Dina Bhavishya : ಈ ರಾಶಿಯವರ ಹೂಡಿಕೆ ತರಲಿದೆ ಭರ್ಜರಿ ಲಾಭ! - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರ ಹೂಡಿಕೆ ತರಲಿದೆ ಭರ್ಜರಿ ಲಾಭ!

Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ ಚೌತಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Todays Horoscope 19-09-2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಸೋಮವಾರ 12:58ಕ್ಕೆ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದು, ಬುಧವಾರ ಬೆಳಗ್ಗೆ 10.06ರ ವರೆಗೂ ಅಲ್ಲಿಯೇ ನೆಲೆಸಿರುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನುಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ಈ ಹಿಂದೆ ಮಾಡಿದ ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಲಾಭ ಆಗಲಿದೆ. ಕಟಕ ರಾಶಿಯವರಿಗೆ ಸಾಲದ ಮರುಪಾವತಿಯಾಗಿ ಆರ್ಥಿಕವಾಗಿ ಬಲಗೊಳ್ಳಲಿದ್ದಾರೆ. ತುಲಾ ರಾಶಿಯವರಿಗೆ ವಿನಾಕಾರಣ ಅಪರಿಚಿತರೊಂದಿಗೆ ಕಲಹವಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ಹಿಡಿತವಿರಲಿ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (19-09-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ
ತಿಥಿ:
ಚೌತಿ 13:42 ವಾರ: ಮಂಗಳವಾರ
ನಕ್ಷತ್ರ: ಸ್ವಾತಿ 13:47 ಯೋಗ: ವೈಧೃತಿ 27:56
ಕರಣ: ವಿಷ್ಟಿ (ಭದ್ರ) 13:42 ಅಮೃತಕಾಲ: ಮುಂಜಾನೆ 05:45 ಯಿಂದ 7.25 ವರೆಗೆ
ದಿನದ ವಿಶೇಷ: ಗಣೇಶ ಚತುರ್ಥಿ

ಸೂರ್ಯೋದಯ : 06:09  ಸೂರ್ಯಾಸ್ತ : 06:18

ರಾಹುಕಾಲ: ಸಾಯಂಕಾಲ: 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ:
ಬೆಳಗ್ಗೆ: 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಶ್ರಮದ ಜೀವಕೆ ವಿಶ್ರಾಂತಿ ಸಿಗಲಿದೆ. ಈ ಹಿಂದೆ ಮಾಡಿದ ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಲಾಭ ಆಗಲಿದೆ. ಉದ್ಯೋಗದ ಸ್ಥಳದಲ್ಲಿ ಸಹಕಾರ ಸಿಗಲಿದೆ. ಸಭೆ- ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವೃಷಭ: ಒತ್ತಡವನ್ನು ನಿವಾರಿಸಲು ಹೋಗಿ ವ್ಯಸನಗಳಿಗೆ ಬಲಿಯಾಗುವುದು ಬೇಡ. ಅಧ್ಯಾತ್ಮದ ಹಾದಿ ಸಮಾಧಾನ ನೀಡುವುದು. ಕುಟುಂಬದ ಆಪ್ತರು ಮತ್ತು ಸ್ನೇಹಿತರಿಂದ ಆರ್ಥಿಕ ಸಹಾಯ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 5

Horoscope Today

ಮಿಥುನ: ನಿಮ್ಮ ಆಕರ್ಷಕ ವ್ಯಕ್ತಿತ್ವವು ಇತರರನ್ನು ಸೆಳೆಯಲಿದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಎಂದೂ ಸಿಗದ ಉತ್ಸಾಹ, ನೆಮ್ಮದಿ, ಸಂತೋಷ ಈ ದಿನ ನಿಮ್ಮದಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಬದುಕಿನಲ್ಲಿ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕಟಕ: ಅನೇಕ ಒತ್ತಡಗಳಿಂದ ಮುಕ್ತರಾಗುವಿರಿ. ಸಾಲದ ಮರುಪಾವತಿಯಾಗಿ ಆರ್ಥಿಕವಾಗಿ ಬಲಗೊಳ್ಳುವಿರಿ. ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಸಂಗಾತಿಯ ಮಧುರ ಮಾತುಗಳು ಕುಟುಂಬದಲ್ಲಿ ಭರವಸೆಯನ್ನು ಹೆಚ್ಚಿಸಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಸಿಂಹ: ಕುಟುಂಬದ ಆಪ್ತರಿಂದ ಸಹಾಯ ಮತ್ತು ಸಹಕಾರ ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ನಿಮ್ಮನ್ನು ದ್ವೇಷಿಸುವ ಜನರೇ ನಿಮ್ಮ ಸ್ನೇಹಿತರಾಗಿ ಪರಿವರ್ತನೆ ಆಗುವರು. ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ: ಉತ್ಸಾಹದಿಂದ ಇರುವಿರಿ. ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಕುಟುಂಬದಲ್ಲಿ ಪರಸ್ಪರರ ಮಧ್ಯೆ ಸಾಮರಸ್ಯ ಮೂಡಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಅತಿಯಾದ ಒತ್ತಡದಿಂದ ಮಾನಸಿಕ ಚಿಂತೆ ಕಾಡಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ವಿನಾಕಾರಣ ಅಪರಿಚಿತರೊಂದಿಗೆ ಕಲಹವಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ಹಿಡಿತವಿರಲಿ. ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವೃಶ್ಚಿಕ: ಒತ್ತಡದ ಮಧ್ಯೆಯೂ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ರಹಸ್ಯ ಕಾರ್ಯಗಳು ಸಹ ಯಶಸ್ಸನ್ನು ನೀಡಲಿದೆ. ಮಾತುಗಳು ಸಂಬಂಧಿಗಳ ಮಧ್ಯೆ ಬಿರುಕು ಮೂಡಿಸುವ ಸಾಧ್ಯತೆ ಇದೆ. ಕೌಶಲ್ಯಕ್ಕ ತಕ್ಕ ಪ್ರತಿಫಲ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ಆಪ್ತರ ಬೆಂಬಲ ಸಿಗಲಿದೆ. ಇತರ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವಿರಿ. ದಿನದ ಕೊನೆಯಲ್ಲಿ ಯಾರೊಂದಿಗೂ ಮಾತಿಗಿಳಿದು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ಗಣಪತಿ ಹಬ್ಬವನ್ನು ಹೇಗೆ ಆಚರಿಸಬೇಕು? ಇಲ್ಲಿದೆ ನೋಡಿ ಮಾಹಿತಿ

