NPS News | ಎರಡನೇ ದಿನಕ್ಕೆ ಕಾಲಿಟ್ಟ ಎನ್‌ಪಿಎಸ್‌ ನೌಕರರ ಪ್ರತಿಭಟನೆ Vistara News

ನೌಕರರ ಕಾರ್ನರ್

NPS News | ಎರಡನೇ ದಿನಕ್ಕೆ ಕಾಲಿಟ್ಟ ಎನ್‌ಪಿಎಸ್‌ ನೌಕರರ ಪ್ರತಿಭಟನೆ

ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಬೆಂಗಳೂರಿನಲ್ಲಿ (NPS News) ನಡೆಸುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ.

VISTARANEWS.COM


on

NPS News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರ ಸಂಘ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್‌ ಪ್ರತಿಭಟನೆ (NPS News) ಎರಡನೇ ದಿನವೂ ಮುಂದುವರಿದಿದೆ.

ನೌಕರರಿಗೆ ಸಂಧ್ಯಾಕಾಲದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಲು ಎನ್‌ಪಿಎಸ್‌ ರದ್ದು ಪಡಿಸಿ, ಒಪಿಎಸ್‌ ಜಾರಿಗೊಳಿಸಬೇಕು. ಇದು “ಮಾಡು ಇಲ್ಲವೇ ಮಡಿ” ಹೋರಾಟವಾಗಿದ್ದು, ನಮ್ಮ ಬೇಡಿಕೆ ಈಡೇರುವವರೆಗೂ ಈ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು ಘೋಷಿಸಿದ್ದಾರೆ.

NPS News

ಸೋಮವಾರದಿಂದ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಕೊರೆಯುವ ಚಳಿ ಇದ್ದರೂ ನೌಕರರು ಜಾಗ ಬಿಡದೇ ಪ್ರತಿಭಟನಾ ಸ್ಥಳದಲ್ಲಿಯೇ ಮಲಗಿದ್ದರು. ಎನ್‌ಪಿಎಸ್‌ ನೌಕರರ ಸಂಘದ ಮುಖಂಡರು ವೇದಿಕೆಯಲ್ಲಿಯೆ ಮಲಗಿದ್ದರೆ, ನೌಕರರು ತಾವು ಕುಳಿತಲ್ಲಿಯೇ ಮಲಗಿ ಪ್ರತಿಭಟನೆ ಮುಂದುವರಿಸಿದ್ದರು. ರಾಜ್ಯದ ಬೇರೆ ಬೇರೆ ಭಾಗದಿಂದ ಬಂದಿರುವ ಪ್ರತಿಭಟನಾಗಾರರು, ಸರ್ಕಾರ ಸ್ಪಷ್ಟ ಭರವಸೆ ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಘೋಷಿಸಿದ್ದಾರೆ.

ಪ್ರತಿಭಟನೆಯಲ್ಲಿ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತರಾಮ, ರಾಜ್ಯ ಉಪಾಧ್ಯಕ್ಷ ಎಸ್‌.ಪಿ. ಸಂಗಣ್ಣ, ಗೌರವ ಸಲಹೆಗಾರ ಎಸ್‌.ಎಸ್.‌ ಹದ್ಲಿ, ರಾಜ್ಯ ಖಜಾಂಚಿ ಕೇಶವ ಪ್ರಸಾದ್‌, ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ಪಿ.ತಳವಾರ, ಮಂಜುನಾಥ್‌ ಕೆ.ಜೆ., ಕರಾಸ ಎನ್‌ಪಿಎಸ್‌ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಗೌಡ ಎಂ.ಎ., ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ಅನೇಕ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

NPS News
ಎನ್‌ಪಿಎಸ್‌ ನೌಕರರ ಅಹೋರಾತ್ರಿ ಧರಣಿ

ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಮಂಗಳವಾರ ಚರ್ಚೆಗೆ ಬರಬಹುದು. ಈ ಸಂದರ್ಭದಲ್ಲಿ ಸರ್ಕಾರ ತನ್ನ ಅಧಿಕೃತ ನಿಲುವು ಪ್ರಕಟಿಸಬಹುದೆಂಬ ಭರವಸೆಯಲ್ಲಿ ನೌಕರರಿದ್ದಾರೆ.

ಇದನ್ನೂ ಓದಿ | NPS News | ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್‌ ಬೇಡ, ಒಪಿಎಸ್‌ ಬೇಕು ಎನ್ನಲು ಕಾರಣವಾದರೂ ಏನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಉದ್ಯೋಗ

Government employee : ಸರ್ಕಾರಿ ನೌಕರರ ದಶಕಗಳ ಬೇಡಿಕೆ ಈಡೇರಿಕೆ; ಆಸ್ತಿ ಖರೀದಿ ಮತ್ತಷ್ಟು ಸರಳ!

Government employee : ಈಗ ಸರ್ಕಾರಿ ಉದ್ಯೋಗಿಗಳು ಚರ/ ಸ್ಥಿರ ಆಸ್ತಿ ಖರೀದಿಗೆ ಮುಂಚೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕಿದೆ. ಈಗ ಈ ನಿಯಮವನ್ನು ಸಡಿಲಿಸಲು ಮುಂದಾಗಿದ್ದು, ಕಾಲಮಿತಿಯಲ್ಲಿ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಮಾಡುವಂತೆ ನಿಯಮ ತರಲು ಮುಂದಾಗಲಾಗಿದೆ.

