ಪ್ರಮುಖ ಸುದ್ದಿ
Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಇಂದು ಶುಭ ಸುದ್ದಿ ಸಿಗಲಿದೆ!
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ತ್ರಯೋದಶಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (dina bhavishya) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಶನಿವಾರ ತ್ರಯೋದಶಿ ದಿನ ಬಂದಾಗ, ಅದನ್ನು ಪ್ರದೋಷ, ಶನಿ ಪ್ರದೋಷ ಎಂದು ಕರೆಯಲಾಗುತ್ತದೆ. ಈ ದಿನ ಪ್ರದೋಷ ಕಾಲದಲ್ಲಿ (ಸೂರ್ಯ ಮುಳುಗುವ ಹೊತ್ತಿನಲ್ಲಿ) ಪೂಜೆ ಮಾಡಿದರೆ ಎಲ್ಲಾ ದೇವರ ಅನುಗ್ರಹವನ್ನು ಗಳಿಸಬಹುದು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಶನೈಶ್ಚರನು ಕರ್ಮಕಾರಕ ಗ್ರಹನಾಗಿದ್ದು, ಶನಿವಾರದಂದು ಆತನ ಪ್ರಭಾವ ಹೆಚ್ಚಾಗಿರುತ್ತದೆ. ಆದ್ದರಿಂದ ಶನಿ ಪ್ರದೋಷದ ದಿನದಂದು ಆರಾಧಿಸಿ, ಶಿವನಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ಪಾಪ ಮತ್ತು ಕರ್ಮದ ಪರಿಣಾಮಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ವಿಶೇಷವಾದ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ, ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (15-07-2023)
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ
ತಿಥಿ: ತ್ರಯೋದಶಿ 20:31 ವಾರ: ಶನಿವಾರ
ನಕ್ಷತ್ರ: ಮೃಗಶಿರ 24:22 ಯೋಗ: ವೃದ್ಧಿ 08:19
ಕರಣ: ಗರಜ 07:51 ಇಂದಿನ ವಿಶೇಷ: ಶನಿ ಪ್ರದೋಷ, ಮಾಸ ಶಿವರಾತ್ರಿ.
ಅಮೃತಕಾಲ: ಮಧ್ಯಾಹ್ನ 02 ಗಂಟೆ 52 ನಿಮಿಷದಿಂದ ಸಂಜೆ 04 ಗಂಟೆ 36 ನಿಮಿಷದವರೆಗೆ.
ಸೂರ್ಯೋದಯ : 06:01 ಸೂರ್ಯಾಸ್ತ : 06:50
ರಾಹುಕಾಲ : ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00
ಮೇಷ: ಮಾನಸಿಕವಾಗಿ ನೆಮ್ಮದಿ. ಅಗತ್ಯ ವಸ್ತುಗಳ ಖರೀದಿಗಾಗಿ ಖರ್ಚು ಮಾಡುವಿರಿ. ಆರ್ಥಿಕ ಪ್ರಗತಿ ಸಾಧಾರಣ. ಕಾರ್ಯಸ್ಥಳದಲ್ಲಿ ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ. ಹಿರಿಯರಿಂದ ಮಾರ್ಗದರ್ಶನ. ಆರೋಗ್ಯ ಮಧ್ಯಮ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3
ವೃಷಭ: ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ವಹಿಸುವುದು ಸೂಕ್ತ. ನಿಮ್ಮ ನಡವಳಿಕೆಯಿಂದಾಗಿ ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ. ಕುಟುಂಬದ ಆಪ್ತರೊಂದಿಗೆ ಮಾತುಕತೆ. ಆರೋಗ್ಯ ಮಧ್ಯಮ. ಉದ್ಯೋಗಿಗಳಿಗೆ ಶುಭ ಫಲ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಆರ್ಥಿಕವಾಗಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ಮಿಥುನ: ಹೂಡಿಕೆ ವ್ಯವಹಾರದಲ್ಲಿ ತೊಡಗುವ ಸಾಧ್ಯತೆ. ಬಿಡುವಿರದ ಕೆಲಸದ ಮಧ್ಯೆಯೂ ಆರೋಗ್ಯ ಪರಿಪೂರ್ಣ. ಆಪ್ತರೊಂದಿಗೆ ಮಾತುಕತೆ. ಆರ್ಥಿಕ ಪ್ರಗತಿ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ಕಟಕ: ದೂರದ ಪ್ರಯಾಣವನ್ನು ಬೆಳೆಸುವ ಸಾಧ್ಯತೆ, ಇದರಿಂದ ನೀವು ದೈಹಿಕವಾಗಿ ಬಳಲಲಿದ್ದೀರಿ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ. ಈ ಹಿಂದೆ ನೀಡಿದ ಹಣ ಮರಳುವ ಸಾಧ್ಯತೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ, ಮಾರ್ಗದರ್ಶನ ನೀಡುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3
