Maha Shivaratri 2024 : ಬೆಂಗಳೂರಿಗರೇ ಗಮನಿಸಿ; ನಾಳೆ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧ - Vistara News

ಮಹಾ ಶಿವರಾತ್ರಿ

Maha Shivaratri 2024 : ಬೆಂಗಳೂರಿಗರೇ ಗಮನಿಸಿ; ನಾಳೆ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧ

Maha Shivaratri 2024 : ಮಹಾ ಶಿವರಾತ್ರಿ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. ಈ ಬಗ್ಗೆ ಆದೇಶವನ್ನು ಹೊರಡಿಸಿದೆ.

VISTARANEWS.COM


on

Ban on slaughter of animals and sale of meat
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶಿವರಾತ್ರಿಗೆ ಕ್ಷಣಗಣನೆ (Maha Shivaratri 2024) ಶುರುವಾಗಿದೆ. ಶಿವರಾತ್ರಿಯಂದು ಶಿವಾರಾಧನೆಗೆ ಶಿವಭಕ್ತರು ಸಜ್ಜಾಗಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಲ್ಲೂ ಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ. ಶಿವರಾತ್ರಿ ಹಬ್ಬದಂದು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

ಮಾ.8ರ ಶುಕ್ರವಾರದಂದು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ. ರವಿಕುಮಾರ್ ಆದೇಶವನ್ನು ಹೊರಡಿಸಿದ್ದಾರೆ.

ಮಹಾಶಿವರಾತ್ರಿಗೆ ಕೆಎಸ್‌ಆರ್‌ಟಿಸಿಯಿಂದ ಸ್ಪೆಷಲ್‌ ಬಸ್‌; ಶೇ.10ರಷ್ಟು ಡಿಸ್ಕೌಂಟ್‌!

ಮಹಾಶಿವರಾತ್ರಿಗೆ ದಿನಗಣನೆ (Maha Shivratri) ಶುರುವಾಗಿದೆ. ಎಲ್ಲೆಲ್ಲೂ ಶಿವನಾಮಸ್ತರಣೆಯೊಂದಿಗೆ ಜಾಗರಣೆ ಆಚರಿಸಲು ಜನರು ಸಜ್ಜಾಗುತ್ತಿದ್ದಾರೆ. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ ನಿಗಮವು ಹೆಚ್ಚುವರಿ ಬಸ್‌ಗಳ ನಿಯೋಜನೆ ಮಾಡಿದೆ.

ಮಾರ್ಚ್‌ 8 ಶುಕ್ರವಾರ ಮಹಾಶಿವರಾತ್ರಿ ಹಾಗೂ 9,10ರಂದು ವಾರಾಂತ್ಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮಾ. 7 ರಿಂದ 10ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 1,500 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಮಾ.10 -11ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

*ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ. ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ ಹಾಗೂ ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದ‌ರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್‌ ಇರಲಿದೆ.

*ಮೈಸೂರು ರಸ್ತೆ ಬಸ್ ನಿಲ್ದಾಣದಿಂದ (ಸ್ಟ್ಯಾಟ್‌ಲೈಟ್‌) ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಕಾರ್ಯಾಚರಣೆ ನಡೆಸಲಾಗುತ್ತದೆ.

ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುತ್ತದೆ.

ಇದನ್ನೂ ಓದಿ:Train services: ರೈಲ್ವೆ ಕ್ರಾಸಿಂಗ್‌ ಕಾಮಗಾರಿ; 5 ದಿನ ಬೆಂಗಳೂರು-ಮೈಸೂರು ರೈಲು ಸಂಚಾರ ಬಂದ್‌

ಶೇ. 10ರಷ್ಟು ರಿಯಾಯಿತಿ

ಇ-ಟಿಕೇಟ್ ಬುಕಿಂಗ್‌ ಅನ್ನು www.ksrtc.karnataka.gov.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಕರ್ನಾಟಕ ಹಾಗೂ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳು ಇದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ತುಮಕೂರು

Tumkur News: ಶಿರಾದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

Tumkur News: ಶಿರಾ ನಗರ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮಹಾಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

VISTARANEWS.COM


on

Mahashivaratri celebration in Shira
Koo

ಶಿರಾ: ನಗರ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮಹಾಶಿವರಾತ್ರಿಯನ್ನು (Mahashivaratri) ಶ್ರದ್ಧಾ ಭಕ್ತಿಯಿಂದ (Tumkur News) ಆಚರಿಸಲಾಯಿತು.

