ಕಿರುತೆರೆ/ಒಟಿಟಿ
Taali Review: ತಾಲಿ ವೆಬ್ ಸಿರೀಸ್; ಗಣೇಶ ಗೌರಿಯಾಗುವ ಕತೆ, ಹೋರಾಟದ ಜತೆ ಮಂಗಳಮುಖಿಯರ ವ್ಯಥೆ
Taali Review: ಮುಂಬೈನಲ್ಲಿ ಮಂಗಳಮುಖಿಯರ ಹಕ್ಕುಗಳಿಗಾಗಿ ಹೋರಾಡಿದ ಶ್ರೀಗೌರಿ ಸಾವಂತ್ ಎಂಬ ಮಂಗಳಮುಖಿಯ ಹೋರಾಟದ ಕತೆಯನ್ನು ತಾಲಿ ವೆಬ್ ಸಿರೀಸ್ ಹೊತ್ತುತಂದಿದೆ. ಸುಶ್ಮಿತಾ ಸೇನ್ ನಟನೆಯ ವೆಬ್ ಸಿರೀಸ್ ಆಗಸ್ಟ್ 15ರಂದು ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ. ಹಾಗಾದರೆ, ವೆಬ್ ಸಿರೀಸ್ ಹೇಗಿದೆ, ಕಥಾಹಂದರದ ಇಣುಕು ನೋಟ ಇಲ್ಲಿದೆ.
| ಬಿ. ಸೋಮಶೇಖರ್, ಬೆಂಗಳೂರು
ಅಪ್ಪ ಪೊಲೀಸ್ ಅಧಿಕಾರಿ. ಕಡಲಷ್ಟು ಪ್ರೀತಿ ತೋರುವ ಅಮ್ಮ. ಮಮತೆಯಿಂದ ಕಾಣುವ ಅಕ್ಕ. ಇವರೆಲ್ಲರ ಅಕ್ಕರೆಯ ಮಧ್ಯೆ ಗಣೇಶ್ ಸಾವಂತ್ ಎಂಬ ಪೋರನ ಬಾಲ್ಯವು ಸುಖಮಯವಾಗಿಯೇ ಇರುತ್ತದೆ. ಆದರೆ, ಒಡಲಾಳದಲ್ಲಿರುವ ಹೆಣ್ಣು, ತಾನೂ ತಾಯಿಯಾಗಬೇಕು ಎನ್ನುವ ಆಸೆ, ಅದಕ್ಕೆ ತಕ್ಕಂತೆ ವರ್ತಿಸುವ ದೇಹದ ಭಾಷೆಯು ಇಡೀ ಕುಟುಂಬದಲ್ಲಿ ಕಿಚ್ಚು ಹಚ್ಚುತ್ತದೆ. ನನ್ನ ಮಗ ಮಗನಾಗಿ ಇರಬೇಕು ಎನ್ನುವ ಪೊಲೀಸ್ ಅಧಿಕಾರಿ, ಮಗನಲ್ಲೇ ತಾಯಿಯನ್ನು ಕಂಡರೂ ಸಮಾಜದ ಕಟ್ಟಳೆಗಳಿಗೆ ಹೆದರುವ ಗಣೇಶನ ತಾಯಿ, ಅಕ್ಕನ ಆತಂಕದ ಮಧ್ಯೆಯೂ ಹೇಗೆ ಗಣೇಶ್ ಸಾವಂತ್ ಎಂಬ ಬಾಲಕನು ತನ್ನೊಳಗಿನ ಹೆಣ್ತನವನ್ನು ಹುಡುಕಿಕೊಂಡು ಹೇಗೆ ಹೆಣ್ಣಾಗಿ ಬದಲಾಗುತ್ತಾನೆ, Sorry ಬದಲಾಗುತ್ತಾಳೆ, ಆಕೆ (Sushmita Sen) ಹೇಗೆ ಮಂಗಳಮುಖಿಯರ ಹಕ್ಕುಗಳಿಗಾಗಿ ಹೋರಾಡುತ್ತಾಳೆ, ಹೋರಾಟದಲ್ಲಿ ಏನೆಲ್ಲ ಅನುಭವಿಸುತ್ತಾಳೆ, ಯಾವೆಲ್ಲ ಮಾತುಗಳನ್ನು ಬಾಣಗಳಂತೆ ಚುಚ್ಚಿಸಿಕೊಳ್ಳುತ್ತಾಳೆ ಎಂಬುದರ ಕತೆಯೇ ತಾಲಿ (ಚಪ್ಪಾಳೆ) (Taali Review) ವೆಬ್ ಸಿರೀಸ್‌ನ ಒಂದು ವಾಕ್ಯದ ಸಾರ.
