Guru Purnima 2024: ನಾಳೆ ಗುರು ಪೂರ್ಣಿಮೆ; ಇದರ ಹಿನ್ನೆಲೆ ಏನು? ಆಚರಣೆ ಹೇಗೆ? - Vistara News

ಧಾರ್ಮಿಕ

Guru Purnima 2024: ನಾಳೆ ಗುರು ಪೂರ್ಣಿಮೆ; ಇದರ ಹಿನ್ನೆಲೆ ಏನು? ಆಚರಣೆ ಹೇಗೆ?

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಪುರಂದರ ದಾಸರು ಹೇಳಿರುವಂತೆ ಪ್ರತಿಯೊಬ್ಬರ ಬದುಕಿನಲ್ಲೂ ಗುರುವಾಗಿ ಯಾರಾದರೊಬ್ಬರು ಜೀವನಕ್ಕೆ ಸರಿಯಾದ ಮಾರ್ಗದರ್ಶನವನ್ನು ತೋರಿಸುತ್ತಾರೆ. ಅಂತಹ ವ್ಯಕ್ತಿಗಳಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಆಷಾಢ ತಿಂಗಳ ಹುಣ್ಣಿಮೆಯಂದು ಗುರು ಪೂರ್ಣಿಮೆಯನ್ನು (Guru Purnima 2024) ಆಚರಿಸಲಾಗುತ್ತದೆ. ಕೇವಲ ಹಿಂದೂಗಳು ಮಾತ್ರವಲ್ಲ ಬೌದ್ಧ, ಜೈನರಿಗೂ ಈ ದಿನ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.

VISTARANEWS.COM


on

Guru Purnima 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬದುಕಿನ ಮೌಲ್ಯಗಳನ್ನು ತಿಳಿಸುವ ಗುರುವಿಗೆ ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಉನ್ನತ ಮತ್ತು ಗೌರವದ ಸ್ಥಾನಮಾನವಿದೆ. ಜೀವನ ಮತ್ತು ಆಧ್ಯಾತ್ಮಿಕ (Life and Spirituality) ಶಕ್ತಿಯ ಮೌಲ್ಯವನ್ನು ತಿಳಿಸುವ ಗುರುವಿಗೆ ಗೌರವ ಸಲ್ಲಿಸಲು ಗುರುಪೂರ್ಣಿಮೆಯನ್ನು (Guru Purnima 2024) ಪ್ರತಿ ವರ್ಷ ಆಚರಿಸಲಾಗುತ್ತದೆ. ಗುರುಪೂರ್ಣಿಮೆಯು ಹಿಂದುಗಳಿಗೆ (hindu) ಮಾತ್ರವಲ್ಲ ಜೈನ (jain), ಬೌದ್ಧರಿಗೂ (Buddhist) ಅತ್ಯಂತ ಶ್ರೇಷ್ಠ ಮತ್ತು ಪವಿತ್ರ ದಿನವಾಗಿದೆ.

ಗುರುವೆಂದರೆ ಶಾಲೆಯಲ್ಲಿ ಪಾಠ ಕಳಿಸಿದ ಶಿಕ್ಷಕರೇ ಆಗಬೇಕಿಲ್ಲ. ಬದುಕಿನಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಮಾರ್ಗದರ್ಶನ ತೋರುವ ಪ್ರತಿಯೊಬ್ಬರೂ ಗುರುವಿಗೆ ಸರಿ ಸಮಾನರಾಗಿರುತ್ತಾರೆ. ಅದು ತಂದೆ, ತಾಯಿ, ಸಹೋದರ, ಸಹೋದರಿ, ಸ್ನೇಹಿತರು, ಬಂಧುಗಳು… ಹೀಗೆ ಯಾರೇ ಆಗಿರಬಹುದು. ಒಟ್ಟಿನಲ್ಲಿ ನಮ್ಮ ಹಿತವನ್ನು ಬಯಸಿ ನಮ್ಮ ಬದುಕಿಗೆ ಸರಿಯಾದ ಮಾರ್ಗದರ್ಶನ ತೋರುವವರೇ ಗುರುಗಳಾಗಿರುತ್ತಾರೆ. ಗುರು ಪೂರ್ಣಿಮೆಯ ದಿನ ಇವರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಯಾವಾಗ ?

ಈ ಬಾರಿ ಗುರು ಪೂರ್ಣಿಮೆಯನ್ನು ಆಷಾಢ ತಿಂಗಳ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಜುಲೈ 21ರಂದು ಭಾನುವಾರ ಆಚರಿಸಲಾಗುತ್ತಿದೆ. ಗುರು ಪೂರ್ಣಿಮೆ ತಿಥಿಯು ಜುಲೈ 20ರಂದು ಶನಿವಾರ ಸಂಜೆ 5.59ರಿಂದ ಜುಲೈ 21ರಂದು ಮಧ್ಯಾಹ್ನ 3.46ರವರೆಗೆ ಇರುತ್ತದೆ.


ಇದರ ಇತಿಹಾಸ ಏನು?

ಭಾರತದಾದ್ಯಂತ ವೇದಗಳ ಕಾಲದಿಂದಲೂ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಇದು ಐತಿಹಾಸಿಕ ಮತ್ತು ಆಧ್ಯಾತ್ಮಿಕ ನಂಬಿಕೆಯ ಭಾಗವಾಗಿದೆ. ಹಿಂದೂಗಳು ಈ ದಿನವನ್ನು ಗುರು ವೇದವ್ಯಾಸರ ಜನ್ಮದಿನವಾಗಿ ಆಚರಿಸುತ್ತಾರೆ. ʼಮಹಾಭಾರತʼ ಬರೆದ ವ್ಯಾಸ ಪರಾಶರ ಋಷಿ ಮತ್ತು ಮೀನುಗಾರನ ಮಗಳು ಸತ್ಯವತಿಗೆ ಈ ದಿನ ವೇದವ್ಯಾಸರು ಜನಿಸಿದ್ದರು. ಹೀಗಾಗಿ, ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದೂ ಆಚರಿಸಲಾಗುತ್ತದೆ. ಮಹಾಭಾರತ ಮತ್ತು ಪುರಾಣವನ್ನು ಬರೆದಿರುವ ಗುರು ವೇದವ್ಯಾಸರು ಸಾಮಾನ್ಯ ಜನರಿಗೂ ಅಧ್ಯಯನ ಮಾಡಲು ಸುಲಭವಾಗುವ ಹಾಗೆ ವೇದಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಬರೆದರು.