ಮಹಾಶಿವರಾತ್ರಿ ಅಂಗವಾಗಿ ಶಿವ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ವಿಶೇಷ ದೀಪೋತ್ಸವ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಬೆಳಗ್ಗೆಯಿಂದಲೇ ಭಕ್ತಾದಿಗಳು ಶಿವ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ನಗರದ ಶ್ರೀ ಕೊಳದಪ್ಲೇಶ್ವರ ದೇವಸ್ಥಾನ ಸೇರಿದಂತೆ ಶಿವ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಇದನ್ನೂ ಓದಿ: IND vs ENG: ಅಂತಿಮ ಟೆಸ್ಟ್​ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ನೂತನ ದಾಖಲೆ ಸೃಷ್ಟಿ

ಶಿರಾದ ಶ್ರೀ ಶಂಕರ ಸಹಸ್ರ ಲಿಂಗಾರ್ಚನೆ ಸಮಿತಿಯ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ನಗರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಲಿಂಗಾರ್ಚನೆ ಕಾರ್ಯಕ್ರಮ ಜರುಗಿತು.

ತಾಲೂಕಿನ ಪೂಜಾರಮದ್ದನಹಳ್ಳಿಯ ಸಿದ್ಧಾರೂಢ ಶಿವಾನಂದ ಮಂದಿರದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಪಂಚವೃಕ್ಷದಡಿ ಶ್ರೀ ಪಂಚಮುಖಿ ಲಿಂಗ ಸನ್ನಿಧಿಯಲ್ಲಿ ಶಿವಪಂಚಾಕ್ಷರಿ ಜಪ, ಯಜ್ಞ ಕಾರ್ಯಕ್ರಮ ಹಾಗೂ ಭಕ್ತರಿಂದ ಜಲಾಭಿಷೇಕ ನಡೆಯಿತು.

ಇದನ್ನೂ ಒದಿ: Vinay Rajkumar: ವಿನಯ್‌ ರಾಜ್‌ಕುಮಾರ್ ನಟನೆಯ ʻಗ್ರಾಮಾಯಣʼ ಸೆಟ್‌ಗೆ ಭೇಟಿ ಕೊಟ್ಟ ಶಿವಣ್ಣ-ಗೀತಾ!

ಇನ್ನು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಯಿತು.

Continue Reading

ದಾವಣಗೆರೆ

Davanagere News: ಹೊನ್ನಾಳಿಯಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

Davanagere News: ಹೊನ್ನಾಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

VISTARANEWS.COM


on

Mahashivaratri celebration in Honnali
Koo

ಹೊನ್ನಾಳಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಹಾಶಿವರಾತ್ರಿ (Mahashivaratri) ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು (Davanagere News) ನೆರವೇರಿದವು.

ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಕಳೆದ ಒಂದು ವಾರದಿಂದ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ, ಸಂಜೆ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ನೀಲಕಂಠೇಶ್ವರನ ದರ್ಶನ ಪಡೆದು ಪುನೀತರಾದರು ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು. ವಿಶೇಷವಾಗಿ ಶಿವನಿಗೆ ಬಿಲ್ವ ಪತ್ರೆ, ಹೂವುಗಳನ್ನು ಅರ್ಪಿಸಿ, ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ: IND vs ENG: ಅಂತಿಮ ಟೆಸ್ಟ್​ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ನೂತನ ದಾಖಲೆ ಸೃಷ್ಟಿ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಪಟ್ಟಣದ ನೀಲಕಂಠೇಶ್ವರ ದೇವರ ಸನ್ನಿಧಿಯಲ್ಲಿ ಸಹಸ್ರಲಿಂಗ ಲಿಂಗ ದೀಪೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: Vinay Rajkumar: ವಿನಯ್‌ ರಾಜ್‌ಕುಮಾರ್ ನಟನೆಯ ʻಗ್ರಾಮಾಯಣʼ ಸೆಟ್‌ಗೆ ಭೇಟಿ ಕೊಟ್ಟ ಶಿವಣ್ಣ-ಗೀತಾ!