VISTARANEWS.COM


on

Property Purchase by Government Employee
Koo

ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ನೌಕರಿಯಲ್ಲಿರುವವರು (Government Job) ಆಸ್ತಿ ಖರೀದಿ (Property Purchase) ಮಾಡಲು ಹರಸಾಹಸವನ್ನೇ ಪಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದ್ದು, ಶೀಘ್ರದಲ್ಲಿಯೇ ಸರ್ಕಾರಿ ನೌಕರರ (Government employee) ಆಸ್ತಿ ಖರೀದಿ ಪ್ರಕ್ರಿಯೆಯನ್ನು ಸರಳೀಕರಿಸುವತ್ತ ಹೆಜ್ಜೆಯನ್ನಿಟ್ಟಿದೆ. ಈ ನಿಟ್ಟಿನಲ್ಲಿ ಆದೇಶ ಹೊರಬಿದ್ದಲ್ಲಿ ನೌಕರರ ದಶಕಗಳ ಬೇಡಿಕೆ ಈಡೇರಿದಂತೆ ಆಗಲಿದೆ.

ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಹೀಗಾಗಿ ಸರ್ಕಾರಿ ನೌಕರರಿಗೆ ಆಸ್ತಿ ಖರೀದಿ ವಿಚಾರದಲ್ಲಿ ಇದ್ದ ತೊಡಕು ಶೀಘ್ರವೇ ಪರಿಹಾರವಾಗಲಿದೆ.

ನಿಯಮ ಸಡಿಲಿಕೆಗೆ ತೀರ್ಮಾನ

ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಚರ/ ಸ್ಥಿರ ಆಸ್ತಿ ಖರೀದಿ ಮಾಡುವ ಪೂರ್ವದಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವು ಈಗಾಗಲೇ ಚಾಲ್ತಿಯಲ್ಲಿದೆ. ಈಗ ಈ ನಿಯಮವನ್ನು ಸಡಿಲಿಸಲು ತೀರ್ಮಾನ ಮಾಡಲಾಗಿದೆ. ಇದರ ಅನುಸಾರ ಕಾಲಮಿತಿಯಲ್ಲಿ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಮಾಡುವಂತೆ ಸರಳೀಕೃತ ನಿಯಮದಲ್ಲಿ ಬದಲಾವಣೆ ತರಲಾಗುತ್ತಿದೆ. ಈ ರೀತಿಯಾದರೆ ಸರ್ಕಾರಿ ನೌಕರರು ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ನೀಡಬೇಕಾಗುತ್ತದೆ.

ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರ ಪಟ್ಟಿ

ಸರ್ಕಾರಿ ನೌಕರರ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರ ಪಟ್ಟಿಯನ್ನು ನಿಗದಿತ ಸಮಯಕ್ಕೆ ಸಲ್ಲಿಸಬೇಕು. ಈ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 1996ರ ನಿಯಮಗಳು, ಪರಿಷ್ಕೃತವಾಗಿ ಕರ್ನಾಟಕ ರಾಜ್ಯ ನಾಗರಿಕ ನಾಗರಿಕ ಸೇವಾ (ನಡತೆ) ನಿಯಮಗಳು, 2021 ದಿನಾಂಕ 07/01/2021ರಿಂದ ಜಾರಿಗೆ ಬಂದಿವೆ. ಸದರಿ ನಿಯಮಗಳ ನಿಯಮ 24ರಲ್ಲಿ ಸರ್ಕಾರಿ ನೌಕರರು ಚರ/ ಸ್ಥಿರ ಆಸ್ತಿ ಖರೀದಿ/ ವಿಲೇ ಮಾಡುವುದಕ್ಕೆ ಸಂಬಂಧಿಸಿದಂತೆ ಉಪಬಂಧಗಳನ್ನು ಕಲ್ಪಿಸಲಾಗಿದೆ.

ನೇಮಕಾತಿಗೆ ಮೊದಲು ಸ್ಥಿರ – ಚರಾಸ್ತಿ ವಿವರ ನೀಡಬೇಕು

ಯಾವುದೇ ಸರ್ಕಾರಿ ನೌಕರಿಗೆ ನೇಮಕವಾದಾಗ ಆರಂಭದಲ್ಲಿಯೇ ಅವರು ತಮ್ಮ ಹೆಸರಿನಲ್ಲಿ ಇಲ್ಲವೇ ಕುಟುಂಬ ಸದಸ್ಯರ ಹೆಸರಿನಲ್ಲಾಗಲಿ ಅಥವಾ ತಮಗೆ ಸಂಬಂಧಪಟ್ಟ ಇತರ ವ್ಯಕ್ತಿಯ ಹೆಸರಿನಲ್ಲಿ ಪಿತ್ರಾರ್ಜಿತವಾಗಿ ಬಂದ ಸ್ವಯಂ ಅರ್ಜಿಸಿದ ಅಥವಾ ಗುತ್ತಿಗೆ ಅಥವಾ ಅಡಮಾನದ ಮೇಲೆ ಹೊಂದಿರುವ ಸ್ಥಿರಾಸ್ತಿಯ ಸಂಪೂರ್ಣ ವಿವರಗಳನ್ನು ನೀಡಬೇಕು. ಈ ವಿವರಗಳನ್ನು ನಿಗದಿತ ನಮೂನೆಯಲ್ಲಿ ಪೂರಕ ದಾಖಲೆಗಳೊಂದಿಗೆ ನೇಮಕವಾದ ಮೂರು ತಿಂಗಳೊಳಗೆ ಸಲ್ಲಿಸಬೇಕು.