ಸಿಂಹ: ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆ. ಅನಾವಶ್ಯಕವಾಗಿ ಖರ್ಚು ಹೆಚ್ಚು. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವಿರಿ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಉತ್ಸಾಹದ ದಿನ. ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ಕನ್ಯಾ: ಆರೋಗ್ಯ ಪರಿಪೂರ್ಣ. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣ ಸಾಧಿಸುವಿರಿ. ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ, ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ. ಮನೆಯಲ್ಲಿನ ಭಿನ್ನಾಭಿಪ್ರಾಯಗಳು ನಿಮ್ಮ ಏಕಾಗ್ರತೆಗೆ ದಕ್ಕೆ ತರುವ ಸಾಧ್ಯತೆ. ಆದಷ್ಟು ಮಾತಿನ ಮೇಲೆ ಹಿಡಿತವಿರಲಿ. ಹಿರಿಯರಿಂದ ಮಾರ್ಗದರ್ಶನ. ದೈಹಿಕ ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3
ವೃಶ್ಚಿಕ: ಆತುರದಲ್ಲಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಬೇಡ. ದಿನದ ಮಟ್ಟಿಗೆ ಯಾವುದೇ ಹೂಡಿಕೆ ವ್ಯವಹಾರದಲ್ಲಿ ತೊಡಗುವುದರಿಂದ ನಷ್ಟವಾಗುವ ಸಾಧ್ಯತೆ. ಕೆಲವು ರಹಸ್ಯ ಸುದ್ದಿಗಳಿಂದ ನಿಮಗೆ ಅಚ್ಚರಿ. ನಿಮ್ಮ ಅಚ್ಚು ಕಟ್ಟು ಕೆಲಸದಿಂದ ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಧನಸ್ಸು: ಆರ್ಥಿಕ ಪ್ರಗತಿ ಸಾಧಾರಣವಾಗಿರುವುದರಿಂದ ಹೆಚ್ಚಿನ ಒತ್ತಡ. ಪ್ರಮುಖ ಕೆಲಸ ಕಾರ್ಯಗಳು ನಿಧಾನವಾಗಿ ಸಾಗುವವು. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ. ಉದ್ಯೋಗಿಗಳಿಗೆ ಶುಭ ಫಲ. ದೈಹಿಕ ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಮಕರ: ಅನೇಕ ಕಾರಣಗಳಿಂದಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ಆರ್ಥಿಕವಾಗಿ ಪ್ರಗತಿ ಕಂಡರೂ ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ. ಆಪ್ತರೊಂದಿಗೆ ಮಾತುಕತೆ. ವ್ಯಾಪಾರದ ಉದ್ದೇಶದಿಂದಾಗಿ ಕೈಕೊಂಡ ಪ್ರವಾಸದಲ್ಲಿ ಯಶಸ್ಸು. ಆರೋಗ್ಯ ಕೊಂಚಮಟ್ಟಿಗೆ ಹದಗೆಡುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಕುಂಭ: ಮನರಂಜನೆಗಾಗಿ ಸಮಯವನ್ನು ಕಳೆಯುವಿರಿ. ಸೃಜನಶೀಲ ಕಾರ್ಯಗಳಿಂದಾಗಿ ವ್ಯಕ್ತಿತ್ವ ಪ್ರಕಾಶಿಸುವ ಸಾಧ್ಯತೆ. ನಿಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ. ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಪಡೆಯುವ ಸಾಧ್ಯತೆ. ಆರ್ಥಿಕ ಪ್ರಗತಿ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8
ಇದನ್ನೂ ಓದಿ : Prerane : ಭಗವದ್ಗೀತೆಯಲ್ಲಿ ಸಮದರ್ಶಿತ್ವ; ಇದರ ನಿಜ ಅರ್ಥವೇನು?
