Dakshinayana 2023 Date Timings Rituals and Significance in kannada Dakshinayana 2023 : ಜು.17 ರಿಂದ ದಕ್ಷಿಣಾಯನ ಶುರು; ಏನಿದರ ಮಹತ್ವ? - Vistara News

ಧಾರ್ಮಿಕ

Dakshinayana 2023 : ಜು.17 ರಿಂದ ದಕ್ಷಿಣಾಯನ ಶುರು; ಏನಿದರ ಮಹತ್ವ?

ಜು.17 ರಂದು ಕರ್ಕ ಸಂಕ್ರಮಣ ಸಂಭವಿಸಲಿದ್ದು, ದಕ್ಷಿಣಾಯನ (Dakshinayana 2023) ಆರಂಭವಾಗಲಿದೆ. ದಕ್ಷಿಣಾಯನದ ಮಹತ್ವವೇನು? ಆಚರಣೆ ಹೇಗೆ? ಮಾಹಿತಿ ಇಲ್ಲಿದೆ.

VISTARANEWS.COM


on

lord surya dakshinayana 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮಗೆಲ್ಲರಿಗೂ ತಿಳಿದಿರುವಂತೆ ಸೂರ್ಯನು ಪ್ರತಿ ತಿಂಗಳು ಒಂದೊಂದು ರಾಶಿಯಲ್ಲಿ ಸಂಚರಿಸುತ್ತಾನೆ. ಚಾಂದ್ರಮಾನದ ಪ್ರಕಾರ ಸೂರ್ಯನು ಹೀಗೆ ಸಂಚರಿಸುವುದನ್ನು ಒಂದು ಮಾಸವೆಂದು ಪರಿಗಣಿಸಿ, ಮಾಸಕ್ಕೆ ಒಂದೊಂದು ಹೆಸರಿಟ್ಟು ಕರೆಯಲಾಗುತ್ತದೆ. ಚೈತ್ರ, ವೈಶಾಖ… ಹೀಗೆ 12 ಮಾಸಗಳು.

ಹಾಗೆಯೇ ಸೌರಮಾನದ ಪ್ರಕಾರ ಸೂರ್ಯನ ಸಂಚಾರವು ಒಂದೊಂದು ರಾಶಿಯಲ್ಲಿ ಆಗುತ್ತಿದ್ದಂತೆಯೇ ಆಯಾ ರಾಶಿಯ ಹೆಸರಿನಲ್ಲಿ ಆ ಮಾಸವನ್ನು ಕರೆಯಲಾಗುತ್ತದೆ. ಉದಾಹರಣೆಗೆ ಮೇಷ ಮಾಸ, ವೃಷಭ ಮಾಸ, ಮಿಥುನ….ಹೀಗೆ. ಆರು ತಿಂಗಳಿಗೊಮ್ಮೆ ಪಥ ಬದಲಿಸುವ ಸೂರ್ಯ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನು ಮಕರ ಸಂಕ್ರಮಣ ವೆಂತಲೂ. ಮಿಥುನರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸುವುದನ್ನು ಕಾರ್ಕಟಕ ಸಂಕ್ರಮಣ ವೆಂತಲೂ ಕರೆಯುತ್ತಾರೆ. ಮಕರ ಸಂಕ್ರಮಣದ ನಂತರ ಸೂರ್ಯ ಉತ್ತರಕ್ಕೆ ಸಾಗುವುದನ್ನು ಉತ್ತರಾಯಣ ಎಂದು, ಕಾರ್ಕಟಕ ಸಂಕ್ರಮಣದ ನಂತರ ದಕ್ಷಿಣಾಯಣ (Dakshinayana 2023) ಎಂದು ಕರೆಯುತ್ತೇವೆ.

ಕಳೆದ ಆರು ತಿಂಗಳಿಂದ ಉತ್ತರ ದಿಕ್ಕಿನತ್ತ ಸಾಗಿದ್ದ ಸೂರ್ಯ ತನ್ನ ಈಗ ತನ್ನ ಪಥವನ್ನು ಬದಲಿಸಿ ದಕ್ಷಿಣದತ್ತ ಸಾಗುತ್ತಾನೆ. ಹಾಗಾಗಿ ದಕ್ಷಿಣಾಯನ ಕಾಲ ಆರಂಭವಾಗುತ್ತಿದೆ.

ಎಂದಿನಿಂದ ದಕ್ಷಿಣಾಯನ?

ಉತ್ತರಾಯಣ ಸಾಮಾನ್ಯವಾಗಿ ಪ್ರತಿ ವರ್ಷದ ಜನವರಿ 14, 15ರಂದು ಬರುತ್ತದೆ. ದಕ್ಷಿಣಾಯನ ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ 15, 16 ಅಥವಾ 17 ರಂದು ಬರುತ್ತದೆ. ದಕ್ಷಿಣಾಯನ ಹಾಗೂ ಉತ್ತರಾಯನವನ್ನು ಯಾವುದೇ ತಿಥಿಗಳ ಆಧಾರದಲ್ಲಿ ಲೆಕ್ಕಾಚಾರ ಹಾಕಿ ಹೇಳಲಾಗುವುದಿಲ್ಲ. ಸೂರ್ಯನ ಸಂಚಾರದ ಲೆಕ್ಕಾಚಾರದಲ್ಲಿ ಹೇಳಲಾಗುತ್ತದೆ. ಸೂರ್ಯನು ಭೂಮಧ್ಯ ರೇಖೆಯ ಉತ್ತರದಲ್ಲಿ ಕಾಣಿಸಿಕೊಂಡಾಗ ಅದನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಹಾಗೇ ಸೂರ್ಯನು ಭೂಮಧ್ಯ ರೇಖೆಯ ದಕ್ಷಿಣಕ್ಕೆ ಪ್ರಯಾಣಿಸಿದಾಗ ಅದನ್ನು ದಕ್ಷಿಣಾಯನ ಎಂದು ಕರೆಯಲಾಗುತ್ತದೆ. ಸೂರ್ಯನು ಕಟಕ ರಾಶಿ ಪ್ರವೇಶಿಸುತ್ತಿದ್ದಂತೆಯೇ ದಕ್ಷಿಣಾಯನ ಆರಂಭವಾಗುತ್ತದೆ.

ಸೂರ್ಯನ ಈ ಉತ್ತರಾಯಣ ಮತ್ತು ದಕ್ಷಿಣಾಯಣ ಚಲನೆಯಿಂದಾಗಿ ಹಗಲು ಮತ್ತು ರಾತ್ರಿಯ ವೇಳೆಯಲ್ಲಿ ಬದಲಾವಣೆಗಳಾಗಲಿವೆ. ಉತ್ತರಾಯನದ ಸಮಯದಲ್ಲಿ ಹಗಲು ದೀರ್ಘ ವಾಗಿರುತ್ತದೆ ಮತ್ತು ರಾತ್ರಿಯ ಅವಧಿ ಕಡಿಮೆಯಾಗಿರುತ್ತದೆ. ಆದರೆ ದಕ್ಷಿಣಾಯನದ ಸಮಯದಲ್ಲಿ ರಾತ್ರಿಯ ಅವಧಿ ಹೆಚ್ಚಾಗಿರುತ್ತದೆ ಮತ್ತು ಹಗಲಿನ ವೇಳೆ ಕಡಿಮೆಯಾಗಿರುತ್ತದೆ.

