Astrology Answers : ಮಾಡುತ್ತಿರುವ ವ್ಯಾಪಾರ ಮುಂದುವರಿಸಲೇ? ಅಥವಾ ಬೇರೆ ವ್ಯಾಪಾರ ಆರಂಭಿಸಲೇ? - Vistara News

ಪ್ರಮುಖ ಸುದ್ದಿ

Astrology Answers : ಮಾಡುತ್ತಿರುವ ವ್ಯಾಪಾರ ಮುಂದುವರಿಸಲೇ? ಅಥವಾ ಬೇರೆ ವ್ಯಾಪಾರ ಆರಂಭಿಸಲೇ?

ಇದು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ನೀಡುವ ಅಂಕಣ (Astrology Answers). ಇಲ್ಲಿ ನಮ್ಮ ಓದುಗರು ಕೇಳುವ ಪ್ರಶ್ನೆಗಳಿಗೆ ರಾಜಗುರು ಬಿ. ಎಸ್‌. ದ್ವಾರಕನಾಥ್‌ ಅವರು ಉತ್ತರಿಸಲಿದ್ದಾರೆ, ಪರಿಹಾರ ಸೂಚಿಸಲಿದ್ದಾರೆ. ನೀವೂ ಪ್ರಶ್ನೆ ಕೇಳಬಹುದು.

VISTARANEWS.COM


on

ಭವಿಷ್ಯ ಪ್ರಶ್ನೋತ್ತರ rajaguru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರಶ್ನೆ : ನಾನು ಸಣ್ಣದಾಗಿ ದಿನಸಿ ಅಂಗಡಿ ಇಟ್ಟುಕೊಂಡಿದ್ದು, ಅಲ್ಲಿಯೇ ಹಾಲಿನ ವ್ಯಾಪಾರ ಕೂಡ ಮಾಡುತ್ತಿದ್ದೇನೆ. ನನಗೆ ಲಾಭವೇನೂ ಹೆಚ್ಚು ಸಿಗುತ್ತಿಲ್ಲ. ಇದೇ ವ್ಯಾಪಾರ ಮುಂದುವರಿಸಲೇ ಅಥವಾ ಬೇರೆ ಏನಾದರೂ ವ್ಯಾಪಾರ ಮಾಡಲೇ ದಯವಿಟ್ಟು ತಿಳಿಸಿ.
ರಾಶಿ: ಧನಸ್ಸು ನಕ್ಷತ್ರ: ಪೂರ್ವಾಷಾಢ

ಪರಿಹಾರ: ಪೂರ್ವಾಷಾಢ ನಕ್ಷತ್ರದಲ್ಲಿ ಜನಿಸಿದವರಿಗೆ 7ವರೆ ವರ್ಷದ ಶನಿ ಸಂಚಾರವು ಅಂತ್ಯಗೊಳ್ಳುತ್ತಿರುವ ಸಮಯ ಇದಾಗಿದೆ. ಜೀವನದಲ್ಲಿ ಒಳ್ಳೆ ಕ್ಷಣ, ದಿನಗಳು ಇನ್ನು ಮುಂದೆ ಬಂದೇ ತೀರುತ್ತದೆ. ಪೂರ್ವಾಷಾಢ ನಕ್ಷತ್ರ ಶುಕ್ರನ ನಕ್ಷತ್ರವಾಗಿದ್ದು, ದೇವಿಯ ಪ್ರಾರ್ಥನೆ ನಿರಂತರವಾಗಿರಲಿ. ಶ್ರೀ ರಾಮಚಂದ್ರನ ರಾಮಾಯಣ ಪಾರಾಯಣ ಮಾಡಿ. ಧನುರ್ ರಾಶಿಯಲ್ಲಿ ಜನಿಸಿದವರಿಗೆ ಇದು ಅಗತ್ಯ. ನೀವು ಮಾಡುತ್ತಿರುವ ಧಾನ್ಯಗಳ ಕ್ರಯ-ವಿಕ್ರಯ ಸರಿಯಾಗಿದೆ. ಜೊತೆಗೆ ಇನ್ನೂ ಲಾಭ ತರುವಂಥ ಪದಾರ್ಥಗಳನ್ನೂ ಇಟ್ಟು ಮಾರಬಹುದು. ಇದರ ಜೊತಜೊತೆಗೆ ಹಾಲು, ಮೊಸರು, ತುಪ್ಪ ಈ ಮಾರಾಟ ನಿಮಗೆ ಹೊಂದುತ್ತದೆ. ಪೂಜಾ ಸಾಮಗ್ರಿಗಳ ಸಣ್ಣ ವ್ಯಾಪಾರ ಕೂಡ ಸೂಕ್ತವೆನಿಸಿದರೆ ಮಾಡಬಹುದು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಗೊಂದಲ, ಕೊರಗು ಬೇಡ. ನೆಮ್ಮದಿಯಿಂದ ಜೀವನ ನಡೆಸಿ, ಶುಭವಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್‌ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್‌ ಆ್ಯಪ್ ಸಂಖ್ಯೆ: 9481024181, ಇ-ಮೇಲ್‌ ವಿಳಾಸ: janasamparka@abhilashbc

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

IPL 2024 : ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 223 ರನ್ ಬಾರಿಸಿತು ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನಿಂಗ್ಸ್​ನ ಕೊನೇ ಎಸೆತಕ್ಕೆ 8 ವಿಕೆಟ್ ನಷ್ಟ ಮಾಡಿಕೊಂಡು 224 ರನ್​ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ಪ್ರೇಕ್ಷಕ ಮುಂದೆ ಕೆಕೆಆರ್ ತಂಡಕ್ಕೆ ಸೋಲುಣಿಸಿತು.