ಮಹಾಶಿವರಾತ್ರಿ ಅಂಗವಾಗಿ ಶಿವದೇವಾಲಯಗಳಿಗೆ ಭಕ್ತರ ದಂಡೆ ಹರಿದು ಬಂದಿತ್ತು. ಪಟ್ಟಣದ ಶ್ರೀ ಚನ್ನಪ್ಪ ಸ್ವಾಮಿ ಹಿರೇಕಲ್ ಮಠದಲ್ಲಿರುವ ಶಿವನ ದೇವಾಲಯದಲ್ಲಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಗೆಡ್ಡೆ ರಾಮೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

Continue Reading

ಶಿವಮೊಗ್ಗ

Shivamogga News: ಸೊರಬದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

Shivamogga News: ಸೊರಬ ಪಟ್ಟಣ ಸೇರಿ ತಾಲೂಕಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

VISTARANEWS.COM


on

Mahashivaratri celebration in soraba
Koo

ಸೊರಬ: ಪಟ್ಟಣ ಸೇರಿ ತಾಲೂಕಿನಾದ್ಯಂತ ಮಹಾಶಿವರಾತ್ರಿ (Mahashivaratri) ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು (Shivamogga News) ನೆರವೇರಿದವು.

ಪಟ್ಟಣದ ದಂಡಾವತಿ ನದಿ ದಂಡೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಕಳೆದ ಒಂದು ವಾರದಿಂದ ಶಿವಪಂಚಾಕ್ಷರಿ ಜಪ ನಡೆಯುತ್ತಿದ್ದು, ಇಂದು ಶಿವಪಂಚಾಕ್ಷರಿ ಹವನ ಮತ್ತು ಚಂದ್ರಮೌಳೇಶ್ವರ ಸ್ವಾಮಿಗೆ ಸುಮಾರು 14 ಜನ ಪುರೋಹಿತರಿಂದ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು.

ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಸಮೀಪದ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಉಮಾಮಹೇಶ್ವರ ಭಾವೆ ಫೌಂಡೇಷನ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಶ್ರೀ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಂತರ ಪ್ರಸಾದ ವಿತರಣೆ ನಡೆಯಿತು. ವಿಶೇಷವಾಗಿ ಶಿವನಿಗೆ ಬಿಲ್ವ ಪತ್ರೆ, ಕುಂಸಲ ಹೂವು,ಮುತ್ತುಗದ ಹೂವು, ಪಾರಿಜಾತ ಹೂವು, ಎಕ್ಕದ ಹೂವು, ಗಂಟೆ ಹೂವು, ಕಣಗಾಲ ಹೂವುಗಳನ್ನು ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ: Karnataka Weather : ಇಂದಿನಿಂದ ಮಾರ್ಚ್‌ 14ರವರೆಗೆ ರಾಜ್ಯಾದ್ಯಂತ ಒಣಹವೆ ಸಾಧ್ಯತೆ

ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೂ ಸಹ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಜತೆಗೆ ದೇವಸ್ಥಾನದ ಆವರಣದಲ್ಲಿರುವ ಶ್ರೀ ಕಾಲಭೈರವ, ಪರಶುರಾಮ, ತ್ರಿಶೂಲದ ಭೈರಪ್ಪ ಸೇರಿದಂತೆ ಪರಿವಾರ ದೇವರುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಶಿವರಾತ್ರಿಯ ಅಂಗಾವಾಗಿ ಪ್ರತಿ ವರ್ಷದಂತೆ ಶ್ರೀ ರಂಗನಾಥ ದೇವಾಲಯದಲ್ಲಿ ಧಾರ್ಮಿಕ, ರಾಷ್ಟ್ರೀಯ ಹಾಗೂ ಸಾಹಿತ್ಯಿಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: Ind vs Eng : ಗಿಲ್, ರೋಹಿತ್​ ಶತಕ, ಭಾರತಕ್ಕೆ 255 ರನ್​ ಮುನ್ನಡೆ

