Hanuman Vratham 2022 | ಎಣೆಯಾರೊ ನಿನಗೆ ಹನುಮಂತರಾಯ, ಪ್ರಣತಜನ ಮಂದಾರ ಪವನ ಸುಕುಮಾರ - Vistara News

ಧಾರ್ಮಿಕ

Hanuman Vratham 2022 | ಎಣೆಯಾರೊ ನಿನಗೆ ಹನುಮಂತರಾಯ, ಪ್ರಣತಜನ ಮಂದಾರ ಪವನ ಸುಕುಮಾರ

ಇಂದು ಹನುಮದ್‌ ವ್ರತ (Hanuman Vratham 2022). ಹನುಮನ ಹೆಸರೇ ಒಂದು ತಾರಕನಾಮ. ಹನುಮದ್‌ ವ್ರತದ ಮಹತ್ವವೇನು? ಆಚರಣೆ ಹೇಗೆ ಎಂದು ತಿಳಿಸುವ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Hanuman Chalisa: Significance and importance Of Reciting Hanuman Chalisa in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Hanuman Vratham 2022

ಡಾ.ಪ್ರಕಾಶ್.ಕೆ.ನಾಡಿಗ್ 
ಭಾರತೀಯ ಸಂಸ್ಕೃತಿಯು ಋಷಿ ಜೀವನದ ತಳಹದಿಯ ಮೇಲೆ ಮೂಡಿದಂತದ್ದು, ಅದು ಭಕ್ತಿಗೆ ಮಹತ್ವದ ಸ್ಥಾನ ನೀಡಿದೆ. ಭಕ್ತಿಯೆಂಬುದು ಒಂದು ದಿವ್ಯವಾದ ಯೋಗ. ಈ ಭಕ್ತಿಯೋಗದ ಮುಖಾಂತರ ಲೋಕದ ಭವ್ಯಶಕ್ತಿಯಾಗಿ ಹಲವು ಭಕ್ತಾಗ್ರೇಸರರು ಬಾಳಿ, ನಂದಾದೀಪವಾಗಿ ಇಂದಿಗೂ ಬೆಳಗುತ್ತಿದ್ದಾರೆ. ಇಂತಹ ಪ್ರಾತಃಸ್ಮರಣೀಯರಲ್ಲಿ ಹನುಮನು ಓರ್ವ. ಆದರ್ಶ ಚಾರಿತ್ರ್ಯ, ಜಿತೇಂದ್ರಿಯತ್ವ, ಶಾಸ್ತ್ರಪಟುತ್ವ, ವಾಕ್ ಪಟುತ್ವ, ಸದಾಚಾರ ಸಂಪನ್ನತೆ, ಇವುಗಳ ಸಾಕಾರ ಮೂರ್ತಿ ಹನುಮಂತ ದೇವರು (Hanuman Vratham 2022).

ಮೇರುಮಂದಾರ ಗಾತ್ರನೂ, ಜಯಾಸಂಕರ್ಷಣ ಪುತ್ರನೂ, ಪರಮ ಪವಿತ್ರನೂ, ಸಾಧಕ ಜನರ ಗತಿಗೋತ್ರನೂ, ಚಿತ್ರ ಚರಿತ್ರನೂ, ಸೂತ್ರನಾಮಕನೂ, ಗೋತ್ರೋದ್ಧಾರಕನೂ ಆದ ಹನುಮಂತ ಯುಗಯುಗಗಳಲ್ಲಿಯೂ ಪೂಜಿತನಾಗಿದ್ದಾನೆ. ಭಾರತದಲ್ಲಿ ಹನುಮನಿಲ್ಲದ ಹಳ್ಳಿಯಿಲ್ಲ, ಕರ್ನಾಟಕ ಹನುಮ ಜನಿಸಿದ ನಾಡು, ಹಾಗಾಗಿ ಕರ್ನಾಟಕದ ಊರು ಊರುಗಳಲ್ಲಿ ಹನುಮಂತನ ದೇವಾಲಯಗಳು ರಾರಾಜಿಸುತ್ತಿವೆ.

ಎಲ್ಲಾರಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ, ನಮ್ಮ ಜೀವನ ಸಾರ್ಥಕವಾಗಿರಬೇಕು ಎಂದು ಯೋಚಿಸಿ ಕೆಲವು ಮಹಾತ್ಮರ  ಆದರ್ಶವನ್ನು ಪಾಲಿಸಲು ಮುಂದಾಗುತ್ತೇವೆ. ಅವರು ನಡೆದ ಹಾದಿ ನಮಗೆ ಅನುಕರಣೀಯವಾಗುತ್ತದೆ. ಇಂತಹ ಮಹಾನ್ ಪುರುಷರಲ್ಲಿ ನಮಗೆ ಅಗ್ರಗಣ್ಯರಾಗಿ ಕಾಣುವುದು ರಾಮಾಯಣದ ಒಂದು ಪಾತ್ರವಾದ ಹನುಮಂತ. ಈತ ರಾಮಾಯಣವೆಂಬ ಮಹಾಕಾವ್ಯದ ವ್ಯಕ್ತಿ ಚಿತ್ರಣವಾಗಷ್ಟೇ ಉಳಿಯುವುದಿಲ್ಲ, ಬದಲಾಗಿ ಸಾಧಿಸಬೇಕೆಂಬುವವರಿಗೆ ಈತನೊಬ್ಬ ಮ್ಯಾನೇಜ್‌ಮೆಂಟ್ ಕೌಶಲ್ಯವನ್ನು ಕಲಿಸುವ ಗುರುವಾಗಿ ಕಾಣುತ್ತಾನೆ. ಹನುಮನನ್ನು ಬಂಧಿಸಿ ರಾವಣನ ಮುಂದೆ ಹಾಜರು ಪಡಿಸಿದಾಗ ನೀನು ಯಾರು ಎಂದು ಕೇಳಿದಾಗ ಹನುಮ ಹೇಳುತ್ತಾನೆ “ಅಹಂ ದಾಸಃ ಕೋಸಲೇಂದ್ರಸ್ಯ” ಅಂದರೆ ತನ್ನನ್ನು ರಾಮಚಂದ್ರನ ದಾಸನೆಂದು ಪರಿಚಯಿಸಿಕೊಳ್ಳುವ ಮೂಲಕ ದಾಸ ಪಂಥಕ್ಕೆ ಅಡಿಪಾಯ ಹಾಕಿದವನು ಹನುಮಂತನೆಂದರೆ ತಪ್ಪಾಗಲಾರದು.  ಅವನ ಕಾಲದಿಂದ ದಾಸ ಪಂಥ ಉದಯವಾಗಿ “ಜಗದಿ ದಾಸತ್ವವೇ ಲೇಸು” ಎಂದು ಮುಂದಿನ ದಾಸವರೇಣ್ಯರೇ ಒಪ್ಪಿಕೊಂಡರು. 

ರಾಮನಿಗೆ ಹೆಚ್ಚಿಗೆ ಸೇವೆ ಮಾಡಿದ ವ್ಯಕ್ತಿ ಎಂದರೆ ಹನುಮಂತ. ರಾಮನ ಭೇಟಿಯಾಗುವ ಮುಂಚೆ ಹನುಮ ಯಾರೊಡನಿದ್ದ ಎಂಬುದನ್ನು ನೋಡಿದರೆ ನಮಗೆ ಕಾಣುವ ವ್ಯಕ್ತಿ “ಸುಗ್ರೀವ”  ಸುಗ್ರೀವ ಆಡಿದ್ದೇ ಮಾತು ಹಾಗೂ ಮಾಡಿದ್ದೇ ಶಾಸನ. ಸುಗ್ರೀವ ಹೊರಡಿಸಿದ ಆಜ್ಞೆ ಅಂದರೆ ಎಲ್ಲರೂ ಹೆದರುತ್ತಿದ್ದರು. ಸುಗ್ರೀವ ಒಬ್ಬ ಚರಿತ್ರಾರ್ಹ ವ್ಯಕ್ತಿ. ಇಂಥವನ ಬಳಿ ಇದ್ದ ಆಂಜನೇಯನದು ಅಪರಿಮಿತವಾದ ವ್ಯಕ್ತಿತ್ವ. ಧರ್ಮ, ಅರ್ಥ, ಮೋಕ್ಷ, ಕಾಮ ಎಂಬ ಪದಗಳಿಗೆ ಮೌಲ್ಯವನ್ನು ಕೊಟ್ಟವನು.

