Horoscope Today | ಸೂರ್ಯ ಗ್ರಹಣದ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ - Vistara News

ಪ್ರಮುಖ ಸುದ್ದಿ

Horoscope Today | ಸೂರ್ಯ ಗ್ರಹಣದ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

ಶುಭಕೃತ ನಾಮ ಸಂವತ್ಸರ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Horoscope Today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಇಂದಿನ ಪಂಚಾಂಗ (25-10-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ.

ತಿಥಿ: ಅಮಾವಾಸ್ಯೆ 16:17 ವಾರ: ಮಂಗಳವಾರ
ನಕ್ಷತ್ರ: ಚಿತ್ತಾ 14:15 ಯೋಗ: ವಿಷ್ಕುಂಭ 12:30
ಕರಣ: ನಾಗವಾನ್ 16:17 ದಿನ ವಿಶೇಷ: ದೀಪಾವಳಿ ಅಮಾವಾಸ್ಯೆ, ಗ್ರಸ್ತಾಸ್ತ ಸೂರ್ಯಗ್ರಹಣ
ಅಮೃತಕಾಲ: ಬೆಳಗ್ಗೆ 07 ಗಂಟೆ 59 ನಿಮಿಷದಿಂದ 09 ಗಂಟೆ 34 ನಿಮಿಷದವರೆಗೆ.

ಸೂರ್ಯೋದಯ: 06: 11     ಸೂರ್ಯಾಸ್ತ: 05: 56

ರಾಹುಕಾಲ : ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ  (Horoscope Today)

Horoscope Today

ಮೇಷ: ನಕಾರಾತ್ಮಕ ಆಲೋಚನೆಗಳು ನಿಮಗೆ ಆಶಾ ಭಂಗ ಮಾಡುವ ಸಾಧ್ಯತೆ. ಮಕ್ಕಳ ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ದಿನದ ಮಟ್ಟಿಗೆ ಖರ್ಚು. ಪ್ರಯಾಣದ ಸಾಧ್ಯತೆ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ವೃಷಭ: ಹಣದ ಹೂಡಿಕೆ ಕುರಿತು ಆಲೋಚನೆ. ನಿಮ್ಮ ಹಾಸ್ಯದ ಮನೋಭಾವ ಇತರರನ್ನು ಆಕರ್ಷಿಸುತ್ತದೆ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ಮಿಥುನ: ಆರೋಗ್ಯದ ಕುರಿತು ಕಾಳಜಿ ವಹಿಸಿ. ಆರ್ಥಿಕ ಪ್ರಗತಿ ಸಾಧಾರಣ. ಸ್ನೇಹಿತರು,ಆಪ್ತ ಸಂಬಂಧಿಕರಿಂದ ಮಾರ್ಗದರ್ಶನ, ಉಡುಗೊರೆ ಸಿಗುವ ಸಾಧ್ಯತೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸೌಜನ್ಯದಿಂದ ವರ್ತಿಸಿ. ಯಾವುದೇ ಆತುರದ ಮಾತುಗಳನ್ನು ಆಡುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

Horoscope Today

ಕಟಕ: ನ್ಯಾಯಲಯದಲ್ಲಿರುವ ವ್ಯಾಜ್ಯ ಪ್ರಕರಣಗಳು ನಿಮಗೆ ವಿಜಯವನ್ನು ತಂದುಕೊಡಲಿವೆ. ಒತ್ತಡದ ಹೊರತಾಗಿಯೂ ಆರೋಗ್ಯ ಪರಿಪೂರ್ಣ. ಸಂಗಾತಿಯ ಮನಸ್ಸಿನ ಭಾವನೆಗಳನ್ನ ಅರ್ಥ ಮಾಡಿಕೊಳ್ಳವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ಸಿಂಹ: ಮಾನಸಿಕ ಒತ್ತಡದಿಂದ ಹೊರಬರಲು ವ್ಯಸನಗಳ ಮೊರೆ ಹೋಗುವುದು ಬೇಡ, ಬದಲಾಗಿ ಕ್ಷೇತ್ರ ದರ್ಶನ, ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವುದು ಸೂಕ್ತ. ಆರೋಗ್ಯ ಮಧ್ಯಮ. ವ್ಯಾಪಾರ ವ್ಯವಹಾರ ಹಾಗೂ ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಬಿಡುವಿಲ್ಲದ ಕಾರ್ಯ ಚಟುವಟಿಕೆಯ ಮಧ್ಯೆಯೂ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಭೂ ಸಂಬಂಧಿ, ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಪ್ರಗತಿ, ಲಾಭವಾಗಲಿದೆ. ಸಂಗಾತಿಯೊಂದಿಗೆ ಮುಖ್ಯ ವಿಷಯಗಳ ಕುರಿತು ಚರ್ಚೆ. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯ ಪರಿಪೂರ್ಣ. ಪ್ರಯಾಣ ಮಾಡುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

