navavidha bhakti about Atma Nivedanam you should know in kannadaNavavidha Bhakti : ಭಕ್ತಿಗಳಲ್ಲೇ ಪರಮಭಕ್ತಿ ಆತ್ಮಸಮರ್ಪಣೆ; ಇದಕ್ಕೆ ಹೆಸರಾದವರು ಯಾರು ಗೊತ್ತೇ? - Vistara News

ಧಾರ್ಮಿಕ

Navavidha Bhakti : ಭಕ್ತಿಗಳಲ್ಲೇ ಪರಮಭಕ್ತಿ ಆತ್ಮಸಮರ್ಪಣೆ; ಇದಕ್ಕೆ ಹೆಸರಾದವರು ಯಾರು ಗೊತ್ತೇ?

ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ಹದಿನಾಲ್ಕನೇ ಲೇಖನ ಇಲ್ಲಿದೆ. ಆತ್ಮಸಮರ್ಪಣೆಗೆ ಹೆಸರಾದವರನ್ನು ಈ ವಾರ ಪರಿಚಯಿಸಲಾಗಿದೆ.

VISTARANEWS.COM


on

atma nivedanam Navavidha Bhakti
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Dr c r ramaswamy

Navavidha Bhakti
Dr c r ramaswamy Navavidha Bhakti

ಡಾ. ಸಿ. ಆರ್. ರಾಮಸ್ವಾಮಿ
ಭಕ್ತಿಯಲ್ಲಿ ಕೊನೆಯ ಘಟ್ಟ ಆತ್ಮನಿವೇದನ. ಅದು ಪರಮಭಕ್ತಿ. ಎಲ್ಲ ಹಂತಗಳನ್ನೂ ದಾಟಿ ತನ್ನ ಸರ್ವಸ್ವವನ್ನೂ-ಮನಸ್ಸು-ಬುದ್ಧಿ-ಹೃದಯ-ಆತ್ಮವನ್ನೇ ಭಗವಂತನಿಗೆ ಸಮರ್ಪಣೆ ಮಾಡಿಕೊಳ್ಳುವಂತಹ ಸ್ಥಿತಿ. ಅವನಲ್ಲದೇ ಇನ್ಯಾವ ವ್ಯವಹಾರಕ್ಕೂ ಮನಸ್ಸೊಪ್ಪುವುದಿಲ್ಲ. ಮನಸ್ಸಿನ ಸ್ಥಿತಿವಿಶೇಷವದು. ಅಂತಹ ಸ್ಥಿತಿ ಏರ್ಪಡುವುದು ಬಹುಕಷ್ಟ. ಆ ಸ್ಥಿತಿಯನ್ನು ಸಾಧಿಸಿದ ಕೆಲವು ಭಕ್ತಶ್ರೇಷ್ಠರ ಕಥೆಗಳನ್ನು ಕೇಳಿದಾಗ ಹೀಗೂ ಉಂಟೇ ಎಂದೆನಿಸಿದರೆ ಆಶ್ಚರ್ಯವೇನಿಲ್ಲ.

ಆತ್ಮನಿವೇದನೆಗೆ ಹೆಸರಾದ ಗೋದಾದೇವೀ

ದಕ್ಷಿಣಭಾರತದಲ್ಲಿ ಪ್ರಸಿದ್ಧರಾದ ಹನ್ನೆರಡು ಆಳ್ವಾರರುಗಳಲ್ಲಿ ಒಬ್ಬಳು ಆಂಡಾಳ್. ಗೋದೆ ಎಂಬುದು ಅವಳ ಜನ್ಮನಾಮ. ಪರಮಭಕ್ತೆ, ಆತ್ಮನಿವೇದನಕ್ಕೆ ಅತ್ಯಂತ ಪ್ರಸಿದ್ಧಳಾದವಳು. ಬಾಲ್ಯದಿಂದಲೇ ತನ್ನನ್ನು ಭಗವಂತನಿಗೆ ಸಮರ್ಪಿಸಿಕೊಂಡವಳು. ಶ್ರೀವಿಲ್ಲಿಪುತ್ತೂರ್ ಊರಿನ ಪ್ರಸಿದ್ಧವಾದ ವಟಪತ್ರಶಾಯಿಯ (ರಂಗನಾಥನ) ದೇವಸ್ಥಾನದಲ್ಲಿ ಕೈಂಕರ್ಯ ಮಾಡುತ್ತಿದ್ದವರು ಪೆರಿಯಾಳ್ವಾರ್. ಅವರಿಗೆ ದೇವಸ್ಥಾನದ ತುಳಸಿಮಂಟಪದ ಸಮೀಪದಲ್ಲಿ ಸಿಕ್ಕಿದ ಮಗುವೇ ಗೋದೆ. ಅದನ್ನು ಅತ್ಯಂತ ಪ್ರೀತಿಯಿಂದ ಬೆಳೆಸುತ್ತಾರೆ.

ಮಗುವಿಗೆ ಬಾಲ್ಯದಿಂದಲೂ ಕೃಷ್ಣನ ಕಥೆಗಳ ಮೂಲಕ ಭಕ್ತಿರಸವನ್ನು ಉಣಬಡಿಸುತ್ತಾರೆ. ಪುಷ್ಪವನವನ್ನು ನಿರ್ಮಿಸಿ ವಟಪತ್ರ ಶಾಯಿಗೆ ಹಾರಸಮರ್ಪಣೆ ಮಾಡುವುದು ಅವರ ನಿತ್ಯಕೈಂಕರ್ಯವಾಗಿದ್ದಿತು. ಬಾಲಕಿ ಹೂಮಾಲೆಯನ್ನು ತಾನು ಧರಿಸಿ ಹಾಗೆಯೇ ಇಡುತ್ತಿದ್ದಳು. ಅದು ಹೊರಚೇಷ್ಟೆಯಾಗಿರದೇ ಅಂತರಂಗದ ಕೃಷ್ಣನಿಗೆ ಸಮರ್ಪಿಸಿ ಸಂತೋಷಪಡುವ ನಿತ್ಯವಿಧಿಯಾಗಿರುತ್ತಿದ್ದಿತು. ಒಂದು ದಿನ ಹಾರವನ್ನು ಭಗವಂತನಿಗೆ ಸಮರ್ಪಿಸುವಾಗ ಅದರಲ್ಲೊಂದು ಕೂದಲು ಕಂಡಿತು. ಎಂತಹ ಅಪಚಾರ! ಭಗವದರ್ಪಣೆಗೆ ಇದು ಯೋಗ್ಯವಲ್ಲ ಎಂದು ತಿರಸ್ಕರಿಸಿದರು.