ಈ ವರ್ಷ ದಕ್ಷಿಣಾಯನವು ಜುಲೈ 17 ರಂದು ಆರಂಭವಾಗಲಿದೆ. ಸೂರ್ಯನು ಸಂಜೆ 5.11ಕ್ಕೆ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ 20 ಘಳಿಗೆ ಮುನ್ನವೇ ಪರ್ವಕಾಲ ಆರಂಭವಾಗುತ್ತದೆ. ದಕ್ಷಿಣಾಯನ ಪುಣ್ಯಕಾಲವು ಮಧ್ಯಾಹ್ನ 12 ರಿಂದ ಆರಂಭವಾಗಲಿದೆ ಎಂದು ಕೆಲ ಪಂಚಾಂಗದಲ್ಲಿ ಹೇಳಿದ್ದರೆ, ಇನ್ನು ಕೆಲವು ಪಂಚಾಂಗದ ಪ್ರಕಾರ ದಕ್ಷಿಣಾಯನ ಪುಣ್ಯಕಾಲವು ಬೆಳಗ್ಗೆ 9.11 ರಿಂದ ಸಂಜೆ 5.11ರ ವರೆಗೆ ಇರಲಿದೆ.

ಧಾರ್ಮಿಕವಾಗಿ ಈ ಸಂಕ್ರಮಣದ ನಂತರ ದೇವತೆಗಳಿಗೆ ರಾತ್ರಿ ಕಾಲ ಆರಂಭವಾಗುತ್ತದೆ. ಮಾನವರಿಗೆ ಒಂದು ವರ್ಷವಾದರೆ, ಅದು ದೇವತೆಗಳಿಗೆ ಒಂದು ದಿನಕ್ಕೆ ಸಮ. ಉತ್ತರಾಯನ ಹಗಲಾದರೆ, ದಕ್ಷಿಣಾಯನ ರಾತ್ರಿಯ ಸಮಯ. ಸಾಮಾನ್ಯವಾಗಿ ಈ ದಕ್ಷಿಣಾಯನ ಪುಣ್ಯಕಾಲವನ್ನು ಸಂಪ್ರದಾಯವಾದಿಗಳು ಮಾತ್ರ ಆಚರಿಸುತ್ತಾರೆ. ಜಪ ಮಾಡುವುದು, ತರ್ಪಣ ನೀಡುವುದು ಮಾಡುತ್ತಾರೆ. ಹೆಚ್ಚಾಗಿ ಸಾಮಾನ್ಯ ಜನರು ಯಾವ ಆಚರಣೆಯನ್ನೂ ಮಾಡುವುದಿಲ್ಲ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ವಿಶೇಷವಾದ ದಿನ

ಕಾರ್ಕಟಕ ಸಂಕ್ರಮಣವು ಬಹಳ ವಿಶೇಷವಾದ ದಿನ. ಅಮಾವಾಸ್ಯೆಯಂದು ಈ ಸಂಕ್ರಮಣ ಸಂಭವಿಸುತ್ತಿದೆ. ಈ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಅಲ್ಲದೆ, ದಿವಸೀ ಅಮಾವಾಸ್ಯೆ, ನಾಗನ-ಭೀಮನ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಇಂದು ದೀಪಸ್ತಂಭಗೌರೀ ವತ್ರ, ಸೋಮವತೀವ್ರತ, ಮಂಗಳಗೌರೀ ವ್ರತ (ನವ ವಧುಗಳಿಂದ) ಆಚರಿಸಲಾಗುತ್ತದೆ.

ಈ ದಿನ ಪದ್ಮಕಯೋಗವಿದ್ದು, ಈ ದಿನ ದಾನ, ಹೋಮಾದಿಗಳನ್ನು ಆಚರಿಸುವುದರಿಂದ ನೂರಾರು ಗ್ರಹಣಗಳಲ್ಲಿ ಮಾಡಿದ ಕಾರ್ಯದ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ : Prerane : ದೇವರ ಅವತಾರ; ಏನಿದೆ ಇದರ ಹಿಂದಿನ ವಿಚಾರ?

ಪುಣ್ಯ ಸಂಚಯನದ ಕಾಲ

ದಕ್ಷಿಣಾಯನವನ್ನು ಪುಣ್ಯ ಸಂಚಯನಕಾಲ ಎಂದು ಕರೆಯಲಗಿದೆ. ಈ ಸಮಯದಲ್ಲಿ ವ್ರತಗಳ ಆಚರಣೆ ಹೆಚ್ಚು. ಚಾತುರ್ಮಾಸ್ಯ ಆಚರಣೆಯ ಜತೆ ಹಬ್ಬ ಹರಿದಿನಗಳ ಸಡಗರವೂ ಇರುತ್ತದೆ. ಈ ಪುಣ್ಯ ಪರ್ವಕಾಲದಲ್ಲಿ ಎಷ್ಟು ಶ್ರದ್ದೆಯಿಂದ ಪೂಜೆ ಪುನಸ್ಕಾರಗಳನ್ನು ನಾವು ಮಾಡುತ್ತೇವೆಯೋ ಅದಕ್ಕೂ ಹೆಚ್ಚಿನ ಫಲ ದೊರೆಯಲಿದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಶುಭಕಾರ್ಯಗಳಿಗೆ ಪ್ರಶಸ್ತವಾದದ್ದು ಉತ್ತರಾಯಣವಾದರೆ ತರ್ಪಣಾದಿಗಳಿಗೆ ಪ್ರಶಸ್ತವಾದದ್ದು ದಕ್ಷಿಣಾಯನ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಕಾಲದಲ್ಲಿ ಪುಣ್ಯಸ್ನಾನ, ಪೂಜೆ, ಜಪ, ದಾನಗಳನ್ನು ಮಾಡಿದರೆ, ತರ್ಪಣ ಕೊಟ್ಟರೆ ಸಮಸ್ತ ಪಾಪಗಳು ದೂರವಾಗುತ್ತವೆ, ಪುಣ್ಯವನ್ನು ಪಡೆಯಬಹುದು. ದಕ್ಷಿಣಾಯನ ಪುಣ್ಯಕಾಲದಲ್ಲಿ ಪಿತೃತರ್ಪಣ ಮಾಡುವುದರಿಂದ ಪಿತೃಗಳಿಗೆ ತೃಪ್ತಿ ದೊರೆಯುತ್ತದೆ ಎಂದು ಕೂಡ ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಮನೆಯಿದ ಹೊರಡುವಾಗ ಯಾವ ಪ್ರಾಣಿಗಳು ಸಿಕ್ಕರೆ ಶುಭಶಕುನ ಮತ್ತು ಅಪಶಕುನ?

