ಗಣೇಶ ಚತುರ್ಥಿ
Ganesh Chaturthi: ಗಣೇಶನಿಗೆ ಇವೆ 108 ಹೆಸರುಗಳು! ಪ್ರತಿ ಹೆಸರಿನ ಅರ್ಥವೂ ವಿಶೇಷ!
ಒಂದಲ್ಲ, ಎರಡಲ್ಲ 108 ಹೆಸರುಗಳು (Ganesh Chaturthi) ಗಣಪನಿಗಿವೆ. ಗಣಪತಿಗೆ ಇಷ್ಟೊಂದು ಹೆಸರುಗಳು ಏಕೆ ಬಂದವು? ಹೆಸರುಗಳ ಪಟ್ಟಿ (108 names of Ganesha) ಮತ್ತು ಅದರ ಅರ್ಥ ಇಲ್ಲಿದೆ.
ನಾಡಿನ ಜನ ಗಣಪತಿ ಹಬ್ಬದ (Ganesh Chaturthi) ಸಂಭ್ರಮದಲ್ಲಿದ್ದಾರೆ. ಎಲ್ಲೆಡೆ ಗೌರಿ ಮತ್ತು ಗಣೇಶನ ಪೂಜೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಅಂದ ಹಾಗೆ ಈ ಗಣಪತಿ ಹಿಂದೂ ಧರ್ಮದಲ್ಲಿ ಅತ್ಯಂತ ವಿಶೇಷ ಮತ್ತು ಆದಿ ಪೂಜಿತ, ಅಂದರೆ ಎಲ್ಲ ದೇವರಿಗಿಂತ ಮೊದಲು ಪೂಜಿಸುವ ದೇವರು. ಎಲ್ಲ ದೇವತೆಗಳ ಪೂಜೆಗೆ ಮೊದಲು ಈತನನ್ನೇ ಪೂಜಿಸಲಾಗುತ್ತದೆ. ಅದೇ ಕಾರಣಕ್ಕೆ ಗಣಪತಿಯನ್ನು ಆದಿಪೂಜಿತ ಎಂದೂ ಕರೆಯಲಾಗುತ್ತದೆ. ಹೀಗೆ ಹಲವಾರು ಕಾರಣಗಳಿಂದ ಗಣಪತಿಗೆ ಹಲವಾರು ಹೆಸರುಗಳು ಬಂದಿವೆ. ಬರೋಬ್ಬರಿ 108 ಹೆಸರುಗಳು (108 names of Ganesha) ಗಣಪನಿಗಿವೆ. ಅವುಗಳ ಪಟ್ಟಿ ಮತ್ತು ಅದರ ಅರ್ಥ ಇಲ್ಲಿದೆ.
- ಅಖುರಥ: ಇಲಿಯನ್ನು ತನ್ನ ವಾಹನವಾಗಿರಿಸಿಕೊಂಡವನು ಎಂದರ್ಥ. 2. ಆಲಂಪತ: ಎಂದಿಗೂ ಅನಂತನಾದ ದೇವ. 3. ಅಮಿತ: ಕೊನೆಯಿಲ್ಲದವನು. 4. ಅನಂತಚಿದೃಪಮಯಂ: ಅನಂತ ಜ್ಞಾನ ಉಳ್ಳವನು. 5. ಅವನೀಶ್: ಭೂಮಿಯ ಒಡೆಯನು. 6. ಅವಿಘ್ನ: ವಿಘ್ನ ನಿವಾರಕ ಗಣೇಶ. 7. ಬಾಲ ಗಣಪತಿ: ಹೆಸರೇ ಹೇಳುವಂತೆ ಬಾಲಕ ಗಣಪತಿ. 8. ಬಾಲಚಂದ್ರ: ಚಂದ್ರನಿಂದ ಅಲಂಕೃತಗೊಂಡವನು. 9. ಭೀಮ: ಭೀಮನಂತೆ ಗಾತ್ರ ಹೊಂದಿರುವವನು. 10. ಭೂಪತಿ: ಭೂಮಿಗೆ ಪತಿ, ಭೂಮಿಗೆ ಯಜಮಾನನು.
ಜ್ಞಾನದ ದೇವತೆ
- ಭುವನಪತಿ: ಭುವನಕ್ಕೆ ಒಡೆಯ, ಜಗತ್ತಿನ ಒಡೆಯನು. 12. ಬುದ್ಧಿನಾಥ: ಬುದ್ಧಿಯನ್ನು, ಜ್ಞಾನವನ್ನು ದಯಪಾಲಿಸುವವನು. 13. ಬುದ್ಧಿಪ್ರಿಯ: ಬುದ್ಧಿವಂತ, ಜ್ಞಾನವಂತನಾದವನು. 14. ಬುದ್ಧಿವಿಧಾತ: ಜ್ಞಾನದ ದೇವತೆ, ಜ್ಞಾನ ದಯಪಾಲಿಸುವ ದೇವರು. 15. ಚತುರ್ಭುಜ: ನಾಲ್ಕು ಕೈಗಳನ್ನು ಹೊಂದಿರುವವನು. 16. ದೇವದೇವ: ದೇವತೆಗಳ ದೇವ. 17. ದೇವಾಂತಕನಾಶಕ: ರಾಕ್ಷಸರನ್ನು, ಅಸುರರನ್ನು ನಾಶಪಡಿಸುವ ದೇವರು. 18. ದೇವವ್ರತ: ಭಕ್ತರ ಪ್ರಾಯಶ್ಚಿತ್ತಗಳನ್ನು ಒಪ್ಪಿಕೊಳ್ಳುವ ದೇವತೆ. 19. ದೇವೇಂದ್ರಶಿಖಾ: ದೇವತೆಗಳ ಹಿತರಕ್ಷಣೆ ಮಾಡುವ ದೇವರು. 20. ಧಾರ್ಮಿಕ: ಧರ್ಮ ನಿರತನಾದವನು.