Horoscope Today

ಮಕರ: ಹಿಂದೆ ಮಾಡಿರುವ ಧನಸಹಾಯ ಇಂದು ತಮಗೆ ಮರಳುವ ಸಾಧ್ಯತೆ ಇದೆ. ಅಲ್ಪ ಸಮಯದ ಕೋಪ ನಿಮ್ಮ ಮನಸ್ಥಿತಿಯನ್ನು ಹಾಳುಮಾಡುವ ಸಾಧ್ಯತೆ ಇದೆ. ಆದ್ದರಿಂದ ಶಾಂತವಾಗಿರಿ. ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗದಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡ ಉಂಟಾಗಬಹುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ಮನೋರಂಜನೆಯಿಂದಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ಸಿಗಲಿದೆ. ಮನೆಯಲ್ಲಿ ಹಿರಿಯರೊಂದಿಗೆ ಮಾತಿಗೆ ಮಾತು ಬೆಳೆಸಬೇಡಿ. ಮೌನವಾಗಿರುವುದು ಉತ್ತಮ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

Horoscope Today

ಮೀನ: ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಸಂಗಾತಿಯಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Election Results 2024: ರಾಮ ಮಂದಿರ ನಿರ್ಮಿಸಿದರೂ ಅಯೋಧ್ಯೆಯಲ್ಲಿ ಬಿಜೆಪಿಗೆ ದಾರುಣ ಸೋಲು!

Election Results 2024: ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಮುಂದೆ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋತಿದ್ದಾರೆ. ಫೈಜಾಬಾದ್‌ನಿಂದ ಮೂರು ಬಾರಿ ಸಂಸದರಾಗಿರುವ ಸಿಂಗ್ ಅವರ ಈ ಸಲದ ಸೋಲು ಅಚ್ಚರಿದಾಯಕವಾಗಿದೆ.

VISTARANEWS.COM


on

election results 2024 ayodhya
ಎಸ್‌ಪಿಯ ಅವಧೇಶ್‌ ‌ಪ್ರಸಾದ್ ಹಾಗೂ ಬಿಜೆಪಿಯ ಲಲ್ಲು ಸಿಂಗ್
Koo

ಹೊಸದಿಲ್ಲಿ: ಈ ವರ್ಷದ ಆರಂಭದಲ್ಲಿ ಭವ್ಯವಾದ ಶ್ರೀರಾಮ ಮಂದಿರದ (Ayodhya Ram Mandir) ಪ್ರಾಣಪ್ರತಿಷ್ಠೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya election results 2024) ಮಾಡಲಾಯಿತು. ಆದರೆ ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ (Faizabad Election Result) ಎಸ್‌ಪಿ (SP) ಅಭ್ಯರ್ಥಿಯ ಮುಂದೆ ಬಿಜೆಪಿ (BJP) ಅಭ್ಯರ್ಥಿ ಸೋತಿದ್ದಾರೆ.

ಜನವರಿಯಲ್ಲಿ ರಾಮ ಮಂದಿರದಲ್ಲಿ ನಡೆದ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ, ಇಡೀ ಭಾರತದಲ್ಲಿಯೇ ಬಿಜೆಪಿಯ ಪುನಃ ಪ್ರತಿಷ್ಠಾಪನೆಗೆ ಮೂಲವಾಗಲಿದೆ ಎಂದು ಭಾವಿಸಲಾಗಿತ್ತು. ಕಡೇ ಪಕ್ಷ ಉತ್ತರ ಪ್ರದೇಶದಲ್ಲಾದರೂ ಭಾರಿ ಮೆಜಾರಿಟಿಯಲ್ಲಿ ಬಿಜೆಪಿ ಬರಲಿದೆ ಎಂದು ತರ್ಕಿಸಲಾಗಿತ್ತು. ಆದರೆ ಅದು ಆಗಿಲ್ಲ. ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಮುಂದೆ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋತಿದ್ದಾರೆ.

ಫೈಜಾಬಾದ್‌ನಿಂದ ಮೂರು ಬಾರಿ ಸಂಸದರಾಗಿರುವ ಸಿಂಗ್ ಅವರ ಈ ಸಲದ ಸೋಲು ಅಚ್ಚರಿದಾಯಕವಾಗಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗಿಂತ 10,000ಕ್ಕೂ ಅಧಿಕ ಮತಗಳ ಅಂತರದಿಂದ ಸಿಂಗ್‌ ಹಿಂದುಳಿದರು. ಫೈಜಾಬಾದ್ ಜಿಲ್ಲೆಯನ್ನು 2018ರಲ್ಲಿ ಅಧಿಕೃತವಾಗಿ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಯಿತು. ಆದಾಗ್ಯೂ, ಲೋಕಸಭಾ ಸ್ಥಾನವನ್ನು ಇನ್ನೂ ಫೈಜಾಬಾದ್ ಎಂದು ಕರೆಯಲಾಗುತ್ತದೆ.

ಉತ್ತರ ಪ್ರದೇಶದ 43 ಲೋಕಸಭಾ ಸ್ಥಾನಗಳಲ್ಲಿ ಇಂಡಿಯಾ ಬ್ಲಾಕ್ ಮುನ್ನಡೆ ಸಾಧಿಸಿದೆ. ಮಧ್ಯಾಹ್ನದ ಹೊತ್ತಿಗೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಕ್ರಮವಾಗಿ 34 ಮತ್ತು ಒಂಬತ್ತು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದವು. 2019ರಲ್ಲಿ 62 ಸ್ಥಾನ ಗಳಿಸಿದ್ದ ಬಿಜೆಪಿ, ಈ ಬಾರಿ 34 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಮತಗಳ ಅಂತರ ಕಳೆದ ಸಲಕ್ಕಿಂತ ಕಡಿಮೆಯಾಗಿದೆ. ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸಿದರೆ, ಸ್ಮೃತಿ ಇರಾನಿ ಅಮೇಠಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ವಿರುದ್ಧ ಸೋತಿದ್ದಾರೆ.