ಸಾಮಾನ್ಯವಾಗಿ ಬೆಕ್ಕು ನಮ್ಮ ಹಾದಿಯನ್ನು ದಾಟಿದರೆ ಅಶುಭ ಚಿಹ್ನೆ ಎಂದು ಪರಿಗಣಿಸಲಾಗಿದೆ. ಈ ನಂಬಿಕೆಯನ್ನು ನಾರದ ಪುರಾಣವು ಉಲ್ಲೇಖಿಸಿದೆ. ಆದರೆ ಇನ್ನು ಕೆಲವು ಪ್ರಾಣಿಗಳು ನಮ್ಮ ದಾರಿಯಲ್ಲಿ ಬಂದರೆ ವಿವಿಧ ರೀತಿಯ ಸಂಕೇತವನ್ನು (Vastu Tips) ನೀಡುತ್ತದೆ ಎನ್ನಲಾಗುತ್ತದೆ. ಅಂತಹ ಪ್ರಾಣಿಗಳು ಯಾವುದು, ಅವುಗಳು ನಮಗೆ ಅದೃಷ್ಟ ವನ್ನು ತರುತ್ತದೋ ಅಥವಾ ದುರಾದೃಷ್ಟವನ್ನೋ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಕೆಲವೊಂದು ನಂಬಿಕೆಗಳು ಎಷ್ಟು ಸರಿಯೋ ಗೊತ್ತಿಲ್ಲ. ಆದರೆ ಹೆಚ್ಚಿನವರು ನಂಬುತ್ತಾರೆ. ಮನೆಯಲ್ಲಿ ಸಾಕುವ ಬೆಕ್ಕು, (cat) ನಾಯಿಗಳಿಂದ (dog) ಹಿಡಿದು ಕೆಲವು ಪ್ರಾಣಿಗಳನ್ನು (animals) ಶುಭ ಸಂಕೇತಗಳಿಗೆ (Good sign) ಭಾವಿಸುತ್ತೇವೆ. ವಾಸ್ತು ಪ್ರಕಾರವೂ (Vastu Tips) ಕೆಲವು ಪ್ರಾಣಿಗಳು ದಾರಿಯಲ್ಲಿ ನಮಗೆ ಸಿಕ್ಕರೆ ಶುಭ ಶಕುನ ಎಂದೇ ಹೇಳಲಾಗುತ್ತದೆ.

ಹಿಂದೂ ಧರ್ಮದಲ್ಲಿ ಸಾಮಾನ್ಯವಾಗಿ ಬೆಕ್ಕು ನಮ್ಮ ಹಾದಿಯನ್ನು ದಾಟಿದರೆ ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ನಂಬಿಕೆಯನ್ನು ನಾರದ ಪುರಾಣವು ಉಲ್ಲೇಖಿಸಿದೆ. ಆದರೆ ಇನ್ನು ಕೆಲವು ಪ್ರಾಣಿಗಳು ನಮ್ಮ ದಾರಿಯಲ್ಲಿ ಬಂದರೆ ವಿವಿಧ ರೀತಿಯ ಸಂಕೇತವನ್ನು ನೀಡುತ್ತದೆ ಎನ್ನಲಾಗುತ್ತದೆ. ಅಂತಹ ಪ್ರಾಣಿಗಳು ಯಾವುದು, ಅವುಗಳು ನಮಗೆ ಅದೃಷ್ಟ ವನ್ನು ತರುತ್ತದೋ ಅಥವಾ ದುರಾದೃಷ್ಟವನ್ನೋ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಮುಂಗುಸಿ

ದಾರಿಯಲ್ಲಿ ಮುಂಗುಸಿ ಸಿಕ್ಕರೆ ತಕ್ಷಣ ನಿಲ್ಲಬೇಕು. ಮುಂದೆ ಸಾಗಬಾದರು. ಅಂದರೆ ಪ್ರತಿಸ್ಪರ್ಧಿಗಳು ನಮ್ಮ ಕಾರ್ಯಗಳಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂಬುದರ ಸಂಕೇತ ಅದು.


ಹಸುಗಳ ಹಿಂಡು

ಹಸುಗಳ ಹಿಂಡು ಮಾರ್ಗಕ್ಕೆ ಅಡ್ಡ ಬಂದರೆ ಅವುಗಳು ಹೋಗುವ ತನಕ ಕಾಯಬೇಕು. ಈ ವಿರಾಮವು ಮುಂಬರುವ ಎದುರಾಗುವ ತೊಂದರೆಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗುತ್ತದೆ.


ಇದನ್ನೂ ಓದಿ: Bhavishya: ಅಂಗೈಯಲ್ಲಿರುವ ʼಹೃದಯ ರೇಖೆಗಳುʼ ನಿಮ್ಮ ವ್ಯಕ್ತಿತ್ವ ಏನೆಂದು ಹೇಳುತ್ತವೆ; ಚೆಕ್‌ ಮಾಡಿ ನೋಡಿ!

ಕೆಸರಿನಿಂದ ತುಂಬಿರುವ ನಾಯಿ

ಮನೆಯಿಂದ ಹೊರಡುವಾಗ ಮಣ್ಣು ಮೆತ್ತಿಕೊಂಡಿರುವ ನಾಯಿಯನ್ನು ನೋಡುವುದು ಸಾಮಾನ್ಯವಾಗಿ ಅಶುಭ ಲಕ್ಷಣ ಎಂದು ಹೇಳಲಾಗುತ್ತದೆ. ಇದು ಭವಿಷ್ಯದಲ್ಲಿ ಸಂಭವನೀಯ ತೊಂದರೆಗಳಿಗೆ ಮುನ್ಸೂಚನೆಯಾಗಿರುತ್ತದೆ ಎಂಬ ನಂಬಿಕೆ ಇದೆ.

Vastu Tips
Vastu Tips


ಕಪ್ಪು ಬೆಕ್ಕು

ಕಪ್ಪು ಬೆಕ್ಕುಗಳನ್ನು ಸಾಂಪ್ರದಾಯಿಕವಾಗಿ ದುರದೃಷ್ಟ ಎನ್ನಲಾಗುತ್ತದೆ. ವಿಶೇಷವಾಗಿ ಅವು ನಮ್ಮ ದಾರಿಯನ್ನು ದಾಟಿದರೆ ಅದರಿಂದ ಮುಂದೆ ನಾವು ಮಾಡಬೇಕಿರುವ ಕೆಲಸ ಆಗುವುದಿಲ್ಲ ಎನ್ನಲಾಗುತ್ತದೆ. ಕೆಲವು ಸಂಸ್ಕೃತಿಗಳಲ್ಲಿ ಕಪ್ಪು ಬೆಕ್ಕುಗಳು ದುಷ್ಟಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಪರಿಗಣಿಸಲಾಗಿದೆ.


ಕಾಗೆಗಳು

ಮನೆ ಹತ್ತಿರ ಕಾಗೆಯೊಂದು ನಿರಂತರ ಕಾಣಿಸಿಕೊಂಡರೆ ಅವು ದುರದೃಷ್ಟ ತರುತ್ತದೆ ಅಥವಾ ಸಾವಿನ ಸೂಚನೆ ಎನ್ನಲಾಗುತ್ತದೆ. ಇನ್ನು ಕೆಲವರು ಕಾಗೆಗಳು ಅದೃಷ್ಟದ ಸಂದೇಶವಾಹಕಗಳು ಎಂದು ನಂಬುತ್ತಾರೆ.


ಲೇಡಿಬಗ್

ಲೇಡಿಬಗ್ ಎಂದು ಕರೆಯಲ್ಪಡುವ ಚಿಕ್ಕ ಕೀಟ ಅದೃಷ್ಟ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರ ಉಪಸ್ಥಿತಿಯು ಉತ್ತಮ ಹವಾಮಾನ, ಸಮೃದ್ಧವಾದ ಸುಗ್ಗಿಯನ್ನು ತರುತ್ತದೆ, ಮನೆಯಲ್ಲಿ ಮಕ್ಕಳಾಗುತ್ತದೆ ಎಂದು ನಂಬಲಾಗುತ್ತದೆ.