ಮಹಾಶಿವರಾತ್ರಿ ಅಂಗವಾಗಿ ಶಿವದೇವಾಲಯಗಳಿಗೆ ಭಕ್ತರ ದಂಡೆ ಹರಿದು ಬಂದಿತ್ತು. ನದಿ ದಂಡೆಯ ಶ್ರೀಚಂದ್ರ ಮೌಳೇಶ್ವರ ದೇವಾಲಯದಲ್ಲಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬಸ್ ನಿಲ್ದಾಣ ಸಮೀಪದ ಶ್ರೀ ಕಲ್ಲೇಶ್ವರ ದೇವಸ್ಥಾನ, ಜಡೆ ಸಂಸ್ಥಾನ ಮಠ ಹಾಗೂ ಹಿರೇಮಠ, ಗೊಗ್ಗೆಹಳ್ಳಿ ಮಠ, ಬಂಕಸಾಣದ ಶ್ರೀ ಹೊಳೆಲಿಂಗೇಶ್ವರ, ಕರಡಿಗೇರಿ ಶ್ರೀ ರಾಮೇಶ್ವರ, ಉರುಗನಹಳ್ಳಿಯ ಶ್ರೀ ಕಾಳಿಂಗೇಶ್ವರ, ಕುಪ್ಪಗಡ್ಡೆ ರಾಮೇಶ್ವರ, ಆನವಟ್ಟಿ ಸಮೀಪದ ಕೋಟಿಪುರದ ಕದಂಬರ ಕಾಲದ ಶ್ರೀ ಕೈಠಭೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

Continue Reading

ಮಹಾ ಶಿವರಾತ್ರಿ

Maha Shivaratri 2024: ಮಹೇಶ್ವರನ ಕುರಿತು ಎಷ್ಟೊಂದು ಕುತೂಹಲಕರ ಸಂಗತಿಗಳು!

Maha Shivaratri 2024 : ಯಾವುದೇ ಆಚರಣೆಗೂ ಸುತ್ತಮುತ್ತೆಲ್ಲ ಒಂದಿಷ್ಟು ಕಥೆಗಳು, ಪ್ರತೀತಿಗಳು ಹರಡಿರುತ್ತವೆ. ಸ್ಮಶಾನವಾಸಿ ಎನಿಸಿಕೊಂಡು, ಭೂತಗಣಗಳ ನಾಥ ಎನಿಸಿಕೊಳ್ಳುತ್ತಾ, ತಂಪಾದ ಹಿಮಾಲಯದಲ್ಲಿ ಉಮೆಯೊಂದಿಗೆ ಸಂಸಾರ ಮಾಡಿ, ಕೈಲಾಸನಾಥ ಎಂದೂ ಕರೆಸಿಕೊಳ್ಳುವ ಮಹಾದೇವನ ಬಗ್ಗೆಯೂ ಇಂಥದ್ದೇ ಕಥೆಗಳು ಹರಡಿಕೊಂಡಿದೆ

