The Examples of Devotees who Perfected Their Life by practicing Navadha Bhakti Navavidha Bhakti : ಭಗವಂತನಲ್ಲಿ ಸೇರಿಕೊಳ್ಳುವ ಸ್ಥಿತಿಯೇ ಭಕ್ತಿ! - Vistara News

ಧಾರ್ಮಿಕ

Navavidha Bhakti : ಭಗವಂತನಲ್ಲಿ ಸೇರಿಕೊಳ್ಳುವ ಸ್ಥಿತಿಯೇ ಭಕ್ತಿ!

ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ಉಪಸಂಹಾರ ಇಲ್ಲಿದೆ.

VISTARANEWS.COM


on

navadha bhakti
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Dr c r ramaswamy

Navavidha Bhakti

ಡಾ. ಸಿ. ಆರ್. ರಾಮಸ್ವಾಮಿ
ಭಗವಂತನಲ್ಲಿ ತೋರುವ “ಅತಿಶಯವಾದ ಪ್ರೀತಿ”ಯೇ ಭಕ್ತಿ ಎಂಬುದಾಗಿ ಭಕ್ತಿಸೂತ್ರಗಳು ಸಾರುತ್ತವೆ. “ಭಕ್ತಿ ಎಂದರೆ ಸೇರಿಕೊಳ್ಳುವುದು. ವಿಭಕ್ತಿ ಎಂದರೆ ವಿಭಾಗ ಹೊಂದುವುದು. ಭಗವಂತನಲ್ಲಿ ಸೇರಿಕೊಳ್ಳುವ ಸ್ಥಿತಿಯೇ ಭಕ್ತಿ” ಎಂಬುದಾಗಿ ಶ್ರೀರಂಗಮಹಾಗುರುಗಳು ಅಪ್ಪಣೆ ಕೊಡಿಸಿದ್ದರು. ಅಂತಹ ಪ್ರೀತಿಯನ್ನು ಸಾಧಿಸಲು ಇರುವ ಪ್ರಧಾನವಾದ ಮಾರ್ಗಗಳೇ ಶ್ರವಣಕೀರ್ತನಸ್ಮರಣ ಮುಂತಾದ ನವವಿಧಭಕ್ತಿ (Navavidha Bhakti). ಪರಿಪೂರ್ಣ ಭಕ್ತಿಯನ್ನು ಸಾಧಿಸುವಲ್ಲಿ ಮೂರು ಹಂತಗಳನ್ನು ಕಾಣಬಹುದಾಗಿದೆ – ಅಭ್ಯಾಸ, ರಸ ಮತ್ತು ರತಿ.

ಸಾಧನ ಭಕ್ತಿ, ಸಾಧ್ಯ-ಭಕ್ತಿ

ಅಭ್ಯಾಸವೆನ್ನುವುದು ಭಗವಂತನಲ್ಲಿ ಪ್ರೀತಿ-ಒಲವನ್ನು ಗಳಿಸಿ-ಬೆಳೆಸಿಕೊಳ್ಳಲು ಸೂಚಿಸಿರುವ ಮಾರ್ಗಗಳನ್ನು ರೂಢಿಸಿಕೊಳ್ಳುವುದು. ಭಗವತ್ಕಥಾಶ್ರವಣ, ಶ್ರವಣ ಮಾಡಿದ ಭಗವಂತನ ಕಥೆಗಳನ್ನೂ ಗುಣಗಾನವನ್ನೂ ಮತ್ತೆಮತ್ತೆ ಸ್ಮರಣೆ ಮಾಡಿದಾಗ ಕಾಲಕ್ರಮದಲ್ಲಿ ಅಭ್ಯಾಸವು ಭಕ್ತಿಯ ಎರಡನೇ ಹಂತವಾದ ಭಗವದ್ರಸವನ್ನುಂಟುಮಾಡುತ್ತದೆ; ನಮ್ಮಲ್ಲಿ ಭಗವಂತನ ರಸ ಜಿನುಗುವಂತೆ, ಮನಸ್ಸು ಅವನ ಕಡೆ ಒಲಿಯುವಂತೆ ಮಾಡುತ್ತದೆ. ಈ ರಸವೇ ಭಗವಂತನನ್ನು ಕೀರ್ತಿಸುವಂತೆ ಭಕ್ತನನ್ನು ಪ್ರೇರೇಪಿಸುತ್ತದೆ.

ಭಗವಂತನಲ್ಲಿ ಮನವು ಒಲಿದಾಗ ಅವನ ಸೇವೆ-ಅರ್ಚನೆ-ವಂದನೆಗಳಲ್ಲಿ ಮನಸ್ಸು ತಾನಾಗಿಯೇ ಹರಿಯತೊಡಗುವುದು. ಈ ಹಂತದವರೆಗಿನ ಭಕ್ತಿಯು ಸಾಧನ-ಭಕ್ತಿ ಎನಿಸಿಕೊಳ್ಳುತ್ತದೆ. ಇಂತಹ ಹರಿವು ದೃಢವಾದಂತೆ ಮನಸ್ಸು ತನ್ನನ್ನು ಪೂರ್ಣವಾಗಿ ಭಗವಂತನಿಗೇ ಒಪ್ಪಿಸಿಕೊಂಡಾಗ ಭಕ್ತಿಯ ಮೂರನೆಯ ಹಂತವಾದ ರತಿಯು ಭಕ್ತನಲ್ಲಿ ಮನೆ ಮಾಡುವುದು. ಆಗ ಭಗವಂತನಲ್ಲಿ ದಾಸ್ಯಭಾವವೂ, ಆತ್ಮನಿವೇದನವೂ ಸಹಜವಾಗಿ ಮೂಡಿ ಮನಸ್ಸು ಅವನಲ್ಲಿ ಲಯಹೊಂದುವುದು. ಈ ಸ್ಥಿತಿಯೇ ಸಾಧ್ಯ-ಭಕ್ತಿ ಅಥವಾ ಸಿದ್ಧ-ಭಕ್ತಿ ಎನಿಸಿಕೊಳ್ಳುತ್ತದೆ.

ಸಿದ್ಧ ಭಕ್ತರು

ಸಿದ್ಧಭಕ್ತರು ಪರಮ ಭಾಗವತರೆನಿಸುತ್ತಾರೆ. ಅವರು ಸಾಧಕ ಭಕ್ತರಂತೆ ಕೀರ್ತನೆ-ಅರ್ಚನೆ-ವಂದನೆಗಳನ್ನು ಮಾಡುವಂತೆ ತೋರಿದರೂ ಇವರ ಕ್ರಿಯೆಗಳು ಇನ್ನೂ ಮೇಲ್ಮಟ್ಟದ್ದು. ಇವರು ಶಾಂತರು-ಮಹಾಂತರು-ಅಖಿಲ ಜೀವಿಗಳಲ್ಲಿಯೂ ವಾತ್ಸಲ್ಯ ಉಳ್ಳವರು. ಲೌಕಿಕ ಕಾಮಸ್ಪರ್ಶ ಇಲ್ಲದವರು. ಭಗವದ್ದರ್ಶನವೇ ಸುಖವೆಂಬ ಭಾವನೆ ಉಳ್ಳವರು. ತಮ್ಮ ತನು-ಮನ-ಧನ-ಪಂಚಪ್ರಾಣಗಳೂ ಭಗವಂತನೇ ಎಂಬ ಭಾವನೆಯನ್ನು ತೋರ್ಪಡಿಸುವರು. ಇಷ್ಟಾದರೂ “ನಿನ್ನನ್ನು ಒಲಿಸಿಕೊಳ್ಳುವುದು ನನ್ನಿಂದ ಸಾಧ್ಯವಿಲ್ಲ. ನೀನಾಗಿಯೇ ಒಲಿದರೆ ನನಗೆ ಪರಮಸುಖ” ಎಂಬ ಭಾವವನ್ನು ವ್ಯಕ್ತಪಡಿಸುವರು.

ತಮ್ಮ ಇಡೀ ಶರೀರವನ್ನೇ ಆರಾಧ್ಯದೈವವು ವ್ಯಾಪಿಸಿಕೊಳ್ಳುವ ಕಾರಣ, ಇತರರಂತೆ ಬಾಹ್ಯಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ. ಅಗ್ನಿಯು ಸೌದೆಯನ್ನು ಭಸ್ಮಮಾಡುವಂತೆ ಅವರ ಭಕ್ತಿಯು ಅವರ ಸಮಸ್ತಪಾಪಗಳನ್ನೂ ಸಂಪೂರ್ಣವಾಗಿ ಸುಟ್ಟುಹಾಕುತ್ತದೆ.