ವರ್ಷವೂ ನೀಡಬೇಕು ದಾಖಲೆ

ಇದರ ಹೊರತಾಗಿಯೂ ಸರ್ಕಾರಿ ನೌಕರರು ಪ್ರತಿ ವರ್ಷ ಡಿಸೆಂಬರ್ 31ಕ್ಕೆ ತಮ್ಮ ಹಾಗೂ ಕುಟುಂಬದ ಎಲ್ಲ ಸದಸ್ಯರ ಆಸ್ತಿ ವಿವರ ಮತ್ತು ಹೊಣೆಗಾರಿಕೆಗಳ ವಾರ್ಷಿಕ ವಿವರ ಪಟ್ಟಿಯನ್ನು ನೀಡಬೇಕು. ಜತೆಗೆ ನಿಯಮ 24 ರಲ್ಲಿನ ಉಪಬಂಧಗಳಂತೆ ಪ್ರತಿಯೊಬ್ಬ ಸರ್ಕಾರಿ ನೌಕರರು ಚರ ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ತಿಳಿಸಿರುವ ಸಂದರ್ಭಗಳಲ್ಲಿ ಅನುಮತಿ ಪಡೆಯುವುದು ಹಾಗೂ ವರದಿ ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ಇದರಲ್ಲಿ ವಿಫಲರಾದರೆ, ನಡತೆ ನಿಯಮಗಳಿಗೆ ವ್ಯತಿರಿಕ್ತ ನಡವಳಿಕೆ ಪ್ರದರ್ಶಿಸಿದ ಕಾರಣ ನೀಡಿ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದಾಗಿದೆ.

ಇದನ್ನೂ ಓದಿ: Panic button : ಇಂದಿನಿಂದ ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ; ಅಳವಡಿಸಲು ಆಗುವ ಖರ್ಚೆಷ್ಟು?

ಸಭೆಯ ಇತರ ಪ್ರಮುಖ ನಿರ್ಧಾರಗಳು

  • ಎಲ್ಲ ಇಲಾಖೆಗಳಲ್ಲಿ ಪ್ರತಿ ವರ್ಷ ಮೊದಲ ತಿಂಗಳಿಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಿ ಪ್ರತಿ ಆರು ತಿಂಗಳಿಗೊಮ್ಮೆ ಮುಂಬಡ್ತಿ ಕೋಟಾದಡಿ ಹುದ್ದೆಗಳನ್ನು ಗುರುತಿಸಿ ಪದೋನ್ನತಿ ನೀಡುವುದು.
  • ಲೋಕ ಅದಾಲತ್ ಮಾದರಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಕಾಲಮಿತಿಯಲ್ಲಿ ನೌಕರರ ಇಲಾಖಾ ವಿಚಾರಣೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ನಿರ್ಧರಿಸಲಾಗಿದೆ.
  • ಸರ್ಕಾರಿ ನೌಕರರು ಪಾಸ್‌ಪೋರ್ಟ್‌ಗಳ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಸಂಬಂಧಿಸಿದ ಕಛೇರಿಯ ಮುಖ್ಯಸ್ಥರಿಂದ ಪಡೆಯುವ ಅವಕಾಶವನ್ನು ಜಾರಿಗೆ ತರುವುದು.
  • ಜಿಪಿಎಫ್ ಉಳಿತಾಯ ಖಾತೆಗಳಿಂದ ಮುಂಗಡ/ ಭಾಗಶಃ ವಾಪಸಾತಿ ಪಡೆಯುವ ಸಂದರ್ಭದಲ್ಲಿ ಇದ್ದ ಕಠಿಣ ನಿಯಮವನ್ನು ಸರಳೀಕರಣಗೊಳಿಸುವುದು.
Continue Reading

ಕರ್ನಾಟಕ

Jeevan Pramaan : ಜೀವನ್‌ ಪ್ರಮಾಣ ಪತ್ರ ಸಲ್ಲಿಕೆಗೆ ಇಂದು ಕೊನೇ ದಿನ; ಪೆನ್ಶನ್‌ ಬೇಕಿದ್ರೆ ಮನೆಯಿಂದಲೇ ಸಲ್ಲಿಸಿ!

Jeevan Pramaan : ಪಿಂಚಣಿದಾರರು ಜೀವನ್‌ ಪ್ರಮಾಣ ಪತ್ರ ಸಲ್ಲಿಸಲು ಬ್ಯಾಂಕ್‌ ಹಾಗೂ ಪೋಸ್ಟ್‌ ಆಫೀಸ್‌ಗೆ ಅಲೆಯಬೇಕಿಲ್ಲ. ಈಗ ಮನೆ ಬಾಗಿಲಲ್ಲಿಯೇ ಇದರ ಸೇವೆಯನ್ನು ಪಡೆಯಬಹುದಾಗಿದೆ. ನೆನಪಿಡಿ, ಅರ್ಜಿ ಸಲ್ಲಿಕೆಗೆ ಇಂದೇ ಕೊನೇ ದಿನ.