Horoscope Today

ತುಲಾ: ಹಿರಿಯರ ಮಾರ್ಗದರ್ಶನ ಸಿಗಲಿದೆ, ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದಲ್ಲಿ ಅನೇಕ ಬದಲಾವಣೆಗಳನ್ನು ಕಾಣುವ ಸಾಧ್ಯತೆ. ಕುಟುಂಬದ ಆಪ್ತರೊಂದಿಗೆ ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಆರೋಗ್ಯ ಮಧ್ಯಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

Horoscope Today

ವೃಶ್ಚಿಕ: ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಘಾಸಿ ಮಾಡುವ ಸಾಧ್ಯತೆ. ಆಲಸ್ಯದಿಂದ ಕಾರ್ಯ ಮುಂದೂಡುವುದು ಬೇಡ. ಅಮೂಲ್ಯ ವಸ್ತುಗಳ ಕುರಿತಾಗಿ ಜಾಗ್ರತೆ ಇರಲಿ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ವಹಿಸುವುದು ಅಗತ್ಯ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆ. ಅತಿಯಾದ ಒತ್ತಡ ಉಂಟು ಮಾಡುವ ವಿಚಾರಗಳಿಂದ ದೂರ ಇರಿ. ಕುಟುಂಬದ ಆಪ್ತರಿಂದ ಶುಭ ಸುದ್ದಿ ಸಿಗುವ ಸಾಧ್ಯತೆ. ಕುಟುಂಬದ ಸದಸ್ಯರ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ. ಆರೋಗ್ಯದ ವ್ಯತ್ಯಾಸದಿಂದ ದಿನದ ಮಟ್ಟಿಗೆ ಖರ್ಚು ಮಾಡುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

Horoscope Today

ಮಕರ: ನೀವು ನಿಮ್ಮ ಹಾಸ್ಯ ಪ್ರವೃತ್ತಿಯಿಂದ ಬರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಕುಟುಂಬದವರು ನಿಮ್ಮ ಬಗೆಗೆ ಹೆಚ್ಚು ಕಾಳಜಿ ವಹಹಿಸುವರು. ಆರೋಗ್ಯ‌ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ಕುಂಭ: ಶೀಘ್ರ ಕೋಪದಿಂದ ಅಪಾಯ ತಂದುಕೊಳ್ಳುವುದು ಬೇಡ. ಅತಿಯಾದ ಉತ್ಸಾಹದಿಂದ ಅತಿರೇಕದ ಮಾತುಗಳನ್ನು ಆಡುವುದು ಸರಿಯಲ್ಲ, ಇದೇ ಅಪಾಯಕ್ಕೆ ಕಾರಣವಾದೀತು ಎಚ್ಚರಿಕೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟು ಮಾಡುವ ಸಾಧ್ಯತೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