ಭಕ್ತಿ ಶಾಸ್ತ್ರ

ಲೋಕವಿಲಕ್ಷಣವಾದ ನಡತೆಯೆನ್ನುವುದು ಇಂತಹ ಸಿದ್ಧಭಕ್ತರಲ್ಲಿ ಕಾಣುವ ವಿಶೇಷವಾದ ಗುರುತು-ಲಕ್ಷಣ. ಭಗವಂತನನ್ನೇ ತಮ್ಮ ಪತಿಯನ್ನಾಗಿ ಭಾವಿಸುವ ಮಾಧುರ್ಯ-ಭಕ್ತಿಭಾವಕ್ಕೆ ಉದಾಹರಣೆಯಾಗಿ ಇವರುಗಳನ್ನು ನೋಡಬಹುದು. ಶೃಂಗಾರಭಾವದಲ್ಲಿ ಶ್ರವಣ-ಕೀರ್ತನ-ಸ್ಮರಣ ಮುಂತಾದ ನವಭಕ್ತಿಭಾವಗಳೂ ಅಡಕವಾಗುತ್ತವೆ. ಇತರರಂತೆ ಲೋಕನಿಯಮಗಳನ್ನು ಅವರು ಪಾಲಿಸುವಂತೆ ಕಾಣದಿರಬಹುದು.

ಆದರೆ ಭಕ್ತಿಶಾಸ್ತ್ರಗಳು ಘೋಷಣೆ ಮಾಡುವ “ಅತ್ಯಂತ ಭಕ್ತಿಯುಕ್ತಾನಾಂ ನ ವಿಧಿಃ ನೈವ ಚ ಕ್ರಮ:” (ಉತ್ಕಟವಾದ ಭಕ್ತಿಯಿಂದ ಕೂಡಿದವರಿಗೆ ಲೋಕದ ವಿಧಿ-ನಿಯಮಗಳು ಅನ್ವಯವಾಗುವುದಿಲ್ಲ) ಎಂಬುದನ್ನು ಇಲ್ಲಿ ಸ್ಮರಿಸಬೇಕು. ಅವರುಗಳಿಗಿರುವ ನಿಯಮ, ಕೇವಲ ಭಕ್ತಿಗೆ ಸಂಬಂಧಪಟ್ಟಿರುವುದು. ಬಹಳ ಆಳವಾಗಿ ಭಗವಂತನಲ್ಲಿ ಮುಳುಗಿರುವ ಅಂತಹವರಿಗಾಗಿಯೇ ಇರುವ ಪ್ರತ್ಯೇಕ ಶಾಸ್ತ್ರವೇ ಭಕ್ತಿಶಾಸ್ತ್ರ.

“ಶಾಸನಾತ್ ತ್ರಾಣನಾತ್ ಚೈವ ಶಾಸ್ತ್ರಮಿತ್ಯಭಿಧೀಯತೇ” (ಯಾವುದು ಶಾಸನಮಾಡಿ ಕಾಪಾಡುತ್ತದೆಯೋ ಅದೇ ಶಾಸ್ತ್ರ). “ಶಾಸ್ತ್ರ ಎಂದರೆ ಸೃಷ್ಟಿಯಲ್ಲಿರುವ ಮೂಲಭೂತವಾದ ವಿಜ್ಞಾನ – ಅದನ್ನರಿತವರು ಗುರುತು ಹಾಕಿರುವ ರೆಕಾರ್ಡೇ ಶಾಸ್ತ್ರಗ್ರಂಥ” ಎಂಬ ಮಹಾಗುರುವಿನ ವಾಣಿಯು ಸ್ಮರಣೀಯ. ಇಲ್ಲಿ ಭಕ್ತರಿಗಾಗಿ ಇರುವ ಶಾಸ್ತ್ರವನ್ನು ‘ಭಕ್ತಿಶಾಸ್ತ್ರ’ ಎಂದೇ ಕರೆಯಬೇಕಾಗುತ್ತದೆ. ಆ ಭಕ್ತಿಶಾಸ್ತ್ರಕ್ಕೆ ಅನುಗುಣವಾಗಿಯೇ ಅವರುಗಳಿರುತ್ತಾರೆ ಎಂಬುದನ್ನೂ ಗಮನಿಸಬೇಕು. ಇಂತಹ ಭಕ್ತರಿಗೆ ಬಾಹ್ಯಪ್ರಜ್ಞೆ ಇಲ್ಲದೆ, ಏನು ಮಾಡುತ್ತಿದ್ದೇವೆಂಬ ಪರಿವೆಯೇ ಇಲ್ಲದ ಸಂದರ್ಭಗಳಲ್ಲಿ ಭಗವಂತನೇ ಇವರುಗಳನ್ನು ರಕ್ಷಿಸುತ್ತಾನೆ ಎಂಬುದನ್ನು ಹಿಂದಿನ ಲೇಖನಗಳಲ್ಲಿ ಗಮನಿಸಿದ್ದೇವೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಸಿದ್ಧಭಕ್ತರು, ಬ್ರಹ್ಮದೇವರ ಪದವಿಯನ್ನಾಗಲೀ ಸಾರ್ವಭೌಮ ಪದವಿಯನ್ನಾಗಲೀ ಯೋಗಸಿದ್ಧಿಗಳನ್ನಾಗಲೀ ಅಷ್ಟೇಕೆ ಮೋಕ್ಷವನ್ನೂ ಕೂಡ ಬಯಸುವುದಿಲ್ಲ. “ಸ್ವರ್ಗ ಬೇಡ ಮುಕ್ತಿ ಬೇಡ……ನರಕದೊಳು ನೀನಿದ್ದೊಡೆ ನರಕವಲ್ಲ ಎನಗೇ” ಎಂಬ ದಾಸವಾಣಿಯಲ್ಲೂ “ನಾಸ್ಥಾ ಧರ್ಮೇ ನ ವಸುನಿಚಯೇ..” ಮತ್ತು “ದಿವಿ ವಾ ಭುವಿ ವಾ ಮಮಾಸ್ತು ವಾಸೋವಾ” ಎಂಬ ಕುಲಶೇಖರ ಆಳ್ವಾರರ ಶ್ಲೋಕಗಳಲ್ಲೂ ಈ ಉತ್ಕಟ ಭಕ್ತಿಭಾವವನ್ನು ಗಮನಿಸಬಹುದು. ಇಂತಹ ಭಾಗವತರು ಮುಕ್ತಿಸ್ವರೂಪನಾದ ಭಗವಂತನಿಗೂ ಪ್ರಿಯತಮರು.

“ಪ್ರಿಯತಮನಾದ ಭಗವಂತನಲ್ಲಿ ರತಿಯನ್ನು ಹೊಂದಿದ ಭಕ್ತನು ಭಗವಂತನ ಎಣೆಯಿಲ್ಲದ ಶಕ್ತಿಗಳನ್ನೂ ಗುಣಾತಿಶಯಗಳನ್ನೂ ನೆನೆನೆನೆದು ಶರೀರದ ರೋಮ-ರೋಮದಲ್ಲಿಯೂ ತುಂಬಿ-ತುಳುಕುವ ಭಗವದ್ಭಾವದಿಂದ, ಕಣ್ಣೀರು ಹರಿಸುತ್ತಾ, ಗದ್ಗದವಾಣಿಯಿಂದ ಅವನಿಗಾಗಿ ಅಳುತ್ತಾ, ಕೆಲವೊಮ್ಮೆ ಲಜ್ಜೆಯನ್ನು ತೊರೆದು ಕುಣಿದಾಡುತ್ತಾ, ಗಾನಮಾಡುತ್ತಾ, ನಗುತ್ತಾ ಎಲ್ಲರಲ್ಲೂ ಭಗವಂತನನ್ನೇ ನೋಡುತ್ತಾ ಅವರ ಪಾದಗಳಲ್ಲಿ ಬೀಳುವರು. ಭಗವದ್ಭಾವದಲ್ಲಿ ಸಂಪೂರ್ಣವಾಗಿ ಮುಳುಗಿದ ಇಂತಹ ಪವಿತ್ರಾತ್ಮರಿಗೆ ಎಲ್ಲ ಲೌಕಿಕಬಂಧಗಳೂ ತಾವಾಗಿಯೇ ಕಳಚುತ್ತವೆ; ಇವರು ಪ್ರಪಂಚವೆಲ್ಲವನ್ನೂ ಪವಿತ್ರಗೊಳಿಸುತ್ತಾರೆ” ಎಂಬುದಾಗಿ ಶ್ರೀಮದ್ಭಾಗವತವು ಕೊಂಡಾಡುತ್ತದೆ.

ಇದನ್ನೂ ಓದಿ : Prerane : ದೇವರ ಅವತಾರ; ಏನಿದೆ ಇದರ ಹಿಂದಿನ ವಿಚಾರ?