ಒಂದು ದಂತ ಹೊಂದಿರುವವನು
- ಧೂಮ್ರವರ್ಣ: ಧೂಮ್ರ ಬಣ್ಣದ ದೇವತೆ. 22. ದುರ್ಜ: ಅದ್ವಿತೀಯ, ಅಜೇಯ ದೇವತೆ. 23. ದ್ವೈಮಾತುರ: ಇಬ್ಬರು ತಾಯಂದಿರನ್ನು ಉಳ್ಳವನು. 24. ಏಕಾಕ್ಷರ: ಒಂದು ಅಕ್ಷರದವನು. 25. ಏಕದಂತ: ಒಂದು ದಂತ ಹೊಂದಿರುವ ದೇವರು. 26. ಏಕದೃಷ್ಟ: ಒಂದು ಹಲ್ಲು ಹೊಂದಿರುವ ದೇವರು. 27. ಈಶಪುತ್ರ: ಶಿವ/ಈಶ್ವರನ ಪುತ್ರ. 28. ಗದಾಧರ: ಗದೆಯನ್ನು ಆಯುಧವನ್ನಾಗಿ ಉಪಯೋಗಿಸುವ ದೇವರು. 29. ಗಜಕರ್ಣ: ಗಜದ ಕಣ್ಣು, ಅಂದರೆ ಆನೆಯ ಕಣ್ಣುಗಳನ್ನು ಹೊಂದಿರುವ ದೇವರು. 30. ಗಜಾನನ: ಆನೆಯ ಮುಖವನ್ನು ಹೊಂದಿರುವ ದೇವರು.
ಗಣಗಳಿಗೆಲ್ಲ ನಾಯಕ
- ಗಜನನೇತಿ: ಆನೆಯ ಮುಖದ ತರಹದ ಮುಖವನ್ನು ಹೊಂದಿರುವ ದೇವರು. 32. ಗಜವಕ್ರ: ಆನೆಯ ಸೊಂಡಿಲುಳ್ಳ ದೇವರು. 33. ಗಜವಕ್ತ್ರ: ಆನೆಯ ಬಾಯಂತೆ ಬಾಯನ್ನು ಉಳ್ಳ ದೇವರು. 34. ಗಣದಕ್ಷಯ (ಗಣನಾಯಕ): ಗಣಗಳಿಗೆಲ್ಲಾ (ದೇವತೆಗಳು) ಅಧಿನಾಯಕನಾದವನು. 35. ಗಣಧ್ಯಕ್ಷಿನ: ಗಣಗಳಿಗೆಲ್ಲಾ ಅಧ್ಯಕ್ಷನಾದವನು. 36. ಗಣಪತಿ: ಗಣನಾಯಕ, ದೇವತೆಗಳಿಗೆಲ್ಲಾ ಒಡೆಯನಾದವನು. 37. ಗೌರಿಸುತ: ಗೌರಿಯ ಪುತ್ರ, ಪಾರ್ವತಿಯ ಸುತ. 38. ಗುಣಿನ: ಸರ್ವ ಜ್ಞಾನ ಉಳ್ಳವನು. 39. ಹರಿದ್ರ: ಬಂಗಾರದ ಬಣ್ಣದ ಮೈ ಉಳ್ಳವ. 40. ಹೇರಂಬಾ: ತಾಯಿಯ ಮುದ್ದಿನ ಮಗ.
ಅತ್ಯಂತ ಬಲಶಾಲಿ
- ಕಪಿಲಾ: ಹಳದಿ ಮಿಶ್ರಿತ ಕಂದುಬಣ್ಣದ ಮೈ ಇರುವವನು. 42. ಕವೀಶ: ಕವಿಗಳಿಗೆಲ್ಲ ಒಡೆಯ. 43. ಕೃತಿ: ಸಂಗೀತದ ದೇವತೆ. 44. ಕೃಪಾಳು: ಕರುಣಾಳಾದ ದೇವತೆ. 45. ಕೃಷಪಿಂಗಾಕ್ಷ: ಹಳದಿಮಿಶ್ರಿತ ಕಂದುಬಣ್ಣದ ಕಣ್ಣುಗಳುಳ್ಳವ.
- ಕ್ಷಮಾಕರಂ: ಕ್ಷಮೆಯನ್ನು ದಯಪಾಲಿಸುವವನು. 47. ಕ್ಷಿಪ್ರ: ಸರಳವಾಗಿ, ಸುಲಭವಾಗಿ ಭಕ್ತರಿಗೆ ಒಲಿಯುವ ದೇವರು. 48. ಲಂಬಕರ್ಣ: ಉದ್ದನೆಯ ಕಿವಿಗಳುಳ್ಳವನು. 49. ಲಂಬೋದರ: ಉದ್ದನೆಯ ಹೊಟ್ಟೆಯನ್ನುಳ್ಳವನು. 50. ಮಹಾಬಲ: ಅತ್ಯಂತ ಬಲಶಾಲಿಯಾದ ದೇವತೆ.