ಗೂಬೆ

ಅನೇಕ ಸಂಸ್ಕೃತಿಗಳಲ್ಲಿ ಗೂಬೆಗಳನ್ನು ಸಾಮಾನ್ಯವಾಗಿ ದುರದೃಷ್ಟದ ಶಕುನವೆಂದು ಪರಿಗಣಿಸಲಾಗುತ್ತದೆ. ಅವುಗಳ ಕೂಗು ಸಾವು ಅಥವಾ ದುರದೃಷ್ಟವನ್ನು ಸೂಚಿಸುತ್ತವೆ ಎಂದು ಭಾವಿಸಲಾಗಿದೆ.


ನವಿಲು

ನವಿಲುಗಳು ಗರಿ ಬಿಚ್ಚಿ ಕುಣಿಯುವುದನ್ನು ನೋಡಿದರೆ ಅದೃಷ್ಟ ಎಂದು ಭಾವಿಸಲಾಗುತ್ತದೆ. ಅವುಗಳ ಗರಿಗಳನ್ನು ಮನೆಯಲ್ಲಿ ತಂದು ಇರಿಸಿದರೆ ಕೆಟ್ಟ ಶಕ್ತಿಗಳು ದೂರವಾಗಿ, ನಮ್ಮನ್ನು ರಕ್ಷಿಸುತ್ತವೆ ಎಂದು ಭಾವವಿಸಲಾಗುತ್ತದೆ.


ಮೊಲಗಳು

ಮೊಲಗಳು ಸಾಮಾನ್ಯವಾಗಿ ಅದೃಷ್ಟದ ಸಂಕೇತ ಎಂದು ಭಾವಿಸಲಾಗುತ್ತದೆ. ಅನೇಕ ಸಂಸ್ಕೃತಿಗಳಲ್ಲಿ, ಮೊಲವನ್ನು ನೋಡುವುದು ಫಲವತ್ತತೆ, ಸಮೃದ್ಧಿಯನ್ನು ಸೂಚಿಸುತ್ತದೆ.


ಜೇಡ

ಒಳ್ಳೆಯ ಮತ್ತು ಕೆಟ್ಟ ಶಕುನಗಳಾಗಿ ಜೇಡವನ್ನು ಕಾಣಲಾಗುತ್ತದೆ. ಕೆಲವು ಸಂಸ್ಕೃತಿಗಳಲ್ಲಿ, ಜೇಡವನ್ನು ಗುರುತಿಸುವುದು ಅದೃಷ್ಟ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಿದ್ದರೆ ಇನ್ನು ಕೆಲವರು ಇದು ದುರದೃಷ್ಟ ಮತ್ತು ಮೋಸವನ್ನು ಸೂಚಿಸುತ್ತದೆ ಎನ್ನುತ್ತಾರೆ.

Continue Reading

ಫ್ಯಾಷನ್

krishna janmashtami 2024: ಹೀಗಿತ್ತು ಸೆಲೆಬ್ರಿಟಿಗಳ ಕೃಷ್ಣ ಜನ್ಮಾಷ್ಟಮಿ ಸಂಭ್ರಮ!

krishna janmashtami 2024:ರಾಷ್ಟ್ರಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದಕ್ಕೆ ಸೆಲೆಬ್ರೆಟಿಗಳು ಕೂಡ ಹೊರತಾಗಿಲ್ಲ! ತಮ್ಮ ಮಕ್ಕಳನ್ನು ಕೃಷ್ಣ-ರಾಧೆಯಂತೆ ಸಿಂಗರಿಸಿ ಸೆಲೆಬ್ರೇಟ್‌ ಮಾಡಿದ್ದಾರೆ. ಇನ್ನು, ಕೆಲವರು ತಮ್ಮ ಬಾಲ್ಯದ ಕೃಷ್ಣನ ಪೋಟೋಗಳನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Krishna Janmastami 2024
ಚಿತ್ರ ಕೃಪೆ : ಇನ್ಸ್‌ಟಾಗ್ರಾಮ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಷ್ಟ್ರದಾದ್ಯಂತ ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿಯನ್ನು (krishna janmashtami 2024) ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಾಮಾನ್ಯ ಜನರಿಂದಿಡಿದು, ಸೆಲೆಬ್ರೆಟಿಗಳು ಕೂಡ ಗೋಕುಲಾಷ್ಟಮಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಕೆಲವರು, ತಮ್ಮ ಮಕ್ಕಳನ್ನು ಕೃಷ್ಣ-ರಾಧೆಯಂತೆ ಸಿಂಗರಿಸಿ, ಸೆಲೆಬ್ರೇಟ್‌ ಮಾಡಿದ್ದಾರೆ. ಇನ್ನು, ಕೆಲವರು ತಮ್ಮ ಬಾಲ್ಯದಲ್ಲಿನ ಕೃಷ್ಣನ ಪೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡರೇ, ಮತ್ತೇ ಕೆಲವರು ಗೋಪಾಲಕನ ಹಾಡುಗಳಿಗೆ ಕುಣಿದು ಕುಪ್ಪಳಿಸಿ ವಿಡಿಯೋ ಮಾಡಿ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ. ಈ ಎಲ್ಲದರ ಈ ಕುರಿತಂತೆ ಇಲ್ಲಿದೆ ವರದಿ.

ಸೆಲೆಬ್ರೆಟಿಗಳ ಕೃಷ್ಣ ಜನ್ಮಾಷ್ಟಮಿ

ಸಾಕಷ್ಟು ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ ತಾರೆಯರು ತಮ್ಮದೇ ಆದ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ. ಹಿರಿಯ-ಕಿರಿಯ ತಾರೆಯರು ಕೃಷ್ಣನ ಪೂಜೆಯನ್ನು ಮಾಡುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವು ನಟ-ನಟಿಯರು, ಕೃಷ್ಣನ ಮಂದಿರಗಳಿಗೆ ಭೇಟಿ ಇತ್ತ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್‌ ಮಾಡಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್‌ನ ಹಿರಿಯ ನಟಿ ಹೇಮಾ ಮಾಲಿನಿ, ತಮ್ಮ ನೃತ್ಯ ರೂಪಕದ ವಿಡಿಯೋ ಹಂಚಿಕೊಂಡಿದ್ದು, ನಟ ರಾಜ್‌ ಗ್ರೋವರ್‌ ಕೃಷ್ಣನನ್ನು ಎತ್ತಿ ಹಿಡಿದು ಆಚರಿಸಿದ್ದಾರೆ. ನಟಿ ದೀಪಿಕಾ ದಾಸ್‌ ಸೇರಿದಂತೆ ಹಲವು ನಟಿಯರು ಕೃಷ್ಣನ ತೊಟ್ಟಿಲು ತೂಗುವ, ಆರಾಧಿಸುವ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಸೆಲೆಬ್ರೆಟಿಗಳ ಮುದ್ದು ಮಕ್ಕಳ ಸೆಲೆಬ್ರೇಷನ್‌

ನಟಿ ಪ್ರಣೀತಾ, ತಮ್ಮ ಮೊದಲ ಮಗುವಿನ ಕೃಷ್ಣನ ಅವತಾರದ ತುಂಟಾಟದ ವಿಡಿಯೋ ಕ್ಲಿಪ್‌ ಹಂಚಿಕೊಂಡಿದ್ದಾರೆ. ಇನ್ನು ನಟಿ ಶ್ವೇತಾ ಶ್ರೀವಾತ್ಸವ್‌ ತಮ್ಮ ಮಗಳನ್ನು ರಾಧೆಯಂತೆ ಸಿಂಗರಿಸಿದ್ದಾರೆ. ನಟಿ ಮಮತಾ ರಾವುತ್‌ ಕಂದಮ್ಮನನ್ನು ಕೃಷ್ಣನಂತೆ ಅಲಂಕರಿಸಿದ್ದಾರೆ. ಇದೇ ರೀತಿ ನಟಿ ರಾಧಿಕಾ ಪಂಡಿತ್‌ರಿಂದ ಹಿಡಿದು, ಟೆಲಿಲೋಕದ ತಾರೆಯರು ಕೂಡ ಮಕ್ಕಳನ್ನು ಘನಶ್ಯಾಮನಂತೆ ಸಿಂಗರಿಸಿ ಸಂತಸ ಪಟ್ಟಿದ್ದಾರೆ.