ಭಾಗವತರ ಪಾದಧೂಳಿ

ಅಂತಹವರ ಪಾದಧೂಳಿಯೂ ಪೂಜ್ಯವಾದದ್ದೇ. ಸಾಕ್ಷಾತ್ ಶ್ರೀಕೃಷ್ಣನೇ ಇಂತಹ ಭಕ್ತರ ಮಹಿಮೆಯನ್ನು ಗಾನ ಮಾಡುತ್ತಾನೆ: “ಯಾವನು ನನ್ನಲ್ಲಿ ಭಕ್ತಿಯಿಂದ ಕೂಡಿದವನಾಗಿ ನಿರಪೇಕ್ಷನಾಗಿ ಶಾಂತನಾಗಿ ವೈರರಹಿತನಾಗಿ ಇದ್ದಾನೆಯೋ ಅವನ ಪಾದರೇಣುಗಳಿಂದ ನಾನು ಪವಿತ್ರನಾಗುತ್ತೇನೆ” ಎಂದು. ಭಗವಂತನ ಪಾದಧೂಳಿಯನ್ನೇ ಪವಿತ್ರವಾಗಿ ಭಾವಿಸುವ ಭಕ್ತರಿರುವಂತೆಯೇ ಭಗವದ್ಭಕ್ತನ ಪಾದಧೂಳಿಯೂ ಪೂಜ್ಯವಾದದ್ದು ಎನ್ನುವುದು ಭಗವಂತನ ಮಾತು. ಒಮ್ಮೆ ಶ್ರೀಕೃಷ್ಣ ತನ್ನ ಪೂಜಾಗೃಹದಲ್ಲಿ ಭಕ್ತರ ಪಾದರೇಣುವನ್ನು ಸಂಗ್ರಹಿಸಿ-ಪೂಜಿಸಿದ್ದುದನ್ನು ನಾರದರಿಗೆ ತೋರಿಸುವ ಕಥೆಯನ್ನೂ ಕೇಳುತ್ತೇವೆ.

ಇಂತಹ ಸಿದ್ಧಭಕ್ತರ ಮಹಿಮೆಯನ್ನು ಕೊಂಡಾಡುವ ‘ನವವಿಧ ಭಕ್ತಿ’ ಮಾಲಿಕೆಯು ಮುಕುಂದನ ವಕ್ಷಸ್ಥಳವನ್ನು ಅಲಂಕರಿಸಲಿ; ಭಕ್ತರ ಮನದಾಳದಲ್ಲಿ ಭಕ್ತಿಯು ತುಂಬಿ-ತುಳುಕಾಡುವಂತಾಗಲೀ ಎಂದು ಪ್ರಾರ್ಥಿಸುತ್ತಾ ಮಂಗಳವನ್ನು ಹಾಡುವೆನು.

– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ
, ಬೆಂಗಳೂರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Sadhguru Jaggi Vasudev: ಕಾಂಬೋಡಿಯಾದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕತೆಯ ಅನ್ವೇಷಣೆಗಾಗಿ ಸದ್ಗುರು ಜಗ್ಗಿ ವಾಸುದೇವ್‌ ಅವರು ತೆರಳಿದ್ದಾರೆ. ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸದ್ಗುರುಗಳ ಮೊದಲ ಪ್ರಯಾಣವಾಗಿದೆ.

VISTARANEWS.COM


on

Sadhguru Jaggi Vasudev
Koo

ಸೀಮ್‌ ರೀಪ್‌(ಕಾಂಬೋಡಿಯಾ): ಮೆದುಳಿನ ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಆಳದ ಅನ್ವೇಷಣೆಗಾಗಿ ಆಧ್ಯಾತ್ಮಿಕ ಗುರು ಹಾಗೂ ಈಶ ಫೌಂಡೇಶನ್‌ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev) ಅವರು ಕಾಂಬೋಡಿಯಾಗೆ ತೆರಳಿದ್ದಾರೆ. ಕಾಂಬೋಡಿಯಾ ಪ್ರವಾಸೋದ್ಯಮ ಸಚಿವ ಎಚ್.ಇ. ಎಸ್ಒಕೆ ಸೋಕೆನ್ ಅವರು ಸೀಮ್ ರೀಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸದ್ಗುರುಗಳನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.

ಗಮನಾರ್ಹ ಆತಿಥ್ಯದ ಜತೆಗೆ ಸಚಿವರು, ಕಾಂಬೋಡಿಯಾದ ಪ್ರಧಾನ ಮಂತ್ರಿಯವರ ವೈಯಕ್ತಿಕ ಪತ್ರವನ್ನು ಸದ್ಗುರುಗಳಿಗೆ ಪ್ರಸ್ತುತಪಡಿಸಿದರು. ಸಚಿವರೊಂದಿಗೆ ಅವರ ಪತ್ನಿ, ಕಾಂಬೋಡಿಯಾದ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದ ಕಾನ್ಸುಲೇಟ್ ಜನರಲ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ತಮ್ಮ ಚಟುವಟಿಕೆಗಳಿಗೆ ಮರಳಿರುವ ಸದ್ಗುರುಗಳ ಮೊದಲ ಪ್ರಯಾಣ. ಅಲ್ಲಿ ಅವರು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯಗಳ ಹಿಂದಿನ ವಿಜ್ಞಾನವನ್ನು ಅನ್ವೇಷಿಸಲಿದ್ದಾರೆ. ಅವರ ಕಾರ್ಯಕ್ರಮವು ಏಪ್ರಿಲ್ 30 ರವರೆಗೆ ಜರುಗಲಿದ್ದು, ಈ ಸಮಯದಲ್ಲಿ ಅಲ್ಲಿನ ಸ್ಥಳೀಯ ಸಂಸ್ಕೃತಿಯಲ್ಲಿ ಮಿಂದೇಳುವುದರ ಜತೆಗೆ, ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿರುವ ಬೇಯಾನ್ ಮತ್ತು ಅಂಕೋರ್ ವಾಟ್ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಯಾವುದೇ ಬೋಧನೆ, ತತ್ವಶಾಸ್ತ್ರ, ಮತಧರ್ಮ ಅಥವಾ ನಂಬಿಕೆಯ ವ್ಯವಸ್ಥೆಗಳಿಗೆ ಒಳಗಾಗದ ಸದ್ಗುರುಗಳು, ತಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪ್ರಯತ್ನಗಳು, ಪರಿಸರ ಕಾರ್ಯಗಳು, ಗ್ರಾಮೀಣ ಶಿಕ್ಷಣ ಮತ್ತು ಇನ್ನೂ ಹೆಚ್ಚಿನವುಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ತಲುಪಿದ್ದಾರೆ. ಪ್ರಪಂಚದಾದ್ಯಂತ ಮೂವತ್ತು ಲಕ್ಷ ಜನರು ಅವರ ಪ್ರಮುಖ ಕಾರ್ಯಕ್ರಮವಾದ ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ. ಆ ಮೂಲಕ ಜನರು ತಮ್ಮ ಜೀವನದ ಗ್ರಹಿಕೆಯಲ್ಲಿ ಹೆಚ್ಚಿನ ಸಮತೋಲನ ಮತ್ತು ಗಮನಾರ್ಹ ಸ್ಪಷ್ಟತೆಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Prerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ!

2023 ರಲ್ಲಿ ಸದ್ಗುರುಗಳ ಸಾಮಾಜಿಕ ಮಾಧ್ಯಮವು 4.37 ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಂಬೋಡಿಯಾದ ಅವರ ಅನ್ವೇಷಣೆಯು, ಆ ದೇಶದ ಬಗೆಗಿನ ಅವರ ಒಳನೋಟಗಳಿಂದ ಪ್ರಯೋಜನ ಪಡೆಯಲು ಜಗತ್ತಿಗೆ ಒಂದು ವಿಶಿಷ್ಟ ಅವಕಾಶವನ್ನು ಒದಗಿಸಲಿದೆ.

Continue Reading

ಬೆಂಗಳೂರು

Bengaluru Karaga: ವೈಭವದ ಕರಗ ಮಹೋತ್ಸವ ಸಂಪನ್ನ; ಲಕ್ಷಾಂತರ ಭಕ್ತರ ನಡುವೆ ಮಸ್ತಾನ್ ಸಾಬ್ ದರ್ಗಾಗೆ ಭೇಟಿ

Bengaluru Karaga: ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು.

VISTARANEWS.COM


on

bengaluru karaga in darga
Koo

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru karaga Festival) ಮಂಗಳವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು. ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ (Dharmaraya swamy) ರಥೋತ್ಸವ ಬಳಿಕ ರಾತ್ರಿ 2 ಗಂಟೆಗೆ ಕರಗ ಶಕ್ತ್ಸೋತ್ಸವಕ್ಕೆ (Bangalore Karaga) ಚಾಲನೆ ನೀಡಲಾಯಿತು. ಮುಂಜಾನೆ ಹಾಜಿ ಮಸ್ತಾನ್‌ ಸಾಬ್‌ ದರ್ಗಾಗೂ (Haji Mastan Saab Darga) ಭೇಟಿ ಕೊಟ್ಟು 5.45ರ ವೇಳೆಗೆ ಧರ್ಮರಾಯ ಸ್ವಾಮಿ ದೇವಸ್ಥಾನದೊಳಗೆ ಕರಗ ಸೇರಿಕೊಂಡಿತು. ವೈಭವದ ಕರಗ ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು.

