Dina Bhavishya : ಈ ರಾಶಿಯವರು ಸಂಗಾತಿ ಜತೆ ಹುಷಾರಾಗಿರಿ! Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರು ಸಂಗಾತಿ ಜತೆ ಹುಷಾರಾಗಿರಿ!

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷದ ಚತುರ್ದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Dina Bhavishya) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಮಂಗಳವಾರವೂ ಸಿಂಹ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ವೃಷಭ, ಕಟಕ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಮಿಥುನ, ಕನ್ಯಾ, ತುಲಾ ರಾಶಿಯ ಉದ್ಯೋಗಿಗಳಿಗೆ ಅನಿವಾರ್ಯ ಕಾರಣಗಳಿಂದ ಒತ್ತಡ ಇರಲಿದೆ. ವೃಶ್ಚಿಕ ರಾಶಿಯವರು ಆತುರದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವುದು ಬೇಡ, ದಿನದ ಮಟ್ಟಿಗೆ ಯಾವುದೇ ಹೂಡಿಕೆ ವ್ಯವಹಾರದಲ್ಲಿ ತೊಡಗುವುದರಿಂದ ನಷ್ಟವಾಗುವ ಸಾಧ್ಯತೆ ಇದೆ. ಚಂದ್ರನ ಬಲವಿರುವ ಮಕರ ರಾಶಿಯವರು ಅನೇಕ ಕಾರಣದಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಉಳಿದ ರಾಶಿಗಳ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (15-08-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ.
ತಿಥಿ: ಚತುರ್ದಶಿ 12:42 ವಾರ: ಮಂಗಳವಾರ
ನಕ್ಷತ್ರ: ಪುಷ್ಯಾ 13:57 ಯೋಗ: ವ್ಯತಿಪಾತ 17:31
ಕರಣ: ಶಕುನಿ 12:42 ಅಮೃತ ಕಾಲ: ಬೆಳಗ್ಗೆ 06:49 ರಿಂದ 08:36ರವರೆಗೆ
ದಿನದ ವಿಶೇಷ : ಸ್ವಾತಂತ್ರ್ಯ ದಿನಾಚರಣೆ

ಸೂರ್ಯೋದಯ : 06:07 ಸೂರ್ಯಾಸ್ತ : 06:41

ರಾಹುಕಾಲ : ಸಾಯಂಕಾಲ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ವ್ಯಾಪಾರದಲ್ಲಿಂದು ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ.
ಮಾನಸಿಕವಾಗಿ ನೆಮ್ಮದಿ. ಅಗತ್ಯ ವಸ್ತುಗಳ ಖರೀದಿಗಾಗಿ ಖರ್ಚು. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ಅಧಿಕ ರಕ್ತದ ಒತ್ತಡ ಇರುವವರು ಯಾವುದೇ ಕಾರಣಕ್ಕೂ ತಾತ್ಸಾರ ಮಾಡುವುದು ಬೇಡ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಸಿಗಲಿದೆ. ಆರ್ಥಿಕ ಪ್ರಗತಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ.
ಅದೃಷ್ಟ ಸಂಖ್ಯೆ: 2

Horoscope Today

ಮಿಥುನ: ಆಧ್ಯಾತ್ಮಿಕ ವಿಚಾರಗಳಿಂದ, ಹಿರಿಯರಿಂದ ಮಾರ್ಗದರ್ಶನ ಪಡೆಯುವಿರಿ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರ್ಥಿಕವಾಗಿ ಪ್ರಗತಿ. ಅನಿವಾರ್ಯ ಕಾರಣಗಳಿಂದ ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕಟಕ: ಯಾವುದೇ ಆಪ್ತ ಸಂಬಂಧಿಕರ ಬೆಂಬಲವು ಇಂದು ನಿಮ್ಮ ವ್ಯಾಪಾರದಲ್ಲಿ ಆರ್ಥಿಕ ಲಾಭ ತರಲಿದೆ. ಆರೋಗ್ಯ ಮಧ್ಯಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಅನಾವಶ್ಯಕ ಕಾರಣಗಳಿಂದ ಖರ್ಚು. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವಿರಿ. ಆರೋಗ್ಯ ಪರಿಪೂರ್ಣ.ಉದ್ಯೋಗಿಗಳಿಗೆ ಉತ್ಸಾಹದ ದಿನ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2

Horoscope Today

ಕನ್ಯಾ: ಆರೋಗ್ಯ ಪರಿಪೂರ್ಣ. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣ ಸಾಧಿಸುವಿರಿ. ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ, ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ. ಮನೆಯಲ್ಲಿನ ಭಿನ್ನಾಭಿಪ್ರಾಯಗಳು ನಿಮ್ಮ ಏಕಾಗ್ರತೆಗೆ ಧಕ್ಕೆ ತರುವ ಸಾಧ್ಯತೆ, ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಹಿರಿಯರಿಂದ ಮಾರ್ಗದರ್ಶನ. ದೈಹಿಕ ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆತುರದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವುದು ಬೇಡ, ದಿನದ ಮಟ್ಟಿಗೆ ಯಾವುದೇ ಹೂಡಿಕೆ ವ್ಯವಹಾರದಲ್ಲಿ ತೊಡಗುವುದರಿಂದ ನಷ್ಟವಾಗುವ ಸಾಧ್ಯತೆ. ಕೆಲವು ರಹಸ್ಯ ಸುದ್ದಿಗಳಿಂದ ನಿಮಗೆ ಅಚ್ಚರಿ. ನಿಮ್ಮ ಅಚ್ಚು ಕಟ್ಟು ಕೆಲಸದಿಂದ ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಆರ್ಥಿಕ ಪ್ರಗತಿ ಸಾಧಾರಣವಾಗಿರುವುದರಿಂದ ಹೆಚ್ಚಿದ ಒತ್ತಡ. ಪ್ರಮುಖ ಕೆಲಸ ಕಾರ್ಯಗಳು ನಿಧಾನವಾಗಿ ಸಾಗುವುದು. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ. ಉದ್ಯೋಗಿಗಳಿಗೆ ಶುಭ ಫಲ. ದೈಹಿಕ ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 1