– ವೆಬ್ ಸಿರೀಸ್: ತಾಲಿ
– ನಿರ್ದೇಶನ: ರವಿ ಜಾಧವ್
– ತಾರಾಗಣ: ಸುಶ್ಮಿತಾ ಸೇನ್, ಅಂಕುರ್ ಭಾಟಿಯಾ, ಸುವ್ರತ್ ಜೋಶಿ, ನಿತಿನ್ ರಾಥೋಡ್
– ನಿರ್ಮಾಣ: GSEAMS ಬ್ಯಾನರ್‌ನ ಕಾರ್ತಿಕ್ ನಿಶಂದರ್, ಅರ್ಜುನ್ ಸಿಂಗ್ ಬಾರನ್, ಅಫೀಫಾ ಸುಲೇಮಾನ್ ನದೈದ್ವಾಲಾ, ಟ್ರಿಪಲ್ ಏಸ್ ಎಂಟರ್‌ಟೇನ್‌ಮೆಂಟ್ ಹಾಗೂ ಜಿಯೋ ಸ್ಟುಡಿಯೋಸ್
– OTT ಪ್ಲಾಟ್‌ಫಾರ್ಮ್: ಜಿಯೋ ಸಿನಿಮಾ
– ರಿಲೀಸ್ ಡೇಟ್: 2023, ಆಗಸ್ಟ್ 15
ಮುಂಬೈನಲ್ಲಿ ಮಂಗಳಮುಖಿಯರ ಹಕ್ಕುಗಳಿಗಾಗಿ ಹೋರಾಡಿದ ಶ್ರೀಗೌರಿ ಸಾವಂತ್ ಎಂಬ ದಿಟ್ಟ ಮಂಗಳಮುಖಿಯ ನೈಜ ಕತೆ ಮಾತ್ರವಲ್ಲ ಹೋರಾಟದ ಹಾದಿ, ವ್ಯಥ್ಯೆಯನ್ನು ಎಳೆಎಳೆಯಾಗಿ, ಮುನ್ನಡೆ, ಹಿನ್ನಡೆ, ಮಂಗಳಮುಖಿಯರಿಂದಲೇ ಎದುರಾಗುವ ಅಡೆತಡೆಗಳನ್ನು ಕಣ್ಣಿಗೆ ಕಟ್ಟುವಂತೆ ಹೆಣೆಯಲಾಗಿದೆ. ಶ್ರೀಗೌರಿ ಸಾವಂತ್ ಹೆಣ್ತನವನ್ನೇ ಹೊತ್ತುಕೊಂಡ ಮಂಗಳಮುಖಿಯು ಸಮಾಜದಲ್ಲಿ ಅನಕ್ಷರಸ್ಥರಿಂದ ಹಿಡಿದು ಅಕ್ಷರಸ್ಥರವರೆಗೆ ಹೇಗೆ ಮಂಗಳಮುಖಿಯರನ್ನು ಅವಮಾನಿಸಲಾಗುತ್ತದೆ, ಕೆಲ ಮಂಗಳಮುಖಿಯರನ್ನೂ ಸೇರಿ ಎಲ್ಲರನ್ನೂ ಎದುರು ಹಾಕಿಕೊಂಡು ಕೊನೆಗೆ ಮಂಗಳಮುಖಿಯರಿಗೆ ‘ತೃತೀಯ ಲಿಂಗಿ’ ಸ್ಥಾನಮಾನ ಕೊಡಿಸುತ್ತಾಳೆ ಎಂಬುದನ್ನು ವೆಬ್ ಸಿರೀಸ್ ಕಣ್ಣಮುಂದೆ ತಂದಿಡುತ್ತದೆ.
ತಾಲಿ ಟ್ರೈಲರ್
ಮನೆಯೇ ಮೊದಲ ‘ಹಠ’ ಶಾಲೆ
Charity Begins At Home ಎಂಬ ಮಾತಿದೆ. ಆದರೆ, ಗಣೇಶ್ ಸಾವಂತ್ ಬಾಲ್ಯದಲ್ಲಿ ಮನೆಯೇ ಮೊದಲ ಅವಮಾನ, ಹಠದ ಶಾಲೆಯಾಗಿ ಪರಿವರ್ತನೆಯಾಗುತ್ತದೆ. ನನ್ನ ಮಗ ಮಗನಾಗೇ ಇರಬೇಕು ಎಂದು ಪೊಲೀಸ್ ಅಧಿಕಾರಿಯಾದ ಅಪ್ಪ ಬಯಸುತ್ತಾನೆ. ಅಮ್ಮ ನಡುದಾರಿಯಲ್ಲಿ ಕೈಬಿಟ್ಟು ಹೋಗುತ್ತಾಳೆ. ಅಕ್ಕ ಸಮಾಜದ ಕಟ್ಟುಪಾಡುಗಳನ್ನೂ ಮೀರಿ ತುಸು ಸಹಾಯ ಮಾಡುತ್ತಾಳೆ. ಗಣೇಶ್ ಸಾವಂತ್ ಎಂಬ ಬಾಲಕ ಶ್ರೀಗೌರಿ ಸಾವಂತ್ ಆಗಿ ಮನೆಯಿಂದ ಹೊರಬಿದ್ದು ಮುಂಬೈ ಸೇರುವ ಆಕೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಹಣಕ್ಕಾಗಿ ಕೈಯನ್ನೂ ಚಾಚುತ್ತಾಳೆ, ಕೊನೆಗೆ ಹಠ ತೊಟ್ಟು ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಮನವಿಯನ್ನೂ ಮಾಡುತ್ತಾಳೆ.
ರಾಹಿ ಎಂಬ ಎನ್‌ಜಿಒ ಮುನ್ನಡೆಸುವ ನವೀನ್ (ಸಲಿಂಗಿ) ಶ್ರೀಗೌರಿಗೆ ನೆರವಾಗುತ್ತಾರೆ. ಅಮಂಡಾ ಎಂಬ ವಿದೇಶಿ ಮಹಿಳೆ ಅರಿವಿನ ದಾರಿ ತೋರಿಸುತ್ತಾರೆ. ಶ್ರೀಗೌರಿಯ ಛಲವು ಅಕ್ಷರ ಕಲಿಸುತ್ತದೆ, ಹಾರಾಟಕ್ಕಿಂತ ಹೋರಾಟ ಮುಖ್ಯ, ಮಂಗಳಮುಖಿಯರಿಗೆ ಶಿಕ್ಷಣ ಮುಖ್ಯ, ಅವರಿಗೆ ಹಕ್ಕುಗಳು ಮುಖ್ಯ ಎಂಬುದನ್ನು ಮನಗಂಡು ಕಾನೂನಿನ ಹೆದ್ದಾರಿ ಹಿಡಿಯುತ್ತಾಳೆ. ಮಂಗಳಮುಖಿಯರು, ಲೈಂಗಿಕ ಕಾರ್ಯಕರ್ತೆಯರು, ಅನಾಥ ಮಕ್ಕಳ ಪೋಷಣೆಯಲ್ಲಿ ತೊಡಗುವ ಶ್ರೀಗೌರಿ, ಶೋಷಣೆಯ ವಿರುದ್ಧವೂ ಹೋರಾಡುತ್ತಾಳೆ. ಜನರ ಮನಸ್ಸಿನಲ್ಲಿದ್ದ ‘ಪಾಷಾಣ’ವನ್ನೂ ತೊಲಗಿಸುತ್ತಾಳೆ. ಹೋರಾಟದ ತಿರುಳನ್ನು ಮಾತ್ರ ತೆರೆಯ ಮೇಲೆ ಉರುಳು ಉರುಳಾಗಿ ತೋರಿಸದೆ, ಪ್ರೇಕ್ಷಕರು ಮರುಗುವಂತೆ ತೋರಿಸಲಾಗಿದೆ ಎಂಬುದೇ ವೆಬ್ ಸಿರೀಸ್ ನಿರ್ದೇಶಕನ ಹೆಗ್ಗಳಿಕೆ.