ನಿನ್ನೆ ರಾತ್ರಿ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹ್ಯಾರಿಸ್‌, ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಮುಂತಾದವರು ಭೇಟಿ ನೀಡಿದರು. ಬೆಳಗ್ಗೆಯಿಂದಲೇ ತಾಯಿಗೆ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ರಾತ್ರಿ 10.30ಕ್ಕೆ ಕಲ್ಯಾಣಿಗೆ ಹೋಗಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ವಾಪಸ್ ಬಂದು ಧರ್ಮರಾಯ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ರಥೋತ್ಸವದ ಬಳಿಕ ಭಕ್ತರ ಗೋವಿಂದ… ಗೋವಿಂದ… ಎಂಬ ಘೋಷಣೆಗಳ ನಡುವೆ ಅರ್ಚಕ ಜ್ಞಾನೇಂದ್ರ ಅವರು ಕರಗ ಹೊತ್ತು ಸಾಗಿದರು.

ಮುಖ್ಯ ರಥ ಧರ್ಮರಾಯಸ್ವಾಮಿ ರಥದಲ್ಲಿ ಅರ್ಜುನ‌ ಮತ್ತು ದ್ರೌಪದಿ ದೇವಿ ವಿರಾಜಮಾನರಾಗಿದ್ದರು. ಚಿಕ್ಕ ರಥದಲ್ಲಿ ಗ್ರಾಮದೇವಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಪಾಂಡವರ ಮೂರ್ತಿಗಳು ಸೇರಿ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಗಳು ಮುಂದೆ ಸಾಗುತ್ತಿದ್ದಂತೆ ದೇಗುಲದಿಂದ ದ್ರೌಪದಿ ದೇವಿ ಕರಗ ಹೊರಬಂದಿತು.

ಕರಗ ಸಾಗುವ ರಾಜಬೀದಿಗಳೆಲ್ಲಾ ಬಣ್ಣ ಬಣ್ಣದ ಲೈಟಿಂಗ್‌ ಹಾಗೂ ಜನರಿಂದ ಕಂಗೊಳಿಸಿದವು. ಸಾಂಪ್ರದಾಯಿಕವಾಗಿ ಎ. ಜ್ಞಾನೇಂದ್ರ 14ನೇ ಬಾರಿ ಕರಗ ಹೊತ್ತರು. ಒಂದು ರಥದಲ್ಲಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು, ಪಾಂಡವರ ಮೂರ್ತಿಗಳು ಸೇರಿದಂತೆ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಂದಿತು. ಪೂಜೆ ನಂತರ ಮತ್ತೊಂದು ರಥದಲ್ಲಿ ದ್ರೌಪದಿ ಮತ್ತು ಅರ್ಜುನ ಮೂರ್ತಿ ಪ್ರತಿಷ್ಠಾಪನೆಯಾಯಿತು. ನಂತರ ರಥಗಳ ಮೆರವಣಿಗೆ ಆರಂಭವಾಯಿತು. ಖಡ್ಗಗಳನ್ನು ಹಿಡಿದು ನೂರಾರು ವೀರಕುಮಾರರು ಮೆರವಣಿಗೆಯಲ್ಲಿ ತೆರಳಿದರು. ರಥಗಳು ಮುಂದೆ ಸಾಗುತ್ತಿದ್ದಂತೆ ದ್ರೌಪದಿ ದೇವಿ ಕರಗ ದೇಗುಲದಿಂದ ಹೊರ ಬಂದಿದ್ದು, ಅದನ್ನು ಕಂಡು ಭಕ್ತರು ಹರ್ಷೋದ್ಗಾರ ಮಾಡಿದರು.

ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು. ಒಟ್ಟು 11-12 ಕಿಲೋಮೀಟರ್ ಕರಗದ ಮೆರವಣಿಗೆ ಸಾಗಿದೆ.

ಕರಗ ಮೆರವಣಿಗೆ ಮಾರ್ಗ

ರಥೋತ್ಸವದ ನಂತರ ಮಧ್ಯರಾತ್ರಿ 1 ಗಂಟೆಯಿಂದ ಕರಗ ಮಹೋತ್ಸವದ ಮೆರವಣಿಗೆ ಸಾಗಿತು. ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಿ ಕಬ್ಬನ್​ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಾಗಿ ನಂತರ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ತೆರಳಿತು. ಬಳಿಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್​ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್​ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸಾಯಿತು. ಬೆಳಗ್ಗೆ 5.45 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಿತು. ಬೆಳಗ್ಗೆ 8 ಗಂಟೆಗೆ ತಾಯಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕರಗಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ | Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

Continue Reading

ಬೆಂಗಳೂರು

Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

Bengaluru Karaga 2024 : ಚೈತ್ರ ಹುಣ್ಣಿಮೆಯ ದಿನದಂದು ನಡೆಯುವ ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಕ್ಷಣ ಗಣನೆ ಶುರುವಾಗಿದೆ. ಸೋಮವಾರ ಮಧ್ಯರಾತ್ರಿ ಪೊಂಗಲ್‌ ಸೇವೆ ನೆರವೇರಿದ್ದು, ಮಂಗಳವಾರ ಮಧ್ಯರಾತ್ರಿ 12:30ರ ಸುಮಾರಿಗೆ ಕರಗ ಮೆರವಣಿಗೆ ನಡೆಯಲಿದೆ.

VISTARANEWS.COM


on

By

Bengaluru Karaga 2024
Koo

ಬೆಂಗಳೂರು: ರಾಜಧಾನಿಯ ಪಾರಂಪರಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಂಗಳೂರು ಕರಗ ಉತ್ಸವ ಚೈತ್ರ ಮಾಸದ ಹುಣ್ಣಿಮೆಯಂದು ಮಂಗಳವಾರ ರಾತ್ರಿ ವೈಭವದಿಂದ (Bengaluru Karaga 2024) ನಡೆಯಲಿದೆ. ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ನೋಡಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಕರಗ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ರಾಜಧಾನಿ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಆರು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಈಗಾಗಲೇ ತಿಗಳರಪೇಟೆ, ಚಿಕ್ಕಪೇಟೆ, ಕಾರ್ಪೋರೇಷನ್‌ ಸೇರಿದಂತೆ ಹಳೇ ಬೆಂಗಳೂರು ಪ್ರದೇಶವೆಲ್ಲವೂ ಸಿಂಗಾರಗೊಂಡಿದೆ. ಏ.23ರ ಚೈತ್ರ ಹುಣ್ಣಿಮೆಯ ದಿನದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ಮಹಾರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಕರಗ ಹೊರುವ ಪೂಜಾರಿ ಜ್ಞಾನೇಂದ್ರ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇಂದು ಮಧ್ಯರಾತ್ರಿ 12:30ಕ್ಕೆ ಪೂಜಾ ಕೈಂಕರ್ಯಗಳು ಹಾಗೂ ಕಣ ಪೂಜೆ ಬಳಿಕ ಧರ್ಮರಾಯಸ್ವಾಮಿ ದೇಗುಲದಿಂದ ಹೊರಡುವ ಕರಗ ರಾಜಬೀದಿಗಳಲ್ಲಿ ಸಂಚಾರಿಸಲಿದೆ.

ಕರಗ ಸಾಗುವ ಮಾರ್ಗ ಹೀಗಿದೆ..

ಮೊದಲಿಗೆ ಧರ್ಮರಾಯ ಸ್ವಾಮಿ ದೇವಸ್ಥಾನ ಪ್ರದಕ್ಷಿಣೆ ಹಾಕಿ ದ್ರೌಪದಮ್ಮ ಕರಗ ಹೊರಡಲಿದೆ. ಕುಂಬಾರಪೇಟೆ ರಸ್ತೆ ಮೂಲಕ ಸಾಗಿ ಕೆ.ಆರ್‌.ಮಾರುಕಟ್ಟೆ ನಂತರ ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸ್ವೀಕರಿಸಲಿದೆ. ಕೆ.ಆರ್‌. ಮಾರುಕಟ್ಟೆ ವೃತ್ತಕ್ಕೆ ವಾಪಾಸಾಗಿ ಕಾಟನ್‌ಪೇಟೆ ಪೊಲೀಸ್‌ ಠಾಣೆ ರಸ್ತೆಯಲ್ಲಿ ತೆರಳಿ, ಅಲ್ಲಿನ ಮಸ್ತಾನ್‌ಸಾಬ್‌ ದರ್ಗಾಕ್ಕೆ ತೆರಳಿ ಪೂಜೆ ಸ್ವೀಕರಿಸಿ, ಬಳೇಪೇಟೆ ವೃತ್ತದ ಮೂಲಕ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಹೋಗಿ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ವಾಪಸ್‌ ಮರಳಲಿದೆ.