VISTARANEWS.COM


on

Rakshit Shetty Richard Anthony Produce By Hombale
Koo

ಕೋಲ್ಕೊತಾ: ಆರಂಭಿಕ ಬ್ಯಾಟರ್​ ಜೋಶ್ ಬಟ್ಲರ್​ ಅವರ (109 ರನ್​, 56 ಎಸೆತ, 13 ಫೋರ್​, 6 ಸಿಕ್ಸರ್​) ಅಜೇಯ ಶತಕದ ನೆರವು ಪಡೆದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ನೇ ಆವೃತ್ತಿಯ 31ನೇ ಪಂದ್ಯದಲ್ಲಿ 2 ವಿಕೆಟ್​ಗಳ ಗೆಲುವು ಸಾಧಿಸಿದೆ. ಪಂದ್ಯದ ಒಂದು ಹಂತದಲ್ಲಿ ಕೆಕೆಆರ್​ ತಂಡದ ಕೈ ಮೇಲಾದರೂ ಬಳಿಕ ಬಟ್ಲರ್​ ಅಬ್ಬರದ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟರು. ಬಟ್ಲರ್​​ಗೆ ಇದು ಹಾಲಿ ಆವೃತ್ತಿಯಲ್ಲಿ ಎರಡನೇ ಶತಕ. ಆರ್​ಸಿಬಿ ವಿರುದ್ಧ ಬಟ್ಲರ್​ ಮೊದಲ ಶತಕ ಬಾರಿಸಿದ್ದರು.

ಈ ವಿಜಯ ರಾಜಸ್ಥಾನ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆರನೇ ಗೆಲುವಾಗಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಪಾಡಿಕೊಂಡಿದೆ. ಈ ಸೋಲಿನೊಂದಿಗೆ ಕೆಕೆಆರ್​ ಪರ ಸುನೀಲ್​ ನರೈನ್​ (109 ರನ್​, 56 ಎಸೆತ, 13 ಫೋರ್​, 6 ಸಿಕ್ಸರ್​) ಸ್ಫೋಟಕ ಶತಕ ಹಾಗೂ ಬೌಲಿಂಗ್​ನಲ್ಲಿ 30 ರನ್​ ವೆಚ್ಚದಲ್ಲಿ 2 ವಿಕೆಟ್​ಗಳ ಆಲ್​ರೌಂಡರ್ ಆಟ ವ್ಯರ್ಥಗೊಂಡಿತು. ಇದು ಕೆಕೆಆರ್​ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಎರಡನೇ ಸೋಲಾಗಿದೆ.

ಇಲ್ಲಿನ ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 223 ರನ್ ಬಾರಿಸಿತು ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನಿಂಗ್ಸ್​ನ ಕೊನೇ ಎಸೆತಕ್ಕೆ 8 ವಿಕೆಟ್ ನಷ್ಟ ಮಾಡಿಕೊಂಡು 224 ರನ್​ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ಪ್ರೇಕ್ಷಕ ಮುಂದೆ ಕೆಕೆಆರ್ ತಂಡಕ್ಕೆ ಸೋಲುಣಿಸಿತು.

ಈ ಪಂದ್ಯ ಅಂಕಪಟ್ಟಿಯ ಎರಡು ಅಗ್ರ ತಂಡಗಳ ನಡುವಿನ ಕದವಾಗಿತ್ತು. ರಾಜಸ್ಥಾನ ಗೆದ್ದು ಮೊದಲ ಸ್ಥಾನ ಕಾಪಾಡಿಕೊಂಡಿದೆ. ಕೆಕೆಆರ್ ಗೆದಿದ್ದರೆ ಆ ತಂಡಕ್ಕೆ ಮೊದಲ ಸ್ಥಾನ ಸಿಗುತ್ತಿತ್ತು.

