prerane morning spiritual thoughts in kannada about education systemPrerane : ವಿದ್ಯಾಭ್ಯಾಸವೋ? ವಿದ್ಯಾಭಾಸವೋ? Vistara News
Connect with us

ಧಾರ್ಮಿಕ

Prerane : ವಿದ್ಯಾಭ್ಯಾಸವೋ? ವಿದ್ಯಾಭಾಸವೋ?

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿತ್ತು? ಹೇಗಿರಬೇಕಾಗಿತ್ತು? ಹೇಗಿದೆ ಎಂಬ ಕುರಿತ ಒಂದು ಚಿಂತನೆ ಇಲ್ಲಿದೆ.

VISTARANEWS.COM


on

prerane morning spiritual thoughts in kannada about education system
Koo
prerane morning spiritual thoughts in kannada

ನರಸಿಂಹ ಭಟ್ಟ
ಇಂದೇನು, ಹಿಂದೂ ಸಹ ನಮ್ಮ ದೇಶದಲ್ಲಿ ವಿದ್ಯಾಭ್ಯಾಸಕ್ಕೆ ಇನ್ನಿಲ್ಲದ ಪ್ರಾಶಸ್ತ್ಯವಿತ್ತು. ಹಿಂದೆ ಯಾವ ವಿಷಯದಲ್ಲಿ ಈ ಗೌರವಾದರಗಳನ್ನು ಕಾಣುತ್ತಿದ್ದೆವೋ ಅದೇ ವಿಷಯದಲ್ಲಿ ಇಂದೂ ಕಾಣುತ್ತಿದ್ದೇವೆ ಎಂಬುದು ಭಾರತಕ್ಕಿರುವ ವಿಶ್ವಮಟ್ಟದ ಸ್ಥಾನವನ್ನು ತೋರಿಸುವುದು. ಇದನ್ನು ಉಳಿಸಿ ಬೆಳೆಸಿಕೊಂಡು ಬಂದ ನಮ್ಮೆಲ್ಲ ಪೂರ್ವಸೂರಿಗಳಿಗೆ ನತಮಸ್ತಕರಾಗಬೇಕು. ಆದರೆ ವಿಷಯ ಹಾಗೆಯೇ ಉಳಿದಿದೆಯೇ? ಉಳಿಸಿದ್ದೇವೆಯೇ? ಇಂದು ನಾವು ಮಾಡುವ ವಿದ್ಯಾಭ್ಯಾಸವು ವಿದ್ಯಾಭಾಸವಾಗುತ್ತಿದೆ ಎಂದರೆ ಆಭಾಸವಾಗಲಾರದು.

ಇದಕ್ಕೆ ಕಾರಣವಿಷ್ಟೇ- ಜೀವನ ಎಂದರೇನು? ಜೀವನದ ಗುರಿಯೇನು? ಎಂಬುದನ್ನು ಮಹರ್ಷಿಗಳು ಮನಗಂಡರು. ಆ ದೃಷ್ಟಿ ಮರೆಯಾಗಿರುವುದೇ ಈ ಅಭಾಸಕ್ಕೆಲ್ಲ ಕಾರಣ.

ನಾವೆಲ್ಲರೂ ಒಂದಾನೊಂದು ಕಾಲದಲ್ಲಿ ಭಗವಂತನ ಭಾಗವೇ ಆಗಿದ್ದೆವು. ಅವನ ಸಂಕಲ್ಪದಂತೆ ಜೀವಭಾವ ತಾಳಿ ಅಲ್ಲಿಂದ ಬೇರ್ಪಟ್ಟು ಪ್ರಕೃತಿ ಕ್ಷೇತ್ರಕ್ಕೆ ಇಳಿದೆವು. ಅಂದಿನಿಂದ ನಮ್ಮ ಜೀವನಯಾತ್ರೆಯು ಆರಂಭವಾಯಿತು. ಅದು ಮುಂದುವರಿದು ಮತ್ತೆ ಆ ಯಾತ್ರೆಯು ಅಲ್ಲೇ ಪರ್ಯವಸಾನವಾಗಬೇಕು. ಇದನ್ನೇ ಜೀವನ ಎಂದರು. ಜೀವನದ ಗುರಿಯೂ ಅದೇ- ಎಲ್ಲಿಂದ ಜೀವನ ಆರಂಭವಾಯಿತೋ ಅಲ್ಲಿಗೇ ತಲುಪುವುದು. ಮಧ್ಯದಲ್ಲಿ ಪ್ರಕೃತಿಯ ರಮಣೀಯತೆಯನ್ನು ಸವಿಯುತ್ತಾ ಇಲ್ಲೇ ಇರದೆ ಮೂಲಕ್ಕೆ ಸಾಗಬೇಕು. ಅದಕ್ಕಾಗಿ ವಿದ್ಯಾಭ್ಯಾಸ ನಮಗೆ ಬೇಕು. ನಮ್ಮ ಮೂಲಕ್ಕೆ ಸಾಗುವಂತಿದ್ದರೆ ಅದು ವಿದ್ಯಾಭ್ಯಾಸ. ಅದಿಲ್ಲದಿದ್ದರೆ ವಿದ್ಯಾಭಾಸ. ಈ ನೇರದಲ್ಲಿ ಇಂದು ಜ್ಞಾನಾರ್ಜನೆಯು ಸಾಗುತ್ತಿದೆಯೇ?

ಹಿಂದಿನ ಕಾಲದಲ್ಲಿನ ಜೀವನವಿಧಾನ ಹೇಗಿತ್ತು ಎಂಬುದನ್ನು ರಾಷ್ಟ್ರಕವಿ ಕಾಳಿದಾಸ ರಘುವಂಶದ ಮಹಾರಾಜರನ್ನು ವರ್ಣಿಸುವಾಗ ಹೀಗೆ ಹೇಳುತ್ತಾನೆ;
ಶೈಶವೇ ಅಭ್ಯಸ್ತವಿದ್ಯಾನಾಂ ಯೌವನೇ ವಿಷಯೈಷಿಣಾಂ |
ವಾರ್ಧಕೇ ಮುನಿವೃತ್ತೀನಾಂ ಯೋಗೇನ ಅಂತೇ ತನುತ್ಯಜಾಮ್ ||

ಬಾಲ್ಯದಲ್ಲಿ ಚೆನ್ನಾಗಿ ವಿದ್ಯೆಯನ್ನು ಗಳಿಸಿ, ಅದರ ಚೌಕಟ್ಟಿನಲ್ಲಿ ಸುಖಭೋಗವನ್ನು ಅನುಭವಿಸಿ, ಮುಪ್ಪಿನಲ್ಲಿ ಜೀವನದ ತೃಪ್ತಭಾವದಿಂದ ಮೌನವಾಗಿ,ಯೋಗಸಮಾಧಿಯಿಂದ ತಮ್ಮ ದೇಹತ್ಯಾಗವನ್ನು ಮಾಡುತ್ತಿದ್ದರು. ತಮ್ಮ ಒಂದು ಜನ್ಮದ ಜೀವಿತಾವಧಿಯಲ್ಲೇ ಜೀವನದ ಹಲವು ಮಜಲುಗಳನ್ನು ಪೂರೈಸಿ ಪರಮಲಕ್ಷ್ಯವನ್ನೂ ಹೊಂದುತ್ತಿದ್ದರು. ಇದೇ ಜೀವನ. ಇದಕ್ಕಾಗಿಯೇ ವಿದ್ಯಾಭ್ಯಾಸ.

