ್ಯ ಸರ್ಕಾರ ವಿಧಿಸಿದ ಷರತ್ತುಗಳು ಏನು?

  • ದಿನಾಂಕ: 01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಸರ್ಕಾರಿ ನೌಕರರು ಹಿಂದಿನ ಡಿಫೈನ್ಡ್‌ ಪಿಂಚಣಿ ಯೋಜನೆಗೆ ಒಳಪಡಲು ಇಚ್ಛಿಸಿದಲ್ಲಿ ತಮ್ಮ ಅಭಿಮತವನ್ನು ನಿಗದಿತ ನಮೂನೆಯಲ್ಲಿ ದಿನಾಂಕ:30.06.2024ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೇರವಾಗಿ ಸಲ್ಲಿಸತಕ್ಕದ್ದು. ಈ ಆಯ್ಕೆಯನ್ನು ಒಂದು ಬಾರಿಗೆ ಮಾತ್ರ ಚಲಾಯಿಸಲು ಅವಕಾಶವಿರುತ್ತದೆ.
  • ಒಂದು ಬಾರಿ ಮಾಡಿಕೊಂಡ ಆಯ್ಕೆಯನ್ನು ಬದಲಾಯಿಸಲು ಅವಕಾಶವಿಲ್ಲ.
Old Pension Scheme new order from Karnataka state government
  • ಒಂದು ವೇಳೆ ಅರ್ಹ ಸರ್ಕಾರಿ ನೌಕರರು ನಿಗದಿತ ದಿನಾಂಕದೊಳಗೆ ಮೇಲೆ ಹೇಳಲಾದ ಆಯ್ಕೆಯನ್ನು ಮಾಡಿಕೊಳ್ಳದೆ ಇದ್ದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮುಂದುವರಿಯುತ್ತಾರೆ.
  • ದಿನಾಂಕ 01.04.2006ರ ಪೂರ್ವದಲ್ಲಿನ ರಾಜ್ಯ ಸಿವಿಲ್ ಸೇವೆಯಲ್ಲಿನ ಖಾಲಿ ಹುದ್ದೆಗಳಿಗೆ ಹೊರಡಿಸಲಾದ ನೇಮಕಾತಿ ಅಧಿಸೂಚನೆಯನ್ವಯ ಆಯ್ಕೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ತದನಂತರ ಸಮುಚಿತ ಮಾರ್ಗದಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಅನ್ಯ ಇಲಾಖೆಯಲ್ಲಿನ ಹುದ್ದೆಗೆ ನೇಮಕಾತಿ ಹೊಂದಿದ ಅರ್ಹ ಸರ್ಕಾರಿ ನೌಕರರು ಹಿಂದಿನ ಡಿಫೈನ್ಡ್‌ ಪಿಂಚಣಿ ಯೋಜನೆ ಸೌಲಭ್ಯ ಪಡೆದುಕೊಳ್ಳಲು ಇಚ್ಛಿಸಿದಲ್ಲಿ ಮನವಿಯನ್ನು ಹಿಂದಿನ ನೇಮಕಾತಿ ಪ್ರಾಧಿಕಾರಕ್ಕೆ ದಿನಾಂಕ: 30.06.2024ರೊಳಗಾಗಿ ಸಲ್ಲಿಸತಕ್ಕದ್ದು. ನೇಮಕಾತಿ ಪ್ರಾಧಿಕಾರವು ಅಂತಹ ಸರ್ಕಾರಿ ನೌಕರನು ಸಮುಚಿತ ಮಾರ್ಗದಲ್ಲಿ ಅರ್ಜಿ ಸಲ್ಲಿಸಿ ಅನ್ಯ ಇಲಾಖೆಗೆ ಆಯ್ಕೆಯಾದ ಹುದ್ದೆಗೆ ವರದಿ ಮಾಡಿಕೊಳ್ಳುವ ಸಲುವಾಗಿ ಬಿಡುಗಡೆ ಹೊಂದಿರುವುದನ್ನು ಹಾಗೂ ಹಿಂದಿನ ಡಿಫೈನ್ಡ್‌ ಪಿಂಚಣಿ ಯೋಜನೆಗೆ ಅರ್ಹತೆ ಹೊಂದಿರುವುದನ್ನು ಖಚಿತಪಡಿಸಿಕೊಂಡು ಮುಂದಿನ ಕ್ರಮವಹಿಸತಕ್ಕದ್ದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Job Alert: ಬಿಎಂಟಿಸಿ 2,500 ಕಂಡಕ್ಟರ್ ಹುದ್ದೆಯ ಪರಿಷ್ಕೃತ ಅಧಿಸೂಚನೆ ಪ್ರಕಟ; ಇಲ್ಲಿ ಪರಿಶೀಲಿಸಿ