ಮಸ್ತಾನ್ ಸಾಬ್ ದರ್ಗಾದಲ್ಲಿ ಕರಗ ವೈಭವ

ಸಂಪ್ರದಾಯದಂತೆ ಬೆಂಗಳೂರು ಕರಗವು ಅಕ್ಕಿಪೇಟೆಯಲ್ಲಿರುವ ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗಿ ಬರಲಿದ್ದು, ಧಾರ್ಮಿಕ ಭಾವೈಕ್ಯತೆಗೆ ಸಾಕ್ಷಿಯಾಗಲಿದೆ. ಮುಸ್ಲಿಂ ಭಾಂದವರು ಸಹ ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಕರಗಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಇದನ್ನು ಫಾತಿಯಾ ಎಂದು ಕರೆಯಲಾಗುತ್ತದೆ. ಕರಗದ ಮೆರವಣಿಗೆ ಗಣಪತಿ ದೇವಸ್ಥಾನದಲ್ಲಿ ಮೊದಲ ಪೂಜೆ, ಗ್ರಾಮ ದೇವತೆ ಮುತ್ಯಾಲಮ್ಮನಿಗೆ ಎರಡನೇ ನಮಸ್ಕಾರ ಸಲ್ಲಿಸಿ ಇಲ್ಲಿಂದ ರಾಜಬೀದಿಗಳಲ್ಲಿ ಸಂಚಾರಿಸಿ, ನಂತರ ನಗರ ದೇವತೆ ಅಣ್ಣಮ್ಮ ದೇವಸ್ಥಾನಕ್ಕೆ ಹೋಗಿ ವಾಪಸ್‌ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬರಲಿದೆ.

13ನೇ ಬಾರಿ ಕರಗ ಹೊರುತ್ತಿರುವ ಜ್ಞಾನೇಂದ್ರ

ಏಪ್ರಿಲ್ 15ರಿಂದ ಕರಗ ಮಹೋತ್ಸವ ಶುರುವಾಗಿದ್ದು, ಏ. 23 ರಂದು ಕೊನೆಗೊಳ್ಳಲಿದೆ. ಈ ಬಾರಿಯೂ ಕರಗವನ್ನು ಕರಗದ ಪೂಜಾರಿ ಎ. ಜ್ಞಾನೇಂದ್ರ ಹೊರಲಿದ್ದಾರೆ. ಈ ಮೂಲಕ ಜ್ಞಾನೇಂದ್ರ 13ನೇ ಬೆಂಗಳೂರು ಕರಗ ಹೊರುತ್ತಿದ್ದಾರೆ. ಇನ್ನೂ ಕಳೆದ ವರ್ಷ ಕರಗ ಶಕ್ತ್ಯೋತ್ಸವ ನಡೆಯುವ ಸಂದರ್ಭದಲ್ಲಿ ಕಿಡಿಗೇಡಿಗಳು ಕರಗದ ಪೂಜಾರಿ ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿದ್ದರು. ಆ ಮೂಲಕ ಕರಗ ಮಹೋತ್ಸವಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. ಆದರೂ ಕರಗದ ಪೂಜಾರಿ ಜ್ಞಾನೇಂದ್ರ ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿಯಲ್ಲಿ ಉತ್ಸವ ಮುಗಿಸಿದರು. ಹಿಂದಿನ ಘಟನೆಯನ್ನು ಮರುಕಳಿಸಬಾರೆಂದು ಈ ಬಾರಿ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ.

ಕರಗ ಮಹೋತ್ಸವ ಹಿನ್ನೆಲೆ ಮದ್ಯ ಮಾರಾಟ ನಿಷೇಧ

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru Karaga 2024) ಹಿನ್ನೆಲೆಯಲ್ಲಿ ಏ.23ರಂದು ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಹಲಸೂರು ಗೇಟ್, ಎಸ್ಆರ್ ನಗರ, ವಿಲ್ಸನ್ ಗಾರ್ಡನ್, ಎಸ್‌ಜೆ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡುವಂತೆ ಆಯುಕ್ತ ದಯಾನಂದ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕರಗ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಾರೆ. ಈ ವೇಳೆ ಕೆಲವು ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕಾನೂನು ಬಾಹಿರ ಕೃತ್ಯ ಎಸಗುವ ಸಾಧ್ಯತೆ ಇದೆ. ಇದು ಸಾರ್ವಜನಿಕರ ಶಾಂತಿಗೆ‌ ಭಂಗ ಉಂಟು ಮಾಡುವ ಸಂಭವವಿದೆ.

ಹೀಗಾಗಿ ಮುನ್ನೆಚ್ಚರಿಕೆ ಸಲುವಾಗಿ ಏ.23ರ ಬೆಳಗ್ಗೆ 6ಗಂಟೆಯಿಂದ ಮರುದಿನ 24ರ ಬೆಳಗ್ಗೆ 10ರವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ನಾಲ್ಕು ಠಾಣಾ ವ್ಯಾಪ್ತಿಯ ಬಾರ್ ರೆಸ್ಟೋರೆಂಟ್, ಮದ್ಯದ ಅಂಗಡಿಗಳು, ವೈನ್ ಶಾಪ್,‌ ಪಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ.

ಕರಗ ಮಹೋತ್ಸವ; ವಾಹನ ಸವಾರರೇ ಬೇರೆ ದಾರಿ ಕಂಡುಕೊಳ್ಳಿ

ಇಂದು ಮಧ್ಯರಾತ್ರಿ ಐತಿಹಾಸಿಕ ಬೆಂಗಳೂರು ಕರಗ (Bengaluru Karaga Festival) ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ (Traffic restriction) ಹೇರಲಾಗಿದ್ದು, ಪರ್ಯಾಯ (Alternate roads) ರಸ್ತೆಗಳಲ್ಲಿ ಸಾಗುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು (Bangalore traffic police) ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ರಾಫಿಕ್‌ ಪೊಲೀಸರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ: ದಿನಾಂಕ: 23.04.2024ರಿಂದ ದಿನಾಂಕ: 24.04.2024ರ ಬೆಳಗ್ಗೆ 06:00 ಗಂಟೆಯವರೆಗೆ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ಬೆಂಗಳೂರು ಕರಗದ ಉತ್ಸವ ನಡೆಯುತ್ತಿದ್ದು, ಈ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿರುತ್ತದೆ ಎಂದು ತಿಳಿಸಿದೆ.

ಮೆರವಣಿಗೆ ಸಾಗುವ ಮಾರ್ಗ

ಮೆರವಣಿಗೆಯು ನಗರ್ತಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡು ಕಬ್ಬನ್‌ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ ಮೂಲಕ ಕೆ.ಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ಮೂಲಕ ರಾಣಾಸಿಂಗ್ ಪೇಟೆ,‌ ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ , ಮಸ್ತಾನ್ ಸಾಹೇಬ್ ದರ್ಗಾ, ಬಳೇಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್.ಪಿ.ರಸ್ತೆ ಮೂಲಕ ಅಣ್ಣಮ್ಮ ದೇವಾಲಯಕ್ಕೆ ಬರುತ್ತದೆ. ಪುನಃ ಅದೇ ಮಾರ್ಗವಾಗಿ ಸಂಚರಿಸಿ, ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ , ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್‌ಪೇಟೆ ಮೂಲಕ ದಿ: 24/04/2024 ರಂದು ಬೆಳಗ್ಗೆ 6-00 ಘಂಟೆಗೆ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಸೇರುತ್ತದೆ.

ಸಂಚಾರ ನಿರ್ಬಂಧಿಸಲಾದ ರಸ್ತೆಗಳು

ಸಿಟಿ ಮಾರುಕಟ್ಟೆ ವೃತ್ತದಿಂದ ಅವೆನ್ಯೂ ರಸ್ತೆಯ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಎಲ್ಲ ಮಾದರಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆ ಅವೆನ್ಯೂ ರಸ್ತೆ ಪ್ರವೇಶಿಸುತ್ತಿದ್ದಂತೆ, ಎ.ಎಸ್.ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಎಸ್.ಜೆ.ಪಿ ರಸ್ತೆಯಿಂದ ಎನ್.ಆರ್ ವೃತ್ತದ ಕಡೆಗೆ ಹೋಗಲು ಪಿ.ಕೆ. ಲೇನ್ ಬಳಿ ಎಡ ತಿರುವು ಪಡೆಯುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆಯು ಅವೆನ್ಯೂ ರಸ್ತೆಯನ್ನು ಪ್ರವೇಶಿಸುತ್ತಿದಂತೆ ಮೆಡಿಕಲ್ ಕಾಲೇಜು
ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಎಸ್‌ಜೆಪಿ ರಸ್ತೆ -ಟೌನ್‌ಹಾಲ್, ಕೆಂಪೇಗೌಡ ರಸ್ತೆ ಮಾರ್ಗವಾಗಿ ತೆರಳಬಹುದು. ಮೈಸೂರು ರಸ್ತೆಯ ಎ.ಎಸ್.ಎಚ್ ರಸ್ತೆಯಲ್ಲಿ ಬಲ ತಿರುವು ರಾಯನ್ ವೃತ್ತದ‌ ಮೂಲಕ ಸಂಚರಿಸಬಹುದು. ಚಾಮರಾಜಪೇಟೆ ಕಡೆಯಿಂದ ಬರುವ ವಾಹನಗಳು ಪ್ರೊ. ಶಿವಶಂಕರ ವೃತ್ತದ ಮೂಲಕ ಜೆ.ಸಿ ರಸ್ತೆಯನ್ನು ಪ್ರವೇಶಿಸಿ ಟೌನ್‌ಹಾಲ್ ಕಡೆಗೆ ಸಂಚರಿಸಬಹುದು.