ಹನುಮ ಜಯಂತಿಯಲ್ಲ, ಹನುಮದ್‌ ವ್ರತ
ಮಾರ್ಗಶಿರ ಶುದ್ಧ ತ್ರಯೋದಶಿಯಂದು ದೇಶಾದ್ಯಂತ ಭಕ್ತಿಭಾವಗಳಿಂದ ಹನುಮದ್ ವ್ರತವನ್ನು ಆಚರಿಸಲಾಗುತ್ತದೆ (Hanuman Vratham 2022).  ಆದರೆ ಕೆಲವರು ಇದನ್ನು ಹನುಮ ಜಯಂತಿಯೆಂದು ಆಚರಿಸುತ್ತಾರೆ. ಇದು ತಪ್ಪು ಹನುಮ ಜಯಂತಿ ಹನುಮ ಹುಟ್ಟಿದ  ದಿನ, ಚೈತ್ರ ಶುದ್ಧ ಹುಣ್ಣಿಮೆಯಂದು ಹನುಮ ಜಯಂತಿಯನ್ನು ಆಚರಿಸುತ್ತಾರೆ. ಹನುಮದ್ ವ್ರತವನ್ನು ಬ್ರಹ್ಮದೇವರು ದೇವಾದಿದೇವತಿಗಳಿಗೆ ಉಪದೇಶಿಸಿದರೆಂದು ಪ್ರತೀತಿ ಇದೆ.

ವ್ರತದ ಹಿನ್ನೆಲೆ ಏನು?
ಕೌರವರ ಮೋಸದಿಂದ ಸೋತ ಪಾಂಡವರು ವನವಾಸದಲ್ಲಿದ್ದಾಗ ಒಮ್ಮೆ ವೇದವ್ಯಾಸರು ಅವರನ್ನು ಭೇಟಿಮಾಡುತ್ತಾರೆ. ಪಾಂಡವರ ಕಷ್ಟಕಾರ್ಪಣ್ಯದಿಂದ ಬಿಡುಗಡೆ ಹೊಂದಲು ವೇದವ್ಯಾಸರು ಅವರಿಗೆ ಹನುಮದ್ ವ್ರತದ ಉಪದೇಶವನ್ನು ಮಾಡುತ್ತಾರೆ. ಈವ್ರತವನ್ನು ಶ್ರದ್ಧೆಯಿಂದ ಮಾಡಿ ನಿಮ್ಮ ಕಷ್ಟಗಳೆಲ್ಲವೂ ಪರಿಹಾರವಾಗಿ ನಿಮಗೆ ನಿಮ್ಮ ರಾಜ್ಯ ಮತ್ತೆ ಸಿಗುತ್ತದೆ ಎಂದು ಹೇಳುತ್ತಾನೆ. ಆಗ ಧರ್ಮರಾಜನ ವ್ರತದ ಹಿನ್ನೆಯೆಯನ್ನು ಕೇಳಲು ವೇದವ್ಯಾಸರು ಹೇಳುತ್ತಾರೆ, ಒಮ್ಮೆ ಹನುಮಂತ ರಾಹುಗ್ರಹಣವಾದ ಕೆಂಪುಬಣ್ಣದಿಂದ ಕೂಡಿದ್ದ ಸೂರ್ಯನನ್ನೇ ಹಣ್ಣೆಂದು ಹಿಡಿಯಲು ಹೋಗುವಾಗ ಇಂದ್ರನು ಹನುಮಂತ ಸೂರ್ಯನನ್ನು ಹಿಡಿಯಬಹುದೆಂದು ತಿಳಿದು, ಹನುಮಂತನ ಮೇಲೆ ವಜ್ರಾಯುಧವನ್ನು ಪ್ರಯೋಗಿಸುತ್ತಾನೆ. ಇದರಿಂದ ಪೆಟ್ಟಾದ ಹನುಮಂತ ಕೆಳಗೆ ಬೀಳುವಾಗ ವಾಯುದೇವರು ಹನುಮಂತನನ್ನು ಎತ್ತಿಕೊಂಡು ಒಂದು ಗುಹೆಯನ್ನು ಪ್ರವೇಶಿಸುತ್ತಾರೆ. ಆಗ ಪ್ರಪಂಚದಲ್ಲೆಲ್ಲಾ ಗಾಳಿಯಿಲ್ಲದೇ ಹಾಹಾಕಾರವಾಗುತ್ತದೆ.

ಆಗ ಎಲ್ಲಾ ದೇವತೆಗಳು ಬ್ರಹ್ಮದೇವನನ್ನು ಪ್ರಾರ್ಥಿಸಿದಾಗ್, ಬ್ರಹ್ಮದೇವರು ವಾಯುವಿನ ಬಳಿಗೆ ಬಂದು ನಿನ್ನ ಮಗನಿಗೆ ಯಾವ ಆಯುಧವೂ ಏನೂ ಮಾಡುವುದಿಲ್ಲ. ಅವನು ಚಿರಂಜೀವಿ, ಹಾಗೇಯೇ ಮಾರ್ಗಶಿರ ಶುದ್ಧ ತ್ರಯೋದಶಿ ದಿನದಂದು ಯಾರು ಹನುಮದ್ ವ್ರತವನ್ನು ಆಚರಿಸುತ್ತಾರೋ ಅವರಿಗೆ ಸಕಲ ಸೌಭಾಗ್ಯವೂ ಪ್ರಾಪ್ತವಾಗುತ್ತದೆ ಎಂದು ಹೇಳುತ್ತಾರೆ. ಆಂದಿನಿಂದ ಹನುಮದ್ ವ್ರತ ಮುನ್ನೆಲೆಗೆ ಬಂದಿತೆಂದು ಪ್ರತೀತಿ. ಶ್ರೀರಾಮಚಂದ್ರ ಹನುಮಂತನನ್ನು ಆನುಗ್ರಹಿಸಲು ಈ ವ್ರತವನ್ನು ಮಾಡಿದ್ದರು. ಸುಗ್ರೀವ, ದ್ರೌಪದಿ ತಮ್ಮ ಇಷ್ಟಾರ್ಥಕ್ಕಾಗಿ ಈ  ವ್ರತವನ್ನು ಮಾಡಿದ್ದರು. ವಿಭೀಷಣನು ಈ ವ್ರತದ ಪ್ರಭಾವದಿಂದಲೇ ಲಂಕಾದಿಪತಿಯಾದನು.

Hanuman Vratham
Anjanadri Hill Temple 
anjaneya temple
ಅಂಜನಾದ್ರಿಯಲ್ಲಿನ ಆಂಜನೇಯ

ವ್ರತದ ಆಚರಣೆ ಹೇಗೆ?
ವ್ರತವನ್ನು ಆಚರಿಸುವವರು ವ್ರತದ ದಿನ ಮನೆಯ ಸೂಕ್ತಜಾಗದಲ್ಲಿ ಹನುಮಂತನ ಫ಼ೋಟೊ ಇಟ್ಟು ಅಲಂಕಾರಾದಿಗಳನ್ನು ಮಾಡಿ  ಹದಿಮೂರು ಗಂಟುಗಳುಳ್ಳ ದೋರವನ್ನು ದೇವರ ಮುಂದೆ ಇರಿಸಿ ಅದರಲ್ಲಿ ಹನುಮಂತದೇವರನ್ನು ಆವಾಹಿಸಿ ಷೋಡಶೋಪಚಾರ ಪೂಜೆಯನ್ನು ಮಾಡಿ ಧೂಪ ದೀಪ ನೈವೇದ್ಯವನ್ನು ಆರ್ಪಿಸಬೇಕು. ಇಂದು ವಿಶೇಷವಾಗಿ ಪೂಜೆಮಾಡಿಸುವ ಆಚಾರ್ಯರಿಗೆ ವಾಯನದಾನದಲ್ಲಿ ಗೋದಿಯನ್ನು ದಾನ ಮಾಡಬೇಕು. ಪೂಜೆಯನಂತರ ಹದಿಮೂರು ಗಂಟುಗಳುಳ್ಳ ಹಳದಿ ವರ್ಣದ ದೋರವನ್ನು ಕಟ್ಟಿಕೊಳ್ಳಬೇಕು. ಈ ವ್ರತವನ್ನು ಒಮ್ಮೆ ಪ್ರಾರಂಭಿಸಿದರೆ ಹದಿಮೂರು ವರ್ಷಗಳ ಪರ್ಯಂತ ಮಾಡಿ ನಂತರ ಉದ್ಯಾಪನೆಯನ್ನು ಮಾಡಬೇಕು. ಈ ವ್ರತವನ್ನು ಶ್ರದ್ದೆಯಿಂದ ಮಾಡುವುದರಿಂದ ಸಕಲ ಇಷ್ಟಾರ್ಥಗಳು ಲಭಿಸುವವು. 