ಹೀಗಾಗಿ ಇಚ್ಛೆಯುಳ್ಳ ಎಲ್ಲ ಅರ್ಹ ನೌಕರರು ಅಂತಿಮ ದಿನಾಂಕದವರೆಗೂ ಕಾಯದೆ ಅನುಬಂಧದ ನಮೂನೆಯಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕರು ಆದೇಶದಲ್ಲಿ ಸೂಚಿಸಿದ್ದಾರೆ.

    Continue Reading

    ಕರ್ನಾಟಕ

    7th Pay Commission: 7ನೇ ವೇತನ ಆಯೋಗದ ವರದಿ ಸ್ವೀಕಾರ; ಸಿಎಂಗೆ ರಾಜ್ಯ ಸರ್ಕಾರಿ ನೌಕರರ ಸಂಘ ಅಭಿನಂದನೆ

    7th Pay Commission: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು ಶನಿವಾರ, ತನ್ನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ

    VISTARANEWS.COM


    on

    CM Siddaramaiah
    Koo

    ಬೆಂಗಳೂರು: ರಾಜ್ಯ 7ನೇ ವೇತನ ಆಯೋಗದ ವರದಿಯನ್ನು (7th Pay Commission) ಸ್ವೀಕರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ವೇತನ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

    ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ವರದಿಯನ್ನು ಸಲ್ಲಿಸಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಮತ್ತು ಪದಾಧಿಕಾರಿಗಳು ಭೇಟಿಯಾಗಿ ಸ್ಮರಣಿಕೆ ನೀಡಿ ಧನ್ಯವಾದ ಸಲ್ಲಿಸಿದ್ದಾರೆ.

    ನಂತರ ರಾಜ್ಯದ ಏಳನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ ರಾವ್ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

    ಇದನ್ನೂ ಓದಿ | 7th Pay Commission : ಸರ್ಕಾರಿ ನೌಕರರಿಗೆ ಬಂಪರ್‌; 7ನೇ ವೇತನ ಆಯೋಗದ ಶಿಫಾರಸುಗಳ ಫುಲ್‌ ಲಿಸ್ಟ್‌

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳ ಪರಿಷ್ಕರಣೆಗಾಗಿ ಸಲ್ಲಿಸಿದ್ದ ಮನವಿಯಲ್ಲಿ ಹಲವು ಅಂಶಗಳನ್ನು ಪರಿಗಣಿಸಿ ವೇತನ ಆಯೋಗ ಶಿಫಾರಸುಗಳನ್ನು ಮಾಡಿದೆ.

