Prerane | ನಮ್ಮ ಮನದ ಮೇಲೆ ನರ್ತಿಸಲಿ ನಟರಾಜ - Vistara News

ಧಾರ್ಮಿಕ

Prerane | ನಮ್ಮ ಮನದ ಮೇಲೆ ನರ್ತಿಸಲಿ ನಟರಾಜ

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಶುಷ್ಕವಾಗಿ ಕರ್ಮಗಳನ್ನು ಆಚರಿಸುತ್ತಿರುವ ನಮ್ಮನ್ನು ಎಚ್ಚರಿಸುವ ಚಿಂತನೆ ಇಲ್ಲಿದೆ.

VISTARANEWS.COM


on

Prerane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುಬ್ರಹ್ಮಣ್ಯ ಸೋಮಯಾಜಿ
ಒಮ್ಮೆ ದಾರುಕಾವನದಲ್ಲಿ ಋಷಿಗಳೆಲ್ಲ ಒಂದು ಯಜ್ಞವನ್ನು ಆಯೋಜಿಸಿದರು. ಯಜ್ಞದ ಪರಮ ಪ್ರಯೋಜನ ಭಗವಂತನ ಸಾಕ್ಷಾತ್ಕಾರ ಎಂಬ ಚಿಂತನೆ ಮನಸ್ಸಿನಿಂದ ಜಾರಿಹೊಗಿತ್ತು. ಕರ್ಮ ಆಚರಿಸುವುದೇ ಧರ್ಮದ ಕೆಲಸ. ಉದ್ದೇಶ ಕೇವಲ ಕರ್ಮದ ಆಚರಣೆ ಅಷ್ಟೇ. ಈಗ ನಾವೆಲ್ಲಾ ನಮ್ಮ ಮನೆಗಳಲ್ಲಿ ಕರ್ಮಗಳನ್ನು ಆಚರಿಸುತ್ತಿಲ್ಲವೇ ಹಾಗೆಯೇ ಎಂದಿಟ್ಟುಕೊಳ್ಳೋಣ.

ಸರಿ ಭಗವಂತನಾದ ಮಹಾದೇವನಿಗೆ ಇವರಿಗೆ ಬುದ್ಧಿಕಲಿಸಬೇಕೆನಿಸಿತು. ಅವನು ಸುಂದರನಾದ ಯುವಕನ ರೂಪದಿಂದ ಆ ದಾರುಕಾ ವನವನ್ನು ಪ್ರವೇಶಿಸಿದ. ನಿಷ್ಕಲ್ಮಶ ಹೃದಯದವರಾದ ಋಷಿ ಪತ್ನಿಯರೆಲ್ಲ ಈ ಹುಡುಗನ ಸೌಂದರ್ಯಕ್ಕೆ ಮಾರುಹೋಗಿ ಅವನನ್ನೇ ನೋಡುತ್ತಾ ಅವನ ಸುತ್ತಲೂ ಮೈಮರೆತು ನಿಂತರು. ಸಾಕ್ಷಾತ್ ಪರಶಿವನೇ ಹುಡುಗನಾಗಿ ಬಂದಿದ್ದಾನೆ ಎಂಬ ಅರಿವು ಅವರಿಗಿಲ್ಲವಾದರೂ ಅವನ ಸಾನ್ನಿಧ್ಯ ಶುದ್ಧಹೃದಯಿಗಳಾದ ಅವರನ್ನು ಹಾಗೆ ಮೈ ಮರೆಯುವಂತೆ ಮಾಡಿತು.

ಇವರು ಸಂಕಲ್ಪಿಸಿದ ಯಜ್ಞಕಾರ್ಯಕ್ಕೆ ಸಹಾಯಕರಾಗಿ ಬಂದ ಇವರ ಪತ್ನಿಯರೆಲ್ಲ ಈ ಹುಡುಗನ ಸುತ್ತ ನಿಂತಿರುವುದು ಅವರಿಗೆ ಬಹಳ ಕೋಪವನ್ನು ತರಿಸಿತು. ತಮ್ಮ ಯಜ್ಞವನ್ನು ಕೆಡಿಸಲು ಬಂದ ಆ ಹುಡುಗನನ್ನು ದಂಡಿಸಲು ವಿಧವಿಧವಾದ ಪ್ರಾಣಿಗಳನ್ನು ತಮ್ಮ ತಪಸ್ಸಿನ ಬಲದ ಮೇಲೆ ಸೃಷ್ಟಿಸಿದರು. ಆದರೆ ಯಾವುದೂ ಪ್ರಯೋಜನವಾಗಲಿಲ್ಲ. ಅವರು ಸೃಷ್ಟಿಸಿದ ಹುಲಿಯನ್ನು ಕೊಂದು ಅದರ ಚರ್ಮವನ್ನು ತಾನೇ ಉಟ್ಟನು. ನಂತರ ಒಬ್ಬ ಭಯಂಕರನಾದ “ಅಪಸ್ಮಾರ” ನೆಂಬ ಅಸುರನನ್ನು ಸೃಷ್ಟಿಸಿ ಅವನ ಮೇಲೆ ಯುದ್ಧಮಾಡಲು ಕಳುಹಿಸಿದರು.