ನವವಿಧ ಭಕ್ತಿಯಲ್ಲೂ ಅಂದರೆ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮ ನಿವೇದನೆಯಲ್ಲಿ ನಿಷ್ಣಾತವಾದ ವ್ಯಕ್ತಿತ್ವವೆಂದರೆ ಅದು ಹನುಮಂತನದೇ. ಈ ಒಂಭತ್ತು ವಿಧಗಳಲ್ಲೂ ತನ್ನ ಒಡೆಯ ಶ್ರೀರಾಮಚಂದ್ರನ ಅನುಸಂಧಾನ ಮಾಡಿದ ಮಹಾನುಭಾವ, ಈ ಗುಣಗಳೊಂದಿಗೆ ನಮನ, ಯಾಚನ, ಅರ್ಪಣಗಳೆಂಬ ತ್ರಿವಿಧವಾದ ಪ್ರಾರ್ಥನೆಯನ್ನು ಸದಾ ಸಲ್ಲಿಸಿದ ಸತ್ಪುರಷನೀತ. ಪೂರ್ತಿಯಾಗಿ ತನ್ನನ್ನು ಭಗವಂತನಿಗೆ ಅರ್ಪಿಸಿಕೊಂಡ ಅಸೀಮ ಭಕ್ತ, ಅಪೂರ್ವವಾದ ವ್ಯಕ್ತಿತ್ವ.

ಹನುಮಂತ, ಪವನಪುತ್ರ, ವಾಯುಪುತ್ರ, ಕೇಸರಿನಂದನ ಮುಂತಾದ ಹೆಸರುಗಳಿಂದ ಸ್ತುತಿಸಲ್ಪಡುವ ಹನುಮಂತ ತ್ರೇತಾಯುಗದಲ್ಲಿ  ಇದ್ದ, ದ್ವಾಪರಯುಗದಲ್ಲಿ ಇದ್ದ, ಕಲಿಯುಗದಲ್ಲೂ ಇದ್ದು ಮುಂದೆ ಶ್ರೀರಾಮ ನಾಮ ಇರುವವರೆಗೂ ಸೂರ್ಯ ಚಂದ್ರರಿರುವವರೆಗೂ ಇದ್ದು ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಾ ಚಿರಂಜೀವಿ ಯಾಗಿದ್ದಾನೆ. ದೂರ್ವಾಸ ಮುನಿಗಳಿಂದ ಹಿಡಿದು, ಜನಮೇಜಯ ರಾಜ, ಶ್ರೀವ್ಯಾಸ ತೀರ್ಥರು, ಬ್ರಹ್ಮಣ್ಯತೀರ್ಥರಲ್ಲದೇ ಅನೇಕ ಯತಿವರ್ಯರು ಭಕ್ತರ ಉದ್ಧಾರಕ್ಕಾಗಿ ಅನೇಕ ಹನುಮ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ. ಅದರಲ್ಲೂ ಹದಿನೈದನೇ ಶತಮಾನದಲ್ಲಿ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ರಾಜಗುರುಗಳಾಗಿದ್ದ ಶ್ರೀವ್ಯಾಸರಾಜರು ದೇಶಾದ್ಯಂತ ಸುಮಾರು 732 ಮುಖ್ಯಪ್ರಾಣನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಇಲ್ಲಿಗೆ ಬರುವ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾ ಭಕ್ತರ ಬಾಳು ಬೆಳಗುತ್ತಾ ಭಕ್ತರ ಪಾಲಿಗೆ ಕಲ್ಪವೃಕ್ಷವೆನಿಸಿಕೊಂಡಿದ್ದಾನೆ.

ರಾಮನ ಗುಡಿಯಿಲ್ಲದ ಊರಿರಬಹುದು, ಆದರೆ ಹನುಮನ ಗುಡಿಯಿಲ್ಲದ ಊರಿಲ್ಲವೆಂದೇ ಹೇಳಬೇಕು. ಕಲಿಯುಗದಲ್ಲಿ ಹನುಮನಿಗೆ ಸಲ್ಲುವಷ್ಟು ಪೂಜೆ ಪುನಸ್ಕಾರಗಳು ಬೇರೆ ಯಾವ ದೇವರಿಗೂ ಸಲ್ಲುವುದಿಲ್ಲವೆಂದರೆ ತಪ್ಪಾಗಲಾರದು, ಜಾತಿ, ಮತ ಪಂಥದ ಭೇದವಿಲ್ಲದೆ ಎಲ್ಲರಿಂದಲೂ ಪೂಜೆಗೊಳ್ಳುತ್ತಿರುವ ದೇವರು ಹನುಮಂತ. ದೇಶಾದ್ಯಂತ ಸಾವಿರಾರು ಜಾಗೃತ ಹನುಮ ಕ್ಷೇತ್ರಗಳು ಈ ನಿಟ್ಟಿನಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತದೆ.  ಹಲವು ದೇವಸ್ಥಾನಗಳಲ್ಲಿ ಹಲವು ಬಗೆಯ ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಹನುಮಂತ ಪರಿಹಾರ ನೀಡುತ್ತಾ ಆಶೀರ್ವದಿ ಸುತ್ತಿದ್ದಾನೆ. ಯುಗಯುಗಗಳಿಂದಲೂ ಪೂಜೆಗೊಳ್ಳುತ್ತಿರುವ “ಹನುಮ ದೇಹಿʼʼ ಎಂದು ಬಂದ ಭಕ್ತರನ್ನು ತನ್ನ ಮಕ್ಕಳಂತೆ ಪೊರೆಯುತ್ತಾನೆ. ಅಂತೆಯೇ ದಾಸರು ಇವನನ್ನು ಹನುಮ ನಮ್ಮ ತಾಯಿ ತಂದೆ ಎಂದು ಸ್ತುತಿಸಿದ್ದಾರೆ. ಹನುಮದ್ ವ್ರತದ ಈ ಶುಭಸಂದರ್ಭದಲ್ಲಿ ಹನುಮಂತನನ್ನು ಧ್ಯಾನಿಸಿ ಪುನೀತರಾಗೋಣ.

ಲೇಖಕರು “ಭಕ್ತರ ಪ್ರಾಣ ಮುಖ್ಯ ಪ್ರಾಣʼʼ (ಭಾರತೀಯ ಸಂಸ್ಕೃತಿಯಲ್ಲಿ ಹನುಮ)
ಎಂಬ ಕೃತಿಯನ್ನು ಬರೆದಿದ್ದಾರೆ.

