prerane morning spiritual thoughts in kannada about moha or InfatuationPrerane : ಮೋಹ-ಮಮಕಾರ; ಏನಿದರ ನಿಜ ಸಾರ? - Vistara News

ಧಾರ್ಮಿಕ

Prerane : ಮೋಹ-ಮಮಕಾರ; ಏನಿದರ ನಿಜ ಸಾರ?

ಮೋಹದಿಂದಲೇ ಸಂತಸವು ಪ್ರಾಪ್ತಿಯಾಗುತ್ತದೆ. ಮೋಹವೇ ಸುತ್ತುವಂತೆ ಮಾಡುತ್ತದೆ. ಮೋಹವೇ ಕೆಳಕ್ಕೆ ಉರುಳಿಸುತ್ತದೆ. ಮೋಹವೇ ಜೀವನದ ದುಃಖ ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಅವರ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿ.

VISTARANEWS.COM


on

moha or Infatuation
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
sri kaivalyananda swamiji

ಶ್ರೀ ಕೈವಲ್ಯಾನಂದ ಸರಸ್ವತೀ
ಶ್ರೀ ಶ್ರೀ ಶಂಕರಭಗವತ್ಪಾದರು ʻಮೋಹ’ವೆಂದರೆ ಅವಿವೇಕ ಎನ್ನುತ್ತಾರೆ. ಆತ್ಮಾನತ್ಮಗಳನ್ನು ಕಲೆಬೆರಕೆ ಮಾಡಿಕೊಂಡಿರುವ ತಪ್ಪು ತಿಳಿವಳಿಕೆ. ಈ ತಪ್ಪು ತಿಳಿವಳಿಕೆಯಿರುವುದರಿಂದ, ಆತ್ಮಾನಾತ್ಮವಿವೇಕಜ್ಞಾನವನ್ನು ಕದಡಿಬಿಡುತ್ತದೆ. ಮನಸ್ಸು ವಿಷಯದ ಕಡೆಗೆ ಹರಿಯುವಂತೆ ಮಾಡುತ್ತದೆ. ವಿಷಯಗಳಿಗೆ ಮನಸ್ಸು ಅಂಟಿಕೊಳ್ಳುತ್ತದೆ. (ಭ.ಗೀ. ಭಾಷ್ಯಾಭಿಪ್ರಾಯ 2-52, ಭಾ.ಭಾ.103 ಭಾಷ್ಯ ಭಾಗಗಳ ಸಂಖ್ಯೆ, ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, ಹೊಳೇನರಸೀಪುರ – ಇವರಿಂದ ಪ್ರಕಟಿತವಾದ ಗೀತಾಭಾಷ್ಯ ಗ್ರಂಥವನ್ನು ಆಧರಿಸಿದೆ).

ಮನುಷ್ಯ ಜೀವನದಲ್ಲಿ ಎರಡು ರೀತಿ ಕತ್ತಲಿದೆ. ಒಂದು ಪ್ರಕಾಶ ತರುವುದರಿಂದ ಹೊರಟುಹೋಗುತ್ತದೆ. ಇದು ಭೌತಿಕವಾದ ಅಂಧಕಾರ ಎಲ್ಲರಿಗೂ ಗೊತ್ತಿರುವಂತಹುದು. ಮತ್ತೊಂದು ಅಂಧಕಾರ, ಮನುಷ್ಯನ ಸ್ವಭಾವವನ್ನು – ಆತ್ಮವನ್ನು ನಾಲ್ಕು ದಿಕ್ಕುಗಳಿಂದ ಆಕ್ರಮಿಸಿಕೊಳ್ಳುತ್ತದೆ. ನಾವು ಇಂತಹವರೆಂದು ಅಭಿಮಾನಿಸುವುದು, ಆ ಮೋಹದಿಂದ ನಾವು ಮಾಡುವುದು, ನಮ್ಮಿಂದ ಇತ್ಯಾದಿ ಎಲ್ಲವೂ ಅಂಧಕಾರದಲ್ಲಿ ತಡಕಾಡುತ್ತಾ ಹೋದಂತೆ. ಏನೊಂದು ಗೊತ್ತಾಗದು. ಏನಾಗುತ್ತಿದೆ ಎಂದು ಗೊತ್ತಾಗುವುದಿಲ್ಲ. ಏನು ಮಾಡುತ್ತಿದ್ದೇನೆಂಬುದು ಸಹ ಗೊತ್ತಾಗದು. ಯಾವುದು ಮಾರ‍್ಗ ಎಂಬುದು ಗೊತ್ತಾಗದು. ಕಣ್ಣುಗಳು ಇರುವುದಿಲ್ಲ – ಅಂದರೆ ಸರಿಯಾದ ದೃಷ್ಟಿಯಿಲ್ಲ. ಮನುಷ್ಯ
ಜೀವನಕ್ಕೆ ಮೋಹವೇ ಮೂಲವಾಗುತ್ತದೆ. ಮೋಹದಿಂದಲೇ ಚಿಂತನೆಗೊಳಗಾಗುತ್ತಾರೆ.

ಮೋಹದಿಂದಲೇ ಸಂತಸವು ಪ್ರಾಪ್ತಿಯಾಗುತ್ತದೆ. ಮೋಹವೇ ಸುತ್ತುವಂತೆ ಮಾಡುತ್ತದೆ. ಮೋಹವೇ ಕೆಳಕ್ಕೆ ಉರುಳಿಸುತ್ತದೆ. ಮೋಹವೇ ಜೀವನದ ದುಃಖ.

ಒಂದು ಉದಾಹರಣೆಯಿಂದ ಇದು ಸ್ಪಷ್ಟವಾಗುವುದು; ಒಬ್ಬ ತನ್ನ ಮನೆಗೆ ಬೆಂಕಿ ಬಿದ್ದಿರುವುದನ್ನು ನೋಡಿ ಅಳುತ್ತಿರುತ್ತಾನೆ. ಯಾರೋ ನಿಮ್ಮದಲ್ಲ ಮನೆ. ನಿಮ್ಮ ಮಗ ನೀವು ಊರಿನಲ್ಲಿ ಇಲ್ಲದಾಗ ಮನೆ ಮಾರಾಟ ಮಾಡಿರುತ್ತಾನೆ ಎನ್ನುತ್ತಾರೆ. ಈ ಮಾತು ಕೇಳಿದ ತಕ್ಷಣ, ಅದೇ ಮನೆ, ಅದೇ ಬೆಂಕಿ ಇವರಿಗೆ ಸಂತಸವೆನಿಸುತ್ತದೆ.