ಮೃತ್ಯುವನ್ನು ಗೆದ್ದವನು
- ಮಹಾಗಣಪತಿ: ಸರ್ವಾಧಿಕಾರಿ, ಸರ್ವೋಚ್ಚ ದೇವತೆ. 52. ಮಹೇಶ್ವರಂ: ಮಹಾ ಈಶ್ವರನ ಸಮಾನರಾದವನು. 53. ಮಂಗಳಮೂರ್ತಿ: ಮಂಗಳಕರನಾದ ದೇವತಾ ಮೂರ್ತಿ. 54. ಮನೋಮಯಿ: ಮನಸ್ಸನ್ನು ಗೆಲ್ಲುವವನು. 55. ಮೃತ್ಯುಂಜಯ: ಮೃತ್ಯುವನ್ನು ಗೆದ್ದವನು. 56. ಮುಂದಾಕರಮ: ಸಂತಸವನ್ನು ಮನೆ ಮಾಡಿಕೊಂಡಿರುವ ದೇವರು. 57. ಮುಕ್ತಿದಾಯಕ: ಮುಕ್ತಿಯನ್ನು ದಯಪಾಲಿಸುವ ದೇವರು. 58. ಮೂಷಿಕವಾಹನ: ಇಲಿಯನ್ನು ವಾಹನವಾಗಿರಿಸಿಕೊಂಡ ದೇವರು. 59. ನಾದಪ್ರತಿಥಿಷ್ಟ: ನಾದ ಸುಧೆಯನ್ನು ಇಷ್ಟಪಡುವ ದೇವರು. 60. ನಮಸ್ತೇತು: ದುಷ್ಟಶಕ್ತಿಗಳನ್ನು, ದುಷ್ಟ ವಿಚಾರಗಳನ್ನು ನಿರ್ಮೂಲನೆ ಮಾಡುವವನು.
ಮೋದಕ ಪ್ರಿಯ
- ನಂದನ: ಶಿವನ ಪುತ್ರ. 62. ನಿಧೀಶ್ವರಂ: ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸುವ ದೇವನೀತ. 63. ಓಂಕಾರ: ಓಂಕಾರ ಸ್ವರೂಪಿ. 64. ಪೀತಾಂಬರ: ಹಳದಿ ಬಣ್ಣ. 65. ಪ್ರಮೋದ: ಮೋದಕಪ್ರಿಯ. 66. ಪ್ರಥಮೇಶ್ವರ: ಪ್ರಥಮ ಪೂಜೆಯ ದೇವತೆ. 67. ಪುರುಷ್: ಅಪ್ರತಿಮ ಪುರುಷ ವ್ಯಕ್ತಿತ್ವ.
- ರಕ್ತ: ಕೆಂಪಗಿನ ಕಣ್ಣುಗಳು ಇರುವ ದೇವರು. 69. ರುದ್ರಪ್ರಿಯ: ರುದ್ರನಿಗೆ/ಶಿವನಿಗೆ ಪ್ರಿಯನಾದ ದೇವ. 70) ಸರ್ವದೇವಾತ್ಮನ್: ಸರ್ವ ಕಾಣಿಕೆಗಳನ್ನ, ಪೂಜೆಗಳನ್ನು, ಒಪ್ಪಿಸಿಕೊಳ್ಳುವವನು.
ಶುಭದಾಯಕ
- ಸರ್ವಸಿದ್ಧಾಂತ: ವಿದ್ಯೆ, ಬುದ್ಧಿ, ಜ್ಞಾನವನ್ನು ಸಿದ್ಧಿಸುವವನು. 72. ಸರ್ವಾತ್ಮನ್: ಜಗತ್ತನ್ನು ಸಂರಕ್ಷಿಸುತ್ತಿರುವವನು. 73. ಶಾಂಭವಿ: ಶಾಂಭವಿಯಾದ ತಾಯಿ ಪಾರ್ವತಿಯ ಸುತ. 74. ಶಶಿವರ್ಣಂ: ಚಂದ್ರನ ಬಣ್ಣವುಳ್ಳವನು. 75. ಶೂರ್ಪಕರ್ಣ: ಬೃಹದಾಕಾರದ ಕಿವಿಗಳುಳ್ಳವನು. 76. ಶುಭನ್: ಶುಭದಾಯಕನು. 77. ಶುಭಗುಣಕಣನ್: ಸರ್ವಕಾಯ, ಸರ್ವವಿಧಿಯನ್ನು ಬಲ್ಲ ದೇವರು. 78. ಶ್ವೇತ: ಬಿಳಿಯ ಬಣ್ಣದಂತೆ ಶುಭ್ರ. 79. ಸಿದ್ಧಿದಾತ: ಸಿದ್ಧಿಯನ್ನು ದಯಪಾಲಿಸುವ ದೇವರು.
ಬೇಡಿದ ವರ ನೀಡುವವನು
- ಸಿದ್ಧಿಪ್ರಿಯ: ಆಶೀರ್ವಾದವನ್ನು ಸಿದ್ಧಿಸುವವನು. 81. ಸಿದ್ಧಿ ವಿನಾಯಕ” ಯಶಸ್ಸಿನ ಅಧಿದೇವತೆ. 82. ಸ್ಕಂದಪೂರ್ವಜ: ಸುಬ್ರಹ್ಮಣ್ಯನ ಸಹೋದರ. 83. ಸುಮುಖ: ಸ್ತುತ್ಯಾರ್ಹ ಮುಖವನ್ನುಳ್ಳ ದೇವರು. 84. ಸುರೇಶ್ವರಂ: ಸುರದೇವತಿಗಳಿಗೆಲ್ಲಾ ಒಡೆಯನಾದ ದೇವರು.
- ಸ್ವರೂಪ್: ರೂಪವಂತನೂ, ಸುಂದರವದನದವನು. 86. ತರುಣ್: ಸದಾಕಾಲ ತರುಣನಂತೆಯೇ ಇರುವ ದೇವರು. 87. ಉದ್ದಂಡ: ದುಷ್ಟ ಶಿಕ್ಷಕ. 88. ಉಮಾಪುತ್ರ: ಉಮೆಯ ಮಗ. 89. ವಕ್ರತುಂಡ: ಬಾಗಿದ ಸೊಂಡಿಲುಳ್ಳವ. 90. ವರಗಣಪತಿ: ಬೇಡಿದ ವರ ನೀಡುವ ದೇವರು.
