prerane morning spiritual thoughts in kannada about lotus flower ‌spiritual meaning Prerane : ಕಮಲವು ಏಕೆ ಭಗವಂತನಿಗೆ ವಿಶೇಷ? Vistara News

ಧಾರ್ಮಿಕ

Prerane : ಕಮಲವು ಏಕೆ ಭಗವಂತನಿಗೆ ವಿಶೇಷ?

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಕಮಲದ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

lotus flower meaning spiritual
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Narasimha Bhat

prerane morning spiritual thoughts in kannada

ನರಸಿಂಹ ಭಟ್ಟ
ಸಂಸ್ಕೃತ ಭಾಷೆಯಲ್ಲಿ ಕಮಲ ಎಂಬ ಪದಾರ್ಥವನ್ನು ಅನೇಕ ಪದಗಳಿಂದ ಬಳಸುತ್ತಾರೆ. ಅದರ ಹದಿನಾರು ಪರ್ಯಾಯ ಪದಗಳನ್ನು ಅಮರಕೋಶದಲ್ಲಿ ಈ ರೀತಿಯಾಗಿ ಹೇಳಲಾಗಿದೆ.

ವಾ ಪುಂಸಿ ಪದ್ಮಂ ನಲಿನಮ್ ಅರವಿಂದಂ ಮಹೋತ್ಪಲಮ್ |
ಸಹಸ್ರಪದ್ಮಂ ಕಮಲಂ ಶತಪತ್ರಂ ಕುಶೇಶಯಮ್ |
ಪಂಕೇರುಹಂ ತಾಮರಸಂ ಸಾರಸಂ ಸರಸೀರುಹಮ್ |
ಬಿಸಪ್ರಸೂನರಾಜೀವಪುಷ್ಕರಾಂಭೋರುಹಾಣಿ ಚ ||

ಎಂದು. ‘ಕಮಲನಯನ’ ‘ಅರವಿಂದಲೋಚನ’ ‘ರಾಜೀವಲೋಚನ’ ಇತ್ಯಾದಿಯಾಗಿ ಕಮಲದ ಪರ್ಯಾಯಪದಗಳನ್ನು ಉಪಯೋಗಿಸಿ ಉಪಮಾನವಾಗಿ ಕಾಣುತ್ತೇವೆ. “ಕಮಲಪರ್ಯಾಯಗಳನ್ನು ಬಳಸಿ ಏಕೆ ಎಲ್ಲ ಕಡೆ ಭಗವಂತನನ್ನು ವರ್ಣಿಸುತ್ತಾರೆ? ಈ ವಿಷಯದಲ್ಲಿ ಲೌಕಿಕ ಅಥವಾ ಅಲೌಕಿಕ ದೃಷ್ಟಿ ಏನಾದರೂ ಇದೆಯೆ? ಕಮಲದ ವ್ಯಾಪ್ತಿ ಏನು?” ಎಂಬುದಾಗಿ ಒಮ್ಮೆ ಶ್ರೀರಂಗ ಮಹಾಗುರುವಿನ ಶಿಷ್ಯರೊಬ್ಬರು ಗುರುವನ್ನು ಪ್ರಶ್ನಿಸುತ್ತಾರೆ. ಆಗ ಮಹಾಗುರುವು ಕೊಟ್ಟ ವಿವರಣೆಯು ಅತ್ಯಾಶ್ಚರ್ಯಕರವೂ ಹೃದಯರಮಣಿಯವೂ ಆಗಿದೆ.

ಕಮಲವು ಉಪಮಾನ

ಮೊಟ್ಟಮೊದಲು ಉಪಮಾನದ ಉಪಯೋಗ ಎಲ್ಲಿ ? ಎಂಬುದನ್ನು ನೋಡೋಣ. ಎರಡು ವಸ್ತುಗಳು ಇರುತ್ತವೆ. ಒಂದು ತಿಳಿದಂತೆ ಇರುವಂತಹದ್ದು. ಇನ್ನೊಂದು ತಿಳಿಯದೇ ಇರುವಂತಹದ್ದು. ತಿಳಿದ ಮತ್ತು ತಿಳಿಯದ ಎರಡು ವಸ್ತುಗಳಲ್ಲಿ ಯಾವುದೋ ಒಂದು ಸಾಮಾನ್ಯವಾದ ಅಂಶವು ಇರುತ್ತದೆ. ತಿಳಿದ ವಸ್ತುವಿನಲ್ಲಿರುವ ಅಂಶವನ್ನು ಇಟ್ಟುಕೊಂಡು ಬೇರೊಂದು ವಿಷಯದ ಬಗ್ಗೆ ತಿಳಿವಳಿಕೆ ಉಂಟಾಗುತ್ತದೆ. ಆಗ ‘ಇದರಂತೆ ಇದು’ ಎಂಬ ಅರಿವು ಬರುತ್ತದೆ.

ಶಾಸ್ತ್ರದಲ್ಲಿ ಇದನ್ನೇ ಉಪಮಾನ ಪ್ರಮಾಣ ಅಥವಾ ಉಪಮಾ ಅಲಂಕಾರ ಎಂದು ಹೇಳಿದೆ. ಯಾವ ಪದಾರ್ಥವನ್ನು ವರ್ಣಿಸುತ್ತೇವೋ ಅದು ಉಪಮೇಯ. ಯಾವುದರಿಂದ ವರ್ಣಿಸುತ್ತೇವೋ ಅದು ಉಪಮಾನ. ಇವೆರಡರಲ್ಲಿ ಇರುವ ಸಾಮಾನ್ಯ ಅಂಶವೇ ಸಾಧಾರಣ ಧರ್ಮ. ಹೇಗೆಂದರೆ ‘ರಾಮೋ ರಾಜೀವಲೋಚನಃ’. ಇಲ್ಲಿ ಶ್ರೀರಾಮನ ಕಣ್ಣನ್ನು ರಾಜೀವ ಎಂದು ಕಮಲಕ್ಕೆ ಹೋಲಿಸಲಾಗಿದೆ. ಕಮಲ ಎಷ್ಟು ಮನೋಹರವಾಗಿದೆಯೋ ರಾಮನು ಅಷ್ಟೇ ಮನೋಹರನಾಗಿದ್ದಾನೆ.

ನಾರಾಯಣನ ಸಹಚರಿ ಕಮಲ

“ಆಪೋ ನಾರಾ ಇತಿ ಪ್ರೋಕ್ತಾಃ” ಎಂಬಲ್ಲಿ ನಾರ ಎಂದರೆ ಜಲ ಎಂದರ್ಥ. ‘ನಾರಾಯಣ’ ಎಂದರೆ ಜಲವೇ ಯಾರಿಗೆ ಶಯನವೋ ಅಥವಾ ಯಾರಿಗೆ ಅಯನ-ಗತಿಯೋ ಅಂತವನು ಎಂದರ್ಥ. ಕಮಲದ ಉಗಮವು ನೀರಿನಲ್ಲೇ. ಆದ್ದರಿಂದ ಕಮಲಕ್ಕೆ ಜಲಜ ನೀರಜ ಅಂಬುಜ ಇತ್ಯಾದಿ ಹೆಸರುಗಳೂ ಬಂದಿವೆ. ಜಲದಲ್ಲೇ ಹುಟ್ಟಿ ಜಲದಲ್ಲೇ ಬೆಳೆದ ನಾರಾಯಣನ ಸಹಚರಿ ಕಮಲ. ಹಾಗಾಗಿ ಕಮಲವನ್ನು ಭಗವಂತನ ವಿಶೇಷಣ ಅಥವಾ ಉಪಮಾನವಾಗಿ ಬಳಸುವುದು ಉಚಿತವೇ ಆಗಿದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಸೃಷ್ಟಿಮೂಲ ಕಮಲ

ಸೃಷ್ಟಿಕರ್ತನಾದ ಬ್ರಹ್ಮನೂ ನಾರಾಯಣನ ನಾಭಿಕಮಲದಲ್ಲೇ ಹುಟ್ಟಿದನು. ಅದಕ್ಕೆ ಇವನನ್ನು ‘ಕಮಲೋದ್ಭವ’ ಎಂದು ಕರೆಯುತ್ತಾರೆ. ಆದ್ದರಿಂದ ಸೃಷ್ಟಿಮೂಲ ಕಮಲವೇ ಆಗಿದೆ. ಲಕ್ಷ್ಮಿಯ ಹೆಸರು ‘ಪದ್ಮಾ ಕಮಲಾ’ ಎಂಬುದಾಗಿ. ಪದ್ಮಪ್ರಿಯೇ ಪದ್ಮಿನಿ ಪದ್ಮಹಸ್ತೇ ಪದ್ಮಾಲಯೇ ಪದ್ಮದಲಾಯತಾಕ್ಷಿ |
ವಿಶ್ವಪ್ರಿಯೇ ವಿಷ್ಣುಮನೋನುಕೂಲೇ ತ್ವತ್ಪಾದಪದ್ಮಂ ಮಯಿ ಸನ್ನಿಧತ್ಸ್ವ||

ಎಂಬುದಾಗಿ ಅವಳ ಆಸನ ವಸನ ಕರ ಪಾದ ಎಲ್ಲವೂ ಪದ್ಮವೇ ಆಗಿದೆ. ಪತ್ನಿಯೇ ಕಮಲದಂತಿರುವಾಗ ಪತಿಯಾದವನು ಅವಳಿಗೆ ಅನುರೂಪನಾಗಿರಬೇಕಲ್ಲವೇ! ಆದ್ದರಿಂದ

ನಾರಾಯಣನನ್ನೂ ಕರಕಮಲಃ ಪಾದಕಮಲಃ ರಾಜೀವಲೋಚನಃ ಇತ್ಯಾದಿಯಾಗಿ ಹೇಳುವ ಅಭ್ಯಾಸ ಬಂದಿದೆ. ಎಷ್ಟು ಸೊಗಸಾಗಿದೆ ವಿವರಣೆ!!!