VISTARANEWS.COM


on

Jeevan Pramaan certificate for pension
Koo

ಬೆಂಗಳೂರು: ಪಿಂಚಣಿದಾರರು (Pensioners) ಜೀವನ್‌ ಪ್ರಮಾಣ (Jeevan Pramaan) ಪತ್ರ ಸಲ್ಲಿಸಲು ಬ್ಯಾಂಕ್‌ ಅಥವಾ ಅಂಚೆ ಕಚೇರಿಗೆ (Bank or Post Office) ತೆರಳಬೇಕಿಲ್ಲ. ಬದಲಾಗಿ ಮನೆಯಿಂದಲೇ ಸಲ್ಲಿಸುವ ಅವಕಾಶವನ್ನು ಈಗಾಗಲೇ ನೀಡಲಾಗಿದೆ. ಆದರೆ, ಇದು ಬಹಳಷ್ಟು ಮಂದಿಗೆ ಇನ್ನೂ ತಿಳಿದಿಲ್ಲ. ಈ ಸೇವೆಯನ್ನು ಒಟ್ಟು 12 ಸಾರ್ವಜನಿಕ ಬ್ಯಾಂಕ್‌ಗಳ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಬ್ಯಾಂಕ್‌ಗಳ ಮೂಲಕ ಡೋರ್‌ಸ್ಟೆಪ್‌ ಬ್ಯಾಂಕಿಂಗ್‌ ಅಲೆಯನ್ಸ್‌ ಸೇವೆಯನ್ನು (Doorstep Banking Alliance Service) ಬಳಸಿಕೊಂಡು ನೀವು ಮನೆಯಲ್ಲಿಯೇ ಜೀವನ್‌ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಇಲ್ಲವೇ ಅಂಚೆ ಇಲಾಖೆ ಕೂಡ ಇದೇ ಮಾದರಿಯ ಸೇವೆಯನ್ನು ನೀಡುತ್ತಿದ್ದು, ಆ ಮೂಲಕವೂ ನೀವು ಸೇವೆಯನ್ನು ಪಡೆಯಬಹುದಾಗಿದೆ. ಆದರೆ, ಜೀವನ್‌ ಪ್ರಮಾಣಪತ್ರ ಸಲ್ಲಿಸಲು ನವೆಂಬರ್‌ 30 ಕೊನೆಯ ದಿನವಾಗಿದ್ದು, ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತವಾಗಲಿದೆ.

ಹೀಗಾಗಿ ಪಿಂಚಣಿದಾರರಿಗೆ ಮನೆಯಿಂದಲೇ ಅವರ ವಾರ್ಷಿಕ ಜೀವನ್‌ ಪ್ರಮಾಣ ಪತ್ರ (ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್ -ಡಿಎಲ್‌ಸಿ)ವನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಈ ಸೇವೆ ಲಭ್ಯವಾಗಿ 2 ವರ್ಷಗಳಾಗಿವೆ.

ಇದನ್ನೂ ಓದಿ: NPS Cancellation : ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ರದ್ದು? ಆರ್ಥಿಕ ಇಲಾಖೆ ಜತೆ ಶೀಘ್ರ ಸಿದ್ದರಾಮಯ್ಯ ಸಭೆ

ಸೇವೆ ನೀಡುವ 12 ಬ್ಯಾಂಕ್‌ಗಳಾವುವು?

ಡೋರ್‌ಸ್ಟೆಪ್‌ ಬ್ಯಾಂಕಿಂಗ್‌ ಅಲೈಯನ್ಸ್‌ ಸೌಲಭ್ಯ ನೀಡಲು 12 ಬ್ಯಾಂಕ್‌ಗಳು ಒಪ್ಪಂದ ಮಾಡಿಕೊಂಡಿವೆ. ಈ ಬ್ಯಾಂಕ್‌ಗಳ ವಿವರ ಇಂತಿದೆ.

  1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)
  2. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)
  3. ಬ್ಯಾಂಕ್ ಆಫ್ ಬರೋಡಾ
  4. ಬ್ಯಾಂಕ್ ಆಫ್ ಇಂಡಿಯಾ
  5. ಕೆನರಾ ಬ್ಯಾಂಕ್
  6. ಬ್ಯಾಂಕ್ ಆಫ್ ಮಹಾರಾಷ್ಟ್ರ
  7. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  8. ಇಂಡಿಯನ್ ಬ್ಯಾಂಕ್
  9. ಇಂಡಿಯನ್ ಓವರ್‌ಸೀಸ್ ಬ್ಯಾಂಕ್
  10. ಪಂಜಾಬ್ ಮತ್ತು ಸಿಂಡ್ ಬ್ಯಾಂಕ್
  11. ಯುಕೋ ಬ್ಯಾಂಕ್
  12. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಈ ಬ್ಯಾಂಕ್‌ ಒಕ್ಕೂಟವು ನಿಮ್ಮ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಗಳ ಅಡಿಯಲ್ಲಿ ಜೀವನ ಪ್ರಮಾಣಪತ್ರಗಳನ್ನು ಸಂಗ್ರಹಿಸುವ ಸೇವೆಯನ್ನು ಪರಿಚಯಿಸಿವೆ.

ಸೇವೆ ಪಡೆಯುವುದು ಹೇಗೆ?

ಪಿಂಚಣಿದಾರರು ಮೊಬೈಲ್‌ ಆ್ಯಪ್‌, ವೆಬ್‌ಸೈಟ್‌ ಅಥವಾ ಟೋಲ್‌-ಫ್ರೀ ಸಂಖ್ಯೆಯ ಮೂಲಕ ಪಿಎಸ್‌ಬಿ ಅಲೈಯನ್ಸ್‌ನ ಈ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೇವೆಯನ್ನು ಪಡೆದುಕೊಳ್ಳಬಹುದು. ಒಮ್ಮೆ ಇಲ್ಲಿ ಬುಕ್‌ ಮಾಡಿದ ಬಳಿಕ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಲಾಗುತ್ತದೆ. ಆಗ, ಬ್ಯಾಂಕ್‌ನ ಏಜೆಂಟರು ಪಿಂಚಣಿದಾರರ ಮನೆಗೆ ನಿಗದಿತ ವೇಳೆಗೆ ಹಾಜರಾಗುತ್ತಾರೆ. ಅವರು ಪಿಂಚಣಿದಾರರ ಎದುರಿನಲ್ಲಿಯೇ ಜೀವನ್‌ ಪ್ರಮಾಣ ಆ್ಯಪ್‌ ಬಳಸಿ ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಅನ್ನು ನೀಡುತ್ತಾರೆ.