ವಿಘ್ನಗಳಿಂದ ಕಾಪಾಡುವವನು
- ವರಪ್ರದ: ವರಗಳನ್ನು ದಯಪಾಲಿಸುವ ದೇವರು. 92. ವರದವಿನಾಯಕ: ಯಶಸ್ಸನ್ನು ಹರಸಿ ವರವನ್ನು ನೀಡುವ ದೇವರು. 93. ವೀರಗಣಪತಿ: ವೀರನಾದ ಗಣೇಶ ದೇವತೆ. 94. ವಿದ್ಯಾವಾರಿಧಿ: ವಿದ್ಯೆಯ ಅಧಿದೇವತೆ. 95. ವಿಘ್ನಹರ: ವಿಘ್ನಗಳನ್ನು ಹರಿಸುವವನು. 96. ವಿಘ್ನಹರ್ತ: ವಿಘ್ನಗಳನ್ನು ನಾಶಪಡಿಸುವವನು. 97. ವಿಘ್ನರಾಜ: ವಿಘ್ನಗಳನ್ನೆಲ್ಲಾ ಜಯಿಸಿ, ಅದರ ಒಡೆಯನಾಗಿರುವವನು. 98. ವಿಘ್ನ ರಾಜೇಂದ್ರ: ವಿಘ್ನಗಳನ್ನೆಲ್ಲಾ ಜಯಿಸುವವನು. 99. ವಿಘ್ನ ವಿನಾಶಾನಯ: ವಿಘ್ನಗಳ ನಾಶ ಮಾಡುವ ದೇವರು. 100. ವಿಘ್ನೇಶ್ವರ: ವಿಘ್ನಗಳಿಂದ ಕಾಪಾಡುವ ದೇವರು. 101. ವಿಕತ್: ಬೃಹತ್ ದೇಹದ ದೇವರು. 102. ವಿನಾಯಕ: ಎಲ್ಲರಿಗೂ ನಾಯಕ. 103. ವಿಶ್ವಮುಖ: ಜಗತ್ತಿಗೆ ಮುಖದಂತೆ ಇರುವವನು. 104. ವಿಶ್ವರಾಜ: ಜಗತ್ತಿಗೇ ರಾಜ. 105. ಯಜ್ಞಕಾಯ: ಯಜ್ಞಗಳಲ್ಲಿ ಭಕ್ತಿ ಸಮರ್ಪಣೆಗಳನ್ನು ಸ್ವೀಕರಿಸುವ ದೇವರು. 106. ಯಶಸ್ಕರಂ: ಯಶಸ್ಸನ್ನು, ಅದೃಷ್ಟವನ್ನು, ಸಿದ್ಧಿಸುವವನು. 107. ಯಶಸ್ವಿನ್: ಅತ್ಯಂತ ಪ್ರೀತಿದಾಯಕನಾದ, ಅತ್ಯಂತ ಜನಪ್ರಿಯನಾದ ದೇವತೆ. 108. ಯೋಗದೀಪ: ಯೋಗದ ಅಧಿದೇವತೆ.
ಇದನ್ನೂ ಓದಿ: Ganesha Stories With Audio: ನೀವು ಓದಲೇಬೇಕಾದ ಗಣಪತಿಯ ಕುತೂಹಲಕರ ಕಥೆಗಳಿವು!
ಗಣೇಶ ಚತುರ್ಥಿ
Ganesh Chaturthi : ನಾಳೆ-ನಾಡಿದ್ದು ಈ ರೂಟ್‌ನಲ್ಲಿ ವಾಹನ ಸಂಚಾರ ಬಂದ್!
Ganesh Chaturthi : ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಇರುವುದರಿಂದ ಬೆಂಗಳೂರಿನ ಕೆಲವು ಕಡೆ ವಾಹನ ಸಂಚಾರವನ್ನು (Traffic advisory) ನಿರ್ಬಂಧಿಸಲಾಗಿದೆ.
ಬೆಂಗಳೂರು: ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ಸೆ. 23ರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ (Ganesh Chaturthi) ಮೆರವಣಿಗೆ ನಡೆಯಲಿದೆ. ಹೀಗಾಗಿ ಶನಿವಾರ ಸಂಜೆ 06 ಗಂಟೆಯಿಂದ ಮರುದಿನ ಬೆಳಗ್ಗೆ 08 ಗಂಟೆಯವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್ ಆಗಲಿದೆ.
ಈ ಮಾರ್ಗಗಳಲ್ಲಿ ತಾತ್ಕಾಲಿಕ ನಿರ್ಬಂಧ
ದೇವೇಗೌಡ ರಸ್ತೆ, ಜೆ.ಸಿ.ನಗರ ಮುಖ್ಯರಸ್ತೆ, ಮಠದಹಳ್ಳಿ ಮುಖ್ಯರಸ್ತೆ, ದೇಸ್‌ರಾಜ್ ಅರಸ್ ರಸ್ತೆಗಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್
ದಿಣ್ಣೂರಿಗೆ ಹೋಗಲು ಈ ದಾರಿ ಬಳಸಿ
1) ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗಗಳು ಹೀಗಿವೆ.