ಇದನ್ನೂ ಓದಿ| Hanuma Jayanti | ಹನುಮ ಜಯಂತಿಗೆ ಸಕಲ ರೀತಿಯಲ್ಲಿ ಸಜ್ಜಾದ ಅಂಜನಾದ್ರಿ ಬೆಟ್ಟ; ಪೊಲೀಸ್‌ ಬಿಗಿ ಬಂದೋಬಸ್ತ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಯಾದಗಿರಿ

Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

Yadgiri News: ಯಾದಗಿರಿಗೆ ಸಮೀಪದ ಆಂಧ್ರಪ್ರದೇಶದ ಶ್ರೀಶೈಲಂನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ 602ನೇ ಜಯಂತಿಯನ್ನು ಶ್ರದ್ದಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

VISTARANEWS.COM


on

Shivasharane Hemaraddi Mallamma Jayanti celebration in Srisailam
Koo

ಯಾದಗಿರಿ: ಇಲ್ಲಿಗೆ ಸಮೀಪದ ಆಂಧ್ರಪ್ರದೇಶದ ಶ್ರೀಶೈಲಂನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ 602ನೇ ಜಯಂತಿಯನ್ನು ಶ್ರದ್ದಾ ಭಕ್ತಿ ಹಾಗೂ ಸಂಭ್ರಮದಿಂದ (Yadgiri News) ಆಚರಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನ ಆಡಳಿತ ಮಂಡಳಿಯ ಟ್ರಸ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿ ಪೆದ್ದುರಾಜು ಮಾತನಾಡಿ, 14ನೇ ಶತಮಾನದಲ್ಲಿ ಮಲ್ಲಮ್ಮ ತನ್ನ ಕೌಟುಂಬಿಕ ಜೀವನದ ಜತೆಗೆ ಆಧ್ಯಾತ್ಮಿಕ ಸಾಧನೆ ಮೂಲಕ ಪರಶಿವ ಮಲ್ಲಿಕಾರ್ಜುನನ ಕೃಪೆಗೆ ಪಾತ್ರಳಾಗಿ ಮನುಕುಲಕ್ಕೆ ಮಾನವೀಯ ಸಂದೇಶಗಳನ್ನು ನೀಡಿದ್ದಾಳೆ ಎಂದು ತಿಳಿಸಿದರು.

ಇದನ್ನೂ ಓದಿ: Aadhaar Card Fact Check: 10 ವರ್ಷಗಳ ಹಿಂದಿನ ಆಧಾರ್ ಕಾರ್ಡ್‌ ಜೂ. 14ರ ಬಳಿಕ ರದ್ದಾಗುತ್ತದೆಯೆ?

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಕರ್ಮಭೂಮಿಯಾದ ಶ್ರೀಶೈಲಂನಲ್ಲಿ ಕರ್ನಾಟಕದ ವೀರಶೈವ ಲಿಂಗಾಯತ ರಡ್ಡಿ ಸಮಾಜದವರು ಭವ್ಯ ಮಲ್ಲಮ್ಮ ದೇವಸ್ಥಾನ ನಿರ್ಮಾಣ ಮಾಡಿದ್ದಲ್ಲದೇ ಕ್ಷೇತ್ರದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿಕೊಂಡು ಬಂದಿದ್ದಾರೆ, ಅವರ ಶ್ರಮದಿಂದ ಆಂದ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಭಕ್ತರ ಮದ್ಯೆ ಸಾಮರಸ್ಯ ವಾತಾವರಣ ಮೂಡಿದೆ ಎಂದು ಅಭಿಪ್ರಾಯಪಟ್ಟರು.

ದೇವಸ್ಥಾನಕ್ಕೆ ಆಗಮಿಸುವ ಸಕಲ ಭಕ್ತಾದಿಗಳಿಗೆ ಟ್ರಸ್ಟ್ ವತಿಯಿಂದ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಮುಖ್ಯ ಅರ್ಚಕ ಗುರುಪಾದಯ್ಯಸ್ವಾಮಿ ಮಾತನಾಡಿ, ಹಲವಾರು ವರ್ಷಗಳಿಂದ ಹೇಮರಡ್ಡಿ ಮಲ್ಲಮ್ಮ ಭಕ್ತರ ಸಹಕಾರದಿಂದ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಅವರ ಸಾಧನೆಯನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

ಇದಕ್ಕೂ ಮೊದಲು ದೇವಸ್ಥಾನದಲ್ಲಿ ಮಲ್ಲಮ್ಮನ ಮೂರ್ತಿಗೆ ಪಂಚಾಮೃತ ಅಭಿಷೇಕ, ಮುತೈದೆಯರಿಗೆ ಉಡಿ ತುಂಬುವ, ತೊಟ್ಟಿಲ ಉತ್ಸವ ಕಾರ್ಯಕ್ರಮ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಇದನ್ನೂ ಓದಿ: Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ 54 ಹುದ್ದೆ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ಸಮಾರಂಭದಲ್ಲಿ ಉಪ ಕಾರ್ಯನಿರ್ವಾಹಕ ಅಧಿಕಾರಿ ಹರಿದಾಸರು, ಶಂಕ್ರಯ್ಯಸ್ವಾಮಿ, ಅರ್ಚಕರಾದ ಓಂಕಾರಯ್ಯಸ್ವಾಮಿ, ಮಲ್ಲಮ್ಮ ತಾಳಿಕೋಟಿ, ವೆಂಕಟರಡ್ಡಿ ಮಾಲಿ ಪಾಟೀಲ್ ಹತ್ತಿಕುಣಿ, ಗದಗ ಜಿಲ್ಲೆಯ ನ್ಯಾಯವಾದಿ ವಿರೇಂದ್ರ ಶಿರೋಳ, ಶಿವಪ್ಪಗೌಡ, ಸಿದ್ದಣ್ಣ ಸೇರಿದಂತೆ ಕನ್ನಡಿಗ ಭಕ್ತರು ಹಾಗೂ ಇತರರು ಉಪಸ್ಥಿತರಿದ್ದರು.

Continue Reading

ಧಾರ್ಮಿಕ

Remedies For SadeSati: ಶನಿಯ ವಕ್ರದೃಷ್ಟಿ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ

ಶನಿಯ ವಕ್ರದೃಷ್ಟಿಯ ಪರಿಣಾಮಗಳ ಬಗ್ಗೆ ಹೆಚ್ಚಿನವರು ಕೇಳಿರುತ್ತಾರೆ, ಇನ್ನು ಕೆಲವರು ಅನುಭವಿಸಿರುತ್ತಾರೆ. ಇದರಿಂದ ಪಾರಾಗಲು ಹಲವಾರು ಪರಿಹಾರ ಮಾರ್ಗಗಳನ್ನು ಹೇಳಲಾಗಿದೆ. ಜೂನ್ 6ರಂದು ಶನಿ ಜಯಂತಿ. ಈ ದಿನ ಕೆಲವು ಅನುಷ್ಠಾನಗಳನ್ನು ಮಾಡುವುದರಿಂದ ಶನಿಯ ವಕ್ರ ದೃಷ್ಟಿಯಿಂದ ಪಾರಾಗಲು (Remedies For SadeSati) ಸಾಧ್ಯವಿದೆ .

VISTARANEWS.COM


on

By

Remedies For SadeSati
Koo

ಜೀವನದಲ್ಲಿ ಏನಾದರೂ ಕೆಟ್ಟದಾದರೆ ಶನಿಯ (shani) ವಕ್ರ ದೃಷ್ಟಿ ಅಥವಾ ಸಾಡೇ ಸಾಥ್ ಪರಿಣಾಮ (Remedies For SadeSati) ಎನ್ನುವ ಅನುಮಾನ ಕೆಲವರನ್ನು ಕಾಡುತ್ತದೆ. ನಾವು ತಿಳಿದೋ ತಿಳಿಯದೆಯೋ ಮಾಡುವ ಕರ್ಮಕ್ಕೆ ತಕ್ಕ ಪ್ರತಿಫಲ ಕೊಡುವ ಶನಿ ದೇವನ ಬಗ್ಗೆ ಭಕ್ತಿಗಿಂತ ಭಯ ಪಡುವವರೇ ಅಧಿಕ. ಆದರೆ ಶನಿ ದೇವನೂ ಶ್ರದ್ಧಾ ಭಕ್ತಿಗೆ ಮೆಚ್ಚುತ್ತಾನೆ ಹಾಗೂ ಭಕ್ತರ ಅಭೀಷ್ಟೆಗಳನ್ನು ಈಡೇರಿಸುತ್ತಾನೆ.