ಏನಾಶ್ಚರ್ಯ! ಆ ಭಯಂಕರನಾದ ಅಸುರನನ್ನು ತನ್ನ ಬಲ ಪಾದದಿಂದ ಮೆಟ್ಟಿ ನರ್ತಿಸ ತೊಡಗಿದನು. ಆಗ ಋಷಿಗಳಿಗೆ ತಮ್ಮ ತಪ್ಪಿನ ಅರಿವಾಯಿತು. ಸಾಕ್ಷಾತ್ ಪರಶಿವನೇ ನಟರಾಜನಾಗಿ ಜೀವನದ ಪರಮ ಲಕ್ಷ್ಯವನ್ನು ಅವರಿಗೆ ನೆನಪಿಸಲು ಬಂದಿದ್ದಾನೆ ಎಂಬ ಜ್ಞಾನೋದಯವಾದೊಡನೆಯೇ ಅವರಿಗೆಲ್ಲ ತಮ್ಮ ಸ್ವಸ್ವರೂಪದ ಅರಿವಾಗಿ ಆ ಸ್ವಾಮಿಯ ನರ್ತನದಲ್ಲಿ ಎಲ್ಲರೂ ತಲ್ಲೀನರಾದರು. ಮಾತ್ರವಲ್ಲ ಕೆಳಗೆ ಬಿದ್ದ ಅಪಸ್ಮಾರ ರಾಕ್ಷಸನೂ ಸಹ ಆನಂದದಿಂದ ತಲೆ ಎತ್ತಿ ನಟರಾಜನ ದರ್ಶನದ ಸುಖವನ್ನು ಅನುಭವಿಸತೊಡಗಿದನು.

ಶ್ರೀ ರಂಗಮಹಾಗುರುಗಳ ದೃಷ್ಟಿಯಿಂದ ಇದೊಂದು ತತ್ತ್ವಮಯವಾದ ಕಥೆ. ಜ್ಞಾನಕ್ಕಾಗಿಯೇ ಎಲ್ಲ ಕರ್ಮಗಳೂ ಬಂದಿರುವುದು. ಭಗವಂತನ ಅನುಭವವೇ ಜ್ಞಾನ. ಅದರ ವಿಸ್ಮರಣೆಯಾಗಿ ಕೇವಲ ಶುಷ್ಕವಾದ ಕರ್ಮಗಳನ್ನು ಮಾಡಿದರೆ ಪ್ರಯೋಜನವಿರದು. ಅದನ್ನು ತಿಳಿಸಲು ಸಾಕ್ಷಾತ್ ಭಗವಂತನೇ ನಟರಾಜನಾಗಿ ಬಂದನು. ಭಗವಂತನೇ ಬಂದರೂ ನಮ್ಮ ಅಹಂಕಾರದ ಗೋಡೆ ಅವನನ್ನು ಗುರುತಿಸದಂತೆ ಮಾಡುತ್ತದೆ. ಹಾಗೆಯೇ ಆ ಋಷಿಗಳಿಗೂ ಆಯಿತು. ಆದರೆ ನಿಷ್ಕಲ್ಮಶ ಹೃದಯಿಗಳಾದ ಋಷಿಪತ್ನಿಯರಿಗೆ ಅವನಲ್ಲಿ ಸಹಜವಾದ ಆಕರ್ಷಣೆ ಉಂಟಾಯಿತು. ಆ ಮಹಾ ಶಕ್ತಿಯ ಎದುರು ಯಾವ ಪಾಶವೀ ಶಕ್ತಿಯ, ಆಸುರೀ ಶಕ್ತಿಯ ಆಟವೂ ನಡೆಯದು ಎಂದೇ ನಟರಾಜನು ಎಲ್ಲವನ್ನೂ ನಿಗ್ರಹಿಸಿದನು.

ಅಸುರನ ಹೆಸರು “ ಅಪಸ್ಮಾರ” ಎಂದರೆ “ಮರೆತವನು” ವಿಸ್ಮೃತ ಎಂದರ್ಥ. ಮರೆವಿನ ರೋಗಕ್ಕೂ ಆಪಸ್ಮಾರ ರೋಗ ಎನ್ನುವುದಿದೆ. ಯಾರು ತಮ್ಮೊಳಗೆ ಬೆಳಗುತ್ತಿರುವ ಪರಶಿವಜ್ಯೋತಿಯನ್ನು ಮರೆತಿದ್ದಾರೋ ಅವರೆಲ್ಲ ಆಪಸ್ಮಾರರೇ. ಮೂಲಾಧಾರದಿಂದ ಕತ್ತಿನ ವರೆಗಿನ ನಮ್ಮ ಶರೀರದ ಭಾಗ ಪ್ರಕೃತಿಯ ಭಾಗ. ವಿಸ್ಮರಣೆಯ ಎಡೆ. ನಟರಾಜನು ಮೆಟ್ಟಿರುವುದು ಅಸುರನ ಶರೀರದ ಈ ಭಾಗವನ್ನೇ. ಅವನ ವಿಸ್ಮರಣೆಯನ್ನು ಮೆಟ್ಟಿದಾಗ ಅವನಿಗೆ ತನ್ನ ಸ್ವರೂಪದ ಸ್ಮರಣೆಯುಂಟಾಗಿ ಆನಂದದಿಂದ ನಟರಾಜನನ್ನು ನೋಡುತ್ತಿದ್ದಾನೆ.

ಇದು ನಮ್ಮೆಲ್ಲರ ಕಥೆ. ನಮ್ಮೆಲ್ಲರಿಗೂ ಒಳಬೆಳಕಿನ ವಿಸ್ಮರಣೆಯಾಗಿದೆ. ಆ ಋಷಿಗಳಂತೆ, ಆ ಅಸುರನಂತೆ. ನಾವೂ ಅವನನ್ನು ಮರೆತು ಶುಷ್ಕವಾಗಿ ಕರ್ಮಗಳನ್ನು ಆಚರಿಸುತ್ತಿದ್ದೇವೆ. ನಮ್ಮ ವಿಸ್ಮರಣೆಯನ್ನೂ ನಟರಾಜನು ತುಳಿದು ನಮಗೆ ಅವನ ಸ್ಮರಣೆ ಉಂಟಾಗುವಂತೆ ಮಾಡಲಿ ಎಂದು ಆ ಪರಮ ಕರುಣಾಮಯನನ್ನು ಪ್ರಾರ್ಥಿಸೋಣ.

ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Prerane | ಬಂದದ್ದನ್ನೆಲ್ಲಾ ಒಪ್ಪಿಕೊಳ್ಳೋಣ, ಪರಿಸ್ಥಿತಿಯನ್ನು ಎದುರಿಸೋಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜ್ಞಾನ

Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

ಪವಾಡಗಳ ಬಗ್ಗೆ ನಾವು ಸಾಕಷ್ಟು ಬಾರಿ ಕೇಳಿರುತ್ತೇವೆ. ಇಲ್ಲಿ ನಡೆದಿರುವ ಪವಾಡ ಮಾತ್ರ ನಂಬಲು ಅಸಾಧ್ಯವಾಗಿರುವುದು. ಇದನ್ನು ಕೇಳಿ ಎಲ್ಲರೂ ಇದು ಖಂಡಿತಾ ಸಾಧ್ಯವಿಲ್ಲ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಇದು ನಿಜವಾಗಿಯೂ ನಡೆದಿದೆ. ತಲೆಯನ್ನೇ ಕಳೆದುಕೊಂಡ ಕೋಳಿ (Headless Chicken) 18 ತಿಂಗಳ ಕಾಲ ಬದುಕಿದೆ. ಇದು ಈಗ ವಿಜ್ಞಾನಕ್ಕೂ ಸವಾಲಾಗಿ ಕಾಣುತ್ತಿದೆ.

VISTARANEWS.COM


on

By

Headless Chicken
Koo

ಪವಾಡಗಳು (Miracle) ಜೀವನದ (life) ಭಾಗವಾಗಿದೆ. ವಿಜ್ಞಾನದ (science) ಪ್ರಶ್ನೆಗೂ ನಿಲುಕದ ಕೆಲವೊಂದು ಸಂಗತಿಗಳು ಘಟಿಸುತ್ತವೆ. ಯಾರ ಬಳಿಯೂ ಉತ್ತರವಿರುವುದಿಲ್ಲ. ಈ ವಿಷಯಗಳನ್ನು ಅಲೌಕಿಕ (supernatural) ವಿದ್ಯಮಾನದ ಭಾಗವೆಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ಈ ಕೋಳಿಯೂ (Headless Chicken) ಒಂದು. ಇದು ಊಹೆಗೂ ನಿಲುಕದಂತಿದೆ. ನಂಬಲು ಕಷ್ಟ ಮತ್ತು ಆಶ್ಚರ್ಯಕರವಾಗಿದೆ.

ಇದೀಗ ಒಂದು ಪವಾಡ ಪ್ರಕರಣವೊಂದು ವರದಿಯಾಗಿದೆ. ಇದರಲ್ಲಿ ‘ಮೈಕ್’ ಎಂಬ ಕೋಳಿ (Miracle Mike) ತನ್ನ ಉಳಿದ 18 ತಿಂಗಳ ಸುದೀರ್ಘ ಜೀವನವನ್ನು ತಲೆಯಿಲ್ಲದೇ ಕಳೆದಿದೆ.

1945 ರ ಸೆಪ್ಟೆಂಬರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನ (United States) ಕೊಲೊರಾಡೋದ (Colorado) ಫ್ರೂಟಾದಲ್ಲಿ ವಾಸಿಸುತ್ತಿದ್ದ ಓಲ್ಸೆನ್ ಕುಟುಂಬವು ಸಂಜೆಯ ಊಟಕ್ಕಾಗಿ ಚಿಕನ್ ತಯಾರಿಸಲು ಯೋಚನೆ ಮಾಡುತ್ತಿತ್ತು. ಅದಕ್ಕಾಗಿ ರೈತ ಲಾಯ್ಡ್ ಓಲ್ಸೆನ್ ಮನೆಗೆ ತಾಜಾ ಮಾಂಸವನ್ನು ತರಲು ಹೊಲಕ್ಕೆ ಹೋಗುತ್ತಾನೆ.

ಅಲ್ಲಿ ಆತ ‘ಮೈಕ್’ ಎಂದು ಗುರುತಿಸಲ್ಪಟ್ಟ ಐದೂವರೆ ತಿಂಗಳ ಗಂಡು ವಯಾಂಡೊಟ್ಟೆ ಕೋಳಿಯನ್ನು ಎತ್ತಿಕೊಂಡು ತರುತ್ತಾನೆ. ಅದನ್ನು ಎಷ್ಟೇ ಕೊಲ್ಲಲು ಪ್ರಯತ್ನಿಸಿದರೂ ಆತನಿಗೆ ಅದು ಸಾಧ್ಯವಾಗಲಿಲ್ಲ. ತಲೆಯನ್ನೇ ಕತ್ತರಿಸಿದರೂ ಅದು ಉಸಿರು ಚೆಲ್ಲಲಿಲ್ಲ. ಅದೊಂದು ಅಭೂತಪೂರ್ವ ಘಟನೆಯಾಗಿದ್ದು, ವಿಶ್ವವೇ ಬೆರಗಾಗುವಂತೆ ಮಾಡಿತು.


18 ತಿಂಗಳು ಹೇಗೆ ಬದುಕಿತು?

ಲಾಯ್ಡ್ ಕೋಳಿಯ ಶಿರಚ್ಛೇದ ಮಾಡಿದ. ಕತ್ತಿಯ ಏಟು ಅದರ ತಲೆಯ ಹೆಚ್ಚಿನ ಭಾಗಗಳನ್ನು ಕತ್ತರಿಸಿದರೂ ಅದು ಕುತ್ತಿಗೆ ಮತ್ತು ಗಂಟಲಿಗೆ ಸಂಬಂಧಿಸಿದ ಕಂಠನಾಳವನ್ನು ಸೀಳುವಲ್ಲಿ ವಿಫಲವಾಯಿತು. ಹೀಗಾಗಿ ಅದು ಬದುಕುಳಿಯಿತು. ಒಂದು ಕಿವಿ ಮತ್ತು ಮೆದುಳಿನ ಹೆಚ್ಚಿನ ಕಾಂಡವು ಹಾನಿಗೊಳಗಾದರೂ ಅದು ಸಾಯಲಿಲ್ಲ. ರಕ್ತ ವೇಗವಾಗಿ ಹೆಪ್ಪುಗಟ್ಟಿದ್ದರಿಂದ ಅತಿಯಾದ ರಕ್ತದ ನಷ್ಟವಾಗಲಿಲ್ಲ.