ಆದರೆ ಇಂದು ಬಾಲ್ಯದಲ್ಲಿ ಗಳಿಸಬೇಕಾದ ವಿದ್ಯೆಯನ್ನು ಗಳಿಸದೇ, ವಿದ್ಯೆಯ ಬಲವಿಲ್ಲದ್ದರಿಂದ ಧನಾರ್ಜನೆಯನ್ನೂ ಸರಿಯಾಗಿಮಾಡದೇ, ಯಾವುದೇ ಐಹಿಕ ವಿಷಯಲಾಲಸೆಯನ್ನು ಪೂರೈಸದೇ, ಮೂರನೇ ಅವಸ್ಥೆಯಲ್ಲಿ ತಪಸ್ಸನ್ನೂ ಮಾಡದಿದ್ದರೆ, ನಾಲ್ಕನೇ ಅವಸ್ಥೆಯಲ್ಲಿ ಇನ್ನೇನು ಮಾಡಲು ಸಾಧ್ಯ!! ಜೀವನದ ಯಾವುದೇ ಅವಸ್ಥೆಯಲ್ಲೂ ಸುಖವನ್ನು ಅನುಭವಿಸದೇ ಕೊನೆಗೆ ದುಃಖದಿಂದ ಉಸಿರನ್ನು ಬಿಡುವ ಸಂದರ್ಭ ಇಂದು ನಮ್ಮ ಪಾಲಿನದ್ದಾಗಿದೆ.

ಸುಬ್ರಹ್ಮಣ್ಯ ಸೋಮಯಾಜಿ ಅವರ ಈ ಪ್ರವಚನವನ್ನೂ ಕೇಳಿ.

ಇಂದು ಎಲ್ಲೆಲ್ಲೂ ಶಿಕ್ಷಣವು ಒಂದು ವೃತ್ತಿಯನ್ನು ಗುರಿಯಾಗಿಸಿಕೊಂಡಿದೆ. ವೃತ್ತಿಯು ಕೇವಲ ಧನ ಸಂಪಾದನೆಯ ಸಾಧನವಾಗಿದೆ. ಪ್ರಸ್ತುತಕಾಲದಲ್ಲಿಪೂರ್ಣಜೀವನದ ಶಿಕ್ಷಣಕ್ಕೆ ಅಷ್ಟಾಗಿ ಬೆಂಬಲವಾಗಲೀ, ಪ್ರೋತ್ಸಾಹವಾಗಲಿ ಸಿಗುತ್ತಿಲ್ಲ. ಪ್ರಾಚೀನ ಶಿಕ್ಷಣದಲ್ಲಿ ಯಾವೆಲ್ಲ ಮೌಲ್ಯಗಳು ಪಾಠ್ಯಕ್ರಮದಲ್ಲಿ ಹಾಸುಹೊಕ್ಕಾಗಿ ಇತ್ತೋ ಅದನ್ನು ಇಂದು ಪಠ್ಯೇತರ ಶಿಕ್ಷಣವಾಗಿ ಮಕ್ಕಳಿಗೆ ಬೋಧಿಸುವ ಕಾರ್ಯ ವಿರಳವಾಗಿ ಕಾಣುವಂತಾಗಿರುವುದು ವಿಪರ್ಯಾಸವೇ ಸರಿ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

‘ಜ್ಞಾನ’ ವೆಂಬುದು ಪುಸ್ತಕದ ರಟನವಲ್ಲ. ಜ್ಞಾನದ ಸ್ವರೂಪವೇ ಬೇರೆ. ಪುಸ್ತಕದ ವರ್ಣಮಾಲೆಯನ್ನು ರಟನಮಾಡುವುದೇ ವಿದ್ಯಾಭ್ಯಾಸವಾಗಿದ್ದರೆ ಎಲ್ಲರೂ ಜ್ಞಾನಿಗಳಾಗುತ್ತಿದ್ದರು. ಇಂದು ಶಿಕ್ಷಣಕ್ಕಾಗಿ ವಿಶೇಷ ಶ್ರಮ ವಹಿಸುತ್ತಿದ್ದರೂ, ಋಷಿಗಳ ಮಟ್ಟಕ್ಕೇರಿ ವಿದ್ಯಾಸ್ವರೂಪವನ್ನು ಅರ್ಥಮಾಡಿಕೊಂಡಾಗ ಇದು ನೆಮ್ಮದಿಯ ಜೀವನಕ್ಕೆ ಬೇಕಾದ ವಿದ್ಯೆಯಲ್ಲ ಎಂಬುದು ಅರಿವಾಗುತ್ತದೆ. ‘ವಿದ್ ಜ್ಞಾನೇ, ಯಾ ಪ್ರಾಪಣೇ’ ಯಾವುದು ಜ್ಞಾನರೂಪೀ ಭಗವಂತನಸಾಕ್ಷಾತ್ಕಾರಕ್ಕೆ ಸಾಧನವಾಗುವುದೋ ಅದೇ ವಿದ್ಯೆ.ಅದರ ಅಧ್ಯಯನವೇ ನಿಜವಾದ ವಿದ್ಯಾಭ್ಯಾಸ, ಉಳಿದದ್ದು ವಿದ್ಯಾಭಾಸವೇ ಸರಿ.

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಧಾರ್ಮಿಕ

Prerane : ಕನ್ಯೆ ಎಂದರೆ ಯಾರು? ಈ ಪದಕ್ಕಿರುವ ಮಹತ್ವವೇನು?

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಕನ್ಯೆ ಪದದ ಮಹತ್ವವನ್ನು ತಿಳಿಸುವ ಲೇಖನ ಇಲ್ಲಿದೆ.

VISTARANEWS.COM


on

Edited by

prerane kanya spirituality women
Koo
prerane

Narsimha Bhatt

ನರಸಿಂಹ ಭಟ್ಟ
ಅನೇಕ ಸಹಸ್ರಮಾನಗಳಿಂದಲೂ ಭಾರತೀಯ ಸಂಸ್ಕೃತಿಯು ವಿಶಿಷ್ಟಸ್ಥಾನವನ್ನು ಪಡೆದುಕೊಂಡಿದೆ. ಅದಕ್ಕೆ ಕಾರಣ ಪ್ರಕೃತಿ. ‘ದ್ವಿಧಾ ಕೃತ್ವಾ ಆತ್ಮನೋ ದೇಹಮ್ ಅರ್ಧೇನ ಪುರುಷೋಽಭವತ್ ಅರ್ಧೇನ ನಾರೀ’ ಎಂದು ಉಪನಿಷತ್ತು ಕೂಡಾ ಪ್ರಕೃತಿಯ ಪ್ರಾಧಾನ್ಯವನ್ನು ಪ್ರತಿಪಾದಿಸುತ್ತದೆ. ಪ್ರಕೃತಿ ಇಲ್ಲದೆ ಪುರುಷನಿಗೆ ಚೈತನ್ಯವಿಲ್ಲ. ಆದ್ದರಿಂದ ನಮ್ಮ ಪರಂಪರೆಯೂ ಕೂಡಾ ಪ್ರಕೃತಿಗೆ ಚೈತನ್ಯದಾಯಿತ್ವವನ್ನು ಪ್ರತಿಪಾದಿಸುತ್ತದೆ. ಈ ಪ್ರಕೃತಿಯು ನಾನಾ ದೆಶೆಯನ್ನು ಪಡೆಯುತ್ತದೆ. ಅವುಗಳಲ್ಲಿ ಮೊದಲನೆಯದೇ ‘ಕನ್ಯಾ’ ಎಂದು. ಆದಕಾರಣ ಕನ್ಯೆಯ ಸ್ವರೂಪ ಸ್ವಭಾವ ಮತ್ತು ಅದರ ಕಾರ್ಯಕ್ಷೇತ್ರವನ್ನು ಅನುಸಂಧಾನ ಮಾಡಬೇಕಾಗಿದೆ.