ಯೋಗಿಗಳು ಅಂತಃಪ್ರಪಂಚದಲ್ಲಿ ಮೂಲಾಧಾರಾದಿ ಚಕ್ರಗಳನ್ನು ಕಮಲದ ರೂಪದಲ್ಲಿ ಕಾಣುತ್ತಾರಂತೆ. “ಸಹಸ್ರಾರೇ ಮಹಾಪದ್ಮೇ ಶಿವೇನ ಸಹ ಮೋದತೇ (ವಿಷ್ಣುನಾ ಸಹ ಮೋದತೇ) ಎಂಬುದಾಗಿ. ಇದು ಕಮಲವನ್ನು ನಮ್ಮ ಋಷಿಗಳು ಹೇಗೆ ಕಂಡಿದ್ದಾರೆ ಎಂಬ ಅಲೌಕಿಕವಾದ ದೃಷ್ಟಿಕೋಣ. ಲೌಕಿಕ ದೃಷ್ಟಿಯಿಂದಲೂ ಕಮಲಕ್ಕೆ ಅಷ್ಟೇ ಪ್ರಾಧಾನ್ಯವಿದೆ. ಪ್ರಾಕೃತಿಕವಾಗಿ ಕಮಲವು ಅತ್ಯಂತ ಕೋಮಲ ಸುಗಂಧ ಸುವರ್ಣ ಮತ್ತು ಮನೋಹರವಾಗಿದೆ. ಆಯುರ್ವೇದವೂ ಇದಕ್ಕಿರುವ ಓಷಧೀಯ ಗುಣವನ್ನು ಕೊಂಡಾಡುತ್ತದೆ.

ಇದನ್ನೂ ಓದಿ : Prerane : ಗೆಲುವಿನ ಹಾದಿಯಲ್ಲಿ ಮೊದಲ ಹೆಜ್ಜೆ ಯಾವುದು? ಸದ್ಗುರು ಉತ್ತರ ಹೀಗಿದೆ!

ಭಗವಂತನನ್ನು ಪೂಜಿಸುವಾಗ ಪುಷ್ಪಪೂಜೆಯಲ್ಲಿ ಪ್ರಧಾನವಾದ ಪುಷ್ಪ ಕಮಲ. ಕಮಲವೆಂದರೆ ಭಗವಂತನಿಗೆ ಅಷ್ಟು ಪ್ರೀತಿ. ಈ ಎಲ್ಲ ಅಂಶವನ್ನು ಪರಿಗಣಿಸಿ ಭಾರತಸರ್ಕಾರವು ಇದನ್ನು ರಾಷ್ಟಿಯ ಪುಷ್ಪ ಎಂದು ಅನುಮೋದಿಸಿದೆ. ಹೀಗೆ ಕಮಲಕ್ಕೆ ಸೃಷ್ಟಿಮೂಲದಿಂದ ಈ ಕಾಲದವರೆಗೆ ಮಾತ್ರವಲ್ಲ ಸೂರ್ಯ ಚಂದ್ರರು ಇರುವಷ್ಟು ಕಾಲವೂ ಉನ್ನತ ಸ್ಥಾನವಿದೆ.

ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Shabarimale Bus : ಶಬರಿಮಲೆ ಯಾತ್ರಿಕರಿಗೆ KSRTC ವಿಶೇಷ ಬಸ್‌ ಸೇವೆ, ಬುಕಿಂಗ್‌ ಹೇಗೆ?

Shabarimale Bus: ಬೆಂಗಳೂರಿನಿಂದ ಶಬರಿಮಲೆಗೆ ಡಿಸೆಂಬರ್‌ 11ರಿಂದ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ. ಇದರ ಟೈಮಿಂಗ್ಸ್‌ ಮತ್ತು ಬುಕಿಂಗ್‌ ವಿವರ ಇಲ್ಲಿದೆ.

VISTARANEWS.COM


on

Shabarimale yatre KSRTC BUS
Koo

ಬೆಂಗಳೂರು: ಡಿಸೆಂಬರ್‌ ಆರಂಭವಾಗುತ್ತಿದ್ದಂತೆಯೇ ಕೇರಳದ ಪುಣ್ಯ ಕ್ಷೇತ್ರ ಶಬರಿಮಲೆಗೆ (Shabarimale yatre) ಹೋಗುವ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ವ್ಯವಸ್ಥೆಯನ್ನು ಮಾಡಲು ಮುಂದಾಗಿದೆ. ಡಿಸೆಂಬರ್‌ 1ರಿಂದ ವಿಶೇಷ ಬಸ್‌ ಸೌಲಭ್ಯವನ್ನು (Special bus Service) ಒದಗಿಸಲಾಗುತ್ತಿದ್ದು, ಯಾತ್ರಾರ್ಥಿಗಳು ಇದನ್ನು ಉಪಯೋಗ ಮಾಡಿಕೊಳ್ಳಬಹುದು (Shabarimale Bus) ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಡಿಸೆಂಬರ್‌ 1ರಿಂದ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿಂದ ನೀಲಕ್ಕಲ್ (ಪಂಪಾ, ಶಬರಿಮಲೈ) ಮಾರ್ಗವಾಗಿ ವೋಲ್ವೋ ಮತ್ತು ರಾಜಹಂಸ ಬಸ್ ಸಂಚರಿಸಲಿದೆ ಎಂದು ತಿಳಿಸಿರುವ ಕೆ.ಎಸ್‌.ಆರ್‌.ಟಿ.ಸಿಯು ವೋಲ್ವೊ ಬಸ್​​ನ ಟಿಕೆಟ್ ದರ, ಮಾರ್ಗ, ಸಂಚಾರದ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ದರ ಎಷ್ಟು, ಯಾವ ಹೊತ್ತಿಗೆ ಹೊರಡುತ್ತದೆ?

ಕೆ.ಎಸ್‌.ಆರ್‌.ಟಿಸಿ ವೋಲ್ವೋ ಬಸ್‌ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಡಲಿದೆ. ಮರುದಿನ ಬೆಳಿಗ್ಗೆ 6.45ಕ್ಕೆ ಪಂಪಾ ತಲುಪಲಿದೆ. ಅದೇ ದಿನ ಸಂಜೆ ಪಂಪಾದಿಂದ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ. ವೋಲ್ವೋ ಬಸ್‌ನಲ್ಲಿ ಒಂದು ಟಿಕೆಟ್‌ನ ದರ 1600 ರೂ. ಆಗಿರುತ್ತದೆ.

ರಾಜಹಂಸ ಬಸ್ (ನಾನ್‌ಎಸಿ) ಬಸ್‌ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.15ಕ್ಕೆ ಪಂಪಾ ತಲುಪಲಿದೆ. ಆ ದಿನ ಸಂಜೆ 5 ಗಂಟೆಗೆ ಪಂಪಾದಿಂದ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಲಿದೆ. ರಾಜಹಂಸದಲ್ಲಿ ಬೆಂಗಳೂರಿನಿಂದ ಶಬರಿಮಲೆಗೆ ಪ್ರತಿ ಟಿಕೆಟ್ ಬೆಲೆ 940 ರೂ. ಆಗಿದೆ.

ಡಿಸೆಂಬರ್‌ ತಿಂಗಳಲ್ಲಿ ಶಬರಿಮಲೆ ಸನ್ನಿಧಿಯಲ್ಲಿ ಮಂಡಲೋತ್ಸವ ನಡೆಯಲಿದ್ದು, ಆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಆ ಬಳಿಕ ಜನವರಿ 14ರಂದು ಮಕರ ವಿಳಕ್ಕು (ಮಕರ ಜ್ಯೋತಿ) ನಡೆಯುತ್ತದೆ. ಆ ಸಂದರ್ಭದಲ್ಲಿ 48 ದಿನಗಳ ಕಾಲ ಮಾಲಾ ಧಾರಣೆ ಮಾಡಿ ವ್ರತಧಾರಿಗಳಾದ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಹೊಸ ಬಸ್‌ ಸೇವೆ ಅನುಕೂಲಕರವಾಗಲಿದೆ.

ಇದನ್ನೂ ಓದಿ : Shobha Karandlaje: ಶಬರಿಮಲೆಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ಬಸ್​ ಟಿಕೆಟ್ ಬುಕಿಂಗ್ ಹೇಗೆ?