ವಾಹನಗಳ ಪಾರ್ಕಿಂಗ್ ಸ್ಥಳಗಳು

ಕರಗ ಉತ್ಸವಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಬನ್ನಪ್ಪ ಪಾರ್ಕ್ ಹಾಗೂ‌ ಪುರಭವನ, ಬಿ.ಬಿ.ಎಂ.ಪಿ ಮಾರ್ಕೆಟ್ ಕಾಂಪ್ಲೆಕ್ಸ್, ಇಲ್ಲಿ ನಿಲುಗಡೆ ಮಾಡಬಹುದಾಗಿರುತ್ತದೆ.

ಪಾರ್ಕಿಂಗ್ ನಿರ್ಬಂಧಿಸಲಾದ ಸ್ಥಳಗಳು

ಪಿ.ಕೆ ಲೈನ್, ಓ.ಟಿ.ಸಿ ರಸ್ತೆ, ಎಸ್ಪಿ ರಸ್ತೆ , ಕಬ್ಬನ್‌ಪೇಟೆ ರಸ್ತೆ, ಸುಣ್ಣಕಲ್ ಪೇಟೆ ರಸ್ತೆ, ಎಸ್.ಜೆ.ಪಿ. ಸಿಟಿ ಮಾರ್ಕೆಟ್ ಸರ್ಕಲ್, ಎಸ್.ಜೆ.ಪಿ ರಸ್ತೆ, ಅವೆನ್ಯೂ ರಸ್ತೆ , ಎ.ಎಸ್.ಚಾರ್ ಸ್ಟ್ರೀಟ್ ನಿಂದ ಮಾರ್ಕೆಟ್ ಸರ್ಕಲ್‌ವರೆಗೆ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಲೈಫ್‌ಸ್ಟೈಲ್

Vastu Tips: ಸುಖ, ಶಾಂತಿ, ಸಮೃದ್ಧಿಗಾಗಿ ಹೀಗಿರಲಿ ಮನೆಯ ಕಿಟಕಿ, ಬಾಗಿಲು

Vastu Tips: ನಮ್ಮ ಪೂರ್ವಜರು ಕೂಡ ಮನೆಯ ಪ್ರತಿಯೊಂದು ಭಾಗವನ್ನು ವಾಸ್ತುವಿನ ದೃಷ್ಟಿಕೋನದಿಂದಲೇ ನೋಡುತ್ತಿದ್ದರು. ಕ್ರಮೇಣ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆವು. ಆದರೆ ಈಗ ಮತ್ತೆ ವಾಸ್ತುವಿಗೆ (Vastu Tips) ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ಮನೆಗೆ ಕಿಟಕಿ ಬಾಗಿಲು ಅಳವಡಿಸುವುದಕ್ಕೂ ವಾಸ್ತು ಪಾಲನೆ ಮಾಡುವುದು ಮುಖ್ಯ. ಇದರಿಂದ ಮನೆಯೊಳಗೆ ಧನಾತ್ಮಕ ಶಕ್ತಿ ವೃದ್ಧಿಯಾಗಿಸಬಹುದು.

VISTARANEWS.COM


on

By

Vastu Tips
Koo

ಮನೆಯೊಳಗೆ (home) ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಧನಾತ್ಮಕ ಶಕ್ತಿ (Positive energy) ವೃದ್ಧಿಸಿಕೊಳ್ಳುವುದು ಬಹು ಮುಖ್ಯ. ಇದಕ್ಕಾಗಿ ವಾಸ್ತು ಅಂಶಗಳನ್ನು ನಾವು ಪರಿಗಣಿಸಿಬೇಕು. ನಮ್ಮ ಪೂರ್ವಜರು ಕೂಡ ಮನೆಯ ಪ್ರತಿಯೊಂದು ಭಾಗವನ್ನು ವಾಸ್ತುವಿನ ದೃಷ್ಟಿಕೋನದಿಂದಲೇ ನೋಡುತ್ತಿದ್ದರು. ಕ್ರಮೇಣ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆವು. ಆದರೆ ಈಗ ಮತ್ತೆ ವಾಸ್ತುವಿಗೆ (Vastu Tips) ಪ್ರಾಮುಖ್ಯತೆ ಹೆಚ್ಚಾಗುತ್ತಿದೆ.

ಮನೆಯಾದ್ಯಂತ ಧನಾತ್ಮಕ ಶಕ್ತಿಯನ್ನು ವೃದಿಸುವುದು ಸುಲಭವಲ್ಲ. ವಾಸ್ತು ಪ್ರಕಾರ ಮನೆಗೆ ಬಾಗಿಲು (door) ಮತ್ತು ಕಿಟಕಿಗಳನ್ನು (window) ಅಳವಡಿಸಿದರೆ ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.

ವಾಸ್ತು ಪ್ರಕಾರ ಬಾಗಿಲು ಮತ್ತು ಕಿಟಕಿಗಳನ್ನು ಅಳವಡಿಸಿದರೆ ಮುಚ್ಚಿರುವ ಜಾಗದಲ್ಲೂ ಧನಾತ್ಮಕ ಶಕ್ತಿ ಪುನರುತ್ಪಾದನೆಯಾಗುತ್ತದೆ. ಈ ಬಾಗಿಲು ಮತ್ತು ಕಿಟಕಿಗಳ ಮೂಲಕ ಶಕ್ತಿಗಳು ಮನೆಯ ಒಳ ಮತ್ತು ಹೊರಗೆ ಹರಿಯುತ್ತವೆ. ಆರೋಗ್ಯಕರ ಮತ್ತು ಶ್ರೀಮಂತ ಜೀವನಶೈಲಿಯ ವೃದ್ಧಿಗಾಗಿ ಇವುಗಳನ್ನು ಇಡಲು ನಿರ್ದಿಷ್ಟ ಜಾಗಗಳಿವೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Vastu Tips: ನಿಮ್ಮ ಮನೆಯಲ್ಲಿ ಸಂತೋಷ ವೃದ್ಧಿಸಬೇಕೆ? ಈ ಸಲಹೆಗಳನ್ನು ಪಾಲಿಸಿ

ಬಾಗಿಲು, ಕಿಟಕಿಗಳಿಗೆ ವಾಸ್ತು ಪಾಲನೆ ಯಾಕೆ?

ಮನೆ ನಿರ್ಮಿಸಲು ಉತ್ಸುಕರಾಗಿರುವ ಮನೆ ಮಾಲೀಕರು ಹಲವಾರು ಕಾರಣಗಳಿಗಾಗಿ ಬಾಗಿಲು ಮತ್ತು ಕಿಟಕಿಗಳನ್ನು ಇಡುವ ಸ್ಥಾನ, ದಿಕ್ಕು ಮತ್ತು ಬಳಸುವ ವಸ್ತುಗಳ ಬಗ್ಗೆ ವಿಶೇಷ ಗಮನವನ್ನು ನೀಡಬೇಕು. ಅವು ಗಾಳಿ ಮತ್ತು ಸೂರ್ಯನ ಬೆಳಕಿಗೆ ಪೂರಕವಾಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇದರಿಂದಲೇ ಮನೆಯೊಳಗೇ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.
ಹೊಸ ಮನೆಯನ್ನು ನಿರ್ಮಿಸುತ್ತಿದ್ದರೆ ಅಥವಾ ಹಳೆ ಮನೆಯನ್ನು ನವೀಕರಿಸುತ್ತಿದ್ದರೆ ಬಾಗಿಲು ಮತ್ತು ಕಿಟಕಿಗಳ ವಾಸ್ತು ಬಗ್ಗೆ ತಿಳಿದುಕೊಳ್ಳಿ.


ಸರಿಯಾದ ಮುಖ್ಯ ಬಾಗಿಲು

ಮನೆಯ ಮುಖ್ಯ ಬಾಗಿಲು ದೊಡ್ಡ ಬಾಗಿಲಾಗಿರಬೇಕು. ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಒಳಗೆ ತೆರೆದುಕೊಳ್ಳುವ ಎರಡು ಕವಾಟದ ಬಾಗಿಲು ಮಂಗಳಕರ. ಪ್ರಕಾಶಮಾನವಾದ ದೀಪಗಳು ಮತ್ತು ಉತ್ತಮ ಬಣ್ಣಗಳೊಂದಿಗೆ ಮುಖ್ಯ ಬಾಗಿಲಿನ ಮೇಲೆ ಸುಂದರವಾದ ವಿನ್ಯಾಸಗಳನ್ನು ಅಳವಡಿಸಿಕೊಳ್ಳಿ. ನೀರಸವಾದ ಮುಖ್ಯ ಬಾಗಿಲು ಮನೆಗೆ ಶೋಭೆಯಲ್ಲ.