ಮೋದಿ ಗೆಲುವಿನ ಅಂತರ ಕುಸಿತ

ಈ ಚುನಾವಣೆಯ ಫಲಿತಾಂಶದ (Election Results 2024) ಮೂಲಕ ಮೋದಿ ಪ್ರಭಾವ ದೇಶದಲ್ಲಿ ಕುಸಿದಿದೆಯೇ ಎಂಬ ಚರ್ಚೆ ಆರಂಭವಾಗಿದೆ. ಅದಕ್ಕಿಂತಲೂ ಎರಡು ಅವಧಿಗೆ ತಾವು ಪ್ರತಿನಿಧಿಸಿದ್ದ ವಾರಾಣಸಿ ಕ್ಷೇತ್ರದಲ್ಲಿಯೂ ಅವರ ಪ್ರಭಾವ ಬಹುತೇಕ ಮಸುಕಾಗಿದೆ ಎಂಬುದೇ ಚರ್ಚೆಯ ಪ್ರಮುಖ ವಸ್ತು. ಪ್ರಧಾನಿ ಮೋದಿ ಅವರು 2014ರ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಅಜಯ್​ ರಾಯ್​ ವಿರುದ್ಧ 1.5 ಲಕ್ಷ ಮತಗಳ ಅಂತರದಿಂದ ಮಾತ್ರ ಗೆದ್ದಿದ್ದಾರೆ.

ವಾಸ್ತವದಲ್ಲಿ ಅವರ ಪಾಲಿಗೆ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ವಿಜಯ. ಹೀಗಾಗಿ ಅವರ ಅಭಿಮಾನಿಗಳು ಹಾಗೂ ವಾರಾಣಸಿ ಮತದಾರರ ಪಾಲಿಗೆ ಹೆಮ್ಮೆಯ ಸಂಗತಿ. ಪ್ರಧಾನಿ ಮೋದಿ  6,12,970 ಮತಗಳನ್ನು ಪಡೆದಿದ್ದರೆ ಅವರ ಸಮೀಪದ ಪ್ರತಿಸ್ಪರ್ಧಿ ಅಜಯ್​ ರಾಯ್​ 460457 ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ಮತಗಳಲ್ಲಿ ಮೋದಿ ಪಾಲಿ ಶೇಕಡಾ 54. 24 ಹಾಗೂ ಪ್ರತಿಸ್ಪರ್ಧಿ ಪಡೆದ ಶೇಕಡಾವಾರು ಮತ 40.74. ಆದರೆ, ಸಾಮಾನ್ಯ ಅಭ್ಯರ್ಥಿಯೊಬ್ಬ ಇಷ್ಟೊಂದು ಅಂತರದಿಂದ ಗೆಲ್ಲುವುದು ಸಾಮಾನ್ಯ ವಿಷಯವಲ್ಲ. ಆದರೆ, ಪ್ರಧಾನಿ ಅಭ್ಯರ್ಥಿಯಾಗಿ ಅವರ ಪಡೆದ ಅಂತರ ಕಡಿಮೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Election Results 2024: ಕಂಗನಾ, ಸುರೇಶ್‌ ಗೋಪಿ, ಶತ್ರುಘ್ನ ಸಿನ್ಹಾ ಸೇರಿ ಹಲವು ನಟ–ನಟಿಯರ ಗೆಲುವು

ಪ್ರಧಾನಿ ಮೋದಿ ಅವರು ಎರಡನೇ ಅವಧಿಗೆ (2019) ವಾರಾಣಸಿಯಲ್ಲಿ 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಆ ಅವಧಿಯಲ್ಲಿ ಅವರು ಸಮೀಪದ ಸ್ಪರ್ಧಿ ಶಾಲಿನಿ ಯಾದವ್ ಅವರನ್ನು ಮಣಿಸಿದ್ದರು. ಅಂತೆಯೇ 2014ರಲ್ಲಿ 3.72 ಲಕ್ಷ ಮತಗಳ ಅಂತರದಲ್ಲಿ ಹಾಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಗೆಲುವು ಕಂಡಿದ್ದರು. 2014ರಲ್ಲಿ ಭರ್ಜರಿ ಅಂತರದಿಂದಲೇ ಗೆದ್ದಿದ್ದ ಅವರು 2019ರಲ್ಲಿ ಭಾರೀ ಅಂತರದ ವಿಜಯ ದಾಖಲಿಸಿದ್ದರು. ಈ ಫಲಿತಾಂಶಗಳು ಮೋದಿಯ ಗೌರವ ಹಾಗೂ ಘನತೆಗೆ ಪೂರಕವಾಗಿತ್ತು. ಪ್ರಧಾನಿ ಮೋದಿ ಎರಡನೇ ಅವಧಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದರು. ಅಂತೆಯೇ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವೂ ಅಲ್ಲಿ ದೊಡ್ಡ ಸುಧಾರಣೆ ಮಾಡಿದೆ.

ಇದನ್ನೂ ಓದಿ: Karnataka Election Results 2024: ಬೆಂ. ಗ್ರಾಮಾಂತರದಲ್ಲಿ ಸಹೋದರನಿಗೆ ಸೋಲು; ಜನರ ತೀರ್ಪಿನ ಬಗ್ಗೆ ಬೇರೆ ಮಾತಿಲ್ಲ ಎಂದ ಡಿಕೆಶಿ

Continue Reading

ಕರ್ನಾಟಕ

Shorapur Election Result 2024: ಸುರಪುರದಲ್ಲಿ ಕಾಂಗ್ರೆಸ್‌ನ ರಾಜಾ ವೇಣುಗೋಪಾಲ ನಾಯಕ್‌ಗೆ ಜಯ