ಶಬರಿಮಲೆಗೆ ಹೋಗುವ ಬಸ್‌ಗಳ ಬುಕಿಂಗ್‌ನ್ನು ಕೆಎಸ್​ಆರ್​ಟಿಸಿ ಅಧಿಕೃತ ವೆಬ್​ಸೈಟ್ (www.ksrtc.in) ಮೂಲಕ ಮಾಡಬಹುದು. ಅದಲ್ಲದೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಎಸ್‌ಆರ್‌ಟಿಸಿ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಕರ್ನಾಟಕ ರಾಜ್ಯದಾದ್ಯಂತ ಮತ್ತು ನೆರೆಯ ರಾಜ್ಯಗಳ ಪ್ರಮುಖ ಕಡೆಗಳಲ್ಲಿ ಒಟ್ಟು 707 ಟಿಕೆಟ್ ಕೌಂಟರ್‌ಗಳು ಇವೆ.

Continue Reading

ಚಿಕ್ಕಮಗಳೂರು

Mystery World : ವಿಜ್ಞಾನಕ್ಕೂ ಅಚ್ಚರಿ ಮೂಡಿಸಿದ ಹುತ್ತ; ಪೂಜೆಯ ಮರುಕ್ಷಣವೇ ಗಡಗಡ!

Mystery World : ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿರುವ ಒಂದು ವಿಸ್ಮಯಕಾರಿ ಹುತ್ತ ಎಲ್ಲರ ಗಮನ ಸೆಳೆದಿದೆ. ಅಲ್ಲಿ ಹುಣ್ಣಿಮೆಯ ದಿನ ಹುತ್ತ ನಡುಗುವ ವಿಸ್ಮಯ ನಡೆಯುತ್ತದೆ.

VISTARANEWS.COM


on

Hutta at Malenadu
Koo

ಚಿಕ್ಕಮಗಳೂರು: ಇದೊಂದು ವಿಸ್ಮಯಕಾರಿ ಹುತ್ತ (Mound of mud). ಕಳೆದ ಹಲವಾರು ವರ್ಷಗಳಿಂದ ಇದರ ರಹಸ್ಯವನ್ನು (Mystery) ಅರಿಯಲು ಸಾಕಷ್ಟು ಮಂದಿ ಪ್ರಯತ್ನ ಮಾಡಿದ್ದಾರೆ. ಆದರೆ, ಅದರ ಮರ್ಮ ತಿಳಿಯುವುದು ಸಾಧ್ಯವಾಗಿಲ್ಲ. ಹೀಗೆ ವೈಜ್ಞಾನಿಕ ಲೋಕಕ್ಕೆ ಸವಾಲಾಗಿದೆ (Mystery World) ನಿಂತಿದೆ ಮಲೆನಾಡಿನ ಹುತ್ತ..!

ಈ ವಿಸ್ಮಯಕಾರಿ ಹುತ್ತ ಇರುವುದು ಚಿಕ್ಕಮಗಳೂರು ಜಿಲ್ಲೆ (Chikkamagaluru News) ಮೂಡಿಗೆರೆ ತಾಲೂಕಿನ ಬಗ್ಗಸಗೋಡು ಬಾನಳ್ಳಿ ಗ್ರಾಮದಲ್ಲಿ. ಈ ಹುತ್ತಕ್ಕೆ ವಾರ್ಷಿಕ ಪೂಜೆ ನಡೆಸಿದ ಮರುಕ್ಷಣವೇ ಅದು ಗಡಗಡ ನಡುಗುವುದು ವಿಸ್ಮಯ. ಈ ದಿನಕ್ಕಾಗಿಯೇ ಕಾದು ಕುಳಿತುಕೊಳ್ಳುವ ಸಾವಿರಾರು ಭಕ್ತರು ಈ ಪವಾಡಸದೃಶ ಘಟನೆಯನ್ನು ಕಣ್ತುಂಬಿಕೊಳ್ಳುತ್ತಾರೆ.

Chikkamagaluru mound

ಬಾನಳ್ಳಿ ಗ್ರಾಮದಲ್ಲಿ ದೀಪಾವಳಿ ಕಳೆದ ಬಳಿಕದ ಹುಣ್ಣಿಮೆಯಂದು ಉಣ್ಣಕ್ಕಿ ಜಾತ್ರೆ ನಡೆಯುತ್ತದೆ. ಈ ಪೂಜೆಯ ಸಂದರ್ಭದಲ್ಲಿ ಹುತ್ತ ನಡುಗುತ್ತದೆ. ಸುಮಾರು ಹತ್ತು ಅಡಿ ಎತ್ತರದ ಈ ಹುತ್ತ ಮಹಾಮಂಗಳಾರತಿ ನಡೆಯುತ್ತಿದ್ದಂತೆಯೇ ಕೆಲವೇ ಸೆಕೆಂಡ್‌ಗಳ ಕಾಲ ನಡುಗುತ್ತದೆ. ಆ ಕೆಲ ಸೆಕೆಂಡ್‌ಗಳ ಕಂಪನವನ್ನು ಕಣ್ತುಂಬಿಕೊಳ್ಳಲು ಜನರು ಕಾಯುತ್ತಿರುತ್ತಾರೆ. ಭಕ್ತ ಸಾಗರ ದೊಡ್ಡ ಸಂಖ್ಯೆಯಲ್ಲಿ ನೆರೆಯುತ್ತದೆ.

ಇದು ನೈಸರ್ಗಿಕವಾಗಿಯೇ ಮಣ್ಣಿನಿಂದಲೇ ನಿರ್ಮಾಣಗೊಂಡ ಹುತ್ತ ಇದಾಗಿದೆ. ಭಾನುವಾರ ರಾತ್ರಿ ಇಲ್ಲಿ ಹುಣ್ಣಿಮೆ ಆಚರಣೆ ಮಾಡಲಾಗಿದ್ದು, ಹುತ್ತ ನಡುಗುವ ವಿಸ್ಮಯವನ್ನು ಮಲೆನಾಡಿನ ಭಕ್ತರು ಕಣ್ತುಂಬಿಕೊಂಡರು.

ಮಹಾಮಂಗಳಾರತಿಯ ಸಂದರ್ಭದಲ್ಲಿ ಹುತ್ತಕ್ಕೆ ಮಂಡಕ್ಕಿಯನ್ನು ಎರಚಿ ತಮ್ಮ ಭಕ್ತಿಯ ಸಮರ್ಪಣೆ ಮಾಡಲಾಗುತ್ತದೆ. ಇಲ್ಲಿಗೆ ಬರುವ ಭಕ್ತರಿಗೆ ಹುತ್ತದ ಮಣ್ಣನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇದು ಚರ್ಮ ರೋಗವೂ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ ಎಂದು ಭಕ್ತರು ನಂಬಿದ್ದಾರೆ.

ರಾಜ್ಯದ ಎಲ್ಲ ಕಡೆಯಿಂದ ಜನ ಸಾಗರ

ಕೆಲವು ವರ್ಷಗಳ ಹಿಂದೆ ಮಲೆನಾಡಿನ ಕೆಲವೇ ಗ್ರಾಮಗಳಿಗೆ ಸೀಮಿತವಾಗಿದ್ದ ಈ ಉತ್ಸವ ಈಗ ಎಲ್ಲ ಜನರನ್ನು ಸೆಳೆಯುತ್ತದೆ. ದೀಪಾವಳಿ ಕಳೆದು ಬರುವ ಹುಣ್ಣಿಮೆಗೆ ಪೂರಕವಾಗಿ ಗುರುವಾರ ಅಥವಾ ಭಾನುವಾರ ಈ ಹಬ್ಬವನ್ನು ಆಚರಿಸಲಾಗುತ್ತದೆ.

ರಾತ್ರಿ 8ರಿಂದ 8.30ರ ಮಧ್ಯೆ ಮಹಾ ಮಂಗಳಾರತಿ ನಡೆಯುತ್ತದೆ. ಬಳಿಕ ಹುತ್ತದ ಸುತ್ತ ಮೂರು ಸುತ್ತು ಹೋರಿಗಳನ್ನು ಓಡಿಸಲಾಗುತ್ತದೆ. ಬಳಿಕ ಹೋರಿಯನ್ನು ಕಾಡಿಗೆ ಬಿಡಲಾಗುತ್ತದೆ. ಹಿಂದೆ ಜಾನುವಾರುಗಳಿಗೆ ರೋಗ ರುಜಿನಗಳು ಬರಬಾರದು ಎಂಬ ಕಾರಣಕ್ಕಾಗಿ ಈ ಆಚರಣೆ ನಡೆಯುತ್ತಿತ್ತು.

ಈ ಹುತ್ತ ಮಣ್ಣಿನಿಂದಲೇ ಆಗಿದೆ. ಇದಕ್ಕೆ ಯಾವುದೇ ಮೇಲ್ಚಾವಣಿ ಇಲ್ಲ. ಆದರೆ, ಎಷ್ಟೇ ಮಳೆ ಬಂದರೂ ಈ ಹುತ್ತ ಒಂದು ಇಂಚು ಕೂಡಾ ಕರಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Continue Reading

ಅಂಕಣ

Raja Marga Column: ಮನೆಯಂಗಳಲ್ಲಿ ನಿತ್ಯ ಪೂಜೆಗೊಳ್ಳುವ ಈ ತುಳಸಿ ಯಾರು?