ಮೀನ: ಆಹಾರದ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು. ಈ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. ಹೂಡಿಕೆ ಕುರಿತಾಗಿ ಆಲೋಚನೆ. ಅನಿವಾರ್ಯ ಕಾರಣಗಳಿಂದ ಖರ್ಚು. ಆಪ್ತರೊಂದಿಗೆ ಮಾತುಕತೆ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಕರ್ನಾಟಕ
MP Muniswamy : ಸಚಿವ ಬೈರತಿ, ಶಾಸಕ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟ ಸಂಸದ ಮುನಿಸ್ವಾಮಿ
MP Muniswamy : ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ತಮ್ಮ ಮೇಲೆ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಲ್ಲದೆ, ಹಲ್ಲೆಗೆ ಮುಂದಾಗಲಾಗಿದೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಅವರು ಕೋಲಾರ ಶಾಸಕ ನಾರಾಯಣಸ್ವಾಮಿ, ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಬೆಂಗಳೂರು: ಕೋಲಾರ ಶಾಸಕ ನಾರಾಯಣಸ್ವಾಮಿ (Kolar MLA Narayanaswamy) ಈಚೆಗೆ ಕಾರ್ಯಕ್ರಮವೊಂದರಲ್ಲಿ ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆಗೆ ಮುಂದಾಗಿದ್ದಾರೆ. ಜತೆಗೆ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ (Kolar Incharge Minister Byrathi Suresh), ಕೋಲಾರ ಎಸ್‌ಪಿ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಎಂದು ಕೋಲಾರ ಸಂಸದ ಮುನಿಸ್ವಾಮಿ (Kolar MP Muniswamy) ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಕೋಲಾರ ಸಂಸದ ಮುನಿಸ್ವಾಮಿ ಮೇಲೆ ಹಲ್ಲೆ ಆರೋಪ ಪ್ರಕರಣ ಈಗ ರಾಜ್ಯಪಾಲರ ಅಂಗಳ ತಲುಪಿದೆ. ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧವೂ ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ (MLC Chalavadi Narayanaswamy), ಕೇಶವ್ ಪ್ರಸಾದ್ ಸೇರಿದಂತೆ 30 ಮಂದಿ ನಿಯೋಗ ತೆರಳಿ ದೂರು ನೀಡಿದೆ.
ಜನಪ್ರತಿನಿಧಿ ಮೇಲೆ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
ನನ್ನನ್ನೂ ಸೇರಿದಂತೆ, ಎಲ್ಲರ ವಿರುದ್ಧ ತನಿಖೆ ಆಗಲಿ: ಕೋಲಾರ ಸಂಸದ ಮುನಿಸ್ವಾಮಿ
ಸಂವಿಧಾನದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಅಧಿಕಾರ ಇದೆಯೋ, ವಿಪಕ್ಷಗಳಿಗೂ ಅಷ್ಟೇ ಹಕ್ಕು ಇದೆ. ಇಡೀ ಕೋಲಾರ ಜಿಲ್ಲೆಯಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಅಂತ ಹೇಳಿದ್ದರು. ರೈತರ ಜಮೀನನ್ನು ಕಬಳಿಸುವ ಕೆಲಸ ಮಾಡಿದ್ದಾರೆ. ರೈತರ ವಿರುದ್ಧ ಒಕ್ಕಲೆಬ್ಬಿಸುವ ಕೆಲಸವನ್ನು ಮಾಡಿದ್ದೀರಿ. ರಾಜಕೀಯ ವೇದಿಕೆ ಮೇಲೂ ಭೂ ಕಳ್ಳರಿದ್ದಾರೆ ಎಂದು ನಾನು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನನ್ನನ್ನು ಹೊರಗೆ ದಬ್ಬಿಸುವ ಕೆಲಸ ಮಾಡಿದ್ದಾರೆ
ಎಸ್‌ಎನ್ ಸಿಟಿ ಅಂತ ಲೇಔಟ್ ಮಾಡಿದ್ದಾರೆ. ನನ್ನನ್ನೂ ಸೇರಿದಂತೆ, ಎಲ್ಲರ ವಿರುದ್ಧ ತನಿಖೆ ಆಗಲಿ ಅಂತ ಹೇಳಿದೆ. ಆಗ ಕೋಲಾರ ಶಾಸಕ ನಾರಾಯಣಸ್ವಾಮಿ ಹಾಗೂ ಉಸ್ತುವಾರಿ ಸಚಿವರು ನನ್ನನ್ನು ಹೊರಗೆ ದಬ್ಬಿಸುವ ಕೆಲಸ ಮಾಡಿದರು. ಹಾಗಾಗಿ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ನಾರಾಯಣಸ್ವಾಮಿ ಹಾಗೂ ಕೋಲಾರ ಎಸ್‌ಪಿ ವಿರುದ್ಧ ದೂರು ನೀಡಿದ್ದೇನೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.