ಅಷ್ಟರಲ್ಲಿ ಮಗ ಬಂದು ಮಾರಾಟವಾಗಲಿಲ್ಲ, ನಮ್ಮದೇ ಮನೆ ಎನ್ನುತ್ತಾನೆ. ಈಗ ಅದೇ ಮನೆ, ಅದೇ ಬೆಂಕಿ ಸಂತಾಪವಾಗುತ್ತದೆ. ಇಲ್ಲಿ ಪ್ರಶ್ನೆ ಮನೆಗೆ ಬೆಂಕಿ ಬಿದ್ದಿರುವುದಲ್ಲ ʻʻನನ್ನ ಮನೆʼʼ ಎಂಬುದು ಪ್ರಶ್ನೆ. ನನ್ನ ಎಂಬುದು ದುಃಖಕ್ಕೆ ಮೂಲ. ಈ ಮೋಹದ ಗರ್ಭದಲ್ಲಿ ಒಂದು ರಹಸ್ಯ ಗುಣವಿದೆ. ಅದಾವುದೆಂದರೆ ಯಾವುದು ನನ್ನದಲ್ಲವೋ ಅದು ನನ್ನದೆನಿಸುತ್ತದೆ. ಇದೇ ಮೋಹದ ಒಂದು ಸಂಮೋಹ. ಯಾವುದು ನನ್ನದೋ, ಅದರ ಯಾವ ಪರಿಚಯವೂ ಇರುವುದಿಲ್ಲ. ಮನೆ, ಜಮೀನು, ಹೆಂಡತಿ, ಗಂಡ, ತಂದೆ, ಧರ್ಮ, ಧರ್ಮಗ್ರಂಥ, ಮಂದಿರ ಮಸೀದಿ – ಇವೆಲ್ಲವೂ ವ್ಯವಹಾರದಲ್ಲಿ ನನ್ನದೆನಿಸಿಕೊಂಡರೂ, ನನ್ನದೆಂದು ವ್ಯವಹಾರ ಮಾಡಿದರೂ ವಾಸ್ತವಿಕವಾಗಿ ನನ್ನದಾಗಲು ಸಾಧ್ಯವಿಲ್ಲ. ಏಕೆಂದರೆ ಇವೆಲ್ಲವೂ ನಾನಿರುವಾಗಲೂ ಇರುತ್ತವೆ. ನಾನಿಲ್ಲದಾಗಲೂ ಇರುತ್ತವೆ. ಆದರೂ ನಾವುಗಳು ವಿವೇಕವಿಲ್ಲದೆ ಮೋಹವನ್ನು ಬೆಳೆಸಿಕೊಳ್ಳುತ್ತೇವೆ.

ಟೀವಿ ನೋಡುವ (ಕು)ಸಂಸ್ಕೃತಿ ಬರುವುದಕ್ಕೆ ಮುನ್ನ ಅಜ್ಜಿ, ತಾತ, ಚಿಕ್ಕಮಕ್ಕಳಿಗೆ ಕಥೆ ಹೇಳುವುದನ್ನು ನೀವುಗಳು ಕೇಳಿರಬಹುದು. ಒಬ್ಬ ರಾಜ – ಆ ರಾಜನನ್ನು ಸಾಯಿಸಲು ಎಷ್ಟು ಪ್ರಯತ್ನ ಮಾಡಿದರೂ ಸಾಯುವುದಿಲ್ಲ – ರಾಜನನ್ನು ಸಾಯಿಸಲು, ರಾಜನ ಪ್ರಾಣ ಯಾವುದೋ ಒಂದು ಪಕ್ಷಿಯಲ್ಲಿ – ಒಂದು ಗಿಣಿಯಲ್ಲಿ ಇರುತ್ತದೆ. ಆ ಗಿಣಿಯ ಕುತ್ತಿಗೆ ಹಿಸುಕಿದರೆ ರಾಜ ಸಾಯುತ್ತಾನೆ. ಮಕ್ಕಳಿಗೆ ಹೇಳುವ ಈ ಕಥೆ ಬಹಳ ಮಹತ್ತರವಾದದ್ದು. ವೃದ್ಧರೂ ಅರ್ಥಮಾಡಿಕೊಳ್ಳಬೇಕಾದದ್ದು ಬಹಳಷ್ಟಿದೆ. ಮೋಹದ ಅರ್ಥ ನೀವು ನಿಮ್ಮಲ್ಲಿ ಜೀವಿಸುತ್ತಿಲ್ಲ. ಯಾರಲ್ಲಿಯೋ ಜೀವಿಸುತ್ತಿರುತ್ತೀರ. ಒಬ್ಬರ ಪ್ರಾಣ ಕಬ್ಬಿಣದ ಪೆಟ್ಟಿಗೆಯಲ್ಲಿ. ನೀವು ಅವರ ಕುತ್ತಿಗೆ ಹಿಸುಕಿದರೂ ಸಾಯರು. ಕಬ್ಬಿಣದ ಪೆಟ್ಟಿಗೆ ಯಾರಾದರೂ ಮುಟ್ಟಿದರೆ, ಅವರು ಸತ್ತಂತೆಯೇ. ಆತನ ಪ್ರಾಣ ಅಲ್ಲಿದೆ.

ಮೋಹವೆಂದರೆ ನೀವು ನಿಮ್ಮ ಪ್ರಾಣವನ್ನು ನಿಮ್ಮಿಂದ ತೆಗೆದು ಬಾಹ್ಯದಲ್ಲಿ ಎಲ್ಲಿಯೋ ಇಟ್ಟಿರುತ್ತೀರ. ಒಬ್ಬನು ತನ್ನ ಮಗನಲ್ಲಿ, ಮತ್ತೊಬ್ಬ ತನ್ನ ಹೆಂಡತಿಯಲ್ಲಿ, ಇನ್ನೊಬ್ಬ ಹಣದಲ್ಲಿ ಇಟ್ಟಿರುತ್ತಾನೆ. ಮಗದೊಬ್ಬ ಪದವಿ ಪ್ರತಿಷ್ಠೆಗಳ ಮೇಲೆ. ಈ ರೀತಿ ಪ್ರಾಣವನ್ನು ಎಲ್ಲೋ ಬಾಹ್ಯದಲ್ಲಿ ಇಟ್ಟಿರುತ್ತಾರೆ. ಪ್ರಾಣವು ಎಲ್ಲಿರಬೇಕೋ ಅಲ್ಲಿಲ್ಲ. ನಿಮ್ಮಲ್ಲಿ ಪ್ರಾಣವು ಸ್ಪಂದನವಾಗದು…. ಮತ್ತೆಲ್ಲೋ ಅದು ಸ್ಪಂದಿಸುವುದು. ಹೀಗಾದಾಗ ನೀವು ಬಹಳ ಕಷ್ಟಕ್ಕೆ ಗುರಿಯಾಗುತ್ತೀರ.

ಮೋಹವೇ ಸಂಸಾರ. ಮೋಹವು ಎಲ್ಲಿದೆಯೋ, ಯಾವುದರಲ್ಲಿದೆಯೋ ಯಾರಲ್ಲಿದೆಯೋ ಅವರಿಗೆ ನೀವು ಗುಲಾಮರಾಗುತ್ತೀರ. ರಾಜ ತನ್ನನ್ನು ತಾನು ನೋಡಿಕೊಳ್ಳುವುದರ ಬದಲು ಗಿಣಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಒಬ್ಬ ರಾಜನ ಆಸ್ಥಾನದಲ್ಲಿ ಒಬ್ಬ ಜೋತಿಷಿ ಮಂತ್ರಿಗೆ ಭವಿಷ್ಯವನ್ನು ಹೇಳುತ್ತಾನೆ. ಅವನು ಹೇಳಿದ ಸಮಯಕ್ಕೆ ಮಂತ್ರಿ ಸಾಯುತ್ತಾನೆ. ರಾಜನಿಗೆ ಜ್ಯೋತಿಷಿಯ ಮೇಲೆ ಒಳ್ಳೆ ನಂಬಿಕೆ ಬರುತ್ತದೆ. ಈ ಜ್ಯೋತಿಷಿ ಭವಿಷ್ಯ ಹೇಳಿದರೆ ಇನ್ನು ಯರ‍್ಯಾರು ಸಾಯುತ್ತಾರೋ – ಈ ಜ್ಯೋತಿಷಿಗೆ ಮರಣದಂಡನೆ ವಿಧಿಸುವುದು ಲೇಸೆಂದು, ಮರಣದಂಡನೆ ವಿಧಿಸುತ್ತಾನೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಆ ಜ್ಯೋತಿಷಿ, ʻʻರಾಜ ನಾನು ಸತ್ತ ಮರುದಿವಸ ನೀನು ಸಾಯುತ್ತೀಯೆ’’ – ಎನ್ನುತ್ತಾನೆ. ಈಗ ರಾಜ ಜ್ಯೋತಿಷಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ನೀವು ನಿಮ್ಮ ಜೀವವನ್ನು ಎಲ್ಲಿಯೋ ಇಟ್ಟಿರುತ್ತೀರ. ಹಗಲುರಾತ್ರಿ ಅದಕ್ಕಾಗಿ ಕೆಲಸಮಾಡಬೇಕು. ಮೋಹದ ಆವರಣವೆಂದರೆ ನಿಮ್ಮ ಆತ್ಮ ನಿಮ್ಮಲ್ಲಿಯೇ ಇದ್ದೂ ಸಹ ನಿಮ್ಮಲ್ಲಿ ಇಲ್ಲವಾಗಿದೆ. ಮತ್ತೆಲ್ಲೋ ಇನ್ನೊಂದು ಕಡೆ ಬಚ್ಚಿಟ್ಟುಕೊಂಡಿದೆ. ಅದು ಪತ್ನಿಯಲ್ಲಿರಬಹುದು / ಪತಿಯಲ್ಲಿರಬಹುದು, ಮಕ್ಕಳಲ್ಲಿರಬಹುದು. ಧನ, ಪ್ರತಿಷ್ಠೆಗಳಲ್ಲಿ ಇರಬಹುದು, ಎಲ್ಲಿದ್ದರೂ ಹೆಚ್ಚು ವ್ಯತ್ಯಾಸವಿಲ್ಲ.