ಬೌದ್ದ ಧರ್ಮದ ಅನುಯಾಯಿಗಳು ಈ ದಿನವನ್ನು ಬುದ್ಧನ ಗೌರವಾರ್ಥವಾಗಿ ಆಚರಿಸುತ್ತಾರೆ. ಬೌದ್ಧಧರ್ಮದ ಪ್ರಕಾರ ಬುದ್ಧನು ಈ ದಿನ ಜ್ಞಾನೋದಯದ ಬಳಿಕ ಮೊದಲ ಬಾರಿಗೆ ಸಾರಾನಾಥದಲ್ಲಿ ಧರ್ಮೋಪದೇಶ ನೀಡಿದ ಎನ್ನಲಾಗುತ್ತದೆ. ಗುರು ಪೂರ್ಣಿಮೆಯ ದಿನದಂದು ಗೌತಮ ಬುದ್ಧನು ತನ್ನ ಮೊದಲ ಐದು ಅನುಯಾಯಿಗಳಿಗೆ ಧರ್ಮೋಪದೇಶ ಮಾಡಿದನು ಮತ್ತು ತನ್ನ ಶಿಷ್ಯರ ಸಮುದಾಯವನ್ನು ರಚಿಸಿದನು.

ಜೈನ ಧರ್ಮದಲ್ಲೂ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಟ್ರೀನೋಕ್ ಗುಹಾ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನ ಮಹಾವೀರನು ಕೈವಲ್ಯವನ್ನು ಪಡೆದ ಅನಂತರ ಗೌತಮ ಸ್ವಾಮಿಯನ್ನು ತನ್ನ ಮೊದಲ ಶಿಷ್ಯನನ್ನಾಗಿ ಮಾಡಿಕೊಂಡನು ಎನ್ನಲಾಗುತ್ತದೆ.

ಆಚರಣೆಯ ಮಹತ್ವವೇನು?

ಸಾವಿರಾರು ವರ್ಷಗಳ ಹಿಂದಿನಿಂದ ಆಚರಿಸಲಾಗುವ ಗುರು ಪೂರ್ಣಿಮೆಯನ್ನು ಇಂದಿನ ಮಕ್ಕಳಿಗೆ ಗುರುವಿನ ಸ್ಥಾನಮಾನಗಳನ್ನು ತಿಳಿಸಲು ಬಳಸಲಾಗುತ್ತದೆ. ತಮ್ಮ ಜೀವನವನ್ನು ಶ್ರೇಷ್ಠಗೊಳಿಸುವ ವ್ಯಕ್ತಿಗೆ ಗೌರವ ನೀಡುವುದನ್ನು ಕಲಿಸಲು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಗುರು ಪೂರ್ಣಿಮೆಯು ಮಕ್ಕಳನ್ನು ಅಧ್ಯಾತ್ಮದತ್ತ ಸೆಳೆಯುವ ಒಂದು ದಾರಿಯಾಗಿದೆ. ನಾವು ಗುರುಗಳಿಗೆ ತೋರುವ ಗೌರವ, ಭಕ್ತಿಯನ್ನು ನಮ್ಮ ಮಕ್ಕಳಲ್ಲೂ ಬೆಳೆಸಲು ಈ ದಿನದ ಆಚರಣೆ ಅತ್ಯಂತ ಮಹತ್ವದ್ದಾಗಿದೆ.

ಇದನ್ನೂ ಓದಿ: Uttara Kannada News: ಗೋಕರ್ಣದ ʼಅಶೋಕೆʼಯಲ್ಲಿ ಜು. 21ರಿಂದ ರಾಘವೇಶ್ವರಶ್ರೀ ಚಾತುರ್ಮಾಸ್ಯ

ಇದರ ಆಚರಣೆ ಹೇಗೆ?

ಗುರು ಪೂರ್ಣಿಮೆಯ ದಿನ ಹಿಂದೂಗಳು ಬೇಗನೆ ಎದ್ದು ಮಹಾ ಗುರುವಿಗೆ ತಮ್ಮ ಪೂಜೆಯನ್ನು ಸಲ್ಲಿಸುತ್ತಾರೆ. ಮಹಾ ಗೀತೆಯ ಪಠಣದ ಮೂಲಕ ಮಹಾ ಗುರುವನ್ನು ಸ್ಮರಿಸಲಾಗುತ್ತದೆ ಮತ್ತು ಅವರ ಬೋಧನೆಗಳನ್ನು ಪಾಲಿಸಲಾಗುತ್ತದೆ. ಈ ಮಂಗಳಕರ ದಿನದಂದು ಗುರುಗಳಿಗೆ ಹೂವು, ಉಡುಗೊರೆಗಳನ್ನು ಅರ್ಪಿಸಲಾಗುತ್ತದೆ. ಪಾದ ಪೂಜೆ ನಡೆಸಲಾಗುತ್ತದೆ. ವೇದವ್ಯಾಸರಿಗೆ ಮೀಸಲಾದ ಆಶ್ರಮಗಳಲ್ಲಿ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಮನೆಯಲ್ಲಿ ಸಂಪತ್ತು ಸದಾ ತುಂಬಿರಬೇಕೆ? ಈ ನಿಯಮ ಪಾಲಿಸಿ

ಬಹಳಷ್ಟು ವ್ಯಕ್ತಿಗಳು ಹಣ ಮಾಡುವ ವಿಶ್ವಾಸದಿಂದ ತಮ್ಮ ಪರ್ಸ್‌ನಲ್ಲಿ ಸಣ್ಣ ಕೆಂಪು ಬಟ್ಟೆ ಅಥವಾ ಅಕ್ಷತೆಯನ್ನು ಇಟ್ಟಿರುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಅವರಿಗೆ ಯಶಸ್ಸು ತರುತ್ತೆ ಎಂಬುದನ್ನು ಅವರೇ ಹೇಳಬೇಕು. ಅತೀ ಬೇಗ ಶ್ರೀಮಂತರಾಗಬೇಕು, ಹಣದ ಕೊರತೆ ಎದುರಾಗಬಾರದು ಎಂದು ಬಯಸುವವರು ವಾಸ್ತುಶಾಸ್ತ್ರ (Vastu Tips) ಹೇಳಿರುವ ಈ ನಿಯಮಗಳನ್ನು ಪಾಲಿಸಬಹುದು.