    ವರದಿಯ ಪ್ರಮುಖ ಶಿಫಾರಸ್ಸುಗಳು

    • ದಿನಾಂಕ: 01-07-2022ಕ್ಕೆ ಇದ್ದಂತೆ ರಾಜ್ಯ ಸರ್ಕಾರಿ ನೌಕರರ ಮೂಲ ವೇತನಕ್ಕೆ ಶೇ. 27.50 ರಷ್ಟು ಫಿಟ್‌ ಮೆಂಟ್ ಹೆಚ್ಚಿಸಲು ಶಿಫಾರಸು
    • ದಿನಾಂಕ: 01-07-2022ಕ್ಕೆ ಇದ್ದಂತಹ ಶೇ. 31 ತುಟ್ಟಿಭತ್ಯೆ ವಿಲೀನ ಹಾಗೂ ಮೇಲಿನ ಶೇ.27.50 ರಷ್ಟು ಸೇರಿ ಒಟ್ಟು ಶೇ. 58.50ರಷ್ಟು ಮೂಲ ವೇತನದಲ್ಲಿ ಹೆಚ್ಚಳ.
    • ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ರೂ. 17,000ರಿಂದ 27,000ಕ್ಕೆ ಹಾಗೂ 1,04.600ರಿಂದ 2,41,200ಕ್ಕೆ ಹೆಚ್ಚಳ.
    • ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿ ಹಾಗೂ ಫಿಟ್ ಮೆಂಟ್ ಸೌಲಭ್ಯವನ್ನು 2022ರ ಜು.01 ರಿಂದ ಕಾಲ್ಪನಿಕವಾಗಿ ಅನುಷ್ಠಾನಗೊಳಿಸಲು ಶಿಫಾರಸು.
    • ವಾರ್ಷಿಕ ವೇತನ ಬಡ್ತಿ ದರವನ್ನು ಕನಿಷ್ಠ ರೂ. 400ರಿಂದ ರೂ. 650ಕ್ಕೆ ಹಾಗೂ ಗರಿಷ್ಠ 3100ರಿಂದ 5,000 ಹೆಚ್ಚಳ
      ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ದಿನಾಂಕ:2022ರ ಜುಲೈ 1ರಿಂದ ಭಾರತ ಸರ್ಕಾರವು ಮಂಜೂರು ಮಾಡಿದ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ ಶೇ. 0.722ರಷ್ಟು ನೀಡುವುದು.
    • ಭಾರತ ಸರ್ಕಾರವು ತನ್ನ ನೌಕರರಿಗೆ ಮುಂದೆ ವೇತನ ಪರಿಷ್ಕರಿಸಿದಾಗ ಕೇಂದ್ರ ವೇತನ ರಚನೆಯ ಆಧಾರದ ಮೇಲೆ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಕೇಂದ್ರ ಮಾದರಿಯ ವೇತನ ನೀಡಲು ಶಿಫಾರಸು ಮಾಡಿದೆ.
    • ಗ್ರೂಪ್ ‘ಸಿ’ ಮತ್ತು ‘ಡಿ’ ವೃಂದದ ನೌಕರರಿಗೆ ಹಾಲಿ ಇರುವ ಜಿ.ಐ.ಎಸ್. ಮಾಸಿಕ ವಂತಿಗೆಯನ್ನು ಶೇ. 100% ಕ್ಕೆ ಹೆಚ್ಚಳ ಮತ್ತು ಗ್ರೂಪ್ ‘ಎ’ ಮತ್ತು ‘ಬಿ’ ವೃಂದಕ್ಕೆ ಶೇ. 50%ಕ್ಕೆ ಹೆಚ್ಚಿಸಲು ಶಿಫಾರಸು.
    • ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ಮನೆ ಬಾಡಿಗೆ ಭತ್ಯೆಗಳನ್ನು ಕ್ರಮವಾಗಿ ‘ಎ’ ವರ್ಗದ ನಗರಗಳಿಗೆ ಶೇ.20%, ‘ಬಿ’ ವರ್ಗದ ನಗರಗಳಿಗೆ ಶೇ.15%, ‘ಸಿ’ ವರ್ಗದ ಪ್ರದೇಶಗಳಿಗೆ ಶೇ.7.5% ಶಿಫಾರಸು.
    • ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ನಗರ ಪರಿಹಾರ ಭತ್ಯೆಗಳನ್ನು ಕ್ರಮವಾಗಿ ‘ಎ’ ಮತ್ತು ‘ಬಿ’ ವೃಂದದ ನೌಕರರಿಗೆ ರೂ. 600ರಿಂದ ರೂ. 900ಕ್ಕೆ ಮತ್ತು ‘ಸಿ ಮತ್ತು ‘ಡಿ’ ವೃಂದದ ನೌಕರರಿಗೆ ರೂ. 500ರಿಂದ ರೂ. 750 ಹೆಚ್ಚಳ,
    • ಸಮವಸ್ತ್ರ ಭತ್ಯೆ, ನಿಗದಿತ ಪ್ರಯಾಣ ಭತ್ಯೆ, ಸಾಗಣೆ ಭತ್ಯೆ, ದಿನಭತ್ಯೆ ಮತ್ತು ವರ್ಗಾವಣೆ ಅನುದಾನವನ್ನು ಹಾಲಿ ಇರುವ ದರಗಳಿಗೆ ಶೇ.25% ಹೆಚ್ಚಳ.
    • ವಿಕಲಚೇತನ ನೌಕರರಿಗೆ ಹಲವಾರು ಭತ್ಯೆಗಳು ಮತ್ತು ಸೌಲಭ್ಯಗಳನ್ನು ಹೆಚ್ಚಳಕ್ಕೆ ಶಿಫಾರಸು
    • ವಿಶೇಷಚೇತನ ಮಕ್ಕಳ ಶೈಕ್ಷಣಿಕ ಭತ್ಯೆಯನ್ನು ಪ್ರತಿ ತಿಂಗಳು 1000 ರೂ.ಗಳಿಂದ 2000 ರೂ. ಹೆಚ್ಚಳಕ್ಕೆ ಶಿಫಾರಸು.
    • ನಾಲ್ಕು ಚಕ್ರ ವಾಹನ ಖರೀದಿ ಮುಂಗಡವನ್ನು 3ಲಕ್ಷ ರೂ. ದಿಂದ 6ಲಕ್ಷ ರೂ.ಗೆ ಹಾಗೂ ದ್ವಿ-ಚಕ್ರ ವಾಹನಕ್ಕೆ 50,000 ರೂ.ಗಳಿಂದ 80,000 ರೂ. ಹೆಚ್ಚಳ.
    • ಗೃಹನಿರ್ಮಾಣ ಮುಂಗಡವನ್ನು ‘ಎ’ ವೃಂದಕ್ಕೆ 65 ಲಕ್ಷ ಮತ್ತು ಇತರೆ ವೃಂದದ ನೌಕರರಿಗೆ 40 ಲಕ್ಷಗಳಿಗೆ ಹೆಚ್ಚಳ.
    • ನೌಕರರ ಸೇವಾವಧಿಯಲ್ಲಿ ಮೂರು ಭಾರಿ ಎಲ್.ಟಿ.ಸಿ. ಸೌಲಭ್ಯಕ್ಕೆ ಅವಕಾಶ.
    • ಗ್ರೂಪ್ ‘ಡಿ’ ಮತ್ತು ‘ಸಿ’ ವೃಂದದ ನೌಕರರಿಗೆ ಹಾಲಿ ಇದ್ದಂತಹ ವೈದ್ಯಕೀಯ ಭತ್ಯೆ 200 ರಿಂದ 500ರೂ.ಗಳಿಗೆ ಹೆಚ್ಚಳ.
    • ಸರ್ಕಾರಿ ನೌಕರರ ಅವಲಂಬಿತ ಕುಟುಂಬ ಸದಸ್ಯರು ಅನಾರೋಗ್ಯದ ಸಂದರ್ಭದಲ್ಲಿ ಆರೈಕೆ ಮಾಡಲು ಶೇ. 50% ವೇತನದೊಂದಿಗೆ 180 ದಿನಗಳ ‘ಆರೈಕೆ ರಜೆ’ ಎಂಬ ಹೊಸ ಯೋಜನೆಗೆ ಶಿಫಾರಸು ಮಾಡಿದೆ.
    • ಸರ್ಕಾರಿ ಸೇವೆಗೆ ಸೇರುವ 2 ತಿಂಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ ನವಜಾತ ಶಿಶುವಿನ ಹಾರೈಕೆಗಾಗಿ 18 ವಾರಗಳ ಹೆರಿಗೆ ರಜೆಗೆ ಶಿಫಾರಸು ಮಾಡಿದೆ.