ಗೋದೆಯಿಂದಲೇ ಅಪಚಾರವಾಗಿರಬೇಕೆಂದು ಊಹಿಸಿ ವಿಚಾರಿಸಲು “ನಾನು ನಿತ್ಯವೂ ಹೀಗೆಯೇ ಮಾಡುತ್ತಿರುವೆನಪ್ಪಾ” ಎಂದು ಅತ್ಯಂತ ಮುಗ್ಧತೆಯಿಂದ ಉತ್ತರಿಸುತ್ತಾಳೆ ಬಾಲಕಿ! ಅಂದು ರಾತ್ರಿ ಕನಸ್ಸಿನಲ್ಲಿ ಭಗವಂತನು “ಗೋದೆಯು ಧರಿಸಿಟ್ಟ ಪುಷ್ಪಮಾಲಿಕೆಯೇ ನಮಗೆ ಪ್ರಿಯವಾದದ್ದು, ಆದನ್ನೇ ಸಮರ್ಪಿಸಿ” ಎಂದು ನುಡಿಯುತ್ತಾನೆ. ಇದನ್ನು ಕೇಳಿದಾಗ ಯಾವ ಭಾವದಲ್ಲಿ ಇವಳು ಸಮರ್ಪಣೆ ಮಾಡುತ್ತಿದ್ದಳೆಂಬುದು ಇವರಿಗೆ ಅರಿವಾಯಿತು. ಭಗವದಾಜ್ಞೆಯಂತೆಯೇ ಭಗವಂತನಿಗೆ ಪ್ರಿಯವಾದ ಆ ಹಾರವನ್ನೇ ಸಮರ್ಪಿಸುತ್ತಾರೆ. ಅಂದಿನಿಂದ ‘ಶೂಡಿಕ್ಕೊಡುತ್ತ ನಾಚ್ಚಿಯಾರ್’(ತಾನು ಧರಿಸಿ ಸಮರ್ಪಿಸಿದ ದೇವಿ) ಎಂಬ ಬಿರುದಾಂಕಿತಳಾದಳು. ಎಲ್ಲವೂ ಭಗವಂತನಿಗಾಗಿ ಎಂಬ ಭಾವವೇ ಸದಾಕಾಲವೂ ಅವಳಲ್ಲಿ ಉಕ್ಕಿಬರುತ್ತಿತ್ತು. ಅಲಂಕಾರವೂ ಅವನ ಸಂತೋಷಕ್ಕೆಂದೇ ಭಾವಿಸುವ ಪರಿ ಇವಳದು.

ಆತ್ಮನಿವೇದನಕ್ಕೆ ಮಾತ್ರವಲ್ಲದೆ ಕೀರ್ತನ-ಶ್ರವಣ-ಸ್ಮರಣ-ದಾಸ್ಯಭಕ್ತಿಗಳಿಗೂ ಉದಾಹರಣೆಯಾಗಿದ್ದವಳು ಗೋದಾದೇವೀ. ದಾಸ್ಯಭಕ್ತಿಯಲ್ಲಿ ಅವಳ ವಿಜ್ಞಾಪನೆ ಈ ರೀತಿಯದು; “ನೂರು ಕೊಡದಲ್ಲಿ ಬೆಣ್ಣೆಯನ್ನೂ ನೂರು ಕೊಡದಲ್ಲಿ ಅಕ್ಕಾರವಡಿಶಲ್ (ಸಕ್ಕರೆಪೊಂಗಲ್) ಸಮರ್ಪಿಸುವೆನು. ಅದನ್ನು ನಿನ್ನ ಕಣ್ಣಿನಿಂದ ವೀಕ್ಷಿಸಿ ಪ್ರಸನ್ನನಾಗು. ಮತ್ತು ನನ್ನ ಹೃದಯದಲ್ಲಿ ನೀನು ಸೇರಿಕೊಂಡರೆ ನೂರನ್ನು ಸಾವಿರವಾಗಿ ಮಾಡಿಕೊಡುತ್ತೇನೆ; ನೀನು ನನ್ನ ಹೃದಯದಲ್ಲಿಯೇ ನೆಲೆಸಿಬಿಟ್ಟರೆ ನಿನ್ನ ದಾಸಿಯಾಗಿ ನನ್ನ ಆಯುಃಪರ್ಯಂತ ಕೈಂಕರ್ಯಮಾಡುವೆನು.” ಅಂತರಂಗದಲ್ಲಿಯೇ ಪಾದಸೇವನ, ಪುಷ್ಪಮಾಲಿಕಾ ಅರ್ಚನೆ ಮುಂತಾಗಿ ನಾನಾ ಭಾವಗಳಲ್ಲಿ ಭಗವಂತನನ್ನು ಅರಾಧನೆ ಮಾಡಿದವಳು.

ದೇವರೇ ಆದ ತಿರುಪ್ಪಾಣಾಳ್ವಾರ್

ಹಾಗೆಯೇ ತಿರುಪ್ಪಾಣಾಳ್ವಾರ್ ಮತ್ತೊಬ್ಬ ಆಳ್ವಾರರು. ಇವರೂ ಅಯೋನಿಜರು. ಪಾಣರ್ ಕುಲದವರಿಂದ ಬೆಳೆಸಲ್ಪಟ್ಟವರು. (ವೀಣೆಯನ್ನು ನುಡಿಸಿ ಭಗವಂತನನ್ನು ಪೂಜಿಸುವ ಕುಲದವರೆಂಬ ಪ್ರಸಿದ್ಧಿ). ನಿತ್ಯವೂ ಶ್ರೀರಂಗದಲ್ಲಿ ದೇವಸ್ಥಾನದ ಎದುರುಗಡೆಯಲ್ಲಿ ಕಾವೇರಿತೀರದಲ್ಲಿ ವೀಣೆಯಂತಹ ವಾದ್ಯವನ್ನು ನುಡಿಸುತ್ತ ಭಗವಂತನಲ್ಲಿ ಮೈಮರೆತು ಗಾನಮಾಡುವುದನ್ನೇ ಕೈಂಕರ್ಯವಾಗಿಟ್ಟುಕೊಂಡಿದ್ದರು. ಆ ಕುಲದವರಿಗೆ ದೇವಾಲಯದ ಒಳಗಡೆ ಪ್ರವೇಶವಿರಲಿಲ್ಲವಾದ್ದರಿಂದ ಅಂತರಂಗದಲ್ಲೇ ರಂಗನಾಥನನ್ನು ಸ್ಮರಿಸುತ್ತ ಗಾನಮಾಡುತ್ತಿದ್ದರು.