ನಿಮ್ಮ ಹೆಸರಿನ ಸಂಖ್ಯಾಶಾಸ್ತ್ರವೂ ತಿಳಿಯಬೇಕೆ? ಹೀಗೆ ಮಾಡಿ

Horoscope Today

ಮಕರ: ಅನೇಕ ಕಾರಣದಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ಆರ್ಥಿಕವಾಗಿ ಪ್ರಗತಿ ಕಂಡರೂ ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ. ಆಪ್ತರೊಂದಿಗೆ ಮಾತುಕತೆ. ವ್ಯಾಪಾರದ ಉದ್ದೇಶದಿಂದಾಗಿ ಕೈಕೊಂಡ ಪ್ರವಾಸದಲ್ಲಿ ಯಶಸ್ಸು. ಆರೋಗ್ಯ ಕೊಂಚಮಟ್ಟಿಗೆ ಹದಗೆಡುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಮನರಂಜನೆಗಾಗಿ ಸಮಯವನ್ನು ಕಳೆಯುವಿರಿ. ಸೃಜನಶೀಲ ಕಾರ್ಯಗಳಿಂದಾಗಿ ವ್ಯಕ್ತಿತ್ವ ಪ್ರಕಾಶಿಸುವ ಸಾಧ್ಯತೆ. ನಿಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ. ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಪಡೆಯುವ ಸಾಧ್ಯತೆ. ಆರ್ಥಿಕ ಪ್ರಗತಿ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಇದನ್ನೂ ಓದಿ : Prerane column : ನಿಮ್ಮ ನಿಮ್ಮ ಬದುಕಿಗೆ ನೀವೇ ಜವಾಬ್ದಾರಿ; ಅದನ್ನು ಬೇರೆಯವರ ಮೇಲೆ ಹೊರಿಸಿದರೆ ನೀವು Waste Body!

Horoscope Today

ಮೀನ: ಆಹಾರದ ವ್ಯತ್ಯಾಸದ ಕ್ರಮದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು, ಕಾಳಜಿ ವಹಿಸುವುದು ಸೂಕ್ತ. ಹೂಡಿಕೆ ಕುರಿತಾಗಿ ಆಲೋಚನೆ. ಅನಿವಾರ್ಯ ಕಾರಣಗಳಿಂದ ಖರ್ಚು. ಆಪ್ತರೊಂದಿಗೆ ಮಾತುಕತೆ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Belagavi Winter Session : ಮುಂದಿನ ಬಜೆಟ್‌ನಲ್ಲಿ ಸೈಕಲ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆ ಜತೆ ಚರ್ಚಿಸಿ ಕ್ರಮ ವಹಿಸುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ.

VISTARANEWS.COM


on

Madhu Bangarappa in Belagavi Winter Session
Koo

ಬೆಳಗಾವಿ: ಪ್ರೌಢಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರು ಸಿಎಂ ಆಗಿದ್ದಾಗ ನೀಡಿದ್ದ ಉಚಿತ ಸೈಕಲ್‌ ಯೋಜನೆಗೆ ಮರು ಚಾಲನೆ ಸಿಗಲಿದೆ. ಇಂಥದ್ದೊಂದು ಭರವಸೆಯನ್ನು ಬೆಳಗಾವಿ ಅಧಿವೇಶನದಲ್ಲಿ (Belagavi Winter Session) ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ನೀಡಿದ್ದಾರೆ.

ಸರ್ಕಾರಿ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ಮತ್ತೆ ಸೈಕಲ್ ವಿತರಣೆ ಮಾಡಬೇಕು ಎಂದು ಶಾಸಕ ಪ್ರದೀಪ್‌ ಈಶ್ವರ್‌ (MLA Pradeep Easwar) ಅವರು ಪ್ರಶ್ನೋತ್ತರ ವೇಳೆ ಒತ್ತಾಯ ಮಾಡಿದಾಗ, ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ, ಮುಂದಿನ ಬಜೆಟ್‌ನಲ್ಲಿ ಸೈಕಲ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಆರ್ಥಿಕ ಇಲಾಖೆ (Finance Department) ಜತೆ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದ್ದಾರೆ.

ಈ ವೇಳೆ ಪ್ರದೀಪ್ ಈಶ್ವರ್ ಮಾತನಾಡಿ, ಇದರೊಟ್ಟಿಗೆ ಎರಡು ಜತೆ ಶೂ, ಸಾಕ್ಸ್ ಬದಲು ನಾಲ್ಕು ಜತೆ ವಿತರಣೆ ಮಾಡಿದೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು. ಇದರ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಉತ್ತರ ನೀಡಿದ್ದಾರೆ.

ಧ್ವನಿಗೂಡಿಸಿದ‌ ಆರ್. ಅಶೋಕ್

ಈ ವೇಳೆ ಪತಿ ಪಕ್ಷ ನಾಯಕ ಆರ್.‌ ಅಶೋಕ್ ಮಧ್ಯಪ್ರವೇಶಿಸಿ, ಇಡೀ ರಾಜ್ಯದಲ್ಲಿ ಸೈಕಲ್ ವಿತರಣೆಯನ್ನು ಪುನಾರಂಭಿಸಿ. ಬಿ.ಎಸ್.‌ ಯಡಿಯೂರಪ್ಪ ತಂದಿರುವ ಯೋಜನೆ ಅದಾಗಿದೆ. ದೂರದಿಂದ ಬರುವ ಮಕ್ಕಳಿಗೆ ಸಹಾಯ ಆಗುತ್ತದೆ ಎಂದು ಒತ್ತಾಯ ಮಾಡಿದರು.

ಇದನ್ನೂ ಓದಿ: Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

ಬಿಜೆಪಿ ಅವಧಿಯಲ್ಲೇ ಸ್ಥಗಿತವಾಗಿತ್ತು

ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಸೈಕಲ್ ವಿತರಣೆ ಬಿಜೆಪಿ ಕಾಲದಲ್ಲೇ ಸ್ಥಗಿತ ಆಗಿದೆ. ನಿಮ್ಮವರೇ ಆರಂಭಿಸಿ ನಿಮ್ಮ ಕಾಲದಲ್ಲೇ ಸ್ಥಗಿತ ಆಯಿತು, ಹೀಗಾಗಬಾರದಿತ್ತು. ಈಗ ನಮ್ಮ ಸರ್ಕಾರ ಸೈಕಲ್ ವಿತರಣೆಗೆ ಪರಿಶೀಲಿಸಿ ಕ್ರಮ ವಹಿಸಲಿದೆ ಎಂದು ಟಾಂಗ್‌ ಕೊಟ್ಟರು.