    • ಕೆಲಸ-ವಿರಾಮ ಸಮತೋಲನವನ್ನು ಸುಧಾರಿಸಲು ಹಾಗೂ ಸರ್ಕಾರಿ ನೌಕರರ ಕೆಲಸದ ಗುಣಮಟ್ಟವನ್ನು ಹೆಚ್ಚಿಸಲು ವಾರದ ಐದು ದಿನಗಳ ಕೆಲಸದ ಅವಧಿಯನ್ನು ಪರಿಚಯಿಸಲು ಶಿಫಾರಸು ಮಾಡಿದೆ.
      ರಾಜ್ಯ ಸರ್ಕಾರಿ ನೌಕರರ ಆಡಳಿತ ಇಲಾಖೆಯ ಹಾಗೂ ಕ್ಷೇತ್ರ ಇಲಾಖೆಗಳ ನೌಕರರಿಗೆ ಗುಣಮಟ್ಟದ ತರಬೇತಿಗಾಗಿ ಸಮಗ್ರ ತರಬೇತಿಗೆ ಶಿಫಾರಸು ಮಾಡಿದೆ.
    • ಈ ಮೇಲ್ಕಂಡ ಎಲ್ಲಾ ಸೌಲಭ್ಯಗಳು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ ರೀತಿಯಲ್ಲಿಯೇ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಅನ್ವಯಗೊಳಿಸಲು ಶಿಫಾರಸು ಮಾಡಿದೆ.
    • ಮಾಸಿಕ ಪಿಂಚಣಿಯ ಪ್ರಮಾಣವು ಅಂತಿಮ ಮೂಲ ವೇತನದ ಶೇ. 50% ರಷ್ಟು ಹಾಗೂ ಕುಟುಂಬ
      ಪಿಂಚಣಿಯು ಶೇ. 30% ಮುಂದುವರೆದು, ಕನಿಷ್ಠ ಪಿಂಚಣಿ ರೂ. 13,500 ಹಾಗೂ ಗರಿಷ್ಠ
      ಪಿಂಚಣಿ 1,20,600 ರೂ.ಗಳಿಗೆ ಪರಿಷ್ಕರಿಸಿದೆ.
    • 70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ ಶೇ. 10% ರಷ್ಟು ಶಿಫಾರಸ್ಸು ಮಾಡಿದೆ.
    • ಪಿಂಚಣಿದಾರರಿಗೆ ‘ಸಂಧ್ಯಾಕಿರಣ’ ಎಂಬ ಆರೋಗ್ಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಶಿಫಾರಸ್ಸು ಮಾಡಿದೆ. ಅಲ್ಲಿಯವರೆಗೆ ಮಾಸಿಕ ರೂ. 500-00ಗಳ ವೈದ್ಯಕೀಯ ಭತ್ಯೆ ನೀಡಲು ಶಿಫಾರಸು ಮಾಡುತ್ತದೆ.
    • ಪಿಂಚಣಿದಾರರು ಮರಣ ಹೊಂದಿದಲ್ಲಿ 10,000 ರೂ. ಶವಸಂಸ್ಕಾರ ಮೊತ್ತವನ್ನು ನೀಡಲು ಶಿಫಾರಸು
    • ವಿವಿಧ ವೃಂದಗಳ ವೇತನ ತಾರತಮ್ಯ ಹಾಗೂ ಇಲಾಖೆಗಳ ಬೇಡಿಕೆಗಳ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನೀಡಿದ ಮನವಿಯನ್ನು ಪರಿಶೀಲಿಸಿ ಮತ್ತೊಂದು ಅಂತಿಮ ವರದಿಯನ್ನು ಆದಷ್ಟು ಶೀಘ್ರದಲ್ಲಿಯೇ ಆಯೋಗವು ಸರ್ಕಾರಕ್ಕೆ ಸಲ್ಲಿಸಲಿದೆ.

    ಇದನ್ನೂ ಓದಿ | 7th Pay Commission : 7ನೇ ವೇತನ ಆಯೋಗದ ವರದಿ ಸ್ವೀಕರಿಸಿದ ಸಿಎಂ; 27.5 % ವೇತನ ಹೆಚ್ಚಳ ಪರಿಶೀಲನೆ

    Continue Reading
    Advertisement
    Benefits of Spinach Juice
    ಆರೋಗ್ಯ53 seconds ago

    Benefits Of Spinach Juice: ದಟ್ಟ ಕೂದಲು ಬೇಕೆ? ಪಾಲಕ್‌ ಜ್ಯೂಸ್‌ ಕುಡಿಯಿರಿ

    murder case gadag
    ಕ್ರೈಂ14 mins ago

    Murder Case: ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿ 4 ಮಂದಿ ಮಲಗಿದಲ್ಲೇ ಕೊಚ್ಚಿ ಕೊಲೆ

    voting
    ಪ್ರಮುಖ ಸುದ್ದಿ41 mins ago

    Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

    kalpana chawla rajamarga column
    ಅಂಕಣ59 mins ago

    ರಾಜಮಾರ್ಗ ಅಂಕಣ: ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತು ಪಡಿಸಿದ ಕಲ್ಪನಾ ಚಾವ್ಲಾ!

    Karnataka Weather Forecast
    ಮಳೆ2 hours ago

    Karnataka Weather : 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ; ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

    Dina bhavishya
    ಭವಿಷ್ಯ3 hours ago

    Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

    Steet Food
    ಆಹಾರ/ಅಡುಗೆ8 hours ago

    ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

    IPL 2024
    ಪ್ರಮುಖ ಸುದ್ದಿ8 hours ago

    IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

    Physical Abuse
    ದೇಶ8 hours ago

    Physical Abuse : ಸ್ಪೇನ್​ನ ಮಹಿಳೆ ಮೇಲೆ ಜಾರ್ಖಂಡ್​ನಲ್ಲಿ ಗ್ಯಾಂಗ್​ ರೇಪ್​; ತಿಂಗಳ ಬಳಿಕ ಪ್ರಕರಣ ಬಯಲು

    Amanatullah Khan
    ದೇಶ9 hours ago

    Amanatullah Khan: ಆಪ್‌ಗೆ ಮತ್ತಷ್ಟು ಸಂಕಷ್ಟ; ಶಾಸಕ ಅಮಾನತುಲ್ಲಾ ಖಾನ್ ಅರೆಸ್ಟ್‌

    Sharmitha Gowda in bikini
    ಕಿರುತೆರೆ7 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ6 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ6 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ5 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ7 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ6 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ6 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ4 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ5 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ7 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    Dina bhavishya
    ಭವಿಷ್ಯ3 hours ago

    Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

    Dina Bhavishya
    ಭವಿಷ್ಯ2 days ago

    Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

    dina bhavishya
    ಭವಿಷ್ಯ3 days ago

    Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

    HD Kumaraswamy apologised to womens for his statement and slams DK Shivakumar
    Lok Sabha Election 20244 days ago

    HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

    Dina Bhavishya
    ಭವಿಷ್ಯ4 days ago

    Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

    Modi in Karnataka Modi roadshow in coastal area Mangalore Watch video
    Lok Sabha Election 20244 days ago

    Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

    dina bhavishya
    ಭವಿಷ್ಯ5 days ago

    Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

    Dina Bhavishya
    ಭವಿಷ್ಯ6 days ago

    Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

    Rameshwaram Cafe Blast Fake IDs created and captured bombers hiding in Kolkata
    ಕ್ರೈಂ7 days ago

    Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

    Dina Bhavishya
    ಭವಿಷ್ಯ1 week ago

    Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

    ಟ್ರೆಂಡಿಂಗ್‌