ಹಿಡಿದಿಡುವ ಸಂಭಾಷಣೆ
ಮಂಗಳಮುಖಿಯರ ಹೋರಾಟದ ಕತೆ ಎಂದ ಮಾತ್ರಕ್ಕೆ ಅತಿಯಾದ ವೈಭವೀಕರಣ ಇಲ್ಲ. ಕತೆಯ ‘ಓಘ’ ಅಲ್ಲಲ್ಲಿ ಜಾರಿದರೂ ಹೋರಾಟ, ಸಾಮಾಜಿಕ ಕಟ್ಟುಪಾಡುಗಳು, ಕುತ್ಸಿತ ಮನಸ್ಸುಗಳ ಪ್ರದರ್ಶನದ ‘ಓಟ’ ನಿಲ್ಲುವುದಿಲ್ಲ. ಸುಶ್ಮಿತಾ ಸೇನ್ ಅವರನ್ನು ಆಧರಿಸಿ ಕತೆಯನ್ನು ಹೆಣೆದಿದೆ ಎನಿಸಿದರೂ ಬೇರೆ ಪಾತ್ರಗಳನ್ನು ‘ಹಣಿ’ಯಲಾಗಿದೆ ಎನಿಸುವುದಿಲ್ಲ. ಅದರಲ್ಲೂ, ಸಂಭಾಷಣೆಗಳು ನೈಜತೆಯನ್ನು ಹೊಂದಿವೆ. ‘ಮೇಲ್, ಫೀಮೇಲ್ ಜತೆಗೆ ಇ-ಮೇಲ್ ಬಂದರೂ ಜನರ ಮನಸ್ಥಿತಿ ಬದಲಾಗಿಲ್ಲ’, ‘ಪೊಲೀಸರು ಇಷ್ಟು ದಿನ ಓಡಿಸಲು ಬರುತ್ತಿದ್ದರು, ಈಗ ರಕ್ಷಿಸಲು ಬರುತ್ತಿದ್ದಾರೆ’, ‘ಹೊರಗಡೆ ಕಹಿ ತುಂಬಿದರೂ, ದೇಹದ ಒಳಗೆ ಸಿಹಿ (ಶುಗರ್) ತುಂಬಿದೆ’, ‘ನನ್ನ ಜೀವನದ ಈ ಅಧ್ಯಾಯದ ಹೆಸರು ಫೀಲಿಂಗ್’ ಎಂಬ ಡೈಲಾಗ್‌ಗಳು ಆಯಾ ಸನ್ನಿವೇಶಗಳ ಜೀವಾಳವಾಗಿವೆ. ಆದರೆ, ಯಾವ ಸನ್ನಿವೇಶ ಎಂಬುದಕ್ಕೆ ವೆಬ್ ಸಿರೀಸ್‌ಅನ್ನು ನೋಡುವುದು ಅನಿವಾರ್ಯ.
ಸುಶ್ಮಿತಾ ಸೇನ್ ಕಮ್‌ಬ್ಯಾಕ್
2020ರಲ್ಲಿ ಆರ್ಯ ಎಂಬ ವೆಬ್ ಸಿರೀಸ್ ಮೂಲಕ ನಟನೆಗೆ ಮರಳಿದ್ದ ಸುಶ್ಮಿತಾ ಸೇನ್ ಅವರು ಅಭಿಮಾನಿಗಳನ್ನು ಮನೋಜ್ಞ ನಟನೆ ಮೂಲಕ ಅಭಿಮಾನಿಗಳ ಮನತಣಿಸಿದ್ದರು. ಇನ್ನು, ತಾಲಿ ವೆಬ್ ಸಿರೀಸ್‌ನಲ್ಲಿ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಅವರಿಗೆ ಮಂಗಳಮುಖಿ ಪಾತ್ರ ನೀಡಿದ್ದಕ್ಕೆ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ತಾಲಿ ವೆಬ್ ಸಿರೀಸ್ ನೋಡಿದ ಬಳಿಕ ಸುಶ್ಮಿತಾ ಸೇನ್ ನಟನೆ ಬಗ್ಗೆ ಅಭಿಮಾನಿಗಳು ಮಾತ್ರವಲ್ಲ, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಷ್ಟರಮಟ್ಟಿಗೆ ಮಂಗಳಮುಖಿಯರ ತಳಮಳಗಳು, ನೋವು-ಅವಮಾನಗಳಿಗೆ ಸುಶ್ಮಿತಾ ಸೇನ್ ಕನ್ನಡಿ ಹಿಡಿದಂತೆ ಜೀವ ತುಂಬಿದ್ದಾರೆ.
ಇದನ್ನೂ ಓದಿ: Blind Movie Review: ಸೋನಂ ಕಪೂರ್ ನಟನೆಯ ಬ್ಲೈಂಡ್; ‘ಕಾಡುವ’ ಸಿನಿಮಾ ಅಲ್ಲದಿದ್ದರೂ ‘ನೋಡುವ’ ಫಿಲಂ
ಒಟ್ಟಿನಲ್ಲಿ, ಮಂಗಳಮುಖಿಯರ ಜೀವನವೇ ‘ಖಾಲಿ’ ಎಂಬ ಮನಸ್ಥಿತಿಯು ಬದಲಾಗಿ, ಅವರಿಗೂ ತಾಲಿ (ಚಪ್ಪಾಳೆ) ಹೊಡೆಯುವ ‘ಕಾಲ’ ಹೇಗೆ ಬರುತ್ತದೆ, ಹೋರಾಟಕ್ಕೆ ಹೇಗೆ ಕುತ್ಸಿತ ಮನಸ್ಸುಗಳು ನ್ಯಾಯದ ‘ಕಾಲು’ ಹಿಡಿಯುತ್ತವೆ, ಆಧುನಿಕ ಕಾಲದಲ್ಲೂ ಸಮಾಜದಲ್ಲಿ ಮಂಗಳಮುಖಿಯರನ್ನು ಹೇಗೆ ‘ತೃತೀಯ ದರ್ಜೆ’ ಪ್ರಜೆಗಳನ್ನಾಗಿ ಕಾಣಲಾಗುತ್ತದೆ ಎಂಬ ಅಂಶಗಳು ವೆಬ್ ಸಿರೀಸ್‌ಅನ್ನು ಸೂಕ್ಷ್ಮ ಮನಸ್ಸುಗಳು ನೋಡುವಂತೆ ಮಾಡುತ್ತದೆ.