‘ಕನ –ದೀಪ್ತೌ’ ಧಾತುವಿಗೆ ‘ಯಕ್’ ಎಂಬ ಉಣಾದಿಪ್ರತ್ಯಯವನ್ನು ಸೇರಿಸಿದಾಗ ಕನ್ಯಾ ಎಂಬ ಶಬ್ದವು ಕುಮಾರೀ ಎಂಬ ಅರ್ಥವನ್ನು ಕೊಡುತ್ತದೆ. ‘ಕನ್ಯಾಯಾಃ ಕನೀನ ಚ’ ಎಂಬ ಪಾಣಿನಿ ಸೂತ್ರಪ್ರಕಾರವಾಗಿ ಇಲ್ಲಿ ‘ಙೀಷ್’ ಎಂಬ ಸ್ತ್ರೀ ಪ್ರತ್ಯಯದ ಬದಲಾಗಿ ‘ಟಾಪ್’ ಎಂಬ ಪ್ರತ್ಯಯವು ಬರುತ್ತದೆ. ಕನ್ಯಾ ಶಬ್ದವು ಹನ್ನೆರಡು ರಾಶಿಗಳಲ್ಲಿ ಒಂದಾಗಿಯೂ ಮತ್ತು ಒಂದು ಬಗೆಯ ಓಷಧಿ ಎಂಬ ಅರ್ಥವನ್ನೂ ಸುತಾ ಮೊದಲಾದ ಅರ್ಥಗಳಲ್ಲಿಯೂ ಬಳಕೆಯಲ್ಲಿದೆ.

ವಿಶೇಷವಾಗಿ ಕನ್ಯಾ ಶಬ್ದಕ್ಕೆ ದೀಪ್ತಿಮತೀ-ಕಾಂತಿ ಉಳ್ಳವಳು ಎಂಬ ಅರ್ಥವನ್ನು ನಾವಿಲ್ಲಿ ತೆಗೆದುಕೊಳ್ಳೋಣ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರದ್ಧಾಳುಗಳಾದ ನಾವು ಪ್ರತಿದಿನ ಬೆಳಗ್ಗೆ ಎದ್ದು ಈ ಶ್ಲೋಕವನ್ನು ಪಠಿಸುತ್ತೇವೆ;
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ |
ಪಂಚಕನ್ಯಾಃ ಸ್ಮರೇನ್ನಿತ್ಯಂ ಮಹಾಪಾತಕನಾಶನಮ್ ||

ಎಂದು. ಈ ಕನ್ಯೆಯರು ನಮಗೆ ಆದರ್ಶರು. ಯಾಕೆ ಇಷ್ಟು ಆದರ್ಶರು? ಎಂಬುದಕ್ಕೆ ಅಷ್ಟಾಂಗಯೋಗ ವಿಜ್ಞಾನಮಂದಿರದ ಸಹಜಾಧ್ಯಕ್ಷರೂ ಯೋಗಿಗಳೂ ಆದ ಶ್ರೀರಂಗ ಮಹಾಗುರುಗಳು ಇವರ ಕನ್ಯಾ ಶ್ರೇಷ್ಠತ್ವವನ್ನು ವಿವರಿಸಿರುವುದನ್ನು ನೋಡಿದರೆ ಅವರ ಮೇಲೆ ನಮ್ಮ ಗೌರವ ಇಮ್ಮಡಿಯಾಗುವುದು. “ಸಾಮಾನ್ಯವಾಗಿ ವಿವಾಹದ ಅನಂತರದಲ್ಲಿ ಕನ್ಯೆಯರ ದೀಪ್ತಿಯು ನಶಿಸುತ್ತಾ ಹೋಗುತ್ತದೆ. ಆದರೆ ಅಹಲ್ಯಾದಿ ಈ ಕನ್ಯೆಯರ ಕಾಂತಿಯು ದಿನದಿಂದ ದಿನಕ್ಕೆ ದೇದೀಪ್ಯಮಾನವಾಗಿ ಹೋಗುತ್ತಿತ್ತು. ಇದಕ್ಕಾಗಿಯೇ ಇವರು ಪ್ರಾತಃಸ್ಮರಣೀಯರು. ಯಾರು ಆತ್ಮ ದೀಪ್ತಿಯ ಕಡೆಗೆ ಆಕರ್ಷಿಸುತ್ತಾರೋ ಅವರು ಪ್ರಾತಃಸ್ಮರಣೀಯರಾಗುತ್ತಾರೆ” ಎಂಬುದಾಗಿ. ಆದ್ದರಿಂದಲೇ ಭಾರತೀಯ ಪರಂಪರೆಯು ಕನ್ಯೆಗೆ ಅನುಪಮ ಮರ್ಯಾದೆಯನ್ನು ಕೊಟ್ಟಿದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಭಾರತೀಯರ ವಿವಾಹ ಸಂದರ್ಭದಲ್ಲಿ ಈ ವಿಷಯ ಅತ್ಯಂತ ಸ್ಪಷ್ಟವಾಗುತ್ತದೆ. ಅಲ್ಲಿ ಕನ್ಯೆಯ ತಂದೆಯಾದವನು ಈ ರೀತಿಯಾಗಿ ಸಂಕಲ್ಪ ಮಾಡುತ್ತಾನೆ. “ಲಕ್ಷ್ಮೀರೂಪಾಮ್ ಇಮಾಂ ಕನ್ಯಾಂ ಶ್ರೀಧರರೂಪಿಣೇ ವರಾಯ ಪ್ರದಾಸ್ಯಾಮಿ’ʼ ಎಂದು. ಕನ್ಯೆಯಲ್ಲಿ ಲಕ್ಷ್ಮಿಯನ್ನೋ ಪಾರ್ವತಿಯನ್ನೋ ಸರಸ್ವತಿಯನ್ನೊ ಭಾವಿಸುತ್ತಾರೆ. ಮತ್ತು ಎಲ್ಲಿ ಸ್ತ್ರೀಯರಿಗೆ ಸಮಾಜವು ಗೌರವಿಸುವುದೋ ಅಲ್ಲಿ ಸಕಲ ದೇವತೆಗಳೂ ನಲಿದು ನರ್ತಿಸುತ್ತಾರೆ. ಈ ಕಾರಣದಿಂದಲೇ ತಾಯಿಗೆ ಮೊದಲ ಪೂಜೆ ಸಲ್ಲುತ್ತದೆ; “ಮಾತೃದೇವೋ ಭವ | ಲಕ್ಷ್ಮೀನಾರಾಯಣಾಭ್ಯಾಂ ನಮಃ ಉಮಾಮಹೇಶ್ವರಾಭ್ಯಾಂ ನಮಃ ವಾಣೀವಿಧಾತೃಭ್ಯಾಂ ನಮಃ ಅರುಂಧತೀವಸಿಷ್ಠಾಭ್ಯಾಂ ನಮಃ” ಇತ್ಯಾದಿಯಾಗಿ. ಕೊನೆಯದಾಗಿ ಹೇಳುವುದಾರೆ ಕಾಂತಿಮತ್ವ ಮತ್ತು ಆತ್ಮದೀಪ್ತಿಕರ್ಷಣದಂತಹ ಅನೇಕ ಸದ್ಗುಣಗಳ ಗಣಿಯಾಗಿರುವುದರಿಂದ ಕನ್ಯೆಗೆ ಮಹತ್ವ ಬಂದಿದೆ.

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

Continue Reading

ದೇಶ

Sharada Devi Idol: ತಿತ್ವಾಲ್‌ ಶಾರದಾ ದೇವಿ ದೇಗುಲಕ್ಕೆ ಶೃಂಗೇರಿ ವಿಧುಶೇಖರ ಭಾರತೀ ಶ್ರೀಗಳ ಭೇಟಿ

ಜನವರಿ 24ರಂದು ಶೃಂಗೇರಿಯಿಂದ ಹೊರಟಿದ್ದ ಪಂಚಲೋಹದ ಶಾರದಾಂಬೆ ಮೂರ್ತಿಯ ರಥಯಾತ್ರೆಗೆ ಶೃಂಗೇರಿಯ ಗುರುತ್ರಯರು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು.