ಬ್ರಾಹ್ಮಣರಿಗೆ ದಾರಿಬಿಟ್ಟು ದೂರಸರಿದು ನಿಲ್ಲುವ ಆಗಿನ ಕಾಲದ ಸಂಪ್ರದಾಯವನ್ನು ಇವರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಒಮ್ಮೆ ದೇವಾಲಯದ ಅರ್ಚಕರು ದೇವರ ಅಭಿಷೇಕಕ್ಕಾಗಿ ಕಾವೇರಿ-ನೀರಿಗಾಗಿ ಹೋಗುತ್ತಿರುವಾಗ ಪಾಣರ್ ದಾರಿಯಲ್ಲಿ ನಿಂತಿರುವುದನ್ನು ಕಂಡರು. ಇವರು ಕಣ್ಮುಚ್ಚಿ ಮೈಮರೆತು ಗಾನಮಾಡುತ್ತಿದ್ದುದರಿಂದ ಅರ್ಚಕರ ಆಗಮನದ ಪರಿವೆಯೇ ಆಗಲಿಲ್ಲ. ಕುಪಿತರಾದ ಅರ್ಚಕರು ಅವರನ್ನು ಎಚ್ಚರಗೊಳಿಸಲು ಒಂದು ಕಲ್ಲನ್ನು ಎಸೆಯಲಾಗಿ ಅದು ಪಾಣರ ಹಣೆಗೆ ತಾಗಿ ರಕ್ತ ಸುರಿಯತೊಡಗಿತು. ಎಚ್ಚರವಾದ ಪಾಣರ್ ಕ್ಷಮಾಯಾಚನೆ ಮಾಡಿದರು.

ಅಭಿಷೇಕಕ್ಕಾಗಿ ನೀರುತಂದ ಅರ್ಚಕರಿಗೆ ಕಾದಿತ್ತು ಆಶ್ಚರ್ಯ! ಅಲ್ಲಿ ಭಗವಂತನ ವಿಗ್ರಹದ ಹಣೆಯಿಂದ ರಕ್ತಸುರಿಯುತ್ತಿರುವುದನ್ನು ಕಂಡು ಅರ್ಚಕರು ದಿಗ್ಭ್ರಾಂತರಾದರು. ಅರ್ಚಕರೂ ಶುದ್ಧಭಕ್ತರಾಗಿ ಪೂಜೆ ಮಾಡುವವರೇ. ಆದರೆ ಕೋಪದಲ್ಲಿ ನಡೆದ ದುರ್ಘಟನೆಯಿದು. ಆ ಏಟನ್ನು ಭಗವಂತ ತೆಗೆದುಕೊಂಡಿದ್ದಾನೆ. ತನ್ನಿಂದಾದ ಅಪಚಾರಕ್ಕೆ ಭಗವಂತನಲ್ಲಿ ಬಹಳವಾಗಿ ಕ್ಷಮೆ ಬೇಡಿದರು. ರಾತ್ರಿ ಭಗವಂತನು ಕನಸ್ಸಿನಲ್ಲಿ ಕಾಣಿಸಿಕೊಂಡು “ನಿನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಆ ಭಕ್ತನನ್ನು ನೀನೇ ನನ್ನ ಸನ್ನಿಧಿಗೆ ಕರೆದುಕೊಂಡು ಬರಬೇಕು” ಎಂದು ಆಜ್ಞೆ ಮಾಡಿದನಂತೆ. ಭಗವದ್ಭಾವದಲ್ಲಿ ಮುಳುಗಿದ್ದ ಪಾಣರನ್ನು ಎಚ್ಚರಗೊಳಿಸಿ “ನಿಮ್ಮನ್ನು ದೇವಸ್ಥಾನಕ್ಕೆ ಕರೆತರಬೇಕೆಂದು ಭಗವದಾಜ್ಞೆಯಾಗಿದೆ” ಎಂದೆಷ್ಟು ಹೇಳಿದಾಗಲೂ “ಈ ಅಪವಿತ್ರ ಪಾದಾಗಳಿಂದ ಪರಮಪವಿತ್ರ ದೇವಾಲಯವನ್ನು ಸ್ಪರ್ಶಿಸಲಾರೆ” ಎಂದು ಬರಲು ಒಪ್ಪದಿದ್ದ ಪಾಣರನ್ನು ಅರ್ಚಕರು ಎಳೆದು ತಮ್ಮ ಹೆಗಲಮೇಲೆ ಕುಳ್ಳಿರಿಸಿಕೊಂಡರು.

“ಅಯ್ಯೋ! ಅಪಚಾರ, ಅಪಚಾರ” ಎಂದು ಕೂಗಿದರೂ “ಭಗವದಾಜ್ಞೆ” ಎನ್ನುತ್ತಲೇ ವಿಜೃಂಭಣೆಯಿಂದ ನಡೆದೇಬಿಟ್ಟರು ಅರ್ಚಕಮುನಿ. ಅಂದಿನಿಂದ ಪಾಣರ್ “ಮುನಿವಾಹನ”ರಾದರು. ದೀರ್ಘಕಾಲದ ಹಂಬಲ ಪೂರ್ಣವಾಗುತ್ತದೆ ಎನ್ನುತ್ತಾ ಪಾಣರ್ ಭಗವಂತನ ಮೂರ್ತಿಯನ್ನು ನೋಡಿ ಆನಂದಪರವಶರಾದರು. ರಂಗನಾಥಮೂರ್ತಿಯನ್ನು ಪಾದಾದಿಕೇಶಾಂತವಾಗಿ ವೀಕ್ಷಿಸುತ್ತಾ ಹತ್ತು ಪಾಶುರಗಳಿಂದ ಕೊಂಡಾಡುತ್ತಾರೆ. ಪಾದ-ಪೀತಾಂಬರ-ಅವನ ವಿಶಾಲವಕ್ಷಸ್ಥಳ-ಕಂಠ-ಅಧರ-ನೀಳಕಣ್ಣುಗಳು, ಹೀಗೆ ಅವನ ಇಡೀ ತಿರುಮೇನಿಯ ಸೊಬಗನ್ನು ವರ್ಣಿಸುತ್ತಾ “ಎಂತಹ ಸೌಂದರ್ಯ!” ಎಂದು ತನ್ಮಯತೆಯನ್ನು ಹೊಂದುತ್ತಾರೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಬಾಹ್ಯವಾಗಿಯೂ ಅಂತರಂಗದಲ್ಲೂ ದರ್ಶನಮಾಡುತ್ತಾ “ಇಂತಹ ದರ್ಶನವಾದ ಮೇಲೆ ಈ ಕಣ್ಣುಗಳಿಂದ ಬೇರೆ ಏನನ್ನೂ ನೋಡುವುದಿಲ್ಲ” ಎಂದು ಪ್ರತಿಜ್ಞೆ ಮಾಡುತ್ತಿರುವಂತೆಯೇ ಭಗವಂತನು ಇವರನ್ನು ಪರಮವಾತ್ಸಲ್ಯದಿಂದ “ತಿರುಪ್ಪಾಣಾಳ್ವಾರರೇ” ಎಂದು ಸಂಬೋಧಿಸಿದನಂತೆ. ದರ್ಶನಮಾಡುತ್ತಲೇ ಆಳ್ವಾರರು ಭಗವಂತನಲ್ಲಿ ಐಕ್ಯವಾದರು ಎನ್ನುವುದು ಐತಿಹ್ಯ. ಇವರ ವೃತ್ತಾಂತವು ಆತ್ಮನಿವೇದನಕ್ಕೆ ಉತ್ತಮ ಉದಾಹರಣೆಯಲ್ಲವೇ?

– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ
, ಬೆಂಗಳೂರು

ಇದನ್ನೂ ಓದಿ : Navavidha Bhakti : ಶ್ರೀರಾಮ- ಶ್ರೀಕೃಷ್ಣರಿಗೆ ಇವರೆಲ್ಲರೂ ನೆಚ್ಚಿನ ಸಖರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕರ್ನಾಟಕ

Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ; ಅರಮನೆ ಆವರಣದಲ್ಲಿ ವಜ್ರಮುಷ್ಠಿ ಕಾಳಗ

Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ ಶುರವಾಗಿದ್ದು, ಚಾಮುಂಡಿ ಬೆಟ್ಟದಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗುತ್ತಿದೆ. ಜತೆಗೆ ಮೈಸೂರು ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಯುತ್ತಿದೆ.

VISTARANEWS.COM


on

By

mysore dasara
Koo

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysore Dasara ) ಜಂಬೂ ಸವಾರಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶನಿವಾರ ಮುಂಜಾನೆಯಿಂದಲೇ ಬಿರುಸಿನ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿಯನ್ನು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಸಮಯ ಸನ್ನಿಹಿತವಾಗುತ್ತಿದೆ. ಇದಕ್ಕಿಂತ ಮೊದಲು ಚಾಮುಂಡಿ ಸನ್ನಿಧಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಬೆಳ್ಳಿ ರಥದ ಮೂಲಕ ಅರಮನೆಗೆ ಮೆರವಣಿಗೆ ಮೂಲಕ ಕಳಿಸಿಕೊಡಲಾಯಿತು.

ವಿಜಯ ದಶಮಿಯ ಜಂಬೂ ಸವಾರಿಗೆ ಅಂಬಾವಿಲಾಸ ಅರಮನೆ ಸಜ್ಜಾಗಿದೆ. ಅರಮನೆ ಅಂಗಳದಲ್ಲಿ 35 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಶುರುವಾಗಿದ್ದು, ಅಂಬಾವಿಲಾಸ ಅರಮನೆ ತಲುಪಲಿದೆ. ನೇರಳೆ ಬಣ್ಣದ ಸೀರೆಯಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಅಶ್ವಾರೋಹಣ ಅಲಂಕಾರದಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಅಲ್ಲಿಂದ ಅರಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

Mysore dasara 2024
Mysore dasara 2024

ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಶನಿವಾರ ಮಧ್ಯಾಹ್ನ 1:41 ರಿಂದ 2:10ರ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ನಂದಿ ಧ್ವಜ ಪೂಜೆಯನ್ನು ಉದ್ಘಾಟಕ ಹಂಪನಾ, ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಸೇರಿದಂತೆ ಇತರೆ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ನಂದಿಧ್ವಜ ಪೂಜೆ ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದ್ದು, ಅರಮನೆ ಒಳಂಗಣದಿಂದ ಪ್ರಾರಂಭಗೊಂಡು ಬನ್ನಿ ಮಂಟಪದ ವರಗೆ ಮೆರವಣಿಗೆ ನಡೆಯಲಿದೆ. ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆ ಹಾಗೂ ವಿವಿಧ ಇಲಾಖೆಗಳಿಂದ 49 ಸ್ಥಬ್ದ ಚಿತ್ರಗಳು ಸಂಚಾರ ಇರಲಿದೆ. ಸಂಜೆ 4ಗಂಟೆಯಿಂದ 4:30 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಂಸದ ಹಾಗೂ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ರವರಿಂದ ಪುಷ್ಪರ್ಚನೆ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು, ರಾಜ್ಯಪಾಲ ಥಾವರ ಚಂದ್ ಗೆಹಲೊಟ್ ರಿಂದ ಕವಯತು ವೀಕ್ಷಣೆಯೊಂದಿಗೆ ಗೌರವ ವಂದನೆ ಸ್ವೀಕಾರ ಆಗಲಿದೆ.

Continue Reading

ಬೆಂಗಳೂರು

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌ ಆಗಿವೆ. ಸವಾರರು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಲಗ್ಗೆ ಇಟ್ಟಿದ್ದರು.

VISTARANEWS.COM


on

By

Ayudha Puja celebrations across the karnataka state Temples housefull by devotees
Koo

ಬೆಂಗಳೂರು: ನಾಡಿನೆಲ್ಲೆಡೆ ಆಯುಧ ಪೂಜಾ (Ayudha Puja) ಸಂಭ್ರಮ ಜೋರಾಗಿದೆ. ಆಯುಧ ಪೂಜೆಯ ಸಲುವಾಗಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ಬನಶಂಕರಿ, ಆ್ಯಕ್ಸಿಡೆಂಡ್ ಗಣೇಶ, ಸರ್ಕಲ್ ಮಾರಮ್ಮ, ಕಾಡುಮಲ್ಲೆಶ್ವರಂ ದೇವಸ್ಥಾನಕ್ಕೆ ಭಕ್ತರು ದೌಡಾಯಿಸಿದ್ದಾರೆ. ಬೆಳಗಿನಿಂದಲೇ ಪಂಚಾಭಿಷೇಕ ನೇರಿವೇರಿದ್ದು, ವಿಶೇಷ ಅಲಂಕಾರ ಮಾಡಿ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Ayudha Puja celebrations across the karnataka state  Temples housefull by devotees