Horoscope Today

ಮೀನ: ಆಹಾರ ಕ್ರಮದಲ್ಲಿನ ವ್ಯತ್ಯಾಸದಿಂದ ಆರೋಗ್ಯ ಹದಗೆಡುವ ಸಾಧ್ಯತೆ. ಸಂಗಾತಿಯ ಮಾತುಗಳು ಹಿತವೆನಿಸಿದರೂ, ಅವರ ಮಾತುಗಳಿಗೆ ಮನ್ನಣೆ ಸಿಗುವುದಿಲ್ಲ. ಆರೋಗ್ಯ ಹಾಗೂ ಹಣಕಾಸಿನ ವಿಷಯದಲ್ಲಿ ಸಾಮಾನ್ಯ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | Solar Eclipse 2022 | ಗ್ರಹಣದಿಂದ ಯಾವ ರಾಶಿಗೆ ಶುಭ? ಯಾವೆಲ್ಲಾ ರಾಶಿಗೆ ಅಶುಭ? ಪರಿಹಾರಕ್ಕೆ ಯಾವ ಮಂತ್ರ ಪಠಿಸಬೇಕು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

VISTARANEWS.COM


on

ದ್ರಾವಿಡ ದಂಗಲ್‌ನಲ್ಲಿ ಅಚ್ಚರಿಯ ಫಲಿತಾಂಶದ ಸಾಧ್ಯತೆಯೊಂದನ್ನು ಎಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಟಿಸಿದೆ. ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆ ನಾಯಕ ವಿಜಯ್‌ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ತಮಿಳುನಾಡಿನ ಎಲ್ಲಾ ಸಮೀಕ್ಷೆಗಳು ಡಿಎಂಕೆ ಅಧಿಕಾರಕ್ಕೇರಲಿದೆ ಎಂದು ಹೇಳುತ್ತಿರುವಾಗಲೇ, ಆಕ್ಸಿಸ್‌ ಮೈ ಇಂಡಿಯಾ ಮಾತ್ರ ಈ ಸಲ ವಿಜಯ್‌ ನಿಜವಾದ ಜನನಾಯಗನ್‌ ಎಂದಿದೆ.
ತಮಿಳುನಾಡಿನ ಸಾರಥ್ಯ ವಿಜಯ್‌ಗೆ?
ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆಗೆ 98 ರಿಂದ 120 ಸೀಟುಗಳು ಸಿಗಲಿವೆ. ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ 92ರಿಂದ 110 ಹಾಗೂ 22ರಿಂದ 32 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲುವ ಸಾಧ್ಯತೆಗಳಿವೆ. 234 ಸದಸ್ಯಬಲದ ತಮಿಳುನಾಡು ಅಸೆಂಬ್ಲಿಯಲ್ಲಿ 117 ಸೀಟು ಗೆಲ್ಲುವ ಪಕ್ಷದ ನಾಯಕ ಮುಖ್ಯಮಂತ್ರಿ ಆಗ್ತಾರೆ. ಸಮೀಕ್ಷೆ ಪ್ರಕಾರ ಟಿವಿಕೆ ಗರಿಷ್ಠ 120 ಸೀಟು ಗೆಲ್ಲುವ ಸಾಧ್ಯತೆಗಳಿವೆ.̇̇̇
ವೋಟ್‌ ಶೇರ್‌ನಲ್ಲೂ ಟಿವಿಕೆ ದಿಗ್ವಿಜಯ?
ಆಕ್ಸಿಸ್‌ ಮೈ ಇಂಡಿಯಾ ವೋಟ್‌ ಶೇರ್‌ ಸಮೀಕ್ಷೆಯನ್ನೂ ಪ್ರಕಟಿಸಿದೆ. ಅದರ ಪ್ರಕಾರ ಟಿವಿಕೆಗೆ ಶೇಕಡಾ 35ರಷ್ಟು ಮತ ಸಿಗಲಿದೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೂ ಶೇ. 35ರಷ್ಟು ವೋಟ್‌ ಶೇರ್‌ ಸಿಗಲಿದೆ. ಎನ್‌ಡಿಎಗೆ 23 ಶೇಕಡಾ ಮತ ಸಿಗುವ ಸಾಧ್ಯತೆಗಳಿವೆ.
ಸಿಎಂ ಸ್ಥಾನಕ್ಕೆ ವಿಜಯ್‌ ಬೆಸ್ಟ್‌?
ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಉತ್ತಮ ಅಭ್ಯರ್ಥಿ ಎಂಬ ಪ್ರಶ್ನೆಯನ್ನೂ ಆಕ್ಸಿಸ್‌ ಮೈ ಇಂಡಿಯಾ ಜನರ ಮುಂದಿಟ್ಟಿದೆ. ಅದರ ಪ್ರಕಾರ ಶೇ. 37ರಷ್ಟು ಮತದಾರರು ವಿಜಯ್‌ ಪರ ಒಲವು ತೋರಿದ್ದಾರೆ. ಶೇ. 35ರಷ್ಟು ಮಂದಿ ಮಾತ್ರ ಸ್ಟಾಲಿನ್‌ ಬೆಸ್ಟ್‌ ಅಂದಿದ್ದಾರೆ.
ವಿಜಯ್‌ಗೆ ಯುವ ಸಮೂಹದ ಬೆಂಬಲ
ಸರ್ವೇ ಪ್ರಕಾರ ಶೇ. 68ರಷ್ಟು ಹೊಸ ವೋಟರ್ಸ್‌ ವಿಜಯ್‌ಗೆ ಬೆಂಬಲ ನೀಡಿದ್ದಾರೆ. 20ರಿಂದ 29 ವಯೋಮಾನದ ಶೇ. 59ರಷ್ಟು ಯುವಕರು ಟಿವಿಕೆಗೆ ಜೈ ಎಂದಿದ್ದಾರೆ. 30-39 ವಯೋಮಾನದ ಶೇ. 45 ಮಂದಿ ದಳಪತಿಯನ್ನು ದಡಮುಟ್ಟಿಸಿದ್ದಾರೆ ಎನ್ನುತ್ತಿದೆ ಸಮೀಕ್ಷೆ.