Shorapur Election Result 2024: ರಾಜಾ ವೆಂಕಟಪ್ಪ ನಾಯಕ ಅವರು ಇದೇ ವರ್ಷದ ಫೆಬ್ರವರಿ 25ರಂದು ನಿಧನರಾದ ಹಿನ್ನೆಲೆಯಲ್ಲಿ ಸುರಪುರ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿತ್ತು. ಮೇ 7ರಂದು ಸುರಪುರದಲ್ಲಿ ಉಪ ಚುನಾವಣೆ ನಡೆದಿತ್ತು. ರಾಜಾ ವೆಂಕಟಪ್ಪ ನಾಯಕ ಅವರ ನಿಧನದ ಹಿನ್ನೆಲೆಯಲ್ಲಿ ಉಂಟಾಗಿದ್ದ ಅನುಕಂಪದ ಅಲೆ, ಅವರ ಕುರಿತು ಕ್ಷೇತ್ರದ ಜನರಿಗೆ ಇದ್ದ ಅಭಿಮಾನದ ಫಲವಾಗಿ ರಾಜಾ ಗೋಪಾಲ ನಾಯಕ್‌ ಅವರು ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ.

VISTARANEWS.COM


on

Shorapur Election Result 2024
Koo

ಸುರಪುರ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭೆ ಕ್ಷೇತ್ರದ ಫಲಿತಾಂಶ (Shorapur Election Result 2024) ಪ್ರಕಟವಾಗಿದ್ದು, ಕಾಂಗ್ರೆಸ್‌ನ ರಾಜಾ ವೇಣುಗೋಪಾಲ ನಾಯಕ್‌ (Raja Venugopal Naik) ಅವರು ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗದ ಮಾಹಿತಿಯಂತೆ ಕಾಂಗ್ರೆಸ್‌ನ ರಾಜಾ ವೇಣುಗೋಪಾಲ ನಾಯಕ್‌ ಅವರು 1,14,886 ಮತಗಳನ್ನು ಪಡೆದರೆ, ಬಿಜೆಪಿಯ ರಾಜುಗೌಡ (Raju Gowda) (ನರಸಿಂಹ ನಾಯಕ್) ಅವರು 96,566 ಮತಗಳನ್ನು ಪಡೆದು ಸೋಲುಂಡರು.

ವೇಣುಗೋಪಾಲ ನಾಯಕ್‌ ಅವರ ತಂದೆ ರಾಜಾ ವೆಂಕಟಪ್ಪ ಅವರು ಸುರಪುರ ಶಾಸಕರಾಗಿದ್ದರು. ಅವರು ಇದೇ ವರ್ಷದ ಫೆಬ್ರವರಿ 25ರಂದು ನಿಧನರಾದ ಹಿನ್ನೆಲೆಯಲ್ಲಿ ಸುರಪುರ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿತ್ತು. ಮೇ 7ರಂದು ಸುರಪುರದಲ್ಲಿ ಉಪ ಚುನಾವಣೆ ನಡೆದಿತ್ತು. ರಾಜಾ ವೆಂಕಟಪ್ಪ ನಾಯಕ ಅವರ ನಿಧನದ ಹಿನ್ನೆಲೆಯಲ್ಲಿ ಉಂಟಾಗಿದ್ದ ಅನುಕಂಪದ ಅಲೆ, ಅವರ ಕುರಿತು ಕ್ಷೇತ್ರದ ಜನರಿಗೆ ಇದ್ದ ಅಭಿಮಾನದ ಫಲವಾಗಿ ರಾಜಾ ವೇಣುಗೋಪಾಲ ನಾಯಕ್‌ ಅವರಿಗೆ ಗೆಲುವು ದಕ್ಕಿದೆ ಎಂದೇ ಹೇಳಲಾಗುತ್ತಿದೆ.

Election Results 2024

2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜಾ ವೇಣುಗೋಪಾಲ ನಾಯಕ್‌ ಅವರ ತಂದೆ ದಿವಂಗತ ರಾಜಾ ವೆಂಕಟಪ್ಪ ನಾಯಕ ಅವರು ರಾಜು ಗೌಡ ವಿರುದ್ಧ ‌25 ಸಾವಿರ ಮತಗಳ ಅಂತರದಲ್ಲಿ ಗೆಲುವ ಸಾಧಿಸಿದ್ದರು. ರಾಜಾ ವೆಂಕಟಪ್ಪ ನಾಯಕ ಅವರು 1,13,559 ಮತಗಳನ್ನು ಪಡೆದಿದ್ದರೆ, ರಾಜುಗೌಡ ಅವರು 88,336 ಮತಗಳನ್ನು ಮಾತ್ರ ಪಡೆಯಲು ಶಕ್ತರಾಗಿದ್ದರು. ಇದಕ್ಕೂ ಮೊದಲು ರಾಜು ಗೌಡ ಅವರು ಸುರಪುರ ಕ್ಷೇತ್ರದ ಶಾಸಕರಾಗಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ರಾಜು ಗೌಡ ಅವರು ರಾಜಾ ವೆಂಕಟಪ್ಪ ನಾಯಕ ಅವರ ವಿರುದ್ಧ ಸುಮಾರು 22 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ರಾಜು ಗೌಡ ಅವರು 1,04,426 ಮತಗಳನ್ನು ಪಡೆದಿದ್ದರು. ರಾಜಾ ವೆಂಕಟಪ್ಪ ನಾಯಕ ಅವರು 81,858 ಮತ ಪಡೆದಿದ್ದರು. ರಾಜಾ ವೆಂಕಟಪ್ಪ ನಾಯಕ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದು, ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: Narendra Modi : ವಾರಾಣಸಿಯಲ್ಲೂ ಮೋದಿ ಜನಪ್ರಿಯತೆ ಮಸುಕು; ಗೆಲುವಿನ ಅಂತರ ಕೇವಲ 1.5 ಲಕ್ಷ ಮತಗಳು

Continue Reading

ಪ್ರಮುಖ ಸುದ್ದಿ

Election Results 2024 : ಮೋದಿಯ ಸೋಲು ಎಂದ ಖರ್ಗೆ, ಸಂವಿಧಾನ ಉಳಿಸಿದೆವು ಎಂದ ರಾಹುಲ್​ ಗಾಂಧಿ