ದಿಣ್ಣೂರು ಮುಖ್ಯರಸ್ತೆಯಿಂದ ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಗುಂಡುರಾವ್ ಮನೆ ಜಂಕ್ಷನ್, ಬೆಂಗಳೂರ ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್ ಸರ್ವೀಸ್ ರಸ್ತೆಯಲ್ಲಿ ಎಡತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
- ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ – ಸುಲ್ತಾನ್ ಪಾಳ್ಯ – ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಜಯಮಹಲ್ ರಸ್ತೆ ಮೂಲಕ ಮೇಖ್ರಿ ಸರ್ಕಲ್ ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ವಾಸ್ ಮೂಲಕ ಆರ್.ಟಿ.ನಗರ ಮುಖ್ಯರಸ್ತೆ- ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್ ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
- ಯಶವಂತಪುರ ಕಡೆಯಿ೦ದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಮೇಕ್ರಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ಪಾಸ್ ಬಲತಿರುವು ಪಡೆದು ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
- ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಮೇಖ್ರಿಸರ್ಕಲ್ ಅಂಡರ್ ಪಾಸ್, ಬೆಂಗಳೂರು ಬಳ್ಳಾರಿ ರಸ್ತೆ, ಸಿ.ಬಿ.ಐ. ಜಂಕ್ಷನ್ ನಂತರ ಕರ್ನಾಟಕ ಸ್ಪೀರಿಟ್‌ನಲ್ಲಿ ಬಲ ತಿರುವು ತೆಗೆದುಕೊಂಡು ಬಿಬಿ ಸರ್ವೀಸ್ ರಸ್ತೆ, ಸಿ.ಬಿ.ಐ ರಸ್ತೆ ಡೆಡ್ ಎಂಡ್ ಬಲತಿರುವು ಮೂಲಕ ದಿಣ್ಣೂರು ರಸ್ತೆಯ ಮೂಲಕ ಹೋಗಬಹುದು.
ಸೆ.24ರಂದು ಈ ಮಾರ್ಗದಲ್ಲಿ ಸಂಚಾರ ಬಂದ್
ಸೆ.24ರಂದು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ.
-ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
-ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೂ ಸಂಚಾರ ಬಂದ್ ಆಗಲಿದೆ.
-ಕೆನ್ಸಿಂಗ್‌ಟನ್ ಕಡೆಯಿಂದ ಎಂ.ಇ.ಜಿ ಮೂಲಕ ಹಲಸೂರು ಲೇಕ್ ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರ ಇರಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Ganesh Chaturthi: ನಾಳೆ ಗಣೇಶ ಮೂರ್ತಿಗಳ ವಿಸರ್ಜನೆ; ಬೆಂಗಳೂರಿನ ಹಲವೆಡೆ ರಸ್ತೆ ಮಾರ್ಗ ಬದಲಾವಣೆ
Ganesh Chaturthi: ಬೆಂಗಳೂರಿನ ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸೆ.21ರಂದು ಸಂಜೆ 6 ಗಂಟೆಯಿಂದ ಸೆ.22 ಬೆಳಗ್ಗೆ 7 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಬೆಂಗಳೂರು: ನಗರದಲ್ಲಿ ಸೆ.21ರಂದು ಗಣೇಶ ಮೂರ್ತಿಗಳ ವಿಸರ್ಜನೆ (Ganesh Chaturthi) ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸುಗಮ ಸಂಚಾರಕ್ಕಾಗಿ ಹಲವೆಡೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಸೆ.21ರಂದು ಗುರುವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಹೀಗಾಗಿ ಗುರುವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಗ್ಗೆ 7 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಅದ್ದರಿಂದ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ | Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್
ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದ್ದು, ಇದಕ್ಕಾಗಿ ಸಂಚಾರ ಪೋಲಿಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಸೂಕ್ತ ಸ್ಥಳಗಳಲ್ಲಿ ಅಧಿಕಾರಿಗಳ ನಿಯೋಜನೆ ಮತ್ತು ಬಂದೋಬಸ್ತ್ ಮಾಡಲಾಗಿದೆ.
ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾದ ರಸ್ತೆಗಳ ವಿವರ
- ದಿಣ್ಣೂರು ಮುಖ್ಯರಸ್ತೆ
- ಆರ್.ಟಿ ನಗರ ಮುಖ್ಯರಸ್ತೆ.
- ಸಿಬಿಐ ಮುಖ್ಯರಸ್ತೆ.
ಮಾರ್ಗ ಬದಲಾವಣೆ ವಿವರಗಳು
1.ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:
ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ – ಎಡ ತಿರುವು- ಟಿ.ವಿ ಟವರ್ – ಎಡ ತಿರುವು-ಜಯಮಹಲ್ ಮುಖ್ಯರಸ್ತೆ- ರಸ್ತೆಯಲ್ಲಿ ನೇರವಾಗಿ ಕಂಟೋನೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
2.ಸುಲ್ತಾನ್ ಪಾಳ್ಯ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನ ಸವಾರರು ಸಂಚರಿಸಬೇಕಾದ ಮಾರ್ಗಗಳು:
ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ -ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ -ಬಲ ತಿರುವು- ಮಠದಹಳ್ಳಿ ಮುಖ್ಯರಸ್ತೆ- ಗುಂಡೂರಾವ್ ಸರ್ಕಲ್ – ಎಡ ತಿರುವು – ತರಳಬಾಳು ರಸ್ತೆ – ಎಡತಿರುವು- ಬೆಂಗಳೂರು ಬಳ್ಳಾರಿ ರಸ್ತೆ ಮೇಕ್ರಿ ಸರ್ಕಲ್ – ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದಾಗಿದೆ.