Continue Reading

Latest

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

VISTARANEWS.COM


on

ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುವ ಮೂಲಕ ನಾಯಕತ್ವ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಕಲಬುರಗಿಯಲ್ಲಿ ಇಂದು ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಸಿಎಂ ಇದ್ದಾರೆ. ಹೀಗಾಗಿ ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಭವಿಷ್ಯದಲ್ಲಿ ಅಂಥ ಪರಿಸ್ಥಿತಿ ಬಂದರೆ ನಾವು ಎಲ್ಲರೂ ಕೂಡಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಏನು ಹೇಳುತ್ತಾರೆ ಎನ್ನುವುದಕ್ಕಿಂತ ಪಕ್ಷದ ಐಡಿಯಾಲಜಿ ಮತ್ತು ಹಲವು ವರ್ಷಗಳ ಪರಿಶ್ರಮ ಮುಖ್ಯ ಎಂದು ಹೇಳಿಕೆ ನೀಡಿದ್ದಾರೆ. ಪಕ್ಷದ ಮಹತ್ವದ ನಿರ್ಧಾರಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

Continue Reading

Latest

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

VISTARANEWS.COM


on

ಬೆಂಗಳೂರು: ಇಂದು ಸಂಜೆ ನಗರದಲ್ಲಿ ಸುರಿದ ಭಾರಿ ಮಳೆಗೆ ಶಿವಾಜಿನಗರ ಬಸ್‌ ನಿಲ್ದಾಣದ ಸಮೀಪವಿರುವ ಬೌರಿಂಗ್‌ ಆಸ್ಪತ್ರೆಯ ಕಾಂಪೌಂಡ್‌ ಗೋಡೆ ಕುಸಿದು 7 ಜನ ಸಾವನ್ನಪ್ಪಿದ್ದಾರೆ. ಮೃತರು ಬೀದಿಬದಿ ವ್ಯಾಪಾರಿಗಳು ಎಂದು ತಿಳಿದುಬಂದಿದೆ. 11 ಜನ ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷಗಳಡಿ ಮತ್ತಷ್ಟು ಜನ ಸಿಲುಕಿರುವ ಶಂಕೆಯಿದ್ದು, ರಕ್ಷಣಾಕಾರ್ಯ ಮುಂದುವರೆಸಲಾಗಿದೆ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Continue Reading