ಕಿರುತೆರೆ/ಒಟಿಟಿ
Kaun Banega Crorepati 15: 7 ಕೋಟಿ ರೂ. ಪ್ರಶ್ನೆಗೆ ಉತ್ತರಿಸದ ಜಸ್‌ಕರಣ್ ಸಿಂಗ್; ನೀವು ಉತ್ತರಿಸಬಲ್ಲಿರಾ?
Kaun Banega Crorepati 15: ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಪಂಜಾಬ್‌ನ ಜಸ್‌ಕರಣ್ ಸಿಂಗ್ ಅವರು 7 ಕೋಟಿ ರೂ. ಮೌಲ್ಯದ ಪ್ರಶ್ನೆವರೆಗೆ ಮುನ್ನಡೆ ಸಾಧಿಸಿದ್ದರು. ಆದರೆ, 7 ಕೋಟಿ ರೂ.ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲು ಆಗಲಿಲ್ಲ.
ಮುಂಬೈ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಖ್ಯಾತ ಕೌನ್ ಬನೇಗಾ ಕರೋಡ್‌ಪತಿ (Kaun Banega Crorepati 15) ಶೋನಲ್ಲಿ ಪಂಜಾಬ್‌ನ ಜಸ್‌ಕರಣ್ ಸಿಂಗ್ ಅವರು ಒಂದು ಕೋಟಿ ರೂ. ಗೆಲ್ಲುವ ಮೂಲಕ 15ನೇ ಸೀಸನ್‌ನಲ್ಲಿ ಕೋಟಿ ರೂ. ಗೆದ್ದ ಮೊದಲ ಆಟಗಾರ ಎನಿಸಿದ್ದಾರೆ. ಆದರೆ, ಅವರು 7 ಕೋಟಿ ರೂ. ಮೌಲ್ಯದ ಪ್ರಶ್ನೆಗೆ ಉತ್ತರಿಸಲಾಗದೆ, ಕ್ವಿಟ್ ಆದ ಕಾರಣ ಅವರು ಒಂದು ಕೋಟಿ ರೂ.ಗೆ ತೃಪ್ತಿಪಡಬೇಕಾಯಿತು.
ಪ್ರಶ್ನೆ ಹೀಗಿದೆ
“ಪದ್ಮಪುರಾಣದ ಪ್ರಕಾರ, ಈ ಕೆಳಗಿನ ಯಾವ ರಾಜನು ಜಿಂಕೆಯ ಶಾಪದಿಂದಾಗಿ 100 ವರ್ಷ ಹುಲಿಯಾಗಿ ಬದುಕಿದ” ಎಂಬುದು 7 ಕೋಟಿ ರೂ.ಗೆ ಕೇಳಿದ ಪ್ರಶ್ನೆಯಾಗಿತ್ತು. ಕ್ಷೇಮಧೃತಿ, ಧರ್ಮದತ್ತ, ಮಿತಧ್ವಜ ಹಾಗೂ ಪ್ರಭಂಜನ ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ಆದರೆ, ಈ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿರದ ಕಾರಣ ಜಸ್‌ಕರಣ್ ಸಿಂಗ್ ಅವರು ಆಟವನ್ನು ಕ್ವಿಟ್ ಮಾಡಬೇಕಾಯಿತು. ಅಂದಹಾಗೆ ಇದಕ್ಕೆ ಸರಿಯಾದ ಉತ್ತರ ಪ್ರಭಂಜನ.
ರಾಜಸ್ಥಾನದ ಖಾಲ್ರಾ ನಿವಾಸಿಯಾದ, ಕೇವಲ 21 ವರ್ಷದ, ಯುಪಿಎಸ್‌ಸಿಗೆ ಸಿದ್ಧತೆ ನಡೆಸಿರುವ ಜಸ್‌ಕರಣ್ ಸಿಂಗ್ ಅವರು ಒಂದು ಕೋಟಿ ರೂ. ಗೆಲ್ಲುವ ಮೂಲಕ ಈ ಸೀಸನ್‌ನ ಮೊದಲ ಕೋಟ್ಯಧೀಶರೆನಿಸಿದ್ದಾರೆ. ಏಳು ಕೋಟಿ ರೂಪಾಯಿ ಪ್ರಶ್ನೆಯ ಕೌನ್ ಬನೇಗಾ ಕರೋಡ್‌ಪತಿ ಶೋ ಸೆಪ್ಟೆಂಬರ್ 4 ಹಾಗೂ ಸೆಪ್ಟೆಂಬರ್ 5ರಂದು ಪ್ರಸಾರವಾಗಿದೆ.
ಇದನ್ನೂ ಓದಿ: Amitabh Bachchan: ಭಾರತ್ ಮಾತಾ ಕಿ ಜೈ ಎಂದು ಅಮಿತಾಭ್ ಬಚ್ಚನ್ ಪೋಸ್ಟ್ ಮಾಡಿದ್ದೇಕೆ?
ಕೌನ್ ಬನೇಗಾ ಕರೋಡ್‌ಪತಿ ಶೋ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ. 15 ಸೀಸನ್‌ಗಳನ್ನೂ ಅಮಿತಾಭ್ ಬಚ್ಚನ್ ಅವರೇ ನಡೆಸುಕೊಂಡು ಬರುತ್ತಿದ್ದು, ಭಾರತ ಮಾತ್ರವಲ್ಲ ವಿದೇಶದಲ್ಲೂ ಶೋ ಖ್ಯಾತಿ ಗಳಿಸಿದೆ. ಬಡವರು, ಪ್ರತಿಭಾವಂತರು, ಸೆಲೆಬ್ರಿಟಿಗಳು ಕೂಡ ಶೋನಲ್ಲಿ ಭಾಗವಹಿಸಿದ್ದಾರೆ. ಕನ್ನಡದಲ್ಲೂ ಇದೇ ಮಾದರಿಯ ಶೋ, “ಕನ್ನಡದ ಕೋಟ್ಯಧಿಪತಿ” ಹಲವು ಸಿಸನ್‌ಗಳಲ್ಲಿ ಪ್ರಸಾರವಾಗಿದೆ.