3.ಕಂಟೋನ್ಸೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು. – ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ:
ಜಯಮಹಲ್ ರಸ್ತೆ- ಜೆ.ಸಿ ನಗರ ಪಿ.ಎಸ್ ಜಂಕ್ಷನ್ – ಟಿವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್ ಬಲ ತಿರುವು) – ವಾಟರ್ ಟ್ಯಾಂಕ್ ಜಂಕ್ಷನ್ – ಬಲ ತಿರುವು – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೆಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ ತಿರುವು -ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.
4.ಯಶವಂತಪುರ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:
ಮೇಕ್ರಿ ಸರ್ಕಲ್- ಜಯಮಹಲ್ ಮುಖ್ಯರಸ್ತೆ – ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್ ಟ್ಯಾಂಕ್ ಜಂಕ್ಷನ್ – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೇಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ- ತಿರುವು ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.
5.ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ ಮಾರ್ಗಗಳು:
ಮೇಕಿ ಸರ್ಕಲ್- ಬಲ ತಿರುವು – ಜಯಮಹಲ್ ಮುಖ್ಯರಸ್ತೆ ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್ ಟ್ಯಾಂಕ್ ಜಂಕ್ಷನ್ – ಎಡ ತಿರುವು ಮಠದಹಳ್ಳಿ ಮುಖ್ಯ ರಸ್ತೆ – ಸರ್ಕಲ್ – ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಸಂಚರಿಸಬಹುದು.
6.ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು – ಸಂಚರಿಸಬೇಕಾದ ಮಾರ್ಗಗಳು:
ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ – ಬೆಂಗಳೂರು ಬಳ್ಳಾರಿ ರಸ್ತೆ- ಸಿಬಿಐ ಜಂಕ್ಷನ್ – ಸಂಜಯನಗರ ಕ್ರಾಸ್- ತರಳಬಾಳು ರಸ್ತೆ ಎಡತಿರುವು- ದೇಸ್ವರಾಜ್ ರಸ್ತೆ -ಗುಂಡೂರಾವ್ ಸರ್ಕಲ್ ಬಲತಿರುವು- 1 – ಮಠದಹಳ್ಳಿ ರಸ್ತೆ ವಾಟರ್ ಟ್ಯಾಂಕ್ ಜಂಕ್ಷನ್ ಎಡ ತಿರುವು -ಪಿ.ಆರ್.ಟಿ.ಸಿ ಜಂಕ್ಷನ್ – ದೇವೆಗೌಡ ರಸ್ತೆ – ದಿಣ್ಣೂರು ಸಂಚರಿಸಬಹುದು. – ಎಡ ತಿರುವು ದಿಣ್ಣೂರು ಜಂಕ್ಷನ್ ಬಲ ತಿರುವು ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ.
ಗಣೇಶ ಚತುರ್ಥಿ
Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್
Ganesh Chaturthi : ಸೆ.22 ಹಾಗೂ 24 ರಂದು ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಇರುವುದರಿಂದ ಬೆಂಗಳೂರಿನ ಕೆಲವು ಕಡೆ ಸಂಚಾರವನ್ನು (Traffic advisory) ನಿರ್ಬಂಧಿಸಲಾಗಿದೆ.
ಬೆಂಗಳೂರು: ಗಣಪತಿ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯಕ್ರಮ (Ganesh Chaturthi) ಇರುವುದರಿಂದ ಬೆಂಗಳೂರಿನ ಕೆಲವು ಕಡೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸೆ. 22 ರಂದು ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣಪತಿ ಮೂರ್ತಿಗಳ ಮೆರವಣಿಗೆ ಜತೆಗೆ ಹಲಸೂರು ಕೆರೆಯಲ್ಲಿ ವಿಸರ್ಜನಾ ಕಾರ್ಯಕ್ರಮ ಇರಲಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಂಚಾರ ನಿರ್ಬಂಧ ಹೇರಲಾಗಿದೆ.
ಎಲ್ಲಿಲ್ಲಿ ಸಂಚಾರ ನಿರ್ಬಂಧ
ಸೆ. 22 ಹಾಗೂ ಸೆ.24ರಂದು ಮಾತ್ರ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ.
-ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
-ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೂ ಸಂಚಾರ ಬಂದ್ ಆಗಲಿದೆ.
-ಕೆನ್ಸಿಂಗ್‌ಟನ್ ಕಡೆಯಿಂದ ಎಂ.ಇ.ಜಿ ಮೂಲಕ ಹಲಸೂರು ಲೇಕ್ ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರ ಇರಲಿದೆ.
ಇದನ್ನೂ ಓದಿ: Ganesh Chaturthi : ಗಣೇಶೋತ್ಸವದಲ್ಲಿ ಕಾಂತಾರ ಮೋಡಿ; ಭೂತಕೋಲದ ವೈಭವ ನೋಡಿ
ಪರ್ಯಾಯ ಮಾರ್ಗಗಳು ಹೀಗಿವೆ
- ಥಣಿಸಂದ್ರ ಕಡೆಯಿಂದ ಶಿವಾಜಿನಗರ ಜಂಕ್ಷನ್ ಕಡೆಗೆ ಬರುವ ವಾಹನಗಳು ನಾಗವಾರ ಜಂಕ್ಷನ್‌ನಿಂದ ಎಡತಿರುವು ಪಡೆದು ಹೆಣ್ಣೂರು ಜಂಕ್ಷನ್‌ನಿಂದ ಬಲಿತಿರುವು ಪಡೆಯಬಹುದು. ಸಿದ್ದಪ್ಪ ರೆಡ್ಡಿ ಜಂಕ್ಷನ್, ಅಯೋಧ್ಯೆ ಜಂಕ್ಷನ್, ಲಿಂಗರಾಜಪುರಂ , ಐಟಿಸಿ ಫ್ಲೈ ಓವರ್ ಮೂಲಕ ರಾಬರ್ಟ್‌ಸನ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಹೆನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪಬಹುದು.