Raja Marga Column : ಇಂದು ಉತ್ಥಾನ ದ್ವಾದಶಿ, ತುಳಸಿ ಹಬ್ಬ.. ಮಹಾವಿಷ್ಣುವಿನ ಪತ್ನಿಯಾದ ಮತ್ತು ಸಮುದ್ರ ಮಥನದಲ್ಲಿ ಜನ್ಮ ತಾಳಿದ ತುಳಸಿದೇವಿಗೆ ನಮ್ಮ ನಮನಗಳು. ಆಕೆಯ ಅನುಗ್ರಹ ನಮಗೆಲ್ಲ ದೊರೆಯಲಿ.

VISTARANEWS.COM


on

Tulsi Pooja
Koo
RAJAMARGA Rajendra Bhat

ಹಿಂದೂ ಧರ್ಮದ ನಂಬಿಕೆಗಳು (Faiths in Hindu Religion) ಎಷ್ಟು ವೈಜ್ಞಾನಿಕ ತಳಹದಿಯನ್ನು (Scientific base) ಹೊಂದಿವೆ ಎಂದು ನಾವು ಅಧ್ಯಯನ ಮಾಡುತ್ತ ಮುಂದೆ ಹೋದಾಗ ನೂರಾರು ಅಚ್ಚರಿಯ ಸಂಗತಿಗಳು ನಮಗೆ ದೊರೆಯುತ್ತವೆ. ಹಿಂದೂಗಳ ಸಣ್ಣ, ದೊಡ್ಡ ಪ್ರತಿಯೊಂದು ಹಬ್ಬವೂ ಒಂದಲ್ಲ ಒಂದು ಪೌರಾಣಿಕ ಕಥೆಯ ಹಿನ್ನೆಲೆಯನ್ನು ಹೊಂದಿರುತ್ತದೆ. ಕಾರ್ತಿಕ ಮಾಸದಲ್ಲಿ ಆಚರಣೆ ಮಾಡುವ ಹಲವಾರು ಹಬ್ಬಗಳಲ್ಲಿ ತುಳಸಿ ಪೂಜೆಯೂ ಒಂದು. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಹಿಂದೂಗಳಿಗೆ ತುಳಸಿ ಹಬ್ಬದ (Tulsi Festival) ಸಂಭ್ರಮ (Raja Marga Column).

ಮನೆ ಸಲ್ಲಕ್ಷಣಗಳಲ್ಲಿ ತುಳಸಿ ಕೂಡ ಒಂದು

ಒಂದು ಮನೆ ಎಂದರೆ ಹೀಗೇ ಇರಬೇಕು ಎನ್ನುವ ಕಲ್ಪನೆ ಅದ್ಭುತವಾದದ್ದು. ಒಂದು ಮನೆ ಪರಿಪೂರ್ಣ ಆಗಬೇಕಾದರೆ ಶುದ್ಧ ನೀರಿನ ಬಾವಿ ಮತ್ತು ತುಳಸಿ ಕಟ್ಟೆ ಇರಲೇಬೇಕು ಎನ್ನುತ್ತದೆ ಧಾರ್ಮಿಕ ನಂಬಿಕೆ. ಮನೆಯ ಸುತ್ತ ತುಳಸಿವನವನ್ನು ಮಾಡುವುದರಿಂದ ಸೊಳ್ಳೆಗಳು ಮನೆಯ ಒಳಗೆ ಬರುವುದಿಲ್ಲ, ಅದರಿಂದ ಸೊಳ್ಳೆಯಿಂದ ಬರುವ ಮಲೇರಿಯಾ ಇತ್ಯಾದಿ ಕಾಯಿಲೆಗಳು ಮನೆಯ ಒಳಗೆ ಬರುವುದಿಲ್ಲ ಅನ್ನುತ್ತದೆ ಆಧುನಿಕ ವಿಜ್ಞಾನ. ತುಳಸಿಯನ್ನು ಒಂದು ಔಷಧಿಯ ಮೂಲಿಕೆಯಾಗಿ ನಮ್ಮ ಹಿರಿಯರು ಗುರುತು ಮಾಡಿದರು. ಬೆಳಿಗ್ಗೆ ತುಳಸಿಕಟ್ಟೆಯ ಮುಂದೆ ಸೂರ್ಯೋದಯಕ್ಕೆ ಹಸೆ ಬರೆದು, ತುಳಸಿಕಟ್ಟೆಗೆ ನೀರು ಹಾಕಿ, ಪ್ರದಕ್ಷಿಣೆ ಹಾಕಿ, ನಮಸ್ಕಾರ ಮಾಡಿದ ನಂತರವೇ ಹಿಂದೂಗಳ ದಿನ ಆರಂಭ ಆಗುವುದು. ಸಂಜೆ ತುಳಸಿಕಟ್ಟೆಗೆ ದೀಪ ಇಡದೇ ದಿನ ಮುಕ್ತಾಯ ಆಗುವುದಿಲ್ಲ. ಇದೆಲ್ಲವನ್ನೂ ಮಾಡುವುದು ಗೃಹಿಣಿಯರು ಆದ್ದರಿಂದ ತುಳಸಿ ಪೂಜೆಯು ಗೃಹಿಣಿಯರ ಹಬ್ಬ.

Tulsi pooja

ಈ ತುಳಸಿ ಎಂದರೆ ಯಾರು?

ತುಳಸಿ ಅಥವಾ ವೃಂದಾ ಎಂದರೆ ಕಾಲನೇಮಿ ಎಂಬ ಅಸುರನ ಮಗಳು. ಆಕೆ ಸಮುದ್ರ ಮಥನದ ಹೊತ್ತಿನಲ್ಲಿ ಹುಟ್ಟಿದವಳು ಎಂಬ ನಂಬಿಕೆ ಕೂಡ ಇದೆ. ಆಕೆ ಮಹಾವಿಷ್ಣುವಿನ ಆರಾಧಕಿ. ಅವಳು ವಂಶಧರ್ಮದಂತೆ ಮದುವೆ ಆದದ್ದು ಜಲಂಧರ ಎಂಬ ಶಕ್ತಿಶಾಲಿ ರಾಕ್ಷಸನನ್ನು. ಅವನು ಈಶ್ವರನ ಸಿಟ್ಟಿನಿಂದ ಜನಿಸಿದವನು. ಮಹಾ ಶಕ್ತಿವಂತ.

ಆತನು ಈಶ್ವರನನ್ನು ಕುರಿತು ತಪಸ್ಸು ಮಾಡಿ ಪಡೆದ ವರವೆಂದರೆ ಅದೃಶ್ಯ ಆಗುವುದು. ಎಲ್ಲಿಯವರೆಗೆ ಪತ್ನಿಯ ಪಾವಿತ್ರ್ಯತೆ ಇರುತ್ತದೆಯೋ ಅಲ್ಲಿಯವರೆಗೆ ಆತನಿಗೆ ಆ ಶಕ್ತಿಯು ಇರುತ್ತದೆ. ಆತ ತನ್ನ ಶಕ್ತಿಯನ್ನು ಉಪಯೋಗಿಸಿ ದೇವತೆಗಳ ಅಮರಾವತಿಯನ್ನು ಗೆದ್ದು ದೇವತೆಗಳನ್ನು ಓಡಿಸುತ್ತಾನೆ. ದುರಾಚಾರಗಳನ್ನು ಮಾಡುತ್ತಾನೆ. ತನ್ನ ಅದೃಶ್ಯನಾಗುವ ವರದ ಶಕ್ತಿಯಿಂದ ಅಜೇಯನಾಗಿ ಉಳಿಯುತ್ತಾನೆ. ಆಗ ಆತನ ಸಂಹಾರಕ್ಕಾಗಿ ವಿಷ್ಣುವು ಆತನ ವರವನ್ನು ಮುರಿಯುವ ಅನಿವಾರ್ಯತೆ ಉಂಟಾಗುತ್ತದೆ. ಅದಕ್ಕಾಗಿ ಆತನು ಜಲಂಧರನ ವೇಷದಲ್ಲಿ ಆಕೆಯ ಅರಮನೆಗೆ ಬರುತ್ತಾನೆ. ಆಗ ಆಕೆಯ ಪಾತಿವೃತ್ಯ ನಷ್ಟ ಆಗುತ್ತದೆ. ಅದರಿಂದಾಗಿ ಜಲಂಧರನ ನಾಶವು ಸುಲಭ ಆಗುತ್ತದೆ.