VISTARANEWS.COM


on

By

Vastu Tips
Koo

ಜೀವನದಲ್ಲಿ ಒಂದಲ್ಲ ಒಂದು ಬಾರಿ ಪ್ರತಿಯೊಬ್ಬರಿಗೂ ಹಣದ (money) ಕೊರತೆ ಖಂಡಿತ ಕಾಡುತ್ತದೆ. ಕಷ್ಟಕರವಾದ ಆರ್ಥಿಕ ಪರಿಸ್ಥಿತಿಯಿಂದ (financial situation) ಮೇಲೇಳುವುದು ಸುಲಭದ ಮಾತಲ್ಲ. ಅದಕ್ಕಾಗಿ ತೀವ್ರ ಹೋರಾಟ, ಪರಿಶ್ರಮ ಬೇಕಾಗುತ್ತದೆ. ವಾಸ್ತುಶಾಸ್ತ್ರವು (Vastu Tips) ಹಣದ ಕೊರತೆಯನ್ನು ನಿರ್ವಹಿಸಲು ಕೆಲವೊಂದು ಸರಳ ಉಪಾಯಗಳನ್ನು ಹೇಳಿದೆ. ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ ಕೆಲವು ವಾಸ್ತು ನಿಯಮಗಳನ್ನು ಪಾಲಿಸಿ ಅದರಿಂದ ಮುಕ್ತರಾಗಬಹುದು.

ಬಹಳಷ್ಟು ವ್ಯಕ್ತಿಗಳು ಹಣ ಮಾಡುವ ವಿಶ್ವಾಸದಿಂದ ತಮ್ಮ ಪರ್ಸ್‌ನಲ್ಲಿ ಸಣ್ಣ ಕೆಂಪು ಬಟ್ಟೆ ಅಥವಾ ಅಕ್ಷತೆಯನ್ನು ಇಟ್ಟಿರುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಅವರಿಗೆ ಯಶಸ್ಸು ತರುತ್ತೆ ಎಂಬುದನ್ನು ಅವರೇ ಹೇಳಬೇಕು. ಅತೀ ಬೇಗ ಶ್ರೀಮಂತರಾಗಬೇಕು, ಹಣದ ಕೊರತೆ ಎದುರಾಗಬಾರದು ಎಂದು ಬಯಸುವವರು ವಸ್ತು ಶಾಸ್ತ್ರ ಹೇಳಿರುವ ಈ ನಿಯಮಗಳನ್ನು ಪಾಲಿಸಿರಿ.


ಸುರಕ್ಷಿತ ದ್ವಾರವು ಉತ್ತರದ ಕಡೆಗೆ ತೆರೆಯಬೇಕು

ಉತ್ತರ ದಿಕ್ಕು ಸಂಪತ್ತಿನ ಒಡೆಯ ಕುಬೇರನದ್ದು ಎಂದು ಹೇಳಲಾಗುತ್ತದೆ. ಹೀಗಾಗಿ ನಾವು ನಮ್ಮ ಸಂಪತ್ತು ಇಡಲು ಬಳಸುವ ಕೋಣೆಯಲ್ಲಿ ವಾಸ್ತು ನಿಯಮದ ಪ್ರಕಾರ ಕೆಲವೊಂದು ಮಾರ್ಗಸೂಚಿಗಳನ್ನು ಅನುಸರಿಸಬೇಕು.

ಇದಕ್ಕಾಗಿ ಗೊತ್ತುಪಡಿಸಿದ ಕೊಠಡಿಯಲ್ಲಿ ಸಂಪತ್ತನ್ನು ಸುರಕ್ಷಿತವಾಗಿರಿಸಲು ಸುರಕ್ಷಿತ ಮತ್ತು ದಕ್ಷಿಣ ಗೋಡೆಯ ನಡುವೆ ಯಾವಾಗಲೂ ಕನಿಷ್ಠ ಒಂದು ಇಂಚು ಇರಬೇಕು. ಇದರ ಜೊತೆಗೆ, ಆಗ್ನೇಯ ಮತ್ತು ನೈಋತ್ಯ ಮೂಲೆಗಳು ಸಂಪತ್ತನ್ನು ಸುರಕ್ಷಿತವಾಗಿರಿಸಲು ಉತ್ತಮ ಸ್ಥಳಗಳಲ್ಲ.ಸಂಪತ್ತನ್ನು ಸುರಕ್ಷಿತವಾಗಿರಿಸುವ ಕಪಾಟಿನ ಹಿಂಭಾಗವು ದಕ್ಷಿಣಾಭಿಮುಖವಾಗಿ ತೆರೆಯಬೇಕು. ಅಂದರೆ ಅದರ ಬಾಗಿಲು ಉತ್ತರಕ್ಕೆ ಎದುರಾಗಿರಬೇಕು.