ಇದನ್ನೂ ಓದಿ: Sanju Samson : ಸಂಜು ಸ್ಯಾಮ್ಸನ್​ಗೆ ರಾಯಲ್ಸ್​ ತಂಡದಲ್ಲಿ ದಶಕದ ಸಾಧನೆ; ಬೆಸ್ಟ್​ ಕ್ಯಾಪ್ಟನ್ ಎಂದ ಅಭಿಮಾನಿಗಳು

ಬಟ್ಲರ್ ಏಕಾಂಗಿ ಹೋರಾಟ

ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಲುಹೊರಟ ರಾಜಸ್ಥಾನ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಯಶಸ್ವಿ ಜೈಸ್ವಾಲ್ ಮತ್ತೆ ವೈಫಲ್ಯ ಎದುರಿಸಿ 19 ರನ್​ಗೆ ಔಟಾದರು. ಸಂಜು ಸ್ಯಾಮ್ಸನ್​ 12 ರನ್​ಗಳಿಗೆ ಸೀಮಿತಗೊಂಡರು. ಆದರೆ, ಬಟ್ಲರ್ ತಳವೂರಿ ಆಡಲು ಆರಂಭಿಸಿದರು. ಇವರಿಗೆ ಸ್ವಲ್ಪ ಹೊತ್ತು ರಿಯಾನ್ ಪರಾಗ್​ (14 ಎಸೆತಕ್ಕೆ 34 ರನ್​) ಸಾಥ್​ ಕೊಟ್ಟರು. ಆದರೆ ಆ ಬಳಿಕದಿಂದ ಸತತವಾಗಿ ವಿಕೆಟ್​ಗಳು ಉರುಳಿದವು. ಜುರೆಲ್​ 2 ರನ್​ಗೆ ಔಟಾದರೆ ಅಶ್ವಿನ್ 8 ರನ್​​ಗೆ ವಿಕೆಟ್ ಒಪ್ಪಿಸಿದರು. ಶಿಮ್ರೋನ್ ಹೆಟ್ಮಾಯರ್ ಶೂನ್ಯಕ್ಕೆ ಔಟಾದರು. ಬಳಿಕ ಬಂದ ರೊವ್ಮನ್ ಪೊವೆಲ್ 13 ಎಸೆತಕ್ಕೆ 26 ರನ್​ ಬಾರಿಸಿ ಗೆಲುವಿನ ಹಾದಿ ತೋರಿದರು. ಅಂತಿಮವಾಗಿ ಬುದ್ಧಿವಂತಿಕೆಯಿಂದ ಬ್ಯಾಟ್ ಮಾಡಿದ ಬಟ್ಲರ್ ಅಜೇಯವಾಗಿ ಉಳಿದು ತಂಡವನ್ನು ಗೆಲ್ಲಿಸಿದರು.

ನರೈನ್ ಚೊಚ್ಚಲ ಶತಕ

ಆರಂಭಿಕರಾಗಿ ಕಣಕ್ಕೆ ಇಳಿದ ಸುನೀಲ್​ ನರೈನ್​ ಆರಂಭದಿಂದಲೇ ಅಬ್ಬರಿಸಿದರು. ರಾಜಸ್ಥಾನ ತಂಡ ಬೌಲರ್​​ಗಳನ್ನು ಸತತವಾಗಿ ದಂಡಿಸಿ ರನ್ ಪೇರಿಸಲು ಆರಂಭಿಸಿದರು. ಆದರೆ, ಹಿಂದಿನ ಪಂದ್ಯಗಳಲ್ಲಿ ಅಬ್ಬರಿಸಿದ್ದ ಫಿಲ್ ಸಾಲ್ಟ್ ಇಲ್ಲಿ ಹೆಚ್ಚಿನ ಪರಿಣಾಮ ಬೀರಲಿಲ್ಲ. ಆದಾಗ್ಯೂ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರಿಸಿದ ನರೈನ್​ 49 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಐಪಿಎಲ್​ನಲ್ಲಿ ಅವರ ಚೊಚ್ಚಲ ಶತಕವಾಗಿದೆ. ಬಳಿಕ ಅದಕ್ಕೆ 9 ರನ್ ಸೇರಿಸಿದ ಅವರು ಔಟಾದರು. ರಸೆಲ್​ 13 ರನ್ ಬಾರಿಸಿದರೆ ರಿಂಕು ಸಿಂಗ್​ 20 ರನ್​ಗಳ ಕೊಡುಗೆ ಕೊಟ್ಟರು.

Continue Reading

ಪ್ರಮುಖ ಸುದ್ದಿ

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Dalip Singh Majithia: ಆಕಾಶದಲ್ಲಿ ಗಸ್ತು ತಿರುಗುವುದರಿಂದ ಹಿಡಿದು ಬೇಹುಗಾರಿಕೆ ಮತ್ತು ಬಾಂಬ್ ದಾಳಿ ಕಾರ್ಯಾಚರಣೆಗಳವರೆಗೆ, ಅವರು ಪ್ರತಿ ಸವಾಲನ್ನು ಧೈರ್ಯ, ಕೌಶಲ್ಯ ಮತ್ತು ಸಾಟಿಯಿಲ್ಲದ ಧೈರ್ಯದಿಂದ ಸ್ವೀಕರಿಸಿದ್ದರು. 1942 ರಿಂದ 1943 ರವರೆಗೆ ಬರ್ಮಾದಲ್ಲಿ ಸಂಖ್ಯೆ 4 ಸ್ಕ್ವಾಡ್ರನ್ – ‘ದಿ ಫೈಟಿಂಗ್ ಓರಿಯಲ್ಸ್’ ನ ಫ್ಲೈಟ್ ಕಮಾಂಡರ್ ಆಗಿ ಅವರು ಸೇವೆ ಸಲ್ಲಿಸಿದ್ದರು ಎಂದು ಐಎಎಫ್ ಮೂಲಗಳು ತಿಳಿಸಿವೆ.