ಕರ್ನಾಟಕ

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

VISTARANEWS.COM


on

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

ಬೆಂಗಳೂರು: ಶಾಲೆಗಳಲ್ಲಿ ಇನ್ನು ಮುಂದೆ ಅಶ್ಲೀಲ ಹಾಡು ಮತ್ತು ಅಸಭ್ಯ ನೃತ್ಯಗಳಿಗೆ ಅವಕಾಶ ನೀಡದಂತೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ದ್ವಂದ್ವಾರ್ಥದ ಸಿನಿಮಾ ಹಾಡು ಹಾಗೂ ನೃತ್ಯಗಳನ್ನು ಪ್ರದರ್ಶಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಶಾಲಾ ಕಾರ್ಯಕ್ರಮಗಳಲ್ಲಿ ಕೇವಲ ಜಾನಪದ, ದೇಶಭಕ್ತಿ ಗೀತೆಗಳು, ಪರಿಸರ ಕಾಳಜಿಯ ಹಾಡುಗಳು ಮತ್ತು ಸಮಾಜಮುಖಿ ಚಿಂತನೆಯುಳ್ಳ ಸಂಗೀತಕ್ಕೆ ಮಾತ್ರ ಆದ್ಯತೆ ನೀಡಬೇಕು. ನೃತ್ಯದ ಸಮಯದಲ್ಲಿ ವಿದ್ಯಾರ್ಥಿಗಳು ಧರಿಸುವ ಉಡುಪುಗಳು ಕೂಡ ಸಭ್ಯವಾಗಿರಬೇಕು ಹಾಗೂ ಅರೆಬರೆ ವಸ್ತ್ರಗಳನ್ನು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮನರಂಜನೆಯ ಹೆಸರಿನಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಅಥವಾ ಮಕ್ಕಳ ನೈತಿಕ ಹಾಗೂ ಮಾನಸಿಕ ಆರೋಗ್ಯ ಕೆಡಿಸುವ ಯಾವುದೇ ಹಾಡುಗಳನ್ನು ಬಳಸದಂತೆ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ನಿಯಮಗಳನ್ನು ಜಾರಿಗೆ ತರುವ ಸಂಪೂರ್ಣ ಜವಾಬ್ದಾರಿಯನ್ನು ಶಾಲಾ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಗೆ ವಹಿಸಲಾಗಿದೆ.

Continue Reading
Advertisement
Latest5 minutes ago

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

Latest2 hours ago

ಪಂಚರಾಜ್ಯ ಚುನಾವಣಾ ಫಲಿತಾಂಶ: “ಎಕ್ಸಿಟ್ ಪೋಲ್‌ಗಿಂತ ಉತ್ತಮ ಪ್ರದರ್ಶನ ನಿರೀಕ್ಷೆ” – ಖರ್ಗೆ

Latest2 hours ago

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

Latest3 hours ago

ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಇಂದು ಮತ್ತು ನಾಳೆ ಆಲಿಕಲ್ಲು ಮಳೆ ಸಾಧ್ಯತೆ

Latest20 hours ago

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

Latest21 hours ago

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ

Latest21 hours ago

ಜಪಾನ್‌ಗೆ ಲಗ್ಗೆ ಇಡಲು ಸಜ್ಜಾದ ʼಧುರಂಧರ್’

bigbreaking21 hours ago

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಾ ಮೇ ಕ್ಲೈಮ್ಯಾಕ್ಸ್‌?

Latest23 hours ago

ಡಾಲಿ ಧನಂಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ದಂಪತಿ!

Latest1 day ago

ಶಿಸ್ತು ಮರೆತರಾ ರಿಯಾನ್ ಪರಾಗ್? ಕಾನೂನು ಸಂಕಷ್ಟಕ್ಕೆ ಸಿಲುಕುತ್ತಾರಾ ರಾಜಸ್ಥಾನ ರಾಯಲ್ಸ್ ಆಟಗಾರ?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