VISTARANEWS.COM


on

Maheshwar
Koo

ಅಲಕಾ ಕೆ

ಭಕ್ತರ ಕರೆಗೆ ಓಗೊಳ್ಳದ ದೇವರಿಲ್ಲ. ಆದರೆ ಕರೆಯುವ (Maha Shivaratri 2024) ಭಕ್ತರು ಮೌನಿಗಳಾದರೆ ಅದರಲ್ಲಿ ದೇವರ ಪಾತ್ರವಿಲ್ಲ. ಹೀಗೆ ಮಹಾದೇವನನ್ನು ಕರೆಯುವವರು, ಜಪಿಸುವವರು, ಭಜಿಸುವವರು ಅವನ ಹಲವು ರೂಪಗಳನ್ನು, ಸಾಧ್ಯತೆಗಳನ್ನು ಕಲ್ಪಿಸಿಕೊಂಡಿದ್ದಾರೆ. ಹೆಸರು ಯಾವುದೇ ಹೇಳಿದರೂ, ಉಸಿರಿನಲ್ಲಿ ದೇವನಿದ್ದರೆ ಆತನ ಕಿವಿಗಾ ಕರೆ ದೂರವಲ್ಲ. ಹೀಗೆ ಕರೆಯುವ ಮುನ್ನ, ಆ ಮಹಾದೇವನ ಬಗೆಗೊಂದಿಷ್ಟು ಭಾವಗಳು ಈ ರೀತಿಯಲ್ಲಿ ಹರಡಿಕೊಂಡಿವೆ.
ಯಾವುದೇ ಆಚರಣೆಗೂ ಸುತ್ತಮುತ್ತೆಲ್ಲ ಒಂದಿಷ್ಟು ಕಥೆಗಳು, ಪ್ರತೀತಿಗಳು ಹರಡಿರುತ್ತವೆ. ಸ್ಮಶಾನವಾಸಿ ಎನಿಸಿಕೊಂಡು, ಭೂತಗಣಗಳ ನಾಥ ಎನಿಸಿಕೊಳ್ಳುತ್ತಾ, ತಂಪಾದ ಹಿಮಾಲಯದಲ್ಲಿ ಉಮೆಯೊಂದಿಗೆ ಸಂಸಾರ ಮಾಡಿ, ಕೈಲಾಸನಾಥ ಎಂದೂ ಕರೆಸಿಕೊಳ್ಳುವ ಮಹಾದೇವನ ಬಗ್ಗೆಯೂ ಇಂಥದ್ದೇ ಕಥೆಗಳು ಹರಡಿಕೊಂಡಿದೆ. ದೇವರಾದರೂ ಸಂಸಾರಿಯಾಗಿ, ಸಂಸಾರಿಯಾದರೂ ವಿರಾಗಿಯಾಗಿ, ಭಕ್ತರಲ್ಲಿ ಅನುರಕ್ತನೂ ಆಗಿರುವ ಆತ ಲೋಕಕ್ಕೆ ನೀಡುವ ಸಂದೇಶವೇನು? ಶಿವಾರಾಧನೆಯ ಈ ಪರ್ವಕಾಲದಲ್ಲಿ ಮಹೇಶ್ವರನ ಬಗೆಗಿನ ಒಂದಿಷ್ಟು ಕುತೂಹಲಗಳನ್ನಿಲ್ಲಿ ತಣಿಸಿಕೊಳ್ಳೋಣ.

ಪರಿವರ್ತನೆ

ಈಗಿರುವ ಸಂವತ್ಸರ ಹೊರಳಿ ಮುಂಬರುವ ಹೊಸ ಸಂವತ್ಸರಕ್ಕೆ ದಾರಿ ಮಾಡುವ ಕೊಂಚ ಮೊದಲು, ಅಂದರೆ ಫಾಲ್ಗುಣ ಮಾಸದ ಅಮವಾಸ್ಯೆಯ ಮುನ್ನಾದಿನದ ಚತುರ್ದಶಿಯ ತಿಥಿಗೆ ಶಿವರಾತ್ರಿಯ ಆಚರಣೆ ನಡೆಯುತ್ತದೆ. ಹಾಗಾಗಿ ಈತ ಲಯಕ್ಕೆ ಮಾತ್ರವಲ್ಲ, ಪರಿವರ್ತನೆಗೂ ದೇವ. ಆದರೆ ಲೋಕದಲ್ಲಿ ಪರಿವರ್ತನೆ ಎನ್ನುವುದು ನಿತ್ಯನೂತನ ಎಂದಾದ್ದರಿಂದ, ನಿತ್ಯವೂ ಸ್ಮರಣೆಗೆ ಬರುವವ, ಭಕ್ತರನ್ನು ಉದ್ಧರಿಸುವವ ಈ ಲೋಕನಾಥ.