ಶನಿಯ ವಕ್ರ ದೃಷ್ಟಿ ನಮ್ಮ ಮೇಲೆ ಬಿದ್ದರೆ ಅದರಿಂದ ಪಾರಾಗಲು ಕೆಲವೊಂದು ಪರಿಹಾರ ಕ್ರಮಗಳನ್ನು ಪುರಾಣಗಳಲ್ಲಿ ಹೇಳಲಾಗಿದೆ. ಜೂನ್ 6ರಂದು ಶನಿ ಜಯಂತಿ (Shani Jayanti). ಈ ದಿನ ಇವುಗಳನ್ನು ಅನುಷ್ಠಾನಗೊಳಿಸಿದರೆ ಕಷ್ಟಗಳಿಂದ ಪಾರಾಗಬಹುದು.

1. ಬೆನ್ನು ನೋವು ಅಥವಾ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಶನಿ ಜಯಂತಿಯ ದಿನದಂದು ಕಪ್ಪು ಉಂಡೆಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ದೇವಸ್ಥಾನದ ಮೂಲೆಯಲ್ಲಿ ಇರಿಸಿ. ಶನಿದೇವನ ಮಂತ್ರವಾದ “ಓಂ ಶ್ರೀಂ ಹ್ರೀಂ ಶಾಂ ಶನೈಶ್ಚರಾಯ ನಮಃ” ಎಂಬುದಾಗಿ 21 ಬಾರಿ ಜಪಿಸಿ.

2. ಮಕ್ಕಲಾಗದೇ ಇದ್ದರೆ ದಂಪತಿ ಶನಿ ಜಯಂತಿಯ ದಿನದಂದು ಮನೆಯ ಚಾವಣಿ, ಬಾಲ್ಕನಿ ಅಥವಾ ಮನೆಯ ಹೊರಗೆ ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಇರಿಸಿ. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಆಹಾರ ಮತ್ತು ನೀರು ಪಕ್ಷಿಗಳಿಗೆ ಇಡಬೇಕೇ ಹೊರತು ಪಾರಿವಾಳಗಳಿಗೆ ಅಲ್ಲ. ಇದರೊಂದಿಗೆ 51 ಬಾರಿ ಓಂ ಶ್ರೀಂ ಹ್ರೀಂ ಶಾಂ ಶನೈಶ್ಚರಾಯ ನಮಃ ಎಂದು ಜಪಿಸಿ.

3. ಮನೆಯ ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸಲು ಬಯಸಿದರೆ ಶನಿ ಜಯಂತಿಯ ದಿನದಂದು ದೇವಸ್ಥಾನದಲ್ಲಿ ಕಪ್ಪು ಬಟ್ಟೆಯನ್ನು ಅರ್ಪಿಸಿ. 11 ಬಾರಿ ಶಂ ಹ್ರೀಂ ಶಾಂ ಶನೈಶ್ಚರಾಯ ನಮಃ.ಮಂತ್ರವನ್ನು ಜಪಿಸಿ.

4. ಕುಟುಂಬದ ಸದಸ್ಯರೊಂದಿಗೆ ಸಮಸ್ಯೆಗಳಿದ್ದರೆ ಶನಿ ಜಯಂತಿಯ ದಿನದಂದು ಶನಿ ದೇವರನ್ನು ಧ್ಯಾನಿಸುವಾಗ ದೇವಸ್ಥಾನದಲ್ಲಿ ಒಂದು ಹಿಡಿ ಇಡೀ ಉಂಡೆಯನ್ನು ಅರ್ಪಿಸಿ ಮತ್ತು 21 ಬಾರಿ ಜಪಿಸಿ. ಓಂ ಶ್ರೀ ಶಾಂ ಶ್ರೀ ಶನೈಶ್ಚರಾಯ ನಮಃ ಮಂತ್ರವನ್ನು ಜಪಿಸಿ.

5. ಜೀವನದಲ್ಲಿ ಸತತವಾಗಿ ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಶನಿ ಜಯಂತಿಯ ದಿನದಂದು ಕೈಯ ಉದ್ದದ 19 ಪಟ್ಟು ಕಪ್ಪು ದಾರವನ್ನು ತೆಗೆದುಕೊಂಡು ಅದನ್ನು ಮಾಲೆಯ ರೂಪದಲ್ಲಿ ಮಾಡಿ ಕುತ್ತಿಗೆಗೆ ಧರಿಸಿ. 108 ಬಾರಿ ಓಂ ಶ್ರೀಂ ಶ್ರೀಂ ಶ್ರೀಂ ಶನೈಶ್ಚರಾಯ ನಮಃ ಮಂತ್ರವನ್ನು ಜಪಿಸಿ.

6. ಯಾವುದೇ ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಅಥವಾ ಕೆಲಸದ ಸಮಯದಲ್ಲಿ ಸೋಮಾರಿತನವನ್ನು ಅನುಭವಿಸಿದರೆ ಶನಿ ಜಯಂತಿಯ ದಿನ ಶನಿದೇವನ ಈ ಹತ್ತು ನಾಮಗಳಾದ ಕೋನಸ್ತ ಪಿಂಗಲೋ ಬಭ್ರುಃ ಕೃಷ್ಣ ರೌದ್ರೋಂತಕೋ ಯಮ: ಸೌರಿಃ ಶನೈಶ್ಚರೋ ಮಂದಃ ಪಿಪ್ಪಲಾದೇನ್ ಎಂಬುದಾಗಿ 108 ಬಾರಿ ಜಪಿಸಬೇಕು.

7. ಜೀವನದಿಂದ ಶತ್ರುಗಳನ್ನು ದೂರ ಮಾಡಲು ಶನಿ ಜಯಂತಿಯ ದಿನದಂದು ಸ್ನಾನದ ಅನಂತರ ಶನಿದೇವನ ಮಂತ್ರವಾದ ಓಂ ಐಂ ಶ್ರೀಂ ಹ್ರೀಂ ಶನೈಶ್ಚರಾಯ ನಮಃ ಎಂಬುದಾಗಿ 11 ಬಾರಿ ಜಪಿಸಬೇಕು.

8. ಮನದಲ್ಲಿ ಸದಾ ಸಕಾರಾತ್ಮಕತೆ ಇರಬೇಕು ಮತ್ತು ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರುತ್ತಿರಬೇಕೆಂದು ಬಯಸಿದರೆ ಶನಿ ಜಯಂತಿಯ ದಿನದಂದು ಮನೆಯ ಮುಖ್ಯದ್ವಾರದಲ್ಲಿ ಸಾಸಿವೆ ಎಣ್ಣೆಯನ್ನು ಹಚ್ಚಿ. 21 ಬಾರಿ ಓಂ ಶಂ ಶನ್ಯೈ ನಮಃ ಮಂತ್ರವನ್ನು ಜಪಿಸಿ.

9. ಶನಿ ಜಯಂತಿಯ ದಿನ ಸಂಜೆ ಶನಿದೇವನ ಮಂತ್ರವಾದ ಶಂ ಓಂ ಶಂ ನಮಃ ಅನ್ನು ಜಪಿಸಬೇಕು. ಇದರಿಂದ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತೀರಿ ಮತ್ತು ಜೀವನದಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.

10. ಕಬ್ಬಿಣದಿಂದ ಮಾಡಿದ ವಸ್ತುವನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ. ಜೊತೆಗೆ 11 ಬಾರಿ ಓಂ ಐಂ ಹ್ರೀಂ ಶ್ರೀಂ ಶನೈಶ್ಚರಾಯ ನಮಃ ಎಂದು ಜಪಿಸಿದರೆ ಖಿನ್ನತೆಯಿಂದ ಶೀಘ್ರದಲ್ಲೇ ಪರಿಹಾರವನ್ನು ಪಡೆಯುತ್ತೀರಿ ಮತ್ತು ಯಾವುದೇ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತೀರಿ.