ಇದನ್ನೂ ಓದಿ: BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್: ಎಚ್.ಡಿ. ಕುಮಾರಸ್ವಾಮಿ ಕಿಡಿ
ರೈತರ ಪರವಾಗಿ ಹೋರಾಟ ಮುಂದುವರಿಯಲಿದೆ
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುವಂತೆ ಮನವಿ ಮಾಡಲಿದ್ದೇವೆ. ದೆಹಲಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರಿಗೂ ದೂರು ನೀಡುತ್ತೇನೆ. ಎಷ್ಟೇ ಗದಾ ಪ್ರಹಾರ ಮಾಡಿದರೂ ನಮ್ಮ ರೈತರ ಪರವಾಗಿ ನನ್ನ ಹೋರಾಟ ನಡೆಯಲಿದೆ ಎಂದು ಸಂಸದ ಮುನಿಸ್ವಾಮಿ ಇದೇ ವೇಳೆ ಹೇಳಿದರು.
South Cinema
Oscars 2024: ‘ಆಸ್ಕರ್’ಗೆ ಪ್ರವೇಶ ಪಡೆದ ಮಲಯಾಳಂ ಸಿನಿಮಾ; ನೀವೂ ಇದನ್ನು ನೋಡಿರುತ್ತೀರಿ!
Oscars 2024: ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದ 17 ಸದಸ್ಯರ ತೀರ್ಪುಗಾರರನ್ನು ಒಳಗೊಂಡಿರುವ ಆಯ್ಕೆ ಸಮಿತಿಗೆ ಭಾರತದಾದ್ಯಂತ ತೆರೆಕಂಡ 22 ಸಿನಿಮಾಗಳು ಅಧಿಕೃತ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿತ್ತು.
ಬೆಂಗಳೂರು: ಟೊವಿನೋ ಥಾಮಸ್ ನಟಿಸಿರುವ 2018 ಮಲಯಾಳಂ ಸಿನಿಮಾ (Malayalam Film 2018) 2024ರ 96ನೇ ಆಸ್ಕರ್ ಅವಾರ್ಡ್ಸ್‌ಗೆ (Oscars 2024:) ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆದಿದೆ. ಕನ್ನಡ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದ ತೀರ್ಪುಗಾರರು ಸೆ.27ರಂದು ಅನೌನ್ಸ್ ಮಾಡಿದ್ದಾರೆ. ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದ 17 ಸದಸ್ಯರ ತೀರ್ಪುಗಾರರನ್ನು ಒಳಗೊಂಡಿರುವ ಆಯ್ಕೆ ಸಮಿತಿಗೆ ಭಾರತದಾದ್ಯಂತ ತೆರೆಕಂಡ 22 ಸಿನಿಮಾಗಳು ಅಧಿಕೃತ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದವು.
96ನೇ ಆಸ್ಕರ್ ಅವಾರ್ಡ್ ಎಬಿಸಿಯಲ್ಲಿ 2024ರ ಮಾರ್ಚ್ 10ರ ಭಾನುವಾರ ಓವೇಶನ್ ಹಾಲಿವುಡ್‌ನಲ್ಲಿರುವ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಿಂದ ವಿಶ್ವಾದ್ಯಂತ 200 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರಸಾರವಾಗಲಿದೆ ಎಂದು ವರದಿಯಾಗಿದೆ.