ಲಯವೆಂಬ ಬಿಡುಗಡೆ

ಕಾಲವನ್ನು ಚಕ್ರವೆಂದು ಕರೆಯಲಾಗುತ್ತದೆ. ಒಳಿತು-ಕೆಡುಕು, ಸುಖ-ಶೋಕಗಳ ಕಾಲಗಳು ಮೇಲೆ-ಕೆಳಗೆ ಉರುಳುತ್ತಲೇ ಇರುತ್ತವೆ. ಹಾಗಾಗಿ ಹೊಸತು ಸೃಷ್ಟಿಯಾಗಿ, ಇರುವುದು ನಿರ್ವಹಣೆಯಾಗಿ, ಬೇಡದ್ದು ಅಳಿಯುತ್ತಲೇ ಇರಬೇಕು. ಈ ಪ್ರಕ್ರಿಯೆಯನ್ನು ಸಾಗರದ ಉಬ್ಬರ-ಇಳಿತಕ್ಕೆ ಹೋಲಿಸುವವರೂ ಇದ್ದಾರೆ. ಕಾರಣ, ಈ ಎಲ್ಲಾ ಪ್ರಕ್ರಿಯೆಗೆ ತನ್ನದೇ ಆದ ವಿಶಿಷ್ಟವಾದ ಲಯವೊಂದಿದೆ- ನೃತ್ಯವೊಂದರ ಲಯದಂತೆ. ನಟರಾಜನ ಹೆಜ್ಜೆಯ ರಿಂಗಣದಂತೆ, ಕಾಲಚಕ್ರದ ಗತಿಯೂ ಲಯಬದ್ಧವಾದುದು ಎಂಬ ಕಲ್ಪನೆಯಿದೆ. ಇದೇ ಹಿನ್ನೆಲೆಯಲ್ಲಿ ನೋಡಿದಾಗ, ಪ್ರಳಯ ಶಿವನ ತಾಂಡವಕ್ಕೆ ಬಹಳಷ್ಟು ಹೊಳಹುಗಳು ದೊರೆಯುತ್ತದೆ. ʻಲಯʼ ಎನ್ನುವ ಕ್ರಿಯೆಗೂ ವಿಶಿಷ್ಟವಾದ ಲಯವೊಂದಿರುವುದನ್ನು ಈ ತಾಂಡವದ ಮೂಲಕ ಅರಿತುಕೊಳ್ಳಬಹುದು ನಾವು.
ಆದಿಗುರು, ಆದಿಯೋಗಿ ಎನ್ನುವ ಹೆಸರುಗಳು ಮಹಾದೇವನಿಗಿವೆ. ತಪಸ್ಸು, ಧ್ಯಾನಗಳು ಆತನ ಯಾವತ್ತಿನ ಚರ್ಯೆಗಳು. ಭವಬಂಧನಗಳನ್ನು ಕಳೆಯುವುದಕ್ಕೆ ಇವೆಲ್ಲ ಮಾರ್ಗಗಳಾಗಿ ಭವಿಗಳಾದ ನಮಗೆ ಗೋಚರಿಸಿದರೆ, ನಮ್ಮಂತೆ ಹುಟ್ಟಿಲ್ಲದ ಆತ ಅಭವ. ಯೋಗ ಭಂಗಿಗಳಲ್ಲಿ, ಆದಿಯೋಗಿಯನ್ನು ಸಾಂಕೇತಿಸುವ ನಟರಾಜಾಸನಕ್ಕೆ ಅದರದ್ದೇ ಆದ ಮಹತ್ವವವಿದೆ. ಇದನ್ನು ಕ್ರಮಬದ್ಧವಾಗಿ ಮಾಡುವುದಕ್ಕೆ ದೇಹ-ಮನಸ್ಸುಗಳಲ್ಲಿ ಅತಿ ಹೆಚ್ಚಿನ ಸಮತೋಲನವನ್ನು ಈ ಆಸನ ಬೇಡುತ್ತದೆ. ಮಾತ್ರವಲ್ಲ, ಯೋಗಾಭ್ಯಾಸಿಯಲ್ಲಿನ ಋಣಾತ್ಮಕ ಶಕ್ತಿಗಳೆಲ್ಲ ಲಯವಾಗುವಂತೆಯೂ ಮಾಡಬಲ್ಲ ಭಂಗಿಯಿದು. ಹಾಗಾಗಿ ಮಹಾಶಿವರಾತ್ರಿಯಲ್ಲಿ ಪರಶಿವನ ತಾಂಡವವನ್ನೂ ನೆನಪಿಸಿಕೊಳ್ಳಲಾಗುತ್ತದೆ. ಮಹಾದೇವನ ಸ್ಮರಣೆಯ ಮೂಲಕ ಹಳೆಯದು, ಬೇಡದ್ದೆಲ್ಲ ಲಯವಾಗಿ ಹೊಸ ಪರಿವರ್ತನೆಗೆ ನಾಂದಿಯಾಗಲಿ ಎನ್ನುವ ಮಹೋನ್ನತ ಆಶಯವನ್ನು ಅರಿಯಬೇಕಿದೆ