ಹಳೇ ಪಿಂಚಣಿ ಶೀಘ್ರ ಜಾರಿ? 10 ದಿನದಲ್ಲಿ ಸಮಿತಿ ಪುನಾರಚನೆ: ಕೃಷ್ಣ ಬೈರೇಗೌಡ

ಬೆಳಗಾವಿ: ರಾಜ್ಯದಲ್ಲಿ ಹಳೇ ಪಿಂಚಣಿ ಪದ್ಧತಿಯನ್ನೇ (Old Pension Scheme) ಮರು ಜಾರಿ ಮಾಡಬೇಕು. ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಮಾಡಬೇಕು (NPS Cancellation) ಎಂದು ಆಗ್ರಹಿಸುತ್ತಿರುವ ಸರ್ಕಾರಿ ನೌಕರರಿಗೆ (Government employees) ಈ ಬಾರಿ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌ ಸಿಗಲಿದೆಯೇ? ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ಸಂಬಂಧ ಇರುವ ಸಮಿತಿಯನ್ನು 10 ದಿನದೊಳಗೆ ಪುನಾರಚನೆ ಮಾಡುತ್ತೇವೆ. ಆದಷ್ಟು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ಅಧಿವೇಶನದಲ್ಲಿ (Belagavi Winter Session) ಸಚಿವ ಕೃಷ್ಣ ಬೈರೇಗೌಡ (Minister Krishna Byre Gowda) ಹೇಳಿದ್ದಾರೆ.

ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮ ಏನು? ಎಂಬ ಜೆಡಿಎಸ್‌ನ ಮರಿತಿಬ್ಬೇಗೌಡ, ಬಿಜೆಪಿಯ ಎಸ್.ವಿ. ಸಂಕನೂರ್ ಅವರು ವಿಧಾನ ಪರಿಷತ್‌ನಲ್ಲಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಹಿಂದೆ ಏಕ ವ್ಯಕ್ತಿಯ ಸಮಿತಿಯನ್ನು ಮಾಡಿದ್ದರು. ಈಗ ಆ ಸಮಿತಿಯನ್ನು ಪರಿಷ್ಕರಣೆ ಮಾಡಿ ನಾಲ್ಕೈದು ಸದಸ್ಯರ ನೇಮಕ ಮಾಡಲಾಗುವುದು. ಬಳಿಕ ಆ ಸಮಿತಿ ಕಾರ್ಯವ್ಯಾಪ್ತಿ ಅಳವಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ವಾಜಪೇಯಿ ಬಗ್ಗೆ ನಮಗೆ ನಂಬಿಕೆ ಇದೆ

ಕಾಲಮಿತಿಯ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ. ರಾಜಸ್ಥಾನ್, ಛತ್ತೀಸಗಢ, ಪಂಜಾಬ್‌ನಿಂದ ಇದರ ಬಗೆಗ ಆದೇಶ ಆಗಿದೆ. ಆದರೆ, ಅಲ್ಲಿ ಇನ್ನು ಜಾರಿಗೊಳಿಸಿಲ್ಲ. ಯಾರನ್ನು ಪಿಂಚಣಿಯಿಂದ ಹೊರಗಿಡುವ ಪ್ರಶ್ನೆ ಇಲ್ಲ. ನಾನು ಅಟಲ್‌ ಬಿಹಾರಿ ವಾಜಪೇಯಿಯವರ ಮೇಲೆ ನಂಬಿಕೆ ಇಟ್ಟಿದ್ದೇನೆ. ಅವರ ಆಡಳಿತದ ಬಗ್ಗೆಯೂ ನಂಬಿಕೆ ಇಟ್ಟಿದ್ದೇನೆ. ವಾಜಪೇಯಿ ಅವರು ಎನ್‌ಪಿಎಸ್ ತರುವಾಗ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿರುತ್ತಾರೆ. ಆದರೆ, ನಿಮಗೆ ಅವರ ನಿರ್ಧಾರದ ಬಗ್ಗೆ ಗೌರವ ಇಲ್ಲದಿರಬಹುದು, ನಮಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

10 ದಿನದೊಳಗೆ ಸಮಿತಿ ಪುನರ್ ರಚನೆ

ಅನುದಾನಿತ ಸಂಸ್ಥೆಯಲ್ಲಿ ಸಿಬ್ಬಂದಿಗೆ ತೊಂದರೆ ಆಗಿದೆ ಎಂಬುದನ್ನು ನಾವು ಒಪ್ಪುತ್ತೇವೆ. ಶಿಕ್ಷಣ ಸಂಸ್ಥೆಯವರು ಕೊಡುಗೆ ನೀಡಬೇಕು. ನಮಗೆ ಅದನ್ನು ಪರಿಹರಿಸುವ ಮನಸ್ಸಿದೆ. ಅದನ್ನ ಮಾಡೇ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಸೂಚನೆ ಕೊಟ್ಟಿದ್ದಾರೆ. 10 ದಿನದೊಳಗೆ ಸಮಿತಿ ಪುನರ್ ರಚನೆ ಮಾಡುತ್ತೇವೆ ಎಂದು ಇದೇ ವೇಳೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಶೀಘ್ರದಲ್ಲೇ ಆರ್ಥಿಕ ಇಲಾಖೆ ಜತೆ ಸಿಎಂ ಸಭೆ

ಎನ್‌ಪಿಎಸ್‌ ತೆಗೆದು ಒಪಿಎಸ್‌ ಅನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದರೆ ಮುಂದಾಗುವ ಸಾಧಕ – ಬಾಧಕಗಳು ಏನು? ರಾಜ್ಯದ ಮೇಲೆ ಆಗುವ ಆರ್ಥಿಕ ಹೊರೆ ಏನು? ಈಗಿರುವ ಎಲ್ಲ ಲೆಕ್ಕಾಚಾರಗಳ ನಡುವೆ ಅದನ್ನು ಹೊಂದಾಣಿಕೆ ಮಾಡಿಕೊಂಡು ಹೋಗಬಹುದಾ ಎಂದು ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆ ಜತೆ ಶೀಘ್ರದಲ್ಲಿಯೇ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Nandini Milk: ಮತ್ತೆ ನಂದಿನಿ ಹಾಲಿನ ದರ ಏರಿಕೆ? ಯಾವಾಗ? ಎಷ್ಟು ಹೆಚ್ಚಳ ಮಾಡಬಹುದು?

ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ನೌಕರರ ಸಮಾವೇಶ

ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ನೌಕರರ ಸಮಾವೇಶ ನಡೆಯುತ್ತಲಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡಲು ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿ ಎನ್‌ಪಿಎಸ್‌ ನೌಕರರು ಈ ಸಮಾವೇಶದಲ್ಲಿ ಒಪಿಎಸ್‌ ಜಾರಿಗಾಗಿ ಸಿಎಂ ಎದುರು ಹಕ್ಕೊತ್ತಾಯವನ್ನು ಮಂಡನೆ ಮಾಡುತ್ತಾರೆ. ಹಾಗಾಗಿ ಈ ಬಗ್ಗೆ ಮೊದಲೇ ಸಾಧಕ – ಬಾಧಕಗಳ ಬಗ್ಗೆ ಆರ್ಥಿಕ ಇಲಾಖೆ ಜತೆ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದರೆ ಸಮಾವೇಶದಲ್ಲಿ ಘೋಷಣೆ ಮಾಡಲು ಅನುಕೂಲ ಆಗುತ್ತದೆ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಆಗಿದೆ ಎಂದು ಹೇಳಲಾಗಿದೆ. ಆದರೆ, ಇನ್ನು 10 ದಿನದಲ್ಲಿ ಸಮಿತಿಯನ್ನು ಪುನಾರಚನೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ಸದ್ಯಕ್ಕೆ ಹಳೇ ಪಿಂಚಣಿ ಬಗ್ಗೆ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಕಡಿಮೆಯೇ ಎಂದು ಹೇಳಲಾಗಿದೆ.

Continue Reading

ಪ್ರಮುಖ ಸುದ್ದಿ

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

Israel Palestine War: ಹಮಾಸ್‌ ಉಗ್ರರ ವಿರುದ್ಧ ಸಮರ ಸಾರಿರುವ ಇಸ್ರೇಲ್‌‌ ಅರ್ಧದಷ್ಟು ಹಮಾಸ್‌ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದೆ.

VISTARANEWS.COM


on

Israel
Koo

ಗಾಜಾ: ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ಕದನ ಮುಂದುವರಿದಿದೆ (Israel Palestine War). ಈ ಮಧ್ಯೆ ಒತ್ತೆಯಾಳುಗಳ ಕುಟುಂಬಗಳನ್ನು ಭೇಟಿಯಾದ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮಾತನಾಡಿ, ʼʼಇಸ್ರೇಲ್ ಪಡೆಗಳು ಹಮಾಸ್‌ ಬೆಟಾಲಿಯನ್ ಕಮಾಂಡರ್‌ಗಳ ಪೈಕಿ ಅರ್ಧದಷ್ಟು ಜನರನ್ನು ಕೊಂದು ಹಾಕಿವೆʼʼ ಎಂದು ಹೇಳಿದ್ದಾರೆ. ʼʼಹಮಾಸ್ ಭಯೋತ್ಪಾದಕರು ಇಸ್ರೇಲ್ ಅನ್ನು ಛಿದ್ರಗೊಳಿಸಲು ಬಯಸಿದ್ದರು. ಆದರೆ ನಾವು ಅದನ್ನೇ ಛಿದ್ರಗೊಳಿಸುತ್ತಿದ್ದೇವೆ” ಎಂದು ಹೇಳಿದರು. ಆದರೆ ಹತ್ಯೆಗೀಡಾದವರ ವಿವರಗಳು ಮತ್ತು ಹೆಸರುಗಳನ್ನು ಅವರು ಬಹಿರಂಗಪಡಿಸಲಿಲ್ಲ.

“ಸೈನಿಕರು, ನಾಗರಿಕರು, ಮಕ್ಕಳು ಸೇರಿದಂತೆ ಹಮಾಸ್‌ನ ಒತ್ತೆಯಾಳುಗಳಾಗಿರುವ ಎಲ್ಲರನ್ನೂ ಸುರಕ್ಷಿತವಾಗಿ ಹಿಂದಿರುಗಿಸಲು ವಿಶಾಲ ಗುಪ್ತಚರ ಇಲಾಖೆ ನಿರಂತರ ಕೆಲಸ ಮಾಡುತ್ತಿದೆʼʼ ಎಂದು ಅವರು ಭರವಸೆ ನೀಡಿದರು. “ನಾವು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇವೆ. ನಾವು 110 ಒತ್ತೆಯಾಳುಗಳನ್ನು ಬಿಡಿಸಿ ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮವರನ್ನು ಅಪಹರಿಸಿದ, ಕೊಲೆ ಮಾಡಿದ, ಅತ್ಯಾಚಾರ ಮಾಡಿದ ಮತ್ತು ಸುಟ್ಟು ಹಾಕಿದ ಹೀಗೆ ಎಲ್ಲ ಕೃತ್ಯಗಳಿಗೆ ಪ್ರತೀಕಾರ ತೀರಿಸುತ್ತೇವೆ. ನಾವು ಯಾರನ್ನೂ ಮರೆಯುವುದಿಲ್ಲ ಮತ್ತು ಕ್ಷಮಿಸುವುದಿಲ್ಲʼʼ ಎಂದು ತಿಳಿಸಿದರು.

ಗಾಜಾ ಇನ್ನೆಂದೂ ಇಸ್ರೇಲ್‌ಗೆ ಬೆದರಿಕೆಯೊಡ್ಡುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ʼʼಭಯೋತ್ಪಾದನೆಯನ್ನು ಬೆಂಬಲಿಸುವ, ಭಯೋತ್ಪಾದನೆಗೆ ಒತ್ತು ನೀಡುವ, ಭಯೋತ್ಪಾದನೆಗೆ ಹಣಕಾಸು ಒದಗಿಸುವ ಮತ್ತು ಭಯೋತ್ಪಾದಕರ ಕುಟುಂಬಗಳಿಗೆ ಹಣಕಾಸು ಒದಗಿಸುವ ಯಾವುದೇ ಶಕ್ತಿಗಳನ್ನು ಬೆಳೆಯಲು ಬಿಡುವುದಿಲ್ಲʼʼ ಎಂದು ಅವರು ಒತ್ತಿ ಹೇಳಿದರು.