ಬಳಿಕ ಲಾಯ್ಡ್ ಮೈಕ್‌ ಗೆ ಹೊಸ ಜೀವನ ನೀಡಲು ಮುಂದಾದ. ಕೋಳಿಯನ್ನು ಮನೆಗೆ ತಂದು ಸಂಪೂರ್ಣ ಆರೈಕೆ ಮಾಡಲು ನಿರ್ಧರಿಸಿದರು.

ಲಾಯ್ಡ್ ಅದಕ್ಕೆ ಹಾಲು ಮತ್ತು ನೀರಿನ ಮಿಶ್ರಣವನ್ನು ಒಳಗೊಂಡಿರುವ ಆಹಾರವನ್ನು ತಯಾರಿಸಿದ. ಐಡ್ರಾಪರ್ ಮೂಲಕ ಅದಕ್ಕೆ ಆಹಾರವನ್ನು ನೀಡಿದ. ಕೆಲವು ಹುಳು ಮತ್ತು ಜೋಳವನ್ನು ನೀಡಿದನು.

ಮೈಕ್ ಗಳಿಸಿದ ಖ್ಯಾತಿ

ಈ ಘಟನೆಯು ಜಗತ್ತಿಗೇ ಸುದ್ದಿಯಾಗುವಷ್ಟು ವಿಸ್ಮಯಕಾರಿಯಾಗಿತ್ತು. ಮೈಕ್ ಭಾರೀ ಜನಮನಗೆದ್ದಿತು ಮತ್ತು ಸಂಶೋಧನೆಯ ವಿಷಯವಾಯಿತು.

ಹಲವಾರು ನಿಯತಕಾಲಿಕೆಗಳಿಗೆ ಇದನ್ನು ವರದಿ ಮಾಡಿತ್ತು. ಅನೇಕ ಪತ್ರಿಕೆಗಳಿಗೆ ಇದು ಮುಖಪುಟದ ವಿಷಯವಾಯಿತು. ಮೈಕ್ ಅನ್ನು 25 ಸೆಂಟ್ಸ್ ವೆಚ್ಚದಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಯಿತು.

“ಮೈಕ್ ದಿ ಹೆಡ್‌ಲೆಸ್ ಚಿಕನ್ ಡೇ” ಅನ್ನು 1999 ರಿಂದ ಕೊಲೊರಾಡೋದ ಫ್ರೂಟಾದಲ್ಲಿ ಪ್ರತಿ ಮೇ ತಿಂಗಳ ಮೂರನೇ ವಾರಾಂತ್ಯದಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ: Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

ಮೈಕ್ ನಿಂದ ಕೋಳಿ ಮಾಲೀಕ ತಿಂಗಳಿಗೆ ಸುಮಾರು 45,000 ಡಾಲರ್ ಆದಾಯ ಗಳಿಸಿದ. ಈ ಅದ್ಭುತ ಕೋಳಿ ಮೌಲ್ಯ ಆಗ 10,000 ಡಾಲರ್ ಆಗಿತ್ತು.

ಸಾವು ಹೇಗಾಯಿತು?

1947ರ ಮಾರ್ಚ್ ನಲ್ಲಿ ಜೋಳದ ತುಂಡು ಮೈಕ್ ನ ಗಂಟಲಲ್ಲಿ ಸಿಲುಕಿದ ನಂತರ ಅದು ಸಾವನ್ನಪ್ಪಿತು. ಪ್ರವಾಸದಿಂದ ಹಿಂದಿರುಗುವಾಗ ಲಾಯ್ಡ್ ಶುಚಿಗೊಳಿಸುವ ಸಿರಿಂಜ್‌ಗಳನ್ನು ಬಿಟ್ಟು ಬಂದಿದ್ದರಿಂದ ಮೈಕ್ ನನ್ನು ಬದುಕಿಸಲು ವಿಫಲರಾದರು.

Continue Reading

ಧಾರ್ಮಿಕ

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಗಳು ಹೀಗಿರಬೇಕು

ನಮ್ಮ ದೈನಂದಿನ ಜೀವನದಲ್ಲಿ ವಾಸ್ತು ಶಾಸ್ತ್ರದ (Vastu Tips) ಪ್ರಭಾವವು ಗಾಢವಾಗಿದೆ. ಮನೆ ಅಥವಾ ಕಾರ್ಯಸ್ಥಳದೊಳಗೆ ಸರಿಯಾದ ವಸ್ತುಗಳನ್ನು ಸರಿಯಾದ ಸ್ಥಳಗಳಲ್ಲಿ ಇರಿಸಿದಾಗ ಅವು ಶಕ್ತಿಯ ಹರಿವನ್ನು ಸಮನ್ವಯಗೊಳಿಸುತ್ತವೆ. ಉತ್ತಮ ಆರೋಗ್ಯ, ಆರ್ಥಿಕ ಸ್ಥಿರತೆ ಮತ್ತು ಸಂತೋಷವನ್ನು ನೀಡುವ ಉಡುಗೊರೆಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದ್ದು, ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವಾಗ ಹೆಚ್ಚು ಚಿಂತೆ ಮಾಡದೇ ಇವುಗಳನ್ನು ಆಯ್ಕೆ ಮಾಡಬಹುದು.