2024 election Results: ಬಿಜೆಪಿ ನೇತೃತ್ವದ ಕಾಂಗ್ರೆಸ್​ ಪಕ್ಷದ ಬ್ಯಾಂಕ್ ಖಾತೆ ಸೀಜ್ ಮಾಡಿತ್ತು. ವಿಪಕ್ಷಗಳನ್ನು ಅನಗತ್ಯವಾಗಿ ಸಾಂವಿಧಾನಿಕ ಸಂಸ್ಥೆಗಳ ಮೂಲಕ ಗುರಿ ಮಾಡಲಾಗಿತ್ಉತ. ನಮ್ಮ ವಿರುದ್ಧ ಸಕಾರಾತ್ಮಕ ಪ್ರಚಾರ ನಡೆಸಿದರು. ಆದಾಗ್ಯೂ ಬಿಜೆಪಿಯ ಯೋಜನೆ ಕೈಗೂಡಲಿಲ್ಲ ಎಂದು ಖರ್ಗೆ ಹೇಳಿದರು.

VISTARANEWS.COM


on

Kharge calls Modi's defeat, says 'we saved Constitution': Rahul Gandhi
Koo

ಬೆಂಗಳೂರು: ಲೋಕ ಸಭಾ ಚುನಾವಣೆಯಲ್ಲಿ (Election Results 2024) ಬಿಜೆಪಿ 2019ರ ಚುನಾವಣೆಗಿಂತ ಕಡಿಮೆ ಸ್ಥಾನಗಳನ್ನು ಗೆದ್ದಿರುವುದು ಮೋದಿಯ ಸೋಲು. ಈ ಹಿನ್ನಡೆಯ ನೈತಿಕತೆಯನ್ನು ಅವರು ಹೊರಬೇಕಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್​ ಪಕ್ಷ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ ಪಕ್ಷಕ್ಕೆ ಹಾಗೂ ಇಂಡಿ ಒಕ್ಕೂಟದ ಪಕ್ಷಗಳಿಗೆ ದೊರೆತಿರುವ ಗೆಲುವುಗಳು ಪ್ರಜಾಪ್ರಭುತ್ವ ವಿಜಯ ಎಂದು ಹೇಳಿದರು.

ಈ ಬಾರಿಯ ಚುನಾವಣೆಯ ಮೋದಿ ಮತ್ತು ಜನರ ನಡುವಿನ ಹೋರಾಟವಾಗಿತ್ತು. ಹೀಗಾಗಿ ಜನರು ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಕ್ಕಿರಲಿಲ್ಲ. ಬಿಜೆಪಿ ಒಬ್ಬ ವ್ಯಕ್ತಿಯನ್ನು (ಮೋದಿಯನ್ನು) ಮುಂದಿಟ್ಟುಕೊಂಡು ಮತ ಕೇಳಿತ್ತು. ಆ ವ್ಯಕ್ತಿಯ ವಿಫಲಗೊಂಡಿದ್ದಾರೆ. ಹೀಗಾಗಿ ಬಿಜೆಪಿ ಏಕಾಂಗಿಯಾಗಿ ಸರಳ ಬಹುಮತ ಪಡೆಯದೇ ಇರುವುದು ಪ್ರಧಾನಿ ನರೇಂದ್ರ ಮೋದಿ ಸೋಲು ಎಂದು ಹೇಳಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾಂಗ್ರೆಸ್​ ಪಕ್ಷದ ಬ್ಯಾಂಕ್ ಖಾತೆ ಸೀಜ್ ಮಾಡಿತ್ತು. ವಿಪಕ್ಷಗಳನ್ನು ಅನಗತ್ಯವಾಗಿ ಸಾಂವಿಧಾನಿಕ ಸಂಸ್ಥೆಗಳ ಮೂಲಕ ಗುರಿ ಮಾಡಲಾಗಿತ್ತು . ಆದರೆ ನಾವು ಸಕಾರಾತ್ಮಕ ಪ್ರಚಾರ ನಡೆಸಿದೆವು. ಇದರಿಂದಾಗಿ ಬಿಜೆಪಿಯ ಸಂಚು ಕೈಗೂಡಲಿಲ್ಲ ಎಂದು ಖರ್ಗೆ ಹೇಳಿದರು.

ನಮ್ಮ ಒಕ್ಕೂಟ ಹಾಗೂ ಪಕ್ಷ ನಿರುದ್ಯೋಗ, ಬೆಲೆ ಏರಿಕೆ ಯಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಹೋಗಿತ್ತು. ಜನರಿಗೆ ಅದರ ಮನದಟ್ಟಾಗಿದೆ. ಅವರು ನಮ್ಮನ್ನು ಬೆಂಬಲಿಸಿದರು ಎಂದು ಖರ್ಗೆ ಹೇಳಿದರು.

ನಮ್ಮ ಪ್ರಣಾಳಿಕೆ ಬಗ್ಗೆ ಮೋದಿ ಸುಳ್ಳು ಹೇಳಿದರು. ಆದರೆ, ಜನರು ಅದನ್ನು ಅರ್ಥ ಮಾಡಿಕೊಂಡರು. ನಾವು ನಮ್ಮ ಯಾತ್ರೆಗಳ ಮೂಲಕ ಜನರ ಸಮಸ್ಯೆ ಅರಿತು ಅದನ್ನು ಸರಿಪಡಿಸಲು ಮಾರ್ಗ ಕಂಡುಕೊಂಡೆವು. ಅದನ್ನೇ ಪ್ರಣಾಳಿಕೆ ಮಾಡಿ ಜನರಿಗೆ ನೀಡಿದೆವು. ಆದಾಗ್ಯೂ ಬಿಜೆಪಿ ತನ್ನ ಅಹಂಕಾರದಿಂದ ಸೋಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Narendra Modi : ವಾರಾಣಸಿಯಲ್ಲೂ ಮೋದಿ ಜನಪ್ರಿಯತೆ ಮಸುಕು; ಗೆಲುವಿನ ಅಂತರ ಕೇವಲ 1.5 ಲಕ್ಷ ಮತಗಳು