VISTARANEWS.COM


on

Edited by

vidhushekhara bharathi in thitwal
Koo

ಚಿಕ್ಕಮಗಳೂರು: ತಿತ್ವಾಲ್‌ನಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಶಾರದಾಂಬೆ ದೇವಾಲಯಕ್ಕೆ (sharadamba temple) ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಶ್ರೀಗಳು (Sri Vidhushekhara Bharati) ಭೇಟಿ ನೀಡಿ ಪೂಜೆ ಸಲ್ಲಿಸಿದರು.

ತಿತ್ವಾಲ್‌ನಲ್ಲಿದ್ದ ಪುರಾತನ ಶಾರದಾಂಬಾ ದೇವಾಲಯ ಪಾಳುಬಿದ್ದಿತ್ತು. ಇದು ಪಾಕ್ ಆಕ್ರಮಿತ ಪ್ರದೇಶದಲ್ಲಿದೆ. ಇಲ್ಲಿನ ಶಾರದಾಂಬಾ ದೇವಾಲಯವನ್ನು ನವೀಕರಣ ಮಾಡಲಾಗಿದ್ದು, 75 ವರ್ಷಗಳ ಬಳಿಕ ಇಲ್ಲಿ ಶಾರದಾಂಬೆ ಮೂರ್ತಿಯ ಪ್ರತಿಷ್ಠಾಪನೆಯಾಗಿದೆ.

ಜನವರಿ 24ರಂದು ಶೃಂಗೇರಿಯಿಂದ ಹೊರಟಿದ್ದ ಪಂಚಲೋಹದ ಶಾರದಾಂಬೆ ಮೂರ್ತಿಯ ರಥಯಾತ್ರೆಗೆ ಶೃಂಗೇರಿಯ ಗುರುತ್ರಯರು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು. ಶೃಂಗೇರಿಯಿಂದ 4000 ಕಿ.ಮೀ. ದೂರದಲ್ಲಿರುವ ತಿತ್ವಾಲ್‌ನ ದೇವಾಲಯವನ್ನೂ ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದರು ಎಂಬ ಇತಿಹಾಸ ಇದೆ. ವಿಶೇಷ ವಿಮಾನದಲ್ಲಿ ಕಾಶ್ಮೀರ ತಲುಪಿ, ಅಲ್ಲಿಂದ ತಿತ್ವಾಲ್‌ಗೆ ಭೇಟಿ ನೀಡಿದ ವಿಧುಶೇಖರ ಭಾರತೀ ಶ್ರೀಗಳಿಂದ ಶಾರದಾಂಬೆಗೆ ವಿಶೇಷ ಪೂಜೆ ನೆರವೇರಿತು.

ಇದನ್ನೂ ಓದಿ: Sharada Devi Idol: ಶೃಂಗೇರಿಯಿಂದ ತೀತ್ವಾಲ್‌ನತ್ತ ಹೊರಟಿದ್ದಾಳೆ ʻಕಾಶ್ಮೀರ ಪುರವಾಸಿನಿʼ; ಮಾ. 24ರಂದು ಪ್ರತಿಷ್ಠಾಪನೆ

Continue Reading

ಧಾರ್ಮಿಕ

ತಾತಯ್ಯ ತತ್ವಾಮೃತಂ : ನಿನ್ನ ನಾಮದ ಬಲವೊಂದಿದ್ದರೇ ಸಾಕೋ…!

ಅವಸಾನ ಕಾಲ ಎಂದರೆ ಮರಣಕಾಲದ ಸಮಯದಲ್ಲಿ ಹಾದಿಯನ್ನು ತೋರುತ್ತದೆ ನಾಮಸ್ಮರಣೆ ಎನ್ನುತ್ತಿದ್ದಾರೆ ಶ್ರೀ ಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ. ಎಂ.ಆರ್‌. ಜಯರಾಮ್‌. ತಾತಯ್ಯರ ವಚನಗಳ ಒಳಾರ್ಥವನ್ನು ತಿಳಿಸುವ ಅವರ ಅಂಕಣ ಬರಹ ʻತಾತಯ್ಯ ತತ್ವಾಮೃತಂʼ ಇಲ್ಲಿದೆ.

VISTARANEWS.COM


on

Edited by

tatayya kaivara narayanappa
Koo

“ನಿನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೇ ಸಾಕೋ” ಎಂದು ದಾಸಶ್ರೇಷ್ಠರಾದ ಪುರಂದರದಾಸರು ಪರಮಾತ್ಮನ ನಾಮಸ್ಮರಣೆಯ ಮಹತ್ವವನ್ನು ಸಾರಿ ಹೇಳಿದ್ದಾರೆ. ಹುಟ್ಟು ಸಾವುಗಳೆಂಬ ಭವರೋಗವನ್ನು ಪರಿಹರಿಸುವ ಶಕ್ತಿ ಪರಮಾತ್ಮನ ನಾಮಸ್ಮರಣೆಗೆ ಇದೆ. ನಾಮಸ್ಮರಣೆಯ ಮಹಿಮೆಯನ್ನು ತಮ್ಮ ಕೀರ್ತನೆಯಲ್ಲಿ ಕೈವಾರದ ತಾತಯ್ಯನವರು ಹೀಗೆ ಹೇಳಿದ್ದಾರೆ.
“ಆತ್ಮಧ್ಯಾನಿಸೋ ಮನುಜ ಹರಿಪುಣ್ಯನಾಮ
ಬಲವಂತವಾದ ಭವಹರ ಮಾಡೋ ನಾಮ”
ಎಂದಿದ್ದಾರೆ.

kaivara thathayya

mr jayaram

ಆತ್ಮದಲ್ಲಿ ಪರಮಾತ್ಮನ ಪುಣ್ಯವಾದ ನಾಮಸ್ಮರಣೆಯನ್ನು ಮಾಡು, ಇದು ಎಷ್ಟು ಪ್ರಭಾವಶಾಲಿಯಾದದು ಎಂದರೆ ಎಷ್ಟೋ ಸಾವಿರಾರು ವರ್ಷಗಳಿಂದ ಇರುವ ಹುಟ್ಟುಸಾವಿನ ಚಕ್ರವನ್ನೇ ನಾಶ ಮಾಡಿ, ಭವಹರ ಮಾಡುವ ಶಕ್ತಿ ನಾಮಸ್ಮರಣೆಗೆ ಇದೆ ಎನ್ನುತ್ತಾರೆ ತಾತಯ್ಯನವರು. ನಾಮಸ್ಮರಣೆ ಮಾಡು ಎಂದು ಹೇಳಿ ತಾತಯ್ಯನವರು ಸುಮ್ಮನಾಗುವುದಿಲ್ಲ. ನಮಗೆ ಅಂತರಂಗದಲ್ಲಿ ಮಾಡುವ ನಾಮಸ್ಮರಣೆಯ ಮಹಿಮೆಯನ್ನು ಅರ್ಥಮಾಡಿಸಲು ಉದಾಹರಣೆಯ ಸಹಿತವಾಗಿ ತಿಳಿಸಿಕೊಡುತ್ತಾರೆ.