ಈ ಸೇವೆ ಪಡೆಯಲು ಗೂಗಲ್‌ ಪ್ಲೇಸ್ಟೋರ್‌ನಿಂದ ‘ಡೋರ್‌ಸ್ಟೆಪ್‌ ಬ್ಯಾಂಕಿಂಗ್‌’ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇನ್ನು ಇದಕ್ಕೆ ವೆಬ್‌ಸೈಟ್‌ ಅನ್ನೂ ನೀಡಲಾಗಿದೆ. ಇದಕ್ಕಾಗಿ ಇಲ್ಲಿ ಎರಡು ಲಿಂಕ್‌ ಅನ್ನು ನೀಡಲಾಗಿದೆ. ಮೊದಲ ಲಿಂಕ್ ಅಥವಾ ಎರಡನೇ ಲಿಂಕ್ ಮೇಲೆ ಕ್ಲಿಕ್‌ ಮಾಡಿ ಸೇವೆಯನ್ನು ಪಡೆಯಬಹುದು. ಇಲ್ಲವೇ ಟೋಲ್‌ ಫ್ರೀ ಸಂಖ್ಯೆ 18001213721 ಅಥವಾ 18001037188 ಅನ್ನು ಸಹ ಬಳಕೆ ಮಾಡಿಕೊಳ್ಳಬಹುದು. ಅಲೈಯನ್ಸ್‌ ವೆಬ್‌ಸೈಟ್‌ನಲ್ಲಿ ಇದಕ್ಕೆ ಸೇವಾ ಶುಲ್ಕ ನಿಗದಿಪಡಿಸಿಲ್ಲವಾದರೂ, ಎಸ್‌ಬಿಐ ವೆಬ್‌ಸೈಟ್‌ ಪ್ರಕಾರ 75 ರೂ. ಹಾಗೂ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

ಪೋಸ್ಟ್‌ ಮ್ಯಾನ್‌ ಸಹ ಈ ಸೇವೆ ನೀಡಲಿದ್ದಾರೆ

ಡಿಜಿಟಲ್‌ ಜೀವನ್‌ ಪ್ರಮಾಣ ಪತ್ರ ವಿತರಣೆ ಸೇವೆಯನ್ನು ಅಂಚೆ ಇಲಾಖೆಯು 2020ರ ನವೆಂಬರ್‌ನಲ್ಲಿ ಪ್ರಾರಂಭ ಮಾಡಿದೆ. ಹೀಗಾಗಿ ಪೋಸ್ಟ್‌ ಮ್ಯಾನ್‌ ಮೂಲಕವೂ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇಂಡಿಯಾ ಪೋಸ್ಟ್‌ ಮೂಲಕ ಈ ಸೇವೆ ಪಡೆಯಲು ಪೋಸ್ಟ್‌ಇನ್ಫೋ (Postinfo) ಆ್ಯಪ್‌ ಅನ್ನು ಡೌನ್ಲೋಡ್‌ ಮಾಡಿಕೊಳ್ಳಬೇಕು.

ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ವೆಬ್‌ಸೈಟ್‌ ಅನುಸಾರ, ಈ ಸೇವೆಯನ್ನು ಖಾತೆದಾರರಲ್ಲದವರೂ ಪಡೆಯಬಹುದಾಗಿದೆ. ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್ (ಡಿಎಲ್‌ಸಿ) ಸೇವೆ ಪಡೆದುಕೊಳ್ಳಲು ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕು. ಇಲ್ಲವೇ ನಿಮ್ಮ ಮನೆಗೆ ಪೋಸ್ಟ್‌ ಮ್ಯಾನ್‌ ಭೇಟಿ ನೀಡಬೇಕೆಂದರೆ ಪೋಸ್ಟ್‌ಇನ್ಫೋ ಆ್ಯಪ್‌ ಮೂಲಕ ಮನವಿ ಮಾಡಬೇಕು. ಇಲ್ಲವೇ ಈ ವೆಬ್‌ಸೈಟ್‌ ಮೂಲಕವೂ ರಿಕ್ವೆಸ್ಟ್‌ ಕಳುಹಿಸಬಹುದು.