- ಶಿವಾಜಿನಗರ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನಗಳು ಸ್ಪೆನ್ಸರ್ ರಸ್ತೆಯಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದು ಸ್ಪೆನ್ಸರ್ ರಸ್ತೆ ಮೂಲಕ ಕೋಲ್ಡ್ ರಸ್ತೆ ತಲುಪಿ ವೀಲರ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ಹಲಸೂರು ಕಡೆಗೆ ಸಂಚರಿಸಬಹುದಾಗಿದೆ.
- ಆರ್.ಟಿ.ನಗರ ದಿಂದ ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಪುಷ್ಪಾಂಜಲಿ ಟಾಕೀಸ್ ಬಳಿ ಎಡ ತಿರುವು ಪಡೆದು ವೀರ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ಕಡೆಗೆ ಹೋಗಹುದು.
- ಹೇನ್ಸ್, ನೇತಾಜಿ ರಸ್ತೆ ಕಡೆಯಿಂದ ಬ್ಯಾನರಿ ರಸ್ತೆ ಮೂಲಕ ನಾಗವಾರ ಕಡೆಗೆ ಬರುವ ವಾಹನಗಳು ನೇತಾಜಿ ಜಂಕ್ಷನ್‌ನಿಂದ ಬಲತಿರುವು ಪಡೆದು ಮಾಸ್ಕ್ ಜಂಕ್ಷನ್ , ಲಾಜರ್ ರಸ್ತೆ, ಪಾಟರಿ ಸರ್ಕಲ್, ಹೆಣ್ಣೂರು ರಸ್ತೆ ಜಂಕ್ಷನ್, ಹೆಚ್.ಎಂ.ರಸ್ತೆ ಡೇವಿಸ್ ರಸ್ತೆ ಜಂಕ್ಷನ್ ಮೂಲಕ ಲಿಂಗರಾಜಪುರಂ ಫ್ಲೈಓವರ್ ಮುಖೇನ ಹೆಣ್ಣೂರು ಕಡೆ ಹೋಗಬಹುದು.
- ಕೆನ್ಸಿಂಗ್‌ಟನ್ ಕಡೆಯಿಂದ ಎಂ.ಇ.ಜಿ ಮೂಲಕ – ಹಲಸೂರು ಲೇಕ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಕೆನ್ಸಿಂಗ್ ಟನ್ ನಿಂದ ಗುರದ್ವಾರ ಜಂಕ್ಷನ್ ಬಲ ತಿರುವು ಪಡೆದು ತಿರುವಳ್ಳವರ್ ಪ್ರತಿಮೆ ಆರ್.ಬಿ.ಐ ಕ್ವಾಟ್ರಸ್ ಜಂಕ್ಷನ್ ಲಾವಣ್ಯ ಥಿಯೇಟರ್ ಜಂಕ್ಷನ್ – ನಾಗಾ ಜಂಕ್ಷನ್ ಬಲತಿರುವು ಪಡೆದು ಹಲಸೂರು ಕೆರೆ ಕಡೆಗೆ ಹೋಗಬಹುದು.
ಪಾರ್ಕಿಂಗ್ ನಿಷೇಧ
ಗಣೇಶ ಮೆರವಣಿಗೆ ಹಾಗೂ ವಿಸರ್ಜನೆ ಸಮಯದಲ್ಲಿ ಕೆಲವು ಕಡೆ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿದೆ. ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಕಾ & ಸು ಪೊಲೀಸ್ ಠಾಣೆಯವರೆಗೆ ಮತ್ತು ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್ ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ನಿರ್ಬಂಧಿಸಲಾಗಿರುತ್ತದೆ.
ಜತೆಗೆ ಪಾಟರಿ ಸರ್ಕಲ್ ಎಂ.ಎಂ.ರಸ್ತೆಯಿಂದ ಲಾಜರ್ ರಸ್ತೆವರೆಗೆ ಹಾಗೂ ಸಿಂಧಿ ಕಾಲೋನಿ ಜಂಕ್ಷನ್‌ನಿಂದ ವಾರ ಮೆಮೊರಿಯಲ್ ಜಂಕ್ಷನ್ ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿದೆ. ಹಲಸೂರು ಕೆರೆಯ ಮುಖ್ಯದ್ವಾರ ಮತ್ತು ಸುತ್ತಲೂ ಇರುವ ರಸ್ತೆಗಳಲ್ಲಿ ಪಾರ್ಕಿಂಗ್ ಅನ್ನು ಸೆ. 22 ಮತ್ತು 24 ರಂದು ನಿರ್ಬಂಧಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Ganesh Chaturthi : ಗಣೇಶೋತ್ಸವದಲ್ಲಿ ಕಾಂತಾರ ಮೋಡಿ; ಭೂತಕೋಲದ ವೈಭವ ನೋಡಿ
Ganesh Chaturthi : ಈ ವರ್ಷದ ಗಣೇಶ ಹಬ್ಬದಲ್ಲಿ ಕಾಂತಾರ (Kantara Film) ಹವಾ ಜೋರಾಗಿದೆ. ಭೂತಕೋಲ ಕೈಯಲ್ಲಿ ಬೆಂಕಿಯನ್ನು ಹಿಡಿದು ಆ್ಯಕ್ಷನ್ ಮಾಡುವ ರೀತಿ ರಿಯಲಿಸ್ಟಿಕ್ ಆಗಿ ನಿರ್ಮಾಣ ಮಾಡಲಾಗಿದೆ.