VISTARANEWS.COM


on

By

Vastu Tips
Koo

ಉಡುಗೊರೆಗಳನ್ನು (Gift) ಸ್ವೀಕರಿಸುವುದು ಯಾರಿಗೆ ಇಷ್ಟವಿಲ್ಲ? ಪ್ರತಿಯೊಬ್ಬರೂ ಉಡುಗೊರೆ ನೀಡುವಾಗ ಅದು ತೆಗೆದುಕೊಳ್ಳುವವರ ಮನಕ್ಕೆ ಇಷ್ಟವಾಗುವಂತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಉಡುಗೊರೆಗಳು ಪ್ರೀತಿಯ ಶುದ್ಧ ಸೂಚಕವಾಗಿದೆ ಮತ್ತು ಅವು ಭಾವನಾತ್ಮಕ ಮತ್ತು ಆಂತರಿಕ ಮೌಲ್ಯವನ್ನು ಹೊಂದಿರುತ್ತದೆ. ಹೀಗಾಗಿ ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ಆಯ್ಕೆ ಮಾಡುವಾಗ ಯೋಚನೆ ಕಾಡುವುದು ಸಹಜ.

ನಾವು ಕೊಡುವ ಉಡುಗೊರೆಯು ಸ್ವೀಕರಿಸುವವರ ಜೀವನಕ್ಕೆ ಸಮೃದ್ಧಿ (prosperity), ಸಕಾರಾತ್ಮಕತೆ (positivity) ಮತ್ತು ಸಾಮರಸ್ಯವನ್ನು (harmony) ತರುವಂತೆ ಇರಬೇಕು ಎನ್ನುತ್ತದೆ ವಾಸ್ತುಶಾಸ್ತ್ರ (Vastu Tips). ಉಡುಗೊರೆಗಳನ್ನು ಆಯ್ಕೆ ಮಾಡಲು ವಾಸ್ತು ಶಾಸ್ತ್ರವು ಕೆಲವೊಂದು ಮಾರ್ಗದರ್ಶನವನ್ನು ನೀಡುತ್ತದೆ.

ವಾಸ್ತು ತತ್ತ್ವಗಳೊಂದಿಗೆ ಜೋಡಿಸಲಾದ ಉಡುಗೊರೆಯನ್ನು ಪ್ರೀತಿ ಪಾತ್ರರಿಗೆ ನೀಡಿದಾಗ ಇದು ಕೇವಲ ವಸ್ತುವನ್ನು ನೀಡುವುದಿಲ್ಲ. ಅದರೊಂದಿಗೆ ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ನೀಡುತ್ತೀರಿ.

ಸ್ವೀಕರಿಸುವವರ ಯೋಗಕ್ಷೇಮ ಮತ್ತು ಯಶಸ್ಸನ್ನು ಹೆಚ್ಚಿಸುವ ನಿರ್ದಿಷ್ಟ ಉಡುಗೊರೆಗಳನ್ನು ವಾಸ್ತು ಶಾಸ್ತ್ರವು ಸೂಚಿಸುತ್ತದೆ. ಈ ಉಡುಗೊರೆಗಳು ಯಾವುದೇ ಚಿಂತೆ ಇಲ್ಲದೆ ಆಯ್ಕೆ ಮಾಡಬಹುದು. ಇದು ಉಡುಗೊರೆ ಸ್ವೀಕರಿಸುವವರ ಪರಿಸರದಲ್ಲಿನ ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಜೀವನದ ವಿವಿಧ ಅಂಶಗಳಲ್ಲಿ ಅವರಿಗೆ ಅನುಕೂಲಕರವಾಗಿರುತ್ತದೆ.

ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ತರುವ 7 ಅದೃಷ್ಟದ ಉಡುಗೊರೆಗಳು

ಲಾಫಿಂಗ್ ಬುದ್ಧ

ಲಾಫಿಂಗ್ ಬುದ್ಧ ಅನೇಕರ ಕಚೇರಿ ಮತ್ತು ಮನೆಗಳಲ್ಲಿ ಕಂಡುಬರುವ ಜನಪ್ರಿಯ ಅಲಂಕಾರಿಕ ವಸ್ತುವಾಗಿದೆ. ಹರ್ಷಚಿತ್ತದ ವ್ಯಕ್ತಿ ಯಾವುದೇ ಜಾಗದಲ್ಲಿ ಸಂತೋಷವನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಫೆಂಗ್ ಶೂಯಿ ತತ್ತ್ವಗಳ ಪ್ರಕಾರ ರೋಮಾಂಚಕ ಮತ್ತು ಮಂಗಳಕರ ಶಕ್ತಿಯನ್ನು ಇದು ಸೃಷ್ಟಿಸುತ್ತದೆ.


ಗಣೇಶ ವಿಗ್ರಹ

ಗಣೇಶ ಹೊಸ ಆರಂಭ ಮತ್ತು ಯಶಸ್ಸಿನ ದೇವರು. ಗಣೇಶನ ಪ್ರತಿಮೆಯನ್ನು ನೀಡುವುದು ಉಡುಗೊರೆ ಸ್ವೀಕರಿಸುವವರಿಗೆ ಆಶೀರ್ವಾದವನ್ನು ಕೊಡುತ್ತದೆ. ಈ ಪ್ರತಿಮೆಯು ಶಕ್ತಿ, ಬುದ್ಧಿವಂತಿಕೆ ಮತ್ತು ಜೀವನದಲ್ಲಿ ಸವಾಲುಗಳನ್ನು ಜಯಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.