ಐವರು ಹಮಾಸ್ ಮಿಲಿಟರಿ ನಾಯಕರ ಹತ್ಯೆ

11 ಹಿರಿಯ ಹಮಾಸ್ ಮಿಲಿಟರಿ ನಾಯಕರು ಗಾಜಾ ಕೆಳಗಿರುವ ಸುರಂಗದಲ್ಲಿ ಜಮಾಯಿಸಿರುವ ಫೋಟೊವನ್ನು ಬಿಡುಗಡೆ ಮಾಡಿರುವ ಇಸ್ರೇಲ್ ಮಿಲಿಟರಿ, ಈ ಪೈಕಿ ಐವರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ. ಹಮಾಸ್‌ ವೈಮಾನಿಕ ವಿಭಾಗದ ಮುಖ್ಯಸ್ಥ, ಬ್ರಿಗೇಡ್ ಕಮಾಂಡರ್, ಉಪ ಬ್ರಿಗೇಡ್ ಕಮಾಂಡರ್ ಮತ್ತು ಇಬ್ಬರು ಬೆಟಾಲಿಯನ್ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದೆ. ಉತ್ತರ ಗಾಜಾದ ಬೀಟ್ ಲಾಹಿಯಾದ ಇಂಡೋನೇಷ್ಯಾ ಆಸ್ಪತ್ರೆಯ ಬಳಿಯ ಸುರಂಗದಲ್ಲಿ ಉಗ್ರಗಾಮಿ ಗುಂಪು ಅಡಗಿದ್ದಾಗ ಈ ಫೋಟೊವನ್ನು ತೆಗೆಯಲಾಗಿತ್ತು ಎಂದು ಮಿಲಿಟರಿ ಸ್ಪಷ್ಟಪಡಿಸಿದೆ. ಆದರೆ ಫೋಟೊವನ್ನು ಯಾರು ಕ್ಲಿಕ್‌ ಮಾಡಿದ್ದು ಎನ್ನುವ ವಿವರ ಲಭ್ಯವಾಗಿಲ್ಲ.

ಫೋಟೊದಲ್ಲೇನಿದೆ?

ಫೋಟೊದಲ್ಲಿ ಹಮಾಸ್‌ ನಾಯಕರು ಹಣ್ಣು, ಪಾನೀಯಗಳು ಮತ್ತು ವಿವಿಧ ಆಹಾರ ಪದಾರ್ಥಗಳಿಂದ ತುಂಬಿದ ಮೇಜಿನ ಬಳಿ ಕುಳಿತಿರುವುದು ಕಂಡುಬಂದಿದೆ. ಹಮಾಸ್ ನಿರ್ಮಿಸಿದ ಸುರಂಗಗಳ ವ್ಯಾಪಕ ಜಾಲವು ಇದರಲ್ಲಿ ಗೋಚರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಬು ಅನಾಸ್ ಎಂದೂ ಕರೆಯಲ್ಪಡುವ ಉತ್ತರ ಗಾಜಾ ಮಿಲಿಟರಿ ನಾಯಕ ಅಹ್ಮದ್ ಅಲ್-ಘಂಡೂರ್, ಡೆಪ್ಯೂಟಿ ವೇಲ್ ರಜಬ್ ಮತ್ತು ಹಮಾಸ್ ಬೆಟಾಲಿಯನ್ ಕಮಾಂಡರ್ ರಫೆಟ್ ಸಲ್ಮಾನ್ ಸೇರಿದಂತೆ ಚಿತ್ರದಲ್ಲಿರುವ ಮೂವರನ್ನು ಇಷ್ಟರಲ್ಲಾಗಲೇ ಹತ್ಯೆ ಮಾಡಲಾಗಿದೆ ಎಂದೂ ವರದಿ ಹೇಳಿದೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ ಡೆಡ್‌ಲೈನ್‌ಗೆ ಮಣಿದ ಹಮಾಸ್‌; 17 ಒತ್ತೆಯಾಳುಗಳ ಬಿಡುಗಡೆ

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಇದರಿಂದ ಸುಮಾರು 1,200 ಇಸ್ರೇಲಿಗರು ಮೃತಪಟ್ಟಿದ್ದರು. ಇದರಿಂದ ಕೆರಳಿದ ಇಸ್ರೇಲ್‌ ಗಾಜಾವಾನನ್ನು ಹಮಾಸ್‌ನಿಂದ ಮುಕ್ತಗೊಳಿಸುವುದಾಗಿ ಪ್ರತಿಜ್ಞೆ ಕೈಗೊಂಡು ಪ್ರತಿದಾಳಿ ಆರಂಭಿಸಿತು. ಯುದ್ಧ ಪ್ರಾರಂಭವಾದಾಗಿನಿಂದ ಸಾವಿರಾರು ಹಮಾಸ್ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಕಮಾಂಡರ್‌ಗಳು ಅಂದಾಜಿಸಿದ್ದಾರೆ. ಗಾಜಾದಲ್ಲಿನ ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಮತ್ತು ಮೊಹಮ್ಮದ್ ದೀಫ್ ಸೇರಿದಂತೆ ಪ್ರಮುಖ ಮುಖಂಡರನ್ನು ಪತ್ತೆಹಚ್ಚಲು ಮತ್ತು ನಿರ್ಮೂಲನೆ ಮಾಡಲು ಇಸ್ರೇಲ್ ಪಡೆಗಳು ಇತ್ತೀಚೆಗೆ ದಕ್ಷಿಣ ಗಾಜಾವನ್ನು ಪ್ರವೇಶಿಸಿವೆ. ಹಮಾಸ್‌ನ ಎರಡನೇ ಅತಿದೊಡ್ಡ ಉತ್ತರ ಬ್ರಿಗೇಡ್ ಅನ್ನು ಗಮನಾರ್ಹವಾಗಿ ನಾಶಗೊಳಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

Continue Reading

ಕ್ರಿಕೆಟ್

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

ಅಂಡರ್​-19 ಏಷ್ಯಾಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಡಿ.10 ರಂದು ನಡೆಯಲಿದೆ.