ಇದನ್ನೂ ಓದಿ: Krishna Janmashtami Fancy Dress Tips: ಕೃಷ್ಣನ ಫ್ಯಾನ್ಸಿ ಡ್ರೆಸ್‌ ಮಾಡುವವರಿಗೆ ಇಲ್ಲಿದೆ 5 ಟಿಪ್ಸ್!

ಮಾಡೆಲ್‌ಗಳ ಕೃಷ್ಣನ ಆರಾಧನೆ

ಇತರೇ ಕ್ಷೇತ್ರದವರಂತೆ ಫ್ಯಾಷನ್‌ ಕ್ಷೇತ್ರದ ಸೆಲೆಬ್ರೆಟಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಈ ಗೋಕುಲಾಷ್ಟಮಿಯನ್ನು ಮಾಡರ್ನ್‌ ಶೈಲಿಯಲ್ಲಿ ಆಚರಿಸಿ, ಸಂಭ್ರಮಿಸಿದ್ದಾರೆ. ಕೃಷ್ಣನ ಹಾಡುಗಳಿಗೆ ವಿಡಿಯೋ ರೀಲ್ಸ್ ಮಾಡಿ, ಖುಷಿ ಪಟ್ಟಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ದೇಶ

Krishna Janmastami 2024: ಭೇಟಿ ನೀಡಲೇಬೇಕಾದ ವಿಶ್ವ ಪ್ರಸಿದ್ಧ 5 ಕೃಷ್ಣ ದೇವಾಲಯಗಳಿವು

ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು (Krishna janmastami 2024) ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಕೆಲವು ಕೃಷ್ಣನ ದೇಗುಲಗಳು ಇದರ ಆಚರಣೆಗೆ ವಿಶ್ವ ಪ್ರಸಿದ್ಧಿಯನ್ನು ಗಳಿಸಿವೆ. ಜನ್ಮಾಷ್ಟಮಿ ಸಮಯದಲ್ಲಿ ಅತ್ಯಂತ ಸುಂದರವಾಗಿ ಅಲಂಕರಿಸಲ್ಪಡುವ ಆ ದೇವಾಲಯಗಳು ಯಾವುದು, ಎಲ್ಲಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Krishna Janmastami 2024
Koo

ಕೃಷ್ಣನ ಜನ್ಮದಿನವನ್ನು ಸೋಮವಾರದಿಂದ ಮೂರು ದಿನಗಳ ಕಾಲ ದೇಶಾದ್ಯಂತ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯ (Krishna janmastami 2024) ಈ ವಿಶೇಷ ಸಂದರ್ಭದಲ್ಲಿ ಭೇಟಿ ನೀಡಬಹುದಾದ ದೇಶದ ಐದು ಸುಪ್ರಸಿದ್ಧ ಶ್ರೀಕೃಷ್ಣ ದೇವಾಲಯಗಳಿವೆ (sri krishna temple). ಇಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿಯು (janmastami) ಅತ್ಯಂತ ವೈಭವಾಗಿ ನಡೆಯುತ್ತದೆ.

Krishna janmastami
Krishna janmastami


1. ದ್ವಾರಕಾಧೀಶ ದೇವಾಲಯ, ದ್ವಾರಕಾ

ಗುಜರಾತಿನ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಾಲಯವನ್ನು ಜಗತ್ ಮಂದಿರ ಎಂದೂ ಕರೆಯಲಾಗುತ್ತದೆ. ದ್ವಾರಕಾಧೀಶ ದೇವಾಲಯವನ್ನು 2,500 ವರ್ಷಗಳ ಹಿಂದೆ ಶ್ರೀಕೃಷ್ಣನ ಮೊಮ್ಮಗ ವಜ್ರನಾಭ್ ಸ್ಥಾಪಿಸಿದನೆಂದು ನಂಬಲಾಗಿದೆ. ಸಣ್ಣ ಬೆಟ್ಟದ ಮೇಲಿರುವ ಈ ದೇವಾಲಯವನ್ನು ಭಕ್ತರು 50 ಮೆಟ್ಟಿಲುಗಳನ್ನು ಹತ್ತಿ ತಲುಪಬಹುದು. ಈ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಜನ್ಮಾಷ್ಟಮಿ. ಈ ಸಂದರ್ಭದಲ್ಲಿ ದೇವಾಲಯಕ್ಕೆ ಅತ್ಯಂತ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ.


2. ಶ್ರೀ ಕೃಷ್ಣ ಜನ್ಮಸ್ಥಾನ ದೇವಾಲಯ, ಮಥುರಾ

ಉತ್ತರ ಪ್ರದೇಶದ ಮಥುರಾದಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ದೇವಾಲಯವಿದೆ. ಇದು ಶ್ರೀಕೃಷ್ಣನ ತಂದೆತಾಯಿಗಳಾದ ವಸುದೇವ ಮತ್ತು ದೇವಕಿಯನ್ನು ಅವನ ಮಾವ ಕಂಸನಿಂದ ಬಂಧಿಸಲಾಗಿದೆ ಎನ್ನಲಾಗುವ ಸ್ಥಳದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಸಂಕೀರ್ಣವು ಶ್ರೀಕೃಷ್ಣನಿಗೆ ಸಮರ್ಪಿತವಾದ ಹಲವಾರು ದೇವಾಲಯಗಳನ್ನು ಒಳಗೊಂಡಿದೆ. ಇಲ್ಲಿ ಜನ್ಮಾಷ್ಟಮಿ ಸಮಯದಲ್ಲಿ ಸುಂದವಾಗಿ ಅಲಂಕರಿಸಲಾಗುತ್ತದೆ.


3. ಬಂಕೆ ಬಿಹಾರಿ ದೇವಾಲಯ, ಉತ್ತರ ಪ್ರದೇಶ

ಉತ್ತರ ಪ್ರದೇಶದ ವೃಂದಾವನದಲ್ಲಿರುವ ಬಂಕೆ ಬಿಹಾರಿ ದೇವಾಲಯವು ಭಾರತದಲ್ಲಿನ ಶ್ರೀಕೃಷ್ಣನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ವೃಂದಾವನದ ಏಳು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಜನ್ಮಾಷ್ಟಮಿ ಆಚರಣೆಯ ಸಮಯದಲ್ಲಿ ಭಕ್ತರು ಸಾಂಪ್ರದಾಯಿಕವಾದ ಬಂಕೆ ಬಿಹಾರಿಯಲ್ಲಿ ಮಂಗಳ ಆರತಿಯಲ್ಲಿ ಪಾಲ್ಗೊಳ್ಳಬಹುದು. ಇಲ್ಲಿ ದೇವರ ದರ್ಶನವು ಮಧ್ಯಾಹ್ನ ಎರಡು ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಗ್ಗೆ ಆರು ಗಂಟೆಯವರೆಗೆ ಮುಂದುವರಿಯುತ್ತದೆ.