VISTARANEWS.COM


on

Dalip Singh Majithia
Koo

ನವದೆಹಲಿ: ಎರಡನೇ ಮಹಾಯುದ್ಧದ ಪ್ರಕ್ಷುಬ್ಧ ವರ್ಷಗಳಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮತ್ತು ತಮ್ಮ ವೃತ್ತಿಜೀವನದಲ್ಲಿ “ನಿರ್ಭೀತ ವಿಮಾನಯಾನಿ” ಎಂದು ಗುರುತಿಸಿಕೊಂಡಿದ್ದ ಹಿರಿಯ ಪೈಲೆಟ್ ಸ್ಕ್ವಾಡ್ರನ್ ಲೀಡರ್ ದಲೀಪ್ ಸಿಂಗ್ ಮಜಿಥಿಯಾ (ನಿವೃತ್ತ) ನಿಧನರಾಗಿದ್ದಾರೆ. ಅವರು 103 ವರ್ಷಗಳ ಬದುಕಿದ್ದರು.

ಚಂಡಮಾರುತದಂಥ ಕಠಿಣ ಪರಿಸ್ಥಿತಿ ಸೇರಿದಂತೆ ಹಲವಾರು ಪ್ರಕ್ಷುಬ್ಧ ಪರಿಸ್ಥಿಯಲ್ಲಿ ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸಿದ್ದರು ದಲೀಪ್​​ ಸಿಂಗ್​. ಅವರು 1,100 ಕ್ಕೂ ಹೆಚ್ಚು ಗಂಟೆಗಳ ಕಾಲ ಹಾರಾಟ ನಡೆಸಿದ್ದಾರೆ. ಅವರು ಮಂಗಳವಾರ ಮುಂಜಾನೆ ಉತ್ತರಾಖಂಡದ ರುದ್ರಪುರದಲ್ಲಿ ನಿಧನ ಹೊಂದಿದ್ದಾರೆ ಎಂದು ಐಎಎಫ್ ಮೂಲಗಳು ತಿಳಿಸಿವೆ. ಅವರನ್ನು ಅವರ ಸಹ ವಾಯು ಯೋಧರು ಪ್ರೀತಿಯಿಂದ ‘ಮಾಜಿ’ ಎಂದೇ ಕರೆಯುತ್ತಿದ್ದರು.

ಆಕಾಶದಲ್ಲಿ ಗಸ್ತು ತಿರುಗುವುದರಿಂದ ಹಿಡಿದು ಬೇಹುಗಾರಿಕೆ ಮತ್ತು ಬಾಂಬ್ ದಾಳಿ ಕಾರ್ಯಾಚರಣೆಗಳವರೆಗೆ, ಅವರು ಪ್ರತಿ ಸವಾಲನ್ನು ಧೈರ್ಯ, ಕೌಶಲ್ಯ ಮತ್ತು ಸಾಟಿಯಿಲ್ಲದ ಧೈರ್ಯದಿಂದ ಸ್ವೀಕರಿಸಿದ್ದರು. 1942 ರಿಂದ 1943 ರವರೆಗೆ ಬರ್ಮಾದಲ್ಲಿ ಸಂಖ್ಯೆ 4 ಸ್ಕ್ವಾಡ್ರನ್ – ‘ದಿ ಫೈಟಿಂಗ್ ಓರಿಯಲ್ಸ್’ ನ ಫ್ಲೈಟ್ ಕಮಾಂಡರ್ ಆಗಿ ಅವರು ಸೇವೆ ಸಲ್ಲಿಸಿದ್ದರು ಎಂದು ಐಎಎಫ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Lok Sabah Election : ಹೇಮಮಾಲಿನಿಗೆ ಅವಹೇಳನ; ಕಾಂಗ್ರೆಸ್​ ನಾಯಕ ಸುರ್ಜೇವಾಲಾಗೆ 48 ಗಂಟೆ ನಿಷೇಧ

ದಲೀಪ ಸಿಂಗ್​ ಜುಲೈ 27, 1920 ರಂದು ಶಿಮ್ಲಾದಲ್ಲಿ ಜನಿಸಿದದರು. ವಾಯುಯಾನದ ಮೇಲಿನ ಅವರ ಉತ್ಸಾಹವು ಎರಡನೇ ಮಹಾಯುದ್ಧದ ಪ್ರಕ್ಷುಬ್ಧ ವರ್ಷಗಳಲ್ಲಿ 1940ರಲ್ಲಿ ಐಎಎಫ್ ಸ್ವಯಂಸೇವಕ ಮೀಸಲು ಪಡೆಗೆ ಸೇರಲು ಅವರನ್ನು ಪ್ರೇರೇಪಿಸಿತು ಎಂದು ಐಎಎಫ್ ಮೂಲಗಳು ತಿಳಿಸಿವೆ. ಲಾಹೋರ್ನ ವಾಲ್ಟನ್​ನಲ್ಲಿರುವ ಆರಂಭಿಕ ತರಬೇತಿ ಶಾಲೆಯಲ್ಲಿ ಅವರು ತರಬೇತಿ ಪಡೆದಿದದ್ದರು. ಈ ವೇಳೆ ಅವರು ‘ಅತ್ಯುತ್ತಮ ಪೈಲಟ್ ಟ್ರೋಫಿ’ ಗಳಿಸಿದ್ದರು.