ಆನೇಕಲ್ : ಕಾಂತಾರ ಸಿನಿಮಾ ಮಾಡಿರುವ ಮೋಡಿ ಈಗಲೂ ಮುಂದುವರಿದಿದೆ. ಗಣೇಶ ಚತುರ್ಥಿ (Ganesh Chaturthi) ಹಿನ್ನೆಲೆಯಲ್ಲಿ ರಾಜ್ಯ ಗಡಿಭಾಗ ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ಕಾಂತಾರ ಹವಾ ಜೋರಾಗಿದೆ. ಅದ್ಧೂರಿಯಾಗಿ ಕಾಂತಾರ ಸೆಟ್ ಹಾಕಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಆರ್ಟ್ ಡೈರೆಕ್ಟರ್ ಚಿತ್ತಾ ಜಿನೇಂದ್ರ ಎಂಬುವವರು ಕಾಂತಾರ ಸೆಟ್ ನಿರ್ಮಿಸಿದ್ದಾರೆ. ಬರೋಬ್ಬರಿ 16 ಲಕ್ಷ ರೂ. ವೆಚ್ಚದಲ್ಲಿ ಈ ಸೆಟ್ ಸಿದ್ಧ ಮಾಡಲಾಗಿದೆ. ಶ್ರೀ ರಾಜಮಾರ್ತಾಂಡ ಗಣಪತಿ ಭಕ್ತ ಮಂಡಳಿ ಕಳೆದೊಂದು ತಿಂಗಳಿನಿಂದ ಕಾಂತಾರ ಸೆಟ್ ನಿರ್ಮಾಣಕ್ಕೆ ತಯಾರಿ ನಡೆಸಿದೆ.
ಇದನ್ನೂ ಓದಿ: Raja Marga Column : ತಿಲಕರು ಮತ್ತು ಮಹಾರಾಷ್ಟ್ರದ ಸಾವಿರಾರು ಗಣೇಶ ಮಂಡಲಗಳು, ಅದೊಂದು ವಿಶ್ವದಾಖಲೆ
ಮಾಂಸಹಾರ ತ್ಯಜಿಸಿ ಸೆಟ್ ನಿರ್ಮಾಣ
ತುಳು ನಾಡಿನ ಆರಾಧ್ಯ ದೈವದ ನಿಜವಾದ ಕಥೆಯಾಗಿರುವುದರಿಂದ ಶ್ರದ್ಧೆ, ಭಕ್ತಿಯಿಂದ ಸೆಟ್ ನಿರ್ಮಾಣ ಮಾಡಲಾಗಿದೆ. ಕಳೆದೊಂದು ತಿಂಗಳಿನಿಂದ ಮಾಂಸಹಾರವನ್ನು ತ್ಯಜಿಸಿ ಕಾಂತಾರ ಸೆಟ್‌ಗಾಗಿ ಸಿದ್ಧತೆ ಮಾಡಲಾಗಿದೆ.
ಮೊದಲಿಗೆ 20 ಅಡಿ ಎತ್ತರದ ವರಾಹರೂಪಿ ಪಂಜುರ್ಲಿ ನಿರ್ಮಾಣ ಮಾಡಲಾಗಿದ್ದು, ಅಲ್ಲಿಂದ ಒಳ ಬರುತ್ತಿದ್ದಂತೆ ಸುತ್ತಲೂ ಫೈರ್ ಫೀಲ್ ಆಗುವಂತೆ ಭೂತಕೋಲ ಸೆಟ್ ಹಾಕಲಾಗಿದೆ. ಭೂತಕೋಲ ಕೈಯಲ್ಲಿ ಬೆಂಕಿಯನ್ನು ಹಿಡಿದು ಆ್ಯಕ್ಷನ್ ಮಾಡುವ ರೀತಿ ರಿಯಲಿಸ್ಟಿಕ್ ಆಗಿ ನಿರ್ಮಾಣ ಮಾಡಲಾಗಿದೆ.
ಕಾಡುಬೆಟ್ಟದ ಸೆಟ್ ಹಾಕಿ ಕಾಡಿನಂತೆ ಕಾಣುವಂತೆ ಸೆಟ್ ನಿರ್ಮಿಸಿ, ಒಳಭಾಗದಲ್ಲಿ ಕಾಂತಾರ ಸಿನಿಮಾ ಕಥೆಯ ರಾಜನಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಪಂಜುರ್ಲಿ, ವರಾಹರೂಪಿ, ಭೂತಕೋಲ, ಗುಳಿಗ ದೈವ, ಕಾಡು ಬೆಟ್ಟ ಸೆಟ್ ಹೈಲೆಟ್ ಮಾಡಲಾಗಿದೆ.
ಹತ್ತಾರು ಊರುಗಳಿಂದ ಭಕ್ತರ ಆಗಮನ
ಕಾಂತಾರ ಸೆಟ್‌ನಲ್ಲಿರುವ ಗಣಪನನ್ನು ನೋಡಲು ಹತ್ತಾರು ಊರುಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಆನೇಕಲ್, ಬೆಂಗಳೂರು, ಕೃಷ್ಣಗಿರಿ, ಆಂಧ್ರ ಪ್ರದೇಶದಿಂದಲೂ ಜನರು ಭೇಟಿ ನೀಡುತ್ತಿದ್ದಾರೆ. ಫೋಟೊ ತೆಗೆದುಕೊಂಡು ಖುಷಿ ಪಡುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಪ್ರಮುಖ ಸುದ್ದಿ12 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ3 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ9 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ23 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ22 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಗ್ಯಾಜೆಟ್ಸ್6 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಆರೋಗ್ಯ15 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!