4. ಗುರುವಾಯೂರು ಕೃಷ್ಣ ದೇವಾಲಯ, ಕೇರಳ

ದಕ್ಷಿಣದ ದ್ವಾರಕಾ ಎಂದೂ ಕರೆಯಲ್ಪಡುವ ಐತಿಹಾಸಿಕ ಕೃಷ್ಣ ದೇವಾಲಯವು ಕೇರಳದ ಗುರುವಾಯೂರಿನಲ್ಲಿದೆ. ಇದು ಇಂದಿಗೂ ಭಾರತದ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಮುಖ್ಯ ದೇವಾಲಯವನ್ನು 1638ರಲ್ಲಿ ಪುನರ್ನಿರ್ಮಿಸಲಾಯಿತು ಎನ್ನಲಾಗುತ್ತದೆ. ದೇವಾಲಯದ ಒಳಾಂಗಣ ವಿನ್ಯಾಸ ಮತ್ತು ವಾಸ್ತುಶಿಲ್ಪದ ಶೈಲಿಯು ಪ್ರವಾಸಿಗರಿಗೆ ವಿಶೇಷವಾಗಿ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಅತ್ಯಂತ ಸುಂದರ ಅನುಭವವನ್ನು ನೀಡುತ್ತದೆ.

ಇದನ್ನೂ ಓದಿ: Lakshadweep Tour: ಲಕ್ಷದ್ವೀಪದಲ್ಲಿ ಪ್ರವಾಸಿಗರನ್ನು ಸೆಳೆಯುವ ಪಂಚರತ್ನಗಳಿವು


5. ಉಡುಪಿ ಶ್ರೀ ಕೃಷ್ಣ ಮಠ

ನಮ್ಮ ರಾಜ್ಯದ ಉಡುಪಿಯ ಶ್ರೀಕೃಷ್ಣ ದೇವಾಲಯವು ಒಂದು ಅಪ್ರತಿಮ ಯಾತ್ರಾಸ್ಥಳವಾಗಿದೆ. ಶ್ರೀಕೃಷ್ಣನ ಸುಂದರವಾದ ವಿಗ್ರಹವೊಂದು ಅಲ್ಲಿ ಸ್ಥಾಪಿಸಲಾಗಿದೆ. ಜನ್ಮಾಷ್ಟಮಿ ಸಮಯದಲ್ಲಿ ಭವ್ಯವಾಗಿ ದೇವಾಲಯವನ್ನು ಅಲಂಕರಿಸಲಾಗುತ್ತದೆ. ವಿಗ್ರಹವನ್ನು ಒಂಬತ್ತು ರಂಧ್ರಗಳ ಕಿಟಕಿ ಅಥವಾ ನವಗ್ರಹ ಕಿಟಿಕಿ ಮೂಲಕವೂ ಭಕ್ತರು ನೋಡುತ್ತಾರೆ. ವಿಟ್ಲ ಪಿಂಡಿ ಉತ್ಸವ ಮತ್ತು ಮೊಸರು ಕುಡಿಕೆ ಇಲ್ಲಿಯ ವಿಶೇಷ ಆಕರ್ಷಣೆ. ಹುಲಿ ವೇಷ ಕುಣಿತ ಜನರನ್ನು ರಂಜಿಸುತ್ತದೆ.

Continue Reading

ಧಾರ್ಮಿಕ

Krishna Janmastami 2024: ಇಂದು ಕೃಷ್ಣ ಜನ್ಮಾಷ್ಟಮಿ; ಹಬ್ಬದ ಹಿನ್ನೆಲೆ ಏನು? ದೇಶದ ವಿವಿಧೆಡೆ ಹೇಗೆ ಆಚರಿಸುತ್ತಾರೆ?

ಶೃಂಗಾರಗೊಂಡ ಬೀದಿಯಲ್ಲಿ ಹೆಜ್ಜೆ ಹಾಕಿದರೆ ಸಾಕು ಎಲ್ಲೆಲ್ಲೂ ಕೃಷ್ಣನ ದರ್ಶನವಾಗುತ್ತದೆ. ಕೃಷ್ಣನ ತುಂಟಾಟ, ಬಾಲಲೀಲೆಗಳನ್ನು ಕಣ್ತುಂಬಿಸಿಕೊಳ್ಳಬಹುದು. ಸೋಮವಾರ ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ (Krishna janmastami 2024), ಮರುದಿನ ಉಡುಪಿಯಲ್ಲಿ ವಿಟ್ಲ ಪಿಂಡಿ/ ದಹಿ ಹಂಡಿ ಆಚರಣೆ ನಡೆಯುತ್ತದೆ. ಜಗತ್ತಿಗೆ ಪ್ರೀತಿಯ ಸಂದೇಶ ಸಾರಿದ ಕೃಷ್ಣನ ಭಕ್ತಿ ಸಾಗರದಲ್ಲಿ ಈ ದಿನ ಪ್ರತಿಯೊಬ್ಬರೂ ಮಿಂದೇಳಬಹುದು.

VISTARANEWS.COM


on

By

Krishna janmastami
Koo

ದೇಶಾದ್ಯಂತ ಆಚರಿಸಲ್ಪಡುವ ಪ್ರಮುಖ ಹಬ್ಬ ಕೃಷ್ಣ (god krishna) ಜನ್ಮಾಷ್ಟಮಿಯನ್ನು (Krishna janmastami 2024) ಗೋಕುಲಾಷ್ಟಮಿ (Gokulastami) ಎಂದೂ ಕರೆಯಲಾಗುತ್ತದೆ. ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ (shravana masa) ಶುಕ್ಲ ಪಕ್ಷದಂದು ಮತ್ತು ಸೌರಮಾನ ಕ್ಯಾಲೆಂಡರ್ ಪ್ರಕಾರ ಸಿಂಹ ಮಾಸದ ರೋಹಿಣಿ ನಕ್ಷತ್ರದಂದು ಈ ದಿನವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.

ಈ ಹಬ್ಬದ ಹಿನ್ನೆಲೆ ಏನು?

ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಮಥುರೆಯಲ್ಲಿ ವಾಸುದೇವ ಮತ್ತು ದೇವಕಿಯ ಮಗನಾಗಿ ವಿಷ್ಣುವಿನ ಎಂಟನೇ ಅವತಾರವೆಂದೇ ನಂಬಿರುವ ಕೃಷ್ಣನ ಜನನವಾಗುತ್ತದೆ.


ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ಅಷ್ಟಮಿಯಂದು ಮಧ್ಯರಾತ್ರಿ ಕಂಸನ ಕಾರಾಗೃಹದಲ್ಲಿ ಕೃಷ್ಣನ ಜನನವಾಗಿತ್ತು. ಈ ಸಂದರ್ಭದಲ್ಲಿ ಕಂಸ ಸೇರಿದಂತೆ ಜೈಲನ್ನು ಕಾಯುತ್ತಿದ್ದ ಎಲ್ಲರೂ ನಿದ್ದೆಗೆ ಜಾರಿದ್ದರು. ಕೃಷ್ಣ ಹುಟ್ಟಿದೊಡನೆ ತಂದೆ ವಸುದೇವ ಮಗುವನ್ನು ಬುಟ್ಟಿಯಲ್ಲಿ ಹಾಕಿ ಎತ್ತಿಕೊಂಡು ಯಾರಿಗೂ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿ ಅವನಿಗೆ ಸಂಪೂರ್ಣ ನೆರವಾಗುತ್ತದೆ. ಹೀಗೆ ದೇವಕಿ ಜನ್ಮ ನೀಡಿದ ಮಗುವಿಗೆ ನಂದರಾಜನ ಪತ್ನಿ ಯಶೋಧೆಯು ತಾಯಿಯಾಗುತ್ತಾಳೆ. ಕೃಷ್ಣನ ತುಂಟಾಟ, ಬಾಲಲೀಲೆಗಳು ಎಷ್ಟು ಪ್ರಸಿದ್ಧವೋ ಅಷ್ಟೇ ಅವನು ಮಾಡಿರುವ ಪವಾಡ ಕಾರ್ಯಗಳು ಕೂಡ ಜಗತ್ಪ್ರಸಿದ್ಧವಾಗಿವೆ. ಅನೇಕ ರಾಕ್ಷಸರನ್ನು ಕೊಂದಿರುವ ಕೃಷ್ಣನೇ ಮುಂದೆ ಪಾಂಡವರ ನೇತೃತ್ವದ ಧರ್ಮ ಯುದ್ಧಕ್ಕೆ ಸಾರಥಿಯಾಗುತ್ತಾನೆ. ಅಧರ್ಮವೇ ತುಂಬಿದ್ದ ಕೌರವರು ಮತ್ತು ಅವರಿಗೆ ಬೆಂಬಲವಾಗಿ ನಿಂತವರ ವಿನಾಶದಲ್ಲಿ ಪ್ರಮುಖ ಪಾತ್ರಧಾರಿಯಾಗುತ್ತಾನೆ.

ಸಂಪ್ರದಾಯ

ಕೃಷ್ಣ ಜನ್ಮಾಷ್ಟಮಿಯನ್ನು ಬಹುತೇಕ ಹಿಂದೂಗಳು ಮನೆಮನೆಯಲ್ಲೂ ಆಚರಿಸುತ್ತಾರೆ. ಹೆಚ್ಚಿನವರು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ಭೂಷಣಗಳನ್ನು ತೊಡಿಸಿ ಸಂಭ್ರಮಿಸುತ್ತಾರೆ. ಇದಕ್ಕೆ ಪೂರಕವಾಗಿ ದೇವಾಲಯಗಳು, ವಿವಿಧ ಸಂಘ ಸಂಸ್ಥೆಗಳು ಕೃಷ್ಣ ವೇಷ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅನೇಕ ಕೃಷ್ಣ ದೇವಾಲಯಗಳು ವಧುವಣಗಿತ್ತಿಯಂತೆ ಸಿಂಗಾರಗೊಂಡು ಕೃಷ್ಣನ ಲೀಲೆಗಳನ್ನು ವಿವಿಧ ರೂಪದಲ್ಲಿ ಪ್ರದರ್ಶಿಸಿ ಕೃಷ್ಣನ ಸಂದೇಶಗಳನ್ನು ಸಾರುತ್ತವೆ.

ಕೃಷ್ಣಜನ್ಮಾಷ್ಟಮಿಯ ದಿನದಂದು ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ಅಲಂಕರಿಸಿ ಕೃಷ್ಣನಿಗೆ ಪ್ರಿಯವಾದ ವಿವಿಧ ಬಗೆಬಗೆಯ ತಿಂಡಿಗಳನ್ನು ಮಾಡಿ ಅರ್ಪಿಸಲಾಗುತ್ತದೆ. ಕೆಲವರು ಈ ದಿನ ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ಅನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ.

Krishna janmastami
Krishna janmastami


ವಿವಿಧೆಡೆ ಆಚರಣೆ

ದೇಶ ವಿದೇಶಗಳಲ್ಲೂ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಭಾರತದ ಅತ್ಯಂತ ಜನಪ್ರಿಯ ಹಬ್ಬವೆಂದರೆ ಜನ್ಮಾಷ್ಟಮಿ. ಈ ದಿನ ಜನರು ರಾಸಲೀಲೆಯನ್ನು ಆಚರಿಸುವ ಪದ್ಧತಿ ಇದೆ. ಭಗವಾನ್ ಕೃಷ್ಣನ ಜನ್ಮಸ್ಥಳವಾದ ಮಥುರಾ ಮತ್ತು ವೃಂದಾವನದಲ್ಲಿ ಈ ಸಂದರ್ಭದಲ್ಲಿ ಭವ್ಯವಾದ ಮೆರವಣಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕೃಷ್ಣನ ಜೀವನದ ಘಟನೆಗಳನ್ನು ಪ್ರದರ್ಶಿಸಿ ಅದ್ಧೂರಿಯಿಂದ ಆಚರಿಸಲಾಗುತ್ತದೆ.

ಜಮ್ಮುವಿನಲ್ಲಿ ಜನ್ಮಾಷ್ಟಮಿಯಂದು ಗಾಳಿಪಟ ಹರಿಸಲಾಗುತ್ತದೆ. ಮಣಿಪುರದ ನಿವಾಸಿಗಳು ರಾಧಾ- ಕೃಷ್ಣನ ನೃತ್ಯ ನಾಟಕಗಳನ್ನು ಪ್ರಸ್ತುತಪಡಿಸುತ್ತಾರೆ. ಪಾಲಕರು ತಮ್ಮ ಮಕ್ಕಳನ್ನು ಕೃಷ್ಣ, ಗೋಪಿಕೆಯರಂತೆ ಅಲಂಕರಿಸುತ್ತಾ ಭಾಗವತ ಗೀತೆ ಮತ್ತು ಭಾಗವತ ಪುರಾಣದ ಹತ್ತನೇ ಅಧ್ಯಾಯವನ್ನು ಓದುತ್ತಾರೆ.


ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಜನರು ಮಧ್ಯರಾತ್ರಿಯವರೆಗೆ ಉಪವಾಸ ಮತ್ತು ಪೂಜೆ ಮಾಡುತ್ತಾರೆ. ಅಷ್ಟಮಿಯ ಮರುದಿನ ‘ನಂದ ಉತ್ಸವ’ ವನ್ನು ಆಚರಿಸಿ ಕೃಷ್ಣನ ಸಾಕುತಂದೆಗಳಾದ ನಂದ ಮತ್ತು ಯಶೋದಾ ಅವರನ್ನು ಗೌರವಿಸಲಾಗುತ್ತದೆ. ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಮಡಿಕೆ ಒಡೆಯುವ ಆಚರಣೆಗಳು ಅತ್ಯಂತ ಅದ್ಧೂರಿಯ ನಡೆಸಲಾಗುತ್ತದೆ.