ಬಿಜೆಪಿ ನೇತೃತ್ವದ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ದಾಳಿ ಮಾಡಿತ್ತು. ಅವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿತ್ತು. ವಿಪಕ್ಷ ನಾಯಕರನ್ನು ಬಂಧಿಸುವ ಕೆಲಸ ಮಾಡಲಾಗಿತ್ತು. ಅದೇ ರೀತಿ ಮುಂದೆ ಪ್ರಜಾಪ್ರಭುತ್ವ ಮೇಲೆ ದಾಳಿ ಮಾಡುವ ಉದ್ದೇಶವನ್ನೂ ಹೊಂದಿತ್ತು. ಇಂಥ ವಿಷಯಗಳನ್ನು ನಾವು ಜನರ ಮುಂದಿಡುವ ಕೆಲಸ ಮಾಡಿದೆವು. ಇದಕ್ಕಾಗಿ ನಾನು ನಮ್ಮ ಎಲ್ಲ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳು ಪರಸ್ಪರ ಸಹಕಾರದ ಮೂಲಕ ಪ್ರಚಾರದಲ್ಲಿ ಪಾಲ್ಗೊಂಡೆವು. ಆದಾಗ್ಯೂ ನಮ್ಮ ಹೋರಾಟ ತಾರ್ಕಿಕ ಅಂತ್ಯ ತಲುಪಿಲ್ಲ. ಜನ ಪರ ಮತ್ತು ಸಂವಿಧಾನದ ಉಳಿವಿಗೆ ನಾವು ಹೋರಾಟ ಮಾಡಬೇಕಿದೆ ಸಂಸತ್‌ ವಿಪಕ್ಷಗಳ ಧ್ವನಿಗೆ ಮಾನ್ಯತೆ ಸಿಗಬೇಕು ಎಂದು ಹೇಳಿದರು.

ಸಂವಿಧಾನ ಉಳಿದಿದೆ: ರಾಹುಲ್ ಗಾಂಧಿ

ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆದ ಹಿನ್ನಡೆ ಸಂವಿಧಾನಕ್ಕೆ ಸಿಕ್ಕಿರುವ ಗೆಲುವು ಎಂದು ಕಾಂಗ್ರೆಸ್​ ನಾಯಕ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಚಿಸುವ ಕುರಿತು ಹಾಗೂ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಬಗ್ಗೆ ಇಂಡಿ ಒಕ್ಕೂಟದ ಸದಸ್ಯರ ಚರ್ಚೆ ಮಾಡದೇ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದರು.

ಇದು ಇಂಡಿಯಾ ಒಕ್ಕೂಟ ಮತ್ತು ಎನ್​​ಡಿಎ ನಡುವಿನ ಹೋರಾಟ ಮಾತ್ರ ಆಗಿರಲಿಲ್ಲ. ಇದು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ, ಪ್ರಜಾಪ್ರಭುತ್ವ ಮೇಲಿ ದಾಳಿಯ ವಿರುದ್ಧದ ಹೋರಾಟವಾಗಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲರನ್ನೂ ಬೆದರಿಸಿ ವಶಕ್ಕೆ ಪಡೆಯುವ ಕೆಲಸ ಮಾಡಿದ್ದರು.

ಆದರೆ ನಮ್ಮ ಹೋರಾಟ ಸಂವಿಧಾನವನ್ನು ಉಳಿಸುವುದಾಗಿತ್ತು. ಈ ವಿಚಾರದಲ್ಲಿ ನಮ್ಮೊಂದಿಗೆ ಸೇರಿದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ಸಂವಿಧಾನ ಉಳಿಸುವ ನಿರ್ಧಾರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೀರಿ ರಾಹುಲ್ ಹೇಳಿದರು.

ಇಂಡಿ ಒಕ್ಕೂಟದ ನಾವೆಲ್ಲರೂ ಹೋರಾಟ ಮಾಡಿದೆವು. ನಾವು ಎಲ್ಲರೂ ಒಂದೇ ದೃಷ್ಟಿಕೊನದಿಂದ ಹೋರಾಡಿದ್ದೇವೆ. ಷೇರು ಮಾರುಕಟ್ಟೆ ಮತ್ತು ಅದಾನಿ ಮತ್ತು ಮೋದಿಯ ನಡುವೆ ಭ್ರಷ್ಟಾಚಾರದ ಸಂಬಂಧವಿದೆ. ಆದರೆ ದೇಶವು ಒಗ್ಗಾಟಾಗಿ ಮೋದಿ ಅಮಿತ್ ಶಾ ಆಡಳಿತ ನಡೆಸುವುದು ಬೇಡ ಎಂದು ನಿರ್ಧರಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ರಾಹುಲ್ ಹೇಳಿದ್ದಾರೆ.

ಬಡವರ ಗೆಲುವು

ಬಿಜೆಪಿಗೆ ಹಿನ್ನಡೆ ಉಂಟು ಮಾಡಿದ ದೇಶದ ಜನರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತೇನೆ. ಸಂವಿಧಾನ ಉಳಿಸುವ ಕೆಲಸ ಬಡವರು ಮಾಡಿದ್ದಾರೆ. ಸಂವಿಧಾನ ದೇಶದ ಧ್ವನಿ, ಬಡ ಜನರು ಇದನ್ನು ಉಳಿಸಿದ್ದಾರೆ. ಅದೇ ರೀತಿ ನಾನು ನೀಡಿದ ಭರವಸೆ ಈಡೇರಿಸುತ್ತೇವೆ. ಜಾತಿ ಗಣತಿ, ಮಹಾಲಕ್ಷ್ಮಿ ಭರವಸೆಯನ್ನು ನಾವು ಈಡೇರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇಂಡಿಯಾ ಒಕ್ಕೂಟದ ನಾಯಕರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ವಯನಾಡ್​ ಹಾಗೂ ರಾಯ್​ಬರೇಲಿ ಕ್ಷೇತ್ರದಲ್ಲಿ ಗೆದ್ದಿದ್ದು ಯಾವ ಕ್ಷೇತ್ರದಲ್ಲಿ ಉಳಿಯಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ. ನಾವು ಆಡಳಿತ ಪಕ್ಷದಲ್ಲಿ ಇರಬೇಕೋ ಅಥವಾ ವಿಪಕ್ಷದಲ್ಲಿ ಇರಬೇಕೋ ಎಂಬ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಹೇಳಿದ್ದಾರೆ.