Tulsi Pooja

ವೃಂದಾ ಮಹಾವಿಷ್ಣುವಿಗೆ ಶಾಪ ಕೊಡುತ್ತಾಳೆ

ಇದರಿಂದಾಗಿ ಸಿಟ್ಟು ಮಾಡಿಕೊಂಡ ವೃಂದಾ ಮಹಾವಿಷ್ಣುವಿಗೆ ‘ಕಲ್ಲಾಗಿ ಹೋಗು’ ಎಂದು ಶಾಪ ಕೊಡುತ್ತಾಳೆ. ತಾನು ಕೂಡ ಕಲ್ಲಾಗಿ ಮನೆಯ ಮುಂದೆ ತುಳಸಿ ಕಟ್ಟೆ ಆಗುತ್ತಾಳೆ. ವಿಷ್ಣುದೇವರು ಆಕೆ ಕೊಟ್ಟ ಶಾಪವನ್ನು ನಗುತ್ತಾ ಸ್ವೀಕಾರ ಮಾಡಿ ತಾನೂ ಶಾಲಿಗ್ರಾಮವಾಗಿ ಆಕೆಯ ಜೊತೆ ಇರುತ್ತಾನೆ ಮತ್ತು ಆಕೆಯ ಪಾವಿತ್ರ್ಯತೆಯನ್ನು ವರವಾಗಿ ನೀಡುತ್ತಾನೆ. ಮುಂದೆ ಆಕೆಯನ್ನು ಜನರು ಪೂಜೆ ಮಾಡಬೇಕು ಎಂದು ಅಪ್ಪಣೆ ಕೊಡುತ್ತಾನೆ. ಈ ಕಥೆಯ
ಮೂರ್ತರೂಪವೇ ತುಳಸಿ ಪೂಜೆ.

ತುಳಸಿ ಪೂಜೆಯ ಆಚರಣೆ ಹೇಗೆ?

ಮನೆಯ ಮುಂದೆ ಇರುವ ತುಳಸಿ ಕಟ್ಟೆಯನ್ನು ಸ್ವಚ್ಛ ಮಾಡಿ ಅದರ ಮೇಲೆ ರಂಗೋಲಿ ಬರೆದು ಹೂವಿನ ಅಲಂಕಾರ ಮಾಡುತ್ತಾರೆ. ಕುಂಕುಮದ ಬೊಟ್ಟು ಇಡುತ್ತಾರೆ. ನೆಲ್ಲಿಕಾಯಿ ಮತ್ತು ಹುಣಸೆ ಗೆಲ್ಲನ್ನು ತಪ್ಪದೆ ಇಡುತ್ತಾರೆ. ತುಳಸಿಯ ಮುಂದೆ ಹಸೆ, ಚಿತ್ತಾರ ಬಿಡಿಸಿ ದೀಪಗಳಿಂದ ಅಲಂಕಾರ ಮಾಡುತ್ತಾರೆ. ಮುಂದೆ ನಡೆಯುವುದು ಷೋಡಶ ಉಪಚಾರ ಪೂಜೆ. ಅಂದರೆ ಮನೆಗೆ ಅತಿಥಿಗಳು ಬಂದರೆ ನಾವು ಹೇಗೆ ಆದರಣೆ ಮಾಡುತ್ತೆವೆಯೋ ಹಾಗೆ. ಹೂವು, ದೀಪಗಳು, ಹಣ್ಣು ಕಾಯಿ, ಪಂಚಕಜ್ಜಾಯ ನೈವೇದ್ಯ, ಭಜನೆ, ಆರತಿ ಮೊದಲಾದ ಉಪಚಾರಗಳ ಮೂಲಕ ತುಳಸಿಯನ್ನು ಪೂಜೆ ಮಾಡಿ ತುಳಸಿ ಮತ್ತು ವಿಷ್ಣುವಿನ ವಿವಾಹವನ್ನು ಸಂಭ್ರಮಿಸುವ ಹಬ್ಬ ಇದು.

Tulsi Pooja

ಇದನ್ನೂ ಓದಿ: Raja Marga Column : ಅಂದು ಕಪಿಲ್ ದೇವ್ ಮೈಯಲ್ಲಿ ಆವೇಶ ಬಂದಿತ್ತು‌, ಥೇಟ್ ಕಾಂತಾರ ಸ್ಟೈಲಲ್ಲಿ!

ತುಳಸಿಕಟ್ಟೆಯಲ್ಲಿ ಮಹಾ ವಿಷ್ಣುದೇವರನ್ನು ಶಾಲಿಗ್ರಾಮವಾಗಿ ಆವಾಹನೆ ಮಾಡಿರುತ್ತಾರೆ. ನೆಲ್ಲಿ ಕಾಯಿಯನ್ನು ತುಪ್ಪದಲ್ಲಿ ಮುಳುಗಿಸಿ ತುಳಸಿಗೆ ಪೂಜೆ ಮಾಡುತ್ತಾರೆ. ಹಣ್ಣು ಕಾಯಿ, ಪಂಚ ಕಜ್ಜಾಯ ನೈವೇದ್ಯಗಳ ಮೂಲಕ ಸಾಂಪ್ರದಾಯಿಕ ತುಳಸಿಪೂಜೆ ಮುಕ್ತಾಯ ಆಗುತ್ತದೆ. ತುಳಸಿ ಮಾತೆಯ ಅನುಗ್ರಹದಿಂದ ಗೃಹಿಣಿಯರ ಮಾಂಗಲ್ಯಯೋಗ ಮತ್ತು ಸಂಪತ್ತು ವೃದ್ದಿಯಾಗುತ್ತದೆ ಎನ್ನುತ್ತವೆ ನಮ್ಮ ಶಾಸ್ತ್ರಗಳು.

||ಪ್ರಸೀದ ತುಳಸೀದೇವಿ ಪ್ರಸೀದ ಹರಿ ವಲ್ಲಭೇ||
||ಕ್ಷೀರೋಧಮಥನೋದ್ಭೂತೆ ತುಳಸಿ ತ್ವಾಂ ನಮಾಮ್ಯಹಮ್||

(ಮಹಾವಿಷ್ಣುವಿನ ಪತ್ನಿಯಾದ ಮತ್ತು ಸಮುದ್ರ ಮಥನದಲ್ಲಿ ಜನ್ಮ ತಾಳಿದ ತುಳಸಿದೇವಿಗೆ ನಮ್ಮ ನಮನಗಳು. ಆಕೆಯ ಅನುಗ್ರಹ ನಮಗೆಲ್ಲ ದೊರೆಯಲಿ)

Continue Reading

ಅಂಕಣ

Prerane Column : ನೀವು ಆಹಾರವನ್ನು ಅನುಭವಿಸುತ್ತಾ ತಿಂತೀರಾ? ಇಲ್ಲ ಸುಮ್ನೆ ನುಂಗ್ತೀರಾ?

Prerane Column : ನಾವು ಹೇಗೆ ಬದುಕಬೇಕು ಎನ್ನುವುದನ್ನು ನಾವೇ ನಿರ್ಧಾರ ಮಾಡಬೇಕು. ಬದುಕನ್ನು ಅನುಭವಿಸದೆ, ಆಹಾರವನ್ನು ಒಮ್ಮೆಲೇ ನುಂಗಿದಂತೆ ಬದುಕುವುದಲ್ಲ ಎನ್ನುತ್ತಾರೆ ಸದ್ಗುರು.

VISTARANEWS.COM


on

Eating food sadghuru prerane
Koo

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ನನ್ನನ್ನು ಅನೇಕ ಯುವಕರು ಕೇಳುವ ಪ್ರಶ್ನೆ: ನನ್ನ ಜೀವನವನ್ನು (Prerane Column) ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ, ಯಾವುದನ್ನು ಅನುಸರಿಸುವುದು? (How to lead our life?)

ನಿಮ್ಮ ಅನುಭವದಲ್ಲಿಲ್ಲದ ಯಾವುದನ್ನಾದರೂ ನಿಜವೆಂದು ಸಂಪೂರ್ಣವಾಗಿ ನಂಬುವುದು ಎಂತಹ ಮೂರ್ಖತನವೋ, ಸುಳ್ಳೆಂದು ಉದಾಸೀನ ಮಾಡುವುದೂ ಅಷ್ಟೇ ಪ್ರಮಾಣದ ಮೂರ್ಖತನವೆನಿಸುತ್ತದೆ. ಕೆಲವರು ತಮ್ಮ ಜೀವನವನ್ನು ಬೇರೆ ಯಾರಾದರೂ ನಡೆಸಿಕೊಟ್ಟರೆ ಚೆನ್ನಾಗಿರುತ್ತದೆಂದು ಸೋಮಾರಿತನವನ್ನು ವ್ಯಕ್ತಪಡಿಸುತ್ತಾರೆ. ಇದನ್ನು ಮಾಡುತ್ತೇನೆ, ಅದನ್ನು ಸಾಧಿಸುತ್ತೇನೆ ಎಂದು ಕೇವಲ ಯೋಜನೆಗಳನ್ನು ಹಾಕಿಕೊಂಡೇ ಕಾಲ ಕಳೆಯುತ್ತಾರೆ. ಅದಕ್ಕಾಗಿ ಬೇರೆ ಯಾರನ್ನಾದರೂ ಯೋಚಿಸಲು ಸಹಾಯ ಬೇಡುತ್ತಾರೆ. ಇವರು ಯೋಚನೆಗಳನ್ನು ಮಾಡುತ್ತಾ ಅವರಿವರ ಮಾರ್ಗದರ್ಶನದಲ್ಲಿಯೇ ಕಾಲಹರಣ ಮಾಡಿಬಿಡುತ್ತಾರೆ.