ಇದಾದ ಬಳಿಕ ಡಿಎಲ್‌ಸಿ ಸರ್ಟಿಫಿಕೇಟ್‌ ಅನ್ನು ರಚಿಸಬಹುದಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರಮಾಣ್‌ ಐಡಿ (Pramaan ID) ಜನರೇಟ್‌ ಆಗಲಿದೆ. ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ನೇರವಾಗಿ ಪಿಂಚಣಿದಾರರ ಜತೆ ಹಂಚಿಕೊಳ್ಳಲಿದೆ. ಪ್ರಮಾಣ್‌ ಐಡಿ ಲಭ್ಯವಾದ ಬಳಿಕ ಪಿಂಚಣಿದಾರರು ಈ ವೆಬ್‌ಸೈಟ್‌ ಮೂಲಕ ಡಿಎಲ್‌ಸಿಯನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು. ಪ್ರತಿ ಬಾರಿ ಡಿಎಲ್‌ಸಿ ಜನರೇಟ್‌ ಮಾಡಿದಾಗಲೂ 70 ರೂಪಾಯಿಗಳ ಸೇವಾ ಶುಲ್ಕ (ಜಿಎಸ್‌ಟಿ/ಸೆಸ್‌ ಸೇರಿ) ಪಡೆದುಕೊಳ್ಳಲಾಗುತ್ತದೆ. ಮನೆ ಬಾಗಿಲಿಗೆ ಡಿಎಲ್‌ಸಿ ನೀಡಲು ಯಾವುದೇ ಶುಲ್ಕ ಇಲ್ಲ.

ಇದನ್ನೂ ಓದಿ: Health Scheme : ಮನೆ ಮನೆಯತ್ತ ಡಾಕ್ಟರ್‌ – ಔಷಧ ಕಿಟ್;‌ ಜಾರಿಯಾಗಲಿದೆ ಗೃಹ ಆರೋಗ್ಯ ಯೋಜನೆ

ಮನೆ ಬಾಗಿಲಿನಲ್ಲಿ ಜೀವನ್‌ ಪ್ರಮಾಣ ಪತ್ರ ಬೇಕಿದ್ದವರ ಬಳಿ ಇರಲಿ ಈ ದಾಖಲೆ

  • ಆಧಾರ್‌ ಸಂಖ್ಯೆ
  • ಚಾಲನೆಯಲ್ಲಿರುವ ಮೊಬೈಲ್‌ ಸಂಖ್ಯೆ
  • ಪಿಂಚಣಿಯ ವಿಧ
  • ಮಂಜೂರಾತಿ ಪ್ರಾಧಿಕಾರ
  • ಪಿಪಿಒ ಸಂಖ್ಯೆ
  • ಖಾತೆ ಸಂಖ್ಯೆ (ಪಿಂಚಣಿ)

ಇದರ ಜತೆಗೆ ಪಿಂಚಣಿದಾರರ ಆಧಾರ್‌ ಸಂಖ್ಯೆ ಬ್ಯಾಂಕ್‌ ಖಾತೆ/ಅಂಚೆ ಕಚೇರಿಯಲ್ಲಿ ನೋಂದಣಿ ಆಗಿರಬೇಕು.

Continue Reading

ಉದ್ಯೋಗ

ಜೀವನ ಪ್ರಮಾಣ ಪತ್ರ ಇನ್ನೂ ಸಲ್ಲಿಸಿಲ್ಲವೇ? ನಾಳೆಯೇ ಕೊನೇ ದಿನ! ಇಲ್ದಿದ್ರೆ ಸಿಗಲ್ಲ ಪೆನ್ಶನ್

ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಕಡ್ಡಾಯವಾಗಿ ಜೀವನ ಪ್ರಮಾಣ ಪತ್ರ ಸಲ್ಲಿಸಬೇಕು. ಇದಕ್ಕೆ ನವೆಂಬರ್‌ 30 ಕೊನೆಯ ದಿನವಾಗಿದ್ದು, ಗಡುವಿನೊಳಗೆ ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತವಾಗಲಿದೆ.

VISTARANEWS.COM


on

life certificate
Koo

ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಿ ಉದ್ಯೋಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ಜೀವನ ಪ್ರಮಾಣಪತ್ರ (Jeevan Pramaan Patra) ಸಲ್ಲಿಸಲು ನವೆಂಬರ್‌ 30 ಕೊನೆಯ ದಿನವಾಗಿದೆ. ಒಂದು ವೇಳೆ ಗಡುವಿನೊಳಗೆ ಲೈಫ್‌ ಸರ್ಟಿಫಿಕೇಟ್ ( Life Certificate) ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತವಾಗಲಿದೆ.

ಪಿಂಚಣಿ ಪಡೆಯುತ್ತಿರುವ ಪ್ರತಿಯೊಬ್ಬರೂ ಪ್ರತಿ ವರ್ಷ ತಾವು ಜೀವಂತ ಇರುವ ಬಗ್ಗೆ ‘ಲೈಫ್‌ ಸರ್ಟಿಫೀಕೇಟ್’ ಅನ್ನು ಬ್ಯಾಂಕ್‌ ಅಥವಾ ಅಂಚೆ ಕಚೇರಿಗೆ ಸಲ್ಲಿಸಬೇಕು. ನವೆಂಬರ್ 30ರೊಳಗೆ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡದಿದ್ದರೆ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಜತೆಗೆ ಮುಂಬರುವ ತಿಂಗಳ ಪಿಂಚಣಿ ಬರುವುದಿಲ್ಲ. ಬಳಿಕ, ಪ್ರಮಾಣ ಪತ್ರ ನೀಡಿ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿಸಬೇಕು. ನಂತರ ಮುಂಬರುವ ಪಿಂಚಣಿಯಲ್ಲಿ ಹಳೆಯ ಬಾಕಿ ಸೇರಿಸಿ ಪಿಂಚಣಿ ಹಣ ಖಾತೆಗೆ ಜಮೆ ಆಗುತ್ತದೆ.