ಕಿರುತೆರೆ
Kannada Serials : 200 ಸಂಚಿಕೆ ಪೂರೈಸಿದ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ
Kannada Serials : ಕನ್ನಡ ಕಿರುತೆರೆಯಲ್ಲಿ ತನ್ನದೆ ವಿಶೇಷ ನೋಡುಗರಿಂದ ಟಿಆರ್‌ಪಿಯಲ್ಲಿ (TRP) 4ನೇ ಸ್ಥಾನವನ್ನು ಪಡೆದಿದ್ದ ʻಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮʼ ಧಾರಾವಾಹಿ 200 ಸಂಚಿಕೆಗಳನ್ನು ಪೂರೈಸಿದೆ.
ಬೆಂಗಳೂರು: ಹತ್ತಾರು ವಾಹಿನಿಗಳಲ್ಲಿ ಪ್ರಸಾರವಾಗುವ ಸೂಪರ್- ಡೂಪರ್ ಧಾರಾವಾಹಿಗಳ (Kannada Serials) ಮಧ್ಯೆ ಪೈಪೋಟಿಗೆ ನಿಂತು ಪ್ರೇಕ್ಷಕರ ಮನಗೆದ್ದು ಯಶಸ್ವಿ 200 ಸಂಚಿಕೆಗಳನ್ನು ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿ (Udho Udho Sri Renuka Yellamma) ಪೂರೈಸಿದೆ.
ಕನ್ನಡ ಕಿರುತೆರೆ ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕತೆಗಳನ್ನು ಕನ್ನಡದ ಸ್ಟಾರ್ ಸುವರ್ಣ ವಾಹಿನಿ ನೀಡುತ್ತಾ ಬಂದಿದೆ. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಧಾರಾವಾಹಿ 200 ಸಂಚಿಕೆಗಳ ಸಂಭ್ರಮದಲ್ಲಿದೆ. ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು.
ಇದನ್ನೂ ಓದಿ: Bombat Bhojana: ʻಬೊಂಬಾಟ್ ಭೋಜನʼದಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ವಿಶೇಷ ಅತಿಥಿ ಪುಟಾಣಿ ಶಾಲ್ಮಲಿ!
ಅತೀ ಹೆಚ್ಚು ರೇಟಿಂಗ್ ಕಬಳಿಸಿರುವ ಧಾರಾವಾಹಿ
ಸ್ಟಾರ್ ಸುವರ್ಣ ವಾಹಿನಿಯ ಇತಿಹಾಸದಲ್ಲಿ ಆರಂಭದಿಂದಲೇ ಅತೀ ಹೆಚ್ಚು ರೇಟಿಂಗ್ ಪಡೆದು ಮುನ್ನುಗ್ಗುತ್ತಿರುವ ಹೆಗ್ಗಳಿಕೆಗೆ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿ ಪಾತ್ರವಾಗಿದೆ. ಇನ್ನು ರೇಣುಕಾ ದೇವಿಯ ಪವಾಡಗಳನ್ನು ತಿಳಿಯುವ ಸಲುವಾಗಿ ಸಾವಿರಾರು ಜನರು ಪ್ರತಿದಿನ ಈ ಧಾರಾವಾಹಿಯನ್ನು ಮಿಸ್ ಮಾಡದೇ ನೋಡುತ್ತಿದ್ದಾರೆ.
ವಿಶಿಷ್ಟ ವಸ್ತ್ರ ವಿನ್ಯಾಸಕ್ಕೆ ಮನಸೋತ ಪ್ರೇಕ್ಷಕರು
ಈ ಧಾರಾವಾಹಿಯು ಹಲವು ರೀತಿಯಲ್ಲಿ ವಿಶೇಷವಾಗಿದ್ದು ಕನ್ನಡ ಕಿರುತೆರೆಯಲ್ಲಿ ಮೊದಲ ಬಾರಿಗೆ ಪೌರಾಣಿಕ ಧಾರಾವಾಹಿಯೊಂದು ಸಂಪೂರ್ಣವಾಗಿ ಕರ್ನಾಟಕದಲ್ಲಿ ಚಿತ್ರೀಕರಣಗೊಂಡಿರುವುದು. ಎಷ್ಟೋ ಜನರ ಪರಿಶ್ರಮದಿಂದ ಎಲ್ಲಾ ರೀತಿಯಲ್ಲಿ ಸಂಶೋಧನೆ ನಡೆಸಿ ವಿಶೇಷವಾದ ಸೆಟ್‌ಗಳನ್ನು ಬೆಂಗಳೂರಿನಲ್ಲಿ ಹಾಕಲಾಗಿದೆ. ಧಾರಾವಾಹಿಯು ಅದ್ಭುತವಾಗಿ ಕಾಣಿಸಲು ವಿಶಿಷ್ಟ ರೀತಿಯಲ್ಲಿ ವಸ್ತ್ರವಿನ್ಯಾಸ ಹಾಗೂ ವಸ್ತ್ರಾಭರಣ ಮಾಡಲಾಗಿದ್ದು ನೋಡುಗರಿಗೆ ಮನೋಲ್ಲಾಸ ನೀಡುತ್ತಿದೆ.
ಮಕ್ಕಳ ನಟನೆಗೆ ತಲೆಬಾಗಿದ ಅಭಿಮಾನಿ ದೇವರುಗಳು
ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯು ಸೋಮ-ಶನಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತದೆ. ರೇಣುಕಾ ಹಾಗು ಎಲ್ಲಮ್ಮ ಪಾತ್ರಕ್ಕೆ ಜೀವ ತುಂಬಿದ ಮಕ್ಕಳು ಅದ್ಭುತವಾಗಿ ನಟಿಸಿ ಜನಾಭಿಮಾನಿಗಳ ಮನಗೆದ್ದು ಮನೆಮಾತಾಗಿದ್ದಾರೆ. ಕನ್ನಡ ಮಣ್ಣಿನ ಕತೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದೀಗ ಧಾರಾವಾಹಿಯು 200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿದೆ.
ಇನ್ನಷ್ಟು ಕಿರುತರೆ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಒಟಿಟಿ
The Hunt For Veerappan : ದಿ ಹಂಟ್ ಫಾರ್ ವೀರಪ್ಪನ್ ವೆಬ್ ಸಿರೀಸ್ ಹೇಗಿದೆ? ನರಹಂತಕನೋ ನಾಯಕನೋ!