Continue Reading

ಕರ್ನಾಟಕ

Karnataka Election Results 2024: ಬೆಂ. ಗ್ರಾಮಾಂತರದಲ್ಲಿ ಸಹೋದರನಿಗೆ ಸೋಲು; ಜನರ ತೀರ್ಪಿನ ಬಗ್ಗೆ ಬೇರೆ ಮಾತಿಲ್ಲ ಎಂದ ಡಿಕೆಶಿ

Karnataka Election Results 2024: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಯಲ್ಲಿ ಸಹೋದರ, ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಸೋಲಿನ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

VISTARANEWS.COM


on

Karnataka election results 2024
Koo

ಬೆಂಗಳೂರು: ಜನರ ತೀರ್ಪನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಗೌರವ ನೀಡುತ್ತೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ವೈಯುಕ್ತಿಕವಾಗಿ ಡಾ.ಸಿ.ಎನ್. ಮಂಜುನಾಥ್‌ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲಿ‌ ಪಕ್ಷ ಗೆದ್ದಿಲ್ಲ, ವ್ಯಕ್ತಿ ಗೆದ್ದಿದ್ದಾರೆ‌. ಚುನಾವಣೆಯಲ್ಲಿ (Karnataka Election Results 2024) ಇಷ್ಟು ಅಂತರದಲ್ಲಿ ಸೋಲುತ್ತೇವೆ ಎಂದು ಭಾವಿಸಿರಲಿಲ್ಲ. ಜನ ಸಂದೇಶ ನೀಡಿದ್ದಾರೆ, ನಾವು ಅರ್ಥ ಮಾಡಿಕೊಳ್ಳುತ್ತೇವೆ. ಜನರ ತೀರ್ಪಿನ ಬಗ್ಗೆ ಬೇರೆ ಮಾತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಯಲ್ಲಿ (Lok Election Results 2024) ಸಹೋದರ, ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಸೋಲಿನ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಜನರ ತೀರ್ಪನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಗೌರವ ನೀಡುತ್ತೇನೆ. ದೇಶ ಮತ್ತು ರಾಜ್ಯದಲ್ಲಿ ಇರಬಹುದು, ಅಧಿಕಾರ ರಾಜಕೀಯಕ್ಕಿಂದ ವಿಶ್ವಾಸ ರಾಜಕೀಯ ಗೆದ್ದಿದೆ. ಭಾವನೆ ಸೋತಿದೆ, ಬದುಕು ಗೆದ್ದಿದೆ. ನಮ್ಮ ಸಾಧನೆ 1 ರಿಂದ 9 ಹೆಚ್ಚಾಗಿದೆ. ಎಲ್ಲಿ ಹೆಚ್ಚು ಕಮ್ಮಿ ಆಗಿದೆ ಎಂದು ನಾವು ಪರಿಶೀಲನೆ ಮಾಡುತ್ತೇವೆ. ಸೀಟ್ ಬೈ ಸೀಟ್ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮೋದಿ ಜನಪ್ರಿಯತೆ ಕುಗ್ಗಿದೆ. ಒಡಿಶಾ, ಬಿಹಾರದಲ್ಲಿ ಮೈತ್ರಿಕೂಟದಿಂದ ನಂಬರ್ ಆಗಿದೆ. ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖ ಭಂಗ ಆಗಿದೆ. ನನಗೆ ಹೇಗೆ ನಿರೀಕ್ಷೆ ಇರಲಿಲ್ಲವೋ ಹಾಗೇ ಬಿಜೆಪಿ ಮುಖ ಭಂಗ ಆಗಿದೆ. ನನ್ನ ಸಹೋದರ ಡಿ.ಕೆ.ಸುರೇಶ್ ಒಳ್ಳೆಯ ಕೆಲಸ ಮಾಡಿದ್ದರು, ಒಳ್ಳೆ ಅಭ್ಯರ್ಥಿ ಎಂದು ಮಂಜುನಾಥ ಗೆದಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮೇಲೆ ವಿಶ್ವಾಸ ಜನ ಹೆಚ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಗ್ರಾಮಾಂತರ ಕ್ಷೇತ್ರದಲ್ಲಿ ಒಳ್ಳೆಯ ಅಭ್ಯರ್ಥಿ ಹಾಕಿದ್ದಾರೆ. ಮಂಜುನಾಥ್ ಅವರು ಅಭ್ಯರ್ಥಿ ಆಗಿದ್ದು ಸಕ್ಸಸ್ ಫುಲ್ ಸ್ಟೋರಿ‌ ಎಂದು ಮೆಚ್ಚುಗೆ ಸೂಚಿಸಿದ ಅವರು, ರಾಹುಲ್ ಗಾಂಧಿ, ಖರ್ಗೆ ಸಾಹೇಬರು ಹಾಗೂ ಭಾರತ ಜೋಡೋ ಪಕ್ಷದ ಬಗ್ಗೆ ವಿಶ್ವಾಸ ಹೆಚ್ಚಿಸಿದೆ. ಕಳೆದ ಚುನಾವಣೆಯಲ್ಲಿಕ್ಕಿಂತ ಈಗ ಮತ ಪ್ರಮಾಣ ಹೆಚ್ಚಾಗಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡುವೆ ವ್ಯತ್ಯಾಸವಿದೆ. ಬಹಳ ಸಂತೋಷದಿಂದ ಜನ ತೀರ್ಪು ಸ್ವಾಗತ ಮಾಡುತ್ತೇನೆ. ವೈಯಕ್ತಿಕವಾಗಿ‌ ನನಗೆ ಕೆಲ ಅನುಮಾನಗಳಿವೆ. ನನ್ನ ಕ್ಷೇತ್ರದಲ್ಲಿ 50-60 ಸಾವಿರ ಲೀಡ್ ಬರಬೇಕಿತ್ತು ಹೆಚ್ಚೂ-ಕಮ್ಮಿ ಆಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ಗೆ 14 ರಿಂದ 15 ಸೀಟ್ ಬರುತ್ತದೆ ಎಂದು ಭಾವಿಸಿದ್ದೆವು. ಬೆಂಗಳೂರಿನಲ್ಲಿ ಒಂದು ಸ್ಥಾನ ಬರುತ್ತದೆ ಎಂದು ಭಾವಿಸಿದ್ದೆವು. ಕೆಲ ಸೆಕ್ಷನ್ ಶಿಫ್ಟ್ ಆಗಿದೆ ಎಂದ ಅವರು, ಎಕ್ಸಿಟ್ ಪೋಲ್ ಮೇಲೆ ನಂಬಿಕೆ ಇಲ್ಲ ಎಂದು ಮೊದಲೇ ಹೇಳಿದ್ದೆ. ಡಬಲ್ ಫಿಗರ್ ಕೊನೆಯವರೆಗೂ ಇತ್ತು. ಕೆಲಸಕ್ಕೆ ಮತ ಬಂದಿಲ್ಲ ಎಂದು ಬೇಸರ ಹೊರಹಾಕಿದರು.