Continue Reading

ದೇಶ

Ayodhya Ram Mandir: ನಾಳೆ ಅಯೋಧ್ಯೆ ಶ್ರೀರಾಮನಿಗೆ ಸೂರ್ಯ ತಿಲಕ; ಮನೆಯಲ್ಲೇ ಕೂತು ಹೀಗೆ ಕಣ್ತುಂಬಿಕೊಳ್ಳಿ

Ayodhya Ram Mandir: ನಾಳೆ (ಏಪ್ರಿಲ್‌ 17) ರಾಮ ನವಮಿ. ಉತ್ತರ ಪ್ರದೇಶದ ಭವ್ಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನಿಗೆ ಇದು ಮೊದಲ ರಾಮ ನವಮಿ. ಹೀಗಾಗಿ ಈ ಬಾರಿಯ ಹಬ್ಬ ಇನ್ನೂ ವಿಶೇಷ ಎನಿಸಿಕೊಂಡಿದೆ. ಜತೆಗೆ ರಾಮನಿಗೆ ‘ಸೂರ್ಯ ಅಭಿಷೇಕ / ಸೂರ್ಯ ತಿಲಕʼವೂ ನಾಳೆ ನೆರವೇರಲಿದೆ. ಇದನ್ನು ಮನೆಯಲ್ಲೇ ಕೂತು ನೀವೂ ವೀಕ್ಷಿಸಬಹುದು. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

Ayodhya Ram Mandir
Koo

ಅಯೋಧ್ಯೆ: ನಾಳೆ (ಏಪ್ರಿಲ್‌ 17) ರಾಮ ನವಮಿ  (Ram Navami). ಹೀಗಾಗಿ ದೇಶಾದ್ಯಂತ ರಾಮನ ಭಕ್ತರು ಆಚರಣೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಭವ್ಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನಿಗೆ ಇದು ಮೊದಲ ರಾಮ ನವಮಿ (Ayodhya Ram Mandir). ಹೀಗಾಗಿ ಈ ಬಾರಿಯ ಹಬ್ಬ ಇನ್ನೂ ವಿಶೇಷ ಎನಿಸಿಕೊಂಡಿದೆ. ಜತೆಗೆ ರಾಮನಿಗೆ ‘ಸೂರ್ಯ ಅಭಿಷೇಕ / ಸೂರ್ಯ ತಿಲಕʼವೂ ನಾಳೆ ನೆರವೇರಲಿದೆ.

ಏನಿದು ಸೂರ್ಯ ತಿಲಕ ?

ಈ ಸುಂದರ ರಾಮ ವಿಗ್ರಹದ ಹಣೆಯ ಮೇಲೆ 3ರಿಂದ 5 ನಿಮಿಷಗಳ ಕಾಲ ಸೂರ್ಯನ ಕಿರಣಗಳು ಮಧ್ಯಾಹ್ನ 12. 16ಕ್ಕೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಮೊದಲ ಬಾರಿಗೆ ಬಾಲರಾಮನ ಹಣೆಯಲ್ಲಿ ಸೂರ್ಯ ತಿಲಕ ಕಂಗೊಳಿಸಲಿದ್ದು, ಇದಕ್ಕೆ ಬೇಕಾದ ವಿಶಿಷ್ಟ ವೈಜ್ಞಾನಿಕ ತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತಿ ವರ್ಷ ರಾಮ ನವಮಿಯಂದು ಈ ಚಮತ್ಕಾರ ನಡೆಯಲಿದೆ.

ಹೀಗೆ ಕಣ್ತುಂಬಿಕೊಳ್ಳಿ

‘ಸೂರ್ಯತಿಲಕ’ ಏಪ್ರಿಲ್ 17ರ ಬೆಳಗ್ಗೆ 11.58ಕ್ಕೆ ಪ್ರಾರಂಭವಾಗಲಿದೆ ಮತ್ತು ಮಧ್ಯಾಹ್ನ 12.03ರ ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ರಾಮ ಭಕ್ತರಿಗಾಗಿ ಪ್ರಸಾರ ಭಾರತಿ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದ್ದು, ಮನೆಯಲ್ಲೇ ವೀಕ್ಷಿಸಬಹುದು. ರಾಮ ನವಮಿಯಂದು ಅಯೋಧ್ಯೆ ತಲುಪಲು ಸಾಧ್ಯವಾಗದೇ ಇದ್ದರೆ ಮನೆಯಲ್ಲಿ ಕುಳಿತು ಈ ಸೂರ್ಯ ಅಭಿಷೇಕವನ್ನು ವೀಕ್ಷಿಸಬಹುದು. ಈ ಸಂಪೂರ್ಣ ಕಾರ್ಯಕ್ರಮ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ ಅಯೋಧ್ಯೆ ಸೇರಿದಂತೆ ಹಲವು ನಗರಗಳಲ್ಲಿ ದೊಡ್ಡ ಎಲ್‌ಇಡಿ ಪರದೆಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಡಿಡಿ ನ್ಯೂಸ್ ಮತ್ತು ಡಿಡಿ ನ್ಯಾಷನಲ್ ಯೂಟ್ಯೂಬ್ ಚಾನಲ್‌ನಲ್ಲಿಯೂ ಲೈವ್ ಕವರೇಜ್ ಲಭ್ಯ. ಹೆಚ್ಚುವರಿಯಾಗಿ ಪಿವಿಆರ್ ಐನಾಕ್ಸ್, ಮಾಧ್ಯಮ ಚಾನಲ್‌ಗಳ ಸಹಯೋಗದೊಂದಿಗೆ ಭಾರತದ 70 ಕ್ಕೂ ಹೆಚ್ಚು ನಗರಗಳಲ್ಲಿ ತನ್ನ 160+ ಚಿತ್ರಮಂದಿರಗಳಲ್ಲಿ ಸಮಾರಂಭವನ್ನು ನೇರ ಪ್ರಸಾರ ಮಾಡಲಿದೆ.