ನರಹಂತಕ ವೀರಪ್ಪನ್ ಬಗ್ಗೆ ನೆಟ್‌ಫ್ಲಿಕ್ಸ್‌ನಲ್ಲಿ ನಿರ್ದೇಶಕ ಸೆಲ್ವಮಣಿ ಅವರ ʼದಿ ಹಂಟ್ ಫಾರ್ ವೀರಪ್ಪನ್ʼ ಸೀರಿಸ್ ಬಿಡುಗಡೆಯಾಗಿದೆ. ಅದರ ಕುರಿತಾದ ವಿಮರ್ಶೆ ಇಲ್ಲಿದೆ.
ನರಹಂತಕ, ಆನೆಗಳ ದಂತಚೋರ ವೀರಪ್ಪನ್ ಕರ್ನಾಟಕ ಹಾಗೂ ತಮಿಳುನಾಡನ್ನು ಬೆಚ್ಚಿ ಬೀಳಿಸಿದ ವ್ಯಕ್ತಿ. ಕುಕೃತ್ಯಗಳ ಮೇಲೆ ಕುಕೃತ್ಯಗಳನ್ನು ಎಸೆದು ಪುಂಡು ರಾಜನಂತೆ ಮೆರೆದಿದ್ದ ವೀರಪ್ಪನ್ ಬಗ್ಗೆ ಈಗಾಗಲೇ ಹಲವಾರು ಸಿನಿಮಾಗಳು ಬಿಡುಗಡೆಯಾಗಿವೆ. ಹಲವಾರು ಸಾಕ್ಷ್ಯಚಿತ್ರಗಳನ್ನೂ ಕೂಡ ನಾವು ಕಂಡಿದ್ದಾಗಿದೆ. ಇದೀಗ ಹೊಸದಾಗಿ ನೆಟ್‌ಫ್ಲಿಕ್ಸ್‌ನಲ್ಲಿ ವೀರಪ್ಪನ್ ಬಗ್ಗೆ ಸಾಕ್ಷ್ಯಚಿತ್ರದ ರೀತಿಯ ಸೀರಿಸ್ (The Hunt For Veerappan) ಆ.4ರಂದು ಬಿಡುಗಡೆಯಾಗಿದೆ.
ನಿರ್ದೇಶಕ ಸೆಲ್ವಮಣಿ ಅವರ ನಿರ್ದೇಶನದಲ್ಲಿ ʼದಿ ಹಂಟ್ ಫಾರ್ ವೀರಪ್ಪನ್ʼ ಸೀರಿಸ್ ಮೂಡಿಬಂದಿದೆ. ಒಟ್ಟು ನಾಲ್ಕು ಸಂಚಿಕೆಗಳಲ್ಲಿ ಸೀರಿಸ್ ಅನ್ನು ಬಿಡುಗಡೆ ಮಾಡಲಾಗಿದೆ. ಮೊದಲನೇ ಸಂಚಿಕೆಯಲ್ಲಿ ವೀರಪ್ಪನ್‌ನ ಪತ್ನಿ ಮುತ್ತುಲಕ್ಷ್ಮಿ ಅವರಿಂದಲೇ ಮಾತನಾಡಿಸಲಾಗಿದೆ. ಅವರ ಬಾಯಿಯಲ್ಲೇ ವೀರಪ್ಪನ್ ಜೀವನದ ಬಗ್ಗೆ ಹೇಳಿಸಲಾಗಿದೆ. ಅದರಲ್ಲಿ ಮುತ್ತುಲಕ್ಷ್ಮಿ ತಮ್ಮ ಪತಿ ವೀರಪ್ಪನ್‌ನನ್ನು ಹೆಗಲಲ್ಲಿ ದೊಡ್ಡ ಬಂದೂಕು ಇಟ್ಟುಕೊಂಡು ಗ್ಯಾಂಗ್ ಕಟ್ಟಿಕೊಂಡು ಬರುತ್ತಿದ್ದ ವೀರ ಎನ್ನುವ ರೀತಿಯಲ್ಲಿ ಬಿಂಬಿಸಿದ್ದಾರೆ.
ಇದನ್ನೂ ಓದಿ: Viral News : ಬಾನೆಟ್ ಮೇಲೆ ಕುಳಿತು ಜಾಲಿ ರೈಡ್; ಯೂಟ್ಯೂಬರ್ ಗೌರಿಯ ಥಾರ್ ಪೊಲೀಸ್ ವಶಕ್ಕೆ!
ಹಾಗೆಯೇ ವೀರಪ್ಪನ್ ಯಾವ ರೀತಿಯಲ್ಲಿ ಅವರ ಗುಂಪಿನಲ್ಲಿ ನಾಯಕನಾಗಿ ಬೆಳೆಯುತ್ತ ಹೋದ ಎನ್ನುವ ವಿಚಾರವನ್ನು ಹಲವಾರು ಪೊಲೀಸ್ ಅಧಿಕಾರಿಗಳು ಮತ್ತು ಪತ್ರಕರ್ತರ ಬಾಯಿಯಿಂದ ವಿವರಣೆ ಕೊಡಿಸಲಾಗಿದೆ.
ಎರಡನೇ ಎಪಿಸೋಡ್‌ನಲ್ಲಿ ವೀರಪ್ಪನ್ ಸ್ಪೆಷಲ್ ಟಾಸ್ಕ್ ಫೋರ್ಸ್‌ಗಳಿಗೆ ಯಾವ ರೀತಿಯಲ್ಲಿ ಸವಾಲಾಗತೊಡಗಿದ ಎನ್ನುವುದನ್ನು ತೋರಿಸಲಾಗಿದೆ. ಆತನಿಂದ ನಡೆಯುವ ಕೊಲೆಪಾತಗಳ ಬಗ್ಗೆ ವಿವರಣೆ ನೀಡಲಾಗಿದೆ. ಆತನ ಬಗ್ಗೆ ಆದ ವರದಿಗಳನ್ನೆಲ್ಲ ತೋರಿಸಲಾಗಿದೆ. ಹಾಗೆಯೇ ಈ ಹಿಂದೆ ಅವನ ಗ್ಯಾಂಗ್‌ನಲ್ಲಿದ್ದವರು, ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್, ಮುತ್ತುಲಕ್ಷ್ಮಿ ಮತ್ತು ವೀರಪ್ಪನ್‌ನ ಊರಾಗಿದ್ದ ಗೋಪಿನಾಥಂನ ಗ್ರಾಮಸ್ಥರಲ್ಲಿ ಕೆಲವರು ವೀರಪ್ಪನ್ ಬಗ್ಗೆ ಹಂಚಿಕೊಂಡ ನೆನಪುಗಳಲ್ಲಿ ಈ ಎಪಿಸೋಡ್‌ನಲ್ಲಿ ತೋರಿಸಿಕೊಡಲಾಗಿದೆ.