ಶ್ರೀ ಮೇರು ಯಂತ್ರ

ಮೇರು ಶ್ರೀ ಯಂತ್ರವು ತನ್ನ ಆರಾಧಕರಿಗೆ ಶಾಂತಿ, ಸಂತೋಷ, ಜನಪ್ರಿಯತೆ, ಶಕ್ತಿ, ಅಧಿಕಾರ, ಸಂಪತ್ತು, ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ. ಸಮರ್ಪಣೆ ಮತ್ತು ನಂಬಿಕೆಯಿಂದ ಇದನ್ನು ಪೂಜಿಸಿದರೆ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ.


ರಾಧಾ ಕೃಷ್ಣನ ವಿಗ್ರಹ

ಶುಭ ಸೂಚಕವಾಗಿ ರಾಧಾ ಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ನೀಡಬಹುದು. ಇದು ನಿಮ್ಮ ಜೀವನದಲ್ಲಿ ಆಳವಾದ ಶಾಂತಿ, ಸಮೃದ್ಧ ಪ್ರೀತಿ ಮತ್ತು ಬಲವಾದ ಸಮರ್ಪಣೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ವಾಸ್ತು ಆಮೆ

ಆಮೆಗಳು ಅದೃಷ್ಟ ಮತ್ತು ದೀರ್ಘಾಯುಷ್ಯವನ್ನು ಪ್ರತಿನಿಧಿಸುತ್ತವೆ. ಆದ್ದರಿಂದ, ಗಾಜಿನ ಅಥವಾ ಸ್ಫಟಿಕ ಆಮೆಯನ್ನು ಉಡುಗೊರೆಯಾಗಿ ನೀಡುವುದು ಅವರಿಗೆ ಮಾಡುವ ಯಾವುದೇ ಕೆಲಸದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ.

ಚೈಮ್ಸ್

ವಿಂಡ್ ಚೈಮ್ ಗಳು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ. ಅವುಗಳು ಅದೃಷ್ಟ, ಸಮೃದ್ಧಿ ಮತ್ತು ಪಾಲಿಸಬೇಕಾದ ನೆನಪುಗಳನ್ನು ಸಂಕೇತಿಸುತ್ತವೆ. ಅದರ ಸುಮಧುರ ರಾಗಗಳು ಮನಸ್ಸನ್ನು ಶಾಂತಗೊಳಿಸುತ್ತದೆ. ಉತ್ಸಾಹವನ್ನು ಹೆಚ್ಚಿಸುತ್ತವೆ. ಮನೆಗೆ ಧನಾತ್ಮಕ ಶಕ್ತಿ ಮತ್ತು ಶಾಂತಿಯುತ ವಾತಾವರಣವನ್ನು ತುಂಬುತ್ತದೆ.

ಇದನ್ನೂ ಓದಿ: Vastu Tips: ಆರ್ಥಿಕ ಪ್ರಗತಿಗೆ ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ


ಗೋಮತಿ ಚಕ್ರ ವೃಕ್ಷ

ಗೋಮತಿ ಚಕ್ರವನ್ನು ಉಡುಗೊರೆಯಾಗಿ ನೀಡುವುದು ಆಧ್ಯಾತ್ಮಿಕ ಮಹತ್ವದಿಂದ ತುಂಬಿದ ಅರ್ಥಪೂರ್ಣ ಸೂಚಕವಾಗಿದೆ. ಗೋಮತಿ ನದಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಪವಿತ್ರ ಕಲ್ಲುಗಳು ಸಕಾರಾತ್ಮಕ ಶಕ್ತಿ ಮತ್ತು ರಕ್ಷಣಾತ್ಮಕ ಗುಣಗಳಿಂದ ಮೌಲ್ಯಯುತವಾಗಿವೆ. ಗೋಮತಿ ಚಕ್ರವನ್ನು ನೀಡುವುದು ಸ್ವೀಕರಿಸುವವರಿಗೆ ಸಮೃದ್ಧಿ ಮತ್ತು ಅದೃಷ್ಟವನ್ನು ಆಶೀರ್ವಾದಿಸುತ್ತದೆ.

Continue Reading

ಬೆಳಗಾವಿ

Belagavi News: ಬೆಳಗಾವಿಯಲ್ಲಿ ಮೇ 29ರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವ

Belagavi News: ಬೆಳಗಾವಿಯ ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11 ನೇ ವಾರ್ಷಿಕ ಮಹೋತ್ಸವವು ಇದೇ ಮೇ 29 ರಿಂದ ಮೇ 31 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

VISTARANEWS.COM


on

11th Annual Mahotsav of Sri Annapurneswari Temple in Belagavi from 29th May
Koo

ಬೆಳಗಾವಿ: ಬೆಳಗಾವಿಯ ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವವು ಇದೇ ಮೇ 29 ರಿಂದ ಮೇ 31 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ (Belagavi News) ತಿಳಿಸಿದ್ದಾರೆ.

ಇದನ್ನೂ ಓದಿ: Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

ಮೇ 29 ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ಸಹಿತ ಪರಿವಾರ ದೇವರಿಗೆ ಕಲಶಾಭಿಷೇಕ, 8 ಕ್ಕೆ ನಾಗದೇವರ ಬಿಂಬ ಪ್ರತಿಷ್ಠಾಪನೆ, ಕಲಶಾಭಿಷೇಕ ಮಹಾಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸನ್ನ ಪೂಜೆ, ಪ್ರಸಾದ, ಸಂಜೆ 5 ರಿಂದ ರಂಗ ಪೂಜೆ ಶ್ರೀ ದೇವಿಯ ಪಲ್ಲಕ್ಕಿ- ಮೆರವಣಿಗೆ, ದೀಪೋತ್ಸವ ನಡೆಯಲಿದೆ.