ನಿಮ್ಮಲ್ಲಿ ಇಲ್ಲ ಅದೇ ಮುಖ್ಯ. ಎಲ್ಲಿನವರೆಗೂ ಮತ್ತೊಬ್ಬರ ಇರುವಿಕೆಯ ಮೇಲೆ ನಿಮ್ಮ ಇರುವಿಕೆ ಅವಲಂಬಿತವಾಗಿದೆಯೋ ಅಲ್ಲಿನವರೆಗೂ ನಿಮಗೆ ಮೋಹದ ಕ್ಲೇಶ ತಪ್ಪಿದ್ದಲ್ಲ. ಅಲ್ಲಿಯವರೆಗೂ ಮತ್ತೊಬ್ಬರನ್ನು ಬಿಟ್ಟಿರಲು ಸಾಧ್ಯವಿಲ್ಲ. ಅವರನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೀರ. ಅವರೆಲ್ಲಿ ಕೈಬಿಟ್ಟುಹೋಗುತ್ತಾರೋ, ಕೈಜಾರಿ ಹೋಗುತ್ತಾರೋ ಎಂಬ ಆತಂಕ. ಅವರಿಲ್ಲದೆ ನಾ ಇರಲಾರೆ ಎಂಬ ಮಾನಸಿಕ ವ್ಯಕ್ತಿ ನೀವು ರೋದಿಸುವುದಕ್ಕೆ ಕಾರಣವಾಗುವ(ಳೋ)ನಾರೋ ಅದೇ ನಿಮ್ಮ ಮೋಹ. ಯಾವು ವಸ್ತುವನ್ನೂ, ವ್ಯಕ್ತಿಯನ್ನೂ ಕಳೆದುಕೊಂಡಾಗ ನಿಮ್ಮಲ್ಲಿ ಅಭಾವವು ವ್ಯಕ್ತವಾಗುವುದೋ, ಅದೇ ನಿಮ್ಮ ಮೋಹದ ವಸ್ತು. ಯಾವ ವಸ್ತು ಕೈಜಾರಿಹೋದಲ್ಲಿ ನಿಮ್ಮಲ್ಲಿ ತಕ್ಷಣ ದೈನ್ಯತೆಯ ಭಾವವನ್ನು ಹೊಂದಲಾಗುವುದೊ ಅದೇ ಮೋಹದ ಬಿಂದು.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನೂ ಓದಿ : Prerane : ವಿದ್ಯೆ ಇಲ್ಲದವರು ಪಶುಗಳಿಗೆ ಸಮಾನರು! ಅದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಲಬುರಗಿ

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Forced Conversion : ಸಚಿವ ಪ್ರಿಯಾಂಕ್‌ ಖರ್ಗೆ ತವರಲ್ಲೇ ಹಿಂದೂಗಳ ಮತಾಂತರದ ಆರೋಪ ಕೇಳಿ ಬಂದಿದೆ. ಆರೋಗ್ಯ ಕೇಂದ್ರದ ಸಾಫ್ಟ್‌ ನರ್ಸ್‌ಗಳಿಂದಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಹಿಂದೂಗಳ ಪ್ರಚೋದಿಸುತ್ತಿದ್ದಾರೆ.

VISTARANEWS.COM


on

By

Staff nurses attempt to convert at health centre in Ratagal village
ಅಶ್ವಿನಿ ಹಾಗೂ ರಾಧಿಕಾ ಎಂಬುವವರು ಮತಾಂತರ ದಂಧೆ
Koo

ಕಲಬುರಗಿ: ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಗಲ್ ಗ್ರಾಮದಲ್ಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ (Forced Conversion) ಕೆಲಸ ಮಾಡುವ ಸ್ಟಾಫ್‌ ನರ್ಸ್‌ಗಳಿಂದ ಮತಾಂತರಕ್ಕೆ ಯತ್ನಿಸಿರುತ್ತಿರುವ (Conversion Attempt) ಗಂಭೀರ ಆರೋಪ ಎದುರಾಗಿದೆ.

ಅಶ್ವಿನಿ ಹಾಗೂ ರಾಧಿಕಾ ಎಂಬುವವರು ಮತಾಂತರ ದಂಧೆ ನಡೆಸುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಬರುವವರನ್ನೇ ಟಾರ್ಗೆಟ್‌ ಮಾಡುವ ಇವರಿಬ್ಬರು ಹಿಂದೂಗಳ ಮೇಲೆ ಕ್ರೈಸ್ತ ಧರ್ಮವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಇದನ್ನೂ ಓದಿ: Namma Metro : ಗುಡ್‌ ನ್ಯೂಸ್‌- ಫೆ.26 ರಿಂದ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಓಡಾಟ

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ತವರಿನಲ್ಲೇ ಮತಾಂತರ ನಡೆಯುತ್ತಿದೆ. ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಆದರೆ 1 ಲಕ್ಷ ರೂ. ಹಣ ನೀಡುವುದಾಗಿ ಜನರಿಗೆ ಆಮಿಷವೊಡ್ಡಿದ್ದಾರೆ. ಹಣದ ಆಮಿಷ, ಅನಾರೋಗ್ಯ, ಬಡತನಗಳನ್ನೇ ದಾಳವಾಗಿಸಿಕೊಂಡು ಮತಾಂತರ ಮಾಡುತ್ತಿದ್ದಾರೆ.

ಆರೋಗ್ಯ ಕೇಂದ್ರದಲ್ಲೇ ಬೈಬಲ್ ಓದಿಸುವ ಮೂಲಕ ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ. ಸದ್ಯ ಮತಾಂತರಕ್ಕೆ ಸಿಟ್ಟಾಗಿರುವ ಸ್ಥಳೀಯರು ಕೂಡಲೇ ಇವರನ್ನು ಆಸ್ಪತ್ರೆಯಿಂದ ಹೊರಹಾಕಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ರಟಗಲ್ ಪೊಲೀಸ್ ಠಾಣೆಯಲ್ಲಿ ಮತಾಂತರ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ರಟಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Hindu Temples : ಇನ್ನು ದೇವಾಲಯ ಆದಾಯದ 10% ಹಣ ಸರ್ಕಾರಕ್ಕೆ; ಹಿಂದೆ ಎಷ್ಟಿತ್ತು?