ಕೋಣೆಯಲ್ಲಿ ಬೆಳಕು

ಕೋಣೆಯ ಬಾಗಿಲನ್ನು ಉತ್ತರ ಅಥವಾ ಪೂರ್ವಕ್ಕೆ ತೆರೆಯುವುದು ಅತ್ಯಂತ ಮಂಗಳಕರ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದು ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ಭಾವಿಸಲಾಗಿದೆ. ಉತ್ತರಕ್ಕೆ ಎದುರಾಗಿರುವ ಬಾಗಿಲಿನ ಮುಂದೆ ಯಾವುದೇ ರೀತಿಯ ಅಡ್ಡವಾಗಿ ವಸ್ತು, ಗೋಡೆಗಳನ್ನು ಇಡಬಾರದು. ಗುಪ್ತ ಕೋಣೆಯಲ್ಲಿ ಗಾಳಿ ಮತ್ತು ಬೆಳಕಿಗೂ ಹೆಚ್ಚು ಆದ್ಯತೆ ಕೊಡಬೇಕು. ಗುಪ್ತ ಕೋಣೆಯ ಮೇಲ್ಭಾಗದಲ್ಲಿ ಉತ್ತರ ಅಥವಾ ಪೂರ್ವಕ್ಕೆ ಎದುರಾಗಿರುವ ಸಣ್ಣ ಕಿಟಕಿಯನ್ನು ಹೊಂದುವುದು ಅದೃಷ್ಟ ತರುತ್ತದೆ ಎಂದೇ ಭಾವಿಸಲಾಗುತ್ತದೆ.

ಇದನ್ನೂ ಓದಿ: Vastu Tips: ನಿಮಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ ನೋಡಿ!


ಹಣದ ವಹಿವಾಟುಗಳು

ಬ್ರಾಹ್ಮಿ ಮುಹೂರ್ತ ಅಥವಾ ಸಂಜೆಯ ಸಮಯದಲ್ಲಿ ಹಣದ ವ್ಯವಹಾರವನ್ನು ಎಂದಿಗೂ ಮಾಡಬೇಡಿ. ಇದನ್ನು ಪಾಲಿಸಿದರೆ ಎಂದಿಗೂ ಹಣದ ಕೊರತೆಯಾಗುವುದಿಲ್ಲ. ಬ್ರಾಹ್ಮಿ ಮುಹೂರ್ತ ಮತ್ತು ಸಂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಯು ತನ್ನ ಅನುಯಾಯಿಗಳಿಗೆ ತನ್ನ ಅನುಗ್ರಹವನ್ನು ನೀಡುತ್ತಾಳೆ ಎಂದು ಭಾವಿಸಲಾಗಿರುವುದರಿಂದ ಈ ಎರಡು ಅವಧಿಯಲ್ಲಿ ಯಾರಿಗಾದರೂ ಹಣವನ್ನು ನೀಡುವುದರಿಂದ ನಿಮಗೆ ಹಣದ ಕೊರತೆ ಉಂಟಾಗಬಹುದು. ಆದರೆ ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡಬೇಕಾಗಿ ಬಂದಾಗ ಈ ನಿಯಮ ಮುರಿದರೆ ಏನೂ ಆಗುವುದಿಲ್ಲ.

Continue Reading

ಚಿಕ್ಕಬಳ್ಳಾಪುರ

Kaivara Tatayya: ಕೈವಾರ ಶ್ರೀ ಯೋಗಿನಾರೇಯಣ ಮಠದಲ್ಲಿ ಜು.19ರಿಂದ ಗುರುಪೂಜಾ ಮಹೋತ್ಸವ, ಸಂಗೀತೋತ್ಸವ

Kaivara Tatayya: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಶ್ರೀಕ್ಷೇತ್ರ ಸದ್ಗುರು ಶ್ರೀ ಯೋಗಿನಾರೇಯಣ ಮಠದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಜು.19ರಿಂದ ಮೂರು ದಿನಗಳ ಕಾಲ ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವ ನಡೆಯಲಿದೆ.

VISTARANEWS.COM


on

Guru Puja Mahotsav and Sangeethotsava from July 19th at Kaiwara Srikshethra Sadguru Sri Yoginareyan Mutt
Koo

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಶ್ರೀಕ್ಷೇತ್ರ ಸದ್ಗುರು ಶ್ರೀ ಯೋಗಿನಾರೇಯಣ ಮಠದಲ್ಲಿ (Kaivara Tatayya) ಗುರುಪೂರ್ಣಿಮಾ ಪ್ರಯುಕ್ತ ಜು.19ರಿಂದ ಮೂರು ದಿನಗಳ ಕಾಲ ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವ ಏರ್ಪಡಿಸಲಾಗಿದೆ.

ಜು.19ರಂದು ಶುಕ್ರವಾರ ಸಂಜೆ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಪಿ.ಜೆ.ಬ್ರಹ್ಮಾಚಾರಿ ಮತ್ತು ತಂಡದವರಿಂದ ಪಿಟೀಲು ಸೋಲೋ, ಅಧಿತಿ ಪ್ರಹ್ಲಾದ್‌, ವಿನಯ್‌ ಶರ್ವ, ಲಕ್ಷ್ಮೀ ಹೊಸೂರು, ಡಿ.ಆರ್‌. ರಾಜಪ್ಪ ಅವರ ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.

ಜು.20 ರಂದು ಶನಿವಾರ ಸಂಜೆ 5.30ಕ್ಕೆ ಸಿ.ಕೆ. ಪತಂಜಲಿ ಮತ್ತು ವಿಶ್ವೇಶ್ವರನ್‌ ತಂಡದವರಿಂದ ಕೊಳಲು, ಕೇರಳದ ಸೂರ್ಯಗಾಯತ್ರಿ, ಚೆನ್ನೈನ ಸಿಕ್ಕಿಲ್‌ ಸಿ. ಗುರುಚರಣ್‌ ಮತ್ತು ತಂಡದವರಿಂದ ಗಾಯನ, ಚೆನ್ನೈನ ಪದ್ಮಶ್ರೀ ಎ. ಕನ್ಯಾಕುಮಾರಿ ಮತ್ತು ತಂಡದವರಿಂದ ಪಿಟೀಲು ಸೋಲೋ ಮತ್ತು ಬೆಂಗಳೂರಿನ ಶ್ರೀ ರುದ್ರಾಕ್ಷಾ ನಾಟ್ಯಾಲಯ ಕಲಾವಿದರಿಂದ ಭರತನಾಟ್ಯ ಮತ್ತು ಡಾ.ಎ. ವಿಜಯ್‌ ಕಾರ್ತೀಕೇಯನ್‌, ಮಲೈ ಎಂ. ಕಾರ್ತಿಕೇಯನ್‌ ಅವರ ತಂಡದವರಿಂದ ನಾದಸ್ವರ ಏರ್ಪಡಿಸಲಾಗಿದೆ.