ಅಲ್ಲದೇ ಮನೆಗಳಲ್ಲಿ ಆಯುಧಗಳಿಗೆ ಪೂಜೆ ಮಾಡಿ ಸಲ್ಲಿಸಿದ್ದು, ವಾಹನಗಳಿಗೆ ಪೂಜೆ ಮಾಡುವ ಸಲುವಾಗಿ ಸಾಕಷ್ಟು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ವಾಹನ ಸವಾರರು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಆಯುಧ ಪೂಜೆಯ ಸಂಭ್ರಮ ಜೋರಾಗಿತ್ತು. ದೇವಿಗೆ ಮುತ್ತಿನ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆಯಿಂದ ದೇವಿಗೆ ವಿಶೇಷ ಪೂಜೆ ಪುರಸ್ಕಾರ ನಡೆದಿದೆ.

Ayudha Puja celebrations across the karnataka state  Temples housefull by devotees

ಭಕ್ತರು ತಮ್ಮ ವಾಹನಗಳಿಗೆ ಪೂಜೆ ಮಾಡಿಸಲು ಮುಗಿಬಿದ್ದಿದ್ದರು. ಹೀಗಾಗಿ ಸರ್ಕಲ್ ಮಾರಮ್ಮ ದೇವಸ್ಥಾನದ ಸುತ್ತ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಟ್ರಾಫಿಕ್‌ ಕ್ಲಿಯರ್‌ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇಂದು ಶುಕ್ರವಾರ ಬೆಳಗ್ಗೆಯಿಂದ ಸಂಜೆಯವೆಗೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.

ವಿಸ್ತಾರ ನ್ಯೂಸ್‌ ಕಚೇರಿಯಲ್ಲೂ ಆಯುಧ ಪೂಜೆ ಸಂಭ್ರಮ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದಸರಾ ಸಂಭ್ರಮ

Dasara 2024 : ಮೈಸೂರು ದಸರಾ ಉತ್ಸವದಲ್ಲಿ ಕಣ್ಮನ ಸೆಳೆಯುತ್ತಿದೆ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನ

Dasara 2024 : ಮೈಸೂರು ದಸರಾ ಉತ್ಸವದಲ್ಲಿ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನ ಗಮನ ಸೆಳೆಯುತ್ತಿದ್ದು, ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ.

VISTARANEWS.COM


on

By

dasara 2024
Koo

ಬೆಂಗಳೂರು: ವೈಭವದ ದಸರಾ ಉತ್ಸವ (Dasara 2024 ) ಜೋರಾಗಿದ್ದು, ಭಿನ್ನ-ವಿಭಿನ್ನ ರೀತಿಯಲ್ಲಿ ಗೊಂಬೆಗಳನ್ನು ಕೂರಿಸಿ ಜನರು ಸಂಭ್ರಮಿಸುತ್ತಿದ್ದಾರೆ. ಸದ್ಯ ಮೈಸೂರು ದಸರಾ ಉತ್ಸವದಲ್ಲಿ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನವು ಎಲ್ಲರ ಕಣ್ಮನ ಸೆಳೆಯುತ್ತಿದೆ.

ಕ್ರಿ. ಶ.12-14 ನೆಯ ಶತಮಾನದವರೆಗೆ ಪ್ರವರ್ಧಮಾನಕ್ಕೆ ಬಂದಿದ್ದ ಈ ಹೊಯ್ಸಳ ದೇವಾಲಯ ಶೈಲಿಯು, ಹೊಯ್ಸಳ ಸಾಮ್ರಾಜ್ಯದ ಪತನದೊಂದಿಗೆ ಲುಪ್ತವಾಗಿ ಹೋಯಿತು. ಹಾಗೂ ಸುಮಾರು 800 ವರ್ಷಗಳಿಂದೀಚೆಗೆ ಈ ಶೈಲಿಯಲ್ಲಿ ಯಾವುದೇ ದೇವಾಲಯವು ನಿರ್ಮಾಣವಾಗಿರುವುದು ಕಂಡು ಬಂದಿರುವುದಿಲ್ಲ.

ಪ್ರಸ್ತುತ ಆರ್ಕಿಟೆಕ್ಟ್ ಮೈತ್ರೇಯಿ ಎಂಬುವವರು 7 ಅಡಿ ಎತ್ತರದ ಹೊಯ್ಸಳ ದೇವಾಲಯದ ಮಾದರಿಯನ್ನು ಮರದಲ್ಲಿ ರಚಿಸುವ ವಿನಮ್ರ ಪ್ರಯತ್ನವನ್ನು ಮಾಡಿದ್ದಾರೆ. ಸದ್ಯಕ್ಕೆ 7’ಎತ್ತರ, 7’ಅಗಲ ಹಾಗೂ 7’ ಉದ್ದವಿರುವ ಗರ್ಭಗೃಹ ಮತ್ತು ಶುಕನಾಸಿಯ ಭಾಗದ ರಚನೆಯನ್ನು ಮಾಡಿದ್ದು, ನವರಂಗ ಮತ್ತು ಮಂಟಪಗಳನ್ನು ರಚಿಸಿ ಜೋಡಿಸಲಾಗುವುದು.

Hoysala temple model showcased at Mysuru Dasara festival
dasara 2024

ಮಾದರಿಯ ಪೂರ್ಣ ಹಂತದಲ್ಲಿ ಒಟ್ಟು 9’x 11’ ವಿಸ್ತೀರ್ಣವನ್ನು ಹೊಂದಿರುತ್ತದೆ. ಈ ಮಾದರಿಯನ್ನು ಶಿಲ್ಪಾಶಾಸ್ತ್ರದ ಅಳತೆಗಳಿಗೆ ಅನುಗುಣವಾಗಿ ನಿರ್ಮಿಸಲಾಗಿರುತ್ತದೆ. ಪ್ರಸ್ತುತ ಮೈಸೂರು ದಸರಾ ಉತ್ಸವದ ಪ್ರದರ್ಶನದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ.