ಇದನ್ನೂ ಓದಿ: Tumkur News: ವಿಜೃಂಭಣೆಯಿಂದ ನಡೆದ ಶ್ರೀ ಬೇವಿನಳಮ್ಮ ದೇವಿ ಜಲಧಿ ಮಹೋತ್ಸವ

21. ಸಣ್ಣಪುಟ್ಟ ವಿಚಾರಗಳಿಗೆ ಸಂಗಾತಿಯೊಂದಿಗೆ ಸದಾ ಜಗಳ ನಡೆಯುತ್ತಿದ್ದರೆ ಶನಿ ಜಯಂತಿಯ ದಿನ ಶುಚಿಯಾಗಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ಶನಿದೇವನನ್ನು ಸ್ಮರಿಸಿ ನಮಸ್ಕರಿಸಿ. ಅಲ್ಲದೆ ಸಾಸಿವೆ ಎಣ್ಣೆ, ಎಳ್ಳುವನ್ನು ಶನಿ ದೇವರಿಗೆ ಅರ್ಪಿಸಿ ಮತ್ತು ಶನಿದೇವನ ಶಂ ಶನೈಶ್ಚರಾಯ ನಮಃ ಮಂತ್ರವನ್ನು 21 ಬಾರಿ ಜಪಿಸಿ.

22. ಶನಿ ಜಯಂತಿಯ ದಿನದಂದು ಮನೆಯಲ್ಲಿ ಶಿವನ ಚಿತ್ರದ ಮುಂದೆ ಆಸನವನ್ನು ಇಟ್ಟು ಶಿವನ ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಜಪಿಸಿ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಅಖಂಡವಾಗಿ ಉಳಿಯುತ್ತದೆ.

Continue Reading

ಪ್ರವಾಸ

Jagannath Puri Temple: ಪುರಿ ಜಗನ್ನಾಥ ದೇವಸ್ಥಾನದ 7 ಅಚ್ಚರಿಯ ಸಂಗತಿಗಳಿವು!

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ಮಂದಿರವೂ ವಿಶ್ವ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ (Jagannath Puri Temple) ಒಂದಾಗಿದೆ. ಇಲ್ಲಿನ ಏಳು ವಿಚಾರಗಳು ಇವತ್ತಿಗೂ ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದೆ. ಆ ಏಳು ಅಚ್ಚರಿಗಳೇನು ಎಂಬ ವಿವರಣೆ ಇಲ್ಲಿದೆ.

VISTARANEWS.COM


on

By

Jagannath Puri Temple
Koo

ವಿಶ್ವ ಪ್ರಸಿದ್ಧ ದೇವಾಲಯಗಳಲ್ಲಿ ಭಾರತದ (india) ಒಡಿಶಾದ (Odisha) ಪುರಿಯಲ್ಲಿರುವ ಜಗನ್ನಾಥ ಮಂದಿರವೂ (Jagannath Pur Temple) ಒಂದಾಗಿದೆ. ಭಗವಾನ್ ವಿಷ್ಣುವಿನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾಗಿರುವ ಈ ಜಗನ್ನಾಥ ದೇವಾಲಯವು ಲಕ್ಷಾಂತರ ಹಿಂದೂಗಳಿಗೆ ಪ್ರಮುಖ ಯಾತ್ರಾ (tourist place) ಸ್ಥಳವಾಗಿದೆ. ಪ್ರತಿ ವರ್ಷ ಇಲ್ಲಿ ನಡೆಯುವ ರಥಯಾತ್ರೆಯ ಉತ್ಸವವನ್ನು ಕಣ್ತುಂಬಿಕೊಳ್ಳಲು ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸುತ್ತಾರೆ.

ಅದ್ಭುತವಾದ ವಾಸ್ತು ಶಿಲ್ಪವನ್ನು ಹೊಂದಿರುವ ಈ ದೇವಾಲಯವು ಅನೇಕ ರಹಸ್ಯಗಳನ್ನು ಹೊಂದಿದೆ. ಜಗನ್ನಾಥ ಪುರಿ ದೇವಸ್ಥಾನದ ಬಗ್ಗೆ ಹೆಚ್ಚಿನವರು ತಿಳಿಯದೇ ಇರುವಂತ ಏಳು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.


1. ನೆರಳು ಬೀಳುವುದಿಲ್ಲ!

ಜಗನ್ನಾಥ ಪುರಿ ದೇವಾಲಯದ ಮೇಲೆ ಯಾವುದೇ ನೆರಳು ಬೀಳುವುದಿಲ್ಲ. ಇದು ನಿಖರವಾದ ವಾಸ್ತುಶಿಲ್ಪದ ಯೋಜನೆಯ ಪರಿಣಾಮವೇ ಅಥವಾ ಜಗನ್ನಾಥನ ಪವಾಡವೇ ಎಂಬುದನ್ನು ಈವರೆಗೆ ಪತ್ತೆ ಹಚ್ಚಲು ಯಾರಿಗೂ ಸಾಧ್ಯವಾಗಿಲ್ಲ. ಈ ದೇವಾಲಯವು ‘ನೆರಳು ರಹಿತ’ ಎಂದು ಹೇಳಲಾಗುತ್ತದೆ.


2. ಗಾಳಿಗೆ ವಿರುದ್ಧವಾಗಿ ಧ್ವಜ ಹಾರುತ್ತದೆ!

ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜವು ಗಾಳಿಗೆ ವಿರುದ್ಧವಾಗಿ ಯಾಕೆ ಹಾರುತ್ತದೆ ಎಂಬುದರ ಹಿಂದೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ದೇವಾಲಯದಲ್ಲಿ ಧಾರ್ಮಿಕ ಶಕ್ತಿಯ ಭವ್ಯವಾದ ಅದ್ಭುತವನ್ನು ಪ್ರದರ್ಶಿಸುವ ಮೂಲಕ ಪ್ರವಾಸಿಗರು ಅಚ್ಚರಿ ಪಡುವಂತೆ ಮಾಡುತ್ತದೆ.


3. ಮೇಲ್ಭಾಗದಲ್ಲಿ ಸುದರ್ಶನ ಚಕ್ರ!

ಮೇಲ್ಭಾಗದಲ್ಲಿ ಇರಿಸಲಾಗಿರುವ ಸುದರ್ಶನ ಚಕ್ರವು ಎರಡು ರಹಸ್ಯಗಳನ್ನು ಹೊಂದಿದೆ. ಮೊದಲನೆಯದಾಗಿ ನಿರ್ಮಾಣದ ಸಮಯದ ತಂತ್ರಜ್ಞಾನದ ಸ್ಥಿತಿಯನ್ನು ಗಮನಿಸಿದರೆ ವಾಸ್ತುಶಿಲ್ಪಿಗಳು ಮತ್ತು ನಿರ್ಮಾಣ ಕಾರ್ಮಿಕರು ಅಂತಹ ತೂಕದ ಚಕ್ರವನ್ನು ಹೇಗೆ ಮೇಲಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬುದು. ಇನ್ನೊಂದು ಇದು ಎಲ್ಲಾ ಕೋನಗಳಿಂದಲೂ ಒಂದೇ ರೀತಿ ಹೇಗೆ ಕಾಣುತ್ತದೆ ಎಂಬುದು. ಈ ಸುದರ್ಶನ ಚಕ್ರದ ಪರಿಪೂರ್ಣ ಗಣಿತ ಲೆಕ್ಕಾಚಾರ ಅನೇಕ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.


4. ಅಡುಗೆಮನೆ ಕುತೂಹಲ

ದೇವಾಲಯದೊಳಗಿರುವ ಆಹಾರವನ್ನು ಒಂದರ ಮೇಲೊಂದರಂತೆ ಜೋಡಿಸಲಾದ ಮಡಕೆಗಳಲ್ಲಿ ಬೇಯಿಸಲಾಗುತ್ತದೆ. ಕುತೂಹಲದ ವಿಷಯವೆಂದರೆ ಮೇಲ್ಭಾಗದಲ್ಲಿರುವ ಮಡಕೆಗಳ ಆಹಾರ ಮೊದಲು ಬೇಯುತ್ತದೆ! ಇದು ಪ್ರವಾಸಿಗರು ಮತ್ತು ಸಂಶೋಧಕರಿಗೆ ಇನ್ನೂ ಸವಾಲಾಗಿದೆ.