Hindu Temples : ರಾಜ್ಯದ ದೇವಾಲಯಗಳ ಆದಾಯದಲ್ಲಿ 10 ಶೇಕಡಾವನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂಬ ಆಪಾದನೆ ಇದೆ. ಹಾಗಿದ್ದರೆ ಹಿಂದೆ ಎಷ್ಟಿತ್ತು. ಕಿತ್ತುಕೊಂಡ ಆಪಾದನೆ ನಿಜವೇ?

VISTARANEWS.COM


on

Hindu Temples in Karnataka
Koo

ಬೆಂಗಳೂರು: ರಾಜ್ಯದಲ್ಲಿರುವ ದೇವಾಲಯಗಳ (Hindu Temples) ಹುಂಡಿಗೆ ಸರ್ಕಾರ ಕನ್ನ ಹಾಕಿದೆ. ಶ್ರೀಮಂತ ದೇವಾಲಯಗಳ ಆದಾಯದ ಶೇಕಡಾ 10ರಷ್ಟನ್ನು ಸರ್ಕಾರವೇ (State Government) ನುಂಗಿ ಹಾಕಲು ಹುನ್ನಾರ ನಡೆಸಿದೆ. ಇದು ಬುಧವಾರ ಮಂಡನೆಯಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024ರಲ್ಲಿ (Karnataka Hindu religous and Charitable Endoment act 2024) ಸ್ಪಷ್ಟವಾಗಿದೆ ಎಂದು ಬಿಜೆಪಿ ಆಪಾದಿಸಿದೆ. ಆದರೆ, ಸರ್ಕಾರ ಈ ಆಪಾದನೆಯನ್ನು ಅಲ್ಲಗಳೆದಿದೆ. ಹೊಸ ವಿಧೇಯಕದಲ್ಲಿ ದೇಗುಲಗಳಿಂದ ಹಣ ಸಂಗ್ರಹಿಸುವ ಆದಾಯ ಮಿತಿಯನ್ನೇ ಹೆಚ್ಚಿಸಲಾಗಿದೆ. ಇದರಿಂದ ದೇವಾಲಯಗಳಿಗೆ ಅನುಕೂಲವಾಗಲಿದೆ ಎಂದು ವಿವರಣೆ ನೀಡಿದೆ.

ಅಂಗೀಕಾರವಾಗಿರುವ ವಿಧೇಯಕದಲ್ಲಿರುವ ಅಂಶಗಳೇನು?

1. ಒಂದು ಕೋಟಿಗಿಂತ ಹೆಚ್ಚು ಆದಾಯ ಇರುವ ದೇವಸ್ಥಾನಗಳ ನಿವ್ವಳ ಆದಾಯದ ಶೇಕಡಾ 10ರಷ್ಟನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು.

2. ಒಂದು ಕೋಟಿಗಿಂತ ಕಡಿಮೆ ಆದಾಯ ಇರುವ ದೇವಾಲಯಗಳ ನಿವ್ವಳ ಆದಾಯದ ಶೇ. 5ರಷ್ಟನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು.

ಅಂದರೆ ಒಂದು ದೇವಸ್ಥಾನದ ಆದಾಯ 1 ಕೋಟಿ ರೂ.‌ ಒಳಗೆ ಇದ್ದರೆ ಆ ದೇವಸ್ಥಾನ ಧಾರ್ಮಿಕ ಪರಿಷತ್‌ ಶೇ. 5ರಷ್ಟು ಮೊತ್ತವನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು. ಆದಾಯ ಒಂದು ಕೋಟಿ ರೂ. ಮೀರಿದ್ದರೆ ಶೇ. 10‌ ಮೊತ್ತವನ್ನು ಪರಿಷತ್‌ಗೆ ನೀಡಬೇಕು.

ಹಾಗಿದ್ದರೆ ಈ ವಿಧೇಯಕ ಅಂಗೀಕಾರಕ್ಕೆ ಮೊದಲು ಹೇಗಿತ್ತು? ಆಗಿರುವ ಬದಲಾವಣೆ ಏನು?

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-1997ರ ಪ್ರಕಾರ, 10 ಲಕ್ಷ ರೂ. ಒಳಗೆ ಆದಾಯ ಇರುವ ದೇವಸ್ಥಾನಗಳು ಶೇಕಡಾ 5ರಷ್ಟು ಮೊತ್ತವನ್ನು ಮತ್ತು 10 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ ದೇವಾಲಯಗಳು ಶೇ. 10ರಷ್ಟು ಮೊತ್ತವನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕಾಗಿತ್ತು.

2011ರಲ್ಲಿ ತಿದ್ದುಪಡಿಗೆ ಒಳಗಾದ ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕದಲ್ಲಿ ಈ ಮಿತಿಯನ್ನು‌ ಹೆಚ್ಚಿಸಲಾಯಿತು. ಇದರ ಪ್ರಕಾರ, 25 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿರುವ ದೇವಾಲಯಗಳಿಂದ ಶೇ.10 ರಷ್ಟು ಹಣವನ್ನು ಮತ್ತು 25 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ದೇವಾಲಯಗಳ ಆದಾಯ ಶೇ. 5ರಷ್ಟನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು ಎಂದು ತಿಳಿಸಲಾಯಿತು.

ಇದನ್ನೂ ಓದಿ : Hindu Temple: ದೇವಸ್ಥಾನದ ಹಣಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಹುಂಡಿ ಇಡಿ: ಸರ್ಕಾರಕ್ಕೆ ವಿಜಯೇಂದ್ರ ಸಲಹೆ

ಹೊಸದಾಗಿ ಮಾಡಿರುವ ತಿದ್ದುಪಡಿ ಏನು?

2011ರ ವಿಧೇಯಕದ ಪ್ರಕಾರ, 25 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿರುವ ದೇವಾಲಯಗಳಿಂದ ಶೇ.10 ರಷ್ಟು ಹಣವನ್ನು ಧಾರ್ಮಿಕ ಪರಿಷತ್‌ ನಿಧಿಗೆ ಸಂಗ್ರಹಿಸುತ್ತಿದ್ದ ನಿಯಮಕ್ಕೆ ತಿದ್ದುಪಡಿ ತಂದು 1 ಕೋಟಿ ರು. ಮೀರಿದ ಆದಾಯವುಳ್ಳ ದೇವಾಲಯಗಳಿಂದ ಮಾತ್ರ ಶೇ.10 ರಷ್ಟು ಹಣವನ್ನು ಧಾರ್ಮಿಕ ಪರಿಷತ್‌ ನಿಧಿಗೆ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಹಿಂದೆ 25 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ದೇವಸ್ಥಾನಗಳಿಂದ ಶೇ. 5ರಷ್ಟು ಆದಾಯವನ್ನು ಧಾರ್ಮಿಕ ಪರಿಷತ್‌ ಸಂಗ್ರಹಿಸುತ್ತಿದ್ದರೆ ಈಗ ಒಂದು ಕೋಟಿವರೆಗೆ ಆದಾಯವಿದ್ದರೂ ಶೇ. 5ರಷ್ಟು ಮೊತ್ತವನ್ನು ಮಾತ್ರ ಸರ್ಕಾರಕ್ಕೆ ನೀಡಬೇಕಾಗಿದೆ.

ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?

ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡುವ ವೇಳೆ ಸಚಿವ ರಾಮಲಿಂಗಾರೆಡ್ಡಿ ಅವರು ನೀಡಿದ ಮಾಹಿತಿ ಹೀಗಿದೆ.

ಈವರೆಗೆ ಯಾವ ಸಂಸ್ಥೆಗಳ ಆದಾಯವು 25 ಲಕ್ಷಕ್ಕಿಂತ ಹೆಚ್ಚಿದೆಯೋ ಅವುಗಳ ಆದಾಯದ ಶೇ.10 ರಷ್ಟು ಹಾಗೂ 25 ಲಕ್ಷಕ್ಕಿಂತ ಕಡಿಮೆ ಇರುವ ಸಂಸ್ಥೆಗಳ ಆದಾಯದಿಂದ ಶೇ.5 ರಷ್ಟನ್ನು ಧಾರ್ಮಿಕ ಪರಿಷತ್‌ಗೆ ಸಂಗ್ರಹಿಸಲಾಗುತ್ತಿತ್ತು. ಇದೀಗ ಈ ನಿಯಮವನ್ನು ತಿದ್ದುಪಡಿ ಮಾಡಿ 10 ಲಕ್ಷದಿಂದ 1 ಕೋಟಿ ರು.ವರೆಗೆ ಆದಾಯವುಳ್ಳ ಸಂಸ್ಥೆಗಳಿಂದ ಕೇವಲ ಶೇ.5 ರಷ್ಟು ಸಂಗ್ರಹಿಸುವುದು. 1 ಕೋಟಿ ರು.ಗೂ ಹೆಚ್ಚು ಆದಾಯ ಇರುವ ಸಂಸ್ಥೆಗಳಿಂದ ಶೇ.10 ರಷ್ಟು ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು.

Continue Reading

ಉತ್ತರ ಕನ್ನಡ

Swarnavalli Mutt: ಸ್ವರ್ಣವಲ್ಲೀ ನೂತನ ಯತಿಗಳಿಗೆ ಸನ್ಯಾಸ ದೀಕ್ಷೆ; ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಎಂದು ನಾಮಕರಣ

Swarnavalli Mutt: ಸ್ವರ್ಣವಲ್ಲೀ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸನ್ಯಾಸ ಗ್ರಹಣದ ವಿಧಿ ವಿಧಾನಗಳ ನಡೆದವು. . ಶ್ರೀಮಠಕ್ಕೆ 55ನೇ ನೂತನ ಯತಿಗಳಾಗಿ‌ ಬ್ರಹ್ಮಚಾರಿ ವಿದ್ವಾನ್ ನಾಗರಾಜ್ ಭಟ್ಟ ಗಂಗೆಮನೆ ಅವರು ಗುರುವಾರ ಸನ್ಯಾಸ ಗ್ರಹಣ‌ ಮಾಡಿದರು. ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಎಂದು ನಾಮಕರಣ ಮಾಡಲಾಗಿದೆ.

VISTARANEWS.COM


on

Swarnavalli Mutt appoints successor named as Sri Anandabodhendra Saraswathi Maha Swamiji
Koo

ಶಿರಸಿ: ಶಂಕರಾಚಾರ್ಯರ ಪರಂಪರೆಯ ಶ್ರೀ ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನಕ್ಕೆ (Swarnavalli Mutt) ಉತ್ತರಾಧಿಕಾರಿಗಳ (Swarnavalli Mutt appoints successor) ಪಟ್ಟಾಧಿಕಾರ ನೆರವೇರಿತು. ಶ್ರೀಮಠಕ್ಕೆ 55ನೇ ನೂತನ ಯತಿಗಳಾಗಿ‌ ಬ್ರಹ್ಮಚಾರಿ ವಿದ್ವಾನ್ ನಾಗರಾಜ್ ಭಟ್ಟ ಗಂಗೆಮನೆ ಅವರು ಗುರುವಾರ ಸನ್ಯಾಸ ಗ್ರಹಣ‌ ಮಾಡಿದರು. ಈ ಮೂಲಕ ಸ್ವರ್ಣವಲ್ಲೀ ನೂತನ ಯತಿಗಳಿಗೆ ಸನ್ಯಾಸ ದೀಕ್ಷೆ ಪ್ರಾಪ್ತಿಯಾಗಿದ್ದ, ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಎಂದು ನಾಮಕರಣ ಮಾಡಲಾಗಿದೆ.

ಸ್ವರ್ಣವಲ್ಲೀ ಮಹಾಸಂಸ್ಥಾನದ ಕಿರಿಯ ಶ್ರೀ

ಸ್ವರ್ಣವಲ್ಲೀ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸನ್ಯಾಸ ಗ್ರಹಣದ ವಿಧಿ ವಿಧಾನಗಳ ನಡೆದವು. ಇಂದು 11 ಯತಿಗಳ ಸಮ್ಮುಖದಲ್ಲಿ ಯೋಗ ಪಟ್ಟದ ಕಾರ್ಯಕ್ರಮಗಳು ನಡೆಯುತ್ತಿದ್ದು, ಜಲಾಶಯಗಮನ, ಸಾವಿತ್ರಿ ಪ್ರವೇಶ, ಪ್ರೇಷೋಚ್ಚಾರಣೆ, ಕಾಷಾಯ ವಸ್ತ್ರ ಧಾರಣೆ, ಪ್ರಣವ ಮಹಾವಾಕ್ಯೋಪದೇಶ, ನಾಮಕರಣ, ಪರ್ಯಂ ಕಶೌಚ, ಯೋಗ ಪಟ್ಟ, ಬ್ರಹ್ಮವಿದಾಶೀರ್ವಚನ, ಅಕ್ಷರಾಯುತ ಶ್ರೀಲಕ್ಷ್ಮೀ ನೃಸಿಂಹ ಮಂತ್ರ ಹವನ ಪೂರ್ಣಾಹುತಿ, ತೀರ್ಥ ಪ್ರಸಾದ ಮಂತ್ರಾಕ್ಷತೆ ಕಾರ್ಯಕ್ರಮಗಳು ನೆರವೇರಿದವು.

Swarnavalli Mutt appoints successor named as Sri Anandabodhendra Saraswathi Maha Swamiji

ಫೆ. 18ರಿಂದ ಶಿಷ್ಯ ಸ್ವೀಕಾರ ಮಹೋತ್ಸವದ ಕಾರ್ಯಕ್ರಮವು ನಡೆಯುತ್ತಿದ್ದು, ಇಂದು (ಗುರುವಾರ) ಕೊನೇ ದಿನವಾಗಿದೆ. ಶೋಭನ ಸಂವತ್ಸರದ ಮಾಘ ಶುಕ್ಲ ತ್ರಯೋದಶಿ ಗುರುವಾರ ಬೆಳಗ್ಗೆ 10ರಿಂದ 10:10ರ ಅವಧಿಯಲ್ಲಿ ನೂತನ ಶ್ರೀಗಳಿಗೆ ಸನ್ಯಾಸ ದೀಕ್ಷೆಯನ್ನು ನೀಡಲಾಯಿತು.