ಭಾರತೀಯ ಪರಂಪರೆಯು ಅನಾದಿ ಕಾಲದಿಂದಲೂ ಆಧ್ಯಾತ್ಮಿಕ, ತತ್ವಶಾಸ್ತ್ರ, ವೈಚಾರಿಕತೆ, ನಂಬಿಕೆ, ಶ್ರದ್ಧೆಗಳನ್ನೊಳಗೊಂಡ ಸಂಸ್ಕೃತಿಯೆಂಬ ಮೂಲಸ್ತೋತ್ರದಿಂದ ಹರಿದುಬಂದಿದೆ. ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದ ಶಿಲ್ಪ ಶಾಸ್ತ್ರಗಳ, ಆಗಮಗಳ ಆಧಾರದಲ್ಲಿ ಹಲವು ಪೂಜಾ ಪದ್ಧತಿಗಳು ಹಾಗೂ ದೇವಾಲಯ ವಾಸ್ತುಶಿಲ್ಪಗಳು ವಿವಿಧ ಆಯಮಗಳಲ್ಲಿ ಮೂರ್ತಗೊಂಡವು.

ಅವು ಕ್ರಿ. ಶ.ಆರನೆಯ ಶತಮಾನದ ನಂತರ ಶಿಲಾ ಮಾಧ್ಯಮದಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಶೈಲಿಯಲ್ಲಿ ನಿರ್ಮಾಣಗೊಂಡವು. ಕರ್ನಾಟಕದಲ್ಲಿ ಚಾಲುಕ್ಯ, ರಾಷ್ಟ್ರಕೂಟ ಹಾಗೂ ಹೊಯ್ಸಳರ ಕಾಲಘಟ್ಟದಲ್ಲಿ, ಅಂದರೆ ಕ್ರಿ. ಶ. 6-14 ನೇ ಶತಮಾನದವರೆಗೆ ಸುಮಾರು 800 ವರ್ಷಗಳಲ್ಲಿ ವೇಸರ ಅಥವಾ ಕರ್ಣಾಟ ದ್ರಾವಿಡ ಎಂದು ಕರೆಯಲ್ಪಡುವ ಒಂದು ವಿಶಿಷ್ಟ ಶೈಲಿಯುಲ್ಲಿ ದೇವಾಲಯ ಶಿಲ್ಪವು ವಿಕಸಿತಗೊಂಡಿತು.

dasara 2024
dasara 2024

ಹೊಯ್ಸಳರ ಕಾಲದಲ್ಲಿ (11 ರಿಂದ 14 ನೇ ಶತಮಾನ) ಈ ಶೈಲಿಯುಲ್ಲಿ ರಚಿತಗೊಂಡ ದೇವಾಲಯಗಳು ತಮ್ಮ ವಿನ್ಯಾಸ, ಆಕಾರ, ಅಲಂಕರಣ ಮತ್ತು ಕಲಾ ನೈಪುಣ್ಯತೆದಲ್ಲಿ ಪರಾಕಷ್ಟೆಯನ್ನು ತಲುಪಿದ್ದು ಹೊಯ್ಸಳ ದೇವಾಲಯಗಳೆಂದು ಪ್ರಸಿದ್ಧವಾಗಿದೆ. ಈ ಕಾಲಘಟ್ಟದಲ್ಲಿ ಹಲವು ಚಿಕ್ಕ ದೊಡ್ಡ ದೇವಾಲಯಗಳು ನಿರ್ಮಾಣಗೊಂಡಿದ್ದು, ಬೇಲೂರಿನ ಚೆನ್ನಕೇಶ್ವರ, ಹಳೆಬೀಡಿನ ಹೊಯ್ಸಳೇಶ್ವರ, ಸೋಮನಾಥಪುರದ ಕೇಶವ ದೇವಾಲಯಗಳು ಜಗತ್ಪ್ರಸಿದ್ಧವಾಗಿವೆ.

ಕ್ರಿ. ಶ. 14 ನೆಯ ಶತಮಾನದಲ್ಲಿ ಹೊಯ್ಸಳ ಶೈಲಿಯಿ ಲುಪ್ತವಾಗಿದ್ದು, ಅಲ್ಲಿಂದ ಈಚೆಗೆ ಅಂದರೆ ಸುಮಾರು 700 ವರ್ಷಗಳಿಂದ ಯಾವುದೇ ದೇವಾಲಯವು ವೇಸರ ಅಥವಾ ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡಿರುವುದಿಲ್ಲ. ಹೀಗಾಗಿ ಪ್ರಸ್ತುತ ಆಧುನಿಕ ಆಕರ ಗ್ರಂಥ ಹಾಗೂ ಪ್ರಾಚೀನ ಶಾಸ್ತ್ರ ಗ್ರಂಥಗಳ ಕೂಲಂಕುಷ ಅಧ್ಯಯನದೊಂದಿಗೆ ಹೊಯ್ಸಳ ದೇವಾಲಯಗಳ ತುಲನಾತ್ಮಕ ವಿಶ್ಲೇಷಣೆ ಮಾಡಿ, 7 ಅಡಿ ಎತ್ತರದ ಹೊಯ್ಸಳ ದೇವಾಲಯದ ಮಾದರಿ ನಿರ್ಮಾಣದ ಪ್ರಯತ್ನವನ್ನು ಮಾಡಲಾಗಿದೆ. ಸೀಮಿತ ಸಂಪನ್ಮೂಲ ಹಾಗೂ ಸಮಯದಲ್ಲಿ ಹೊಯ್ಸಳ ವಾಸ್ತು ಶೈಲಿಯ ಪ್ರಮುಖ ಅಂಶಗಳನ್ನು ಅಳವಡಿಸಿ ಮಹಾಗನಿ ಮರ ಮತ್ತು plywood ಬಳಸಿ ರಚಿಸಲಾಗಿದೆ.

ಹೊಯ್ಸಳ ದೇವಾಲಯಗಳಲ್ಲಿ ಪ್ರಮುಖವಾಗಿ ನಾಲ್ಕು ಭಾಗಗಳಿವೆ. (1)ಗರ್ಭಗೃಹ (2)ಶುಕನಾಸಿ (3)ನವರಂಗ ; (4)ಮಂಟಪ ಹಾಗೂ ಹಲವು ಬಾರಿ 2, 3, 4 ಅಥವಾ 5 ಗರ್ಭಗೃಹಗಳನ್ನು ಹೊಂದಿರುತ್ತದೆ. ಆಗ ಅವುಗಳನ್ನು ದ್ವಿಕೂಟ, ತ್ರಿಕೂಟ, ಚತುಷಕೂಟ, ಪಂಚಕೂಟ ಎಂದು ಕ್ರಮವಾಗಿ ಕರೆಯುತ್ತಾರೆ. ಸಾಧಾರಣವಾಗಿ ಗರ್ಭಗೃಹ ಚೌಕ ಅಥವಾ ನಕ್ಷತ್ರಕಾರದ ತಲ ವಿನ್ಯಾಸವನ್ನು ಹೊಂದಿರುತ್ತದೆ. ಚೌಕ ವಿನ್ಯಾಸವು ಹಿಂಬಣೆ, ಮುಂಬಣೆಗಳನ್ನು ಹೊಂದಿದ್ದು ವಿಪುಲ ಅಲಂಕಾರಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಒಟ್ಟಾಗಿ ವಿನ್ಯಾಸ ಮತ್ತು ಯೋಜನೆಯಲ್ಲಿ ಸಂಕೀರ್ಣವಾಗಿದ್ದು ಆಕರ್ಷಕವಾಗಿ ಮೂಡಿ ಬಂದಿರುತ್ತದೆ.