5. ಮರದ ದೇವತೆಗಳ ಆಚರಣೆ

ನಬಕಾಲೇಬಾರ ಎಂಬ ಆಚರಣೆಯು ಪುರಿಯ ಜಗನ್ನಾಥ ದೇವಾಲಯದಲ್ಲಿ ನಾಲ್ಕು ಹಿಂದೂ ದೇವತೆಗಳ ಮರದ ಪ್ರತಿಮೆಗಳ ಪುನರ್ ನಿರ್ಮಾಣವನ್ನು ಸಾರುವ ಅತ್ಯಂತ ಮಂಗಳಕರವಾದ ಆಚರಣೆಯಾಗಿದೆ. ಇದು ಆಕರ್ಷಣೆಯ ವಿಷಯವಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತದೆ.


6. ಶಾಂತವಾಗುವ ನೀರು!

ಸಂಜೆ ಸಮಯದಲ್ಲಿ ಸಾಗರದ ನೀರು ದೇವಾಲಯ ತಲುಪಿದಾಗ ಶಾಂತವಾಗುತ್ತದೆ. ಇದು ಯಾಕೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ದೇವಾಲಯದೊಳಗಿನ ಶಬ್ದವು ಮಾಂತ್ರಿಕವಾಗಿ ನೀರನ್ನು ಹಿಂದಿರುಗುವಂತೆ ಮಾಡುತ್ತದೆ! ದೇವತೆಗಳು ದೇವಾಲಯದೊಳಗೆ ಶಾಂತಿಯನ್ನು ಬಯಸುತ್ತಾರೆ ಮತ್ತು ಆದ್ದರಿಂದ ಪ್ರಕೃತಿ ಶಾಂತವಾಗುತ್ತದೆ ಎಂದು ಸ್ಥಳೀಯ ಪುರಾಣಗಳು ಹೇಳುತ್ತವೆ.


7. ಹಿಮ್ಮುಖ ಗಾಳಿ

ದೇವಾಲಯದ ಗಾಳಿಯು ಹಗಲಿನಲ್ಲಿ ಭೂಮಿಯಿಂದ ಸಮುದ್ರದತ್ತ ಹೋಗುತ್ತದೆ ಮತ್ತು ರಾತ್ರಿಯಲ್ಲಿ ಹರಿವನ್ನು ಹಿಮ್ಮುಖಗೊಳಿಸುತ್ತದೆ. ಇದು ಇನ್ನೂ ಉತ್ತರಕ್ಕೆ ಸಿಗದ ಪ್ರಶ್ನೆಯಾಗಿದೆ. ಇಲ್ಲಿನ ಪ್ರಕೃತಿ ವಿಸ್ಮಯ ಅನೇಕರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತದೆ.

Continue Reading

ಪ್ರಮುಖ ಸುದ್ದಿ

Ayodhya Ram Mandir: ಅಯೋಧ್ಯೆ ಶ್ರೀ ರಾಮನಿಗೆ ಬೆಳ್ಳಿಯ ಬಿಲ್ಲು- ಬಾಣ; ಪೂಜಿಸಿ ಕಳಿಸಿಕೊಟ್ಟ ಶೃಂಗೇರಿ ಶ್ರೀಗಳು

Ayodhya Ram Mandir: ಶೃಂಗೇರಿ ಹಿರಿಯ ಶ್ರೀಗಳಾದ ಜಗದ್ಗುರು ಶ್ರೀ ಭಾರತೀ ತೀರ್ಥರು ಹಾಗೂ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥರು (sri vidhushekhara bharati Teertha) ಈ ಸಂದರ್ಭದಲ್ಲಿ ಹಾಜರಿದ್ದು, ಬೆಳ್ಳಿಯ ಬಿಲ್ಲು- ಬಾಣದ ಅಂದಚಂದವನ್ನು ಸವಿದರು. ನಂತರ ಅದನ್ನು ಅಯೋಧ್ಯೆಗೆ ಕೊಂಡೊಯ್ಯಲಾಯಿತು.

VISTARANEWS.COM


on

ayodhya ram mandir 1
Koo

ಚಿಕ್ಕಮಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ (Ayodhya Ram Mandir) ಆರಾಧ್ಯ ಮೂರ್ತಿ ಬಾಲಕ ರಾಮ (Balak Ram) ನಿಗೆ ಬೆಳ್ಳಿಯ ಬಿಲ್ಲು-ಬಾಣ (Silver bow, silver Arrow) ಸಮರ್ಪಿಸಲಾಗುತ್ತಿದೆ. ಬೆಂಗಳೂರು ಮೂಲದ ಭಕ್ತರೊಬ್ಬರು ಬೆಳ್ಳಿಯ ಬಿಲ್ಲು-ಬಾಣ ಸಮರ್ಪಣೆ ಮಾಡುತ್ತಿದ್ದು, ಅದಕ್ಕೂ ಮೊದಲು ಶೃಂಗೇರಿಯ ಶಾರದಾ ಪೀಠದಲ್ಲಿ (Sringeri Sharada Peetham) ಶ್ರೀ ಗುರುಗಳ ಮುಂದೆ ಅದನ್ನು ಪ್ರದರ್ಶಿಸಿದರು.

ಅತ್ಯಂತ ಸುಂದರ ಹಾಗೂ ಮನಮೋಹಕವಾದ, ಬೆಳ್ಳಿಯಿಂದ ಮಾಡಲಾದ ಈ ಬಿಲ್ಲು-ಬಾಣವನ್ನು ಶೃಂಗೇರಿ ಹಿರಿಯ ಹಾಗೂ ಕಿರಿಯ ಶ್ರೀಗಳು ಪೂಜಿಸಿ ಕಳಿಸಿಕೊಟ್ಟರು. ಶೃಂಗೇರಿ ಹಿರಿಯ ಶ್ರೀಗಳಾದ ಜಗದ್ಗುರು ಶ್ರೀ ಭಾರತೀ ತೀರ್ಥರು ಹಾಗೂ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥರು (sri vidhushekhara bharati Teertha) ಈ ಸಂದರ್ಭದಲ್ಲಿ ಹಾಜರಿದ್ದು, ಬೆಳ್ಳಿಯ ಬಿಲ್ಲು- ಬಾಣದ ಅಂದಚಂದವನ್ನು ಸವಿದರು. ನಂತರ ಅದನ್ನು ಅಯೋಧ್ಯೆಗೆ ಕೊಂಡೊಯ್ಯಲಾಯಿತು.

ರಾಮ ಮಂದಿರದ ಪ್ರತಿಷ್ಠಾಪನೆಗೆ ಶೃಂಗೇರಿ ಶ್ರೀಗಳನ್ನು ಆಹ್ವಾನಿಸಲಾಗಿತ್ತು. ಶ್ರೀಗಳು ಶುಭಹಾರೈಕೆಯ ಸಂದೇಶವನ್ನು ಕಳಿಸಿಕೊಟ್ಟಿದ್ದರಲ್ಲದೆ, ಆ ದಿನ ಮಠದಲ್ಲಿ ಹಾಗೂ ಶಾಖಾಮಠಗಳಲ್ಲಿ ಶ್ರೀರಾಮನ ಆರಾಧನೆಗೆ ನಿರ್ದೇಶನ ನೀಡಿದ್ದರು.

ಚಿನ್ನದ ಬಿಲ್ಲು ಬಾಣ

ಪ್ರಸ್ತುತ ಅಯೋಧ್ಯಾ ರಾಮನ ಕೈಯಲ್ಲಿ ಚಿನ್ನದ ಬಿಲ್ಲು ಬಾಣ ಇವೆ. ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೂ ಮುನ್ನವೇ ಹಲವು ಅಮೂಲ್ಯ ಉಡುಗೊರೆಗಳು ಅಯೋಧ್ಯೆಯನ್ನು ತಲುಪಿದ್ದವು. ದೇಶಾದ್ಯಂತ ಹಲವು ಭಕ್ತರು ಅನೇಕ ಉಡುಗೊರೆಗಳನ್ನು ಶ್ರೀರಾಮನಿಗಾಗಿ ಅಯೋಧ್ಯೆಗೆ ಕಳಿಸಿದ್ದರು. ಅತ್ತ ನೇಪಾಳದಿಂದಲೂ ಅತ್ಯಮೂಲ್ಯ ವಸ್ತುಗಳು ಅಯೋಧ್ಯೆ ಸೇರಿದ್ದವು. ಶ್ರೀರಾಮನಿಗಾಗಿ ಚಿನ್ನದ ಬಿಲ್ಲು (golden bow), ಚಿನ್ನದ ಬಾಣ (golden arrow), ಚಿನ್ನದ ಘಂಟೆ (golden bell) ಸೇರಿದಂತೆ ಹಲವು ಅಮೂಲ್ಯ ವಸ್ತುಗಳು ಬಂದಿದ್ದವು.