ಬಾಗಿಲುಗಳ ಸರಿಯಾದ ಸಂಖ್ಯೆ

ಸಕಾರಾತ್ಮಕತೆಯು ಸಹ ಸಮ ಸಂಖ್ಯೆಗಳಲ್ಲಿ ಬರುತ್ತದೆ. ಮನೆಯಲ್ಲಿ ಬಾಗಿಲು ಮತ್ತು ಕಿಟಕಿಗಳ ಸಂಖ್ಯೆ ಯಾವಾಗಲೂ ಸಮವಾಗಿರಬೇಕು. ಎರಡು, ನಾಲ್ಕು, ಆರು ಹೀಗೆ ಎರಡರ ಗುಣಕಗಳಲ್ಲಿರಬೇಕು ಎನ್ನುತ್ತಾರೆ ವಾಸ್ತು ತಜ್ಞರು.


ಬಾಗಿಲಿನ ಗಾತ್ರದಲ್ಲಿ ಸ್ಥಿರತೆ

ಮುಂಭಾಗದ ಬಾಗಿಲನ್ನು ಹೊರತುಪಡಿಸಿ ಮನೆಯಲ್ಲಿ ಎಲ್ಲಾ ಆಂತರಿಕ ಬಾಗಿಲುಗಳ ಗಾತ್ರದಲ್ಲಿ ಒಂದೇ ಆಗಿರಬೇಕು. ವಿಭಿನ್ನ ಬಾಗಿಲು ಗಾತ್ರಗಳು ಮನೆಗೆ ಒಳ್ಳೆಯದಲ್ಲ. ಎದ್ದು ಕಾಣಬೇಕಾದ ಏಕೈಕ ಬಾಗಿಲು ಮುಖ್ಯ ಬಾಗಿಲು. ಮನೆಯೊಳಗೆ ಕೆಲವು ಬಾಗಿಲುಗಳನ್ನು ದೊಡ್ಡದಾಗಿ ಮಾಡಲು ಬಯಸಿದರೆ ಅವುಗಳನ್ನು ಉತ್ತರ ಅಥವಾ ಪೂರ್ವಕ್ಕೆ ಬದಲಾಗಿ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬೇಕು.

ದೋಷರಹಿತವಾಗಿರಲಿ ಮನೆ ಬಾಗಿಲು

ಮನೆಯಲ್ಲಿ ಬಾಗಿಲುಗಳ ಕಾರ್ಯವಿಧಾನದ ವಿಷಯಕ್ಕೆ ಬಂದರೆ ಬಾಗಿಲು ತೆರೆಯುವಾಗ ಅಥವಾ ಮುಚ್ಚುವಾಗ ಕೀಲು ಬಾಗಿಲುಗಳನ್ನು ಹಾಕುವುದು ಉತ್ತಮ. ಮನೆಯಲ್ಲಿ ಬಾಗಿಲುಗಳು ಮತ್ತು ಕಿಟಕಿಗಳೊಂದಿಗೆ ಹೆಚ್ಚು ಜಗಳಗಳು ಇರುತ್ತದೆ. ಸ್ಮೂತ್ ಕೀಲುಗಳು ಮನೆಯಲ್ಲಿ ಉತ್ತಮ ಸಂಬಂಧಗಳನ್ನು ಪ್ರತಿಬಿಂಬಿಸುತ್ತವೆ. ಸ್ವಯಂ-ಮುಚ್ಚುವ ಬಾಗಿಲುಗಳನ್ನು ತಪ್ಪಿಸುವುದು ಒಳ್ಳೆಯದು.

ಕಿಟಕಿಗಳು

ಎಲ್ಲಾ ಕಿಟಕಿಗಳು ಸರಿಯಾದ ಆಕಾರ ಮತ್ತು ಸಮವಾದ ಎತ್ತರವನ್ನು ಹೊಂದಿರಬೇಕು. ಕಿಟಕಿಗಳು ತಾಜಾ ಗಾಳಿ ಮತ್ತು ಸೂರ್ಯನ ಬೆಳಕಿನ ಮೂಲವಾಗಿರುತ್ತದೆ. ಅವುಗಳಿಗೆ ಯಾವಾಗಲೂ ಎದುರು ಬಾಗಿಲುಗಳನ್ನು ಇಡಬೇಕು. ಮನೆಯಲ್ಲಿ ಗರಿಷ್ಠ ವಾತಾಯನವಿದೆ ಎಂದು ಇದು ಖಚಿತಪಡಿಸುತ್ತದೆ. ಮನೆಯಲ್ಲಿರುವ ಕಿಟಕಿಗಳ ಸಂಖ್ಯೆಯೂ ಸಮ ಸಂಖ್ಯೆಯಲ್ಲಿರಬೇಕು. ಕಿಟಕಿಗಳಿಗೆ ಸಾಮಾನ್ಯವಾಗಿ ನೈಋತ್ಯ ದಿಕ್ಕನ್ನು ತಪ್ಪಿಸಿ. ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಕಿಟಕಿಗಳು ದೊಡ್ಡದಾಗಿದ್ದರೆ ಉತ್ತಮ. ಉತ್ತರವು ಸಮೃದ್ಧಿಯನ್ನು ತರುತ್ತದೆ ಆದರೆ ಪೂರ್ವವು ಪ್ರಗತಿ ಮತ್ತು ಆರೋಗ್ಯವನ್ನು ತರುತ್ತದೆ.

ಬಾಗಿಲಿಗೆ ಬಳಸುವ ವಸ್ತುಗಳು

ಬಾಗಿಲುಗಳಿಗೆ ವಸ್ತುಗಳನ್ನು ಎಚ್ಚರಿಕೆಯಿಂದ ಆರಿಸುವುದು ಮುಖ್ಯ. ಏಕೆಂದರೆ ಇದು ಎಷ್ಟು ಮಂಗಳಕರ ಎಂಬುದನ್ನು ನಿರ್ಧರಿಸುತ್ತದೆ. ಬಾಗಿಲುಗಳಿಗೆ ವಸ್ತುಗಳನ್ನು ಆಯ್ಕೆಮಾಡುವಾಗ ಮರದ ಬಾಗಿಲು ಯಾವಾಗಲೂ ಅತ್ಯುತ್ತಮ ಆಯ್ಕೆಯಾಗಿದೆ. ಇದಲ್ಲದೆ ಉತ್ತರ ದಿಕ್ಕಿನ ಬಾಗಿಲುಗಳಿಗೆ ಲೋಹ ಅಥವಾ ಕಬ್ಬಿಣದಂತಹ ಬೆಳ್ಳಿಯನ್ನು ಹೊಂದಿರುವ ಬಾಗಿಲುಗಳನ್ನು ಆಯ್ಕೆ ಮಾಡಿಕೊಳ್ಳಿ. ದಕ್ಷಿಣಕ್ಕೆ ಮರದ ಮತ್ತು ಲೋಹದ ಅಂಶಗಳನ್ನು ಹೊಂದಿರುವ ಬಾಗಿಲುಗಳು ಸೂಕ್ತವಾಗಿದೆ. ಪೂರ್ವ ದಿಕ್ಕಿಗೆ ಮರದಿಂದ ಮಾಡಿದ ಬಾಗಿಲು ಉತ್ತಮ. ಪಶ್ಚಿಮಕ್ಕೆ ಕಬ್ಬಿಣದಂತಹ ಲೋಹದಿಂದ ಪ್ರಧಾನವಾಗಿ ಮಾಡಿದ ಬಾಗಿಲನ್ನು ಆಯ್ಕೆ ಮಾಡಿಕೊಳ್ಳಿ.

ಬಾಗಿಲುಗಳು ಮತ್ತು ಕಿಟಕಿಗಳ ಬಣ್ಣ

ಗಾಢವಾದ ಬಣ್ಣಗಳು ಮನೆಯೊಳಗೆ ಹರ್ಷಚಿತ್ತ ಮತ್ತು ಶಕ್ತಿಯುತ ಮನಸ್ಥಿತಿಗೆ ಕಾರಣವಾಗುತ್ತವೆ. ಆದ್ದರಿಂದ ಮುಂಭಾಗದ ಬಾಗಿಲುಗಳಿಗೆ ಹಳದಿ ಮತ್ತು ನೀಲಿ ಬಣ್ಣಗಳನ್ನು ಆರಿಸಿ.