Swarnavalli Mutt appoints successor ceremony
ಸ್ವರ್ಣವಲ್ಲೀ ಮಠದಲ್ಲಿ ಯತಿವರ್ಯರ ಸಮ್ಮುಖದಲ್ಲಿ ನೆರವೇರುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ನೆರವೇರಿದ ಜಲಾಶಯಗಮನ

ಮುಂಜಾನೆ 5ರಿಂದಲೇ ವಿವಿಧ ಧಾರ್ಮಿಕ ಹಾಗೂ ಕಾಯ ಶೋಧನ ಕಾರ್ಯಗಳು ಶ್ರೀಮಠದಲ್ಲಿ ನಡೆದವು. ಬೆಳಗ್ಗೆ
6.40ರ ಸುಮಾರಿಗೆ ಶ್ರೀಮಠದಿಂದ ಸುಮಾರು ಒಂದು‌ ಕಿ.ಮೀ. ದೂರದ ಶಾಲ್ಮಲಾ‌ ನದಿಯತ್ತ ಜಲಾಶಯಗಮನ ಮಾಡಲಾಯಿತು. ಬಳಿಕ ನೂತನ ಉತ್ತರಾಧಿಕಾರಿಗಳು ಸ್ನಾನ ಪೂರ್ಣಗೊಳಿಸಿ ಮೇಲ್ಮುಖವಾಗಿ ಜನಿವಾರ ತೆಗೆದು, ಶಿರದ ಮೇಲಿ‌ನ ಆರು‌ ಕೂದಲನ್ನು ಹರಿದು, ಸಂಸಾರದ ಬಂಧ ಸಹಿತ, ಸರ್ವಸ್ವವನ್ನೂ ತ್ಯಾಗ ಮಾಡಿ ಏಳು ಹೆಜ್ಜೆ ಇಟ್ಟರು. ಪ್ರಪಂಚ ಬಂಧನ ಬಿಟ್ಟು ಸಚ್ಚಿದಾನಂದ ಸ್ವರೂಪಿಯಾದ ಅವರಿಗೆ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಕಾಷಾಯ ವಸ್ತ್ರ ನೀಡಿದರು.

ಇದೇ ಶುಭ ಘಳಿಗೆಯಲ್ಲಿ ಸಾವಿತ್ರೀ ಪ್ರವೇಶ, ಪ್ರೇಶೋಚ್ಛಾರಣೆ, ಬ್ರಹ್ಮ ದಂಡದ ಧಾರಣೆ ಕೂಡ ಮಾಡಲಾಯಿತು.
10:30ರ ಸುಮಾರಿಗೆ ಶಾಲ್ಮಾಲಾ ನದಿ ತಟದಲ್ಲಿ‌ ನೂತನ ಯತಿಗಳು ಭೂ ಸ್ಪರ್ಶ ಮಾಡಿದರು. ಅಲ್ಲಿಂದ ಪಂಚ ವಾದ್ಯಗಳ, ವೈದಿಕರ ವೇದ ಘೋಷ, ನಾಲ್ಕು ಸಾವಿರಕ್ಕೂ ಅಧಿಕ ಮಾತೆಯರಿಂದ ಪೂರ್ಣ ಕುಂಭ ಸ್ವಾಗತದ ಮೂಲಕ ನೂತನ ಯತಿಗಳನ್ನು, ಸ್ವರ್ಣವಲ್ಲೀ ಹಾಗೂ ಇತರ ಮಠಗಳ ಯತಿಗಳನ್ನು ಶ್ರೀಮಠಕ್ಕೆ ಬರ ಮಾಡಿಕೊಳ್ಳಲಾಯಿತು.

Swarnavalli Mutt appoints successor named as Sri Anandabodhendra Saraswathi Maha Swamiji

ಶ್ರೀಮಠದಲ್ಲಿ‌ ಆಡಳಿತ‌ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಕೇಂದ್ರ ಮಾತೃ ಮಂಡಳಿ ಪ್ರಮುಖರು ಮಠದ ಆವಾರದಲ್ಲಿ ಸಾಂಪ್ರದಾಯಿಕ‌ವಾಗಿ ಸ್ವಾಗತಿಸಿದರು. ಶ್ರೀಮಠಕ್ಕೆ ಆಗಮಿಸಿದ ಬಳಿಕ ಆರಾಧ್ಯ ದೇವರ ದರ್ಶನ ಪಡೆದು ಗುರುಮೂರ್ತಿ ಭವನಕ್ಕೆ ತೆರಳಿದರು. ಬಳಿಕ ಶಂಖ ಸ್ನಾನ, ಪ್ರಣವ ಮಹಾ ವಾಕ್ಯೋಪದೇಶ ನೀಡಿ ನೂತನ ಶ್ರೀಗಳಿಗೆ ನಾಮಕರಣವನ್ನು ಸ್ವರ್ಣವಲ್ಲೀ ಶ್ರೀಗಳು‌ ಮಾಡಿದರು. ಪರ್ಯಂಕಶೌಚ, ಯೋಗ‌ಪಟ್ಟ, ಬ್ರಹ್ಮವಿದಾಶೀರ್ವಚನ ನಡೆಸಲಾಯಿತು.

ಇದನ್ನೂ ಓದಿ: Dina Bhavishya: ಇಂದು ಈ ರಾಶಿಯವರು ಹೊರಗಿನ ತಿಂಡಿ ತಿನ್ನುವ ಮುಂಚೆ ಕೊಂಚ ಯೋಚಿಸಿ!

ನಾಡಿನ ಯತಿಗಳಾದ ಎಡತೊರೆ ಶ್ರೀಶಂಕರ ಭಾರತೀ‌ ಮಹಾ ಸ್ವಾಮೀಜಿ, ಹರಿಹರ ಪುರದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸ್ವರೂಪಿ‌ ಮಹಾ ಸ್ವಾಮೀಜಿ,‌ ಬೆಂಗಳೂರಿನ‌ ಕೂಡ್ಲಿ ಶೃಂಗೇರಿ‌ ಮಠದ ವಿದ್ಯಾ ವಿಶ್ವೇಶ್ವರ ಭಾರತೀ ‌ಮಹಾ‌ ಸ್ವಾಮೀಜಿ, ಹೊಳೆ‌ನರಸೀಪುರದ ಶ್ರೀಪ್ರಕಾಶಾನಂದೇಂದ್ರ ಮಹಾ ಸ್ವಾಮೀಜಿ , ಶ್ರೀಮನ್ನೆಲಮಾವು ಮಠದ ಶ್ರೀಮಾಧವಾನಂದ‌ ಭಾರತೀ‌‌ ಮಹಾ‌ ಸ್ವಾಮೀಜಿ, ತುರುವೇಕೇರೆಯ ಶ್ರೀಪ್ರಣವಾನಂದ ತೀರ್ಥ ಮಹಾ ಸ್ವಾಮೀಜಿ ಹಾಗೂ ಹಲವು ವಿದ್ವಾಂಸರು ಸೇರಿದಂತೆ ಶ್ರೀಮಠದ ಭಕ್ತರು, ಶಿಷ್ಯ ವರ್ಗದವರು ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಸಾಕ್ಷಿಯಾದರು.

Continue Reading

ಕರ್ನಾಟಕ

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

Swarnavalli Mutt: ಸ್ವರ್ಣವಲ್ಲೀ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸನ್ಯಾಸ ಗ್ರಹಣದ ವಿಧಿ ವಿಧಾನಗಳ ನಡೆದವು. . ಶ್ರೀಮಠಕ್ಕೆ 55ನೇ ನೂತನ ಯತಿಗಳಾಗಿ‌ ಬ್ರಹ್ಮಚಾರಿ ವಿದ್ವಾನ್ ನಾಗರಾಜ್ ಭಟ್ಟ ಗಂಗೆಮನೆ ಅವರು ಗುರುವಾರ ಸನ್ಯಾಸ ಗ್ರಹಣ‌ ಮಾಡಿದರು.