ಒನವಿಲ್ಲು ಸಮರ್ಪಣೆ

ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು (Padmanabhaswamy Temple) ಕೂಡ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರದ (Ayodhya Ram Mandir) ಪ್ರತಿಷ್ಠಾಪನೆ ಸಮಾರಂಭದ ಸಂದರ್ಭದಲ್ಲಿ ಸಾಂಪ್ರದಾಯಿಕ ಬಿಲ್ಲು ‘ಒನವಿಲ್ಲು’ (Onavillu) ಸಮರ್ಪಿಸಿತ್ತು. ‘ಒನವಿಲ್ಲು’ ಮೂರು ಶತಮಾನಗಳ ಹಳೆಯ ಸಂಪ್ರದಾಯದ ಭಾಗವಾಗಿ ಭಗವಾನ್ ಶ್ರೀ ಪದ್ಮನಾಭನಿಗೆ ಸಮರ್ಪಿತವಾದ ವಿಧ್ಯುಕ್ತ ಅರ್ಪಣೆಯಾಗಿದೆ. ಇಲ್ಲಿನ ಸ್ಥಳೀಯರು ಇದನ್ನು ಪ್ರತಿ ವರ್ಷ ‘ತಿರು ಓಣಂ’ ಹಬ್ಬದಂದು ಪದ್ಮನಾಭ ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಭಕ್ತರಿಂದ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ‘ವಿಲ್ಲು’ ಸಾಮಾನ್ಯವಾಗಿ ಬಿಲ್ಲಿನ ಆಕಾರದ ಮರದ ಫಲಕವಾಗಿದ್ದು, ಅನಂತಶಯನಂ ಪೌರಾಣಿಕ ಸರ್ಪ ಅನಂತ, ದಶಾವತಾರಂ ವಿಷ್ಣುವಿನ ಅವತಾರಗಳು, ಶ್ರೀರಾಮ ಪಟ್ಟಾಭಿಷೇಕ ಮುಂತಾದ ವರ್ಣಚಿತ್ರಗಳನ್ನು ಹೊಂದಿದೆ.

ಈವರೆಗೆ ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿದವರ ಸಂಖ್ಯೆ 1.5 ಕೋಟಿ!

ಭಗವಾನ್ ಶ್ರೀರಾಮನ (sriram) ಜನ್ಮ ಸ್ಥಳವಾದ ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram mandir) ರಾಮಲಲ್ಲಾನ (ram lalla) ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಪ್ರತಿನಿತ್ಯ ಸುಮಾರು ಒಂದು ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ. ದೇವಾಲಯ ಉದ್ಘಾಟನೆಯಾದ ಬಳಿಕ ಈವರೆಗೆ ಸುಮಾರು 1.5 ಕೋಟಿ ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ಟ್ರಸ್ಟ್‌ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Shri Ram Janmabhoomi Theertha Kshetra Trust) ಪ್ರಧಾನ ಕಾರ್ಯದರ್ಶಿ (Principal Secretary) ಚಂಪತ್ ರಾಯ್‌ (Champat Rai), ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಜನ್ಮಭೂಮಿ ದೇವಾಲಯದಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಸರಿಸುಮಾರು 1.5 ಕೋಟಿ ಜನರು ರಾಮ್ ಲಲ್ಲಾನ ದರ್ಶನ ಪಡೆದಿದ್ದಾರೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ರಾಮಲಲ್ಲಾನ ದರ್ಶನ ಪಡೆಯಲು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಹೊಸದಾಗಿ ನಿರ್ಮಿಸಲಾದ ಭವ್ಯವಾದ ರಾಮಜನ್ಮಭೂಮಿ ದೇವಾಲಯದಲ್ಲಿ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಚಿಸಿರುವ 51 ಇಂಚು ಎತ್ತರದ ಭಗವಾನ್ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಜನವರಿ 22ರಂದು ಎಲ್ಲಾ ಪಂಗಡಗಳಿಗೆ ಸೇರಿದ ಸುಮಾರು 8,000 ಗಣ್ಯರ ಸಮ್ಮುಖದಲ್ಲಿ ನಡುವೆ ನಡೆಯಿತು. ಪ್ರಾಣ ಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.

ಇದನ್ನೂ ಓದಿ: Narendra Modi: ರಾಮಲಲ್ಲಾನಿಗೆ ಮೋದಿ ಸಾಷ್ಟಾಂಗ ನಮಸ್ಕಾರ; ಇಲ್ಲಿವೆ ಅಯೋಧ್ಯೆ ಭೇಟಿ Photos

Continue Reading
Advertisement
Karnataka rain
ಮಳೆ12 seconds ago

Karnataka Rain : ಮಳೆ ಅವಘಡಕ್ಕೆ ಜನರು ತತ್ತರ; ಧರೆಗುರುಳಿದ ಮರಗಳು, ಕುಸಿದು ಬಿದ್ದ ಮನೆಗಳು

Shivasharane Hemaraddi Mallamma Jayanti celebration in Srisailam
ಯಾದಗಿರಿ2 mins ago

Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

union minister Pralhad Joshi latest statement in bidar
ಕರ್ನಾಟಕ4 mins ago

Pralhad Joshi: ಅಮಾಯಕ ಹೆಣ್ಣುಮಕ್ಕಳ ಹತ್ಯೆಯಾದರೂ ಪೊಲೀಸರ ಮೌನ; ಪ್ರಲ್ಹಾದ ಜೋಶಿ ಆರೋಪ

Rave party 86 people including Hema and Ashi consumed drugs in the rave party Blood report positive
ಕ್ರೈಂ6 mins ago

Rave party: ರೇವ್‌ ಪಾರ್ಟಿಯಲ್ಲಿ ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

Remedies For SadeSati
ಧಾರ್ಮಿಕ10 mins ago

Remedies For SadeSati: ಶನಿಯ ವಕ್ರದೃಷ್ಟಿ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ

Sharad Kelkar
ಸಿನಿಮಾ11 mins ago

Sharad Kelkar: ‘ಬಾಹುಬಲಿ’ಗೆ ಧ್ವನಿ ನೀಡಿದ್ದು ಮರೆಯಲಾಗದ ಅನುಭವ ಎಂದ ಶರದ್ ಕೇಳ್ಕರ್

Glenn Maxwell
ಪ್ರಮುಖ ಸುದ್ದಿ28 mins ago

Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

Theatre
ಸಿನಿಮಾ30 mins ago

‘ಸ್ಟಾರ್‌’ ಸಿನಿಮಾಗಳಿಲ್ಲದ ಕಾರಣ ಚಿತ್ರಮಂದಿರಗಳ ಬಂದ್‌ಗೆ ಚಿಂತನೆ;‌ ನಿರ್ಮಾಪಕರಿಂದ ಭಾರಿ ಆಕ್ರೋಶ!

Dengue Fever
ಆರೋಗ್ಯ33 mins ago

Dengue Fever: ಮಳೆಗಾಲ ಬರುತ್ತಿದೆ! ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!

Star Gown Fashion
ಫ್ಯಾಷನ್48 mins ago

Star Gown Fashion: ಕೇಪ್‌ ಗೌನ್‌ನಲ್ಲಿ ತ್ರಿಲೋಕ ಸುಂದರಿಯಂತೆ ಕಂಡ ನಟಿ ನಮ್ರತಾ ಗೌಡ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ14 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