ಇದನ್ನೂ ಓದಿ | SSC Recruitment 2023 : ಅರೆಸೇನಾಪಡೆಗಳ 75 ಸಾವಿರವಲ್ಲ 26 ಸಾವಿರ ಹುದ್ದೆಗಳಿಗೆ ನೇಮಕ; ಕನ್ನಡದಲ್ಲಿಯೂ ನಡೆಯುತ್ತೆ ಪರೀಕ್ಷೆ!

ಏನಿದು ಜೀವನ ಪ್ರಮಾಣಪತ್ರ?

ಪಿಂಚಣಿ ಪಡೆಯುವವರು ಮೃತಪಟ್ಟ ಬಳಿಕವೂ ಅವರ ಖಾತೆಗೆ ಪಿಂಚಣಿ ಹಣ ಜಮೆಯಾಗುತ್ತಿತ್ತು. ಹಾಗಾಗಿ, ಇದನ್ನು ತಪ್ಪಿಸಲು ಫಲಾನುಭವಿಗಳು ಪ್ರತಿ ವರ್ಷ ತಾವು ಬದುಕಿರುವ ಬಗ್ಗೆ ಒಂದು ಪ್ರಮಾಣಪತ್ರ ಸಲ್ಲಿಕೆ ಮಾಡುವುದು ಕಡ್ಡಾಯ ಮಾಡಲಾಗಿದೆ. ಈ ಪ್ರಮಾಣ ಪತ್ರವನ್ನು ಪಿಂಚಣಿದಾರರು ಪೆನ್ಷನ್ ಡಿಸ್ಬರ್ಸಿಂಗ್ ಏಜೆನ್ಸಿ (ಪಿಡಿಎ) ಅಥವಾ ಪಿಂಚಣಿ ವಿತರಿಸುವ ಸಂಸ್ಥೆಗಳಲ್ಲಿ (ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌) ತೆರಳಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ಡಿಜಿಟಲ್ ಜೀವನ ಪ್ರಮಾಣಪತ್ರ ಯೋಜನೆಯನ್ನು ಕೇಂದ್ರ ಸರ್ಕಾರ 2014ರಲ್ಲಿ ಜಾರಿ ಮಾಡಿತ್ತು.

Continue Reading

ಉದ್ಯೋಗ

KARTET Result 2023: ಟಿಇಟಿ ಫಲಿತಾಂಶ; ಶಿಕ್ಷಕರಾಗಲು 64,830 ಅಭ್ಯರ್ಥಿಗಳು ಅರ್ಹ

KARTET Result 2023: ಕರ್ನಾಟಕ ಟಿಇಟಿ ಪತ್ರಿಕೆ 1 ಮತ್ತು 2 ಪರೀಕ್ಷೆಗೆ ಹಾಜರಾದ ಒಟ್ಟು 3.01 ಲಕ್ಷ ಅಭ್ಯರ್ಥಿಗಳ ಪೈಕಿ 64,830 ಅಭ್ಯರ್ಥಿಗಳು ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ.

VISTARANEWS.COM


on

The teacher is teaching in the school
Koo

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2023ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶವನ್ನು ಪ್ರಕಟಿಸಿದ್ದು, ಟಿಇಟಿ ಪತ್ರಿಕೆ 1 ಮತ್ತು 2 (KARTET Result 2023) ಪರೀಕ್ಷೆಗೆ ಹಾಜರಾದ ಒಟ್ಟು 3.01 ಲಕ್ಷ ಅಭ್ಯರ್ಥಿಗಳ ಪೈಕಿ 64,830 ಅಭ್ಯರ್ಥಿಗಳು ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ.

ಸೆಪ್ಟೆಂಬರ್‌ 3ರಂದು ಟಿಇಟಿ ನಡೆದಿತ್ತು. 1 ರಿಂದ 5ನೇ ತರಗತಿ ಬೋಧನಾ ಅರ್ಹತೆಗೆ ನಡೆದಿದ್ದ ಪತ್ರಿಕೆ-1ರಲ್ಲಿ 1,27,131 ಅಭ್ಯರ್ಥಿಗಳ ಪೈಕಿ 14,922 (ಶೇ. 11.74) ಹಾಗೂ 5ರಿಂದ 8ನೇ ತರಗತಿವರೆಗಿನ ಬೋಧನಾ ಅರ್ಹತೆಗೆ ನಡೆದಿದ್ದ ಪತ್ರಿಕೆ-2 ಪರೀಕ್ಷೆಯಲ್ಲಿ 1,74,831 ಮಂದಿ ಪೈಕಿ 49,908 ಮಂದಿ (ಶೇ.28.54) ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ.

ಟಿಇಟಿ-2023 ಫಲಿತಾಂಶವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಹಿಳೆಯರ ಮೈಲುಗೈ

ಟಿಇಟಿ ಪತ್ರಿಕೆ-1 ರಲ್ಲಿ 4,139 ಪುರುಷರು, 10,783 ಮಹಿಳೆಯರು ಅರ್ಹತೆ ಪಡೆದಿದ್ದು, ಪತ್ರಿಕೆ-2 ರಲ್ಲಿ 16,268 ಪುರುಷರು, 33,634 ಮಹಿಳೆಯರು, 6 ಲಿಂಗತ್ವ ಅಲ್ಪಸಂಖ್ಯಾತರು ಅರ್ಹತೆ ಪಡೆದಿದ್ದಾರೆ.