ಇದರ ಊರ್ಧ್ವಚ್ಛಂದದಲ್ಲಿ (Elevation) ಕೆಲವು ವರಗಗಳನ್ನು ಹೀಗೆ ಗುರುತಿಸಬಹುದು
⦁ ಜಗತಿ; ದೇವೇಲಾಯಗಳು ಎತ್ತರದ ಜಗತಿಯ ಮೇಲೆ ನಿಂತಿರುತ್ತವೆ. ಇದು ಪ್ರದಕ್ಷಿಣ ಪಥವಾಗಿ ಬಳಸಲ್ಪಡುತ್ತದೆ.
⦁ ಪೀಠ; ಜಗತಿಯ ಮೇಲೆ ಅಡ್ಡ ಪಟ್ಟಿಕೆಗಳ ಅಲಂಕರಣವುಳ್ಳ ಪೀಠವಿರುತ್ತದೆ.
⦁ ಜಂಘ; ಪೀಠದ ಮೇಲೆಯಿರುವ ಗೋಡೆಯನ್ನು ಜಂಘ ಎಂದು ಕರೆಯುತ್ತಾರೆ. ಕೂಟಛಾದ್ಯ ಎಂಬ ಮುಂಚಾಚು ಗೋಡೆಯನ್ನು ಜಂಘ ಮತ್ತು ಉಪರಿ ಜಂಘ ಎಂದು ವಿಂಗಡಿಸುತ್ತದೆ. ಜಂಘವು ಮೂರ್ತಿ ಶಿಲ್ಪದಿಂದಲೂ ಉಪರಿ ಜಂಘವು ಪಂಜರಗಳಿಂದ ಅಲಂಕೃತಗೊಂಡಿರುತ್ತದೆ.
⦁ ಛಾದ್ಯ; ವಿಶಾಲವಾದ ಮುಂಚಾಚು ಇರುವ ಸ್ತರ. ಇದು ಜಂಘ ಮತ್ತು ಶಿಖರವನ್ನು ವಿಂಗಡಿಸುತ್ತದೆ.
⦁ ಶಿಖರ; ಛಾದ್ಯದ ಮೇಲಿನ ಶಿಖರವು ಹಲವು ಅಂತಸ್ತು ಅಥವಾ ಭೂಮಿಗಳನ್ನು ಹೊಂದಿರುತ್ತದೆ. ಇಲ್ಲಿಯ ವಿಶೇಷ ಅಲಂಕಾರಣವು ಅಂತಸ್ತುಗಳನ್ನು ಗುರುತಿಸುವ ರೇಖೆಗಳನ್ನು ಮುಚ್ಚಿತ್ತವೆ.
⦁ ಕಂಠ/ಗಲ; ಶಿಖರ ಮತ್ತು ಘಂಟಾ ರಚನೆಯ ನಡುವೆ ಕಿರದಾದ ಕಂಠ ಅಥವಾ ಗಲ ಎಂಬ ವರ್ಗವಿರುತ್ತದೆ.
⦁ ಘಂಟಾ; ಶಿಖರದ ಮೇಲೆ ಘಂಟಾ ರಚನೆಯಿದ್ದು ಅದರ ಮೇಲ್ತುದಿಯಲ್ಲಿ ಅತಿ ಸುಂದರವಾದ ಕಲ್ಲಿನ ಕಲಶವಿರುತ್ತದೆ.
⦁ ಕಲಶ
ಹೀಗೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಕ್ರಮಭದ್ದವಾದ ಅಲಂಕರಣ, ಅಂಗಾಂಗ ಪ್ರಮಾಣ, ಬೇರೆ ಬೇರೆ ಭಾಗಗಳಲ್ಲಿರುವ ಸಂತುಲನ, ಯೋಜನಬದ್ದವಾದ ವಿನ್ಯಾಸಗಳಿಂದ ಹೊಯ್ಸಳ ದೇವಾಲಯವು ಅತ್ಯದ್ಭುತ ಸೌಂದರ್ಯದ ಆಗರವಾಗಿ ರೂಪಿತಗೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Navaratri : ನವರಾತ್ರಿ ಸಂಭ್ರಮದಲ್ಲಿ ಗೊಂಬೆಗಳಂತೆ ಮಿಂಚಿದ ಹೆಂಗಳೆಯರು

Navaratri: ನವರಾತ್ರಿಯಂದು ಬಣ್ಣಕ್ಕೂ ಎಲ್ಲಿಲ್ಲದ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಒಂದೇ ತರಹ ಬಟ್ಟೆ ಧರಿಸಿ ಮಿಂಚಿದ್ದಾರೆ.

VISTARANEWS.COM


on

By

navaratri
Koo

ಬೆಂಗಳೂರು: ನವರಾತ್ರಿಯ(Navaratri) ಸಂಭ್ರಮ ಎಲ್ಲೆಡೆ ಕಳೆಕಟ್ಟಿದೆ. ದೇವಿಯನ್ನು ವಿವಿಧ ರೂಪದಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಇನ್ನೊಂದು ವಿಶೇಷ ಎಂದರೆ 9 ದಿನಗಳಿಗೆ 9 ಬಣ್ಣದ ಬಟ್ಟೆ. ಒಂದೊಂದು ದಿನ ಒಂದೊಂದು ಬಣ್ಣದ ಬಟ್ಟೆ ಧರಿಸುವುದು ವಾಡಿಕೆ. ಹೀಗೆ ನವರಾತ್ರಿಯ ವೈಭವ ಜೋರಾಗಿದ್ದು, ಹೆಂಗಳೆಯರು ಒಂದೇ ತರಹದ ಸೀರೆಯನ್ನುಟ್ಟು ಮಿಂಚಿದ್ದಾರೆ.