ಪ್ರಯೋಗ ಯಶಸ್ವಿ

ರಾಮ ನವಮಿಗೆ ಮುಂಚಿತವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಯೋಧ್ಯೆಯೊಳಗಿನ ಶ್ರೀ ರಾಮಲಲ್ಲಾ ವಿಗ್ರಹಕ್ಕೆ ಎರಡನೇ ಬಾರಿ ಯಶಸ್ವಿಯಾಗಿ ಸೂರ್ಯ ತಿಲಕ ಅಥವಾ ಸೂರ್ಯಾಭಿಷೇಕವನ್ನು ನಡೆಸಿದೆ. ಈ ಹಿಂದೆ ಏಪ್ರಿಲ್ 8ರಂದು ಮೊದಲ ಬಾರಿಗೆ ಇದರ ಪ್ರಯೋಗ ನಡೆಸಲಾಗಿತ್ತು. ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ದೇವರ ಮೇಲೆ ಎರಡರಿಂದ ಎರಡೂವರೆ ನಿಮಿಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಬೀಳಲಿದೆ. ಬಳಿಕ ಮತ್ತೆ ಎರಡೂವರೆ ನಿಮಿಷ ಭಾಗಶಃ ಬೀಳುತ್ತದೆ ಎಂದು ಆರ್‌ಎಸ್‌ಎಸ್ ಹಿರಿಯ ನಾಯಕ ಗೋವಿಂದ್ ರಾವ್ ತಿಳಿಸಿದ್ದಾರೆ.

ಏನಿದು ತಂತ್ರಜ್ಞಾನ?

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಆಸ್ಟ್ರೋಫಿಸಿಕ್ಸ್‌ ಸಹಭಾಗಿತ್ವದಲ್ಲಿ ಒಪ್ಟಿಕಾ ಎಂಬ ಕಂಪನಿ ಈ ಯೋಜನೆಯನ್ನು ರೂಪಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಯಂತ್ರ ಅಭಿವೃದ್ಧಿಪಡಿಸಲಾಗಿದೆ. ಒಂದಿಷ್ಟು ನಿಮಿಷ ರಾಮನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳಲಿದೆ. ಇಲ್ಲಿ ಅಳವಡಿಸಲಾದ ಆಪ್ಟೋಮೆಕಾನಿಕಲ್ ಸಿಸ್ಟಮ್ ಅತಿಗೆಂಪು ಫಿಲ್ಟರ್‌ನಿಂದ ಮಾಡಲ್ಪಟ್ಟಿದೆ. ಇದಕ್ಕೆ ನಿಖರ ಮಸೂರ ಮತ್ತು ಕನ್ನಡಿಗಳನ್ನು ಬಳಸಿ ವಿಶಿಷ್ಟ ವಿನ್ಯಾಸವನ್ನು ಒದಗಿಸಲಾಗಿದೆ. ಈ ಅಂಶಗಳು ನೈಸರ್ಗಿಕ ಸೂರ್ಯನ ಬೆಳಕನ್ನು ಬಳಸಿಕೊಂಡು ದೈವಿಕ ಸಂಕೇತವಾಗಿ ತಿಲಕವನ್ನು ಉಂಟು ಮಾಡುತ್ತವೆ.

ತಜ್ಞರ ಉಪಸ್ಥಿತಿ

ಸೂರ್ಯ ತಿಲಕದ ಪ್ರಯೋಗವನ್ನು ನಡೆಸಿದ ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ) ತಜ್ಞರು ರಾಮ ನವಮಿಯಂದು ‘ಸೂರ್ಯ ಅಭಿಷೇಕ’ ಯಶಸ್ವಿ ನೆರವೇರಿಸಲು ಅಯೋಧ್ಯೆಯಲ್ಲೇ ಉಪಸ್ಥಿತರಿದ್ದಾರೆ. ಸಿಬಿಆರ್ ಐ ಯ ನಿರ್ದೇಶಕ ರೂರ್ಕಿ, ಪ್ರೊ. ಪ್ರದೀಪ್ ಕುಮಾರ್ ರಾಮಂಚಾರ್ಲಾ ಮತ್ತು ಪ್ರೊ. ದೇವದತ್ ಘೋಷ್ ಸೂರ್ಯ ತಿಲಕ ಯೋಜನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ: Ayodhya Ram Mandir: ಜನ್ಮದಿನದ ಸಂಭ್ರಮಕ್ಕೆ ಕಾತರ; ರಾಮಲಲ್ಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸೆಸ್!