ಮೇ 30 ರಂದು ಬೆಳಗ್ಗೆ 7 ಕ್ಕೆ ಸಂಪ್ರೋಕ್ಷಣೆ, ಅನ್ನಪೂರ್ಣೇಶ್ವರಿ ಯಾಗ, ಸುಬ್ರಮಣ್ಯ ದೇವರಿಗೆ ಆಶ್ಲೇಷ ಬಲಿ, 8.30 ಕ್ಕೆ ಮಹಾ ಚಂಡಿಕಾ ಯಾಗ, ಸಂಜೆ 6 ಕ್ಕೆ ಕೀರ್ತನಾಕಾರರಿಂದ ಕೀರ್ತನೆ, ವ್ಯಾಖ್ಯಾನ ನಡೆಯಲಿದೆ.

ಇದನ್ನೂ ಓದಿ: New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

ಮೇ 31 ರಂದು ಬೆಳಗ್ಗೆ 9 ಕ್ಕೆ ದೇವಿಗೆ ವಿಶೇಷ ಅಲಂಕಾರ, ಪೂಜಾರಾಧನೆ, 10 ಕ್ಕೆ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ 1 ರಿಂದ 3 ಗಂಟೆವರೆಗೆ ಮಹಾಪ್ರಸಾದ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಬೆಂಗಳೂರು

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Basavanagudi News : ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿರುವ (Dodda Ganapathi Temple) ಮಳಿಗೆಗಳಲ್ಲಿ ಪೂಜಾ ಸಾಮಗ್ರಿಗಳನ್ನು ಒನ್‌ ಟು ಡಬಲ್‌ ರೇಟ್‌ಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಭಕ್ತಾಧಿಗಳು ಹಾಗೂ ವ್ಯಾಪಾರಿಗಳ ನಡುವೆ ಗಲಾಟೆ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

VISTARANEWS.COM


on

By

Basavanagudi News
Koo

ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ (Basavanagudi News) ಭಕ್ತಾದಿಗಳು ಹಾಗೂ ಮಳಿಗೆ ವ್ಯಾಪಾರಿಗಳ ನಡುವೆ ಗಲಾಟೆ ನಡೆದಿದೆ. ದೇವಸ್ಥಾನದಲ್ಲಿರುವ (Dodda Ganapathi Temple) ಮಳಿಗೆಯಲ್ಲಿ ಪೂಜಾ ಸಾಮಗ್ರಿಗಳು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಕೆಲವು ತಿಂಗಳಿಂದ ಪೂಜಾ ಸಾಮಗ್ರಿಗಳ ಬೆಲೆ ಕೇಳಿ ಭಕ್ತಾದಿಗಳು ಶಾಕ್ ಆಗಿದ್ದರು. ಮನಸೋ ಇಚ್ಛೆ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಕೂಡ ಕೇಳಿಬಂದಿತ್ತು. ಹೂವು, ಹಣ್ಣು, ಕಡ್ಡಿ, ಕರ್ಪೂರ ಸೇರಿದ 70-80 ರೂಪಾಯಿಯ ಒಂದು ಸಣ್ಣ ಕಿಟ್ ಅನ್ನು ಬರೋಬ್ಬರಿ 150 ರೂಪಾಯಿಗೆ ಸೇಲ್ ಮಾಡಲಾಗುತ್ತಿದೆ. ಇದೊಂಥರಾ ಹಗಲು ದರೋಡೆ ಅಂದರೆ ತಪ್ಪಾಗಲ್ಲ.

ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಕ್ತಾಧಿಗಳು ಇದನ್ನೂ ಪ್ರಶ್ನಸಿದ್ದಾರೆ. ಈ ವೇಳೆ ಭಕ್ತರು ಹಾಗೂ ಮಳಿಗೆ ವ್ಯಾಪಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದಿದೆ. ಟೆಂಟರ್‌ಗೆ ಹೆಚ್ಚು ಹಣವನ್ನು ಕೊಟ್ಟಿದ್ದೀವಿ, ಹೀಗಾಗಿ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಿವಿ. ಮಾರುಕಟ್ಟೆಯಲ್ಲಿ ಹೂ-ತೆಂಗಿನಕಾಯಿ ದಿನಕ್ಕೊಂದು ದರ ಇರುತ್ತದೆ, ನಾವೇನು ಮಾಡೋಣ ಎಂದು ಮಳಿಗೆ ವ್ಯಾಪಾರಿಗಳು ವಾದವಾಗಿದೆ.

ಇತ್ತ 2 ಬಾಳೆಹಣ್ಣು, ತೆಂಗಿನಕಾಯಿ, ಅಗರಬತ್ತಿ, ಹೂವಿ ಇರುವು ಪೂಜಾ ಸಾಮಗ್ರಿಗೆ ಬರೋಬ್ಬರಿ 150-300 ರೂ. ವ್ಯಾಪಾರಿಗಳು ಭಕ್ತರಿಂದ ಪಡೆಯುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಭಕ್ತರು, ವ್ಯಾಪಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇದನ್ನು ಕೇಳಬೇಕಿದ್ದ ಮುಜರಾಯಿ ಕಣ್ಮುಚ್ಚಿ ಕುಳಿತಿದೆ. ಇದರ ಪರಿಣಾಮ ಭಕ್ತರ ಜೇಬು ಖಾಲಿ ಆಗುತ್ತಿದ್ದು, ವಿಧಿಯಿಲ್ಲದೆ ದುಬಾರಿ ಹಣ ತೆರಬೇಕಾಗುತ್ತಿದೆ.