ಜೆ.ಎಸ್.ಎಸ್ ಪದವಿ ಮಹಾವಿದ್ಯಾಲಯದ ಬೋಧಕ – ಬೋಧಕೇತರ ಮಹಿಳಾ ಸಿಬ್ಬಂದಿ ಶರನ್ನವರಾತ್ರಿ ಸಂಭ್ರಮದ ಮೊದಲ ದಿನ .

ಶರನ್ನವರಾತ್ರಿ ಸಂಭ್ರಮದ ಎರಡನೇ ದಿನ ಹಸಿರು ಸೀರೆಯಲ್ಲಿ ಮಿಂಚಿ ಸಂಭ್ರಮಿಸಿ ಮಹಿಳಾಮಣಿಯರು

ತರ್ಮಾಕೋಲ್‌ನಲ್ಲಿ ಮೂಡಿ ಬಂತು ಅಂಬಾರಿ

ನಾಡ ಹಬ್ಬ ದಸರಾ ಹಾಗೂ ನವರಾತ್ರಿ ಸಂಭ್ರಮ ಶುರುವಾಗಿದೆ. ವಿಜಯ ದಶಮಿಯಂದು ಗರ್ಜಿಸಲು ತರ್ಮಾಕೋಲ್ ಆನೆಗಳು, ಅಂಬಾರಿ ಸಹ ರಗಡ್ಡಗಿದ್ದು, ಗತಿಸಿ ಹೋದ ಇತಿಹಾಸ ಇಲ್ಲಿ ಕಾಣಸಿಗುತ್ತಿವೆ. ಒಂಬತ್ತು ದಿನಗಳ ನವರಾತ್ರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಹೆಂಗಳೆಯರು ಕಲರ್ ಕಲರ್ ಸೀರೆಯುಟ್ಟು ಮಸ್ತಿ ಮಾಡುತ್ತಿದ್ದರೆ, ಇತ್ತ ವಿಜಯದಶಮಿ ದಿನಕ್ಕೆ ತರ್ಮಾಕೋಲ್‌ನಲ್ಲಿ ಅಂಬಾರಿ ಮೂಡಿ ಬಂದಿದೆ. ಇದನ್ನು ನೋಡಿದರೆ ಸೇಮ್‌ ಮೈಸೂರು ಅಂಬಾರಿಯಂತೆ ಭಾಸವಾಗುತ್ತದೆ.

ಅಂದಹಾಗೆ ವುಡ್‌ನಲ್ಲಿ ಬೇಕಾದಂತಹ ಐಟಮ್ಸ್ ತಯಾರಿಸೋದು ಕಷ್ಟವಲ್ಲ ಆದರೆ ಅದನ್ನು ಮೆಂಟೇನ್ ಮಾಡೋದು ಕಷ್ಟಕರವೆಂದು ಜನರು ತರ್ಮಾಕೋಲ್ ಗೊಂಬೆಗಳಿಗೆ ಮೊರೆ ಹೋಗಿದ್ದಾರೆ. ತರ್ಮಾಕೋಲ್‌ನಲ್ಲಿ ಅಂಬಾರಿ, ಜೋಡಿ ಗೊಂಬೆಗಳು, ಹಂಪಿಯ ದೇವಸ್ಥಾನ, ಯಕ್ಷಗಾನದ ಮಂಟಪ, ಆನೆ, ಕಮಲದ ಹೂಗಳು ಮಾತ್ರವಲ್ಲ ಮೈಸೂರು ಅರಮನೆ ಸೇರಿದಂತೆ ಹಲವಾರು ವಿಭಿನ್ನವಾದ ಕಲೆಗಳು ಮೂಡಿ ಬಂದೀವೆ. ಸಿಲಿಕಾನ್ ಸಿಟಿ ಜನರಿಗೆ ಹಬ್ಬದ ಸಂಭ್ರಮಕ್ಕೆ ತರ್ಮಾಕೋಲ್‌ನಿಂದ ಮಾಡಿರುವ ವಸ್ತುಗಳು ಗಮನ ಸೆಳೆಯುತ್ತಿವೆ.

Continue Reading
Advertisement
Dina Bhavishya
ಭವಿಷ್ಯ16 ಗಂಟೆಗಳು ago

Dina Bhavishya : ಭೂ ಸಂಬಂಧಿ ವ್ಯವಹಾರಗಳಲ್ಲಿ ಡಬಲ್‌ ಲಾಭ; ಬಹುದಿನಗಳ ಕನಸು ನನಸಾಗುವ ಕಾಲ

Hc grants interim bail to actor Darshan
ಸಿನಿಮಾ1 ದಿನ ago

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

dina bhavishya
ಭವಿಷ್ಯ2 ದಿನಗಳು ago

Dina Bhavishya : ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ

Doctors at Fortis Hospital remove fish bone from man's stomach for 5 years
ಬೆಂಗಳೂರು2 ದಿನಗಳು ago

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

murder case
ಕೊಡಗು2 ದಿನಗಳು ago

Murder case : ಸುಳಿವೆ ಇಲ್ಲದಿರುವ ಕೊಲೆ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಪೊಲೀಸರಿಗೆ ಸನ್ಮಾನ

ಬೆಂಗಳೂರು3 ದಿನಗಳು ago

Assault Case : ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಪತಿ; ನಿಧಿಗಾಗಿ ಮಗುನಾ ಬಲಿ ಕೊಡೋಣವೆಂದು ಪತ್ನಿಗೆ ಕಿರುಕುಳ

Dina Bhavishya
ಭವಿಷ್ಯ3 ದಿನಗಳು ago

Dina Bhavishya : ಈ ದಿನ ಯಾವುದೇ ಕಾರಣಕ್ಕೂ ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ

Murder case
ಉತ್ತರ ಕನ್ನಡ3 ದಿನಗಳು ago

Murder Case : ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿಗಳು

Medical negligence
ಪ್ರಮುಖ ಸುದ್ದಿ4 ದಿನಗಳು ago

Medical Negligence : ವಿಜಯನಗರದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಬಲಿ; ಕೆರೆಗೆ ಕಾಲು ಜಾರಿ ಬಿದ್ದು ಯುವತಿ ಸಾವು

assault case
ಬೆಂಗಳೂರು4 ದಿನಗಳು ago

Assault case: ಕರ್ನಾಟಕದ ಲಾರಿ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ ತಮಿಳುನಾಡು ಟ್ರಾಫಿಕ್‌ ಪೊಲೀಸ್‌!

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ12 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ4 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