VISTARANEWS.COM


on

U-19 Asia Cup IND vs PAK
Koo

ದುಬೈ: ದುಬೈ (Dubai) ಆತಿಥ್ಯನಲ್ಲಿ ನಡೆಯುವ ಪುರುಷರ ಅಂಡರ್​-19 ಏಷ್ಯಾಕಪ್ (ACC Men’s U19 Asia Cup 2023) ಟೂರ್ನಿಯ ಪಂದ್ಯಾವಳಿಗಳು ಡಿಸೆಂಬರ್ 8 ರಿಂದ ಆರಂಭಗೊಳ್ಳಲಿದೆ. ಟೂರ್ನಿ ಡಿಸೆಂಬರ್ 17 ರವರೆಗೆ ನಡೆಯಲಿದೆ. ಡಿ.8ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಭಾರತ ತಂಡ ಅಫಘಾನಿಸ್ತಾನ​ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ. ಸಾಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಡಿ.10 ರಂದು ಕಣಕಿಳಿಯಲಿದೆ.

15 ಪಂದ್ಯಗಳು

50-ಓವರ್‌ಗಳ ಸ್ಪರ್ಧೆಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಇದರಲ್ಲಿ ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್ ಪಂದ್ಯ ಕೂಡ ಸೇರಿದೆ. ಫೈನಲ್ ಪಂದ್ಯ ಡಿಸೆಂಬರ್ 17 ರಂದು ನಡೆಯಲ್ಲಿದೆ. ಈ ಟೂರ್ನಿಯ ಪಂದ್ಯಗಳು ಐಸಿಸಿ ಅಕಾಡೆಮಿ ಓವಲ್ ಸೇರಿದಂತೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Cricket Stadium) ನಡೆಯಲಿವೆ. ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸಣಸಾಡಲಿವೆ.

ತಂಡಗಳು

ಕೂಟದಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಅವುಗಳೆಂದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಜಪಾನ್, ಯುಎಇ
ಅಫಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ. ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಹಾಲಿ ಚಾಂಪಿಯನ್ ಭಾರತ, ನೇಪಾಳ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಜಪಾನ್ ಮತ್ತು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಸ್ಥಾನ ಪಡೆದಿವೆ.

ಇದನ್ನೂ ಓದಿ ACC Under-19 Asia Cup : ಜೂನಿಯರ್​ಗಳ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ವೇಳಾಪಟ್ಟಿ

ಡಿಸೆಂಬರ್ 8 – ಭಾರತ vs ಅಫ್ಘಾನಿಸ್ತಾನ – ICC ಅಕಾಡೆಮಿ ಓವಲ್ 1

ಡಿಸೆಂಬರ್ 8 – ಪಾಕಿಸ್ತಾನ vs ನೇಪಾಳ – ICC ಅಕಾಡೆಮಿ ಓವಲ್ 2

ಡಿಸೆಂಬರ್ 9 – ಬಾಂಗ್ಲಾದೇಶ vs ಯುಎಇ – ICC ಅಕಾಡೆಮಿ ಓವಲ್ 1

ಡಿಸೆಂಬರ್ 9 – ಶ್ರೀಲಂಕಾ vs ಜಪಾನ್ – ICC ಅಕಾಡೆಮಿ ಓವಲ್ 2

ಡಿಸೆಂಬರ್ 10 – ಭಾರತ vs ಪಾಕಿಸ್ತಾನ – ICC ಅಕಾಡೆಮಿ ಓವಲ್ 1

ಡಿಸೆಂಬರ್ 10 – ಅಫ್ಘಾನಿಸ್ತಾನ vs ನೇಪಾಳ – ICC ಅಕಾಡೆಮಿ ಓವಲ್ 2

ಡಿಸೆಂಬರ್ 11 – ಶ್ರೀಲಂಕಾ vs ಯುಎಇ – ICC ಅಕಾಡೆಮಿ ಓವಲ್ 1

ಡಿಸೆಂಬರ್ 11 – ಬಾಂಗ್ಲಾದೇಶ vs ಜಪಾನ್ – ICC ಅಕಾಡೆಮಿ ಓವಲ್ 2

ಡಿಸೆಂಬರ್ 12 – ಪಾಕಿಸ್ತಾನ vs ಅಫ್ಘಾನಿಸ್ತಾನ – ICC ಅಕಾಡೆಮಿ ಓವಲ್ 1

ಡಿಸೆಂಬರ್ 12 – ಭಾರತ vs ನೇಪಾಳ – ICC ಅಕಾಡೆಮಿ ಓವಲ್ 2

ಡಿಸೆಂಬರ್ 13 – ಬಾಂಗ್ಲಾದೇಶ vs ಶ್ರೀಲಂಕಾ – ICC ಅಕಾಡೆಮಿ ಓವಲ್ 1

ಡಿಸೆಂಬರ್ 13 – ಯುಎಇ vs ಜಪಾನ್ – ಐಸಿಸಿ ಅಕಾಡೆಮಿ ಓವಲ್ 2

ಡಿಸೆಂಬರ್ 15 – ಸೆಮಿಫೈನಲ್ 1 – ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ

ಡಿಸೆಂಬರ್ 15 – ಸೆಮಿ-ಫೈನಲ್ 2 – ICC ಅಕಾಡೆಮಿ ಓವಲ್ 1

ಡಿಸೆಂಬರ್ 17 – ಫೈನಲ್ – ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ

ಭಾರತ ಅಂಡರ್-19 ತಂಡ

ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಅರ್ವೆಲ್ಲಿ ಅವನೀಶ್ ರಾವ್ (ವಿಕೆಟ್​ ಕೀಪರ್​), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.

ಟ್ರಾವೆಲಿಂಗ್ ಮೀಸಲು ಆಟಗಾರರು: ಪ್ರೇಮ್ ದಿಯೋಕರ್, ಅನ್ಶ್ ಗೋಸಾಯಿ, ಎಂಡಿ ಅಮನ್

ಮೀಸಲು ಆಟಗಾರರು: ದಿಗ್ವಿಜಯ್ ಪಾಟೀಲ್, ಜಯಂತ್ ಗೋಯತ್, ಪಿ.ವಿಘ್ನೇಶ್, ಕಿರಣ್ ಚೋರ್ಮಾಲೆ

Continue Reading

ಕರ್ನಾಟಕ

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

Veer Savarkar : ಸಾವರ್ಕರ್ ಫೋಟೊ ತೆಗೆದರೆ ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನನಗೆ ಬಿಟ್ಟರೆ ಇಂದೇ ಅವರ ಫೋಟೊವನ್ನು ತೆಗೆದು ಹಾಕುತ್ತೇನೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಕೆಂಡವಾಗಿದ್ದು, ಪ್ರಿಯಾಂಕ್‌ ಖರ್ಗೆ ಅವರು ಸಂಪೂರ್ಣ ಭಾರತೀಯರಿಗೆ, ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶವನ್ನು ಹೊರಹಾಕಿದೆ.