ಇದನ್ನೂ ಓದಿ: Raichur News : ಸಾಲದ ಸುಳಿಗೆ ಸಿಲುಕಿದ ಸ್ನೇಹಿತೆಗೆ ಕೊಟ್ಟಳು 10 ತೊಲೆ ಬಂಗಾರ! ‘ಕಳ್ಳತನ’ ನಾಟಕವಾಡಿದ ಗೆಳತಿಯರು ಲಾಕ್‌

Theft Case : ಚಿನ್ನ ಕದಿಯಲು ಬಂದು ಮದುವೆ ಮನೆಯವರಿಂದ ಧರ್ಮದೇಟು ತಿಂದ ಕಳ್ಳ

ಚಿಕ್ಕಬಳ್ಳಾಪುರ: ಮದುವೆ ಮನೆಗೆ ಬಂದ ಕಳ್ಳನಿಗೆ (Theft Case ) ವರ ಹಾಗೂ ವಧುವಿನ ಕಡೆಯವರು ಭರಪೂರ ಉಡುಗೊರೆ ಕೊಟ್ಟಿದ್ದಾರೆ. ಮದುವೆ ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಮಹಿಳೆ ಬಳಿ ಚಿನ್ನದ ಸರ ಕದಿಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಕಳ್ಳನನ್ನು ಹಿಡಿದ ಮದುವೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಸಾಯಿಕೃಷ್ಣ ಫಂಕ್ಷನ್ ಹಾಲ್‌ನಲ್ಲಿ ಘಟನೆ ನಡೆದಿದೆ.

ಸರ ಕದ್ದ ಆರೋಪಿಯನ್ನು ಆಂದ್ರಪ್ರದೇಶದ ಮುಲ್ಲಮೋತುಕಪಲ್ಲಿ ಗ್ರಾಮದ ಪಿ. ನರೇಶ್ ಎಂದು ತಿಳಿದು ಬಂದಿದೆ. ಮದುವೆ ಮನೆಯಲ್ಲಿ ಮಹಿಳೆ ಬಟ್ಟೆ ಬದಲಿಸುವ ವೇಳೆ ನರೇಶ್ ಚಿನ್ನದ ಸರ ಕದಿಯಲು ಯತ್ನಿಸಿದ್ದ. ಆದರೆ ಇದನ್ನೂ ಗಮನಿಸಿದ ಮಹಿಳೆ ಕೂಡಲೇ ಕಿರುಚಾಡಿದ್ದು, ತಪ್ಪಿಸಿಕೊಂಡು ಓಡಾಡುತ್ತಿದ್ದ ನರೇಶ್‌ನನ್ನು ಹಿಡಿದು ಥಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೌರಿಬಿದನೂರು ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

ಬೆಂಗಳೂರು: ಸಾರಾಯಿಪಾಳ್ಯದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಖರ್ತನಾಕ್‌ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ರಿಯಾಝ್ ಖಾನ್ ಹಾಗು ವಸೀಂ ಫಿರೋಝ್ ಬಂಧಿತ ಆರೋಪಿಗಳು.

ಬೆಳಗಿನಿಂದ ಸಂಜೆ ತನಕ ಕೋಳಿ ಅಂಗಡಿಯಲ್ಲಿ ಕೋಳಿ ಕುಯ್ಯುವ ಕೆಲಸ ಮಾಡಿದರೆ, ರಾತ್ರಿಯಾದರೆ ಸಾಕು ಸುಲಿಗೆಗೆ ಇಳಿಯುತ್ತಿದ್ದರು. ಇತ್ತೀಚಿಗೆ ಸ್ಕೂಟರ್‌ನಲ್ಲಿ ಬಂದಿದ್ದ ಇವರಿಬ್ಬರು, ಅಮ್ಮೇಜಾನ್ ಎಂಬುವವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಅಮ್ಮೇಜಾನ್‌ ಅವರು ದೂರು ದಾಖಲಿಸಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿರುವ ಬಾಣಸವಾಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
PM Kisan Samman
ಕೃಷಿ18 mins ago

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

Nita Ambani
ವಾಣಿಜ್ಯ23 mins ago

Nita Ambani: ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ ರೂಪಾಯಿ!

Team India Coach
ಕ್ರೀಡೆ31 mins ago

Team India Coach: ಅಭಿಮಾನಿಗಳು ಬಯಸಿದರೂ ಕೋಚ್​ ಹುದ್ದೆಗೆ ಧೋನಿ ಅನರ್ಹ; ಕಾರಣವೇನು?

Sudha Murty
ಕರ್ನಾಟಕ35 mins ago

Sudha Murty: ಡಾ.ಮಂಜುನಾಥ್‌ ಗೆಲುವಿಗಾಗಿ ರಾಯರಿಗೆ ವಿಶೇಷ ಹರಕೆ ಹೊತ್ತ ಸುಧಾಮೂರ್ತಿ; ಏನದು?

Headless Chicken
ವಿಜ್ಞಾನ46 mins ago

Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

Monsoon 2024
ದೇಶ1 hour ago

Monsoon 2024: ಮುಂದಿನ 24 ಗಂಟೆಗಳಲ್ಲೇ ಮುಂಗಾರು ಪ್ರವೇಶ; ಕರ್ನಾಟಕ ಸೇರಿ ಎಲ್ಲೆಲ್ಲಿ ಮಳೆ?

Belagavi Tour
ಪ್ರವಾಸ2 hours ago

Belagavi Tour: ಬೆಳಗಾವಿಗೆ ಭೇಟಿ ನೀಡಿದಾಗ ಈ ಸ್ಥಳಗಳನ್ನು ನೋಡಲು ಮರೆಯಬೇಡಿ

AUS vs NAM
ಕ್ರೀಡೆ2 hours ago

AUS vs NAM: ನಮೀಬಿಯಾ ವಿರುದ್ಧ ಅಭ್ಯಾಸ ಪಂದ್ಯವಾಡಿದ ಆಸೀಸ್​ ತಂಡದ ಕೋಚಿಂಗ್​ ಸಿಬ್ಬಂದಿ

Dream Of Retired Couple
ಪ್ರವಾಸ2 hours ago

Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

KSET Results 2024
ಕರ್ನಾಟಕ2 hours ago

KSET Results 2024:‌ ಕೆ-ಸೆಟ್‌ ಪರೀಕ್ಷೆ ಫಲಿತಾಂಶ; ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