ಇದರಲ್ಲಿ “ಬಾಲಗಮ್”, “ದಿ ಕೇರಳ ಸ್ಟೋರಿ”, “ಜ್ವಿಗಾಟೊ” “ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ”ಅನಂತ್ ಮಹದೇವನ್ ಅವರ ಸ್ಟೋರಿ ಟೇಲರ್ (ಹಿಂದಿ), ಮ್ಯೂಸಿಕ್ ಸ್ಕೂಲ್ (ಹಿಂದಿ), ಮಿಸಸ್ ಚಟರ್ಜಿ ವರ್ಸಸ್ ನಾರ್ವೆ (ಹಿಂದಿ), 12th ಫೇಲ್ (ಹಿಂದಿ) ವಿದುತಲೈ ಭಾಗ 1 (ತಮಿಳು), ಘೂಮರ್ (ಹಿಂದಿ), ಮತ್ತು ದಸರಾ (ತೆಲುಗು) ಸಿನಿಮಾಗಳು ಆಸ್ಕರ್‌ನ ಅಧಿಕೃತ ಪ್ರವೇಶ ಪಡೆಯವ ಸ್ಥಾನದಲ್ಲಿದ್ದವು. ಅಂತಿಮವಾಗಿ ಜೂಡ್ ಆಂಥೊನಿ ಜೋಸೆಫ್ ನಿರ್ದೇಶನದ ಈ ಸಿನಿಮಾ ಆಸ್ಕರ್ ಸ್ಪರ್ಧೆಗೆ ಅಧಿಕೃತವಾಗಿ ಆಯ್ಕೆಯಾಗಿದೆ.
ಇದನ್ನೂ ಓದಿ: Oscars 2024: ಮುಂದಿನ ʻಆಸ್ಕರ್ʼ ರೇಸ್‌ನಲ್ಲಿ ಯಾವೆಲ್ಲ ಸಿನಿಮಾಗಳು ಇರಲಿವೆ?
Tovino Thomas' 2018 movie is India's official entry for #Oscars2024 pic.twitter.com/e2bFwOrg1d
— Veerni Srinivasa Rao (@veernisrinivas) September 27, 2023
ಜೂಡ್ ಆಂಥೊನಿ ಜೋಸೆಫ್ ನಿರ್ದೇಶನದ ನೈಜ ಘಟನೆ ಆಧಾರಿತ ಮಲಯಾಳಂ `2018′ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಕೇರಳ ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿತ್ತು.
ಟೊವಿನೋ ಥಾಮಸ್ ಜತೆ ಆಸಿಫ್ ಅಲಿ, ಅಪರ್ಣಾ ಬಾಲಮುರಳಿ, ವಿನೀತ್ ಶ್ರೀನಿವಾಸನ್, ಕಲೈಯರಸನ್, ಸುದೇಶ್, ಅಜು ವರ್ಗೀಸ್, ತನ್ವಿ ರಾಮ್, ಗೌತಮಿ ನಾಯರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
2018 ಸಿನಿಮಾ ಕಥೆ ಏನು?
‘2018’ ಸಿನಿಮಾ 2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹವನ್ನು ಆಧರಿಸಿ ಮಾಡಿದ ಸಿನಿಮಾ ಇದಾಗಿದೆ. ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟದ ಘಟನೆಗಳು ಇವೆ. ಅತೀ ಕಷ್ಟದ ಸಮಯದಲ್ಲೂ ಕೇರಳದ ಪ್ರತಿಯೊಬ್ಬರು ಹೇಗೆ ನಡೆದುಕೊಂಡರು ಎಂಬ ವಿವರ ಈ ಸಿನಿಮಾದಲ್ಲಿ. ‘ಪ್ರತಿಯೊಬ್ಬರೂ ಹೀರೊ’ ಎಂಬ ಟ್ಯಾಗ್ಲೈನ್ ಗಮನ ಸೆಳೆದಿತ್ತು. 2018ರ ಪ್ರವಾಹದಲ್ಲಿ ಕೇರಳದ 400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಅನೇಕರು ನಾಪತ್ತೆಯಾದರು. 1924ರ ಬಳಿಕ ಕೇರಳದಲ್ಲಿ ಉಂಟಾಗಿದ್ದ ಅತಿ ಭೀಕರ ಪ್ರವಾಹ ಅದಾಗಿತ್ತು.