ಇದನ್ನೂ ಓದಿ: Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

ಜು.21 ರಂದು ಭಾನುವಾರ ಗುರುಪೂಜಾ ಮಹೋತ್ಸವ ಜರುಗಲಿದ್ದು, ಬೆಳಿಗ್ಗೆ 5 ಗಂಟೆಗೆ ಸುಪ್ರಸಿದ್ಧ ವಿದ್ವಾಂಸರುಗಳಿಂದ ನಾದಸ್ವರ, ತವಿಲ್‌ ವಾದನ ಹಾಗೂ ಸಂಗೀತ ಸಮರ್ಪಣೆ, ಬೆಳಿಗ್ಗೆ 9.30ಕ್ಕೆ ವಿದ್ವಾಂಸರುಗಳಿಂದ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ವಿರಚಿತ ಬೋಧನಾ ಕೃತಿಗಳ ಗೋಷ್ಠಿ ಗಾಯನ ಕಾರ್ಯಕ್ರಮ ನಡೆಯಲಿದೆ.

ಬಳಿಕ ಬೆಳಿಗ್ಗೆ 10.30 ರಿಂದ 12.30ರವರೆಗೆ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರಿಗೆ ಗುರುಪೂಜೆ ನಡೆಯಲಿದೆ. ಧರ್ಮಾಧಿಕಾರಿ ಡಾ.ಎಂ.ಆರ್‌. ಜಯರಾಮ್‌ ಅವರು ಗುರುಸಂದೇಶ ನೀಡಲಿದ್ದಾರೆ. ಕರ್ನಾಟಕದ ಪ್ರಸಿದ್ಧ ಮೃದಂಗ ವಿದ್ವಾಂಸ ವಿ. ಪ್ರವೀಣ್‌ ಮತ್ತು ಸದ್ಗುರು ನಾರೇಯಣ ತಾತಯ್ಯನವರ ಭಜನಾ ಭಕ್ತ ಭೀಮಗಾನಪಲ್ಲಿ ಕೆ.ರಾಜಪ್ಪ ಅವರಿಗೆ ವಿಶೇಷ ಸನ್ಮಾನ ಏರ್ಪಡಿಸಲಾಗಿದೆ.

ಸಂಜೆ 5 ಗಂಟೆಯಿಂದ ದೆಹಲಿಯ ಸರಸ್ವತಿ ರಾಜಗೋಪಾಲನ್‌ ತಂಡದವರಿಂದ ವೀಣಾವಾದನ, ಭೈರತಿ ಅಂಜಿನಪ್ಪ, ತೇಜಸ್ವಿನಿ ಮನೋಜ್‌ ಕುಮಾರ್‌, ಕೆ.ಸುಧಾಮಣಿ ವೆಂಕಟರಾಘವನ್‌ ಅವರ ತಂಡಗಳಿಂದ ಗಾಯನ ಕಾರ್ಯಕ್ರಮ, ಸುಬ್ಬಲಕ್ಷ್ಮೀ ಮತ್ತು ತಂಡದವರಿಂದ ಸ್ಯಾಕ್ಸೋಪೋನ್‌, ಮಹಾಲಿಂಗಯ್ಯ ಮಠದ್‌ ಮತ್ತು ತಂಡದಿಂದ ಹಿಂದೂಸ್ಥಾನಿ ಗಾಯನ ಏರ್ಪಡಿಸಲಾಗಿದೆ.

ಇದನ್ನೂ ಓದಿ: Sensex Jump: ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್, 24,000 ಮೀರಿದ ನಿಫ್ಟಿ

ಜು.22 ರಂದು ಸೋಮವಾರ ಬೆಳಗ್ಗೆ 6 ಗಂಟೆಗೆ 72 ಗಂಟೆಗಳ ನಿರಂತರ ಸಂಗೀತ ಕಾರ್ಯಕ್ರಮಗಳ ಮುಕ್ತಾಯ ಮತ್ತು ಮಹಾಮಂಗಳಾರತಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ದೇಶ

Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

Ratna Bhandar: ಇಂದು ಬೆಳಗ್ಗೆ 9.51ಕ್ಕೆ ರತ್ನ ಭಂಡಾರವನ್ನು ಪುನಃ ತೆರೆಯಲಾಗಿದ್ದು, ಪುರಿ ಜಗನ್ನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಒಡಿಶಾ ಸರ್ಕಾರವು ಸ್ಥಾಪಿಸಿದ ಮೇಲ್ವಿಚಾರಣಾ ಸಮಿತಿಯ ಸದಸ್ಯರು ಭಂಡಾರವನ್ನು ತೆರೆದು ಅದರಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಸ್ಥಳಾಂತರಿಸಿದರು.

VISTARANEWS.COM


on

Ratna Bhandar
Koo

ಭುವನೇಶ್ವರಂ: 12ನೇ ಶತಮಾನದ ಪುರಿಯ ಜಗನ್ನಾಥ ದೇವಾಲಯ(Puri Jagannath Temple)ದ ಖಜಾನೆಯಾದ ರತ್ನ ಭಂಡಾರವನ್ನು ಇಂದು ಮತ್ತೆ ತೆರೆಯಲಾಯಿತು. ಕಳೆದ ವಾರವಷ್ಟೇ ಪುರಿ ಜಗನ್ನಾಥನ ರತ್ನ ಭಂಡಾರ(Ratna Bhandar)ವನ್ನು ಬರೋಬ್ಬರಿ 46ವರ್ಷಗಳ ಬಳಿ ತೆರೆಯಲಾಗಿತ್ತು. ಒಂದು ವಾರದ ಅಂತರದಲ್ಲಿ ಎರಡನೇ ಬಾರಿಗೆ ತೆರೆಯಲಾಗಿದೆ. ಅಲ್ಲಿನ ದುರಸ್ತಿಕಾರ್ಯ ಮತ್ತು ಆಭರಣಗಳ ಲೆಕ್ಕಹಾಕುವ ಪ್ರಕ್ರಿಯೆಗಾಗಿ ಅವುಗಳನ್ನು ತಾತ್ಕಾಲಿಕ ಸ್ಟ್ರಾಂಗ್ ರೂಮ್‌(Strong Room)ಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆ 9.51ಕ್ಕೆ ರತ್ನ ಭಂಡಾರವನ್ನು ಪುನಃ ತೆರೆಯಲಾಗಿದ್ದು, ಪುರಿ ಜಗನ್ನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಒಡಿಶಾ ಸರ್ಕಾರವು ಸ್ಥಾಪಿಸಿದ ಮೇಲ್ವಿಚಾರಣಾ ಸಮಿತಿಯ ಸದಸ್ಯರು ಭಂಡಾರವನ್ನು ತೆರೆದು ಅದರಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಸ್ಥಳಾಂತರಿಸಿದರು.