ಕೆಲವರಿಗೆ ಮತ್ತೆ ಮತ್ತೆ ಕೆಲವು ವಿಷಯಗಳನ್ನು ಆಲಿಸುವುದರಲ್ಲಿ ಸುಖವಿರುತ್ತದೆ. ಅನೇಕ ಕಥಾಪ್ರಸಂಗಗಳಿಗೆ, ಭಾಷಣಗಳಿಗೆ ಹೋಗಿಬರುತ್ತಾರೆ. ಅಲ್ಲಿ ಹೇಳುವುದೆಲ್ಲವನ್ನೂ ಅರ್ಥ ಮಾಡಿಕೊಂಡವರಂತೆ ತಲೆಯಾಡಿಸುತ್ತಾರೆ. ಅಂತಹವರಿಗೆ ಯಾರಾದರೊಬ್ಬರ ಮಾತು ಕೇಳಿಸುತ್ತಿದ್ದರೆ ಸಾಕು. ಅದರ ಮೂಲಕ ತಮ್ಮ ಜೀವನ ಸುಗಮವಾಗುತ್ತದೆಂದು ನಂಬುತ್ತಾರೆ.

ಕುಡಿಯಬೇಡಿ ಎಂದು ಕುಡುಕ ಹೇಳುವಂತಿಲ್ಲವೇ?

ಹಾಗಾಗಿ, ಹಿತವಚನವನ್ನು ಹೇಳುವ ಎಲ್ಲರೂ ವಿರೋಧಿಗಳಲ್ಲ. ನಿಮಗೆ ಹಿತನುಡಿಯನ್ನು ಹೇಳುವವರು ಅದಕ್ಕೆ ಯೋಗ್ಯರಾಗಿದ್ದಾರೆಯೆ ಎಂದು ನೀವು ತೀರ್ಪು ನೀಡುವುದು ತಪ್ಪು. ಒಬ್ಬನಿಗೆ ಕುಡಿತದ ಅಭ್ಯಾಸದಿಂದ ಎಲ್ಲಾ ಬಗೆಯ ರೋಗಗಳು ಬಂದಿದೆ. ಅವನು ಕುಡಿದು ಬೀದಿಯಲ್ಲೆಲ್ಲಾ ಬಿದ್ದು ಹೊರಳಾಡುತ್ತಾನೆ. ಮದ್ಯದಂಗಡಿಯ ಬಾಗಿಲಲ್ಲಿ ನಿಂತಿರುವ ಜನರನ್ನು ನೋಡಿ ಹೇಳುತ್ತಾನೆ: ಕುಡಿಯಬೇಡಿರೋ, ದೇಹಕ್ಕೆ ಕೆಟ್ಟದ್ದು.

Prerane column-drunkard

ʻಅರೆ, ಇವನೇ ಕುಡುಕ, ಇವನೇನು ನಮಗೆ ಹೇಳುವುದುʼ ಎಂದು ನೀವು ಕುಡಿಯಲು ಪ್ರಾರಂಭಿಸಿದರೆ ತೊಂದರೆ ಯಾರಿಗೆ? ಅವನ ಕೆಟ್ಟ ಅನುಭವದ ಹಿನ್ನೆಲೆಯಲ್ಲಿ ಹಿತವಚನ ಹೇಳಿದರೆ, ಹೇಳುವ ಅರ್ಹತೆ ಅವನಿಗಿಲ್ಲವೆಂದು ಕೇಳಲು ನಿರಾಕರಿಸಿದರೆ, ಯಾರಿಗೆ ನಷ್ಟ? ಅದು ಬುದ್ಧಿವಂತಿಕೆಯೆ? ಸಿಗರೇಟ್ ಸೇದಬೇಡವೆಂದು ನಮ್ಮ ಅಪ್ಪ ಹೇಳುತ್ತಾರೆ. ಆದರೆ ಅವರೇ ಒಬ್ಬ ಚೈನ್ ಸ್ಮೋಕರ್’ ಎಂದು ನನ್ನೊಡನೆ ಅನೇಕ ಯುವಕರು ವ್ಯಥೆಪಟ್ಟುಕೊಂಡಿದ್ದಾರೆ. ನಿಮ್ಮ ತಂದೆ ನಿಮಗಾಗಿ ಏನೇನನ್ನೋ ತಂದುಕೊಟ್ಟಾಗ ಅದೆಲ್ಲವನ್ನೂ ಅವರು ತಮಗೂ ಇಟ್ಟುಕೊಂಡಿದ್ದಾರೆಯೇ ಎಂದು, ಎಂದಾದರೂ ನೀವು ಕಳವಳಗೊಂಡಿದ್ದೀರಾ? ಹಿತವಚನ ಹೇಳುವಾಗ ಮಾತ್ರ ಅದು ಅವರಿಗೆ ಸರಿಯಾದುದೆ, ಅಲ್ಲವೇ ಎಂದು ಏಕೆ ಪ್ರಶ್ನೆ ಏಳುತ್ತದೆ? ಹಿತವಚನ ನೀಡುತ್ತಿರುವುದು ನಿಮಗಾಗಿ, ಅದನ್ನು ಅಂತಹ ದೃಷ್ಟಿಯಿಂದ ನೋಡಬೇಕು.

ಗಂಡನಿಗೆ ಅವನು ಎಲ್ಲವನ್ನೂ ಕೊಟ್ಟ.. ಆದರೆ!

ಒಬ್ಬ ಮಾನಸಿಕ ವೈದ್ಯರ ಬಳಿಗೆ ಬಂದಿದ್ದ ಹೆಂಡತಿ, ನನ್ನ ಮೇಲೆ ಇವರಿಗೆ ಅಕ್ಕರೆಯೇ ಇಲ್ಲ' ಎಂದಳು. ಅದಕ್ಕೆ ಗಂಡ,ಇವಳಿಗೆ ಏನು ಕೊರತೆಯನ್ನುಂಟುಮಾಡಿದ್ದೇನೆ. ಮನೆಯಲ್ಲಿ ಈಜಲು ಕೊಳ, ಜಿಮ್, ಹೋಮ್ ಥಿಯೇಟರ್‌ಗಳನ್ನು ಮಾಡಿಕೊಟ್ಟಿದ್ದೇನೆ. ಮಹಿಳಾ ಸಂಘದಲ್ಲಿ ಸದಸ್ಯೆಯನ್ನಾಗಿ ಮಾಡಿದ್ದೇನೆ. ಅಕ್ಕರೆಯಿಲ್ಲದಿದ್ದರೆ ಇವೆಲ್ಲವನ್ನು ಮಾಡುತ್ತಿದ್ದೆನೇನು?’ ಎಂದನು.

ಇಬ್ಬರ ಬಗೆಗೂ ವಿವರಗಳನ್ನು ಕೇಳಿದ ಮಾನಸಿಕ ವೈದ್ಯರು, `ಇಲ್ಲಿ ಗಮನಿಸಿ’ ಎಂದು ಗಂಡನಿಗೆ ಹೇಳಿದರು. ಹೆಂಡತಿಯ ಮುಖವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಮೆಲ್ಲನೆ ತಡವಿ, ನೀನು ತುಂಬಾ ಸುಂದರವಾಗಿದ್ದೀ ಎಂದರು. ನಂತರ ಪ್ರೀತಿಯಿಂದ ಮೆಲ್ಲನೆ ಮುತ್ತನ್ನಿಟ್ಟರು.

prerane Husband and Column
prerane Husband and Column

ಅನಂತರ ಗಂಡನತ್ತ ತಿರುಗಿ, ‘ನಿಮ್ಮ ಮಡದಿಗೆ ಪ್ರತಿವಾರವೂ ಎರಡು ಬಾರಿಯಾದರೂ ಇಂತಹ ಪ್ರೇಮ ಮತ್ತು ಪ್ರೀತಿ ಅಗತ್ಯವಿರುತ್ತದೆ’ ಎಂದರು. ತಕ್ಷಣ ಗಂಡನು ಒಂದು ಡೈರಿಯನ್ನು ಹೊರತೆಗೆದು ನೋಡಿ, ‘ಸೋಮವಾರಗಳಲ್ಲಿ ಮತ್ತು ಗುರುವಾರಗಳಲ್ಲಿ ಇವಳನ್ನು ಕರೆದುಕೊಂಡು ಬರಲು ಸಾಧ್ಯವಾಗುತ್ತದೆ. ನಿಮಗೆ ಅನುಕೂಲವೇ ಡಾಕ್ಟರ್’ ಎಂದನು..!

ಹೂವು ಅರಳಬೇಕು ಎಂದರೆ ಗೊಬ್ಬರ ಕೊಡಬೇಕು!