ಪತ್ರಿಕೆ-2ರಲ್ಲಿ ಉತ್ತೀರ್ಣರಾದವರ ಪೈಕಿ ಸಮಾಜ ವಿಜ್ಞಾನ ವಿಷಯ ಬೋಧನೆಗೆ 35,349 ಮಂದಿ ಮತ್ತು ಗಣಿತ ಮತ್ತು ವಿಜ್ಞಾನ ವಿಷಯ ಬೋಧನೆಗೆ 14,559 ಮಂದಿ ಅರ್ಹರಾಗಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2023ರ (ಟಿಇಟಿ) (KARTET Result 2023) ಫಲಿತಾಂಶವನ್ನು ಪ್ರಕಟಿಸಿದೆ. ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸಬಹುದು.

ಅಭ್ಯರ್ಥಿಗಳು ಅರ್ಜಿಸಂಖ್ಯೆ ಮತ್ತು ಅಭ್ಯರ್ಥಿಯ ಜನ್ಮದಿನಾಂಕ (ಆನ್‌ಲೈನ್‌ ಅರ್ಜಿಯಲ್ಲಿರುವಂತೆ) ನಮೂದಿಸಿ ಫಲಿತಾಂಶ ವೀಕ್ಷಿಸುವುದಷ್ಟೇ ಅಲ್ಲದೇ ಶಿಕ್ಷಣ ಇಲಾಖೆಯ ವೆವ್‌ಸೈಟ್‌ನಲ್ಲಿ (www.schooleducation.kar.nic.in) ಗಣಕೀಕೃತ ಪ್ರಮಾಣಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಪ್ರಮಾಣ ಪತ್ರವು ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತದೆ.

ಇದನ್ನೂ ಓದಿ | SSC recruitment 2023 : ಅರೆಸೇನಾ ಪಡೆಗಳಲ್ಲಿ 75,768 ಕಾನ್ಸ್‌ಟೇಬಲ್‌ ಹುದ್ದೆ; ಕನ್ನಡದಲ್ಲಿ ನಡೆಯೋಲ್ಲ ಪರೀಕ್ಷೆ

ಅರ್ಹತಾ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ ಮುದ್ರಿತ ಅಂಕಪಟ್ಟಿ ಬದಲಿಗೆ QR Code ದತ್ತಾಂಶವನ್ನು ಹೊಂದಿರುವ ಗಣಕೀಕೃತ ಅಂಕಪಟ್ಟಿ ವಿತರಿಸಲಾಗುತ್ತದೆ. ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್‌ ಮೂಲಕ ಸುರಕ್ಷತಾ ಕೋಡ್‌ (QR Code) ಹೊಂದಿರುವ ಗಣಕೀಕೃತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ. ಈ ಪ್ರಮಾಣ ಪತ್ರವು ಸೀಮಿತ ದಿನಗಳವರೆಗೆ ಮಾತ್ರ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದ್ದು, ಅಭ್ಯರ್ಥಿಗಳು ಸಾಕಷ್ಟು. ಸಂಖ್ಯೆಯ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮಲ್ಲಿ ಇಟ್ಟುಕೊಳ್ಳಬಹುದು.

Continue Reading
Advertisement
Assembly Election Results 2023 Live
ದೇಶ12 mins ago

Election Results 2023: ನಾಲ್ಕೂ ರಾಜ್ಯಗಳಲ್ಲಿ ಪೈಪೋಟಿ ಹೇಗಿದೆ? ಯಾರಿಗೆ ವಿಜಯಮಾಲೆ?

Girl Child
ಕರ್ನಾಟಕ37 mins ago

ವಿಸ್ತಾರ ಸಂಪಾದಕೀಯ: ಭ್ರೂಣ ಹತ್ಯೆ ಜಾಲ ಆಘಾತಕಾರಿ

Dina Bhavihsya
ಪ್ರಮುಖ ಸುದ್ದಿ1 hour ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Assembly Election Results 2023
Live News7 hours ago

Election Results 2023 Live: ಕೆಲವೇ ಕ್ಷಣಗಳಲ್ಲಿ 4 ರಾಜ್ಯಗಳ ಚುನಾವಣೆ ಫಲಿತಾಂಶ; ಇಲ್ಲಿದೆ ಕ್ಷಣಕ್ಷಣದ ಅಪ್‌ಡೇಟ್ಸ್

Kapil Sharma And Sunil Grover
ಕಿರುತೆರೆ/ಒಟಿಟಿ7 hours ago

Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ!

women seriously injured
ಕರ್ನಾಟಕ7 hours ago

Kalaburagi News: ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ಮೂವರು ಮಹಿಳೆಯರಿಗೆ ಗಂಭೀರ ಗಾಯ

Bangalore Bulls
ಕ್ರೀಡೆ7 hours ago

Pro Kabaddi : ಗುಜರಾತ್​ ತಂಡಕ್ಕೆ ಸೆಡ್ಡು ಹೊಡೆಯುವುದೇ ಬುಲ್ಸ್​

Heart Attack
ಆರೋಗ್ಯ7 hours ago

Heart Attack: ಹೃದಯಾಘಾತಕ್ಕೆ 6 ತಿಂಗಳಲ್ಲಿ 1,052 ಜನ ಬಲಿ; 80% ಮಂದಿ 11-25 ವರ್ಷದವರೇ!

Pro Kabaddi Day 1
ಕ್ರೀಡೆ7 hours ago

Pro Kabaddi: ಮೊದಲ ದಿನ ಗುಜರಾತ್​, ಮುಂಬಾ ತಂಡಕ್ಕೆ ಗೆಲುವು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Dina Bhavihsya
ಪ್ರಮುಖ ಸುದ್ದಿ1 hour ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ14 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ5 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

ಟ್ರೆಂಡಿಂಗ್‌