ಕರ್ನಾಟಕ
BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್: ಎಚ್.ಡಿ. ಕುಮಾರಸ್ವಾಮಿ ಕಿಡಿ
BJP JDS alliance : ಕೋಮುವಾದಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಗಿಬಿದ್ದಿದ್ದಾರೆ. ಅಲ್ಲದೆ, ಜಾತ್ಯತೀತತೆಯನ್ನು ನಾಶ ಮಾಡಿದ್ದೇ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು: ಎಲ್ಲೆಲ್ಲಿ ಸೆಕ್ಯುಲರಿಸಂ ಇತ್ತೋ ಅದನ್ನು ಕಾಂಗ್ರೆಸ್‌ನವರೇ ನಾಶ ಮಾಡಿದರು. ಅಧಿಕಾರಕ್ಕಾಗಿ ಏನನ್ನೆಲ್ಲ ಮಾಡಿದರು? ಫಾರೂಕ್ ಅಬ್ದುಲ್ಲ (Farooq Abdullah) ಅವರನ್ನು ಯಾವ ಸಿದ್ಧಾಂತ ಉಳಿಸುವುದಕ್ಕೆ ಅವರು ಸೋಲಿಸಿದರು? ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (Former Prime Minister HD DeveGowda) ಇದನ್ನೆಲ್ಲ ನೋಡಿ, ನೋವು ಅನುಭವಿಸಿದ್ದಾರೆ. ಒಂದು ಸಮಾಜಕ್ಕೆ ಸಹಾಯ ಮಾಡಬೇಕು ಅಂತ ದೇವೇಗೌಡರು ಮಾಡಿದ ಹಾಗೆ ಯಾರೂ ಮಾಡಿಲ್ಲ. ಈಗಾಗಲೇ ಇಬ್ರಾಹಿಂ ಅವರಿಗೆ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಮುಸ್ಲಿಮರಿಗೆ ನಾನು ಗೌರವ ಕೊಟ್ಟಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ಈ ಮೂಲಕ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS alliance) ಬಗ್ಗೆ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿದ್ದರೆ, ನನಗೆ ವೋಟ್ ಹಾಕುತ್ತಿರಲಿಲ್ಲ. ನಾನು ಯಾರಿಗೂ ಅಗೌರವಯುತವಾಗಿ ನಡೆದುಕೊಂಡಿಲ್ಲ. ಇಬ್ರಾಹಿಂ ಜೊತೆ ಹಲವು ವಿಷಯ ಚರ್ಚೆ ಮಾಡಿದ್ದೇನೆ. ಇವತ್ತು ದೇಶಕ್ಕೆ ಅವಶ್ಯಕತೆ ಇರುವ ಬಗ್ಗೆ ಲೆಕ್ಕ ಹಾಕಿದ್ದೇವೆ. ಹಾಗಾಗಿ ಈ ಮೈತ್ರಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಸಿಎಂ ಮಾಡಿ ಎಂದು ನಾವು ಕೇಳಿದ್ದೆವಾ?
ಈಗ ಬಿಜೆಪಿ ಬಿ ಟೀಂ ಅನ್ನೋದನ್ನು ದೇವೇಗೌಡರು ಪ್ರೂವ್ ಮಾಡಿದ್ದರು ಅಂತಿದ್ದಾರಲ್ಲ ಅವತ್ತು ದೇವೇಗೌಡರು ನಮ್ಮ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬೇಡ ಅಂದಿದ್ದರು. ಆಗ ನಾವು ಅಧಿಕಾರಕ್ಕಾಗಿ ಕಾಂಗ್ರೆಸ್ ಜತೆ ಸೇರಿರಲಿಲ್ಲ. ಆದರೆ, ನನ್ನನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಮುಂದೆ ಬಂದಿದ್ದು ಯಾರು? ಅಂದು ನನಗೆ ಬಿಜೆಪಿಯಿಂದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ, ನಡ್ಡಾ ಅವರಿಂದ ಫೋನ್ ಬಂದಿತ್ತು. ಆಗ ನಾನು ಬಿಜೆಪಿ ಜತೆ ಸೇರಿದ್ದರೆ 5 ವರ್ಷದ ಆಡಳಿತ ನಮ್ಮದಾಗಿರುತ್ತಿತ್ತು ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಹಾಸನದಲ್ಲಿ ರಾಹುಲ್ ಗಾಂಧಿ ಕರೆದುಕೊಂಡು ಬಂದು ಭಾಷಣ ಮಾಡಿಸಿದ್ದರು. ಸಿದ್ದರಾಮಯ್ಯ ಅವರು ಜಾತ್ಯತೀತತೆಯನ್ನು ಉಳಿಸುತ್ತೇನೆ ಎಂದು ಹೇಳುತ್ತಾರೆ. ಆದರೆ, ಅಂದು ನನ್ನ ಸರ್ಕಾರವನ್ನು ಬೀಳಿಸುವಾಗ 5 ಶಾಸಕರನ್ನು ಕರೆತಂದರೆ, ಅತ್ತ ಕಡೆಯಿಂದ ಮತ್ತೆ ಐವರನ್ನು ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದವರು ಯಾರು? ಜಾತ್ಯತೀತತೆ ಉಳಿಸುವ ಕಾಂಗ್ರೆಸ್ ಸರ್ಕಾರವನ್ನು ಇದೀಗ ನೋಡುತ್ತಿದ್ದೀರಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಕಾವೇರಿ ತಟದಲ್ಲಿ ರೈತರ ಉಳಿವಿಗೆ ದೇವೇಗೌಡರೇ ಕಾರಣ
ನೀರಾವರಿ ಸಮಸ್ಯೆ ಬಗೆಹರಿಸಲು ದೇವೇಗೌಡರು ಹಳ್ಳಿ ಹಳ್ಳಿ ಸುತ್ತಿದ್ದಾರೆ. ನೀರಾವರಿಗೆ ದೇವೇಗೌಡರು ಮಾಡಿರುವುದನ್ನು ಯಾರೊಬ್ಬರೂ ಮಾಡಿಲ್ಲ. ಚರ್ಚೆ ಮಾಡುವ ಸಂಘಟನೆಗಳಿಗೆ ಒಂದು ಮಾತು ಹೇಳುತ್ತೇನೆ. ಕಾವೇರಿ ತಟದಲ್ಲಿ ರೈತರು ಉಳಿದಿರುವುದಕ್ಕೆ ದೇವೇಗೌಡರೇ ಕಾರಣ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪ್ರಿಯಾಂಕ್ ಖರ್ಗೆ ಮಾತಿಗೆ ತಿರುಗೇಟು
ನಮ್ಮ ಪಕ್ಷ ಉಳಿಸಿಕೊಳ್ಳಲು ಕಾಲು ಹಿಡಿದುಕೊಂಡರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಜನತಾದಳಕ್ಕೆ ಇನ್ನು ಆ ದುರ್ಗತಿ ಬಂದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಕಾವೇರಿ ಬಗ್ಗೆ ಧ್ವನಿ ಎತ್ತಲಿಲ್ಲ? ಕಾವೇರಿ ವಿಚಾರವಾಗಿ ಯಾಕೆ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ? ಕೆಆರ್‌ಎಸ್ ನೀರಿನ ಬಗ್ಗೆ ನಾನು ಮಾಹಿತಿ ಪಡೆದಿದ್ದೇನೆ. ಈ ಸರ್ಕಾರ ಇಷ್ಟು ಕೇವಲವಾಗಿ ನಡೆದುಕೊಳ್ಳುತ್ತಿದೆ. ವಿಷಯವನ್ನು ಡೈವರ್ಟ್ ಮಾಡುತ್ತಿದೆ. ಪಕ್ಷದ ಬಗ್ಗೆ ಹೆಸರು ಕೆಡಿಸಲು ಹೊರಟಿದ್ದಾರೆ. ನನಗೇನೂ ಶಾಕ್ ಕೊಡುವ ವಿಷಯವಲ್ಲ ಇದು. ಈಗಾಗಲೇ ನನಗೆ ಸಾಕಷ್ಟು ಶಾಕ್ ಕೊಟ್ಟಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಮೈನಾರಿಟಿಗೆ ತೊಂದರೆ ಮಾಡಲ್ಲ: ಎಚ್.ಡಿ. ದೇವೇಗೌಡ
ನಾನು ಇವತ್ತು ನೀರಾವರಿ ಮಂತ್ರಿಗಳ ಯಾವ ಮಾತಿಗೂ ಗಮನ ಕೊಡಲ್ಲ. ಬಾಂಗ್ಲಾದೇಶದ ನೀರಿನ ಸಮಸ್ಯೆ ಬಗೆಹರಿಸಿದ್ದೆ. ನಮ್ಮ ಮುಂದೆ ಇರೋದು ಮೈನಾರಿಟಿ ಮಾತು ಅಷ್ಟೇ. ನಾವು ಮೈನಾರಿಟಿ ಎಲ್ಲೇ ಇದ್ದರೂ ತೊಂದರೆ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ಎಚ್.ಡಿ. ಕುಮಾರಸ್ವಾಮಿ, ಮೈನಾರಿಟಿ ಮಾತ್ರ ಅಲ್ಲ ಇಡೀ ಕರ್ನಾಟಕದ ರಕ್ಷಣೆ ನಮ್ಮ ಗುರಿಯಾಗಿದೆ. ನಾಟ್ ಓನ್ಲಿ ಮೈನಾರಿಟಿ ಬ್ರದರ್, ಎಂಟೈರ್ ಕರ್ನಾಟಕ ರಕ್ಷಣೆ ಮಾಡುತ್ತೇವೆ ಎಂದು ಗುಡುಗಿದರು.