ನೀಲಕಂಠ

ದೇವಾಸುರರು ಸಮುದ್ರ ಮಥನವನ್ನು ಮಾಡಿದ ಕಥೆಯನ್ನು ನಾವೆಲ್ಲರೂ ಕೇಳಿದವರೇ. ಅಮೃತವನ್ನು ಬಯಸಿ ಎಲ್ಲರೂ ನಿರೀಕ್ಷೆಯಲ್ಲಿದ್ದಾಗ ಮೊದಲಿಗೆ ಹಾಲಾಹಲ ಬಂತು. ಅದಕ್ಕೊಂದು ಸರಿಯಾದ ಅಂತ್ಯ ಕಾಣಿಸದಿದ್ದರೆ ಲೋಕವನ್ನೆಲ್ಲ ಆ ವಿಷ ನಾಶ ಮಾಡುವ ಭೀತಿ ಎದುರಾಯಿತು. ದೇವತೆಗಳು ಜಗದೀಶ್ವರನ ಮೊರೆ ಹೊಕ್ಕರು. ಲೋಕವನ್ನು ಕಾಪಾಡುವ ಉದ್ದೇಶದಿಂದ ಆ ಘೋರ ವಿಷವನ್ನು ಈಶ ತನ್ನ ಕಂಠದಲ್ಲಿ ಇರಿಸಿಕೊಂಡ, ಈ ಮೂಲಕ ನೀಲಕಂಠನಾದ. ಇದೇ ಹಿನ್ನೆಲೆಯಲ್ಲಿ, ಲೋಕದ ಕಷ್ಟಗಳನ್ನೆಲ್ಲ ಕಳೆಯಬಲ್ಲ ಆತನ ಮಹಿಮೆಯನ್ನು ಶಿವರಾತ್ರಿಯಲ್ಲಿ ಕೊಂಡಾಡಲಾಗುತ್ತದೆ.