ನಂತರ ನಿರ್ದೇಶಕ ಸೆಲ್ವಮಣಿ ಅವರು ವೀರಪ್ಪನ್ ಪ್ರಕರಣಕ್ಕೆ ಹೊಸ ತಿರುವು ನೀಡುತ್ತಾ ಹೋಗುತ್ತಾರೆ. ಮುತ್ತುಲಕ್ಷ್ಮಿ ಅವರ ಬಾಯಿಯಲ್ಲಿ ಕರ್ನಾಟಕ ಪೊಲೀಸರು ತಮ್ಮನ್ನು ಬಂಧಿಸಿ ದೈಹಿಕ, ಮಾನಸಿಕ ಹಿಂಸೆ ನೀಡಿದ ಕುರಿತಾಗಿ ವಿವರಣೆ ಪಡೆಯಲಾಗುತ್ತದೆ. ಒಬ್ಬ ವ್ಯಕ್ತಿಯನ್ನು ಹಿಡಿಯುವಲ್ಲಿ ಪೊಲೀಸರು ಅಸಮರ್ಥರಾದ ಬಗ್ಗೆ, ಹಾಗೆಯೇ ಆತನ ಬೇಡಿಕೆಗಳನ್ನು ಪೂರೈಸಲು ಅಸಮರ್ಥರಾದ ಬಗ್ಗೆ ಪ್ರಶ್ನಿಸಲಾಗುತ್ತದೆ. ವರನಟ ಡಾ. ರಾಜ್‌ಕುಮಾರ್ ಅವರನ್ನು ಅಪಹರಣ ಮಾಡಿ ನಂತರ ಬಿಡುಗಡೆ ಮಾಡಿದ ಬಗ್ಗೆಯೂ ತೋರಿಸಲಾಗುತ್ತದೆ. ಆದರೆ ಎಲ್ಲಿಯೂ ಕೂಡ ರಾಜ್‌ಕುಮಾರ್ ಕುಟುಂಬದಿಂದ ಪ್ರತಿಕ್ರಿಯೆ ಪಡೆಯುವ ಪ್ರಯತ್ನವನ್ನು ಸೆಲ್ವಮಣಿ ಅವರು ಮಾಡಿಲ್ಲ. ವೀರಪ್ಪನ್‌ಗೆ ಸಂಬಂಧಿಸಿದ ಎಲ್ಲರನ್ನೂ ಮಾತನಾಡಿಸಿ ಅವರಿಂದಲೇ ನಿರೂಪಣೆ ಪಡೆದಾಗ ಕಥೆಯ ಮುಖ್ಯ ಘಟನೆಗಳಲ್ಲಿ ಒಂದಾದ ರಾಜ್‌ಕುಮಾರ್ ಅಪಹರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬದಿಂದ ವಿವರಣೆ ಪಡೆಯದಿರುವುದು ಅಪೂರ್ಣ ಎನಿಸುತ್ತದೆ.
ಇದನ್ನೂ ಓದಿ: Viral News : ಇವರ ಬಳಿ ಇದೆ 38 ವಿಮಾನ, 300 ಕಾರು, 52 ಬೋಟ್!
ಪೂರ್ತಿ ಸೀರಿಸ್‌ನಲ್ಲಿ ಒಟ್ಟಾರೆಯಾಗಿ ವೀರಪ್ಪನ್ ಬಾಲ್ಯದಿಂದ ಆತನ ಎನ್‌ಕೌಂಟರ್‌ವರೆಗಿನ ವಿಚಾರಗಳನ್ನು ತೆರೆದಿಡುತ್ತಾ ಸಾಗಲಾಗಿದೆ. ಆತನನ್ನು ಹಿಡಿಯಲು ಭಾರತದಲ್ಲಿ ಈವರೆಗಿನ ಪಾತಕಿ ಸೆರೆ ಕಾರ್ಯಾಚರಣೆಯ ಅತಿ ದೊಡ್ಡ ಮೊತ್ತವನ್ನು ಖರ್ಚು ಮಾಡಲಾಯಿತು ಎನ್ನುವುದನ್ನೂ ತೋರಿಸುತ್ತದೆ ಈ ಸರಣಿ. ದಶಕಗಳ ಕಾಲ ಆತನಿಗಾಗಿ ಮಾಡಿದ ಹುಡುಕಾಟದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಆತನಿಂದಾಗಿ ಬಂಧನಕ್ಕೊಳಗಾದ ಮತ್ತು ಸಾವಿಗೀಡಾದ ಎಷ್ಟೋ ಕುಟುಂಬಗಳ ಬಗ್ಗೆ ವಿವರಣೆ ನೀಡಲಾಗಿದೆ. ಹಾಗೆಯೇ ಇನ್ನೂ ಬೆಳಕಿಗೆ ಬರದೆ ಉಳಿದುಕೊಂಡಿರುವ ನೋವಿನ ಬಗ್ಗೆಯೂ ಪರಿಚಯ ನೀಡಲಾಗಿದೆ.
ಒಟ್ಟಿನಲ್ಲಿ ನೋಡಿದರೆ ಈ ಹಿಂದೆ ವೀರಪ್ಪನ್ ಬಗ್ಗೆ ಬಂದಂತಹ ಸಿನಿಮಾಗಳು ಮತ್ತು ಸಾಕ್ಷ್ಯಚಿತ್ರಗಳಿಗಿಂತ ಈ ಸೀರಿಸ್ ವಿಭಿನ್ನವಾಗಿದೆ ಎನ್ನಬಹುದು. ಇಲ್ಲಿ ವೀರಪ್ಪನ್ ಒಬ್ಬ ನರಹಂತಹ ಎಂದು ತೋರಿಸುವ ಜತೆಯಲ್ಲಿ ಆತ ಒಬ್ಬ ʼಹೀರೊʼ ಕೂಡ ಹೌದು ಎಂದು ಬಿಂಬಿಸಲಾಗಿದೆ. ವೀರಪ್ಪನ್ ಕತೆ ಹೇಳುವ ಭರದಲ್ಲಿ ಆತನ ದುಸ್ಸಾಹಸವನ್ನು ವಿಜ್ರಂಭಿಸಿದ್ದು ಸರಿ ಅನಿಸುವುದೇ ಇಲ್ಲ.