VISTARANEWS.COM


on

Veer Savarkar and Priyank Kharge
Koo

ಬೆಳಗಾವಿ: ಬೆಳಗಾವಿ ವಿಧಾನಸೌಧದಲ್ಲಿ ಕಳೆದ ಬಿಜೆಪಿ ಸರ್ಕಾರ ಇದ್ದಾಗ ಹಾಕಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ (Veer Savarkar) ಅವರ ಫೋಟೊ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ (Minister Priyank Kharge) ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಸಾವರ್ಕರ್ ಫೋಟೊ ತೆಗೆದರೆ ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನನಗೆ ಬಿಟ್ಟರೆ ಇಂದೇ ಅವರ ಫೋಟೊವನ್ನು ತೆಗೆದು ಹಾಕುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಕೆಂಡವಾಗಿದ್ದು, ಪ್ರಿಯಾಂಕ್‌ ಖರ್ಗೆ ಅವರು ಸಂಪೂರ್ಣ ಭಾರತೀಯರಿಗೆ, ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶವನ್ನು ಹೊರಹಾಕಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ, ವೀರ ಸಾವರ್ಕರ್‌ ಅವರ ಯಾವ ತತ್ವ ಸಿದ್ಧಾಂತದಲ್ಲಿಯೂ ಸಮಾನತೆ ಕಾಣಲ್ಲ. ಅದನ್ನು ನಾನು ಒಪ್ಪಲ್ಲ. ಯಾವ ತತ್ವ ಸಿದ್ಧಾಂತದ ಪ್ರೇರಿತವಾಗಿ ಗಾಂಧೀಜಿ ಹತ್ಯೆಯಾಗಿದೆ? ನನ್ನನ್ನು ಬಿಟ್ಟರೆ ಬೆಳಗಾವಿ ವಿಧಾನಸೌಧದೊಳಗೆ ಇರುವ ವೀರ ಸಾವರ್ಕರ್‌ ಅವರ ಫೋಟೊವನ್ನು ಇವತ್ತೇ ತೆಗೆದುಹಾಕುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ; ಉ.ಕ ಜಿಲ್ಲಾ ಶಾಸಕರಲ್ಲೇ ಒಡಕು! ತಮ್ಮ ತಾಲೂಕಿಗೇ ಬೇಕೆಂದು ಸದನದಲ್ಲಿ ಕಿತ್ತಾಟ

ಹೀಗೆ ವಿಧಾನಸೌಧದೊಳಗೆ ಇರುವ ಫೊಟೊವನ್ನು ತೆಗೆಯುವ ಕೆಲಸ ನಿಯಮಾನುಸಾರವಾಗಿ ಆಗಬೇಕು. ಈ ವಿಷಯದಲ್ಲಿ ಸ್ಪೀಕರ್ ಯು.ಟಿ. ಖಾದರ್‌ ಅವರ ನಿರ್ಧಾರವನ್ನು ನೋಡೋಣ. ನಾನು ಸಂವಿಧಾನವನ್ನು ನಂಬಿರುವ ವ್ಯಕ್ತಿ. ಕಳೆದ ಬಾರಿ ಸಾವರ್ಕರ್ ಫೋಟೊ ಹಾಕಿದಾಗ ಬಿಜೆಪಿಯವರಿಗೆ ಪ್ರಶ್ನೆ ಕೇಳಿದ್ದೆ. ಅವರು ಇದುವರೆಗೂ ಉತ್ತರ ಕೊಟ್ಟಿಲ್ಲ. ಸಾವರ್ಕರ್ ಹೆಸರಿಗೆ ವೀರ್ ಹೇಗೆ ಬಂತು? ಬ್ರಿಟಿಷರ ಬಳಿ ಸಾವರ್ಕರ್ ಪಿಂಚಣಿ ಪಡೆಯುತ್ತಿರಲಿಲ್ಲವೇ? ಅವರ ಮನೆಯವರು ಕ್ಷಮಾಪಣೆ ಅರ್ಜಿ ಹಾಕಿದ್ದರಾ, ಇಲ್ಲವಾ? ಸುಭಾಷ್ ಚಂದ್ರ ಬೋಸ್ ಇಂಡಿಯನ್ ನ್ಯಾಷನಲ್ ಆರ್ಮಿ ಮಾಡಿದ್ದರು. ಅದಕ್ಕೆ ನೋಂದಣಿ ಮಾಡಿಕೊಳ್ಳಲು ಸೇರಿದ್ದರಾ ಇಲ್ಲವಾ? ಸಾವರ್ಕರ್ ಅವರಿಗೆ ಗೋ ಮಾತೆ ಬಗ್ಗೆ ಅಭಿಪ್ರಾಯ ಏನಿತ್ತು? ನಾನು ಅವರ ಐಡಿಯಾಲಜಿ ವಿರುದ್ಧ ಇದ್ದೇನೆ‌. ಅವರ ತತ್ವದ ಮೇಲೆ ನನಗೆ ನಂಬಿಕೆ ಇಲ್ಲ. ವೀರ ಸಾವರ್ಕರ್‌ ಫೋಟೊ ತೆಗೆಯುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿದ್ದೇನೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