ದಕ್ಷಿಣ ಭಾರತದಲ್ಲೂ ಗೋಕುಲ ಅಷ್ಟಮಿಯನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಕೃಷ್ಣನ ವಿವಿಧ ಲೀಲೆಗಳನ್ನು ಪ್ರದರ್ಶಿಸುವುದು ಈ ದಿನದ ವಿಶೇಷತೆಯಾಗಿದೆ.\


ದೇವಾಲಯಗಳಲ್ಲಿ ಸಂಭ್ರಮ

ದಕ್ಷಿಣ ಭಾರತದಲ್ಲಿರುವ ಕೃಷ್ಣನ ಜನಪ್ರಿಯ ದೇವಾಲಯಗಳೆಂದರೆ ತಿರುವರೂರು ಜಿಲ್ಲೆಯ ಮನ್ನಾರ್ಗುಡಿಯಲ್ಲಿರುವ ರಾಜಗೋಪಾಲಸ್ವಾಮಿ ದೇವಾಲಯ, ಕಾಂಚೀಪುರಂನ ಪಾಂಡವಧೂತರ್ ದೇವಾಲಯ, ಉಡುಪಿಯ ಶ್ರೀ ಕೃಷ್ಣ ದೇವಾಲಯ ಮತ್ತು ಗುರುವಾಯೂರಿನಲ್ಲಿರುವ ಕೃಷ್ಣ ದೇವಾಲಯ. ಈ ದೇವಾಲಯಗಳಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದಕ್ಕಾಗಿ ದೇವಾಲಯವನ್ನು ಮೊದಲೇ ವಿಶೇಷವಾಗಿ ಅಲಂಕರಿಸಲಾಗುತ್ತದೆ.

ಇದನ್ನೂ ಓದಿ: Krishna janmastami: ಕೃಷ್ಣ ಜನ್ಮಾಷ್ಟಮಿಯ ಫೋಟೋಶೂಟ್‌‌ಗೆ ಇಲ್ಲಿದೆ 4 ಐಡಿಯಾ


ಇನ್ನು ಕೃಷ್ಣನ ನಗರಿ ಎಂದೇ ಖ್ಯಾತಿ ಪಡೆದಿರುವ ಉಡುಪಿಯಲ್ಲಿ ಈಗಾಗಲೇ ಅಷ್ಟಮಿಯ ವೈಭವ ಪ್ರಾರಂಭವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಉಡುಪಿ ಕೃಷ್ಣನ ಆಲಯದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹುಲಿ ವೇಷ, ಕೃಷ್ಣ ವೇಷ ಸ್ಪರ್ಧೆಯೊಂದಿಗೆ ವಿವಿಧ ಕಾರ್ಯಕ್ರಮಗಳು ರಥಬೀದಿಯಲ್ಲಿ ಪ್ರದರ್ಶನಗೊಳ್ಳಲು ವೇದಿಕೆ ಸಿದ್ಧವಾಗುತ್ತಿದೆ. ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ದೂರದೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಉಡುಪಿಗೆ ಆಗಮಿಸುತ್ತಿದ್ದು, ರಾಜಾಂಗಣದಲ್ಲಿ ನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.


ಅಷ್ಟಮಿ ಪ್ರಸಾದವಾಗಿ ಹಂಚುವ ಕಾರ್ಯಕ್ಕೆ ಲಕ್ಷಾಂತರ ಉಂಡೆ, ಚಕ್ಕುಲಿಗಳ ತಯಾರಿಯೂ ನಡೆಯುತ್ತಿದೆ. ಅಷ್ಟಮಿಯಂದು ನಡುರಾತ್ರಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಅರಳು, ನೆಲಗಡಲೆ, ಗುಂಡಿಟ್ಟು, ಕಡಲೆ, ಎಳ್ಳು, ಗೋಧಿ, ಗೇರು, ಶುಂಠಿ, ಹೆಸರು ಹಿಟ್ಟಿನಿಂದ ಮಾಡಿದ ಉಂಡೆ, ಚಕ್ಕುಲಿಯನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ಮರುದಿನ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ.

Continue Reading
Advertisement
TA Sharavana
ಕರ್ನಾಟಕ4 hours ago

TA Sharavana : ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾದ ಬಳಿಕ ಕಚೇರಿ ಉದ್ಘಾಟನೆ ಮಾಡಿದ ಟಿ.ಎ ಶರವಣ

actor darshan
ಸಿನಿಮಾ5 hours ago

Actor Darshan : ನಟ ದರ್ಶನ್‌-ಪವಿತ್ರಾ ಐಫೋನ್‌ಗಳಲ್ಲಿ ಇದ್ಯಾ ಕೊಲೆ ರಹಸ್ಯ! ಹೈದರಾಬಾದ್‌ನಿಂದ ರಿಟರ್ನ್‌ ಆದ ಫೋನ್‌ಗಳು

Actor Darshans gang moves Google to destroy evidence after Renukaswamys murder
ಸಿನಿಮಾ6 hours ago

Actor darshan : ಪಟ್ಟಣಗೆರೆ ಶೆಡ್‌ನಲ್ಲಿ ಡೆವಿಲ್‌‌‌ ಗ್ಯಾಂಗ್‌‌‌ನ ಕ್ರೌರ್ಯ ಹೇಗಿತ್ತು? ; ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ!

Actor Darshan gang
ಬೆಂಗಳೂರು7 hours ago

Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ROad Accident
ಗದಗ9 hours ago

Road Accident : ನೀರಿನಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ ಶವವಾಗಿ ಪತ್ತೆ; ಸ್ಕಿಡ್ ಆಗಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದ ಗೂಡ್ಸ್ ಗಾಡಿ

darling krishna
ಸಿನಿಮಾ10 hours ago

Darling Krishna: ಕೃಷ್ಣನ ಮನೆಗೆ ಮಹಾಲಕ್ಷ್ಮಿ”KrissMi” ಪದಾರ್ಪಣೆ

Road Accident
ರಾಯಚೂರು10 hours ago

Road Accident : ಸ್ಕೂಲ್‌ ಬಸ್‌-ಸಾರಿಗೆ ಬಸ್‌ ಡಿಕ್ಕಿ; ಡೆಡ್ಲಿ ಆ್ಯಕ್ಸಿಡೆಂಟ್‌ಗೆ ಮಕ್ಕಳಿಬ್ಬರು ಬಲಿ, ತುಂಡಾಯ್ತು ಮಕ್ಕಳ ಕಾಲುಗಳು

Road Accident
ಚಿಕ್ಕಬಳ್ಳಾಪುರ11 hours ago

Road Accident : ಕಂಟ್ರೋಲ್ ತಪ್ಪಿ‌ ಹೋಟೆಲ್‌ಗೆ ನುಗ್ಗಿದ ಟಿಪ್ಪರ್ ಲಾರಿ; ಕ್ಯಾಶಿಯರ್‌, ಅಡುಗೆ ಭಟ್ಟ ದಾರುಣ ಸಾವು

One and a half year old boy dies of suffocation after swallowing bottle cap in Shivamogga
ಶಿವಮೊಗ್ಗ11 hours ago

Child Death: ಶಿವಮೊಗ್ಗದಲ್ಲಿ ಜ್ಯೂಸ್‌ ಬಾಟೆಲ್‌ನ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಉಸಿರುಗಟ್ಟಿ ಸಾವು

Karnataka Weather Forecast
ಮಳೆ12 hours ago

Karnataka Weather : ಗೌರಿ-ಗಣೇಶ ಹಬ್ಬಕ್ಕೆ ಮಳೆ ಅಡ್ಡಿ!ನಿರಂತರ ಗಾಳಿ ಜತೆಗೆ ಭಾರಿ‌ ವರ್ಷಧಾರೆ ಎಚ್ಚರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್5 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