ಘೋರಪಾತಕ ಅಜಾಮಿಳನ ಸಲಹಿದ ನಾಮ
ವಾಲ್ಮೀಕಿಮುನಿಗೆ ವರಕೊಟ್ಟ ನಾಮ
ದಾಸಿ ಮಗನಿಗೆ ತನ್ನ ಮಹಿಮೆ ತೋರಿದ ನಾಮ
ದ್ರೌಪದಿಯ ಮಾನಭಂಗ ಕಾಯ್ದ ನಾಮ||

ಆಜಾಮಿಳನು ಮಾಡಿರುವ ಪಾಪಗಳನ್ನು ಕಂಡು ತಾತಯ್ಯನವರು ಅವನನ್ನು ಘೋರಪಾತಕ ಎಂದಿದ್ದಾರೆ. ಭಾಗವತದ ಆರನೇಯ ಸ್ಕಂದದಲ್ಲಿ ಬರುವ ಆಜಾಮಿಳನ ಕಥೆಗೆ ಬಹಳ ಮಹತ್ವವಿದೆ. ಅಜಾಮಿಳನು ತಂದೆ, ತಾಯಿ ಮತ್ತು ಹೆಂಡತಿಯನ್ನು ತ್ಯಜಿಸಿ, ಅನ್ಯಸ್ತ್ರೀಯ ಸಂಪರ್ಕವನ್ನು ಮಾಡಿ, ದುರಾಚಾರದಿಂದ ಮಾಡಬಾರದ ಪಾಪಗಳನ್ನು ಮಾಡಿರುತ್ತಾನೆ. ಕೊನೆಗೆ ತನ್ನ ಮರಣದ ಸಂದರ್ಭದಲ್ಲಿ ಪರಮಾತ್ಮನ ನಾಮಸ್ಮರಣೆಯಿಂದ ಕೂಡಿದ ಮಗನ ಹೆಸರನ್ನು ಕರೆದು ಮುಕ್ತಿಯನ್ನು ಹೊಂದುತ್ತಾನೆ. ಇದರಿಂದ ನಮಗೆ ತಿಳಿಯುವುದೆನೆಂದರೆ ಪರಮಾತ್ಮನಿಗೂ, ಪರಮಾತ್ಮನ ನಾಮಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಹೃದಯದ ಭಾವನೆಗೆ ತಕ್ಕಂತೆ ಒಲಿಯುವವನು ಪರಮಾತ್ಮ..

ವಾಲ್ಮೀಕಿ ಮಹರ್ಷಿ ಶ್ರೇಷ್ಠವಾದ ರಾಮಾಯಣದ ಕರ್ತೃ. ರಾಮನಾಮ ಸ್ಮರಣೆಯಿಂದ ತನ್ನ ಪೂರ್ವಕರ್ಮಗಳೆಲ್ಲವನ್ನೂ ನಾಶಪಡಿಸಿಕೊಂಡು ಜ್ಞಾನಿಯಾಗಿ, ರಾಮನಾಮವನ್ನೇ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲಿಸಿ ಹುತ್ತದಿಂದ ಹೊರಬಂದವರು ವಾಲ್ಮೀಕಿ ಮಹರ್ಷಿಗಳು. ಈ ಕಾರಣದಿಂದಲೇ ತಾತಯ್ಯನವರು ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ ಎಂದಿದ್ದಾರೆ.

ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ ತಾತಯ್ಯನವರು. ಹಸ್ತಿನಾಪುರದ ರಾಣಿಯರಾದ ಅಂಬಿಕ ಮತ್ತು ಅಂಬಾಲಿಕೆಯರ ದಾಸಿಯ ಪುತ್ರ ವಿದುರ. ವಿದುರನು ದಾಸಿಯ ಪುತ್ರನಾದ ಕಾರಣ ರಾಜನೆಂದು ಪರಿಗಣಿಸಲಿಲ್ಲ. ಆದರೆ ಪರಮಾತ್ಮನ ಮಹಾಭಕ್ತ. ನೀತಿ ಮತ್ತು ಸತ್ಯವನ್ನು ಹೇಳುವುದರಲ್ಲಿ ನಿಪುಣನಾಗಿದ್ದನು. ತನ್ನ ನೀತಿ ಮಾತುಗಳಿಂದ ಪಾಂಡವರನ್ನು ಎಚ್ಚರಿಸುತ್ತಿದ್ದನು. ರಾಯಭಾರಕ್ಕೆಂದು ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಬಂದಾಗ ಯಾರ ಆತಿಥ್ಯವನ್ನೂ ಸ್ವೀಕರಿಸದೆ ನೇರವಾಗಿ ವಿದುರನ ಮನೆಗೆ ತೆರಳುತ್ತಾನೆ. ಇದು ನನ್ನ ಸೌಭಾಗ್ಯವೆಂದು ತಿಳಿದ ವಿದುರನು ಶ್ರೀಕೃಷ್ಣ ಪರಮಾತ್ಮನನ್ನು ಸ್ವಾಗತಿಸಿ ಅತಿಥ್ಯವನ್ನು ನೀಡುತ್ತಾನೆ.

ಶ್ರೀಕೃಷ್ಣನು ಬಂದನೆಂಬ ಸಂತೋಷದಲ್ಲಿ ಬಾಳೆಹಣ್ಣನ್ನು ನೀಡುವಾಗ ಹಣ್ಣನ್ನು ಬಿಸಾಕಿ, ಮೇಲಿನ ಸಿಪ್ಪೆಯನ್ನು ಕೃಷ್ಣನಿಗೆ ನೀಡುತ್ತಾನೆ. ಆಗ ಶ್ರೀಕೃಷ್ಣನು ಅವನ ಅಂತರAಗದ ಮುಗ್ಧ ಭಕ್ತಿಯನ್ನು ಕಂಡು ಸಿಪ್ಪೆಯನ್ನೇ ಸ್ವೀಕರಿಸಿ ಅವನನ್ನು ಹರಸಿ ಹಾರೈಸುತ್ತಾನೆ. ಇದನ್ನೇ ತಾತಯ್ಯನವರು ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ.

ದ್ರೌಪದಿಯು ಪಂಚ ಪಾಂಡವರ ಧರ್ಮಪತ್ನಿ. ಧರ್ಮರಾಯನು ಜೂಜಾಟದಲ್ಲಿ ಸರ್ವಸ್ವವನ್ನು ಸೋತಾಗ ಕೊನೆಗೆ ದ್ರೌಪದಿಯನ್ನೇ ಪಣವಾಗಿ ಇಡುತ್ತಾನೆ. ಪಣದಲ್ಲಿ ದ್ರೌಪದಿಯನ್ನು ಸೋತಾಗ ಕೌರವರು ತುಂಬಿದ ಸಭೆಗೆ ದ್ರೌಪದಿಯನ್ನು ಎಳೆತರುತ್ತಾರೆ. ವಸ್ತ್ರಾಪಹರಣದ ಸಂದರ್ಭದಲ್ಲಿ ದ್ರೌಪದಿಯ ರಕ್ಷಣೆಗೆ ಯಾರೂ ಬರದಿದ್ದಾಗ, ತಾನು ನಂಬಿರುವ ಶ್ರೀಕೃಷ್ಣನನ್ನು ಮನಪೂರ್ವಕವಾಗಿ ಪ್ರಾರ್ಥಿಸುತ್ತಾಳೆ. ಶ್ರೀಕೃಷ್ಣನು ಅಕೆಗೆ ಅಭಯವನ್ನು ನೀಡಿ ಅವಮಾನದಿಂದ ರಕ್ಷಿಸುತ್ತಾನೆ. ಇದನ್ನೇ ತಾತಯ್ಯನವರು ದ್ರೌಪದಿಯ ಮಾನಭಂಗ ಕಾಯ್ದ ನಾಮ ಎಂದಿದ್ದಾರೆ.

draupadi vastraharan

kaivara thathayya

ರಕ್ಕಸನ ಅನುಜನಿಗೆ ಪಟ್ಟಕಟ್ಟಿದ ನಾಮ
ಪ್ರಹ್ಲಾದನಿಗೆ ಪ್ರಸನ್ನವಾದ ನಾಮ
ಅಜಸುರಾದಿಗಳು ಅನುದಿನವು ಜಪಿಸುವ ನಾಮ
ಗಜವ ಪಾಲಿಸಿದ-ಜಗದೀಶ್ವರನ ನಾಮ||