ನೀವು ಸರಿಯಾಗಿ ಅರ್ಥಮಾಡಿಕೊಂಡ ಮಾತ್ರಕ್ಕೆ ಗಿಡಗಳು ಹೂವು ಬಿಡುವುದಿಲ್ಲ. ಅದರ ಬದಲು, ಹೂಗಿಡಗಳಿಗೆ ಸಾರವತ್ತಾದ ಗೊಬ್ಬರ ನೀಡಿ, ನೀರುಣಿಸಿ ಅವನ್ನು ಸರಿಯಾಗಿ ನೋಡಿಕೊಂಡರೆ ಹೂಗಳು ದೊರೆಯುತ್ತವೆ. ಸುವಾಸನೆ ಹರಡುತ್ತದೆ. ಸುವಾಸನೆ ಹೆಚ್ಚಾಗಿರಬೇಕೆಂದು ಗಿಡಗಳಿಗೆ ಗೊಬ್ಬರವನ್ನಾಗಿ, ಸುವಾಸನೆಯನ್ನು ಹಾಕಿದರೆ ಆಗುತ್ತದೆಯೇ? ದುರ್ವಾಸನೆಯಿಂದ ಕೂಡಿದ ಗೊಬ್ಬರವನ್ನು ತಾನೆ ಹಾಕಬೇಕಾಗಿರುವುದು? ಅಗತ್ಯವಿರುವ ಸರಿಯಾದ ಮೂಲವಸ್ತುಗಳನ್ನು ಬೇರುಗಳಿಗೆ ನೀಡಿದರೆ ಬೀಜದ ಗುಣಕ್ಕನುಗುಣವಾಗಿ ಹೂವುಗಳು ತಾವೇ ತಾವಾಗಿ ಅರಳುತ್ತವೆ. ಇದು ಅಮೋಘವಾದ ಹೂವುಗಳನ್ನು ಪಡೆಯಲು ಇರುವ ಒಂದೇ ದಾರಿ.

plant with flowers prerane column

ಇತರರನ್ನು ತಿಳಿದುಕೊಳ್ಳಲು ಮುಂದಾಗುವುದನ್ನು ನಿಲ್ಲಿಸಿ. ಅವರ ಪ್ರಗತಿಗೆ ಬೇಕಾಗಿರುವ ಅವಕಾಶಗಳನ್ನು ಕಲ್ಪಿಸಿಕೊಡಿ ಅದಷ್ಟೇ ಸಾಕು. ನಿಮಗಾಗಿ ಹೇಳಿರುವುದನ್ನು, ಯಾರು ಹೇಳಿದ್ದಾರೋ ಅವರಿಗೆ ಅನ್ವಯಿಸಿ ನೋಡುವುದು, ಆ ಗಂಡನು ತನ್ನ ಹೆಂಡತಿಯ ವಿಷಯದಲ್ಲಿ, ಮಾನಸಿಕ ವೈದ್ಯನನ್ನು ಅರ್ಥ ಮಾಡಿಕೊಂಡಂತೆ ಆಗುತ್ತದೆ.

ಯಾವುದೇ ಹಿತವಚನವಾದರೂ ಅದು ನಿಮ್ಮ ಜೀವನಕ್ಕೆ ಅಗತ್ಯವೆ ಇಲ್ಲವೆ ಎಂಬುದನ್ನು ಮಾತ್ರ ನೋಡಿ. ಕೆಲವರನ್ನು ನೋಡಿದ್ದೇನೆ. ಯಾವಾಗ ನೋಡಿದರೂ, ‘ಬಹಳ ವ್ಯಸ್ತವಾಗಿ ಓಡುತ್ತಿದ್ದೇನೆ. ಸಮಯವೇ ಇಲ್ಲ’ ಎನ್ನುತ್ತಾರೆ. ಎಲ್ಲರಿಗೂ ಸಿಗುವುದು 24 ಗಂಟೆಗಳ ಸಮಯ ಮಾತ್ರ. ಅಷ್ಟರಲ್ಲಿ ಏನನ್ನು ಮಾಡಲು ಸಾಧ್ಯ, ಏನನ್ನು ಮಾಡಲಾಗದು ಎಂಬ ವಿಷಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ.

ನಿಮ್ಮ ದೇಹ, ಮನಸ್ಸು, ಶಕ್ತಿ ಇವು ಯಾವ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲು ಸಮರ್ಥವಾಗಿವೆಯೆಂಬುದಕ್ಕೆ ಅನುಗುಣವಾಗಿ ನೀವು ಎಷ್ಟು ಕೆಲಸ ಮಾಡಬಹುದೆಂಬುದನ್ನು ತೀರ್ಮಾನಿಸಬೇಕಾಗುತ್ತದೆ. ಇವು ಸಮರ್ಥವಾಗಿಲ್ಲದಿದ್ದರೆ ಎಷ್ಟೇ ಸಮಯ ದೊರೆತರೂ ಅದು ಸಾಕಾಗದೆ ಹೋಗಬಹುದು.

ಕಾಲ ಕಳೆಯಲೆಂದು ಮಾಡುವ ನಮ್ಮ ಕೆಲ ಕೆಲಸಗಳು ಅರ್ಥವಿಲ್ಲದಂತಾಗುತ್ತವೆ. ನೀವು ಎಷ್ಟು ಗಂಟೆಗಳ ಕಾಲ ಕೆಲಸ ಮಾಡಿದ್ದೀರಿ ಎಂಬುದು ಮುಖ್ಯವಲ್ಲ. ಅದರಲ್ಲಿ ನೀವು ಎಷ್ಟು ಸಮಯ, ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿ ಕೆಲಸ ಮಾಡಿದ್ದೀರಿ ಎಂಬುದು ನಿಮ್ಮ ಗೆಲುವನ್ನು ತೀರ್ಮಾನಿಸುತ್ತದೆ.

ಕುಟುಂಬ, ಸಮಾಜ, ಸ್ನೇಹಿತರು, ಬಂಧು ವರ್ಗದವರು ಮುಂತಾಗಿ ಹಲವರಿಗೆ ಸಮಯವನ್ನು ಮೀಸಲಿಡುವುದನ್ನು ತಪ್ಪಿಸಲಾಗುವುದಿಲ್ಲ. ಪ್ರತಿಯೊಬ್ಬರೂ ಜೀವನ ವಿಧಾನಕ್ಕೆ ಅನುಗುಣವಾಗಿ ಯಾವುದಕ್ಕೆ ಪ್ರಾಧಾನ್ಯ ನೀಡಬೇಕು, ಯಾವುದಕ್ಕೆ ಎರಡನೆಯ ಸ್ಥಾನವನ್ನು ನೀಡಬೇಕು ಎಂದು ತೀರ್ಮಾನಿಸಲು ಸಾಧ್ಯವಿದೆ. ಎಲ್ಲರಿಗೂ ಒಂದೇ ರೀತಿಯ ನಿಯಮ ಪಾಲಿಸಲಾಗುವುದಿಲ್ಲ.

Prerane column Sadghuru Jaggi Vasudev

ಶಂಕರನ್‌ ಪಿಳ್ಳೈ ಅವರ ಸ್ನೇಹಿತರ ಪ್ಲ್ಯಾನ್‌!

ಕೈಯಲ್ಲಿರುವ ಕೆಲಸಗಳಲ್ಲಿ ಯಾವುದು ಮುಖ್ಯವೆಂಬ ವಿಚಾರವನ್ನು ನೀವೇ ತೀರ್ಮಾನಿಸಬೇಕು. ದೊಡ್ಡ ಕಂಪನಿಯಲ್ಲಿ ಮುಖ್ಯ ಹುದ್ದೆಯಲ್ಲಿದ್ದ ಶಂಕರನ್ ಪಿಳ್ಳೆಯವರ ಸ್ನೇಹಿತರೊಬ್ಬರು, ನಮ್ಮ ಕಂಪನಿಯಲ್ಲಿರುವ ಪ್ರತಿಯೊಬ್ಬ ಕೆಲಸಗಾರರಿಗೂ, ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಎರಡು ವಾರಗಳ ರಜೆ ಕೊಟ್ಟು ಕಳುಹಿಸುತ್ತೇವೆ ಎಂದರು.

ಪಿಳ್ಳೆಯವರು ಆಶ್ಚರ್ಯದಿಂದ ಕೇಳಿದರು, ನಿಮ್ಮ ಕೆಲಸಗಾರರಲ್ಲಿ ನಿಮಗೆ ಅಷ್ಟೊಂದು ಅನುಕಂಪವೆ?
ಅದಕ್ಕವರು, ಹಾಗೇನೂ ಇಲ್ಲ. ಯಾರ ಗೈರುಹಾಜರಿಯಲ್ಲಿ ನಮ್ಮ ಕಂಪನಿಯು, ಸಮಸ್ಯೆಗಳಿಲ್ಲದೆ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳುವ ಉಪಾಯ ಇದು ಎಂದರು.

employee prerane column

ಬೇರೆ ಏನನ್ನು ಕಳೆದುಕೊಂಡರೂ ಮತ್ತೆ ಅದನ್ನು ಪಡೆಯಲು ಏನಾದರೊಂದು ಅವಕಾಶ ದೊರೆಯಬಹುದು. ಆದರೆ ಕಳೆದುಹೋದ ನಿಮಿಷಗಳನ್ನು ಎಂತಹವರಿಗೂ ಮತ್ತೆ ಪಡೆಯಲು ಸಾಧ್ಯವಿಲ್ಲ. ತಿನ್ನುವಾಗ ದವಡೆಯ ತುಂಬ ತುಂಬಿಕೊಂಡರೆ ಬಾಯಿ ಕದಲುವುದಿಲ್ಲ, ಉಸಿರು ಕಟ್ಟುತ್ತದೆ. ವಿರಾಮವಿಲ್ಲದೆ ಜೀವಿಸುವುದು ತಪ್ಪು. ದೇಹ-ಮನಸ್ಸಿಗೆ ಆಗಾಗ್ಗೆ ವಿಶ್ರಾಂತಿ ನೀಡಿದಾಗ ಮಾತ್ರ ಸಂಪೂರ್ಣವಾದ ಸಾಮರ್ಥ್ಯ ಹೊರಬರಲು ಸಾಧ್ಯವಾಗುವುದು.