ಇದನ್ನೂ ಓದಿ | Karnataka Election Results 2024: ಮೈಸೂರಿನಲ್ಲಿ ಮೈತ್ರಿ ಮುಂದೆ ಮಂಡಿಯೂರಿದ ಸಿದ್ದರಾಮಯ್ಯ ತಂತ್ರಗಾರಿಕೆ

ಬಿಜೆಪಿಗೆ ಮೆಜಾರಿಟಿ ಬಂದಿಲ್ಲ. ಅವರು ನೆರೆಟೀವ್ ಸೃಷ್ಟಿ ಮಾಡಿದರು. ಆದರೆ, ರಾಗಾ, ಖರ್ಗೆ, ಪ್ರಿಯಾಂಕಾ ಗಾಂಧಿ ಕಷ್ಟಪಟ್ಟು ಪಕ್ಷ ಸಂಘಟನೆ ಮಾಡಿದ್ದಾರೆ. ಕೇಂದ್ರದಲ್ಲಿ ನಮ್ಮ ನಾಯಕರು ಸಭೆ ಮಾಡುತ್ತಿದ್ದಾರೆ. ನೋಡೋಣ ಏನಾಗುತ್ತದೋ ಎಂದಿದ್ದಾರೆ.

Continue Reading
Advertisement
election results 2024 ayodhya
ಪ್ರಮುಖ ಸುದ್ದಿ3 mins ago

Election Results 2024: ರಾಮ ಮಂದಿರ ನಿರ್ಮಿಸಿದರೂ ಅಯೋಧ್ಯೆಯಲ್ಲಿ ಬಿಜೆಪಿಗೆ ದಾರುಣ ಸೋಲು!

Shorapur Election Result 2024
ಕರ್ನಾಟಕ6 mins ago

Shorapur Election Result 2024: ಸುರಪುರದಲ್ಲಿ ಕಾಂಗ್ರೆಸ್‌ನ ರಾಜಾ ವೇಣುಗೋಪಾಲ ನಾಯಕ್‌ಗೆ ಜಯ

Jumka Bangles Fashion
ಫ್ಯಾಷನ್9 mins ago

Jumka Bangles Fashion: ಡಿಸೈನರ್‌ ಬಳೆಗಳಿಗೆ ಜುಮ್ಕಾ ಅಲಂಕಾರ!

Kharge calls Modi's defeat, says 'we saved Constitution': Rahul Gandhi
ಪ್ರಮುಖ ಸುದ್ದಿ10 mins ago

Election Results 2024 : ಮೋದಿಯ ಸೋಲು ಎಂದ ಖರ್ಗೆ, ಸಂವಿಧಾನ ಉಳಿಸಿದೆವು ಎಂದ ರಾಹುಲ್​ ಗಾಂಧಿ

Karnataka election results 2024
ಕರ್ನಾಟಕ22 mins ago

Karnataka Election Results 2024: ಬೆಂ. ಗ್ರಾಮಾಂತರದಲ್ಲಿ ಸಹೋದರನಿಗೆ ಸೋಲು; ಜನರ ತೀರ್ಪಿನ ಬಗ್ಗೆ ಬೇರೆ ಮಾತಿಲ್ಲ ಎಂದ ಡಿಕೆಶಿ

NEET UG Results 2024
ದೇಶ34 mins ago

NEET UG Results 2024: ನೀಟ್‌ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಹೀಗೆ ಮಾಡಿ

Election Results 2024
ದೇಶ44 mins ago

Election results 2024: ಜೈಲಿನಿಂದಲೇ ಕಣಕ್ಕಿಳಿದು ಜಯಭೇರಿ ಬಾರಿಸಿದ ಪ್ರತ್ಯೇಕತಾವಾದಿಗಳು; ಇವರ ಹಿನ್ನೆಲೆ ಏನು?

Election Results 2024
ದೇಶ49 mins ago

Election Results 2024: 10 ಲಕ್ಷ ಮತಗಳಿಂದ ಗೆದ್ದು ಇತಿಹಾಸ ಸೃಷ್ಟಿಸಿದ ಬಿಜೆಪಿಯ ಶಂಕರ್‌ ಲಾಲ್ವಾನಿ! ಗರಿಷ್ಠ ವೋಟುಗಳಿಂದ ಗೆದ್ದವರ ಮಾಹಿತಿ ಇಲ್ಲಿದೆ

India vs Ireland
ಕ್ರೀಡೆ51 mins ago

India vs Ireland: ರೋಹಿತ್​ ಜತೆ ಇನಿಂಗ್ಸ್​ ಆರಂಭಿಸುವುದು ಯಾರು? ರೇಸ್​ನಲ್ಲಿ ಕೊಹ್ಲಿ, ಜೈಸ್ವಾಲ್​!

Actor Chetan Ahimsa says NDA is needed for BJP to come to power
Lok Sabha Election 202451 mins ago

Actor Chetan Ahimsa: ಮತ್ತೆ ಮೋದಿಯೇ ಪ್ರಧಾನಿ, ಆದರೆ ಬಿಜೆಪಿಗಿದು ಪಾಠ ಎಂದ ನಟ ಚೇತನ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ12 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 day ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ7 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