ರಕ್ಕಸನ ಅನುಜನೆಂದರೆ ರಾವಣನ ಸಹೋದರ ವಿಭೀಷಣ. ವಿಬೀಷಣ ರಾಕ್ಷಸನಾದರೂ ಉತ್ತಮ ಗುಣಗಳನ್ನು ಹೊಂದಿದ್ದನು. ತಪಸ್ಸಿನ ಫಲದಿಂದ ಬ್ರಹ್ಮನಿಂದ ವರವನ್ನು ಪಡೆದಿದ್ದನು ವಿಭೀಷಣ. ವಿಭೀಷನು ಕೇಳಿದ ವರವೆಂದರೆ “ನನಗೆ ಮಹಾವಿಷ್ಣುವಿನ ದರ್ಶನವಾಗಬೇಕು ಹಾಗೂ ಪರಮಾತ್ಮನ ಚರಣಕಮಲಗಳಲ್ಲಿ ಮನಸ್ಸು ಸ್ಥಿರವಾಗಿರಬೇಕು” ಎಂದು ವರ ಪಡೆದಿರುತ್ತಾನೆ. ಅದರಂತೆ ಶ್ರೀರಾಮನ ದರ್ಶನವಾಗುತ್ತದೆ. ಸರ್ವಸ್ವವನ್ನು ತ್ಯಜಿಸಿ ಪರಮಾತ್ಮನ ಪಾದದಲ್ಲಿ ಶರಣಾಗುತ್ತಾನೆ. ಕೊನೆಗೆ ಲಂಕೆಗೆ ರಾಜನಾಗಿ ಪಟ್ಟಾಭಿಷಿಕ್ತನಾಗುತ್ತಾನೆ. ರಕ್ಕಸನ ಅನುಜನಿಗೆ ಪಟ್ಟ ಕಟ್ಟಿದ ನಾಮ ಎಂದಿದ್ದಾರೆ ತಾತಯ್ಯನವರು.

ಹಿರಣ್ಯಕಶ್ಯಪುವಿನ ಪುತ್ರ ಪ್ರಹ್ಲಾದ. ಹಿರಣ್ಯಕಶ್ಯಪು ಅಹಂಕಾರದಿAದ ಮೆರೆಯುತ್ತಿರುತ್ತಾನೆ. ಆದರೆ ಪ್ರಹ್ಲಾದ ಮಾತ್ರ ಭಗವಂತನ ನಾಮಸ್ಮರಣೆಯಲ್ಲಿಯೇ ಮಗ್ನನಾದವನು. ತಂದೆ ಎಷ್ಟೇ ಕಷ್ಟಗಳನ್ನು ಕೊಟ್ಟರೂ ಧೃತಿಗೆಡದೆ ಪರಮಾತ್ಮನಲ್ಲಿ ಶರಣಾದವನು ಪ್ರಹ್ಲಾದ. ನಾಮಸ್ಮರಣೆಯಿಂದಲೇ ಕೊನೆಗೆ ಶ್ರೀನರಸಿಂಹ ಅವತಾರದಲ್ಲಿ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಕಾರಣದಿಂದ ಪ್ರಹ್ಲಾದನಿಗೆ ಪ್ರಸನ್ನವಾದ ನಾಮ ಎಂದಿದ್ದಾರೆ ತಾತಯ್ಯನವರು.

ಬ್ರಹ್ಮಾದಿಯಾಗಿ ದೇವತೆಗಳೆಲ್ಲರೂ ಅನುದಿನವೂ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾರೆ ಎನ್ನುತ್ತಾ ಗಜೇಂದ್ರ ಮೋಕ್ಷದ ಪ್ರಸಂಗವನ್ನು ತಾತಯ್ಯನವರು ನೆನಪಿಸಿಕೊಳ್ಳುತ್ತಾರೆ. ಪರಮಾತ್ಮನು ಆತ್ಮದ ಅಂತರಂಗದ ಭಕ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾನೆ ಎನ್ನುವುದಕ್ಕೆ ಗಜವನ್ನು ರಕ್ಷಿಸುವುದೇ ಸಾಕ್ಷಿಯಾಗಿದೆ.

ಹಂತಕನ ದೂತರನ ಹೊಡೆದು ಓಡಿಸೋ ನಾಮ
ಆಂಜನೇಯನಿಗೆ ಆಧಾರ ನಾಮ
ಅವಸಾನ ಕಾಲಕ್ಕೆ ಹಾದಿ ತೋರುವ ನಾಮ
ನಂಬಿರೋ ಅಮರ ನಾರೇಯಣಸ್ವಾಮಿ ನಾಮ||

ಯಮದೂತರನ್ನು ಹೊಡೆದು ಓಡಿಸುವ ಶಕ್ತಿಯನ್ನು ನಾಮಸ್ಮರಣೆಯು ಪಡೆದುಕೊಂಡಿದೆ ಎನ್ನುತ್ತಿದ್ದಾರೆ ತಾತಯ್ಯನವರು. ಭಗವಂತನ ನಾಮಸ್ಮರಣೆಯ ಬಲದ ಆಧಾರದಿಂದ ಆಂಜನೇಯನು ಎಲ್ಲಾ ಸಾಧನೆಯನ್ನು ಮಾಡಿದ ಎನ್ನುವ ಉದಾಹರಣೆಯನ್ನು ನೀಡುತ್ತಾ ಅವಸಾನ ಕಾಲ ಎಂದರೆ ಮರಣಕಾಲದ ಸಮಯದಲ್ಲಿ ಹಾದಿಯನ್ನು ತೋರುತ್ತದೆ ನಾಮಸ್ಮರಣೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಈ ಎಲ್ಲಾ ಕಾರಣಗಳಿಂದ ಭಗವಂತನ ನಾಮಸ್ಮರಣೆಯನ್ನು ನಂಬಿಕೊಳ್ಳಿ ಎಂದು ಮನದಟ್ಟು ಮಾಡಿಕೊಡುತ್ತಾ, ಕೊನೆಯದಾಗಿ ಶ್ರೀಅಮರನಾರೇಯಣಸ್ವಾಮಿಯ ಅಂಕಿತವನ್ನು ಹಾಕಿ, ಪರಮಾತ್ಮನಿಗೆ ಸಮರ್ಪಣೆಯನ್ನು ಮಾಡಿದ್ದಾರೆ. ಇದೇ ನಾಮಸ್ಮರಣೆಯ ಶ್ರೇಷ್ಠತೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಬುದ್ಧನಂತೆ ಆಸೆಯೇ ದುಃಖಗಳ ಆಲಯ ಎಂದಿದ್ದಾರೆ ತಾತಯ್ಯ

Continue Reading

ಧಾರ್ಮಿಕ

Prerane : ದೇವರ ಅವತಾರ; ಏನಿದು ವಿಚಾರ?

ನಿಮ್ಮನ್ನು ನೀವು ದೇವರಿಗೆ ಸಂಪೂರ್ಣವಾಗಿ ಅರ್ಪಣೆ ಮಾಡಿಕೊಂಡರೆ ನಿಮ್ಮಲ್ಲಿ ಏನೂ ಉದಯವಾಗುವುದಿಲ್ಲ, ನೀವೆಲ್ಲಿರುವಿರೋ ಅಲ್ಲಿಯೇ ಇರುತ್ತೀರ, ಗಾಢವಾದ ಪ್ರಾರ್ಥನೆ, ಪ್ರೇಮ, ಶ್ರದ್ದೆಯಿಂದ ದೇವರಿಗಾಗಿ ಕಾಯುತ್ತೀರಿ ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಅವರ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿ.