ಎಂದಾದರೂ ಬೆಳಗಿನ ಜಾವ ಪಕ್ಷಿಗಳು ಕೂಗುವಾಗ, ಬೇರೆ ಪಕ್ಷಿಗಳು ಅದಕ್ಕೆ ಮಾರ್ದನಿ ಕೊಡುವುದನ್ನು ಕೇಳಿ ಉತ್ಸಾಹ ಪಟ್ಟಿದ್ದೀರಾ? ಅದೆಷ್ಟು ದಿನಗಳು ಸ್ನಾನಮಾಡುವಾಗ ದೇಹದ ಪ್ರತಿಯೊಂದು ಭಾಗವೂ ನೀರಿನಲ್ಲಿ ತೊಯ್ದು, ಸೋರಿ ಹೋಗುವುದನ್ನು ರಂಜನೆಯನ್ನಾಗಿ ಮಾಡಿಕೊಂಡಿದ್ದೀರಿ? ಗಾಡಿಯನ್ನು ಓಡಿಸುವಾಗ ಏನೋ ಯೋಚನೆಗಳನ್ನು ಮಾಡದೆ, ಅದರ ಅನುಭವವನ್ನು ನೀವು ಸಂಪೂರ್ಣವಾಗಿ ಸವಿದಿದ್ದೀರಿ?

ಇದನ್ನೂ ಓದಿ : Prerane Column : ದೇವರೆಂದರೆ ಲೈಫ್‌ ಇನ್ಶೂರೆನ್ಸ್‌ ಅಲ್ಲ, ನಿಮ್ಮನ್ನು ಕಾಯೋ ಸೈನಿಕನೂ ಅಲ್ಲ!

ನೀವು ತಿನ್ನುವ ಆಹಾರವನ್ನು ಅನುಭವಿಸುತ್ತಿದ್ದೀರಾ?

ಎಷ್ಟೇ ರುಚಿಕರವಾದ ಆಹಾರವಾಗಿದ್ದರೂ ಮೊದಲನೆಯ ತುತ್ತನ್ನು ಅನುಭವಿಸಿ ತಿನ್ನುತ್ತೀರಿ. ಅನಂತರದ ತುತ್ತುಗಳು ಅಭ್ಯಾಸಬಲದಿಂದ ತಾನೇ ತಾನಾಗಿ ಬಾಯಿಗೆ ಹೋಗುತ್ತದೆ. ಬಾಯಿಗೆ ಹಾಕಿಕೊಂಡ ಆಹಾರ ಹೇಗೆ ಅಗಿಯಲಾಗುತ್ತದೆ ಮತ್ತು ಅದು ಅನ್ನನಾಳದ ಮೂಲಕ ಹೊಟ್ಟೆಯೊಳಗೆ ಹೇಗೆ ಇಳಿಯುತ್ತದೆ ಎಂಬುದನ್ನು ಒಂದು ಬಾರಿಯಾದರೂ ಪೂರ್ತಿಯಾಗಿ ಗಮನಿಸಿದ್ದೀರಾ?

Eating food prerane

ಆನಂದವನ್ನು ಪಡೆಯುವುದಕ್ಕಾಗಿ ಕೆಲಸಗಳನ್ನು ಮಾಡುತ್ತಿರುವುದು ಎಂಬುದನ್ನು ಮರೆತು ಕೆಲಸಗಳನ್ನು ಮಾಡುತ್ತಿದ್ದರೆ, ಸ್ವಲ್ಪ ಸಮಯದಲ್ಲಿ, ಈ ಕೆಲಸವನ್ನು ಮಾಡುತ್ತಾ ಸಮಯವನ್ನು ವ್ಯರ್ಥ ಮಾಡುತ್ತಿದ್ದೇನೆ ಎಂದು ನಿಮಗೆ ಅನ್ನಿಸತೊಡಗುತ್ತದೆ. ಸುಮ್ಮನೆ ಉಸಿರಾಡಲು ಇಲ್ಲಿ ಹುಟ್ಟಿದ್ದೆ? ಜೀವವನ್ನು ದೇಹದಲ್ಲಿರಿಸಿಕೊಳ್ಳುವುದಕ್ಕೆ ಮಾತ್ರ ಅದರಿಂದ ಉಪಯೋಗವಾಗುತ್ತದೆ.

ಜೀವಸಹಿತವಾಗಿರುವುದು ಬೇರೆ, ಜೀವಸಹಿತ ಬದುಕುವುದು ಬೇರೆ. ಒಂದೇ ಒಂದು ಕ್ಷಣವಾದರೂ ಸಂಪೂರ್ಣವಾಗಿ ಜಾಗೃತಿಯ ಭಾವನೆಯಲ್ಲಿ ಜೀವನ ನಡೆಸಿ ನೋಡಿ. ನಿಮ್ಮ ಜೀವನ ವಿಧಾನವೇ ಬದಲಾಗಿ ಬಿಡುತ್ತದೆ.

ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – [email protected]

Continue Reading
Advertisement
PM Narendra Modi phone call to workers, who rescued from collapsed tunnel
ದೇಶ1 hour ago

ಸುರಂಗದಿಂದ ರಕ್ಷಿಸಲಾದ ಕಾರ್ಮಿಕರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ!

mantralaya mutt
ಕರ್ನಾಟಕ2 hours ago

ಮಂತ್ರಾಲಯ ಮಠಕ್ಕೆ ಭಕ್ತರೊಬ್ಬರಿಂದ ಹೆಲಿಕಾಪ್ಟರ್‌ ಕೊಡುಗೆ

Uttarakhand CM announces rs 1 lakh rupees to trapped labourers Who rescued after 17 days
ದೇಶ3 hours ago

ಬದುಕುಳಿದು ಬಂದ ಕಾರ್ಮಿಕರಿಗೆ 1 ಲಕ್ಷ ಪರಿಹಾರ ಎಂದ ಉತ್ತರಾಖಂಡ ಸಿಎಂ ಧಾಮಿ

Maxwell
ಕ್ರಿಕೆಟ್3 hours ago

Ind vs Aus : ಮ್ಯಾಕ್ಸ್​ವೆಲ್​ ಸ್ಫೋಟಕ ಶತಕ; 3ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು

Siddaramaiah
ಕರ್ನಾಟಕ3 hours ago

ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಸಿದ್ದರಾಮಯ್ಯ ಧನ್ಯವಾದ

Uttarkashi Tunnel Rescue and Makeshift hospital
ದೇಶ3 hours ago

ಸುರಂಗದಿಂದ 41 ಕಾರ್ಮಿಕರ ರಕ್ಷಣೆ; ಮುಂದೇನಾಗುತ್ತದೆ ಎಂಬುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Top 10 news
ಕರ್ನಾಟಕ4 hours ago

VISTARA TOP 10 NEWS: ಸುರಂಗದಲ್ಲಿ ಸಿಲುಕಿದ್ದ ಎಲ್ಲ ಕಾರ್ಮಿಕರ ರಕ್ಷಣೆ, ಮಕ್ಕಳ ಮಾರಾಟ ಬೃಹತ್​ ಜಾಲ ಪತ್ತೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Uttarakhand Tunnel Collapse
EXPLAINER4 hours ago

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

Uttarkashi Tunnel rescue success makes us emotional says PM Narendra Modi
ದೇಶ5 hours ago

ಕಾರ್ಮಿಕರ ರಕ್ಷಣೆಯ ಯಶಸ್ಸು ನಮ್ಮನ್ನೆಲ್ಲ ಭಾವುಕರನ್ನಾಗಿಸಿದೆ ಎಂದ ಪ್ರಧಾನಿ ಮೋದಿ

Ruturaj Gaikwad
ಕ್ರಿಕೆಟ್5 hours ago

Ruturaj Gaikwad : ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ ಋತುರಾಜ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ21 hours ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ1 day ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ1 day ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ2 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ2 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

BY Vijayendra and HD Kumarswamy
ಕರ್ನಾಟಕ2 days ago

BJP JDS Alliance: ಎಚ್‌ಡಿಕೆ-ವಿಜಯೇಂದ್ರ ಭೇಟಿ; 28ಕ್ಕೆ 28 ಸ್ಥಾನ ಗೆಲ್ಲುವ ಪಣ!

ಟ್ರೆಂಡಿಂಗ್‌