ಸಾವರ್ಕರ್ ಫೋಟೊ ತೆಗೆದು, ಜವಾಹರ್‌ಲಾಲ್‌ ನೆಹರು ಫೋಟೊ ಹಾಕುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ನೆಹರೂ ಅವರ ಫೋಟೊವನ್ನು ಹಾಕಲೇಬೇಕು‌. ಅವರು 3259 ದಿನ ಜೈಲಲ್ಲಿ ಇದ್ದವರು. ದೇಶದ ಮೊದಲ ಪ್ರಧಾನಿ. 16 ವರ್ಷ ದೇಶವನ್ನು ಆಳಿದ್ದಾರೆ. ಆರ್ಥಿಕವಾಗಿ ಸದೃಢವಾಗಿದ್ದೇವೆ ಅಂತ ಹೇಳುತ್ತಿದ್ದಾರಲ್ಲ? ಪ್ರಧಾನಿ ನರೇಂದ್ರ ಮೋದಿ ವಿಶ್ವಗುರು ಅಂತ ಹೇಳ್ತಿದ್ದಾರಲ್ಲವೇ? ಅದಕ್ಕೆ ಅಡಿಪಾಯ ಹಾಕಿದ್ದೇ ನೆಹರು. ಐಐಟಿ, ಐಐಎಂ, ಇಸ್ರೋ ಎಲ್ಲವನ್ನೂ ಸ್ಥಾಪಿಸಿದ್ದೇ ನೆಹರು. ಚಂದ್ರಯಾನ, ಸೂರ್ಯಯಾನ ಅಂತ ಬೆನ್ನು ತಟ್ಟಿಕೊಂಡು ಓಡಾಡುತ್ತಿದ್ದಾರಲ್ಲವೇ? ಇಸ್ರೋ ಸ್ಥಾಪಿಸಿದ್ದು ಯಾರು? ನೆಹರು ಅವರ ಫೋಟೊ ಹಾಕಲೇಬೇಕು ಎಂದು ಪ್ರತಿಪಾದಿಸಿದರು.

ಸಂಪೂರ್ಣ ಭಾರತೀಯರಿಗೆ, ಕನ್ನಡಿಗರಿಗೆ ಮಾಡಿದ ಅಪಮಾನ: ಅಶ್ವತ್ಥನಾರಾಯಣ್

ಪ್ರಿಯಾಂಕ್ ಖರ್ಗೆ ಅವರು ವೀರ ಸಾವರ್ಕರ್‌ ಅವರ ಬಗ್ಗೆ ಗೊಂದಲದ ಹೇಳಿಕೆ ನೀಡಿದ್ದಾರೆ. ಅವರಿಗೆ ಅಪಮಾನವಾಗಿ ಮಾತನಾಡಿದ್ದಾರೆ. ನಾನು ಫೋಟೊ ತೆಗೆದು ಹಾಕುತ್ತೇನೆ ಎಂದು ಹೇಳಿದ್ದಾರೆ. ಸಂಪೂರ್ಣ ಭಾರತೀಯರಿಗೆ, ಕನ್ನಡಿಗರಿಗೆ ಮಾಡಿದ ಅಪಮಾನ ಇದಾಗಿದೆ. ವೀರ ಸಾವರ್ಕರ್ ಅವರಿಗೆ ಅಗೌರವ ತೋರಿಸಿದ್ದನ್ನು ನಾವು ಖಂಡಿಸುತ್ತೇವೆ ಎಂದು ಶಾಸಕ ಅಶ್ವತ್ಥನಾರಾಯಣ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ್, ಈ ರೀತಿ ಹೇಳಿಕೆಯನ್ನು ಕೊಡುವುದು ಬಿಟ್ಟು, ಕಲಬುರಗಿಗೆ ಹೋಗಿ ಅಭಿವೃದ್ಧಿ ಮಾಡಿ. ಭಾವನೆಗೆ ಧಕ್ಕೆ ತರುವ ಹೇಳಿಕೆಗಳನ್ನು ನಿಲ್ಲಿಸಿ. ಕೀಳು ಮಟ್ಟದ ಯೋಚನೆಯನ್ನು ನಿಲ್ಲಿಸಿ. ನೀವು ಈಗ ವ್ಯಕ್ತಿ ಮಾತ್ರ ಅಲ್ಲ, ಒಂದು ಘನತೆವೆತ್ತ ಸ್ಥಾನದಲ್ಲಿದ್ದೀರಿ. ಮಂತ್ರಿಯಾಗಿ ಅವಮಾನ ಆಗುವ ಕೆಲಸ ಮಾಡಬೇಡಿ ಎಂದು ಹೇಳಿದರು.

ಇದನ್ನೂ ಓದಿ: Belagavi Winter Session: ರೈತರ ಸಾಲ ಮನ್ನಾಕ್ಕೆ ಬಿಜೆಪಿ ಆಗ್ರಹ; ಇದು ದಿವಾಳಿ ಸರ್ಕಾರ ಎಂದ ಅಶೋಕ್‌

ಪ್ರಸ್ತಾವನೆ ಬಂದಿಲ್ಲ; ಬಂದ ಮೇಲೆ ನೋಡೋಣ

ಈ ಬಗ್ಗೆ ಸ್ಪೀಕರ್‌ ಯು.ಟಿ. ಖಾದರ್‌ ಅವರಿಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನಬದ್ಧವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ಸಾವರ್ಕರ್‌ ಫೋಟೊ ಬದಲಾವಣೆ ಮಾಡುವ ಬಗ್ಗೆ ಈವರೆಗೆ ನನಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಬಂದ ಮೇಲೆ ಈ ಬಗ್ಗೆ ನೋಡೋಣ. ಈಗಲೇ ಅದರ ಬಗ್ಗೆ ಬ್ಯಾಟ್‌ ಬೀಸಿದರೆ ಆಗುತ್ತದೆಯೇ? ಪ್ರಜಾಪ್ರಭುತ್ವದಲ್ಲಿ ಅವರವರ ಹೇಳಿಕೆ ನೀಡಲು ಅವಕಾಶವಿದೆ. ನನಗೆ ಮಂತ್ರಿಗಳೂ ಒಂದೇ, ಪ್ರತಿಪಕ್ಷದವರೂ ಒಂದೇ ಎಂದು ಹೇಳಿದರು.

Continue Reading
Advertisement
Madhu Bangarappa in Belagavi Winter Session
ಕರ್ನಾಟಕ4 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Pressmeet for Demand for construction of bypass road in Yallapur
ಉತ್ತರ ಕನ್ನಡ9 mins ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ11 mins ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ11 mins ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ28 mins ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ29 mins ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Flax Seeds Benefits For Hair
ಆರೋಗ್ಯ38 mins ago

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

Wedding Fashion
ಫ್ಯಾಷನ್44 mins ago

Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

U-19 Asia Cup IND vs PAK
ಕ್ರಿಕೆಟ್53 mins ago

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

Veer Savarkar and Priyank Kharge
ಕರ್ನಾಟಕ54 mins ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ4 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ54 mins ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ6 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ14 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ22 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