VISTARANEWS.COM


on

Edited by

Avatars of God
Koo
sri kaivalyananda swamiji

ಶ್ರೀ ಕೈವಲ್ಯಾನಂದ ಸರಸ್ವತೀ
ಇರುವಿಕೆಯೇ ದೇವರು. ದೇವರು ಏರುವುದೂ ಇಲ್ಲ, ಇಳಿಯುವುದೂ ಇಲ್ಲ. ದೇವರು ಎಲ್ಲಿಗೆ ಏರಬೇಕು, ಎಲ್ಲಿಗೆ ಇಳಿಯಬೇಕು, ದೇವರನ್ನು ಬಿಟ್ಟರೆ ಮತ್ತಾರು ಇಲ್ಲ, ಮತ್ತಾವುದೂ ಇಲ್ಲ, ಇರುವುದೆಲ್ಲವೂ ದೈವವೇ ಆದಕಾರಣ ಮೊದಲನೆಯದಾಗಿ “ದೇವರು ಏರುವುದೂ ಇಲ್ಲ. ಇಳಿಯುವುದೂ ಇಲ್ಲ”.

ಆದರೆ “ಅವತಾರ” ಎಂದು ಹೇಳುವಾಗ ಅದರಲ್ಲಿ ಏನೋ ಒಂದು ತಾತ್ವಿಕಾರ್ಥವಿರಬೇಕು. ಅರ್ಥವು ಸಂಪೂರ್ಣವಾಗಿ ಬಿನ್ನ ಅದನ್ನು ಈಗ ನೋಡುವ; ಇರುವಿಕೆಯೇ ದೇವರು. ಪವಿತ್ರವಾದ ಇರುವಿಕೆ. ಇಡೀ ಪ್ರಪಂಚ ದೇವರಿಂದಲೇ ತುಂಬಿದೆ, ತನ್ನ ಅಸ್ಥಿತ್ವವನ್ನು (ಪ್ರಪಂಚವನ್ನು) ತಾನು ತುಂಬಿರುತ್ತಾನೆ. ದೇವರ ಅವತಾರಕ್ಕೆ ಅರ್ಥವಿರಬೇಕು.

ಮನುಷ್ಯ ದೇವರನ್ನು ಅರಸುವುದು ಎರಡು ವಿಧ: ದೇವರು ಒಬ್ಬನೇ ಸತ್ಯವೆಂದಾಗ “ಮನುಷ್ಯ” ಎಂದರೆ ಏನು? ತಾನು ದೇವರೆಂಬುದನ್ನು ಮರೆತು ಹೋಗಿರುವಾಗ ದೇವರೇ ಮನುಷ್ಯ. ಮನುಷ್ಯನೆಂದರೆ ಮರೆತಿದ್ದಾನೆ- ತನ್ನನ್ನು ತಾನು ಮರೆತಿದ್ದಾನೆ. ಮನುಷ್ಯ ತನ್ನ ದೈವತ್ವವನ್ನು ಎರಡು ವಿಧದಲ್ಲಿ ಸ್ಮರಿಸಿಕೊಳ್ಳಬಹುದು: ಸಮರ್ಪಣೆ, ಭಕ್ತಿ, ಪ್ರೇಮ, ಪ್ರಾರ್ಥನೆ – ಇದು ಒಂದು ಮಾರ್ಗ, ಮತ್ತೊಂದು ಮಾರ್ಗವೆಂದರೆ
ದೃಡನಿಶ್ಚಯ. ಮನಸ್ಸು ಮಾಡುವಿಕೆ ಧ್ಯಾನ (ಜ್ಞಾನ) ಯೋಗ.

prerane

ಮನಃ ಪೂರ್ವಕ ಪ್ರಯತ್ನದಿಂದ ಪ್ರಯಾಣ ಮಾಡಲು ಪ್ರಯತ್ನ ಪಟ್ಟಾಗ ಆಗ ಆತ ತಾನು ದೈವತ್ವಕ್ಕೆ ಏರುತ್ತಿದ್ದೇನೆ ಎಂದು ಭಾವಿಸುತ್ತಾನೆ. ಈ ಕಾರಣಕ್ಕಾಗಿ ಜೈನ ಸಂಪ್ರದಾಯದಲ್ಲಿ ದೈವತ್ವ ಪಡೆದವನನ್ನು “ತೀರ್ಥಂಕರ” ಎನ್ನುತ್ತಾರೆ. ತೀರ್ಥಂಕರ ಎಂದರೆ ಪ್ರಜ್ಞೆ, ಅರಿವು ಶಿಖರವನ್ನು ಮುಟ್ಟಿದೆ, ಮನುಷ್ಯ ಏರುವ ಮುಖಾಂತರ ತಲುಪಿದ್ದಾನೆ – ಮನೋ ನಿಶ್ಚಯದ ಪ್ರಯತ್ನದ ಜ್ಞಾನ ಯೋಗದ ಒಂದು ಏಣಿ ಇರುವಂತೆ.

ಅವತಾರವೆಂದರೆ ದೇವರು ಇಳಿದು ಬರುವಿಕೆ, ಇದು ಮತ್ತೊಂದು ರೀತಿ ದೇವರನ್ನು ಸೇರುವಿಕೆ – ಮರೆತಿರುವುದನ್ನು ಜ್ಞಾಪಿಸಿಕೊಳ್ಳುವಿಕೆ. ಮನುಷ್ಯ ತನ್ನನ್ನು ತಾನು ಸಮರ್ಪಿಸಿಕೊಂಡಾಗ ಕೇವಲ ತನ್ನ ಹೃದಯವನ್ನು ತೆರೆದಿಡುತ್ತಾನೆ, ಕಾದಿರುತ್ತಾನೆ, ಪ್ರಾರ್ಥಿಸುತ್ತಾನೆ, ತಕ್ಷಣ ತನ್ನ ಹೃದಯದಲ್ಲಿ ಏನೋ ಕಲಕಿದಂತಾಗುತ್ತದೆ. “ದೇವರು ನನ್ನಲ್ಲಿ ಅವತರಿಸಿದ್ದಾನೆ” ಎಂಬುದಾಗಿ ತಪ್ಪದೇ ನೋಡುತ್ತಾನೆ. ಅವತಾರವೆಂದರೆ ದೇವರು ಇಳಿಯುವಿಕೆ ಕೆಳಕ್ಕೆ ಬರುವಿಕೆ.