ಕಿರುತೆರೆ/ಒಟಿಟಿ
Rahul Mahajan : ಮೂರನೇ ದಾಂಪತ್ಯದಲ್ಲೂ ಬಿರುಕು! ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ರಾಹುಲ್ ಮಹಾಜನ್ ದಂಪತಿ
ಬಿಗ್‌ಬಾಸ್ ಮಾಜಿ ಸ್ಪರ್ಧಿ ರಾಹುಲ್ ಮಹಾಜನ್ (Rahul Mahajan) ಅವರು ಪತ್ನಿ ನಟಾಲಿಯಾ ಅವರೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಿದೆ. ಇದು ಅವರ ಮೂರನೇ ವಿಚ್ಛೇದನವಾಗಿದೆ.
ಮುಂಬೈ: ಹಿಂದಿ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ರಾಹುಲ್ ಮಹಾಜನ್ (Rahul Mahajan) ಆಗಾಗ ಖಾಸಗಿ ವಿಚಾರಗಳಿಂದ ಸುದ್ದಿಯಾಗುವ ವ್ಯಕ್ತಿ. ಈಗಾಗಲೇ ಇಬ್ಬರು ಪತ್ನಿಯರಿಂದ ವಿಚ್ಛೇದನ ಪಡೆದಿರುವ ರಾಹುಲ್ ಇದೀಗ ಮೂರನೇ ಪತ್ನಿಯೊಂದಿಗಿನ ದಾಂಪತ್ಯಕ್ಕೂ ಅಂತ್ಯ ಹಾಡಿದ್ದಾರೆ. ಅವರು ಪತ್ನಿ ನಟಾಲಿಯಾ ಇಲಿನಾ ಜತೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಖಾಸಗಿ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ವರದಿಯ ಪ್ರಕಾರ ರಾಹುಲ್ ಮತ್ತು ನಟಾಲಿಯಾ ಮದುವೆಯಾದಾಗಿನಿಂದಲೂ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದವು. ಅವರಿಬ್ಬರು ದಾಂಪತ್ಯವನ್ನು ಉಳಿಸಿಕೊಳ್ಳಲೆಂದು ಸಾಕಷ್ಟು ಪ್ರಯತ್ನಗಳು ಮಾಡಿದ್ದರು. ಆದರೆ ಅದು ಸಾಧ್ಯವಾಗದ ಹಿನ್ನೆಲೆ ದಂಪತಿ ಕಳೆದ ವರ್ಷವೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Self Harming :ಖಾಸಗಿ ವಿಡಿಯೊ ವೈರಲ್; ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ
ಮೂರನೇ ಬಾರಿಗೆ ವಿಚ್ಛೇದನ ಎದುರಿಸುತ್ತಿರುವ ರಾಹುಲ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಸಾಕಷ್ಟು ಕುಗ್ಗಿದ್ದರು. ಮನಸ್ಸಿಗೆ ನೋವುಂಟು ಮಾಡಿಕೊಂಡಿದ್ದ ಅವರು ಇತ್ತೀಚೆಗೆ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನ್ಯಾಯಾಲಯದಿಂದ ವಿಚ್ಛೇದನ ಸಿಕ್ಕಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಯಾವುದೇ ಮಾತನ್ನು ಆಡದಿರಲು ರಾಹುಲ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಿಂದೆ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪತಿಯೊಂದಿಗೆ ಭಾಗವಹಿಸಿದ್ದ ನಟಾಲಿಯಾ ಅವರು, ರಾಹುಲ್ ಅವರು ಹಿಂದಿನ ಮದುವೆಗಳ ಬಗ್ಗೆ ಮಾತನಾಡಿದ್ದರು. “ಅವುಗಳನ್ನು ಮದುವೆ ಎನ್ನುವುದಕ್ಕಿಂತ ಸಣ್ಣ ಸಮಯದ ರಿಲೇಶನ್‌ಶಿಪ್ ಎಂದು ಹೇಳಬಹುದು. ಮದುವೆ ಎನ್ನುವುದು ತುಂಬ ಆಳವಾದ ಸಂಬಂಧವಾಗಿರುತ್ತದೆ. ಆ ರೀತಿಯ ಸಂಬಂಧ ರಾಹುಲ್‌ಗೆ ಇರಲೇ ಇಲ್ಲವಾದ್ದರಿಂದ ನಾನು ಅದರ ಬಗ್ಗೆ ಯೋಚಿಸುವುದೂ ಇಲ್ಲ” ಎಂದು ಹೇಳಿದ್ದರು.
ಇದನ್ನೂ ಓದಿ: Kidney Stones: ಕಿಡ್ನಿ ಕಲ್ಲಿನ ಬಗ್ಗೆ ನಾವು ಈ ವಿಷಯ ತಿಳಿದಿರಬೇಕು
ರಾಹುಲ್ ಅವರು 2006ರಲ್ಲಿ ಶ್ವೇತಾ ಸಿಂಗ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2008ರಲ್ಲಿ ಆ ದಾಂಪತ್ಯ ಮುರಿದುಬಿದ್ದಿತ್ತು. ಅದಾದ ನಂತರ ಅವರು ಮ್ಯಾಟ್ರಿಮೋನಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಅಲ್ಲಿ ಡಿಂಪಿ ಗಂಗೂಲಿ ಹೆಸರಿನ ಯುವತಿಯನ್ನು ಪ್ರೀತಿಸಿದ್ದರು. ಅವರ ಮದುವೆ 2010ರಲ್ಲಿ ನಡೆದು, ಆ ದಾಂಪತ್ಯ 2015ರಲ್ಲಿ ಅಂತ್ಯವಾಗಿತ್ತು. ನಂತರ ಅವರು 2018ರಲ್ಲಿ ನಟಾಲಿಯಾ ಅವರನ್ನು ವಿವಾಹವಾಗಿದ್ದರು.
ಈ ರೀತಿಯ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.
-
ವೈರಲ್ ನ್ಯೂಸ್14 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಸುವಚನ4 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ19 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ಪ್ರಮುಖ ಸುದ್ದಿ13 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
-
South Cinema16 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ದೇಶ24 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಬಾಲಿವುಡ್20 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕ್ರಿಕೆಟ್20 hours ago
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