VISTARANEWS.COM


on

Swarnavalli Mutt appoints successor ceremony
Koo

ಶಿರಸಿ: ಶಂಕರಾಚಾರ್ಯರ ಪರಂಪರೆಯ ಶ್ರೀ ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನಕ್ಕೆ (Swarnavalli Mutt) ಉತ್ತರಾಧಿಕಾರಿಗಳ (Swarnavalli Mutt appoints successor) ಪಟ್ಟಾಧಿಕಾರ ನೆರವೇರಿತು. ಶ್ರೀಮಠಕ್ಕೆ 55ನೇ ನೂತನ ಯತಿಗಳಾಗಿ‌ ಬ್ರಹ್ಮಚಾರಿ ವಿದ್ವಾನ್ ನಾಗರಾಜ್ ಭಟ್ಟ ಗಂಗೆಮನೆ ಅವರು ಗುರುವಾರ ಸನ್ಯಾಸ ಗ್ರಹಣ‌ ಮಾಡಿದರು.

ಸ್ವರ್ಣವಲ್ಲೀ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸನ್ಯಾಸ ಗ್ರಹಣದ ವಿಧಿ ವಿಧಾನಗಳ ನಡೆದವು. ಇಂದು 11 ಯತಿಗಳ ಸಮ್ಮುಖದಲ್ಲಿ ಯೋಗ ಪಟ್ಟದ ಕಾರ್ಯಕ್ರಮಗಳು ನಡೆಯುತ್ತಿದ್ದು, ಜಲಾಶಯಗಮನ, ಸಾವಿತ್ರಿ ಪ್ರವೇಶ, ಪ್ರೇಷೋಚ್ಚಾರಣೆ, ಕಾಷಾಯ ವಸ್ತ್ರ ಧಾರಣೆ, ಪ್ರಣವ ಮಹಾವಾಕ್ಯೋಪದೇಶ, ನಾಮಕರಣ, ಪರ್ಯಂ ಕಶೌಚ, ಯೋಗ ಪಟ್ಟ, ಬ್ರಹ್ಮವಿದಾಶೀರ್ವಚನ, ಅಕ್ಷರಾಯುತ ಶ್ರೀಲಕ್ಷ್ಮೀ ನೃಸಿಂಹ ಮಂತ್ರ ಹವನ ಪೂರ್ಣಾಹುತಿ, ತೀರ್ಥ ಪ್ರಸಾದ ಮಂತ್ರಾಕ್ಷತೆ ಕಾರ್ಯಕ್ರಮಗಳು ನೆರವೇರಿದವು.

ಸ್ವರ್ಣವಲ್ಲೀ ಮಹಾಸಂಸ್ಥಾನದ ಕಿರಿಯ ಶ್ರೀ

ಫೆ. 18ರಿಂದ ಶಿಷ್ಯ ಸ್ವೀಕಾರ ಮಹೋತ್ಸವದ ಕಾರ್ಯಕ್ರಮವು ನಡೆಯುತ್ತಿದ್ದು, ಇಂದು (ಗುರುವಾರ) ಕೊನೇ ದಿನವಾಗಿದೆ. ಶೋಭನ ಸಂವತ್ಸರದ ಮಾಘ ಶುಕ್ಲ ತ್ರಯೋದಶಿ ಗುರುವಾರ ಬೆಳಗ್ಗೆ 10ರಿಂದ 10:10ರ ಅವಧಿಯಲ್ಲಿ ನೂತನ ಶ್ರೀಗಳಿಗೆ ಸನ್ಯಾಸ ದೀಕ್ಷೆಯನ್ನು ನೀಡಲಾಯಿತು.

Swarnavalli Mutt appoints successor ceremony
ಸ್ವರ್ಣವಲ್ಲೀ ಮಠದಲ್ಲಿ ಯತಿವರ್ಯರ ಸಮ್ಮುಖದಲ್ಲಿ ನೆರವೇರುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ನೆರವೇರಿದ ಜಲಾಶಯಗಮನ

ಮುಂಜಾನೆ 5ರಿಂದಲೇ ವಿವಿಧ ಧಾರ್ಮಿಕ ಹಾಗೂ ಕಾಯ ಶೋಧನ ಕಾರ್ಯಗಳು ಶ್ರೀಮಠದಲ್ಲಿ ನಡೆದವು. ಬೆಳಗ್ಗೆ
6.40ರ ಸುಮಾರಿಗೆ ಶ್ರೀಮಠದಿಂದ ಸುಮಾರು ಒಂದು‌ ಕಿ.ಮೀ. ದೂರದ ಶಾಲ್ಮಲಾ‌ ನದಿಯತ್ತ ಜಲಾಶಯಗಮನ ಮಾಡಲಾಯಿತು. ಬಳಿಕ ನೂತನ ಉತ್ತರಾಧಿಕಾರಿಗಳು ಸ್ನಾನ ಪೂರ್ಣಗೊಳಿಸಿ ಮೇಲ್ಮುಖವಾಗಿ ಜನಿವಾರ ತೆಗೆದು, ಶಿರದ ಮೇಲಿ‌ನ ಆರು‌ ಕೂದಲನ್ನು ಹರಿದು, ಸಂಸಾರದ ಬಂಧ ಸಹಿತ, ಸರ್ವಸ್ವವನ್ನೂ ತ್ಯಾಗ ಮಾಡಿ ಏಳು ಹೆಜ್ಜೆ ಇಟ್ಟರು. ಪ್ರಪಂಚ ಬಂಧನ ಬಿಟ್ಟು ಸಚ್ಚಿದಾನಂದ ಸ್ವರೂಪಿಯಾದ ಅವರಿಗೆ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಕಾಷಾಯ ವಸ್ತ್ರ ನೀಡಿದರು.

ಇದೇ ಶುಭ ಘಳಿಗೆಯಲ್ಲಿ ಸಾವಿತ್ರೀ ಪ್ರವೇಶ, ಪ್ರೇಶೋಚ್ಛಾರಣೆ, ಬ್ರಹ್ಮ ದಂಡದ ಧಾರಣೆ ಕೂಡ ಮಾಡಲಾಯಿತು.
10:30ರ ಸುಮಾರಿಗೆ ಶಾಲ್ಮಾಲಾ ನದಿ ತಟದಲ್ಲಿ‌ ನೂತನ ಯತಿಗಳು ಭೂ ಸ್ಪರ್ಶ ಮಾಡಿದರು. ಅಲ್ಲಿಂದ ಪಂಚ ವಾದ್ಯಗಳ, ವೈದಿಕರ ವೇದ ಘೋಷ, ನಾಲ್ಕು ಸಾವಿರಕ್ಕೂ ಅಧಿಕ ಮಾತೆಯರಿಂದ ಪೂರ್ಣ ಕುಂಭ ಸ್ವಾಗತದ ಮೂಲಕ ನೂತನ ಯತಿಗಳನ್ನು, ಸ್ವರ್ಣವಲ್ಲೀ ಹಾಗೂ ಇತರ ಮಠಗಳ ಯತಿಗಳನ್ನು ಶ್ರೀಮಠಕ್ಕೆ ಬರ ಮಾಡಿಕೊಳ್ಳಲಾಯಿತು.