ಅಲಂಕಾರಿಕ ವಸ್ತುಗಳು

ಬಾಗಿಲಿನ ಮುಂದೆ ಹನುಮಾನ್ ಅಥವಾ ಗಣೇಶನ ವಿಗ್ರಹವನ್ನು ಇರಿಸುವುದರಿಂದ ದುಷ್ಟ ಶಕ್ತಿಗಳನ್ನು ದೂರವಿರಿಸಬಹುದು ಎಂದು ನಂಬಲಾಗಿದೆ. ಹಿತ್ತಾಳೆಯ ಬಟ್ಟಲಿನಲ್ಲಿ ನೀರನ್ನು ಇಟ್ಟುಕೊಳ್ಳುವುದು ಮನೆಯಲ್ಲಿ ನಕಾರಾತ್ಮಕತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸಲು ಬುದ್ಧನ ಪ್ರತಿಮೆ ಅಥವಾ ಗಾಳಿಯ ಚೈಮ್ ಅನ್ನು ಪ್ರವೇಶದ್ವಾರದ ಬಳಿ ಇರಿಸಬಹುದು.


ವಾಸ್ತು ಪರಿಣಾಮ

ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಬಾಗಿಲು, ಕಿಟಕಿಗಳು ತಾಜಾ ಗಾಳಿ ಮತ್ತು ಬೆಳಿಗ್ಗೆ ಒಳ್ಳೆಯದು. ದಿನದ ಆರಂಭದಲ್ಲಿ ಇದು ಮನೆಯ ಶುದ್ಧೀಕರಣ ಪ್ರಕ್ರಿಯೆಯನ್ನು ನಡೆಸುತ್ತದೆ.

ದಕ್ಷಿಣ ದಿಕ್ಕು ಎಲ್ಲಾ ಉತ್ತಮ ಶಕ್ತಿಗಳ ಕೇಂದ್ರ ಎಂದು ಪರಿಗಣಿಸಲಾಗಿದೆ. ದಕ್ಷಿಣಕ್ಕೆ ಎದುರಾಗಿ ನಿಖರವಾಗಿ ಮತ್ತು ಮಧ್ಯದಲ್ಲಿ ಬಾಗಿಲು, ಕಿಟಕಿಗಳನ್ನು ಇರಿಸಿದರೆ ಮನೆಯೊಳಗೆ ಉತ್ತಮ ಶಕ್ತಿ ಸಂಚಾರವಾಗುತ್ತದೆ.

ಪೂರ್ವ ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಇಲ್ಲಿ ಪ್ರವೇಶದ್ವಾರಗಳು ಸಮೃದ್ಧಿ, ಶಕ್ತಿ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.

ಪಶ್ಚಿಮ ದಿಕ್ಕು ಸೂರ್ಯಾಸ್ತಮಾನವನ್ನು ಆನಂದಿಸುವ ಮನೆಮಾಲೀಕರಿಗೆ ಸೂಕ್ತವಾಗಿದೆ. ಈ ದಿಕ್ಕು ಸಂಪತ್ತು ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ.

ಏನು ಮಾಡಬೇಕು?

ಮನೆಯ ಮುಖ್ಯ ಬಾಗಿಲು ಹೊಸ್ತಿಲನ್ನು ಹೊಂದಿರಬೇಕು. ಮನೆಗೆ ಸಂಪತ್ತನ್ನು ಆಕರ್ಷಿಸಲು ನಿರ್ದಿಷ್ಟ ಸಂಖ್ಯೆಯಲ್ಲಿ ಹೊಸ್ತಿಲಿನ ಎದುರು ಮೆಟ್ಟಿಲುಗಳನ್ನು ಇರಿಸಬೇಕು.

ಮುಖ್ಯ ಬಾಗಿಲು ಯಾವಾಗಲೂ ನೆಲದ ಮಟ್ಟಕ್ಕಿಂತ ಮೇಲಿರಬೇಕು. ಮಲಗುವ ಕೋಣೆಯ ಬಾಗಿಲುಗಳು ಮುಖ್ಯ ಬಾಗಿಲಿಗಿಂತ ಚಿಕ್ಕದಾಗಿರಬೇಕು. ಮುಖ್ಯ ಬಾಗಿಲನ್ನು ಮನೆಯಲ್ಲಿ ದೊಡ್ಡದಾಗಿಸಬೇಕು. ಎಲ್ಲಾ ಬಾಗಿಲುಗಳು ಪ್ರದಕ್ಷಿಣಾಕಾರವಾಗಿ ತೆರೆದಿರುವುದನ್ನು ಖಚಿತಪಡಿಸಿಕೊಳ್ಳಿ.


ಏನು ಮಾಡಬಾರದು?

ಮುಖ್ಯ ಬಾಗಿಲು ಮತ್ತು ನಿರ್ಗಮನ ಬಾಗಿಲು ಎದುರಾಗಿ ಇರಬಾರದು. ಮುಖ್ಯ ಬಾಗಿಲುಗಳು ಮನೆಯ ಆಯಾವನ್ನು ಬಿಟ್ಟು ಹೊರಗೆ ಇರಬಾರದು. ಮುಖ್ಯ ಬಾಗಿಲನ್ನು ಭೂಗತ ಟ್ಯಾಂಕ್ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳ ಕೆಳಗೆ ಇಡುವುದನ್ನು ತಪ್ಪಿಸಿ.

ಮುಖ್ಯ ಬಾಗಿಲಿನ ಮುಂದೆ ಶೂ ಅಥವಾ ಕಸವನ್ನು ಇಡಬೇಡಿ. ಮುಖ್ಯ ಬಾಗಿಲಿನ ಮುಂಭಾಗದಲ್ಲಿ ಕಂಬ, ಮರ, ತಂತಿ ಸೇರಿದಂತೆ ಅಡೆತಡೆಗಳನ್ನು ತಪ್ಪಿಸಿ.

ಬಾಗಿಲು ಅಥವಾ ನಿರ್ಗಮನ ಬಾಗಿಲಿನ ಹೊರ ಭಾಗದಲ್ಲಿ ದೇವರ ಚಿತ್ರಗಳನ್ನು ಪ್ರದರ್ಶಿಸಬೇಡಿ. ಬಾಗಿಲಿನ ವಾಸ್ತು ಪ್ರಕಾರ ಇದು ದುಃಖಕ್ಕೆ ಕಾರಣವಾಗಬಹುದು.

ಮನೆಯಲ್ಲಿ ಹೆಚ್ಚಿನ ಮಹಡಿಗಳಿದ್ದರೆ ಪ್ರತಿ ಮಹಡಿಯಲ್ಲಿ ಒಂದರ ಮೇಲೊಂದು ಬಾಗಿಲು ಹಾಕದಂತೆ ನೋಡಿಕೊಳ್ಳಿ.

Continue Reading
Advertisement
Pakistan Inflation
ವಿದೇಶ3 hours ago

Pakistan Inflation: ಪಾಕಿಸ್ತಾನ ಮತ್ತಷ್ಟು ದಿವಾಳಿ; ಲೀಟರ್‌ ಪೆಟ್ರೋಲ್‌ಗೆ 290 ರೂ., ಕೆ.ಜಿ ಹಿಟ್ಟಿಗೆ 800 ರೂ.

Honnavar News
ಉತ್ತರ ಕನ್ನಡ3 hours ago

Honnavar News: ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕು: ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Sadhguru Jaggi Vasudev
ಬೆಂಗಳೂರು4 hours ago

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Justin Trudeau
ದೇಶ4 hours ago

Justin Trudeau: ಕೆನಡಾ ಪ್ರಧಾನಿ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ; ಭಾರತ ಸಮನ್ಸ್!

M P Rudramba
ಕರ್ನಾಟಕ4 hours ago

M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಧರ್ಮ ಪತ್ನಿ ರುದ್ರಾಂಬಾ ನಿಧನ

KKR vs DC
ಕ್ರೀಡೆ4 hours ago

KKR vs DC: ಡೆಲ್ಲಿಗೆ ನೀರು ಕುಡಿಸಿದ ಸಾಲ್ಟ್​; ಪಂತ್​ ಪಡೆಯ ಪ್ಲೇ ಆಫ್ ಹಾದಿ ದುರ್ಗಮ

Patanjali
ದೇಶ4 hours ago

Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು, ಬಾಬಾ ರಾಮದೇವ್‌ ವಿರುದ್ಧ ಬಿತ್ತು ಕೇಸ್

Murder Case
ಕರ್ನಾಟಕ4 hours ago

Murder Case: ಹೆಂಡ್ತಿ ಬಿಟ್ಟು ಹೋಗುತ್ತಾಳೆಂದು ಕತ್ತು ಸೀಳಿ ಕೊಂದ ಪತಿರಾಯ!

CM Siddaramaiah inaugurated by prajadhwani lok sabha election campaign meeting at kushtagi
ಕೊಪ್ಪಳ5 hours ago

Lok Sabha Election 2024: ನಾಯಕತ್ವ ಕೊರತೆ ಇರುವುದು ಬಿಜೆಪಿಗೆ ಎಂದ ಸಿದ್ದರಾಮಯ್ಯ

DCM D K Shivakumar Latest statement in Belagavi
ಪ್ರಮುಖ ಸುದ್ದಿ5 hours ago

DK Shivakumar: ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಿಲುವೇನು; ಶಿವಕುಮಾರ್ ಪ್ರಶ್ನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 202414 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202415 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ22 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