ದೇವಸ್ಥಾನ ಪ್ರವೇಶಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಮತ್ತು ಒರಿಸ್ಸಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿಸ್ವನಾಥ್ ರಾತ್, “ಭಂಡಾರದ ಒಳಕೋಣೆಯೊಳಗೆ ಸಂಗ್ರಹವಾಗಿರುವ ಎಲ್ಲಾ ಬೆಲೆಬಾಳುವ ವಸ್ತುಗಳ ಸ್ಥಳಾಂತರವನ್ನು ಸುಗಮವಾಗಿ ಪೂರ್ಣಗೊಳಿಸಲು ನಾವು ಜಗನ್ನಾಥನ ಆಶೀರ್ವಾದವನ್ನು ಕೋರಿದ್ದೇವೆ” ಎಂದು ಹೇಳಿದರು.

1978ರಲ್ಲಿ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆಗೆದಿದ್ದಾಗ 128.38 ಕೆ.ಜಿ ಚಿನ್ನ ಸಿಕ್ಕಿತ್ತು. ಚಿನ್ನದ ಸುಮಾರು 454 ಆಭರಣಗಳು ದೊರಕಿದ್ದವು. ಇನ್ನು, ಇದೇ ಖಜಾನೆಯಲ್ಲಿ 221.53 ಕೆ.ಜಿ ಬೆಳ್ಳಿ ಇತ್ತು. ಬೆಳ್ಳಿಯ 293 ಆಭರಣಗಳು ದೊರಕಿದ್ದವು. ಆಗ ಸುಮಾರು 70 ದಿನಗಳವರೆಗೆ ಅಧಿಕಾರಿಗಳು ಶೋಧನೆ ನಡೆಸಿದ್ದರು. ಈಗ ಮತ್ತೆ ರತ್ನ ಭಂಡಾರದ ಆಭರಣಗಳನ್ನು ಲೆಕ್ಕ ಹಾಕಲಾಗುತ್ತದೆ ಎಂದು ತಿಳಿದುಬಂದಿದೆ

ಒಡಿಶಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಈ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದೆ. ಸರ್ಕಾರದ ಅನುಮೋದನೆಯನ್ನು ಪಡೆದ ನಂತರ, ದಾಸ್ತಾನುಗಳಿಗೆ ಮಾರ್ಗದರ್ಶನ ನೀಡಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (SOP)ಸ್ಥಾಪಿಸಲಾಯಿತು. ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತವು (SJTA), ಅದರ ಮುಖ್ಯ ಆಡಳಿತಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದೆ.

ಅನಂಗಭೀಮ ದೇವ ಕ್ರಿಶ 1238ರವರೆಗೆ ಒಡಿಶಾ ಪ್ರದೇಶದ ರಾಜನಾಗಿದ್ದ. ಈತನ ಅಧಿಕಾರದ ಅವಧಿಯಲ್ಲಿ ಪುರಿ ದೇವಾಲಯಕ್ಕೆ 1.25 ಲಕ್ಷ ತೊಲ ಚಿನ್ನವನ್ನು ದಾನವಾಗಿ ನೀಡಿದ್ದ ಎಂಬ ಇತಿಹಾಸ ಇದೆ. 1465ರಲ್ಲಿ ರಾಜ ಕಪಿಲೇಂದ್ರ ದೇವ್‌ ಕೂಡ ಸಾಕಷ್ಟು ಚಿನ್ನವನ್ನು ದಾನ ಮಾಡಿರುವ ಬಗ್ಗೆ ಉಲ್ಲೇಖ ಇದೆ.

1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯವನ್ನು ಸಮಿತಿ ಲೆಕ್ಕ ಹಾಕಿತ್ತು. ಆದರೆ ಅದರ ಪೂರ್ತಿ ಮಾಹಿತಿಯನ್ನು ಸರ್ಕಾರ ಸಾರ್ವಜನಿಕಗೊಳಿಸಿರಲಿಲ್ಲ. ಈ ವಿಚಾರ ಕೋರ್ಟ್​ ಮೆಟ್ಟಿಲೇರಿತ್ತು. 2018ರಲ್ಲಿ ಒಡಿಶಾ ಸರ್ಕಾರಕ್ಕೆ ದೇವಸ್ಥಾನದ ರತ್ನ ಭಂಡಾರದ ಕೋಣೆಯ ಬಾಗಿಲು ತೆರೆದು ನಿಧಿಯ ಮೌಲ್ಯ ಮಾಪನ ಮಾಡುವಂತೆ ಹೈಕೋರ್ಟ್​ ಸೂಚನೆ ನೀಡಿತ್ತು.