ಶ್ರೀಮಠದಲ್ಲಿ‌ ಆಡಳಿತ‌ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಕೇಂದ್ರ ಮಾತೃ ಮಂಡಳಿ ಪ್ರಮುಖರು ಮಠದ ಆವಾರದಲ್ಲಿ ಸಾಂಪ್ರದಾಯಿಕ‌ವಾಗಿ ಸ್ವಾಗತಿಸಿದರು. ಶ್ರೀಮಠಕ್ಕೆ ಆಗಮಿಸಿದ ಬಳಿಕ ಆರಾಧ್ಯ ದೇವರ ದರ್ಶನ ಪಡೆದು ಗುರುಮೂರ್ತಿ ಭವನಕ್ಕೆ ತೆರಳಿದರು. ಬಳಿಕ ಶಂಖ ಸ್ನಾನ, ಪ್ರಣವ ಮಹಾ ವಾಕ್ಯೋಪದೇಶ ನೀಡಿ ನೂತನ ಶ್ರೀಗಳಿಗೆ ನಾಮಕರಣವನ್ನು ಸ್ವರ್ಣವಲ್ಲೀ ಶ್ರೀಗಳು‌ ಮಾಡಿದರು. ಪರ್ಯಂಕಶೌಚ, ಯೋಗ‌ಪಟ್ಟ, ಬ್ರಹ್ಮವಿದಾಶೀರ್ವಚನ ನಡೆಸಲಾಯಿತು.

ಇದನ್ನೂ ಓದಿ: Dina Bhavishya: ಇಂದು ಈ ರಾಶಿಯವರು ಹೊರಗಿನ ತಿಂಡಿ ತಿನ್ನುವ ಮುಂಚೆ ಕೊಂಚ ಯೋಚಿಸಿ!

ನಾಡಿನ ಯತಿಗಳಾದ ಎಡತೊರೆ ಶ್ರೀಶಂಕರ ಭಾರತೀ‌ ಮಹಾ ಸ್ವಾಮೀಜಿ, ಹರಿಹರ ಪುರದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸ್ವರೂಪಿ‌ ಮಹಾ ಸ್ವಾಮೀಜಿ,‌ ಬೆಂಗಳೂರಿನ‌ ಕೂಡ್ಲಿ ಶೃಂಗೇರಿ‌ ಮಠದ ವಿದ್ಯಾ ವಿಶ್ವೇಶ್ವರ ಭಾರತೀ ‌ಮಹಾ‌ ಸ್ವಾಮೀಜಿ, ಹೊಳೆ‌ನರಸೀಪುರದ ಶ್ರೀಪ್ರಕಾಶಾನಂದೇಂದ್ರ ಮಹಾ ಸ್ವಾಮೀಜಿ , ಶ್ರೀಮನ್ನೆಲಮಾವು ಮಠದ ಶ್ರೀಮಾಧವಾನಂದ‌ ಭಾರತೀ‌‌ ಮಹಾ‌ ಸ್ವಾಮೀಜಿ, ತುರುವೇಕೇರೆಯ ಶ್ರೀಪ್ರಣವಾನಂದ ತೀರ್ಥ ಮಹಾ ಸ್ವಾಮೀಜಿ ಹಾಗೂ ಹಲವು ವಿದ್ವಾಂಸರು ಸೇರಿದಂತೆ ಶ್ರೀಮಠದ ಭಕ್ತರು, ಶಿಷ್ಯ ವರ್ಗದವರು ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಸಾಕ್ಷಿಯಾದರು.

Continue Reading
Advertisement
Amazon Sweets
ವಾಣಿಜ್ಯ3 mins ago

Empower HER Exhibition : ಎಫ್‌ಕೆಸಿಸಿಐ ಆವರಣದಲ್ಲಿ ಮಹಿಳಾ ಉದ್ದಿಮೆದಾರರಿಂದ ಯಶಸ್ವಿ ವಸ್ತು ಪ್ರದರ್ಶನ ಮತ್ತು ಮಾರಾಟ

Actor Manoj Rajput Arrested On Allegations Of Raping
ಸಿನಿಮಾ3 mins ago

Actor Manoj Rajput: ಅತ್ಯಾಚಾರ ಎಸಗಿದ ಆರೋಪದ ಮೇಲೆ ನಟ ಮನೋಜ್ ರಜಪೂತ್ ಬಂಧನ

40 percent commission Court summons CM No defamation if advertised says Siddaramaiah
ರಾಜಕೀಯ18 mins ago

40 percent commission: ಸಿಎಂಗೆ ಕೋರ್ಟ್‌ ಸಮನ್ಸ್;‌ ಜಾಹೀರಾತು ಕೊಟ್ಟರೆ ಮಾನನಷ್ಟ ಆಗಲ್ಲ: ವಕೀಲರು ಉತ್ತರಿಸುತ್ತಾರೆಂದ ಸಿದ್ದರಾಮಯ್ಯ

Shah Rukh Kahan
ಪ್ರಮುಖ ಸುದ್ದಿ26 mins ago

Shah rukh Khan : ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಶಾರುಖ್​ ಖಾನ್​

PM Narendra Modi is determined to make India a developing country by 2047 says Pralhad Joshi
ರಾಜಕೀಯ60 mins ago

PM Narendra Modi: ಮೋದಿ ಚಿಂತೆ ಮಾಡುವವರಲ್ಲ, ಚಿಂತನೆ ಮಾಡುವ ಪ್ರಧಾನಿ: ಪ್ರಲ್ಹಾದ್‌ ಜೋಶಿ

Idli
ವೈರಲ್ ನ್ಯೂಸ್1 hour ago

Biodiversity: ದಿನಾ ಇಡ್ಲಿ ತಿಂತೀರಾ? ಹಾಗಾದ್ರೆ ಜೀವವೈವಿಧ್ಯ ಹಾನಿಗೆ ನಿಮ್ಮದೇ ಹೆಚ್ಚಿನ ಕೊಡುಗೆ!

Anil John Sequeira youngest judge in Karnataka
ದಕ್ಷಿಣ ಕನ್ನಡ1 hour ago

Anil John Sequeira : ಬಂಟ್ವಾಳ ಯುವಕನ ಅಪರೂಪದ ಸಾಧನೆ; 25ನೇ ವಯಸ್ಸಿಗೆ ನ್ಯಾಯಾಧೀಶರಾಗಿ ಆಯ್ಕೆ

Sachin Tendulkar
ಪ್ರಮುಖ ಸುದ್ದಿ1 hour ago

Sachin Tenulkar : ಒಡಿಐನಲ್ಲಿ ಸಚಿನ್​ ಮೊದಲ ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ದಿನವಿದು

Medical negligence Hospital fined Rs 10 lakh for drowning newborn baby in hot water
ಪ್ರಮುಖ ಸುದ್ದಿ1 hour ago

medical negligence: ನವಜಾತ ಶಿಶುವನ್ನು ಬಿಸಿನೀರಲ್ಲಿ ಮುಳುಗಿಸಿ ಚರ್ಮ ಕಾಯಿಲೆ ಕಥೆ ಕಟ್ಟಿದ್ದ ಆಸ್ಪತ್ರೆಗೆ 10 ಲಕ್ಷ ದಂಡ!

Woman offers namaz inside mosque boycott from the village
ಕೊಡಗು2 hours ago

Kodagu News : ಮಸೀದಿಯಲ್ಲಿ ನಮಾಜ್‌ ಮಾಡಿದ ಮಹಿಳೆಗೆ ಗ್ರಾಮದಿಂದಲೇ ಬಹಿಷ್ಕಾರ; ಪತಿ ಅಂತ್ಯಕ್ರಿಯೆಗೂ ನಕಾರ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Varthur Santhosh
ಮಂಡ್ಯ3 hours ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ10 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ22 hours ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು1 day ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ1 day ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು2 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ2 days ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ4 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

ಟ್ರೆಂಡಿಂಗ್‌