Continue Reading

ಪ್ರಮುಖ ಸುದ್ದಿ

Sanju Samson : ಸಂಜು ಸ್ಯಾಮ್ಸನ್​ಗೆ ರಾಯಲ್ಸ್​ ತಂಡದಲ್ಲಿ ದಶಕದ ಸಾಧನೆ; ಬೆಸ್ಟ್​ ಕ್ಯಾಪ್ಟನ್ ಎಂದ ಅಭಿಮಾನಿಗಳು

Sanju Samson: ರಾಹುಲ್ ದ್ರಾವಿಡ್, ಶೇನ್ ವ್ಯಾಟ್ಸನ್ ಮತ್ತು ಶೇನ್ ವಾರ್ನ್ ಅವರಂತೆ ಸಂಜು ಸ್ಯಾಮ್ಸನ್ ಅವರನ್ನು ಗುಲಾಬಿ ಬಣ್ಣ ಆವರಿಸಿದೆ ಎಂದು ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ಹೇಳಿದ್ದಾರೆ “ರಾಹುಲ್ ಭಾಯ್, ಶೇನ್ ವ್ಯಾಟ್ಸನ್ ಮತ್ತು ಶೇನ್ ವಾರ್ನ್ ಅವರಂತೆ ರಾಯಲ್ ಆಗಲು ಸಂಜು ಮನಸ್ಸು ಹೊಂದಿದ್ದರು. ಅವರು ಅದನ್ನು ಸಾಧಿಸಿದ್ದಾರೆ ಎಂದು ಹೇಳಿದರು.

VISTARANEWS.COM


on

Sanju Samson
Koo

ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವು ಮಂಗಳವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಎರಡನೇ ಅಗ್ರಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿದೆ. ಈ ವೇಳೆ ಯಜುವೇಂದ್ರ ಚಾಹಲ್ ಮತ್ತು ರಿಯಾನ್ ಪರಾಗ್, ಕ್ರಿಕೆಟ್ ನಿರ್ದೇಶಕ ಕುಮಾರ ಸಂಗಕ್ಕಾರ ಮತ್ತು ಇತರ ಫ್ರಾಂಚೈಸಿ ಸಿಬ್ಬಂದಿ ತಮ್ಮ ಆರ್ ಆರ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಶ್ಲಾಘಿಸಿದ್ದಾರೆ. ಯಾಕೆಂದರೆ ಸ್ಯಾಮ್ಸನ್ ಮಂಗಳವಾರ ರಾಯಲ್ಸ್ ತಂಡ ಸೇರಿದ ಬಳಿಕ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ.

ರಾಯಲ್ಸ್​ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ಸಂಜು ಅವರ 10 ವರ್ಷದ ಪಯಣಕ್ಕೆ ಶುಭ ಹಾರೈಸಿದ್ದಾರೆ. “ವಿಕೆಟ್ ಕೀಪರ್ ಆಗಿ ಫ್ರಾಂಚೈಸಿಯನ್ನು ಮುಂದುವರಿಸುವಂತೆ ನಾನು ಅವರಿಗೆ ಹೇಳಿದ್ದೆ. ಐಪಿಎಲ್​​ನಲ್ಲಿ ಆಡಿದ ನಂತರ, ಅವರು ಭಾರತಕ್ಕಾಗಿ 100 ಪ್ರತಿಶತ ಆಡುತ್ತಾರೆ ಎಂದು ನನಗೆ ತಿಳಿದಿತ್ತು, ಎಂದು ದಿಶಾಂತ್ ಹೇಳಿದ್ದಾರೆ.

ಇದನ್ನೂ ಓದಿ: MS Dhoni : ಮೊಣಕಾಲು ನೋವಿನಿಂದ ರೈನಾ ಕೈಹಿಡಿದು ಮೆಟ್ಟಿಲು ಇಳಿದ ಧೋನಿ…

ರಾಹುಲ್ ದ್ರಾವಿಡ್, ಶೇನ್ ವ್ಯಾಟ್ಸನ್ ಮತ್ತು ಶೇನ್ ವಾರ್ನ್ ಅವರಂತೆ ಸಂಜು ಸ್ಯಾಮ್ಸನ್ ಅವರನ್ನು ಗುಲಾಬಿ ಬಣ್ಣ ಆವರಿಸಿದೆ ಎಂದು ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ಹೇಳಿದ್ದಾರೆ “ರಾಹುಲ್ ಭಾಯ್, ಶೇನ್ ವ್ಯಾಟ್ಸನ್ ಮತ್ತು ಶೇನ್ ವಾರ್ನ್ ಅವರಂತೆ ರಾಯಲ್ ಆಗಲು ಸಂಜು ಮನಸ್ಸು ಹೊಂದಿದ್ದರು. ಅವರು ಅದನ್ನು ಸಾಧಿಸಿದ್ದಾರೆ ಎಂದು ಹೇಳಿದರು.