ಇದನ್ನೂ ಓದಿ: BJP JDS alliance : ವಿಜಯದಶಮಿ ನಂತರ ಜೆಡಿಎಸ್ ಸೀಟು ಹಂಚಿಕೆ ಅಂತಿಮ ಮಾತುಕತೆ!
ಕಾವೇರಿ ನೀರಿನ ವಿಷಯದಲ್ಲಿ ಈಗ ಬಂದಿರುವ ಆದೇಶವು ನನ್ನ ರಾಜ್ಯದ ಜನತೆಯ ಮರಣ ಶಾಸನವಾಗಿದೆ ಎಂದು ಎಚ್.ಡಿ. ದೇವೇಗೌಡ ಬೇಸರವನ್ನು ಹೊರಹಾಕಿದರು.
Live News
ind vs Aus : ಆಸ್ಟ್ರೇಲಿಯಾ ತಂಡದ ಮೊದಲ ವಿಕೆಟ್ ಪತನ, ಡೇವಿಡ್ ವಾರ್ನರ್ 56 ರನ್ಗೆ ಔಟ್
ಭಾರತ ತಂಡ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದು ಸರಣಿಯನ್ನು ಕೈವಶ ಮಾಡಿಕೊಂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಭಾರತಕ್ಕೆ ಕ್ಲೀನ್ ಸ್ವೀಪ್ ಸಾಧನೆ ಮಾಡುವ ಅವಕಾಶವಿದೆ.
ರಾಜ್ಕೋಟ್: ಇಲ್ಲಿನ ಎಸ್ಸಿ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಭಾರತ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ (ind vs Aus) ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಎರಡೂ ತಂಡಗಳು ತಲಾ ಐದು ಬದಲಾವಣೆಗಳನ್ನು ಮಾಡಿವೆ.
A look at our Playing XI for the final ODI 👌👌
— BCCI (@BCCI) September 27, 2023
Follow the Match ▶️ https://t.co/H0AW9UXI5Y#INDvAUS | @IDFCFIRSTBank pic.twitter.com/KpYibJpfSo
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಪುನರಾಗಮನ ಮಾಡಿದರೆ, ತನ್ವೀರ್ ಸಂಗಾ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ರೋಹಿತ್ ಶರ್ಮಾ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದಂತೆ ಭಾರತದಲ್ಲೂ ಬದಲಾವಣೆಗಳು ಸಾಕಷ್ಟಾಗಿವೆ. ನಾಯಕ ಮತ್ತು ವಿರಾಟ್ ಕೊಹ್ಲಿ ಮರಳಿದ್ದಾರೆ ಆದರೆ ಶುಭ್ಮನ್ ಗಿಲ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಆಡಲಿದೆ. ಭಾರತವು ವಾಷಿಂಗ್ಟನ್ ಸುಂದರ್ ಅವರಿಗಾಗಿ ರವಿಚಂದ್ರನ್ ಅಶ್ವಿನ್ ಅವರನ್ನು ಕೈಬಿಟ್ಟಿದೆ. ರಾಜ್ಯದ ನಾಲ್ವರು ಸ್ಥಳೀಯ ಆಟಗಾರರಾದ ಧರ್ಮೇಂದ್ರ ಜಡೇಜಾ, ಪ್ರೇರಕ್ ಮಂಕಡ್, ವಿಶ್ವರಾಜ್ ಜಡೇಜಾ ಮತ್ತು ಹರ್ವಿಕ್ ದೇಸಾಯಿ ಪಂದ್ಯದುದ್ದಕ್ಕೂ ಡ್ರಿಂಕ್ಸ್ ಮತ್ತು ಫೀಲ್ಡಿಂಗ್ಗಾಗಿ ತಂಡದ ಜತೆಗೆ ಇರಲಿದ್ದಾರೆ.
-
ದೇಶ14 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ22 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ15 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ದೇಶ16 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್21 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ22 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್18 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್