ಇದನ್ನೂ ಓದಿ: Puri Jagannath temple: ಬರೋಬ್ಬರಿ 46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥನ ರತ್ನ ಭಂಡಾರ

Continue Reading

ಉತ್ತರ ಕನ್ನಡ

Uttara Kannada News: ಗೋಕರ್ಣದ ʼಅಶೋಕೆʼಯಲ್ಲಿ ಜು. 21ರಿಂದ ರಾಘವೇಶ್ವರಶ್ರೀ ಚಾತುರ್ಮಾಸ್ಯ

Uttara Kannada News: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 31ನೇ ಚಾತುರ್ಮಾಸ್ಯ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳಲಿದೆ. ʼಅನಾವರಣ ಚಾತುರ್ಮಾಸ್ಯʼ ಎಂಬ ಅಭಿದಾನದೊಂದಿಗೆ ಶ್ರೀಗಳು, ಆಷಾಢ ಶುದ್ಧ ಹುಣ್ಣಿಮೆಯಿಂದ ಬಾಧ್ರಪದ ಶುದ್ಧ ಹುಣ್ಣಿಮೆವರೆಗೆ 60 ದಿನಗಳ ಕಾಲ ವ್ರತ ಕೈಗೊಳ್ಳಲಿದ್ದಾರೆ. ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

VISTARANEWS.COM


on

Raghaveshwarashree Chaturmasya at Ashoke from 21st July
Koo

ಗೋಕರ್ಣ: ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 31ನೇ ಚಾತುರ್ಮಾಸ್ಯ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳಲಿದೆ. ಅನಾವರಣ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಶ್ರೀಗಳು, ಆಷಾಢ ಶುದ್ಧ ಹುಣ್ಣಿಮೆಯಿಂದ ಭಾದ್ರಪದ ಶುದ್ಧ ಹುಣ್ಣಿಮೆವರೆಗೆ 60 ದಿನಗಳ ಕಾಲ ವ್ರತ ಕೈಗೊಳ್ಳಲಿದ್ದು, ವರ್ಷಾಕಾಲದಲ್ಲಿ ಲೋಕಹಿತಕ್ಕಾಗಿ ಪರಮ ಪುರುಷನ ಆರಾಧನೆ, ಅನುಷ್ಠಾನಗಳಲ್ಲಿ ನಿರತರಾಗುವರು ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಪ್ರಕಟಣೆಯಲ್ಲಿ (Uttara Kannada News) ತಿಳಿಸಿದ್ದಾರೆ.

ಚಾತುರ್ಮಾಸ್ಯದ ಪ್ರತಿದಿನವೂ ಸಮಾಜದ ವಿಶಿಷ್ಟ ವ್ಯಕ್ತಿಗಳು, ವಿಷಯಗಳು ಮತ್ತು ವಸ್ತುಗಳ ಅನಾವರಣ ಈ ಬಾರಿಯ ವಿಶೇಷ. 60 ದಿನಗಳಲ್ಲಿ ಕನಿಷ್ಠ 60 ವ್ಯಕ್ತಿ-ವಿಷಯ- ವಸ್ತುಗಳ ʼಅನಾವರಣʼಕ್ಕೆ ಈ ಚಾತುರ್ಮಾಸ್ಯ ಸಾಕ್ಷಿಯಾಗಲಿದೆ. ಸಮಾಜದಲ್ಲಿ ಎಲೆಮರೆಯ ಕಾಯಿಗಳಾಗಿ ಸೇವೆ ಸಲ್ಲಿಸುತ್ತಿರುವ, ಇದುವರೆಗೆ ಸಮಾಜಕ್ಕೆ ತೆರೆದುಕೊಳ್ಳದ ವ್ಯಕ್ತಿಗಳು, ಸಮಾಜದಲ್ಲಿ ಬೆಳಕಿಗೆ ಬರದ ಶ್ರೀಮಠದ ಭವ್ಯತೆ, ರಾಮಚಂದ್ರಾಪುರ ಮಠದ ಮಹತ್ವದ ಯೋಜನೆಗಳ ಅನಾವರಣ ಕೂಡಾ ಈ ಸಂದರ್ಭದಲ್ಲಿ ನಡೆಯಲಿದೆ.

ಚಾತುರ್ಮಾಸ್ಯಕ್ಕೆ ಪೂರ್ವಭಾವಿಯಾಗಿ ಮುನ್ನಾ ದಿನ (ಜುಲೈ 20) ಶ್ರೀಗಳು ಪುರಾತನ ಮಲ್ಲಿಕಾರ್ಜುನ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯುವರು. ರಾಜ್ಯದ ಮೂಲೆಮೂಲೆಗಳಿಂದ ಶಿಷ್ಯಭಕ್ತರು ಸಮರ್ಪಿಸಿದ ಸುವಸ್ತುಗಳಿಗೆ ಧಾನ್ಯಲಕ್ಷ್ಮಿಪೂಜೆಯನ್ನು ರಾಘವೇಶ್ವರ ಶ್ರೀಗಳು ನೆರವೇರಿಸುವರು. ಬಳಿಕ ಅನ್ನಪೂರ್ಣೇಶ್ವರಿ ಪೂಜೆಯೊಂದಿಗೆ ಚಾತುರ್ಮಾಸ್ಯ ಪರ್ಯಂತ ಲಕ್ಷಾಂತರ ಶಿಷ್ಯಭಕ್ತರಿಗೆ ಅನ್ನದಾನ ಆರಂಭವಾಗಲಿದೆ.

ಇದನ್ನೂ ಓದಿ: Paris Olympics: ಅತಿ ಹೆಚ್ಚು ಒಲಿಂಪಿಕ್ಸ್ ಆತಿಥ್ಯ ವಹಿಸಿದ ದೇಶ ಯಾವುದು?

ಆಷಾಢ ಶುದ್ಧ ಹುಣ್ಣಿಮೆಯಂದು ವ್ಯಾಸಪೂಜೆ ಮತ್ತು ಗುರು ಪರಂಪರೆ ಪೂಜೆಯೊಂದಿಗೆ 31ನೇ ವರ್ಷದ ವ್ರತಾರಂಭ ಮಾಡುವರು. ಜುಲೈ 24ರಂದು ಶ್ರೀವರ್ಧಂತಿ, ಆಗಸ್ಟ್ 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 7ರಂದು ಗಣೇಶ ಚತುರ್ಥಿಯಂಥ ವಿಶೇಷ ಕಾರ್ಯಕ್ರಮಗಳ ಜತೆಗೆ ವೈದಿಕ ಸಮಾವೇಶ, ಗುರಿಕಾರರ ಸಮಾವೇಶಗಳು ಚಾತುರ್ಮಾಸ್ಯದಲ್ಲಿ ಆಯೋಜಿತವಾಗಿವೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಲಿದೆ. ಸೆಪ್ಟೆಂಬರ್ 18ರಂದು ಸೀಮೋಲ್ಲಂಘನೆಯೊಂದಿಗೆ ಚಾತುರ್ಮಾಸ್ಯ ಸಂಪನ್ನಗೊಳ್ಳಲಿದೆ.