ಸ್ಯಾಮ್ಸನ್ ಐಪಿಎಲ್ ದಾಖಲೆಗಳು

ರಾಯಲ್ಸ್ ಪರ 130 ಪಂದ್ಯಗಳನ್ನಾಡಿರುವ ಸ್ಯಾಮ್ಸನ್ 31.02ರ ಸರಾಸರಿಯಲ್ಲಿ 3,475 ರನ್ ಗಳಿಸಿದ್ದಾರೆ. ಅವರು ಎರಡು ಶತಕಗಳು ಮತ್ತು 20 ಅರ್ಧಶತಕಗಳನ್ನು ಹೊಂದಿದ್ದಾರೆ, 119 ಅವರ ಗರಿಷ್ಠ ಸ್ಕೋರ್ ಆಗಿದೆ. ಪ್ರಸ್ತುತ ಐಪಿಎಲ್ 2024 ರಲ್ಲಿ, ಆರ್​ಆರ್​ ನಾಯಕ ಮೂರು ಅರ್ಧಶತಕಗಳೊಂದಿಗೆ 66.00 ಸರಾಸರಿಯಲ್ಲಿ 264 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 82 ರನ್.

ಐಪಿಎಲ್ 2024 ರಲ್ಲಿ ರಾಜಸ್ಥಾನ್ ಅಭಿಯಾನ

ರಾಯಲ್ಸ್ 10 ಅಂಕಗಳೊಂದಿಗೆ ಮತ್ತು 0.767 ನೆಟ್ ರನ್ ರೇಟ್​ನೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿದೆ. ಅವರು ಐದು ಗೆಲುವುಗಳನ್ನು ಹೊಂದಿದ್ದಾರೆ ಮತ್ತು ಇನ್ನೊಂದರಲ್ಲಿ ಸೋತಿದ್ದಾರೆ.

Continue Reading
Advertisement
Rakshit Shetty Richard Anthony Produce By Hombale
ಪ್ರಮುಖ ಸುದ್ದಿ1 second ago

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

Murder Case
ಕರ್ನಾಟಕ13 mins ago

Chitradurga News: ಚಿತ್ರದುರ್ಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆ

amith shah
ದೇಶ45 mins ago

Amit Shah: ಶೀಘ್ರದಲ್ಲೇ ಭಾರತ ನಕ್ಸಲ್‌ ಮುಕ್ತವಾಗಲಿದೆ; ಅಮಿತ್ ಶಾ

Nitin Gadkari
ದೇಶ51 mins ago

Nitin Gadkari : ನಾಗ್ಪುರ ಕ್ಷೇತ್ರಕ್ಕೆ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ

UPSC Results 2023
ಕರ್ನಾಟಕ57 mins ago

UPSC Results 2023: ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದ ಶಾಂತಪ್ಪ ಕುರುಬರ; ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡ ಸಾಧಕ!

Dalip Singh Majithia
ಪ್ರಮುಖ ಸುದ್ದಿ1 hour ago

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Ayodhya Ram Mandir
ದೇಶ1 hour ago

Ayodhya Ram Mandir: ನಾಳೆ ಅಯೋಧ್ಯೆ ಶ್ರೀರಾಮನಿಗೆ ಸೂರ್ಯ ತಿಲಕ; ಮನೆಯಲ್ಲೇ ಕೂತು ಹೀಗೆ ಕಣ್ತುಂಬಿಕೊಳ್ಳಿ

Universal Coaching Centre
ಬೆಂಗಳೂರು2 hours ago

UPSC Results 2023: ಯುಪಿಎಸ್‌ಸಿ ಪರೀಕ್ಷೆ; ಯುನಿವರ್ಸಲ್‌ನ 18 ಅಭ್ಯರ್ಥಿಗಳ ಅಭೂತಪೂರ್ವ ಸಾಧನೆ

Sanju Samson
ಪ್ರಮುಖ ಸುದ್ದಿ3 hours ago

Sanju Samson : ಸಂಜು ಸ್ಯಾಮ್ಸನ್​ಗೆ ರಾಯಲ್ಸ್​ ತಂಡದಲ್ಲಿ ದಶಕದ ಸಾಧನೆ; ಬೆಸ್ಟ್​ ಕ್ಯಾಪ್ಟನ್ ಎಂದ ಅಭಿಮಾನಿಗಳು

UPSC Result 2024
ಶಿಕ್ಷಣ3 hours ago

UPSC Result 2024: 12 ಪ್ರಯತ್ನದ ಹೊರತಾಗಿಯೂ ಸಿಗದ ಯಶಸ್ಸು; ಯುಪಿಎಸ್‌ಸಿ ಆಕಾಂಕ್ಷಿಯ ಪೋಸ್ಟ್‌ ವೈರಲ್‌

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ19 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