ಮಹಾವೀರರು ಏರಿದರು, ಮೀರಾ ಅವರಿಗೆ ದೇವರು ಇಳಿದು ಬಂದ. ಆದರೆ ದೇವರು ಎಂದು ಕೆಳಕ್ಕೆ ಬರುವುದಿಲ್ಲ, ಎಂದೂ ಮೇಲಕ್ಕೆ ಹೋಗುವುದಿಲ್ಲ, ದೇವರು ಎಲ್ಲಿದ್ದಾನೆಯೋ ಅಲ್ಲಿಯೇ ಇದ್ದಾನೆ. ಆದರೆ ನಿಮ್ಮ ಅನುಭವ ಭಿನ್ನವಾಗಿರುತ್ತದೆ, ದೇವರನ್ನು ಹೊಂದಲು ತೀವ್ರ ಪ್ರಯತ್ನಮಾಡಿದ್ದೇ ಆದರೆ, ನೀವು ಉನ್ನತ, ಉನ್ನತ, ಉನ್ನತವಾಗಿ ಹೋಗುತ್ತೀರ; ನಿಮ್ಮಲೇ ಹುದುಗಿರುವ ದೇವರು ಉದಯವಾಗುತ್ತಿದ್ದಾನೆ, ಮೇಲಕ್ಕೆ ಬರುತ್ತಿದ್ದಾನೆ, ತುಟ್ಟತುದಿಯನ್ನು ತಲುಪುತ್ತಿದ್ದಾನೆ ಎಂದು ಭಾವಿಸುವುದು ಸ್ವಾಭಾವಿಕ. ಆದರೆ ನೀವು ಅರ್ಪಣೆ ಮಾಡಿಕೊಂಡರೆ ನಿಮ್ಮಲ್ಲಿ ಏನೂ ಉದಯವಾಗೋಲ್ಲ, ನೀವೆಲ್ಲಿರುವಿರೋ ಅಲ್ಲಿಯೇ ಇರುತ್ತೀರ, ಗಾಢವಾದ ಪ್ರಾರ್ಥನೆ, ಪ್ರೇಮ, ಶ್ರದ್ದೆಯಿಂದ ದೇವರಿಗಾಗಿ ಕಾಯುತ್ತೀರ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಒಂದು ದಿವಸ ದೇವರು ನಿಮ್ಮಲ್ಲಿ ಅವತರಿಸಿದಂತೆ ಕಾಣುತ್ತೀರ. ಮೇಲಿನಿಂದ ಬಂದಂತೆ ಪರಮಾತ್ಮನನ್ನು ಅರಸುವವರಲ್ಲಿ ಇವು ಎರಡು ವಿಧವಾದ ಅನುಭವಗಳು, ಇದಕ್ಕೂ ದೇವರಿಗೂ ಯಾವ ಸಂಬಂಧವಿಲ್ಲ, ಅರಸುವವನ ಮಾರ್ಗಕ್ಕೆ ಸಂಬಂಧ ಪಟ್ಟದ್ದು,
ಭಕ್ತಿಪಂಥದವರು ದೇವರು ಅವತರಿಸಿದನೆನ್ನುತ್ತಾರೆ.

ಅನವಶ್ಯಕವಾದದ್ದನ್ನು ಮರೆತರೆ ಅವಶ್ಯಕವಾದದ್ದು ಜ್ಞಾಪಕದಲ್ಲಿ ನಮ್ಮಲ್ಲಿ ಉಂಟಾಗುತ್ತದೆ.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನೂ ಓದಿ : Prerane : ಅರ್ಥವು ಅನರ್ಥವೇ? ಈ ಬಗ್ಗೆ ಶಂಕರಭಗವತ್ಪಾದರು ಹೇಳಿದ್ದಾದರೂ ಏನು?

Continue Reading
Advertisement
wrestlers protest
ಕ್ರೀಡೆ32 mins ago

Wrestlers Protest: ಜೂನ್​ 15ರ ತನಕ ಪ್ರತಿಭಟನೆ ಸ್ಥಗಿತಗೊಳಿಸಿದ ಕುಸ್ತಿಪಟುಗಳು

abhishek ambareesh wedding Reception
ಕರ್ನಾಟಕ34 mins ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

KS Bharat
ಕ್ರಿಕೆಟ್35 mins ago

WTC Final 2023 : ವಿಕೆಟ್​ ಕೀಪರ್​ ಕೆಎಸ್​ ಭರತ್​​ ಹಿಡಿದ ರೋಮಾಂಚಕಾರಿ ಕ್ಯಾಚ್​ ಹೀಗಿತ್ತು

for tenants also to wrestlers protest and more news
ಕರ್ನಾಟಕ39 mins ago

ವಿಸ್ತಾರ TOP 10 NEWS: ಬಾಡಿಗೆಯವರಿಗೂ ಫ್ರೀ ಕರೆಂಟ್‌ನಿಂದ, ಅಂತಿಮ ಘಟ್ಟದಲ್ಲಿ ಕುಸ್ತಿ ಕದನದವರೆಗಿನ ಪ್ರಮುಖ ಸುದ್ದಿಗಳಿವು

Anita Madhu Bangarappa was felicitated by Block Mahila Congress at soraba
ಕರ್ನಾಟಕ51 mins ago

Shivamogga News: ಸೊರಬ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅನಿತಾ ಮಧು ಬಂಗಾರಪ್ಪ

MLA TB Jayachandra visited Shira Public Hospital
ಕರ್ನಾಟಕ53 mins ago

Tumkur News: ಶಿರಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಟಿ.ಬಿ. ಜಯಚಂದ್ರ ಭೇಟಿ, ಪರಿಶೀಲನೆ

Farooq Abdullah meets HD Devegowda
ಕರ್ನಾಟಕ1 hour ago

Farooq Abdullah: ಮಾಜಿ ಪಿಎಂ ದೇವೇಗೌಡ, ಸಿಎಂ ಸಿದ್ದರಾಮಯ್ಯ ಜತೆ ಫಾರೂಕ್‌ ಅಬ್ದುಲ್ಲಾ ʼಲೋಕಾʼಭಿರಾಮ!

Good Train Accident
ದೇಶ1 hour ago

Odisha Train Accident : ಅಯ್ಯೊ ದುರ್ವಿಧಿ, ಟ್ರೈನ್ ಕೆಳಗೆ ಮಲಗಿದ್ದವರು ಅಲ್ಲೇ ಅಪ್ಪಚ್ಚಿ!

BJP lose in karnataka
ಕರ್ನಾಟಕ1 hour ago

BJP Karnataka: ಸೋತು 25 ದಿನದ ನಂತರ ಅವಲೋಕನ ನಡೆಸಲಿದೆ ಬಿಜೆಪಿ!: ಗೆದ್ದ-ಸೋತವರ ಸಭೆ ಗುರುವಾರ

Kolhapur Protest
ದೇಶ1 hour ago

ಮಹಾರಾಷ್ಟ್ರದಲ್ಲೂ ಟಿಪ್ಪು ವಿವಾದ;‌ ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ, ಪರಿಸ್ಥಿತಿ ಉದ್ವಿಗ್ನ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ16 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

abhishek ambareesh wedding Reception
ಕರ್ನಾಟಕ34 mins ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

N Chaluvarayaswamy about Congress guarantee
ಕರ್ನಾಟಕ8 hours ago

Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!

horoscope today love and horoscope
ಪ್ರಮುಖ ಸುದ್ದಿ16 hours ago

Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!

Salman Khan Bigg Boss ott 2
South Cinema1 day ago

Big Boss OTT 2: ಜೂನ್ 17ಕ್ಕೆ ಬಿಗ್‌ಬಾಸ್ ಒಟಿಟಿ 2 ಪ್ರಸಾರ, ಇಲ್ಲೂ ನಿರೂಪಕ ಸಲ್ಲೂ!

dining table vastu tips
ಭವಿಷ್ಯ1 day ago

Vastu Tips : ಮನೆಯ ಡೈನಿಂಗ್‌ ಹಾಲ್‌ನಲ್ಲಿ ಈ ಆಕಾರದ ಟೇಬಲ್‌ ಇರಲೇಬಾರದು!

pineapple cultivation
ಕೃಷಿ1 day ago

Krishi Khajane : ಆರೋಗ್ಯಕರ ಅನಾನಸ್‌ ಬೆಳೆಯುವುದು ಕಷ್ಟವೇನಲ್ಲ!

health and horoscope horoscope today
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರ ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ, ಇರಲಿ ಎಚ್ಚರ!

Chakravarthy Sulibele and MB Patil
ಕರ್ನಾಟಕ2 days ago

Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

Sevanthige Flower Farming
ಕೃಷಿ2 days ago

Krishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!

Horoscope Today
ಪ್ರಮುಖ ಸುದ್ದಿ3 days ago

Horoscope Today : ಈ ನಾಲ್ಕು ರಾಶಿಯ ಉದ್ಯೋಗಿಗಳಿಗೆ ಇಂದು ಅದೃಷ್ಟದ ದಿನವಂತೆ!

ಟ್ರೆಂಡಿಂಗ್‌

error: Content is protected !!