ಶಿವ-ಶಕ್ತಿಯ ಸಂಯೋಗ

ಒಂದಾನೊಂದು ಕಾಲದಲ್ಲಿ ಲೋಕಕಂಟಕನಾಗಿದ್ದ ತಾರಕ ಎಂಬ ಅಸುರನ ಸಂಹಾರಕ್ಕಾಗಿ ಲೋಕವೇ ನಿರೀಕ್ಷಿಸುತ್ತಿತ್ತು. ಆದರೆ ಆತನ ಮೃತ್ಯು ಶಿವ-ಪಾರ್ವತಿಯ ಸಂತಾನದಿಂದಲೇ ಎಂಬುದು ವಿಧಿ ಲಿಖಿತವಾಗಿತ್ತು. ಆದರೆ ದಾಕ್ಷಾಯಿಣಿಯನ್ನು ಕಳೆದುಕೊಂಡ ಶೋಕದಲ್ಲಿದ್ದ ಶಿವ, ಲೋಕದ ಪರಿವೆಯಿಲ್ಲದಂತೆ ಘೋರ ತಪಸ್ಸಿನಲ್ಲಿ ತೊಡಗಿಕೊಂಡಿದ್ದ. ಹಾಗಿದ್ದ ಮೇಲೆ, ಪರ್ವತ ರಾಜನ ಮಗಳಾಗಿ ಶಿವನಿಗಾಗಿಯೇ ಹುಟ್ಟಿದ್ದ ಪಾರ್ವತಿಯನ್ನು ಆತ ವರಿಸುವುದು ಹೇಗೆ? ಶಿವನ ಮನಸ್ಸನ್ನು ಪರಿವರ್ತಿಸುವುದಕ್ಕೆ ಮನ್ಮಥ ಬಾಣಗಳನ್ನು ಹೂಡಿದ. ತನ್ನ ತಪೋಭಂಗವಾಗಿದ್ದಕ್ಕೆ ಕುಪಿತನಾದ ಶಿವ, ಮೂರನೇ ಕಣ್ಣಿನಿಂದ ಕಾಮನನ್ನು ದಹಿಸಿಬಿಟ್ಟ. ಇದ್ಯಾವುದಕ್ಕೂ ವಿಚಲಿತಳಾಗದ ಪಾರ್ವತಿ ತನ್ನ ಭಕ್ತಿಯಿಂದಲೇ ಶಿವನನ್ನು ಒಲಿಸಿಕೊಂಡಳು. ಇವರಿಬ್ಬರ ವಿವಾಹದಿಂದ ಜನಿಸಿದ ಸ್ಕಂದ ಅಥವಾ ಕಾರ್ತಿಕೇಯನಿಂದಲೇ ತಾರಕಾಸುವ ಹತನಾದ. ಆವರೆಗೆ ಖಂಡ ಶಕ್ತಿಯಾಗಿದ್ದ ಶಿವ-ಪಾರ್ವತಿಯರು, ಒಂದಾಗಿ ಅಖಂಡ ಶಕ್ತಿಯಾದ ಹಿನ್ನೆಲೆಯೂ ಶಿವರಾತ್ರಿಗಿದೆ.

Continue Reading
Advertisement
Dina Bhavishya
ಭವಿಷ್ಯ1 ಗಂಟೆ ago

Dina Bhavishya : ಪ್ರಮುಖ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಜಾಗೃತೆ ಇರಲಿ

Dina Bhavishya
ಭವಿಷ್ಯ20 ಗಂಟೆಗಳು ago

Dina Bhavishya : ಭೂ ಸಂಬಂಧಿ ವ್ಯವಹಾರಗಳಲ್ಲಿ ಡಬಲ್‌ ಲಾಭ; ಬಹುದಿನಗಳ ಕನಸು ನನಸಾಗುವ ಕಾಲ

Hc grants interim bail to actor Darshan
ಸಿನಿಮಾ2 ದಿನಗಳು ago

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

dina bhavishya
ಭವಿಷ್ಯ2 ದಿನಗಳು ago

Dina Bhavishya : ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ

Doctors at Fortis Hospital remove fish bone from man's stomach for 5 years
ಬೆಂಗಳೂರು3 ದಿನಗಳು ago

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

murder case
ಕೊಡಗು3 ದಿನಗಳು ago

Murder case : ಸುಳಿವೆ ಇಲ್ಲದಿರುವ ಕೊಲೆ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಪೊಲೀಸರಿಗೆ ಸನ್ಮಾನ

ಬೆಂಗಳೂರು3 ದಿನಗಳು ago

Assault Case : ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಪತಿ; ನಿಧಿಗಾಗಿ ಮಗುನಾ ಬಲಿ ಕೊಡೋಣವೆಂದು ಪತ್ನಿಗೆ ಕಿರುಕುಳ

Dina Bhavishya
ಭವಿಷ್ಯ3 ದಿನಗಳು ago

Dina Bhavishya : ಈ ದಿನ ಯಾವುದೇ ಕಾರಣಕ್ಕೂ ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ

Murder case
ಉತ್ತರ ಕನ್ನಡ4 ದಿನಗಳು ago

Murder Case : ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿಗಳು

Medical negligence
ಪ್ರಮುಖ ಸುದ್ದಿ4 ದಿನಗಳು ago

Medical Negligence : ವಿಜಯನಗರದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಬಲಿ; ಕೆರೆಗೆ ಕಾಲು ಜಾರಿ ಬಿದ್ದು ಯುವತಿ ಸಾವು

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ12 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ4 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