ಚಾತುರ್ಮಾಸ್ಯದಲ್ಲಿ ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ಶ್ರೀಗಳು, ಸಹಸ್ರ ಗಂಗಾಜಲ ಅಭಿಷೇಕಕ್ಕೆ ಸಂಕಲ್ಪಿಸಿದ್ದಾರೆ. ಪವಿತ್ರ ಗಂಗಾಜಲದಿಂದ ತುಂಬಿದ ಸುವರ್ಣ, ರಜತ ಮತ್ತು ತಾಮ್ರ ಕಲಶಗಳ ಸೇವೆಗೆ ಭಕ್ತರಿಗೆ ಅವಕಾಶವಿದೆ. ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಕರಾರ್ಚಿತ ದೇವರಿಗೆ ಸರ್ವಸೇವೆ ಸಮರ್ಪಣೆಗೆ ಅವಕಾಶ ಇದೆ. ಅಂತೆಯೇ ಮಹಾಸೇವೆ, ತುಲಾಭಾರ ಸೇವೆ, ಸ್ವರ್ಣಪಾದುಕೆ ಭಿಕ್ಷಾಸೇವೆ, ಸ್ವರ್ಣಪಾದುಕಾ ಪೂಜೆ, ಪಾದುಕಾಪೂಜೆ, ಅನ್ನದಾನ, ಸುವಸ್ತು ಸಮರ್ಪಣೆ ಮತ್ತಿತರ ಸೇವೆಗಳನ್ನೂ ಸಲ್ಲಿಸಲು ಅವಕಾಶವಿದೆ.

ಇದನ್ನೂ ಓದಿ: Media Connect: ಮೀಡಿಯಾ ಕನೆಕ್ಟ್‌ಗೆ ಭರವಸೆಯ ಪಿಆರ್‌ ಸೇವಾ ಪ್ರಶಸ್ತಿ

ಎರಡು ತಿಂಗಳ ಅವಧಿಯ ಚಾತುರ್ಮಾಸ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಗಣ್ಯರು, ಶಿಷ್ಯಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅಗತ್ಯ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.

Continue Reading
Advertisement
CM Siddaramaiah
ಕರ್ನಾಟಕ11 mins ago

CM Siddaramaiah: ಬಿಜೆಪಿ ತನ್ನ ಅವಧಿಯ ಹಗರಣಗಳನ್ನು ಮುಚ್ಚಿ ಹಾಕಿದೆ: ಸಿಎಂ ಸಿದ್ದರಾಮಯ್ಯ

Viral video
ವೈರಲ್ ನ್ಯೂಸ್15 mins ago

Viral Video: ಏಳು ತಿಂಗಳ ಮಗುವಿನ ಮೇಲೆ ಗುಂಡು ಹಾರಿಸಿದ ಕ್ರೂರ ಮಹಿಳೆ!

Honor Released Honor 200 Pro 5G and Honor 200 5G Smartphones
ಬೆಂಗಳೂರು19 mins ago

Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

Self Harming
Latest21 mins ago

Self Harming: ಹೆಂಡತಿಗೆ ಹೆದರಿಸಲು ಹೋಗಿ ಜೀವ ಕಳೆದುಕೊಂಡ ಲೋಕೋ ಪೈಲಟ್‍!

Health Tips Kannada
ಆರೋಗ್ಯ22 mins ago

Health Tips Kannada: ಮಳೆಗಾಲದಲ್ಲಿ ಹಾಗಲಕಾಯಿ ತಿಂದರೆ ಪ್ರಯೋಜನಗಳು ಎಷ್ಟೊಂದು!

Movie ticket price hike
ಕರ್ನಾಟಕ36 mins ago

Movie ticket price hike: ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ; ಸಿನಿಮಾ ಟಿಕೆಟ್‌, OTT ಸಬ್‌ಸ್ಕ್ರಿಪ್ಶನ್ ಶುಲ್ಕ ಭಾರಿ ಏರಿಕೆ?

US Teacher
ವೈರಲ್ ನ್ಯೂಸ್41 mins ago

School Teacher: 14 ವರ್ಷದ ವಿದ್ಯಾರ್ಥಿಗೆ ತನ್ನ ಬೆತ್ತಲೆ ಫೋಟೊ ಕಳುಹಿಸಿದ ಶಿಕ್ಷಕಿ; ಈಗ ಜೈಲಿನ ಅತಿಥಿ

Mohammed Shami
ಕ್ರೀಡೆ49 mins ago

Mohammed Shami : ರೋಹಿತ್​ ಶರ್ಮಾಗೆ ನನ್ನ ಬೌಲಿಂಗ್​ ಎಂದರೆ ಭಯ; ಮೊಹಮ್ಮದ್ ಶಮಿ

Heavy rain in Chandragutti village and other places of Soraba taluk
ಶಿವಮೊಗ್ಗ52 mins ago

Karnataka Rain: ಸೊರಬ ತಾಲೂಕಿನ ವಿವಿಧೆಡೆ ಮಳೆ ಆರ್ಭಟ; ವರದಾ ನದಿ ತೀರದ ವ್ಯಾಪ್ತಿಯ ಕೃಷಿ ಭೂಮಿ ಜಲಾವೃತ

Sexual Abuse
Latest54 mins ago

Sexual Abuse: ವಿದ್ಯಾರ್ಥಿನಿಯನ್ನು ಅಪಹರಿಸಿ 12 ದಿನ ಅತ್ಯಾಚಾರ ಎಸಗಿ ಪೊಲೀಸ್‌ ಠಾಣೆ ಮುಂದೆಯೇ ಬಿಟ್ಟು ಹೋದರು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ9 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ1 day ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 day ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